ಪುಟಗಳು

ಬುಧವಾರ, ಏಪ್ರಿಲ್ 26, 2017

ಈ ಕಟುಕರ ಸಂತೆಗೆ ಯಾಕೆ ಇಳಿದೆ ತಾಯೇ ನಂದಿನಿ

ಈ ಕಟುಕರ ಸಂತೆಗೆ ಯಾಕೆ ಇಳಿದೆ ತಾಯೇ ನಂದಿನಿ


              ಮತ್ತೆ ಗೋವಿನ ವಿಚಾರ ಸದ್ದು ಮಾಡುತ್ತಿದೆ. ಮತ್ತೆ ಅಂದರೇನು ಅದು ಎಂದೆಂದೂ ಸದ್ದು ಮಾಡಿದ,ಮಾಡುವ ವಿಚಾರವೇ ಈ ದೇಶದಲ್ಲಿ. ಗೋಹತ್ಯೆಯನ್ನು ನಿಷೇಧಿಸಬೇಕು ಎನ್ನುವ ಸಾತ್ವಿಕ ಮನಸ್ಸುಗಳು ಒಂದು ಕಡೆ; ಅದು ಒಂದು ವರ್ಗದ ಆಹಾರ, ಆಹಾರ ಸ್ವಾತಂತ್ರ್ಯಕ್ಕೆ ಧಕ್ಕೆ ಎಂದು ಬೊಬ್ಬಿರಿವ ಆಷಾಢಭೂತಿಗಳು ಇನ್ನೊಂದೆಡೆ, ನಿಷೇಧವಿದ್ದಾಗ್ಯೂ ಕಡಿದು ತಿಂದು ತೇಗುವ ದಾನವ ರೂಪಿಗಳು ಮತ್ತೊಂದೆಡೆ; ಇದರ ಮಧ್ಯೆ ನಿಷ್ಕ್ರಿಯರಾಗಿ ಕುಳಿತ ಹಲವರು ಮಗದೊಂದೆಡೆ...ಆದರೆ ಗೋಭೂಮಿ ಎಂದು ಕರೆಯಲ್ಪಟ್ಟ ದೇಶದಲ್ಲಿ ಗೋವು ಮಾತ್ರ ಮೌನವಾಗಿ ಕಣ್ಣೀರು ಸುರಿಸುತ್ತಲೇ ಇದೆ.

              ಯಜುರ್ವೇದದಲ್ಲಿ ಇರುವ ವೈದಿಕ ರಾಷ್ಟ್ರಗೀತೆ "ದೋಗ್ಧ್ರೀ ಧೇನುರಿತ್ಯಾಹ| ಧೇನ್ವಾಮೇವ ಪಯೋ ದಧಾತಿ| ತಸ್ಮಾತ್ಪುರಾ ದೋಗ್ಧ್ರೀ ಧೇನುರಜಾಯತ|" ಅಂದರೆ ಹಾಲು ಕರೆಯುವ ಗೋವುಗಳು ಯಥೇಚ್ಛವಾಗಲಿ. ಹಸುವಿನ ಹಾಲೇ ಅಮೃತ ಎಂದಿದೆ. "ಮಾ ಗಾಂ ಅನಾಗಾಂ ಅದಿತಿಂ ವಧಿಷ್ಟ" ಎನ್ನುತ್ತದೆ ಗೋಸೂಕ್ತ. ರೋಗಿಷ್ಟವಲ್ಲದ ಗೋವನ್ನು ಕೊಲ್ಲಬೇಡ ಎಂಬರ್ಥ. ಗೋವು ಎಂಬ ಪದಕ್ಕೆ ತಾಯಿ, ಹದವಾದ ಭೂಮಿ, ಸೂರ್ಯ, ಬೆಳಕು ಹೀಗೆ 23 ಅರ್ಥಗಳಿವೆ. ಗಂಗಾಜಲಕ್ಕೆ ಸಮನಾದ ಸುಮಾರು 148 ರೋಗಗಳಿಗೆ ಔಷಧಿಯಂತೆ ಕೆಲಸ ಮಾಡುವ ಗೋಮೂತ್ರ; ಕ್ರಿಮಿನಾಶಕ, ರೋಗ ನಿವಾರಕ ಗುಣಗಳನ್ನು ಹೊಂದಿರುವ ಗೋಮಯ; ಅಗತ್ಯ ಸಂದರ್ಭದಲ್ಲಿ ಮೈಶಾಖವನ್ನು ಕೊಡುವ ವಿಭೂತಿ; ತ್ರಿದೋಷಗಳನ್ನೇ ಹೋಗಲಾಡಿಸುವ ಅಮೃತವೆಂದೇ ಹೆಸರಾದ ಗೋಕ್ಷೀರ; ವಾತಹರವೂ ಪಿತ್ಥ, ರಕ್ತದೋಷವನ್ನು ನಿವಾರಿಸುವ ದಧಿ; ಅಗ್ನಿವರ್ಧಕ, ವಾತಪಿತ್ತಹರ, ಧಾತುಕ್ಷಯ, ಅತಿಸಾರ ಹಾಗೂ ದಮ್ಮುಗಳನ್ನು ನಿವಾರಿಸುವ ಬೆಣ್ಣೆ; ವಾತಪಿತ್ತವಿಷಹರ ಘೃತ; ಗೋರೋಜನ; ಕ್ರಿಮಿಹರ, ರಕ್ಷೋಘ್ನ ಗೊರಸು; ಹೀಗೆ ಅಪರಿಮಿತ ಪ್ರಯೋಜನಕಾರಿಯಾದ, ಮಾನವನ ಜೀವಕ್ಕೂ, ಆತ್ಮಕ್ಕೂ ಆಪತ್ಬಾಂಧವಳಾದ ಸರ್ವೋಪಕಾರಿಯಾದ ಗೋಮಾತೆಯನ್ನೂ ಬಿಡದ ಮಾನವನ ಸ್ವಾರ್ಥಕ್ಕೆ ಏನೆನ್ನಬೇಕು? ಗೋ ವಧೆ ಎಂದರೆ ಮಾತೃ ಹತ್ಯೆ ಅಷ್ಟೇ!

              ದೇಶದಲ್ಲೀಗ 36 ಸಾವಿರಕ್ಕೂ ಹೆಚ್ಚು ಕಸಾಯಿಖಾನೆಗಳಿವೆ. 1760ರಷ್ಟು ಹಿಂದೆ ಸರ್ಕಾರದ ಒಂದೇ ಒಂದು ಅಧಿಕೃತ ಕಸಾಯಿಖಾನೆ ಇರಲಿಲ್ಲ. 1910ರಲ್ಲಿ ದೇಶದಲ್ಲಿ ಕಸಾಯಿಖಾನೆಗಳ ಸಂಖ್ಯೆ 350ಕ್ಕೆ ತಲುಪಿತ್ತು. ಆದರೆ ಸ್ವಾತಂತ್ರ್ಯ ಬಂದ ಬಳಿಕ ಕಸಾಯಿಖಾನೆಗಳ ಸಂಖ್ಯೆಯಲ್ಲಿ ಭಾರೀ ಏರಿಕೆಯಾಗಿರುವುದು ಗೋಸಂತತಿ ರಕ್ಷಣೆ ಕುರಿತು ಆಡಳಿತಾರೂಢ ಸರ್ಕಾರಗಳ ದಿವ್ಯ ನಿರ್ಲಕ್ಷ್ಯಕ್ಕೆ ದ್ಯೋತಕ. 36 ಸಾವಿರ ಕಸಾಯಿಖಾನೆಗಳಿಗೆ ಹಗಲುರಾತ್ರಿ ನಿರಂತರ ಕೆಲಸ ದೊರೆಯಬೇಕಾದರೆ ಪ್ರತಿನಿತ್ಯ ಲಕ್ಷಾಂತರ ಸಂಖ್ಯೆಯಲ್ಲಿ ಗೋವುಗಳು ಹತ್ಯೆಯಾಗಲೇ ಬೇಕು. ಸಂಯುಕ್ತ ರಾಷ್ಟ್ರ ಸಂಘದ ಅಗ್ರಿಕಲ್ಚರ್ ಆರ್ಗನೈಸೇಶನ್ 2007ರ ವರದಿಯಲ್ಲಿ ಕೊಟ್ಟ ಅಂಕಿಅಂಶಗಳ ಪ್ರಕಾರ ಆ ವರ್ಷದಲ್ಲಿ 1,60,70,000 ಗೋವುಗಳ ಹತ್ಯೆಯಾಗಿತ್ತು. ಇಂದು ಅದು ಎರಡೂವರೆ ಕೋಟಿಯನ್ನೂ ದಾಟಿದೆ. ಗೋಮಾಂಸ ರಫ್ತಿನಲ್ಲಿ ಭಾರತವೇ ಮೊದಲ ಸ್ಥಾನದಲ್ಲಿದೆ. ಅಮೆರಿಕದ ಕೃಷಿ ಇಲಾಖೆ ಬಿಡುಗಡೆ ಮಾಡಿದ ಅಂಕಿಅಂಶದ ಪ್ರಕಾರ, ಭಾರತದಿಂದ ಅಮೆರಿಕಕ್ಕೆ ಗರಿಷ್ಠ ಪ್ರಮಾಣದ ಗೋಮಾಂಸ ರಫ್ತಾಗುತ್ತಿದೆ. ಭಾರತದಲ್ಲಿ 2001-02ರಲ್ಲಿ 18.59ಲಕ್ಷ ಟನ್ ಇದ್ದ ಗೋಮಾಂಸ ಉತ್ಪಾದನೆ 2011-12ರಲ್ಲಿ  48.69ಲಕ್ಷ ಟನ್ನಿಗೆ ಹೆಚ್ಚಿತು. 2011ರ ಬಳಿಕ ಇದು ಪ್ರತಿವರ್ಷ ಸರಾಸರಿ ಶೇಕಡ 14ರಂತೆ ಏರಿಕೆಯಾಗಿದೆ. 2013ರ ಎಪ್ರಿಲ್ನಿಂದ ಅಕ್ಟೋಬರ್ ಅವಧಿಯಲ್ಲಿ ವಿಯಟ್ನಾಂಗೆ ಗೋಮಾಂಸ ರಫ್ತು ಮೌಲ್ಯ ಶೇಕಡ 229ರಷ್ಟು ಹೆಚ್ಚಿದೆ. ಭಾರತ 2014ರ ಒಂದೇ ವರ್ಷ 4.8 ಶತಕೋಟಿ ಡಾಲರ್ (29,455 ಕೋಟಿ ರೂ.)ಗಳ ಗೋಮಾಂಸ ರಫ್ತುಮಾಡಿದೆ. 2014-15ನೇ ಸಾಲಿನಲ್ಲಿ ಭಾರತ 24 ಲಕ್ಷ ಟನ್, ಬ್ರೆಜಿಲ್ 20 ಲಕ್ಷ ಟನ್, ಆಸ್ಟ್ರೇಲಿಯಾ 15 ಲಕ್ಷ ಟನ್ ಗೋಮಾಂಸ ರಫ್ತು ಮಾಡಿವೆ.

          ಗಾಬರಿ ಹುಟ್ಟಿಸುವ ಮೇಲಿನ ಸಂಗತಿಗಳನ್ನು ಅವಲೋಕಿಸುವಾಗ ಈ ದೇಶದಲ್ಲಿ ಗೋ ಹತ್ಯೆಯ ವಿರುದ್ಧ ಯಾರೂ ದನಿಯೆತ್ತಿಲ್ಲವೇ ಎನ್ನುವ ಅನುಮಾನ ಹುಟ್ಟುವುದು ಸಹಜ. ಗೋಸಾಕಣೆ, ಗೋವಿನ ರಕ್ಷಣೆಗೆ ಈ ದೇಶ ನೀಡಿದ ಪ್ರಾಮುಖ್ಯತೆ ಅಷ್ಟಿಷ್ಟಲ್ಲ. ಗೋವಿಗಾಗಿ ಯುದ್ಧಗಳೇ ನಡೆದಿವೆ ಈ ದೇಶದಲ್ಲಿ. ಗೋವಿನ ಸೇವೆ ಮಾಡಿದ ಚಕ್ರವರ್ತಿಗಳೇ ಆಗಿ ಹೋಗಿದ್ದಾರೆ ಇಲ್ಲಿ. ಪರಮ ಪುರುಷನೇ ಸ್ವತಃ ಗೋಪಾಲಕನಾಗಿ ಅವತರಿಸಿದ ಪುಣ್ಯಭೂಮಿ ಇದು. ಗೋಸಂಪತ್ತಿನ ಮೇಲೆ ಶ್ರೀಮಂತಿಕೆಯನ್ನು ಅಳೆಯುತ್ತಿದ್ದ ನಾಡು ಇದು. ಕೌಟಿಲ್ಯನ ಅರ್ಥಶಾಸ್ತ್ರದ "ಗೋಧ್ಯಕ್ಷ" ಎಂಬ ಅಧ್ಯಾಯದಲ್ಲಿ ಆಡಳಿತ ಯಂತ್ರದಲ್ಲಿ ಗೋವು-ಹುಲ್ಲುಗಾವಲು-ಪಶು ಆಹಾರದ ನಿರ್ವಹಣೆಗೆ ‘ಗೋಧ್ಯಕ್ಷ’ ಎಂಬ ಪ್ರತ್ಯೇಕ ಅಧಿಕಾರಿಯನ್ನು ನೇಮಿಸಬೇಕು ಎಂದಿದೆ. ಕಾಡತೂಸುಗಳಿಗೆ ಗೋವಿನ ಕೊಬ್ಬನ್ನು ಉಪಯೋಗಿಸಿದ್ದಾರೆನ್ನುವ ವಿಚಾರವೇ 1857ರಲ್ಲಿ ದೇಶೀಯರು ಬ್ರಿಟಿಷರ ವಿರುದ್ಧ ಸಿಡಿದೇಳಲು ಕಾರಣವಾಯಿತು. ಮೈಸೂರು ಸಂಸ್ಥಾನ ಅಮೃತ ಮಹಲ್ ಗೋತಳಿ ಸಂವರ್ಧನೆಗಾಗಿ 4,13,539 ಎಕರೆ ವಿಸ್ತಾರದ 240 ಹುಲ್ಲುಗಾವಲುಗಳನ್ನು ಮೀಸಲಿರಿಸಿತ್ತು.

           ಗೋಹತ್ಯಾ ನಿಷೇಧ ಕಾನೂನು ಮೊದಲ ಬಾರಿಗೆ ಗುಜರಾತ್ನಲ್ಲಿ 1944ರಲ್ಲೇ ಜಾರಿಯಾಗಿತ್ತು. ಭಾರತ ಸಂವಿಧಾನದ 48ನೇ ವಿಧಿಯಲ್ಲಿ ಗೋಹತ್ಯೆಯನ್ನು ನಿಷೇಧಿಸಬೇಕೆಂಬ ಉಲ್ಲೇಖವಿದೆ. ಸಂವಿಧಾನ ರಚನೆ ಸಂದರ್ಭದಲ್ಲಿ ಗೋಹತ್ಯೆಯನ್ನು ನಿಷೇಧಿಸಬೇಕೆಂದು ಹಿಂದೂಗಳು ಒತ್ತಾಯಿಸಿದರು. ಆದರೆ ಆಗಿನ ಪ್ರಧಾನಿ ಜವಾಹರಲಾಲ್ ನೆಹರೂ ಇದನ್ನು ತೀವ್ರವಾಗಿ ವಿರೋಧಿಸಿದರು. ಕೊನೆಗೆ ಸಂವಿಧಾನದ ರಾಜ್ಯ ಪಟ್ಟಿಯ 7ನೇ ಪರಿಚ್ಛೇದದಲ್ಲಿ “ರಾಜ್ಯ ಸರಕಾರಕ್ಕೆ ಜಾನುವಾರುಗಳ ಸಂರಕ್ಷಣೆ ಮತ್ತು ಹತ್ಯೆ ತಡೆಯಲು ಕಾನೂನು ರಚಿಸುವ ಸಂಪೂರ್ಣ ಅಧಿಕಾರ ನೀಡಲಾಯಿತು.” ರಾಜ್ಯ ನಿರ್ದೇಶಕ ತತ್ವಗಳ 48ನೇ ಪರಿಚ್ಛೇದದಲ್ಲಿ “ರಾಜ್ಯವು ಕೃಷಿಯನ್ನು ಮತ್ತು ಪಶು ಸಂಗೋಪನೆಯನ್ನು ಆಧುನಿಕ ಮತ್ತು ವೈಜ್ಞಾನಿಕ ನೆಲೆಯಲ್ಲಿ ಅಭಿವೃದ್ಧಿಗೊಳಿಸಲು ಪ್ರಯತ್ನಿಸಬೇಕು. ವಿಶೇಷವಾಗಿ ಜಾನುವಾರು ತಳಿ ಸಂರಕ್ಷಿಸಿ ಸುಧಾರಣೆಗೊಳಿಸುವ ಕ್ರಮ ಕೈಗೊಳ್ಳುವುದರ ಜತೆಗೆ ಹಸುಗಳು ಮತ್ತು ಎಮ್ಮೆಗಳು ಹಾಗೂ ಇತರ ಹಾಲು ಕೊಡುವ, ಭಾರ ಎಳೆಯುವ ಜಾನುವಾರುಗಳ ಹತ್ಯೆಯನ್ನು ನಿಷೇಧಿಸುವ ಕ್ರಮ ಕೈಗೊಳ್ಳಬೇಕು,” ಎಂದು ಸೇರಿಸಲಾಯಿತು.ಇವತ್ತು ಬಹು ಚರ್ಚೆಯಲ್ಲಿರುವ ಗೋಹತ್ಯೆ ನಿಷೇಧದ ಕಾನೂನನ್ನು ಲೋಕಸಭೆಯಲ್ಲಿ ಮಂಡಿಸಿದ್ದು 1964ರಲ್ಲಿ. 1966ರಲ್ಲಿ ಗೋಹತ್ಯಾ ನಿಷೇಧವನ್ನು ಆಗ್ರಹಿಸಿ ಲಕ್ಷಾಂತರ ಮಂದಿ ದೆಹಲಿಯ ಸಂಸತ್ ಭವನದ ಮೇಲೆ ಮುತ್ತಿಗೆ ಹಾಕಿದರು. 1979ರಲ್ಲಿ ವಿನೋಬಾ ಭಾವೆ ಆಮರಣಾಂತ ಉಪವಾಸ ಕೂತು, ‘ಗೋ ಹತ್ಯೆ ನಿಷೇಧಿಸಬೇಕು’ ಎಂದು ಪಟ್ಟು ಹಿಡಿದಾಗ, ಜನತಾ ಸರ್ಕಾರ ‘ಗೋ ಹತ್ಯೆ ನಿಷೇಧ ಮಸೂದೆ’ಯನ್ನು ಲೋಕಸಭೆಯಲ್ಲಿ ಮಂಡಿಸಿತ್ತು. ಭಾರತದ ಸಂಸತ್ತಿನಲ್ಲಿ ಗೋಹತ್ಯೆಯನ್ನು ನಿಷೇಧಿಸುವಂತೆ 1979, 1985, 1990, 1994, 1996, 1999, 2000ನೇ ಇಸವಿಗಳಲ್ಲಿ ಖಾಸಗಿ ಮಸೂದೆಗಳನ್ನು ಮಂಡಿಸಲಾಗಿತ್ತು. ಆದರೆ ಅವೆಲ್ಲವೂ ಬಿದ್ದು ಹೋಗಿವೆ. 1982ರಲ್ಲಿ ಅಂದಿನ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಎಲ್ಲಾ ರಾಜ್ಯಗಳಿಗೂ ಪತ್ರ ಬರೆದು ಗೋಹತ್ಯೆ ನಿಷೇಧಿಸುವಂತೆ ಸೂಚನೆ ನೀಡಿದ್ದರು. ಗುಜರಾತ್, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತಿಸ್ಗಡಗಳಲ್ಲಿ ಸಂಪೂರ್ಣ ಗೋಹತ್ಯೆ ನಿಷೇಧ ಕಾನೂನನ್ನು ಜಾರಿಗೆ ತರಲಾಗಿದೆ. 2001ರಲ್ಲಿ ರಾಷ್ಟ್ರೀಯ ಗೋಸೇವಾ ಆಯೋಗದ ಸ್ಥಾಪನೆಯಾಗಿದೆ. ಗೋವುಗಳ ಕುರಿತಾಗಿ ವಿಶೇಷ ಅಧ್ಯಯನಕ್ಕಾಗಿ ನಾಗಪುರದಲ್ಲಿ ಗೋ ವಿಜ್ಞಾನ ಅನುಸಂಧಾನ ಕೇಂದ್ರವೂ ಸ್ಥಾಪನೆಯಾಗಿದೆ. ಹಲವು ಸಂತ,ಮಹಂತ,ಸ್ವಾಮೀಜಿ,ಸಹೃದಯರು ಗೋಪೋಷಣೆ ಮಾಡುತ್ತಲೇ ಇದ್ದಾರೆ. ಗೋವಿಗೆ ಸಂಬಂಧಿಸಿದಂತೆ 4 ಪೇಟೆಂಟ್ ಗಳು ಲಭಿಸಿವೆ. 2003ರಲ್ಲಿ ಎನ್ಡಿಎ ಸರಕಾರದ ಜಾರಿಗೆ ತರಲು ಹೊರಟಿದ್ದ, ಗೋಹತ್ಯೆ ನಿಷೇಧ ಮಸೂದೆ ಮಿತ್ರಪಕ್ಷಗಳಾದ ತೆಲುಗುದೇಶಂ ಮತ್ತು ಡಿಎಂಕೆ ವಿರೋಧದಿಂದಾಗಿ ಸಫಲವಾಗಲಿಲ್ಲ. 2008ರಲ್ಲಿ ಗೋಹತ್ಯೆ ನಿಷೇಧ ಮಾಡುವ ಮೂಲಕ ಗೋವಂಶದ ರಕ್ಷಣೆ ಮಾಡಬೇಕು ಎಂದು ಆಗ್ರಹಿಸಿ ಮುಸ್ಲಿಮರೇ ನ್ಯಾಯಾಲಯದ ಮೆಟ್ಟಿಲು ಹತ್ತಿದರು. ಕಲಕತ್ತಾ ಉಚ್ಛನ್ಯಾಯಾಲಯದಲ್ಲಿ ಮುಸ್ಲಿಮರು ಗೋಹತ್ಯೆಯನ್ನು ವಿರೋಧಿಸಿದ ವಿದ್ಯಮಾನ ಕಂಡು ಗೋಹಂತಕರು ಹಾವು ತುಳಿದವರಂತೆ ಬೆಚ್ಚಿಬಿದ್ದರು.

            ವಾಣಿಜ್ಯ ನಗರಿ ಮುಂಬೈವೊಂದರಲ್ಲೇ ಪ್ರತಿನಿತ್ಯ 1 ಲಕ್ಷ ಕೆ.ಜಿ. ಗೋಮಾಂಸ ಮಾರಾಟವಾಗುತ್ತಿತ್ತು. 1995ರಲ್ಲಿ ಬಿಜೆಪಿ-ಶಿವಸೇನೆ ಸರ್ಕಾರವಿದ್ದಾಗ ಮಹಾರಾಷ್ಟ್ರದಲ್ಲಿ ಪ್ರಾಣಿಹತ್ಯೆ ನಿಷೇಧ ತಿದ್ದುಪಡಿ ವಿಧೇಯಕ ಚರ್ಚೆಗೆ ಬಂದಿತ್ತು. ಆದರೆ ಪರ-ವಿರೋಧ ಚರ್ಚೆಯಲ್ಲೇ ಮುಗಿದು ಹೋದ ವಿಧೇಯಕ ಕಾಯಿದೆಯಾಗಲೇ ಇಲ್ಲ. ಬಳಿಕ ಬಂದ ಕಾಂಗ್ರೆಸ್ ಸರಕಾರಗಳಿಗೂ ಈ ವಿಚಾರಕ್ಕೂ ಅಜಗಜಾಂತರ ಬಿಡಿ. ಹಾಗೆ ಗೋಹತ್ಯೆ ನಿಷೇಧ ಜಾರಿಯಾಗಲು ದೇವೇಂದ್ರ ಫಡ್ನವೀಸರಂತಹ ಖಡಕ್ ವ್ಯಕ್ತಿಯೇ ಮುಖ್ಯಮಂತ್ರಿಯಾಗಿ ಬರಬೇಕಾಯಿತು. ಈಗ  ಗೋಹಂತಕರಿಗೆ ಹಂತಕರಿಗೆ 5 ವರ್ಷ ಜೈಲು ಶಿಕ್ಷೆ ಕಾದಿದೆ. ಮಾರ್ಚ್ 3, 2015 ರಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಈ ಮಹತ್ವದ ಕಾಯ್ದೆಗೆ ಅಂಕಿತ ಹಾಕುತ್ತಿದ್ದಂತೆ ಮಹಾರಾಷ್ಟ್ರದ ಗೋ ಸಂತತಿ ನೆಮ್ಮದಿಯ ನಿಟ್ಟುಸಿರು ಬಿಡುವಂತಾಯಿತು. ಬಿಜೆಪಿ ಆಡಳಿತವಿರುವ ಇನ್ನೊಂದು ರಾಜ್ಯ ಹರಿಯಾಣದಲ್ಲೂ ಗೋಮಾಂಸ ಮಾರಾಟಗಾರರಿಗೆ 3-5 ವರ್ಷಗಳ ಕಠಿಣ ಶಿಕ್ಷೆ ಹಾಗೂ 50 ಸಾವಿರ ರೂ.ಗಳವರೆಗೆ ದಂಡ ವಿಧಿಸುವ ಆದೇಶ ಜಾರಿಗೊಳಿಸಲಾಗಿದೆ.

           ಕರ್ನಾಟಕದಲ್ಲಂತೂ ಸರಕಾರಗಳ ತುಷ್ಟೀಕರಣ ನೀತಿ ಮತ್ತು ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯಿಂದ ನಿರಂತರವಾಗಿ ಎಗ್ಗಿಲ್ಲದೆ, ರಾಜಾರೋಷವಾಗಿ ಹಗಲಲ್ಲೇ ದನಗಳನ್ನು ವಧಿಸಲಾಗುತ್ತಿದೆ. ರಾತ್ರೋರಾತ್ರಿ ದನಗಳ್ಳರ ತಂಡ ತಲವಾರು ತೋರಿಸಿ ಬೆದರಿಸಿ ಸಾಕಲು ಕಟ್ಟಿಹಾಕಿದ ದನಗಳನ್ನೇ ಎಳೆದೊಯ್ಯುತ್ತಿವೆ. ರೈತರಿಗಷ್ಟೇ ಸೀಮಿತವಾಗಿರಬೇಕಾಗಿದ್ದ ದನಗಳ ಜಾತ್ರೆಗಳಲ್ಲಿ  ತರಕಾರಿ ವಿಕ್ರಯದಂತೆ ದನಗಳ ಬೆಲೆಯನ್ನು ಚೌಕಾಶಿ ಮಾಡಿ, ಓರ್ವ ವ್ಯಕ್ತಿ 20, 30 ದನಗಳನ್ನು ಖರೀದಿಸಿ, ಕಾಡಿನಂಚಿನವರೆಗೆ ನಡೆಸಿ ಕೊಂಡೊಯ್ದು ರಾತ್ರೋರಾತ್ರಿ ಲಾರಿ ಟ್ರಕ್ಕುಗಳಿಗೆ ಬಲವಂತವಾಗಿ ತುಂಬಿಸಿ ನೇರವಾಗಿ ಕಸಾಯಿಖಾನೆಗೆ ರವಾನಿಸುವ ಜಾಲ ಇಡೀ ರಾಜ್ಯಾದ್ಯಂತ ಹರಡಿಕೊಂಡಿದೆ. ಪೊಲೀಸು ಇಲಾಖೆ ಮೌನವಾಗಿ ಕುಳಿತಿದೆ. ಕರ್ನಾಟಕದಲ್ಲಿದ್ದ The Karnataka Prevention of Cow Slaughter and Cattle Preservation Act, 1964 ಕಾಯ್ದೆಯ ಪ್ರಕಾರ ಹಸು, ಕರು, ಎಮ್ಮೆಗಳ ಹತ್ಯೆಗೆ ನಿಷೇಧವಿತ್ತು. ಎತ್ತು, ಹೋರಿ, ಕೋಣಗಳನ್ನು ಕೊಲ್ಲಬಹುದಾದರೂ ಅವುಗಳು 12ವರ್ಷಕ್ಕಿಂತ ಮೇಲ್ಪಟ್ಟಿರಬೇಕು ಹಾಗು ಪಶು ಸಂಗೋಪನಾ ಅಧಿಕಾರಿಯಿಂದ ಕೊಲ್ಲಬಹುದೆಂಬ ಪ್ರಮಾಣಪತ್ರ ಪಡೆಯಬೇಕಾಗಿತ್ತು. 2010ರಲ್ಲಿ ಈ ಕಾನೂನಿಗೆ ಮತ್ತಷ್ಟು ತಿದ್ದುಪಡಿಗಳನ್ನು ತಂದು ಜಾನುವಾರುಗಳ ಮಾರಾಟ, ಮಾಂಸ ಮಾರಾಟ, ಮಾಂಸ ಶೇಖರಣೆ ಹೀಗೆ ಎಲ್ಲದರ ಮೇಲೂ ನಿಷೇಧ ವಿಧಿಸಿ ಗೋವು ಸಂರಕ್ಷಣೆಗೆ ಮತ್ತಷ್ಟು ಆದ್ಯತೆ ನೀಡಲಾಗಿತ್ತು. ಈ ಕಾನೂನು ಮುರಿದವರಿಗೆ ದಂಡದ ಜೊತೆಗೆ 7ವರ್ಷಗಳ ಜೈಲು ಶಿಕ್ಷೆಯೂ ಇತ್ತು.  ಆದರೆ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬಂದದ್ದೇ ತಡ ಈ ಕಾನೂನನ್ನು ಹಿಂಪಡೆದುಕೊಂಡು ಋಣ ಸಂದಾಯ ಮಾಡಿತು! ದೇಶದಲ್ಲಿನ ಕೆಲವು ರಾಜ್ಯಗಳಲ್ಲಿ ಮಾತ್ರ ಗೋಹತ್ಯೆ ನಿಷೇಧ ಹೇರಿದ್ದು, ನಿಷೇಧವಿರುವ ರಾಜ್ಯಗಳಿಂದ ಇತರ ರಾಜ್ಯಗಳಿಗೆ ಅಕ್ರಮವಾಗಿ ಗೋ ಸಾಗಾಣಿಕೆ ಮಾಡಲಾಗುತ್ತಿದ್ದು, ಇದನ್ನು ತಡೆಯಲು ಎಲ್ಲಾ ರಾಜ್ಯಗಳಲ್ಲಿ ಗೋಹತ್ಯೆಗೆ ನಿಷೇಧ ಹೇರಬೇಕೆಂದು ಕೋರಿ ಕಳೆದ ಜನವರಿಯಲ್ಲಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾ ಮಾಡಿತ್ತು. ಇದು ನ್ಯಾಯಾಲಯಗಳ ಎಡಬಿಡಂಗಿತನಕ್ಕೊಂದು ಉದಾಹರಣೆ. ಕ್ರಿಕೆಟ್'ನಂತಹ ಕ್ಷುಲ್ಲಕ ವಿಚಾರಗಳಲ್ಲಿ ಮೂಗು ತೂರಿಸುವ ಸುಪ್ರಿಂಕೋರ್ಟಿಗೆ ಗೋವು ಮಹತ್ವದ್ದಾಗಿ ಕಾಣದಿರುವುದು ಮಾತ್ರ ವಿಪರ್ಯಾಸ.

            ಮೊನ್ನೆ ಮೊನ್ನೆ ಉತ್ತರಪ್ರದೇಶದಲ್ಲಿ ಮುಖ್ಯಮಂತ್ರಿಯಾದ ಮರುಘಳಿಗೆಯಲ್ಲೇ ರಾಷ್ಟ್ರೀಯ ಹಸಿರು ಪೀಠದ ಗೋಹತ್ಯಾ ನಿಷೇಧದ ಆಜ್ಞೆಯನ್ನೇ ಬಳಸಿಕೊಂಡ ಯೋಗಿ ಆದಿತ್ಯನಾಥ್ ಅಕ್ರಮ ಕಸಾಯಿಖಾನೆಗಳನ್ನು ಮುಚ್ಚಲು ಆಜ್ಞಾಪಿಸುವುದರೊಂದಿಗೆ ದೇಶದೆಲ್ಲೆಡೆ ಸಂಚಲನವೇ ಸೃಷ್ಟಿಯಾಯಿತು.. 250ಕ್ಕೂ ಅಧಿಕ ಅಕ್ರಮ ಕಸಾಯಿಖಾನೆಗಳಿರುವ ಉತ್ತರಪ್ರದೇಶದಲ್ಲಿ ಅಕ್ರಮ ಕಸಾಯಿಖಾನೆಗಳನ್ನು ಮುಚ್ಚಲು ಪೊಲೀಸರು ಮುಂದಾದಾಗ ಮಾಂಸದ ವ್ಯಾಪಾರಿಗಳು ಪ್ರತಿಭಟನೆಗೆ ತೊಡಗಿದರು. ಮುಖ್ಯಮಂತ್ರಿ ಆದಿತ್ಯನಾಥರನ್ನು ಭೇಟಿಯಾದ ಬಳಿಕ ಎಲ್ಲರೂ ತೆಪ್ಪಗಾದರು. ಸ್ವತಃ ಆಲ್ ಇಂಡಿಯಾ ಮೀಟ್ ಅಸೋಸಿಯೇಷನ್ನಿನ ಪ್ರತಿನಿಧಿ ಹಾಜಿ ಶಕೀಲ್ ಖುರೇಶಿ "ಬಿಎಸ್ಪಿ, ಎಸ್ಪಿ ಸರಕಾರಗಳು ಮಾಂಸೋದ್ಯಮಿಗಳಿಗೆ ಮೋಸ ಮಾಡಿವೆ. ನೂತನ ಮುಖ್ಯಮಂತ್ರಿ ಅಕ್ರಮವಾಗಿ ಕಾರ್ಯಾಚರಿಸುತ್ತಿರುವ ಉದ್ಯಮಗಳನ್ನಷ್ಟೇ ಮುಚ್ಚಿಸುವ ಮೂಲಕ ರಾಜಧರ್ಮವನ್ನು ಪಾಲಿಸುತ್ತಿದ್ದಾರೆ. ಉತ್ತರಪ್ರದೇಶದ ವ್ಯವಸ್ಥೆಯನ್ನು ಸರಿಯಾದ ಹಾದಿಗೆ ಮರಳಿಸಲು ಯತ್ನಿಸುತ್ತಿರುವ ಅವರಿಗೆ ನಾವು ನಿಜವಾಗಿಯೂ ಕೃತಜ್ಞರಾಗಿರಬೇಕು" ಎಂದಿರುವುದು ತುಷ್ಟೀಕರಣ ಮಾಡುವ ಬದಲು ಸಂವಿಧಾನವನ್ನು ಕಟ್ಟುನಿಟ್ಟಾಗಿ ಅನುಸರಿಸಿದರೆ ನಿಜವಾದ ಜಾತ್ಯಾತೀತತೆ ತಾನಾಗಿ ಪ್ರಕಟವಾಗುತ್ತದೆ ಎನ್ನುವುದರ ಸೂಚನೆ. ಆದಿತ್ಯನಾಥರನ್ನು ಪರವಹಿಸಿಕೊಂಡು ಗೋಹತ್ಯಾ ನಿಷೇಧವನ್ನು ಬೆಂಬಲಿಸಿದ ಅಜ್ಮೀರ್ ದರ್ಗಾ ಮುಖ್ಯಸ್ಥ ಸೈಯದ್ ಝೈನುಲ್ ಅಬೇದಿನ್'ರನ್ನು ಅವರ ಸಹೋದರೆನೇ ವಜಾಗೊಳಿಸಿದ. ಅದರ ಬೆನ್ನಿಗೇ ಅಖಿಲ ಭಾರತ ಶಿಯಾ ವೈಯುಕ್ತಿಕ ಕಾನೂನು ಮಂದಳಿಯೂ ಗೋಹತ್ಯಾ ನಿಷೇಧವನ್ನು ಬೆಂಬಲಿಸಿತು. ಇದರ ಬೆನ್ನಲ್ಲೇ ಗುಜರಾತ್ ಸರಕಾರ ತನ್ನಲ್ಲಿದ್ದ ಗೋಹತ್ಯಾ ನಿಷೇಧ ಕಾಯಿದೆಯನ್ನು ಮತ್ತಷ್ಟು ಕಠಿಣಗೊಳಿಸಿ ಗೋಹತ್ಯೆ, ಗೋವುಗಳ ಅಕ್ರಮ ಸಾಗಾಟ ಮಾಡುವವರಿಗೆ ಹದಿನಾಲ್ಕು ವರ್ಷ ಜೈಲು ಶಿಕ್ಷೆ ಹಾಗೂ ಐದು ಲಕ್ಷ ರೂಪಾಯಿಗಳವರೆಗಿನ ದಂಡವನ್ನು ವಿಧಿಸುವ ಕಾನೂನು ರೂಪಿಸಿದೆ. ಹೌದು ರಾಜ ದಕ್ಷನೂ, ನ್ಯಾಯಪರನೂ ಆಗಿದ್ದರೆ ಪ್ರಜೆಗಳು ತನ್ನಿಂತಾನೇ ಸರಿದಾರಿಗೆ ಬರುತ್ತಾರೆ ಎನ್ನುವುದಕ್ಕೆ ಉದಾಹರಣೆಯಲ್ಲವೇ ಇದು. ಇಷ್ಟರವರೆಗೆ ಸುಮ್ಮನಿದ್ದ ಮುಸ್ಲಿಮರೂ ಗೋರಕ್ಷಣೆಯ ಮಾತಾಡುತ್ತಾರೆಂದರೆ ಹಿಂದಿನ ಸರಕಾರಗಳ ಕ್ಸುತಿತ ರಾಜಕಾರಣಕ್ಕೆ ಏನು ಹೇಳಬೇಕು?

           ಉತ್ತರಪ್ರದೇಶ, ಹಿಮಾಚಲಪ್ರದೇಶ, ಪಂಜಾಬ್, ಗುಜರಾತ್, ರಾಜಸ್ಥಾನ, ದೆಹಲಿ, ಮಹಾರಾಷ್ಟ್ರ, ಮಧ್ಯಪ್ರದೇಶ, ಹರಿಯಾಣಗಳಲ್ಲಿ ಗೋಹತ್ಯೆಯನ್ನು ನಿಷೇಧಿಸಬಹುದಾದರೆ ಉಳಿದ ಕಡೆಗಳಲ್ಲಿ ಯಾಕಾಗದು? ಸಂವಿಧಾನದ ನಲವತ್ತೆಂಟನೆಯ ವಿಧಿಯನ್ನು ಪಾಲಿಸದಿರುವುದು ಸಂವಿಧಾನದ ಸ್ಪಷ್ಟ ಉಲ್ಲಂಘನೆಯಲ್ಲವೇ? ರಾಷ್ಟ್ರೀಯ ಹಸಿರು ಪೀಠದ ಆಜ್ಞೆಯನ್ನಾದರೂ ಪಾಲಿಸಲು ಸರಕಾರಗಳಿಗೇನು ಮಂಕು ಕವಿದಿದೆಯೇ? ಆಹಾರ ಸಂಸ್ಕೃತಿ ಎಂದು ಬೊಬ್ಬಿರಿಯುತ್ತಾ ಇರುವವರೇನು ತಿನ್ನಲಿಕ್ಕಾಗಿಯೇ ಹುಟ್ಟಿದವರೇ?

           ಕ್ಯೂಬಾ, ಇರಾನ್ ನಂತಹ ಹಿಂದೂವೇತರ ದೇಶಗಳಲ್ಲೂ ಗೋಹತ್ಯೆ ನಿಷೇಧ ಕಾನೂನು ಜಾರಿಯಲ್ಲಿದೆ. ಇಂಡೋನೇಷ್ಯಾದ ನೂಪಾನಿಸದ ದ್ವೀಪದಲ್ಲಿ ಗೋಮಾಂಸ ಭಕ್ಷಣೆಗೆ ಬಹಿಷ್ಕಾರ ಹೇರಲಾಗಿದೆ. ಭಾರತೀಯ ಗೋವಂಶದ ವೈಶಿಷ್ಟ್ಯಗಳನ್ನು ಗಮನದಲ್ಲಿಟ್ಟು ಅಮೇರಿಕಾವು 1835ರಲ್ಲಿ ಇಂಗ್ಲೆಂಡಿನ ಮಾರ್ಗವಾಗಿ ಭಾರತದಿಂದ ಅಂಗೋಲ, ಗಿರ್, ಧಾರಪಾರಕರ, ಸಹಿವಾಲ, ಅಂಕೋಲಾ ವಾಟಸಿ ತಳಿಯ ಗೂಳಿಗಳನ್ನು ಕೊಂಡೊಯ್ದು ಗೋವಿನ ಉತ್ಕೃಷ್ಟ ಜಾತಿಯ ತಳಿಯನ್ನು ತಯಾರಿಸಿತು. ಸಹಿವಾಲ ತಳಿಯನ್ನು ಭಾರತದಿಂದ ಕೊಂಡೊಯ್ದು ಕೃಷಿ ಮತ್ತು ಆರ್ಥಿಕ ಪ್ರಗತಿಯನ್ನು ಸಾಧಿಸಿದ ಕ್ಯೂಬಾ ಜಗತ್ತಿನಲ್ಲಿ ಇಂದು ಸಂಪೂರ್ಣ ಜೈವಿಕ ಕೃಷಿ ಮಾಡುತ್ತಿರುವ ಏಕೈಕ ದೇಶ. ಬ್ರಾಝಿಲ್ನ ಶೇ. 90ರಷ್ಟು ಗೋಸಂಪತ್ತು ಭಾರತೀಯ ಗೋತಳಿಯನ್ನು ಆಧರಿಸಿದೆ. ದಕ್ಷಿಣ ಆಫ್ರಿಕಾದಲ್ಲಿ ಇಂದಿಗೂ 20 ಗೋವುಗಳನ್ನು ವಧುದಕ್ಷಿಣೆಯಾಗಿ ನೀಡುವ ಸಂಪ್ರದಾಯವಿದೆ. ಆದರೆ ಭಾರತದಲ್ಲಿ ಗೋವಿಗಿಂತಲೂ ಹೆಚ್ಚು ಕಸಾಯಿಖಾನೆಗಳು ಹುಟ್ಟುತ್ತಿವೆ. ಭೂಮಿಯನ್ನು ಫಲವತ್ತಾಗಿಸುವ, ಹೆಚ್ಚು ನೀರಿಂಗಿಸುವ ಸಾಮರ್ಥ್ಯವುಳ್ಳ ಗೊಬ್ಬರವನ್ನು ಕೊಡುವ; ತನ್ನ ಗೊಬ್ಬರ ಹಾಕಿ ಬೆಳೆದ ಬೆಳೆಯಲ್ಲಿ ಅಗತ್ಯ ಪ್ರಮಾಣದ ಮೆಗ್ನೇಶಿಯಮ್ ತತ್ವವನ್ನು ಸೇರಿಸಿ ಹೃದ್ರೋಗದ ಅಪಾಯವನ್ನು ತಪ್ಪಿಸುವ; ತನ್ನ ಗ್ರಂಥಿ ಸ್ರಾವದಿಂದ ವಾತಾವರಣ ಶುದ್ಧಿಗೊಳಿಸುವ; ತನ್ನ ಸೂರ್ಯನಾಡಿಯಿಂದ ಹಾಲಿನಲ್ಲಿ ವಿಟಮಿನ್ ಎ, ಸುವರ್ಣ ಕ್ಷಾರಗಳನ್ನು ಕರುಣಿಸುವ ಈ ಬಹು ಉಪಕಾರಿ ದೇವತೆಯನ್ನು ರಕ್ಷಿಸಲಾರೆವೇ?

ಈ ಕಟುಕರ ಸಂತೆಗೆ ಯಾಕೆ ಇಳಿದೆ ತಾಯೇ ನಂದಿನಿ
ನಡುಗುತಿಹುದು ನಿನ್ನ ಕಡಿವ ಕಂಡು ಮೇಧಿನಿ

ಮಂಗಳವಾರ, ಏಪ್ರಿಲ್ 25, 2017

ಕರ್ಣನಾರು?

ಕರ್ಣನಾರು?




              ಅನೇಕ ಜನರ ಕರುಣೆ, ಕೃಪಾಕಟಾಕ್ಷ ಹಾಗೆಯೇ ಹಲವರ ಭರ್ತ್ಸನೆಗೆ ಪಾತ್ರವಾದ ವ್ಯಕ್ತಿ ಮಹಾಭಾರತದ ಕರ್ಣ. ಆದರೆ ಪ್ರಸ್ತುತ ಕಾಲದಲ್ಲಿ ಕರ್ಣನ ತಪ್ಪುಗಳೆಲ್ಲವೂ ಆತನಿಗಾದ ಅನ್ಯಾಯ(?) ಎಂಬ ವಿಚಾರಾದಡಿಯಲ್ಲಿ ಮರೆಯಾದುದು ಕಾಣುತ್ತದೆ. ಇತಿಹಾಸ ಒಳ್ಳೆಯದನ್ನು ಸ್ವೀಕರಿಸು, ಕೆಟ್ಟದನ್ನು ತ್ಯಜಿಸು ಎನ್ನುವ ಪಾಠವನ್ನು ಕಲಿಸುತ್ತದೆ. ಅದೇ ದೃಷ್ಟಿಯಿಂದ ಇತಿಹಾಸವನ್ನು ನೋಡಬೇಕಲ್ಲದೆ ವ್ಯಕ್ತಿಗೆ ಅನ್ಯಾಯವಾಗಿದೆ ಎನ್ನುತ್ತಾ ಆತನ ತಪ್ಪನ್ನು ಮನ್ನಿಸುವುದರಲ್ಲಿ ಅಲ್ಲ. ಸಮಾಜದಿಂದ ಸ್ಥಾನ-ಮಾನಾದಿ ಸಹಿತ ಸರ್ವಸ್ವವನ್ನು ಪಡೆದವನ ಒಳ್ಳೆಯ ಅಂಶಗಳನ್ನು ಮಾತ್ರ ತೆಗೆದುಕೊಂಡು ಆತನ ಅನ್ಯಾಯ, ತಪ್ಪುಗಳನ್ನು ಖಂಡಿಸುವ ಧೈರ್ಯ ಇರುತ್ತದೋ ಅದೇ ರೀತಿ ಸಮಾಜದಿಂದ ತಿರಸ್ಕೃತಗೊಂಡ ವ್ಯಕ್ತಿಯ ಒಳ್ಳೆಯದನ್ನು ತೆಗೆದುಕೊಂಡು ಆತ ಮಾಡಿದ ತಪ್ಪುಗಳನ್ನು ತಪ್ಪೆಂದು ಸಾರುವ ಧೈರ್ಯವೂ ಮನುಷ್ಯನಲ್ಲಿ ಮೊಳೆಯಬೇಕು. ಮಾನವೀಯತೆ ಎನ್ನುವುದು ದೌರ್ಬಲ್ಯವಾಗಕೂಡದು. ಅದು ಧರ್ಮಾಧರ್ಮಗಳ ವಿವೇಚನೆಗೆ ತೆರೆದುಕೊಂಡು ಪ್ರತಿಫಲಿಸಬೇಕು.

        ಕರ್ಣ ಶೂರ,ದಾನಶೂರ ಎಂದ ಮಾತ್ರಕ್ಕೆ ಆತ ಮಾಡಿದ ತಪ್ಪುಗಳು "ಸರಿ"ಯಾಗುವುದಿಲ್ಲ. ಅವನು ದುಷ್ಟ ಚತುಷ್ಟಯರಲ್ಲೊಬ್ಬ ಎಂದು ಮಹಾಭಾರತದ ಕರ್ತೃ ವ್ಯಾಸರೇ ಹೇಳಿದ ಮಾತನ್ನು ಒಪ್ಪದವರಿಗೆ ಏನೂ ಹೇಳಲಿಕ್ಕಾಗುವುದಿಲ್ಲ. ಗಂಧರ್ವನ ಬಳಿ ಸೋಲುವಾಗ ಕರ್ಣನ ಪರಾಕ್ರಮ ಎಲ್ಲಿ ಹೋಗಿತ್ತು? ದ್ರೌಪದಿಯ ಸೀರೆ ಸೆಳೆವಾಗ ಕರ್ಣ ಏನು ಕಣ್ಮುಚ್ಚಿ ಕೂತಿದ್ದನೇ? ಪಾಂಡವರನ್ನು ಕೊಲ್ಲಲು ನಾನಾ ತಂತ್ರ ಉಪಯೋಗಿಸುವಾಗ ಕರ್ಣ ತನ್ನ ಆಪ್ತ ಮಿತ್ರನನ್ನು ಯಾಕೆ ತಡೆಯಲಿಲ್ಲ? ಅರಗಿನ ಮನೆಯಲ್ಲಿ ಪಾಂಡವರು ಸುಟ್ಟು ಬೂದಿಯಾಗುತ್ತಾರೆಂದು ತಿಳಿದಿದ್ದರೂ ಯಾಕೆ ಸುಮ್ಮನಿದ್ದ? ಪಾಂಡವರ ಅರಣ್ಯವಾಸ, ಅಜ್ಞಾತವಾಸಕ್ಕೆ ಕರ್ಣನೂ ಕಾರಣನೇ ಅಲ್ಲವೇ? ವಿರಾಟನ ಗೋವುಗಳನ್ನು ಅಪಹರಿಸುವಾಗ ಕರ್ಣನ ಆರ್ಷ ಪ್ರಜ್ಞೆ ಎಲ್ಲಿ ಸತ್ತಿತ್ತು? ಹೀಗೆ ಧರ್ಮಾಧರ್ಮಗಳ ವಿವೇಚನೆಯಿಲ್ಲದೆ ವರ್ತಿಸಿದ ಕರ್ಣ ತನಗೆ ಅನ್ಯಾಯವಾಗಿದೆ ಎಂದೇ ಸದಾ ಬಡಬಡಿಸಿದ. ತನಗಾದ ಅನ್ಯಾಯದ ಮೇಲಿನ ಸೇಡು ತೀರಿಸಿಕೊಳ್ಳಲು ಆತನಿಗೆ ದೊರಕಿದ್ದು ಬಡಪಾಯಿ ಪಾಂಡವರು. ಅದಕ್ಕೆ ದುರ್ಯೋಧನನ ಕುಮ್ಮಕ್ಕು ಬೇರೆ.

          ಅರ್ಜುನನೊಡನೆ ಗೋಗ್ರಹಣದ ಪ್ರಕರಣದ ಯುದ್ಧದಲ್ಲಿ ಸೋತು ಓಡಿಹೋಗುವಾಗ ಅರ್ಜುನನ್ನು ಮೀರಿಸುವ ಶೌರ್ಯ ಎಲ್ಲಿ ಮರೆಯಾಗಿತ್ತು? ಕೊನೆಗೆ ಯುದ್ಧದ ಸಮಯದಲ್ಲಾದರೂ ತನ್ನ ತಪ್ಪನ್ನು ಮನಗಂಡನೇ? ಅಭಿಮನ್ಯುವನ್ನು ಹಿಂದಿನಿಂದ ಬಂದು ಕಡಿದಾಗ ಕರ್ಣನ ಕ್ಷಾತ್ರಧರ್ಮ ಎಲ್ಲಿ ಕೊಲೆಯಾಗಿತ್ತು?  ಸಪ್ತಮಹಾಪಾತಕಿಗಳಲ್ಲೊಬ್ಬ ಎಂದು ವ್ಯಾಸರಿಂದಲೇ ಕರೆಯಲ್ಪಟ್ಟವನು ಅವನು. ದುರ್ಯೋಧನನ ಎಲ್ಲಾ ಕ್ರಿಯೆಗೂ ಕರ್ಣ-ದುಶ್ಯಾಸನ-ಶಕುನಿಯರ ಬೆಂಬಲವಿತ್ತು. ಅದಕ್ಕೆಂದೇ ಅವರನ್ನು ವ್ಯಾಸರು ದುಷ್ಟಚತುಷ್ಟಯರು ಅಂದಿದ್ದು. ಕರ್ಣನಿಗೆ ಅನ್ಯಾಯವಾಗಿದೆಯೆಂದು ಅದರ ಸೇಡನ್ನು ಪಾಂಡವರ ಮೇಲೆ ತೀರಿಸೋದು ಎಷ್ಟು ಸರಿ? ಇದೊಂಥರಾ ಎಡಬಿಡಂಗಿಗಳ ರೀತಿ..."ಕೆಳವರ್ಗಕ್ಕೆ ಹಿಂದೆ ಅನ್ಯಾಯವಾಗಿದೆ. ಅದಕ್ಕೆ ಈಗಿನ ಮೇಲ್ವರ್ಗದವರ ಮೇಲೆ ದಾಳಿ ಮಾಡಿ" ಎನ್ನುವ ಹಾಗೆ! ಕರ್ಣನಿಗೆ ಅನ್ಯಾಯವಾಯಿತು ಎನ್ನುವವರು ಆ ಕಾಲಘಟ್ಟವನ್ನು ನೋಡುವುದಿಲ್ಲ. ಮದುವೆಯಾಗದೆ ಹಡೆದ ಕುಂತಿ ಮಗುವನ್ನು ಏನು ಮಾಡಬಹುದಿತ್ತು?(ಇದಕ್ಕೆ ಈಗಲಾದರೂ ನಮ್ಮ ಸಮಾಜ ಅನುಮತಿ ಕೊಡುತ್ತದೆಯೇ?) ಇದೆಲ್ಲವನ್ನೂ ಆಯಾ ಪಾತ್ರಗಳಲ್ಲಿ ನಿಂತು ನೋಡಿದಾಗಷ್ಟೇ ಅರಿವಾಗುತ್ತದೆ. ವ್ಯಾಸ ಭಾರತವನ್ನು ಬಿಟ್ಟು ಯಕ್ಷಗಾನದಲ್ಲಿ ವೈಭವೀಕರಿಸಿದ ಕರ್ಣನನ್ನೋ, ಅಥವಾ ಭಾರತವನ್ನು ಬಳಸಿಕೊಂಡು ಮಾಡಿದ ಸಾಹಿತ್ಯದಲ್ಲಿ ನಾಯಕನನ್ನಾಗಿಸಿದ ಕರ್ಣನನ್ನು ನೋಡಿ ಕರ್ಣ ದೇವರಿಗೆ ಸಮ ಅಂತ ಅಂದುಕೊಂಡರೆ ಅಂತಹ ಮೂರ್ಖರು ಯಾರೂ ಇಲ್ಲ. ಮಹಾಭಾರತ ಕೇವಲ ಕಾವ್ಯ ಅಥವಾ ಐತಿಹಾಸಿಕ ಘಟನೆ ಮಾತ್ರವಲ್ಲ. ಅದು ನಮ್ಮ ತಪ್ಪನ್ನು ತಿದ್ದಿಕೊಳ್ಳಬೇಕಾದುದನ್ನು ಸೂಚಿಸುತ್ತದೆ. ದುರ್ಯೋಧನನ ರೀತಿ ಆಗಬೇಡಿ, ಧರ್ಮಜನ ರೀತಿ ಯಾಗದ ಸಮಯದಲ್ಲಿ ಮೈಮರೆತು "ಇನ್ನು ಮುಂದೆ ಯಾರು ಏನು ಹೇಳಿದರೂ ನಾನು ವಿರೋಧಿಸುವುದಿಲ್ಲ, ಏನನ್ನೂ ನಿರಾಕರಿಸುವುದಿಲ್ಲ" ಎಂದು ಪ್ರತಿಜ್ಞೆ ಮಾಡಿ ದುರ್ಯೋಧನ ಜೂಜಿಗೆ ಕರೆದಾಗಲೂ, ಹೆಂಡತಿಯನ್ನು ಸಭೆಗೆ ಎಳಸು ಎಂದಾಗಲೂ ಅಸ್ತು ಅನ್ನಬೇಕಾದ ಅನಿವಾರ್ಯತೆಯನ್ನು ಸೃಷ್ಟಿಸಬೇಡಿ... ಕರ್ಣನಿಗೆ ಆದ ಅನ್ಯಾಯ ಮುಂದೆ ಯಾರಿಗೂ ಆಗಬಾರದು ಎನ್ನುವುದೂ ಅದರಲ್ಲೊಂದು. ಚರಿತ್ರೆಯಿಂದ ಪಾಠ ಕಲಿಯುವುದಂದರೆ ಅದೇ.

                ಕರ್ಣನಿಗೆ ಅನ್ಯಾಯವಾದದ್ದು ನಿಜ. ಆದರೆ ಅವನು ಅಮಾಯಕನಲ್ಲ. ಅವನನ್ನು ಸೂತಪುತ್ರನೆಂದು ಉಳಿದವರು ಹೀಯಾಳಿಸಿದರೂ ಅವನಿಗೆ ರಾಜಾಶ್ರಯ ಅದರಲ್ಲೂ ರಾಜನ ಆಪ್ತಮಿತ್ರತ್ವದಂತಹ ಸ್ಥಾನವೂ ದೊರಕಿತ್ತು. ಹಾಗೆಯೇ ಮಿತ್ರನ ಕೃಪಾಕಟಾಕ್ಷದಿಂದ ಅಂಗರಾಜ್ಯವೂ ದೊರೆತಿತ್ತು. ಇಂತಹ ಅಧಿಕಾರವನ್ನು ಅವನು ಕೇವಲ ಮಿತ್ರನಿಗೆ ಸಹಾಯ ಮಾಡುವ ಉದ್ದೇಶದಿಂದ ದುರುಪಯೋಗ ಪಡಿಸಿಕೊಂಡು ಪಾಂಡವರ ಮೇಲೆ ದ್ವೇಷ ಸಾಧಿಸಲು ಪ್ರಯತ್ನಿಸಿದ್ದು ಎಷ್ಟು ಸರಿ? ಕೇವಲ ವಿದ್ಯೆ ಮಾತ್ರವಲ್ಲ; ವಿಚಾರ ಮಾಡುವ ಶಕ್ತಿಯೂ ಇರಬೇಕು! ವಿದ್ಯೆ ಇದ್ದ ಕರ್ಣನಿಗೆ ಯಾವುದು ಸರಿ ಯಾವುದು ತಪ್ಪು ಎಂದು ನಿರ್ಧರಿಸುವ ಸಾಮರ್ಥ್ಯ ಇರಲಿಲ್ಲವೇ? ಸಮಾಜದ ಮೇಲಿನ ದ್ವೇಷವನ್ನು ಪಾಂಡವರ ಮೇಲೇಕೆ ಕಾರಿದ? ಕರ್ಣನಿಗೆ ಅನ್ಯಾಯವಾಗಿದೆ ಎನ್ನುವ ಯಾರೂ ವಿದುರನಿಗಾಗಿ ಮರುಕಪಡುವುದಿಲ್ಲ. ಹುಟ್ಟಿದಾರಭ್ಯ ಅವನನ್ನು ದಾಸಿಪುತ್ರನೆಂದು ಹೀಯಾಳಿಸಿದರು. ಕ್ಷಾತ್ರ, ರಾಜನೀತಿಯಲ್ಲಿ ಪಾಂಡು, ದೃತರಾಷ್ಟ್ರರಿಗಿಂತ ಸಮರ್ಥನಾಗಿದ್ದರೂ ಅವನಿಗೆ ಪಟ್ಟ ಸಿಗಲಿಲ್ಲ. ತಮಗೆ ಪ್ರೀತಿಪಾತ್ರರಾದವರನ್ನು ಬಿಟ್ಟು ಈ ರೀತಿ ಅರ್ಹತೆಯುಳ್ಳವರಿಗೆ ಪಟ್ಟ ಕಟ್ಟಿದಾಗ ಅದರಿಂದ ದೇಶಕ್ಕೆ ಒಳ್ಳೆಯದಾಗಿದೆ ಎನ್ನುವುದನ್ನು ಇತಿಹಾಸವೇ ಸಾರಿ ಹೇಳುತ್ತದೆ. ಅಷ್ಟೆಲ್ಲಾ ಅನ್ಯಾಯವಾಗಿದ್ದರೂ ಅವನು ಕರ್ಣನ ಹಾಗೆ ಅಧರ್ಮಿಯಾಗಲಿಲ್ಲ. ಅವನಿಂದ "ವಿದುರ ನೀತಿ" ಯೇ ಸೃಷ್ಟಿಯಾಗಿ ಜಗತ್ತಿಗೇ ಉಪಯೋಗವಾಯಿತು. ಒಬ್ಬ ವ್ಯಕ್ತಿ ತನಗೆ ಬಂದ ಅಡೆತಡೆಗಳಲ್ಲೂ ಹೇಗೆ ನೀತಿವಂತನಾಗಿ ಸಚ್ಚಾರಿತ್ರ್ಯದಿಂದ ಬಾಳುತ್ತಾನೆಂಬುದು ಮುಖ್ಯ!

               ಪರಶುರಾಮರು ಕ್ಷತ್ರಿಯರಿಗೆ ಯುದ್ಧ ವಿದ್ಯೆ ಕಲಿಸುವುದಿಲ್ಲವೆಂದು ಮೊದಲೇ ನಿಶ್ಚಯ ಮಾಡಿದ್ದರು. ಕರ್ಣ ಸುಳ್ಳು ಹೇಳಿ ವಿದ್ಯಾರ್ಥಿಯಾದ. ಸತ್ಯ ತಿಳಿದಾಗ ಕೋಪಗೊಂಡು (ಭಾರ್ಗವ ವಂಶಜದವರಾದ ಪರಶುರಾಮರಿಗೆ ಕೋಪ ಬರುವುದು ಅಸಹಜವೂ ಅಲ್ಲ) ಶಪಿಸಿದ್ದು. ಇಲ್ಲಿ ತಪ್ಪು ಯಾರದ್ದು? ಒಬ್ಬಾಕೆ ತಾಯಿ ತನ್ನ ಸ್ವಂತ ಮಗನ ಸಾವು ನಿಶ್ಚಯ ಎಂದು ತಿಳಿದಿದ್ದರೂ ಭಾವನೆಯನ್ನೆಲ್ಲಾ ಅದುಮಿಟ್ಟುಕೊಂಡು ಧರ್ಮ ಗೆಲ್ಲಬೇಕೆಂದು ಸ್ಥಿರವಾಗಿ ನಿಂತಳಲ್ಲಾ...ಅದು ವೀರನಾರಿಯ ಲಕ್ಷಣ! ಒಂದು ವೇಳೆ ಕುಂತಿ ಕರ್ಣನಲ್ಲಿ ಆ ರೀತಿ ವರ ಕೇಳದಿದ್ದರೆ ಏನಾಗುತ್ತಿತ್ತು? ಕರ್ಣನ ಸರ್ಪಾಸ್ತ್ರದಿಂದ ಅರ್ಜುನನ ತಲೆ ಹೋಗುತ್ತಿತ್ತು. ಧರ್ಮ ಸೋಲುತ್ತಿತ್ತು! ಅಪಾತ್ರರ ಕೈಗೆ ಸಿಕ್ಕಿದರೆ ಸರ್ವನಾಶ ಖಂಡಿತ. ಭಯೋತ್ಪಾದಕರ ಕೈಗೆ ಅಣ್ವಸ್ತ್ರ ಸಿಕ್ಕಿದರೆ ಏನಾಗಬಹುದು? ಅದು ಕೃಷ್ಣ ನೀತಿ, ಅಂತಹುದನ್ನು ಪಾಲನೆ ಮಾಡದ್ದರಿಂದಲೇ ಭಾರತ ಮುಸಲರ ವಶವಾಯಿತು, ಬ್ರಿಟಿಷರ ದಾಸ್ಯಕ್ಕೀಡಾಯಿತು!

ಆರ್ಯ ಆಕ್ರಮಣ ವಾದವೆಂಬ ಕಳ್ಳು ಕುಡಿದ ಮಂಗನಾಟ

ಆರ್ಯ ಆಕ್ರಮಣ ವಾದವೆಂಬ ಕಳ್ಳು ಕುಡಿದ ಮಂಗನಾಟ

 ಮತ್ತೆ ಆರ್ಯ ಆಕ್ರಮಣ ವಾದ ಭುಗಿಲೆದ್ದಿದೆ. ಅದೊಂಥರಾ ಕಳ್ಳು ಕುಡಿದ ಮಂಗನಂತೆ! ಸಾಲಾ ಸಾಲು ಸಾಕ್ಷ್ಯಗಳು ಲಭ್ಯವಾಗಿದ್ದಾಗ್ಯೂ, ಆರ್ಯರು ಹೊರಗಿನಿಂದ ಬಂದು ಇಲ್ಲಿನ ದ್ರಾವಿಡ ನಾಗರೀಕತೆಯನ್ನು ಧ್ವಂಸಗೊಳಿಸಿದರು ಎಂಬುದು ಶುದ್ಧ ಸುಳ್ಳೆಂದೂ, ಹರಪ್ಪ-ಮೊಹಂಜೋದಾರೋಗಳಲ್ಲಿದ್ದುದು ಶುದ್ಧ ಸನಾತನ ವೈದಿಕ ಸಂಸ್ಕೃತಿಯೆಂದೂ ಆರ್ಕಿಯಾಲಜಿ, ಆಂತ್ರೊಪಾಲಜಿ, ಜಿಯಾಲಜಿ, ಆಸ್ಟ್ರಾನಮಿ ಮೊದಲಾದ ಆಧುನಿಕ ಶಾಸ್ತ್ರಗಳು ಮುಕ್ತಕಂಠದಿಂದ ಸಾರಿದ್ದಾಗ್ಯೂ ಈ ವಾದ ಜಾತ್ರೆ ಗದ್ದೆಯ ತಟ್ಟೀರಾಯನಂತೆ ಕುಣಿಯುತ್ತಲೇ ಇದೆ. ನೈಜ ಇತಿಹಾಸವೆಂಬ ದೇವರ ಉತ್ಸವ ಮೂರ್ತಿಯನ್ನು ನೋಡುವ ಬದಲು ತಟ್ಟೀರಾಯನತ್ತಲೇ ಮೂಢರು ಆಕರ್ಷಿತರಾಗುತ್ತಲೇ ಇದ್ದಾರೆ. ಹಾಗೆ ಆಕರ್ಷಿತರಾಗುವವರಿಗೆ ಆರ್ಯ ಪದದ ಅರ್ಥವೂ ತಿಳಿದಿಲ್ಲ, ತಾವ್ಯಾರು ಎನ್ನುವುದೂ ತಿಳಿದಿಲ್ಲ! ಭಾರತವನ್ನು ವಿಭಜಿಸುವ ಪ್ರಯತ್ನ ಮಾಡುತ್ತಲೇ ಇರುವ ಶಕ್ತಿಗಳಿಗೆ, ತಮ್ಮ ರಾಜಕೀಯ ಬದುಕನ್ನು, ಬಿಟ್ಟಿ ಊಟವನ್ನು ರಕ್ಷಿಸಿಕೊಳ್ಳುವ ಸಲುವಾಗಿ ಒದ್ದಾಡುವವರಿಗೆ, ತಮ್ಮ ಮೇಲ್ಮೆಯನ್ನು ಪ್ರದರ್ಶಿಸಿಕೊಳ್ಳಬಯಸುವವರಿಗೆ ತಾವು ಆರ್ಯ ಜನಾಂಗದ ಪೀಳಿಗೆಗಳಲ್ಲ, ದ್ರಾವಿಡರಾದ ತಮ್ಮನ್ನು ಆರ್ಯರೆಂಬ ಆಕ್ರಮಣಕಾರಿ ವರ್ಗ ಹೊರಗಿಂದ ಬಂದು ಆಕ್ರಮಿಸಿ ಅಡಿಯಾಳಾಗಿಟ್ಟುಕೊಂಡಿತು ಎನ್ನುವ ವಾದ ವಿಜೃಂಭಿಸಬೇಕೆನ್ನುವ ಹಂಬಲ ಸಹಜವೇ. ತಾವೊಂದು ಶ್ರೇಷ್ಠ ನಾಗರಿಕತೆಯ ವಾರಸುದಾರರೆಂದು ದಾಖಲೆಗಳೇ ಹೇಳುತ್ತಿದ್ದರೂ ತಾವವರಲ್ಲ ಎಂದು ಸಮರ್ಥಿಸಿಕೊಳ್ಳಲು ಗಟ್ಟಿದನಿಯಲ್ಲಿ ಚೀರಾಡುವ ಈ "ದ್ರಾವಿಡ ಪ್ರಾಣಾಯಾಮ"ಕ್ಕೆ ಭಾರತದ ಇತಿಹಾಸವೇ ಬದಲಾಗಿ ಹೋದದ್ದು ಮಾತ್ರ ವಿಪರ್ಯಾಸ.

       ಆಫ್ರಿಕಾ, ರಷ್ಯಾ, ಅಮೇರಿಕಾ ಸೇರಿದಂತೆ ವಿಶ್ವದ ಹಲವು ಭಾಗಗಳಲ್ಲಿ ಸ್ಥಳೀಯ ಕರಿಯ ಜನರ ತಾವು ಅಧಿಕಾರ ಚಲಾಯಿಸಿದಂತೆ ಭಾರತದಲ್ಲೂ ಪ್ರಾಚೀನ ಕಾಲದಲ್ಲೂ ಅದೇ ರೀತಿ ನಡೆದಿತ್ತೆಂದು ಬ್ರಿಟಿಷರು ಊಹಿಸಿಕೊಂಡಿದ್ದಿರಬೇಕು. ಅದಕ್ಕಾಗಿಯೇ ಇಂಡೋ ಯೂರೋಪಿಯನ್ ಸಂತತಿಗೆ ಸೇರಿದ ಆರ್ಯರು ಕ್ರಿ.ಪೂ 1500ರಲ್ಲಿ ಭಾರತದ ಮೇಲೆ ದಂಡೆತ್ತಿ ಬಂದು ಇಲ್ಲಿನ ಅನಾಗರಿಕ ದ್ರಾವಿಡ ಜನಾಂಗಕ್ಕೆ ನಾಗರಿಕತೆಯನ್ನು ಕಲಿಸಿ ಇಲ್ಲಿಯೇ ನೆಲೆಸಿದರೆಂದು ಇತಿಹಾಸದ ಪಠ್ಯ ಪುಸ್ತಕಗಳಲ್ಲೆಲ್ಲಾ ಬರೆಯಿಸಿದರು. ಇದರಿಂದ ಹಲವು ಬಗೆಯ ಲಾಭಗಳು ಅವರಿಗಾಗುತ್ತಿದ್ದವು. ಭಾರತೀಯರಲ್ಲೇ ಮೂಲ ಮತ್ತು ಆಕ್ರಮಣಕಾರರೆಂಬ ಜಗಳ ಉಂಟಾಗಿ ಉತ್ತರ ದಕ್ಷಿಣಗಳು ದೂರದೂರವಾಗುವ ಸಾಧ್ಯತೆ ಒಂದು. ಬ್ರಿಟಿಷರ ಈ ಇತಿಹಾಸವನ್ನೇ ನಂಬಿ ತಾವು ಶ್ರೇಷ್ಠರೆಂಬ ಭಾವನೆಯಿಂದ ದಕ್ಷಿಣದವರ ಮೇಲೆ ದ್ವೇಷ ಕಾರುತ್ತಾ ಬ್ರಿಟಿಷರಂತೆ ತಾವು ಎಂದು ಮನಸಲ್ಲೇ ಮಂಡಿಗೆ ತಿನ್ನುತ್ತಾ ಅವರ ಸಂಸ್ಕಾರವನ್ನು ಅನುಕರಿಸುತ್ತಾ ಸ್ವಧರ್ಮವನ್ನು ಮರೆಯುವ ಉತ್ತರ ಭಾರತೀಯರು, ಇದರಿಂದ ಕೀಳರಿಮೆಗೊಳಗಾಗಿ ಅವರನ್ನು ವಿರೋಧಿಸುವ ಅಥವಾ ಅವರಂತೆ ತಾವಾಗಲು ಬಯಸಿ ಬ್ರಿಟಿಷರ ಅನುಕರಣೆ ಮಾಡತೊಡಗುವ ಅಥವಾ ಇಂದಿನ ತಮ್ಮ ಸಂಸ್ಕೃತಿಯನ್ನೇ ತೊರೆದು ರಾಕ್ಷಸ ಕುಲವೇ ತಮ್ಮ ಮೂಲವೆಂಬಂತೆ ಅನಾಗರಿಕರಾಗುವ ದಕ್ಷಿಣಾತ್ಯರು...ಇದರಿಂದ ದೇಶದೊಳಗಾಗುವ ಅಲ್ಲೋಲ ಕಲ್ಲೋಲ. ಈ ಪರಿಸ್ಥಿತಿ ಭಾರತವನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳಲು ಬ್ರಿಟಿಷರಿಗೆ ಅನುಕೂಲಕರವಾಗಿ ಪರಿಣಮಿಸುತ್ತಿತ್ತು. ಅದರಲ್ಲಿ ತಕ್ಕ ಮಟ್ಟಿಗೆ ಯಶಸ್ವಿಯೂ ಆದರೂ ಕೂಡಾ. ಆದರೆ ಯಾವಾಗ ಹರಪ್ಪಾ, ಮೊಹಂಜೋದಾರೋಗಳಲ್ಲಿ ಉತ್ಖನನಗಳು ನಡೆದವೋ ಬಿಳಿಯರ ಬುದ್ಧಿಗೆ ಮಂಕು ಬಡಿಯತೊಡಗಿತು. ಆಂಗ್ಲರು ಕಲ್ಪಿಸಿಕೊಂಡ ಆರ್ಯರು ಭಾರತ ತಲುಪುವ ಸಾವಿರ ವರ್ಷಗಳ ಮೊದಲೇ ಇಲ್ಲಿ ವೈದಿಕ ಸಂಸ್ಕೃತಿಯೊಂದು ಅದ್ಭುತವಾದ ನಾಗರಿಕತೆಯೊಂದು ಅಭಿವೃದ್ಧಿಗೊಂಡಿತ್ತು ಎನ್ನುವ ಸಾಲು ಸಾಲು ದಾಖಲೆಗಳು ಈ ಉತ್ಖನನದಲ್ಲಿ ಲಭ್ಯವಾದವು. ತಮ್ಮದು ಕಟ್ಟುಕಥೆಯೆಂದು ಜಗತ್ತಿಗೆ ಅರಿವಾದೊಡನೆ ಸುಳ್ಳನ್ನು ಮುಚ್ಚಿಡಲು ಮತ್ತಷ್ಟು ಸುಳ್ಳನ್ನು ಹರಿಯಬಿಟ್ಟರು ಬಿಳಿಯರು. ಉತ್ಖನನದಲ್ಲಿ ಗೊತ್ತಾದ ನಾಗರಿಕತೆ ವೇದ ಸಂಸ್ಕೃತಿಯದ್ದಲ್ಲವೆಂದೂ, ಅನಾರ್ಯರಾದ ದ್ರಾವಿಡರದ್ದೆಂದೂ, ಅವರನ್ನು ಆಕ್ರಮಿಸಿದ ಆರ್ಯರು ಆ ನಾಗರಿಕತೆಯನ್ನು ಧ್ವಂಸ ಮಾಡಿ ಬಳಿಕ ವೇದಗಳನ್ನು ರಚಿಸಿದರೆಂದೂ ಚರಿತ್ರೆಯ ಪುಟಗಳಲ್ಲಿ ಬರೆಯಿಸಿಬಿಟ್ಟರು. ಹರಪ್ಪಾ ಉತ್ಖನನದಲ್ಲಿ ಭಾಗಿಯಾಗಿದ್ದ ವ್ಹೀಲರ್ ಅವಶೇಷಗಳನ್ನು ಆಕ್ರಮಣ ಮಾಡಿದವರದ್ದು ಈ ವಸ್ತುಗಳು, ಆಕ್ರಮಣಕ್ಕೊಳಗಾದವರದ್ದು ಉಳಿದವುಗಳೆಂದು ಘಂಟಾಘೋಷವಾಗಿ ನಿರ್ಣಯಿಸಿಬಿಟ್ಟ. ಚರಿತ್ರಕಾರರು ಕುರಿಗಳಂತೆ ಆತನ ವಾದವನ್ನು ಹಿಂಬಾಲಿಸಿದರು.

               ಯಾವುದೇ ಸಾಕ್ಷ್ಯಗಳಿಲ್ಲದೇ ಇತಿಹಾಸಕಾರರು ಆರ್ಯ ಆಕ್ರಮಣವಾದವನ್ನು ಎತ್ತಿ ಹಿಡಿಯಲು ಸಾಧ್ಯವಾದದ್ದು ಹೇಗೆ? ಇದಕ್ಕೆ ಉತ್ತರ ಹುಡುಕ ಹೊರಟರೆ ಅದು ವೇದಗಳನ್ನು ಆಂಗ್ಲ ಭಾಷೆಗೆ ತರ್ಜುಮೆ ಮಾಡಿದ ಮ್ಯಾಕ್ಸ್ ಮುಲ್ಲರ್ ಕಡೆಗೆ ಬೊಟ್ಟು ಮಾಡುತ್ತದೆ. ವೇದ ಸಾಹಿತ್ಯವನ್ನು ಐವತ್ತು ಸಂಪುಟಗಳಷ್ಟು ಬೃಹತ್ ಪ್ರಮಾಣದಲ್ಲಿ ಅನುವಾದ ಮಾಡಿದ ವ್ಯಕ್ತಿ ಮ್ಯಾಕ್ಸ್ ಮುಲ್ಲರ್. ಆದರೆ ಆತನೇನು ವೇದಗಳ ಮೇಲಿನ ಗೌರವ ಅಥವಾ ಪ್ರೇಮದಿಂದ ಈ ಅನುವಾದಗಳನ್ನು ಮಾದಿದ್ದಲ್ಲ. ಆತನದ್ದು ಕೂಲಿ ಕೆಲಸ. ಆಕ್ಸ್ ಫರ್ಡಿನಲ್ಲಿ ಕರ್ನಲ್ ಬೋಡೆನ್ ಎಂಬ ಶ್ರೀಮಂತ ತನ್ನ ಆಸ್ತಿಯನ್ನೆಲ್ಲಾ ಸಂಸ್ಕೃತದ ಅಧ್ಯಯನಕ್ಕಾಗಿ ಮೀಸಲಿಟ್ಟ. "ಸಂಸ್ಕೃತ, ವೇದಗಳನ್ನು ಅಧ್ಯಯನ ಮಾಡಿ ಅವನ್ನು ಕ್ರೈಸ್ತ ಮತದ ಪ್ರಕಾರವಾಗಿ ತಿರುಚಿ, ಅವು ಕ್ರೈಸ್ತ ಮತಕ್ಕಿಂತ ಕಳಪೆ ಎಂದು ತೋರಿಸಬೇಕು" ಎನ್ನುವುದೇ ಅವನ ಉದ್ದೇಶವಾಗಿತ್ತು. ಅದನ್ನು ಮೋನಿಯರ್ ವಿಲಿಯಮ್ಸ್ ಸಂಸ್ಕೃತ-ಆಂಗ್ಲ ಶಬ್ಧಕೋಶದ ಪ್ರಥಮ ಸಂಪುಟದ ಪೀಠಿಕೆಯಲ್ಲಿ ನೋಡಬಹುದು. ಆ ಪೀಠಕ್ಕೆ ಮ್ಯಾಕ್ಸ್ ಮುಲ್ಲರ್ ಸಮರ್ಥನಿದ್ದರೂ ಅವನು ಜರ್ಮನಿಯವ ಎನ್ನುವ ಕಾರಣಕ್ಕೆ ಮೋನಿಯರ್ ವಿಲಿಯಮ್ಸನನ್ನು ನೇಮಿಸಿದರು. ಇದರಿಂದ ಇರುಸುಮುರುಸುಗೊಂಡ ಮ್ಯಾಕ್ಸ್ ಮುಲ್ಲರ್ ಅವನಿಗಿಂತಲೂ ಹೆಚ್ಚು ಮತಾಂತರಕ್ಕೆ ಅನುಕೂಲವಾಗುವ ಕೆಲಸ ಮಾಡುವ ಹುಮ್ಮಸ್ಸಿನಿಂದ ಹೊಸ ಕೆಲಸ ಶುರುವಿಟ್ಟುಕೊಂಡ. ಹೀಗೆ ಕ್ರೈಸ್ತ ಮತ ಪ್ರಚಾರಕರು ಭಾರತದಲ್ಲಿ ಮತಾಂತರದ ಅನುಕೂಲಕ್ಕಾಗಿ ವೇದಗಳನ್ನು ತಮಗೆ ಬೇಕಾದಂತೆ ಅನುವಾದಿಸಲು ವ್ಯಕ್ತಿಯೊಬ್ಬನ ಹುಡುಕಾಟದಲ್ಲಿದ್ದಾಗ ಅವರಿಗೆ ಸಿಕ್ಕ ಸೂಕ್ತ ವ್ಯಕ್ತಿಯೇ ಸರಿಯಾಗಿ ಕೆಲಸವಿಲ್ಲದೆ ಅಂಡಲೆಯುತ್ತಿದ್ದ ಜರ್ಮನಿಯ ಮ್ಯಾಕ್ಸ್ ಮುಲ್ಲರ್. ಪುಟಕ್ಕೆ ನಾಲ್ಕು ಪೌಂಡ್ ಕೂಲಿಯಂತೆ ತರ್ಜುಮೆ ಮಾಡಲು ಒಡಂಬಡಿಕೆ ಮಾಡಿಕೊಂಡ ಮ್ಯಾಕ್ಸ್ ಮುಲ್ಲರ್, ತನ್ನ ತಾಯಿಗೆ ಬರೆದ ಪತ್ರದಲ್ಲಿ ಇದನ್ನು ಉಲ್ಲೇಖಿಸಿದ್ದಾನೆ. ಹನ್ನೆರಡು ವರ್ಷ ಘನಪಾಠ ಹೇಳಿಸಿಕೊಂಡು ಜೀವನ ಪರ್ಯಂತ ಕಲಿತರೂ ವೇದಾರ್ಥವನ್ನು ಪೂರ್ತಿ ಅರಿತುಕೊಳ್ಳುವುದು ಕಷ್ಟವೆಂದು ಭಾರತದ ಮಹಾಮಹಾ ಸಂಸ್ಕೃತ, ವೇದ ಪಂಡಿತರೇ ಅಲವತ್ತುಕೊಳ್ಳುತ್ತಿದ್ದ ಸಮಯದಲ್ಲಿ ಜರ್ಮನಿಯಲ್ಲಿ ಸಂಸ್ಕೃತ ಕಲಿತು, ಆರು ವರ್ಷಗಳಲ್ಲೇ ವೇದಗಳನ್ನು ಕಲಿತ(!) ಈ 24 ವರ್ಷ ಪ್ರಾಯದ ತರುಣ ಅನುವಾದಿಸಿದ ವೇದ ಸಾಹಿತ್ಯ ಹೇಗಿದ್ದೀತು? ತನ್ನ ಹೆಂಡತಿಗೆ ಬರೆದ ಪತ್ರದಲ್ಲಿ "ವೇದಗಳು ಹಿಂದೂಗಳ ತಾಯಿಬೇರು. ಅದನ್ನು ಕಿತ್ತರೆ ಸಾಕು ಮುಂದೆ ನಾವಂದುಕೊಂಡಂತೆ ಆಗುತ್ತದೆ. ನಾನು ಈಗ ಮಾಡುತ್ತಿರುವ ವೇದಗಳ ಅನುವಾದ ಮುಂದೆ ಇಂಡಿಯಾದ ಹಣೆಬರಹದ ಮೇಲೆ ಪ್ರಭಾವ ಬೀರುತ್ತದೆ" ಎನ್ನುತ್ತಾನೆ. ಸಾವಿರಾರು ವರ್ಷಗಳಿಂದ ಈ ದೇಶವನ್ನು ಬೆಳಗಿದ ವೇದ ಸಂಸ್ಕೃತಿಯನ್ನು ಮೂಲೋತ್ಪಾಟನೆ ಮಾಡುವುದೇ ಅವನ ಉದ್ದೇಶವಾಗಿತ್ತಲ್ಲವೇ? 1868 ಡಿಸೆಂಬರ್ 16ರಂದು ಭಾರತದ ಸೆಕ್ರೆಟರಿ ಆಫ್ ಸ್ಟೇಟ್ ಆರ್ಗಿಲ್ ಡ್ಯೂಕ್'ಗೆ "ಇಂಡಿಯಾದಲ್ಲಿನ ಪುರಾತನ ವೃಕ್ಷ ವಿನಾಶಕ್ಕೆ ಸಿದ್ಧವಾಗಿ ನಿಂತಿದೆ. ಕ್ರೈಸ್ತ ಮತ ಅಲ್ಲಿ ಹೆಜ್ಜೆ ಇರಿಸದಿದ್ದರೆ ತಪ್ಪು ಯಾರದ್ದು?" ಎಂದು ಪತ್ರ ಬರೆದ ಧೂರ್ತ ಈತ. ಅನುವಾದ ಕೆಲಸಕ್ಕೆ ಒಪ್ಪಿಕೊಂಡ ನಲವತ್ತು ವರ್ಷಗಳ ಬಳಿಕ ಇಂಗ್ಲೆಂಡಿನ ಸೈಂಟ್ ಜೋನ್ಸ್ ಕಾಲೇಜಿನಲ್ಲಿ ಮಾಡಿದ ಉಪನ್ಯಾಸದಲ್ಲಿ "ಯೂನಿವರ್ಸಿಟಿ ಪ್ರೆಸ್ಸಿಗಾಗಿ ಈ ಪವಿತ್ರ ಗ್ರಂಥಗಳ ಅನುವಾದಕ್ಕೆ ನಾನು ಒಪ್ಪಿಕೊಂಡ ಒಡಂಬಡಿಕೆಯಲ್ಲಿ ಮಿಷನರಿಗಳಿಗೆ ಸಹಾಯ ಮಾಡುವುದೂ ಸೇರಿತ್ತು" ಎಂದು ಯಾವುದೇ ಮುಚ್ಚುಮರೆಯಿಲ್ಲದೆ ಒದರಿದ. ಇಂತಹ ಮ್ಯಾಕ್ಸ್ ಮುಲ್ಲರನೇ ವೇದಗಳ ರಚನೆಯಾದದ್ದು ಕ್ರಿ.ಪೂ 1200ರಲ್ಲಿ ಎಂದು ಯಾವುದೇ ಸಂಶೋಧನೆ, ಸಾಕ್ಷ್ಯಾಧಾರಗಳಿಲ್ಲದೆ ಹೇಳಿದ್ದು. ತಮಗೆ ಅನುಕೂಲವಾಗಿದ್ದ ಅಂತಹ ಮಹಾನ್ ವಿದ್ವಾಂಸನ ಮಾತುಗಳನ್ನು ಇತಿಹಾಸಕಾರರು ಮರುಮಾತಿಲ್ಲದೆ ಸ್ವೀಕರಿಸಿದರು.

                  ಆದರೆ ಮುಂದಿನ ದಿನಗಳಲ್ಲಿ ಪುರಾತತ್ವ ಶೋಧಕರು ಆಧುನಿಕ ಉಪಕರಣ-ಜ್ಞಾನ-ನಿಯಮಗಳನ್ನು ಬಳಸಿಕೊಂಡು ಮಾಡಿದ ಸಂಶೋಧನೆ ಈ ಸುಳ್ಳುಗಳನ್ನೆಲ್ಲಾ ಬಯಲಿಗೆಳೆಯಿತು. ಹರಪ್ಪಾದಲ್ಲಿ ನಡೆದ ವ್ಹೀಲರನ ಉತ್ಖನನಗಳ ಸ್ಟ್ರಾಟಿಗ್ರಫಿಯ ಪುನರ್ ಪರಿಶೀಲನೆ ಆತ ಹೆಸರಿಸಿದ ಎರಡು ಸಂಸ್ಕೃತಿಗಳು ಒಂದೇ ಕಾಲದ್ದಲ್ಲವೆಂದು ಸ್ಪಷ್ಟವಾಯಿತು. ಮೊದಲ ಗುಂಪಿನವರನ್ನು ಆಕ್ರಮಣಕಾರರನ್ನಾಗಿಯೂ ಎರಡನೆಯವರನ್ನು ಆಕ್ರಮಣಕ್ಕೊಳಗಾದವರಂತೆ ವ್ಹೀಲರ್ ಪರಿಗಣಿಸಿದ್ದ. ಆದರೆ ಆಕ್ರಮಣಕಾರರು ಬರುವ ಸಮಯಕ್ಕೆ ಆಕ್ರಮಣಕ್ಕೊಳಗಾದವರು ಅಲ್ಲಿ ಇರಲೇ ಇಲ್ಲ ಎಂದು ಸ್ಟ್ರಾಟಿಗ್ರಫಿ ನಿಚ್ಚಳವಾಗಿ ಸಾರಿತು. ಇಬ್ಬರು ಬೇರೆ ಬೇರೆ ಕಾಲದವರಾಗಿದ್ದರೆ ನರಸಂಹಾರ ಹೇಗೆ ಸಾಧ್ಯ? ಹೀಗಾಗಿ ಆರ್ಯರು ದ್ರಾವಿಡರ ಸಂಹಾರ ಮಾಡಿದರು ಎನ್ನುವ ವಾದದಲ್ಲಿ ಹುರುಳಿಲ್ಲ ಎನ್ನುವುದು ನಿಚ್ಚಳವಾಯಿತು. ಮೊಹಂಜೋದಾರೋದಲ್ಲಿ ಜಿ.ಎಫ್.ಡೇಲ್ಸ್ ಹೊಸದಾಗಿ ಜರುಗಿಸಿದ ಉತ್ಖನನ ಹಾಗೂ ಕಲಾವಸ್ತುಗಳ ಪರೀಕ್ಷೆಯಿಂದ ಆರ್ಯ ಆಕ್ರಮಣ ಸುಳ್ಳೆಂದು ನಿರೂಪಿತವಾಯಿತು. ಅಲ್ಲದೆ ರಂಗಪುರ್, ಲೋಥಾಲ್ ಗಳಲ್ಲಿ ಡಾ. ಎಸ್. ಆರ್. ರಾವ್ ನಡೆಸಿದ ಉತ್ಖನನಗಳಲ್ಲೂ, ಕಾಲಿಬಂಗನ್, ಸುರ್ಕೋದಾಗಳಲ್ಲಿ ಜೆ.ಪಿ.ಜೋಷಿ ನಡೆಸಿದ ಉತ್ಖನನಗಳಲ್ಲೂ ಕುದುರೆಯ ಮೂಳೆಗಳು ಹಾಗೂ ಅಕ್ಕಿ ಎರಡೂ ಸಿಕ್ಕಿದ್ದವು. ಹೀಗಾಗಿ ಆ ನಾಗರೀಕತೆ ಆರ್ಯರದ್ದೇ ಎನ್ನುವುದು ಸೂರ್ಯ ಸ್ಪಷ್ಟ. ಅಲ್ಲದೆ ಮಾರ್ಷಲ್, ಫಿಗ್ಗಟ್ ರು ತಮ್ಮ ಉತ್ಖನನಗಳಲ್ಲಿ ಲಿಂಗಗಳೆಂದು ತೋರಿಸಿದ ವಸ್ತುಗಳು ಶಂಖಾಕಾರದ ತೂಕದ ಕಲ್ಲುಗಳ ಚೂರುಗಳು ಎಂದು ಎಸ್. ಆರ್. ರಾವ್ ಸಾಬೀತುಪಡಿಸಿದರು.(ಆರ್ಯನ್ ಇನ್ವ್ಯಾಷನ್ ಥಿಯರಿ-ಶ್ರೀಕಾಂತ್ ತಲಗೇರಿ)

                 ಲಿಂಗಾಕಾರದ ಕಲ್ಲುಗಳನ್ನು ನೋಡಿ ಅವುಗಳನ್ನು ಲಿಂಗಗಳೆಂದು ಕಲ್ಪಿಸಿ ಅಲ್ಲಿದ್ದವರು ದ್ರಾವಿಡರೇ ಎಂದು ಮೊಂಡು ವಾದ ಮಾಡಿದ ಇತಿಹಾಸಕಾರರಿಗೆ ದಕ್ಷಿಣ ಭಾರತಕ್ಕಿಂತಲೂ ಉತ್ತರಭಾರತದಲ್ಲೇ ಶೈವಾರಾಧನೆ ಹೆಚ್ಚು ಎನ್ನುವುದೇ ಮರೆತು ಹೋಯಿತು. ಶಿವನ ನೆಲೆ ಇರುವುದೂ ಅಪ್ಪಟ ಆರ್ಯ ಸ್ಥಾನದಲ್ಲಿ.  ಅಲ್ಲದೆ ಶಿವಾರಾಧನೆ ಆರ್ಯಸಂಸ್ಕೃತಿಯ, ಸನಾತನ ವೇದ ಸಂಸ್ಕೃತಿಯ ಭಾಗವೆಂದೂ ಅರಿಯದೆ ಹೋದರು. ಕೊಂಬುಗಳಿದ್ದ ಪಶುಪತಿಯನ್ನು ಕ್ರೈಸ್ತರ ಕಾಲಕ್ಕೆ ಮೊದಲೇ ಯೂರೋಪಿನಲ್ಲಿಯೂ ಆರಾಧಿಸುತ್ತಿದ್ದರು. ಆ ಚಿತ್ರವನ್ನು ಚಿತ್ರಿಸಲಾಗಿದ್ದ ದೊಡ್ಡ ಬೆಳ್ಳಿಯ ಬಟ್ಟಲು ಜರ್ಮನಿಯಲ್ಲಿ ಕಂಡು ಬಂತು. ಆರ್ಯ ಆಕ್ರಮಣ ಸಿದ್ಧಾಂತಿಗಳು ಹೇಳುವಂತೆ ಆರ್ಯರು ಬೆಳ್ಳಗಿದ್ದರೆಂದು ವೇದದಲ್ಲಿ ಎಲ್ಲೂ ಹೇಳಿಲ್ಲ. ಹಾಗೆಯೇ ಅವರನ್ನುವ ದ್ರಾವಿಡರ ದೇವತೆ ಶಿವನನ್ನು ಶುದ್ಧ ಸ್ಪಟಿಕ ಸಂಕಾಶ(ಸ್ಫಟಿಕ ಶುಭ್ರ ಬಣ್ಣದವ) ಎಂದಿದೆ ವೇದ. ಹಾಗೆಯೇ ಇಡೀ ವೇದ ವಾಘ್ಮಯದಲ್ಲಿ ವಿಷ್ಣು ಪರ ಸೂಕ್ತಗಳಿಗಿಂತಲೂ ಹೆಚ್ಚು ರುದ್ರ ಪರ ಸೂಕ್ತಗಳಿವೆ. ಹಾಗೆಯೇ ಸುರ-ಅಸುರರಿಬ್ಬರು ಅಕ್ಕ ತಂಗಿಯರ(ದಿತಿ-ಅದಿತಿ) ಮಕ್ಕಳು ಎನ್ನುವ ಅಂಶವೇ ಅಸುರರು ದ್ರಾವಿಡರು ಹಾಗೂ ದೇವತೆಗಳು ಆರ್ಯರು ಎನ್ನುವ ಅವರ ಮೊಂಡು ವಾದವನ್ನು ಒಂದೇ ಏಟಿಗೆ ಬದಿಗೆ ಸರಿಸುತ್ತದೆ. ಅಣ್ಣ ತಮ್ಮಂದಿರ ಜಗಳವನ್ನು ಎರಡು ಪ್ರತ್ಯೇಕ ಜನಾಂಗಗಳ ನಡುವಿನ ಜಗಳದಂತೆ ಬಿಂಬಿಸಿದವರ ಮೂರ್ಖತನಕ್ಕೆ ನಗಬೇಕೋ ಅಳಬೇಕೋ ಗೊತ್ತಾಗುವುದಿಲ್ಲ. ದೇವಾಸುರ ಕದನದಲ್ಲಿ ಸೋಲುಂಡ ಬಳಿಕ ದಾನವರು ಆರ್ಯಾವರ್ತವನ್ನು ಬಿಟ್ಟು ಬೇರೆ ಪಶ್ಚಿಮ-ವಾಯುವ್ಯ ದಿಕ್ಕಿನತ್ತ ಹೋದರು ಎಂದು ವೇದಗಳಲ್ಲೇ ಇದೆ. ಅಂದರೆ ವಲಸೆ ಇಲ್ಲಿಂದಲೇ ಆಗಿರಬೇಕು.  ಹಾಗೆ ನೋಡಿದರೆ ಭಾರತದಲ್ಲಿ ಸರ್ವಕಾಲಕ್ಕೂ ದಲಿತರ ಅಥವಾ ಕೆಳವರ್ಗದವರ ಸಂಖ್ಯೆಯೇ ಮೇಲ್ವರ್ಗಕ್ಕಿಂತ ಹೆಚ್ಚು ಇದ್ದಿದ್ದು, ಬ್ರಾಹ್ಮಣರಂದರೆ ಆರ್ಯರು, ಅಹಿಂದರೆಂದರೆ ದ್ರಾವಿಡರು ಎನ್ನುವ ಬುಡವಿಲ್ಲದ ವಾದವೂ ಅರ್ಥ ಹೀನವೆನಿಸುತ್ತದೆ. ಕೆಲವೇ ಕೆಲವು ಪ್ರತಿಶತ ಸಂಖ್ಯೆಯ ಆರ್ಯರು ಅಗಾಧ ಸಂಖ್ಯೆಯ ದ್ರಾವಿಡರನ್ನು ಸೋಲಿಸಿದ್ದು ಹೇಗೆ?  ಹರಪ್ಪ ಸಂಸ್ಕೃತಿ ಆರ್ಯರದ್ದಾಗದೇ ಇದ್ದಿದ್ದಲ್ಲಿ ವೇದಗಳಲ್ಲಿ ಹೇಳಲಾದ ಯಜ್ಞಶಾಲೆಗಳು ಹರಪ್ಪದಲ್ಲಿ ಕಂಡುಬಂದದ್ದು ಹೇಗೆ? ಇಲ್ಲಿನ ಮೂಲ ಸಂಸ್ಕೃತಿಗೆ ವೈದಿಕತೆಯ ಗಂಧಗಾಳಿ ಇಲ್ಲದಿದ್ದರೆ ಯಜ್ಞಶಾಲೆಗಳು ನಿರ್ಮಿತವಾದದ್ದೇಕೆ? ಅದು ದ್ರಾವಿಡರದ್ದಾಗಿದ್ದಾರೆ ಯಜ್ಞಶಾಲೆ, ಯಜ್ಞಕುಂಡದ ಆಕಾರ, ಯಜ್ಞವಿಧಾನದಲ್ಲೂ ವೈದಿಕ ಸಂಸ್ಕೃತಿಯ ಕುರುಹು ಕಂಡುಬಂದದ್ದಾದರೂ ಹೇಗೆ? ಉತ್ಖನನದಲ್ಲಿ ಯಜ್ಞಕುಂಡದಲ್ಲಿ ದೊರೆತ ಹವಿಸ್ಸು, ಬಲಿ ನೀಡಲಾದ ಪ್ರಾಣಿಗಳ ಅಸ್ಥಿಗಳನ್ನು ನೋಡಿದ ಮೇಲೂ ಅದು ವೈದಿಕ ಆರ್ಯ ನಾಗರಿಕತೆಯಲ್ಲ ಎಂದು ವಾದಿಸುವವರ ಮಸಲತ್ತಾದರೂ ಏನು? ಯಜ್ಞ ಶಾಲೆಗಳ ರಚನೆಯ ಬಗೆಗೆ ನಿರ್ದೇಶನ ಕೊಟ್ಟದ್ದು ವೇದಗಳ ಬಳಿಕ ರಚನೆಯಾದ ಶುಲ್ಬಸೂತ್ರಗಳು. ಶುಲ್ಬಸೂತ್ರಗಳಲ್ಲಿ ಉಲ್ಲೇಖಿಸಿದಂತೆಯೇ ಹರಪ್ಪಾದಲ್ಲಿ ದೊರೆತ ಯಜ್ಞಶಾಲೆಗಳು ರಚಿತವಾಗಿವೆ. ಆ ಸಂಸ್ಕೃತಿಗೆ ವೇದಗಳು ಗೊತ್ತೇ ಇಲ್ಲದಿದ್ದಲ್ಲಿ ಅದು ಸಾಧ್ಯವಾದದ್ದಾದರೂ ಹೇಗೆ?

                 ಸಾಹಿತ್ಯ ಹೊಂದಿರುವ ಜನಾಂಗಕ್ಕೆ ಸಂಸ್ಕೃತಿ ಇರುವುದು ಅಥವಾ ಸಂಸ್ಕೃತಿ ಇರುವ ಜನಾಂಗ ಸಾಹಿತ್ಯ ಸೃಷ್ಟಿ ಮಾಡಿರುವುದು ಇತಿಹಾಸ ಕಂಡ ಸತ್ಯ. ಹರಪ್ಪಾದಲ್ಲಿ ಕಂಡುಬಂದ ನಾಗರಿಕತೆ ದ್ರಾವಿಡರದ್ದು ಎಂದು ನಖಶಿಖಾಂತ ವಾದಿಸಿದವರಿಗೆ ಎಷ್ಟೇ ಪ್ರಯತ್ನಿಸಿದರೂ ಹರಪ್ಪಾ ಲಿಪಿಯ ಜಾಡೇ ಸಿಗಲಿಲ್ಲ. ಅದು ಆರ್ಯರದ್ದೆಂದು, ಹಾಗಾಗಿ ಲಿಪಿಯೂ ಆರ್ಯ ಸಂಸ್ಕೃತಿಯದ್ದಿರಬಹುದೆಂದು ಭಾವಿಸಿದವರಿಗೆ ಉತ್ಖನನದಲ್ಲಿ ಸಿಕ್ಕ ಮೊಹರು, ಕಲಾಕೃತಿಗಳಲ್ಲಿದ್ದ ಲಿಪಿಯ ಗೂಢತೆಯೂ ಅರ್ಥವಾಯಿತು. ಹರಪ್ಪಾ ಭಾಷೆ ಸಂಸ್ಕೃತದೊಂದಿಗೆ ಹೊಂದಿರುವ ಹತ್ತಿರದ ಸಂಬಂಧವೂ ಗೋಚರಿಸಿತು. ಲಿಪಿ, ಭಾಷೆ ಇದ್ದ ಮೇಲೆ ಸಾಹಿತ್ಯವೂ ಇರಬೇಕಲ್ಲಾ? ದ್ರಾವಿಡರೆನ್ನುವ ಜನಾಂಗವನ್ನು ಕಲ್ಪಿಸಿಕೊಂಡವರಿಗೆ ಆ ಜನಾಂಗದ್ದೆನ್ನಲಾದ ಯಾವ ಸಾಹಿತ್ಯವೂ ಸಿಕ್ಕದಿದ್ದ ಮೇಲೆ ಹರಪ್ಪಾದಲ್ಲಿ ಸಿಕ್ಕಿದ ಸಾಹಿತ್ಯ ಆರ್ಯ ಜನಾಂಗದ್ದಲ್ಲದೆ ಇನ್ಯಾರದ್ದು? ಆಧುನಿಕತೆಯೂ ಆಶ್ಚರ್ಯಗೊಳ್ಳುವಂತೆ ಬೃಹತ್ ಕಟ್ಟಡಗಳನ್ನು, ಸ್ನಾನ ಘಟ್ಟಗಳು, ರಮಣೀಯ ವಿಹಾರ ಸ್ಥಳಗಳು, ಇಂದಿನವರೂ ನಿಬ್ಬೆರಗಾಗುವಂತಹ ಅತ್ಯುತ್ತಮ ಪೌರ ಸೌಕರ್ಯಗಳು, ಅದ್ಭುತ ಕಲಾಕೃತಿಗಳನ್ನು ನಿರ್ಮಿಸಿದ, ಯಜ್ಞಗಳನ್ನು ಮಾಡಿ, ದೇವತೆಗಳನ್ನು ಆರಾಧಿಸಿದ ಈ ನಾಗರಿಕತೆ ಆರ್ಯರಲ್ಲದಿದ್ದರೆ ಮತ್ಯಾರದ್ದು? ಈ ಕಾಲದಲ್ಲಿ ವೇದಗಳು ಹುಟ್ಟಿರದಿದ್ದರೆ ಅವರ ಸಾಹಿತ್ಯವಾದರೂ ಯಾವುದು? ಭಾಷೆ, ಲಿಪಿ ಇದ್ದ ಮೇಲೆ ಸಾಹಿತ್ಯ ಇಲ್ಲವೆಂದರೆ ನಂಬುವುದು ಹೇಗೆ? ಪೈಥಾಗೋರಸ್ಸಿಗೂ ಸಾವಿರಾರು ವರ್ಷಗಳಿಗೂ ಮುನ್ನವೇ ಯಾವ ಕಟ್ಟಡ ಹೇಗಿರಬೇಕು, ಹೇಗೆ ಕಟ್ಟಬೇಕು, ಬಗೆಬಗೆಯ ಆಕಾರ, ಆಕೃತಿ, ವಿನ್ಯಾಸಗಳ ಯಜ್ಞ ಕುಂಡಗಳನ್ನು ನಿರ್ಮಿಸುವ ವಿವರಗಳನ್ನು ವೇದ ಸೂತ್ರಗಳಲ್ಲಿ ನಿರ್ದೇಶಿಸಿದ ಆರ್ಯರು ಸ್ವಯಂ ಅಂತಹ ಕಟ್ಟಡಗಳನ್ನು ಕಟ್ಟಲಿಲ್ಲವೇ? ಎಡಬಿಡಂಗಿ ಚರಿತ್ರಕಾರರು ಹೇಳುವಂತೆ ಅನಾರ್ಯ ಹರಪ್ಪರ ನಾಗರಿಕತೆಯನ್ನು ಧ್ವಂಸ ಮಾಡಿ ತಮ್ಮದೇ ನಾಗರಿಕತೆಯನ್ನು ಸೃಷ್ಟಿ ಮಾಡಿದ ಆರ್ಯರದ್ದೇ ಎನ್ನಲಾದ ಹರಪ್ಪಾಗಿಂತಲೂ ಭಿನ್ನವಾದ ನಾಗರಿಕತೆಯ ಕಿಂಚಿತ್ತೂ ಅವಶೇಷಗಳು ಯಾಕೆ ಕಂಡು ಬರಲಿಲ್ಲ? ಹರಪ್ಪಾ ನಾಗರಿಕತೆ ಅನಾರ್ಯರದ್ದು ಎನ್ನುವವರ ವಾದದ ಮಥಿತಾರ್ಥ ಏನಾಗುತ್ತದೆಯೆಂದರೆ ಹರಪ್ಪನ್ನರಿಗೆ ನಾಗರಿಕತೆ ಇದ್ದು ಸಾಹಿತ್ಯವಿರಲಿಲ್ಲ, ಆರ್ಯರ ಬಳಿ ವೇದಗಳಂತ ಉತ್ಕೃಷ್ಟ ಸಾಹಿತ್ಯವಿದ್ದೂ ನಾಗರಿಕತೆಯಿರಲಿಲ್ಲ!

                 ಆರ್ಯರೆಂದರೆ ಅಲೆಮಾರಿಗಳು, ದನಗಾಹಿಗಳು, ಯುದ್ಧಪ್ರಿಯರು ಎನ್ನುವ ಇತಿಹಾಸಕಾರರು ಋಗ್ವೇದದ ರಚನೆಯಾದದ್ದೂ ಅವರಿಂದಲೇ ಎನ್ನುತ್ತಾರೆ. ಋಗ್ವೇದದ ಭಾಷೆಯ ಕುರಿತಂತೆ ಅಮೆರಿಕಾದ ವ್ಯಾಸ ಹ್ಯೂಸ್ಟನ್ "ಅಲೆಮಾರಿಗಳು, ಕ್ರೂರಿಗಳು, ಆಕ್ರಮಣಕಾರಿಗಳು ಎಂದು ಇತಿಹಾಸಕಾರರಿಂದ ಬಿಂಬಿಸಲ್ಪಡುವ ಹೊರಗಿನಿಂದ ಆರ್ಯರಿಗೆ ಆಧುನಿಕ ಭಾಷೆಗಳಿಗಿಂತಲೂ ಪರಿಶುದ್ಧ ಭಾಷೆಯನ್ನು ಸೃಜಿಸಲು ಸಾಧ್ಯವಾದದ್ದು ಹೇಗೆ? ಆಧುನಿಕ ಭಾಷೆಗಳಿಗಿಂತ ಸುಂದರ, ಸಶಕ್ತ ಭಾಷೆ ಬಂದುದಾದರೂ ಎಲ್ಲಿಂದ?" ಎಂದು ಪ್ರಶ್ನಿಸುತ್ತಾರೆ. ವಾಮದೇವ ಶಾಸ್ತ್ರಿ(ಡೇವಿಡ್ ಫ್ರಾಲಿ)ಯವರಂತೂ ಈ ಐತಿಹಾಸಿಕ ದ್ವಂದ್ವವನ್ನು ಸಾಹಿತ್ಯವಿಲ್ಲದ ಇತಿಹಾಸ, ಇತಿಹಾಸವೇ ಇಲ್ಲದ ಸಾಹಿತ್ಯ ಎಂದು ಲೇವಡಿ ಮಾಡುತ್ತಾರೆ. ಆಕ್ರಮಣಕಾರರು ಶ್ರೇಷ್ಠ ಸಾಹಿತ್ಯ ಸೃಷ್ಟಿ ಮಾಡಿದರು, ಆದರೆ ಅವರಿಗೆ  ನಾಗರಿಕತೆಯಿರಲಿಲ್ಲ. ಆಕ್ರಮಣಕ್ಕೊಳಗಾದವರು ಅದ್ಭುತ ನಾಗರಿಕತೆಯನ್ನು ಬಿಟ್ಟು ಓಡಿದರು. ಅವರಿಗೆ ಅವರದ್ದೆನ್ನಲಾದ ಸಾಹಿತ್ಯವೇ ಇರಲಿಲ್ಲ! ಸುಳ್ಳನ್ನಾದರೂ ಜನ ನಂಬುವಂತೆ ಹೇಳಲೂ ಸಾಮರ್ಥ್ಯವಿಲ್ಲದ ಈ ಮಹಾಪಂಡಿತರು ಇತಿಹಾಸಕಾರರಂತೆ ಯಾವ ಕೋನದಿಂದ ಕಾಣುತ್ತಾರೆ?

                  ಆರ್ಯರು ದ್ರಾವಿಡರು ಪರಮ ವೈರಿಗಳಾಗಿದ್ದಲ್ಲಿ ಆ ವೈರ ಭಾರತೀಯ ಚರಿತ್ರೆಯಲ್ಲಿ ಕಾಣುವುದಿಲ್ಲವೇಕೆ? ವಿಂಧ್ಯವನ್ನು ದಾಟಿ ದಕ್ಷಿಣಕ್ಕೆ ಬಂದ ಅಗಸ್ತ್ಯ ಋಷಿಯನ್ನು ದಕ್ಷಿಣದವರು ಆರಾಧಿಸಿದ್ದೇಕೆ? ಉತ್ತರದ ರಾಮನನ್ನು ದಕ್ಷಿಣಾತ್ಯರೂ ದೇವರೆಂದು ಸ್ವೀಕರಿಸಿದ್ದೇಕೆ? ದ್ರಾವಿಡರದ್ದೆಂದೇ ಹೇಳಲಾದ ಪಶುಪತಿ ಉತ್ತರಭಾರತೀಯರ ಪರಮ ಆರಾಧ್ಯ ದೈವವಾದದ್ದು ಹೇಗೆ? ಆರ್ಯ ಭಾಷೆ ಸಂಸ್ಕೃತಕ್ಕೂ ದ್ರಾವಿಡ ಭಾಷೆಗಳಿಗೂ ಅಷ್ಟೊಂದು ಹತ್ತಿರದ ಸಂಬಂಧ ಇರುವುದಾದರೂ ಹೇಗೆ? ಶಂಕರರನ್ನು ಸರ್ವಜ್ಞ ಪೀಠಕ್ಕೇರಿಸಿದ್ದು ಕಾಶ್ಮೀರದ ಶಾರದಾ ಪೀಠದಲ್ಲಲ್ಲವೇ? ಭಾರತದ ನಾಲ್ಕು ದಿಕ್ಕುಗಳಲ್ಲಿ ಚತುರಾಮ್ನಾಯ ಪೀಠ, ಅನೇಕ ದೇವಾಲಯಗಳನ್ನು ಸ್ಥಾಪಿಸಿದ ದಕ್ಷಿಣ ಮೂಲದ ಶಂಕರರನ್ನು ಇಡೀ ಭಾರತ ಜಗದ್ಗುರುವೆಂದು ಒಪ್ಪಿಕೊಂಡಿದುದಾದರೂ ಹೇಗೆ? ವೈದಿಕ ಸೂತ್ರಕಾರರಾದ ಬೋಧಾಯನ, ಆಪಸ್ತಂಭ,... ಸರ್ವತ್ರ ಪ್ರಾತಃಸ್ಮರಣೀಯರಾದ ಶಂಕರ, ಮಧ್ವ, ರಾಮಾನುಜರು ದಕ್ಷಿಣದವರೇ ಅಲ್ಲವೇ? ಧರ್ಮ-ಸಂಸ್ಕೃತಿ, ಮತ-ತತ್ವ, ನ್ಯಾಯ-ನೀತಿ, ಸಾಮಾಜಿಕ-ಕೌಟುಂಬಿಕ ಪದ್ದತಿಗಳಲ್ಲಿ ಉತ್ತರ-ದಕ್ಷಿಣವಾಸಿಗಳಲ್ಲಿ ಚಾರಿತ್ರಿಕ ವೈರುಧ್ಯವೇ ಕಾಣದಿರುವಾಗ ಈ ಆರ್ಯ ಆಕ್ರಮಣವಾದ ಹಸಿ ಹಸಿ ಸುಳ್ಳೆಂದು ಮೇಲ್ನೋಟಕ್ಕೇ ಅನಿಸುವುದಿಲ್ಲವೇ?

                     ಅಂದ ಹಾಗೆ ಈ ಆರ್ಯ ಆಕ್ರಮಣವಾದ ಇಂದು ಜೀವಂತವಿರುವುದು ಭಾರತದಲ್ಲಿ ಮಾತ್ರ! ಅಮೆರಿಕಾದ ವಿವಿಗಳಲ್ಲಿ ಹಿಂದೂ ಜನಾಂಗದ ಅಧ್ಯಯನಕ್ಕೆ ಪ್ರಮುಖ ಪಠ್ಯ ಪುಸ್ತಕವಾದ "Survey of Hinduism" ನಲ್ಲಿ ಕ್ಲಾಸ್ ಕ್ಲೋಸ್ಟರ್ ಮೈರ್ "ಇತ್ತೀಚಿನ ದಿನಗಳಲ್ಲಿ ಹೊರಬಿದ್ದಿರುವ ವೈಜ್ಞಾನಿಕ-ಶಾಸ್ತ್ರೀಯ ಅನ್ವೇಷಣೆಗಳ ಪ್ರಕಾರ "ಭಾರತದ ಮೇಲಿನ ಆರ್ಯ ಆಕ್ರಮಣ" ವಾದ ಒಪ್ಪಲು ಅಸಾಧ್ಯವಾದದ್ದೆಂದು ಖಡಾಖಂಡಿತವಾಗಿ ಹೇಳಿದ್ದಾನೆ. ಪರಮ ಪವಿತ್ರ ಸರಸ್ವತಿ ನದಿಯನ್ನು ಋಗ್ವೇದ ಐವತ್ತಕ್ಕೂ ಹೆಚ್ಚು ಬಾರಿ ಸ್ಮರಿಸುತ್ತದೆ. ತಾಯಂದಿರಲ್ಲಿ, ನದಿಗಳಲ್ಲಿ, ದೇವತೆಗಳಲ್ಲಿ ನೀನು ಶ್ರೇಷ್ಠಳಾದವಳು ಎಂದು ಸ್ತುತಿಸಿದೆ. ಸರಾಸರಿ ಆರೇಳು ಕಿ.ಮೀ, ಕೆಲವೆಡೆ ಹದಿನಾಲ್ಕು ಕಿ.ಮೀಗೂ ಅಧಿಕ ಅಗಲವಾಗಿದ್ದ ಈ ಮಹಾನದಿ ಹರ್ಯಾಣ, ಪಂಜಾಬ್, ರಾಜಸ್ಥಾನಗಳ ಮೂಲಕ ಪ್ರವಹಿಸಿ ಭೃಗುಕುಚ್ಛದ ಬಳಿ ರತ್ನಾಕರ(ಅರಬ್ಬಿ ಸಮುದ್ರ)ವನ್ನು ಸೇರುತ್ತಿತ್ತು. ಹಲವು ಬಾರಿ ತನ್ನ ಪಥವನ್ನು ಬದಲಿಸಿ, ಪ್ರಾಕೃತಿಕ ಏರುಪೇರುಗಳಿಗೆ ಒಳಗಾಗಿ ಕ್ರಮೇಣ ಕ್ಷೀಣಗೊಂಡು ಕ್ರಿ.ಪೂ 2000ದ ವೇಳೆಗೆ ಶಾಶ್ವತವಾಗಿ ಒಣಗಿ ಹೋಯಿತು. ಅಮೆರಿಕಾದ Landsat, ಫ್ರೆಂಚರ SPOT ಉಪಗ್ರಹಗಳು ತೆಗೆದ ಛಾಯಚಿತ್ರಗಳಿಂದ ಇದು ವೈಜ್ಞಾನಿಕವಾಗಿ ಸಾಬೀತಾಗಿದೆ. ಅಲ್ಲದೆ ಆ ಬಳಿಕ ನಡೆದ ವೈಜ್ಞಾನಿಕ ಸಂಶೋಧನೆಗಳಲ್ಲೂ ಈ ನದಿ ಹರಿದ ಕುರುಹುಗಳು ಕಾಣಸಿಕ್ಕಿವೆ. ಇಂದಿನ ರಾಜಸ್ಥಾನದಲ್ಲಿ ಅಲ್ಲಲ್ಲಿ ಕಂಡುಬಂದ ಸಿಹಿ ನೀರ ಪಾತ್ರಗಳು ಈ ನದಿ ಹರಿವಿನದ್ದೇ. ಇದನ್ನು ಬಳಸಿಕೊಂಡು ಕೆಲವು ಕಡೆ ನದಿಯನ್ನು ಪುನರುಜ್ಜೀವಿಸುವ ಪ್ರಯತ್ನಗಳೂ ನಡೆದಿದೆ. ಹಿಮಾಲಯದಿಂದ ಹರಿದು ಬರುತ್ತಿರುವ ಸರಸ್ವತಿಯ ಉಗಮ ಬಿಂದುವಿನ ದರ್ಶನವಂತೂ ಬದರಿಯ ಸಮೀಪದ ವ್ಯಾಸ ಗುಹೆಯ ಬಳಿ ಈಗ ಎಲ್ಲರಿಗೂ ಲಭ್ಯ. ಬಳಿಕ  ಅಂಬಾಲದ ಆದಿ ಬದರಿಯ ಬಳಿಯೂ ಅದು ಕಾಣಿಸಿಕೊಂಡು ವಿಸ್ತಾರವಾಗಿದೆ.  ಸರಸ್ವತಿ ಗುಪ್ತಗಾಮಿನಿಯಾಗಿ ಪ್ರಯಾಗದಲ್ಲಿ ಗಂಗೆ, ಯಮುನೆಯರೊಂದಿಗೆ ಸಂಗಮಿಸುತ್ತಿದೆ ಎನ್ನುವ ನಂಬಿಕೆ ಇದೆಯಷ್ಟೇ. ಒಂದು ಕಾಲದಲ್ಲಿ ಸರಸ್ವತಿಗೆ ಉಪನದಿಯಾಗಿದ್ದ ಯಮುನಾ ಭೂಗರ್ಭದ ಹಾಳೆಗಳ ವ್ಯತ್ಯಾಸದಿಂದಾಗಿ ಸರಸ್ವತಿಯ ಪಾತಳಿಯ ಮೇಲ್ಮುಖಕ್ಕೆ ಹರಿಯಲಾಗದೆ ಪಶ್ಚಿಮದಿಂದ ಪೂರ್ವದತ್ತ ತಿರುಗಿ ಗಂಗೆಯೊಡನೆ ಸೇರಿಕೊಂಡಿತು. ಸರಸ್ವತಿಯ ಉಪನದಿ ಯಮುನೆಯಲ್ಲಿ ಸರಸ್ವತಿಯ ಲೇಪವಿರುವದರಿಂದ ತ್ರಿವೇಣಿ ಸಂಗಮದಲ್ಲಿ ಸರಸ್ವತಿಯೂ ಇರುವುದೆಂಬ ನಂಬಿಕೆ ಹುಟ್ಟಿಕೊಂಡಿತು. ನದಿ ಬತ್ತಿ ಹೋದ ಬಳಿಕ ಅದು ಹರಿದ ಜಾಗಗಳಲ್ಲಿ ಜನ ವಸತಿ ಆರಂಭವಾಯಿತು. ಅವು ಕ್ರಿ.ಪೂ 2000ದ್ದೆಂದು ಖ್ಯಾತ ಪುರಾತತ್ವ ಶಾಸ್ತ್ರಜ್ಞ ವಾಕಂಕರ್ ಸಂಶೋಧನೆಯಲ್ಲಿ ಹೊರಬಿತ್ತು. ಕ್ರಿ.ಪೂ 2000ಕ್ಕೆ ಮೊದಲೇ ಬತ್ತಿ ಹೋದ ನದಿಯನ್ನು ಮ್ಯಾಕ್ಸ್ ಮುಲ್ಲರ್ ಹೇಳಿದಂತೆ ಕ್ರಿ.ಪೂ 1200ರಲ್ಲಿ ರಚಿತವಾದ ಋಗ್ವೇದದಲ್ಲಿ ವರ್ಣಿಸಲು ಹೇಗೆ ಸಾಧ್ಯ? ಅಂದರೆ ಆರ್ಯರು ಒಮ್ಮೆ ಇಲ್ಲಿಗೆ(ಕ್ರಿ.ಪೂ 2000ಕ್ಕೆ ಮುನ್ನ) ಬಂದು ಆಕ್ರಮಣ ಮಾಡಿ ಹಿಂದಿರುಗಿ ಹೋಗಿ ಕ್ರಿ.ಪೂ 1500ರಲ್ಲಿ ಮತ್ತೆ ಬಂದು ಬಿಟ್ಟರೆ? ಎಂತಹಾ ಎಡಬಿಡಂಗಿತನ! ಆರ್ಯರು ಸರಸ್ವತಿ ನದಿ ಬತ್ತಿ ಹೋದ ಬಳಿಕ ಭಾರತದ ಮೇಲೆ ದಂಡೆತ್ತಿ ಬಂದುದಾದರೆ(ಕ್ರಿ.ಪೂ.1500) ಸರಸ್ವತಿಯ ಬಗ್ಗೆ ಅವರಿಗೆ ತಿಳಿದದ್ದಾದರೂ ಹೇಗೆ? ಅವರು ಸರಸ್ವತಿಯನ್ನು ತಾಯಿಯೆಂದು ಸ್ತುತಿಸಲಾದರೂ ಹೇಗೆ ಸಾಧ್ಯ? ಇವೆಲ್ಲವೂ ಆರ್ಯರನ್ನು ಕ್ರಿ.ಪೂ 2000ಕ್ಕೂ ಮೊದಲಿಗೆ ಕೊಂಡೊಯ್ಯಿತು. ಅಂದರೆ ಹರಪ್ಪಾ ನಾಗರಿಕತೆಗೂ ಮುನ್ನವೇ ಭಾರತದಲ್ಲಿ ಆರ್ಯರಿದ್ದರೆಂದಾಯಿತು. ಅಂದರೆ ಹರಪ್ಪಾದಲ್ಲಿದ್ದುದು ಆರ್ಯರೇ, ಹೊರಗಿನಿಂದ ದಂಡೆತ್ತಿ ಬಂದವರಲ್ಲಾ ಎಂದೂ ಸಾಬೀತಾಯಿತಲ್ಲವೇ?

                      1950ರಲ್ಲಿ ದೆಹಲಿಯ ಮಾರುಕಟ್ಟೆಯಲ್ಲಿ ತ್ಯಾಜ್ಯವಸ್ತುವೆಂದು ಕರಗಿಸುತ್ತಿದ್ದ ಕಂಚಿನ ಪ್ರತಿಮೆಯನ್ನು ಕಂಡು ಅಮೆರಿಕಾದ ಸಂಶೋಧಕ ಹ್ಯಾರಿ ಫಿಕ್ಸ್ ಬೆಚ್ಚಿಬಿದ್ದ. ಅದು ಋಗ್ವೇದದ ಏಳನೇ ಮಂಡಲದಲ್ಲಿ ವರ್ಣಿಸಿರುವ ವಸಿಷ್ಠನ ಪ್ರತಿಮೆ. ಪ್ರಾಚ್ಯ ಸಂಶೋಧಕ ರಾಕ್ ಆಂಡರ್ಸನ್ ಅದನ್ನು ಕ್ಯಾಲಿಫೋರ್ನಿಯಾ, ಸ್ವಿಜರ್ ಲೆಂಡಿನ ಅತ್ಯಾಧುನಿಕ ಪ್ರಯೋಗ ಶಾಲೆಗಳಲ್ಲಿ ರೇಡಿಯೋ ಕಾರ್ಬನ್ ಹಾಗೂ ಮೆಟಾಲರ್ಜಿ ಪರೀಕ್ಷೆಗೊಳಪಡಿಸಿದಾಗ ಅವು ಈ ಪ್ರತಿಮೆಯ ಕಾಲವನ್ನು ಕ್ರಿ.ಪೂ. 3700ಕ್ಕೆ ಒಯ್ದವು. ವಸಿಷ್ಠನ ಮೂರ್ತಿಯನ್ನು ಅನಾರ್ಯರು ನಿರ್ಮಿಸಲು ಹೇಗೆ ಸಾಧ್ಯ? ಹೀಗೆ ಕ್ರಿ.ಪೂ. 3700ಕ್ಕೂ ಮೊದಲಿನ ಆರ್ಯರನ್ನು ಭಾರತದಿಂದ ಹೊರಗಟ್ಟಿ, ಭಾರತದ ಮೇಲೆ ದಂಡೆತ್ತಿ ಬಂದವರಂತೆ, ಕ್ರಿ.ಪೂ 1500ರಂತೆ ಚಿತ್ರಿಸಿದ ನಮ್ಮ ಮಹಾನ್ ಇತಿಹಾಸಕಾರರನ್ನು ಏನೆಂದು ಕರೆಯಬೇಕು?

                    ಅರುಣ್ ಶೌರಿಯವರ ಎಮಿನೆಂಟ್ ಹಿಸ್ಟೋರಿಯನ್ಸ್ ಸುಳ್ಳು ಸುಳ್ಳೇ ಆರ್ಯ ಆಕ್ರಮಣವಾದದಂತಹ ಸಿದ್ಧಾಂತಗಳನ್ನು ಪ್ರತಿಪಾದಿಸಿದವರ  ಇತಿಹಾಸ ರಚನೆಯ ಕಾರ್ಯದಲ್ಲಿನ ಭೃಷ್ಟಾಚಾರ, ಇತಿಹಾಸ ತಿರುಚುವಿಕೆಯನ್ನು ಎತ್ತಿ ತೋರಿಸಿದೆ. ಇಂದಿನವರೆಗೂ ಅದನ್ನು ಸುಳ್ಳೆಂದು ಯಾವ ಆರ್ಯ ಆಕ್ರಮಣ ಸಿದ್ಧಾಂತವಾದಿಯೂ ಖಂಡಿಸಿಲ್ಲ. ಸೇಡನ್ ಬರ್ಗ್ ಎಂಬ ಪ್ರಖ್ಯಾತ ಗಣಿತಶಾಸ್ತ್ರಜ್ಞ ಅರಗಳಿರುವ ಚಕ್ರದ ಅಭಿವೃದ್ಧಿ ಹಾಗೂ ಅಂಕೆಗಳ(ನಂಬರ್ ಸಿಸ್ಟಮ್) ವಲಸೆಯನ್ನು ಅಧ್ಯಯನ ಮಾಡಿದರು. ಚೌಕದಿಂದ ಅದರ ಸಮನಾದ ಕ್ಷೇತ್ರಫಲವುಳ್ಳ ವೃತ್ತವನ್ನು ಹಾಗೆಯೇ ವೃತ್ತದಿಂದ ಅದರ ಸಮನಾದ ಕ್ಷೇತ್ರಫಲವುಳ್ಳ ಚೌಕವನ್ನು ತಯಾರಿಸುವ ಮೂಲ ಎಲ್ಲಿಂದ ಬಂತು ಎಂದು ಅವರು ಸಂಶೋಧನೆಗಿಳಿದಾಗ ಅದು ಶುಲ್ಬ ಸೂತ್ರದತ್ತ ಬೆರಳು ಮಾಡಿತು. ಸ್ಮಶಾನಚಿತ್ ಎನ್ನುವ ಯಜ್ಞವೇದಿಕೆ ಈಜಿಪ್ಟಿನ ಪಿರಮಿಡ್ಡುಗಳಿಗೆ ಸ್ಪೂರ್ತಿಯಾದುದನ್ನೂ ಅವರು ಕಂಡುಕೊಂಡರು. ಹೀಗೆ ವಿಜ್ಞಾನದ ಹಾಗೂ ಖಗೋಳದ ವಲಸೆಯೂ ಸಿಂಧೂ-ಸರಸ್ವತಿ ತೀರದಿಂದ ಉಳಿದ ಕಡೆಗೆ ಪ್ರಸರಣವಾದ ಪ್ರಕರಣವೂ ಜನಾಂಗ ವಲಸೆ ಹೊರಗಿನಿಂದ ಇಲ್ಲಿಗಲ್ಲ, ಇಲ್ಲಿಂದಲೇ ಹೊರಗೆ ಎನ್ನುವುದನ್ನು ಮತ್ತಷ್ಟು ಸ್ಪಷ್ಟಪಡಿಸಿತು. ಸರಸ್ವತಿ ಬತ್ತಿ ಹೋದ ಸಮಯದಲ್ಲೇ ಪ್ರಾಚೀನ ಈಜಿಪ್ಟ್, ಬ್ಯಾಬಿಲೋನಿಯಾ, ಅಸ್ಸೀರಿಯಾಗಳೂ ಭೀಕರ ಬರಗಾಲಕ್ಕೆ ತುತ್ತಾಗಿ ಮರುಭೂಮಿಯಾಗಿ ಬದಲಾದವು. 1970ರ ದಶಕದಲ್ಲಿ ಡಾ. ವಿಷ್ಣು ಶ್ರೀಧರ್ ವಾಕಣ್ಕರ್ ಎಂಬ ಪುರಾತತ್ವ ಶಾಸ್ತ್ರಜ್ಞ, ಇತಿಹಾಸ ಶಾಸ್ತ್ರಜ್ಞ, ಗುಹಾಚಿತ್ರ ಅಧ್ಯಯನಕಾರ ತಜ್ಞರ ತಂಡವೊಂದನ್ನು ಕಟ್ಟಿಕೊಂಡು ಸರಸ್ವತಿಯ ಹರಿವಿನ ಪಾತ್ರದ ಸಂಶೋಧನೆಗೆ ಇಳಿದರು. ಅವರ ಸಂಶೋಧನಾ ವರದಿ ಕ್ರಿ.ಪೂ 3000ಕ್ಕೆ ಮುನ್ನವೇ ಸರಸ್ವತಿ ಬತ್ತಲು ಶುರುವಾಗಿತ್ತು. ಮಹಾಭಾರತದ ಸಮಯದಲ್ಲಿ ಹರಿಯುತ್ತಿತ್ತು. ಈಗ ಮಳೆಗಾಲದಲ್ಲಿ ಮಾತ್ರ ಗಗ್ಗರ್ ಎನ್ನುವ ನದಿಯಾಗಿ ಹರಿಯುತ್ತಿದೆ ಎನ್ನುವ ಅಂಶವನ್ನು ಬಯಲು ಮಾಡಿತು.  ಈಜಿಪ್ಟಿನ ಪಿರಮಿಡ್ಡುಗಳಲ್ಲಿ ಭಾರತದ ಹತ್ತಿ ಸಿಕ್ಕಿದೆ. ಅದೇ ಹತ್ತಿಯ ಬೀಜಗಳು ಸಿಂಧೂ-ಸರಸ್ವತಿ ಉತ್ಖನನದಲ್ಲೂ ಸಿಕ್ಕಿವೆ. ಭುಜ್, ಕ್ಯಾಂಬೆಗಳಲ್ಲಿ ಇತ್ತೀಚಿಗೆ ನಡೆದ ಸಂಶೋಧನೆಗಳು ವೇದಗಳ ರಚನೆಯ ಕಾಲವನ್ನು ಕ್ರಿ.ಪೂ 6000ಕ್ಕೂ ಹಿಂದಕ್ಕೆ ದೂಡುತ್ತವೆ. ಇನ್ನು ಕುದುರೆಗಳ ವಿಷಯಕ್ಕೆ ಬಂದರೆ ಯೂರೋಪಿನಲ್ಲಿ ಸಿಗುತ್ತಿದ್ದ ಕುದುರೆಗಳಿಗಿದ್ದ ಪಕ್ಕೆಲುಬುಗಳು 36.  ಅದೇ ಋಗ್ವೇದದ ಮೊದಲ ಮಂಡಲದ ಅಶ್ವಸೂಕ್ತದಲ್ಲಿ ಉಲ್ಲೇಖವಾದ ಕುದುರೆಗಳ ಪಕ್ಕೆಲಬುಗಳ ಸಂಖ್ಯೆ 34. ಅವು ಹಿಮಾಲಯದಲ್ಲೇ ಇದ್ದ ಶಿವಾಲಿಕ್ ಜಾತಿಯ ಕುದುರೆಗಳು. ಮೂವತ್ತು ಸಾವಿರ ವರ್ಷಗಳಿಗೂ ಹಿಂದಿನ ರಚನೆಗಳಿರುವ ಭೀಮ್ ಬೆಡ್ಕಾ ಗುಹೆಗಳಲ್ಲಿ ನಟರಾಜನ, ಕುದುರೆಗಳ, ಅಶ್ವಮೇಧದ ಕೆತ್ತನೆಗಳಿವೆ. ಅಲ್ಲದೆ ಎಲ್ಲಾ ಭಾರತೀಯ ಜಾತಿಗಳ ತಲೆಬುರುಡೆ, ಇನ್ನಿತರ ದೇಹರಚನೆಯನ್ನು ತಳಿಶಾಸ್ತ್ರದ ಪ್ರಕಾರ ಸಂಶೋಧನೆಗೊಳಪಡಿಸಿದಾಗ ಅವು ಒಂದೇ ರೀತಿಯಾಗಿರುವುದು ಕಂಡುಬರುತ್ತದೆ. ಇವೆಲ್ಲವೂ ಆರ್ಯ ಆಕ್ರಮಣವನ್ನು, ಅವರ ಹೊರಗಿನಿಂದ ವಲಸೆಯನ್ನು ಒಂದೇ ಏಟಿಗೆ ಕತ್ತರಿಸಿ ಹಾಕುತ್ತವೆ.

                     ‘ಆರ್ಯ' ಎಂದರೆ ‘ಸುಸಂಸ್ಕೃತ', ‘ಶ್ರೇಷ್ಠ', ‘ಆದರಣೀಯ' ಎಂದರ್ಥ. ಇದು ಜನಾಂಗವಾಚಕವಲ್ಲ, ಗುಣವಾಚಕ! ಮಹಾಕುಲ ಕುಲೀನಾರ್ಯ ಸಭ್ಯ ಸಜ್ಜನ ಸಾಧವಃ (ಉತ್ತಮ ವಂಶದಲ್ಲಿ ಹುಟ್ಟಿದ ಸಭ್ಯ, ಸಜ್ಜನ, ಸಾಧು) ಎಂದು ಆರ್ಯ ಪದವನ್ನು ಅರ್ಥೈಸಿದೆ ಅಮರಕೋಶ. ಆರ್ಯ ಅನ್ನುವುದು "ಶ್ರೇಷ್ಠತೆ"ಯನ್ನು ಬಿಂಬಿಸುವ ಶಬ್ಧ. ಆರ್ಯ ಶಬ್ಧ "ಅರಿಯ" ಶಬ್ಧದಿಂದ ಬಂತು. ಅದು ವೈಶ್ಯ ವೃತ್ತಿಗೆ ಸಂಕೇತ. "ಅರ್ಯ ಸ್ವಾಮಿ ವೈಶ್ಯಯೋಹೋ", ಈಗ ನಾವು ಎಂಟರ್ ಪ್ರೀನರ್ ಶಿಪ್ (Entrepreneurship) ಎಂದು ಯಾವುದನ್ನು ಕರೆಯುತ್ತೇವೆಯೋ ಅದು. ಕೃಷಿ, ಗೋರಕ್ಷ, ವಾಣಿಜ್ಯ ಇವೆಲ್ಲವನ್ನು ಮಾಡುವವನು. ಅಲೆದಾಡುತ್ತಿದ್ದವ ನೆಲೆ ನಿಂತದ್ದು ಕೃಷಿಯಿಂದಾಗಿ. ಅದು ಹಳೆಯದಾದ ಸಂಸ್ಕೃತಿ. ಹೀಗೆ ಆರ್ಯ ಸಂಸ್ಕೃತಿಯೊಂದಿಗೆ ಜೋಡಿಸಿಕೊಂಡಿತು. ಅರಿಯ ಎನ್ನುವ ಶಬ್ಧದ ಮೂಲ 'ಋ'ಕರ್ಷಣೆ ಎನ್ನುವ ಧಾತು ಅಂದರೆ ಉಳುಮೆ ಎಂದರ್ಥ. ಸರಸ್ವತಿ-ದೃಷದ್ವತಿ ನದಿಗಳ ಮಧ್ಯೆ ಇರುವುದು ಬ್ರಹ್ಮಾವರ್ತ. ಬ್ರಹ್ಮ ಅಂದರೆ ವೇದ ಎಂದರ್ಥ. ಅಂದರೆ ಇದು ವೇದ ಭೂಮಿ. ಕುರುಕ್ಷೇತ್ರವೇ ಈ ಬ್ರಹ್ಮಾವರ್ತ. ಹಿಮಾಲಯ-ವಿಂಧ್ಯಗಳ ನಡುವಿನ ಸಿಂಧೂ-ಗಂಗಾ ನದಿಗಳ ಬಯಲು ಪ್ರದೇಶ ಆರ್ಯಾವರ್ತ. ಅಂದರೆ ಕೃಷಿಯೋಗ್ಯ ಭೂಮಿ ಎಂದರ್ಥ. ವೈಶ್ಯರಿಗೆ ಆರ್ಯವೈಶ್ಯ ಎನ್ನುವ ಪದ್ದತಿ ಈಗಲೂ ಇದೆ. ಕೇರಳದಲ್ಲಿ ಒಣಗಿಸಿಟ್ಟು ಸಂಸ್ಕರಿಸಿ ಹದಗೊಳಿಸಿದ ಅಕ್ಕಿಯನ್ನು ಅರಿಯನೆಲ್ಲ್ ಅನ್ನುತ್ತಾರೆ. ತುಳುವಿನಲ್ಲಿ ಅಕ್ಕಿಗೆ ಅರಿ ಎಂದೇ ಹೆಸರು. ಕೃಷಿಗೆ ಹೂಡುವಂತೆ ಪಳಗಿಸಲ್ಪಟ್ಟ ಕೋಣಗಳನ್ನು ಆರ್ಯಕೋಣಗಳು ಎನ್ನುತ್ತಾರೆ. ಅಂದರೆ ಆರ್ಯ ಎಂದರೆ ಪಶು ಸ್ವಭಾವದಿಂದ ಹೊರಬಂದು ಸೌಮ್ಯವಾಗಿ, ಸುಸಂಸ್ಕೃತನಾಗಿ ವರ್ತಿಸುವವನು ಎಂದರ್ಥ. ಮುಂದೆ ಇದು ಸಭ್ಯತೆ, ಸುಸಂಸ್ಕೃತತೆಗೆ ಗುಣವಾಚಕವೇ ಆಯಿತು. ದ್ರವಿಲ ಲಡಯೋರಭೇದಃ ಅಂದರೆ ಮರಗಳಿಂದ ಸಮೃದ್ಧವಾದ ಎನ್ನುವುದು ದ್ರಾವಿಡದ ಅರ್ಥ. ಅಂದರೆ ಅದೂ ಕೂಡ ಜನಾಂಗವಾಚಕವಲ್ಲ. ವಿಂಧ್ಯದ ಈಚಿನ ಭಾಗ ದಕ್ಷಿಣಾವರ್ತ. ಹಾಗೆಯೇ ವೇದಗಳಲ್ಲಿ ಬರುವ ಕಣ್ವ, ಆಂಗೀರಸ, ಕೃಷ್ಣ, ವ್ಯಾಸ ಎಲ್ಲರೂ ಕಪ್ಪಗಿದ್ದವರು; ಅದರಲ್ಲೂ ಕಣ್ವ ತೊಳೆದ ಕೆಂಡದ ಹಾಗಿದ್ದ ಎನ್ನುವ ಉಲ್ಲೇಖವೂ ಬರುತ್ತದೆ. ಹಾಗಾಗಿ ಇದು ಬಣ್ಣಕ್ಕೆ ಸಂಬಂಧಿಸಿದ್ದೂ ಅಲ್ಲ. ಈಚೆಗೆ ನಡೆದ ಪಾಪ್ಯುಲೇಶನ್ ಜೆನೆಟಿಕ್ಸ್ ಪ್ರಕಾರ ನಮ್ಮ ದೇಶಕ್ಕೆ ಸುಮಾರು ನಲವತ್ತು ಸಾವಿರ ವರ್ಷದಿಂದ ಯಾವುದೇ ದೊಡ್ಡ ಪ್ರಮಾಣದ ಜನಾಂಗದ ವಲಸೆ(Migration) ಆಗಿಲ್ಲ ಎಂದು ಮಾಲಿಕ್ಯುಲರ್ ಜೆನೆಟಿಕ್ಸ್ ಮೂಲಕ ತಿಳಿದು ಬರುತ್ತದೆ. ಹಾಗಾಗಿ ಜನಾಂಗದ ವಲಸೆಯೂ ಬಿದ್ದು ಹೋಯಿತು. ಇನ್ನು ಆಕ್ರಮಣವೆಲ್ಲಿ ಬಂತು?

                      ಆರ್ಯ ಜನಾಂಗವೆಂಬುದು ಭೌತಿಕವಾಗಿ ಪ್ರಪಂಚದಲ್ಲಾಗಲೀ, ವೇದ ಸಂಸ್ಕೃತಿಯಲ್ಲಾಗಲೀ, ಜನರ ರೂಢಿಯಲ್ಲಾಗಲೀ ಎಲ್ಲೂ ಇಲ್ಲವೆಂದು ತಿಳಿದಿದ್ದರೂ ಮ್ಯಾಕ್ಸ್ ಮುಲ್ಲರ್ ಅಂತಹುದೊಂದನ್ನು ಕಲ್ಪಿಸಿದ. ಕ್ರೈಸ್ತ ಮತಗ್ರಂಥಗಳಲ್ಲಿರುವುದೇ ಸತ್ಯವೆಂದು ನಂಬುವ ಪರಮ ಆಸ್ತಿಕ ಮ್ಯಾಕ್ಸ್ ಮುಲ್ಲರ್. ಬೈಬಲ್ ಪ್ರಕಾರ ಕ್ರಿ.ಪೂ 4004, ಅಕ್ಟೋಬರ್ 23 ಬೆಳಿಗ್ಗೆ 9ಗಂಟೆಗೆ ಆಯಿತು. ಅಲ್ಲಿಂದ ಲೆಕ್ಕ ಹಾಕಿದ ಮುಲ್ಲರ್ ಜಲಪ್ರಳಯವನ್ನು ಕ್ರಿ.ಪೂ 2448ಕ್ಕೆ ತಂದಿರಿಸಿದ. ಮುಂದೆ ಭೂಮಿ ಒಣಗಿ ಗಟ್ಟಿಯಾಗಿ ಆರ್ಯರು ದಂಡಯಾತ್ರೆ ಕೈಗೊಳ್ಳಲು ಕನಿಷ್ಟ ಒಂದು ಸಾವಿರ ವರ್ಷ ಕೊಟ್ಟು 1400-1500ರ ಸುಮಾರಿಗೆ ಆರ್ಯ ಆಕ್ರಮಣವನ್ನೂ, ತಾಳೆಗರಿ, ಉಕ್ಕಿನ ಲೇಖನಿಗಳ ಸಂಶೋಧನೆಗೆ ಇನ್ನೂರು ವರ್ಷಗಳನ್ನು ಕೊಟ್ಟು ಋಗ್ವೇದದ ರಚನೆಯ ಕಾಲವೆಂದು ನಿರ್ಧರಿಸಿದ. ಇದು ಮ್ಯಾಕ್ಸ್ ಮುಲ್ಲರನ ಆಲೋಚನಾ ವಿಧಾನವನ್ನು ಚೆನ್ನಾಗಿ ಅರಿತಿದ್ದ ಆತನ ಆಪ್ತ ಮಿತ್ರ ಗೋಲ್ಡ್ ಸ್ಟಕರ್ ಹೇಳಿರುವ ಸತ್ಯ ಸಂಗತಿ! ಮೊದಲ ಇಪ್ಪತ್ತು ವರ್ಷಗಳ ಕಾಲ ಆರ್ಯರದ್ದು ಪ್ರತ್ಯೇಕ ಜನಾಂಗವೆಂದು ಸಾಧಿಸಿದ ಮುಲ್ಲರ್ ಮುಂದಿನ ಮೂವತ್ತು ವರ್ಷಗಳ ಕಾಲ ಆರ್ಯರದ್ದು ಪ್ರತ್ಯೇಕ ಭಾಷಾ ಕುಟುಂಬವೇ ಹೊರತು ಪ್ರತ್ಯೇಕ ಜನಾಂಗವಲ್ಲವೆಂದು ಮಾತು ತಿರುಗಿಸಿದ. ಆದರೆ ಅಷ್ಟರಲ್ಲಾಗಲೇ ಅನರ್ಥವಾಗಿ ಹೋಗಿತ್ತು. ಭಾರತೀಯರ ಮೆದುಳೂ ಆರ್ಯ ಆಕ್ರಮಣವಾದಕ್ಕೆ ಪಕ್ಕಾಗಿತ್ತು. ಕೊನೆಗೊಮ್ಮೆಯಂತೂ "ವೇದ ಮಂತ್ರಗಳ ರಚನೆಯಾದದ್ದು ಯಾವಾಗ ಎಂದು ಭೂಮಿಯ ಮೇಲಿನ ಯಾವ ಶಕ್ತಿಯಿಂದಲೂ ನಿರ್ಧರಿಸಲೂ ಸಾಧ್ಯವಿಲ್ಲ ಎಂದು ಬಿಟ್ಟ.

            ಜನಾಂಗಗಳ ವಲಸೆ ಪ್ರಾಚೀನ ಕಾಲದಲ್ಲಿ ಆದದ್ದು ಸತ್ಯವೇ ಹೌದು. ಆದರೆ ಈ ವಲಸೆ ಭಾರತದಿಂದ ಹೊರಕ್ಕೆ ಆಯಿತೇ ಹೊರತು ಹೊರಗಿನಿಂದ ಭಾರತಕ್ಕಲ್ಲ. ಪ್ರಾಕೃತಿಕ ವೈಪರೀತ್ಯದಿಂದ ನದಿಗಳು ಬತ್ತಿ ಹೋದ ಪರಿಣಾಮ ಕ್ರಿ.ಪೂ. 4000ಕ್ಕೂ ಮೊದಲೇ ಭಾರತದಿಂದ ಪಶ್ಚಿಮಕ್ಕೆ ವಲಸೆ ಪ್ರಾರಂಭವಾಯಿತು. ತನ್ನ ಪಥವನ್ನು ಕಾಲಾನುಕ್ರಮದಲ್ಲಿ ಬದಲಾಯಿಸುತ್ತಾ ಹರಿಯುತ್ತಿದ್ದ ಸರಸ್ವತಿಯ ಕಾರಣ ಉಂಟಾದ ಹಲವು ಪ್ರಾಕೃತಿಕ ವೈಪರೀತ್ಯಗಳಿಂದಾಗಿ ಕ್ರಿ.ಪೂ 2200ರ ಸುಮಾರಿಗೆ ಹಲವು ಕಾಲ ಪ್ರವಾಹ, ಭೂಕಂಪ, ಬರಗಾಲಗಳಿಂದ ತತ್ತರಿಸಿದ ಅಲ್ಲಿದ್ದ ವೈದಿಕ ಸಂಸ್ಕೃತಿಯ ಜನರು ಪಶ್ಚಿಮ ಹಾಗೂ ವಾಯುವ್ಯ ದಿಶೆಗಳತ್ತ ಹೆಜ್ಜೆ ಹಾಕಿದರು.   ಕ್ರಿ.ಪೂ. 1900ರ ಸುಮಾರಿಗೆ ಸರಸ್ವತಿ ನದಿ ಸಂಪೂರ್ಣವಾಗಿ ಬತ್ತಿ ಹೋದ ಕಾರಣ ಇರಾನ್, ಇರಾಕ್ ಸೇರಿದಂತೆ ಪಶ್ಚಿಮ ಏಷ್ಯಾದ ಮತ್ತಿತರ ಪ್ರದೇಶ, ಯೂರೋಪುಗಳಿಗೆ ಭಾರತೀಯರು ವಲಸೆ ಹೋಗಲಾರಂಭಿಸಿದರು. ಪ್ರಾಚೀನ ಇರಾನಿ ಕಥೆಗಳು, ಸಾಹಿತ್ಯಗಳು, ಪಶ್ಚಿಮ ಏಷ್ಯಾದಲ್ಲಿ ಸಿಕ್ಕ ಪುರಾತನ  ದಾಖಲೆಗಳು ಇದನ್ನು ದೃಢಪಡಿಸಿವೆ. ಪರ್ಶಿಯನ್ನರು ಅಗ್ನಿಪೂಜಕರು. ಝೆಂಡಾಅವೆಸ್ತಾ ವೇದದಂತಹ ಅವರ ಪೂಜನೀಯ ಗ್ರಂಥ. ಈ ಪರಿಸ್ಥಿತಿಯ ವೈಪರೀತ್ಯ ಮಾತ್ರವಲ್ಲದೇ ಕೃಣ್ವಂತೋ ವಿಶ್ವಮಾರ್ಯಮ್ ಎನ್ನುತ್ತಾ ವಿಶ್ವ ಸದ್ದರ್ಶನಕ್ಕಾಗಿ ಜ್ಞಾನದ ಗಣಿಗಳಾದ ವೇದಗಳನ್ನು ವಿಶ್ವದ ಮೂಲೆಮೂಲೆಗೂ ಹೊತ್ತೊಯ್ದರು ಆರ್ಯರು. ಅವರ ಜ್ಞಾನದಾಹದ ಆತ್ಮಾನುಸಂಧಾನದ ಮಾರುತವು ಭಾವಾವೇಶದ ಆವರ್ತಗಾಳಿಯಾಗಿ ಸುಳಿಗೊಂಡು ಆರ್ಯಾವರ್ತ ಪ್ರದೇಶದಲ್ಲಿ ಪ್ರಶಾಂತವಾಗಿ, ಗಂಭೀರ ಸಾಗರದಂತೆ ವೇದಗಳ ರೂಪದಲ್ಲಿ ಹರಡಿತು. ದಕ್ಷಿಣ ಏಷಿಯಾದಿಂದ ಸಿಂಧೂ-ಗಂಗಾಗಳ ಮೈದೊಳೆವ ನಾಡಲ್ಲಿ, ದಕ್ಷಿಣ - ಪೂರ್ವ ಯುರೋಪಿನಿಂದ, ದೆನ್ಯೂಬ್ ತಪ್ಪಲವರೆಗೆ, ಪಶ್ಚಿಮ ಏಶಿಯಾದಿಂದ ಟೈಗ್ರಿಸ್ ಹಾಗೂ ಯುಫ್ರೆಟಿಸ್ಗಳ ಅಂಚುಗಳಾದ್ಯಂತ, ಮಧ್ಯ ಏಷಿಯಾದಿಂದ ಆಕ್ಸಸ್ನ ದಂಡೆಗಳ ವಿಶಾಲ ಪ್ರದೇಶದಲ್ಲಿ ಮೂರೂವರೆ ಸಾವಿರ ಮೈಲು ಪೂರ್ವ - ಪಶ್ಚಿಮವಾಗಿ, ಒಂದು ಸಾವಿರ ಮೈಲು ದಕ್ಷಿಣೋತ್ತರವಾಗಿ ಈ ನಾಗರಿಕತೆ ಹರಡಿತು. ಆರ್ಯಾವರ್ತವೆಂಬ ಅಭಿದಾನದ ಸಿಂಧೂ-ಸರಸ್ವತಿ-ಗಂಗಾ ತೀರವನ್ನು ಮೂಲವಾಗಿಯೂ, ಕೇಂದ್ರವಾಗಿಯೂ ಹೊಂದಿದ್ದ ಈ ನಾಗರಿಕತೆ ಪಶ್ಚಿಮ ಸೀಮಾಂತದ ದೆನ್ಯೂಬ್ ನದಿಯವರೆಗೂ ಒಂದೇ ಬಗೆಯ ಆಚಾರ-ವಿಚಾರ, ರೀತಿ-ನೀತಿ, ಧರ್ಮ-ನ್ಯಾಯ, ಪೂಜೆ-ಪುನಸ್ಕಾರ, ಭಾಷೆ, ಸಾಮಾಜಿಕ ಪದ್ದತಿಗಳನ್ನು ಹೊಂದಿತ್ತು.

                    ಪಾಕಿಸ್ತಾನದ ಮೆಹರ್ ಗಢ್ ನಲ್ಲಿ ನಡೆದ ಉತ್ಖನನ ಅನೇಕ ಸತ್ಯ ಸಂಗತಿಗಳನ್ನು ಬಯಲು ಮಾಡಿ ವಿಶ್ವವನ್ನೇ ಅಚ್ಚರಿಯಲ್ಲಿ ಮುಳುಗಿಸಿತು. ಹರಪ್ಪ ನಾಗರಿಕತೆಗೂ ನಾಲ್ಕು ಸಾವಿರ ವರ್ಷಗಳ ಹಿಂದೆ ಅಂದರೆ ಇಂದಿಗೂ 9ಸಾವಿರ ವರ್ಷಗಳ ಹಿಂದೆಯೇ ಸಿಂಧೂ ಸರಸ್ವತಿ ನಾಗರೀಕತೆ ಅವಿಚ್ಛಿನ್ನವಾಗಿ ಅಖಂಡವಾಗಿ ವಿಕಾಸಗೊಂಡಿತ್ತೆಂದು ಈ ಉತ್ಖನನ ದೃಢೀಕರಿಸಿತು. ಪ್ರಾಚೀನ ಈಜಿಪ್ಟ್-ಮೆಸಪಟೋಮಿಯಾ ನಾಗರೀಕತೆಗಳೆರಡನ್ನು ಸೇರಿಸಿದರೂ ಪ್ರಮಾಣ ಹಾಗೂ ಶ್ರೇಷ್ಠತೆಯಲ್ಲಿ ಹದಿನೈದು ಲಕ್ಷ ಚದರ ಕಿ.ಮೀ ವ್ಯಾಪ್ತಿಯಲ್ಲಿ ಬೆಳೆದಿದ್ದ ಕ್ರಿ.ಪೂ 6500 ಕಾಲದ ಈ ನಾಗರಿಕತೆಗೆ ಸರಿಸಾಟಿಯಾಗಲಾರದೆಂದೂ ರುಜುವಾತಾಯಿತು.


ಯೋಗಿ ತಂದ ಯೋಗ ಬದಲಾಗುತ್ತಿದೆ ಉತ್ತರಾಪಥ

ಯೋಗಿ ತಂದ ಯೋಗ 
ಬದಲಾಗುತ್ತಿದೆ ಉತ್ತರಾಪಥ


                   ಯೋಗಿಯೊಬ್ಬ ಉತ್ತರ ಪ್ರದೇಶದ ಮುಖ್ಯಮಂತ್ರಿ ಪಟ್ಟದಲ್ಲಿ ಕುಳಿತುಕೊಳ್ಳುತ್ತಿದ್ದಂತೆ ಆ ರಾಜ್ಯದ ದೆಸೆಯೇ ಬದಲಾಗಿದೆ. ಗೊಬ್ಬರದ ಗುಂಡಿಯಂತೆ ನಾರುತ್ತಿದ್ದ ಉತ್ತರ ಪ್ರದೇಶದಲ್ಲಿ ಕೆಲವೇ ದಿನಗಳಲ್ಲಿ ಬದಲಾವಣೆಯ ಕಸ್ತೂರಿ ಪರಿಮಳಿಸುತ್ತಿದೆ. ಸೋಂಬೇರಿ ಅಧಿಕಾರಿಗಳು ಧಿಗ್ಗನೆದ್ದು ಪಟ್ಟಾಗಿ ಕೆಲಸದಲ್ಲಿ ತೊಡಗಿದ್ದಾರೆ. ಅಲ್ಲಲ್ಲಿ ಲೊಚಕ್ ಎಂದು ಉಗುಳುತ್ತಿದ್ದ ಬಾಯಿಗಳಿಗೆಲ್ಲಾ ನಿರ್ಮಲ ಮನಸ್ಸಿನ ಖಡಕ್ ಯೋಗಿಯ ಬಿಸಿ ತಟ್ಟಿದೆ. ಗೋವಿನ ಕೊರಳ ಕೊಯ್ಯುತ್ತಿದ್ದ ಅಕ್ರಮ ದಂಧೆ ಸ್ತಬ್ಧವಾಗಿದೆ. ತರುಣಿಯರ ಸೆರಗೆಳೆಯುತ್ತಿದ್ದ ಪುಂಡರಿಗೆ ಅಂಕುಶ ಬಿದ್ದಿದೆ. ಅಂಗಡಿಗಳ ಮಾಲಕರಿಂದ ಹಣ ಪೀಕುತ್ತಿದ್ದ ಪುಡಿ ರೌಡಿಗಳೆಲ್ಲಾ ಮಾಯವಾಗಿದ್ದಾರೆ. ಪೊಲೀಸರಿಗೂ ಖಾಕಿಯ ಧರ್ಮ, ನಿಯತ್ತು ನೆನಪಾಗಿದೆ. ಗಂಗೆಯ ಮೊಗದಲ್ಲಿ ನಗುವರಳಿದೆ.

                      ಕಾಂಗ್ರೆಸ್ಸಿನ ಭದ್ರಕೋಟೆಯಾಗಿದ್ದ ರಾಜ್ಯದಲ್ಲಿ ಭೃಷ್ಟಾಚಾರ, ಆಡಳಿತ ವೈಫಲ್ಯದಿಂದ ಆ ಪಕ್ಷ ಮಕಾಡೆ ಮಲಗಿದಾಗ ಜಾತಿಯಾಧಾರಿತ ಪಕ್ಷಗಳು ತಮ್ಮ ಬೇಳೆ ಬೇಯಿಸಿಕೊಂಡು ಅಧಿಕಾರ ಸುಖ ಅನುಭವಿಸಿದವು. ಆದರೆ ದಶಕಗಳಿಂದ ಆಳುತ್ತಿದ್ದ ಈ ಪಕ್ಷಗಳ ಕುತಂತ್ರ, ಅರಾಜಕತೆ, ಭೃಷ್ಟಾಚಾರ, ತುಷ್ಟೀಕರಣ, ಗೂಂಡಾಗಿರಿಯನ್ನು ನೋಡಿ ಹೇಸಿಕೊಂಡ ಜನತೆಯ ದೃಷ್ಟಿ ಅಭಿವೃದ್ಧಿಯ ಆಡಳಿತ ಕೊಡಬಲ್ಲ ಏಕೈಕ ಪಕ್ಷದತ್ತ ನೆಟ್ಟಿತು. ಈ ಚುನಾವಣೆಯೇ ಜಾತಿ ರಾಜಕಾರಣಕ್ಕೆ ಇತಿಶ್ರೀ ಹಾಡಿದೆ ಎಂದರೆ ತಪ್ಪಾಗಲಾರದು. ಜಾತಿಯ ಆಧಾರದಲ್ಲಿ ಮತದ ಓಲೈಕೆಯಲ್ಲಿ ತುಷ್ಟೀಕರಣದ ಆಟ ಆಡಿ ಓಟು ಗಿಟ್ಟಿಸಿ ಗಂಟು ಕಟ್ಟಿಕೊಳ್ಳುತ್ತಿದ್ದವರಿಗೆಲ್ಲಾ ತಕ್ಕ ಪಾಠ ಕಲಿಸಿದ ಉತ್ತರ ಪ್ರದೇಶದ ಮತದಾರ "ಅಚ್ಛೇ ದಿನದತ್ತ" ಎದುರು ನೋಡುತ್ತಿದ್ದಾನೆ ಎಂದರೆ ಸುಳ್ಳಲ್ಲ. ಅದಕ್ಕೆ ತಕ್ಕಂತೆ ಯೋಗಿ ಆದಿತ್ಯನಾಥರ ಸರಕಾರ ಶರವೇಗದಿಂದ ಅಭಿವೃದ್ಧಿಯ ಆಡಳಿತ ನೀಡುವತ್ತ ಗಮನಹರಿಸಿದೆ. ಅಕ್ರಮ ಕಸಾಯಿಖಾನೆಗಳಿಗೆ ಬೀಗ ಬಿದ್ದಿದೆ. ಗೂಂಡಾಗಳ ಆಟ ಅಂತ್ಯವಾಗಿದೆ. ಪ್ರತಿಮೆ ನಿರ್ಮಾಣದಂತಹ ಮೂರ್ಖ ನಿರ್ಧಾರಗಳಿಗೆ ಅಂತ್ಯ ಹಾಡಲಾಗಿದೆ. ಇಷ್ಟರವರೆಗೆ ಗೋರಖ್ ಪುರದ ಅಂಗಡಿ ಮಾಲಿಕರು ಮಾತ್ರ ಗೂಂಡಾಗಳಿಗೆ ಸುಂಕ ಕೊಡದೆ ನೆಮ್ಮದಿಯ ಜೀವನ ನಡೆಸುತ್ತಿದ್ದರು. ಈಗ ಸಂಪೂರ್ಣ ಉತ್ತರಪ್ರದೇಶಕ್ಕೆ ಆ ಭಾಗ್ಯ ಸಿಗಲಾರಂಭಿಸಿದೆ! ಈಗಾಗಲೇ ಶೇ.100 ರಷ್ಟು ಗೋದಿಯನ್ನು ಖರೀದಿ ಮಾಡಲಾಗಿದೆ. ರೈತರಿಗೆ ನೀಡುವ ಬೆಂಬಲ ಹಣವನ್ನು ಅವರ ಖಾತೆಗಳಿಗೆ ನೇರವಾಗಿ ಜಮಾವಣೆ ಮಾಡಲಾಗುತ್ತದೆ.

                  ಅಕ್ರಮ ಕಸಾಯಿಖಾನೆಗಳನ್ನು ಮುಚ್ಚಲು ಪೊಲೀಸರು ಮುಂದಾದಾಗ ಮಾಂಸದ ವ್ಯಾಪಾರಿಗಳು ಪ್ರತಿಭಟನೆಗೆ ತೊಡಗಿದರು. ಮುಖ್ಯಮಂತ್ರಿ ಆದಿತ್ಯನಾಥರನ್ನು ಭೇಟಿಯಾದ ಬಳಿಕ ಎಲ್ಲರೂ ತೆಪ್ಪಗಾಗಿದ್ದಾರೆ. ಸ್ವತಃ ಆಲ್ ಇಂಡಿಯಾ ಮೀಟ್ ಅಸೋಸಿಯೇಷನ್ನಿನ ಪ್ರತಿನಿಧಿ ಹಾಜಿ ಶಕೀಲ್ ಖುರೇಶಿ "ಬಿಎಸ್ಪಿ, ಎಸ್ಪಿ ಸರಕಾರಗಳು ಮಾಂಸೋದ್ಯಮಿಗಳಿಗೆ ಮೋಸ ಮಾಡಿವೆ. ನೂತನ ಮುಖ್ಯಮಂತ್ರಿ ಅಕ್ರಮವಾಗಿ ಕಾರ್ಯಾಚರಿಸುತ್ತಿರುವ ಉದ್ಯಮಗಳನ್ನಷ್ಟೇ ಮುಚ್ಚಿಸುವ ಮೂಲಕ ರಾಜಧರ್ಮವನ್ನು ಪಾಲಿಸುತ್ತಿದ್ದಾರೆ. ಉತ್ತರಪ್ರದೇಶದ ವ್ಯವಸ್ಥೆಯನ್ನು ಸರಿಯಾದ ಹಾದಿಗೆ ಮರಳಿಸಲು ಯತ್ನಿಸುತ್ತಿರುವ ಅವರಿಗೆ ನಾವು ನಿಜವಾಗಿಯೂ ಕೃತಜ್ಞರಾಗಿರಬೇಕು" ಎಂದಿರುವುದು ತುಷ್ಟೀಕರಣ ಮಾಡುವ ಬದಲು ಸಂವಿಧಾನವನ್ನು ಕಟ್ಟುನಿಟ್ಟಾಗಿ ಅನುಸರಿಸಿದರೆ ನಿಜವಾದ ಜಾತ್ಯಾತೀತತೆ ತಾನಾಗಿ ಪ್ರಕಟವಾಗುತ್ತದೆ ಎನ್ನುವುದರ ಸೂಚನೆ.

                       ತಮ್ಮ ನಿವೃತ್ತಿಯನ್ನು ಮುಂದಕ್ಕೆ ಹಾಕಿಕೊಂಡು ಸರಕಾರದ ವಿವಿಧ ಹುದ್ದೆಗಳಲ್ಲಿ ಮಜಾಮಾಡುತ್ತಿದ್ದವರಿಗೆ ಬಾಗಿಲು ತೋರಿಸಲಾಗಿದೆ. ಸರಕಾರಿ ಕಛೇರಿಗಳಲ್ಲಿ ಬಯೋಮೆಟ್ರಿಕ್ ಹಾಜರಾತಿಯನ್ನು ಅನುಸ್ಥಾಪಿಸಿ 9.30AMನಿಂದ 5PMವರೆಗಿನ ಕೆಲಸದ ಅವಧಿಯನ್ನು ಕಡ್ಡಾಯವಾಗಿ ಅನುಸರಿಸುವಂತೆ ಆದೇಶ ಹೊರಡಿಸಲಾಗಿದೆ. ಪೊಲೀಸ್ ಠಾಣೆಗಳಲ್ಲಿ ಕೇಸು ದಾಖಲಾತಿ ಮಾಡಲು ಮೀನಮೇಷ ಎಣಿಸುವುದನ್ನು ತಪ್ಪಿಸಲು ಪ್ರತೀ ಠಾಣೆಗಳಲ್ಲಿ ತಲಾ ಓರ್ವ ಮಹಿಳಾ ಹಾಗೂ ಪುರುಷ ಅಧಿಕಾರಿಗಳು ರಿಸೆಪ್ಷನಿನಲ್ಲಿರುವಂತೆ ಕಡ್ಡಾಯಗೊಳಿಸಲಾಗಿದೆ. ರಾಜಕಾರಣಿಗಳಿಗಿರುವ ಅನವಶ್ಯಕ ಭದ್ರತಾ ಸಿಬ್ಬಂದಿಯನ್ನು ತೆಗೆದುಹಾಕಲಾಗಿದೆ.

                        ಅಕ್ರಮ ಗಣಿಗಾರಿಕೆಯನ್ನು ನಿಷೇಧಿಸಲಾಗಿದೆ. ಜೂನ್ ಹದಿನೈದರ ಒಳಗೆ ರಾಜ್ಯದ ಎಲ್ಲಾ ರಸ್ತೆಗುಂಡಿಗಳನ್ನು ಮುಚ್ಚುವಂತೆ ಯೋಜನೆ ರೂಪಿಸಲಾಗಿದೆ. ಭೃಷ್ಟಾಚಾರವನ್ನು ಹತ್ತಿಕ್ಕಲು ಇ-ಟೆಂಡರಿಂಗ್ ಪ್ರಕ್ರಿಯೆಗೆ ಚಾಲನೆ ದೊರೆತಿದೆ. ಮಂತ್ರಿಗಳ ಕಾರಿನಲ್ಲಿ ಸೈರನ್ ಬಳಸದಂತೆ ಆದೇಶವೂ ಬಂದಿದೆ. ಆಹಾರ ಧಾನ್ಯ ಹಾಗೂ ರೇಶನ್ ಮಾಫಿಯಾದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ. ಮುಚ್ಚಲ್ಪಟ್ಟಿರುವ ಸಕ್ಕರೆ ಕಾರ್ಖಾನೆಗಳ ಪುನಶ್ಚೇತನಕ್ಕೆ ಸರಕಾರ ಮುಂದಾಗಿದೆ. ಹಿಂದೂ ಹಬ್ಬಗಳಂದು ವಿದ್ಯುತ್ ವ್ಯತ್ಯಯವಾಗದಂತೆ ನೋಡಿಕೊಳ್ಲಲು ಸರಕಾರ ಆದೇಶಿಸುವ ಮೂಲಕ ಹಬ್ಬಗಳ ದಿನದಂದು ಬೆಳಕಿಲ್ಲದೆ ಪರಿತಪಿಸುತ್ತಿದ್ದ ತುಷ್ಟೀಕರಣದ ಸಂತ್ರಸ್ಥ ಪ್ರಜೆಗಳ ಮುಖದಲ್ಲಿ ಬೆಳಕು ಮೂಡಿಸಿದೆ.

                      ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಕಠಿಣ ನಿರ್ಧಾರಗಳಿಂದ ಇಡೀ ದೇಶಾದ್ಯಂತ ಸುದ್ದಿಯಾಗಿರುವ ಯೋಗಿ ಆದಿತ್ಯನಾಥ, 20 ವರ್ಷಗಳಲ್ಲಿ ಈ ಹಿಂದಿನ ಸರ್ಕಾರಗಳಿಗೆ ಪರಿಹರಿಸಲು ಸಾಧ್ಯವಾಗದೇ ಇದ್ದ ವಿವಾದಗಳನ್ನು ಕೇವಲ ಒಂದೇ ವಾರದಲ್ಲಿ ಬಗೆಹರಿಸಿ ಸೈ ಅನಿಸಿಕೊಂಡಿದ್ದಾರೆ. ಲಕ್ನೋದಲ್ಲಿ ಹಿಂದೂವೊಬ್ಬನಿಗೆ ಸೇರಿದ ಏಳು ಅಂಗಡಿಗಳನ್ನು ಮುಸ್ಲಿಮರು ಆಕ್ರಮಿಸಿಕೊಂಡು ಬಾಡಿಗೆಯನ್ನೂ ನೀಡದೇ ಸ್ವಂತ ಸ್ವತ್ತಿನಂತೆ ಬಳಸಿ ಪ್ರಶ್ನಿಸಿದಾಗ ದೌರ್ಜನ್ಯವೆಸಗಿದ್ದರು. ನ್ಯಾಯಾಲಯ ಬಡಪಾಯಿ ಹಿಂದು ವ್ಯಕ್ತಿಯ ಪರವಾಗಿ ತೀರ್ಪು ನೀಡಿದ್ದರೂ, ಮುಸಲರು ಆ ಆದೇಶ ಉಲ್ಲಂಘಿಸಿ ಅಲ್ಲೇ ಭದ್ರವಾಗಿ ಥಿಕಾಣಿ ಹೂಡಿದ್ದರು. ಮಾಯಾವತಿ ನೇತೃತ್ವದ ಬಿಎಸ್‍ಪಿ ಸರ್ಕಾರವಾಗಲಿ ಮುಲಾಯಂಸಿಂಗ್ ಮತ್ತು ಅಖಿಲೇಶ್ ಯಾದವ್‍ರ ಸಮಾಜವಾದಿ ಸರಕಾರವಾಗಲಿ ನ್ಯಾಯ ಒದಗಿಸುವಲ್ಲಿ ವಿಫಲವಾಗಿದ್ದವು. ಆದರೆ ಯೋಗಿ ಆದಿತ್ಯನಾಥ ಮುಖ್ಯಮಂತ್ರಿಯಾಗುತ್ತಿದ್ದಂತೆ ಆಕ್ರಮಣಕ್ಕೊಳಗಾದ ಜಾಗ ಮರಳಿ ನಿಜವಾದ ಮಾಲಕನಿಗೆ ದೊರಕಿದೆ. ಇಂಥ ಹಲವಾರು ಪ್ರಕರಣಗಳು ಒಂದೇ ವಾರದಲ್ಲಿ ಬಗೆಹರಿದಿದೆ.

                  ಎಲ್ಲಾ ಪೊಲೀಸ್ ಠಾಣೆ ಹಾಗೂ ಸರಕಾರೀ ಕಛೇರಿಗಳನ್ನು ರಾಜಕೀಯ ಮುಕ್ತ, ಭೃಷ್ಟಾಚಾರ ಮುಕ್ತಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. ಪ್ರಮುಖ ಹಾಗೂ ಆಯಕಟ್ಟಿನ ಸ್ಥಾನಗಳಲ್ಲಿ ಸೂಕ್ಷ್ಮ, ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಗಳ ನೇಮಕಕ್ಕೆ ಚಾಲನೆ ಸಿಕ್ಕಿದೆ. ಪ್ರತೀ ವಿಭಾಗವೂ ಪ್ರಜೆಗಳ ಚಾರ್ಟರ್ ಹೊಂದಿರುವಂತೆಯೂ, ಕಾಲಮಿತಿಯೊಳಗೆ ಜನರಿಗೆ ಸರ್ಕಾರೀ ಸೇವೆಗಳನ್ನು ಒದಗಿಸುವಂತೆ ತಾಕೀತು ಮಾಡಲಾಗಿದೆ. ದಿನಕ್ಕೆ ಹದಿನೆಂಟು ಗಂಟೆ ಕೆಲಸ ಮಾಡುವವರು ನನಗೆ ಬೇಕು ಅಂದಿದ್ದಂತೂ ಜಡ್ಡುಗಟ್ಟಿದ ವ್ಯವಸ್ಥೆಯ ಬುಡಕ್ಕೆ ಬಿಸಿನೀರು ಬಿಟ್ಟಂತಾಗಿ ಅದು ಎದ್ದು ಕೂತಿದೆ. ಉತ್ತರ ಪ್ರದೇಶ ರಾಜ್ಯ ಸೇವಾ ಆಯೋಗದಲ್ಲಿನ ಅವ್ಯವಹಾರಗಳ ಬಗ್ಗೆ ವ್ಯಾಪಕ ದೂರು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಸರ್ಕಾರ ಈ ಆಯೋಗ ಮಾಡಿರುವ ಎಲ್ಲಾ ನೇಮಕಾತಿಗಳನ್ನು ರದ್ದುಗೊಳಿಸಿದೆ. ತನ್ನ ಮುಂದಿನ ಆದೇಶ ಬರುವವರೆಗೂ ಎಲ್ಲ ರೀತಿಯ ನೇಮಕಾತಿಗೂ ತಡೆ ನೀಡಲು ನಿರ್ದೇಶನ ನೀಡಿದೆ. ಪಾರದರ್ಶಕವಾಗಿ ಅರ್ಹತೆ ಆಧಾರದ ಮೇಲೆ ಆಡಳಿತಾತ್ಮಕವಾಗಿ ನೇಮಕಾತಿ ಮಾಡುವ ಮೊದಲ ಹೆಜ್ಜೆ ಇದಾಗಿದ್ದು ಉತ್ತರ ಪ್ರದೇಶ ವಿಕಾಸದ ಪಥದಲ್ಲಿ ಸಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.

                   ಅಸಂಖ್ಯ ತೀರ್ಥಧಾಮಗಳನ್ನು, ಪ್ರೇಕ್ಷಣೀಯ ಸ್ಥಳಗಳನ್ನು ಹೊಂದಿರುವ ಉತ್ತರ ಪ್ರದೇಶಕ್ಕೂ ಸ್ವಚ್ಛತೆಗೂ ಎಣ್ಣೆ-ಸೀಗೆಯ ಸಂಬಂಧ. ಪ್ರಧಾನ ಮಂತ್ರಿಗಳ ಸ್ವಚ್ಛತಾ ಅಭಿಯಾನದಲ್ಲಿ ಅತ್ಯಂತ ಕಳಪೆ ರ್ಯಾಂಕ್ ಹೊಂದಿರುವ ರಾಜ್ಯಗಳಲ್ಲಿ ಉತ್ತರಪ್ರದೇಶವೂ ಒಂದು. ನಗರ ಹಾಗೂ ಗ್ರಾಮೀಣ ಭಾಗಗಳೆರಡರಲ್ಲೂ ಸ್ವಚ್ಛತಾ ಕಾರ್ಮಿಕರನ್ನು ಹೊಂದಿದ್ದೂ ತಿಪ್ಪೆಗುಂಡಿಯಂತಾಗಿರುವ ಉತ್ತರಪ್ರದೇಶ ಹಿಂದೆ ಅದನ್ನಾಳಿದ ಪಕ್ಷಗಳ, ನೇತಾರರ ಬಳುವಳಿಯೂ ಹೌದು. ಇದಕ್ಕೆಲ್ಲಾ ಮಂಗಳ ಹಾಡಲು ಉತ್ತರ ಪ್ರದೇಶ ಸರಕಾರ ನಿರ್ಧರಿಸಿದೆ. ಸ್ವಚ್ಛ ಭಾರತ ಅಭಿಯಾನವನ್ನು ರಾಜ್ಯದಾದ್ಯಂತ ಯಶಸ್ವಿಯಾಗಿ ಜಾರಿಗೊಳಿಸಲು ಮುಖ್ಯಮಂತ್ರಿ ಅಧಿಕಾರಿಗಳಿಗೆ ಆದೇಶಿಸಿದ್ದಾರೆ. ಮುಂದಿನ ಡಿಸೆಂಬರ್ ಒಳಗೆ ರಾಜ್ಯದ ಮೂವತ್ತು ಜಿಲ್ಲೆಗಳನ್ನು ಬಯಲು ಮಲವಿಸರ್ಜನೆ ಮುಕ್ತವನ್ನಾಗಿ ಮಾಡಲು ನೀತಿ-ನಿಯಮ ರೂಪಿಸಲಾಗಿದೆ. ಮೊರಾದಾಬಾದಿನ ಪೊಲೀಸರು ಸ್ವತಃ ಪೊರಕೆ ಹಿಡಿದು ಸ್ವಚ್ಛತಾ ಕಾರ್ಯಕ್ಕೆ ಅಣಿಯಾಗಿದ್ದಾರೆ. ಸರ್ಕಾರಿ ಕಚೇರಿಗಳಲ್ಲಿ ಸ್ವಚ್ಛತೆ ಶೂನ್ಯವಾಗಿರುವುದನ್ನು ಗಮನಿಸಿದ ಮುಖ್ಯಮಂತ್ರಿ ಯೋಗಿ, ತಕ್ಷಣಕ್ಕೆ ಜಾರಿಗೆ ಬರುವಂತೆ ಕಚೇರಿಗಳಲ್ಲಿ ಅಡಕೆ- ಪಾನ್ ಮಸಾಲಾ ಜಗಿಯುವುದನ್ನು ನಿಷೇಧಿಸಿದ್ದಾರೆ.

                   ಸಾರ್ವಜನಿಕ ಸ್ಥಳದಲ್ಲಿ ಬೀದಿ ಕಾಮಣ್ಣರ ನಿಗ್ರಹಕ್ಕೆ ಆಂಟಿ ರೋಮಿಯೋ ದಳ ರಚನೆ, ಅಕ್ರಮ ಕಸಾಯಿಖಾನೆಗಳಿಗೆ ಬೀಗ ಮುದ್ರೆ, ಗೋವು ಕಳ್ಳಸಾಗಣೆ ನಿಷೇಧ, ಸರ್ಕಾರಿ ಕಛೇರಿಗಳಲ್ಲಿ ಪಾನ್ ಮಸಾಲ ಮತ್ತು ಪಾಲಿಥಿನ್ ನಿಷೇಧ, ಅಲಹಾಬಾದ್, ಮೀರತ್, ಆಗ್ರಾ, ಗೋರಖ್‍ಪುರ್‍ನಲ್ಲಿ ಮೆಟ್ರೋ ರೈಲು ಯೋಜನೆ, ಕೈಲಾಸ್ ಮಾನಸ ಸರೋವರ್ ಅಭಿವೃದ್ದಿ ಯೋಜನೆ, ಭದ್ರತೆಗಾಗಿ ಸಾರ್ವಜನಿಕ ಸ್ಥಳಗಳಲ್ಲಿ ಸಿಸಿಟಿವಿ ಅಳವಡಿಕೆ, ಜೂನ್ ವೇಳೆ ರಾಜ್ಯದ ಎಲ್ಲ ರಸ್ತೆಗಳನ್ನು ಹೊಂಡ ಮುಕ್ತಗೊಳಿಸುವ ಯೋಜನೆ ಹೀಗೆ ಹತ್ತು ಹಲವು ಕಾರ್ಯಗಳು ಉತ್ತರಪ್ರದೇಶದ ಜನತೆಯ ಕಲ್ಯಾಣದ ದಿನದತ್ತ ಸಾಗುತ್ತಿರುವುದನ್ನು ಖಚಿತಪಡಿಸಿದೆ. ಜನಪ್ರತಿನಿಧಿಗಳು, ಸರಕಾರಿ ಅಧಿಕಾರಿಗಳು ಮತ್ತು ಪೊಲೀಸರು ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸುವಂತೆ ಯೋಗಿ ಕಟ್ಟಪ್ಪಣೆ ಮಾಡಿದ್ದಾರೆ. ಹೋಳಿ ಹಬ್ಬದ ಸಮಯದಲ್ಲಿ ತನ್ನ ಹೆಂಡತಿ ಚುಡಾಯಿಸುವಿಕೆ ಹಾಗೂ ದೌರ್ಜನ್ಯಕ್ಕೆ ಒಳಗಾಗಿದ್ದಾಳೆಂದು ವ್ಯಕ್ತಿಯೊಬ್ಬ ದಾಖಲಿಸಿದ್ದ ದೂರನ್ನು ಪೊಲೀಸರು ನಿರ್ಲಕ್ಷಿಸಿದ್ದರು. ಈ ವ್ಯಕ್ತಿ ಮುಖ್ಯಮಂತ್ರಿ ಆದಿತ್ಯನಾಥರಿಗೆ ಈ ಬಗ್ಗೆ ಟ್ವೀಟ್ ಮಾಡುತ್ತಲೇ ಪೊಲೀಸರಿಗೆ ಬಿಸಿಮುಟ್ಟಿ, ವಿಶೇಷ ಗುಂಪೊಂದನ್ನು ರಚಿಸಿ ಕಾಮುಕರನ್ನು ಹಿಡಿಯಲು ಕಾರ್ಯಪ್ರವೃತ್ತರಾದದ್ದು ಉತ್ತರ ಪ್ರದೇಶದಲ್ಲಿ ಜೀವಂತ ಸರಕಾರವೊಂದು ಅಸ್ತಿತ್ವಕ್ಕೆ ಬಂದಿರುವ ದ್ಯೋತಕ.

                  ಬಹುತೇಕ ಹೆಣ್ಣುಮಕ್ಕಳು ಚುಡಾಯಿಸುವ ಪುಂಡರ ಕಾಟದಿಂದಾಗಿ ಶಾಲೆ, ಕಾಲೇಜುಗಳಿಗೆ ಹೋಗಲು ಹೆದರುತ್ತಿದ್ದರು. ಉತ್ತರ ಪ್ರದೇಶದಲ್ಲಿ ಭಾಜಪಾ ಸರಕಾರ ಬಂದ ಕೂಡಲೇ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರಿಗೆ ಹಲವಾರು ಹೆಣ್ಣುಮಕ್ಕಳು ಕರೆ ಮಾಡಿ ಗೋಳು ತೋಡಿಕೊಂಡಿದ್ದರು. ತಕ್ಷಣವೇ ಕಾರ್ಯಪ್ರವೃತ್ತರಾದ ಯೋಗಿ ಮಹಿಳೆಯರ ಸುರಕ್ಷತೆ ಮತ್ತು ರೋಡ್ ರೋಮಿಯೋಗಳ ಹಾವಳಿಯನ್ನು ತಪ್ಪಿಸಲು ಆ್ಯಂಟಿ ರೋಮಿಯೋ ದಳವನ್ನು ನಿಯೋಜನೆ ಮಾಡಿದ್ದಾರೆ. ಈ ತಂಡವನ್ನು ದಬಾಂಗ್‌ ಎಂದೇ  ಖ್ಯಾತಿ ಪಡೆದಿರುವ 2014ರ ಬ್ಯಾಚ್‌ನ ಮಹಿಳಾ ಐಪಿಎಸ್‌ ಅಧಿಕಾರಿ ರವೀನಾ ತ್ಯಾಗಿ ನಿರ್ವಹಿಸುತ್ತಿದ್ದಾರೆ. ಈ ನೇಮಕಾತಿಗೆ ಸಾರ್ವಜನಿಕರಿಂದ ಪ್ರಶಂಸೆಯ ಮಹಾಪೂರವೇ ಹರಿದಿದೆ. ಈ ತಂಡ ಈಗಾಗಲೇ ಉತ್ತರಪ್ರದೇಶಾದ್ಯಂತ ಕಾರ್ಯಪ್ರವೃತ್ತವಾಗಿದ್ದು ರಾಜ್ಯದ ಮೂಲೆ ಮೂಲೆಗಳಲ್ಲಿ ಕಾರ್ಯಾಚರಣೆ ಕೈಗೊಂಡಿದೆ. ರೊಮಿಯೋ ನಿಗ್ರಹ ಪಡೆಯ ರಚನೆ ಹಾಗೂ ಕ್ಷಿಪ್ರ ಕಾರ್ಯದಿಂದ ಹರ್ಷಿತರಾಗಿರುವ ಹಲವು ಯುವತಿಯರು ಇದು  ತಮ್ಮ ಜೀವನದಲ್ಲಿ ಸುರಕ್ಷತೆಯ ಭಾವನೆ ತಂದಿದೆ ಎಂಬುದಾಗಿ ಪ್ರಶಂಸಿಸಿದ್ದಾರೆ. ಗೋರಕ್ಪುರದಿಂದ ಘಾಜಿಯಾಬಾದ್ ವರೆಗೂ, ಲಖನೌನಿಂದ ಲಲಿತ್ಪುರದವರೆಗೂ ಇರುವ ಎಲ್ಲ ಮಾರುಕಟ್ಟೆ, ಮಾಲ್ ಗಳು, ತರಬೇತಿ ಕೇಂದ್ರಗಳು, ಶಾಲಾ ಕಾಲೇಜುಗಳು ಸೇರಿದಂತೆ ಇತರೆ ಪ್ರದೇಶಗಳಲ್ಲಿ ಹೆಣ್ಣು ಮಕ್ಕಳಿಗೆ ತೊಂದರೆ ನೀಡುವುದನ್ನು ತಪ್ಪಿಸುವ ಸಲುವಾಗಿ ಈ ಕ್ರಮ ಕೈಗೊಳ್ಳಲಾಗುತ್ತಿದೆ. ಹೆಣ್ಣು ಮಕ್ಕಳನ್ನು ಚುಡಾಯಿಸಿದವರನ್ನೂ ಕಾನೂನಿನ ರೀತಿಯಲ್ಲಿ ಶಿಕ್ಷಿಸಲಾಗುವುದು. ಇದರ ಭಾಗವಾಗಿ ಇತ್ತೀಚೆಗೆ ಇಬ್ಬರು ಯುವಕರು ಬಾಲಕಿಯರ ಹಾಸ್ಟೆಲ್ ಮುಂದೆ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದಾಗ ಸೂಕ್ತ ವಿವರಣೆ ನೀಡದ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ. ಪರೀಕ್ಷೆಗೋಸ್ಕರ ಮಫ್ತಿಯಲ್ಲಿಲ್ಲದೆ ಸಾಮಾನ್ಯ ಹುಡುಗಿಯರಂತೆ ಬಟ್ಟೆ ಧರಿಸಿದ್ದ ಆ್ಯಂಟಿ ರೋಮಿಯೋ ದಳದ ಮುಖ್ಯಸ್ಥೆ ರವೀನಾ ತ್ಯಾಗಿ ಬಳಿಯೇ ಅಸಭ್ಯವಾಗಿ ನಡೆದುಕೊಂಡ ಘಟನೆಯೇ ಉತ್ತರಪ್ರದೇಶದಲ್ಲಿ ಬೀದಿಕಾಮಣ್ಣರ ಉಪದ್ರವದ ಗಂಭೀರತೆಗೆ ಸಾಕ್ಷಿ. ಉತ್ತರ ಪ್ರದೇಶದಲ್ಲಿ ಲವ್ ಜಿಹಾದ್ ವ್ಯಾಪಕವಾಗಿದ್ದು ಮುಲ್ಲಾ, ಉಲೇಮಾಗಳ ಬೆಂಬಲವೂ ಇದಕ್ಕಿತ್ತು. 2006ರಲ್ಲೇ ಅಲ್ಲಿನ ಹೈಕೋರ್ಟ್ "ರಾಜ್ಯದಲ್ಲಿ ತೀವ್ರಗತಿಯಲ್ಲಿ ಹಿಂದೂ ಹುಡುಗಿಯರೇ ಏಕೆ ಅಪಹರಣಕ್ಕೊಳಗಾಗುತ್ತಿದ್ದಾರೆ?" ಎಂದು ಪ್ರಶ್ನಿಸಿತ್ತು.  ಲವ್ ಜಿಹಾದ್ ಬಗೆಗೇಕೆ ಕ್ರಮ ಕೈಗೊಳ್ಳುತ್ತಿಲ್ಲವೆಂದು ರಾಜ್ಯ ಸರಕಾರವನ್ನು ನ್ಯಾಯಾಲಯವೇ ಖುದ್ದಾಗಿ ಎಚ್ಚರಿಸಿದ ಮೂರನೇ ರಾಜ್ಯ ಉತ್ತರ ಪ್ರದೇಶ. ಕರ್ನಾಟಕ, ಕೇರಳ ಉಳಿದೆರಡು ರಾಜ್ಯಗಳು!

               ಅಯೋಧ್ಯೆಯಲ್ಲಿ ರಾಮಾಯಣ ಮ್ಯೂಸಿಯಂ ನಿರ್ಮಿಸಲು ಕೇಂದ್ರ ಸರಕಾರ ಭೂಮಿ ಮಂಜೂರು ಮಾಡುವಂತೆ ಅಖಿಲೇಶ್ ನೇತೃತ್ವದ ಉತ್ತರಪ್ರದೇಶ ಸರಕಾರವನ್ನು ಕೇಳಿತ್ತು. ಆಗಿನ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಆ ಕಡತವನ್ನು ವಿಲೇವಾರಿಯೇ ಮಾಡಿರಲಿಲ್ಲ. ಕೊನೆಗೂ ರಾಮಾಯಣ ಮ್ಯೂಸಿಯಂಗೆ ಜಾಗ ಕೊಡಲು ಯೋಗಿಯೇ ಬರಬೇಕಾಯಿತು. ಈಗಾಗಲೇ ಇಪ್ಪತ್ತು ಎಕರೆ ಭೂಮಿ ಮಂಜೂರು ಮಾಡಿ, ಮ್ಯೂಸಿಯಂ ನಿರ್ಮಾಣವನ್ನು ಆರಂಭಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಭಾರತವೆಂಬ ಜಾತ್ಯಾತೀತ ರಾಷ್ಟ್ರದಲ್ಲಿ ಹಜ್ ಯಾತ್ರೆ ಕೈಗೊಳ್ಳುವವರಿಗೆ ಸಬ್ಸಿಡಿಯಿದೆ. ಆದರೆ ಹಿಂದೂಗಳ ತೀರ್ಥಯಾತ್ರೆಗೆ ಯಾವ ಸರಕಾರವೂ ಇಷ್ಟರವರೆಗೆ ನೆರವು ನೀಡಿಲ್ಲ. ಉತ್ತರ ಪ್ರದೇಶ ಸರಕಾರ ಕೈಲಾಸ – ಮಾನಸ ಸರೋವರ ಯಾತ್ರೆ ಕೈಗೊಳ್ಳುವವರಿಗೆ ₹1 ಲಕ್ಷ ನೆರವು ಘೋಷಿಸಿದೆ. ಯಾತ್ರಿಕರ ಅನುಕೂಲಕ್ಕಾಗಿ ಕೈಲಾಸ ಭವನ ನಿರ್ಮಿಸಲಾಗುತ್ತಿದೆ.

               ಯೋಗಿ ಪ್ರಬಲರಾಗಿರುವ ಪ್ರದೇಶಗಳಲ್ಲಿ ಕೋಮುಗಲಭೆಗಳು ಕಡಿಮೆ. ಅವರನ್ನು ಗೌರವಿಸುವ, ಆರಾಧಿಸುವ ಹಲವಾರು ಮುಸಲ್ಮಾನ ಪರಿವಾರಗಳು ಉತ್ತರ ಪ್ರದೇಶದಲ್ಲಿವೆ. ಅವರು ಮುಖ್ಯಮಂತ್ರಿಯಾದಾಗ ಮುಸಲ್ಮಾನರಿಂದ ಅಭೂತಪೂರ್ವ ಸ್ವಾಗತ ಲಭಿಸಿತ್ತು. ಗೋರಖನಾಥ್ ದೇವಳದ ಮೊದಲ ಇಂಜಿನಿಯರ್ ನಿಸಾರ್ ಅಹಮ್ಮದ್. ಸಾಧನಾ ಭವನ್, ಯಾತ್ರಿ ನಿವಾಸ್ಶಿಂದೂ ಸೇವಾಶ್ರಮ್, ದೇವಾಲಯದ ವಾಣಿಜ್ಯ ಸಂಕೀರ್ಣ, ಆಸ್ಪತ್ರೆ, ಸಂಸ್ಕೃತಿ ವಿದ್ಯಾಲಯ, ರಾಧಾಕೃಷ್ಣ ಮಂದಿರ, ಶಿವ, ವಿಷ್ಣು ಹಾಗೂ ಹನುಮಾನ್ ಮಂದಿರಗಳ ವಿನ್ಯಾಸಕಾರ ಇವರೇ.  ಮೂವತ್ತೈದು ವರುಷಗಳಿಂದ ಗೋರಖನಾಥನ ಸೇವೆ ಮಾಡುತ್ತಿರುವ ಯಾಸಿನ್ ಅನ್ಸಾರಿ ಮಠದ ಮೇಲ್ವಿಚಾರಕನೂ ಹೌದು. ದೇವಾಲಯದ ಖರ್ಚು-ವೆಚ್ಚಗಳನ್ನು ನಿರ್ವಹಿಸುವ ಅಕೌಂಟೆಂಟ್ ಕೂಡಾ ಆತನೇ. ಅಡುಗೆ ಕೋಣೆಯಿಂದ "ಛೋಟೆ ಮಹಾರಾಜ್"ರ(ಯೋಗಿ) ಶಯನ ಗೃಹದವರೆಗೂ ಮುಕ್ತವಾಗಿ ಸಂಚರಿಸುವ ಸ್ವಾತಂತ್ರ್ಯ ನನಗಿದೆ. ಅವರೊಂದಿಗೆ ಭೋಜನವನ್ನೂ ಸ್ವೀಕರಿಸುತ್ತೇನೆ ಎನ್ನುತ್ತಾರೆ ಅನ್ಸಾರಿ. ಮಠದ ಸುತ್ತಮುತ್ತಲೂ ಮುಸ್ಲಿಮರ ಅನೇಕ ಅಂಗಡಿಗಳಿವೆ. "ಕಳೆದ ಮೂವತ್ತೈದು ವರ್ಷಗಳಿಂದ ಮಠದ ಆವರಣದಲ್ಲಿ ಅಂಗಡಿಯನ್ನು ನಡೆಸುತ್ತಿದ್ದೇನೆ. ಒಂದು ಸಲವೂ ಅವರು ಅಗೌರವದಿಂದ ಅಥವಾ ಭೇದಭಾವದಿಂದ ನಡೆದುಕೊಂಡಿದ್ದನ್ನು ನಾನು ನೋಡಿಲ್ಲ. ಅಸಹಾಯಕರು, ಬಡಬಗ್ಗರು ಯಾರೇ ಇರಲಿ ಅವರ ಜಾತಿ-ಮತ ನೋಡದೆ ಯೋಗಿ ಜೀ ಸಹಾಯ ಮಾಡುತ್ತಾರೆ. ಅವರು ನಿಜವಾದ ಸಂನ್ಯಾಸಿ" ಎನ್ನುತ್ತಾರೆ ಅಝೀಜುನ್ನೀಸಾ. ಹಲವಾರು ಮುಸ್ಲಿಮ್ ಪರಿವಾರಗಳು ಯಾವುದೇ ಭಯವಿಲ್ಲದೆ ಇಲ್ಲಿ ಜೀವನ ನಡೆಸುತ್ತಿವೆ ಎನ್ನುವ ಬಳೆ ವ್ಯಾಪಾರಿ ಮಹಮ್ಮದ್ ಮತಾಕಿಮ್ ಮುಂತಾದವರ ಮಾತುಗಳು ನಿಜವಾದ ಜಾತ್ಯಾತೀತತೆ ಆದಿತ್ಯನಾಥರದ್ದು ಎಂದು ಸಾರಿ ಹೇಳುತ್ತವೆ. ಮಠದ ನಾಲ್ನೂರಕ್ಕೂ ಹೆಚ್ಚು ಗೋವುಗಳನ್ನು ನೋಡಿಕೊಳ್ಳುವ ಮಹಮ್ಮದ್ ತಮ್ಮೆಲ್ಲರನ್ನೂ ಸಲಹುವ ಯೋಗಿಯವರ ಸರಳ ಜೀವನದ ಬಗ್ಗೆ ಮತ್ತೆ ಮತ್ತೆ ಹೇಳುತ್ತಾನೆ.

              ಸುರನದಿಯನ್ನು ಸ್ವಚ್ಛಗೊಳಿಸಲು 1985ರಲ್ಲಿ ರಾಜೀವ್ ಗಾಂಧಿ "ಗಂಗಾ ಆ್ಯಕ್ಷನ್ ಪ್ಲಾನ್(ಜಿಎಪಿ) ಜಾರಿಗೆ ತಂದಿದ್ದರು. ಆದರೆ ಅದು ಕಾಗದದಲ್ಲಷ್ಟೇ ಉಳಿಯಿತು. ಆದಾದ 15 ವರ್ಷಗಳ ಬಳಿಕವೂ ಕೊಳಚೆ ಕಡಿಮೆಯಾಗಲಿಲ್ಲ. ಆದರೆ 901.71 ಕೋಟಿ ರುಪಾಯಿಗಳು ಖರ್ಚಾಗಿದ್ದವು. ಬೇರೆ ನದಿಯಿಂದ ಹೆಚ್ಚುವರಿ ನೀರನ್ನು ಹರಿಸಿ ಗಂಗೆಯ ನೀರನ್ನು ತೆಳುವಾಗಿಸಲು ಜಿಎಪಿ ಯಾವುದೇ ಕಠಿಣ ನಿಯಮಗಳನ್ನು ಜಾರಿಗೆ ತರಲೇ ಇಲ್ಲ. ಅಲ್ಲದೆ ಕಸ ವಿಲೇವಾರಿ ಪ್ರಕ್ರಿಯೆಯನ್ನೂ ಸರಿಯಾಗಿ ಕೈಗೊಂಡಿರಲಿಲ್ಲ. ಉದ್ಯಮಗಳು ರಾಸಾಯನಿಕಗಳನ್ನು ನದಿಯಲ್ಲಿ ವಿಸರ್ಜಿಸದಂತೆ ತಡೆಯಲೇ ಇಲ್ಲ. ಗಂಗೆಯ ದಡದಲ್ಲಿರುವ ಕಸಾಯಿಖಾನೆಗಳನ್ನೂ ನಿಷೇಧಿಸಲಿಲ್ಲ. ಗಂಗೆಯ ಮಾಲಿನ್ಯಕ್ಕೆ ಅವ್ಯವಸ್ಥಿತ ಘಾಟಿಗಳೇ ಮೂಲ ಕಾರಣ ಎಂಬ ನೆಪವೊಡ್ಡಿ ಘಾಟಿಗಳ ಆಧುನೀಕರಣ ಮಾಡಲಾಯಿತು. ಇದಕ್ಕೆಂದೇ ವಾರಣಾಸಿ ಯೋಜನೆಯನ್ನು ಜಾರಿಗೆ ತರಲಾಯಿತು. ಆದರೆ ಗಂಗೆ ಮತ್ತಷ್ಟು ಕೊಳಕಾದಳು. ಒಳರಾಜಕೀಯದಲ್ಲಿ, ಅಧಿಕಾರದಾಟದಲ್ಲೇ ಮೂಳುಗಿ ಹೋಗಿದ್ದ ಗಂಗಾನದಿ ಜಲಾನಯನ ಪ್ರಾಧಿಕಾರ ಹಾಗೂ ಜಲ ಸಂಪನ್ಮೂಲ ಸಚಿವಾಲಯದ ಬೆಂಬಲವಿಲ್ಲದೆ ರಾಷ್ಟ್ರೀಯ ನದಿ ಸಂರಕ್ಷಣಾ ಯೋಜನೆಯೆನ್ನುವುದು ಹಣ ದೋಚುವ ದಂಧೆಯಾಗಿ ಬದಲಾಯಿತು. ಮೋದಿ ಪ್ರಧಾನಿಯಾದ ಕೂಡಲೇ ನಮಾಮಿ ಗಂಗಾ ಯೋಜನೆಯಡಿ ನದಿಯನ್ನು ಮಲಿನಗೊಳಿಸುತ್ತಿರುವ ಕೈಗಾರಿಕಾ ಘಟಕಗಳನ್ನು ಮುಚ್ಚಿಸಲು ಆದೇಶ ನೀಡಿದರು. ಗಂಗೆಗೆ ರಕ್ತದ ಹೊಳೆ ಹಾಗೂ ಮಾಂಸದ ತ್ಯಾಜ್ಯವನ್ನು ಹರಿಸುತ್ತಿದ್ದ ಇನ್ನೂರಕ್ಕೂ ಹೆಚ್ಚು ಕಂಪೆನಿಗಳಿಗೆ ಬೀಗ ಜಡಿಯಲಾಯಿತು. ಇಷ್ಟೆಲ್ಲಾ ಆದರೂ, ಗಂಗಾ ಶುದ್ಧೀಕರಣಕ್ಕೆ ಪ್ರತ್ಯೇಕ ಸಚಿವಾಲಯ ರಚನೆಯಾಗಿದ್ದರೂ ಅದು ಉತ್ತರ ಪ್ರದೇಶದಲ್ಲಿ ಸಫಲತೆ ಕಾಣದಿರುವುದಕ್ಕೆ ಸಮಾಜವಾದಿ ಸರ್ಕಾರದ ಅಸಹಕಾರವೇ ಕಾರಣವಾಗಿತ್ತು. ಯೋಜನೆ ಸಫಲವಾದಲ್ಲಿ ಅದರ ಲಾಭ ಕೇಂದ್ರ ಸರ್ಕಾರಕ್ಕೆ ಸಿಗುತ್ತದೆಯೆನ್ನುವ ಭಯ ಅದನ್ನು ಕಾಡುತ್ತಿತ್ತು. ಈಗ ಯೋಗಿ ಬಂದದ್ದೇ ತಡ "ನಮಾಮಿ ಗಂಗಾ" ಭೋರ್ಗರೆದು ಹರಿಯುತ್ತಿದೆ!

                ಅತ್ತ ನೇಪಾಳದಲ್ಲಿ ಕಮ್ಯೂನಿಸ್ಟರು ನೇಪಾಳವನ್ನು ಭಾರತದಿಂದ, ಹಿಂದೂ ಧರ್ಮದಿಂದ ದೂರ ಸರಿಸಲು ನಡೆಸುತ್ತಿರುವ ಕಾರ್ಯ ಯೋಜನೆಯ ವಿರುದ್ಧವೂ ದನಿಯೆತ್ತಿದ್ದಾರೆ. ಮತಾಂತರವನ್ನು ಕಾನೂನುಬದ್ಧಗೊಳಿಸುವ ಕಮ್ಯೂನಿಸ್ಟರ ಹುನ್ನಾರವನ್ನು ವಿದೇಶೀ ಹಣ, ಶಕ್ತಿಗಳ ಷಡ್ಯಂತ್ರ ಎನ್ನುವ ಅವರು ನೇಪಾಳಿಗಳ ಅಸ್ಮಿತೆಗೆ ಕೊಳ್ಳಿ ಇಡಲಾಗುತ್ತಿದೆ ಎಂದು ಕಿಡಿಕಾರುತ್ತಿದ್ದಾರೆ. ಗೋರಖನಾಥ ಪೀಠಕ್ಕೆ ನಡೆದುಕೊಳ್ಳುವ ಅನೇಕ ನೇಪಾಳಿಗಳು ತಮ್ಮ ಪೀಠಾಧಿಪತಿಯಿಂದ ಬೆಂಬಲದ ನುಡಿ ಕೇಳಿಬಂದದ್ದೇ ತಡ ಚೀನಾ-ಪಾಕಿಸ್ತಾನ-ಪಾಶ್ಚಿಮಾತ್ಯ ರಾಷ್ಟ್ರಗಳ ಈ ದುಷ್ಟಕೂಟದ ದುಷ್ಟ ಕಾರ್ಯಗಳ ವಿರುದ್ಧ ದನಿಯೆತ್ತಲಾರಂಭಿಸಿದ್ದಾರೆ. ಒಟ್ಟಾರೆ ಉತ್ತರಪ್ರದೇಶ ತನ್ನೊಂದಿಗೆ ಉತ್ತರಾಪಥವನ್ನೂ ಬೆಳಕಿನ ಪಥಕ್ಕೆ ಕೊಂಡೊಯ್ಯುತ್ತಿದೆ ಎನ್ನುವುದರಲ್ಲಿ ಸಂಶಯವಿಲ್ಲ.

ಸೋಮನಾಥನ ಸೇಡು ತೀರಿತು ಸೂರ್ಯಕುಂಡದ ಸನಿಹ

ಸೋಮನಾಥನ ಸೇಡು ತೀರಿತು ಸೂರ್ಯಕುಂಡದ ಸನಿಹ


                ಯಾರು ಹೇಳಿದರು ಹಿಂದೂಗಳು ಮುಸಲ್ಮಾನರನ್ನು ಎದುರಿಸಲಿಲ್ಲವೆಂದು? ಯಾರು ಹೇಳಿದರು ಹಿಂದೂಗಳು ತಮ್ಮ ಜಾತಿಯ ಪರಿಧಿಯನ್ನು ಮೀರಿ ಒಟ್ಟಾಗಿ ಮಾತೃಭೂಮಿಯ ರಕ್ಷಣೆ ಮಾಡಲಿಲ್ಲವೆಂದು? ಯಾರು ಹೇಳಿದರು ಹಿಂದೂ ರಾಜರೆಲ್ಲಾ ಯುದ್ಧದಲ್ಲಿ ಗೆದ್ದ ಬಳಿಕ ಧೂರ್ತ, ಮತಾಂಧ ಮುಸ್ಲಿಮರನ್ನು ಕ್ಷಮಿಸಿ ಮತ್ತೆ ಎಲ್ಲವನ್ನೂ ಕಳೆದುಕೊಳ್ಳುವ ಮತಿವಿಭ್ರಮಣೆಗೆ ಒಳಗಾದನೆಂದು? ಎಲ್ಲಾ ಎಡಬಿಡಂಗಿ ಇತಿಹಾಸಕಾರರು ಹೇಳಿದ್ದು ಇದನ್ನೇ! ಆದರೆ ಇದನ್ನು ಅಲ್ಲಗಳೆಯುವ ಘಟನೆಯೊಂದು ನಡೆದಿತ್ತು. ಇರ್ತಲೆ ಹಾವಿನ ರೀತಿಯ ಮುಸ್ಲಿಮರನ್ನು ಮುಲಾಜಿಲ್ಲದೆ ನಾಶ ಮಾಡಿದ, ಮುಸ್ಲಿಮರಂತಹ ಧೂರ್ತ ಶತ್ರುಶೇಷವನ್ನು ಉಳಿಸುವ ಭೋಳೇ ಸ್ವಭಾವಕ್ಕೊಳಗಾಗದ ಧೀರ ಹಿಂದೂ ರಾಜನೊಬ್ಬ ಇದ್ದ. ಆದರೆ ಅವನು ಇತಿಹಾಸದ ಪುಸ್ತಕಗಳಲ್ಲಿ ಕಾಣಿಸಿಕೊಳ್ಳಲೇ ಇಲ್ಲ. ಅದೇ ರೀತಿ ಜನಮಾನಸದಿಂದ ಅಳಿಯಲೂ ಇಲ್ಲ. ಆದರೆ ಅವನ ಹೆಸರನ್ನು, ಅವನ ಜಾತಿಯನ್ನು ರಾಜಕೀಯ ಪಕ್ಷಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುತ್ತಲೇ ಇವೆ. ಅವನ ಜಾತಿಯನ್ನು ಬದಲಾಯಿಸಿದ್ದೂ ಇದೆ. ಅವನನ್ನು ಜಾತಿಯ ಗೂಡಿನೊಳಗೆ ಕಟ್ಟಿ ಹಾಕಿಯೂ ಆಗಿದೆ. ಆದರೆ ಇತಿಹಾಸದಲ್ಲಿ ಅವನಿಗೆ ಸಿಗಬೇಕಾದ ಸ್ಥಾನ ಸಿಗಲೇ ಇಲ್ಲ. ಎಲ್ಲಾ ಜಾತಿಗಳವರನ್ನು, ರಜಪೂತ ರಾಜರುಗಳನ್ನೆಲ್ಲಾ ಒಗ್ಗೂಡಿಸಿ ಮುಸ್ಲಿಂ ಆಕ್ರಮಣಕಾರರನ್ನು ಸದೆಬಡಿದು ಕಾಶಿ, ಮಥುರಾ, ಅಯೋಧ್ಯೆಗಳನ್ನು ರಕ್ಷಿಸಿದವನ ಹೆಸರು ಇತಿಹಾಸದ ಪುಸ್ತಕಗಳಿಂದಲೇ ಮಾಯವಾಗಿದೆ. ಸೋಮನಾಥವನ್ನು ಮತ್ತೆ ಮತ್ತೆ ಧ್ವಂಸಗೈದ ಘಜನಿಯ ಸೈನ್ಯವನ್ನು ಹೇಳ ಹೆಸರಿಲ್ಲದಂತೆ ಮಾಡಿದವನ ಹೆಸರೇ ಇತಿಹಾಸಕಾರರಿಗೆ ಮರೆತು ಹೋಗಿದೆ. ಅನ್ಯ ಅರಸರಂತೆ ಭೋಳೇತನಕ್ಕೊಳಗಾಗದೆ ಶತ್ರುಶೇಷವನ್ನೇ ಉಳಿಸದೆ ದಹಿಸಿದವನ ಹೆಸರು ಇತಿಹಾಸ ಗರ್ಭದಲ್ಲಿ ಸುಟ್ಟುರಿದು ಹೋಗಿದೆ.

                ಎಂಟನೇ ಶತಮಾನದ ಆದಿ ಭಾಗದಲ್ಲೇ ಅರಬ್ಬರು ಸಿಂಧ್ ಮೇಲೆ ತಮ್ಮ ಬರ್ಬರ ಆಕ್ರಮಣವನ್ನು ಆರಂಭಿಸಿದ್ದರು. ಆದರೆ ಕಾಶ್ಮೀರದ ಲಲಿತಾದಿತ್ಯ, ದಕ್ಷಿಣ ತಜಕಿಸ್ತಾನದ ನಾರಾಯಣ, ಸಮರಖಂಡ(ಈಗಿನ ಉಜ್ಬೆಕಿಸ್ತಾನದಲ್ಲಿದೆ)ದ ಗೋರಖ್ ಹಾಗೂ ಬುಖಾರ(ಈಗಿನ ಉಜ್ಬೆಕಿಸ್ತಾನದಲ್ಲಿದೆ)ದ ತುಷಾರಪತಿಯರ ಸಾಹಸದಿಂದ ಅರಬ್ಬರ ಅಬ್ಬರ ನಿರ್ಬಂಧಿಸಲ್ಪಟ್ಟಿತು. ಮುಂದೆ ಭಾರತವನ್ನು ಆಕ್ರಮಿಸಿಕೊಳ್ಳಲು ಮೂರು ಶತಮಾನಗಳ ಪರ್ಯಂತ ಅವಿರತವಾಗಿ ಹೆಣಗಿದರೂ ಭಾರತದ ಕೂದಲು ಕೊಂಕಿಸಲೂ ಅರಬ್ಬರಿಂದ ಸಾಧ್ಯವಾಗಲಿಲ್ಲ. ಭಾರತದ ಭದ್ರ ಕೋಟೆ ಬಿರುಕು ಬಿಟ್ಟುದುದು ಸಬಕ್ತಜಿನನ ಮೋಸದ ಯುದ್ಧಕ್ಕೇನೆ. ಸಬಕ್ತಜಿನ್, ಶಾಹಿ ಜಯಪಾಲನನ್ನು ಕುತಂತ್ರದಿಂದ ಸೋಲಿಸಿದರೂ ಜಯಪಾಲ ಆತನನ್ನು ಭಾರತದ ಗಡಿಭಾಗಕ್ಕಷ್ಟೇ ಸೀಮಿತವಾಗಿರಿಸಿದ. ಮಹಾಲೂಟಿಕೋರ ಘಜನಿಯನ್ನಂತೂ ಆನಂದಪಾಲ ಸೋಲಿಸಿ ಹಿಮ್ಮೆಟ್ಟಿಸಿಬಿಟ್ಟ. ಶಾಹಿ ವಂಶವೇ ಐವತ್ತು ವರ್ಷಗಳಿಗೂ ಅಧಿಕ ಕಾಲ ಸತತವಾದ ವಿದೇಶೀ ಆಕ್ರಮಣಕ್ಕೆ ತಡೆಯೊಡ್ಡಿ ನಿಂತು ಮಾತೃಭೂಮಿಯನ್ನು ರಕ್ಷಿಸಿತು. ಸತತ ಯುದ್ಧಗಳನ್ನು ಮಾಡಿ ಕಾಶ್ಮೀರದ ಬಾಗಿಲಿಗೆ ಬಂದು ಮುಟ್ಟಲು ಘಜನಿಗೆ ಇಪ್ಪತ್ತು ವರ್ಷಗಳೇ ಬೇಕಾದವು(1026).

                      1026ರಲ್ಲಿ ಘಜನಿ ಸೋಮನಾಥವನ್ನು ಕೊಳ್ಳೆ ಹೊಡೆಯುತ್ತಿದ್ದಾಗ ಹನ್ನೊಂದು ವರ್ಷ ಪ್ರಾಯದ ಅಳಿಯ(ಘಜ್ನಿಯ ತಂಗಿ ಸಿತಾರ್-ಇಮ್-ಅಲ್ ಳ ಮಗ ಸಯ್ಯದ್ ಸಾಲಾರ್ ಮಸೂದ್  ಕೂಡಾ ಅವನ ಜೊತೆಗಿದ್ದ. ಎಳೆ ವಯಸ್ಸಿನಲ್ಲಿಯೇ ಮಾವನ ಮತಾಂಧತೆ ಮತ್ತು ಬರ್ಬರತೆಯನ್ನು ಮೈಗೂಡಿಸಿಕೊಂಡಿದ್ದ ಮಸೂದ್! ಘಜನಿಯ ಸಾವಿನನಂತರ ಕ್ರಿ.ಶ. 1031ರಲ್ಲಿ ತನ್ನ ತಂದೆ ಸಾಲಾರ್ ಸಾಹುವಿನ ಮಾರ್ಗದರ್ಶನದಲ್ಲಿ ಒಂದು ಲಕ್ಷ ಸಂಖ್ಯೆಯ ಬೃಹತ್ ಸೇನೆಯೊಂದಿಗೆ ಮಸೂದ್ ಭಾರತಕ್ಕೆ ದಂಡೆತ್ತಿ ಬಂದ. ಆದರೆ ಮಸೂದನ ಜೈತ್ರಯಾತ್ರೆ ಸುಲಲಿತವಾಗಿರಲಿಲ್ಲ. ಮಾರ್ಗ ಮಧ್ಯದಲ್ಲಿ ಅಸಂಖ್ಯ ಹಿಂದೂರಾಜರಿಂದ ಪ್ರತಿರೋಧವನ್ನೆದುರಿಸಿ ಪೆಟ್ಟು ತಿನ್ನುವ ಸೌಭಾಗ್ಯವೂ ಅವನದ್ದಾಯಿತು. ಹಿಂದೂಸ್ಥಾನವನ್ನು ಗೆಲ್ಲಬೇಕಾದರೆ ಹಿಂದೂಗಳ ಪವಿತ್ರ ಕ್ಷೇತ್ರಗಳಾದ ಕಾಶಿ-ಅಯೋಧ್ಯೆಗಳನ್ನೇ ನಾಶಪಡಿಸಬೇಕು ಎನ್ನುವುದನ್ನು ಮನಗಂಡು ಅತ್ತ ಕಡೆ ತನ್ನ ಸೈನ್ಯವನ್ನು ಮುನ್ನಡೆಸಿದ. ಅವನ ಉದ್ದೇಶವೂ ರಾಜ್ಯವನ್ನು ಸಂಪಾದಿಸಿ ಸಿಂಹಾಸನಾಧೀಶನಾಗುವುದಕ್ಕಿಂತ ಹೆಚ್ಚಾಗಿ ಹಿಂದೂಗಳನ್ನು ಮತಾಂತರಿಸಿ ಗಾಜಿ ಪಟ್ಟವನ್ನೇರುವುದೇ ಆಗಿತ್ತು. ಸೈಯ್ಯದ್ ಹುಸೈನ್ ಗಾಜಿ, ಸೈಯ್ಯದ್ ಹುಸೈನ್ ಖಾತಿಮ್, ಸೈಯ್ಯದ್ ಹುಸೈನ್ ಖಾತಿಮ್, ಸುಲ್ತಾನುಲ್ ಸಲಾಹೀನ್ ಮಹಮಿ, ಬಢವಾನಿಯಾ ಸಾಲಾರ್ ಸೈಫುದ್ದೀನ್, ಮೀರ್ ಇಜಾವುದ್ದೀನ್, ಸೈಯ್ಯದ್ ಮಲಿಕ್ ದೌಲತ್ ಶಾಹ್, ಮಿಯಾ ರಜ್ಜಬ್, ಇಬ್ರಾಹಿಂ ಹಾಗೂ ಫೈಸಲ್ ಮಲಿಕನಂತಹ ದಳಪತಿಗಳನ್ನೊಳಗೊಂಡ ಅವನ ಮತಾಂಧ ಸೇನೆ ಕಣ್ಣಿಗೆ ಬಿದ್ದ ದೇವಾಲಯಗಳನ್ನು ಧ್ವಂಸ ಗೈಯುತ್ತಾ, ಅಬಲೆಯರ ಮಾನಾಪಹಾರ ಮಾಡುತ್ತಾ, ಹಿಂದೂಗಳನ್ನು ಬಲವಂತವಾಗಿ ಮತಾಂತರಿಸುತ್ತಾ ಸಾಗಿತು. ಬಂದವನೇ ದೆಹಲಿಯ ರಾಜ ಮಹಿಪಾಲ್ ತೋಮರನನ್ನು ಸೋಲಿಸಿ ಅವನ ರಾಜ್ಯವನ್ನು ಕಬಳಿಸಿದ. ಮೀರತ್ ಮೇಲೆ ಮುಗಿಬಿದ್ದು ರಾಜಾ ಹರಿದತ್ತನನ್ನು ಬಂಧಿಸಿ ಬಲವಂತವಾಗಿ ಇಸ್ಲಾಂಗೆ ಮತಾಂತರಿಸಿದ. ಕನೌಜ್ ಮೇಲೆ ದಾಳಿಯೆಸಗಿದವನೇ ಅಲ್ಲಿನ ಸ್ಥಳೀಯ ಆಡಳಿತಗಾರರನ್ನೆಲ್ಲಾ ಮುಸ್ಲಿಮರನ್ನಾಗಿಸಿ ಅಪಾರ ಮೊತ್ತದ ಧನವನ್ನು ದೋಚಿದ. ಅದನ್ನೇ ತನ್ನ ಸೇನಾ ನೆಲೆಯನ್ನಾಗಿಸಿಕೊಂಡ ಆತನ ಮುಂದಿನ ಗುರಿ ಸುಲ್ತಾನಪುರವಾಗಿತ್ತು. ಮಹಾಪ್ರತಾಪಿಯಾಗಿದ್ದ ಮಾಳವ ನರೇಶ ಭೋಜ ಪರಮಾರನ ಕಣ್ಣಿಗೆ ಬೀಳದಂತೆ ಸುತ್ತಿ ಬಳಸಿ ಮಸೂದ್ ಮುಂದುವರಿದ. ಸ್ವತಃ ಘಜನಿಯೂ ಭೋಜರಾಜನ ತಂಟೆಗೆ ಹೋಗಿರಲಿಲ್ಲ. ಆದರೆ ಸುಲ್ತಾನಪುರದ ಯುದ್ಧದಲ್ಲಿ ಅದೇ ಭೋಜ ಪರಮಾರನ ಸೈನ್ಯವನ್ನು ಮಸೂದ್ ಎದುರಿಸಬೇಕಾಯಿತು. ಭೋಜನ ಹಾಗೂ ಕಾಶಿಯ ಮದನಪಾಲನ ಸೈನ್ಯದ ಸಹಾಯದಿಂದ ರಜಪೂತರು ಮಸೂದನ ಸದ್ದಡಗಿಸಿಬಿಟ್ಟರು.

                   ಆ ಸಮಯದಲ್ಲಿ ಶ್ರಾವಸ್ತಿಯನ್ನು ಆಳುತ್ತಿದ್ದವ ರಾಜಾ ಸುಹೈಲ್ ದೇವ್. ತ್ರಿಲೋಕಚಂದ ಮಹಾರಾಜ್, ವಿಹಾರದೇವನ ವಂಶದಲ್ಲಿ ಹುಟ್ಟಿದ ಅಪ್ರತಿಮ ಸಾಹಸಿ ಸುಹೈಲ್. ಭಲ್ಲೆಯ ಪ್ರಯೋಗದಲ್ಲಿ ನಿಷ್ಣಾತರಾಗಿದ್ದ ಈ ವಂಶಜರಿಗೆ ಭಲ್ಲಾ ಸುಲ್ತಾನರೆಂಬ ಅನ್ವರ್ಥ ನಾಮವೇ ಇತ್ತು. ಸುಲ್ತಾನಪುರದ ನಿರ್ಮಾತೃಗಳು ಈ ವಂಶಸ್ಥರೇ. ಮೋರ್ ಧ್ವಜ ಅವನ ತಂದೆ. ಸೀತಾಪುರದಿಂದ ಗೋರಖ್ ಪುರದವರೆಗೆ ಹಬ್ಬಿದ್ದ ಸಮೃದ್ಧ ರಾಜ್ಯವನ್ನು ಆಳುತ್ತಿದ್ದ ಪ್ರಜಾವತ್ಸಲ ಪ್ರತಾಪಿ ರಾಜನಾಗಿದ್ದ ಸುಹೈಲ್ ದೇವ್. ಬಹ್ರೈಚ್'ನ ಸೂರ್ಯ ಮಂದಿರ, ತುಳಸೀಪುರದ ದೇವಿ ಪಾಟನ್ ಮಂದಿರವನ್ನು ಪುನರುತ್ಥಾನಗೊಳಿಸಿದ ಹರಿಕಾರನಾದ ಸುಹೈಲ್ ದೇವ್ ಮಹಾ ಗೋಭಕ್ತನಾಗಿದ್ದ.

                  ಅಷ್ಟರಲ್ಲಿ ಮಸೂದ್ ಸರಯೂ ನದೀ ತಟದಲ್ಲಿ ತನ್ನ ವಿಶಾಲ ಸೇನೆಯೊಡನೆ ಬೀಡುಬಿಟ್ಟಿದ್ದ. ಮೀರತ್, ಕನೌಜ್, ಮಹೀಲಬಾದ್ ಗಳಲ್ಲಿ ವಿಜಯದುಂದುಭಿ ಬಾರಿಸಿ ಮಸೂದ್ ಬಾರಾಬಂಕಿ ಜಿಲ್ಲೆಯ ಸತ್ರಿಕ್ ಎಂಬಲ್ಲಿ ಬಂದ. ವಸಿಷ್ಠರು ರಾಮ ಲಕ್ಷ್ಮಣರಿಗೆ ಪಾಠ ಹೇಳಿಕೊಟ್ಟ ಪುಣ್ಯಸ್ಥಳವದು. ಆ ಜಾಗವನ್ನು ತನ್ನ ಸೇನಾನೆಲೆಯಾಗಿಸಿ ಸುತ್ತಮುತ್ತಲ ಪ್ರದೇಶಗಳನ್ನು ಕಬಳಿಸಲು ಮಸೂದ್ ಸೇನೆಯನ್ನು ಕಳಿಸಲಾರಂಭಿಸಿದ. ಮಸೂದನ ದಂಡಯಾತ್ರೆಯ ಸಮಯದಲ್ಲಿ ಲಕ್ಷ್ಮೀಪುರ, ಸೀತಾಪುರ, ಲಖ್ನೋ, ಬಾರಾಬಂಕಿ, ಉನ್ನಾಓ, ಫೈಸಾಬಾದ್, ಬಹ್ರೈಚ್, ಶ್ರಾವಸ್ತಿ ಮತ್ತು ಗೋಂಡಾ ಪ್ರಾಂತಗಳನ್ನು ಸುಹೈಲ್ ದೇವನ ಇಪ್ಪತ್ತೊಂದು ಸಾಮಂತರು ಆಳುತ್ತಿದ್ದರು. ಸುಹೈಲ್ ದೇವನ ಬೈಸ್ ಜನಾಂಗವಲ್ಲದೆ ಕಾರಣಾಂತರಗಳಿಂದ ಕ್ಷತ್ರಿಯತ್ವದಿಂದ ವಿಮುಖಗೊಂಡು ಬೇರೆ ಜಾತಿಗಳಾದ ರಜಪೂತರ ಸಣ್ಣ ಸಂಸ್ಥಾನಗಳೂ ಅವಧ್ ಮತ್ತಿತರ ಸ್ಥಳೀಯ ಸಂಸ್ಥಾನಗಳನ್ನು ಆಳುತ್ತಿದ್ದವು. ಭೃಗು ವಂಶೀಯರೆಂದು ಹೇಳಿಕೊಳ್ಳುತ್ತಿದ್ದ ಬೈಸ್ ಜನಾಂಗೀಯರು ಮುಂದೆ ಉತ್ತಮ ಯೋಧರೆಂದು ಬ್ರಿಟಿಷರಿಂದಲೂ ಶಹಬ್ಬಾಸ್ ಗಿರಿ ಪಡೆದರು. ತಮ್ಮ ಮಾತೃಭೂಮಿಯನ್ನು ವಿದೇಶಿಯನೊಬ್ಬ ಆಕ್ರಮಿಸಲು ಬರುತ್ತಿರುವುದನ್ನು ಕಂಡು ಈ ಎಲ್ಲಾ ಸಣ್ಣ ಸಂಸ್ಥಾನಗಳು ತಮ್ಮಲ್ಲಿನ ವೈರವನ್ನು ಮರೆತು ಏಕಛತ್ರದಡಿಯಲ್ಲಿ ಒಟ್ಟಾದವು. ಬೈಸ್, ಭಲ್ಲೆ ಸುಲ್ತಾನರು, ಕಲಹಂಸ್, ರೈಕಾವರ್ ಮುಂತಾದ ವಂಶಗಳ ರಾಯ್ ರಾಯಬ್, ರಾಯ್ ಸಾಯಬ್, ರಾಯ್ ಅರ್ಜುನ್, ರಾಯ್ ಭೀಖನ್, ರಾಯ್ ಕನಕ್, ರಾಯ್ ಕಲ್ಯಾಣ್, ರಾಯ್ ಮಕರೂ, ರಾಯ್ ಸವಾರ್, ರಾಯ್ ಅರನ್, ರಾಯ್ ಬೀರಬಲ್, ರಾಯ್ ಜಯಪಾಲ್, ರಾಯ್ ಹರಪಾಲ್, ರಾಯ್ ಶ್ರೀಪಾಲ್, ರಾಯ್ ಹಕರೂ, ರಾಯ್ ಪ್ರಭು, ರಾಯ್ ದೇವನಾರಾಯಣ್, ರಾಯ್ ನರಸಿಂಹ ಎಂಬ ಹದಿನೇಳು ಸಂಸ್ಥಾನಗಳ ರಾಜರುಗಳು ಸುಹೈಲ್ ದೇವನನ್ನು ನಾಯಕನನ್ನಾಗಿ ಮಾಡಿಕೊಂಡು ಶತ್ರುವನ್ನೆದುರಿಸಲು ಸಿದ್ಧತೆ ಆರಂಭಿಸಿದರು. ಗಹಡ್ವಾಲ್ ವಂಶದ ಮದನಪಾಲ ಹಾಗೂ ಮುಂದೆ ಅಯೋಧ್ಯೆಯನ್ನಾಳಿದ ಯುವರಾಜ ಗೋವಿಂದನೂ ಇವರ ಜೊತೆಯಾದರು. ಈ ಸಂಘ "ಇದು ರಜಪೂತ ನೆಲ. ಇಲ್ಲಿಂದ ತತ್ ಕ್ಷಣವೇ ಜಾಗ ಖಾಲಿ ಮಾಡಬೇಕು" ಎಂಬ ಒಕ್ಕಣೆಯುಳ್ಳ ಓಲೆಯನ್ನು ಮಸೂದನಿಗೆ ಕಳುಹಿತು. ಇದು ಅಲ್ಲಾನ ನೆಲ ಎಂದು ಉತ್ತರಿಸುವ ಮೂಲಕ ಮಸೂದ್ ತೋರಿದ ಅವಿಧೇಯತೆ ಹುಟ್ಟು ಕ್ಷತ್ರಿಯರನ್ನು ಕೆರಳಿಸಿತು. ತಮ್ಮತಮ್ಮಲ್ಲೇ ಶತ್ರುತ್ವವಿದ್ದರೂ, ಯುದ್ಧಗಳಾಗುತ್ತಿದ್ದರೂ ಮಾತೃಭೂಮಿಯ ರಕ್ಷಣೆಗಾಗಿ ಇಸ್ಲಾಮನ್ನು ಎದುರಿಸಲು ಸುಹೈಲ್ ದೇವನನ್ನು ನಾಯಕನನ್ನಾಗಿ ಸ್ವೀಕರಿಸಿ ಈ ಎಲ್ಲಾ ಜನಾಂಗಗಳು ಏಕತ್ರವಾದುದು ಮಹತ್ವದ ಅಂಶ. ಭಾರತೀಯರು ಒಳಜಗಳಗಳಿಂದ ಗುಲಾಮರಾದರು ಎಂದು ವೈಭವೀಕರಿಸುವ ಎಲ್ಲಾ ಇತಿಹಾಸಕಾರರು ಗಮನಿಸಬೇಕಾದ ಅಂಶ. ಹಾಗೆಯೇ ಜಾತಿಯ ಎಲ್ಲಾ ಅಂಶಗಳನ್ನು ಬದಿಗೊತ್ತಿ ಮಾತೃಭೂಮಿಯ ರಕ್ಷಣೆಗಾಗಿ ಈ ಜನಾಂಗಗಳು ಒಟ್ಟಾದುದನ್ನು ಜಾತಿಯ ಆಧಾರದಲ್ಲಿ ಭಾರತವನ್ನು ಒಡೆಯಲು ಯತ್ನಿಸುವ ಮೂಳರು, ಭಾರತವು ಜಾತಿಯಿಂದಲೇ ಹಾಳಾಯಿತೆನ್ನುವ ಮೂಢರು, ದೇಶಕ್ಕಿಂತ ತಮ್ಮ ಜಾತಿ ಮೊದಲು ಎನ್ನುವ ಜಾತಿವಾದಿಗಳು ಅರ್ಥೈಸಿಕೊಳ್ಳಬೇಕು.

                       ಮಸೂದ್ ತನ್ನ ದಳವಾಯಿಗಳನ್ನು ವಿವಿಧ ದಿಕ್ಕುಗಳಿಗೆ ಅಟ್ಟಿದ. ಮಿಯಾ ರಜಬ್ ಹಾಗೂ ಸಾಲಾರ್ ಸೈಫುದ್ದೀನ್ ಬಹ್ರೈಚ್ ಅನ್ನು ವಶಪಡಿಸಿಕೊಂಡರು. ಅಮೀರ್ ಹಸನ್ ಮಹೋನ, ಮಲಿಕ್ ಫಜಲ್ ವಾರಣಾಸಿ, ಸಯ್ಯದ್ ಸಾಹು ಕರ್ರಾ ಮತ್ತು ಮಣಿಕಾಪುರಗಳನ್ನು ವಶಪಡಿಸಿಕೊಂಡರು. ಸುಹೈಲ್ ದೇವನ ಸಾಮಂತ ಹರದೋಯಿ ವಿರುದ್ಧ ಯುದ್ಧಕ್ಕೆ ಹೊರಟಿದ್ದ ಸಯ್ಯದ್ ಅಜೀಜ್ ಉದ್ದೀನನನ್ನು ಗೋಪಮಾವು ಬಳಿ ನಡೆದ ಕದನದಲ್ಲಿ ಸ್ವರ್ಗದ ಎಪ್ಪತ್ತೆರಡು ಕನ್ಯೆಯರ ಬಳಿ ಕಳುಹಿತು ಸಂಯುಕ್ತ ಪಡೆ. ತಾನು ಹೋದಲ್ಲೆಲ್ಲಾ ಮತಾಂತರ ಮಾಡುತ್ತಿದ್ದ, ಒಪ್ಪದವರನ್ನು ಕೊಲ್ಲಿಸುತ್ತಿದ್ದ ಮಸೂದನ ಗುರು, ಸರದಾರ ಸಯ್ಯದ್ ಇಬ್ರಾಹಿಂ ಹಾಗೂ ಇನ್ನಿತರ ಸೇನಾ ಪ್ರಮುಖರನ್ನು ದುಂಧಾಗಢ್ ಕದನದಲ್ಲಿ ಸಂಯುಕ್ತ ಪಡೆ ಕೊಚ್ಚಿ ಹಾಕಿತು. ಸಾಲಾರ್ ಸೈಫುದ್ದೀನನನ್ನು ಬಹ್ರೈಚ್ ನಲ್ಲಿಯೇ ತಡೆಯಲಾಯಿತು. ಇದರಿಂದ ಮಸೂದ್ ಅಯೋಧ್ಯೆಯನ್ನು ತಲುಪಲಾಗದೆ ಸಲರಪುರ ಎಂಬಲ್ಲಿ ನಿಲ್ಲಬೇಕಾಯಿತು. ತನ್ನ ಸೇನೆಯೊಂದಿಗೆ ಸೈಫುದ್ದೀನನ ಸಹಾಯಕ್ಕೆ ಬಂದ ಮಸೂದನನ್ನು ಬಹ್ರೈಚ್ ನ ಪಾಳೆಯಗಾರರೆಲ್ಲಾ ಭಾಕ್ಲಾ ನದಿ ದಂಡೆಯಲ್ಲಿ ಎದುರಿಸಲು ಸಿದ್ಧರಾದರು. ಯುದ್ಧ ಸಿದ್ಧತೆಯಲ್ಲೋ, ವಿಶ್ರಾಂತಿಯಲ್ಲೋ ಇದ್ದ ಸಂಯುಕ್ತ ಪಡೆಯ ಮೇಲೆ  ಮಸೂದ್ ರಾತ್ರಿ ವೇಳೆ ಮುಗಿಬಿದ್ದಾಗ ಎರಡೂ ಪಾಳಯಕ್ಕೂ ಅಪಾರ ಹಾನಿಯುಂಟಾಯಿತು.

                 ಬಹುಪಾಲು ಎಲ್ಲಾ ಸರಹದ್ದುಗಳಲ್ಲೂ ಸೋಲನ್ನುಂಡ ಮಸೂದನಿಗೆ ಬಹ್ರೈಚ್ ಮರಣಸದೃಶವಾಗುವ ಎಲ್ಲಾ ಲಕ್ಷಣಗಳು ಕಾಣಿಸತೊಡಗಿದವು. ಜೂನ್ 13, 1033ರಂದು ಸುಹೈಲ್ ದೇವ್ ತನ್ನ ತಮ್ಮ ಬಹಿರ್ ದೇವನೊಂದಿಗೆ ಬಹ್ರೈಚ್'ನ ಸಂಯುಕ್ತ ಪಾಳಯವನ್ನು ಸೇರಿಕೊಂಡ ನಂತರವಂತೂ ಅದು ನಿಚ್ಚಳವಾಗತೊಡಗಿತು. ಅದಕ್ಕೆ ಸಾಕ್ಷಿಯಾದದ್ದು ಚಿತ್ತೋಡಿನ ಪವಿತ್ರ ಸೂರ್ಯ ಕುಂಡ! ಸುಹೈಲ್ ದೇವ್ ಬಂದುದೇ ತಡ ಸಂಯುಕ್ತ ಸೇನೆಯಲ್ಲಿ ನವೋತ್ಸಾಹ ತುಂಬಿತು. ಸುಹೈಲ್ ದೇವ್ ಗೋಭಕ್ತ ಎನ್ನುವುದನ್ನು ಅರಿತಿದ್ದ ಮಸೂದ್ ತನ್ನ ಸೇನೆಯ ಮುಂಭಾಗದಲ್ಲಿ ಅಸಂಖ್ಯ ಗೋವು, ಎತ್ತುಗಳನ್ನು ನಿಲ್ಲಿಸಿದ್ದ. ಆದರೆ ಅಂತಹ ತಡೆಯನ್ನೂ ಚತುರತೆಯಿಂದ ದಾಟಿದ ಗೋಭಕ್ತ ಸುಹೈಲ್ ದೇವ್. ಐದು ದಿನಗಳವರೆಗೆ ಸಾಗಿತು ಯುದ್ಧ. ಸಂಯುಕ್ತ ಸೇನೆಯ ರಭಸಕ್ಕೆ ಇಸ್ಲಾಮೀ ಸೇನೆ ನಜ್ಜುಗುಜ್ಜಾಯಿತು. ಇಸ್ಲಾಮೀ ದಳಪತಿಗಳೆಲ್ಲಾ ಸತ್ತು ಬಿದ್ದರು. ಏತನ್ಮಧ್ಯೆ ರಾಜಾ ಕರಣ್ ನೇತೃತ್ವದ ಒಂದು ದೊಡ್ಡ ಸೇನಾ ತುಕಡಿ ಮುಸಲ್ಮಾನ ಸೇನೆಯ ಕೇಂದ್ರ ಭಾಗಕ್ಕೇ ನುಗ್ಗಿ ಬಲವಾದ ಹೊಡೆತ ನೀಡಿತು. ಸುಹೈಲ್ ದೇವ್ ಹೂಡಿದ ಬಾಣವೊಂದಕ್ಕೆ ಮಸೂದನ ರುಂಡ ಮುಂಡದಿಂದ ಬೇರ್ಪಟ್ಟು ಪವಿತ್ರ ಸೂರ್ಯಕುಂಡದ ಬಳಿ  ಧರೆಗುರುಳಿತು. ಸೇಡು ತೀರಿಸಿಕೊಳ್ಳಲು ಸಾಲಾರ್ ಇಬ್ರಾಹಿಂ ಸುಹೈಲ್ ದೇವನ ಮೇಲೆ ಪ್ರತಿದಾಳಿ ಎಸಗಿದನಾದರೂ ಏನೂ ಪ್ರಯೋಜನವಾಗಲಿಲ್ಲ. ಹೀಗೆ ಬಹ್ರೈಚ್ ಕದನ ಎರಡು ಶತಮಾನಗಳ ಕಾಲ ಉತ್ತರ ಭಾರತವನ್ನು ಇಸ್ಲಾಮೀ ದಬ್ಬಾಳಿಕೆಯಿಂದ ರಕ್ಷಿಸಿತು.

                    ಯುದ್ಧ ಗೆದ್ದ ನೆನಪಿಗಾಗಿ ಸುಹೈಲ್ ದೇವ್ ಬಹ್ರೈಚ್ ಸುತ್ತಮುತ್ತ ನೀರಿನ ಕೊಳಗಳನ್ನು ಕಟ್ಟಿಸಿದ.  ಬಹ್ರೈಚ್ ಕದನ ತಮ್ಮ ರಾಜ್ಯವನ್ನುಳಿಸಲು ಕೆಲವು ಸಣ್ಣ ಸಂಸ್ಥಾನಗಳ ರಜಪೂತರು ಸಂಘಟಿತರಾಗಿ ನಡೆಸಿದ ಯುದ್ಧ ಮಾತ್ರ ಎಂದು ಮೂಗು ಮುರಿದರೆ ನಿಮ್ಮ ಊಹೆ ತಪ್ಪಾದೀತು. ಈ ಕದನದ ವಿಶೇಷತೆಗಳು ಹಲವು. ವಿದೇಶಿಯನೊಬ್ಬನ ಆಕ್ರಮಣವನ್ನು ಮನಗಂಡು ರಜಪೂತರು ಮಾತ್ರವಲ್ಲದೆ ಎಲ್ಲಾ ಜಾತಿಗಳವರು ಏಕಛತ್ರದೊಳಗೆ ಏಕನಾಯಕತ್ವದಡಿಯಲ್ಲಿ ಮಾತೃಭೂಮಿಯ ರಕ್ಷಣೆಗೆ ಪ್ರಾಣವನ್ನು ಪಣವಾಗಿಟ್ಟು ಹೋರಾಡಿದುದು ಒಂದು. ಮುಸಲ್ಮಾನರ ಅಗಾಧ ಸೇನೆಯನ್ನು ಅನೇಕ ಸಣ್ಣ ರಾಜರುಗಳ ಸಣ್ಣ ಸೈನ್ಯವೊಂದು ಮಣ್ಣು ಮುಕ್ಕಿಸಿದ್ದು ಇನ್ನೊಂದು. ಹಿಂದಿನ ಹಿಂದೂ ರಾಜರುಗಳಂತಲ್ಲದೆ ಶತ್ರು ಸೈನ್ಯವನ್ನು ಯಾವುದೇ ಕನಿಕರ ಅಥವಾ ಭೋಳೆತನಕ್ಕೊಳಗಾಗಿ ಉಳಿಸದೆ ನಿಶ್ಯೇಷವನ್ನಾಗಿಸಿದ್ದು ಮತ್ತೊಂದು. ಮಹಮ್ಮದ್ ಘಜನಿ ಯಾವ ಸೈನ್ಯವನ್ನು ಉಪಯೋಗಿಸಿಕೊಂಡು ಸೋಮನಾಥವನ್ನು ಮತ್ತೆ ಮತ್ತೆ ಧ್ವಂಸ ಮಾಡಿ ದೋಚಿದನೋ ಅಂತಹ ಆಧುನಿಕ ಶೈಲಿಯ ಘಾಜಿ ಸೇನೆಯನ್ನು ಸರ್ವನಾಶಗೈದದ್ದು ಮಗದೊಂದು. ವಿದೇಶಿ ಇತಿಹಾಸಕಾರ ಶೇಖ್ ಅಬ್ದುರಹಮಮಾನ್ ಚಿಸ್ಥಿ ತಾನು ಬರೆದ ಸಾಲಾರ್ ಮಸೂದನ ಜೀವನ ಚರಿತ್ರೆಯಲ್ಲಿ "ಇಸ್ಲಾಮಿನ ಹೆಸರಲ್ಲಿ ಅಯೋಧ್ಯೆಯ ತನಕ ಸಾಗಿದ ಅವನ ಪ್ರಯತ್ನ ವಿಫಲವಾಯಿತು. ಈ ಘನ ಘೋರ ಯುದ್ಧದಿಂದ ಅರಬ್-ಇರಾನುಗಳ ಮನೆಮನೆಯಲ್ಲಿ ಚಿತೆಯ ಬೆಂಕಿ ಉರಿಯುತ್ತಿತ್ತು. ಈ ಆಘಾತದಿಂದ ಬೆಚ್ಚಿದ ಮುಸಲ್ಮಾನರು ಮುಂದಿನ ಇನ್ನೂರು ವರ್ಷಗಳ ಕಾಲ ಭಾರತದತ್ತ ಮುಖ ಮಾಡಲಿಲ್ಲ" ಎಂದಿದ್ದಾನೆ.

                   ಪವಿತ್ರ ಸೂರ್ಯಕುಂಡದ ಬಳಿ ಮಸೂದನ ರುಂಡ ಬಿತ್ತು ಎಂದೆನಷ್ಟೇ, ಈ ಸೂರ್ಯಕುಂಡ ಬಹಳ ಪ್ರಖ್ಯಾತವಾದದ್ದು. ಸೂರ್ಯದೇವಾಲಯದ ಬಳಿಯಲ್ಲಿದ್ದ ಈ ಕುಂಡದ ಪವಿತ್ರ ಜಲಕ್ಕೆ ಕುಷ್ಠರೋಗಾದಿಯಾಗಿ ಅನೇಕ ಚರ್ಮರೋಗ ಗುಣಪಡಿಸುವ ವಿಶೇಷ ಶಕ್ತಿಯಿತ್ತು. ಆದರೆ ಹದಿಮೂರನೇ ಶತಮಾನದಲ್ಲಿ ಅದಕ್ಕೆ ಮತ್ತೆ ಕಂಟಕ ಎದುರಾಯಿತು. ಫಿರೋಜ್ ಷಾ ತುಘಲಕ್ ಈ ಕ್ಷೇತ್ರವನ್ನು ಧ್ವಂಸಗೈದು ಸೂರ್ಯ ದೇವಾಲಯ ಹಾಗೂ ಪವಿತ್ರಕುಂಡವನ್ನು ಬಳಸಿಕೊಂಡು ಗುಮ್ಮಟವೊಂದನ್ನು ನಿರ್ಮಿಸಿದ. ಈ ಆಕ್ರಮಿತ ರಣ ಕ್ಷೇತ್ರ ಮುಸ್ಲಿಮರಿಗೆ ಅಸಂಖ್ಯಾತ ‘ಶಹೀದ’ರ ಬಲಿದಾನವಾದ ‘ಪುಣ್ಯ’ ಕ್ಷೇತ್ರವಾಯಿತು. ಸಾಲಾರ್ ಮಸೂದನ ಸಮಾಧಿಯನ್ನೂ ಅಲ್ಲಿ ನಿರ್ಮಿಸಲಾಯಿತು. ಆತನನ್ನು ಅಫ್ತಾಬ್-ಇ-ಶಹದಾದ್(ಸೂರ್ಯನ ಹುತಾತ್ಮ) ಎಂದು ಕರೆದು ಪೂಜಿಸುವ ಪರಿಪಾಠ ಆರಂಭವಾಯಿತು. ಸೂರ್ಯ ದೇವಾಲಯವನ್ನು ನಾಶಮಾಡಿ ಅದರ ಅವಶೇಷಗಳನ್ನುಪಯೋಗಿಸಿಕೊಂಡು ದರ್ಗಾವೊಂದನ್ನು ಮಾಡಿ ಅದಕ್ಕೆ "ಹೊಜ್ ಶಂಶಿ" ಎನ್ನುವ ಪರ್ಷಿಯನ್ ಹೆಸರಿಡಲಾಯಿತು. ಸಾಲಾರ್ ಮಸೂದ್ ಎನ್ನುವ ಶಾಪಗ್ರಸ್ಥ "ಧೀರ" ಹುಡುಗ ಅವಿವಾಹಿತನಾಗಿ ದಾರುಣ ಸಾವು ಕಂಡು "ಹುತಾತ್ಮ"ನಾದನೆಂದೂ, ಅವನೊಬ್ಬ "ಸ್ವಾತಂತ್ರ್ಯ ಹೋರಾಟಗಾರ"ನೆಂದೂ, ಸುಹೈಲ್ ದೇವ್ ಎನ್ನುವ ದುಷ್ಟ ರಾಜ ಅವನನ್ನು ಕೊಂದನೆಂದೂ ಕಥೆ ಕಟ್ಟಲಾಯಿತು. ಇದು ಮತಾಂತರದ ಮತ್ತೊಂದು ದಾರಿ ಅಷ್ಟೇ. ಈ ಮುಲ್ಲಾಗಳ ಮೌಢ್ಯ ಎಲ್ಲಿಯವರೆಗೆ ಮುಟ್ಟಿತೆಂದರೆ ಜೋರಾಗಿ ಗಾಳಿ ಬೀಸಿದರೆ ಸುಹೈಲ್ ದೇವನ “ದುಷ್ಟ“ ಆತ್ಮ ಒಳ ಪ್ರವೇಶಿಸದಂತೆ ದರ್ಗಾವನ್ನು ಕಬ್ಬಿಣದ ದ್ವಾರದಿಂದ ಮುಚ್ಚಿ ಸರಪಳಿಯಿಂದ ಬಿಗಿಯುವಂತಹ ಸಂಪ್ರದಾಯವೂ ಬೆಳೆದು ಬಂತು! ಈ ದರ್ಗಾಕ್ಕೆ ಚಾದರ ಅರ್ಪಿಸುವ ಮತಿಗೇಡಿ ಹಿಂದೂಗಳು ಇದ್ದಾರೆ. ಬಹ್ರೈಚ್ ಕ್ಷೇತ್ರದಲ್ಲಿ ಮಸೂದ್ ಇಂದಿಗೂ ಗಾಜಿಯ ಹೆಸರಲ್ಲಿ ಪೂಜಿಸಲ್ಪಡುತ್ತಿದ್ದಾನೆ. ಹಾಗೂ ಅವನನ್ನು ಪೂಜಿಸುವವರಲ್ಲಿ ಹೆಚ್ಚಿನವರು ಹಿಂದೂಗಳೇ! ಪ್ರತಿವರ್ಷ ಅಲ್ಲಿ ನಡೆವ ಉರೂಸ್'ನಲ್ಲಿ ಲಕ್ಷಾಂತರ ಹಿಂದೂಗಳು ಭಾಗವಹಿಸುತ್ತಾರೆ. ಹಿಂದೂವಿನ ಭೋಳೇತನ ಅಂದರೆ ಇದೇ! ತನ್ನನ್ನು, ತನ್ನ ಗರ್ಭಗುಡಿಯನ್ನು, ಮಾತೃಭೂಮಿಯನ್ನು ಸುಡಲು ಬಂದವನನ್ನು ಆರಾಧಿಸುವುದು!

                    ಆದರೂ ಹಿಂದೂಗಳು ಸೂರ್ಯನ ಆರಾಧನೆ ಬಿಟ್ಟಿಲ್ಲ. ಸೂರ್ಯಕುಂಡದ ಔಷಧೀಯ ಗುಣವೂ ಅವರನ್ನು ಇತ್ತ ಸೆಳೆಯುತ್ತಲೇ ಇದೆ. ಸುಹೈಲ್ ದೇವನ ನೆನಪು ಸ್ಥಳೀಯ ಜನಮಾನಸದಲ್ಲಿ ಮತ್ತು ಬೈಸ್ ಪಂಗಡದವರಲ್ಲಿ ಅಚ್ಚಳಿಯದೆ ಉಳಿದಿದೆ. ಕ್ರಿ.ಶ. 1950ಕ್ಕೆ ಮುಂಚೆಯೇ ಆ ಸ್ಥಳವನ್ನು ಮರಳಿ ಪಡೆಯಲು ಚಳವಳಿ ನಡೆದಿತ್ತು. ಇದಕ್ಕಾಗಿ ಚಿತ್ತೋರಾದಲ್ಲಿ ನಡೆಯಲಿದ್ದ ಒಂದು ಜಾತ್ರೆಗೆ ಅನುಮತಿಯನ್ನು ನಿರಾಕರಿಸಿ ಅಲ್ಲಿನ ಜಿಲ್ಲಾಧಿಕಾರಿ ಸೆಕ್ಷನ್ 144 ಜಾರಿ ಮಾಡಿದ್ದ. ನಂತರದ ಕಾಂಗ್ರೆಸ್ ಆಡಳಿತದಲ್ಲೂ ಇದರ ಪುನರಾವರ್ತನೆಯಾಯಿತು. ಪ್ರಯಾಗ್ ಪುರದ ಸ್ಥಳೀಯ ರಾಜಾ ಸಾಹಬ್, ಸುಹೈಲ್ ದೇವ್ ಸ್ಮಾರಕ್ ಸಮಿತಿಗೆ 500 ಬೀಘಾ ಭೂಮಿ ಹಾಗೂ ಧನ ದಾನಗೈದು ಸುಹೈಲ್ ದೇವನ ಪ್ರತಿಮೆಯನ್ನು ಸ್ಥಾಪಿಸಿದ. ಆ ಅಪ್ರತಿಮ ವೀರನಿಗೆ ದೇಗುಲವೂ ನಿರ್ಮಿಸಲ್ಪಟ್ಟಿತು. ವಿಜಯೋತ್ಸವ ಆಚರಣೆಯಲ್ಲಿ ಹವನ, ಸಾರ್ವಜನಿಕ ಸಮಾರಂಭಗಳೂ ಜರುಗಿದವು . ನವರಾತ್ರಿಯ ಸಾಂಪ್ರದಾಯಿಕ ಪೂಜೆಗಳೂ ಪುನರಾರಂಭಗೊಂಡವು. ವಸಂತ್ ಪಂಚಮಿಯ ದಿನ ಸುಹೈಲ್ ದೇವನ ರಾಜ್ಯಾಭಿಷೇಕವನ್ನು ದೊಡ್ಡ ಜಾತ್ರೆ ಆಯೋಜಿಸಿ ವಿಜೃಂಭಣೆಯಿಂದ ಆಚರಿಸುಲಾಗುತ್ತಿದೆ.  1960ರ ತರುವಾಯ ಸುಹೈಲ್ ದೇವನ ಹೆಸರನ್ನು ರಾಜಕಾರಣಿಗಳೂ ಬಿಚ್ಚು ಮಾತಿನಲ್ಲಿ ಬಳಸಲಾರಂಭಿಸಿದರು. ಈಗ ಎಲ್ಲಾ ರಾಜಕೀಯ ಪಕ್ಷಗಳೂ ಬೈಸ್ ಪಂಗಡದವರ ಓಟನ್ನು ಗಿಟ್ಟಿಸಲು ಸುಹೈಲ್ ದೇವನ ಹೆಸರನ್ನೇ ಗಾಳವಾಗಿ ಬಳಸುತ್ತಾರೆ . ಬಿ ಎಸ್ ಪಿ ಅಧಿಕಾರಕ್ಕೆ ಬಂದಾಗಲಂತೂ ದಲಿತರ ಮಹಾನತೆಯನ್ನು ಎತ್ತಿಹಿಡಿಯಲೆಂದು ರಾಜ್ಯದೆಲ್ಲೆಲ್ಲಾ ಸುಹೈಲ್ ದೇವನ ಪ್ರತಿಮೆಗಳನ್ನೇ ಸ್ಥಾಪಿಸಿತು. ಹೀಗೆ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದವನ ಹೆಸರು ಇತಿಹಾಸಕಾರರಿಗೆ ಬೇಡವಾಯಿತು. ಒಂದು ಕಾಲದಲ್ಲಿ ನೆನಪೇ ಮಾಡಿಕೊಳ್ಳದ ರಾಜಕಾರಣಿಗಳ ಓಟು ಬ್ಯಾಂಕಿಗೆ ಬಂಡವಾಳವಾಯಿತು. ಓಟುಬ್ಯಾಂಕಿಗೋಸ್ಕರವೇ ಆತನ ಜಾತಿಯನ್ನೂ ಬದಲಾಯಿಸಲಾಯಿತು. ಸತ್ತ ಮೇಲೂ ಜಾತಿ ಬದಲಾಯಿಸಲ್ಪಟ್ಟ ರಾಜ ಬಹುಷಃ ಅವನೊಬ್ಬನೇ! ಯಾವ ಧೀರ ಮಾತೃಭೂಮಿಯ ರಕ್ಷಣೆಗಾಗಿ ಸರ್ವರನ್ನೂ ಒಗ್ಗೂಡಿಸಿಕೊಂಡು ಪ್ರಾಣವನ್ನು ಪಣವಾಗಿಟ್ಟು ಕ್ಷತ್ರಿಯೋಚಿತವಾಗಿ ಹೋರಾಡಿ ಆಕ್ರಮಕ ಮುಸಲರ ಸೊಕ್ಕಡಗಿಸಿ, ದಿವ್ಯ ಸೋಮನಾಥದ ಗೌರವ ಉಳಿಸಿ, ಅಯೋಧ್ಯೆ, ಮಥುರಾ, ಕಾಶಿಗಳ ಪಾವಿತ್ರ್ಯವನ್ನು ರಕ್ಷಿಸಿ, ಎರಡು ಶತಮಾನಗಳ ಕಾಲ ಮುಸಲರು ಇತ್ತ ತಲೆ ಹಾಕದಂತೆ ಮಾಡಿದನೋ ಅಂತಹಾ ಮಹಾಪುರುಷನಿಗೆ ಭಾರತ ಗೌರವ ನೀಡುವ ಪರಿಯೇ...!




ಆ ಮುಗುದೆ

ಆ ಮುಗುದೆ

ಅರಳುತಿಹ ಕೆಂದಾವರೆಯ ಎಳೆಯ
ದಳಗಳ ಮುತ್ತಿಕ್ಕಿದ ಶುಭ್ರ ಸ್ಪಟಿಕ
ಬಿರಿದ ಗುಲಾಬಿಯ ಸೋಕಿದ ಮುತ್ತಿನ ಹನಿ
ಮಲ್ಲಿಗೆಯ ಸೊಂಪು ಸಿರಿ ಸಂಪಿಗೆಯ ಕಂಪು
                      -- ಆ ಮುಗುದೆ॥

ಉಲ್ಲಸಿತ ಪಲ್ಲವಿಸುತಿಹ ಸೂರ್ಯರಶ್ಮಿ
ಕುರುಳನರಳಿಸುವ ಮಂದಾನಿಲ
ಹಸಿರ ಹೊದ್ದ ಮುಂಜಾವ ಮಂಜು
ಏಕ ನಿನಾದದೊಳು ತಾ ಮೆರೆವ ನಿರ್ಮಲ ಜಲಧಿ
                        -- ಆ ಮುಗುದೆ॥

ಹೊತ್ತು ಕಂತುವ ಹೊತ್ತ ಬಾನ ವರ್ಣವು ಮೊಗದಿ
ಗೂಡ ಸೇರುತಿಹ ಬಾನಾಡಿಗಳ ನಡುವೆ ಬೆದರಿದ ಹರಿಣಿ
ಚಕ್ರಗಳ ಸ್ವಾಧೀನಗೊಳಿಸಿದ ಸುಷುಮ್ನಾವಸ್ಥೆಯ ಯೋಗಿ
ನಿಶೆಯ ನಶೆಗೆ ಜಾರುತಿಹ ಬೆಳದಿಂಗಳ ಬಾಲೆ
                         -- ಆ ಮುಗುದೆ॥