ಪುಟಗಳು

ಮಂಗಳವಾರ, ಆಗಸ್ಟ್ 1, 2017

ರೋಹಿಂಗ್ಯಾಗಳೇಕೆ ಬೇಕು? ನಾವು ಮಂಗ್ಯಾಗಳಾಗದಿದ್ದರೆ ಸಾಕು!

ರೋಹಿಂಗ್ಯಾಗಳೇಕೆ ಬೇಕು? ನಾವು ಮಂಗ್ಯಾಗಳಾಗದಿದ್ದರೆ ಸಾಕು!


             ಬರ್ಮಾದಿಂದ ಭಾರತದೊಳಕ್ಕೆ ನುಸುಳುವ ನಿರಾಶ್ರಿತ ರೋಹಿಂಗ್ಯಾಗಳು ನೇರವಾಗಿ ಕಾಲಿಡುವುದು ಕಾಶ್ಮೀರಕ್ಕೆ! ಎಲ್ಲಿಯ ಬ್ರಹ್ಮದೇಶ(ಬರ್ಮಾ) ಎಲ್ಲಿಯ ಕಾಶ್ಮೀರ? ಬರ್ಮಾದ ಜೊತೆ ಗಡಿಯನ್ನು ಹಂಚಿಕೊಂಡಿರುವುದು ಮಿಝೋರಾಂ, ಮಣಿಪುರ, ನಾಗಾಲ್ಯಾಂಡ್ ಹಾಗೂ ಅರುಣಾಚಲ ಪ್ರದೇಶಗಳೆಂಬ ಭಾರತದ ಈಶಾನ್ಯ ರಾಜ್ಯಗಳು. ಬರ್ಮಾದಿಂದ ಮೂರುಸಾವಿರಕ್ಕೂ ಹೆಚ್ಚು ಕಿಲೋಮೀಟರ್ ದೂರದಲ್ಲಿರುವ ಕಾಶ್ಮೀರಕ್ಕೇ ಈ ರೋಹಿಂಗ್ಯಾಗಳು ಬಂದಿಳಿಯಬೇಕಾದರೆ ಅದರ ಹಿಂದಿನ ಮರ್ಮವಾದರೂ ಏನು? ಅರೇ... ಕಾಶ್ಮೀರಿ ಪಂಡಿತರ ಕಗ್ಗೊಲೆ, ಅತ್ಯಾಚಾರ; ಪ್ರತ್ಯೇಕತಾವಾದ, ಸೇನೆಯ ಮೇಲೆ ಕಲ್ಲು ತೂರಾಟ; ಭಯೋತ್ಪಾದನೆ, ಪಾಕಿಸ್ತಾನ ಪರ ಘೋಷಣೆಗಳಿಂದಲೇ ನರಕವಾಗಿದ್ದ ಧರೆಯ ಮೇಲಿನ ಸ್ವರ್ಗದಲ್ಲಿ ಇದೇನಿದು ರೋಹಿಂಗ್ಯಾಗಳೆಂಬ ಹೊಸ ಸುದ್ದಿ? ಅಷ್ಟಕ್ಕೂ ಈ ರೋಹಿಂಗ್ಯಾಗಳೆಂದರೆ ಯಾರು? ಇದೆಲ್ಲಾ ತಿಳಿಯಬೇಕಾದರೆ ಗತಕಾಲಕ್ಕೋಡಬೇಕು.

           ಬಿಬಿಸಿಯಂತಹ ಸುದ್ದಿ ಮಾಧ್ಯಮಗಳು, ಇಸ್ಲಾಮಿನ ಪಾದ ನೆಕ್ಕುವ ಹುಸಿ ಜಾತ್ಯಾತೀತವಾದಿಗಳು ಹಾಗೂ ಅನ್ಯ ಭಾಗದ ಮುಸ್ಲಿಮರು ಬೊಬ್ಬಿರಿಯುವಂತೆ ರೋಹಿಂಗ್ಯಾಗಳು ಬರ್ಮಾದ ಮೂಲನಿವಾಸಿಗಳೂ ಅಲ್ಲ, ನಶಿಸುತ್ತಿರುವ ಬರ್ಮಾದ ಬುಡಕಟ್ಟು ಜನಾಂಗವೂ ಅಲ್ಲ. ಅವರೆಲ್ಲಾ ಹೊರಗಿನಿಂದ ವಲಸೆ ಬಂದವರು. ಬರ್ಮಾದ ಬೌದ್ಧರ ಈ ಮಾತುಗಳಲ್ಲಿ ಸುಳ್ಳೇನೂ ಇಲ್ಲ. 15ನೇ ಶತಮಾನದ ಬರ್ಮಾದ ರಾಜ ಮಿನ್ ಸಾ ಮೋನ್ ದೇಶಭ್ರಷ್ಟನಾಗಿ 24 ವರ್ಷ ಬಂಗಾಳದಲ್ಲಿ ಕಳೆದು ಬಳಿಕ ಮತ್ತೆ ರಾಜ್ಯ ಪಡೆದಾಗ ಆತನೊಂದಿಗೆ ಕೆಲ ಮುಸ್ಲಿಮರು ಬರ್ಮಾಗೆ ತೆರಳಿದರು. ಇದು ಆ ಬೌದ್ಧರ ನೆಲಕ್ಕೆ ಜಿಹಾದಿಗಳ ಮೊದಲ ಮುಕ್ತ ಪ್ರವೇಶ! ಬಂಗಾಳಕೊಲ್ಲಿಯ ಪೂರ್ವಭಾಗದ ರಖಾಯಿಂಗ್ ಎನ್ನುವ ಪ್ರದೇಶ ಐತಿಹಾಸಿಕ ಬೌದ್ಧ ನೆಲ. ಹೇರಳ ಪ್ರಾಕೃತಿಕ ಸಂಪನ್ಮೂಲಗಳಿಂದ ಕೂಡಿದ್ದ, ಆಯಕಟ್ಟಿನ ವ್ಯಾಪಾರ ಸ್ಥಳವಾಗಿದ್ದ ಅಖಂಡ ಭಾರತದ ಈ ಭೂಭಾಗ ಬ್ರಿಟಿಷರ ಕಣ್ಣು ಕುಕ್ಕಿತು. ಬ್ರಿಟೀಷ್ ಆಕ್ರಮಣವಾದೊಡನೆ ಕೇವಲ ರಖಾಯಿಂಗ್'ನ ಹೆಸರು ಅರಖಾನ್ ಎಂದು ಬದಲಾದುದು ಮಾತ್ರವಲ್ಲ, ಬರ್ಮಾದ ಸಂಪದ್ಭರಿತ ಅರಣ್ಯಗಳಲ್ಲಿದ್ದ ಬೆಲೆಬಾಳುವ ಮರಗಳು ಇದೇ ಅರಖಾನ್ ಮುಖಾಂತರ ಚಿತ್ತಗಾಂಗ್ ಸೇರಿ ಇಂಗ್ಲೆಂಡಿಗೆ ರವಾನೆಯಾಗಲಾರಂಭಿಸಿತು. ಬ್ರಿಟಿಷರ ಈ "ನಾಟಾ" ನಾಟಕಕ್ಕೆ ಮಾತ್ರವಲ್ಲದೆ ಬರ್ಮಾದ ಕೃಷಿ ಕೆಲಸಕ್ಕೆ ನೆರವಾಗುತ್ತಿದ್ದವರು ಬಂಗಾಳದ ಕೂಲಿ ಕಾರ್ಮಿಕರೇ! ಇವರಲ್ಲಿ ಚಿತ್ತಗಾಂಗಿನ ಮುಸಲ್ಮಾನರ ಸಂಖ್ಯೆಯೇ ಹೆಚ್ಚು. ಕೆಲವರು ಉದ್ಯೋಗದ ಅನುಕೂಲಕ್ಕಾಗಿ ಅಲ್ಲೇ ನೆಲೆ ನಿಂತರು. ಬೆರಳು ಕೊಟ್ಟರೆ ಹಸ್ತ ನುಂಗುವ ಬುದ್ಧಿಯ ಮುಸಲ್ಮಾನರು ಕ್ರಮೇಣ ಹಿಂಡುಹಿಂಡಾಗಿ ಬರ್ಮಾಕ್ಕೆ ವಲಸೆ ಹೋಗತೊಡಗಿದರು. ಈ ವಲಸೆಯ ಪ್ರಮಾಣ ಎಷ್ಟೊಂದು ತೀವ್ರವಾಗಿತ್ತೆಂದರೆ 1940ರ ದಶಕದಲ್ಲಿ “ದಿ ಸ್ಟೇಟ್ಸ್ ಮೆನ್” ಚಿತ್ತಗಾಂಗಿನ ಹತ್ತನೇ ಒಂದರಷ್ಟು ಜನ ಪ್ರತಿವರ್ಷ ಅರೆಖಾನ್'ಗೆ ವಲಸೆ ಹೋಗುತ್ತಾರೆ ಎಂದು ಆತಂಕ ವ್ಯಕ್ತಪಡಿಸಿತ್ತು. ಬೌದ್ಧ ಎಷ್ಟೆಂದರೂ ಹಿಂದೂ ಧರ್ಮದ ಒಂದು ಪಂಥವೇ. ಬೌದ್ಧರಾದವರಿಗೆ ಹಿಂದೂ ಭೋಳೆ ಸ್ವಭಾವ ಬಿಟ್ಟು ಹೋಗಲು ಹೇಗೆ ಸಾಧ್ಯ. ಸಹಜವಾಗಿಯೇ ಅವರು ಸಹಾನುಭೂತಿಯಿಂದ ಮುಸ್ಲಿಮರ ಕಾಪಟ್ಯವನ್ನು ಅರಿಯದೇ, ಭವಿಷ್ಯದ ಕರಾಳತೆಯನ್ನು ಅರ್ಥೈಸದೇ ಬಂದವರಿಗೆ ಅನ್ನ ಕೊಟ್ಟರು, ಉಳಿವಿಗೆ ಜಾಗ ಕೊಟ್ಟರು. ಹೀಗೆ ಅಂದು ವಲಸೆ ಹೋದವರೇ ಈ ರೋಹಿಂಗ್ಯಾ ಮುಸಲ್ಮಾನರು.

           ಅಹಿಂಸೆಯನ್ನು ಪ್ರತಿಪಾದಿಸುವ ಜನರ ನಾಡೇನೋ ಆಶ್ರಯ ಕೊಟ್ಟಿತು. ಆದರೆ ಈ ಜನ ಅದನ್ನು ಉಳಿಸಿಕೊಳ್ಳಲಿಲ್ಲ. ಉಳಿಸಿಕೊಳ್ಳುವ ಮನಸ್ಸಿದ್ದರೂ ಅವರಿಗಂಟಿರುವ ಮತ ಬಿಡಬೇಕಲ್ಲ? ಕ್ರಮೇಣ ಅಲ್ಲಿ ಮಸೀದಿಗಳು ತಲೆಯೆತ್ತಲಾರಂಭಿಸಿದವು. ಎಷ್ಟೆಂದರೆ ನಲವತ್ತು ಜನರ ಸಣ್ಣ ಗುಂಪಿಗೂ ಒಂದು ಮಸೀದಿ! ಅಲ್ಲಿಂದ ದಿನ ಬೆಳಗಾದರೆ ಕಾಫಿರರನ್ನು ಕೊಲ್ಲಿರಿ ಎಂಬ ಸುಪ್ರಭಾತ ಕೇಳಿ ಬರಲಾರಂಭಿಸಿತು. ಯಾವ ಮಾಲಿಕ ಕೆಲಸ ಕೊಟ್ಟನೋ ಆತನ ಜಾಗವನ್ನೇ ಈ ರೋಹಿಂಗ್ಯಾಗಳು ತಮ್ಮದಾಗಿಸಿಕೊಂಡರು. ವಿರೋಧಿಸಿದ ಮಾಲಿಕನನ್ನು ಹತ್ಯೆಗೈದರು. ಆತನ ಪರಿವಾರದ ಹೆಂಗಳೆಯರ ಮೇಲೆ ಅತ್ಯಾಚಾರಗೈದರು. ಆತನ ಮಗಳನ್ನು ಹೊತ್ತೊಯ್ದರು. ಮುಸ್ಲಿಂ ರಾಷ್ಟ್ರೀಯವಾದ ಮೊಳೆಯಲಾರಂಭಿಸಿತು. ಜಿನ್ನಾನ ದ್ವಿರಾಷ್ಟ್ರವಾದ ಅವರಿಗೆ ಪ್ರಿಯವಾಯಿತು. ಭಾರತದ ವಿಭಜನೆಯ ಸಮಯದಲ್ಲಿ ಆದ ಇತಿಹಾಸದ ಬಹು ದೊಡ್ಡ ಭಯಾನಕ ಕಗ್ಗೊಲೆಯಲ್ಲೇ ಪಾತ್ರವಹಿಸಿ ಹಿಂದೂಗಳ ಜೀವ ತಿಂದರು. ಬರ್ಮಾ ಸ್ವಾತಂತ್ರ್ಯ ಹೊಂದುವ ಹೊಸ್ತಿಲಲ್ಲಿ ಇದೇ ರೋಹಿಂಗ್ಯಾಗಳು ಅರಖಾನ್ ಪ್ರಾಂತ್ಯವನ್ನು ಬಾಂಗ್ಲಾದೇಶಕ್ಕೆ ಸೇರಿಸಬೇಕೆಂಬ ಬೇಡಿಕೆಯಿಟ್ಟು ದಂಗೆಯನ್ನಾರಂಭಿಸಿದರು.  ಬರ್ಮಾ ಸರ್ಕಾರ ಒಲ್ಲೆ ಎಂದಾಗ ಜಿನ್ನಾನ ಜೊತೆ ಮಾತುಕತೆ ನಡೆಸಿ ಬರ್ಮಾ ಸರ್ಕಾರದ ವಿರುದ್ಧ ಜಿಹಾದ್ ಘೋಷಿಸಿದರು. ಈ ಭಾಗದಲ್ಲಿ ಸಶಸ್ತ್ರ ಬಂಡುಕೋರರ ಉಪಟಳ ಹೆಚ್ಚುತ್ತಿದ್ದಂತೆ ಸ್ಥಳೀಯ ಬೌದ್ಧ ಸಮುದಾಯವು ಆ ಪ್ರದೇಶವನ್ನು ತೊರೆದು ಹೋಯಿತು. ಹೆಚ್ಚು ಕಮ್ಮಿ ಉತ್ತರ ಅರಖಾನ್ ಪ್ರಾಂತ್ಯವನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡ ಬಂಡುಕೋರರು ಬಾಂಗ್ಲಾದೇಶದಿಂದ ಮತ್ತಷ್ಟು ಮುಸ್ಲಿಮರನ್ನು ಕರೆತರಲಾರಂಭಿಸಿದರು. ಹೀಗೆ ಆಶ್ರಯ ಬೇಡಿಕೊಂಡು ಹೋದವರು ಪ್ರತ್ಯೇಕ ದೇಶವನ್ನೇ ಕೇಳಲಾರಂಭಿಸಿದರು. ಪ್ರತ್ಯೇಕ ರೋಹಿಂಗ್ಯಾ ಚಳವಳಿಯಲ್ಲಿದ್ದ ಕೆಲವು ಯುವಕರು ತಾಲೀಬಾನಿನಲ್ಲೂ ಕಂಡುಬಂದರು. ಮುಂದೆ ಕಾಶ್ಮೀರ ಮತ್ತು ಪ್ಯಾಲೆಸ್ಟೈನ್ ಉಗ್ರರ ಜೊತೆ ನಂಟಿರುವುದೂ ಹೊರಬಂತು.

              ಯಾವಾಗ ರೋಹಿಂಗ್ಯಾಗಳು ಪ್ರತ್ಯೇಕ ದೇಶ ಕೇಳಲಾರಂಭಿಸಿದರೋ ಅಹಿಂಸಾವಾದಿ ಬೌದ್ಧರೂ ಎಚ್ಚೆತ್ತರು. ರಖಾಯಿಂಗ್ ಪ್ರಾಂತ್ಯದಿಂದ ಮೂಲನಿವಾಸಿಗಳಾದ ತಮ್ಮವರನ್ನು ರೋಹಿಂಗ್ಯಾಗಳು ಒದ್ದೋಡಿಸುತ್ತಿರುವ ಸುದ್ದಿಯನ್ನು ಪದೇ ಪದೇ ಕೇಳಿ ಬರ್ಮೀಯರು ರೊಚ್ಚಿಗೆದ್ದರು. ರೋಹಿಂಗ್ಯಾಗಳ ಕ್ರೌರ್ಯದ ವಿರುದ್ಧ ಅರಕಾನಿನ ಬೌದ್ಧ ಭಿಕ್ಕುಗಳು ರಂಗೂನಿನಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿದರು. ಬರ್ಮಾ ಸರಕಾರ ಸೇನೆಯನ್ನು ಬಳಸಿಕೊಂಡು ರೋಹಿಂಗ್ಯಾಗಳನ್ನು ಹತ್ತಿಕ್ಕಲು ಪ್ರಯತ್ನಿಸಿತು. ಆದರೆ ಅದು ರಕ್ತಬೀಜಾಸುರನ ವಂಶವಿರಬೇಕು. ಹಲವು ಬಾರಿ ಸೇನಾ ಕಾರ್ಯಾಚರಣೆ ನಡೆದರೂ ರೋಹಿಂಗ್ಯಾ ಪಡೆ ಮತ್ತೆ ಮತ್ತೆ ಹುಟ್ಟುತ್ತಲೇ ಬೆಳೆಯುತ್ತಲೇ ಸಾಗಿತು. ಈ ನಡುವೆ ರೋಹಿಂಗ್ಯಾಗಳು ತಮ್ಮ ಆರ್ಥಿಕ ಅಗತ್ಯಕ್ಕಾಗಿ ಗಡಿಯಲ್ಲಿ ಅಕ್ಕಿ, ಶಸ್ತ್ರಾಸ್ತ್ರ, ಮಾದಕವಸ್ತುಗಳ  ಕಳ್ಳಸಾಗಣೆಯನ್ನೂ ಆರಂಭಿಸಿದರು. 1971ರ ಬಾಂಗ್ಲಾ ವಿಮೋಚನಾ ಯುದ್ಧದ ವೇಳೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಸಂಗ್ರಹಿಸಿದ ರೋಹಿಂಗ್ಯಾಗಳು ರೊಹಿಂಗ್ಯಾ ಲಿಬರೇಷನ್ ಪಾರ್ಟಿ ಎಂಬ ಪಕ್ಷವನ್ನೇ ಹುಟ್ಟುಹಾಕಿದರು. ರೋಹಿಂಗ್ಯಾ ಭಯೋತ್ಪಾದಕರ ಪರ ಮಾತಾಡುವ ಭಾಷಣಕಾರರು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಕಾಣಿಸಿಕೊಳ್ಳಲಾರಂಭಿಸಿದರು. ವಕೀಲ ನೂರುಲ್ ಇಸ್ಲಾಂ ಮತ್ತು ವೈದ್ಯರಾಗಿದ್ದ ಮೊಹಮದ್ ಯೂನುಸ್ ಇವರಲ್ಲಿ ಪ್ರಮುಖರು. 1980ರ ಬಳಿಕ ರೋಹಿಂಗ್ಯಾಗಳಿಗೆ ವಿಶ್ವದ ವಿವಿಧ ಮುಸ್ಲಿಂ ಸಂಘಟನೆಗಳಿಂದ ಬೆಂಬಲ ದೊರೆಯಲಾರಂಭಿಸಿತು. ತಾಲಿಬಾನ್, ಅಲ್ ಖೈದಾಗಳಂತ ಭಯೋತ್ಪಾದಕ ಸಂಘಟನೆಗಳಲ್ಲದೆ ಹಲವು ಸಿರಿವಂತ ಮುಸ್ಲಿಂ ದೇಶಗಳು ತೆರೆಮರೆಯಲ್ಲಿ ಬಂಡುಕೋರರಿಗೆ ಬೆಂಬಲ ಕೊಟ್ಟವು. ಆದರೆ ಅಹಿಂಸಾ ಪ್ರತಿಪಾದಕರಾದರೂ ಬರ್ಮಾದ ಬೌದ್ಧರು ಇದಕ್ಕೆಲ್ಲಾ ಬೆದರಲಿಲ್ಲ. ಸುಮ್ಮನಿದ್ದೂ ಬಿಡಲಿಲ್ಲ. ಮುಗುಮ್ಮಾಗುಳಿಯಲು ಅವರೇನು ಭಾರತೀಯರೇ? ಬರ್ಮಾ ಸೈನ್ಯ ತನ್ನ ಕಾರ್ಯಾಚರಣೆಯನ್ನು ತೀವ್ರಗೊಳಿಸಿತು. ರೋಹಿಂಗ್ಯಾಗಳಿಗೆ ಪೌರತ್ವ ಕೊಡಿ ಎಂದ ಯು.ಎನ್.ಓ ಮಾತಿಗೂ ಅದು ಸೊಪ್ಪು ಹಾಕಲಿಲ್ಲ. ಇಲ್ಲಿರಬೇಕಾದರೆ ಬಂಗಾಳಿ ಅಂತ ಗುರುತಿಸಿಕೊಳ್ಳಿ ಎಂದು ಕಟ್ಟುನಿಟ್ಟಾಗಿ ರೋಹಿಂಗ್ಯಾಗಳಿಗೆ ಆಜ್ಞಾಪಿಸಿತು.

                 ಅನ್ನ ಕೊಟ್ಟ ಮನೆಗೆ ಕನ್ನ ಹಾಕಲು ಯತ್ನಿಸಿ ಪೆಟ್ಟು ತಿಂದ ಮೇಲೆ ಹತಾಶೆಗೊಂಡ ರೋಹಿಂಗ್ಯಾಗಳು ಈಗ ಅಕ್ಕಪಕ್ಕದ ದೇಶಗಳಿಗೆ ನುಗ್ಗಲಾರಂಭಿಸಿದ್ದಾರೆ. ಹದಿನೈದು ಲಕ್ಷಕ್ಕೂ ಹೆಚ್ಚು ರೋಹಿಂಗ್ಯಾಗಳು ನೆರೆಯ ರಾಷ್ಟ್ರಗಳಿಗೆ ಪಲಾಯನಗೈದಿದ್ದಾರೆ. 2016 ಕೊನೆಯ ಮೂರು ತಿಂಗಳಲ್ಲೇ 21000 ರೋಹಿಂಗ್ಯಾಗಳು ಬಾಂಗ್ಲಾದೇಶಕ್ಕೆ ನುಗ್ಗಿದ್ದರೆಂದರೆ ರೋಹಿಂಗ್ಯಾಗಳ ವಲಸೆಯ ಪ್ರಮಾಣವನ್ನು ಊಹಿಸಬಹುದು. ಎಲ್ಲಾ ನಿರಾಶ್ರಿತರಿಗೂ ಆಪ್ಯಾಯಮಾನ ರಾಷ್ಟ್ರವಾಗಿರುವುದು ಭಾರತವೇ. ಇಲ್ಲಿ ಕೇಳುವವರಿಲ್ಲ, ಹೇಳುವವರಿಲ್ಲ! ಈಗ ರೋಹಿಂಗ್ಯಾಗಳೂ ಬಾಂಗ್ಲಾ ಮೂಲಕ ನುಸುಳಿಕೊಂಡು ಭಾರತದೊಳಗೆ ಬರುತ್ತಿದ್ದಾರೆ. ಈ ನುಸುಳುಕೋರರು ಈಗಾಗಲೇ ದೆಹಲಿ, ಜಮ್ಮು, ಬಂಗಾಲ, ಬಿಹಾರ, ತೆಲಂಗಾಣಗಳಲ್ಲಿ ಬೀಡು ಬಿಟ್ಟಿದ್ದಾರೆ. ಕಾಶ್ಮೀರದಿಂದ ಹೊರದಬ್ಬಿರುವ ಲಕ್ಷೋಪಲಕ್ಷ ಕಾಶ್ಮೀರಿ ಹಿಂದೂಗಳ ಪುನರ್ವಸತಿಗಾಗಿ ಯಾವುದೇ ಯೋಜನೆಯನ್ನು ಹಮ್ಮಿಕೊಳ್ಳದೆ ರೋಹಿಂಗ್ಯಾ ಸಮುದಾಯಕ್ಕೆ ಜಮ್ಮುವಿನಲ್ಲಿ ವಸತಿಗಾಗಿ ಭೂಮಿಯನ್ನು ನೀಡಲಾಗಿದೆ. ಈಗಾಗಲೇ ಇವರಿಗೆ ಆಧಾರ್ ಹಾಗೂ ಮತದಾರ ಗುರುತಿನ ಚೀಟಿಯನ್ನು ಕೊಡಲಾಗಿದೆ. ಇದಕ್ಕೆ ಕಾರಣರಾರು ಎಂದು ನೋಡ ಹೊರಟರೆ ಆ ದೃಷ್ಟಿ ನೇರ ಅಬ್ದುಲ್ಲಾ ಕುಟುಂಬದತ್ತ ಹೊರಳುತ್ತದೆ. ಅಲ್ಲಿಗೆ ದೇಶದೊಳಕ್ಕೆ ನುಸುಳುವ ರೋಹಿಂಗ್ಯಾಗಳು ಕಾಶ್ಮೀರದಲ್ಲೇ ನೆಲೆ ನಿಲ್ಲುವುದೇಕೆ ಎನ್ನುವುದರ ಅರಿವಾಗಬಹುದು. ಜಮ್ಮು ಕಾಶ್ಮೀರದ ಸರ್ಕಾರದ ಅಂಕಿ ಅಂಶಗಳ ಪ್ರಕಾರವೇ ಜಮ್ಮುವಿಗೆ 5,700 ಹಾಗೂ ಲಡಾಕ್ ಗೆ 7,664 ರೊಹಿಂಗ್ಯಾಗಳು ವಲಸೆ ಬಂದಿದ್ದಾರೆ. ವಿಶ್ವಸಂಸ್ಥೆ ನಿರಾಶ್ರಿತ ರಾಷ್ಟ್ರಗಳ ಸಮಿತಿಯ ಮಾಹಿತಿ ಪ್ರಕಾರ ಭಾರತದಲ್ಲಿ ಸುಮಾರು 14 ಸಾವಿರಕ್ಕಿಂತಲೂ ಹೆಚ್ಚು ರೊಹಿಂಗ್ಯಾಗಳು ನೆಲೆಸಿದ್ದಾರೆ. ಗೃಹ ಇಲಾಖೆಯ ವರದಿ ಪ್ರಕಾರ ಇವರ ಸಂಖ್ಯೆ 40 ಸಾವಿರಕ್ಕಿಂತಲೂ ಹೆಚ್ಚು. ಇತ್ತೀಚೆಗೆ ಜಮ್ಮುಕಾಶ್ಮೀರದಲ್ಲಿ ಹತ್ಯೆಯಾದ ಉಗ್ರರಲ್ಲಿ ರೋಹಿಂಗ್ಯಾಗಳೂ ಇದ್ದರು. 2016ರ ಬುದ್ಧಗಯಾ ಸ್ಫೋಟದಲ್ಲಿ ಶಾಮೀಲಾಗಿರುವ, ಈಗಾಗಲೇ ಹಲವು ಉಗ್ರ ಸಂಘಟನೆಗಳಲ್ಲಿ ತೊಡಗಿಕೊಂಡಿರುವ ಈ ಜನಾಂಗಕ್ಕೆ ಆಶ್ರಯ ನೀಡುವುದೆಂದರೆ ಸೆರಗಿನಲ್ಲಿ ಕೆಂಡ ಕಟ್ಟಿಕೊಂಡಂತೆಯೇ. ಮೊದಲೇ ಭಯೋತ್ಪಾದಕತೆ, ಪ್ರತ್ಯೇಕತಾವಾದದಿಂದ ನರಳುತ್ತಿರುವ ಕಾಶ್ಮೀರಕ್ಕೆ ಇನ್ನೊಂದು ಉರುಳು ಬಿಗಿದಂತಾಯ್ತು! ಬಾಂಗ್ಲಾದೇಶೀ ನುಸುಳುಕೋರರ ಸಮಸ್ಯೆಯನ್ನೇ ಬಗೆಹರಿಸಲಾಗದ ಭಾರತ ರೋಹಿಂಗ್ಯಾಗಳನ್ನು ನಿಯಂತ್ರಿಸುತ್ತದೆಯೇ?

              ರೋಹಿಂಗ್ಯಾಗಳ ಹಿತರಕ್ಷಣೆಗಾಗಿರುವ ‘ಎ.ಆರ್.ಎನ್.ಓ’(ಅರೆಖಾನ್ ರೋಹಿಂಗ್ಯಾ ನ್ಯಾಷನಲ್ ಆರ್ಗನೈಸೇಷನ್) ಅಧ್ಯಕ್ಷ ನೂರುಲ್ ಇಸ್ಲಾಂ ‘ಸಾವಿರಾರು ರೋಹಿಂಗ್ಯಾಗಳು ಭಾರತದಲ್ಲೂ ಬದುಕುತ್ತಿದ್ದಾರೆ. ಭಾರತೀಯರು ಎಂದಿಗೂ ನಮ್ಮನ್ನು ಕೀಳಾಗಿ ಕಂಡಿಲ್ಲ. ನಮಗೆ ಭಾರತದ ಬಗ್ಗೆ ಕೃತಜ್ಞತೆ ತುಂಬಿದ ಗೌರವ ಭಾವನೆ ಇದೆ.’ ಎನ್ನುತ್ತಾರೆ. ಈ ಕೃತಜ್ಞತೆಯ ಭಾವನೆಯಿಂದಲೇ ರೋಹಿಂಗ್ಯಾಗಳು ಬುದ್ಧಗಯಾದಲ್ಲಿ ಸ್ಫೋಟ ಮಾಡಿದರೋ? ನಾವು ಕೀಳಾಗಿ ಕಂಡಿಲ್ಲವೆಂದೇ ರೋಹಿಂಗ್ಯಾಗಳು ಕಾಶ್ಮೀರ ಉಗ್ರರೊಡನೆ ಸೇರಿಕೊಂಡರೋ? ಬರ್ಮಾ ಸರ್ಕಾರ ತಮಗೆ ಮಾನವ ಹಕ್ಕುಗಳನ್ನು ಕೊಡುತ್ತಿಲ್ಲವೆಂದು ಆರೋಪಿಸುವ ಇದೇ ನೂರುಲ್ ಬರ್ಮಾದ ರಂಗೂನ್ ವಿವಿಯಲ್ಲಿ ಪದವಿ ಪಡೆಯಲು ಸಾಧ್ಯವಾದದ್ದಾದರೂ ಹೇಗೆ? ಆಸ್ಟ್ರೇಲಿಯಾ, ಲಂಡನ್ನುಗಳಲ್ಲಿ ವಿದ್ಯಾಭ್ಯಾಸ ಮಾಡಿ ಪದವಿಗಳ ಮೇಲೆ ಪದವಿ ಪಡೆಯಲು ಹೇಗೆ ಅವಕಾಶ ಸಿಕ್ಕಿತು? ಒಂದು ವೇಳೆ ಈಗ ಪರಿಸ್ಥಿತಿ ಬದಲಾಗಿದೆ ಎಂದರೂ ಅದಕ್ಕೆ ಉಪ್ಪು ತಿಂದ ಮನೆಗೆ ಎರಡು ಬಗೆಯ ಹೊರಟ ರೋಹಿಂಗ್ಯಾಗಳೇ ಕಾರಣರಲ್ಲವೇ? ಮೊದಲು ಆಶ್ರಯ ಕೊಟ್ಟವರನ್ನೇ ಹುರಿದು ಮುಕ್ಕಿ ತಿನ್ನಲು ಹೊರಟ ರೋಹಿಂಗ್ಯಾಗಳು ಭೋಳೆ ಸ್ವಭಾವದ ಭಾರತೀಯರನ್ನು ಬಿಟ್ಟಾರೆಯೇ? ಅಂದಹಾಗೆ, ನೂರುಲ್'ಗೆ ಅಲ್ಕೈದಾ ಮತ್ತಿತರ ಭಯೋತ್ಪಾದಕ ಸಂಘಟನೆಗಳ ಜೊತೆಗೆ ನಂಟಿದೆ ಎಂದು ‘ವಿಕಿಲೀಕ್ಸ್’  ವರದಿ ಹೇಳುತ್ತಿದೆ!

             ಬಂದವರಿಗೆಲ್ಲಾ ಮಣೆ ಹಾಕುವ ಭಾರತೀಯ ಬುದ್ಧಿ ಬದಲಾಗುವುದೆಂದು? ಬರ್ಮಾದಲ್ಲಿ ರೋಹಿಂಗ್ಯಾಗಳು ಕಡ್ಡಾಯವಾಗಿ ಕುಟುಂಬ ಯೋಜನೆ ಅನುಸರಿಸಬೇಕು. ಮದುವೆಗಳಿಗೆ ಗುರುತು ಪತ್ರ ತೋರಿಸಿ ಒಪ್ಪಿಗೆ ಪಡೆದು, ಸೈನ್ಯದ ಪ್ರತಿನಿಧಿಯೊಬ್ಬನ ಸಮ್ಮುಖದಲ್ಲಿ ವಿವಾಹವೇರ್ಪಡಿಸಬೇಕು. ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದುವಂತಿಲ್ಲ. ಬರ್ಮಾವೇನೋ ನಿರ್ದಯವಾಗಿ ಕಾನೂನು ಪಾಲಿಸದವರನ್ನು, ಬರ್ಮಾವನ್ನು ತಮ್ಮ ದೇಶವೆಂದು ಒಪ್ಪಿಕೊಳ್ಳದವರನ್ನು ಹೊರಗಟ್ಟುತ್ತಿದೆ. ಅಂತಹ ಛಾತಿ ಭಾರತಕ್ಕಿದೆಯೇ? ಬರ್ಮಾದಲ್ಲಿ ಓಲೈಸುವ ರಾಜಕಾರಣಿಗಳಿಲ್ಲದಿರಬಹುದು. ಆದರೆ ಭಾರತದಲ್ಲಿ ಅದಕ್ಕಾಗಿ ಜೊಲ್ಲು ಸುರಿಸುವ ರಾಜಕೀಯ ಪಕ್ಷಗಳಿಗೇನು ಬರವೇ? ಬರ್ಮಾ ವಿರುದ್ಧ ನೂರುಲ್, ಮಲಾಲಳಂತಹ ಹೊರಗಿನ ಗಂಜಿ ಗಿರಾಕಿಗಳು ಮಾತನಾಡುತ್ತಿರಬಹುದು. ಆದರೆ ನಮ್ಮಲ್ಲಿ ಇದಕ್ಕಾಗಿಯೇ ಕರವಸ್ತ್ರ ಹಾಕಿ ಕುಳಿತುಬಿಟ್ಟ ಒಳಗಿನವರೇ ಎಷ್ಟಿಲ್ಲ? ಬರ್ಮಾದ ಕಾನೂನುಗಳನ್ನು ಅಲ್ಲಿನ ಕಟ್ಟುನಿಟ್ಟಿನ ಸನ್ನಿವೇಶದಲ್ಲೇ ಪಾಲನೆ ಮಾಡದವರು ಭಾರತದ 'ಉದಾರೀ" ಕಾನೂನುಗಳನ್ನು ಪಾಲಿಸುತ್ತಾರೆಯೇ? ಬಂದವರನ್ನೆಲ್ಲಾ ತುಂಬಿಕೊಳ್ಳುತ್ತಾ ಯೂರೋಪು ಯೂರೋಬಿಯಾ ಆಗುವತ್ತ ಸಾಗಿದೆ. ಅದೇ ರೀತಿ ಭಾರತವಾಗದಿದ್ದರೆ ಸಾಕು! ಮನೆಯಿಲ್ಲದವರಿಗೆ ಮನೆಯೊಳಗೆ ಆಶ್ರಯಕೊಡಬೇಕು. ಆದರೆ, ನಮ್ಮ ಮನೆಯನ್ನೇ ಬಿಟ್ಟುಕೊಡುವುದಲ್ಲ! ಅಂತಹಾ ಸ್ಥಿತಿಗೆ ಭಾರತ ಜಾರದಿರಲಿ!

2 ಕಾಮೆಂಟ್‌ಗಳು:

  1. ಬಾಂಗ್ಲಾದೇಶೀಯರೇ ೧೦ ಸಾವಿರ ಕೊಟ್ಟು ಭಾರತಕ್ಕೆ ಬಂದು ಆಧಾರ್ ಕಾರ್ಡ್ ಪಡೆದು ಆರಾಮ ಆಗಿ ಸೆಟ್ಲ್ ಆಗುತಿದ್ದರೆ ರೋಹಿಂಗ್ಯಾ ಗಾಲ ಬಗ್ಗೆ ಡೆಫಿನೇಟ್ಲಿ ನಮ್ಮವರಿಗೆ ಚಿಂತಿಸಲು ಟೈಮ್ ಇಲ್ಲ. ನಮ್ಮ ದೇಶ ವನ್ನು ದೇವರೇ ಕಾಪಾಡ ಬೇಕು.

    ಪ್ರತ್ಯುತ್ತರಅಳಿಸಿ