ಪುಟಗಳು

ಪ್ರಥಮ ಚುಂಬನ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಪ್ರಥಮ ಚುಂಬನ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಶನಿವಾರ, ಫೆಬ್ರವರಿ 28, 2015

ಪ್ರಥಮ ಚುಂಬನ

ಮೇಘ ಲಾಸ್ಯದ ನಡುವೆ ಮೊಳಗಿತು
ಯುದ್ಧ ಘೋಷದ ಸಂಭ್ರಮ
ಇಳೆಯ ದೈನ್ಯದ ದನಿಗೆ ಮರುಗುತ
ವರುಣನಿಳಿದಿರೆ ವಿಭ್ರಮ

ಮೇಘ ಘಾತಕೆ ತೋಷ ಹೊಂದಿರೆ
ನವಿಲು ನಲಿದಿದೆ ಒಮ್ಮೆಲೇ
ಪ್ರಥಮ ಚುಂಬನದ ಕಂಪು ಪಸರಿಸೆ
ಮತ್ತೆ ಹಾಡಿದೆ ಕೋಗಿಲೆ

ಇಳೆಯ ತೊಳೆಯುವ ಮೊದಲ ಮಳೆಗೆ
ನೆನೆಯುವಾಸೆ ಮೂಡಿದೆ
ಬೀಸುತಿಹ ತಂಗಾಳಿಯ ಸುಖದಿ
ನಿನ್ನ ನೆನಪು ಕಾಡಿದೆ