ಪುಟಗಳು

ಬುಧವಾರ, ಜನವರಿ 30, 2013

ಅದು ಕೊಲೆಯಲ್ಲ, ವಧೆ! -೧

ಅವ ನಮ್ಮವ ಅಂತ ಎದೆ ತಟ್ಟಿ ಹೇಳಿಕೊಳ್ಳುತ್ತೇನೆ!
ಶ್ರೀಯುತ ನಾಥೂರಾಮ ಗೋಡ್ಸೆ!

                         ಸಾವಿರಾರು ಮುಸ್ಲಿಂ ಗೂಂಡಾಗಳು ಲಕ್ಷಾಂತರ ಮಾನಿನಿಯರ ಮಾನಹರಣ ಮಾಡುತ್ತಿದ್ದಾಗ 'ಅದು ಅವರ ಲೈಂಗಿಕ ತೃಷೆ ತೀರಿಸಿಕೊಳ್ಳಲು' ಎಂದು ಬೇಜವಾಬ್ದಾರಿ ಹೇಳಿಕೆ ನೀಡುತ್ತಾ, ಬಂಗಾಳದ ಮುಸ್ಲಿಂ ನವಾಬ ಸುರ್ಹಾವರ್ದಿಯ ತೊಡೆ ನೇವರಿಸುತ್ತ ಕೂತಿದ್ದ 'ಸ್ವಯಂಘೋಷಿತ' ನಾಯಕನನ್ನು ಸಂಹರಿಸಿದ್ದು ತಪ್ಪೇ?
ಅದು ಕೊಲೆಯಲ್ಲ ವಧೆ!

                           ತನ್ನ ಮಕ್ಕಳನ್ನು ಸಲಹಿದ ಸ್ವಾಮಿ ಶೃಧ್ಧಾನಂದರನ್ನು ಕೊಂದವ ಮುಸ್ಲಿಮ ಎನ್ನುವ ಕಾರಣಕ್ಕೆ ಸೋದರ ಎಂದು ಕರೆದು ಸಾರ್ವಜನಿಕವಾಗಿ ಅಪ್ಪಿಕೊಂಡ ರಣಹೇಡಿಯನ್ನು ಮತ್ತೇನು ಮಾಡಬೇಕಿತ್ತು?
ಅನುಯಾಯಿಗಳಿಗೆ ಸರಳತೆ ಭೋದಿಸಿ ತಾನು ಆ ಕಾಲಕ್ಕೆ ದುಬಾರಿಯಾಗಿದ್ದ ಶೇಂಗಾ, ಆಡಿನ ಹಾಲನ್ನು ಬಯಸುತ್ತಿದ್ದ ಗೋಮುಖವ್ಯಾಘ್ರನಿಗೆ ಅದೇ ಸರಿಯಾದ ಆದರೆ ತಡವಾದ ಶಿಕ್ಷೆಯಲ್ಲವೆ?
ಸಾಧ್ವಿ ಹೆಂಡತಿ ಇದ್ದಾಗ ತನ್ನ ೫೧ರ ಪ್ರಾಯದಲ್ಲಿ ಟಾಗೋರರ ಸೋದರ ಸೊಸೆ ಸ್ವರೂಪರಾಣಿಯನ್ನು ಬಯಸಿ ಹೆಂಡತಿಗೆ ವಿಚ್ಛೇದನ ನೀಡಲು ಸಿದ್ಧವಾಗಿದ್ದ ಪಾಖಂಡಿಗೇನು ಪೂಜೆ ಮಾಡಬೇಕಿತ್ತೆ?
ಸುಭಾಷರನ್ನು ಧಿಕ್ಕರಿಸಿದ್ದ, ಸಾವರ್ಕರರ ಬಿಡುಗಡೆಗೆ ಸಹಿ ಹಾಕಲು ನಿರಾಕರಿಸಿದ್ದ, ಭಗತ್ ಸಿಂಗ್ ಬಿಡುಗಡೆಗೆ ಪ್ರಯತ್ನ ಮಾಡೆನು ಅಂದಿದ್ದವನಿಗೆ ದೇಶದ್ರೋಹಿ ಅನ್ನದೆ ಮತ್ತೇನನ್ನಬೇಕು?
ಒಂದು ಕಾಲದಲ್ಲಿ ಸಾವರ್ಕರ್ ಭಾಷಣ ಕೇಳಲು ಆಫ್ರಿಕಾದಿಂದ ಇಂಗ್ಲೆಂಡಿಗೆ ಓಡೋಡಿಹೋಗಿದ್ದ ವ್ಯಕ್ತಿ ಮುಂದೊಂದು ದಿನ ಸಾವರ್ಕರ್ ಯಾರು ಎಂದುಕೇಳುತ್ತಾನೆಂದರೆ ಆತ ವಿಶ್ವಾಸಘಾತುಕನಲ್ಲವೆ?

ಗಾಂಧಿಯ ಬ್ರಹ್ಮಚರ್ಯ:
                        ದಿನ ನಿತ್ಯ ತನ್ನ ಹರೆಯದ ಮೊಮ್ಮಗಳು ಮನು ಜೊತೆ ಹಾಸಿಗೆ ಹಂಚಿಕೊಳ್ಳುತ್ತಿದ್ದ ಗಾಂಧಿ ಯುವತಿಯರಿಂದ ಅಂಗಮರ್ಧನ ಸೇವೆ ಮಾಡಿಕೊಳ್ಳುತ್ತಿದ್ದ. ಮಾತ್ರವಲ್ಲ ಮಹಿಳೆಯರ ಎದುರೇ ನಗ್ನನಾಗಿ ಸ್ನಾನ ಮಾಡುತ್ತಿದ್ದ.
" ಪ್ರಾರ್ಥನೆ ಸಮಯದಲ್ಲಿ ನಾವಿಬ್ಬರೂ ಪರಸ್ಪರರ ಹಿತೋಷ್ಣದಲ್ಲಿ ಆರಾಮವಾಗಿ ನಿದ್ರಿಸುತ್ತಿದ್ದೆವು" -ಮನು(ಫ್ರೀಡಮ್ ಎಟ್ ಮಿಡ್ ನೈಟ್, ಪುಟ ೬೫-೬೭, ಲ್ಯಾರಿ ಕಾಲಿನ್ಸ್ ಮತ್ತು ಡೊಮಿನಿಕ್ ಲ್ಯಾಪಿಯೆರೆ)
ಇದು ಕಾಂಗ್ರೆಸ್ಸಿಗರಿಗೆ ನುಂಗಲಾರದ ತುತ್ತಾಗಿತ್ತು. ಮುಂದೆ ಗಾಂಧಿ ಬಿಹಾರಕ್ಕೆ ಹೊರಟಾಗ ಮನು ಕಾಂಗ್ರೆಸ್ಸಿಗರ ಒತ್ತಾಯದಿಂದ ಹಿಂದುಳಿದಳು. ಗಾಂಧಿ ದುಃಖಿತನಾದ.
ವಿನ್ ಸ್ಟನ್ ಚರ್ಚಿಲ್ "ಅರೆನಗ್ನ ಫಕೀರ" ಎಂದು ಹೇಳಿದಾಗ ಗಾಂಧಿ ಎರಡೂ ಆಗಲು ಬಯಸುತ್ತೇನೆ ಎಂದಿದ್ದ.
ತನ್ನನ್ನುಸರಿಸುವವರು ಕೂಡಾ ತಾನು ಮಾಡಿದಂತೆ ಮಾಡುತ್ತಾರೆ ಎಂದು ಗೊತ್ತಿದ್ದೂ ಗಾಂಧಿ ಹಾಗೆ ಮಾಡಿದನೆಂದರೆ ಅವನಂತಹ ದುರಾತ್ಮ ಇನ್ನಾರು?
ಅವನಿಗೆ ಮಹಾಭಾರತದ ಈ ಶ್ಲೋಕ ಯಾಕೆ ಅರ್ಥವಾಗಲಿಲ್ಲ?
 "ನಜಾತು ಕಾಮ ಕಾಮಾನಾಮ್ ಉಪಭೋಗೇನಾ ಸಮ್ಮತಿ
ಹವಿಷಾ ಕೃಷ್ಣ ವೃತಮೇನಾ ಭೂಯಾ ಏವಾಭಿ ವರ್ಧತೇ||"

                       ಸಭೆಗಳಿಗೆ ಬರುತ್ತಿದ್ದ ಸ್ತ್ರೀಯರು ಧರಿಸುತ್ತಿದ್ದ ಆಭರಣಗಳನ್ನು ಒತ್ತಾಯ ಪೂರ್ವಕವಾಗಿ ಪಡೆದುಕೊಳ್ಳುತ್ತಿದ್ದ ಗಾಂಧಿ ಕೆಲವು ಬಾರಿ ತನ್ನ ಸಹಿಗಾಗಿ ಕೂಡಾ ಹಣ ಪಡೆಯುತ್ತಿದ್ದ. ಗಾಂಧಿ ಮಗ ದೇವದಾಸ್ " ೫ ರೂಪಾಯಿಗೂ ಗಾಂಧಿ ಸಹಿ ಮಾಡುತ್ತಿದ್ದರು." ಎಂದಿದ್ದಾರೆ.(ದಿ ಲೈಫ್ ಆಫ್ ಮಹಾತ್ಮ ಗಾಂಧಿ: ಲೂಯಿಸ್ ಫಿಷರ್). ಮಕ್ಕಳಿಂದಲೂ ಆಭರಣಗಳನ್ನೂ ಒತ್ತಾಯ ಪೂರ್ವಕವಾಗಿ ತೆಗೆದು ಕೊಳ್ಳುತ್ತಿದ್ದ ಗಾಂಧಿ ಆ ಆಭರಣಗಳನ್ನು ಮಾರಾಟ ಮಾಡುತ್ತಿದ್ದ. ಕೆಲವು ಬಾರಿ ಯಾರು ಕೊಟ್ಟರೋ ಅವರಿಗೇ ಅದೇ ವಸ್ತುವನ್ನು ಮಾರಾಟ ಮಾಡಿದ್ದ ಈ ಮಹಾತ್ಮ!

                      ಗಾಂಧಿ ವಿದೇಶಿ ವಸ್ತ್ರಗಳನ್ನು ಬಹಿಷ್ಕರಿಸಿದ್ದ ಎನ್ನುವ ಹಿಂದೂಗಳು ಒಂದು ಗಮನಿಸಬೇಕು- ೧೯೦೫ರಲ್ಲೇ ತಿಲಕರ ನೇತೃತ್ವದಲ್ಲಿ ಸಾವರ್ಕರರ ಸಾರಥ್ಯದಲ್ಲಿ ವಿದೇಶಿ ವಸ್ತುಗಳು ಬೆಂಕಿಗಾಹುತಿಯಾಗಿದ್ದವು. ಸತ್ಯಾಗ್ರಹ ಎಂಬುದು ಗಾಂಧಿ ಶುರು ಮಾಡಿದ್ದಲ್ಲ. ಅಂಡಮಾನಿನಲ್ಲಿ ಕರಿನೀರ ಶಿಕ್ಷೆ ಅನುಭವಿಸುತ್ತಿದ್ದ ಎಷ್ಟೋ ರಾಜಕೀಯ ಕೈದಿಗಳು ಗಾಂಧಿಗೂ ಮುಂಚೆಯೇ ಅದನ್ನು ಮಾಡಿದ್ದರು.

                            ಖಿಲಾಪತ್ ಆಂದೋಲನದ ಮುಖ್ಯ ಉದ್ದೇಶ ೧)ಖಿಲಾಫತ್ ಅನ್ನು ರಕ್ಷಿಸುವುದು ೨)ತುರ್ಕಿ ಸಾಮ್ರಾಜ್ಯದ ಸಮಗ್ರತೆ ಘೋಷಿಸುವುದಾಗಿತ್ತು. ಇಂತಹ ಆಂದೋಲನಕ್ಕೆ ಬೆಂಬಲ ನೀಡಿದ ಗಾಂಧಿ ಶಿವಾಜಿ, ರಾಣಾ ಪ್ರತಾಪ್, ಸಾವರ್ಕರರನ್ನು ಹಾದಿ ತಪ್ಪಿದ ವಿಕೃತ ದೇಶಭಕ್ತರು ಎಂದು ಕರೆದ. ವಂದೇ ಮಾತರಂ ವಿಭಜನೆಯಾಯಿತು. ರಾಮ ಭಜನೆ ಅಲ್ಲಾಹಮಯವಾಯಿತು.
ಭಾರತ್ ಮಾತಾ ಕೀ ಜೈ ಬದಲು ಅಲ್ಲಾಹೋ ಅಕ್ಬರ್ ಎನ್ನಿ ಎಂದು ತನ್ನ ಅನುಯಾಯಿಗಳಿಗೆ ಬೋಧಿಸಿದ. ಕೇರಳದಲ್ಲಿ ಮೋಪಳಾಗಳು ಲಕ್ಷಾಂತರ ಹಿಂದುಗಳ ಮಾರಣ ಹೋಮ ಮಾಡಿದರು, ಸ್ತ್ರೀಯರ ಅತ್ಯಾಚಾರ, ಮಕ್ಕಳ ಕಗ್ಗೊಲೆ, ಮಹಿಳೆಯರ ಗರ್ಭಛೇದನ ಮತ್ತು ಅತ್ಯಾಚಾರ, ದೇಗುಲಗಳ ನಾಶ, ಮತಾಂತರ, ಮನೆಗಳಿಗೆ ಬೆಂಕಿ ಹಚ್ಚುವಿಕೆ, ಲೂಟಿ, ಧ್ವಂಸ ಕಾರ್ಯ ನಡೆದವು. ಗಾಂಧಿ ಸತ್ತವರು ಕೇವಲ ನಾಲ್ಕೇ ಮಂದಿ ಎಂದು ಇಡೀ ದೇಶದಾದ್ಯಂತ ಸುದ್ದಿ ಹಬ್ಬಿಸಿದ. ಮಾತ್ರವಲ್ಲ " ಧರ್ಮಕ್ಕಾಗಿ ಹೋರಾಟ ನಡೆಸಿದ ಧೈವಭೀರು ಮೋಪ್ಲಾಗಳಿಗೆ ಹಾರ್ದಿಕ ಅಭಿನಂದನೆಗಳು" ಎಂದು ಸಾರ್ವಜನಿಕವಾಗಿ ಘೋಷಿಸಿದ.

                              ಧ್ವಜ ಸಮಿತಿ ನಿರ್ಣಯಿಸಿದ್ದ ಕೇಸರಿ ಧ್ವಜವನ್ನು ತಿರಸ್ಕರಿಸಿದ. ಕೇಸರಿ ಬಿಳಿ ಹಸಿರುಗಳೊಂದಿಗೆ ಮಸುಕಾಯಿತು. ಸುದರ್ಶನದ ಬದಲು ಅಶೋಕ ಚಕ್ರವನ್ನು ಶಿಫಾರಸು ಮಾಡಿದ. ನಮ್ಮ ದೇಶದ ಧ್ವಜದ ಜೊತೆ ಯೂನಿಯನ್ ಜಾಕ್ ಧ್ವಜ ಕೂಡಾ ಇರಲಿ ಎಂದು ಕೂಗಾಡಿದ. ಸಂಸ್ಕೃತವನ್ನು ನಿರಾಕರಿಸಿದ. ಹಿಂದಿ ಮತ್ತು ಉರ್ದುವಿನ ಮಿಶ್ರ ತಳಿ ಹಿಂದೂಸ್ತಾನಿ ಎಂಬ ಭಾಷೆಯನ್ನು ರಾಷ್ಟ್ರೀಯ ಭಾಷೆಯನ್ನಾಗಿಸಿ ಎಂದು ಒತ್ತಾಯಿಸಿದ. ಅದು ಮಾರುವೇಶದಲ್ಲಿ ಉರ್ದುವನ್ನು ತರುವ ಯತ್ನ!

                     ಗೋಹತ್ಯೆಗೆ ಬೆಂಬಲ ನೀಡಿದ್ದ ಗಾಂಧಿ " ಒಂದು ವೇಳೆ ಹಿಂದೂಗಳು ಗೋಹತ್ಯೆ ಮಾಡಿದ ಮುಸ್ಲಿಮನ ಜೊತೆ ಜಗಳವಾಡಿದರೆ ಪಾಪ ಮಾಡಿದಂತಾಗುತ್ತದೆ." ಎಂದ. ರಾಮ ಕೃಷ್ಣರಿಗಿಂತ ನನಗೆ ಅಬೂಬಕರ್ ಮತ್ತು ಉಮರ್ ಶ್ರೇಷ್ಠರು ಎಂದು ಘೋಷಿಸಿದ. ದೇಗುಲಗಳಲ್ಲಿ ಕುರಾನ್ ಪಠಣ ಆರಂಭಿಸಿದ. ಶಿವಾಜಿಯ ಚರಿತೆಯಾದ ಭೂಷಣನ ಕೃತಿ "ಶಿವ ಬಾವನಿ"ಯ ಮೇಲೆ ನಿಷೇಧ ಹೇರಿದ. ಮಾತ್ರವಲ್ಲ ಶಿವಾಜಿಯ ಇತಿಹಾಸ ನೆನಪಿಸಿಕೊಳ್ಳದಂತೆ ಜನತೆಗೆ ಕರೆ ನೀಡಿದ. ಮಸೀದಿ ಎದುರು ಭಾಜಾಬಜಂತ್ರಿ ಇರುವುದನ್ನು ಕೂಡಾ ನಿಷೇಧಿಸಿದ. ತನ್ನ ಬೆಂಬಲಿಗರಿಗೆ ನಮಸ್ತೆ ಬದಲು ಸಲಾಮ್ ಹೇಳಿ ಎಂದು ಗೋಗರೆದ.

                           ೧೯೪೮ರ ಜನವರಿ ೧೩ರಂದು ಆಮರಣಾಂತ ಉಪವಾಸ ಆರಂಭಿಸಿದ ಗಾಂಧಿಯ ಷರತ್ತುಗಳಲ್ಲಿ ದೆಹಲಿಯಲ್ಲಿ ಹಿಂದೂ ನಿರಾಶ್ರಿತರು ಆಶ್ರಯಕ್ಕೋಸ್ಕರ ವಶ ಪಡಿಸಿಕೊಂಡ ಮಸೀದಿಗಳನ್ನು ಕೂಡಲೇ ತೆರವು ಮಾಡಬೇಕು ಎಂಬ ವಿಷಯವೂ ಸೇರಿತ್ತು. ಮಾತ್ರವಲ್ಲ ಅಂದೇ ವಾಯುವ್ಯ ಗಡಿ ಪ್ರಾಂತ್ಯದಿಂದ ಬಂದ ರೈಲಿನಲ್ಲಿ ಸಾವಿರಾರು ಸಂಖ್ಯೆಯ ಹಿಂದೂಗಳನ್ನು ಕತ್ತರಿಸಿ ಹಾಕಿದ್ದರು. ಗಾಂಧಿ ಅವರು ಅಹಿಂಸೆಯನ್ನು ಪಾಲಿಸಿದ ವೀರ ಯೋಧರು ಎಂದು ಹೇಳಿ ಆನಂದ ಪಟ್ಟ! ಮಾತ್ರವಲ್ಲ ಪಾಕಿಸ್ತಾನಕ್ಕೆ ೫೫ಕೋಟಿ ಕೊಡಬೇಕೆಂದು ಉಪವಾಸ ಕೂತ. ಅದೇ ಸಮಯಕ್ಕೆ ನವಖಾಲಿ ಮತ್ತು ತಿಪ್ರೇಹ್ ಎಂಬಲ್ಲಿ ಸುಮಾರು ೩೦ ಸಾವಿರ ಹಿಂದೂ ಮಹಿಳೆಯರ ಅತ್ಯಾಚಾರ ಮತ್ತು ಮತಾಂತರ ನಡೆಯಿತು. ಸುಮಾರು ೩ಲಕ್ಷ ಹಿಂದೂಗಳ ಕಗ್ಗೊಲೆಯಾಯಿತು. ಈ ನಿಮ್ಮ ಮಹಾತ್ಮ ಆ ಸಮಯದಲ್ಲಿ ಇಂತಹ ಅನಾಹುತಕ್ಕೆ ಆಜ್ಞೆ ಮಾಡಿದ ಬಂಗಾಳದ ನವಾಬ ಮತಾಂಧ ಸುಹ್ರಾವರ್ದಿಯ ಗೆಳೆತನ ಬೆಳೆಸಿ ಅವನ ತೊಡೆ ನೇವರಿಸುತ್ತಾ ಕುಳಿತಿದ್ದ. ಶೇಖ್ ಅಬ್ದುಲ್ಲಾನಿಗೆ ಕಾಶ್ಮೀರ ಕೊಟ್ಟು ಕಾಶ್ಮೀರದ ಮಹಾರಾಜ ಕಾಶಿಗೆ ಹೋಗಲಿ ಎಂದ. ಮುಸ್ಲಿಮ್ ತೃಪ್ತಿಗಾಗಿ ನವಖಾಲಿಯಲ್ಲಿ ಮನೆಗಳ ಮೇಲಿದ್ದ ತ್ರಿವರ್ಣ ಧ್ವಜವನ್ನು ತೆಗೆಸಿದ. ಪಂಜಾಬಿನಲ್ಲಿ ಅತ್ಯಾಚಾರಕ್ಕೊಳಗಾದ ಮಾನಿನಿಯರಿಗೆ ಗಾಂಧಿ " ಸಾಯುವವರೆಗೆ ನಿಮ್ಮ ನಾಲಗೆಯನ್ನು ಕಚ್ಚಿಕೊಳ್ಳಿ ಮತ್ತು ನಾಲಗೆಯನ್ನು ಬಿಗಿ ಹಿಡಿಯಿರಿ. " ಎಂದು ಹಿತವಚನ ನೀಡಿದ.

                        ಇದನ್ನೆಲ್ಲಾ ನೋಡಿದಾಗ ಈ ದುರಾತ್ಮ ಹಿಂದು ಹೌದೋ ಅಲ್ಲವೋ ಎನ್ನುವ ಸಂಶಯ ಬರುವುದಿಲ್ಲವೇ?
ಮಿತ್ರರೆ ಕರಿನೀರ ಶಿಕ್ಷೆಯೆಲ್ಲಿ? ಜೈಲು ಶಿಕ್ಷೆಯೆಲ್ಲಿ? ಜೈಲಿನಲ್ಲಿ ಮಂಚದ ಮೇಲೆ ಮಲಗುವುದಕ್ಕೂ ಗಾಣಕ್ಕೆ ಕಟ್ಟಿ,ಹುಳುಹುಪ್ಪಟೆಗಳಿಂದ ಕೂಡಿದ ಆಹಾರ ತಿನ್ನುತ್ತ ನರಕಯಾತನೆ ರಾಷ್ಟ್ರ ಭಕ್ತಿ ಪಸರಿಸುತ್ತ ಅನುಭವಿಸುವುದಕ್ಕೂ ಅಜಗಜಾಂತರ ವ್ಯತ್ಯಾಸವಿಲ್ಲವೆ?

ಅದು ಕೊಲೆಯಲ್ಲ, ವಧೆ!
ರಾಮ ರಾವಣನನ್ನು ವಧಿಸಿದಂತೆ, ಕೃಷ್ಣ ದುರುಳರ ಸಂಹಾರ ಮಾಡಿದಂತೆ...
ಸ್ವಹಿತಕ್ಕಾಗಿ ಕೊಂದರೆ ಅದು ಕೊಲೆ! ಸಮಾಜ ಹಿತಕ್ಕಾಗಿ ಕೊಂದರೆ ಅದು ವಧೆ!!!
ನೀನಹುದು ನಿಜ ಹುತಾತ್ಮ ಗೋಡ್ಸೆ.
ಆದ ಅನಾಹುತಕ್ಕೆ ಕ್ರೋಧಗೊಂಡು ಆಗಬಹುದಾದ ಅನಾಹುತಕ್ಕೆ ಮಂಗಳ ಹಾಡಿದ ನಿನಗೆ ಕೋಟಿ ಪ್ರಣಾಮ...
ಅದು ಸಾತ್ವಿಕ ಕೋಪ!
ಅದು ಹಿಂದುಗಳ ಹೃದಯ ಪಲ್ಲವಿ! ನಾಡಿಮಿಡಿತ!! ರಕ್ತದ ಕುದಿತ!!!
ಅದು ತಾಯಿ ಭಾರತಿಗರ್ಪಣೆ...ವಂದೇ ಮಾತರಂ...

ಇನ್ನಷ್ಟು ಮಾಹಿತಿಗಳೊಂದಿಗೆ....

ಶನಿವಾರ, ಜನವರಿ 26, 2013

ಇಸ್ಲಾಮಿಕ್ ಬ್ಯಾಂಕಿಂಗ್-ಮತಾಂತರದ ಇನ್ನೊಂದು ಹುನ್ನಾರ!!!

ಇಸ್ಲಾಮಿಕ್ ಬ್ಯಾಂಕಿಂಗ್-ಮತಾಂತರದ ಇನ್ನೊಂದು ಹುನ್ನಾರ!!!

                  ಲವ್ ಜಿಹಾದ್, ಲ್ಯಾಂಡ್ ಜಿಹಾದ್, ರಾಜಕೀಯ ಜಿಹಾದ್, ವೈಣಿಕ ಜಿಹಾದ್, ಸಾಂಸ್ಕೃತಿಕ ಜಿಹಾದ್...ಅಬ್ಬಾ ಎಷ್ಟೊಂದು! ಇವುಗಳಿಗೆ ಇನ್ನೊಂದು ಸೇರ್ಪಡೆ ಬ್ಯಾಂಕ್ ಜಿಹಾದ್.
ಮುಸ್ಲಿಮರಿಗೆ ಶಿಕ್ಷಣ, ಉದ್ಯೋಗ, ಚುನಾವಣೆ, ಸಾರ್ವಜನಿಕ ಸೇವೆ, ವ್ಯಾಪಾರ,...ಕೊನೆಗೆ ರಕ್ಷಣಾ ಹಾಗೂ ಗೂಢಚಾರ ವಿಭಾಗಗಳಲ್ಲೂ ಮೀಸಲಾತಿ... ಎತ್ತ ಸಾಗುತ್ತಿದೆ ಭಾರತ?
ದೇಶದ ಬಜೆಟ್ನಲ್ಲಿ ಮುಸ್ಲಿಮರಿಗಾಗಿ ಪ್ರತ್ಯೇಕ ನಿಧಿಯನ್ನು ಕೂಡಾ ತೆಗೆದಿರಿಸಿದರು!
ಅಲ್ಪಸಂಖ್ಯಾತ ಮಂತ್ರಾಲಯವೂ ರಚಿತವಾಗಿದೆ!
ಈಗ ಇಸ್ಲಾಮಿಕ್ ಬ್ಯಾಂಕಿಂಗ್ ಮತ್ತೊಂದು ಸೇರ್ಪಡೆ!

                           ಹಿಂದೂ ಹುಡುಗಿಯರನ್ನು ಪ್ರೇಮದ ನಾಟಕವಾಡಿ, ಕುತಂತ್ರದಿಂದ ಮತಾಂತರ ಮಾಡಿ ಕೊನೆಗೆ ಆಕೆಯನ್ನು ವೇಶ್ಯಾವಾಟಿಕೆಗೋ ಇಲ್ಲಾ ಹೆರಿಗೆ ಯಂತ್ರವಾಗಿಯೋ ನರಕಕ್ಕೆ ನೂಕಿ ಬಿಡುವ ದಂಧೆಯೇ ಈ ಲವ್ ಜಿಹಾದ್. ಕೇರಳ, ದಕ್ಷಿಣ ಕನ್ನಡ, ಬೆಳಗಾವಿ, ಮೈಸೂರುಗಳಲ್ಲಿ ಅವ್ಯಾಹತವಾಗಿ ಸಾಗಿರುವ ಇದು ಹಿಂದೂ ಧರ್ಮಕ್ಕೆ ದೊಡ್ಡ ಕಂಟಕವಾಗಿ ಮಾರ್ಪಟ್ಟಿದೆ. ಒಂದು ಹುಡುಗಿಯನ್ನು ಲವ್ ಜಿಹಾದಿಗೆ ಬಲಿಯಾಗಿಸಲು ಒಬ್ಬ ಮುಸ್ಲಿಮನಿಗೆ ಹಣ, ಮೊಬೈಲ್, ಬೈಕ್ ಎಲ್ಲವು ಯಥೇಚ್ಛವಾಗಿ ದೊರಕುತ್ತದೆ. ಸಂಭಾವಿತ ಹುಡುಗಿಯರನ್ನು ಕೂಡಾ ಪಾನೀಯಗಳಲ್ಲಿ ಮಾದಕ ವಸ್ತು ಬೆರೆಸಿ ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುತ್ತಾರೆ. ಹೆತ್ತವರು ಮರ್ಯಾದೆಗಂಜಿ ಪ್ರಕರಣವನ್ನು ದಾಖಲಿಸದೇ ಕೈಬಿಡುವುದೇ ಹೆಚ್ಚು. ಒಂದು ವೇಳೆ ಪ್ರಕರಣ ದಾಖಲಿಸಿದರೂ ಜಿಹಾದಿಗಳ ಪರ ವಾದಿಸಲು ದೊಡ್ಡದೊಂದು ಬುದ್ಧಿಜೀವಿಗಳ ವರ್ಗವೇ ಸಿದ್ಧವಾಗಿರುತ್ತದೆ. ಹಾಗಾಗಿ ನ್ಯಾಯ ಸಿಗುವ ಸಾಧ್ಯತೆಯೇ ಕಡಿಮೆ. ಹುಡುಗಿಯರು ಅಷ್ಟೇ, ಬುದ್ಧಿಯ ಬದಲು ತಮ್ಮ ಹುಚ್ಚು ಭಾವನೆಗಳಿಗೆ ಪ್ರಾಮುಖ್ಯತೆ ಕೊಡುವುದು ಹಾಗೂ ಹೆತ್ತವರು ಬೆಳೆದ ಮಗಳ ಚಟುವಟಿಕೆಗಳನ್ನು ಗಮನಿಸದೇ ಇರುವುದು ಅಥವಾ ಗಮನಿಸಿದರೂ ಸುಮ್ಮನಿರುವುದು ಈ ಮತಾಂಧರಿಗೆ ಅನುಕೂಲವೇ ಆಗುತ್ತಿದೆ. ಪ್ರಶ್ಣಿಸ ಹೋದ ಹಿಂದೂ ಯುವಕರನ್ನು ನಾನಾ ಕೇಸು ದಾಖಲಿಸಿ ಸೆರೆಮನೆಗೆ ತಳ್ಳಲಾಗುತ್ತಿದೆ. ಹೆಚ್ಚಿನ ಹೆತ್ತವರಿಗಂತೂ ಇಂತಹ ಜಾಲವೊಂದಿದೆ ಎಂಬುದೇ ಗೊತ್ತಿಲ್ಲವೆಂಬುದು ಬಹುದೊಡ್ಡ ವಿಪರ್ಯಾಸ. ಯಾಕೆಂದರೆ ಅವರು ಧಾರವಾಹಿಗಳಲ್ಲೇ ಮುಳುಗೇಳುತ್ತಿದ್ದಾರೆ!

                         ಕಾಸರಗೋಡು, ಮಂಗಳೂರುಗಳಲ್ಲಿ ಲ್ಯಾಂಡ್ ಜಿಹಾದ್ ವಿಪರೀತವಾಗಿ ಏರುತ್ತಿದೆ. ಸ್ವಲ್ಪ ಹೆಚ್ಚು ಹಣ ಕೊಟ್ಟು ಭೂಮಿ ಖರೀದಿಸುವ ಖದೀಮರು ಆತ್ಮೀಯತೆಯ ಸೋಗು ಹಾಕಿಯೋ ಇಲ್ಲ ಬಲವಂತವಾಗಿಯೋ ಮುಸ್ಲಿಮರಿಗೇ ಆ ಜಾಗ ಸಿಗುವಂತೆ ಮಾಡುತ್ತಾರೆ. ಮಾತ್ರವಲ್ಲ ಇದ್ದ ಕಾಡುಗಳನ್ನು ಕಡಿದು ರಬ್ಬರ್ ಹಾಕಿ ಅಲ್ಲಲ್ಲಿ ಮಸೀದಿ, ಮದರಸಾಗಳನ್ನು ನಿರ್ಮಿಸುತ್ತ ಕೂಲಿಯಾಳುಗಳನ್ನು ಮತಾಂತರ ಮಾಡುತ್ತಿದ್ದಾರೆ! ಕೇರಳದಲ್ಲಿ ಪೊನ್ನಣಿ ಎಂಬ ಮತಾಂತರ ಕೇಂದ್ರವಿದ್ದು ಲಕ್ಷಾಂತರ ಹಿಂದುಗಳ ಬಲಿಯಾಗುತ್ತಿದೆ.

                      ರಾಜಕೀಯವಾಗಿ ಕಾಂಗ್ರೆಸ್ ಹಾಗೂ ಪ್ರಾದೇಶಿಕ ಪಕ್ಷಗಳು ಈಗಾಗಲೇ ಜಿಹಾದಿಗೆ ಬಲಿಯಾಗಿ ಇಸ್ಲಾಮೀಕರಣಗೊಂಡಿವೆ. ಅವುಗಳ ಸಾಲಿಗೆ ಬಿಜೆಪಿಯೂ ಸೇರುತ್ತಿರುವುದು ವಿಷಾದದ ಸಂಗತಿ. ವ್ಯಾಪಾರ ವಹಿವಾಟುಗಳಲ್ಲಂತೂ ಮುಸ್ಲಿಮರ ಹಿಡಿತ ಬಿಗಿಗೊಳ್ಳುತ್ತಿದೆ. ರೈಲು, ವಿಮಾನ, ಬಸ್ಸು ನಿಲ್ದಾಣಗಳ ಆವೃತ ಪ್ರದೇಶಗಳಲ್ಲಿ ಮುಸಲ್ಮಾನ ವ್ಯಾಪಾರಕೇಂದ್ರಗಳೇ ಹೆಚ್ಚುತ್ತಿದ್ದು ಹಳ್ಳಿಗಳಿಗೂ ಹಬ್ಬುತ್ತಿದೆ. ಆತ್ಮೀಯತೆಯಿಂದ ಮಾತನಾಡಿಸಿ ಒಂದೆರಡು ರೂಪಾಯಿ ಕಡಿಮೆಗೆ ವ್ಯಾಪಾರ ಮಾಡಿ ಜನರನ್ನು ಮೋಡಿ ಮಾಡುವ ಇವರುಗಳ ಮತಾಂಧತೆ ಹಿಂದೂಗಳ ಅರಿವಿಗೆ ಬರದೇ ಇರುವುದು ಹಿಂದೂಸ್ಥಾನದ ದುರದೃಷ್ಟ.

ಇವೆಲ್ಲವುಗಳಿಗೆ ಪೂರಕವಾಗಿ ಆರಂಭವಾಗಿರುವುದೇ ಇಸ್ಲಾಮಿಕ್ ಬ್ಯಾಂಕಿಂಗ್.

ಏನಿದು ಇಸ್ಲಾಮಿಕ್ ಬ್ಯಾಂಕಿಂಗ್?

                     ಇದರ ನಿಯಮಗಳಿರುವುದು ಶರಿಯತ್ ಕಾನೂನಿನಂತೆ. ಇದು ಗ್ರಾಹಕರು ನೀಡಿದ ಠೇವಣಿಗೆ ಬಡ್ಡಿ ನೀಡುವುದಿಲ್ಲ. ಇದು ತನಗೆ ಬರುವ ಠೇವಣಿಯಿಂದ ಸ್ಥಿರಾಸ್ಥಿಗಳನ್ನು ಖರೀದಿಸುತ್ತದೆ. ಮನೆಗಳು, ವಾಣಿಜ್ಯ- ವ್ಯಾಪಾರ ಸಮುಚ್ಚಯಗಳು, ನಿವೇಶನಗಳ ಮೇಲೆ ಇದು ಹೂಡಿಕೆ ಮಾಡುತ್ತದೆ. ಮತ್ತು ಈ ಸ್ಥಿರಾಸ್ಥಿಗಳನ್ನು ಮಾರಾಟ ಮಾಡಿ ಅದರಿಂದ ಬರುವ ಲಾಭವನ್ನು ತನ್ನ ಗ್ರಾಹಕನಿಗೆ ಹಂಚುತ್ತದೆ. ಒಬ್ಬ ಗ್ರಾಹಕ ಮನೆ ಖರೀದಿಗೆ ಸಾಲಕ್ಕಾಗಿ ಇಸ್ಲಾಮಿಕ್ ಬ್ಯಾಂಕಿಗೆ ಅರ್ಜಿ ಸಲ್ಲಿಸಿದ ಎಂದಿಟ್ಟುಕೊಳ್ಳೋಣ. ಆಗ ಈ ಬ್ಯಾಂಕ್ ಹಣದ ಬದಲು ಆತನ ಆಸಕ್ತಿಯ ಮನೆಯನ್ನೇ ಖರೀದಿಸಿಕೊಡುತ್ತದೆ. ಆ ಮನೆಯ ಮೌಲ್ಯ ೧೦ಲಕ್ಷವಾಗಿದ್ದಲ್ಲಿ, ಆತನಿಗೆ ಕಂತಿನಲ್ಲಿ ಮರುಪಾವತಿ ಮಾಡಲು ೧೫ರಿಂದ ೨೦ ವರ್ಷಗಳ ಅವಧಿಯಲ್ಲಿ ಬ್ಯಾಂಕ್ ನಿಗದಿಪಡಿಸಿದ ಕಂತಿನಿಂದ ೨೦ರಿಂದ ೨೨ ಲಕ್ಷ ವಸೂಲಿಯಾಗುತ್ತದೆ. ಮೊದಲೇ ವಿವಿಧ ರೀತಿಯ ಮನೆ ಹಾಗೂ ನಿವೇಶನಗಳನ್ನು ಕರೀದಿಸಿಡುವ ಬ್ಯಾಂಕ್ ಗ್ರಾಹಕರಿಗೆ ಈ ರೀತಿ ನೀಡಿ ವಾಮಮಾರ್ಗದಲ್ಲಿ ಬಡ್ಡಿ ಪಡೆಯುತ್ತದೆ. ಗಮನಿಸಿ  ಮನೆ ಹಾಗೂ ನಿವೇಶನಗಳ ಬೆಲೆ ದಿನದಿಂದ ದಿನಕ್ಕೆ ಏರುತ್ತಲೇ ಇರುತ್ತದೆ. ಮಾತ್ರವಲ್ಲ ಕಪ್ಪು ಹಣವನ್ನು ದೇಣಿಗೆ ರೂಪದಲ್ಲಿ ಪಡೆದು ಅದನ್ನು ಬಿಳಿ ಹಣವನ್ನಾಗಿಸಲು ಇದು ಸಹಾಯ ಮಾಡುತ್ತದೆ. ವಾಮ ಮಾರ್ಗದಲ್ಲಿ ಹಣ ಸಂಪಾದನೆ ಮಾಡಿದ ಕಳ್ಳರಿಂದ ದಾನ ಧರ್ಮಗಳ ಹೆಸರಿನಲ್ಲಿ ಹಣ ಪಡೆಯುತ್ತದೆ.

                       ಈಗಿರುವ ಭಾರತದ ರಾಷ್ಟ್ರೀಕೃತ, ಖಾಸಗಿ, ವಿದೇಶೀ ಬ್ಯಾಂಕುಗಳಿಗೆ  ಸ್ಥಿರ ಸೊತ್ತು ಖರೀದಿಸುವ ಅಥವಾ ಇಟ್ಟುಕೊಳ್ಳುವ ಅವಕಾಶಗಳಿಲ್ಲ. ಆದರೆ ಇಸ್ಲಾಮಿಕ್ ಬ್ಯಾಂಕಿನ ವಹಿವಾಟು ಸ್ಥಿರಾಸ್ಥಿ ವಹಿವಾಟಿನ ಮೇಲೆ ಅವಲಂಬಿತವಾಗಿದ್ದು, ಶರಿಯತ್ ಕಾನೂನಿನಂತೆ ವ್ಯವಹರಿಸುವುದರಿಂದ ಮುಸಲ್ಮಾನರೊಂದಿಗೆ ಮಾತ್ರ ವ್ಯವಹರಿಸಬೇಕಾಗುತ್ತದೆ. ಅನ್ಯಮತೀಯರು ಈ ಬ್ಯಾಂಕಿನೊಂದಿಗೆ ವ್ಯವಹರಿಸಬೇಕಾದರೆ ಶರಿಯತನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅಂದರೆ ಮತಾಂತರವಾಗಬೇಕು. ಇದರ ಬಗ್ಗೆ ತಿಳಿಯದ ಹಿಂದೂಗಳು ಮಾತ್ರವಲ್ಲ ತಿಳಿದೂ ಹಣ ಮಾಡುವ ಉದ್ದೇಶ ಉಳ್ಳವರೂ ಸುಲಭವಾಗಿ ಬಲಿಯಾಗುವುದರೊಂದಿಗೆ ಭಾರತದ ಇಸ್ಲಾಮೀಕರಣಕ್ಕೆ ಇನ್ನೊಂದು ರಹದಾರಿ ದೊರಕಿದಂತಾಗುತ್ತದೆ.

                         ಈಗಾಗಲೇ ಮನಮೋಹನ್ ಸಿಂಗ್ ಸರಕಾರ ರಿಸರ್ವ್ ಬ್ಯಾಂಕಿಗೆ ಪತ್ರ ಬರೆದು ಇಸ್ಲಾಮಿಕ್ ಬ್ಯಾಂಕ್ ಪ್ರಾರಂಭಿಸಲು ಸಾಧ್ಯವೇ ಎಂದು ಕೇಳಿದ್ದು, ಪ್ರತ್ಯುತ್ತರವಾಗಿ ರಿಸರ್ವ್ ಬ್ಯಾಂಕ್ ಈಗಿರುವ ಬ್ಯಾಂಕ್ ಕಾಯ್ದೆಗಳಲ್ಲಿ ಅಂತ ಅವಕಾಶಗಳಿಲ್ಲವೆಂದು ಸ್ಪಷ್ಟ ಪಡಿಸಿದೆ. ಆದರೆ ಸರಕಾರ ಈ ಸಂಬಂಧವಾಗಿ ಕಾನೂನು ತಿದ್ದುಪಡಿ ಮಾಡಲು ಈಗಾಗಲೇ ಕ್ರಮಗಳನ್ನು ಕೈಗೊಂಡಿದ್ದು ತನ್ನ ವೋಟ್ ಬ್ಯಾಂಕ್ ಸುರಕ್ಷತೆಗಾಗಿ ಭಾರತವನ್ನು ಸರ್ವನಾಶ ಮಾಡಹೊರಟಿದೆ. ಮಾತ್ರವಲ್ಲ ರಿಸರ್ವ್ ಬ್ಯಾಂಕ್ ಗವರ್ನರ್ ಸುಬ್ಬಾರಾವ್ ಇಸ್ಲಾಮಿಕ್ ಬ್ಯಾಂಕಿಗಾಗಿ ಕಾನೂನು ತಿದ್ದುಪಡಿ ಮಾಡಲು ಸರಕಾರದೊಂದಿಗೆ ತಾವು ವ್ಯವಹಾರ ಮಾಡುತ್ತಿರುವುದಾಗಿ ತಿಳಿಸಿದ್ದು ಸರಕಾರದ ಮುಖವಾಡ ಕಳಚಿ ಬಿದ್ದಿದೆ.

                          ಮೊದಲ ಬಾರಿಗೆ ಭಾರತದಲ್ಲಿ ಇಸ್ಲಾಮಿಕ್ ಬ್ಯಾಂಕಿನ ಪ್ರಸ್ತಾಪ ಮಾಡಿದ್ದು ರಂಗರಾಜನ್ ಸಮಿತಿ(೨೦೦೮). ಇದರ ಪರವಾಗಿ ಮುಸ್ಲಿಂ ನೇತಾರರು ಸಮರ್ಥನೆ ನೀಡಲಾರಂಭಿಸಿದರು. ಕೇರಳ ಸರಕಾರ ೨೦೦೯ರಲ್ಲಿ ಇಸ್ಲಾಮಿಕ್ ಬ್ಯಾಂಕ್ ಆರಂಭಿಸಲಾಗುವುದೆಂದು ಆದೇಶ ಹೊರಡಿಸಿತು. ಅದಕ್ಕೆ ಪೂರಕವಾಗಿ ಕೇರಳದ ಆಲ್-ಬರ್ಕಾಹ್ ಹಣಕಾಸು ಸೇವಾ ನಿಗಮಕ್ಕೆ ೧೧% ಆರ್ಥಿಕ ನೆರವು ಕೂಡಾ ನೀಡಿತು. ಆದರೆ ಡಾ. ಸುಬ್ರಹ್ಮಣಿಯನ್ ಸ್ವಾಮಿ ಇದಕ್ಕೆ ಆಕ್ಷೇಪಣೆಯನ್ನು ಸಲ್ಲಿಸುವುದರೊಂದಿಗೆ ಅದು ಹೈಕೋರ್ಟ್ ಮೆಟ್ಟಲೇರಿತು. ಹೈಕೋರ್ಟಿನಲ್ಲಿ ವಾದ ವಿವಾದಗಳು ನಡೆಯುತ್ತಿರುವಾಗಲೇ ಮುಸ್ಲಿಮ್ ನೇತಾರರು ಇಸ್ಲಾಮಿಕ್ ಬ್ಯಾಂಕಿಗಾಗಿ ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಲಾರಂಭಿಸಿದರು. ಆದರೆ ಇದರ ವಿರುದ್ಧವಾಗಿ ವಾದಿಸಿದ ಸ್ವಾಮಿಯವರು ಅದು ಭಾರತೀಯ ಕಾನೂನುಗಳಿಗೆ ವಿರುದ್ಧವೆಂದು ಸಾಬೀತು ಮಾಡಿದರು. ಇದನ್ನಾಲಿಸಿದ ನ್ಯಾಯಪೀಠ " ಒಂದು ವೇಳೆ ಭಾರತದ ಕಾನೂನುಗಳು ಇದಕ್ಕೆ ಅನುಮತಿ ನೀಡುವುದಾದರೆ ಮಾತ್ರ ಇದು ಸ್ವೀಕಾರಯೋಗ್ಯ" ಎಂದು ತೀರ್ಪು ನೀಡಿತು. ಅದಕ್ಕಾಗಿಯೇ ಈಗ ಕೇಂದ್ರ ಸರಕಾರ ಕಾನೂನು ಬದಲಾಯಿಸಲು ಅನುವು ಮಾಡಿದ್ದು. ಯೂರೋಪಿಯನ್ ದೇಶಗಳಲ್ಲಿ ಇಸ್ಲಾಮಿಕ್ ಬ್ಯಾಂಕ್ ಗಳಿಂದಾಗಿ ಈಗಾಗಲೇ ಮುಸ್ಲಿಂ ಜನಸಂಖ್ಯೆ ವಿಪರೀತವಾಗಿ ಏರುತ್ತಿದ್ದು ಜನರು ಇಸ್ಲಾಮಿಕ್ ಬ್ಯಾಂಕ್ ಗಳನ್ನು ನಿಷೇಧಿಸುವಂತೆ ಆಗ್ರಹ ಮಾಡುತ್ತಿದ್ದಾರೆ. ಆದರೆ ಭಾರತದಲ್ಲಿ ವೋಟ್ ಬ್ಯಾಂಕಿಗಾಗಿ ದೇಶವನ್ನೇ ಒತ್ತೆ ಇಡುವ ರಾಜಕಾರಣಿಗಳು ಇದರ ಪರವಾಗಿದ್ದು, ಇದನ್ನು ವಿರೋಧಿಸುತ್ತಿರುವ ಸ್ವಾಮಿಯವರಿಗೆ ನಾವು ಧ್ವನಿಯಾಗಬೇಕಿದೆ. ಇಲ್ಲದೇ ಇದ್ದರೆ ಸರ್ವನಾಶ ಖಂಡಿತ.
ಈಗಲ್ಲದಿದ್ದರೆ ಇನ್ಯಾವಾಗ?....ಎದ್ದೇಳು ಅರ್ಜುನ...!!!

ಬುಧವಾರ, ಜನವರಿ 23, 2013

ಆತನಹುದು ನಿಜ ನೇತಾ...ಬ್ರಿಟಿಷರ ಬಡಿದಟ್ಟಿದಾತ...

ಆತನಹುದು ನಿಜ ನೇತಾ...ಬ್ರಿಟಿಷರ ಬಡಿದಟ್ಟಿದಾತ...

                           ಇನ್ನೇನು ಕೆಚ್ಚೆದೆಯ ಗಂಡುಗಲಿಗಳ ಕ್ರಾಂತಿಪರ್ವ ಮುಗಿದುಹೋದಂತೆ ಭಾಸವಾದ ಕಾಲವದು. ಬ್ರಿಟಿಷರ ಕಸದ ಬುಟ್ಟಿಗಳನ್ನು ತನ್ನ ಮನವಿ ಪತ್ರಗಳಿಂದ ತುಂಬುತ್ತಾ ತನಗೆ ಬೇಕಾದ ಸ್ಥಾನ, ಮಾನ, ಧನ ಪಡೆಯುತ್ತಿತ್ತು ಕಾಂಗ್ರೆಸ್. ತನ್ನ ಬಾಲಬಡುಕರಿಂದ ಮಹಾತ್ಮ ಎಂದು ಘೋಷಿಸಿಕೊಂಡ ತಥಾಕಥಿತ ನಾಯಕನೊಬ್ಬ ಹೇಳಿದ್ದೇ ಸತ್ಯ, ಮಾಡಿದ್ದೇ ಧರ್ಮ, ಅನುಸರಿಸಿದ್ದೇ ನೀತಿ ಎಂದು ಮುಗ್ಧಜನತೆ ತನ್ನ ಕ್ಷಾತ್ರ ತೇಜವನ್ನು ಕಳೆದುಕೊಂಡು ಅಪ್ಪಿ ಒಪ್ಪಿಕೊಳ್ಳುತ್ತಿದ್ದ ದುರಂತ ಸಮಯ. ಆದರೆ ಅವನೊಬ್ಬನಿದ್ದ ಗಂಡುಗಲಿ. ಅವನೆದ್ದ. ಬ್ರಿಟಿಷರು ಬೆಚ್ಚಿದರು, ಕಾಂಗ್ರೆಸ್ಸಿನ ತಥಾಕಥಿತ ನಾಯಕರು ಬೆದರಿದರು. ಯಾಕೆಂದರೆ ಅವನು ಜನ್ಮತಃ ನಾಯಕ. ಸುಭಾಷ್ ಚಂದ್ರ ಬೋಸ್. ಸೂರ್ಯ ಎಂದಿಗೂ ಸೂರ್ಯನೇ ಅಲ್ಲವೇ?

                             ಅತಿ ಬುದ್ಧಿವಂತನಾಗಿದ್ದ ಆತ ಐ. ಸಿ. ಎಸ್ ನಲ್ಲಿ(೧೯೨೦) ನಾಲ್ಕನೇ ಶ್ರೇಯಾಂಕ ಅಲಂಕೃತ. ಆದರೆ ಮಾತೃಭೂಮಿ ಕೈ ಬೀಸಿ ಕರೆಯಿತು. ಸೈನ್ಯಕ್ಕೆ ಸೇರೋಣವೆ? ನಿನಗೆ ದೃಷ್ಟಿ ದೋಷವಿದೆ ಎಂದುಬಿಟ್ಟರು ಅಧಿಕಾರಿಗಳು. ದೃಷ್ಟಿ ಸರಿಯಿಲ್ಲದಿದ್ದರೇನು, ದೂರದೃಷ್ಟಿಯಿತ್ತಲ್ಲ! ಮುಂದೆ ಈತ ಸ್ವತಂತ್ರ ಭಾರತದ ಮೊದಲ ಸೈನ್ಯವನ್ನು ಕಟ್ಟಬಹುದೆಂದು ಯಾರಾದರೂ ಊಹಿಸಿದ್ದರೆ? ಕಾಂಗ್ರೆಸ್ ಸೇರಿದ ಆತ. ಆತನ ವರ್ಚಸ್ಸು ಕಾಂಗ್ರೆಸ್ ಅಧ್ಯಕ್ಷ ಚುನಾವಣೆಯಲ್ಲಿಯೂ ಸ್ಪರ್ದಿಸುವಂತೆ ಮಾಡಿತು. ಆದರೆ ಅಂತಹ ಅಪ್ರತಿಮ ನಾಯಕ ಗೆದ್ದರೆ ತನ್ನ ಕೆಲಸ ಕೆಡುತ್ತದೆಂದು ಗಾಂಧಿ ತನ್ನ ಬೆಂಬಲಿಗ ಸೀತಾರಾಮ್ ಕೇಸರಿಯನ್ನು ಎದುರಾಳಿಯಾಗಿ ನಿಲ್ಲಿಸಿದ(೧೯೩೯). ಭಾರತದ ಕೆಟ್ಟ ರಾಜಕಾರಣಕ್ಕೆ ಅಡಿಗಲ್ಲು ಹಾಕಿದ್ದೇ ಈ ಗಾಂಧಿ! ಆದರೇನು ಸುಭಾಷ್ ಭರ್ಜರಿ ಮತಗಳಿಂದ ಗೆದ್ದರು. ಗಾಂಧಿ ಸುಮ್ಮನುಳಿದಾನೆ? ಸೀತಾರಾಮ ಕೇಸರಿಯ ಸೋಲು ಎಂದರೆ ನನ್ನ ಸೋಲು ಅಂದುಬಿಟ್ಟ ಗಾಂಧಿ. ಮಾತ್ರವಲ್ಲ ಅಡಿಗಡಿಗೆ ಸುಭಾಷರನ್ನು ಅವರ ಕಾರ್ಯವನ್ನು ವಿರೋಧಿಸುತ್ತಲೇ ಬಂದ. ಇದರಿಂದ ರೋಸಿ ಹೋದ ಸುಭಾಷ್ ರಾಜಿನಾಮೆ ಬಿಸಾಕಿ ತನ್ನದೇ ಆದ ಹಾದಿಯನ್ನು ಅನುಸರಿಸತೊಡಗಿದರು. ಆದರೂ ಗಾಂಧಿ ಮಹಾತ್ಮ!!! ಮುಂದೆ ಹಾಗೂ ಇಂದಿಗೂ ರಾಷ್ಟ್ರಪಿತ!!! ಕಾಲದ ವಿಪರ್ಯಾಸವೇ? ಹಿಂದೂಗಳ ಹೇಡಿತನವೇ? ಮರೆಗುಳಿತನವೇ?

                          ವಿಗ್ರಹಗಳನ್ನು ಭಗ್ನಗೊಳಿಸುತ್ತ ಬ್ರಿಟಿಷರ ವಿರುದ್ಧ ಪ್ರತಿಭಟನೆ ಮುಂದುವರಿಸಿದ್ದ ಸುಭಾಷರಿಗೆ ಅಪ್ರತಿಮ ದೇಶಭಕ್ತ ಸ್ವಾತಂತ್ರ್ಯ ವೀರ ಸಾವರ್ಕರರನ್ನು ಭೇಟಿಯಾಗುವ ಅವಕಾಶ ಒದಗಿ ಬಂತು. ಸಾವರಕರ್ ಸುಭಾಷರಿಗೆ ವಿಗ್ರಹ ಭಗ್ನಗೊಳಿಸುವ ಬದಲು ದೇಶದ ಹೊರಗೆ ನಿಂತು ಹೋರಾಡಲು ಸಲಹೆ ಮಾಡಿದರು. ಅದು ಪರಶುರಾಮ ಮತ್ತು ಆಗಸ್ಥ್ಯರು ಭೇಟಿಯಾಗಿ ಪರಶುರಾಮರು ತನ್ನ ಕೆಲಸವನ್ನು ಮುಂದುವರಿಸಲು ಆಗಸ್ಥ್ಯರಿಗೆ ಆಶೀರ್ವಾದ ನೀಡಿದಂತೆ. ಮನದೊಳಗಿನ ಕಿಡಿಗೆ ಆಜ್ಯ ದೊರಕಿತು. ಸಮಯಕ್ಕೆ ಸರಿಯಾಗಿ ಸರಕಾರ ಸುಭಾಷರನ್ನು ಗೃಹಬಂಧನದಲ್ಲಿರಿಸಿತು. ಈಗ ಸುಭಾಷರಿಗೆ ೩ ತಿಂಗಳು ಕಳೆದರೂ ಗುಣವಾಗದ ಕಾಯಿಲೆ. ತಮ್ಮ ಹಿತೈಷಿಗಳನ್ನು ಬಿಟ್ಟು ಬೇರೆ ಯಾರೂ ಭೇಟಿಯಾಗುವಂತೆ ಇಲ್ಲ. ಸರಕಾರಕ್ಕೆ ಗುಮಾನಿ ಬಂದು ಮನೆಗೆ ಬಂದು ನೋಡಿದರೆ ಪಂಜರದ ಬಾಗಿಲು ತೆರೆದಿತ್ತು. ಸುಭಾಷರು ಟೋಕಿಯೋದ ಆಕಾಶವಾಣಿಯಿಂದ ಮಾತನಾಡಿದ ಮೇಲೆಯೇ ಗೊತ್ತಾದುದು ಅವರಿಗೆ ಬಂದ ರೋಗ ಅಗಾಧ ದೇಶಪ್ರೇಮ.

                       ಅದೊಂದು ಅಪರಿಮಿತ ಸಾಹಸ. ಊಹಿಸಿಕೊಳ್ಳಿ ಒಂದುಕಡೆ ಸರಕಾರದ ಹದ್ದಿನ ಕಣ್ಣು, ಮನೆಯ ಸುತ್ತಲು ಪೋಲಿಸರು. ಇನ್ನೊಂದು ಕಡೆ ತನಗಾಗದ ಸುಭಾಷರನ್ನು ಹೇಗಾದರೂ ಮಣ್ಣು ಮುಕ್ಕಿಸಲು ಕಾದಿದ್ದ ಗಾಂಧಿ ಮತ್ತವನ ಬೆಂಬಲಿಗರು. ಸುಭಾಷರ ನಿಜವಾದ ಅಂತಃಶಕ್ತಿ ಬಾಹ್ಯಜಗತ್ತಿಗೆ ಸ್ಥೂಲವಾಗಿ ಪರಿಚಯವಾದದ್ದೇ ಆವಾಗ. ಭಾರತದಲ್ಲಿ ಅಗಾಧ ಕ್ರಾಂತಿ ಸಂಘಟನೆ ಮಾಡಿದ್ದ, ವೈಸ್ ರಾಯನ ಮೇನೆಯ ಮೆಲೆ, ಬ್ರಿಟಿಷರ ಕಟ್ಟಡಗಳಿಗೆ ಬಾಂಬ್ ಎಸೆದು ಬ್ರಿಟಿಷ್ ಸಾಮ್ರಾಜ್ಯಕ್ಕೆ ಸವಾಲೊಡ್ಡಿದ, ಅಡಿಗಡಿಗೆ ತನ್ನ ರೂಪ ಬದಲಾಯಿಸುತ್ತಾ ಕ್ರಾಂತಿ ಸಂಘಟನೆ ಮಾಡುತ್ತಿದ್ದ, ಬ್ರಿಟಿಷರ ಅಧಿಕಾರಿಗಳ ಮಧ್ಯೆ ಇದ್ದು ಅವರಿಗೆ ಚಳ್ಳೆಹಣ್ಣು ತಿನ್ನಿಸಿದ, ಸೈನ್ಯವನ್ನು ಹುರಿದುಂಬಿಸಿ ಬ್ರಿಟಿಷರ ವಿರುದ್ಧ ದಂಗೆಯೇಳುವಂತೆ ಪ್ರೇರೇಪಿಸಿದ, ಕೊನೆಗೆ ಬ್ರಿಟಿಷರ ಕೈಗೆ ಸಿಗದೆ ಜಪಾನಿಗೆ ಹೋಗಿ ಜಪಾನಿನಲ್ಲಿದ್ದುಕೊಂಡು ಕ್ರಾಂತಿ ಸಂಘಟನೆ ಮಾಡಿದ್ದ ಶಿವಾಜಿ, ತಾತ್ಯಾಟೋಪೆ, ಸಾವರಕರರ, ಮುಂದುವರಿಕೆ ಎಂದೇ ಪರಿಗಣಿತನಾದ ರಾಸ್ ಬಿಹಾರಿ ಬೋಸ್ ತನ್ನ ಕ್ರಾಂತಿ ಪರಿವಾರವನ್ನು ಸುಭಾಷರಿಗೊಪ್ಪಿಸಿ ತಾನು ಕಾಲನ ಮೊರೆ ಹೊಕ್ಕರು. ಜಪಾನ್, ಜರ್ಮನಿಗಳ ಸಹಕಾರದೊಂದಿಗೆ ಭಾರತದ ಮೊದಲ ರಾಷ್ಟ್ರೀಯ ಸೇನೆ ಸಿದ್ಧವಾಗಿಯೇಬಿಟ್ಟಿತು. ಆಜಾದ್ ಹಿಂದ್ ಫೌಝ್- ಸ್ವತಂತ್ರ ಹಿಂದು ಸೇನೆ ಸುಭಾಷರ ನಾಯಕತ್ವದಲ್ಲಿ ಬೆಳೆಯತೊಡಗಿತು.

                     ಅಷ್ಟೇ ಅಲ್ಲ ಸುಭಾಷರ ದೂರದೃಷ್ಟಿ ನೋಡಿ, ಜಗತ್ತಿನ ಏಳೆಂಟು ರಾಷ್ಟ್ರಗಳಿಂದ ಮಾನ್ಯತೆ ಪಡೆದ ಪ್ರಪ್ರಥಮ ಭಾರತೀಯ ಸರಕಾರ ಮತ್ತು ಸಂವಿಧಾನ ರಚನೆಯಾಯಿತು ವಿದೇಶಿ ನೆಲದಲ್ಲಿ! ಸಾವರಕರ್ ಬರೆದ ಪ್ರಕಟಣೆಗೆ ಮುನ್ನವೇ ಎರಡೆರಡು ದೇಶಗಳಲ್ಲಿ ನಿಷೇಧಿಸಲ್ಪಟ್ಟಿದ್ದ, ಅಸಂಖ್ಯ ಕ್ರಾಂತಿಕಾರಿಗಳಿಗೆ ಸ್ಪೂರ್ತಿಗೀತೆಯಾಗಿದ್ದ "ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮ" ಐಎನ್ಎಯ ಭಗವದ್ಗೀತೆಯಾಯಿತು. ಸುಬಾಷ್ ಗುಡುಗಿದರು " ನನಗೆ ಒಂದು ತೊಟ್ಟು ರಕ್ತ ಕೊಡಿ, ನಾನು ನಿಮಗೆ ಸ್ವಾತಂತ್ರ್ಯ ತಂದುಕೊಡುತ್ತೇನೆ." ಬ್ರಿಟಿಷರು ನಡುಗಿದರು. ಗಾಂಧಿ ಪರಿವಾರ ಥರಗುಟ್ಟಿತು. ನೆಹರೂ ಬೊಗಳಿದ " ಸುಬಾಷರು ಬ್ರಿಟಿಷರ ವಿರುದ್ಧ ಯುದ್ಧಕ್ಕೆ ಬಂದರೆ ನಾನು ಖಡ್ಗ ಹಿಡಿದು ಬ್ರಿಟಿಷರನ್ನೆದುರಿಸುತ್ತೇನೆ." ಅದೇ ಬುದ್ಧಿಯಲ್ಲವೇ ಇಂದಿನ ಕಾಂಗ್ರೆಸ್ನಲ್ಲಿರುವುದು?

                  ಶುರುವಾಯಿತು ಐಎನ್ಎಯ ಅಭಿಯಾನ. ದಿಲ್ಲಿಚಲೋ... ಅಂಡಮಾನ್, ನಿಕೋಬಾರ್ ಗಳು ಸ್ವತಂತ್ರವಾದವು. ಸುಭಾಷರು ಅವುಗಳಿಗೆ ಶಹೀದ್ ಮತ್ತು ಸ್ವರಾಜ್ಯ್ ಎಂದು ಮರುನಾಮಕರಣ ಮಾಡಿದರು. ನಾವದನ್ನು ಉಳಿಸಿಕೊಂಡಿಲ್ಲ. ಇಂಫಾಲ್, ಮಣಿಪುರ ವಶವಾದವು. ಪ್ರಕೃತಿ ಮುನಿಯಿತು. ಐಎನ್ಎಗೆ ಅದು ಶಾಪವಾಗಿ ಕಾಡಿತು. ಮಳೆ, ಮಂಜು, ಭೂಕುಸಿತದಂತಹ ವಿಕೋಪಗಳಿಂದ ಐಎನ್ಎ ಧರಾಶಾಯಿಯಾಗಬೇಕಾಯಿತು, ಬ್ರಿಟಿಷರ ಶೌರ್ಯದಿಂದಲ್ಲ. ಈ ಮಧ್ಯೆ ಸುಭಾಷರ ಸಹವರ್ತಿಗಳು ಅವರನ್ನು ಜಪಾನಿಗೆ ತೆರಳುವಂತೆ ಮನವಿ ಮಾಡಿದರು. ಮೊದಲು ಒಪ್ಪದ ಸುಭಾಷ್ ಭವಿಷ್ಯದ ಸಂಘಟನೆಯ ಹಿತದೃಷ್ಟಿಯಿಂದ ಒಪ್ಪಲೇ ಬೇಕಾಯಿತು. ಐಎನ್ಎಯ ಸೈನಿಕರು ಬ್ರಿಟಿಷರ ಸೆರೆ ಸಿಕ್ಕರು. ಆದರೆ ಐಎನ್ಎಯ ಈ ಪರಾಕ್ರಮ ಸೇನೆಯಲ್ಲಿ ಸಂಚಲನ ಮೂಡಿಸಿತು. ಸೇನೆ ದಂಗೆ ಎದ್ದಿತು. ತಾವು ಬೂಟುಗಾಲಿಂದ ಒದ್ದವರು ಇನ್ನು ತಮ್ಮನ್ನೇ ಒದೆಯುತ್ತಾರೆ ಎಂದು ಬೆದರಿದ ಬ್ರಿಟಿಷರು , ಗಾಂಧಿಯ ದೇಹವನ್ನು ತುಂಡರಿಸದೇ ಭಾರತವನ್ನು ವಿಭಜಿಸಿ ಗಂಟುಮೂಟೆ ಕಟ್ಟಿದರು.

                             ಇತ್ತ ಸುಭಾಷರು ಜಪಾನಿಗೆ ತೆರಳಿ ಅಲ್ಲಿಂದ ತೈಪೆ ತಲುಪಿದರು. ನಂತರ ರಷಿಯಾ ಮುಖಾಂತರ ಭಾರತಕ್ಕೆ ಬರಲು ಅವರು ಹಾಕಿಕೊಂಡಿದ್ದ ಯೋಜನೆ ತಲೆಕೆಳಗಾಯಿತು. ರಷ್ಯಾ ಬ್ರಿಟಿಷರ ಆಣತಿಯಂತೆ ಅವರನ್ನು ಸೈಬೀರಿಯಾದ ಕೊರೆಯುವ ಚಳಿಗೆ ನೂಕಿತು. ನೆಹರೂ, ಗಾಂಧಿ ಪರಿವಾರ ಇಲ್ಲದ ವಿಮಾನ ದುರಂತ ಸೃಷ್ಟಿಸಿ ಸುಭಾಷರನ್ನು ಜೀವಂತ ಕೊಂದರು. ಮಾತ್ರವಲ್ಲದೆ ರಷಿಯಾ ಮತ್ತು ಬ್ರಿಟಿಷರಿಗೆ ಪತ್ರ ಬರೆದು ಸುಭಾಷರನ್ನು ಬಿಡುಗಡೆ ಮಾಡದಂತೆ ನೋಡಿಕೊಂಡರು. ಆದರೆ ಸಿಂಹ ಎಂದೆಂದಿಗೂ ಸಿಂಹವೇ. ಅದು ತಪ್ಪಿಸಿಕೊಂದು ನೇಪಾಳದ ಮುಖಾಂತರ ಭಾರತವನ್ನು ಸೇರಿತು. ಗುಮ್ ನಾಮೀ ಬಾಬಾ, ಭಗವಾನ ದಾಸ್ ಎಂಬ ಹೆಸರಲ್ಲಿ ತಿಂಗಳಿಗೊಮ್ಮೆ ಮನೆ ಬದಲಾಯಿಸುತ್ತಾ ತನ್ನದೇ ದೇಶದಲ್ಲಿ ಪರಕೀಯನಂತೆ ಬದುಕಿತು.

ಸಾಕ್ಷಿ ಏನು?
ಸುಬಾಷರ ಬಳಿ ಇದ್ದ ಎಲ್ಲಾ ವಸ್ತುಗಳು( ಅವರ ಚಿನ್ನ ಕಟ್ಟಿಸಿಕೊಂಡಿದ್ದ ಹಲ್ಲು, ಕನ್ನಡಕ, ಅವರ ಪ್ರೀತಿಯ ಕೊಡೆ, ಅವರ ಪತ್ರಗಳು, ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಒಂದು ಪ್ರತಿ...ಇತ್ಯಾದಿ) ಭಗವಾನ್ ದಾಸ್ ಬಳಿ ಇದ್ದವು. ಯಾರು ಸುಭಾಷರು ತಪ್ಪಿಸಿಕೊಳ್ಳಲು ಸಹಾಯ ಮಾಡಿದರೋ, ಯಾರು ಅವರಿಗೆ ಆಪ್ತರಾಗಿದ್ದರೋ ಅವರೇ ಭಗವಾನ್ ದಾಸ್ ಜೊತೆ ಇದ್ದರು. ಅಪರಿಚಿತರು ಬಂದಾಗ ಭಗವಾನ್ ದಾಸ್ ಪರದೆಯ ಹಿಂದೆ ಕುಳಿತು ಮಾತಾಡುತ್ತಿದ್ದರು. ಸುಭಾಷ್ ಮತ್ತು ಭಗವಾನ್ ದಾಸರ ಕೈಬರಹಗಳು ಒಂದೇ ಆಗಿದ್ದವು. ನೆಹರೂ ಅಂತ್ಯಕ್ರಿಯೆಯಲ್ಲಿ ಇವರೂ ಭಾಗಿಯಾಗಿದ್ದ ಚಿತ್ರಗಳಿವೆ. ಇಂತಹ ಹತ್ತು ಹಲವು ದಾಖಲೆಗಳಿವೆ. ಇದಕ್ಕಾಗಿ ಮುಖರ್ಜಿ ಆಯೋಗ ಮತ್ತು ಸರಕಾರಗಳು ನೇಮಿಸಿದ್ದ ವಿವಿಧ ಆಯೋಗಗಳ ವರದಿಯನ್ನು ಪರಿಶೀಲಿಸಬಹುದು. ಮುಂದೆ 1985ರಲ್ಲಿ ಭಗವಾನ್ ದಾಸ್ ಅರ್ಥಾತ್ ಸುಭಾಷರು ಇಹಲೋಕ ತ್ಯಜಿಸಿದರು. ಆಗ ೧೩ ಮಂದಿ ಮಾತ್ರ ಹಾಜರಿದ್ದರು.

                      ಹೌದು ಆತ ನಿಜವಾದ ನೇತಾ! ನಮ್ಮೆಲ್ಲರನ್ನು ಬಡಿದೆಚ್ಚರಿಸಿದಾತ! ಬ್ರಿಟಿಷರನ್ನು ಬಡಿದಟ್ಟಿದಾತ! ನಮ್ಮ ಸ್ವಾತಂತ್ರ್ಯದಾತ! ಆದರೆ ಯಾರು ನಮಗೆ ಸ್ವಾತಂತ್ರ್ಯ ತಂದುಕೊಟ್ಟನೋ ಅವನನ್ನು ನೆಹರೂ, ಗಾಂಧಿ ಜೀವಂತ ಕೊಂದುಬಿಟ್ಟರು. ನಾವು ಮರೆತು ಬಿಟ್ಟೆವು. ಆತನ ಸ್ವಾತಂತ್ರ್ಯ ಕಸಿದುಕೊಂಡೆವು. ಎಂತಹ ಪಾಪಿಗಳು ನಾವು! ಸಾವರ್ಕರ್ ತಾತ್ಯಾಟೋಪೆಯ ಕಥನ ಬರೆದ ನಂತರ ಹೇಳಿದರು " ತಾತ್ಯಾ ಈ ದೌರ್ಭಾಗ್ಯ ಪೂರ್ಣ ದೇಶದಲ್ಲಿ ಯಾಕೆ ಹುಟ್ಟಿದಿ. ಜಪಾನಿನಲ್ಲೋ, ಜರ್ಮನಿಯಲ್ಲೋ ಹುಟ್ಟಿದ್ದಿದ್ದರೆ ನಿನ್ನನ್ನು ಗುಡಿ ಕಟ್ಟಿ ಪೂಜಿಸುತ್ತಿದ್ದರು" ಇದೇ ಮಾತು ಈ ಮಾತು ಹೇಳಿದ ಸಾವರ್ಕರರಿಗೂ, ಸುಭಾಷರಿಗೂ ಹಾಗೂ ಅಸಂಖ್ಯಾತ ದೇಶಭಕ್ತ ಯೋಧರಿಗೂ ನಾವು ಅನ್ವಯಿಸಿಬಿಟ್ಟೆವಲ್ಲಾ? ಇವರಿಗೆಲ್ಲ ಸಿಗಬೇಕಾದ ಗೌರವ ಸಿಕ್ಕು ಇತಿಹಾಸಕ್ಕೆ ನ್ಯಾಯ ದೊರಕಿಸಿಕೊಡಬೇಕಾದುದು ನಮ್ಮ ಕರ್ತವ್ಯವಲ್ಲವೇ?
ಜೈಹಿಂದ್...

ಶನಿವಾರ, ಜನವರಿ 19, 2013

ಭಾರತ ದರ್ಶನ - ೨೫

ಭಾರತ ದರ್ಶನ - ೨೫:

                      ಗಂಗೆ ಅಂದರೆ ನಮಗೆ ಮುಕ್ತಿ, ಮೋಕ್ಷಗಳ ಸಂಕೇತ. ಭಕ್ತಿಯ ಪ್ರತೀಕ. ಅವಳು ಈ ದೇಶದ ಸಾಮಾಜಿಕ, ಧಾರ್ಮಿಕ ಮತ್ತು ಐತಿಹಾಸಿಕ ಬದುಕಿನ ಕೇಂದ್ರವಾಗಿದ್ದಾಳೆ.  ಜೀವನದಲ್ಲಿ ಒಮ್ಮೆಯಾದರೂ ಗಂಗೆಯನ್ನು ನೋಡಬೇಕು ಅಥವಾ ಆ ತೀರ್ಥವನ್ನು ಕುಡಿಯಬೇಕು ಎನ್ನುವುದು ಪ್ರತಿಯೊಬ್ಬ ಭಾರತೀಯನ ಮನದಲ್ಲಿ ಇರುವ ಮಹದಭಿಲಾಷೆ.  ಗಂಗೆಯನ್ನು ದಾಟೋದು ಅಂದರೆ ಜನನ ಮರಣಗಳ ಚಕ್ರವನ್ನು ದಾಟೋದು ಈ ಭವಬಂಧನದಿಂದ ಮುಕ್ತಿ ಹೊಂದುವುದು ಎಂದರ್ಥ. ಗಂಗಾಜಲವನ್ನು ಅಮೃತ ಎಂದು ತಿಳಿದ ದೇಶ ನಮ್ಮದು. ಇದು ಮೂಢ ನಂಬಿಕೆ ಅಲ್ಲ. ವಾಗ್ಭಟ ತನ್ನ ಅಷ್ಟಾಂಗ ಹೃದಯದಲ್ಲಿ ಗಂಗಾಜಲ ಅಮೃತಮಯವಾದ ಆರೋಗ್ಯಕರವಾದ ಅಂಶಗಳನ್ನು ಹೊಂದಿದೆ ಅಂತ ಸಾರಿ ಸಾರಿ ಹೇಳಿದ್ದಾನೆ.ಕೊಳಕಾದ ನೀರನ್ನು ಶುದ್ಧೀಕರಿಸಿಕೊಂಡು ಮತ್ತೆ ಪುನಶ್ಚೇತನಗೊಳಿಸಬಲ್ಲ ಗುಣ ಗಂಗಾಜಲದಲ್ಲಿದೆ ಅಂತ ಆತ ತನ್ನ ಗ್ರಂಥದಲ್ಲಿ ಸಾಬೀತು ಮಾಡಿದ್ದಾನೆ. ನಮ್ಮೆಲ್ಲಾ ಪ್ರಾಚೀನ ಸಾಹಿತ್ಯಗಳಲ್ಲಿ ಗಂಗೆ ವರ್ಣಿತಳಾಗಿದ್ದಾಳೆ. ಇದರ ಒಂದು ಗುಟುಕು ನೀರನ್ನು ಸೇವಿಸಿದವರ ಹತ್ತಿರ ಯಮದೂತರು ಸುಳಿಯೋದಿಲ್ಲವಂತೆ. ಅಂದ ಮೇಲೆ ಇದರ ಪ್ರಭಾವ ಎಷ್ಟಿರಬೇಕು?

                      ನಮ್ಮ ಪಾಲಿಗೆ ಗಂಗೆ ಬರಿ ನೀರಲ್ಲ. ಅದು ನಮ್ಮ ನಾಡಿನ ಉಸಿರು. ಆಕೆ ನಮ್ಮ ಮೈ ಮನಗಳನ್ನು ಪಾವನಗೊಳಿಸುವವಳು. ದಿವ್ಯ ರಥವಾಹಿನಿ. ಮೂರು ಲೋಕದಲ್ಲಿ ಹರಿಯುವವಳು. ಭುವಿಯಲ್ಲಿ ಗಂಗೆಯಾಗಿ, ಸುರಲೋಕದಲ್ಲಿ ಅಲಕೆಯಾಗಿ, ಪಿತೃ ಲೋಕದಲ್ಲಿ ವೈತರಣಿ ಅಂತ ಕರೆಯಲ್ಪಟ್ಟಿದ್ದಾಳೆ. ಅದಕ್ಕಾಗಿ ಅವಳನ್ನು ತ್ರಿಪಥಗಾ ಅಂತಾ ಕರೆಯುತ್ತೇವೆ. ಗಂಗೆಯ ಸ್ಮರಣ ಮಾತ್ರದಿಂದ ಶಮನವಾಗುತ್ತೆ ಪಾಪ. ದರ್ಶನದಿಂದ ಸಾರ್ಥಕವಾಗುತ್ತೆ ಕಣ್ಣು. ಬದುಕು ಮಂಗಲಮಯವಾಗುತ್ತೆ. ಗಂಗೆಗೆ ಸಮನಾದ ತೀರ್ಥವಿಲ್ಲ, ಕೇಶವನಿಗೆ ಹಿರಿದಾದ ದೇವರಿಲ್ಲ ಎನ್ನುವುದು ಮಹಾಭಾರತದ ಒಂದು ಮಾತು. ಗೀತೆಯಲ್ಲಂತೂ ಕೃಷ್ಣ ನದಿಗಳಲ್ಲಿ ನಾನು ಜಾಹ್ನವಿ ಅಂತ ಘೋಷಣೆ ಮಾಡಿದ್ದಾನೆ.

                 ಗಂಗೆಯ ಬಗ್ಗೆ ಈ ಶೃದ್ಧೆ ಕೇವಲ ನಮ್ಮ ದೇಶದಲ್ಲಿ ಮಾತ್ರ ಇದೆ ಅಂತ ಭಾವಿಸಬೇಡಿ. ಇಡೀ ಜಗತ್ತಿನಲ್ಲಿ ಗಂಗೆಯ ಬಗ್ಗೆ ಅಸದೃಶವಾದ ಭಾವನೆಯನ್ನು ನಾವು ನೋಡಬಹುದು. ಇತಿಹಾಸದಲ್ಲಿ ಹುಚ್ಚು ದೊರೆ ಅಂತ ವರ್ಣಿಸಲ್ಪಟ್ಟ ಮೊಹಮದ್ ಬಿನ್ ತುಘಲಕ್ ಸ್ನಾನಕ್ಕೆ, ಪಾನಕ್ಕೆ ಗಂಗಾಜಲ ಬಳಸುತ್ತಿದ್ದ. ಗಂಗೆಯ ನೀರನ್ನು ದೌಲತಾಬಾದ್ಗೆ ತರಲು ನಲವತ್ತು ದಿನಗಳು ಹಿಡಿಯುತ್ತಿದ್ದವು. ಅರಮನೆಯಲ್ಲಿರಲಿ, ಪ್ರವಾಸದಲ್ಲೇ ಇರಲಿ ಆತ ಗಂಗೆಯ ನೀರನ್ನೇ ಬಳಸುತ್ತಿದ್ದ. ಮತಾಂಧ, ಹಿಂದೂದ್ವೇಷಿ ಔರಂಗಜೇಬ ಗಂಗಾವೃತವನ್ನು ಮಾಡಿಸಿದ್ದ. ಗಂಗೆಯ ಬಗ್ಗೆ ಅವನಿಗೆ ಅಷ್ಟೊಂದು ಶೃದ್ಧೆ ಇತ್ತು. ಈ ಮಾತನ್ನು ಹದಿನೇಳನೇ ಶತಮಾನದಲ್ಲಿ ಭಾರತಕ್ಕೆ ಬಂದ ಫ್ರೆಂಚ್ ಇತಿಹಾಸಕಾರ ಬಾರ್ನಿಯರ್ ಬರೆದಿಟ್ಟಿದ್ದಾನೆ. ೧೭ನೇ ಶತಮಾನದ ಡಚ್ ಪ್ರವಾಸಿ ಫ್ರಾನ್ಸಿಸ್ಕೋ ಪೆಲ್ಸಾರ್ಟ್ಸ್ ಹೇಳುತ್ತಾನೆ " ಗಂಗಾಜಲ ನೂರುವರ್ಷ ಇಟ್ಟರೂ ಕೊಳೆಯೋದಿಲ್ಲ. ಹುಳುಗಳು ಹುಟ್ಟುವುದಿಲ್ಲ."

ಗಂಗೆ ಭುವಿ ಸೇರಿದ ಬಗೆ ಹೇಗೆ?
                    ಅಯೋಧ್ಯಾ ಸಾಮ್ರಾಟ ಸಗರ ಅಶ್ವಮೇಧ ಮಾಡುತ್ತಿದ್ದಾಗ ಇಂದ್ರ ಕುದುರೆಯನ್ನು ಕದ್ದು ಬಿಟ್ಟ. ಸಗರ ತನ್ನ ೬೦ ಸಾವಿರ ಮಕ್ಕಳಿಗೆ ಹಯವನ್ನು ಎಲ್ಲಿದ್ದರೂ ಹುಡುಕಿ ತರುವಂತೆ ಆಜ್ಞಾಪಿಸಿದ. ಸಗರ ಪುತ್ರರು ಹರಿಯನ್ನರಸುತ್ತಾ ಪಾತಾಳಕ್ಕೂ ಹೋದರು. ಅಲ್ಲಿ ಧ್ಯಾನಮಗ್ನ ಕಪಿಲನ ಪಕ್ಕ ಅಶ್ವ ನಿಂತಿತ್ತು. ಸಗರಪುತ್ರರು ಮುನಿಯೇ ಕದ್ದಿರಬೇಕೆಂದು ಅವನ ಮೇಲೆರಗಿದರು. ಕಣ್ತೆರೆದ ಕಪಿಲ ಕಿಡಿಯಾದ. ಸಗರ ಪುತ್ರರು ಹಿಡಿ ಬೂದಿಯಾದರು. ಚಿಂತಿತನಾದ ಸಗರ ಮೊಮ್ಮಗ ಅಂಶುಮಂತನನ್ನು ಕಳುಹಿಸಿದ. ಅವನೂ ಎಲ್ಲೆಡೆ ಸುತ್ತಿ ಪಾತಾಳಕ್ಕೆ ಬಂದು ನಡೆದ ಸಂಗತಿ ತಿಳಿದ. ಪಿತೃಗಳಿಗೆ ತಿಲಾಂಜಲಿ ನೀಡಲು ನೀರಿಲ್ಲ. ಆಗ ಸಗರಪುತ್ರರ ಸೋದರಮಾವ ಗರುಡ ಪ್ರತ್ಯಕ್ಷನಾಗಿ ಅಂಶುಮಂತನನ್ನು ಸಂತೈಸಿ " ಇದು ವಿಧಿಲೀಲೆ. ಮೊದಲು ಹಯದೊಂದಿಗೆ ಅಯೋಧ್ಯೆಗೆ ಪಯಣಿಸಿ ಯಜ್ಞವನ್ನು ಪೂರೈಸು. ನಂತರ ಗಂಗೆಯನ್ನು ಒಲಿಸಿ ಭೂಮಿಗೆ ಕರೆತಂದು ಅಂಜಲಿ ನೀಡು" ಎಂದ. ಯಜ್ಞ ಸಾಂಗವಾಗಿ ನೆರವೇರಿತು. ಸಗರ ದುಃಖದಲ್ಲೇ ಸ್ವರ್ಗವಾಸಿಯಾದ. ಅಂಶುಮಂತ ಮಗ ದಿಲೀಪನಿಗೆ ರಾಜ್ಯವನ್ನೊಪ್ಪಿಸಿ ಹಿಮಾಲಯ ಸೇರಿ ತಪಸ್ಸನ್ನಾಚರಿಸಿದ. ಗಂಗೆ ಬರಲೇ ಇಲ್ಲ. ಹಣ್ಣಾದ ಅಂಶುಮಂತ ಭಗವಂತನ ಅಂಶವಾದ. ಈಗ ದಿಲೀಪನೂ ಮಗ ಭಗೀರಥನಿಗೆ ಪಟ್ಟ ಕಟ್ಟಿ ತಂದೆಯ ಕೆಲಸ ಮುಂದುವರೆಸಿದ. ಗಂಗೆಯನ್ನು ತರಲಾಗದೆ ತಂದೆಯ ಹಾದಿ ಹಿಡಿದ.

                 ಭಗೀರಥ ಹಿಮಾಲಯದ ಗೋಕರ್ಣ ಎಂಬ ದುರ್ಗಮ ಸ್ಥಳದಲ್ಲಿ ತಪಸ್ಸನ್ನಾಚರಿಸಿದ. ತಪಸ್ಸಿಗೆ ಮೆಚ್ಚಿದ ಬ್ರಹ್ಮದೇವ ಗಂಗೆಯ ರಭಸ ತಡೆಯಲು ಶಿವನನ್ನು ಒಲಿಸಿಕೋ. ಇಲ್ಲದಿದ್ದರೆ ಭೂಮಿ ಛಿದ್ರವಾದೀತು ಎಂದು ಸಲಹೆ ನೀಡಿದ. ಭಗೀರಥನ ತಪಸ್ಸಿಗೆ ಮೆಚ್ಚಿದ ಶಿವ ಗಂಗಾಧರನಾಗಲು ಒಪ್ಪಿದ. ಗಂಗೆ ಬಾನಿನಿಂದ ಭೂಮಿಗೆ ಧುಮುಕಿದಳು. ಶಿವನನ್ನು ಕೊಚ್ಚಿಕೊಂಡು ಪಾತಾಳಕ್ಕೆ ಹೋಗುವ ಇಚ್ಛೆ ಅವಳದು. ಅವಳ ಹಮ್ಮು ತಿಳಿದ ಶಿವ ತನ್ನ ಜಟೆಯಲ್ಲಿ ಬಂಧಿಸಿಟ್ಟ. ಭಗೀರಥನಿಗೋ ಇನ್ನೊಂದು ಸಮಸ್ಯೆ. ಪುನಃ ಶಿವನನ್ನು ಪ್ರಾರ್ಥಿಸಿದ. ಶಿವ ಮೆಚ್ಚಿ ತನ್ನ ಜಟೆಯ ಏಳು ಸಂಧಿಗಳಿಂದ ಗಂಗೆಯನ್ನು ಹರಿಯಬಿಟ್ಟ. ಸಪ್ತಗಂಗೆಗಳವು- ಪೂರ್ವಕ್ಕೆ ಹ್ಲಾದಿನೀ, ಪಾವನೀ, ನಳಿನೀ ಮತ್ತು ಪಶ್ಚಿಮಕ್ಕೆ ಸುಚಕ್ಷು, ಸೀತಾ, ಸಿಂಧು. ಏಳನೆಯ ಕವಲು ಬಾಗೀರಥಿಯಾಗಿ ಭಗೀರಥನ ಜೊತೆ ದಕ್ಷಿಣಕ್ಕೆ ಬಂತು. ಆದರಿನ್ನೂ ಆಕೆಯ ಅಹಂ ಕಮ್ಮಿಯಾಗಿರಲಿಲ್ಲ. ದಾರಿಯಲ್ಲಿ ಜಹ್ನು ಋಷ್ಯಾಶ್ರಮವನ್ನು ಕೊಚ್ಚಿ ಹರಿದಳು. ಮುನಿದ ಮುನಿ ಯೋಗಬಲದಿಂದ ಭಾಗೀರಥಿಯನ್ನು ಕುಡಿದೇಬಿಟ್ಟ. ಭಗೀರಥ ಪ್ರಾರ್ಥಿಸಲು ಮನ್ನಿಸಿ ಕಿವಿಯಿಂದ ಅವಳನ್ನು ಹೊರಗೆ ಬಿಟ್ಟ. ಹೀಗೆ ಜಹ್ನುವಿನ ಒಡಲು ಸೇರಿ ಹೊರಬಂದು ಜಾಹ್ನವಿಯಾದಳು. ಮುಂದೆ ಪಾತಾಳಕ್ಕಿಳಿದು ಸಗರ ಪುತ್ರರ ಭಸ್ಮವನ್ನು ತೋಯಿಸಿ ಸದ್ಗತಿ ಕರುಣಿಸಿದಳು.

                   ಗಂಗೆ ಸಮುದ್ರ ಮಟ್ಟದಿಂದ ೧೩,೮೦೦ ಅಡಿಗಳಷ್ಟು ಎತ್ತರದಲ್ಲಿ ಗಂಗೋತ್ರಿಯ ಬಳಿಯ ಗೋಮುಖದಿಂದ ಇಳಿಯುತ್ತಾಳೆ. ಅಲ್ಲಿ ಗಂಗೆ ಶಿವ ಭಗೀರಥರ ವಿಗ್ರಹಗಳಿವೆ. ಗಂಗೆಗೆ ಹಲವು ಹೆಸರುಗಳು. ಬದರಿಯಿಂದ ಹರಿದು ಬರುವಾಗ ಅಲಕನಂದೆಯಾಗಿ, ಕೇದಾರದಿಂದ ಮಂದಾಕಿನಿ, ಗಂಗೋತ್ರಿಯಿಂದ ಭಾಗೀರಥಿ. ದೇವಪ್ರಯಾಗದಲ್ಲಿ ಮಂದಾಕಿನೀ, ಮಹಾಗಂಗಾ, ರಾಮಗಂಗಾ, ಕೃಷ್ಣಗಂಗಾ, ವಿಷ್ಣುಗಂಗಾ, ಕಾಳಿಗಂಗಾ, ಮುಂತಾದ ಎಲ್ಲ ಕವಲುಗಳು ಒಂದುಗೂಡುತ್ತವೆ. ಪರ್ವತಗಳ ಕೊರಕಲುಗಳಲ್ಲಿ ಅಡ್ಡಾದಿಡ್ಡಿ ಹರಿಯುವ ಗಂಗೆ ಹರಿದ್ವಾರದಲ್ಲಿ ತುಂಬಿ ಹರಿಯುತ್ತಾಳೆ. ಆದ್ದರಿಂದಲೇ ಅದು ಗಂಗಾದ್ವಾರ. ದಕ್ಷಯಜ್ಞ ನಡೆದ ಕನಖಲ ಇಲ್ಲೇ ಇದೆ. ತಂದೆಯಿಂದ ಅವಮಾನಿತಳಾದ ಸತಿ ದೇಹತ್ಯಾಗ ಮಾಡಿದ್ದು ಇಲ್ಲೇ. ಗಂಗೆ ಶಂತನುವನ್ನು ವರಿಸಿ ಗಾಂಗೇಯನಿಗೆ ಜನ್ಮವಿತ್ತಿದ್ದು ಇಲ್ಲೇ. ತೀರ್ಥರಾಜ ಪ್ರಯಾಗದಲ್ಲಿ ಯಮುನೆಯನ್ನು ಸೇರುತ್ತಾಳೆ ಗುಪ್ತಗಾಮಿನಿಯಾಗಿ ಬರುವ ಸರಸ್ವತಿಯ ಜೊತೆಗೆ. ಶ್ರೀರಾಮನ ಸಮಯದಲ್ಲಿ ಭರದ್ವಾಜರು ಇಲ್ಲೇ ನೆಲೆಸಿದ್ದರು. ಬಿಳಿನೀರ ಗಂಗೆ ಮತ್ತು ಕೃಷ್ಣವರ್ಣೆ ಯಮುನೆಯ ಸಂಗಮ ಪ್ರಯಾಗದಲ್ಲಿ ಮಿಂದವರು ಸ್ವರ್ಗಕ್ಕೆ ಹೋಗುತ್ತಾರೆ ಎಂದು ಋಗ್ವೇದದ ಖಿಲಭಾಗದಲ್ಲಿ ವರ್ಣಿತವಾಗಿದೆ.

                    ಜಗತ್ತಿನ ಯಾವುದೇ ಭಾಗಕ್ಕೂ ಹೋಗಿ ನೋಡಿ, ಎಲ್ಲಿ ನಮ್ಮ ಪೂರ್ವಜರ ಪದಚಿಹ್ನೆಯನ್ನು ಕಾಣುತ್ತೇವೆಯೋ ಅಲ್ಲಿ ಗಂಗೆಯ ಬಗ್ಗೆ ಶೃದ್ಧೆಯ ಭಾವನೆಯನ್ನೂ ಈಗಲೂ ನೋಡಬಹುದು. ಒಮ್ಮೆ ನಮ್ಮ ಇತಿಹಾಸಕಾರ ಡಾ|| ಲೋಕೇಶ್ ಚಂದ್ರ ರಷ್ಯಾಕ್ಕೆ ಹೋಗಿದ್ದರು. ಇವರು ಬರುತ್ತಿರೋ ಸುದ್ಧಿ ತಿಳಿದ ಅಲ್ಲಿನ ಜನ ಬರೋವಾಗ ಗಂಗಾಜಲ ತನ್ನಿ ಅಂತ ಹೇಳಿದರು. ಇವರಿಗೆ ಆಶ್ಚರ್ಯ. ಕಮ್ಯೂನಿಷ್ಟರ ದೇಶದಲ್ಲಿ ಗಂಗೆ ಮೇಲೆ ಭಕ್ತಿ! ಆದರೂ ಇವರು ತೆಗೆದುಕೊಂಡು ಹೋದರು. ಸೈಬೀರಿಯಾ ವಿಮಾನ ನಿಲ್ದಾಣ ಇಳಿಯುತ್ತಿದ್ದಂತೆ ಜನ ಗಂಗಾಜಲ ಬೇಡಿದರು. ಆಗ್ರಹ ಮಾಡಿದರು. ಅಲ್ಲೇ ಗಂಗೆಯನ್ನು ವಿತರಿಸಬೇಕಾಯಿತು. ಉದ್ಧರಣೆ ಇರಲಿಲ್ಲ. ಬೆರಳಲ್ಲೇ ಗಂಗೆಯನ್ನು ವಿತರಿಸಬೇಕಾಯಿತು. ಆ ನೂಕು ನುಗ್ಗಲಲ್ಲಿ ಸ್ವಲ್ಪ ಗಂಗಾಜಲ ಬಿದ್ದು ಬಿಟ್ಟಿತು. ಆ ರಷ್ಯಾ ಜನ ಗಂಗಾ ಜಲ ಬಿದ್ದ ಆ ನೆಲವನ್ನು ಹಣೆಗೊತ್ತಿಕೊಂಡರು. ಅದೆಂತಾ ಶೃದ್ಧೆ ಅದು.

                    ನಮ್ಮ ದಕ್ಷಿಣ ಪೂರ್ವದಲ್ಲಿ ಆಗ್ನೇಯ ದಿಕ್ಕಿನಲ್ಲಿರೋ ಇಂಡೋನೇಷಿಯಾವನ್ನು ನಾವು ಗಮನಿಸಬೇಕಾಗುತ್ತೆ. ಅದೊಂದು ಇಸ್ಲಾಮಿ ರಾಷ್ಟ್ರ. ಅಲ್ಲಿನ ಜನ ಭಾರತಕ್ಕೆ ಬಂದು ವಾಪಾಸು ಹೋಗುವಾಗ ಗಂಗಾಜಲ ತೆಗೆದುಕೊಂಡು ಹೋಗುತ್ತಾರೆ. ಅಲ್ಲಿನ ಜನರೂ ಕಳುಹಿಸುವಾಗ ಗಂಗಾಜಲ ತನ್ನಿ ಅಂತ ಹೇಳಿಕಳುಹಿಸುತ್ತಾರೆ. ಅದು ಮುಸ್ಲಿಂ ರಾಷ್ಟ್ರವಾದರೂ ಸಾಂಸ್ಕೃತಿಕವಾಗಿ ಭಾರತದ ಪಡಿಯಚ್ಚು. ಅದರ ಪುರಾತನ ಹೆಸರು ದ್ವೀಪಾಂತರ. ಈ ಹೆಸರು ಇಂಡೋನೇಷಿಯಾದ ಗ್ರಂಥಗಳಲ್ಲೂ ಕಾಳಿದಾಸನ ಮೇಘದೂತದಲ್ಲೂ ಉಲ್ಲೇಖಗೊಂಡಿದೆ. ಇಂಡೋನೇಷಿಯಾದ ಬಹುಸಂಖ್ಯಾತರು ಮುಸ್ಲಿಮರಾದರೂ ಅವರು ಹಿಂದೂ ಸಂಸ್ಕೃತಿ, ಪರಂಪರೆಯಲ್ಲಿ ಹೆಮ್ಮೆಯಿರುವಂತಹವರು. ಅಲ್ಲಿನ ಬಾಲಿ ದ್ವೀಪದ ಆಕಾಶವಾಣಿ ಪ್ರತಿನಿತ್ಯ ಗಾಯತ್ರಿಮಂತ್ರ ಮತ್ತು ವೇದಘೋಷಗಳೊಂದಿಗೆ ತನ್ನ ಕಾರ್ಯಕ್ರಮಗಳನ್ನು ಪ್ರಾರಂಭ ಮಾಡುತ್ತೆ. ಆ ರಾಷ್ಟ್ರದ ಬದುಕಿನಲ್ಲಿ ಹಾಸು ಹೊಕ್ಕಾಗಿರುವ ಹಿಂದು ನಡವಳಿಕೆಯನ್ನು ಕಂಡಾಗ ಹೆಮ್ಮೆಯೆನಿಸುತ್ತದೆ.

               ಎರಡನೇ ಮಹಾಯುದ್ಧದ ಬಳಿಕ ದಾಸ್ಯದಿಂದ ವಿಮೋಚನೆಗೊಂದ ಆ ರಾಷ್ಟ್ರದ ಮೊದಲ ಅಧ್ಯಕ್ಷ ಸುಕರ್ಣೋ. ಅವರ ತಂದೆಗೆ ಮಹಾಭರತದ ಕರ್ಣನ ಪಾತ್ರ ಬಲು ಅಚ್ಚುಮೆಚ್ಚು. ಕರ್ಣ ಒಳ್ಳೆಯವನಾಗಿದ್ದರೂ ಅಧರ್ಮದ ಪರ ವಹಿಸುದುದರಿಂದ ಸಾಮಾನ್ಯವಾಗಿ ಮಕ್ಕಳಿಗೆ ಅವನ ಹೆಸರನ್ನು ಇಡೋದಿಲ್ಲ. ಆದರೆ ತನ್ನ ಮಗ ಅವನಿಗಿಂತ ಒಳ್ಳೆಯ ಕರ್ಣನಾಗಲಿ ಎಂಬ ಉದ್ದೇಶದಿಂದ ಸುಕರ್ಣೋ ಎಂದು ಹೆಸರಿಟ್ಟರಂತೆ. ಎಷ್ಟು ಸುಂದರ ಚಿಂತನೆ ಇದು. ಸುಕರ್ಣೋ ಹೆಂಡತಿ ಹೆಸರು ರತ್ನಸಾರಿಕಾ ದೇವಿ. ಮಗಳ ಹೆಸರು ಮೇಘವತೀ ಸುಕರ್ಣೋ ಪುತ್ರಿ. ಸುಹೃತ, ಸುದರ್ಶನ ಇವೆಲ್ಲಾ ಅಲ್ಲಿ ಸಾಮಾನ್ಯ. ಹಿಂದೊಮ್ಮೆ ಸುಕರ್ಣೋ ಅವರ ಜೊತೆ ಭಿನ್ನಾಭಿಪ್ರಾಯ ಬಂದಾಗ ವಿರೋಧ ಪಕ್ಷದ ಸದಸ್ಯರು ಪಾರ್ಲಿಮೆಂಟಿನಲ್ಲಿ ಅವರನ್ನು ದುರ್ಯೋಧನ ಎಂದು ಬೈದಿದ್ದರು. ಅಲ್ಲಿನ ನಾಟಕಗಳಿಗೆ ರಾಮಾಯಣ, ಮಹಾಭಾರತಗಳೇ ಸ್ಪೂರ್ತಿ. ಘಟೋತ್ಕಚ ಅಲ್ಲಿನ ಜನಪ್ರಿಯ ಪಾತ್ರಗಳಲ್ಲೊಂದು. ಇಂಡೋನೇಷಿಯಾದ ಸಂವಿಧಾನದ ಹೆಸರು ಪಂಚಶೀಲ. "ಧರ್ಮೋ ರಕ್ಷತಿ ರಕ್ಷಿತಃ" ಅನ್ನುವುದು ಅಲ್ಲಿನ ಧ್ಯೇಯ ವಾಕ್ಯ. ನಮ್ಮ ದೇಶದ್ದು ಇಂಡಿಯನ್ ಏರ್ ಲೈನ್ಸ್ ಆದರೆ ಆ ದೇಶದ್ದು ಗರುಡ ಏರ್ ಲೈನ್ಸ್. ನಮ್ಮ ಪೋಲಿಸ್ ಇಲಾಖೆಯ ಚಿಹ್ನೆ ಗಂಡಭೇರುಂಡ. ಅಲ್ಲಿನ ರಾಷ್ಟ್ರೀಯ ಪೋಲಿಸ್ ಇಲಾಖೆಯ ಚಿಹ್ನೆ ಹನುಮಂತ. ಇಂಡೋನೇಷಿಯಾದ ಪಾರ್ಲಿಮೆಂಟ್ ಭವನದ ಮುಂದುಗಡೆ ಶ್ರೀಕೃಷ್ಣನ ಗೀತಾರಥದ ಆಕೃತಿಯನ್ನು ನಿಲ್ಲಿಸಿದ್ದಾರೆ. ಬಾಲಿ ದ್ವೀಪದಲ್ಲಿರುವ ವಿಶ್ವವಿದ್ಯಾಲಯದ ಹೆಸರು ಉದಯನ್ ಯೂನಿವರ್ಸಿಟಿ. ಅದರ ಪ್ರಾಂಗಣದಲ್ಲಿ ಭವ್ಯವಾದ ಸರಸ್ವತಿಯ ವಿಗ್ರಹವಿದೆ. ಜಾವಾದ ಪ್ರಾಂಬಣದ ಬ್ರಹ್ಮಾನಂದ ದೇಗುಲ ಅತ್ಯಂತ ಪ್ರಾಚೀನವಾದದ್ದು. ನೂರ ನಲವತ್ತು ಅಡಿ ಎತ್ತರದ ಇದರ ಶಿಖರ ಮುಗಿಲು ಚುಂಬಿಸುವಂತಿದೆ. ಇವತ್ತು ಸನಾತನ ಸಂಸ್ಕೃತಿಯನ್ನು ದ್ವೇಷಿಸುವ, ವಿಶ್ವವಿದ್ಯಾಲಯಕ್ಕೆ ಮತಾಂಧರ ಹೆಸರಿಟ್ಟು ಭಯೋತ್ಪಾದಕರನ್ನು ಸೃಷ್ಟಿ ಮಾಡಬಯಸುವ ಭಾರತ ಮುಸಲ್ಮಾನರು ಮತ್ತವರ ಎಂಜಲಾಸೆಗೆ ಕೈಒಡ್ಡಿರುವ ಬುದ್ಧಿ (ಇಲ್ಲದ,ಲದ್ದಿ ತಿನ್ನುವ) ಜೀವಿಗಳು ಇದನ್ನು ಗಮನಿಸಬೇಕು.

                      ಜಗತ್ತಿನಲ್ಲಿ ಮೂರು ಅಂತರಾಷ್ಟ್ರೀಯ ರಾಮಾಯಣ ಮೇಳಗಳಿವೆ. ಕಾಂಬೋಡಿಯಾ, ಥೈಲ್ಯಾಂಡ್ ಮತ್ತು ಇಂಡೋನೇಷಿಯಾ. ನಮ್ಮ ಅಯೋಧ್ಯೆಯಲ್ಲೂ ಇಂತಹ ಒಂದು ಮೇಳವಿಲ್ಲ. ಇಂಡೋನೇಷಿಯಾ ಬಿಡುಗಡೆ ಮಾಡಿದ ಒಂದು ನೋಟಿನ ಮೇಲೆ ಗಣೇಶನ ಚಿತ್ರ ಮುದ್ರಿತವಾಗಿತ್ತು. ನಮ್ಮಲ್ಲಿ ಇದನ್ನು ಕಲ್ಪಿಸಿಕೊಳ್ಳೋದಿಕ್ಕಾದರೂ ಸಾಧ್ಯ ಇದೆಯೇ? ಈ ದ್ವೀಪಕಲ್ಪ ಭಾರತಕ್ಕೆ ನೀಡಿರುವ ಸ್ಥಾನವನ್ನು ನೋಡಿದರೆ ಹೃದಯ ಪುಳಕಗೊಳ್ಳುತ್ತೆ. ಹೀಗೆ ಹಿಂದೆ ಹಿರಿಯರು ಜಗತ್ತನ್ನು ತಮ್ಮ ಸಾಂಸ್ಕೃತಿಕ ಸತ್ಯ ಮತ್ತು ಸತ್ವದಿಂದ ಪ್ರಭಾವಿತರನ್ನಾಗಿ ಮಾಡಿದ್ದರು. ಆ ಚಿಹ್ನೆಗಳನ್ನು ಇವತ್ತಿಗೂ ನೋಡುತ್ತಿದ್ದೇವೆ.

                     ಗಂಗೆ ಆಗಾಗ್ಗೆ ತನ್ನ ಗತಿಯನ್ನು ಬದಲಿಸಿದ್ದಾಳೆ. ಮೊದಲು ಹಸ್ತಿನೆ ಗಂಗೆಯ ದಡದಲ್ಲಿತ್ತು. ಈಗ ಗಂಗೆಯ ಒಡಲೊಳಗಿದೆ. ಇದಾದದ್ದು ನಿಚಕ್ನುವಿನ ಕಾಲದಲ್ಲಿ. ಬಳಿಕ ಆತ ಕೌಶಾಂಬಿಗೆ ತನ್ನ ರಾಜಧಾನಿಯನ್ನು ಬದಲಾಯಿಸಿದ. ಜಗನ್ನಾಥ ಪಂಡಿತ ೧೬-೧೭ನೇ ಶತಮಾನದಲ್ಲಿದ್ದ ಪ್ರಸಿದ್ಧ ಸಂಸ್ಕೃತ ಕವಿ. ಅಲಕೆಯ ಝಲಕಿಗೆ ಮನಸೋತು ಗಂಗಾಲಹರೀ ಎಂಬ ಖಂಡಕಾವ್ಯ ಬರೆದ. ಅದು ತನ್ನ ನಾದ ಮಾಧುರ್ಯದಿಂದ , ಲಯದ ಮೋಡಿಯಿಂದ ಎಲ್ಲರ ಹೃದಯ ಸೂರೆಗೊಂಡಿದೆ. ಹೇಗಿದೆ ಎಂದರೆ ಸ್ವತಃ ಗಂಗೆಯೇ ಮೆಚ್ಚಿ ಉಬ್ಬಿ ಅವನ ಕಾಲ್ತೊಳೆದಳಂತೆ! ೧೮೫೭ರ ಸ್ವಾತಂತ್ರ್ಯಸಂಗ್ರಾಮದ ಕಹಳೆ ಊದಿದ್ದು ಗಂಗಾತೀರದ ಕಾನ್ಪುರದಲ್ಲಿ. ಕುಂಭಮೇಳ ನಡೆಯುವ ನಾಲ್ಕು ಸ್ಥಳಗಳಲ್ಲಿ ಎರಡು ಸ್ಥಳಗಳಾದ ಹರಿದ್ವಾರ ಮತ್ತು ಪ್ರಯಾಗ ಇರುವುದು ಗಂಗಾತೀರದಲ್ಲಿ. ಅಪ್ರತಿಮ ದೇಶಭಕ್ತ ಚಂದ್ರಶೇಖರ ತಿವಾರಿ "ಆಜಾದ್" ಎಂಬ ವಿಶೇಷಣ ಗಳಿಸಿದ್ದು ಗಂಗಾತೀರದ ಕಾಶಿಯಲ್ಲಿ. ಪಂಡಿತ ಮದನ ಮೋಹನ ಮಾಳವೀಯರು ಹಿಂದೂ ವಿಶ್ವವಿದ್ಯಾಲಯ ಸ್ಥಾಪಿಸಿದ್ದು, ಬುದ್ಧನ ಪ್ರಥಮ ಪ್ರವಚನ ನಡೆದದ್ದು ಇಲ್ಲೇ.

                    ಹೀಗೆ ನದಿಗಳ ಬಗ್ಗೆ ನಮ್ಮ ಹಿರಿಯರು ನಿರ್ಮಾಣ ಮಾಡಿದ್ದ ಶೃದ್ಧೆಯನ್ನು ದುರ್ಬಲಗೊಳಿಸಿದ್ದುದರಿಂದ ಗಂಗೆ ಇವತ್ತು ಕೊಳಕಾಗಿದ್ದಾಳೆ. ಗಂಗೆ ತನ್ನನ್ನು ತಾನು ಸ್ವಚ್ಚಗೊಳಿಸಬಲ್ಲ ಸಾಮರ್ಥ್ಯದಿಂದ ವಂಚಿತಳಾಗಿದ್ದಾಳೇನೋ ಎಂದು ಅನ್ನಿಸುತ್ತೆ. ವಿಶೇಷವಾಗಿ ಹರಿದ್ವಾರದಿಂದ ಬರಬೇಕಾದರೆ, ಕಾಶಿಯ ಬಳಿ ನಿಂತು ನೋಡಬೇಕಾದರೆ ಮನಸ್ಸಿಗೆ ನೆಮ್ಮದಿ ಸಿಗುವುದಿಲ್ಲ. ಭಾರತದ ಜೀವ ಗಂಗೆ ಕೊಳಕಾಗಿದ್ದಾಳೆ ಅಂದರೆ  ಅವಳ ಮಕ್ಕಳಾದ ನಮಗೆ ಆಪತ್ತು ಬಂದಿದೆ ಅಂತಲೇ ಅರ್ಥ. ಗಂಗೋದಕವನ್ನಿನ್ನು ಕುಡಿಯುವ ಹಾಗಿಲ್ಲ. ಸ್ನಾನ ಮಾಡುವ ಹಾಗಿಲ್ಲ. ಅಷ್ಟೊಂದು ನಾವು ಕೊಳಕು ಮಾಡಿದ್ದೇವೆ. ಅದನ್ನು ಶುದ್ಧ ಮಾಡುವ, ಪಾವನ ಮಾಡುವ ಕೆಲಸವನ್ನು ನಾವೇ ಮಾಡಬೇಕು. ಇಂಗ್ಲೆಂಡಿನ ಜನ ಥೇಮ್ಸ್ ನದಿಯ ಬಗ್ಗೆ ಪ್ರೀತಿ ಇಟ್ಕೊಂಡಿದ್ದಾರೆ, ಶೃದ್ಧೆ ಅಂತ ಅಲ್ಲ. ಕೇವಲ ಥೇಮ್ಸ್ ಬಗ್ಗೆ ಪ್ರೀತಿ ಇಟ್ಕೊಂಡಿರೋ ಜನ ಅದನ್ನು ಶುದ್ಧ ಮಾಡಬಹುದಾದರೆ ಗಂಗೆಯನ್ನು ತಾಯಿ ಅಂತ ಭಾವಿಸೊ ನಾವ್ಯಾಕೆ ಗಂಗೆಯನ್ನು ಶುದ್ಧ ಮಾಡುವುದಕ್ಕೆ ಸಾಧ್ಯ ಇಲ್ಲ. ನಾವೆಲ್ಲರೂ ಭಗೀರಥನ ರೂಪದಲ್ಲಿ ಎದ್ದು ನಿಲ್ಲಬೇಕಾಗಿದೆ. ನಮ್ಮ ಜೀವಗಂಗೆಯನ್ನು ಸ್ವಚ್ಚ ಮಾಡಬೇಕಾಗಿದೆ.
ವಂದೇ ಮಾತರಂ...

ಭಾನುವಾರ, ಜನವರಿ 13, 2013

ಧರ್ಮ ಹಿಂಸಾ ತಥೈವಚಾ...                ಆ ಯುವಕ ಪರಮ ದೇಶಭಕ್ತ. ಕಾರ್ಯನಿಮಿತ್ತ ಯಾವುದೋ ಊರಿಗೆ ಬಸ್ಸಿನಲ್ಲಿ ಪಯಣಿಸುತ್ತಿದ್ದಾನೆ. ಕೆಲವು ನಿಮಿಷಗಳ ಪ್ರಯಾಣದ ಬಳಿಕ ಯುವತಿಯೊಬ್ಬಳು ಅದೇ ಬಸ್ ಹತ್ತುತ್ತಾಳೆ. ಜಾಗ ಇಲ್ಲದ ಕಾರಣ ಆ ಯುವತಿ ಯುವಕನೋರ್ವನ ಪಕ್ಕದಲ್ಲಿ ಕುಳಿತುಕೊಳ್ಳುವಂತಾಯಿತು. ಆ ಯುವಕನೋ ತನ್ನೊಂದಿಗೆ ಬಂದಿದ್ದ ಸ್ನೇಹಿತರೊಂದಿಗೆ ಸೇರಿ ಆ ಹುಡುಗಿಯನ್ನು ಕಿಚಾಯಿಸಲು ತೊಡಗಿದ. ಅವರಾಡುತ್ತಿದ್ದ ಅಸಹ್ಯ ಮಾತುಗಳು ಮತ್ತು ಅವರ ಅಸಹ್ಯ ವರ್ತನೆಯನ್ನು ಕಂಡು ಈ ದೇಶಭಕ್ತ ಸಹೋದರ ತನ್ನ ಆಸನವನ್ನು ಆ ಯುವತಿಗಿತ್ತು ಉಪಕಾರ ಮಾಡಿದ. ಯಾಕೆಂದರೆ ಅವನು ಭಾರತದ ಪ್ರಜೆ, ಇಂಡಿಯಾದ್ದಲ್ಲ! ತನ್ನ ನಿಲ್ದಾಣ ಬಂದಾಗ ಯುವತಿ ಇಳಿದು ಹೋದಳು.
                  ಘಟನೆ ಇಲ್ಲಿಗೆ ಮುಗಿಯಲಿಲ್ಲ. ಆ ಸಹೊದರ ದೇಶಭಕ್ತ ಯುವಕ ತನ್ನ ನಿಲ್ದಾಣ ಬಂದಾಗ ಇಳಿಯುತ್ತಿದ್ದಂತೆ ಈ ಮತಾಂಧ ಯುವಕರು ಅವನ ಮೇಲೆ ಆಕ್ರಮಣಕ್ಕೆ ತೊಡಗಿದರು. ತನಗೆ ಒದೆ ಬೀಳುವುದು ಖಚಿತವೆಂದಾದಾಗ ಯುವಕ ಆತ್ಮರಕ್ಷಣೆಗಾಗಿ ತಾನೇ ಆ ಯುವಕರ ಮೇಲೆ ಮುಗಿಬಿದ್ದ. ಆತನ ಧೈರ್ಯ, ಪೌರುಷ ಕಂಡ ಯುವಕರು ಅಲ್ಲಿಂದ ಕಾಲ್ಕಿತ್ತರು. ಆದರೆ ಅವರ ಸಂಪರ್ಕ ಜಾಲ ನೋಡಿ. ಅದೇ ನಿಲ್ದಾಣದ ಬಳಿ ಇದ್ದ ಮಸೀದಿಯಿಂದ ಮತ್ತಷ್ಟು ಮತಾಂಧರು ಆ ಯುವಕರಿಗೆ ಸಹಾಯಕ್ಕೆ ಬಂದರು. ಪರಿಸ್ಥಿತಿ ಅರಿತ ಆ ದೇಶಭಕ್ತ ಸಹೋದರ ತನಗೆ ಯಾರಿಂದಲೂ ಸಹಾಯ ಸಿಗದೆಂದು ಮನಗೊಂಡು ಅಲ್ಲಿಂದ ಓಡಿ ತಪ್ಪಿಸಿಕೊಂಡ.
      
                    ಇದು ಇತ್ತೀಚೆಗಷ್ಟೆ ನಡೆದ ಘಟನೆ. ಆ ಸಹೋದರ ಒಂದು ವೇಳೆ ಅಹಿಂಸೆಯನ್ನು ಪಾಲಿಸಬೇಕು ಅಂತ ಸುಮ್ಮನಿದ್ದಿದ್ದರೆ ಅವನನ್ನು ಸಾಯಬಡಿಯುತ್ತಿದ್ದರು. ಆತನ ಕಾರ್ಯವನ್ನು ಮೆಚ್ಚಲೇಬೇಕು. ಆತ ಪಾಲಿಸಿದ್ದು ಭಾರತದ ಆದರ್ಶವನ್ನು. ಇನ್ನೊಂದು ಮುಖ್ಯವಾದ ಅಂಶವೆಂದರೆ ಬಸ್ಸಿನಲ್ಲಿ ಆ ಮತಾಂಧರು ಆ ರೀತಿ ಹುಡುಗಿಯನ್ನು ಚುಡಾಯಿಸುತ್ತಿದ್ದಾಗ ನಪುಂಸಕರಂತೆ ಉಳಿದವರು ಕುಳಿತಿದ್ದರಲ್ಲ! ಮಸೀದಿಯಿಂದ ಬಂದ ಅಷ್ಟೊಂದು ಜನ ಆ ದೇಶಭಕ್ತ ಯುವಕನ ಮೇಲೆ ಆಕ್ರಮಣಕ್ಕೆ ಮುಂದಾದಾಗ ಷಂಡರಂತೆ ನೋಡುತ್ತಿದ್ದ ಮಂದಿಗೆ ಏನು ಹೇಳಬೇಕು? ಹೌದು ಗಾಂಧಿಯ ಆ ಬೋಧನೆ ನಮ್ಮವರ ಕ್ಷಾತ್ರತ್ವವನ್ನೇ ನಾಶ ಮಾಡಿಬಿಟ್ಟಿದೆ. ಮುಸ್ಲಿಮರು ಬಹುಸಂಖ್ಯಾತರಾಗಿರುವ ಕಡೆ ಇಂತಹ ಘಟನೆಗಳು ಮಾಮೂಲು. ಕೆಲವೇ ವರ್ಷಗಳ ಹಿಂದೆ ಕರ್ನಾಟಕ-ಕೇರಳ ಗಡಿಭಾಗದಲ್ಲಿ ಮುಸ್ಲಿಮನೊಬ್ಬ ಬಸ್ಸಿನಲ್ಲಿ ಪಯಣಿಸುತ್ತಿದ್ದ ಯುವತಿಯೊಬ್ಬಳ ಸ್ತನಗಳಿಗೇ ಕೈಹಾಕಿದ್ದ. ಅವನ ಕೈ ಕಡಿಯುವ ಬದಲು ನಮ್ಮವರು ಏನೂ ಆಗಿಲ್ಲವೆಂಬಂತೆ ನಡೆದುಕೊಂಡರು. ಇಂತಹ ನರ ಸತ್ತವರಿಗೆ ಧಿಕ್ಕಾರವಿರಲಿ.

    "ಅಹಿಂಸಾ ಪರಮೋಧರ್ಮ" ಎಂಬುದು ನಿಜ. ಅಹಿಂಸೆಯನ್ನು ಪಾಲಿಸುವುದು ಭಾರತೀಯನೊಬ್ಬನ ಕರ್ತವ್ಯ. ಆದರೆ ಅದೇ ಶ್ಲೋಕ ಮುಂದುವರಿದು "ಧರ್ಮ ಹಿಂಸಾ ತಥೈವಚಾ" ಎಂದಿದೆ. ಅಂದರೆ ಹಿಂಸೆಯಿಂದ ಧರ್ಮ ಗ್ಲಾನಿಯಾಗುತ್ತಿದ್ದರೆ ಅದಕ್ಕೆ ಹಿಂಸೆಯಿಂದಲೇ ಉತ್ತರ ಕೊಡಬೇಕು. ಅಹಿಂಸೆ ಆಗ ಕೆಲಸಕ್ಕೆ ಬರುವುದಿಲ್ಲ. ಇದಕ್ಕೆ ಭಾರತದ ಇತಿಹಾಸದ ಪುಟಗಳೇ ನಿದರ್ಶನ.
                  ಒಂದು ವೇಳೆ ಪ್ರಭು ಶ್ರೀರಾಮ ಸೀತೆಯನ್ನು ಬಿಟ್ಟುಕೊಡು ಎಂದು ರಾವಣನಿಗೆ ಮನವಿಪತ್ರ ಸಲ್ಲಿಸುತ್ತಾ ಕೂತಿದ್ದರೆ ರಾವಣ ಸೀತೆಯನ್ನು ಬಿಟ್ಟುಕೊಡುತ್ತಿದ್ದನೇ? ಕಾಮುಕ, ದುಷ್ಟ ರಾವಣನ ವಧೆಯಾಗುತ್ತಿತ್ತೇ? ಬೇಡಿದರೂ ಕೊಡೆ ಸೂಜಿಮೊನೆ ಜಾಗವ ಪಾಂಡವರಿಗೆ ಎಂದವ ಕೌರವ. ಕೌರವನ ಬುದ್ಧಿಯಿರುವವರಿಗೆ ಪತ್ರಗಳು ನಾಟುವುದಿಲ್ಲ. ಅಸ್ತ್ರಗಳು ಮಾತ್ರ ನಾಟುತ್ತವೆ.

                       ಅಹಿಂಸೆ ಎಂದು ಶಿವಾಜಿ ಸುಮ್ಮನುಳಿದಿದ್ದರೆ ಇವತ್ತು ಹಿಂದೂಸ್ಥಾನವೇ ಇರುತ್ತಿರಲಿಲ್ಲ! ಅಹಿಂಸೆ ಬಿಡಿ ಕೇವಲ ಕ್ಷಮಿಸಿದ ಮಾತ್ರಕ್ಕೆ ಅದನ್ನೇ ದುರುಪಯೋಗಪಡಿಸಿಕೊಂಡು ನಮ್ಮ ಅನೇಕ ಕ್ಷಾತ್ರಸಿಂಹಗಳ ಕಗ್ಗೊಲೆ ಮಾಡಿದರು ದ್ರೋಹಿಗಳು. ಚಾಣಕ್ಯ ಎಂದಾದರೂ ಚಂದ್ರಗುಪ್ತನಿಗೆ ರಾಜ್ಯ ಕೊಡಿ ಎಂದು ವಿನಂತಿ ಮಾಡಿದ್ದರೆ ಇಂದು ಚಾಣಕ್ಯನ ಅರ್ಥಶಾಸ್ತ್ರಾದಿಗಳೇ ಇರುತ್ತಿರಲಿಲ್ಲ! ಅಹಿಂಸೆ ಪಾಲಿಸುತ್ತೇನೆ ಎಂದು ಮುಗುಮ್ಮಾಗಿದ್ದಿದ್ದರೆ ರಾಣಿ ಚೆನ್ನಮ್ಮ, ಅಬ್ಬಕ್ಕ, ಕೆಳದಿ ಮನೆತನ, ವಿಜಯನಗರಗಳ ಇತಿಹಾಸವೇ ಇರುತ್ತಿರಲಿಲ್ಲ.

                ಮೇಲಾಗಿ ಅಹಿಂಸೆ ಎಂದು ಭಜನೆ ಮಾಡುತ್ತಿದ್ದರೆ ನಮಗಿಂದು ಸ್ವಾತಂತ್ರ್ಯವೇ ಸಿಗುತ್ತಿರಲಿಲ್ಲ! ಇಷ್ಟೆಲ್ಲಾ ಇತಿಹಾಸದ ಪುಟಗಳು ಸಾರಿ ಸಾರಿ ಹೇಳಿದರೂ ನಮ್ಮವರಿಗೆ ಏಕೆ ಅರ್ಥ ಆಗುವುದಿಲ್ಲ. ಗಾಂಧಿಯ ಆ ಅಹಿಂಸೆಯಿಂದಾಗಿಯೇ ೧೯೨೦ರಲ್ಲಿ ಕೇರಳದಲ್ಲಿ ಮೋಪ್ಲಾಗಳು ಲಕ್ಷ ಲಕ್ಷ ಹಿಂದೂಗಳ ಕಗ್ಗೊಲೆ, ಅತ್ಯಾಚಾರ, ಲೂಟಿ ಮಾಡಿದರು. ಗಾಂಧಿಯ ಆ ಅಹಿಂಸೆಯಿಂದಾಗಿಯೇ ಭಾರತ ಇಬ್ಬಾಗವಾಗಿ ಲಕ್ಷಾಂತರ ಹಿಂದೂಗಳ ಮಾರಣಹೋಮ ನಡೆಯಿತು.

                ನಿಮ್ಮ ಮಗಳನ್ನೋ, ಹೆಂಡತಿಯನ್ನೋ, ತಾಯಿಯನ್ನೋ ಒಬ್ಬ ಅತ್ಯಾಚಾರ ಎಸಗುತ್ತಿದ್ದರೆ ನೀವು ಅಹಿಂಸೆಯ ಜಪ ಮಾಡುತ್ತಾ ಅದನ್ನು ನೋಡುತ್ತಾ ನಿಲ್ಲುವಿರೇನು? ಮೊನ್ನೆ ತಲೆ ಕಡಿದರಲ್ಲಾ,  ಆ ವೀರ ಸೈನಿಕರು ನಿಮ್ಮ ಅಣ್ಣನೋ, ತಮ್ಮನೋ, ಬಂಧುವೋ ಆಗಿದ್ದರೆ ನಿಮಗೆ ಅಹಿಂಸೆಯ ನೆನಪಾಗುತ್ತಿತ್ತೇ? ಅತ್ಯಾಚಾರವೆಸಗಲು ಪ್ರಯತ್ನಿಸಿ, ಯುವತಿ ವಿರೋಧಿಸಿದಾಗ ರೈಲಿನ ಕೆಳಗೆ ದೂಡಿದರಲ್ಲಾ, ಅವಳು ನಿಮ್ಮ ಸ್ವಂತ ತಂಗಿಯಾಗಿದ್ದರೆ ಸುಮ್ಮನಿರುತ್ತಿದ್ದಿರೇ? ನಿಮ್ಮದೇ ಹೆಣ್ಣುಮಕ್ಕಳು ತುಂಡು ಬಟ್ಟೆಯೊಂದಿಗೆ, ಗುಂಡು ಹೊಡೆಯುತ್ತಾ, ತುಂಡು ತಿನ್ನುತ್ತಾ ರೆಸಾರ್ಟ್ ಗಳಲ್ಲಿ ಹುಡುಗರೊಂದಿಗೆ ನಂಗಾನಾಚ್ ಮಾಡುತ್ತಿದ್ದರೆ ಖುಷಿಪಡುತ್ತೀರೇನು?

                    ಅಣ್ಣನಾಜ್ಞೆಯನ್ನು ಮೀರಿ ಭಿಮಸೇನ ಕೀಚಕನನ್ನು ಕೊಂದಿದ್ದು ಅಹಿಂಸೆ ಪಾಲಿಸಿ ಅಲ್ಲ! ಕೃಷ್ಣ ಕಂಸ, ನರಕಾದಿಗಳನ್ನು ಕೊಲ್ಲದೇ ಇರುತ್ತಿದ್ದರೆ ಅದೆಷ್ಟೋ ರಾಜಕುಮಾರರು, ಮಾನಿನಿಯರು ಮಾನ, ಪ್ರಾಣ ಕಳೆದುಕೊಳ್ಳುತ್ತಿದ್ದರಲ್ಲವೇ? ಅದಕ್ಕೇ ನಮಗೆ ಬೇಕಿರುವುದು ರಾಮನ ಆದರ್ಶ, ಕೃಷ್ಣನ ತಂತ್ರ! ಶತ್ರುಗಳಲ್ಲಿ ಸಜ್ಜನರಿದ್ದಾರೆ ಎಂದು ಕೃಷ್ಣ ಯುದ್ಧ ಮಾಡದೇ ಸುಮ್ಮನುಳಿಯಲಿಲ್ಲ. ಬಂಧು ಮೋಹದಿಂದ ಕುರುಡಾದ ಅರ್ಜುನನಿಗೆ ಗೀತೆ ಬೋಧಿಸಿದ. ತಂತ್ರಕ್ಕೆ ಪ್ರತಿತಂತ್ರ ಹೂಡಿ, ಮೋಸಕ್ಕೆ ಪ್ರತಿ ಮೋಸ ಮಾಡಿ, ಸಜ್ಜನ, ದುರ್ಜನ, ಬಂಧು-ಬಾಂಧವ ಮಮಕಾರ ತೊರೆದು ಧರ್ಮಕ್ಕೆ ಜಯ ತಂದುಕೊಟ್ಟ. ಶತ್ರುಗಳ ಪಾಳಯದಲ್ಲಿ ಅವನ ಬಂಧುಗಳಿದ್ದರು, ಮಿತ್ರರಿದ್ದರು. ಮೇಲಾಗಿ ಭಕ್ತರಿದ್ದರು. ಆದರೆ ಧರ್ಮವೇ ಸತ್ಯ ಎಂದು ಸಾರಿದ. ಅದು ಕೃಷ್ಣ ತಂತ್ರ, ಚಾಣಕ್ಯ ನೀತಿ, ನಮಗೆ ಇಂದು, ಎಂದೆಂದಿಗೂ ಬೇಕಾಗಿರೋದು ಅದು! ಸತ್ಯವನ್ನು ಸತ್ಯದಿಂದ, ಅಧರ್ಮವನ್ನು ತಂತ್ರದಿಂದ ಜಯಿಸಬೇಕು.

                 ಆದರೂ ಕಿವುಡು ಸರಕಾರಕ್ಕೆ, ಕುರುಡು ಪ್ರಜೆಗಳಿಗೆ ಯಾಕೆ ಇವೆಲ್ಲಾ ಅರ್ಥ ಆಗೋದಿಲ್ಲಾ? ಗಡಿಯಲ್ಲಿ ಅದೆಷ್ಟು ಸಹೋದರರು ಸಾಯಬೇಕು? ದೇಶದಲ್ಲೆಡೆ ಅದೆಷ್ಟು ಮಾನಿನಿಯರ ಮಾನಹರಣವಾಗಬೇಕು? ನಮ್ಮೊಳಗಿನ ಅಂತಸ್ಥ ಶಕ್ತಿ ಹೊರಬರಲಿ. "ಧರ್ಮ ಸಂಸ್ಥಾಪನಾರ್ಥಾಯಾ ಸಂಭವಾಮಿ ಯುಗೇ ಯುಗೇ" ಎಂದಿದ್ದಾನೆ ಕೃಷ್ಣ. ಅವನು ಹುಟ್ಟಿ ಬರುವುದಿಲ್ಲ. ನಮ್ಮೊಳಗೆ ಅಂತಸ್ಥವಾಗಿರುವ ಕೃಷ್ಣ ಹೊರಹೊಮ್ಮಬೇಕು. ಶಿವಾಜಿ ಪಕ್ಕದ ಮನೆಯಲ್ಲಿ ಹುಟ್ಟುವುದಲ್ಲ. ನಾವೇ ಶಿವಾಜಿಯಾಗಬೇಕು. ಸಾವರ್ಕರ್, ತಾತ್ಯಾಟೋಪೆ, ಆಜಾದ್ ನಾವಾಗಬೇಕು. ಆಗ ಮಾತ್ರ ದೇಶ ಉಳಿಯುತ್ತದೆ. ಇಂಡಿಯಾ ಭಾರತವಾಗುತ್ತದೆ.

ಶನಿವಾರ, ಜನವರಿ 12, 2013

ತೇಜಃಪುಂಜ

                     ತಮಿಳುನಾಡಿನ ಒಂದು ಹಳ್ಳಿ. ಮರವೊಂದರ ಕೆಳಗೆ ಕುಳಿತು ಸಂತನೊಬ್ಬ ತನ್ನ ಶಿಷ್ಯರಿಗೆ ಹೇಳುತ್ತಿದ್ದಾನೆ...
             "ಹಿಂದೂಸ್ಥಾನ ಮತಾಂಧರ ದಾಸ್ಯಕ್ಕೆ ಸಿಲುಕಿ ತನ್ನ ಕ್ಷಾತ್ರತ್ವ, ಸ್ವಾಭಿಮಾನ, ಅಸ್ಮಿತೆಯನ್ನು ಮರೆತು ನಿದಿರೆ, ಮದಿರೆ, ನಪುಂಸಕತ್ವದ ವಶವಾಗಿದ್ದಾಗ ದೇಶದ ಕ್ಷಾತ್ರ ತೇಜವನ್ನು ಬಡಿದೆಬ್ಬಿಸಿದನಾತ. ಮತಾಂಧ ಮೊಘಲ್, ಆದಿಲ್, ನಿಜಾಮ್, ಬರೀದ್, ಕುತುಬ್, ಇಮಾಮ್ ಶಾಹಿಗಳ ತಂತ್ರಕ್ಕೆ ಪ್ರತಿತಂತ್ರ ರೂಪಿಸಿ ಹಿಂದೂಗಳ ಮಾನ, ಪ್ರಾಣ ರಕ್ಷಣೆ ಮಾಡಿದ. ತೋರಣ, ಚಾಕಣ, ಪನ್ನಾಳ, ಪುರಂದರ...ಹೀಗೆ ಕೋಟೆಗಳ ಮೇಲೆ ಕೋಟೆ ಗೆದ್ದು...ಛತ್ರಪತಿಯಾಗಿ ಹಿಂದೂಸಾಮ್ರಾಜ್ಯದ ಶೌರ್ಯ, ಸ್ಥೈರ್ಯ, ಸಾಹಸವನ್ನು ಜಗತ್ತಿಗೆ ಪ್ರಚುರಪಡಿಸಿದ...."

ಶಿಷ್ಯರಿಗೋ ಆಶ್ಚರ್ಯ. ತಮ್ಮ ಗುರುಗಳ್ಯಾಕೆ ಆ ದರೋಡೆಕೋರ ಶಿವಾಜಿಯ ಬಗ್ಗೆ ಹೇಳುತ್ತಿದ್ದಾರೆ?
ಆ ಗುರು ಮತ್ಯಾರು ಅಲ್ಲ. ಮುಂದೊಂದು ದಿನ ಐದೇ ಐದು ನಿಮಿಷಗಳ ಭಾಷಣದಲ್ಲಿ ಜಗತ್ತಿನ ಎದುರು ತನ್ನ ದೇಶ ಜಗತ್ತಿನ ಗುರು, ತನ್ನ ಸಂಸ್ಕೃತಿ ಉತ್ಕೃಷ್ಟವಾದ ಸನಾತನ ಸಂಸ್ಕೃತಿ, ತನ್ನ ನಾಗರೀಕತೆ ಇಂದಿಗೂ ಅಳಿದಿಲ್ಲ ಎಂದು ಜಾಗತಿಕ ಧರ್ಮ ಸಮ್ಮೇಳನದಲ್ಲಿ ಭಾರತದ ಹಿರಿಮೆ, ಗರಿಮೆಯನ್ನು ಜಗತ್ತಿಗೆ ಮನವರಿಕೆ ಮಾಡಿಕೊಟ್ಟನೋ, ನನ್ನ ಭಾರತಕ್ಕೆ ಶಿವಾಜಿಯಂತಹ ೧೦೦ ಮಂದಿ ತರುಣರು ಸಾಕೆಂದು ಯುವ ಜನತೆಯನ್ನು ಬಡಿದೆಬ್ಬಿಸಿದನೋ ಅಂತಹ ಸಿಡಿಲ ಸಂತ ಸ್ವಾಮಿ ವಿವೇಕಾನಂದ.

                        ಹೌದು. ಭಾರತದ ಕ್ಷಾತ್ರ ತೇಜ ಬ್ರಿಟಿಷರ ಎದುರು ಮಕಾಡೆ ಮಲಗಿತ್ತು. ವಿದ್ಯಾವಂತರೆನಿಸಿಕೊಂಡವರು ಗುಲಾಮೀ ಮಾನಸೀಕತೆಯ ಆಳಾಗಿ ಆಂಗ್ಲ ಇತಿಹಾಸಕಾರರು ಬರೆದುದೇ, ಹೇಳಿದ್ದೇ ಸತ್ಯ ಅಂತ ನಂಬಿದ್ದ ಕಾಲವದು. ಅವರ ದೃಷ್ಟಿಯಲ್ಲಿ ಶಿವಾಜಿ, ರಾಣಪ್ರತಾಪ, ತಾತ್ಯಾಟೋಪೆ, ಫಡಕೆ, ಕೂಕಾ... ದರೋಡೆಕೋರರಾಗಿದ್ದರು! ಸ್ವಾತಂತ್ರ್ಯ ಸಂಗ್ರಾಮ ದಂಗೆಯೆನಿಸಿಕೊಂಡಿತ್ತು.( ಅದನ್ನು ದಂಗೆಯಲ್ಲ, ಸ್ವಾತಂತ್ರ್ಯ ಸಂಗ್ರಾಮ ಅಂತ ಮೊಟ್ಟಮೊದಲು ನಿರೂಪಿಸಿದವರು ಸಾವರ್ಕರ್). ಅಂತಹ ಸಂದರ್ಭದಲ್ಲಿ ಭಗವಂತನ ಅವತಾರ ಎಂದೆನಿಸಿಕೊಂಡಿದ್ದ ರಾಮಕೃಷ್ಣ ಪರಮಹಂಸರ ಅಮೃತ ಹಸ್ತದಿಂದ ರಾಷ್ಟ್ರ ನಿರ್ಮಾಣಕ್ಕಾಗಿ ಕಡೆಯಲ್ಪಟ್ಟ ಶಿಲ್ಪ ಅದು. ಅದು ಇಡೀ ದೇಶದಲ್ಲಿ ಬಿರುಗಾಳಿಯಂತೆ ಸಂಚರಿಸಿ ಧರ್ಮ, ಸಂಸ್ಕೃತಿ, ಕ್ಷಾತ್ರವನ್ನು ಬಡಿದೆಬ್ಬಿಸಿತು.

                      ಭಾರತೀಯರ ಸರಳತೆಯನ್ನು, ವ್ಯಕ್ತಿಯನ್ನು ಜಗತ್ತಿನೊಂದಿಗೆ ಸಮರಸಗೊಳಿಸಬಲ್ಲ ಇಲ್ಲಿಯ ಸಂಸ್ಕಾರವನ್ನು ಜಗತ್ತಿನಾದ್ಯಂತ ಸಾಧ್ಯಂತವಾಗಿ ವಿವರಿಸಿದರು. ವಿಶ್ವವಿರಾಟವನ್ನು ವ್ಯಾಪಿಸಬಲ್ಲ ಹಿಂದೂಗಳ ಮುಗ್ಧ ಪ್ರೀತಿಯನ್ನು ಮೆಚ್ಚಿದರು. ಬೆಂಕಿಯನ್ನು ಕೆಣಕಿದೊಡನೆ ಭಗ್ಗನೆ ಉರಿಯುವ ಭಾರತದ ಆಧ್ಯಾತ್ಮಿಕ ಶಕ್ತಿಯನ್ನು ಜಗತ್ತು ಬೆರಗಾಗುವಂತೆ ನೆನಪಿಸಿದರು. ನೋವಿಗೆ ಮರುಗುವ ಕಣ್ಣ ನೀರ ದೃಷ್ಟಿಯನ್ನು ಶುಭ್ರಗೊಳಿಸಿ, ಮನುಷ್ಯ ಮರಕಲ್ಲುಗಳನ್ನು ಕಾಣುವ ನೋಟದ ದ್ವೈತ ಭಾವವನ್ನು ಮರೆಸುವ ಪಾರಮಾರ್ಥದ ಸಿದ್ಧಿಯನ್ನು ಪ್ರಪಂಚದ ಮೂಲೆ ಮೂಲೆಗೂ ಪಸರಿಸುವಂತೆ ಮಾಡಿದ ವೇದಾಂತಿ ಅವರು.

                           "Who dares misery love and hugs the form of death, to him the mother comes" ಎಂಬ ಅವರ ಆವಾಹನ ಮಂತ್ರಕ್ಕೆ ಸಾವಿರಾರು ಯುವಕರು ಓಗೊಟ್ಟರು. ವಿನಂತಿ ಸರಣಿಗಳಿಂದಾಗಲಿ ಅಹಿಂಸಾದಿ ಮಾರ್ಗಗಳಿಂದಾಗಲಿ ಸ್ವಾತಂತ್ರ್ಯ ಸಾಧನೆ ಆಗದೆಂದು ಅವರು ಅಸಂದಿಗ್ಧವಾಗಿ ಸಾರಿದ್ದರು.
" ಮಾರಕ ಯಂತ್ರಗಳು, ಧನಬಲ, ಸರಕುರಾಶಿಗಳಿಂದ ಮೆರೆಯುವ ವಣಿಕರ ಜಗತ್ತಿನಲ್ಲಿ ಭಿಕ್ಷಾಪಾತ್ರೆಗೆ ಸ್ಥಾನವಿರದು. ಆ ಬಲದೆದುರು ಮಹಾಮಾಯೆಯ ವಾಣಿಯ, ಎಂದರೆ ಮಾನವನ ಅಂತಸ್ಥಶಕ್ತಿಯ ಸ್ಫೋಟ ಮಾತ್ರ ಮಾನವಗತಿಗೆ ಹೊಸ ದಿಕ್ಕನ್ನು ನೀಡೀತು" ಎಂದು ಜನರಿಗೆ ಕರೆ ಕೊಟ್ಟಿದ್ದರು.

                   ಭಾರತದ ರಾಷ್ಟ್ರೀಯತೆಗೆ ಸಕ್ರಿಯತೆ ತುಂಬಿ ಭಾರತೀಯರಲ್ಲಿ ರಾಜ್ಯಕ್ಕೆ ಅಧಿಸ್ಠಾನವಾಗಿ ಸಾಮುದಾಯಿಕ ಭಾವನೆಯನ್ನು ಉಂಟು ಮಾಡಿದ ಅವರು ಕಾಂಗ್ರೆಸ್ಸಿನ ಮನವಿ ರಾಶಿಗಳಿಂದ ಪ್ರಯೋಜನವಾಗದೆಂದು ಬಲವಾಗಿ ನಂಬಿದ್ದರು. ಮದ್ರಾಸಿನಲ್ಲಿ ಮಾಡಿದ ಭಾಷಣದಲ್ಲಿ  "Heaven is nearer through football than through Gita. We want men of strong biceps " ಎಂದು ಕಂಠೋಕ್ತವಾಗಿ ಸಾರಿದ್ದರು.

                  ಸ್ವಯಂ ವಿವೇಕಾನಂದರೇ ಹೇಮಚಂದ್ರ ಘೋಷ್ ಮತ್ತು ಸಂಗಡಿಗರ ಮೂಲಕ ೧೯೦೨ರಲ್ಲಿ ಕ್ರಾಂತಿ ಸಂಘಟನೆಯೊಂದನ್ನು ಹುಟ್ಟು ಹಾಕಿದ್ದರು. ಮುಂದೆ ಬ್ರಹ್ಮಬಾಂಧವ ಉಪಧ್ಯಾಯ ಅದಕ್ಕೆ ಮುಕ್ತಿಸಂಘ ಎಂದು ಹೆಸರಿಟ್ಟು ಮುನ್ನಡೆಸಿದರು.
ವಿವೇಕಾನಂದರ ಕುರಿತು ಫ್ರಾನ್ಸಿನ ಅಗ್ರಮಾನ್ಯ ಚಿಂತಕ ರೋಮಾರೋಲಾ "The neo-Vedantism of swami vivekananda put new life in themoribund Indian nationalism" ಎಂದು ವಿವೇಕಾನಂದರಿಂದ ದೊರೆತ ಚೇತರಿಕೆಯನ್ನು ಬಣ್ಣಿಸಿದ್ದಾನೆ.

                   ಅವರ ದೃಷ್ಟಿಯಲ್ಲಿ ಭಾರತೀಯ ಹೇಗಿರಬೇಕು?
" ನಾನು ಹಲವು ವರ್ಷಗಳಿಂದ ಪಶ್ಚಿಮ ದೇಶಗಳಲ್ಲಿ ಇದ್ದುದರಿಂದ ನನಗೆ ಗೊತ್ತು. ಅಲ್ಲಿಯ ದೃಷ್ಟಿ ಬೇರೆ. ನಡೆಯುವ ದಾರಿ ಬೇರೆ. ಅದನ್ನು ಕುರುಡರಂತೆ ಅನುಸರಿಸಿದರೆ ನಮ್ಮ ದಾರಿಯು ತಪ್ಪುತ್ತದೆ. ನಾವು ಆದರ್ಶರೆನ್ನುವ ಸೀತೆ, ಸಾವಿತ್ರಿ, ದಮಯಂತಿಯರು ತ್ಯಾಗದ ಮೂರ್ತಿಗಳು. ನಾವು ಪೂಜಿಸುವ ದೇವರು ಕೂಡಾ ತ್ಯಾಗದ ಸಂಕೇತಗಳೇ. ಸಂನ್ಯಾಸಿಯಂತಿದ್ದ ಶಂಕರನೇ ನಮ್ಮ ಆರಾಧ್ಯದೈವ" ಇದು ಇಂದಿನ ಪಾಶ್ಚಾತ್ಯ ಮಾನಸಿಕತಾವಾದಿಗಳು ತಿಳಿಯಬೇಕಾದ ಅಪ್ಪಟ ಸತ್ಯವಲ್ಲವೇ?

                       ಮುಸ್ಲಿಂ ಮಾನಸಿಕತೆಯ ಒಳಹೊರಗುಗಳ ಬಗ್ಗೆ ಸ್ಪಷ್ಟ ವೈಚಾರಿಕ ವ್ಯಗ್ರತೆಯು ಅವರ ಮಾತುಗಳಲ್ಲಿ ಕಂಡುಬರುತ್ತಿತ್ತು. "ಮುಸಲ್ಮಾನರು ಯೆಹೂದಿಗಳನ್ನು ಮತ್ತು ಕ್ರೈಸ್ತರನ್ನು ದ್ವೇಷಿಸುವುದು ಯಾಕೆಂದರೆ ಅವರು ತಮಗಿಂತಲೂ ಕ್ಷುಲ್ಲಕವಾದ ನಂಬಿಕೆಗಳನ್ನು ಹೊಂದಿರುವ ಜನರೆಂದು. ಆದರೆ ಹಿಂದೂಗಳ ಬಗೆಗೆ ಅವರದ್ದು ತೀವ್ರವಾದ ದ್ವೇಷ ಭಾವನೆ. ಹಿಂದುಗಳು ವಿಗ್ರಹಗಳನ್ನು ಪೂಜಿಸುವುದರಿಂದ ಅವರು ಕಾಫಿರ ಜನರು. ಅಂತಹವರು ಬದುಕಲು ಯೋಗ್ಯರಲ್ಲ. ಅವರನ್ನು ನಿರ್ನಾಮ ಮಾಡುವುದೇ ನಮ್ಮ ಗುರಿ-ಇದು ಮುಸ್ಲಿಮರ ಮನಸ್ಸು" ಎಂಬುದು ಅವರ ವಿಶ್ಲೇಷಣೆ.

                     ಕೊಲಂಬೋದಿಂದ ಅಲ್ಮೋರಾದವರೆಗೆ ಉಪನ್ಯಾಸ ಮಾಲೆಯಲ್ಲಿ ವಿವೇಕಾನಂದರು ಯಾವ ಶಕ್ತಿಪಂಥದ ಪ್ರತಿಪಾದನೆ ಮಾಡಿದ್ದರೋ ಅದು ೧೯೦೫ರ ಸ್ವದೇಶೀ ಆಂದೋಲನದಲ್ಲಿ ಮೂರ್ತರೂಪದಲ್ಲಿ ಪ್ರಕಟಗೊಂಡಿತು. ಶಿಷ್ಯೆ ಭಗಿನಿ ನಿವೇದಿತಾರನ್ನು ರಾಷ್ಟ್ರಸೇವೆಗೆ ಸಮರ್ಪಿಸಿದರು. "ಭಗವತಿ ಬೇಡುತ್ತಿರುವುದು ರಾಷ್ಟ್ರೀಯತೆಯ ನೈವೇದ್ಯವನ್ನೇ ಹೊರತು ಸೌಮ್ಯ ವಿಧೇಯತೆಯನ್ನಲ್ಲ. ನನಗೆ ಧೃಢಕಾಯರಾದ, ಸಿಂಹದ ಗುಂಡಿಗೆಯುಳ್ಳ, ಮಿಂಚಿನೋಪಾದಿಯಲ್ಲಿ ಸಂಚರಿಸಬಲ್ಲ, ತನು ಮತ್ತು ಮನದಿಂದ ತರುಣರಾದ ೧೦೦ ಮಂದಿ ಯುವಕರನ್ನು ಕೊಡಿ. ಬಲಿಷ್ಠ ಭಾರತವನ್ನು ನಿರ್ಮಿಸಬಲ್ಲೆ. ಏಳಿ ಎದ್ದೇಳಿ" ಎಂದು ಭಾರತೀಯರ ಅಂತಃಸತ್ವವನ್ನು ಬಡಿದೆಬ್ಬಿಸಿದ ಆ ಸೂರ್ಯ ೩೯ರ ಎಳೇ ಪ್ರಾಯದಲ್ಲಿಯೇ ಅಸ್ತಮಿಸಿದ್ದು ಭಾರತದ ದೌರ್ಭಾಗ್ಯವಲ್ಲವೇ?

               ಆವರ ಕನಸು ನನಸು ಮಾಡುವಲ್ಲಿ ನಾವು ಪ್ರಯತ್ನ ಮಾಡಲೇ ಇಲ್ಲ... ೧೫೦ ಅಲ್ಲ ಸಾವಿರವಾದರೂ ಇದೇ ಮನಸ್ಥಿತಿ ಇದ್ದರೆ ಭಾರತದ ಸ್ಥಿತಿ ಅಧೋಗತಿ...ಎದ್ದೇಳು ಅರ್ಜುನ!

ಭಾನುವಾರ, ಜನವರಿ 6, 2013

ಭಾರತ ದರ್ಶನ-೨೪

ಭಾರತ ದರ್ಶನ-೨೪:

                      ನೀರು ಕೇವಲ H2O ಅಲ್ಲ. ನಮ್ಮ ಪಾಲಿಗೆ ಅದು ತಾಯಿ. ಭಗವಾನ್ ವೇದವ್ಯಾಸರು "ವಿಶ್ವಸ್ಯ ಮಾತರಃ" ಅಂತ ಹೇಳುತ್ತಾ ನದಿಗಳನ್ನು ಮಾತೃ ಸ್ವರೂಪದಲ್ಲಿ ಕಂಡು ನಮಿಸಿದ್ದಾರೆ. ನದಿಗಳ ಹೆಸರನ್ನು ನಮ್ಮ ಅಕ್ಕ ತಂಗಿಯರಿಗೆ ಇಟ್ಟು ಗೌರವಿಸುವ ಸಂಸ್ಕೃತಿ ನಮ್ಮದು. ಗಾವೋ ವಿಶ್ವಸ್ಯ ಮಾತರಃ. ಗೋವುಗಳಿಗೆ ಕೂಡಾ ಗಂಗಾ, ತುಂಗಾ, ಭದ್ರಾ, ಕಪಿಲಾ, ನಂದಿನಿ...ಅಂತಾ ಹೆಸರಿಟ್ಟು ಗೌರವಿಸುತ್ತೇವೆ. ಶುಭ ಸಮಾರಂಭಗಳಲ್ಲಿ ಗಂಗೆ, ಯಮುನೆ, ಗೋದೆ ಆದಿಯಾಗಿ ಸಪ್ತ ಜಾಹ್ನವಿಗಳನ್ನು ಕಲಶಕ್ಕೆ ಆವಾಹನೆ ಮಾಡಿ ಪೂಜಿಸುತ್ತೇವೆ. ನಮ್ಮ ಸಂಸ್ಕೃತಿ ಅರಳಿದ್ದೇ ನದಿ ತೀರದಲ್ಲಿ. ವೈದಿಕ ಋಷಿಗಳ ಸೂಕ್ತಗಳು ಸಪ್ತ ಸಿಂಧು ಪ್ರದೇಶದಲ್ಲಿ ರಚನೆಯಾದವು.

                    ಋಷಿ ಮುನಿಗಳ ತಪಪ್ರಧಾನ ಸಂಸ್ಕೃತಿ ಗಂಗೆಯ ತೀರದಲ್ಲಿ ಬೆಳಗಿತು. ಮನುಕುಲದ ಮೊದಲ ರಾಜಧಾನಿ ಅಯೋಧ್ಯೆ ಸರಯೂ ನದಿ ತೀರದಲ್ಲಿದೆ. ಚಂದ್ರವಂಶೀಯರ ರಾಜಧಾನಿಗಳಾದ ಹಸ್ತಿನಾವತಿ ಮತ್ತು ಇಂದ್ರಪ್ರಸ್ಥಗಳು ಗಂಗೆ ಮತ್ತು ಯಮುನೆಯರ ದಡದಲ್ಲಿ ನಿರ್ಮಾಣವಾದವು. ಭಕ್ತಿಪಂಥ ಪರಿಪುಷ್ಟವಾದದ್ದು ಯಮುನೆ ಮತ್ತು ತುಂಗಭದ್ರೆಯರ ದಡದಲ್ಲಿ. ಪ್ರಯಾಗದ ತ್ರಿವೇಣೀ ಸಂಗಮ ಯಜ್ಞಪ್ರಧಾನ ಮತ್ತು ಪೂಜಾಪ್ರಧಾನ ಸಂಸ್ಕೃತಿಗಳ ಸಂಗಮ ಕ್ಷೇತ್ರವಾಯಿತು. ನರ್ಮದಾ ಗೋದೆಯರ ದಡದಲ್ಲಿ ವಿಕ್ರಮ ಶಾಲಿವಾಹನರ ಪರಾಕ್ರಮಗಳು ಪ್ರಕಟಗೊಂಡವು. ಮಹಾರಾಷ್ಟ್ರದ ಭಕ್ತಿ ಸಾಹಿತ್ಯ ಅರಳಿದ್ದು ಗೋದೆಯ ತಟದಲ್ಲಿ. ಶ್ರೀ ಸಮರ್ಥ, ವಿದ್ಯಾರಣ್ಯ, ಶಿವಾಜಿ, ನಾನಾ ಫಡ್ನವೀಸ್, ಹರಿಹರ-ಬುಕ್ಕ, ರಾಮಾಶಾಸ್ತ್ರಿ,..ಒಂದೇ ಮಾತಿನಲ್ಲಿ ಹೇಳೋದಾದರೆ ದಕ್ಷಿಣದ ಸಾಧುತ್ವ, ಸದಾಚಾರ, ನ್ಯಾಯ, ಧರ್ಮನಿಷ್ಠೆ, ಸ್ವದೇಶಿತನ, ಮುತ್ಸದ್ಧಿತನ, ಉದಾರತೆ ಈ ಎಲ್ಲಾ ಸದ್ಗುಣಗಳು ತುಂಗೆ-ಗೋದೆಯರ ವಾತ್ಸಲ್ಯಪೂರ್ಣ ಆರೈಕೆಯಿಂದ ಹೊರಹೊಮ್ಮಿದವು. ಕಾವೇರಿಯಂತು ದಕ್ಷಿಣದ ಗಂಗೆ. ಚೋಳರು, ಪಲ್ಲವರು ಕಾವೇರಿಯನ್ನು ಮುಂದಿಟ್ಟುಕೊಂಡು ತಮ್ಮ ತಮ್ಮ ಪರಾಕ್ರಮ ಮೆರೆದಿದ್ದಾರೆ.

                     ವೈದಿಕ ಸಂಸ್ಕೃತಿಯ ಜ್ವಲಂತ ಅಭಿಮಾನದ ಕೇಂದ್ರವಾಗಿದ್ದ ವಿಜಯನಗರ ಸಾಮ್ರಾಜ್ಯ ಎದ್ದು ನಿಂತಿದ್ದು ತುಂಗಭದ್ರೆಯ ದಡದಲ್ಲೇ. ಸಾಯಣಾಚಾರ್ಯರು ಇದರ ದಡದಲ್ಲೇ ಕುಳಿತು ವೇದಗಳಿಗೆ ಭಾಷ್ಯವನ್ನು ಬರೆದರು. ಹೀಗೆ ಒಂದೊಂದು ನದಿಯು ಒಂದೊಂದು ಸಂಸ್ಕೃತಿಯ ಪ್ರವಾಹ. ಗಂಗೆ ತುಂಗೆಯರ ನಿರ್ಮಲ ಸಲಿಲಗಳ ಸ್ವಚ್ಚ ಶೀತಲ ಅಖಂಡ ಪ್ರವಾಹವನ್ನು ಕಂಡ ಬಳಿಕ ಕವಿಶ್ರೇಷ್ಠರ ಪ್ರತಿಭೆ ಹೊರಬರದೇ ಇದ್ದೀತೇ? ವಾಲ್ಮೀಕಿ, ವ್ಯಾಸ, ಭಾಸ, ಕಾಳೀದಾಸ, ಕಂಬ, ಶಂಕರ, ತುಳಸೀ, ಜಗನ್ನಾಥ ಪಂಡಿತ...ಮುಂತಾದ ಮಹಾಕವಿಗಳು ನದೀ ಸ್ತವನಕ್ಕಾಗಿ ತಮ್ಮ ವಾಗ್ವೈಭವವನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಂಡರು.

                    ಈ ತೀರ್ಥಗಳ ಸೇವನೆ ಬಗ್ಗೆ ನಮ್ಮ ಹಿರಿಯರ ನಂಬಿಕೆ ಹೇಗಿತ್ತು?
ಸರಸ್ವತೀ ತೀರ್ಥ ಸೇವನೆಯಿಂದ ಹತ್ತು ದಿವಸದಲ್ಲಿ ಪಾಪ ದೂರವಾಗುತ್ತೆ. ಯಮುನೆಯ ಸೇವನೆಯಿಂದ ಸೋಮಯಾಗದ ಫಲ ಪ್ರಾಪ್ತಿಯಾಗುತ್ತೆ. ಗಂಗೆಯ ಒಂದು ಬಿಂದು ಕುಡಿದರೆ ಸಾಕು ಪಾಪ ದೂರವಾಗುತ್ತೆ. ನರ್ಮದೆಯ ದರ್ಶನ ಮಾತ್ರದಿಂದ, ಕಾವೇರಿ, ಗೋದೆಯರ ಶ್ರವಣ ಮಾತ್ರದಿಂದ ಪಾಪ ದೂರವಾಗುತ್ತೆ ಎನ್ನುವ ನಂಬಿಕೆಯಿದೆ. (ಇವೆಲ್ಲವೂ ಭಾವನೆಗಳು. ಇವನ್ನು ವೈಜ್ಞಾನಿಕ ದೃಷ್ಠಿಯಿಂದ ನೋಡಬಾರದು. ಪ್ರತಿಯೊಂದು ಸಮಾಜಕ್ಕೆ ಶೃದ್ಧೆ ಹಾಗೂ ನಂಬಿಕೆಯ ವಿಷಯಗಳೇ ಆಧಾರವಾಗಿರುತ್ತವೆ.)

                         ಯಮುನಾ ಗಂಗೆಯ ಜೊತೆ ಉಲ್ಲೇಖಿಸಲ್ಪಡುವ ಶ್ರೇಷ್ಥ ನದಿಗಳಲ್ಲೊಂದು. ಹಿಮಾಲಯದಲ್ಲಿ ಜನಿಸುವ ಈಕೆ ಉತ್ತರ ಭಾರತದ ಬಹುದೊಡ್ಡ ಭಾಗವನ್ನು ಹಸಿರುಗೊಳಿಸಿ ಕೊನೆಯಲ್ಲಿ ಗಂಗೆಯಲ್ಲಿ ಲೀನವಾಗಿತ್ತಾಳೆ. ಯಮುನೋತ್ರಿಯಿಂದ ಹೊರಟ ಈಕೆ ಹಿಮಾಲಯ ಶ್ರೇಣಿಗಳಲ್ಲಿ ಸುಮಾರು ೮೦ ಮೈಲುಗಳ ದುರ್ಗಮ ಹಾದಿಯನ್ನು ದಾಟಿ ಮೈದಾನ ಪ್ರದೇಶವನ್ನು ಸೇರುತ್ತಾಳೆ. ಹಿಮಾಲಯದಿಂದ ಬರುವಾಗ ಬೋನ್ಸ್, ಗಿರಿ, ಅಸೆನ್ ಎನ್ನುವ ನದಿಗಳು ಯಮುನೆಯ ಒಡಲನ್ನು ಸೇರುತ್ತವೆ. ಚಂಬಲ್, ಸೇಂಗರ್, ಬೇತಾವ್ ಮತ್ತು ಕೇನ್ ಮೈದಾನಕ್ಕಿಳಿದ ಯಮುನೆಯನ್ನು ಸೇರುತ್ತವೆ. ಮುಂದೆ ಅವಳ ಆಳ, ಅಗಲ, ಹಿರಿಮೆ, ಗರಿಮೆಗಳು ಹೆಚ್ಚುತ್ತಾ ಹೋಗುತ್ತವೆ. ಹೀಗೆ ಮೈದುಂಬಿ ಹರಿಯುವ ಯಮುನೆ ಪ್ರಯಾಗ ಕ್ಷೇತ್ರದಲ್ಲಿ ಗಂಗೆಯನ್ನು ಬಂದು ಸೇರುತ್ತಾಳೆ. ಈ ಸಂಗಮ ಕ್ಷೇತ್ರದಲ್ಲಿ ಮಿಂದು ಪುನೀತರಾಗಲು ವರ್ಷಂಪ್ರತಿ ಲಕ್ಷ ಲಕ್ಷ ಯಾತ್ರಿಕರು ಧಾವಿಸುತ್ತಾರೆ.

                     ಯಮುನೆ ಆಗಾಗ ತನ್ನ ಪಥವನ್ನು ಬದಲಾಯಿಸಿದ ಸಂಗತಿ ಇತಿಹಾಸದಲ್ಲಿ ಗೋಚರವಾಗುತ್ತೆ. ಮೊದಲು ಆಕೆ ಮಧುವನದ ಬಳಿ ಹರಿಯುತ್ತಿದ್ದಳು. ಮಧುವನದಲ್ಲಿ ಯಮುನಾ ತೀರದಲ್ಲಿ ಶತ್ರುಘ್ನನು ಮಥುರಾ ನಗರವನ್ನು ಸ್ಥಾಪಿಸಿದ ಉಲ್ಲೇಖ ರಾಮಾಯಣದಲ್ಲಿದೆ. ಕೃಷ್ಣನ ಸಮಯದಲ್ಲಿ ಯಮುನೆ ಕಠಾರ ಕೇಶವ ದೇವ್ ಎನ್ನುವ ಪುಣ್ಯ ಸ್ಥಳದ ಬಳಿ ಹರಿಯುತ್ತಿದ್ದಳು. ಬೌದ್ಧ ಪಂಥ ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗ ಯಮುನೆಯ ಎರಡೂ ದಡಗಳಲ್ಲಿ ಅವರ ಸಂಘಾರಾಮಗಳಲ್ಲಿದ್ದವು. ಆಗ ಯಮುನೆ ಕೇಶವ್ ದೇವ್ ಕ್ಷೇತ್ರದಿಂದ ಸಾಕಷ್ಟು ದೂರ ಸರಿದಿದ್ದಳು. ವಲ್ಲಭ ಸಂಪ್ರದಾಯದ ಸಾಹಿತ್ಯವನ್ನು ಓದಿದರೆ ಯಮುನೆಯ ಇನ್ನಷ್ಟು ವಿವರಗಳು ಸಿಗುತ್ತವೆ. ಅದರ ಪ್ರಕಾರ ಯಮುನೆಯ ಎರಡು ಕವಲುಗಳು ಹರಿಯುತ್ತಿದ್ದವು. ಒಂದು ಕವಲು ನಂದಗಾಂವ್, ಬರಸಾನ್ ಮತ್ತು ಸಂಕೇತ್ ಎನ್ನುವ ಗ್ರಾಮಗಳಲ್ಲಿ ಹರಿದು ಗೋವರ್ಧನದ ಬಳಿ ಜಮುನಾವತ ಎನ್ನುವ ಜಾಗಕ್ಕೆ ಹೋದರೆ, ಇನ್ನೊಂದು ಕವಲು ಬೀರ್ ಘಾಟ್ ಸಮೀಪದಿಂದ ಗೋಕುಲವನ್ನು ಪ್ರವೇಶ ಮಾಡುತ್ತಿತ್ತು. ಮುಂದೆ ಈ ಎರಡು ಕವಲುಗಳು ಒಂದುಗೂಡಿ ಆಗ್ರಾದ ಕಡೆಗೆ ಮುಂದುವರಿಯುತ್ತಿದ್ದವು.

                 ಪುರಾಣದಲ್ಲಿ ಯಮುನೆಯ ಬಗೆಗೆ ಒಂದು ಘಟನೆಯಿದೆ. ಅವಳು ಸೂರ್ಯನ ಮಗಳು, ಯಮನ ತಂಗಿ. ಸೂರ್ಯನಿಗೆ ಸಂಜ್ಞಾದೇವಿ ಮತ್ತು ಛಾಯಾದೇವಿ ಎಂಬಿಬ್ಬರು ಮಡದಿಯರು. ವೈವಸ್ವತನು ಸಂಜ್ಞೆಯಿಂದ ಶೃದ್ಧದೇವ, ಯಮ ಮತ್ತು ಯಮುನೆ ಎಂಬ ಮಕ್ಕಳನ್ನು ಪಡೆದ. ಅರ್ಕನ ಪ್ರಖರತೆಯಿಂದ ಬೇಸತ್ತ ಸಂಜ್ಞಾದೇವಿ ತನ್ನ ನೆರಳಿಗೆ ಜೀವಕಳೆ ಕೊಟ್ಟು ಅಲ್ಲಿ ನಿಲ್ಲಿಸಿ, ತಾನು ತವರಿಗೆ ಅಂದರೆ ತಂದೆ ವಿಶ್ವಕರ್ಮನ ಬಳಿ ತೆರಳಿದಳು. ಅವಳೇ ಛಾಯೆ. ಸೂರ್ಯ ಛಾಯೆಯಿಂದ ಶನಿ, ಸವರ್ಣಿಮನು, ತಪತಿ ಎಂಬ ಮೂರು ಮಕ್ಕಳನ್ನು ಪಡೆದ. ಯಮುನೆ ಮತ್ತು ತಪತಿ ಇಬ್ಬರೂ ಜಲರೂಪ ಧಾರಣೆ ಮಾಡಿ ಲೋಕ ಕಲ್ಯಾಣಕ್ಕೆ ಧುಮುಕಿದರು. ಛಾಯೆಯ ಮಲತಾಯಿ ಧೋರಣೆಯಿಂದ ಕ್ರೋಧಗೊಂಡು ಯಮ ಒದ್ದಾಗ ಅವಳು ಕಾಲು ತುಂಬಾ ಹುಣ್ಣಾಗುವಂತೆ ಶಪಿಸಿದಳು. ನಿಜ ವಿಷಯ ತಿಳಿದ ಸೂರ್ಯ ಗೋಗರೆಯುತ್ತಿದ್ದ ಯಮನ ವ್ರಣ ಗುಣವಾಗುವಂತೆ ಮಾಡಿದ.

                       ಭಾರತದ ರಾಜಧಾನಿ ದೆಹಲಿ ಯಮುನಾ ತೀರದಲ್ಲಿದೆ. ಅನೇಕ ರಾಜಕೀಯ ಘಟನೆಗಳು, ಯುದ್ಧ, ರಕ್ತಪಾತ, ವಿಧ್ವಂಸಗಳನ್ನೀಕೆ ಕಂಡಿದ್ದಾಳೆ. ಪಾಂಡವರು ಖಾಂಡವ ದಹನ ಮಾಡಿ ಇಂದ್ರಪ್ರಸ್ಥ ನಿರ್ಮಿಸಿದ್ದು ಇವಳ ದಡದಲ್ಲೇ. ಆ ಬಳಿಕ ಅನೇಕ ದೇಶೀಯ ಹಾಗೂ ವಿದೇಶೀಯ ಪ್ರಭುತ್ವಗಳನ್ನು ಇಂದ್ರಪ್ರಸ್ಥ ಕಂಡಿದೆ. ರಾಮಚರಿತ ಮಾನಸದ ಕರ್ತೃ ಸಂತ ಕವಿ ತುಳಸೀದಾಸ ಜನಿಸಿದ್ದು ಯಮುನಾ ತೀರದ ರಾಜಾಪುರದಲ್ಲಿ.  ಗಂಗೆ ಯಮುನೆಯರಲ್ಲಿ ಯಮುನೆ ಹಿರಿದಾಗಿ ಗಂಭೀರವಾಗಿ ಕಾಣುತ್ತಾಳೆ. ಕೃಷ್ಣಭಗಿನಿ ದ್ರೌಪದಿಯಂತೆ ಅವಳು ಕೃಷ್ಣವರ್ಣೆಯಾಗಿ ಮಾನಿನಿಯಂತೆ ಕಾಣುತ್ತಾಳೆ. ಇವಳ ಎದುರು ಗಂಗೆ ಪಾಪ ಮುಗ್ಧೆ. ಆದರೇನು ದೇವಾಧಿದೇವ ಮಹಾದೇವನೇ ಆಕೆಯನ್ನು ಶಿರದಲ್ಲಿ ಧರಿಸಿದ್ದಾನೆ ಹಾಗಾಗಿ ಯಮುನೆ ತನ್ನ ಹಿರಿತನವನ್ನು ಗಂಗೆಗೆ ಬಿಟ್ಟು ಕೊಟ್ಟಿದ್ದಾಳೆ.

                  ಯಮುನೆಯ ನೀರಿಗೆ ಸಾಮ್ರಾಜ್ಯ ನಿರ್ಮಾಣದ ಶಕ್ತಿ ಇದೆ ಅಂತ ಕಾಣುತ್ತೆ. ಪಾಂಡವರಿಂದ ಹಿಡಿದು ವಿಧರ್ಮೀ ಔರಂಗ ಜೇಬನವರೆಗೆ, ನಾನಾ ಬಂಡಾಯಗಳಿಂದ ಹಿಡಿದು ಸ್ವಾಮಿ ಶೃದ್ಧಾನಂದರವರೆಗಿನ ಇತಿಹಾಸ ಆಕೆಯ ಸ್ಮರಣ ಸಂಗ್ರಹಾಲಯದಲ್ಲಿದೆ. ಯಮುನೆಯ ದಡದಲ್ಲಿ ಅತ್ಯಾಚಾರಕ್ಕೊಳಗಾದ ಮೊಘಲ್ ಶಾಸಿತ ನಗರಗಳ ಭೇರಿ ನಗಾರಿಗಳು ಶಾಂತವಾಗಿವೆ. ಆದರೆ ಮಥುರಾ ವೃಂದಾವನಗಳ ಕೊಳಲಿನ ಧ್ವನಿ ಇನ್ನೂ ಕೇಳುತ್ತಾ ಇದ್ದೇವೆ. ಯಾವ ಯಮುನೆ ಕಾಳಿಂಗ ಮರ್ಧನವನ್ನು ಕಂಡಳೋ ಅವಳೇ ಕಂಸನ ವಧೆಯನ್ನೂ ಕಂಡಳು. ಹಸ್ತಿನಾವತಿಗೆ ಹೊರಟ ಕೃಷ್ಣನ ಶಾಂತ ರೂಪ ಕಂಡ ಆಕೆ ಕುರುಕ್ಷೇತ್ರದಲ್ಲಿ ಪಾಂಚಜನ್ಯ ಊದಿ ಅರ್ಜುನನನ್ನು ಬಡಿದೆಬ್ಬಿಸಿದ ಯುದ್ಧಕುಶಲ ಗೀತಾಚಾರ್ಯನ ರೂಪದಲ್ಲಿ ಕಂಡು ಆನಂದಿಸಿರಬೇಕು. ಕೊಳಲಿನ ನಾದದೊಡನೆ ಗೀತೆಯ ಸುಸ್ವರವನ್ನೂ ಕೇಳಿದವಳಾಕೆ.

                  ಕೃಷ್ಣ ಪಂಥದ ಭಕ್ತರು ತಮ್ಮೆಲ್ಲಾ ಪ್ರತಿಭೆಯನ್ನು ಯಮುನೆಗೆ ಧಾರೆ ಎರೆದರು. ಕವಿ ನಂದಾದಾಸ್ ಹೇಳುತ್ತಾರೆ- ಮುರಳಿಯ ನಾದದಿಂದ ಎಲ್ಲರೂ ತನ್ನನ್ನು ಮೋಹಿಸುವಂತೆ ಮಾಡಿದ ಮುರಾರಿ ಯಮುನೆಯ ಲಯಕ್ಕೆ ಸೋತು ಹೋದ. ಶಂಕರ ಭಗವತ್ಪಾದರು ಯಮುನೆಯನ್ನು ಕೊಂಡಾಡುವಾಗ ಅವಳ ತೀರದ ಮಂದ ಶೀತಲ ಗಂಧಯುಕ್ತ ಸಮೀರ ಪರಿಶ್ರಮವನ್ನು ಪರಿಹರಿಸುತ್ತೆ. ಅವಳ ಸೌಂದರ್ಯ ಮಾತಿಗೆ ನಿಲುಕದ್ದು. ಅವಳ ಸಹವಾಸದಿಂದ ಇಡೀ ಭೂಮಿಯೇ ಪಾವನವಾಗಿದೆ. ಇಂತಹ ಕಲಿಂದ ಕನ್ಯೆ ಸದಾ ನನ್ನ ಮನದ ಕ್ಲೇಶ ವಿಕಾರಗಳನ್ನು ನಷ್ಟ ಮಾಡಲಿ ಎಂದು ಪ್ರಾರ್ಥಿಸಿದ್ದಾರೆ. ಭಾರತೀಯರ ಮನದಲ್ಲಿ ಅಚ್ಚಳಿಯದ ನಿಚ್ಚಳ ಪ್ರಭಾವ ಬೀರಿರುವ ಈ ನದಿ ಸಮಸ್ತ ಭಾರತೀಯರ ಗೌರವಾದರಗಳಿಗೆ ಪಾತ್ರವಾಗಿದೆ. ಅಂತಹ ಕೃಷ್ಣವರ್ಣೆ ಮುಗುದೆಯನ್ನು ದುರ್ಗಂಧಗೊಳಿಸಿದ ಪಾಪಿಗಳಾದ ನಮಗೇನು ಶಿಕ್ಷೆ ಕೊಟ್ಟುಕೊಳ್ಳಬೇಕು?

ಮಂಗಳವಾರ, ಜನವರಿ 1, 2013

ಆ ದೇವ ಗಹಗಹಿಸಿ ನಗುತ್ತಿದ್ದಾನೆ. ನಡುವೆ ಒಂದು ವಿಷಾದದ ಛಾಯೆ...!!!

ಇವತ್ತು ದೇವಸ್ಥಾನಗಳಲ್ಲೂ ವಿಶೇಷ ಪೂಜೆ!
 ತಿಳಿ ಹೇಳಬೇಕಾದವರೇ ತಿಳಿ ಹೀನರಂತೆ ವರ್ತಿಸಿದರೆ ಹೇಗೆ? ಅನುಕರಣೆ ಎನ್ನುವುದು ಜನರನ್ನು ಮಾತ್ರವಲ್ಲ, ಪುರೋಹಿತರನ್ನು ಕೊನೆಗೇ ದೇವರನ್ನೂ ಮತಾಂತರ ಮಾಡಿ ಬಿಟ್ಟಿತು! ದೇವರ ಮುಖದಲ್ಲೊಂದು ದುಃಖದ ಛಾಯೆ!

ಎಲ್ಲರೂ ಮಾಡುತ್ತಾರೆಂದು ನಾವು ಮಾಡಿದರೆ ನಮಗೂ ಮುಸ್ಲಿಮರಿಗೂ ಏನು ವ್ಯತ್ಯಾಸ?
 ಅರಿವು ಎನ್ನುವುದೇ ದೇವರು, ಅಂಧಾನುಕರಣೆಯೇ ಅರಿಯು!

ನಾವು ಬದಲಾದಾಗ ಜಗತ್ತು ಬದಲಾಗುವುದು. ಘರ್ಜಿಸುವ ಹಿಂದೂ ಕೇಸರಗಳಾಗಿ! ಕುರಿ ಮುಸ್ಲಿಮ್, ಕ್ರಿಸ್ಚಿಯನ್ನರ ಹಿಂಡಲ್ಲ!
ಸಂಸ್ಕೃತಿ ಉಳಿಯಬೇಕಾದರೆ ನಾವು ಅದನ್ನು ಪಾಲಿಸಬೇಕು.
ವೈಜ್ಞಾನಿಕ ಆಧಾರವಿಲ್ಲದ, ಗ್ರಹಗಳ ಗತಿಯಲ್ಲಾಗಲಿ, ನಕ್ಷತ್ರಗಳ ಸ್ಥಿತಿಯಲ್ಲಾಗಲಿ ಬದಲಾವಣೆ ಇಲ್ಲದ, ಪ್ರಕೃತಿಯ ಹೊಸತನ ಕಾಣದ ಅದೆಂಥಾ ಹೊಸವರ್ಷ.
ಜೂಲಿಯಸ್ ಸೀಝರನ ಹೆಸರಿನಲ್ಲಿ ಜುಲೈ, ಆಗಸ್ಟಸ್ ಎನ್ನೋ ಮತಾಂಧ ಪಾದ್ರಿಯನ್ನು ಸಂತ ಪದವಿಗೇರಿಸಿ ಆಗಸ್ಟ್ ಎಂದು ಸೇರಿಸಿದ್ದಕ್ಕೆ ೧೨ ತಿಂಗಳಾದವು.ಇಲ್ಲದಿದ್ದರೇ ಹತ್ತೇ, ಬಹುಷ ಆಗಲೂ ಇವರೂ ಬ್ಯಾಂಡು ಬಾರಿಸುತ್ತಲೇ ಇರುತ್ತಿದ್ದರು! ಇಲ್ಲದ ಯೇಸುವನ್ನು ನೇಣಿಗೇರಿಸಿ ಹೊಸವರ್ಷ!
ತುಂಡು ಉಟ್ಟು, ಗುಂಡು ಹಾಕಿ,ತುಂಡು ತಿನ್ನುವ,
 ಬ್ಯಾಂಡ್ ಬಾರಿಸುವ ಮಂದಿಗೆ ತಿಳಿಯೋದು ಹೇಗೆ?

ಆ ದೇವ ಗಹಗಹಿಸಿ ನಗುತ್ತಿದ್ದಾನೆ. ನಡುವೆ ಒಂದು ವಿಷಾದದ ಛಾಯೆ...!!!