ಪುಟಗಳು

ಭಾನುವಾರ, ಜನವರಿ 13, 2013

ಧರ್ಮ ಹಿಂಸಾ ತಥೈವಚಾ...                ಆ ಯುವಕ ಪರಮ ದೇಶಭಕ್ತ. ಕಾರ್ಯನಿಮಿತ್ತ ಯಾವುದೋ ಊರಿಗೆ ಬಸ್ಸಿನಲ್ಲಿ ಪಯಣಿಸುತ್ತಿದ್ದಾನೆ. ಕೆಲವು ನಿಮಿಷಗಳ ಪ್ರಯಾಣದ ಬಳಿಕ ಯುವತಿಯೊಬ್ಬಳು ಅದೇ ಬಸ್ ಹತ್ತುತ್ತಾಳೆ. ಜಾಗ ಇಲ್ಲದ ಕಾರಣ ಆ ಯುವತಿ ಯುವಕನೋರ್ವನ ಪಕ್ಕದಲ್ಲಿ ಕುಳಿತುಕೊಳ್ಳುವಂತಾಯಿತು. ಆ ಯುವಕನೋ ತನ್ನೊಂದಿಗೆ ಬಂದಿದ್ದ ಸ್ನೇಹಿತರೊಂದಿಗೆ ಸೇರಿ ಆ ಹುಡುಗಿಯನ್ನು ಕಿಚಾಯಿಸಲು ತೊಡಗಿದ. ಅವರಾಡುತ್ತಿದ್ದ ಅಸಹ್ಯ ಮಾತುಗಳು ಮತ್ತು ಅವರ ಅಸಹ್ಯ ವರ್ತನೆಯನ್ನು ಕಂಡು ಈ ದೇಶಭಕ್ತ ಸಹೋದರ ತನ್ನ ಆಸನವನ್ನು ಆ ಯುವತಿಗಿತ್ತು ಉಪಕಾರ ಮಾಡಿದ. ಯಾಕೆಂದರೆ ಅವನು ಭಾರತದ ಪ್ರಜೆ, ಇಂಡಿಯಾದ್ದಲ್ಲ! ತನ್ನ ನಿಲ್ದಾಣ ಬಂದಾಗ ಯುವತಿ ಇಳಿದು ಹೋದಳು.
                  ಘಟನೆ ಇಲ್ಲಿಗೆ ಮುಗಿಯಲಿಲ್ಲ. ಆ ಸಹೊದರ ದೇಶಭಕ್ತ ಯುವಕ ತನ್ನ ನಿಲ್ದಾಣ ಬಂದಾಗ ಇಳಿಯುತ್ತಿದ್ದಂತೆ ಈ ಮತಾಂಧ ಯುವಕರು ಅವನ ಮೇಲೆ ಆಕ್ರಮಣಕ್ಕೆ ತೊಡಗಿದರು. ತನಗೆ ಒದೆ ಬೀಳುವುದು ಖಚಿತವೆಂದಾದಾಗ ಯುವಕ ಆತ್ಮರಕ್ಷಣೆಗಾಗಿ ತಾನೇ ಆ ಯುವಕರ ಮೇಲೆ ಮುಗಿಬಿದ್ದ. ಆತನ ಧೈರ್ಯ, ಪೌರುಷ ಕಂಡ ಯುವಕರು ಅಲ್ಲಿಂದ ಕಾಲ್ಕಿತ್ತರು. ಆದರೆ ಅವರ ಸಂಪರ್ಕ ಜಾಲ ನೋಡಿ. ಅದೇ ನಿಲ್ದಾಣದ ಬಳಿ ಇದ್ದ ಮಸೀದಿಯಿಂದ ಮತ್ತಷ್ಟು ಮತಾಂಧರು ಆ ಯುವಕರಿಗೆ ಸಹಾಯಕ್ಕೆ ಬಂದರು. ಪರಿಸ್ಥಿತಿ ಅರಿತ ಆ ದೇಶಭಕ್ತ ಸಹೋದರ ತನಗೆ ಯಾರಿಂದಲೂ ಸಹಾಯ ಸಿಗದೆಂದು ಮನಗೊಂಡು ಅಲ್ಲಿಂದ ಓಡಿ ತಪ್ಪಿಸಿಕೊಂಡ.
      
                    ಇದು ಇತ್ತೀಚೆಗಷ್ಟೆ ನಡೆದ ಘಟನೆ. ಆ ಸಹೋದರ ಒಂದು ವೇಳೆ ಅಹಿಂಸೆಯನ್ನು ಪಾಲಿಸಬೇಕು ಅಂತ ಸುಮ್ಮನಿದ್ದಿದ್ದರೆ ಅವನನ್ನು ಸಾಯಬಡಿಯುತ್ತಿದ್ದರು. ಆತನ ಕಾರ್ಯವನ್ನು ಮೆಚ್ಚಲೇಬೇಕು. ಆತ ಪಾಲಿಸಿದ್ದು ಭಾರತದ ಆದರ್ಶವನ್ನು. ಇನ್ನೊಂದು ಮುಖ್ಯವಾದ ಅಂಶವೆಂದರೆ ಬಸ್ಸಿನಲ್ಲಿ ಆ ಮತಾಂಧರು ಆ ರೀತಿ ಹುಡುಗಿಯನ್ನು ಚುಡಾಯಿಸುತ್ತಿದ್ದಾಗ ನಪುಂಸಕರಂತೆ ಉಳಿದವರು ಕುಳಿತಿದ್ದರಲ್ಲ! ಮಸೀದಿಯಿಂದ ಬಂದ ಅಷ್ಟೊಂದು ಜನ ಆ ದೇಶಭಕ್ತ ಯುವಕನ ಮೇಲೆ ಆಕ್ರಮಣಕ್ಕೆ ಮುಂದಾದಾಗ ಷಂಡರಂತೆ ನೋಡುತ್ತಿದ್ದ ಮಂದಿಗೆ ಏನು ಹೇಳಬೇಕು? ಹೌದು ಗಾಂಧಿಯ ಆ ಬೋಧನೆ ನಮ್ಮವರ ಕ್ಷಾತ್ರತ್ವವನ್ನೇ ನಾಶ ಮಾಡಿಬಿಟ್ಟಿದೆ. ಮುಸ್ಲಿಮರು ಬಹುಸಂಖ್ಯಾತರಾಗಿರುವ ಕಡೆ ಇಂತಹ ಘಟನೆಗಳು ಮಾಮೂಲು. ಕೆಲವೇ ವರ್ಷಗಳ ಹಿಂದೆ ಕರ್ನಾಟಕ-ಕೇರಳ ಗಡಿಭಾಗದಲ್ಲಿ ಮುಸ್ಲಿಮನೊಬ್ಬ ಬಸ್ಸಿನಲ್ಲಿ ಪಯಣಿಸುತ್ತಿದ್ದ ಯುವತಿಯೊಬ್ಬಳ ಸ್ತನಗಳಿಗೇ ಕೈಹಾಕಿದ್ದ. ಅವನ ಕೈ ಕಡಿಯುವ ಬದಲು ನಮ್ಮವರು ಏನೂ ಆಗಿಲ್ಲವೆಂಬಂತೆ ನಡೆದುಕೊಂಡರು. ಇಂತಹ ನರ ಸತ್ತವರಿಗೆ ಧಿಕ್ಕಾರವಿರಲಿ.

    "ಅಹಿಂಸಾ ಪರಮೋಧರ್ಮ" ಎಂಬುದು ನಿಜ. ಅಹಿಂಸೆಯನ್ನು ಪಾಲಿಸುವುದು ಭಾರತೀಯನೊಬ್ಬನ ಕರ್ತವ್ಯ. ಆದರೆ ಅದೇ ಶ್ಲೋಕ ಮುಂದುವರಿದು "ಧರ್ಮ ಹಿಂಸಾ ತಥೈವಚಾ" ಎಂದಿದೆ. ಅಂದರೆ ಹಿಂಸೆಯಿಂದ ಧರ್ಮ ಗ್ಲಾನಿಯಾಗುತ್ತಿದ್ದರೆ ಅದಕ್ಕೆ ಹಿಂಸೆಯಿಂದಲೇ ಉತ್ತರ ಕೊಡಬೇಕು. ಅಹಿಂಸೆ ಆಗ ಕೆಲಸಕ್ಕೆ ಬರುವುದಿಲ್ಲ. ಇದಕ್ಕೆ ಭಾರತದ ಇತಿಹಾಸದ ಪುಟಗಳೇ ನಿದರ್ಶನ.
                  ಒಂದು ವೇಳೆ ಪ್ರಭು ಶ್ರೀರಾಮ ಸೀತೆಯನ್ನು ಬಿಟ್ಟುಕೊಡು ಎಂದು ರಾವಣನಿಗೆ ಮನವಿಪತ್ರ ಸಲ್ಲಿಸುತ್ತಾ ಕೂತಿದ್ದರೆ ರಾವಣ ಸೀತೆಯನ್ನು ಬಿಟ್ಟುಕೊಡುತ್ತಿದ್ದನೇ? ಕಾಮುಕ, ದುಷ್ಟ ರಾವಣನ ವಧೆಯಾಗುತ್ತಿತ್ತೇ? ಬೇಡಿದರೂ ಕೊಡೆ ಸೂಜಿಮೊನೆ ಜಾಗವ ಪಾಂಡವರಿಗೆ ಎಂದವ ಕೌರವ. ಕೌರವನ ಬುದ್ಧಿಯಿರುವವರಿಗೆ ಪತ್ರಗಳು ನಾಟುವುದಿಲ್ಲ. ಅಸ್ತ್ರಗಳು ಮಾತ್ರ ನಾಟುತ್ತವೆ.

                       ಅಹಿಂಸೆ ಎಂದು ಶಿವಾಜಿ ಸುಮ್ಮನುಳಿದಿದ್ದರೆ ಇವತ್ತು ಹಿಂದೂಸ್ಥಾನವೇ ಇರುತ್ತಿರಲಿಲ್ಲ! ಅಹಿಂಸೆ ಬಿಡಿ ಕೇವಲ ಕ್ಷಮಿಸಿದ ಮಾತ್ರಕ್ಕೆ ಅದನ್ನೇ ದುರುಪಯೋಗಪಡಿಸಿಕೊಂಡು ನಮ್ಮ ಅನೇಕ ಕ್ಷಾತ್ರಸಿಂಹಗಳ ಕಗ್ಗೊಲೆ ಮಾಡಿದರು ದ್ರೋಹಿಗಳು. ಚಾಣಕ್ಯ ಎಂದಾದರೂ ಚಂದ್ರಗುಪ್ತನಿಗೆ ರಾಜ್ಯ ಕೊಡಿ ಎಂದು ವಿನಂತಿ ಮಾಡಿದ್ದರೆ ಇಂದು ಚಾಣಕ್ಯನ ಅರ್ಥಶಾಸ್ತ್ರಾದಿಗಳೇ ಇರುತ್ತಿರಲಿಲ್ಲ! ಅಹಿಂಸೆ ಪಾಲಿಸುತ್ತೇನೆ ಎಂದು ಮುಗುಮ್ಮಾಗಿದ್ದಿದ್ದರೆ ರಾಣಿ ಚೆನ್ನಮ್ಮ, ಅಬ್ಬಕ್ಕ, ಕೆಳದಿ ಮನೆತನ, ವಿಜಯನಗರಗಳ ಇತಿಹಾಸವೇ ಇರುತ್ತಿರಲಿಲ್ಲ.

                ಮೇಲಾಗಿ ಅಹಿಂಸೆ ಎಂದು ಭಜನೆ ಮಾಡುತ್ತಿದ್ದರೆ ನಮಗಿಂದು ಸ್ವಾತಂತ್ರ್ಯವೇ ಸಿಗುತ್ತಿರಲಿಲ್ಲ! ಇಷ್ಟೆಲ್ಲಾ ಇತಿಹಾಸದ ಪುಟಗಳು ಸಾರಿ ಸಾರಿ ಹೇಳಿದರೂ ನಮ್ಮವರಿಗೆ ಏಕೆ ಅರ್ಥ ಆಗುವುದಿಲ್ಲ. ಗಾಂಧಿಯ ಆ ಅಹಿಂಸೆಯಿಂದಾಗಿಯೇ ೧೯೨೦ರಲ್ಲಿ ಕೇರಳದಲ್ಲಿ ಮೋಪ್ಲಾಗಳು ಲಕ್ಷ ಲಕ್ಷ ಹಿಂದೂಗಳ ಕಗ್ಗೊಲೆ, ಅತ್ಯಾಚಾರ, ಲೂಟಿ ಮಾಡಿದರು. ಗಾಂಧಿಯ ಆ ಅಹಿಂಸೆಯಿಂದಾಗಿಯೇ ಭಾರತ ಇಬ್ಬಾಗವಾಗಿ ಲಕ್ಷಾಂತರ ಹಿಂದೂಗಳ ಮಾರಣಹೋಮ ನಡೆಯಿತು.

                ನಿಮ್ಮ ಮಗಳನ್ನೋ, ಹೆಂಡತಿಯನ್ನೋ, ತಾಯಿಯನ್ನೋ ಒಬ್ಬ ಅತ್ಯಾಚಾರ ಎಸಗುತ್ತಿದ್ದರೆ ನೀವು ಅಹಿಂಸೆಯ ಜಪ ಮಾಡುತ್ತಾ ಅದನ್ನು ನೋಡುತ್ತಾ ನಿಲ್ಲುವಿರೇನು? ಮೊನ್ನೆ ತಲೆ ಕಡಿದರಲ್ಲಾ,  ಆ ವೀರ ಸೈನಿಕರು ನಿಮ್ಮ ಅಣ್ಣನೋ, ತಮ್ಮನೋ, ಬಂಧುವೋ ಆಗಿದ್ದರೆ ನಿಮಗೆ ಅಹಿಂಸೆಯ ನೆನಪಾಗುತ್ತಿತ್ತೇ? ಅತ್ಯಾಚಾರವೆಸಗಲು ಪ್ರಯತ್ನಿಸಿ, ಯುವತಿ ವಿರೋಧಿಸಿದಾಗ ರೈಲಿನ ಕೆಳಗೆ ದೂಡಿದರಲ್ಲಾ, ಅವಳು ನಿಮ್ಮ ಸ್ವಂತ ತಂಗಿಯಾಗಿದ್ದರೆ ಸುಮ್ಮನಿರುತ್ತಿದ್ದಿರೇ? ನಿಮ್ಮದೇ ಹೆಣ್ಣುಮಕ್ಕಳು ತುಂಡು ಬಟ್ಟೆಯೊಂದಿಗೆ, ಗುಂಡು ಹೊಡೆಯುತ್ತಾ, ತುಂಡು ತಿನ್ನುತ್ತಾ ರೆಸಾರ್ಟ್ ಗಳಲ್ಲಿ ಹುಡುಗರೊಂದಿಗೆ ನಂಗಾನಾಚ್ ಮಾಡುತ್ತಿದ್ದರೆ ಖುಷಿಪಡುತ್ತೀರೇನು?

                    ಅಣ್ಣನಾಜ್ಞೆಯನ್ನು ಮೀರಿ ಭಿಮಸೇನ ಕೀಚಕನನ್ನು ಕೊಂದಿದ್ದು ಅಹಿಂಸೆ ಪಾಲಿಸಿ ಅಲ್ಲ! ಕೃಷ್ಣ ಕಂಸ, ನರಕಾದಿಗಳನ್ನು ಕೊಲ್ಲದೇ ಇರುತ್ತಿದ್ದರೆ ಅದೆಷ್ಟೋ ರಾಜಕುಮಾರರು, ಮಾನಿನಿಯರು ಮಾನ, ಪ್ರಾಣ ಕಳೆದುಕೊಳ್ಳುತ್ತಿದ್ದರಲ್ಲವೇ? ಅದಕ್ಕೇ ನಮಗೆ ಬೇಕಿರುವುದು ರಾಮನ ಆದರ್ಶ, ಕೃಷ್ಣನ ತಂತ್ರ! ಶತ್ರುಗಳಲ್ಲಿ ಸಜ್ಜನರಿದ್ದಾರೆ ಎಂದು ಕೃಷ್ಣ ಯುದ್ಧ ಮಾಡದೇ ಸುಮ್ಮನುಳಿಯಲಿಲ್ಲ. ಬಂಧು ಮೋಹದಿಂದ ಕುರುಡಾದ ಅರ್ಜುನನಿಗೆ ಗೀತೆ ಬೋಧಿಸಿದ. ತಂತ್ರಕ್ಕೆ ಪ್ರತಿತಂತ್ರ ಹೂಡಿ, ಮೋಸಕ್ಕೆ ಪ್ರತಿ ಮೋಸ ಮಾಡಿ, ಸಜ್ಜನ, ದುರ್ಜನ, ಬಂಧು-ಬಾಂಧವ ಮಮಕಾರ ತೊರೆದು ಧರ್ಮಕ್ಕೆ ಜಯ ತಂದುಕೊಟ್ಟ. ಶತ್ರುಗಳ ಪಾಳಯದಲ್ಲಿ ಅವನ ಬಂಧುಗಳಿದ್ದರು, ಮಿತ್ರರಿದ್ದರು. ಮೇಲಾಗಿ ಭಕ್ತರಿದ್ದರು. ಆದರೆ ಧರ್ಮವೇ ಸತ್ಯ ಎಂದು ಸಾರಿದ. ಅದು ಕೃಷ್ಣ ತಂತ್ರ, ಚಾಣಕ್ಯ ನೀತಿ, ನಮಗೆ ಇಂದು, ಎಂದೆಂದಿಗೂ ಬೇಕಾಗಿರೋದು ಅದು! ಸತ್ಯವನ್ನು ಸತ್ಯದಿಂದ, ಅಧರ್ಮವನ್ನು ತಂತ್ರದಿಂದ ಜಯಿಸಬೇಕು.

                 ಆದರೂ ಕಿವುಡು ಸರಕಾರಕ್ಕೆ, ಕುರುಡು ಪ್ರಜೆಗಳಿಗೆ ಯಾಕೆ ಇವೆಲ್ಲಾ ಅರ್ಥ ಆಗೋದಿಲ್ಲಾ? ಗಡಿಯಲ್ಲಿ ಅದೆಷ್ಟು ಸಹೋದರರು ಸಾಯಬೇಕು? ದೇಶದಲ್ಲೆಡೆ ಅದೆಷ್ಟು ಮಾನಿನಿಯರ ಮಾನಹರಣವಾಗಬೇಕು? ನಮ್ಮೊಳಗಿನ ಅಂತಸ್ಥ ಶಕ್ತಿ ಹೊರಬರಲಿ. "ಧರ್ಮ ಸಂಸ್ಥಾಪನಾರ್ಥಾಯಾ ಸಂಭವಾಮಿ ಯುಗೇ ಯುಗೇ" ಎಂದಿದ್ದಾನೆ ಕೃಷ್ಣ. ಅವನು ಹುಟ್ಟಿ ಬರುವುದಿಲ್ಲ. ನಮ್ಮೊಳಗೆ ಅಂತಸ್ಥವಾಗಿರುವ ಕೃಷ್ಣ ಹೊರಹೊಮ್ಮಬೇಕು. ಶಿವಾಜಿ ಪಕ್ಕದ ಮನೆಯಲ್ಲಿ ಹುಟ್ಟುವುದಲ್ಲ. ನಾವೇ ಶಿವಾಜಿಯಾಗಬೇಕು. ಸಾವರ್ಕರ್, ತಾತ್ಯಾಟೋಪೆ, ಆಜಾದ್ ನಾವಾಗಬೇಕು. ಆಗ ಮಾತ್ರ ದೇಶ ಉಳಿಯುತ್ತದೆ. ಇಂಡಿಯಾ ಭಾರತವಾಗುತ್ತದೆ.

6 ಕಾಮೆಂಟ್‌ಗಳು:

  1. ತುಂಬಾ ಚೆನ್ನಾಗಿದೆ. ಬರೆಯುವುದನ್ನು ಮಂದುವರಿಸು.

    ಪ್ರತ್ಯುತ್ತರಅಳಿಸಿ