ಪುಟಗಳು

ಶನಿವಾರ, ಏಪ್ರಿಲ್ 28, 2012

ಧೀಂತನ...

ಭಾವನೆಗಳ ತಾಕಲಾಟದಿ ನಲಿವ ಮನಸು
ಆಶಾವಾದದ ತಲ್ಪದಲಿ ಸುರಿವ ಕನಸು|
ಅವಿರತ ಸಾಧನಾ ಶಿಖರವನ್ನೇರುವ ಆಸೆ
ಪರಿಶ್ರಮದ ಬವಣೆಗೆ ತಾತ್ಸಾರದ ಮೂಸೆ||

ಧುತ್ತನೆರಗಿದ್ದು ಘಾತ, ಆಘಾತ
ಶ್ರಮಕ್ಕೆ ಸಶ್ರಮ ಶಿಕ್ಷೆ, ಮನೋವಿಕಲ್ಪ|
ಆಸೆಗಳ ಲೋಕದಲಿ ನಿರಾಸೆಯ ಕಾರ್ಮೋಡ
ಧಿಕ್ಕಾರ ಆ ನಿರ್ಭಾವುಕ ಲೋಭದ ಸ್ನೇಹಕೆ||

ಘೋರತಮದಲಿ ಅದೊಂದು ಮಿಂಚು
ವಿಷವಾಗುತಿಹ ಮನಸಿಗೆ ಅಮೃತದ ಸಿಂಚನ|
ಮುಳುಗದಿರು ಮಾನವ ಅದು ಘೋರ ಸಂಚು
ಚಿತ್ತವನು ಏಕದಲಿಟ್ಟು ನಡೆಸು ಚಿಂತನ, ಮಂಥನ||