ಪುಟಗಳು

ಬುಧವಾರ, ಜನವರಿ 1, 2014

ಶಿ"ರಾಡಿ" ಘಾಟಿಯಲ್ಲಿ ಸಂಚರಿಸಿ ಉಂಟಾದ ಮೈಕೈ ನೋವನ್ನು ಮರೆಸುತ್ತವೆ "ನಮೋ" ಬ್ಯಾನರುಗಳು!

ಶಿ"ರಾಡಿ" ಘಾಟಿಯಲ್ಲಿ ಸಂಚರಿಸಿ ಉಂಟಾದ ಮೈಕೈ ನೋವನ್ನು ಮರೆಸುತ್ತವೆ "ನಮೋ" ಬ್ಯಾನರುಗಳು!

                  ನನಗೆ ಈಗ ಗುಜರಾತಿಗರ ಮೇಲೆ ಹೊಟ್ಟೆ ಉರಿ. ಎಷ್ಟೊಂದು ನುಣುಪಾದ, ನಯವಾದ ರಸ್ತೆಗಳು. ಅಷ್ಟೇ ವಿನಯವಂತ ಮುಖ್ಯಮಂತ್ರಿ. ಒಬ್ಬ ಸಾಮಾನ್ಯ ಬಾಳೆ ಕೃಷಿಕ ಕೆಟ್ಟಿರುವ ರಸ್ತೆಗಳಿಂದ ನನಗೆ 25% ನಷ್ಟವಾಗುತ್ತಿದೆ ಎಂದು ಹೇಳಿದಾಕ್ಷಣ ತನ್ನ ರಾಜ್ಯದ ರಸ್ತೆಗಳ ಚಿತ್ರಣವನ್ನೇ ಬದಲಾಯಿಸಿಬಿಟ್ಟರು ಮೋದಿ. ಮುಖ್ಯಮಂತ್ರಿ ಅಂದರೆ ಹಾಗಿರಬೇಕು. ಅದಕ್ಕೆ ನನಗೆ ಹೊಟ್ಟೆ ಕಿಚ್ಚು, ಅಂತಹ ಮುಖ್ಯಮಂತ್ರಿ ನಮಗಿಲ್ಲವಲ್ಲ! ಕೊನೇ ಪಕ್ಷ ಗುಜರಾತಿನಲ್ಲಿ ನಾನು ವಾಸಿಸುತ್ತಿಲ್ಲವಲ್ಲ ಎಂದು! ಇಷ್ಟೆಲ್ಲಾ ಹೇಳಲು ಕಾರಣ ಒಂದೇ ಶಿರಾಡಿ ಘಾಟ್!

                    ಹೆಸರಿಗೆ ರಾಷ್ಟ್ರೀಯ ಹೆದ್ದಾರಿ. ಆದರೆ ಅಲ್ಲಿ ಹೋಗುವಾಗ ಕಾಣೋದೆ ಇಲ್ಲ ದಾರಿ. ಹಾಕಿದ ಡಾಂಬರು ಎಲ್ಲಿದೆ ಅಂತಾ ಹುಡುಕಬೇಕು. ಕಾರುಗಳಲ್ಲಿ ಸಂಚರಿಸುವವರ ಪಾಡು ಹೇಳತೀರದು. ರಾತ್ರಿ ಬಸ್ಸಿನಲ್ಲಿ ಸಂಚರಿಸುವವರಂತೂ ಮೊದಲ ಹೊಂಡಕ್ಕೆ ಬಸ್ ಬಿದ್ದ ತಕ್ಷಣ ಧಿಗ್ಗನೆದ್ದು ಕುಳಿತರೆ ಮತ್ತೆ ನಿದ್ರಿಸುವುದು ಘಾಟಿ ಕಳೆದ ಮೇಲೆಯೇ!  ಗರ್ಭಿಣಿಯರೇನಾದರೂ ಆ ರಸ್ತೆಯಲ್ಲಿ ಸಂಚರಿಸಿದರೆ ಅನಾಯಾಸ ಹೆರಿಗೆ ಖಂಡಿತ! ವೃದ್ಧರಿಗೆ ಉಚಿತ ಟಿಕೆಟ್! ಸ್ವರ್ಗಕ್ಕೆ! ಸದಾ ಮೋದಿಯನ್ನು ಕುಂತರೂ ನಿಂತರೂ ತೆಗಳುವ, ಹಿಂದೂ ಧರ್ಮವನ್ನು ಹೀನವಾಗಿ ಕಾಣುವ ಲದ್ದಿಜೀವಿಗಳೇ ತುಂಬಿಕೊಂಡಿರುವ ಮಾಧ್ಯಮಗಳಿಗೆ ಶಿರಾಡಿಯ ರಾಡಿ ಎಲ್ಲಿ ಕಾಣಬೇಕು. ಅದರ ಬಗ್ಗೆ ಒಂದು ಪತ್ರಿಕೆಯಲ್ಲಿ ಸುದ್ದಿ ಬರಬೇಕಾದರೆ ಸಂಪಾದಕ ವಿಶ್ವೇಶ್ವರ ಭಟ್ ಆ ಮಾರ್ಗದಲ್ಲಿ ಪಯಣಿಸಬೇಕಾಯಿತು. ಅದರ ಬಗ್ಗೆ ಒಂದು ಅಂಕಣವನ್ನೂ ಅವರು ಬರೆದರು. ಮರುದಿನದಿಂದ 'ಕನ್ನಡ ಪ್ರಭ'ದಲ್ಲಿ ಶಿರಾಡಿಯ ಕುರಿತ ಸರಣಿ ಮಾಲಿಕೆ ಅಲ್ಲಿನ ದುರವಸ್ಥೆಯ ಬಗ್ಗೆ ಬೆಳಕು ಚೆಲ್ಲಿತು. ವೀರಪ್ಪ ಮೊಯಿಲಿ, ಆಸ್ಕರ್ ಫೆರ್ನಾಂಡೀಸ್ ನಂತಹ ಗಾಂಧಿ ಕುಟುಂಬ ನಿಷ್ಟರಿದ್ದೂ ಈ ಶಿರಾಡಿ ಘಾಟ್ ಉದ್ಧಾರ ಆಗಿಲ್ಲವೆಂದಾದರೆ ಅಲ್ಲಿ ಅವರಿಗೆ ಬಹುಷಃ ತಿನ್ನಲೇನೂ ಸಿಗೋದಿಲ್ಲ ಇರಬೇಕು. ಅತ್ತ ರಿಲಯನ್ಸ್ ಸಹೋದರರಿಗೆ ಸಹಾಯ ಮಾಡುತ್ತಾ ತನ್ನ ಹೊಟ್ಟೆ ತುಂಬಿಸಿಕೊಳ್ಳುತ್ತಿರುವ ಬಕಾಸುರ ಮೊಯಿಲಿಗೆ ಯಾವಾಗಲೂ ಆಕಾಶ ಮಾರ್ಗವಾಗಿ ಬರುವಾಗ ಶಿರಾಡಿ ಎಲ್ಲಿಂದ ಕಾಣಬೇಕು? ಸದಾ ಭೋಂಗು ಬಿಡುವ ಮಂಗಳೂರಿನ ದಿಗ್ವಿಜಯ ಸಿಂಗ್ ಗೋಳಿ ಬಜೆ ಜನಾರ್ಧನ ಪೂಜಾರಿಗೆ ಸೋನಿಯಮ್ಮನ ಕಾಲು ಮಾತ್ರ ಕಾಣೋದು. ರಮನಾಥ ರೈಗಂತೂ ಅರಣ್ಯದಲ್ಲಿ ರಾತ್ರಿ ಪಾಳಿ. ಹಗಲು ವಿಧಾನ ಸೌಧವೇ ವಿಶ್ರಾಂತಿ ಗೃಹ! ಗೃಹ ಸಚಿವನಿಗೆ ಚರ್ಚು ದಾಳಿಯದ್ದೇ ಚಿಂತೆ! ಉಳಿದವರು ಇದ್ದೂ ಸತ್ತಂತೆ!

                ಶಿರಾಡಿ ಅಂತಲ್ಲ ದಕ್ಷಿಣ ಕನ್ನಡದ ಪ್ರತಿಯೊಂದು ರಸ್ತೆಗಳ ಹಣೆಬರಹವೂ ಅಷ್ಟೇ! ಕೆಲವು ವರ್ಷಗಳ ಹಿಂದಿನವರೆಗೂ ಬೆಳ್ತಂಗಡಿ-ಉಪ್ಪಿನಂಗಡಿ ರಸ್ತೆ ನರಕ ಸದೃಶವಾಗಿಯೇ ಇತ್ತು. ಅಲ್ಲಿ ತೇಪೆ ಹಾಕಲು ಕಂಟ್ರಾಕ್ಟ್ ವಹಿಸಿಕೊಂಡ "ಬಾಂಧವ"ನೊಬ್ಬ ರಸ್ತೆಗೆ ಮಣ್ಣು ತಿನ್ನಿಸಿ ಅಷ್ಟೂ ಹಣವನ್ನು ತಿಂದು ಹಾಕಿದ. ಮುಂದೆ ರಸ್ತೆ ಅಗಲೀಕರಣಕ್ಕಾಗಿ ಕೋಟಿಗಟ್ಟಲೆ ವ್ಯಯಿಸಲಾಯಿತು. ಕಂಟ್ರಾಕ್ಟುದಾರರ ಹೊಟ್ಟೆ ಅಗಲವಾಯಿತಲ್ಲದೆ ರಸ್ತೆ ಅಗಲವಾಗಲೇ ಇಲ್ಲ! ಮೊನ್ನೆ ಶಾಸಕ ಅಭಯಚಂದ್ರನಂತೂ ರಸ್ತೆ ಸರಿ ಮಾಡಿ ಅಂದವರಿಗೆ ಹಲ್ಲೆ ನಡೆಸಲೂ ಮುಂದಾದರು. ಗಬ್ಬೆದ್ದ ರಸ್ತೆಗಳು, ಲವ್ ಜಿಹಾದ್, ಕಂಡ ಕಂಡಲ್ಲಿ ಎರಗುವ ಮುಸ್ಲಿಮ್ ಗೂಂಡಾಗಳು ಅವರಿಗೆ ಬೆಂಗಾವಲಾಗಿ ನಿಂತಿರುವ ಲಜ್ಜೆಗೇಡಿ ಶಾಸಕರು ಹೀಗೆ ಹತ್ತು ಹಲವು ಸಮಸ್ಯೆಗಳಿಂದಾಗಿ ಸಾಲು ಸಾಲು ಕಾಂಗ್ರೆಸ್ ಶಾಸಕರನ್ನು ಆರಿಸಿದ ಅವಿಭಜಿತ ದಕ್ಷಿಣ ಕನ್ನಡದ ಮತದಾರ ಈಗ ಪರಿತಪಿಸುತ್ತಿರುವುದು ಸತ್ಯ. ಅಂದರೆ ದಕ್ಷಿಣ ಕನ್ನಡದ ಸಾಮಾಜಿಕ ಸ್ಥಿತಿಗತಿಯನ್ನು ಶಿರಾಡಿ ಸಮರ್ಥವಾಗಿ ಬಿಂಬಿಸುತ್ತಿದೆ!

                            ಹೀಗೆ ಗಬ್ಬೆದ್ದು ಹೋಗಿರುವ ಶಿರಾಡಿ ಘಾಟಿಯಲ್ಲಿ ಸಂಚರಿಸಿ ಉಂಟಾದ ಮೈಕೈ ನೋವನ್ನು ಮರೆಸುವುದು ಶಿರಾಡಿ ಘಾಟಿ ಇಳಿದ ನಂತರ ಸಿಗುವ ಸಾಲು ಸಾಲು ಮೋದಿ ಬ್ಯಾನರುಗಳು! ಕಿಲೋಮೀಟರಿಗೊಂದರಂತಾದರೂ ಕಂಡು ಬರುವ ಮೋದಿ ಬ್ಯಾನರುಗಳನ್ನು ಕಂಡಾಗ ಹೃದಯ ಪುಳಕಿತಗೊಳ್ಳುತ್ತದೆ. ಈ ಮೋದಿ ಅಭಿಮಾನ ಮತವಾಗಿ ಪರಿವರ್ತಿತವಾಗಿ ನಮೋ ಪ್ರಧಾನಿಯಾದರೆ ಶಿರಾಡಿಯ ರಾಡಿಯೂ ತೊಳೆದು ಹೋಗುತ್ತದೆ ಕಾಂಗ್ರೆಸ್ ಎಂಬ ಕೊಳೆಯೂ ಕಳೆದು ಹೋಗುತ್ತದೆ!
ನಮೋ ನಮಃ

3 ಕಾಮೆಂಟ್‌ಗಳು: