ಪುಟಗಳು

ಮಂಗಳವಾರ, ಜುಲೈ 23, 2013

ಕಲಿ ಭೀಮ...

ಒಬ್ಬ ಬಾಲಕನಿಗಿದ್ದ ಸ್ವಾತಂತ್ರ್ಯದ ಪರಿಕಲ್ಪನೆ ನಮ್ಮ ಈಗಿನ ಭಾರತೀಯರಿಗಿಲ್ಲವಲ್ಲ...ಬದುಕಿದರೆ ಚಂದ್ರಶೇಖರ ಆಜಾದನಂತೆ ಬದುಕಬೇಕು...
ಆ ಮೀಸೆ ತಿರುವುತ್ತಾ ನಿಂತ ಮೊಗದಲ್ಲಿ ಅದೆಂತಹಾ ಉತ್ಸಾಹ, ಅಗ್ನಿ ಕಿಡಿ, ತೀಕ್ಷ್ಣ ನೋಟ, ಬಲಿಷ್ಟ ದೇಹ, ಕುಶಾಗ್ರಮತಿ!
"ನಾನು ಸ್ವತಂತ್ರ, ಸ್ವತಂತ್ರನಾಗಿಯೇ ಇರುತ್ತೇನೆ, ಸ್ವತಂತ್ರನಾಗಿಯೇ ಸಾಯುತ್ತೇನೆ" ಎಂದು ನುಡಿದು ಅದರಂತೆ ನಡೆದ ಪ್ರಚಂಡ ವೀರ, ಕಲಿ ಭೀಮ...
ಅಹಿಂಸೆ, ಜಾತ್ಯಾತೀತತೆ ಎಂಬ ಪೊಳ್ಳು ಶಬ್ಧಗಳನ್ನು ಬಡಬಡಿಸುವವರಿಗೆ ಇದೆಲ್ಲಾ ಅರ್ಥ ಆಗೋಲ್ಲ ಬಿಡಿ...
ಹಾಂ...ಇವರಿಗೆಲ್ಲಾ ತಿಳಿ ಹೇಳಬೇಕಾದರೆ ನಿನ್ನ ಕೈಯ ಪಿಸ್ತೂಲಿನ ಗುಂಡಿನ ಮೊರೆತವೇ ಬೇಕು ಆಜಾದ್!
ನಿನ್ನಂತಹ ವೀರನನ್ನು ಹೇಗೆ ಮರೆಯಲಿ...ಕನಿಷ್ಟ ನಿನ್ನ ಜನ್ಮದಿನದಂದಾದರೂ ನಿನ್ನನ್ನು ಗೌರವಿಸುವ ಬಯಕೆ!
ಇದು ಸ್ವಾತಂತ್ರ್ಯದ ಬಯಕೆ!
ವಂದೇ ಮಾತರಂ...

ಭಾನುವಾರ, ಜುಲೈ 21, 2013

ನಿರ್ಧಾರದ ಕಾಲ ಬಂದಿದೆ!!!



             ದೇಶದೆಲ್ಲೆಡೆ ನಿರಾಸೆ ಆವರಿಸಿದೆ. ಒಂದು ಕಡೆ ಭಯೋತ್ಪಾದಕರ ಅಟ್ಟಹಾಸ, ಇನ್ನೊಂದು ಕಡೆ ಆಂತರಿಕ ಗಲಭೆ, ಕ್ಷೋಭೆ, ಅಶಾಂತಿ! ಸಾಲು ಸಾಲು ಹಗರಣಗಳು, ಹೆಚ್ಚುತ್ತಿರುವ ಸಾಮಾಜಿಕ ಅಸಮಾನತೆ, ನಾಯಕರ ವೋಟ್ ಬ್ಯಾಂಕ್ ರಾಜಕಾರಣದಿಂದಾಗಿ ಬಲಿಯಾಗುತ್ತಿರುವ ಸೈನಿಕ, ಪೊಲೀಸರು, ಸಾಮಾನ್ಯ ಜನರು! ವಿದ್ಯೆ, ಪ್ರತಿಭೆ ಇದ್ದರೂ ಉದ್ಯೋಗ ದೊರೆಯದೇ ಬಳಲುತ್ತಿರುವ, ದಾರಿ ತಪ್ಪುತ್ತಿರುವ ಯುವ ಜನತೆ! ಸಾಲದ ಹೊನ್ನ ಶೂಲಕ್ಕೇರಿ ಆತ್ಮಹತ್ಯೆಗೆ ಶರಣಾಗುತ್ತಿರುವ ರೈತ! ಎಲ್ಲೆಡೆ ಹಬ್ಬಿರುವ ಭೃಷ್ಟಾಚಾರ, ಲಂಚಕೋರತನ!
           ಅತ್ತ ಡಾಲರೆದುರು ರೂಪಾಯಿ ಬೆಲೆ ಕುಸಿಯುತ್ತಲೇ ಇದ್ದು ಡಾಲರಿಗೆ ೬೦ರೂಪಾಯಿಗಳಾಗಿವೆ. ನೀವೇ ಹೊಸತೊಂದೇನನ್ನಾದರೂ ಉತ್ಪಾದಿಸುತ್ತೀರಿ, ಸಾಧಿಸುತ್ತೀರಿ ಎಂದರೆ ದೊರೆಯದ ಪ್ರೋತ್ಸಾಹ! ರಫ್ತಿಗಿಂತ ಆಮದೇ ಹೆಚ್ಚಾಗಿರುವುದು, ಎಲ್ಲೆಡೆಯೂ ನುಗ್ಗಿರುವ ಶತ್ರು ಚೀನಾದ ವಸ್ತುಗಳು. ದೂರದೃಷ್ಠಿಯಿಲ್ಲದ ಯೋಜನೆಗಳು, ಪ್ರವಾಹ, ನೆರೆ, ಭಯೋತ್ಪಾದಕ ಕೃತ್ಯಗಳಿಗೆ ಸಿಲುಕಿ ಜನ ಸಾಯುತ್ತಿದ್ದರೂ ರಕ್ಷಣೆಗೆ ಧಾವಿಸಲು ಮೀನ ಮೇಷ ಎಣಿಸುವ ಸರಕಾರ, ಆಹಾರ ಧಾನ್ಯಗಳನ್ನು ಸರಿಯಾಗಿ ಶೇಖರಣೆ ಮಾಡದೇ ಕೃತಕ ಆಹಾರ ಅಭಾವ ಸೃಷ್ಟಿಸುವ ಆಡಳಿತಗಾರರು...ಒಟ್ಟಾರೆ ಇದು ನಮ್ಮ ದೇಶ ಎಂದು ಹೆಮ್ಮೆಯಿಂದ ಹೇಳಿಕೊಳ್ಳಲಾಗದ ಸ್ಥಿತಿಯಲ್ಲಿರುವ ಜನತೆ!

ಹೀಗೆ ಕತ್ತಲಲ್ಲಿರುವ ಭಾರತದಲ್ಲಿ ಸೂರ್ಯೋದಯವಾಗುತ್ತಿದೆಯಲ್ಲ...ಪೂರ್ವ ದಿಕ್ಕಿನಲ್ಲಲ್ಲ...ಪಶ್ಚಿಮ ದಿಕ್ಕಿನಲ್ಲಿ, ಗುಜರಾತಿನಲ್ಲಿ....."ನಮೋ"!
ನರೇಂದ್ರ ದಾಮೋದರದಾಸ್ ಮೋದಿ! ಇತರೆಲ್ಲಾ ನಾಯಕರಿಗಿಂತ, ರಾಜಕಾರಣಿಗಳಿಗಿಂತ  ಭಿನ್ನವಾಗಿ ಕಂಡುಬರುವ ಈತ ಗುಜರಾತಿನಲ್ಲಿ ಸಾಧಿಸಿದ ಅಭಿವೃದ್ಧಿಯನ್ನು ದೇಶದ ಜನತೆ ಬಯಸಿದರೆ ಅದರಲ್ಲಿ ತಪ್ಪೇನು?
ಅಂತಹದ್ದೇನಿದೆ ಗುಜರಾತಿನಲ್ಲಿ? ಮೋದಿ ಯಾಕೆ ಪ್ರಧಾನಿ ಪಟ್ಟಕ್ಕೆ ಸೂಕ್ತ?

1.      ಅತ್ತ ದೇಶದಲ್ಲಿ ಬಡತನ ರೇಖೆಗಿಂತ ಕೆಳಗಿರುವವರ ಸಂಖ್ಯೆ ಜಾಸ್ತಿ ಆಗುತ್ತಿರುವಾಗ(29.8%) ಗುಜರಾತಿನಲ್ಲಿ ಅದು 23%ನಿಂದ 16.8% ಇಳಿದಿದೆ. ಗುಜರಾತಿಯೊಬ್ಬನ ತಲಾ ಆದಾಯ 17227ರಿಂದ 51508ಕ್ಕೆ ಏರಿದೆ.  ಕಳೆದ ಹತ್ತು ವರ್ಷಗಳಲ್ಲಿ 3 ಪಟ್ಟು ಹೆಚ್ಚಿರುವ ತಲಾ ಆದಾಯ ಭಾರತದ ಯಾವುದೇ ರಾಜ್ಯಕ್ಕೆ ಹೋಲಿಸಿದರೂ ಅತ್ಯಂತ ಹೆಚ್ಚು. ದಿವಸಕ್ಕೆ ೫೦ರೂಪಾಯಿ ಸಂಪಾದಿಸಲು ಹರಸಾಹಸ ಪಡುತ್ತಿದ್ದ ಕೂಲಿಯಾಳು ಇವತ್ತು 300ಕ್ಕೂ ಹೆಚ್ಚು ಸಂಪಾದಿಸುತ್ತಿದ್ದಾನೆ.


2.     ದೇಶದ ಕೃಷಿ ಅಭಿವೃದ್ಧಿ ದರ ಕೇವಲ 3%ವಿದ್ದರೆ ಗುಜರಾತಿನಲ್ಲಿ ಅದು 1೦%! ಗುಜರಾತಿನ 70%ದಷ್ಟು ಕೃಷಿ ಭೂಮಿ ಅರೆ ಒಣ ಮತ್ತು ಶುಷ್ಕವಾಗಿದೆ. ಆದರೆ ಮೋದಿಯವರಕಾಲುವೆ ಜಾಲದ ಮೂಲಕ ನೀರು ಹರಿಸುವ ಸರ್ದಾರ್ ಸರೋವರ್ ಪ್ರೊಜೆಕ್ಟ್”.  ಗುಜರಾತ್ ಕೃಷಿಕರ ಕೊರತೆಯನ್ನು ನೀಗಿಸಿದೆ.

3.     ಚರಂಕಾ ಎಂಬ ಹಳ್ಳಿಯ ಒಣಭೂಮಿಯನ್ನು ಸೋಲಾರ್ ಉತ್ಪಾದನೆಗೆ ಬಳಸಿಕೊಂಡ ಮೋದಿ ಅಲ್ಲಿ 5೦೦ಮೆ.ವ್ಯಾ ವಿದ್ಯುತ್ ಉತ್ಪಾದಿಸುತ್ತಿದ್ದಾರೆ.  ಗಮನಿಸಿ ಇದು ವಿಶ್ವದಲ್ಲೇ ಪ್ರಪ್ರಥಮ ಸೋಲಾರ್ ಪ್ರೊಜೆಕ್ಟ್. ಮಾತ್ರವಲ್ಲ ಇದು ಏಷ್ಯಾದಲ್ಲೇ ಅತೀ ದೊಡ್ಡ ಸೋಲಾರ್ ಪ್ರೊಜೆಕ್ಟ್. ಅದೊಂದು ಬಹು ಉತ್ಪಾದಕ, ಬಹು ಸೌಲಭ್ಯ, ಬಹು ತಂತ್ರಜ್ಞಾನ ಮತ್ತು ಅಧಿಕ ಫಲಾನುಭವಿಯ ಸೌರ ಉದ್ಯಾನ. ಇನ್ನೊಂದು ವಿಶೇಷ ಎಂದರೆ ಇಲ್ಲಿ ಗಾಳಿ ಮತ್ತು ಸೌರ ಶಕ್ತಿಯ ಸಂಕರೀಕರಣಗೊಳಿಸಿ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಇದರಿಂದಾಗಿ ಇಡಿಯ ಗುಜರಾತ್ 24 ತಾಸು ಪರ್ಯಂತ ಬೆಳಗುತ್ತಿದೆ. ರೈತರ ಪಂಪ್ ಸೆಟ್ಟುಗಳು ದಿನವಿಡೀ ಸದ್ದು ಮಾಡುತ್ತವೆ. 2೦೦೦ನೇ ಇಸವಿಯಲ್ಲಿ 8೦೦೦ ಮೆ.ವ್ಯಾ.ನಷ್ಟಿದ್ದ ವಿದ್ಯುತ್ ಉತ್ಪಾದನೆ ಈಗ 17೦೦೦ ಮೆ.ವ್ಯಾ.ಗೇರಿದೆ.

4.    ಬತ್ತಿ ಒಣಗಿ ಹೋಗುತ್ತಿದ್ದ ಸಬರ್ಮತಿ ಈಗ ತುಂಬಿ ಹರಿಯುತ್ತಿದ್ದಾಳೆ. ಕೊಳಕಾಗಿದ್ದ ಸರದಾರ್ ಸರೋವರ ಇಂಗ್ಲೆಂಡಿನ ಥೇಮ್ಸ್ ನದಿಯಂತೆ ಫಳಫಳ ಹೊಳೆಯುತ್ತಿದೆ. ದೇಶದೆಲ್ಲೆಡೆ ನೀರಿನ ಅಭಾವವಿದ್ದರೆ ಒಂದು ಕಾಲದಲ್ಲಿ ಅದೇ ರೀತಿ ಬಸವಳಿದ್ದ ಗುಜರಾತ್ ನದಿ ಜೋಡಣೆಯಿಂದಾಗಿ ತನ್ನ ನೀರಿನ ಸಮಸ್ಯೆಯನ್ನೇ ನೀಗಿಸಿಕೊಂಡಿದೆ. ಸಹಸ್ರಾರು ವರ್ಷಗಳಿಂದ ಬತ್ತಿ ಹೋಗಿದ್ದ ದೇವ ನದಿ ಸರಸ್ವತಿ ಮೈದುಂಬಿ ನಿಂತಿದ್ದಾಳೆ. ವಾಜಪೇಯಿ ಸರಕಾರ ಆರಂಭಿಸಿದ್ದ ನದಿ ಜೋಡಣೆಯನ್ನು ಕಾಂಗ್ರೆಸ್ ಸರಕಾರ ಸ್ಥಗಿತಗೊಳಿಸಿದ್ದರೆ ಮೋದಿ ಅದನ್ನು ಸಮರ್ಪಕವಾಗಿ ಬಳಸಿಕೊಂಡು ಗುಜರಾತಿನಲ್ಲಿ ಹಸಿರು ಚಿಗುರುವಂತೆ ಮಾಡಿದ್ದಾರೆ.

5.     ಮೋದಿ ಮುಖ್ಯಮಂತ್ರಿಯಾಗಿ ಕೇವಲ ೧೫ ದಿವಸಗಳಾಗಿದ್ದವು. ರೈಲಿನಲ್ಲಿ ಪ್ರಯಾಣಿಸುತ್ತಿದ್ದ 58 ಕರಸೇವಕರನ್ನು ಜೀವಂತವಾಗಿ ಸುಟ್ಟ ಮತಾಂಧರ ಕೃತ್ಯದಿಂದ ಜನತೆ ರೊಚ್ಚಿಗೆದ್ದಿತ್ತು. ಮಾರಾಮಾರಿಯೇ ನಡೆಯಿತು. ಮೋದಿ ಪರಿಸ್ಥಿತಿಯ ನಿಯಂತ್ರಣಕ್ಕಾಗಿ  ಸೈನ್ಯ ಕಳುಹಿಸುವಂತೆ ಕೇಂದ್ರದ ಮೊರೆ ಹೊಕ್ಕರು. ಮಾತ್ರವಲ್ಲ ತಮ್ಮ ಪಕ್ಕದ ರಾಜ್ಯಗಳಾದ ಮಧ್ಯಪ್ರದೇಶ, ರಾಜಸ್ಥಾನ, ಮಹಾರಾಷ್ಟ್ರ ರಾಜ್ಯದ ಮುಖ್ಯ ಮಂತ್ರಿಗಳಿಗೆ ಪೊಲೀಸ್ ಪಡೆಗಳನ್ನು ಕಳುಹಿಸುವಂತೆ ಸಹಾಯ ಯಾಚಿಸಿದ್ದರು. ಆದರೆ ಅಲ್ಲಿದ್ದವು ಕಾಂಗ್ರೆಸ್ ಸರಕಾರಗಳು. ಅವು ಸಹಾಯ ಮಾಡಲಿಲ್ಲ. ಅದರಲ್ಲೂ ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿದ್ದ ದಿಗ್ವಿಜಯ ಸಿಂಗ್ ಆಗ ಸಹಾಯ ಮಾಡದೇ ಈಗ ಬಾಯಿಗೆ ಬಂದ ಹಾಗೆ ಹೇಳಿಕೆ ನೀಡುತ್ತಿರುವುದು ವಿಪರ್ಯಾಸ. ಅಂದಹಾಗೆ ಗಮನಿಸಬೇಕಾದ ಮಹತ್ವದ ಅಂಶವೆಂದರೆ ಕಳೆದ ಹತ್ತು ವರ್ಷಗಳಲ್ಲಿ ಗುಜರಾತಿನಲ್ಲಿ ಒಂದೇ ಒಂದು ಕೋಮು ಗಲಭೆ ನಡೆದಿಲ್ಲ.

6.    ಗುಜರಾತಿನಲ್ಲಿ ಸಾಕ್ಷರತೆಯ ಪ್ರಮಾಣ 79.31%. ಕಳೆದ 10 ವರ್ಷಗಳಲ್ಲಿ ಅದು 11.47% (69.14%ದಿಂದ 79.31%) ದಷ್ಟು ಹೆಚ್ಚಳವಾಗಿದೆ. ಸಾಕ್ಷರತೆಯ ಪ್ರಮಾಣ ಹೆಚ್ಚಿಸಲೆಂದೇ ಮೋದಿ ಬಗೆ ಬಗೆಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡರು. ಹಾಗಾಗಿ 41.48%ದಷ್ಟಿದ್ದ ಶಾಲೆಗೆ ಹೋಗದೆ ಅದರಲ್ಲೂ ಕನಿಷ್ಟ 10ನೇ ತರಗತಿ ಪೂರೈಸದೇ ಇದ್ದ ಮಕ್ಕಳ ಪ್ರಮಾಣ ಈಗ 7.95%ಕ್ಕೆ ಇಳಿದಿದೆ ಅಂದರೆ ಮೋದಿ ಮೋಡಿ ಮಕ್ಕಳ ಮೇಲೆ ಎಷ್ಟು ಪರಿಣಾಮ ಬೀರಿರಬೇಕು?


7.     ಮಾತ್ರವಲ್ಲ 274ರಷ್ಟಿದ್ದ ಐಟಿಐಗಳ ಸಂಖ್ಯೆ 1068 ಆಯಿತು. ಐಟಿಐ ನೇಮಕಾತಿ 77000ದಿಂದ 5ಲಕ್ಷಕ್ಕೇರಿತು. ಜನರಲ್ಲಿರುವ ವೃತ್ತಿಕೌಶಲಕ್ಕೆ ಒಂದು ಸರಿಯಾದ ದಿಕ್ಕು ತೋರಿಸುವ ಮೋದಿಯವರ ದೂರಗಾಮಿ ಯೋಜನೆ ಇಂದು ಹಾಗೂ ಮುಂದೆ ಗುಜರಾತಿನ ಅಭಿವೃದ್ಧಿಗೆ ಪೂರಕವಾಗಿ ಸಾಗುತ್ತಿದೆ.

8.     ಶಿಶು ಮರಣ ಪ್ರಮಾಣ ಕಳೆದ 10ವರ್ಷಗಳಲ್ಲಿ 60ರಿಂದ 41ಕ್ಕಿಳಿದಿದೆ. ಹಾಗೆಯೇ ಹೆರಿಗೆಯ ಸಮಯದ ತಾಯಂದಿರ ಮರಣ ದರ 12.8%. ಅದೇ ದೇಶದಲ್ಲಿ ಪ್ರಮಾಣ 16.8%.


9.    ನಿರುದ್ಯೋಗ ದರ ರಾಷ್ಟ್ರದಲ್ಲಿ % ಇದ್ದರೆ ಗುಜರಾತಿನಲ್ಲಿ ಅದು ಕೇವಲ .%. ಕಳೆದ ಹತ್ತು ವರ್ಷಗಳಲ್ಲಿ ಅತೀ ಹೆಚ್ಚು ಉದ್ಯೋಗ ನೇಮಕಾತಿ ನಡೆದದ್ದು ಗುಜರಾತಿನಲ್ಲಿ. ಗುಜರಾತಿನಲ್ಲಿ ಇದು ೫೦% ಆಸುಪಾಸಿನಲ್ಲಿದ್ದರೆ ಉಳಿದ ರಾಜ್ಯಗಳಲ್ಲಿ ೧೦% ಒಳಗೆ ಇದೆ ಎಂದರೆ ಮೋದಿ ಮೋಡಿ ಎಷ್ಟಿದೆ ಎಂದು ಊಹಿಸಬಹುದು.

10.   "ಬೇಟಿ ಬಚಾವೋ" ಆಂದೋಲನ, "ಬಾಲ ಸಖಾ", ಚಿರಂಜೀವಿ ಯೋಜನಾ, ಬಾಲ ಭೋಗ್ ಯೋಜನಾ, ಖಿಖಿಲಾತ್ ಯೋಜನಾ, ನಾರಿ ಗೌರವ್ ನಿಧಿ, ಮಿಷನ್ ಮಂಗಳಮ್, ಸವಚೇಟಿ ಮಾಜ್ ಸುರಕ್ಷಾ ಮುಂತಾದ ಹಲವಾರು ಯೋಜನೆಗಳ ಮೂಲಕ ಹೆಣ್ಣು ಮಕ್ಕಳ ಹಾಗೂ ಮಹಿಳೆಯರ ಸುರಕ್ಷತೆಗೆ ಹೆಚ್ಚಿನ ಮಹತ್ವ ನೀಡಿರುವ ಮೋದಿ ಸರಕಾರ ಮಹಿಳಾ ಸಬಲೀಕರಣ ಮಸೂದೆ ಜಾರಿಗೊಳಿಸಿದ ಮೊದಲ ರಾಜ್ಯ ಸರಕಾರ. ಗಮನಿಸಿ ಕಾಂಗ್ರೆಸ್ಸಿನಿಂದ ಆಳಲ್ಪಡುತ್ತಿರುವ ದೆಹಲಿ "ರೇಪ್ ಕ್ಯಾಪಿಟಲ್" ಆಗಿ ಮಾರ್ಪಟ್ಟಿದೆ.
                ಭಾರತೀಯನೊಬ್ಬ ತಾನು 'ಹಿಂದೂ' ಎಂದು ಹೇಳಿಕೊಳ್ಳಲು ಹಿಂಜರಿಯುತ್ತಿರುವ ಸಂದರ್ಭದಲ್ಲಿ, ಹಿಂದೂ ಎಂದರೆ ಎಲ್ಲಿ ಅಲ್ಪಸಂಖ್ಯಾತ ಮತಗಳು ಕಳೆದುಹೋಗುತ್ತವೋ ಎಂಬ ಭೀತಿಯಲ್ಲಿರುವ ರಾಜಕಾರಣಿಗಳ ನಡುವೆ "ನಾನೊಬ್ಬ ಹಿಂದೂ ರಾಷ್ಟ್ರವಾದಿ" ಎಂದು ಎದೆತಟ್ಟಿ ಹೇಳುವ ದೇಶದ ಧೀಮಂತ ರಾಜಕಾರಣಿ ನಮೋ. ಯಾವ ರಾಜ್ಯ ಅಂದು ಪೃಥ್ವಿಯ ಪ್ರಕೋಪಕ್ಕೆ ಒಳಗಾಗಿ ಚೇತರಿಸಿಕೊಳ್ಳಲಾಗದ ಸ್ಥಿತಿಗೆ ತಲುಪಿತ್ತೋ,ಯಾವ ರಾಜ್ಯದ ಸ್ಥಿತಿಯು ಅಧೋಗತಿಗೆ ಇಳಿಯಿತು ಎಂದು ದೇಶವ್ಯಾಪಿಯಾಗಿ ಜನ ಪರಿತಪಿಸುತ್ತಿದ್ದರೋ, ಅದೇ ರಾಜ್ಯ  ಕೇವಲ ೧೦ ವರ್ಷಗಳಲ್ಲಿ ವಿಶ್ವವ್ಯಾಪಿಯಾಗಿ  ಪ್ರಕಾಶಿಸುವಂತೆ ಮಾಡಿದವರು ನಮೋ. ಗೋಧ್ರೋತ್ತರ ದಂಗೆಯ ನೆಪವೊಡ್ಡಿ ಯಾವ ದೇಶವು ನರೇಂದ್ರ ಮೋದಿಯವರಿಗೆ ವೀಸಾ ನಿರಾಕರಣೆ ಮಾಡಿತ್ತೋ, ಅದೇ ಅಮೇರಿಕಾದ ಪ್ರಖ್ಯಾತ ಪತ್ರಿಕೆ "TIMES"ನಿಂದ 'ಅಭಿವೃದ್ಧಿಯ ಹರಿಕಾರ' ಎಂದು ಹೊಗಳಿಸಲ್ಪಟ್ಟವರು ನಮೋ. ಯಾರನ್ನೂ ಓಲೈಸದೇ 'ಸರ್ವರಿಗೂ ಸಮಪಾಲು' ಎಂಬ ಸಿದ್ಧಾಂತಕ್ಕೆ ಬದ್ಧರಾಗಿರುವ ನಮೋ ಗುಜರಾತಿನ ಅಭಿವೃದ್ಧಿಯಲ್ಲಿ ಹೊಸ ಶಖೆಯೊಂದನ್ನು ಆರಂಭಿಸಿದರು.
                ಗುಜರಾತಿನ ಅಭಿವೃದ್ಧಿಯ ಕೆಲವೇ ಕೆಲವು ಅಂಶಗಳನ್ನು ಹಂಚಿಕೊಂಡಿದ್ದೇನೆ. ನನಗೆ, ನಿಮಗೆ ತಿಳಿಯದ ಹೊರಜಗತ್ತಿಗೆಗೆ ಕಾಣದಂತೆ ದೇಶವಿರೋಧಿ ಮಾಧ್ಯಮಗಳು ಮುಚ್ಚಿಟ್ಟ ಹಲವು ಸಂಗತಿಗಳಿವೆ. ಗುಜರಾತಿನ ಕಣ ಕಣವೂ ಮೋದಿಯ ಸಾಧನೆಯನ್ನು ವಿವರಿಸುತ್ತದೆ. ಹಿಂದೂ ಮುಸ್ಲಿಮ ಎನ್ನದೇ ಪ್ರತಿಯೊಬ್ಬ ಗುಜರಾತಿ ನರೇಂದ್ರ ಮೋದಿಯನ್ನು ಇಷ್ಟಪಡುತ್ತಾರೆ ಮಾತ್ರವಲ್ಲ ಭವ್ಯ ಭಾರತದ ಪ್ರಧಾನಿಯಾಗಿ ಕಾಣುವ ಉತ್ಸುಕತೆಯಲ್ಲಿದ್ದಾರೆ. ಆದರೆ ಮೋದಿ ಕೂತರೂ ನಿಂತರೂ ವಿರೋಧಿಸುವ ಬುದ್ಧಿಹೀನ ಜೀವಿಗಳು ಮೋದಿ ಮುಖ್ಯಮಂತ್ರಿಯಾದ ನಂತರ ಗುಜರಾತಿನಲ್ಲಿ ಒಂದೇ ಒಂದು ಕೋಮು ಗಲಭೆಯಾಗಿಲ್ಲ ಎಂಬುದನ್ನು, ಮೋದಿ ಮೋಡಿಯನ್ನು ಜನರಿಂದ ಮರೆಸುತ್ತಿದ್ದಾರೆ. ನಾನು ನಿಮ್ಮಲ್ಲಿ ಕೇಳುವುದಿಷ್ಟೇ ನಿಮಗೆ ನಮ್ಮ ಇತಿಹಾಸ, ಪರಂಪರೆಯ ಬಗ್ಗೆ ಹೆಮ್ಮೆಪಡುವ, ತಾನು ಹಿಂದೂ ಎಂದು ಎದೆ ತಟ್ಟಿ ಹೇಳಿಕೊಳ್ಳುವ, ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರ ಪ್ರತಿಯೊಂದು ಕಾರ್ಯವನ್ನು ನೆನೆಪಿನಲ್ಲಿಟ್ಟುಕೊಂಡಿರುವ ಅಭಿವೃದ್ಧಿಯ ಹರಿಕಾರ ನಿಮ್ಮ ಪ್ರಧಾನಿಯಾಗಬೇಕೆ? ಅಥವಾ ಎಂದಿನಂತೆ ಗುಲಾಮಗಿರಿಯೇ ಸಾಕೆ


ನಿರ್ಧಾರದ ಕಾಲ ಬಂದಿದೆ!!!

-ರಾಜೇಶ್ ರಾವ್ (ನಮೋ ಬ್ರಿಗೇಡ್)