ಪುಟಗಳು

ಬುಧವಾರ, ಜುಲೈ 17, 2013

ಕೊಚ್ಚೆಯಲ್ಲಿ ಮುಳುಗುತ್ತಿರುವ ಕಾಂಗ್ರೆಸ್

ತಾನು ಕೊಚ್ಚೆಯಲ್ಲಿ ಮುಳುಗಿರುವಾಗ 2002ರ ಗುಜರಾತ್ ಗಲಭೆ ಬಗ್ಗೆ ಮಾತಾಡಲು ಕಾಂಗ್ರೆಸ್ಸಿಗೆ ಯಾವ ನೈತಿಕ ಹಕ್ಕಿದೆ?

ಗಲಭೆ 1: ಬಂಗಾಳದಲ್ಲಿ 1947ರಲ್ಲಿ ನಡೆದ ಕೋಮು ಗಲಭೆಯಲ್ಲಿ 5000-10000 ಜನರು ಮೃತಪಟ್ಟರು. ಆಗಿದ್ದ ಆಡಳಿತ ಪಕ್ಷ ಕಾಂಗ್ರೆಸ್!

ಗಲಭೆ 2: 1969ರಲ್ಲಿ ಅಹಮದಾಬಾದ್ ಕೋಮು ಗಲಭೆಯಲ್ಲಿ 512ಕ್ಕೂ ಹೆಚ್ಚು ಜನರು ಕೊಲ್ಲಲ್ಪಟ್ಟರು.ಇಡೀ ರಾಜ್ಯದಲ್ಲಿ 6 ತಿಂಗಳು ನಡೆದ ಈ ಹಿಂಸಾಚಾರದಲ್ಲಿ ಸುಮಾರು 3000ದಿಂದ 15000 ಜನ ಹತರಾದರು. ಆಗ ಅಲ್ಲಿನ ಆಡಳಿತ ಪಕ್ಷ ಕಾಂಗ್ರೆಸ್!

ಗಲಭೆ 3: ಅಕ್ಟೋಬರ್ 1984ರಲ್ಲಿ ದೆಹಲಿಯಲ್ಲಿ ನಡೆದ ಕೋಮು ಗಲಭೆಯಲ್ಲಿ 2733 ಜನರು ಕೊಲ್ಲಲ್ಪಟ್ಟರು.ಆಗಿದ್ದದ್ದು ಕಾಂಗ್ರೆಸ್ ಸರಕಾರ.
ಮಾತ್ರವಲ್ಲ ಇಂದಿರಾ ಹತ್ಯೆಯ ಮುಯ್ಯಿ ತೀರಿಸಲು ನಡೆದ ಈ ನರಮೇಧವನ್ನು ಸಮರ್ಥಿಸುತ್ತಾ ರಾಜೀವ್ ಗಾಂಧಿ ನೀಡಿದ " ಒಂದು ದೊಡ್ಡ ಮರ ಬಿದ್ದಾಗ ಅದರ ಬುಡ ಅಲುಗಾಡಿ ಸನಿಹದ ಭೂಮಿ ಅದುರುವುದು ಸಹಜ" ಎಂಬ ಮೂರ್ಖತನದ ಹೇಳಿಕೆ ನರಮೇಧದ ಸೂತ್ರದಾರರನ್ನು ಸಾಕ್ಷಿ ಸಮೇತ ನಿರೂಪಿಸಿತ್ತು!

ಗಲಭೆ 4: ಫೆಬ್ರವರಿ 1983ರಲ್ಲಿ ಅಸ್ಸಾಂನಲ್ಲಿ ನಡೆದ ಕೋಮು ಗಲಭೆಯಲ್ಲಿ 6 ಗಂಟೆಗಳ ಅವಧಿಯಲ್ಲಿ 2000-5000 ಜನರು ಕೊಲ್ಲಲ್ಪಟ್ಟರು. ಪ್ರಧಾನಿಯಾಗಿದ್ದವರು ಇಂದಿರಾ ಗಾಂಧಿ (ಕಾಂಗ್ರೆಸ್)!

ಗಲಭೆ 5: ರೂರ್ಕೆಲಾ & ಜಮ್ಶೆಡ್ಪುರದಲ್ಲಿ 1964ರಲ್ಲಿ ನಡೆದ ಕೋಮು ಗಲಭೆಗಳಲ್ಲಿ 2000 ಜನರು ಕೊಲ್ಲಲ್ಪಟ್ಟರು. ಆಡಳಿತ ಪಕ್ಷ- ಕಾಂಗ್ರೆಸ್!

ಗಲಭೆ 6: ಆಗಸ್ಟ್ 198೦ರಲ್ಲಿ ಮೊರದಾಬಾದ್ ಕೋಮು ಗಲಭೆಯಲ್ಲಿ ಅಂದಾಜು 2000 ಮಂದಿ ಸತ್ತರು. ಆಗಿನ ಆಡಳಿತ ಪಕ್ಷ ಕಾಂಗ್ರೆಸ್!

ಗಲಭೆ 7: ಅಕ್ಟೋಬರ್ 1989ರ ಭಗಲ್ಪುರ್-ಬಿಹಾರ ಗಲಭೆಯಲ್ಲಿ 800-2000 ಜನ ಕೊಲ್ಲಲ್ಪಟ್ಟರು . ಅಲ್ಲಿ ಅಧಿಕಾರದಲ್ಲಿದ್ದದ್ದು ಕಾಂಗ್ರೆಸ್!

ಗಲಭೆ 8: ಡಿಸೆಂಬರ್ 1992 - ಜನವರಿ 1993ರ ತನಕ ನಡೆದ ಮುಂಬೈ ಗಲಭೆಯಲ್ಲಿ 800-2000 ಜನ ಕೊಲ್ಲಲ್ಪಟ್ಟರು. ಆಗ ಅಲ್ಲಿದ್ದ ಆಡಳಿತ ಪಕ್ಷ ಕಾಂಗ್ರೆಸ್!

ಗಲಭೆ 9: ಏಪ್ರಿಲ್ 1985ರ ಅಹಮದಾಬಾದ್ ಕೋಮು ಗಲಭೆಯಲ್ಲಿ ಕನಿಷ್ಠ 300 ಮಂದಿ ಸಾಯಲ್ಪಟ್ಟರು. ಆಡಳಿತ ಪಕ್ಷ ಮತ್ತದೇ ಕಾಂಗ್ರೆಸ್!

ಗಲಭೆ 10: ಡಿಸೆಂಬರ್ 1992ರಲ್ಲಿ ಆಲಿಗಢ ಕೋಮುಗಲಭೆಯಲ್ಲಿ ಕನಿಷ್ಠ 176 ಜನ ಕೊಲ್ಲಲ್ಪಟ್ಟರು . ಅಲ್ಲೂ ಆಡಳಿತ ಪಕ್ಷ ಕಾಂಗ್ರೆಸ್! (ರಾಷ್ಟ್ರಪತಿ ಆಡಳಿತ)!

ಗಲಭೆ 11: ಡಿಸೆಂಬರ್ 1992ರ ಸೂರತ್ ಗಲಭೆಯಲ್ಲಿ ಕನಿಷ್ಠ 175 ಮಂದಿ ಕೊಲ್ಲಲ್ಪಟ್ಟರು. ಆಡಳಿತ ಪಕ್ಷ ಕಾಂಗ್ರೆಸ್!

ಗಲಭೆ 12: ಡಿಸೆಂಬರ್ 1990ರ ಹೈದರಾಬಾದ್ ಗಲಭೆಯಲ್ಲಿ ಕನಿಷ್ಠ 132 ಮಂದಿ ಕೊಲ್ಲಲ್ಪಟ್ಟರು . ಅಲ್ಲೂ ಆಡಳಿತ ಪಕ್ಷ ಕಾಂಗ್ರೆಸ್!

ಗಲಭೆ 13: ಆಗಸ್ಟ್ 1967ರ ರಾಂಚಿ ಕೋಮು ಗಲಭೆಯಲ್ಲಿ 200 ಜನ ಸತ್ತರು. ಆಡಳಿತ ಪಕ್ಷ ಕಾಂಗ್ರೆಸ್!

ಗಲಭೆ 14: ಏಪ್ರಿಲ್ 1979ರಲ್ಲಿ ಜಮ್ಶೆಡ್ಪುರದಲ್ಲಿ ನಡೆದ ಕೋಮು ಗಲಭೆಯಲ್ಲಿ 125ಕ್ಕೂ ಹೆಚ್ಚು ಮಂದಿ ಕೊಲ್ಲಲ್ಪಟ್ಟರು . ಅಲ್ಲಿ ಆಡಳಿತ ಪಕ್ಷ ಸಿಪಿಐಎಂ (ಕಮ್ಯುನಿಸ್ಟ್ ಪಕ್ಷ)

ಗಲಭೆ 15: 1970ರಲ್ಲಿ ಮಹಾರಾಷ್ಟ್ರದ ಭಿವಾಂಡಿ ಕೋಮು ಗಲಭೆಯಲ್ಲಿ 80ಕ್ಕೂ ಹೆಚ್ಚು ಜನ ಕೊಲ್ಲಲ್ಪಟ್ಟರು. ಆಡಳಿತ ಪಕ್ಷ ಮತ್ತದೇ ಕಾಂಗ್ರೆಸ್!

ಗಲಭೆ 16: ಮೇ 1984ರಲ್ಲಿ ಭಿವಾಂಡಿಯಲ್ಲಿ ನಡೆದ ಕೋಮು ಗಲಭೆಯಲ್ಲಿ 146 ಜನ ಸತ್ತು 611 ಜನ ಗಾಯಗೊಂಡರು. ಆಡಳಿತ ಪಕ್ಷ ಕಾಂಗ್ರೆಸ್!

ಗಲಭೆ 17: ಎಪ್ರಿಲ್- ಮೇ 1987ರ ಮೀರತ್ ಗಲಭೆಯಲ್ಲಿ 81 ಜನ ಕೊಲ್ಲಲ್ಪಟ್ಟರು . ಆಡಳಿತ ಪಕ್ಷ ಕಾಂಗ್ರೆಸ್!
ಗಲಭೆ 18: ಜುಲೈ 1986ರ ಅಹಮದಾಬಾದ್ ಕೋಮು ಗಲಭೆಯಲ್ಲಿ 59 ಜನ ಸತ್ತರು. ಆಡಳಿತ ಪಕ್ಷ ಕಾಂಗ್ರೆಸ್!
ಗಲಭೆ 19: 1948ರಲ್ಲಿ ಗಾಂಧಿ ಸಂಹಾರದ ನಂತರ ಕಾಂಗ್ರೆಸ್ಸಿಗಳು ನೆಹರೂ ಪ್ರೇರಣೆಯಂತೆ ಸುಮಾರು 2000 ಬ್ರಾಹ್ಮಣರನ್ನು ಹತ್ಯೆ ಮಾಡಿದರು.

ಇಷ್ಟೆಲ್ಲಾ ಗಲಭೆಗಳು ಸ್ವತಃ ಕಾಂಗ್ರೆಸ್ ಅವಧಿಯಲ್ಲಿ ನಡೆದಿದ್ದರೂ, ಕಾಂಗ್ರೆಸ್ ಪ್ರೇರಿತ ನರಮೇಧಗಳಲ್ಲಿ ಅಸಂಖ್ಯಾತ ನಾಗರಿಕರು ಸತ್ತಿದ್ದರೂ ಕೇವಲ 15 ದಿನದ ಹಿಂದೆಯಷ್ಟೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದ ನರೇಂದ್ರ ಮೋದಿ ಗುಜರಾತ್ ಗಲಭೆಗೆ ಕಾರಣ ಎನ್ನುತ್ತಾ ಅದನ್ನೇ ದಿನ ನಿತ್ಯದ ಸುದ್ದಿಯಾಗಿ ಪ್ರಕಟಿಸುವ ಮಾಧ್ಯಮಗಳಿಗೂ ಮತ್ತು ಅವುಗಳನ್ನು ಹಣ ಕೊಟ್ಟು ಖರೀದಿ ಮಾಡಿರುವ ಕಾಂಗ್ರೆಸ್ಸಿಗರಿಗೆ ಏನೆನ್ನಬೇಕು? ಮೋದಿ ಪೊಲೀಸ್ ಪಡೆಯ ಸಹಾಯ ಕೇಳಿ ನೆರೆಯ ಮಧ್ಯಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ ಸರಕಾರಗಳಿಗೆ ಕರೆ ಮಾಡಿ ಗೋಗರೆದಾಗ ಅಲ್ಲಿನ ಕಾಂಗ್ರೆಸ್ ಸರಕಾರಗಳು ಯಾಕೆ ನಿರಾಕರಿಸಿದವು? ಅದರಲ್ಲೂ ತನ್ನನ್ನು ತಾನು ಪಿಗ್ವಿಜಯ್ ಎಂದು ಮಾಧ್ಯಮಗಳ ಮುಂದೆ ಅಲವತ್ತುಕೊಂಡ ದಿಗ್ವಿಜಯ್ ಸಿಂಗ್ ಆಗ ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿದ್ದು ಆಗ ಸಹಾಯ ನಿರಾಕರಿಸಿ ಈಗ ಮಾಧ್ಯಮಗಳ ಮುಂದೆ ಬೊಗಳುತ್ತಿರುವುದು ಎಷ್ಟು ಸರಿ? ನ್ಯಾಯಾಲಯ ನರೇಂದ್ರ ಮೋದಿಯವರಿಗೆ ಕ್ಲೀನ್ ಚಿಟ್ ನೀಡಿದ್ದರೂ ಇದೇ ವಿಷಯವನ್ನು ಮತ್ತೆ ಮತ್ತೆ ಕೆದಕುತ್ತಿರುವ ಕಾಂಗ್ರೆಸ್ಸಿಗರೇ ಹಾಗೂ ತಮ್ಮನ್ನು ತಾವು ಮಾರಿಕೊಂಡ ಮಾಧ್ಯಮಗಳೇ ಇದಕ್ಕೆ ತಮ್ಮ ಪ್ರತಿಕ್ರಿಯೆ ಏನು?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ