ಪುಟಗಳು

ಶುಕ್ರವಾರ, ಸೆಪ್ಟೆಂಬರ್ 19, 2014

ಅಯೋಧ್ಯೆ ನಶಿಸುತ್ತಲೇ ಇದೆ...ಮೆಕ್ಕಾ ಬೆಳೆಯುತ್ತಲೇ ಇದೆ!

ಅಯೋಧ್ಯೆ ನಶಿಸುತ್ತಲೇ ಇದೆ...ಮೆಕ್ಕಾ ಬೆಳೆಯುತ್ತಲೇ ಇದೆ!
             ಉತ್ತರದ ಸಿಂಕಿಯಾಂಗ್ ಮತ್ತು ಟ್ರಾನ್ಸೊಕ್ಸಿಯಾನಾಗಳಿಂದ ದಕ್ಷಿಣದ ಕನ್ಯಾಕುಮಾರಿಯ ತನಕ, ಪಶ್ಚಿಮದಲ್ಲಿ ಇಂದಿನ ಇರಾನಿನ ಸೀಸ್ತಾನ್ ಪ್ರಾಂತ್ಯದಿಂದ ಪೂರ್ವದ ಅಸ್ಸಾಮಿನವರೆಗೆ ಸುಮಾರು 1100 ವರ್ಷಗಳಲ್ಲಿ 154 ಕಡೆ ಹಿಂದೂ ದೇವಾಲಯಗಳ ಮೇಲೆ "ಸತತವಾಗಿ" ದಾಳಿಗಳಾದವು. ಸುದೀರ್ಘ ಕಾಲ ಹಿಂದೂ ಸಂಸ್ಕೃತಿಯ ತೊಟ್ಟಿಲಾಗಿ ಜಗತ್ತಿನ ಕಣ್ಣು ಕೋರೈಸುತ್ತಿದ್ದ ಈ ಪ್ರದೇಶವು, ದೇವಾಲಯಗಳು ಹಾಗೂ ವಿಹಾರಗಳ ಚೆಲ್ಲಾಡಿದ ಅವಶೇಷಗಳಿಂದ ತುಂಬಿ ಹೋಯಿತು. ಮಧ್ಯಕಾಲದಲ್ಲಿ ಇಲ್ಲೆಲ್ಲಾ ನಿರ್ಮಾಣಗೊಂಡವೆನ್ನಲಾದ ಮಸೀದಿ-ಮಝರ್-ಝಯಾರತ್-ದರ್ಗಾಗಳೆಲ್ಲಾ ನಾಶಪಡಿಸಲಾದ ಮಠ-ಮಂದಿರಗಳ ಜಾಗಗಳಲ್ಲೇ ಅವುಗಳದೇ ಅವಶೇಷಗಳಿಂದ ನಿರ್ಮಿಸಲ್ಪಟ್ಟವು ಎಂಬ ಸೂರ್ಯ ಸತ್ಯ ಪ್ರಾಚ್ಯವಸ್ತು ಸಂಶೋಧನೆ ಹಾಗೂ ಉತ್ಖನನಗಳಿಂದ ಖಚಿತವಾಗಿ ತಿಳಿದುಬರುತ್ತವೆ. ಮಾತ್ರವಲ್ಲ ನೋಡುಗರ ಸೂಕ್ಷ್ಮ ಕಣ್ಣಿಗೆ ಸರಾಗವಾಗಿ ಗೋಚರಿಸುತ್ತವೆ.
               ಹಿಂದೂಗಳ ಹಾಗೂ ಹಿಂದೂ ದೇವಾಲಯಗಳ ಮೇಲೆ ನಡೆಸಿದ ಕುಕೃತ್ಯಗಳಿಂದಾಗಿಯೇ ಇಸ್ಲಾಮಿನ ಚರಿತ್ರೆಯಲ್ಲಿ ಶಾಶ್ವತ ಸ್ಥಾನಗಳನ್ನು ಗಳಿಸಿಕೊಂಡಿರುವ ಮೊಹಮದ್ ಬಿನ್ ಕಾಸಿಂ, ಮಹಮದ್ ಘಜನಿ, ಇಲ್ತಮಿಷ್, ಅಲ್ಲಾವುದ್ದೀನ್ ಖಿಲ್ಜಿ, ಫಿರೋಜ್ ಶಾ ತುಘಲಕ್, ಒಂದನೇ ಅಹಮದ್ ಶಾ, ಮೊಹಮದ್ ಬೆಗ್ಧಾ, ಸಿಕಂದರ್ ಲೋದಿ, ಔರಂಗಜೇಬ್, ದಕ್ಷಿಣದಲ್ಲಿ ಟಿಪ್ಪು ಹಾಗೂ ಬಹಮನಿ ಸುಲ್ತಾನರು ಭಾರತೀಯರು ಬರೆದ ಇತಿಹಾಸ ಗ್ರಂಥಗಳಲ್ಲೂ ತಮ್ಮ ಮತಾಂಧತೆಯ ಕೃತ್ಯಗಳನ್ನು ಮೂಲೆಗೊತ್ತಿ ಪ್ರಶಂಸೆಗೊಳಗಾಗಿರುವುದು ಇತಿಹಾಸಕ್ಕೆ ಮಾಡಿದ ಅಪಚಾರ. ಎಡಪಂಥೀಯ ಕಣ್ಣಿನಿಂದ ನೋಡುವವರು, ಇತಿಹಾಸದ ಬಗ್ಗೆ ತಿಳಿಯಲೊಲ್ಲದವರನ್ನು ಬಿಡಿ, ಕೆಲವು ರಾಷ್ಟ್ರೀಯವಾದಿಗಳೂ ಅಕ್ಬರನಂತಹ ಜಿಹಾದಿಯನ್ನು ಪರಮತ ಸಹಿಷ್ಣು ಅಂತ ಭಾವಿಸುತ್ತಾರೆಂದರೆ ನಮ್ಮವರನ್ನು ದಾರಿ ತಪ್ಪಿಸಿದ ಪರಿ ಎಂತಹುದಿರಬಹುದು! ಆತನ ಸುಲ್ಹ್-ಇ-ಕುಲ್ ನೀತಿಯೇ ಇದಕ್ಕೆ ವರದಾನವಾದದ್ದು. ಆದರೆ ಆತ ಚಿತ್ತೋಡನ್ನು ನಾಶಪಡಿಸುವಾಗ ಜಿಹಾದ್ ಎಂದೇ ಪರಿಗಣಿಸಿದ್ದು ಮರೆಯಾಗಿ ಹೋಯಿತು! ಆತನ ಸುಲ್ಹ್-ಇ-ಕುಲ್ ನೀತಿಯ ಉದ್ದೇಶ ಕಂದಾಚಾರಿ ಉಲೇಮಾಗಳ ಕಪಿಮುಷ್ಠಿಯಿಂದ ತನ್ನನ್ನು ತಾನು ಬಿಡಿಸಿಕೊಳ್ಳುವುದಾಗಿತ್ತೇ ಹೊರತು ಹಿಂದೂಗಳನ್ನು ಸಮಾನವಾಗಿ ಕಾಣುವ ದೃಷ್ಠಿಯಾಗಿರಲಿಲ್ಲ ಎಂಬ ಅಂಶ ಬೆಳಕಿಗೆ ಬರಲೇ ಇಲ್ಲ. ದೀನ್ ಇಲಾಹಿ ಹೆಸರಿನಲ್ಲಿ ಎಷ್ಟೊಂದು ಜನರನ್ನು ವೈಚಾರಿಕವಾಗಿ ಮತಾಂತರಿಸಲಾಯಿತು! ಇದೆಲ್ಲವನ್ನೂ ತನ್ನ ಪರವಾಗಿ ಬಳಸಿಕೊಂಡು ಸಾಯುವವರೆಗೆ ರಜಪೂತ ಸ್ತ್ರೀಯರನ್ನು ತನ್ನ ಜನಾನದಲ್ಲಿ ತುಂಬಿಸಿಕೊಂಡ ಅವನ "ಲವ್ ಜಿಹಾದ್" ಮರೆಯಲು ಸಾಧ್ಯವೇ? ತಾನು ಮಾಡದಿದ್ದರೂ ತನ್ನ ಕೈಕೆಳಗಿನ ಅಧಿಕಾರಿಗಳಿಂದ ದೇವಾಲಯಗಳ ನಾಶ ಮಾಡಿಸಿದ ಆತನನ್ನು ಪರಮತ ಸಹಿಷ್ಣು ಎಂದರೆ ಅದು ಇತಿಹಾಸದ ವಿಕೃತಿಯಲ್ಲದೆ ಇನ್ನೇನು? ಅವನ ಮುಂದಿನ ಸಂತತಿಗಳಾಗಿದ್ದ ಮದಿರೆ-ಮಾನಿನೀಲೋಲರಾಗಿದ್ದ ಜಹಾಂಗೀರ್ ಹಾಗೂ ಮದನಕಾಮರಾಜ ಷಹಜಹಾನರಂತೂ ಅಕ್ಬರನ ಕಾರ್ಯಕ್ಕೆ ಮತ್ತಷ್ಟು ಮೆರುಗು ತಂದರು! ಇನ್ನು ಇವರೆಲ್ಲರ ಮೂರ್ತರೂಪ ಔರಂಗಜೇಬನನ್ನು ಕೇಳಬೇಕೆ? ಅವನ ಕಾಲದಲ್ಲಿ ದೇವಾಲಯ ನಾಶ ಎನ್ನುವುದು ದಿನನಿತ್ಯದ ಆಟ!
               ಮುಲ್ತಾನ್, ಥಾನೇಶ್ವರ್, ಕಾಂಗ್ರಾ, ಮಥುರಾ, ಸೋಮನಾಥ, ವಾರಾಣಸಿ, ಉಜ್ಜಯಿನಿ, ಚಿದಂಬರಂ, ಪುರಿ, ದ್ವಾರಕ, ಗಿರ್ ನಾರ್, ಕಾಂಚೀಪುರಗಳು ಸತತವಾಗಿ ದಾಳಿಗೊಳಗಾದವು. ಕೇವಲ ದಾಳಿ ಮಾತ್ರವಲ್ಲ; "ಅಲ್ಲಿನ ಶಿಲ್ಪಕಲಾ ಸಂಪತ್ತನ್ನು ಲೂಟಿ ಮಾಡಲಾಯಿತು", "ಉರುಳಿಸಲಾಯಿತು", "ಹಾಳುಗೆಡವಲಾಯಿತು", "ಜ್ವಲಿಸುವ ವಸ್ತುಗಳಿಂದ ಸುಡಲಾಯಿತು", "ಕುದುರೆಗಳಿಂದ ತುಳಿಸಿ ನಿಶ್ಯೇಷ ಮಾಡಲಾಯಿತು", "ಕುರುಹು ಕೂಡಾ ಉಳಿಯದಂತೆ ಅವುಗಳ ತಳಪಾಯದಿಂದಲೇ ನಿರ್ನಾಮಗೊಳಿಸಲಾಯಿತು" ಎಂದು ಸ್ವತಃ ಆ ಕಾಲದ ಮುಸ್ಲಿಮ್ ಇತಿಹಾಸಕಾರರೇ ಇವುಗಳೆಲ್ಲಾ ತಮ್ಮರಸರ ಸಾಧನೆಯೆಂಬಂತೆ ಹಾಡಿ ಹೊಗಳಿದ್ದಾರೆ. ಘಜನಿ ಮಹಮ್ಮದ್ ಮಥುರಾದ ಸುಮಾರು 1000 ದೇವಾಲಯಗಳನ್ನು, ಕನೋಜ ಹಾಗೂ ಅದರ ಸುತ್ತಮುತ್ತಲಿನ ಹತ್ತುಸಾವಿರ ದೇವಾಲಯಗಳನ್ನು ಲೂಟಿ ಮಾಡಿ ಸುಟ್ಟು ಹಾಕಿದನು! ಕೇವಲ ಕಾಂಗ್ರಾದ ಮೇಲೆ ಘಜನಿ ದಾಳಿ ಮಾಡಿದಾಗ ಏಳು ಕೋಟಿ ದಿರ್ಹಾಮ್, ಏಳು ಲಕ್ಷ ಮಣ ಚಿನ್ನ-ಬೆಳ್ಳಿಗಳನ್ನು ದೋಚಿದ್ದನೆಂದರೆ ಆತ ಭಾರತದ ಮೇಲೆ ಹದಿನೇಳು ಸಲ ದಾಳಿ ಮಾಡಿದಾಗ ದೋಚಿದ ಐಶ್ವರ್ಯ ಎಷ್ಟಿರಬಹುದು? ಅವನ ಉತ್ತರಾಧಿಕಾರಿಗಳಲ್ಲೊಬ್ಬನಾದ ಇಬ್ರಾಹಿಮನು ಗಂಗಾ - ಯಮುನಾ ದೋ ಅಬ್ ಪ್ರಾಂತ್ಯದಲ್ಲಿ  ಹಾಗೂ ಮಾಳವದಲ್ಲಿ ತಲಾ 1000 ದೇವಾಲಯಗಳನ್ನು ನೆಲಸಮ ಮಾಡಿದನು. ಘೋರಿ ಅಹಮದನು ವಾರಾಣಸಿಯ 1000 ದೇವಾಲಯಗಳನ್ನು ನಾಶಪಡಿಸಿದರೆ ಕುತುಬುದ್ದೀನ್ ಐಬಕ್ ಆನೆಗಳನ್ನು ಬಳಸಿಕೊಂಡು ದೆಹಲಿಯ 1000 ದೇವಾಲಯಗಳನ್ನು, ಬಿಜಾಪುರದ ಒಂದನೇ ಅಲಿ ಆದಿಲ್ ಶಾನು ಕರ್ನಾಟಕದಲ್ಲಿ 300ಕ್ಕೂ ಹೆಚ್ಚು ದೇವಾಲಯಗಳನ್ನು ನೆಲಸಮ ಮಾಡಿದರು. ಅಲ್ಲದೆ ಕುತುಬುದ್ದೀನ್ ಐಬಕ್ ವಿಶಾಲದೇವದ ಸಂಸ್ಕೃತ ವಿಶ್ವವಿದ್ಯಾಲಯವನ್ನು ನಾಶಗೊಳಿಸಿದ. ಬಖ್ತಿಯಾರ್ ಖಿಲ್ಜಿಯು ವಿಶ್ವವಿದ್ಯಾಲಯಗಳ ಪಟ್ಟಣವಾಗಿದ್ದ ಬಿಹಾರದ ಓದಂತಿಪುರವನ್ನು ಸೂರೆಮಾಡಿದ. ಅಲ್ಲಿನ ದೇವಾಲಯಗಳೂ ಸುಟ್ಟುರಿದು ಹೋದವು. ಇಲ್ತಮಿಶ್ ಮಾಳವ-ವಿದಿಶಾಗಳಲ್ಲಿದ್ದ ದೇವಾಲಯಗಳನ್ನು ನಾಶ ಮಾಡಿದ ಮೇಲೆ ಉಜ್ಜಯಿನಿಯ ಮಹಾಕಾಲ ದೇವಾಲಯವನ್ನು ಧ್ವಂಸ ಮಾಡಿ ನೆಲಸಮಗೊಳಿಸಿದ. ಅಲ್ಲಿದ್ದ ಶಕಪುರುಷ ವಿಕ್ರಮನ ಮೂರ್ತಿಯನ್ನು ಕಿತ್ತೆಸೆದ. ಹಲವಾರು ವಿಗ್ರಹಗಳನ್ನು ದೆಹಲಿಯ ಮಸೀದಿಗಳಲ್ಲಿ ಹಾಸುಗಲ್ಲಾಗಿ ಹಾಕಿದ.  ಖಾಯೀಮ್ ಶಾ ಎಂಬ ಸೂಫಿ ಫಕೀರ ತಿರುಚಿರಾಪಳ್ಳಿಯಲ್ಲಿ 12 ದೇವಾಲಯಗಳನ್ನು ನಾಶಪಡಿಸಿದನು. ಇವೆಲ್ಲವೂ ಲಭ್ಯವಾಗಿರುವ ದಾಖಲೆಗಳಾದರೆ ಇನ್ನು ಮುಸ್ಲಿಮ್ ಇತಿಹಾಸಕಾರರ ವರ್ಣನೆಗಳಲ್ಲಿರುವ ಆದರೆ ಇಷ್ಟರವರೆಗೆ ಖಚಿತ ಆಧಾರ ಸಿಗದಿರುವ, ಹಾಗೂ ಅವರು ಬರೆಯದೇ ಉಳಿದವುಗಳು ಇನ್ನೆಷ್ಟೋ?
                ಅರಬರಿಗೆ "ಸೋಮನಾಥ" ಇಸ್ಲಾಂ ಪೂರ್ವದ ಕಾಲದಿಂದಲೇ ಪರಿಚಿತವಿತ್ತು. ಬಹುಷಃ ಗುಜರಾತಿಗೆ ಭೇಟಿ ನೀಡುತ್ತಿದ್ದ ಅರಬ್ ವರ್ತಕರು ಈ ವೈಭವೋಪೇತ ಶಿವ ದೇವಾಲಯದ ಬಗ್ಗೆ ತಮ್ಮ ದೇಶದ ಜನರಿಗೆ ತಿಳಿಸಿದ್ದಿರಬೇಕು. ಇಸ್ಲಾಂ ಪೂರ್ವದ ಅರಬರಿಗೆ ಸೋಮನಾಥ ಒಂದು ಯಾತ್ರಾ ಸ್ಥಳವಾಗಿರುವ ಸಾಧ್ಯತೆಯೂ ಬಹಳಷ್ಟಿದೆ. ಏಕೆಂದರೆ ಅವರು ಹಿಂದೂ 'ವಿಗ್ರಹಾರಾಧಕರಾಗಿದ್ದು' ಸೋಮನಾಥ ಬಗ್ಗೆ ಭಕ್ತಿ ಶೃದ್ಧೆಗಳನ್ನು ಹೊಂದಿದ್ದರೆ ಆಶ್ಚರ್ಯವಿಲ್ಲ. ಅವರ ಧಾರ್ಮಿಕ ಮೌಲ್ಯಗಳಲ್ಲಿ ಇಸ್ಲಾಂ ವ್ಯಾಪಕ ಬದಲಾವಣೆ ತಂದರೂ ಕೂಡಾ ಈ ಭಕ್ತಿಯ ಒಂದು ಭಾಗ ನಂತರ ಕೂಡಾ ಉಳಿದಿರಬೇಕು. ಇದಕ್ಕೆ ಹಿಂದಿನ ಅರಬರ ದೇವತೆ ಮನಾತ್ ಕಥೆಯಲ್ಲಿ ಅದರ ಒಂದು ಸುಳಿವು ಸಿಗುತ್ತದೆ. ಪ್ರವಾದಿಗಳು ಮನಾತ್ ದೇವತೆಯ ನಾಶಕ್ಕೆ ಯತ್ನಿಸಿದಾಗ ಆಕೆ ಅಲ್ಲಿಂದ ತಪ್ಪಿಸಿಕೊಂಡು ಸೋಮನಾಥ ದೇವಾಲಯದಲ್ಲಿ ಆಶ್ರಯ ಪಡೆದಿರಬೇಕು ಎನ್ನುತ್ತದೆ ಈ ಕಥೆ. ಈ ಕಥೆಯನ್ನು ಸಮರ್ಥಿಸುವ ಸಲುವಾಗಿ ಸೋ ಮತ್ತು ಮನಾತ್ ಎಂದು ವಿಭಜಿಸಲಾಯಿತು. ಹಲವು ಚರಿತ್ರೆಗಳಲ್ಲಿ ಇದರ ಉಲ್ಲೇಖವಿದೆ ಎನ್ನುತ್ತಾರೆ ಭಾರತದ ನೈಜ ಇತಿಹಾಸ ಬರೆದ ದಿವಂಗತ ಸೀತಾರಾಮ್ ಗೋಯಲ್. ಮುಂದೆ ಬಂದ ಮತ ಪ್ರವರ್ತಕರು ಕೇವಲ ವಿಗ್ರಹಗಳನ್ನು ಭಂಜಿಸುವುದು ಮಾತ್ರವಲ್ಲ, ಅವುಗಳ ಮೇಲಿನ ಆಭರಣಗಳನ್ನೂ ದೋಚಿದಾಗಲೂ, ಅವುಗಳನ್ನು ಒಡೆದಾಗಲೂ, ಅಪವಿತ್ರಗೊಳಿಸಿದಾಗ್ಯೂ ಈ ವಿಗ್ರಹಗಳಿಗೆ ತಿಳಿಯುವುದಿಲ್ಲ ಎಂದು ಏಕದೇವೋಪಾಸನೆಯ ಅರ್ಥವನ್ನು ಹಿಗ್ಗಿಸಿದರು. ಆದ್ದರಿಂದ ಸೀಸ್ತಾನಿನಲ್ಲಿ ಓರ್ವ ವಿಗ್ರಹ ಭಂಜಕನು ವಿಗ್ರಹದ ಕೈಗಳನ್ನು ಮುರಿದು, ಕಣ್ಣುಗಳನ್ನೇ ಕಿತ್ತು ಹಾಕಿದನು. ಮೊಹಮದ್ ಬಿನ್ ಕಾಸಿಂ ಮುಲ್ತಾನಿನಲ್ಲಿ ವಿಗ್ರಹದ ಕತ್ತಿನ ಹಾರವನ್ನು ತೆಗೆದು ಅಲ್ಲಿ ಗೋಮಾಂಸವನ್ನಿರಿಸಿದ! ಅಪಾರ ಪ್ರಮಾಣದ ಹಣ ಅಥವಾ ಚಿನ್ನವನ್ನು ಕೊಟ್ಟು ವಿಗ್ರಹಗಳನ್ನು ಬಿಡಿಸಿಕೊಳ್ಳಲು ಹಿಂದೂಗಳು ಪ್ರಯತ್ನಿಸಿದ್ದರು. ಆದರೆ ಆ ಮತಾಂಧರಿಗೆ "ಕೇವಲ ಹಣಕ್ಕಿಂತ" "ಅಲ್ಲಾನ ದೃಷ್ಟಿಯಲ್ಲಿ ಯೋಗ್ಯರಾಗುವುದು" ಬೇಕಾಗಿತ್ತು. ಇದನ್ನೇ ಘಜನಿಯು ಅಲ್ಲಾನು ಒಂದು ದಿನ ತನ್ನ ಹೆಸರನ್ನು ಬರೆಯುವಾಗ ಅಲ್ಲಿ ತಾನೊಬ್ಬ "ವಿಗ್ರಹ ಭಂಜಕ"ನಾಗಿ ಕಾಣಿಸಿಕೊಳ್ಳಬೇಕೆ ಹೊರತು "ವಿಗ್ರಹ ಮಾರಾಟಗಾರನಾಗಿ" ಅಲ್ಲ ಎಂದು ಘೋಷಿಸಿಕೊಂಡಿದ್ದನು! ಹಿಂದೂ ದೇವಾಲಯಗಳ ನಾಶವನ್ನು ಆರ್ಥಿಕ ಹಿನ್ನೆಲೆಯಲ್ಲಿ ವ್ಯಾಖ್ಯಾನಿಸಿದ "ಮಹಾನ್ ಇತಿಹಾಸಕಾರ"ರಿಗೆ ಈ ಅಂಶಗಳೇಕೆ ಗೋಚರಿಸಲಿಲ್ಲ?
              ಘಜನಿ, ಸೋಮನಾಥವೂ ಸೇರಿದಂತೆ ದೇವರ ಹಲವು ಮೂರ್ತಿಗಳನ್ನು ಕೈಯಾರೆ ಸ್ವತಃ ಒಡೆದು ಹಾಕಿದ್ದ. ಆ ಪ್ರತಿಮೆಗಳ ಕೆಲವು ತುಂಡುಗಳನ್ನು ತನ್ನ ರಾಜಧಾನಿ ಘಜನಿಯಲ್ಲಿ ಇರಿಸಿಕೊಂಡು ಉಳಿದವುಗಳನ್ನು ಮೆಕ್ಕಾ, ಮದೀನಾ, ಬಾಗ್ದಾದ್ ಗಳಿಗೆ ಕಳುಹಿಸಿಕೊಟ್ಟಿದ್ದನು. ಶಿವಲಿಂಗವನ್ನು ತುಂಡರಿಸಿ ಘಜನಿಯ ಜಾಮೀ ಮಸೀದಿಯ ಮೆಟ್ಟಿಲುಗಳನ್ನಾಗಿ ಮಾಡಿದ. ಮುಂದಿನ ಸುಲ್ತಾನರೂ ಇವನನ್ನೇ ಅನುಸರಿಸಿದರು. 1258ರಲ್ಲಿ ಚೆಂಗಿಸ್ ಖಾನನ ಮೊಮ್ಮಗ ಹಲಾಕುವು ಖಲೀಪನನ್ನು ಮಣ್ಣುಮುಕ್ಕಿಸಿ ಬಾಗ್ದಾದ್ ನಗರವನ್ನು ನೆಲಸಮಮಾಡಿದಾಗ ಹಿಂದೂಸ್ಥಾನದಲ್ಲಿ ಸಂಪಾದಿಸಿದ ಈ ಪ್ರತಿಮೆಗಳ ಭಗ್ನ ಭಾಗಗಳನ್ನು ತಮ್ಮ ಪವಿತ್ರ ಸ್ಥಾನಗಳಿಗೆ ಸಾಗಿಸುವ ಅವಕಾಶದಿಂದ ವಂಚಿತರಾದ ಮತಾಂಧರು ಅವುಗಳನ್ನು ಲಾಹೋರ್, ಮುಲ್ತಾನ್, ದೆಹಲಿ, ಲಖ್ನೋ, ದೌಲತಾಬಾದ್, ಗುಲ್ಬರ್ಗಾ, ಮಥುರಾ, ಬಹರಾನ್ ಪುರ, ಬೀದರ್, ಮಾಂಡು, ಅಹಮದಾಬಾದ್, ಆಗ್ರಾ, ಬಿಜಾಪುರ, ಗೋಲ್ಕೊಂಡಾ, ಹೈದರಾಬಾದ್, ಔರಂಗಾಬಾದ್ ಗಳಂತಹ ಮಸೀದಿಗಳ ಮುಂದೆ ಮೆಟ್ಟಿಲುಗಳಾಗಿ ಚೆಲ್ಲಾಡಿದರು. ಔರಂಗಜೇಬನ ಕಾಲದಲ್ಲಿ ವಿಗ್ರಹದ ಭಾಗಗಳನ್ನು ಗಾಡಿಗಳಲ್ಲಿ ತುಂಬಿಸಿ ತರಲಾಗುತ್ತಿತ್ತು. ಬಿಜಾಪುರದ ಒಂದನೇ ಅಲಿ ಆದಿಲ್ ಷಾ ಕರ್ನಾಟಕದಲ್ಲಿ ದಂಡಯಾತ್ರೆಯನ್ನು ಕೈಗೊಂಡಾಗ ಐದು ಸಾವಿರಕ್ಕೂ ಹೆಚ್ಚು ವಿಗ್ರಹಗಳನ್ನು ಸ್ವತಃ ಒಡೆದು ಹಾಕಿದ್ದ. ಫಿರೋಜ್ ಷಾ ತುಘಲಕ್ ಪುರಿ ದೇವಸ್ಥಾನದ ವಿಗ್ರಹಕ್ಕೆ ರಂಧ್ರ ಕೊರೆದು ಅದನ್ನು ಹಗ್ಗದಿಂದ ಕಟ್ಟಿ ದೆಹಲಿಯವರೆಗೂ ರಸ್ತೆಯಲ್ಲಿ ಎಳೆದುಕೊಂಡು ಹೋದನು. ಕಾಂಗ್ರಾದ ಜ್ವಾಲಾಮುಖಿ ದೇವಿಯ ವಿಗ್ರಹವನ್ನೊಡೆದು ಅದರ ಚೂರುಗಳನ್ನು ಗೋಮಾಂಸದಲ್ಲಿ ಬೆರೆಸಿ ಅದನ್ನು ಚೀಲಗಳಲ್ಲಿ ತುಂಬಿ ಬ್ರಾಹ್ಮಣರ ಕೊರಳಿಗೆ ನೇತು ಹಾಕಲಾಯಿತು. ಕಾಂಗ್ರಾದ ವಿಗ್ರಹದ ಭಗ್ನ ಭಾಗಗಳನ್ನು ಕಟುಕರಿಗೆ ನೀಡಿ ಮಾಂಸ ಮಾರಲು ಅವುಗಳನ್ನು ತೂಕದ ಕಲ್ಲುಗಳನ್ನಾಗಿ ಬಳಸುವಂತೆ ಆಜ್ಞೆ ಮಾಡಿದನು. ಅದೇ ವಿಗ್ರಹದ ತಾಮ್ರದ ಛತ್ರವನ್ನು ಕರಗಿಸಿ ಹಂಡೆಯನ್ನು ತಯಾರಿಸಲಾಯಿತು. ಮುಂದೆ ಮುಸ್ಲಿಮರು ನಮಾಜಿಗೆ ಹೋಗುವ ಮುನ್ನ ಕೈ-ಕಾಲು, ಮುಖ ತೊಳೆಯಲು ಅದನ್ನು ಬಳಸಲಾಗುತ್ತಿತ್ತು. ಮಾಳವದ ಮೊಹಮ್ಮದ್ ಖಿಲ್ಜಿಯು ಕುಂಭಲಗಢದ ವಿಗ್ರಹವನ್ನು ಸುಟ್ಟು ಅದನ್ನು ಹಿಂದೂಗಳು ವೀಳ್ಯಕ್ಕೆ ಸುಣ್ಣವಾಗಿ ಬಳಸುವಂತೆ ಮಾಡಿದನು. ಮಲ್ಲಿಕಾಫರನು ಚಿದಂಬರಂನ ಸುವರ್ಣ ದೇವಾಲಯ, ಶ್ರೀರಂಗಮ್-ಕಣ್ಣಾನೂರ್ ಸುತ್ತಲಿನ ದೇವಾಲಯಗಳನ್ನು ಧ್ವಂಸಗೊಳಿಸಿದನು. ಮಧುರೆಯ ಸೊಕ್ಕನಾಥ ದೇವಾಲಯಕ್ಕೆ ಬೆಂಕಿ ಇಟ್ಟನು. ತೈಮೂರ್, ಖಟ್ಮಂಡುವಿನ ಸ್ವಯಂಭೂನಾಥ ದೇವಾಲಯವನ್ನು ಧ್ವಂಸಗೊಳಿಸಿದ ಇಲ್ಯಾಸ್ ಶಾಹ್, ಅಯೋಧ್ಯೆಯ ರಾಮಮಂದಿರವನ್ನು ನಾಶ ಮಾಡಿದ ಬಾಬರ್ ಹಾಗೂ ಅವರ ಮುಂದಿನ ಸಂತಾನ ಈ ಕೃತ್ಯಗಳನ್ನು ಅನುಕರಿಸುತ್ತಲೇ ಬಂದಿತು.
             ಇನ್ನು ಮಹಾ ಜಾತ್ಯಾತೀತ ಕವಿ ಹಾಗೂ ಸಂತ ಎಂದು 'ಮಹಾನ್ ಇತಿಹಾಸಕಾರ'ರಿಂದ ಸ್ತುತಿಸಲ್ಪಟ್ಟ ಅಮೀರ್ ಖುಸ್ರು ಈ ದೇವಾಲಯಗಳ ನಾಶದ ಬಗ್ಗೆ ಬರೆದ ವರ್ಣನೆ ನೋಡಿದರೆ ಆತ ಹಾಗೂ ಆತನನ್ನು ಸ್ತುತಿಸಿದವರು ಎಂತಹವರು ಎನ್ನುವುದರ ಅರಿವಾಗುತ್ತದೆ. ಆತ ಬರೆಯುತ್ತಾನೆ..."ಸೋಮನಾಥ ದೇವಾಲಯವನ್ನು ಪವಿತ್ರ ಮೆಕ್ಕಾದ ಕಡೆಗೆ ತಲೆ ಬಾಗುವಂತೆ ಮಾಡಲಾಯಿತು. ದೇವಾಲಯವು ತನ್ನ ತಲೆಯನ್ನು ತಗ್ಗಿಸಿ ಸಮುದ್ರಕ್ಕೆ ಹಾರಿತು.ದೇವಳವು ಮೊದಲು ಪ್ರಾರ್ಥನೆ ಸಲ್ಲಿಸಿ ನಂತರ ಸ್ನಾನ ಮಾಡಿತು........ಲಿಂಗ ಮಹಾದೇವ ಎನ್ನುವ ಚಿದಂಬರಂ ಕಲ್ಲಿನ ವಿಗ್ರಹದ ಮೇಲೆ ಕಾಫಿರ ಹೆಂಗಳೆಯರು ತಮ್ಮ ಯೋನಿಗಳನ್ನು ಉಜ್ಜುತ್ತಿದ್ದರು. ಇಸ್ಲಾಮಿನ ಕುದುರೆಗಳು ಅದನ್ನು ಒಡೆಯುವವರೆಗೆ ಇದು ನಡೆದುಕೊಂಡುಬಂದಿತ್ತು. ವಿಗ್ರಹಗಳೆಲ್ಲಾ ಎಷ್ಟು ಎತ್ತರಕ್ಕೆ ಹಾರಿದವೆಂದರೆ ಒಂದೇ ಜಿಗಿತಕ್ಕೆ ಲಂಕಾದ ಕೋಟೆಯನ್ನು ಮುಟ್ಟಿದವು...ಖಲೀಫರ ಖಡ್ಗ ಧಾರೆಯು ತನ್ನ ಮಾರ್ಗದರ್ಶನದ ಬೆಳಕಿನಿಂದ ಹಿಂದೂಸ್ಥಾನದ ಕತ್ತಲೆಯನ್ನೆಲ್ಲಾ ಕಳೆದಿದೆ...ಜಿನ್ ಗಳ ಕಾಲದಿಂದಲೇ ಸೈತಾನತ್ವದಿಂದ ತುಂಬಿಕೊಂಡಿದ್ದ ಹಿಂದೂ ದೇವರುಗಳ ಹಲವು ಕೇಂದ್ರಗಳನ್ನು ನೆಲಸಮ ಮಾಡಲಾಯಿತು. ಸುಲ್ತಾನರು ದೇವಗಿರಿಯ ದಂಡಯಾತ್ರೆಯಿಂದ ಆರಂಭಿಸಿ, ಹಲವು ದೇವಾಲಯಗಳನ್ನು, ಅಲ್ಲಿನ ಮೂರ್ತಿಗಳನ್ನು ಒಡೆದು ಹಾಕಿದ ಪರಿಣಾಮವಾಗಿ ಕಾಫಿರರ ಎಲ್ಲಾ ಅಶುದ್ಧಿಗಳು ದೂರಾದವು. ದೇವಕಟ್ಟಳೆಯ ಬೆಳಕು ಈ ಎಲ್ಲಾ ಅಪವಿತ್ರ ಕ್ಷೇತ್ರಗಳನ್ನು ಬೆಳಗುವಂತಾಗಿದೆ...ಅಲ್ಲಾನಿಗೆ ಶ್ಲಾಘನೆಯಿರಲಿ" ದಕ್ಷಿಣ ಭಾರತದಲ್ಲಿ ಮುಸ್ಲಿಮ್ ಪಡೆಗಳು ವಿಜಯ ಸಾಧಿಸಿದಾಗ ಹೀಗೆಲ್ಲಾ ಬರೆದ ಖುಸ್ರು "ಮಹಾನ್ ಇತಿಹಾಸಕಾರ"ರಿಗೆ ಯಾವ ಕಣ್ಣಿನಿಂದ "ಸೆಕ್ಯುಲರ್" ಆಗಿ ಕಂಡನೋ ದೇವರೇ ಬಲ್ಲ. ಈಗ ಸಂಶಯ ಉದಿಸುವುದು ಸೆಕ್ಯುಲರ್ ಪದದ ಬಗೆಗೆ. ಹಿಂದೂ ಎನ್ನುವ ಎಲ್ಲದಕ್ಕೂ ಮಸಿ ಬಳಿಯುತ್ತಾ ಇಸ್ಲಾಮೀ ಎನ್ನುವ ಎಲ್ಲದಕ್ಕೂ ಸುಂದರತೆಯ ಲೇಪ ಹಚ್ಚುವ ಛದ್ಮವೇಷವೇ ಈ ಸೆಕ್ಯುಲರಿಸಂ ಅಲ್ಲದೆ ಇನ್ನೇನು?
                   ಇದಕ್ಕೆಲ್ಲಾ ಮೂಲ ಕಾರಣ ಏನು ಅನ್ನುವಾಗ ಸಿಗುವ ಉತ್ತರ ಆ ಮತ ಹಾಗೂ ಬೋಧನೆ! ಅದು ಆರಂಭವಾದದ್ದಾದರೂ ಹೇಗೆ? ಒಂದಾದ ಮೇಲೊಂದರಂತೆ ಪ್ರದೇಶಗಳ ಮೇಲೆ ದಾಳಿ ಮಾಡಿ, ಅಲ್ಲಿನ ಮುಗ್ಧ ಜನರನ್ನು ಕತ್ತರಿಸಿ ಹಾಕಲಾಯಿತು, ಬಲ ಪ್ರಯೋಗದ ಮೂಲಕ ಮತಾಂತರಿಸಲಾಯಿತು, ಭಾರೀ ಸಂಖ್ಯೆಯ ಸ್ತ್ರೀ-ಪುರುಷ-ಮಕ್ಕಳನ್ನು ಗುಲಾಮರನ್ನಾಗಿ, ಉಪಪತ್ನಿಯರನ್ನಾಗಿ ಮಾಡಿ ಆ ಎಲ್ಲಾ ಪ್ರದೇಶಗಳ ಕಲೆ-ಸಂಸ್ಕೃತಿ-ಕಟ್ಟಡಗಳನ್ನು ನಾಶ ಮಾಡಲಾಯಿತು. ಗ್ರಂಥಾಲಯಗಳನ್ನು ಸುಟ್ಟು, ಸಾಧುಗಳು-ವಿದ್ವಾಂಸರುಗಳನ್ನು ಕೊಂದುಹಾಕಲಾಯಿತು. ಖುರಾನಿನ ಹೆಚ್ಚಿನ ಭಾಗವನ್ನು ಬೈಬಲಿನಿಂದ ಎರವಲು ಪಡೆದದ್ದು. ಅಲ್ಲದೆ ಇಸ್ಲಾಂ ಪೂರ್ವ ಅರಬರ ದೇವತೆಯಾದ ಅಲ್ಲಾನನ್ನು ಅಪಹರಿಸಿ ಉಳಿದ ದೇವತೆಗಳೆಲ್ಲವನ್ನು ಸಹಿಸದ ತಮ್ಮ ಉಗ್ರ ದೇವತೆಯನ್ನಾಗಿಸಿದ ಇಸ್ಲಾಂನ ಅನುಯಾಯಿಗಳು ಉಗ್ರರಾಗದೇ ಇದ್ದಾರೆಯೇ? ಅವರ "ನಬಿ" ಎನ್ನುವ ಪ್ರವಾದಿ ಮೊಹಮ್ಮದನ ಒಂದು ಹೆಸರನ್ನು ಹೀಬ್ರೂ ಪದಭಂಡಾರದಿಂದ ಪಡೆದದ್ದು. ಹೀಗೆ ದೇವರು-ತತ್ವ ಎಲ್ಲವನ್ನು ಬೇರೆಯವರಿಂದ ಕೊಳ್ಳೆ ಹೊಡೆದು ತಮ್ಮದೇ ಅಭಿಪ್ರಾಯ(ಮತ)ವನ್ನು ಇತರರ ಮೇಲೆ ಹೇರುವ ಈ ಸಮುದಾಯಕ್ಕೆ ಕೊಳ್ಳೆಹೊಡೆಯುವ-ಅಪಹರಿಸುವ-ಬಲಾತ್ಕರಿಸುವ ಗುಣ ಜನ್ಮಜಾತ. ಅವರು ಪ್ರವಾದಿಯ ಮಾತುಗಳನ್ನಷ್ಟೇ ಅನುಸರಿಸಬಹುದೇ ಹೊರತು ತಮ್ಮ ವಿಚಾರ ಶಕ್ತಿಯನ್ನು ಬಳಸುವಂತಿಲ್ಲ!
             ಇಸ್ಲಾಮೀ ಕಥೆಗಳು ಕೂಡಾ ಪ್ರವಾದಿ ಮೊಹಮ್ಮದನನ್ನು ಹುಟ್ಟಿನಿಂದಲೇ ವಿಗ್ರಹ ಭಂಜಕನಾಗಿ, ಅಲ್ಲಾ ಹೊರತುಪಡಿಸಿ ಇತರ ದೇವತೆಗಳ ಬದ್ಧ ದ್ವೇಷಿಯಾಗಿಯೇ ಚಿತ್ರಿಸಿವೆ. ಕಾಬಾದಲ್ಲಿ ಆತ ತನ್ನ ಅನುಯಾಯಿಗಳ ಜೊತೆ ಸೇರಿ ಯಾರಿಗೂ ಕಾಣದಂತೆ ಅಲ್ಲಿನ ವಿಗ್ರಹವನ್ನು ನಾಶ ಮಾಡಿದ. ಆ ಬಳಿಕ ಮೆಕ್ಕಾದಲ್ಲಿ ಆ ಕಾರ್ಯ ಮಾಡಲು ಯತ್ನಿಸಿದನಾದರೂ ಅದು ವಿಫಲವಾಯಿತು. ಮೆಕ್ಕಾದಿಂದ ಹೆದರಿ ಪಲಾಯನಗೈಯ್ಯುವ ವೇಳೆಯಲ್ಲಿ ಮದೀನಾದಿಂದ ಮೂರು ಮೈಲು ದೂರವುಳ್ಳ ಕುಬಾ ಎನ್ನುವಲ್ಲಿ ಇಸ್ಲಾಂ ಇತಿಹಾಸದ ಮೊದಲ ಮಸೀದಿಯನ್ನು ಆತ ಕಟ್ಟಿದ. ಮುಂದೆ ಮದೀನಾದಲ್ಲಿ ಈತನ ಅನುಯಾಯಿಗಳು ಹೆಚ್ಚಾದೊಡನೆ ಸ್ಮಶಾನವಿದ್ದ ಜಾಗದಲ್ಲಿ ಅಲ್ಲಿನ ವಿಗ್ರಹಾರಾಧಕರ ಸಮಾಧಿಗಳನ್ನು ಕಿತ್ತೆಸೆದು, ಖರ್ಜೂರದ ಮರಗಳನ್ನು, ಹಳೆಯ ಕಟ್ಟಡಗಳನ್ನು ನಾಶ ಮಾಡಿ ಎರಡನೆಯ ಮಸೀದಿಯನ್ನು ಸ್ಥಾಪಿಸಲಾಯಿತು. ತನ್ನ ದರೋಡೆಕೋರ-ವಿಗ್ರಹಭಂಜಕ ಸೈನ್ಯ ಬಲವಾದೊಡನೆ ಆತ ಮೆಕ್ಕಾದ ಮೇಲೆ ದಾಳಿ ಮಾಡಿದ. ಅಲ್ಲಿದ್ದವರನ್ನೆಲ್ಲಾ ಬಲತ್ಕಾರದಿಂದ ಮತಾಂತರಿಸಿ, ಒಪ್ಪದವರನ್ನು ನಿವಾರಿಸಿ ಮುಂದೆ ಕಾಬಾದಲ್ಲಿದ್ದ 360 ವಿಗ್ರಹಗಳನ್ನು ನಾಶಪಡಿಸಿದ. ಕಾಬಾದ ಪ್ರಧಾನ ವಿಗ್ರಹ ಹೊಬಾಲ್ ನನ್ನು ಹೊಸ್ತಿಲಾಗಿ ಬಳಸಲಾಯಿತು. ಅಂದಿನಿಂದ ವಿಗ್ರಹಭಂಜನೆಯು ಇಸ್ಲಾಮ್ ಮತಶಾಸ್ತ್ರದ ಪ್ರಮುಖ ಹಾಗೂ ಶಾಶ್ವತ ಅಂಗವಾಗಿ ಉಳಿದುಕೊಂಡಿತು. ಆದರೆ ಅಲ್ಲಿ ಒಂದು "ಕಲ್ಲ"ನ್ನು ಉಳಿಸಲಾಯಿತು. ಅದು ನೇರವಾಗಿ ಸ್ವರ್ಗದಿಂದ ಇಳಿದು ಬಂದಿರುವುದಾಗಿಯೂ ತನ್ನ ಹಿಂಬಾಲಕರು ತನ್ನಂತೆಯೇ ಆ ಶಿಲೆಗೆ ಮುತ್ತಿಕ್ಕಿದರೆ ಆತನಿಗೆ ಒಳ್ಳೆಯದಾಗುತ್ತದೆ ಎಂದು ತಿಳಿಸಲಾಯಿತು. ಹೀಗೆ ಕತ್ತಿಯ ಮೊನೆಯಿಂದ ಹೆದರಿಸಿ-ಬೆದರಿಸಿ-ಕೊಂದು-ತಿಂದು ಆರಂಭವಾದ ಈ ಮತ ಅದೇ ಪರಂಪರೆಯನ್ನು ಮುಂದುವರಿಸಿ ವಿಶ್ವದಾದ್ಯಂತ ಹಬ್ಬಿತು.  ಎದುರಿಗೆ ಸಿಕ್ಕಿದೆಲ್ಲವನ್ನೂ ನಾಶಮಾಡುತ್ತಾ ಬಂದಿತು... ಯೂರೋಪಿನ ಚರ್ಚುಗಳಿಗೂ, ಇರಾನಿನಲ್ಲಿನ ಜರತುಷ್ಟ್ರರ ಅಗ್ನಿ ದೇವಾಲಯಗಳಿಗೂ ಇದೇ ಗತಿಯಾಯಿತು. ಆದರೆ ಅತೀ ಹೆಚ್ಚು ಹಾನಿಯಾದದ್ದು ಹಿಂದೂ ದೇವಾಲಯಗಳಿಗೇನೇ!
               ಪ್ರಾಚ್ಯಶಾಸ್ತ್ರ ಸಂಶೋಧನಾ ಉತ್ಖನನಗಳ ಮೂಲಕ ಅರೇಬಿಯಾ ಹಾಗೂ ಸಿಂಧ್ ನಡುವೆ ನಿರಂತರ ಸಂಪರ್ಕವಿತ್ತು ಎಂಬುದಾಗಿ ಸಾಬೀತಾಗಿದೆ. ಭಾರತೀಯ ವ್ಯಾಪಾರಿಗಳ ಜನವಸತಿಗಳು ಪಶ್ಚಿಮ ಸಮುದ್ರ, ಕೆಂಪು ಸಮುದ್ರ, ಪರ್ಶಿಯನ್ ಕೊಲ್ಲಿ, ಮೆಡಿಟರೇನಿಯನ್ ಸಮುದ್ರಗಳ ದಡದಲ್ಲಿರುವ ದೇಶಗಳ ಉದ್ದಗಲಕ್ಕೂ ಹಬ್ಬಿದ್ದವು. ಅಲ್ಲದೆ ಇಸ್ಲಾಂ ಉದಯದ ವೇಳೆ ಅರೇಬಿಯಾದಲ್ಲಿ ಹಿಂದೂಗಳ ವ್ಯಾಪಕ ಅಸ್ತಿತ್ವವಿತ್ತು ಎಂಬುದಕ್ಕೆ ಇಬನ್ ಇಶಾಕ್ ಸಾಕ್ಷ್ಯಗಳನ್ನು ನೀಡಿದ್ದಾನೆ. "ಆಲ್-ಹಾರಿತ್ ನಿಂದ ನಿಯೋಗವೊಂದು ಪ್ರವಾದಿಯ ಭೇಟಿಗಾಗಿ ಬಂದಿದ್ದಾಗ  ಪ್ರವಾದಿಗಳು ಅವರು ಹಿಂದೂಸ್ತಾನೀಯರಂತೆ ಕಾಣುತ್ತಾರೆ ಎಂದುಚ್ಚರಿಸಿದರು." ಎಂದು ಬರೆದಿದ್ದಾನೆ. ಹಾಗಾಗಿ ಕಾಬಾ ಒಂದು ಹಿಂದೂ ದೇವಾಲಯವಾಗಿತ್ತು ಎನ್ನುವ ವಾದಕ್ಕೆ ಪುಷ್ಠಿ ದೊರೆತಿದೆ. ಅಲ್ಲದೆ ಕಾಬಾ ಒಂದು ಪಾಗನ್ ದೇವಾಲಯ-ಅಬ್ರಹಾಂ ಅದನ್ನು ಸ್ಥಾಪಿಸಿದ ಎನ್ನುವುದು ಕಪೋಲಕಲ್ಪಿತ ಎನ್ನುವುದು ಸಂಶೋಧನೆಗಳಿಂದ ಸಾಬೀತಾಗಿದೆ. ಜನಪ್ರಿಯ ಮುಸ್ಲಿಮ್ ಇತಿಹಾಸಕಾರ ಫರಿಶ್ತಾ "ಇಸ್ಲಾಮ್ ಉದಯಕ್ಕೆ ಮುನ್ನ ಕಾಬಾದಲ್ಲಿನ ವಿಗ್ರಹಗಳನ್ನು ಪೂಜಿಸುವ ಸಲುವಾಗಿ ಹಿಂದೂಗಳು ಯಾತ್ರೆ ಕೈಗೊಳ್ಳುತ್ತಿದ್ದರು" ಎಂದಿದ್ದಾನೆ. ಅಲ್ಲದೆ ಪ್ರವಾದಿಯು ಲಾತ್ ಮತ್ತು ಮನಾತ್ ಎಂಬ ಸ್ತ್ರೀ ದೇವತೆಗಳನ್ನು ನಾಶ ಪಡಿಸಲೆತ್ನಿಸಿದಾಗ ಅವು ಸೋಮನಾಥದಲ್ಲಿ ರಕ್ಷಣೆ ಪಡೆದವು ಎನ್ನುವ ಮುಸ್ಲಿಮರ ನಂಬಿಕೆಯನ್ನು ನೋಡಿದಾಗ ಕಾಬಾದಲ್ಲಿದ್ದದ್ದು ಹಿಂದೂ ದೇವತೆಯೇ ಎನ್ನುವುದು ನಿಸ್ಸಂಶಯ. ಅಲ್ಲದೆ ಗುರುನಾನಕ್ ಕೂಡಾ ಕಾಬಾದಲ್ಲಿರುವುದು ಹಿಂದೂ ದೇವಾಲಯ-ಅಲ್ಲಿರುವುದು ಶಿವಲಿಂಗ. ಅಲ್ಲಿ ಪೂಜೆ ಮಾಡುತ್ತಿದ್ದವರ ನಡುವೆ ಹುಟ್ಟಿದವನೊಬ್ಬ ಅಥರ್ವವೇದವನ್ನು ತಿರುಚಿ ತನ್ನದೇ ಮತವನ್ನು ಖಡ್ಗಬಲದಿಂದ ಸೃಷ್ಟಿಸಿದ ಎಂದಿದ್ದಾರೆ. ಮುಸ್ಲಿಂ ಇತಿಹಾಸಕಾರರೂ ಅಲ್ಲಿದ್ದ ಹಿಂದೂಗಳು ಮುಸಲ್ಮಾನರ ಆಕ್ರಮಣವಾದಾಗ ಜೀವವುಳಿಸಿಕೊಳ್ಳಲು ಓಡಿಹೋದರು ಎಂದು ಉಲ್ಲೇಖಿಸಿದ್ದಾರೆ. ಒಟ್ಟಿನಲ್ಲಿ ಜಗತ್ತಿನ ಎಲ್ಲಾ ಕಡೆ ಇದ್ದ ಹಿಂದೂ ದೇವಾಲಯಗಳು ಇಸ್ಲಾಂ ಎಂಬ ಪಾಶವೀಯ ಮತದ ದುರಾಕ್ರಮಣಕ್ಕೆ ಬಲಿಯಾದವು....ಬಲಿಯಾಗುತ್ತಲೇ ಇವೆ!
         ಇಂದು ಉಳಿದಿರುವ ದೇವಾಲಯಗಳಾದರೂ ಸುಸ್ಥಿತಿಯಲ್ಲಿವೆಯೇ? ಹೆಚ್ಚಿನ ದೇವಾಲಯಗಳು ಮುಜರಾಯಿ ಇಲಾಖೆಗೊಳಪಟ್ಟಿದ್ದು ದೇವಾಲಯಗಳಿಂದ ಬರುವ ಆದಾಯವೇನೂ ಹಿಂದೂ ಸಮಾಜದ ಪೋಷಣೆಗೆ ಬಳಕೆಯಾಗುವುದಿಲ್ಲ. ಈಗಲೂ ಸರಕಾರದ ಅಸಡ್ಡೆಯಿಂದ, ಬುದ್ದಿಜೀವಿಗಳ ಚಿತಾವಣೆಯಿಂದ ದೇವಾಲಯಗಳು, ಅಲ್ಲಿನ  ಕಲಾ ಕೆತ್ತನೆಗಳು, ಭಿತ್ತಿ ಚಿತ್ರಗಳು, ಶಿಲಾ ಶಾಸನಗಳು ನಶಿಸುತ್ತಲೇ ಇವೆ. ಅಂದು ಕತ್ತಿ ಹಿಡಿದ ಮತಾಂಧ ಇಸ್ಲಾಮಿಗಳು ಮಾತ್ರವಿದ್ದರು. ಇಂದು ಅವರೊಂದಿಗೆ ಇದೋ ಇಲ್ಲಿದೆ, ಬನ್ನಿ ನಾಶ ಮಾಡಿ ಎಂದು ಕೈತೋರಿಸುವ, ಅವರ ಕಾರ್ಯವಾದ ನಂತರ ರಕ್ಷಣೆ ಕೊಡುವ ಮತಿಹೀನ ವಿಕೃತಿಗಳೂ, ಅದನ್ನು ಸಾಧನೆಯೆಂಬಂತೆ-ತಾವು ಹೇಳಿದ್ದೆ ಸತ್ಯವೆಂಬಂತೆ ಬರೆದಿಡುವ ಇತಿಹಾಸ ವಿಕೃತಕಾರರೂ ಇದ್ದಾರೆ. ಇನ್ನೇನು ಭಯ! ಇಸ್ಲಾಮಿಗಳ ಸಂಖ್ಯೆ ಹೆಚ್ಚಿರುವ ಕಡೆಗಳಲ್ಲಿ ದೇವಾಲಯಗಳು ಉರುಳುತ್ತಲೇ ಇವೆ. ದೇವಾಲಯಗಳ ಗೋಡೆಗಳನ್ನು ಚರ್ಚು ಮಸೀದಿಗಳು ಆಕ್ರಮಣ ಮಾಡುತ್ತಲೇ ಇವೆ. ಇತಿಹಾಸದ ಭೀಕರ ದಾಳಿಗಳ ಹೊರತಾಗಿಯೂ ನಾವು ನಮ್ಮನ್ನು ಉಳಿಸಿಕೊಂಡಿದ್ದೇವೆ ನಿಜ. ಆದರೆ ನಮ್ಮವರಿಗೆ ದೇವಾಲಯಕ್ಕೆ ಬೆಂಕಿ ಬಿದ್ದರೂ, ವಿರೂಪಗೊಳಿಸಿದ ಇತಿಹಾಸವನ್ನೇ ಮತ್ತೆ ಮತ್ತೆ ಬೋಧಿಸುತ್ತಿದ್ದರೂ, ಮತಾಂಧರು ನಮ್ಮ ಮೇಲೆ ಅನವರತ ಎರಗುತ್ತಲೇ ಇರುವಾಗಲೂ ಎಚ್ಚರವಾಗುವುದೇ ಇಲ್ಲ. ರಾಮನ ಜನ್ಮ ಭೂಮಿಯಲ್ಲಿ ಆತನಿಗೊಂದು ಆಲಯವನ್ನೇ ನಮ್ಮಿಂದ ಕಟ್ಟಲಾಗಲಿಲ್ಲ. ಇನ್ನು ಉಳಿದ ದೇವಾಲಯಗಳ ಪಾಡೇನು? ಇತಿಹಾಸ ತಿಳಿಯದ-ವರ್ತಮಾನದ ಅರಿವು ಇರದ-ಭವಿಷ್ಯದ ಚಿಂತೆ ಇರದ ಜನಾಂಗ ಎಷ್ಟು ಕಾಲ ಉಳಿದೀತು? ಹಾ... ಅಯೋಧ್ಯೆ ನಶಿಸುತ್ತಲೇ ಇದೆ...ಮೆಕ್ಕಾ ಬೆಳೆಯುತ್ತಲೇ ಇದೆ!

2 ಕಾಮೆಂಟ್‌ಗಳು:

  1. ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.

    ಪ್ರತ್ಯುತ್ತರಅಳಿಸಿ
  2. Dear Sir, your blogs are mind blowing,ಇತಿಹಾಸ ತಿಳಿಯದ-ವರ್ತಮಾನದ ಅರಿವು ಇರದ-ಭವಿಷ್ಯದ ಚಿಂತೆ ಇರದ ಜನಾಂಗ ಎಷ್ಟು ಕಾಲ ಉಳಿದೀತು? ಹಾ... ಅಯೋಧ್ಯೆ ಬೆಳೆಯುತ್ತಲೇ ಇದೆ!ಮೆಕ್ಕಾ ನಶಿಸುತ್ತಲೇ ಇದೆ,you become my favourite blogger
    like ಗೆಣಸ್ಲೆ .

    ಪ್ರತ್ಯುತ್ತರಅಳಿಸಿ