ಪುಟಗಳು

ಗುರುವಾರ, ಏಪ್ರಿಲ್ 30, 2020

ವಿಠೋಬನ ಇಚ್ಛೆ

ವಿಠೋಬನ ಇಚ್ಛೆ


                ನಾಮದೇವರಿಗೆ ಪರಮಾರ್ಥ ಸತ್ಯದ ಜ್ಞಾನವಾಗಿರಲಿಲ್ಲ. ವಿಠೋಬ ತನ್ನ ಪರಮ ಭಕ್ತನಿಗೆ ಅದನ್ನು ಅನುಗ್ರಹಿಸಬೇಕೆಂದು ಇಚ್ಛಿಸಿದ. ಜ್ಞಾನೇಶ್ವರರೂ ಹಾಗೂ ನಾಮದೇವರೂ ಆಗಷ್ಟೇ ಯಾತ್ರೆಯೊಂದರಿಂದ ಹಿಂದಿರುಗಿದ್ದರು. ಗೋರ ಕುಂಬಾರ ಸಾಧು ಸಂತರಿಗೆಲ್ಲಾ ವಿಶೇಷವಾದ ಹಬ್ಬದೂಟವನ್ನು ಏರ್ಪಡಿಸಿದ್ದ. ಸಾಧು ಸಂತರುಗಳಲ್ಲಿ ಜ್ಞಾನೇಶ್ವರರೂ, ನಾಮದೇವರೂ ಇದ್ದರು. ಎಲ್ಲರೂ ಅಲ್ಲಿ ಸೇರಿದ್ದಾಗ ಜ್ಞಾನೇಶ್ವರರು ಗೋರ ಕುಂಬಾರನಲ್ಲಿ ಎಲ್ಲರೆದುರಲ್ಲಿ "ಗೋರ ನೀನು ವೃತ್ತಿಯಲ್ಲಿ ಕುಂಬಾರ. ಪ್ರತಿದಿನವೂ ಮಡಕೆಗಳನ್ನು ಮಾಡುತ್ತಿರುವಾಗ ಅವು ಸರಿಯಾಗಿ ಬೆಂದಿದೆಯೇ ಇಲ್ಲವೇ ಎಂದು ಪರೀಕ್ಷಿಸುತ್ತೀಯಲ್ಲವೇ? ಈ ಮಡಕೆಗಳು ಬ್ರಹ್ಮನ ಮಡಕೆಗಳು. ಇವುಗಳಲ್ಲಿ ಯಾವುದು ಸರಿಯಾಗಿ ಬೆಂದಿದೆ ಎಂದು ಪರೀಕ್ಷಿಸು" ಎಂದು ನುಡಿದರು. ಅದನ್ನು ಕೇಳಿ ಗೋರ, ಸರಿ ಸ್ವಾಮಿ ಹಾಗೆಯೇ ಮಾಡುತ್ತೇನೆ ಎಂದು ಮಡಕೆಗಳು ಸರಿಯಾಗಿ ಸುಟ್ಟಿವೆಯೇ ಎಂದು ತಟ್ಟಿ ನೋಡುತ್ತಿದ್ದ ಕೋಲನ್ನು ತೆಗೆದುಕೊಂಡು ಬಂದು ಒಬ್ಬೊಬ್ಬರ ತಲೆಗೆ ಕುಟ್ಟುತ್ತಾ ಬಂದನು. ಪ್ರತಿಯೊಬ್ಬ ಅತಿಥಿಯೂ ತಟ್ಟಿಸಿಕೊಳ್ಳಲು ನಮ್ರತೆಯಿಂದ ತಲೆ ಬಾಗಿಸಿದರು. ಆದರೆ ಗೋರನು ನಾಮದೇವರ ಬಳಿ ಬಂದಾಗ ಆತ ಸಿಟ್ಟಿಗೆದ್ದು "ಏ ಕುಂಬಾರ, ಆ ಕೋಲಿನಿಂದ ನನ್ನ ತಲೆಯನ್ನು ತಟ್ಟಲು ನಿನ್ನನ್ನು ನೀನು ಯಾರೆಂದುಕೊಂಡಿರುವೆ?" ಎಂದು ಕೂಗಿದರು. ಆಗ ಗೋರನು ಜ್ಞಾನೇಶ್ವರರಿಗೆ "ಸ್ವಾಮಿ ಇದೊಂದನ್ನು ಬಿಟ್ಟು ಉಳಿದೆಲ್ಲಾ ಮಡಕೆಗಳು ಸರಿಯಾಗಿ ಸುಟ್ಟಿವೆ" ಎಂದನು. ಅಲ್ಲಿದ್ದವರೆಲ್ಲಾ ಗೊಳ್ಳೆಂದು ನಕ್ಕರು.

                    ಇದರಿಂದ ಅವಮಾನಗೊಂದ ನಾಮದೇವರು ತಾನು ಪೂಜಿಸುವ ವಿಠಲನ ಬಳಿ ಓಡಿ ಹೋದರು. ತನಗಾದ ಅವಮಾನವನ್ನು ಹೇಳಿ ಮೊರೆಯಿಟ್ಟರು. ಆಗ ವಿಠಲ ಅನುತಾಪ ತೋರುವವನಂತೆ ನಟಿಸಿ "ನೀನ್ಯಾಕೆ ಉಳಿದವರಂತೆ ಶಾಂತವಾಗಿದ್ದು ತಟ್ಟಿಸಿಕೊಂಡು ಬರಲಿಲ್ಲ. ನೀನು ಹಾಗೆ ಮಾಡದಿದ್ದುದರಿಂದಲೇ ಇಷ್ಟೆಲ್ಲಾ ತೊಂದರೆಗಳಾಯಿತು" ಎಂದನು. ಆಗ ನಾಮದೇವರು ಇನ್ನಷ್ಟು ಜೋರಾಗಿ ಅಳುತ್ತಾ "ನೀನೂ ಅವರ ಜೊತೆ ಸೇರಿ ನನ್ನನ್ನು ಅವಮಾನಿಸುತ್ತಿದ್ದೀಯಾ. ನಾನು ಯಾಕೆ ಬೇರೆಯವರಂತೆ ತಲೆತಗ್ಗಿಸಬೇಕು. ನಾನು ನಿನ್ನ ಪ್ರಿಯ ಸಖನಲ್ಲವೇ? ನಿನ್ನ ಮಗುವಲ್ಲವೇ?" ಎಂದರು. ಆಗ ವಿಠಲ "ನೀನು ಇನ್ನೂ ಸರಿಯಾಗಿ ಸತ್ಯವನ್ನು ಅರಿತುಕೊಂಡಿಲ್ಲ. ನಾನು ಹೇಳಿದರೂ ತಿಳಿದುಕೊಳ್ಳುವುದಿಲ್ಲ. ಆ ಕಾಡಿನಲ್ಲಿರುವ ಪಾಳು ಬಿದ್ದ ದೇಗುಲದಲ್ಲಿ ಸಾಧುವೊಬ್ಬನಿದ್ದಾನೆ. ಆತ ನಿನಗೆ ಜ್ಞಾನವನ್ನು ಅನುಗ್ರಹಿಸುವನು." ಎಂದು ವಿಶೋಪಕೇಶರ್ ಎನ್ನುವ ವೃದ್ಧನಿರುವ ಕಡೆಗೆ ಕಳುಹಿಸಿದನು.

                  ನಾಮದೇವರು ಆ ದೇವಸ್ಥಾನಕ್ಕೆ ಹೋಗಲಾಗಿ ವಯಸ್ಸಾದ ವ್ಯಕ್ತಿಯೊಬ್ಬರು ಶಿವಲಿಂಗದ ಮೇಲೆ ಕಾಲನ್ನಿಟ್ಟು ನಿದ್ರಿಸುತ್ತಿರುವುದನ್ನು ಕಂಡರು. ವಿಠಲನ ಸ್ನೇಹಿತನಾದ ನಾನು ಈ ಮೂರ್ಖನಿಂದ ಜ್ಞಾನವನ್ನು ಪಡೆದುಕೊಳ್ಳಬೇಕೇ ಎಂದುಕೊಂಡರಾದರೂ ಅಲ್ಲಿ ಯಾರೂ ಇಲ್ಲದಿದ್ದುದರಿಂದ ಆ ವೃದ್ಧರನ್ನು ಕೈತಟ್ಟಿ ಎಚ್ಚರಗೊಳಿಸಿದರು. ಆ ವೃದ್ಧರು ಎಚ್ಚರಗೊಂಡು ನಾಮದೇವನನ್ನು ಕಂಡು "ಓ ಆ ವಿಠಲ ಕಳುಹಿದ ನಾಮದೇವ ಅಂದರೆ ನೀನೇ ಏನೋ, ಬಾ" ಎಂದರು. ಆಗ ನಾಮದೇವರು ಇವರಾರೋ ಮಹಾಪುರುಷರಿರಬೇಕು ಎಂದೆಣಿಸಿದರಾದರೂ, ಶಿವಲಿಂಗದ ಮೇಲೆ ಕಾಲಿರಿಸಿದ್ದು ಮಹಾಪಾಪ ಎಂದು ಯೋಚಿಸುತ್ತಾ "ನೀವ್ಯಾರೋ ಮಹಾಪುರುಷರಂದದಿ ತೋರುವಿರಿ. ಆದರೂ ಶಿವಲಿಂಗದ ಮೇಲೆ ಕಾಲಿರಿಸಿದ್ದು ಸರಿಯೇ?" ಎಂದರು. ಆಗ ವೃದ್ಧರು "ಎಲಾ ಎಲಾ ನನ್ನ ಕಾಲು ಶಿವಲಿಂಗದ ಮೇಲಿರುವುದೇ? ಅದು ಎಲ್ಲಿದೆ? ನನಗೆ ನನ್ನ ಕಾಲುಗಳನ್ನು ಸರಿಸಲಾಗುತ್ತಿಲ್ಲ. ದಯವಿಟ್ಟು ನನ್ನ ಕಾಲ್ಗಳನ್ನು ಬೇರೆಲ್ಲಾದರೂ ಎತ್ತಿಡುತ್ತೀಯಾ" ಎಂದರು. ಅದರಂತೆ ನಾಮದೇವರು ಕಾಲುಗಳನ್ನು ಎತ್ತಿಟ್ಟಾಗ ಅಲ್ಲೊಂದು ಶಿವಲಿಂಗ ಎದ್ದು ನಿಂತಿತ್ತು! ಮತ್ತೊಂದೆಡೆ ಎತ್ತಿಟ್ಟಾಗ ಅಲ್ಲೊಂದು, ಹೀಗೆ ಎಲ್ಲಿಟ್ಟರೂ ಶಿವಲಿಂಗವೇ! ಕೊನೆಗೆ ಬೇರೆ ದಾರಿ ಕಾಣದೆ ನಾಮದೇವರು ಆ ವೃದ್ಧರ ಕಾಲುಗಳನ್ನು ತನ್ನ ಮಡಿಲಲ್ಲೇ ಇಟ್ಟುಕೊಂಡರು. ತಕ್ಷಣವೇ ಅವರೂ ಶಿವಲಿಂಗವಾದರು. ಹೀಗೆ ಅವರಿಗೆ ಜ್ಞಾನೋದಯವಾಯಿತು. ಆ ವೃದ್ಧರು "ಇನ್ನು ನೀನು ಹೋಗಬಹುದು" ಎಂದರು.

                   ಹೀಗೆ ಶರಣಾಗಿ ಗುರುವಿನ ಪಾದಗಳನ್ನು ಮುಟ್ಟಿದೊಡನೆ ಅವರಿಗೆ ಜ್ಞಾನ ಪ್ರಾಪ್ತಿಯಾಯಿತು. ಜ್ಞಾನೋದಯವಾದ ಮೇಲೆ ಮನೆಗೆ ಹೋದ ನಾಮದೇವರು ಬಳಿಕ ದೇವಸ್ಥಾನಕ್ಕೆ ಹೋಗಲೇ ಇಲ್ಲ. ಆಗ ವಿಠಲನೇ ನಾಮದೇವರ ಮನೆಗೆ ಹೋದನಂತೆ. ಏನೂ ತಿಳಿಯದವನಂತೆ "ನನ್ನನ್ನು ನೋಡಲು ಬರುವುದನ್ನು ಮರೆತೇ ಬಿಟ್ಟಿರುವೆಯಲ್ಲಾ" ಎಂದು ಕೇಳಲು ನಾಮದೇವರು "ಇನ್ನು ಮೇಲೆ ನೀನು ನನ್ನನ್ನು ಮೋಸಗೊಳಿಸುವಂತೆ ಇಲ್ಲ. ನನಗೀಗ ತಿಳಿದಿದೆ. ನೀನಿಲ್ಲದ ಸ್ಥಳವಾವುದು? ನಿನ್ನನ್ನು ಬಿಟ್ಟು ನಾನು ಬೇರೆಯಾಗಿರುವೆನೇ?" ಎಂದರು. ಆಗ ವಿಠಲನು ನಸುನಗುತ್ತಾ " ಓ ನಿನಗೀಗ ಸತ್ಯದ ಅರಿವಾಗಿದೆ. ಅದಕ್ಕಾಗಿಯೇ ನಿನ್ನನ್ನು ಅಂತಿಮ ಪಾಠಕ್ಕಾಗಿ ಕಳಿಸಬೇಕಾಯಿತು" ಎಂದನು.

(ಭಗವಾನ್ ರಮಣ ಮಹರ್ಷಿಗಳು ಭಕ್ತರಿಗೆ ದೈವೀನಾಮ ಮಹಿಮೆಯ ತತ್ತ್ವವನ್ನು ವಿವರಿಸುತ್ತಾ ಹೇಳಿದ ಘಟನೆ)


ಶನಿವಾರ, ಏಪ್ರಿಲ್ 25, 2020

ತಬ್ಲೀಘಿ ಜಮಾತ್: ಭಯೋತ್ಪಾದಕರ ಕೊರೋನಾಸ್ತ್ರ!

ತಬ್ಲೀಘಿ ಜಮಾತ್: ಭಯೋತ್ಪಾದಕರ ಕೊರೋನಾಸ್ತ್ರ!


           ದೇಶವಿಡೀ ಲಾಕ್ ಡೌನ್ ಇದ್ದಾಗಲೂ ದೇಶವಿದೇಶಗಳ ಸಾವಿರಾರು ಜನರನ್ನು ಸೇರಿಸಿಕೊಂಡು ಕೊರೋನಾ ಇದ್ದಂತಹಾ ವ್ಯಕ್ತಿಗಳನ್ನು ನಡುನಡುವೆ ಉದ್ದೇಶಪೂರ್ವಕವಾಗಿಯೇ ಕುಳ್ಳಿರಿಸಿ ಮತೀಯ ಸಭೆ ನಡೆಸಿದರು. ಆ ಸಭೆಗಳಲ್ಲೆಲ್ಲಾ ಕೊರೋನಾ ಅಲ್ಲಾನ ಶಾಪ, ಎಲ್ಲರೂ ಒಟ್ಟಾಗಿ ಆಲಿಂಗಿಸಿ, ಅಲ್ಲಾನನ್ನು ಪ್ರಾರ್ಥಿಸುತ್ತಾ ಮಸೀದಿಗಳಲ್ಲಿ ಪ್ರಾಣಬಿಟ್ಟರೆ ಅದಕ್ಕಿಂತ ದೊಡ್ಡ ಪುಣ್ಯವಿಲ್ಲ ಎಂಬ ಭ್ರಮೆಯನ್ನೆಲ್ಲಾ ತಮ್ಮದೇ ಮತೀಯರಲ್ಲಿ ತುಂಬಿದರು. ಆ ಸಭೆಗಳಲ್ಲೆಲ್ಲಾ ಸೇರಿ ಕಾರ್ಯಕ್ರಮ ಮುಗಿದ ಬಳಿಕ ತಮ್ಮ ತಮ್ಮ ಊರಿಗೆ ತೆರಳಿ ಜನಸಾಮಾನ್ಯರಿಗೂ ಕೊರೋನಾ ಹರಡುವಂತೆ ಮಾಡಿದರು. ಮಾತ್ರವಲ್ಲ ವಿದೇಶಗಳಿಂದ ಬಂದಂತಹಾ ತಮ್ಮ ಸಹವರ್ತಿಗಳನ್ನೂ ಮಸೀದಿಗಳಲ್ಲಿ ಅಡಗಿಸಿಟ್ಟರು. ಕೊರೋನಾ ಪರೀಕ್ಷೆ ಮಾಡಿಸಿಕೊಳ್ಳಿ ಎಂದರೆ ನಮಗೆ ಕೊರೋನಾ ಇಲ್ಲ, ಬೇಕಾದರೆ ಮೋದಿ ಕೊರೋನಾ ಪರೀಕ್ಷೆ ಮಾಡಿಸಿಕೊಳ್ಳಲಿ ಎಂದು ಪ್ರಧಾನಿಯನ್ನು ಜರೆದರು. ಲಾಕ್ ಡೌನ್ ಕೊರೋನಾ ನಿಯಂತ್ರಣಕ್ಕಾಗಿ ಮಾಡಿದ್ದಲ್ಲ, ಸಿಎಎಯ ವಿರುದ್ಧದ ಪ್ರತಿಭಟನೆಯನ್ನು ಹತ್ತಿಕ್ಕಲು ಮೋದಿ ಮತ್ತು ಶಾ ಸೇರಿ ಮಾಡಿದ ಷಡ್ಯಂತ್ರ ಎಂದು ಬೊಬ್ಬಿರಿದರು. ಗುಂಪು ಗುಂಪಾಗಿ ನಮಾಜ್ ಮಾಡಿ ಮತ್ತಷ್ಟು ಜನರಿಗೆ ಕೊರೋನಾ ಹಬ್ಬಿಸಿದರು. ಪೊಲೀಸರಿಗೆ ಕಲ್ಲು ಹೊಡೆದರು. ವೈದ್ಯರ ಮೇಲೆ, ಆರೋಗ್ಯ ಕಾರ್ಯಕರ್ತರ ಮೇಲೆ ದಾಳಿ ಮಾಡಿದರು. ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರ ಮಾಡಿದವರ ಮೇಲೆ ಮೇಲಿಂದ ಮೇಲೆ ಕರೆ ಮಾಡಿ ಬೆದರಿಕೆ ಒಡ್ಡಿದರು. ನೋಟಿಗೆ ಸಿಂಬಳ ಅಂಟಿಸಿ ಕೊಟ್ಟ ಒಬ್ಬ. ಹಿಂದೂಗಳ ಮನೆ ಬಾಗಿಲಿಗೆ ಉಗುಳಿದನೊಬ್ಬ. ತರಕಾರಿಗೆ ಎಂಜಲು ಹಚ್ಚಿ ಮಾರಾಟ ಮಾಡಿದ ಮತ್ತೊಬ್ಬ. ನೋಟಿಗೆ ಎಂಜಲು ಹಚ್ಚಿ ಹರಡಿದವ ಮಗದೊಬ್ಬ. ಇದನ್ನು ಜಿಹಾದ್ ಎನ್ನದೆ ಮತ್ತೇನು ಹೇಳಬೇಕು?

           ರೋಗವನ್ನು ಹರಡಲೆಂದೇ ಎಲ್ಲೆಂದರಲ್ಲಿ ಉಗುಳುವುದು ಮುಸ್ಲಿಮರಿಗೆ ಹೊಸತಲ್ಲ. 1817-1831ರ ನಡುವೆ ಕಾಲರಾದಿಂದ ಭಾರತ ತತ್ತರಿಸಿದ್ದಾಗ ಸಯ್ಯದ್ ಅಹ್ಮದ್ ಬರೇಲ್ವಿಯನ್ನು ಅನುಸರಿಸುತ್ತಿದ್ದ ವಹಾಬೀಗಳು ಹಿಂದೂಗಳ ಮೇಲೆ, ಬ್ರಿಟಿಷರ ಮೇಲೆ ಮಾತ್ರವಲ್ಲ ಸಿಕ್ಕಸಿಕ್ಕಲ್ಲಿ ಬೇಕೆಂದೇ ಉಗುಳಿ ರೋಗ ಹರಡಿಸಲು ಯತ್ನಿಸಿದ್ದನ್ನು ಬ್ರಿಟಿಷರು ಬರೆದಿಟ್ಟಿದ್ದಾರೆ. ಮಾತ್ರವಲ್ಲ ಆಗಲೂ ಈ ರೋಗ ಕಾಫಿರರನ್ನು ನಾಶಗೊಳಿಸಲೆಂದು ಅಲ್ಲಾ ನೀಡಿದ ಶಿಕ್ಷೆ ಎಂದೇ ಆ ಮೂರ್ಖರು ನಂಬಿದ್ದರು, ನಂಬಿಸಿದ್ದರು. ನಿಜಾಮನ ಆಡಳಿತದಲ್ಲಿ ರಜಾಕರರು ಹಿಂದೂಗಳ ಆಹಾರ, ಧಾನ್ಯಗಳಿಗೆ ಉಗುಳುತ್ತಿದ್ದರು. ಅಲ್ಲಾಹನ ಸಂದೇಶವಾಹಕನು ಉಗುಳಿದ ಆಹಾರವೇ ಶ್ರೇಷ್ಠವೆಂದು ಅವರ ಹದೀತ್'ಗಳೇ ಹೇಳುವಾಗ, ಹಾಗೂ ಅವರ ಹಬ್ಬಗಳಲ್ಲಿ ಅವರು ಅದನ್ನೇ ಅನುಸರಿಸುವಾಗ, 'ಕಾಫಿರ'ರನ್ನು ಕಾಲಕಸಕ್ಕಿಂತ ನೋಡುವ ಅವರು ಈ ರೀತಿ ಮಾಡುವುದು ವಿಚಿತ್ರವೆಂದೇನೂ ಅನ್ನಿಸುವುದಿಲ್ಲ.

         ಏನಿದು ತಬ್ಲೀಘಿ? ಹೊಸದಾಗಿ ಕೇಳಿದಂತಿದೆಯಲ್ಲಾ ಎಂದರೆ ಅದರ ಕಾರ್ಯಚಟುವಟಿಕೆ ಇದ್ದುದೇ ಹಾಗೆ. ಅದೇನು ಒಂದು ಮಸೀದಿಯೋ ಅಥವಾ ದೆಹಲಿಗೆ ಸೀಮಿತವಾದ ಸಂಘಟನೆಯೂ ಅಲ್ಲ. ಅಥವಾ ಅದು ನೇರ ಯುದ್ಧ ಮಾಡುವ ಭಯೋತ್ಪಾದಕ ಗುಂಪೂ ಅಲ್ಲ. ಮಾಧ್ಯಮಗಳನ್ನು ಹೊಕ್ಕು ತನ್ನದೇ ಅಭಿಪ್ರಾಯವನ್ನು ಹೇರಿದ ವೈಚಾರಿಕ ಜಿಹಾದ್ ಕೂಡಾ ಅಲ್ಲ. ಆದರೆ ಈ ಎರಡೂ ಪಂಗಡಗಳಿಗೂ ಪ್ರಭಾವ ಬೀರಿದ ಮತ್ತು ಅವುಗಳ ಬೆಂಬಲವನ್ನೂ ಪಡೆದ ತೋರಿಕೆಗೆ ಮೂಲ ಇಸ್ಲಾಮನ್ನು ತಾನನುಸರಿಸುವುದೆಂದು ಹೇಳುತ್ತಾ ಗುಪ್ತವಾಗಿ ಸ್ಲೀಪರ್ ಸೆಲ್ ನಂತೆ ವಿಶ್ವಾದ್ಯಂತ ಕಾರ್ಯಾಚರಿಸುವ ಒಂದು ಸಮುದಾಯ. ಹಾಗಾಗಿ ಕಾನೂನಿನ ಕುಣಿಕೆಗೆ ಭಯೋತ್ಪಾದಕ ಸಂಘಟನೆಯಾಗಿ ಇದು ಸಿಗಲಾರದು. ಆದರೆ ಇದರ ಕೃತ್ಯವೆಲ್ಲಾ ಭಯೋತ್ಪಾದನೆಯ ಪೋಷಣೆಯೇ. ಒಂದು ಕಡೆ ಸಾಮಾಜಿಕ ಸಂಘಟನೆಯಂತೆ, ಮತ್ತೊಂದು ಕಡೆ ಧಾರ್ಮಿಕ ಸಂಸ್ಥೆಯಂತೆ ಕಾರ್ಯಾಚರಿಸುತ್ತಾ ಸಮಯ ಸಮಯಕ್ಕೆ ದೊಡ್ಡ ದೊಡ್ಡ ಸಮ್ಮೇಳನಗಳನ್ನು ವಿಶ್ವದ ಹಲವೆಡೆಗಳಲ್ಲಿ ತಿಂಗಳುಗಟ್ಟಲೆ ನಡೆಸುತ್ತಾ ಯುವಕರ ಮೆದುಳನ್ನು ಕಿತ್ತು ಅಲ್ಲಿ ಕೊರೋನಾಗಿಂತ ಅಪಾಯಕಾರಿಯಾದ ಕುರಾನ್ ಎಂಬ ವೈರಸ್ಸನ್ನಿಟ್ಟು ಅದರಲ್ಲಿ ಸಮರ್ಥರೆಂದು ಕಂಡವರನ್ನು ಭಯೋತ್ಪಾದಕ ಸಂಘಟನೆಗೆ ಸೇರಿಸುವ ಕೆಲಸ ಇದರದ್ದು. ಅಂದರೆ ಇದು ಒಂದು ತರಹಾ ಕಂಪೆನಿಗಳಿಗೆ ಪದವೀಧರರನ್ನು ಪೂರೈಸುವ ಮಧ್ಯವರ್ತಿ ಕಂಪೆನಿಯಂತೆ, ಅದಕ್ಕಿಂತಲೂ ಹೆಚ್ಚು ವೃತ್ತಿಪರನಂತೆ ಕೆಲಸ ಮಾಡುತ್ತದೆ.

           ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸ್ಥಾಪನೆಯಾದ ಮರುವರ್ಷದಲ್ಲೇ ಮೌಲಾನಾ ಮಹಮ್ಮದ್ ಇಲ್ಯಾಸ್ ಖಂಡಾಲವಿ ರಾಜಕೀಯವಿಲ್ಲದ ಕೇವಲ ಮತಪ್ರಚಾರವೇ ತನ್ನ ಉದ್ದೇಶವೆನ್ನುತ್ತ ಹದೀಸ್, ಸುನ್ನಾಹ್ಗಳನ್ನೇ ಬೋಧಿಸಲೆಂದು ದಾರ್ ಉಲ್ ಉಲೂಮ್ ದೇವಬಂದಿನ ಶಾಖೆಯಾಗಿ  ಆರಂಭಿಸಿದ ಸಂಸ್ಥೆಯೇ ತಬ್ಲೀಘಿ ಜಮಾತ್. ಅಂದರೆ ಇದರ ಮೂಲ ಉದ್ದೇಶವೇ ಮತಾಂತರ. ರಾಜಕೀಯೇತರ ಸಂಘಟನೆಯೆಂದು ಬ್ರಿಟಿಷರಿಂದಲೂ ಬೆಂಬಲಗಿಟ್ಟಿಸಿಕೊಂಡ ಇದು ತನ್ನದೇ ರೀತಿ-ರಿವಾಜುಗಳನ್ನು ಅಳವಡಿಸಿಕೊಂಡಿತು. ಪ್ರವಾದಿಯ ಕಾಲದಲ್ಲಿ ಇಸ್ಲಾಮ್ ಹೇಗಿತ್ತೋ ಅದನ್ನೇ ಈಗ ಯಥಾವತ್ ಅನುಸರಿಸಬೇಕೆಂದು ದಾರಿ ತಪ್ಪಿದ ಮುಸಲ್ಮಾನರನ್ನು "ಸರಿ"ದಾರಿಗೆ ತರಲು ಹುಟ್ಟಿದ ಸಂಘಟನೆಯಿದು ಎಂದು ಸ್ವತಃ ಅದರ ಸಂಸ್ಥಾಪಕನೇ ನುಡಿದಿದ್ದ. ಪ್ರವಾದಿ ಬೋಧಿಸಿದುದು ಸರಿಯಿತ್ತು, ಅನುಸರಿಸಿದವರು ತಿರುಚಿದರು ಎನ್ನುವವರು ಇದನ್ನು ಗಮನಿಸಬೇಕು. ಪ್ರವಾದಿಯ ಇಸ್ಲಾಂ ಎಷ್ಟು ಕಟ್ಟರ್ ಇತ್ತು ಎನ್ನುವುದನ್ನು ಅರಿಯಬೇಕು. ಮಾತ್ರವಲ್ಲ ದಾರಿ ತಪ್ಪಿದವರನ್ನು ಸರಿ ದಾರಿಗೆ ತರುವುದೆಂದರೇನು? ಸೌಮ್ಯವಾಗಿದ್ದವರನ್ನು ಮತ್ತೆ ಕಟ್ಟರ್ ವಾದಕ್ಕೆ ಮರಳಿಸುವುದೆಂದಲ್ಲವೇ? ಮಾನವ ಜನಾಂಗದ ಮಾತ್ರವಲ್ಲ, ಪ್ರಾಣಿ, ಪಕ್ಷಿ, ಸಸ್ಯಸಂಕುಲಗಳೆಲ್ಲದರ ದುರದೃಷ್ಟವೆಂದರೆ ತಬ್ಲೀಘಿ ಅದೇ ದಾರಿಯಲ್ಲಿ ಮುನ್ನಡೆಯಿತು. ಸೆಕ್ಯುಲರ್ ಕನ್ನಡಕ ಅಥವಾ ಭೀತಿಯ ದೃಷ್ಟಿಯಲ್ಲಿ ನೋಡದೆ ಇತಿಹಾಸವನ್ನು ಇದ್ದಂತೆ ಕಾಣುವ, ಸ್ವೀಕರಿಸುವ ಪ್ರತಿಯೊಬ್ಬನ ದೃಷ್ಟಿಗೂ ಇದು ಸ್ಪಷ್ಟವಾಗಿ ಗೋಚರಿಸೀತು.

           ಅಲ್ಪ ಕಾಲದಲ್ಲೇ ದೇಶದಾದ್ಯಂತ ಹರಡಿದ ತಬ್ಲೀಘಿ ಜಮಾತ್ ತನ್ನ ಮತ ಪ್ರಚಾರದ ಉದ್ದೇಶಕ್ಕೆಂದೇ ಮುಹಮ್ಮದ್ ಝಕಾರಿಯಾ ಖಂಡಾಲವಿ ಬರೆದ "ತಬ್ಲೀಘಿ ನಿಸಾಬ್" ಎಂಬ ಪುಸ್ತಕವನ್ನು ಪವಿತ್ರ ಗ್ರಂಥದಂತೆ ಉಪಯೋಗಿಸಲು ಆರಂಬಿಸಿತು. ಮುಂದೆ ಇದೇ ಪರಿಷ್ಕರಣೆಗೊಳಗಾಗಿ ಇಸ್ಲಾಮಿನ ಮೂಲ ಬೋಧನೆಗಳಷ್ಟನ್ನೇ ಉಳಿಸಿ "ಸಹೀಹ್ ಫಝಯ್ಲ್ ಎ ಅಮಾಲ್" ಎಂದು ಬದಲಾಯಿತು. ಹಾಗಂತ ಇಸ್ಲಾಮಿಗೆ ಇದೊಂದು ಹೊಸತಾದ ಕಟ್ಟರ್ ಪಂಥವಾಗಿರಲಿಲ್ಲ. ಮರಾಠರು, ಜಾಟರು, ಸಿಖ್ಖರು ಪ್ರಬಲರಾಗಿ ದೆಹಲಿಯ ಗದ್ದುಗೆ ಮೊಘಲರ ಕೈತಪ್ಪಿದ ಬಳಿಕ ಮುಸ್ಲಿಮರಲ್ಲಿ ಅಸಂತುಷ್ಟಿ ತಾಂಡವವಾಡುತ್ತಿತ್ತು. ಅಂತಹಾ ಸಮಯದಲ್ಲಿ ಷಾಹ್ ವಲಿಯುಲ್ಲಾ ಅಹ್ಮದ್ ಶಾ ಅಬ್ದಾಲಿಯೆಂಬ ರಕ್ಕಸನನ್ನು ದೆಹಲಿಯ ಗದ್ದುಗೆಯೇರುವಂತೆ ಆಹ್ವಾನಿಸಿದ. ಆದರೆ ಅಬ್ದಾಲಿ ಬಾರಿ ಬಾರಿ ಬಂದರೂ ದೆಹಲಿಯ ಗದ್ದುಗೆ ಏರಲಾರದೆ ಹೋದ. ವಲಿಯುಲ್ಲಾನ ಮಗ ಅಬ್ದುಲ್ ಅಜೀಜ್ ಹಿಂದೂಗಳ ಮೇಲಿನ ಜಿಹಾದ್ ಅನ್ನು ಹಿಂದೂ ಮತ್ತು ಫರಂಗಿಗಳ ಮೇಲಿನ ಜಿಹಾದ್ ಆಗಿ ಪರಿವರ್ತಿಸಿ ಫತ್ವಾವೊಂದನ್ನು ಹೊರಡಿಸಿದ! ಬ್ರಿಟಿಷರಿಂದ ಶಸ್ತ್ರಾಸ್ತ್ರ ಸಂಗ್ರಹಿಸಿ, ರಕ್ಷಣೆಯನ್ನೂ ಪಡೆದುಕಂಡು ಜಿಹಾದಿಗೆ ಆಧುನಿಕ ಸ್ವರೂಪ ಕೊಟ್ಟ ಸಯ್ಯದ್ ಅಹ್ಮದ್ ಬರೇಲ್ವಿ ಎಂಬ ಅಜೀಜನ ಶಿಷ್ಯನನ್ನು ರಣಜಿತ್ ಸಿಂಗನ ಸೈನಿಕರು ಅಟ್ಟಾಡಿಸಿ ಬಡಿದರು. ಈ ಬರೇಲ್ವಿಯ ಬೆಂಬಲಿಗರಾದ ವಹಾಬಿಗಳು ಮಾತ್ರ ಇಡೀ ಭಾರತದಲ್ಲಿ ಹರಡಿಕೊಂಡು ಬಿಟ್ಟರು. 1857ರ ಸ್ವಾತಂತ್ರ್ಯ ಸಂಗ್ರಾಮದ ಬಳಿಕದ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಸಯ್ಯದ್ ಅಹ್ಮದ್ ಖಾನ್ ಬ್ರಿಟಿಷರೊಡನೆ ಹೊಂದಾಣಿಕೆ ಮಾಡಿಕೊಂಡು ಆಂಗ್ಲೋ-ಮೊಹಮ್ಮದನ್ (ಹೆಸರು ಗಮನಿಸಿ) ಶಾಲೆಯೊಂದನ್ನು ಸ್ಥಾಪಿಸಿ ದ್ವಿರಾಷ್ಟ್ರ ಸಿದ್ಧಾಂತಕ್ಕೆ ಮುನ್ನುಡಿ ಬರೆದ. ಇದೇ ಮುಂದೆ ಅಲಿಘರ್ ಆಗಿ, ಅಲ್ಲೇ ಮುಸ್ಲಿಂ ಲೀಗ್ ಮೊಳಕೆಯೊಡೆಯಿತು. ಈ ರಾಜಕೀಯ ಪಕ್ಷಕ್ಕೆ ಸಹಾಯಕವಾಗಿ ಹುಟ್ಟಿದ್ದೇ ತಬ್ಲೀಘಿ ಜಮಾತ್. ಅದೇ ಹೊತ್ತಿಗೆ ಸ್ವಾಮಿ ದಯಾನಂದ ಸರಸ್ವತಿಗಳು ಹಾಗೂ ಅವರ ಶಿಷ್ಯ ಸ್ವಾಮೀ ಶ್ರದ್ಧಾನಂದರ "ಶುದ್ಧೀಕರಣ" ಪ್ರಕ್ರಿಯೆಗೆ ಒಳಗಾಗಿ ಹಿಂದೆ ರಜಪೂತರಾಗಿದ್ದು ಮೊಘಲರ ಸಮಯದಲ್ಲಿ ಮತಾಂತರಗೊಂಡಿದ್ದ ಮೇವಾರಿ ಭಾಷಿಕ ಮಿಯೋ ಮುಸ್ಲಿಮರು ಮಾತೃಧರ್ಮಕ್ಕೆ ಮರಳುತ್ತಿದ್ದುದೂ ತಬ್ಲೀಘಿಗಳ ಕೆಂಗಣ್ಣಿಗೆ ಗುರಿಯಾಯ್ತು. ಹಾಗಾಗಿ ಹುಟ್ಟಿದ ಕೆಲವೇ ದಿನಗಳಲ್ಲಿ ತಬ್ಲೀಘಿಗಳ ಮತಾಂಧತೆಗೆ ಸ್ವಾಮಿ ಶ್ರದ್ಧಾನಂದರ ಜೀವ ಬಲಿಯಾಯಿತು. ಇಂದಿನ ರೀತಿಯೇ ಅಂದು ಸೆಕ್ಯುಲರ್ ಎನಿಸಿಕೊಂಡವರಿಗೆಲ್ಲಾ ಸ್ವಾಮೀಜಿಯ ಕೊಲೆಗಾರ ತಬ್ಲೀಘಿ ಅಬ್ದುಲ್ ರಶೀದ ಅಮಾಯಕನಾಗಿಯೇ ಕಂಡ. ಅಹಿಂಸೆಯ ಗುರಿಕಾರನಂತೂ ಆತನನ್ನು ಸಹೋದರ ಎನ್ನುತ್ತಾ ಅಪ್ಪಿಕೊಂಡುಬಿಟ್ಟರು! ಇಂದಿಗೂ ಬದಲಾಗಿಲ್ಲ ಹಿಂದೂಗಳ ಈ ಮಾನಸಿಕತೆ!

           ತಬ್ಲೀಘಿ ಜಮಾತ್ 1946-47ರಲ್ಲಿ ರಾಜಾಸ್ಥಾನವನ್ನು ಮಿಯೋಸ್ಥಾನ್ ಎನ್ನುವ ಇಸ್ಲಾಮಿಕ್ ದೇಶವನ್ನಾಗಿ ಬದಲಾಯಿಸಲು ಕೈಗೆ ಸಿಕ್ಕ ಆಯುಧಗಳನ್ನು ಹಿಡಿದು ಬೀದಿಗಿಳಿದಿತ್ತು. ಈ ದಂಗೆಯಲ್ಲಿ ಅದರ ಜೊತೆಯಾದದ್ದು ವಿಭಜನಕಾರಿ ಮುಸ್ಲಿಮ್ ಲೀಗ್! 1941ರಲ್ಲಿ ಮೌಲಾನಾ ಇಲ್ಯಾಸ್ ದೆಹಲಿಯ ನಿಜಾಮುದ್ದೀನ್ ನಲ್ಲಿ ಹಲವು ಸಾವಿರ ಜನರನ್ನು ಸೇರಿಸಿ ಬೃಹತ್ ಸಮಾವೇಶ ನಡೆಸಿದ. ವಿಭಜನೆಗೆ ಪೂರಕವಾಗಿ ಕೆಲಸ ಮಾಡಿದ ತಬ್ಲೀಘಿಯ ಕೆಲ ಸದಸ್ಯರು ವಿಭಜನೆಯ ಬಳಿಕ ಪಾಕಿಸ್ತಾನದಲ್ಲೂ ತಬ್ಲೀಘಿಯ ಸಂಘಟನೆಯೊಂದನ್ನು ಆರಂಭಿಸಿದರು. ಅದಕ್ಕೆ ಸ್ವತಃ ಪಾಕ್ ಸರಕಾರ ಬೆಂಬಲ ನೀಡಿತ್ತು. ಇಲ್ಯಾಸನ ಮಗ ಮೌಲಾನಾ ಮೊಹಮ್ಮದ್ ಯೂಸುಫ್ ಮತ್ತು ಆತನ ಉತ್ತರಾಧಿಕಾರಿ ಮೌಲಾನಾ ಇನಾಮುಲ್ ಹಸನ್ ಅವಧಿಯಲ್ಲಿ ತಬ್ಲೀಘಿ ಜಮಾತ್ಗೆ ಭಾರೀ ಹಣಕಾಸಿನ ನೆರವೂ ದೊರೆತು ಅದು ಪಶ್ಚಿಮ ಯೂರೋಪು ಹಾಗೂ ಉತ್ತರ ಅಮೇರಿಕಾದಲ್ಲಿ ತನ್ನ ಬೆಳೆ ಬಿತ್ತಿತು. ವಹಾಬೀ ಗುರು ಶೇಖ್ ಅಬ್ದ್ ಅಲ್ ಇಬ್ನ್ ಬಾಜ್ ತಬ್ಲೀಘಿಗೆ ತನ್ನ ಪೂರ್ಣ ಬೆಂಬಲ ಘೋಷಿಸಿದನಲ್ಲದೆ ವಹಾಬೀ ಪ್ರಚಾರಕರನ್ನೂ ತಬ್ಲೀಘಿಗಳೊಂದಿಗೆ ಜಗತ್ತಿನಾದ್ಯಂತ ಕಳುಹಿಸಿದ. ಹೀಗೆ ಅತ್ತ ವಹಾಬೀ ಜಾಲವೂ ಬೆಳೆಯಿತು. ಸೌದಿಯ ಹಣದಿಂದ "ವರ್ಲ್ಡ್ ಮುಸ್ಲಿಂ ಲೀಗ್"ನ ಪೋಷಕತ್ವದೊಂದಿಗೆ ತಬ್ಲೀಘಿಯೂ ಬೃಹತ್ತಾಗಿ ಬೆಳೆಯಿತು. 1978ರಲ್ಲಿ ಇಂಗ್ಲೆಂಡಿನ ಡ್ರ್ಯುಸ್ ಬರಿಯಲ್ಲಿ ದೊಡ್ಡ ಕಟ್ಟಡವೊಂದನ್ನು ತನ್ನ ಮುಖ್ಯ ಕಛೇರಿಯನ್ನಾಗಿ ಮಾಡಿಕೊಂಡು ಯೂರೋಪಿನ ಮೂಲೆಮೂಲೆಗೂ ಹಬ್ಬಿತು.

           ಅಪ್ಘಾನಿಸ್ತಾನದಲ್ಲಿ ರಷ್ಯಾ ವಿರುದ್ಧ ಹೋರಾಡಲು 1980ರಲ್ಲಿ ತಬ್ಲೀಘಿಗಳ ನೇತೃತ್ವದಲ್ಲಿ ಹರ್ಕತ್ ಉಲ್ ಜಿಹಾದ್ ಅಲ್ ಇಸ್ಲಾಮ್ ಎಂಬ ಭಯೋತ್ಪಾದಕ ಸಂಘಟನೆ ಪಾಕಿಸ್ತಾನದಲ್ಲಿ ಹುಟ್ಟಿತು. ಬಳಿಕ 1980ರಲ್ಲಿ ಪಾಕಿಸ್ತಾನದ ತಬ್ಲೀಘಿಗಳ ಮುಖ್ಯ ಕಛೇರಿಯಿರುವ ರಾಯ್ ವಿಂಡ್ ನಲ್ಲಿ ಹರ್ಕತ್ ಉಲ್ ಮುಜಾಹಿದೀನ್ ಎಂಬ ಉಗ್ರ ಸಂಘಟನೆಯನ್ನು ಇದೇ ತಬ್ಲೀಘಿಗಳು ಹುಟ್ಟು ಹಾಕಿದರು. 1998ರಲ್ಲಿ ಏರ್ ಇಂಡಿಯಾ ವಿಮಾನವನ್ನು ಅಪಹರಿಸಿ ಮೌಲಾನಾ ಮಸೂದ್ ಅಝರ್ ಮತ್ತವನ ಸಂಗಡಿಗರನ್ನು ಭಾರತದ ಸೆರೆಯಿಂದ ಬಿಡಿಸಿಕೊಂಡವರು ಹರ್ಕತ್ ಉಲ್ ಮುಜಾಹಿದೀನ್ ಉಗ್ರ ಸಂಘಟನೆಯಲ್ಲಿದ್ದ ತಬ್ಲೀಘಿ ಜಮಾತ್ಗಳೇ. 2002ರಲ್ಲಿ ಪಾಕಿಸ್ತಾನಕ್ಕೆ ಸಬ್ ಮೆರಿನ್ ತಯಾರಿಸಲೆಂದು ಬಂದು ಕೆಲಸ ಮಾಡುತ್ತಿದ್ದ ಫ್ರೆಂಚ್ ಇಂಜಿನಿಯರುಗಳಿದ್ದ ವಾಹನ ಸ್ಫೋಟಿಸಿದ್ದೂ ಅವರೇ. ರಾಯ್ ವಿಂಡ್ ನಲ್ಲಿನ ತಬ್ಲೀಘಿ ಜಮಾತ್ ಕಛೇರಿ ಉಗ್ರ ಸಂಘಟನೆಗಳಿಗೆ ವಿದ್ಯಾರ್ಥಿಗಳನ್ನು ಒದಗಿಸಿಕೊಡುವ ಕೆಲಸ ಮಾಡುತ್ತಿತ್ತು. ಮುಂದಿನ ಇಪ್ಪತ್ತು ವರ್ಷಗಳಲ್ಲಿ ಇವರು 6000ಕ್ಕೂ ಹೆಚ್ಚು ಉಗ್ರರನ್ನು ತರಬೇತುಗೊಳಿಸಿದರು. ಇದೇ ಉಗ್ರರು ಬಳಿಕ ತಾಲಿಬಾನ್, ಆಲ್ಖೈದಾ ಸಂಘಟನೆಗಳಿಗೆ ಸೇರಿದರು. ಇವರೇ ಹುಟ್ಟುಹಾಕಿದ ಇನ್ನೊಂದು ಉಗ್ರ ಸಂಘಟನೆ ಹರ್ಕತ್ ಉಲ್ ಜಿಹಾದ್ ಇ ಇಸ್ಲಾಮಿ 2006ರಲ್ಲಿ ಸಂಕಟ ಮೋಚನ ಮಂದಿರಕ್ಕೆ ಬಾಂಬಿಟ್ಟಿತು. 2011ರಲ್ಲಿ ದೆಹಲಿಯಲ್ಲಿ ಬಾಂಬಿಟ್ಟು ಹದಿನಾಲ್ಕು ಜನರನ್ನು ಸಾಯಿಸಿತು. ಗೋಧ್ರಾದಲ್ಲಿ ಕರಸೇವಕರನ್ನು ಜೀವಂತ ಸುಟ್ಟ ಪ್ರಕರಣದಲ್ಲಿ ಪಾತ್ರವಹಿಸಿದ ಮೌಲಾನಾ ಉಮರ್ ತಬ್ಲೀಘೀ ಜಮಾತಿನ ಸದಸ್ಯ. 1994ರಲ್ಲಿ ಪ್ಯಾರಿಸ್ ಹಾಗೂ ಮೊರಾಕ್ಕೋದಲ್ಲಿ , 2003ರಲ್ಲಿ ಕ್ಯಾಸಬ್ಲ್ಯಾಂಕ ದಲ್ಲಿ ನಡೆದ ಯಹೂದಿ ಚರ್ಚ್ ಮೇಲೆ ಬಾಂಬು ದಾಳಿ ಮಾಡಿದ್ದೂ ತಬ್ಲೀಘಿಗಳೇ!

           ಫಿಲಿಫೈನ್ಸ್ ನಲ್ಲಿ ತಬ್ಲೀಘಿಗಳು ಹನ್ನೊಂದು ಸಾವಿರ ಸದಸ್ಯರನ್ನು ಒಟ್ಟುಗೂಡಿಸಿದ್ದಾರೆ. ಸೌದಿಯ ದುಡ್ಡು ಬಳಸಿಕೊಂಡು ತಬ್ಲೀಘಿಗಳು ಮೂಲಭೂತವಾದವನ್ನು ಹರಡುತ್ತಿದ್ದಾರೆ. ಮಾತ್ರವಲ್ಲ ಪಾಕಿಸ್ತಾನ ಮೂಲದ ಭಯೋತ್ಪಾದಕರಿಗೆ ಆಶ್ರಯ ನೀಡುತ್ತಿದ್ದಾರೆ ಎಂದು ಫಿಲಿಪೀನ್ಸ್ ಸರಕಾರ ಕಿಡಿಕಾರಿದೆ. ಪಾಕಿಸ್ತಾನ ಮತ್ತು ಅಲ್ಜೀರಿಯಾದಿಂದ ಪ್ರತೀ ವರ್ಷವೂ ಅಂದಾಜು 900 ಜನರನ್ನು ಉಗ್ರತರಬೇತಿಗೆ ತಬ್ಲೀಘಿ ಜಮಾತ್ ಕಳುಹಿಸುತ್ತಿದೆ. 1999ರಲ್ಲಿ ತನ್ನ ದೇಶದ 400ಕ್ಕೂ ಹೆಚ್ಚು ಯುವಕರನ್ನು ತಬ್ಲೀಘಿ ಜಮಾತ್ ಉಗ್ರತರಭೇತಿಗೆ ಕಳಿಸಿತ್ತು ಅಂತ ಉಜ್ಬೇಕಿಸ್ತಾನ್ ಆಪಾದನೆ ಮಾಡಿತ್ತು. 1998-99ರಲ್ಲಿ ಇಂಗ್ಲೆಂಡು, ಫ್ರಾನ್ಸ್ ಗಳಿಂದ ಸಾವಿರಾರು ಯುವಕರನ್ನು ತಬ್ಲೀಘಿ ಉಗ್ರತರಬೇತಿಗೆ ಕಳುಹಿಸಿತ್ತು. ಅಮೇರಿಕಾದಲ್ಲಿ ವಲಸಿಗರನ್ನು ಬಳಸಿಕೊಂಡು ಬೆಳೆದ ಜಮಾತ್ ಕನಿಷ್ಟ ಎರಡು ಸಾವಿರ ಅಮೇರಿಕರನ್ನರನ್ನು ಪಾಕಿಸ್ತಾನದಲ್ಲಿ ತರಬೇತುಗೊಳಿಸಿ ತಾಲಿಬಾನ್, ಆಲ್ಖೈದಾಗಳಿಗೆ ಸೇರಿಸಿತ್ತು. ನ್ಯೂಯಾರ್ಕ್ ನ ಕ್ವೀನ್ಸ್ನಲ್ಲಿರುವ ಅಲ್ ಫಲಾಹ್ ಮಸೀದಿ ಸದ್ಯಕ್ಕೆ ತಬ್ಲೀಘಿ ಜಮಾತ್ ನ ಕೇಂದ್ರ ಕಛೇರಿ. ಸೌದಿಯಿಂದ ನಿಯಂತ್ರಿಸಲ್ಪಡುವ ವರ್ಲ್ಡ್ ಮುಸ್ಲಿಂ ಲೀಗ್, ವರ್ಲ್ಡ್ ಅಸ್ಸೆಂಬ್ಲೀ ಆಫ್ ಮುಸ್ಲಿಂ ಯೂಥ್, ಇಂಟರ್ನ್ಯಾಷನಲ್ ಇಸ್ಲಾಮಿಕ್ ರಿಲೀಫ್ ಫಂಡ್ ಮುಂತಾದ ಸಂಘಟನೆಗಳುಮೂಲ ಅಮೇರಿಕರನ್ನರನ್ನು ವ್ಯವಸ್ಥಿತವಾಗಿ ಮತಾಂತರಿಸುವ ತಬ್ಲೀಘಿಗಳ ಕಾರ್ಯಕ್ಕೆ ಹಣ ಸಹಾಯ ಮಾಡುತ್ತಿವೆ. ವಿಶ್ವದಲ್ಲಿ ಅತೀ ಹೆಚ್ಚು ಕೊರೋನಾ ರೋಗಿಗಳಿರುವ ದೇಶ ಅಮೇರಿಕಾ. ಇದನ್ನು ಹರಡುವಲ್ಲಿ ತಬ್ಲೀಘಿಗಳ ಪಾತ್ರವನ್ನು ಅಲ್ಲಗೆಳೆಯಲಾಗದು. ದೆಹಲಿಯಲ್ಲಿ ತಬ್ಲೀಘಿಗಳ ಬೃಹತ್ ಸಭೆ ನಡೆದಂತೆ ಅದೇ ಸಮಯದಲ್ಲಿ ಪಾಕಿಸ್ತಾನದ ರಾಯ್ವಿಂಡಿನಲ್ಲಿ ಸುಮಾರು ಎರಡೂವರೆ ಲಕ್ಷ ಜನರನ್ನು ಸೇರಿಸಿ ತಬ್ಲೀಘಿಗಳ ಬೃಹತ್ ಸಮಾವೇಶ ನಡೆದಿತ್ತು. ಸಭೆಯ ಬಳಿಕ ಅವರೆಲ್ಲಾ ಪಾಕಿಸ್ತಾನದ ಹಳ್ಳಿ ಹಳ್ಳಿಗೂ ಹೋಗಿ ಕೊರೋನಾವನ್ನು ಹರಡಿದರು. ಒಂದು ಮೂಲದ ಪ್ರಕಾರ 15ಸಾವಿರ ಪಾಕ್ ಯೋಧರಿಗೆ ಕೋರೋನಾ ರೋಗವಿದೆ. ಅಲ್ಲಿ ಪರೀಕ್ಷಾ ಸಾಮಗ್ರಿಗಳಿಲ್ಲದ ಕಾರಣ ನಿಜವಾದ ಸಂಖ್ಯೆ ಎಷ್ಟೆಂದು ದೊರಕುತ್ತಿಲ್ಲವಷ್ಟೇ! ಪಾಕಿಸ್ತಾನ ಕೊರೋನ ಬಂದವರನ್ನು, ಕೊರೋನಾದಿಂದ ಸತ್ತವರ ಹೆಣಗಳನ್ನು ತಂದು ಭಾರತದ ಗಡಿಗಳಲ್ಲಿ ಗುಡ್ಡೆ ಹಾಕುತ್ತಿದೆ. ಕೊರೋನಾ ಬರಿಸಿಕೊಂಡ ಉಗ್ರರಿಗೆ ಭಾರತದ ಒಳಗೆ ನುಸುಳಲು ಸಹಾಯ ಮಾಡುತ್ತಿದೆ.

            ಭಾರತದ ರಾಷ್ಟ್ರಪತಿಯಾಗಿದ್ದ ಝಾಕೀರ್ ಹುಸ್ಸೈನ್ ತಬ್ಲೀಘಿ ಜಮಾತ್ ಸಹವರ್ತಿಯಾಗಿದ್ದ. ಪಾಪ್ ಸಿಂಗರ್ ಜುನೈದ್ ತಬ್ಲೀಘಿಗಳೊಡನೆ ಸಂಪರ್ಕವಿರಿಸಿಕೊಂಡಿದ್ದ. ಕ್ರಿಕೆಟರುಗಳಾಗಿದ್ದ ಶಾಹಿದ್ ಅಫ್ರಿದಿ, ಹಿಂದೆ ಕ್ರೈಸ್ತನಾಗಿದ್ದು ಇಸ್ಲಾಮಿಗೆ ಮತಾಂತರ ಹೊಂದಿದ್ದ ಮಹಮ್ಮದ್ ಯೂಸುಫ್, ಸಕ್ಲೈನ್ ಮುಷ್ತಾಕ್, ಇಂಜಮಾಮುಲ್ ಹಕ್, ಸಯೀದ್ ಅನ್ವರ್ ಇವರೆಲ್ಲಾ ತಬ್ಲೀಘಿ ಜಮಾತಿನ ಸಕ್ರಿಯ ಸದಸ್ಯರು! ಜಿಯಾ ಉಲ್ ಹಕ್, ನವಾಜ್ ಷರೀಫ್ ನ ಅಪ್ಪ ಮುಹಮ್ಮದ್ ಷರೀಫ್ ತಬ್ಲೀಘಿಗಳ ಅನ್ನದಾತರೂ, ಹಣಕಾಸು ಸೌಲಭ್ಯ ಒದಗಿಸುವವರೂ ಆಗಿದ್ದರು. ಪಾಕಿಸ್ತಾನದ ರಾಷ್ಟ್ರಪತಿಯಾಗಿದ್ದ ಮುಹಮ್ಮದ್ ರಫೀಕ್ ತರಾರ್ ಮತ್ತು ಐ ಎಸ್ ಐ ಮುಖ್ಯಸ್ಥ ಜಾವೇದ್ ನಾಸಿರ್ ತಬ್ಲೀಘಿ ಜಮಾತ್ ನ ಸದಸ್ಯರಾಗಿದ್ದವರೇ. ಬೆನಜಿರ್ ಭುಟ್ಟೋ ಸರಕಾರವನ್ನು ಕಿತ್ತೊಗೆಯಲು ಸಂಚು ಹೂಡಿದ್ದೂ ಈ ತಬ್ಲೀಘಿಗಳೇ. ತನ್ನ ಮತ ಪ್ರಚಾರಕ್ಕಷ್ಟೇ ಇರುವ ಸಂಘಟನೆ ಎನ್ನುವ ಹಣೆಪಟ್ಟಿಯನ್ನು ಬಳಸಿಕೊಂಡು ಹಲವು ಭಯೋತ್ಪಾದನಾ ಕೃತ್ಯಗಳಿಗೆ ತಬ್ಲೀಘಿ ಜಮಾತ್ ಸಹಾಯ ಮಾಡಿದೆ. ಮೊರಾಕೋದ ಅಲ್ ಸಲಫಿಯಾಹ್ ಅಲ್ ಜಿಹಾದಿಯಾ ಎಂಬ ಉಗ್ರ ಸಂಘಟನೆ ತನ್ನ ಕರಪತ್ರದಲ್ಲಿ ತನ್ನ ಸದಸ್ಯರಿಗೆ ತಬ್ಲೀಘಿ ಜಮಾತ್ ನ ಸದಸ್ಯರಾಗುವಂತೆ ಕೇಳಿಕೊಂಡಿತ್ತು.

         ತಮ್ಮದೇ ಮಸೀದಿಗಳನ್ನು ನಡೆಸುವ ತಬ್ಲೀಘಿಗಳು ತಾವು ತೆರಳಿದ ಊರಿನ ಮಸೀದಿಯನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುತ್ತಾರೆ. ಅಲ್ಲಿ ತಮ್ಮ ಮತಾಂತರ ಕಾರ್ಯಕ್ರಮವಾದ “ದಾವಾ”ಗಳಲ್ಲಿ ಭಾಗವಹಿಸುವಂತೆ ಆ ಊರಿನ ಯುವಕರನ್ನು  ಪ್ರೇರೇಪಿಸುತ್ತಾರೆ. ಮನಸ್ಸು ಕೆರಳಿಸುವ ಮತೀಯ ಭಾಷಣಗಳನ್ನು ತೋರಿಸಿ ಅವರನ್ನು ಮೂಲಭೂತವಾದಕ್ಕೆ ವಾಲುವಂತೆ ಮಾಡುತ್ತಾರೆ. ಬಳಿಕ ನಿಧಾನವಾಗಿ ಇಸ್ಲಾಮಿನ ಉನ್ನತ ಶಿಕ್ಷಣದ ಆಮಿಷವೊಡ್ಡಿ ತಮ್ಮ ಕೇಂದ್ರ ಕಚೇರಿಯಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಕಳಿಸಿಕೊಡುತ್ತಾರೆ. ಅಲ್ಲಿಂದ ಕಟ್ಟರ್ ಮೂಲಭೂತವಾದಿ ಎಂದು ಗುರುತಿಸಿದವರನ್ನು ರಾಯ್ ವಿಂಡಿಗೆ ಕಳುಹಿಸಿ ಭಯೋತ್ಪಾದನಾ ತರಬೇತಿ ಕೊಡಿಸುತ್ತಾರೆ. ಕೊರೋನಾ ಪರೀಕ್ಷೆ ಮಾಡಿಸದೆ ಅಂಡಲೆಯುವ, ಆಸ್ಪತ್ರೆಗೆ ಕರೆದೊಯ್ಯುವಾಗ ಬಸ್ಸಿಂದ ಸಿಕ್ಕಸಿಕ್ಕವರ ಮೇಲೆ ಉಗುಳುವ, ಕ್ವಾರಂಟೈನ್ಗೆ ಒಳಪಡಿಸಿದಾಗ ತಾವು ಕೇಳಿದ್ದೆಲ್ಲಾ ಕೊಡಬೇಕೆಂದು ಜಬರ್ದಸ್ತು ಮಾಡುವ, ಆಸ್ಪತ್ರೆಯಲ್ಲೇ ಜತೆಜತೆಯಾಗಿ ಕೂತು ನಮಾಜ್ ಮಾಡುವ, ದಾದಿಯರ ಮುಂದೆ ನಗ್ನರಾಗಿ ತಿರುಗುವ, ಅಶ್ಲೀಲ ಹಾಡುಗಳನ್ನು ಜೋರುದನಿಯಲ್ಲಿ ಹಾಡುವ, ಸಿಗರೇಟಿಗಾಗಿ ಪೀಡಿಸುವ, ಮೂತ್ರವನ್ನು ನೀರಿನ ಬಾಟಲಿಯಲ್ಲಿ ಸಂಗ್ರಹಿಸಿಡುವ, ಎಲ್ಲರೆದುರೇ ಮಲವಿಸರ್ಜನೆ ಮಾಡುವ, ಸಾಯುವ ಮುನ್ನ ಊರಿಗೇ ರೋಗ ಹಬ್ಬಿಸಿ ಸಾಯುತ್ತೇವೆ ಎನ್ನುವ, ವೈದ್ಯರು, ಆರೋಗ್ಯ ಕಾರ್ಯಕರ್ತರು, ಪೊಲೀಸರ ಮೇಲೆಯೇ ಕಲ್ಲೆಸೆಯುವ, ತಮ್ಮ ವಿರುದ್ಧ ಬರೆದವರಿಗೆ ಜೀವ ಬೆದರಿಕೆಯೊಡ್ಡುವ, ತಮ್ಮ ವಿರುದ್ಧ ಬರೆದವನನ್ನು ಗುಂಡಿಟ್ಟು ಕೊಲ್ಲುವ ಈ ತಬ್ಲೀಘಿಗಳದ್ದೂ ವ್ಯವಸ್ಥಿತ ಸಂಚು ಎಂದು ಬುದ್ಧಿಯಿದ್ದ ಯಾರಿಗಾದರೂ ಅನ್ನಿಸುವುದಿಲ್ಲವೇ? ಅನ್ನಿಸದೇ ಇದ್ದರೆ ಆತ ತನ್ನತನವನ್ನು ಮಾರಿಕೊಂಡಿದ್ದಾನೆ, ಮುಸ್ಲಿಂ ಮತಬೇಟೆಗೆ ಹಪಹಪಿಸುತ್ತಿದ್ದಾನೆ ಎಂದೇ ಅರ್ಥ!

ಗೆದ್ದರೂ ಗೆಲುವಿಲ್ಲದ ಅಬ್ದಾಲಿಯ ದಂಡಯಾತ್ರೆ

ಗೆದ್ದರೂ ಗೆಲುವಿಲ್ಲದ ಅಬ್ದಾಲಿಯ ದಂಡಯಾತ್ರೆ


               ಅಹಮದ್ ಶಾ ಅಬ್ದಾಲಿ. 1761ರ ಪಾಣಿಪತ್ ಯುದ್ಧದ ಮೂಲಕ ಚರಿತ್ರೆಯಲ್ಲಿ ದಾಖಲಾದ ಹೆಸರು. ಅಪ್ಘಾನಿಸ್ತಾನ ಒಂದು ಕಾಲದಲ್ಲಿ ಹಿಂದೂ ರಾಷ್ಟ್ರವಾಗಿದ್ದರೂ ಅಹಮದ್ ಶಾ ಅಬ್ದಾಲಿಯನ್ನು ತಮ್ಮ ರಾಷ್ಟ್ರಪಿತ ಎಂದೇ ಆಧುನಿಕ ಅಪ್ಘನ್ನರು ಭಾವಿಸಿದ್ದಾರೆ. 1762ರಲ್ಲಿ ಸಿಖ್ಖರ ಘಲ್ಲುಘಾರವನ್ನೇ (ಜನಾಂಗೀಯ ಹತ್ಯೆ) ಹಮ್ಮಿಕೊಂಡ ಈತ ಅಮೃತಸರದ ಹರ್ ಮಂದಿರ ಸಾಹಿಬವನ್ನೇ ಅಪವಿತ್ರಗೊಳಿಸಿದ. ಹಲವು ಮಂದಿರಗಳನ್ನು ನಾಶಗೊಳಿಸಿದ ಈತನ ರಕ್ತದಾಹಕ್ಕೆ ಮಥುರೆಯಲ್ಲಿ ಯಮುನೆ ಏಳು ದಿನಗಳ ಕಾಲ ಕೆಂಪಾಗಿ ಹರಿದಳಂತೆ. ಎಲ್ಲೆಂದರಲ್ಲಿ ರಕ್ತಸಿಕ್ತವಾದ ಹೆಣಗಳು! ಅಬ್ದಾಲಿಯನ್ನು ಮಹಾವೀರನೆಂದೂ, ಭಾರತವನ್ನು ಗೆದ್ದನೆಂದು ವೈಭವೀಕರಿಸಲಾಗುತ್ತದೆ. ಆದರೆ ಅದು ನಿಜವೇ ಎನ್ನುವುದನ್ನು ಹಾಗೂ ಅಬ್ದಾಲಿ ಭಾರತದ ಮೇಲೆ ದಂಡೆತ್ತಿ ಬರಲು ಕಾರಣವೇನು ಎನ್ನುವುದನ್ನು ಸ್ವಲ್ಪ ವಿಶ್ಲೇಷಿಸೋಣ.

         ಮರಾಠಾ ಕೇಸರಿ ಪಡೆ ಭಾರತವನ್ನಿಡೀ ಆವರಿಸುತ್ತಾ ಸಾಗಿತ್ತು. ದಿಲ್ಲಿಯ ಗದ್ದುಗೆಯಲ್ಲಿದ್ದ ಮೊಘಲರು ಮರಾಠಾ ವೀರರೆದುರು ಹಲ್ಲು ಕಿತ್ತ ಹಾವಿನಂತಾಗಿದ್ದರು. ದಿಲ್ಲಿಯ ಗದ್ದುಗೆಯಿಂದ ಮೊಘಲರನ್ನು ಇಳಿಸಿ ತನ್ನ ಮಗನಾದ ವಿಶ್ವಾಸ್ ರಾವ್ ನನ್ನು ಕೂರಿಸುವ ಎಲ್ಲಾ ಸಿದ್ದತೆಗಳನ್ನು ಬಾಲಾಜಿ ರಾವ್ ಪೇಶ್ವೆ ಮಾಡಿದ್ದ. ಆದರೆ ಅಷ್ಟರಲ್ಲೇ ಅಫ್ಘಾನಿನ ದೊರೆ ಅಹಮದ್ ಶಾಹ್ ದುರಾನಿ (ಅಬ್ದಾಲಿ) ಭಾರತದ ಮೇಲೆ ದಂಡೆತ್ತಿ ಬಂದ. ಭಾರತದೊಂದಿಗೆ ರಾಜಕೀಯ ಸಂಬಂಧವೇ ಇರದಿದ್ದ ಅಬ್ದಾಲಿ ಭಾರತದ ಮೇಲೆ ದಾಳಿಗೆ ಬರಲು ಕಾರಣವೇನು ಎನ್ನುವುದನ್ನು ಹೊ.ವೆ. ಶೇಶಾದ್ರಿ, ಸೀತಾರಾಮ್ ಗೋಯಲರನ್ನು ಬಿಟ್ಟರೆ ಬೇರಾವ ಇತಿಹಾಸಕಾರರೂ ಗಮನಿಸಿದಂತೆ, ವಿಮರ್ಶಿಸಿದಂತೆ ಕಂಡಿಲ್ಲ. ಭಾರತವನ್ನು ಆಕ್ರಮಿಸುವಂತೆ ಅಬ್ದಾಲಿಗೆ ಆಹ್ವಾನವಿತ್ತವ ಷಾಹ್ ವಲಿಯುಲ್ಲಾ ಎಂಬ ಸೂಫಿ ಸಂತ.

          ಸೂಫಿಯೊಬ್ಬ ಔರಂಗಜೇಬನ ಫತ್ವಾ-ಐ-ಆಲಂಗೀರಿಯನ್ನು ಬರೆದನಲ್ಲಾ; ಆ ಸೂಫಿ ಷಾಹ್ ಅಬ್ದುಲ್ ರಹೀಮನ ಮಗ ಷಾಹ್ ವಲಿಯುಲ್ಲಾ. ಸೂಫಿ ಪಂಥದ ಬಗೆಗೆ ಇನ್ನೂ ಒಳ್ಳೆಯ ಅಭಿಪ್ರಾಯ ಇರುವವರೆಲ್ಲಾ ಸೂಫಿ ಮನಸ್ಸಿನ ಈ ಬೃಹತ್ ಕೃತಿಯನ್ನು ಓದಬೇಕು! ವಲಿಯುಲ್ಲಾನೂ ಸೂಫಿಯೇ. ಅವನಿಗೆ ಆದರ್ಶ ಯಾವ ಸಂತನೂ ಅಲ್ಲ; ಘಜನಿ ಮೊಹಮ್ಮದನೇ ಆತನ ನಾಯಕ! ಆತನ ಪ್ರಕಾರ ಇಸ್ಲಾಮೀ ಇತಿಹಾಸದಲ್ಲಿ ನಾಲ್ವರು ಖಲೀಫರ ಬಳಿಕದ ಸರ್ವಶ್ರೇಷ್ಠ ವ್ಯಕ್ತಿಯೆಂದರೆ ಘಜನಿ! ಪ್ರವಾದಿ ಮಹಮ್ಮದರ ಜಾತಕದಂತೆಯೇ ಘಜನಿಯ ಜಾತಕವೂ ಇತ್ತು; ಪ್ರವಾದಿಯವರಷ್ಟೇ ಸಂಖ್ಯೆಯ ಮತ್ತು ಮಹತ್ತಿನ ಜಿಹಾದ್'ಗಳಲ್ಲಿ ಘಜನಿ ಜಯಗಳಿಸಿದ್ದ ಎಂದು ಕೊಂಡಾಡುತ್ತಾನೆ ವಲಿಯುಲ್ಲಾ. ಮೆಕ್ಕಾ, ಮದೀನಾಗಳಿಗೆ ಯಾತ್ರೆ ಕೈಗೊಂಡ ಹಾಗೂ ಹಲವು ಸೂಫಿ, ಮೌಲ್ವಿಗಳ ಬಳಿ ಅಭ್ಯಾಸ ಮಾಡಿದ ಬಳಿಕವಂತೂ ಈತ ಮತ್ತಷ್ಟು ಭಯಾನಕವಾಗಿದ್ದ. 1732-62ರ ಅವಧಿಯಲ್ಲಿ ಆತ ಬರೆದಿದ್ದ 43 ಗ್ರಂಥಗಳಲ್ಲಿದ್ದ ಜಿಹಾದಿಗೂ ದೇಶದ ಮೂಲೆಯ ಹಳ್ಳಿಯೊಂದರ ಮಸೀದಿಯಲ್ಲಿ ಬೊಬ್ಬೆ ಹೊಡೆವ ಮುಲ್ಲಾನ ಜಿಹಾದಿಗೂ ಏನೂ ವ್ಯತ್ಯಾಸವಿರಲಿಲ್ಲ! ವಾಸ್ತವವಾಗಿ ಅದರಲ್ಲಿದ್ದುದು ಹಾಗೂ ವಲಿಯುಲ್ಲಾ ನಡೆಸಿದ್ದು ಹಿಂದೂಗಳ ವಿರುದ್ಧ ನಡೆದು ಬಂದಿದ್ದ ಹಳೆಯ ಇಸ್ಲಾಮೀ ಮತೀಯ ಯುದ್ಧದ ಮುಂದುವರಿಕೆಯನ್ನೇ! ಭಾರತದ ಮೇಲೆ ದಾಳಿ ಮಾಡೆಂದು ಸತತ ಪತ್ರಗಳನ್ನು ಬರೆದು ಅಬ್ದಾಲಿಯನ್ನು ಆಹ್ವಾನಿಸಿದವ ಈ ವಲಿಯುಲ್ಲಾನೇ.

           ವಲಿಯುಲ್ಲಾನ ಕಾಲದಲ್ಲಿ ಹಿಂದೂ ಕೇಸರಗಳ ಘರ್ಜನೆಗೆ ಮತಾಂಧ ಮುಸ್ಲಿಂ ಸಾಮ್ರಾಜ್ಯಶಾಹಿ ನಲುಗಿ ನಡುಗುತ್ತಿತ್ತು. ಭಾರತದ ಮೇಲೆ ಆಕ್ರಮಣಗೈದು ಈ ಪರಿಸ್ಥಿತಿಯನ್ನು ಬದಲಿಸುವಂತೆ ಆತ ಅಬ್ದಾಲಿಗೆ ಪತ್ರ ಬರೆದ. ಅದಕ್ಕಾಗಿ ಹಿಂದಣ ಮುಸ್ಲಿಮ್ ಆಕ್ರಮಕಕಾರರು ಅನುಸರಿಸಿದ ರೀತಿ ನೀತಿಗಳನ್ನೆಲ್ಲಾ ವಿವರಿಸಿದ. ಭಾರತವನ್ನು ವಿದೇಶೀ ನೆಲವೆನ್ನುವ, ಹಿಂದೂಸ್ಥಾನದಲ್ಲಿ ಇಸ್ಲಾಮೀ ದೊರೆಗಳಿರುವುದು ಅಲ್ಲಾನ ಅನುಗ್ರಹವೆನ್ನುವ, ಹಿಂದೂಗಳನ್ನು ಕಾಫಿರರೆಂದು ಕರೆದು ಅವರನ್ನು ಕೊಚ್ಚಿ ಹಾಕಬೇಕೆನ್ನುವ ಅವನ ಮಾತುಗಳಲ್ಲಿ ಇಸ್ಲಾಮ್ ವಿಷ ನಖಶಿಖಾಂತ ತುಂಬಿರುವುದನ್ನು ಕಾಣಬಹುದು. ಹೇಗೆ ಕೃಷಿಕರಾಗಿದ್ದ ಜಾಟರು ಶಸ್ತ್ರಾಸ್ತ್ರಗಳ ಪ್ರಯೋಗವನ್ನು ಕಲಿತು, ಪ್ರಬಲರಾಗಿ ಕೋಟೆಗಳನ್ನು ನಿರ್ಮಿಸಿ ಸೂರಜ್ ಮಲ್'ನ ನೇತೃತ್ವದಲ್ಲಿ 700 ವರ್ಷಗಳ ಕಾಲ ಮುಸ್ಲಿಮರ ಆಳ್ವಿಕೆಯಲ್ಲಿದ್ದ ಬಯಾನಾ ನಗರವನ್ನು ವಶಪಡಿಸಿಕೊಂಡು ಹಿಂದುತ್ವದ ರಕ್ಷಕರಾಗಿದ್ದಾರೆ ಎನ್ನುವುದನ್ನು ವಿವರಿಸಿದ. ಮರಾಠರು ತಮ್ಮ ಪ್ರಭಾವೀ ನಾಯಕನ ಆಜ್ಞೆಯನ್ನು ಶಿರಸಾವಹಿಸಿ ಇಡೀ ಹಿಂದೂಸ್ಥಾನದಲ್ಲಿ ಪ್ರಭಾವಶಾಲಿಯಾದ ಬಗೆಯನ್ನೂ ಬರೆದ. ಹಿಂದೂಸ್ಥಾನದಲ್ಲಿ ಮುಸ್ಲಿಮರು ತಮ್ಮೆಲ್ಲಾ ಅಧಿಕಾರವನ್ನು ಕಳೆದುಕೊಂಡು ದಟ್ಟ ದಾರಿದ್ರ್ಯದಿಂದ ಎರಡನೇ ದರ್ಜೆಯ ಪ್ರಜೆಗಳಂತೆ ಬದುಕುತ್ತಿದ್ದಾರೆ ಎನ್ನುವ ಕಪೋಲಕಲ್ಪಿತ ಕರುಣಾಜನಕ ಕಥೆಯನ್ನೂ ಬರೆದ. ಹಿಂದೂಸ್ಥಾನದ ಮೇಲೆ ದಾಳಿ ನಡೆಸಿ ಮರಾಠ, ಜಾಟರನ್ನು ಮುರಿದು ಮುಸ್ಲಿಮರಿಗೆ ಮತ್ತೆ ಅಧಿಕಾರ ಒದಗಿಸಿಕೊಡುವುದು ತಮ್ಮ ಕರ್ತವ್ಯವಾಗಿದ್ದು ನಿಮ್ಮ ಹೆಸರು ಮುಜಾಹಿದೀನ್ ಫಿ ಸಬೀಲಲ್ಲಾ(ಅಲ್ಲಾನ ಸೇವಕ ಯೋಧ)ರ ಪಟ್ಟಿಗೆ ಸೇರುತ್ತದೆ. ಅಪಾರ ಸಂಪತ್ತು ತಮ್ಮದಾಗುತ್ತದೆ ಎಂದು ಗೋಗರೆದ. ಮಾತ್ರವಲ್ಲ ಆಕ್ರಮಣ ಮಾಡುವ ವೇಳೆಗೆ ಮುಸಲರು ಹಾಗೂ ಮುಸ್ಲಿಮೇತರರು ಒಟ್ಟಾಗಿ ವಾಸಿಸುವ ಪ್ರದೇಶಗಳಲ್ಲಿ ಯಾವುದೇ ಮುಸಲ್ಮಾನರ ಆಸ್ತಿ, ಗೌರವಕ್ಕೆ ಚ್ಯುತಿಯಾಗದಂತೆ ವರ್ತಿಸಬೇಕು ಎಂದೂ ಬರೆದ. ಬಳಿಕ ಹಲವು ಮುಸ್ಲಿಮ್ ಸರದಾರರುಗಳಿಗೆ ಪತ್ರ ಬರೆದು ಅಬ್ದಾಲಿಗೆ ಸಹಾಯಕರಾಗುವಂತೆ ವಿನಂತಿಸಿದ.

          ಹಾಗೆ ದಂಡೆತ್ತಿ ಬಂದ ಅಬ್ದಾಲಿಗೂ ಮರಾಠಾ ಕೇಸರಿಗಳಿಗೂ ನಿರ್ಣಾಯಕ ಕದನ ನಡೆದದ್ದು ಪಾಣಿಪತ್ತಿನಲ್ಲಿ. ಅದು ಆಧುನಿಕ ಇತಿಹಾಸದಲ್ಲಿ ದಾಖಲಾದ ಪಾಣಿಪತ್ತಿನಲ್ಲಿ ನಡೆದ ಮೂರನೆಯ ಮಹಾಯುದ್ಧ. ಮೊದಲ ಪಾಣಿಪತ್ ಯುದ್ಧ ಮೊಘಲರಿಗೆ ದೆಹಲಿಯ ಗದ್ದುಗೆಯೊದಗಿಸಿದರೆ, ಎರಡನೇಯ ಪಾಣಿಪತ್ ಯುದ್ಧದಲ್ಲಿ ಅಭಿನವ ವಿಕ್ರಮಾದಿತ್ಯ, ಅಜೇಯ ಸಾಹಸಿ ವೀರ ಹೇಮಚಂದ್ರ ಕೂದಲೆಳೆಯ ಅಂತರದಿಂದ ಸೋತ ಕಾರಣ ದೆಹಲಿ ಮತ್ತೆ ಹಿಂದೂ ಸಿಂಹಾಸನವಾಗುವುದನ್ನು ತಪ್ಪಿಸಿತು. ಅದ ಹೇಮುವಿನ ಸೋಲಲ್ಲ, ಬದಲಾಗಿ ವಿಧಿ ಕೈಕೊಟ್ಟಿತು ಎನ್ನಬಹುದು. ಮೂರನೆಯ ಪಾಣಿಪತ್ ಕದನವೂ ಹಿಂದೂಗಳು ದೆಹಲಿಯ ಗದ್ದುಗೆಯೇರುವುದನ್ನು ತಪ್ಪಿಸಿತು. ಕರ್ನಾಲ್ ಮತ್ತು ಕುಂಜಪುರಗಳ ಯಮುನಾ ನದಿಯ ದಂಡೆಯ ಮೇಲೆ ಮರಾಠರಿಗೂ ಅಪ್ಘನ್ ಸೈನ್ಯಕ್ಕೂ ಯುದ್ಧಗಳಾಗಿ ಎರಡು ತಿಂಗಳು ಮರಾಠಾ ಪಡೆ ಸರಿಯಾದ ಆಹಾರ ಸಾಮಗ್ರಿಗಳೂ ದೊರಕದೆ ದಿಗ್ಬಂಧನಕ್ಕೊಳಗಾದರೂ ಛಲದಂಕಮಲ್ಲ ಸದಾಶಿವರಾವ್ ಭಾವೂನ ನೇತೃತ್ವದಲ್ಲಿ ಅದ್ಭುತವಾಗಿ ಹೋರಾಡಿತು. ಭಾರತದಲ್ಲಿ ಮುಸ್ಲಿಂ ಆಡಳಿತದ ಅಳಿವು ಉಳಿವನ್ನು ನಿರ್ಧರಿಸಲಿದ್ದ ಈ ಯುದ್ಧದಲ್ಲಿ ಅವಧದ ನವಾಬ ಶುಜಾದ್ದೌಲಾ ಮತ್ತು ರೋಹಿಲಾಖಂಡದ ನಜೀಬುದ್ದೌಲಾ ಸೇರಿದಂತೆ ಹಲವು ಮುಸ್ಲಿಂ ದೊರೆಗಳು, ಸರದಾರರು ಅಬ್ದಾಲಿಯ ಜೊತೆ ಸೇರಿದ್ದರು. ಶುಜಾ-ಉದ್-ದೌಲಾ ಅಪ್ಘನ್ ಸೈನ್ಯಕ್ಕೆ ಬೇಕಾದ ಧನ ಸಹಾಯವನ್ನೂ ಮಾಡಿದ. ಎಷ್ಟೆಂದರೂ ಮಾತೃಭೂಮಿಯ ಕಲ್ಪನೆಯೇ ಇರದ ಅವರಿಗೆ ತಮ್ಮ ಮತಬಾಂಧವರೇ ಮುಖ್ಯರಾಗಿರುವಾಗ ಇದೇನೂ ಅಚ್ಚರಿಯ ಸಂಗತಿಯೇನಲ್ಲ. ಆದರೆ ಇದನ್ನು ಅರ್ಥ ಮಾಡಿಕೊಳ್ಳದ ಹಿಂದೂ ಪದೇ ಪದೇ ಮೋಸಕ್ಕೊಳಗಾಗುತ್ತಿರುವುದು ಮಾತ್ರ ವಿಚಿತ್ರ! ಕುಂಜಪುರದಲ್ಲಿ ನಡೆದ ಮೊದಲ ಕಾಳಗದಲ್ಲಿ ಮರಾಠಾ ಪಡೆ ಹದಿನೈದು ಸಾವಿರ ಅಪ್ಘನ್ನರನ್ನು ಕೊಚ್ಚಿ ಹಾಕಿತು. ಅಪ್ಘನ್ನರ ಇನ್ನೊಂದು ಪಡೆ ಅಬ್ದಾಲಿಯ ಜೊತೆ ಯಮುನೆಯ ಇನ್ನೊಂದು ದಡದಲ್ಲಿ ಮುಂದುವರೆಯುತ್ತಿತ್ತು. ಉಕ್ಕಿ ಹರಿಯುತ್ತಿದ್ದ ಯಮುನೆ ಶಾಂತಳಾಗುತ್ತಿದ್ದಂತೆ ಯಮುನೆಯನ್ನು ದಾಟಿದ ಅಬ್ದಾಲಿ. ಅಷ್ಟರವರೆಗೆ ಈರ್ವರೂ ಪರಸ್ಪರರ ಧಾನ್ಯಸರಬರಾಜನ್ನು ನಿಲ್ಲಿಸಲು ತಂತ್ರ ಹೂಡುತ್ತಿದ್ದರು. ಅದರಲ್ಲಿ ಅಪ್ಘನ್ ಪಡೆ ಬಹುತೇಕ ಸಫಲವಾಗಿತ್ತು. ಮುಂದಿನ ಎರಡೂ ತಿಂಗಳು ಕಣ್ಣುಮುಚ್ಚಾಲೆಯಾಟದೊಂದಿಗೆ ಮರಾಠರಿಗೆ ಸರಬರಾಜಾಗುತ್ತಿದ್ದ ಆಹಾರ ಸಾಮಗ್ರಿಗಳನ್ನು ತಪ್ಪಿಸಿತು ಅಬ್ದಾಲಿ ಪಡೆ. ಇದರಿಂದ ಡಿಸೆಂಬರ್ ಅಂತ್ಯಕ್ಕಾಗುವಾಗ ಮರಾಠಾ ಪಾಳಯದಲ್ಲಿ ಆಹಾರ ಸಾಮಗ್ರಿ ಖಾಲಿಯಾಗಿತ್ತು. ಹಸಿವಿನಿಂದ ಸಾಯುವ ಬದಲು ಯುದ್ಧಮಾಡಿ ಸಾಯುತ್ತೇವೆಂದು ಸೈನಿಕರು ಗೋಗರೆದಾಗ ಸದಾಶಿವ ಭಾವೂ ಅನುಮತಿ ನೀಡಿದ. ಹಸಿವು ನೀರಡಿಕೆಗಳನ್ನೂ ಲೆಕ್ಕಿಸದೇ ರಣಭಯಂಕರವಾಗಿ ಹೋರಾಡಿತು ಕೇಸರಿ ಪಡೆ. ಇರಲಿ ಪಾಣಿಪತ್ -3 ಯುದ್ಧ ಹಿಂದೂಗಳಿಗೆ ದೆಹಲಿಯ ಗದ್ದುಗೆಯನ್ನು ತಪ್ಪಿಸಿರಬಹುದು. ಆದರೆ ಅದು ಅಬ್ದಾಲಿಯ ವಿಜಯವೇನೂ ಆಗಿರಲಿಲ್ಲ. ಸದಾಶಿವ ಭಾವೂ ವೀರಮರಣವನ್ನಪ್ಪುವ ಮೊದಲು ಅಬ್ದಾಲಿಯ ಸೈನ್ಯವನ್ನು ನುಚ್ಚುನೂರು ಮಾಡಿದ. ಮರಾಠಾ ಕೇಸರಗಳ ಘರ್ಜನೆಗೆ ಅಬ್ದಾಲಿಯ ಸೈನ್ಯ ದಿಕ್ಕುಗೆಟ್ಟಿತ್ತು. ಎರಡೂ ಕಡೆ ಅಪಾರವಾದ ಸಾವುನೋವುಗಳು ಉಂಟಾದವು. ಅಬ್ದಾಲಿ ಜೀವ ಸಹಿತ ಉಳಿದರೂ ದೆಹಲಿಯ ಸಿಂಹಾಸನದ ಕಡೆ ಮುಖ ಮಾಡದೆ ಪೇರಿ ಕಿತ್ತ. ಇದು ಅಬ್ದಾಲಿಗಾದ ಮುಖಭಂಗವೇ ಸರಿ! ಹೆಚ್ಚಿನ ಇತಿಹಾಸಕಾರರು ಇದನ್ನು ಗುರುತಿಸಿದ್ದಾರೆ. ಸೀತಾರಾಮ ಗೋಯಲರಂತೂ ಮರಾಠರು ಹಾಗೂ ಜಾಠರನ್ನು ಅಳಿಸಿ ಹಾಕಲೆಂದು ವಲಿಯುಲ್ಲಾನಿಂದ ನೇಮಿಸಲ್ಪಟ್ಟ ಅಹ್ಮದ್ ಶಾ ಅಬ್ದಾಲಿ ಅದರಲ್ಲಿ ವಿಫಲನಾದ ಎಂದೇ ಬರೆದಿದ್ದಾರೆ.

              ಪಾಣಿಪತ್ ಕದನದ ಬಳಿಕ ಅಪ್ಘಾನಿಸ್ತಾನಕ್ಕೆ ಹಿಂದಿರುಗಿದ ಅಬ್ದಾಲಿಗೆ ಪೆಟ್ಟು ಬಿದ್ದದ್ದು ಸಿಖ್ಖರಿಂದ. ಪಂಜಾಬ್ ಪ್ರಾಂತ್ಯದಲ್ಲಿ ತಮ್ಮ ಬಲವನ್ನು ವಿಸ್ತರಿಸಿಕೊಂಡ ಸಿಖ್ಖರು ಅಬ್ದಾಲಿಯ ಸರ್ದಾರ ನೂರುದ್ದೀನ್ ಬಮಜೈನ್ನು ಸೋಲಿಸಿ ಜಸ್ಸಾ ಸಿಂಗ್ ಅಹ್ಲುವಾಲಿಯಾನನ್ನು ಲಾಹೋರಿನ ಅರಸನನ್ನಾಗಿ ಘೋಷಿಸಿದರು. ಕಂದಾಹಾರದಿಂದ ಹೊರಟ ಅಬ್ದಾಲಿ ಸಟ್ಲೇಜ್ ನದಿಯನ್ನು ದಾಟಿ ಮಾಳವದ ಕಡೆಗೆ ಹೋಗುತ್ತಿದ್ದ ಸಿಖ್ ಸಮುದಾಯ ಮೇಲೆ ಆಕ್ರಮಣ ಮಾಡಿದ. ಸಿಖ್ ಸಮೂಹ ವೃದ್ಧರು, ಹೆಂಗಳೆಯರು, ಮಕ್ಕಳನ್ನೂ ಒಳಗೊಂಡಿತ್ತು. ಅನಿರೀಕ್ಷಿತ ಆಕ್ರಮಣದಿಂದ ಅಚ್ಚರಿಗೊಂಡ ಸಿಖ್ ಪಡೆ ಅಶಕ್ತರನ್ನು ಸುತ್ತುವರೆದು ನಿಂತು ಅಬ್ದಾಲಿಯನ್ನು ಎದುರಿಸಿತು. ಕೊನೆಗೂ ಅಬ್ದಾಲಿ ಆ ಚಕ್ರವ್ಯೂಹವನ್ನು ಭೇದಿಸಿ ಕಸಾಯಿಖಾನೆಯಲ್ಲಿ ಕೊಚ್ಚುವಂತೆ ಸಿಖ್ಖರನ್ನು ತರಿದು ಹಾಕಿದ. ಫೆಬ್ರವರಿ 5, 1762ರ ಒಂದೇ ದಿನ 25ಸಾವಿರ ಸಿಖ್ಖರ ಖೂನಿಯಾಯಿತು. ಆದರೆ ಅದು ಸಿಖ್ಖರನ್ನು ಧೃತಿಗೆಡಿಸುವ ಬದಲು ಮತ್ತಷ್ಟು ಗಟ್ಟಿ ಮಾಡಿತು. ಏಪ್ರಿಲ್ 1762ರಲ್ಲಿ ಆತ ಗನ್ ಪೌಡರ್ನಿಂದ ಅಮೃತಸರದ ಹರಿಮಂದಿರ ಸಾಹಿಬಾವನ್ನು ಸ್ಫೋಟಿಸಿದಾಗ ಕ್ರುದ್ಧರಾದ ಸಿಖ್ಖರು ಅಕ್ಟೋಬರಿನವರೆಗೂ ಸತತವಾಗಿ ವೀರಾವೇಶದಿಂದ ಹೋರಾಡಿ ಅವನನ್ನು ಹಿಮ್ಮೆಟ್ಟಿಸಿಬಿಟ್ಟರು!

                 1764ರಲ್ಲಿ ಅಬ್ದಾಲಿ ಬಲೂಚಿನ ಅಮೀರ್ ನಾಸಿರ್ ಖಾನನನ್ನು ಜೊತೆಯಾಗಿಸಿಕೊಂಡು ಅಮೃತಸರದ ಮೇಲೆ ದಾಳಿ ಮಾಡಿದ. ಈ ಬಾರಿ ಕೇವಲ ಮೂವತ್ತು ಜನ ಸಿಖ್ಖರ ಗುಂಪು ಅವನ ಸೈನ್ಯವನ್ನು ಹಣ್ಣುಗಾಯಿ ನೀರುಗಾಯಿ ಮಾಡಿ, ಸಿರ್ಹಿಂದ್ ಪ್ರದೇಶದಿಂದ ಮುಂದುವರೆಯದಂತೆ ತಡೆದು ಬಲಿದಾನಗೈದಿತು. ಜಸ್ಸಾ ಸಿಂಗ್ ಅಹ್ಲುವಾಲಿಯಾನ ನೇತೃತ್ವದಲ್ಲಿ ಸಿಖ್ ಸರ್ದಾರರು  ಸತತವಾಗಿ ಗೆರಿಲ್ಲಾ ದಾಳಿ ಮಾಡಿ ಅವನ ಸಂಪತ್ತನ್ನೆಲ್ಲಾ ಮರುವಶಪಡಿಸಿಕೊಂಡರು. ಇದರ ಜೊತೆಗೆ ಚೀನಾಬ್ ನದಿಯ ಪ್ರವಾಹಕ್ಕೆ ಅವನ ಸೈನಿಕರನೇಕರು ಕೊಚ್ಚಿ ಹೋದರು. ಇದು ಅಬ್ದಾಲಿಯನ್ನು ಅಕ್ಷರಶಃ ನಡುಗಿಸಿತು. 1766ರಲ್ಲಿ ಮತ್ತೆ ಸಿಖ್ಖರ ಮಟ್ಟ ಹಾಕಲೆಂದು ಬಂದನಾದರೂ ಅವನ 6000 ಸೈನಿಕರು ಕೊಲ್ಲಲ್ಪಟ್ಟರು. ಲಾಹೋರಿನ ಆಡಳಿತವನ್ನು ಲಹಿನಾ ಸಿಂಗ್ ಭಾಂಗಿಗೆ ಕೊಡುವ ಪ್ರಲೋಭನೆಯೊಡ್ಡಿ ಸಿಖ್ಖರನ್ನು ಒಡೆಯಲು ನೋಡಿದ ಅವನ ಆಟವೂ ನಡೆಯಲಿಲ್ಲ. ಜಸ್ಸಾ ಸಿಂಗ್ 30ಸಾವಿರ ಸಿಖ್ ಯೋಧರೊಡನೆ ತನ್ನ ಸೈನ್ಯ ಬೀಡುಬಿಟ್ಟ ಸ್ಥಳಕ್ಕೆ ಧಾವಿಸಿ ಬರುತ್ತಿರುವ ಸುದ್ದಿ ಕೇಳಿದ ಮೇಲೆ ಹಾಗೂ ಆತನ ಸೈನಿಕರು ಪಂಜಾಬಿನ ರಣಬಿಸಿಲಿಗೆ ಬಸವಳಿದುದನ್ನು ನೋಡಿ ಭಯಭೀತನಾದ ಆತ ಅಪ್ಘಾನಿಸ್ಥಾನಕ್ಕೆ ಓಟಕ್ಕಿತ್ತ!

               1748-65ರ ನಡುವೆ ಅಹಮದ್ ಶಾ ಅಬ್ದಾಲಿ ಭಾರತದ ಮೇಲೆ 9 ಬಾರಿ ಆಕ್ರಮಣ ಮಾಡಿದ. ಅವನ ಈ ದಾಳಿಯ ವಿರುದ್ಧ ಸಂಘಟಿತರಾದ ಸಿಖ್ಖರು ಮಧ್ಯಾಹ್ನದ ಬಿರು ಬಿಸಿಲಿನಲ್ಲಿ ಮತ್ತು ನಟ್ಟಿರುಳಲ್ಲಿ ಆಕ್ರಮಣಕಾರರ ಮೇಲೆ ಗೆರಿಲ್ಲಾ ದಾಳಿ ನಡೆಸಿ ಅವರು ಸೂರೆಗೈದಿದ್ದ ಸಂಪತ್ತು ಹಾಗೂ ಭಾರತೀಯರನ್ನು ಬಿಡಿಸಿ ತರುತ್ತಿದ್ದರು. ಹೆಂಗಳೆಯರನ್ನು ಅವರ ಮನೆಗಳಿಗೆ ಗೌರವಪೂರ್ವಕವಾಗಿ ಕಳುಹುತ್ತಿದ್ದರು. ಸಣ್ಣ ಸಣ್ಣ ಗುಂಪುಗಳಲ್ಲಿ ಬಂದು ದಾಳಿಯೆಸಗುವ ಸಿಖ್ಖರ ಈ ಯುದ್ಧ ವೈಖರಿ ಅಪ್ಘನ್ನರನ್ನು ಅಕ್ಷರಶಃ ನಡುಗಿಸಿಬಿಟ್ಟಿತ್ತು. ಸಿಖ್ಖರು ಹನ್ನೆರಡು ಗಂಟೆಗೆ ಸರಿಯಾಗಿ ಆವೇಶಗೊಳ್ಳುತ್ತಿದ್ದ ಈ ಘಟನೆಯೇ ಇಂದಿಗೂ ಸಿಖ್ಖರನ್ನು ತಮಾಷೆ ಮಾಡುವ "ಸರ್ದಾರ್ ಜೀ ಕಾ ಬಾರಹ್ ಬಜ್ ಗಯಾ" ಎಂಬ ಮಾತಿಗೆ ಮೂಲವಾಗಿದೆ.

      ಉಜ್ಜಯಿನಿಯಲ್ಲಿ ದ್ವಾರಕಾಧೀಶ ಎಂದು ಕರೆಯಲ್ಪಡುವ ಒಂದು ಗೋಪಾಲ ಮಂದಿರವಿದೆ. ಈ ದೇವಾಲಯದ ಗರ್ಭಗುಡಿಯ ಬಾಗಿಲುಗಳಿಗೆ ಬೆಳ್ಳಿಯ ಲೇಪನವಿತ್ತು. ಅಹಮದ್ ಶಾ ಅಬ್ದಾಲಿ ಈ ಮಂದಿರದ ಮೇಲೆ ಆಕ್ರಮಣ ಮಾಡಿ ಆ ಬಾಗಿಲುಗಳನ್ನು ಒಯ್ದಿದ್ದ. ಹಿಂದೂಗಳು ತಿರುಗಿ ಬಿದ್ದು ದೊಡ್ಡದಾದ ಹೋರಾಟ ಮಾಡಿ ಈ ಬಾಗಿಲುಗಳನ್ನು ಮರಳಿ ಪಡೆದರು ಎಂಬ ಒಂದು ಕಥೆಯಿದೆ. ಈಗಿರುವ ದೇವಾಲಯ ಮಹಾರಾಜಾ ದೌಲತ್ ರಾವ್ ಸಿಂಧ್ಯಾನ ಪತ್ನಿ ಬಯಾಜಿ ಬಾಯಿ ಜೀರ್ಣೋದ್ಧಾರ ಮಾಡಿದ್ದು. ಅಮೃತಶಿಲೆಯ ಮೇಲೆ ಎರಡಡಿ ಎತ್ತರದ ಬೆಳ್ಳಿಯ ಕೃಷ್ಣನ ವಿಗ್ರಹ ಇಲ್ಲಿದೆ.

             ಕ್ರೂರಿ ಅಬ್ದಾಲಿಗೆ ಬುದ್ಧಿ ಕಲಿಸಿದ ಇನ್ನೊಂದು ಘಟನೆ ನಡೆದಿತ್ತು. ಹಾಗೆ ಬುದ್ಧಿ ಕಲಿಸಿದವರು ಸಾಧುಗಳು! ಹೌದು, 1757ರಲ್ಲಿ ನಡೆದ ಈ ಕದನದ ರೂವಾರಿಗಳು ನಾಗಾ ಸಾಧುಗಳು. ಅಬ್ದಾಲಿ ನಲವತ್ತು ಸಾವಿರ ಅಪ್ಘನ್ನರೊಂದಿಗೆ ಗೋಕುಲದ ಮೇಲೆ ದಾಳಿ ಮಾಡಿದ. ಗೋಕುಲನಾಥನ ದೇವಾಲಯವನ್ನು ನಾಶ ಮಾಡುವುದೇ ಆತನ ಉದ್ದೇಶವಾಗಿತ್ತು. ಈ ಸುದ್ದಿ ತಿಳಿದ ನಾಲ್ಕು ಸಾವಿರದಷ್ಟು ನಾಗಾ ಸಾಧುಗಳು ಧೀರತನದಿಂದ ದಾಳಿಗೆ ಎದೆಯೊಡ್ಡಿ ನಗರದ ರಕ್ಷಣೆ ಮಾಡಿದರು. ಸಂಖ್ಯಾತ್ಮಕವಾಗಿ ಹೆಚ್ಚಿದ್ದರೂ, ಉನ್ನತ ಯುದ್ಧ ನೈಪುಣ್ಯವನ್ನು ಹೊಂದಿದ್ದರೂ ಅಪ್ಘನ್ನರಿಗೆ ಈ ರಕ್ಷಣಾವ್ಯೂಹವನ್ನು ಭೇದಿಸಲಾಗಲಿಲ್ಲ. 2000 ನಾಗಾ ಸಾಧುಗಳು ಮಾತೃಭೂಮಿಗಾಗಿ ಬಲಿದಾನ ನೀಡಬೇಕಾಗಿ ಬಂದರೂ ಅಬ್ದಾಲಿಗೆ ದೇವಾಲಯದ, ಅಲ್ಲಿದ್ದ ಮಠಗಳ ಕೂದಲೂ ಕೊಂಕಿಸಲಾಗದೆ ಹಿಂದಿರುಗಬೇಕಾಯಿತು. ಸಾಲುಸಾಲಿಗೂ ವಿಜಯ, ಅಸಂಖ್ಯರನ್ನು ಗುಲಾಮಗಿರಿಗೆ ತಳ್ಳಿದುದು, ಸಾಮೂಹಿಕ ಕೊಲೆಗಳಿಂದ ಗುರುತಿಸಲ್ಪಟ್ಟ ಅಬ್ದಾಲಿಗೆ ಇದು ಅಪರೂಪದ ಹಿನ್ನಡೆ!

               ಹೀಗೆ ಸತತವಾಗಿ ಭಾರತದ ಮೇಲೆ ದಂಡೆತ್ತಿ ಬಂದರೂ ಭಾರತವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಅಬ್ದಾಲಿಯಿಂದಾಗಲಿಲ್ಲ. ಮರಾಠಾ ಹಾಗೂ ಸಿಖ್ ಕೇಸರಗಳು ಬಾರಿ ಬಾರಿಗೂ ಆತನ ಮೇಲೆ ಮುಗಿಬಿದ್ದು, ಎದೆಯೊಡ್ಡಿ ಅವನ ದಂಡಯಾತ್ರೆಗೆ ತಡೆಯೊಡ್ಡಿದವು. ಮರಾಠಾ ಹಾಗೂ ಸಿಖ್ ಸೇನೆ ಸೋಲಲು ಇಲ್ಲಿನ ಮುಸ್ಲಿಮ್ ರಾಜರು, ಸರದಾರರು ತಮ್ಮದೇ ಮತೀಯನೆಂಬ ಏಕೈಕ ಕಾರಣಕ್ಕೆ ಅಬ್ದಾಲಿಯನ್ನು ಅಪ್ಪಿಕೊಂಡುದುದು, ಅಧರ್ಮ ಯುದ್ಧ ಹಾಗೂ ಪ್ರಕೃತಿಯ ವೈಪರೀತ್ಯಗಳು ಕಾರಣವಾದವೇ ಹೊರತು ಅಬ್ದಾಲಿಯ ಪರಾಕ್ರಮವೇನಲ್ಲ. ಅಬ್ದಾಲಿ ಗೆದ್ದಂತೆ ಗೋಚರಿಸಿದರೂ ಅದು ಅಪಾರ ಸಾವುನೋವು, ಸಂಪತ್ತು ನಷ್ಟಗಳನ್ನು ಬದಿಗಿಟ್ಟು ನೋಡಿದರೆ ಮಾತ್ರ. ಆದರೆ ಆತನ ವೈಭವೀಕರಣವೇನೂ ನಿಂತಿಲ್ಲ. ಈಗಿನ ಪಾಕಿಸ್ತಾನದ ಪ್ರಾಂತ್ಯದಲ್ಲಿದ್ದ ಮುಸ್ಲಿಮ್ ಅರಸರನ್ನೂ ಅಬ್ದಾಲಿ ಬಿಟ್ಟಿರಲಿಲ್ಲ. ಆದರೆ ಪಾಕಿಸ್ತಾನಕ್ಕೆ ಅಬ್ದಾಲಿಯೇ ಆದರ್ಶ. ಅದಕ್ಕೆ ಕಾರಣವೊಂದೇ, ಭಾರತ ವಿರೋಧ! ತನ್ನ ಕ್ಷಿಪಣಿಯೊಂದಕ್ಕೆ ಪಾಕಿಸ್ತಾನ ಅಬ್ದಾಲಿಯ ಹೆಸರಿಟ್ಟಿದೆ. ಭಾರತ ವಿರೋಧಕ್ಕಾಗಿ ತನ್ನ ಪೂರ್ವಜರನ್ನು ಕೊಂದವನಾದರೂ ಪರವಾಗಿಲ್ಲ; ಅದು ಅಪ್ಪಿಕೊಳ್ಳುತ್ತದೆ.

ಶನಿವಾರ, ಏಪ್ರಿಲ್ 18, 2020

ಮನೆಯಲ್ಲಿರುವುದೇನು ಕರಿನೀರ ರೌರವಕ್ಕಿಂತ ಹೆಚ್ಚಿನದ್ದೇ?

ಮನೆಯಲ್ಲಿರುವುದೇನು ಕರಿನೀರ ರೌರವಕ್ಕಿಂತ ಹೆಚ್ಚಿನದ್ದೇ?


ಗೂಡಿನಂತಹಾ ಕಗ್ಗತ್ತಲ ಕೊಠಡಿ. ಬೆಳಿಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ, ಮಧ್ಯಾಹ್ನ 12ರಿಂದ 5 ಗಂಟೆಯವರೆಗೆ ಗೋಡೆ ಕಡೆ ಮುಖ ಮಾಡಿ ನಿಲ್ಲಿಸಿ ಕೈಗಳಿಗೆ ಬೇಡಿ ಹಾಕುತ್ತಿದ್ದರು. ಸೊಂಟದ ಸುತ್ತ ಬಿಗಿದು ಬರುವ ಎರಡು ಎಳೆಗಳನ್ನು ಪಾದಗಳೆರಡಕ್ಕೂ ಬಿಗಿದು ಹಾಕುವ ಕಂಬಿ ಬೇಡಿ ಎಂದು ಕರೆಯಲ್ಪಡುವ ಸ್ಥಿತಿಯಲ್ಲಿ ಕಾಲನ್ನು ಕಿಂಚಿತ್ತೂ ಮಡಿಸದೆ ತಿಂಗಳುಗಟ್ಟಲೆ ಇರಬೇಕಿತ್ತು! ಕೈಗಳನ್ನು ಹಿಂದಕ್ಕೆ ಸರಿಸಿ ಬೇಡಿ ಹಾಕುವುದು ಇನ್ನೊಂದು. ಮಗದೊಂದು ಅಡ್ಡಕಂಬಿ ಬೇಡಿ - ಎರಡೂ ಕಾಲುಗಳನ್ನು ಒಂದಡಿಗಿಂತಲೂ ಹೆಚ್ಚು ದೂರದಲ್ಲಿರಿಸಿ ಹಾಕಲಾಗುತ್ತಿತ್ತು. ವಾರಗಟ್ಟಲೆ, ಕೆಲವೊಮ್ಮೆ ತಿಂಗಳುಗಟ್ಟಲೆ ಊಟ, ನಿದ್ರೆ, ವಿಸರ್ಜನೆ, ಓಡಾಟ, ಕೆಲಸ ಎಲ್ಲವನ್ನೂ ಇದೇ ಸ್ಥಿತಿಯಲ್ಲಿ ಮಾಡಬೇಕು. ಕೇಳಿದರೆ ಮೈಜುಮ್ಮೆನಿಸುವ ಶಿಕ್ಷೆ. ಇದು ಯಾವ ಗಾಂಧಿ, ನೆಹರೂವೂ ಕಾಣದ, ಅನುಭವಿಸದ ಶಿಕ್ಷೆ. ಇದು ಅಂಡಮಾನಿನಲ್ಲಿ ಹನ್ನೊಂದು ವರ್ಷ ವೀರ ಸಾವರ್ಕರ್ ಅನುಭವಿಸಿದ, ನರಕಯಾತನೆ ಪಟ್ಟ ಕರಿನೀರ ಶಿಕ್ಷೆ!

ಮಾರ್ಸೆಲ್ಸಿನಲ್ಲಿ ಮೊರಿಯಾ ಹಡಗಿನ ಶೌಚ ಕೊಠಡಿಯ ಕಿರು ಗವಾಕ್ಷದಿಂದ ಯೋಗಶಕ್ತಿಯಿಂದ ದೇಹವನ್ನು ಸಂಕುಚಿಸಿ ಸಮುದ್ರಕ್ಕೆ ಹಾರಿ ಈಜಿದಂತೆ ಅಂಡಮಾನಿಗೆ ಹೊರಟ ಮಹಾರಾಜ ಹಡಗಿನಿಂದ ತಪ್ಪಿಸಿಕೊಳ್ಳಲು ವೀರ ಸಾವರ್ಕರರಿಗೆ ಯಾವುದೇ ಮಾರ್ಗಗಳಿರಲಿಲ್ಲ. ಕೈಕಾಲುಗಳೆಲ್ಲದಕ್ಕೂ ಬೇಡಿ ಹಾಕಲಾಗಿತ್ತು. ಮಾತ್ರವಲ್ಲ ತಪ್ಪಿಸಿಕೊಂಡರೂ ಪ್ರಯೋಜನವಿರಲಿಲ್ಲ. ಅಂತಾರಾಷ್ಟ್ರೀಯ ನ್ಯಾಯಾಲಯವನ್ನೇ ಬ್ರಿಟಿಷರು ಹಣದ ಬೇಡಿ ಹಾಕಿ ಬಂಧಿಸಿದ್ದರು. ಸೆಲ್ಯುಲರ್ ಜೈಲೆಂಬ ಯಮಪುರಿಯನ್ನು ಹೊಕ್ಕ ನಂತರವಂತೂ ತಪ್ಪಿಸಿಕೊಳ್ಳುವ ಯಾ ಬಿಡುಗಡೆಯಾಗುವ ಆಸೆಯನ್ನು ಬಿಡಿ, ಬದುಕುವ ಭರವಸೆಯೂ ಇರಲಿಲ್ಲ. ರಾಕ್ಷಸ ಸ್ವರೂಪಿಯಾಗಿದ್ದ ಅಲ್ಲಿನ ಅಧಿಕಾರಿ ಬಾರಿ ಸಾಹೇಬನಂತೂ ಸಾಕ್ಷಾತ್ ಯಮಸ್ವರೂಪಿಯೇ ಆಗಿದ್ದ. ಮೂರನೇ ಮಹಡಿಯ ಏಳನೇ ನಂಬರಿನ ಕೋಣೆಯಲ್ಲಿ ಸಾವರ್ಕರರನ್ನು ಬಂಧಿಸಿಡಲಾಯಿತು. ಆ ಸಾಲಿನ ಎಲ್ಲಾ ಕೊಠಡಿಗಳನ್ನು ಮೊದಲೇ ಖಾಲಿ ಮಾಡಲಾಗಿತ್ತು. ಅಂದರೆ ಸುಮಾರು 150 ಕೈದಿಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗಿತ್ತು. ಸರಕಾರದ ಕಣ್ಣಿನಲ್ಲಿ ಬಲು ಯೋಗ್ಯರೆಂದು ಗುರುತಿಸಿಕೊಂಡಿದ್ದ ಆದರೆ ಕೈದಿಗಳ ದೃಷ್ಟಿಯಲ್ಲಿ ದ್ರೋಹಿಗಳು, ಚಾಡಿಕೋರರು, ಧೂರ್ತರೆಂದು ಕುಪ್ರಸಿದ್ಧರಾಗಿದ್ದ ಮೂವರು ಮುಸಲ್ಮಾನರು ಸಾವರ್ಕರರ ಪಹರೆಗೆ ನೇಮಕಗೊಂಡಿದ್ದರು.

ಬೇಕಾಬಿಟ್ಟಿ ಸ್ನಾನ ಮಾಡುವಂತಿರಲಿಲ್ಲ. ಜಮಾದಾರ "ಲೇವ ಪಾಣಿ" ಎನ್ನುತ್ತಲೇ ಒಂದು ಬಟ್ಟಲು ನೀರು ತೆಗೆದುಕೊಳ್ಳಬೇಕಿತ್ತು. ಆಮೇಲೆ ಆತ ಮೈಉಜ್ಜಲು ಹೇಳಿದೊಡನೆ ಮೈ ಉಜ್ಜಿಕೊಳ್ಳಬೇಕು. "ಜಾರಲೇವ ಪಾಣೀ" ಎಂದಾಗ ಮತ್ತೊಂದು ಬಟ್ಟಲು ನೀರು ತೆಗೆದುಕೊಳ್ಳಬೇಕು. ಹೀಗೆ ಮೂರು ಬಟ್ಟಲು ನೀರು, ಮೂರೇ ಬಟ್ಟಲು ನೀರಿನಲ್ಲಿ ಸ್ನಾನ ಮುಗಿಸಬೇಕಿತ್ತು! ಅದರಲ್ಲೂ ಸ್ನಾನಕ್ಕಿದ್ದದ್ದು ಉಪ್ಪು ನೀರು. ಹಿಂದಿನ ದಿನ ಏಟು ತಿಂದು ಉರಿಯುತ್ತಿರುವ ಚರ್ಮ ಈ ಉಪ್ಪು ನೀರು ಬಿದ್ದೊಡನೆ ಬೆಂಕಿಗೆ ಬಿದ್ದಂತಾಗುತ್ತಿತ್ತು. ಮಲಮೂತ್ರ ವಿಸರ್ಜನೆಗೂ ಸಮಯ ನಿಶ್ಚಿತ. ಒಳಗೆ ಹೋದವರನ್ನು ಪಹರೆದಾರ ಸಮಯ ಮುಗಿದೊಡನೆ ಅವರು ಯಾವ ಸ್ಥಿತಿಯಲ್ಲಿದ್ದಾರೋ ಅದೇ ಸ್ಥಿತಿಯಲ್ಲಿ ಅವರನ್ನು ಹೊರಗೆಳೆದು ತರುತ್ತಿದ್ದ. ಬೇರೆ ಸಮಯದಲ್ಲೇನಾದರೂ ವಿಸರ್ಜನೆಯಾದರೆ ಅದಕ್ಕೂ ಶಿಕ್ಷೆ!

ಹಸಿಯಾದ ತೆಂಗಿನಕಾಯಿಗಳ ತೊಗಟೆಗಳನ್ನು ಒಣಗಿಸಿ, ಕುಟ್ಟಿ ಅದರಿಂದ ತೆಂಗಿನ ನಾರನ್ನು ಬೇರ್ಪಡಿಸುವ ಕೆಲಸ. ಇದನ್ನು ಕೈಯಿಂದಲೇ ಮಾಡಬೇಕಿತ್ತು. ಯಾವುದೇ ಯಂತ್ರಗಳಿರಲಿಲ್ಲ. ಎಣ್ಣೆಯ ಗಾಣಕ್ಕೆ ಅವರನ್ನು ಹೂಡಲಾಗುತ್ತಿತ್ತು. ಬೆಳಗೆ ಎದ್ದ ಕೂಡಲೆ ಕೌಪೀನ ತೊಟ್ಟು ಗಾಣದ ಕೋಣೆಗೆ ಹೋಗಬೇಕಿತ್ತು. ಗಾಣ ತಿರುಗಿಸುವಾಗ ನೀರು ಕೇಳಿದರೆ ಅದೂ ಸಿಗುತ್ತಿರಲಿಲ್ಲ. ಹತ್ತು ಗಂಟೆಗೆ ಉಳಿದೆಲ್ಲಾ ಕೆಲಸಗಳು ಮುಂದಿನ ಎರಡು ಘಂಟೆಗಳ ಕಾಲ ನಿಂತರೂ ಗಾಣ ತಿರುಗಿಸುವುದನ್ನು ನಿಲ್ಲಿಸುವಂತಿರಲಿಲ್ಲ. ಅಲ್ಲಿಗೆ ಊಟ ಬರುತ್ತಿತ್ತು. ಆದರೆ ಕೈ ತೊಳೆಯಲೂ ನೀರು ಸಿಗುತ್ತಿರಲಿಲ್ಲ. ಅದೇ ಕೈಗಳಿಂದ ತಿನ್ನಬೇಕು. ಗಬಗಬ ತಿಂದು ಮತ್ತೆ ಗಾಣ ಎಳೆಯಬೇಕು. ಬೆವರು ಒರೆಸಲು ಅರೆಕ್ಷಣ ನಿಂತರೂ ಜಮಾದಾರನಿಂದ ಏಟು ಬೀಳುತ್ತಿತ್ತು. ಗಾಣ ತಿರುಗಿಸಿ ಉಸಿರಾಟ ಭಾರವಾಗುತ್ತಿತ್ತು. ಎದೆಯಲ್ಲಿ ಉರಿ, ತಲೆ ಸುತ್ತಿ ಬಂದು ಪ್ರಜ್ಞಾಶೂನ್ಯರಾಗಿ ಬಿದ್ದರೂ ಯಾರೂ ಎಬ್ಬಿಸುತ್ತಿರಲಿಲ್ಲ. ಎಚ್ಚರವಾದಾಗ ಮತ್ತೆ ಗಾಣ ತಿರುಗಿಸಬೇಕಿತ್ತು. ಯಾಕೆಂದರೆ ನಿಗದಿಪಡಿಸಿದ ಮೂವತ್ತು ಪೌಂಡ್ ಎಣ್ಣೆ ದಿವಸಕ್ಕೆ ತೆಗೆಯಬೇಕಿತ್ತು. ಕಡಿಮೆಯಾದರೆ ಹೊಡೆತ, ಬಡಿತ, ಸೊಂಟದ ಕೆಳಗೆ ಒದೆತ ತಪ್ಪಿದ್ದಲ್ಲ.

ಧಾರಾಕಾರ ಮಳೆಯಿರಲಿ, ಉರಿಬಿಸಿಲಿರಲಿ ಅದರಲ್ಲೇ ಊಟಕ್ಕೆ ನಿಲ್ಲಬೇಕಿತ್ತು. ಅಕ್ಕಪಕ್ಕದವರ ಬಳಿ ಮಾತಾಡುವಂತಿಲ್ಲ. ಸದ್ದು ಬಂದರೆ ಗುದ್ದು ಬೀಳುತ್ತಿತ್ತು. ಆಹಾರವೋ ಅರೆಬೆಂದದ್ದು. ಮಣ್ಣು, ಕಲ್ಲು, ಬೆವರು ಮಿಶ್ರಿತ ಸುವಾಸಿತ ಅಡುಗೆ! ಅನ್ನದಲ್ಲಿ ಹುಳುಹುಪ್ಪಟೆಗೆಳು, ಗೆದ್ದಲು ಹುಳುಗಳು, ಸತ್ತ ಹಾವಿನ ಚೂರುಗಳು ಸಿಗದಿದ್ದ ದಿನವೇ ವಿಶೇಷ! ಜೊತೆಗೆ ರಾತ್ರಿ ದೀಪಕ್ಕೆ ಹಾಕಿದ್ದ ಎಣ್ಣೆಯೂ ಅದರಲ್ಲಿ ಬಿದ್ದಿದ್ದರಂತೂ ವಾಕರಿಕೆ ಬರುವಂತಾಗುತ್ತಿತ್ತು. ಆದರೆ ಚೆಲ್ಲುವಂತಿರಲಿಲ್ಲ. ಚೆಲ್ಲಿದರೆ ಅದನ್ನು ಹೆಕ್ಕಿ ತಿನ್ನುವವರೆಗೆ ಏಟು ಬೀಳುತ್ತಿತ್ತು. ಚೆಲ್ಲಿದರೆ ಬೇರೆ ಆಹಾರವೂ ಸಿಗುತ್ತಿರಲಿಲ್ಲ. ಆಹಾರ ಕಡಿಮೆಯಾದರೂ ಕೇಳುವಂತಿರಲಿಲ್ಲ. ಹೆಚ್ಚಾದರೆ ಚೆಲ್ಲುವಂತಿರಲಿಲ್ಲ. ಊಟ ಎಷ್ಟು ಹೊತ್ತು ಮಾಡಬೇಕು ಎನ್ನುವುದನ್ನು ಪಹರೆಕಾರ ನಿರ್ಧರಿಸುತ್ತಿದ್ದ! ಕುಡಿಯಲು ಗಬ್ಬುನಾತವುಳ್ಳ ನೀರು. ಗಾಣ ಎಳೆಯುವಾಗ ವಿಪರೀತ ಬಾಯಾರಿಕೆಯಾಗುತ್ತಿತ್ತು. ಆದರೆ ನೀರು ಸಿಗಬೇಕಾದರೆ ನೀರು ಕೊಡುವವನಿಗೆ ಹೊಗೆಸೊಪ್ಪು ಹೇಗಾದರೂ ಸಂಪಾದಿಸಿ ಬಚ್ಚಿಟ್ಟುಕೊಂಡು ಕೊಡಬೇಕಾಗುತ್ತಿದ್ದಿತು. ನೀರು ಕುಡಿಯಲೂ ಲಂಚ ಕೊಡಬೇಕಾದ ದುಃಸ್ಥಿತಿ! ಅಷ್ಟು ಕೊಟ್ಟ ಮೇಲೂ ಸಿಗುತ್ತಿದ್ದುದು ಎರಡು ಬಟ್ಟಲು ನೀರು ಮಾತ್ರ!

ಸಂಜೆ ಐದು ಘಂಟೆಯೊಳಗೇ ಪೂರ್ತಿ ಎಣ್ಣೆ ತೆಗೆಯಬೇಕೆಂದು ಬಾರಿ ಸಾಹೇಬ ಆಜ್ಞೆ ಮಾಡುತ್ತಿದ್ದ. ಆಗದಿದ್ದರೆ ರಾತ್ರಿಯ ಊಟವಿಲ್ಲ. ಊಟವನ್ನು ತಪ್ಪಿಸಲೆಂದೇ ರಾತ್ರಿಯ ಊಟವನ್ನು ಐದು ಘಂಟೆಗೇನೆ ಕೊಡಲಾಗುತ್ತಿತ್ತು.  ಆರು ಗಂಟೆಯಾಗುತ್ತಲೇ ಬಾರಿ ಸಾಹೇಬ ಕೆಲಸಗಳೆಲ್ಲಾ ಮುಗಿದವೆಂದು ಕೊಠಡಿಗಳಿಗೆ ಬೀಗ ಜಡಿಸುತ್ತಿದ್ದ. ಗಾಣದ ಕೊಠಡಿಗೂ! ಪಹರೆಯವರು ಅವುಗಳೆದುರು ಕುರ್ಚಿಯಲ್ಲಿ ಕುಳಿತುಕೊಳ್ಳುತ್ತಿದ್ದರು. ಆದರೆ ನಿಗದಿಪಡಿಸಿದಷ್ಟು ಎಣ್ಣೆ ತೆಗೆಯಲಾಗದೆ ಇದ್ದವರು ಆಗಲೂ ಗಾಣ ಎಳೆಯುತ್ತಲೇ ಇರಬೇಕಿತ್ತು. ಇರುಳಲ್ಲಿ ಗಂಟೆಗಳು ಉರುಳುತ್ತಿದ್ದರೂ ಸೆರೆಮನೆಯಿಡೀ ನಿದ್ರಿಸುತ್ತಿದ್ದರೂ ಗಾಣದ ರಥ ತಿರುಗುತ್ತಲೇ ಇರುತ್ತಿತ್ತು!

ಸಾಮಾನ್ಯ ಜ್ವರವೆಲ್ಲಾ ಅಲ್ಲಿ ಕಾಯಿಲೆಯೇ ಅಲ್ಲ. ಅದಕ್ಕೆ ಚಿಕಿತ್ಸೆಯೂ ಸಿಗುತ್ತಿರಲಿಲ್ಲ. ಕೆಲಸವೂ ತಪ್ಪುತ್ತಿರಲಿಲ್ಲ. ಜ್ವರ ಎಷ್ಟೇ ಏರಿದರೂ ವೈದ್ಯನ ಉಷ್ಟತಾಮಾಪಕದ ಪಾದರಸ ಮೇಲೇರುತ್ತಲೇ ಇರಲಿಲ್ಲ. ತಲೆನೋವು, ತಲೆಶೂಲೆ, ಹೃದಯವಿಕಾರಗಳಿಂದ ಜರ್ಝರಿತರಾದವರನ್ನು ಕೆಲಸಗಳ್ಳರು ಎಂದು ಬಡಿದು ಕೆಲಸಕ್ಕೆ ಅಟ್ಟಲಾಗುತ್ತಿತ್ತು. ವಾಂತಿ, ಭೇದಿ, ರಕ್ತಕಾರುವಿಕೆ, ರಕ್ತಭೇದಿಯೆಲ್ಲಾ ಶುರುವಾದರೆ ದೇವರೇ ಗತಿ. ಜಮಾದಾರ ಅಥವಾ ಬಾರಿ ಸಾಹೇಬ ಮನಸ್ಸು ಮಾಡಿದರೆ ಚಿಕಿತ್ಸೆ ಸಿಗುತ್ತಿತ್ತು. ಆದರೆ ಅವರ ಮನಸ್ಸೆಂಬುದೇ ಸತ್ತು ಹೋಗಿತ್ತು. ಅನಿವಾರ್ಯವಾಗಿ ಕೊಣೆಯೊಳಗೇ ವಿಸರ್ಜನೆ ಮಾಡಿದರೆ ಮರುದಿನದಿಂದ ನಾಲ್ಕುದಿನದವರೆಗೆ ದಿನವಿಡೀ ಮರದ ದಿಮ್ಮಿಗಳನ್ನು ಹೊತ್ತು ನಿಲ್ಲುವ ಶಿಕ್ಷೆ ಕಟ್ಟಿಟ್ಟ ಬುತ್ತಿಯಾಗಿತ್ತು.

ಬಂಧು ಮಿತ್ರರನ್ನು ಭೇಟಿಯಾಗುವ ಅವಕಾಶವೇ ಇರಲಿಲ್ಲ. ಅದೆಲ್ಲಾ ಬಿಡಿ ಅದೇ ಮರಣ ಬಾವಿಯಲ್ಲಿ ಬಂಧಿಯಾಗಿದ್ದ ಸ್ವಂತ ಅಣ್ಣನನ್ನೇ ಭೇಟಿಯಾಗುವಂತಿರಲಿಲ್ಲ. ಅದರಲ್ಲೂ ಸಾವರ್ಕರ್ ಕುತ್ತಿಗೆಯಲ್ಲಿ ನೇತುಹಾಕಿದ್ದ ಭಿಲ್ಲೆಯಲ್ಲಿ "D" ಎಂಬ ಅಕ್ಷರ ಜೊತೆಯಾಗಿತ್ತು. ಅಂದರೆ "ಡೇಂಜರಸ್" ಎಂದು! ಹಾಗಾಗಿ ಯಾವನೇ ಕೈದಿಯೂ ಅವರ ಜೊತೆ ಮಾತಾಡುವಂತಿರಲಿಲ್ಲ. ಯಾವುದೇ ರೀತಿಯ ವ್ಯವಹಾರ ಮಾಡುವಂತಿರಲಿಲ್ಲ. ಮಾಡಿದ್ದೂ ಗೊತ್ತಾದರೆ ಚಾವಟಿ ಏಟು ತಿನ್ನಲು ಸಿದ್ಧನಾಗಿರಬೇಕಿತ್ತು. ಕಾನೂನಲ್ಲಿದ್ದ ವರ್ಷಕ್ಕೆ ಒಂದು ಸಲ ಪತ್ರ ಬರೆಯಬಹುದಾದ ಅವಕಾಶವೂ ಯಾವುದಾದರೂ ತಪ್ಪಿನ ಸುಳ್ಳು ನೆವ ಹೂಡಿ ನಿರಾಕರಿಸಲ್ಪಡುತ್ತಿತ್ತು. ಇನ್ನು ಓದುವುದು ಬರೆಯುವುದಂತೂ ಗಗನಕುಸುಮವೇ ಸರಿ. ಎದೆಗುಂದದ ಸಾವರ್ಕರ್ ಕಲ್ಲಿನಗೋಡೆಗಳ ಮೇಲೆ ಕಲ್ಲಿನ ಮೊಳೆಯಿಂದ "ಕಮಲಾ" ಎನ್ನುವ ಹತ್ತು ಸಾವಿರ ಸಾಲಿನ ಬೃಹತ್ ಕಾವ್ಯವನ್ನೇ ಕೆತ್ತಿದರು.

ವೀರ ಸಾವರ್ಕರ್, ಅವರ ಅಣ್ಣ ಬಾಬಾ ಸಾವರಕರ್ ಆದಿಯಾಗಿ ಹಲವಾರು ಕ್ರಾಂತಿಕಾರಿಗಳು ಈ ಕರಿನೀರ ಶಿಕ್ಷೆಯನ್ನು ಅನುಭವಿಸಿದರು. ಬರೋಬ್ಬರಿ ಹನ್ನೊಂದು ವರ್ಷ ಈ ಮೃತ್ಯುಕೂಪದಲ್ಲಿದ್ದರೂ ಸಾವರ್ಕರ್ ತಮ್ಮ ತತ್ತ್ವ, ಚಿಂತನೆ, ಕಾರ್ಯಗಳಾವುದನ್ನೂ ಬದಲಾಯಿಸಲಿಲ್ಲ. ಯಾರ್ಯಾರನ್ನೋ ಮಹಾತ್ಮ ಎನ್ನಲಾಗುತ್ತದೆ. ಕಾಯಾ, ವಾಚಾ, ಮನಸಾ ಒಂದೇ ಆಗಿದ್ದವರನ್ನು ಮಾತ್ರ ಮಹಾತ್ಮ ಎನ್ನಬೇಕಾದದ್ದು. ಆ ಮಹಾತ್ಮ ಸಾವರ್ಕರ್. ಸಾವರ್ಕರರನ್ನು ಬಂಧಿಸಿದ್ದರು; ಹಾಗಾಗಿ ಅವರು ಅನುಭವಿಸಲೇ ಬೇಕಿತ್ತು ಅನ್ನುತ್ತೀರಾ? ಸಾವರ್ಕರ್ ಅಂತಹಾ ಶಿಕ್ಷೆಯನ್ನು ಅನುಭವಿಸಿದ್ದು ತನಗಾಗಿ ಅಲ್ಲ; ದೇಶಕ್ಕಾಗಿ. ತನ್ನ ಸರ್ವಸ್ವವನ್ನೂ ದೇಶಕ್ಕೆ ಧಾರೆಯೆರೆದವರು ಅವರು. ನಾವು ದೇಶಕ್ಕಾಗಿ ಕನಿಷ್ಠ ನಮ್ಮ ಮನೆಯೊಳಗಿರಬಾರದೇ? ಇದರಿಂದ ನಾವೂ ಸುರಕ್ಷಿತವಾಗಿರುತ್ತೇವೆ; ದೇಶವೂ.

ಒಂದಷ್ಟು ದಿನಗಳ ಲಾಕ್ ಡೌನ್ ಅನ್ನು ಅನುಭವಿಸಲು ಒದ್ದಾಡುವ ಮನಸ್ಸುಗಳು ಒಮ್ಮೆ ಕರಿನೀರ ಶಿಕ್ಷೆಯನ್ನು ಕಣ್ತುಂಬಿಕೊಳ್ಳಬೇಕು. ಮನೆಯಲ್ಲಿ ನಮಗೆ ಪ್ರೀತಿಪಾತ್ರರಾದವರ ಜೊತೆಯಲ್ಲಿ ನಗು, ಹರಟೆಯಲ್ಲಿ ಕಾಲ ಕಳೆಯಬಹುದಾದ, ನಮಗಿಷ್ಟವಾದದ್ದನ್ನು ಮಾಡಿಕೊಂಡು ತಿನ್ನಬಹುದಾದ, ಪುಸ್ತಕ, ಟಿವಿ, ಮೊಬೈಲ್, ಇಂಟರ್ನೆಟ್, ಸಾಮಾಜಿಕ ಜಾಲತಾಣಗಳು, ತರಹೇವಾರಿ ಮೊಬೈಲ್ ಯಾ ಕಂಪ್ಯೂಟರ್ ಗೇಮ್ಸ್ ಹೀಗೆ ನಮಗೆ ಬೇಕಾದುದನ್ನು ಆಯ್ಕೆ ಮಾಡಿಕೊಳ್ಳುವ ಸ್ವತಂತ್ರತೆಯನ್ನು ಕಾಯ್ದುಕೊಂಡು ಸಮಯ ಕಳೆಯಬಹುದಾದ, ವಿಧವಿಧದ ಹವ್ಯಾಸಗಳನ್ನು ಬೆಳೆಸಿಕೊಳ್ಳುವ, ಹೊಸತನ್ನು ಕಲಿಯುವ ಅವಕಾಶ ಒದಗಿಸಿದ ನಮ್ಮ ಸೌಭಾಗ್ಯವನ್ನು ಅದರ ಜೊತೆ ತುಲನೆ ಮಾಡಿಕೊಳ್ಳಬೇಕು. ನಿತ್ಯ ಜೀವನದಲ್ಲಿ ಸೂರ್ಯೋದಯ, ಸೂರ್ಯಾಸ್ತಗಳನ್ನು ಕಣ್ತುಂಬಿಕೊಳ್ಳುವ, ಪಕ್ಷಿಗಳ ಕಲರವವನ್ನು ಆಲಿಸುವ, ಧ್ಯಾನ, ಪ್ರಾಣಾಯಾಮ, ಯೋಗಾಸನಗಳನ್ನು ಕಲಿತು ರೂಢಿಸಿಕೊಳ್ಳುವುದಕ್ಕೆ ಸಿಕ್ಕ ಈ ಅಪೂರ್ವ ಅವಕಾಶವನ್ನು ಒಮ್ಮೆ ನೀವು ಆ ಕಗ್ಗತ್ತಲ ಕೋಣೆಯಲ್ಲಿ ಆ ಸ್ಥಿತಿಯಲ್ಲಿ ಕರಿನೀರ ರೌರವದಲ್ಲಿರುವಂತೆ ಭಾವಿಸಿ ಊಹಿಸಿಕೊಳ್ಳಿ. ಆಗ ತಿಳಿಯುತ್ತದೆ ನಾವು ಲಾಕ್ ಡೌನ್ ಆದದ್ದಲ್ಲ; ನಮ್ಮ ನಿಜವಾದ ಸ್ವಾತಂತ್ರ್ಯವನ್ನು ಪಡೆದುಕೊಂಡದ್ದು ಎಂದು!