ವಿಠೋಬನ ಇಚ್ಛೆ
ನಾಮದೇವರಿಗೆ ಪರಮಾರ್ಥ ಸತ್ಯದ ಜ್ಞಾನವಾಗಿರಲಿಲ್ಲ. ವಿಠೋಬ ತನ್ನ ಪರಮ ಭಕ್ತನಿಗೆ ಅದನ್ನು ಅನುಗ್ರಹಿಸಬೇಕೆಂದು ಇಚ್ಛಿಸಿದ. ಜ್ಞಾನೇಶ್ವರರೂ ಹಾಗೂ ನಾಮದೇವರೂ ಆಗಷ್ಟೇ ಯಾತ್ರೆಯೊಂದರಿಂದ ಹಿಂದಿರುಗಿದ್ದರು. ಗೋರ ಕುಂಬಾರ ಸಾಧು ಸಂತರಿಗೆಲ್ಲಾ ವಿಶೇಷವಾದ ಹಬ್ಬದೂಟವನ್ನು ಏರ್ಪಡಿಸಿದ್ದ. ಸಾಧು ಸಂತರುಗಳಲ್ಲಿ ಜ್ಞಾನೇಶ್ವರರೂ, ನಾಮದೇವರೂ ಇದ್ದರು. ಎಲ್ಲರೂ ಅಲ್ಲಿ ಸೇರಿದ್ದಾಗ ಜ್ಞಾನೇಶ್ವರರು ಗೋರ ಕುಂಬಾರನಲ್ಲಿ ಎಲ್ಲರೆದುರಲ್ಲಿ "ಗೋರ ನೀನು ವೃತ್ತಿಯಲ್ಲಿ ಕುಂಬಾರ. ಪ್ರತಿದಿನವೂ ಮಡಕೆಗಳನ್ನು ಮಾಡುತ್ತಿರುವಾಗ ಅವು ಸರಿಯಾಗಿ ಬೆಂದಿದೆಯೇ ಇಲ್ಲವೇ ಎಂದು ಪರೀಕ್ಷಿಸುತ್ತೀಯಲ್ಲವೇ? ಈ ಮಡಕೆಗಳು ಬ್ರಹ್ಮನ ಮಡಕೆಗಳು. ಇವುಗಳಲ್ಲಿ ಯಾವುದು ಸರಿಯಾಗಿ ಬೆಂದಿದೆ ಎಂದು ಪರೀಕ್ಷಿಸು" ಎಂದು ನುಡಿದರು. ಅದನ್ನು ಕೇಳಿ ಗೋರ, ಸರಿ ಸ್ವಾಮಿ ಹಾಗೆಯೇ ಮಾಡುತ್ತೇನೆ ಎಂದು ಮಡಕೆಗಳು ಸರಿಯಾಗಿ ಸುಟ್ಟಿವೆಯೇ ಎಂದು ತಟ್ಟಿ ನೋಡುತ್ತಿದ್ದ ಕೋಲನ್ನು ತೆಗೆದುಕೊಂಡು ಬಂದು ಒಬ್ಬೊಬ್ಬರ ತಲೆಗೆ ಕುಟ್ಟುತ್ತಾ ಬಂದನು. ಪ್ರತಿಯೊಬ್ಬ ಅತಿಥಿಯೂ ತಟ್ಟಿಸಿಕೊಳ್ಳಲು ನಮ್ರತೆಯಿಂದ ತಲೆ ಬಾಗಿಸಿದರು. ಆದರೆ ಗೋರನು ನಾಮದೇವರ ಬಳಿ ಬಂದಾಗ ಆತ ಸಿಟ್ಟಿಗೆದ್ದು "ಏ ಕುಂಬಾರ, ಆ ಕೋಲಿನಿಂದ ನನ್ನ ತಲೆಯನ್ನು ತಟ್ಟಲು ನಿನ್ನನ್ನು ನೀನು ಯಾರೆಂದುಕೊಂಡಿರುವೆ?" ಎಂದು ಕೂಗಿದರು. ಆಗ ಗೋರನು ಜ್ಞಾನೇಶ್ವರರಿಗೆ "ಸ್ವಾಮಿ ಇದೊಂದನ್ನು ಬಿಟ್ಟು ಉಳಿದೆಲ್ಲಾ ಮಡಕೆಗಳು ಸರಿಯಾಗಿ ಸುಟ್ಟಿವೆ" ಎಂದನು. ಅಲ್ಲಿದ್ದವರೆಲ್ಲಾ ಗೊಳ್ಳೆಂದು ನಕ್ಕರು.
ಇದರಿಂದ ಅವಮಾನಗೊಂದ ನಾಮದೇವರು ತಾನು ಪೂಜಿಸುವ ವಿಠಲನ ಬಳಿ ಓಡಿ ಹೋದರು. ತನಗಾದ ಅವಮಾನವನ್ನು ಹೇಳಿ ಮೊರೆಯಿಟ್ಟರು. ಆಗ ವಿಠಲ ಅನುತಾಪ ತೋರುವವನಂತೆ ನಟಿಸಿ "ನೀನ್ಯಾಕೆ ಉಳಿದವರಂತೆ ಶಾಂತವಾಗಿದ್ದು ತಟ್ಟಿಸಿಕೊಂಡು ಬರಲಿಲ್ಲ. ನೀನು ಹಾಗೆ ಮಾಡದಿದ್ದುದರಿಂದಲೇ ಇಷ್ಟೆಲ್ಲಾ ತೊಂದರೆಗಳಾಯಿತು" ಎಂದನು. ಆಗ ನಾಮದೇವರು ಇನ್ನಷ್ಟು ಜೋರಾಗಿ ಅಳುತ್ತಾ "ನೀನೂ ಅವರ ಜೊತೆ ಸೇರಿ ನನ್ನನ್ನು ಅವಮಾನಿಸುತ್ತಿದ್ದೀಯಾ. ನಾನು ಯಾಕೆ ಬೇರೆಯವರಂತೆ ತಲೆತಗ್ಗಿಸಬೇಕು. ನಾನು ನಿನ್ನ ಪ್ರಿಯ ಸಖನಲ್ಲವೇ? ನಿನ್ನ ಮಗುವಲ್ಲವೇ?" ಎಂದರು. ಆಗ ವಿಠಲ "ನೀನು ಇನ್ನೂ ಸರಿಯಾಗಿ ಸತ್ಯವನ್ನು ಅರಿತುಕೊಂಡಿಲ್ಲ. ನಾನು ಹೇಳಿದರೂ ತಿಳಿದುಕೊಳ್ಳುವುದಿಲ್ಲ. ಆ ಕಾಡಿನಲ್ಲಿರುವ ಪಾಳು ಬಿದ್ದ ದೇಗುಲದಲ್ಲಿ ಸಾಧುವೊಬ್ಬನಿದ್ದಾನೆ. ಆತ ನಿನಗೆ ಜ್ಞಾನವನ್ನು ಅನುಗ್ರಹಿಸುವನು." ಎಂದು ವಿಶೋಪಕೇಶರ್ ಎನ್ನುವ ವೃದ್ಧನಿರುವ ಕಡೆಗೆ ಕಳುಹಿಸಿದನು.
ನಾಮದೇವರು ಆ ದೇವಸ್ಥಾನಕ್ಕೆ ಹೋಗಲಾಗಿ ವಯಸ್ಸಾದ ವ್ಯಕ್ತಿಯೊಬ್ಬರು ಶಿವಲಿಂಗದ ಮೇಲೆ ಕಾಲನ್ನಿಟ್ಟು ನಿದ್ರಿಸುತ್ತಿರುವುದನ್ನು ಕಂಡರು. ವಿಠಲನ ಸ್ನೇಹಿತನಾದ ನಾನು ಈ ಮೂರ್ಖನಿಂದ ಜ್ಞಾನವನ್ನು ಪಡೆದುಕೊಳ್ಳಬೇಕೇ ಎಂದುಕೊಂಡರಾದರೂ ಅಲ್ಲಿ ಯಾರೂ ಇಲ್ಲದಿದ್ದುದರಿಂದ ಆ ವೃದ್ಧರನ್ನು ಕೈತಟ್ಟಿ ಎಚ್ಚರಗೊಳಿಸಿದರು. ಆ ವೃದ್ಧರು ಎಚ್ಚರಗೊಂಡು ನಾಮದೇವನನ್ನು ಕಂಡು "ಓ ಆ ವಿಠಲ ಕಳುಹಿದ ನಾಮದೇವ ಅಂದರೆ ನೀನೇ ಏನೋ, ಬಾ" ಎಂದರು. ಆಗ ನಾಮದೇವರು ಇವರಾರೋ ಮಹಾಪುರುಷರಿರಬೇಕು ಎಂದೆಣಿಸಿದರಾದರೂ, ಶಿವಲಿಂಗದ ಮೇಲೆ ಕಾಲಿರಿಸಿದ್ದು ಮಹಾಪಾಪ ಎಂದು ಯೋಚಿಸುತ್ತಾ "ನೀವ್ಯಾರೋ ಮಹಾಪುರುಷರಂದದಿ ತೋರುವಿರಿ. ಆದರೂ ಶಿವಲಿಂಗದ ಮೇಲೆ ಕಾಲಿರಿಸಿದ್ದು ಸರಿಯೇ?" ಎಂದರು. ಆಗ ವೃದ್ಧರು "ಎಲಾ ಎಲಾ ನನ್ನ ಕಾಲು ಶಿವಲಿಂಗದ ಮೇಲಿರುವುದೇ? ಅದು ಎಲ್ಲಿದೆ? ನನಗೆ ನನ್ನ ಕಾಲುಗಳನ್ನು ಸರಿಸಲಾಗುತ್ತಿಲ್ಲ. ದಯವಿಟ್ಟು ನನ್ನ ಕಾಲ್ಗಳನ್ನು ಬೇರೆಲ್ಲಾದರೂ ಎತ್ತಿಡುತ್ತೀಯಾ" ಎಂದರು. ಅದರಂತೆ ನಾಮದೇವರು ಕಾಲುಗಳನ್ನು ಎತ್ತಿಟ್ಟಾಗ ಅಲ್ಲೊಂದು ಶಿವಲಿಂಗ ಎದ್ದು ನಿಂತಿತ್ತು! ಮತ್ತೊಂದೆಡೆ ಎತ್ತಿಟ್ಟಾಗ ಅಲ್ಲೊಂದು, ಹೀಗೆ ಎಲ್ಲಿಟ್ಟರೂ ಶಿವಲಿಂಗವೇ! ಕೊನೆಗೆ ಬೇರೆ ದಾರಿ ಕಾಣದೆ ನಾಮದೇವರು ಆ ವೃದ್ಧರ ಕಾಲುಗಳನ್ನು ತನ್ನ ಮಡಿಲಲ್ಲೇ ಇಟ್ಟುಕೊಂಡರು. ತಕ್ಷಣವೇ ಅವರೂ ಶಿವಲಿಂಗವಾದರು. ಹೀಗೆ ಅವರಿಗೆ ಜ್ಞಾನೋದಯವಾಯಿತು. ಆ ವೃದ್ಧರು "ಇನ್ನು ನೀನು ಹೋಗಬಹುದು" ಎಂದರು.
ಹೀಗೆ ಶರಣಾಗಿ ಗುರುವಿನ ಪಾದಗಳನ್ನು ಮುಟ್ಟಿದೊಡನೆ ಅವರಿಗೆ ಜ್ಞಾನ ಪ್ರಾಪ್ತಿಯಾಯಿತು. ಜ್ಞಾನೋದಯವಾದ ಮೇಲೆ ಮನೆಗೆ ಹೋದ ನಾಮದೇವರು ಬಳಿಕ ದೇವಸ್ಥಾನಕ್ಕೆ ಹೋಗಲೇ ಇಲ್ಲ. ಆಗ ವಿಠಲನೇ ನಾಮದೇವರ ಮನೆಗೆ ಹೋದನಂತೆ. ಏನೂ ತಿಳಿಯದವನಂತೆ "ನನ್ನನ್ನು ನೋಡಲು ಬರುವುದನ್ನು ಮರೆತೇ ಬಿಟ್ಟಿರುವೆಯಲ್ಲಾ" ಎಂದು ಕೇಳಲು ನಾಮದೇವರು "ಇನ್ನು ಮೇಲೆ ನೀನು ನನ್ನನ್ನು ಮೋಸಗೊಳಿಸುವಂತೆ ಇಲ್ಲ. ನನಗೀಗ ತಿಳಿದಿದೆ. ನೀನಿಲ್ಲದ ಸ್ಥಳವಾವುದು? ನಿನ್ನನ್ನು ಬಿಟ್ಟು ನಾನು ಬೇರೆಯಾಗಿರುವೆನೇ?" ಎಂದರು. ಆಗ ವಿಠಲನು ನಸುನಗುತ್ತಾ " ಓ ನಿನಗೀಗ ಸತ್ಯದ ಅರಿವಾಗಿದೆ. ಅದಕ್ಕಾಗಿಯೇ ನಿನ್ನನ್ನು ಅಂತಿಮ ಪಾಠಕ್ಕಾಗಿ ಕಳಿಸಬೇಕಾಯಿತು" ಎಂದನು.
(ಭಗವಾನ್ ರಮಣ ಮಹರ್ಷಿಗಳು ಭಕ್ತರಿಗೆ ದೈವೀನಾಮ ಮಹಿಮೆಯ ತತ್ತ್ವವನ್ನು ವಿವರಿಸುತ್ತಾ ಹೇಳಿದ ಘಟನೆ)
ಆತ್ಮೀಯರೇ,
ಪ್ರತ್ಯುತ್ತರಅಳಿಸಿಧನ್ಯವಾದಗಳು ನಿಮ್ಮ ಎಲ್ಲಾ ಲೇಖನಗಳನ್ನು ತಪ್ಪದೆ ಓದಿದೆ ಎಕ್ಸ್ಟ್ರಾಡಿನರಿ ಸೂಪರ್ ನಿಮ್ಮಲ್ಲಿ ಒಬ್ಬ ಅಕಾಡಮಿಕ್ scholar ಇದ್ದಾನೆ ಅಂತ ನಿರೂಪಿಸಿದ್ದೀರಾ ಹೀಗೆ ಇನ್ನು ಬಹಳಷ್ಟು ಲೇಖನಗಳು ನಿಮ್ಮಿಂದ ಬರಲಿ.
ಹಿಂದೂಗಳು ಧರ್ಮಧ ರಕ್ಷಣೆ ಬಗ್ಗೆ ತಿಳಿದುಕೊಳ್ಳುವುದು ಯಾವಾಗ , ಯಾರು ತಿಳಿಸಿಕೊಡುತ್ತಾರೆ.
ಮುಸಲ್ಮಾನರು ಭಾರತಕ್ಕೆ ಬ೦ದು ಸಾವಿರ ವರ್ಷವಾದರೂ ಅವರ ವಿಗ್ರಹಭಂಜಕ ನಡೆ ಬಗ್ಗೆ ಹಿಂದುಗಳಿಗೆ ಸ್ವಲ್ಪವಾದರೂ ಅರಿವಿಲ್ಲವಲ್ಲ ಇವತ್ತು ಭಾರತದ ಯಾವುದೇ ರಾಜ್ಯವಾಗಲಿ ಅಲ್ಲಿಯ ಊರುಗಳಲ್ಲಿ ಮುಸ್ಲಿಂ ಏರಿಯಾ ದೊಡ್ಡದಾಗುತ್ತಾ ಬಂದಿದೆ
ಅಲ್ಲಿಂದ ಹಿಂದೂಗಳು ಓಡಿಹೋಗುತ್ತಿದ್ದಾರೆ, ಇದರಬಗ್ಗೆ ಯಾರುಮಾತಾಡುತ್ತಿಲ್ಲ
ಯಾವ ಬ್ಲಾಗರ್ ಸಹ ಈ ಬಗ್ಗೆ ಬರೆಯುತಿಲ್ಲ ನನಗೆ ತಿಳಿದಮಟ್ಟಿಗೆ
- ಧೀ ಶಕ್ತಿ ಒಂದೇ ಮುಸ್ಲಿಂ ಇವರ ಬಗ್ಗೆ ನೈಜ ಇತಿಹಾಸದ ಮುಖಾಂತರ ತಿಳಿಸುತಿದ್ದಾರೆ
ಆದರೆ ವಾಸ್ತವವಾಗಿ ಲವ್ -ಜೆಹಾದಿ ,ಇಸ್ಲಾಮಿಕ್ ಬ್ಯಾಂಕಿಂಗ್ , ಇತ್ಯಾದಿ
ಇಸ್ಲಾಮಿಕ್ ಬ್ಯಾಂಕಿಂಗ್ - ಮುಂದಿನ ಎಲೆಕ್ಷನ್ನಲ್ಲಿ ಕಾಂಗ್ರೆಸ್ ಭಾರತದಲ್ಲಿ ಬಂದರೆ, ರಿಸರ್ವ್ ಬ್ಯಾಂಕ್ permission ಕೊಡುತ್ತೆ ಅಲ್ಲಿಗೆ ಹಿಂದುಗಳ ಮೇಲ್ವರ್ಗ ಕ್ರಿಶ್ಚಿಯನ್ ಮತಾಂತರ ಬಹಳ ಸುಲಭ ಯಾಕೆಂದರೆ ಇಸ್ಲಾಮಿಕ್ ಟೆರ್ರ್ರಿಸ್ಟ್ ಎದುರಿಸಲು ಕ್ರಿಶ್ಚಿಯನ್ ಮತಾಂತರ
ಒಂದೇ ಮಾರ್ಗ ಅನ್ಯತಾ ಬೇರೆಇಲ್ಲ . ಇಸ್ಲಾಮಿಕ್ ಬ್ಯಾಂಕಿಂಗ್ - ಮುಸ್ಲಿಂ ಶ್ರೀಮಂತರು
ಹಣವನ್ನು ಫಿಕ್ಸೆಡ್ ಮಾಡುತ್ತಾರೆ ನೋ ಇಂಟರೆಸ್ಟ್ ಆ ಹಣವನ್ನು ರಿಯಲ್ ಎಸ್ಟೇಟ್ ನಲ್ಲಿ
ತೊಡಗಿಸುತ್ತಾರೆ ಯಾವರೀತಿ ಅಂದರೆ ಹಿಂದುಗಳ ಮೇಲ್ವರ್ಗ ಯಾವ ಏರಿಯಾ ನೋಡಿ ಕೊಂಡು ಅಲ್ಲಿ ಮನೆ ಖರೀದಿ / ಬಾಡಿಗೆ ತೆಗಿದುಕೊಂಡು ಕೆಳವರ್ಗದ ಮುಸ್ಲಿಂ ಗೆ ಕಡಿಮೆ /ಸುಲಭ ಕಂತು ಕಟ್ಟಲು ಸಹಾಯ ಮಾಡುತ್ತಾರೆ ನಿಧಾನವಾಗಿ ಮುಸ್ಲಿಂ ಸಂಖ್ಯೆ ಜಾಸ್ತಿಮಾಡುತ್ತಾರೆ ನಂತರ ಕೀಟಲೆ,ದೊಂಬಿ ,ಜಗಳ , ಶುರುಮಾಡುತ್ತಾರೆ ಅಲ್ಲಿಗೆ
ನಿಧಾನವಾಗಿ ಹಿಂದುಗಳು ಜಾಗ ಖಾಲಿಮಾಡುತ್ತಾರೆ ಉದಾ : ಬೆಂಗಳೂರಿನ ಪಾದರಾಯನಪುರ ,ಒಂದುಕಾಲಕ್ಕೆ ಹಿಂದುಗಳು ಹೆಚ್ಚಿದ್ದರು ಆದರೆ ಈಗ ಕೇವಲ ಮುಸ್ಲಿಂ ಏರಿಯಾ ಆಗಿದೆ ಪೋಲಿಸ್ ಸಹ ಪರ್ಮಿಷನ್ ತೆಗಿದುಕೊಂಡು ಹೂಗಬೇಕು , ಇದು
ಹಿಂದುಗಳ ಮೇಲ್ವರ್ಗದವರಿಗೆ ತಿಳಿದು ಜಾಣಕುರುಡು . ಹೀಗಾದರೆ ನಮ್ಮ ಮುಂದಿನ ಪೀಳಿಗೆಗೆ ಇರುವುದು ಒಂದೇ ಮಾರ್ಗ ಅನ್ಯತಾ ಬೇರೆಇಲ್ಲ ಆದುವೇ ಹಿಂದುಗಳ ಮೇಲ್ವರ್ಗ ಕ್ರಿಶ್ಚಿಯನ್ ಮತಾಂತರ.
ಈ ಬಗ್ಗೆ ನಿಮ್ಮ ಒಂದು ಲೇಖನದ ನೀರೀಕ್ಷೆ ಬಯಸುತ್ತೇನೆ
ವಂದನೆಗಳು
ಇ೦ತಿ ನಿಮ್ಮ ಅಭಿಮಾನಿ
ಕಲ್ಲೇಶ ಡಿಪ್ಲೋಮ ಲೋಹಶಾಸ್ತ್ರ
ಮೈಸೂರು 9380926439.