ಪುಟಗಳು

ಶನಿವಾರ, ಏಪ್ರಿಲ್ 25, 2020

ತಬ್ಲೀಘಿ ಜಮಾತ್: ಭಯೋತ್ಪಾದಕರ ಕೊರೋನಾಸ್ತ್ರ!

ತಬ್ಲೀಘಿ ಜಮಾತ್: ಭಯೋತ್ಪಾದಕರ ಕೊರೋನಾಸ್ತ್ರ!


           ದೇಶವಿಡೀ ಲಾಕ್ ಡೌನ್ ಇದ್ದಾಗಲೂ ದೇಶವಿದೇಶಗಳ ಸಾವಿರಾರು ಜನರನ್ನು ಸೇರಿಸಿಕೊಂಡು ಕೊರೋನಾ ಇದ್ದಂತಹಾ ವ್ಯಕ್ತಿಗಳನ್ನು ನಡುನಡುವೆ ಉದ್ದೇಶಪೂರ್ವಕವಾಗಿಯೇ ಕುಳ್ಳಿರಿಸಿ ಮತೀಯ ಸಭೆ ನಡೆಸಿದರು. ಆ ಸಭೆಗಳಲ್ಲೆಲ್ಲಾ ಕೊರೋನಾ ಅಲ್ಲಾನ ಶಾಪ, ಎಲ್ಲರೂ ಒಟ್ಟಾಗಿ ಆಲಿಂಗಿಸಿ, ಅಲ್ಲಾನನ್ನು ಪ್ರಾರ್ಥಿಸುತ್ತಾ ಮಸೀದಿಗಳಲ್ಲಿ ಪ್ರಾಣಬಿಟ್ಟರೆ ಅದಕ್ಕಿಂತ ದೊಡ್ಡ ಪುಣ್ಯವಿಲ್ಲ ಎಂಬ ಭ್ರಮೆಯನ್ನೆಲ್ಲಾ ತಮ್ಮದೇ ಮತೀಯರಲ್ಲಿ ತುಂಬಿದರು. ಆ ಸಭೆಗಳಲ್ಲೆಲ್ಲಾ ಸೇರಿ ಕಾರ್ಯಕ್ರಮ ಮುಗಿದ ಬಳಿಕ ತಮ್ಮ ತಮ್ಮ ಊರಿಗೆ ತೆರಳಿ ಜನಸಾಮಾನ್ಯರಿಗೂ ಕೊರೋನಾ ಹರಡುವಂತೆ ಮಾಡಿದರು. ಮಾತ್ರವಲ್ಲ ವಿದೇಶಗಳಿಂದ ಬಂದಂತಹಾ ತಮ್ಮ ಸಹವರ್ತಿಗಳನ್ನೂ ಮಸೀದಿಗಳಲ್ಲಿ ಅಡಗಿಸಿಟ್ಟರು. ಕೊರೋನಾ ಪರೀಕ್ಷೆ ಮಾಡಿಸಿಕೊಳ್ಳಿ ಎಂದರೆ ನಮಗೆ ಕೊರೋನಾ ಇಲ್ಲ, ಬೇಕಾದರೆ ಮೋದಿ ಕೊರೋನಾ ಪರೀಕ್ಷೆ ಮಾಡಿಸಿಕೊಳ್ಳಲಿ ಎಂದು ಪ್ರಧಾನಿಯನ್ನು ಜರೆದರು. ಲಾಕ್ ಡೌನ್ ಕೊರೋನಾ ನಿಯಂತ್ರಣಕ್ಕಾಗಿ ಮಾಡಿದ್ದಲ್ಲ, ಸಿಎಎಯ ವಿರುದ್ಧದ ಪ್ರತಿಭಟನೆಯನ್ನು ಹತ್ತಿಕ್ಕಲು ಮೋದಿ ಮತ್ತು ಶಾ ಸೇರಿ ಮಾಡಿದ ಷಡ್ಯಂತ್ರ ಎಂದು ಬೊಬ್ಬಿರಿದರು. ಗುಂಪು ಗುಂಪಾಗಿ ನಮಾಜ್ ಮಾಡಿ ಮತ್ತಷ್ಟು ಜನರಿಗೆ ಕೊರೋನಾ ಹಬ್ಬಿಸಿದರು. ಪೊಲೀಸರಿಗೆ ಕಲ್ಲು ಹೊಡೆದರು. ವೈದ್ಯರ ಮೇಲೆ, ಆರೋಗ್ಯ ಕಾರ್ಯಕರ್ತರ ಮೇಲೆ ದಾಳಿ ಮಾಡಿದರು. ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರ ಮಾಡಿದವರ ಮೇಲೆ ಮೇಲಿಂದ ಮೇಲೆ ಕರೆ ಮಾಡಿ ಬೆದರಿಕೆ ಒಡ್ಡಿದರು. ನೋಟಿಗೆ ಸಿಂಬಳ ಅಂಟಿಸಿ ಕೊಟ್ಟ ಒಬ್ಬ. ಹಿಂದೂಗಳ ಮನೆ ಬಾಗಿಲಿಗೆ ಉಗುಳಿದನೊಬ್ಬ. ತರಕಾರಿಗೆ ಎಂಜಲು ಹಚ್ಚಿ ಮಾರಾಟ ಮಾಡಿದ ಮತ್ತೊಬ್ಬ. ನೋಟಿಗೆ ಎಂಜಲು ಹಚ್ಚಿ ಹರಡಿದವ ಮಗದೊಬ್ಬ. ಇದನ್ನು ಜಿಹಾದ್ ಎನ್ನದೆ ಮತ್ತೇನು ಹೇಳಬೇಕು?

           ರೋಗವನ್ನು ಹರಡಲೆಂದೇ ಎಲ್ಲೆಂದರಲ್ಲಿ ಉಗುಳುವುದು ಮುಸ್ಲಿಮರಿಗೆ ಹೊಸತಲ್ಲ. 1817-1831ರ ನಡುವೆ ಕಾಲರಾದಿಂದ ಭಾರತ ತತ್ತರಿಸಿದ್ದಾಗ ಸಯ್ಯದ್ ಅಹ್ಮದ್ ಬರೇಲ್ವಿಯನ್ನು ಅನುಸರಿಸುತ್ತಿದ್ದ ವಹಾಬೀಗಳು ಹಿಂದೂಗಳ ಮೇಲೆ, ಬ್ರಿಟಿಷರ ಮೇಲೆ ಮಾತ್ರವಲ್ಲ ಸಿಕ್ಕಸಿಕ್ಕಲ್ಲಿ ಬೇಕೆಂದೇ ಉಗುಳಿ ರೋಗ ಹರಡಿಸಲು ಯತ್ನಿಸಿದ್ದನ್ನು ಬ್ರಿಟಿಷರು ಬರೆದಿಟ್ಟಿದ್ದಾರೆ. ಮಾತ್ರವಲ್ಲ ಆಗಲೂ ಈ ರೋಗ ಕಾಫಿರರನ್ನು ನಾಶಗೊಳಿಸಲೆಂದು ಅಲ್ಲಾ ನೀಡಿದ ಶಿಕ್ಷೆ ಎಂದೇ ಆ ಮೂರ್ಖರು ನಂಬಿದ್ದರು, ನಂಬಿಸಿದ್ದರು. ನಿಜಾಮನ ಆಡಳಿತದಲ್ಲಿ ರಜಾಕರರು ಹಿಂದೂಗಳ ಆಹಾರ, ಧಾನ್ಯಗಳಿಗೆ ಉಗುಳುತ್ತಿದ್ದರು. ಅಲ್ಲಾಹನ ಸಂದೇಶವಾಹಕನು ಉಗುಳಿದ ಆಹಾರವೇ ಶ್ರೇಷ್ಠವೆಂದು ಅವರ ಹದೀತ್'ಗಳೇ ಹೇಳುವಾಗ, ಹಾಗೂ ಅವರ ಹಬ್ಬಗಳಲ್ಲಿ ಅವರು ಅದನ್ನೇ ಅನುಸರಿಸುವಾಗ, 'ಕಾಫಿರ'ರನ್ನು ಕಾಲಕಸಕ್ಕಿಂತ ನೋಡುವ ಅವರು ಈ ರೀತಿ ಮಾಡುವುದು ವಿಚಿತ್ರವೆಂದೇನೂ ಅನ್ನಿಸುವುದಿಲ್ಲ.

         ಏನಿದು ತಬ್ಲೀಘಿ? ಹೊಸದಾಗಿ ಕೇಳಿದಂತಿದೆಯಲ್ಲಾ ಎಂದರೆ ಅದರ ಕಾರ್ಯಚಟುವಟಿಕೆ ಇದ್ದುದೇ ಹಾಗೆ. ಅದೇನು ಒಂದು ಮಸೀದಿಯೋ ಅಥವಾ ದೆಹಲಿಗೆ ಸೀಮಿತವಾದ ಸಂಘಟನೆಯೂ ಅಲ್ಲ. ಅಥವಾ ಅದು ನೇರ ಯುದ್ಧ ಮಾಡುವ ಭಯೋತ್ಪಾದಕ ಗುಂಪೂ ಅಲ್ಲ. ಮಾಧ್ಯಮಗಳನ್ನು ಹೊಕ್ಕು ತನ್ನದೇ ಅಭಿಪ್ರಾಯವನ್ನು ಹೇರಿದ ವೈಚಾರಿಕ ಜಿಹಾದ್ ಕೂಡಾ ಅಲ್ಲ. ಆದರೆ ಈ ಎರಡೂ ಪಂಗಡಗಳಿಗೂ ಪ್ರಭಾವ ಬೀರಿದ ಮತ್ತು ಅವುಗಳ ಬೆಂಬಲವನ್ನೂ ಪಡೆದ ತೋರಿಕೆಗೆ ಮೂಲ ಇಸ್ಲಾಮನ್ನು ತಾನನುಸರಿಸುವುದೆಂದು ಹೇಳುತ್ತಾ ಗುಪ್ತವಾಗಿ ಸ್ಲೀಪರ್ ಸೆಲ್ ನಂತೆ ವಿಶ್ವಾದ್ಯಂತ ಕಾರ್ಯಾಚರಿಸುವ ಒಂದು ಸಮುದಾಯ. ಹಾಗಾಗಿ ಕಾನೂನಿನ ಕುಣಿಕೆಗೆ ಭಯೋತ್ಪಾದಕ ಸಂಘಟನೆಯಾಗಿ ಇದು ಸಿಗಲಾರದು. ಆದರೆ ಇದರ ಕೃತ್ಯವೆಲ್ಲಾ ಭಯೋತ್ಪಾದನೆಯ ಪೋಷಣೆಯೇ. ಒಂದು ಕಡೆ ಸಾಮಾಜಿಕ ಸಂಘಟನೆಯಂತೆ, ಮತ್ತೊಂದು ಕಡೆ ಧಾರ್ಮಿಕ ಸಂಸ್ಥೆಯಂತೆ ಕಾರ್ಯಾಚರಿಸುತ್ತಾ ಸಮಯ ಸಮಯಕ್ಕೆ ದೊಡ್ಡ ದೊಡ್ಡ ಸಮ್ಮೇಳನಗಳನ್ನು ವಿಶ್ವದ ಹಲವೆಡೆಗಳಲ್ಲಿ ತಿಂಗಳುಗಟ್ಟಲೆ ನಡೆಸುತ್ತಾ ಯುವಕರ ಮೆದುಳನ್ನು ಕಿತ್ತು ಅಲ್ಲಿ ಕೊರೋನಾಗಿಂತ ಅಪಾಯಕಾರಿಯಾದ ಕುರಾನ್ ಎಂಬ ವೈರಸ್ಸನ್ನಿಟ್ಟು ಅದರಲ್ಲಿ ಸಮರ್ಥರೆಂದು ಕಂಡವರನ್ನು ಭಯೋತ್ಪಾದಕ ಸಂಘಟನೆಗೆ ಸೇರಿಸುವ ಕೆಲಸ ಇದರದ್ದು. ಅಂದರೆ ಇದು ಒಂದು ತರಹಾ ಕಂಪೆನಿಗಳಿಗೆ ಪದವೀಧರರನ್ನು ಪೂರೈಸುವ ಮಧ್ಯವರ್ತಿ ಕಂಪೆನಿಯಂತೆ, ಅದಕ್ಕಿಂತಲೂ ಹೆಚ್ಚು ವೃತ್ತಿಪರನಂತೆ ಕೆಲಸ ಮಾಡುತ್ತದೆ.

           ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸ್ಥಾಪನೆಯಾದ ಮರುವರ್ಷದಲ್ಲೇ ಮೌಲಾನಾ ಮಹಮ್ಮದ್ ಇಲ್ಯಾಸ್ ಖಂಡಾಲವಿ ರಾಜಕೀಯವಿಲ್ಲದ ಕೇವಲ ಮತಪ್ರಚಾರವೇ ತನ್ನ ಉದ್ದೇಶವೆನ್ನುತ್ತ ಹದೀಸ್, ಸುನ್ನಾಹ್ಗಳನ್ನೇ ಬೋಧಿಸಲೆಂದು ದಾರ್ ಉಲ್ ಉಲೂಮ್ ದೇವಬಂದಿನ ಶಾಖೆಯಾಗಿ  ಆರಂಭಿಸಿದ ಸಂಸ್ಥೆಯೇ ತಬ್ಲೀಘಿ ಜಮಾತ್. ಅಂದರೆ ಇದರ ಮೂಲ ಉದ್ದೇಶವೇ ಮತಾಂತರ. ರಾಜಕೀಯೇತರ ಸಂಘಟನೆಯೆಂದು ಬ್ರಿಟಿಷರಿಂದಲೂ ಬೆಂಬಲಗಿಟ್ಟಿಸಿಕೊಂಡ ಇದು ತನ್ನದೇ ರೀತಿ-ರಿವಾಜುಗಳನ್ನು ಅಳವಡಿಸಿಕೊಂಡಿತು. ಪ್ರವಾದಿಯ ಕಾಲದಲ್ಲಿ ಇಸ್ಲಾಮ್ ಹೇಗಿತ್ತೋ ಅದನ್ನೇ ಈಗ ಯಥಾವತ್ ಅನುಸರಿಸಬೇಕೆಂದು ದಾರಿ ತಪ್ಪಿದ ಮುಸಲ್ಮಾನರನ್ನು "ಸರಿ"ದಾರಿಗೆ ತರಲು ಹುಟ್ಟಿದ ಸಂಘಟನೆಯಿದು ಎಂದು ಸ್ವತಃ ಅದರ ಸಂಸ್ಥಾಪಕನೇ ನುಡಿದಿದ್ದ. ಪ್ರವಾದಿ ಬೋಧಿಸಿದುದು ಸರಿಯಿತ್ತು, ಅನುಸರಿಸಿದವರು ತಿರುಚಿದರು ಎನ್ನುವವರು ಇದನ್ನು ಗಮನಿಸಬೇಕು. ಪ್ರವಾದಿಯ ಇಸ್ಲಾಂ ಎಷ್ಟು ಕಟ್ಟರ್ ಇತ್ತು ಎನ್ನುವುದನ್ನು ಅರಿಯಬೇಕು. ಮಾತ್ರವಲ್ಲ ದಾರಿ ತಪ್ಪಿದವರನ್ನು ಸರಿ ದಾರಿಗೆ ತರುವುದೆಂದರೇನು? ಸೌಮ್ಯವಾಗಿದ್ದವರನ್ನು ಮತ್ತೆ ಕಟ್ಟರ್ ವಾದಕ್ಕೆ ಮರಳಿಸುವುದೆಂದಲ್ಲವೇ? ಮಾನವ ಜನಾಂಗದ ಮಾತ್ರವಲ್ಲ, ಪ್ರಾಣಿ, ಪಕ್ಷಿ, ಸಸ್ಯಸಂಕುಲಗಳೆಲ್ಲದರ ದುರದೃಷ್ಟವೆಂದರೆ ತಬ್ಲೀಘಿ ಅದೇ ದಾರಿಯಲ್ಲಿ ಮುನ್ನಡೆಯಿತು. ಸೆಕ್ಯುಲರ್ ಕನ್ನಡಕ ಅಥವಾ ಭೀತಿಯ ದೃಷ್ಟಿಯಲ್ಲಿ ನೋಡದೆ ಇತಿಹಾಸವನ್ನು ಇದ್ದಂತೆ ಕಾಣುವ, ಸ್ವೀಕರಿಸುವ ಪ್ರತಿಯೊಬ್ಬನ ದೃಷ್ಟಿಗೂ ಇದು ಸ್ಪಷ್ಟವಾಗಿ ಗೋಚರಿಸೀತು.

           ಅಲ್ಪ ಕಾಲದಲ್ಲೇ ದೇಶದಾದ್ಯಂತ ಹರಡಿದ ತಬ್ಲೀಘಿ ಜಮಾತ್ ತನ್ನ ಮತ ಪ್ರಚಾರದ ಉದ್ದೇಶಕ್ಕೆಂದೇ ಮುಹಮ್ಮದ್ ಝಕಾರಿಯಾ ಖಂಡಾಲವಿ ಬರೆದ "ತಬ್ಲೀಘಿ ನಿಸಾಬ್" ಎಂಬ ಪುಸ್ತಕವನ್ನು ಪವಿತ್ರ ಗ್ರಂಥದಂತೆ ಉಪಯೋಗಿಸಲು ಆರಂಬಿಸಿತು. ಮುಂದೆ ಇದೇ ಪರಿಷ್ಕರಣೆಗೊಳಗಾಗಿ ಇಸ್ಲಾಮಿನ ಮೂಲ ಬೋಧನೆಗಳಷ್ಟನ್ನೇ ಉಳಿಸಿ "ಸಹೀಹ್ ಫಝಯ್ಲ್ ಎ ಅಮಾಲ್" ಎಂದು ಬದಲಾಯಿತು. ಹಾಗಂತ ಇಸ್ಲಾಮಿಗೆ ಇದೊಂದು ಹೊಸತಾದ ಕಟ್ಟರ್ ಪಂಥವಾಗಿರಲಿಲ್ಲ. ಮರಾಠರು, ಜಾಟರು, ಸಿಖ್ಖರು ಪ್ರಬಲರಾಗಿ ದೆಹಲಿಯ ಗದ್ದುಗೆ ಮೊಘಲರ ಕೈತಪ್ಪಿದ ಬಳಿಕ ಮುಸ್ಲಿಮರಲ್ಲಿ ಅಸಂತುಷ್ಟಿ ತಾಂಡವವಾಡುತ್ತಿತ್ತು. ಅಂತಹಾ ಸಮಯದಲ್ಲಿ ಷಾಹ್ ವಲಿಯುಲ್ಲಾ ಅಹ್ಮದ್ ಶಾ ಅಬ್ದಾಲಿಯೆಂಬ ರಕ್ಕಸನನ್ನು ದೆಹಲಿಯ ಗದ್ದುಗೆಯೇರುವಂತೆ ಆಹ್ವಾನಿಸಿದ. ಆದರೆ ಅಬ್ದಾಲಿ ಬಾರಿ ಬಾರಿ ಬಂದರೂ ದೆಹಲಿಯ ಗದ್ದುಗೆ ಏರಲಾರದೆ ಹೋದ. ವಲಿಯುಲ್ಲಾನ ಮಗ ಅಬ್ದುಲ್ ಅಜೀಜ್ ಹಿಂದೂಗಳ ಮೇಲಿನ ಜಿಹಾದ್ ಅನ್ನು ಹಿಂದೂ ಮತ್ತು ಫರಂಗಿಗಳ ಮೇಲಿನ ಜಿಹಾದ್ ಆಗಿ ಪರಿವರ್ತಿಸಿ ಫತ್ವಾವೊಂದನ್ನು ಹೊರಡಿಸಿದ! ಬ್ರಿಟಿಷರಿಂದ ಶಸ್ತ್ರಾಸ್ತ್ರ ಸಂಗ್ರಹಿಸಿ, ರಕ್ಷಣೆಯನ್ನೂ ಪಡೆದುಕಂಡು ಜಿಹಾದಿಗೆ ಆಧುನಿಕ ಸ್ವರೂಪ ಕೊಟ್ಟ ಸಯ್ಯದ್ ಅಹ್ಮದ್ ಬರೇಲ್ವಿ ಎಂಬ ಅಜೀಜನ ಶಿಷ್ಯನನ್ನು ರಣಜಿತ್ ಸಿಂಗನ ಸೈನಿಕರು ಅಟ್ಟಾಡಿಸಿ ಬಡಿದರು. ಈ ಬರೇಲ್ವಿಯ ಬೆಂಬಲಿಗರಾದ ವಹಾಬಿಗಳು ಮಾತ್ರ ಇಡೀ ಭಾರತದಲ್ಲಿ ಹರಡಿಕೊಂಡು ಬಿಟ್ಟರು. 1857ರ ಸ್ವಾತಂತ್ರ್ಯ ಸಂಗ್ರಾಮದ ಬಳಿಕದ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಸಯ್ಯದ್ ಅಹ್ಮದ್ ಖಾನ್ ಬ್ರಿಟಿಷರೊಡನೆ ಹೊಂದಾಣಿಕೆ ಮಾಡಿಕೊಂಡು ಆಂಗ್ಲೋ-ಮೊಹಮ್ಮದನ್ (ಹೆಸರು ಗಮನಿಸಿ) ಶಾಲೆಯೊಂದನ್ನು ಸ್ಥಾಪಿಸಿ ದ್ವಿರಾಷ್ಟ್ರ ಸಿದ್ಧಾಂತಕ್ಕೆ ಮುನ್ನುಡಿ ಬರೆದ. ಇದೇ ಮುಂದೆ ಅಲಿಘರ್ ಆಗಿ, ಅಲ್ಲೇ ಮುಸ್ಲಿಂ ಲೀಗ್ ಮೊಳಕೆಯೊಡೆಯಿತು. ಈ ರಾಜಕೀಯ ಪಕ್ಷಕ್ಕೆ ಸಹಾಯಕವಾಗಿ ಹುಟ್ಟಿದ್ದೇ ತಬ್ಲೀಘಿ ಜಮಾತ್. ಅದೇ ಹೊತ್ತಿಗೆ ಸ್ವಾಮಿ ದಯಾನಂದ ಸರಸ್ವತಿಗಳು ಹಾಗೂ ಅವರ ಶಿಷ್ಯ ಸ್ವಾಮೀ ಶ್ರದ್ಧಾನಂದರ "ಶುದ್ಧೀಕರಣ" ಪ್ರಕ್ರಿಯೆಗೆ ಒಳಗಾಗಿ ಹಿಂದೆ ರಜಪೂತರಾಗಿದ್ದು ಮೊಘಲರ ಸಮಯದಲ್ಲಿ ಮತಾಂತರಗೊಂಡಿದ್ದ ಮೇವಾರಿ ಭಾಷಿಕ ಮಿಯೋ ಮುಸ್ಲಿಮರು ಮಾತೃಧರ್ಮಕ್ಕೆ ಮರಳುತ್ತಿದ್ದುದೂ ತಬ್ಲೀಘಿಗಳ ಕೆಂಗಣ್ಣಿಗೆ ಗುರಿಯಾಯ್ತು. ಹಾಗಾಗಿ ಹುಟ್ಟಿದ ಕೆಲವೇ ದಿನಗಳಲ್ಲಿ ತಬ್ಲೀಘಿಗಳ ಮತಾಂಧತೆಗೆ ಸ್ವಾಮಿ ಶ್ರದ್ಧಾನಂದರ ಜೀವ ಬಲಿಯಾಯಿತು. ಇಂದಿನ ರೀತಿಯೇ ಅಂದು ಸೆಕ್ಯುಲರ್ ಎನಿಸಿಕೊಂಡವರಿಗೆಲ್ಲಾ ಸ್ವಾಮೀಜಿಯ ಕೊಲೆಗಾರ ತಬ್ಲೀಘಿ ಅಬ್ದುಲ್ ರಶೀದ ಅಮಾಯಕನಾಗಿಯೇ ಕಂಡ. ಅಹಿಂಸೆಯ ಗುರಿಕಾರನಂತೂ ಆತನನ್ನು ಸಹೋದರ ಎನ್ನುತ್ತಾ ಅಪ್ಪಿಕೊಂಡುಬಿಟ್ಟರು! ಇಂದಿಗೂ ಬದಲಾಗಿಲ್ಲ ಹಿಂದೂಗಳ ಈ ಮಾನಸಿಕತೆ!

           ತಬ್ಲೀಘಿ ಜಮಾತ್ 1946-47ರಲ್ಲಿ ರಾಜಾಸ್ಥಾನವನ್ನು ಮಿಯೋಸ್ಥಾನ್ ಎನ್ನುವ ಇಸ್ಲಾಮಿಕ್ ದೇಶವನ್ನಾಗಿ ಬದಲಾಯಿಸಲು ಕೈಗೆ ಸಿಕ್ಕ ಆಯುಧಗಳನ್ನು ಹಿಡಿದು ಬೀದಿಗಿಳಿದಿತ್ತು. ಈ ದಂಗೆಯಲ್ಲಿ ಅದರ ಜೊತೆಯಾದದ್ದು ವಿಭಜನಕಾರಿ ಮುಸ್ಲಿಮ್ ಲೀಗ್! 1941ರಲ್ಲಿ ಮೌಲಾನಾ ಇಲ್ಯಾಸ್ ದೆಹಲಿಯ ನಿಜಾಮುದ್ದೀನ್ ನಲ್ಲಿ ಹಲವು ಸಾವಿರ ಜನರನ್ನು ಸೇರಿಸಿ ಬೃಹತ್ ಸಮಾವೇಶ ನಡೆಸಿದ. ವಿಭಜನೆಗೆ ಪೂರಕವಾಗಿ ಕೆಲಸ ಮಾಡಿದ ತಬ್ಲೀಘಿಯ ಕೆಲ ಸದಸ್ಯರು ವಿಭಜನೆಯ ಬಳಿಕ ಪಾಕಿಸ್ತಾನದಲ್ಲೂ ತಬ್ಲೀಘಿಯ ಸಂಘಟನೆಯೊಂದನ್ನು ಆರಂಭಿಸಿದರು. ಅದಕ್ಕೆ ಸ್ವತಃ ಪಾಕ್ ಸರಕಾರ ಬೆಂಬಲ ನೀಡಿತ್ತು. ಇಲ್ಯಾಸನ ಮಗ ಮೌಲಾನಾ ಮೊಹಮ್ಮದ್ ಯೂಸುಫ್ ಮತ್ತು ಆತನ ಉತ್ತರಾಧಿಕಾರಿ ಮೌಲಾನಾ ಇನಾಮುಲ್ ಹಸನ್ ಅವಧಿಯಲ್ಲಿ ತಬ್ಲೀಘಿ ಜಮಾತ್ಗೆ ಭಾರೀ ಹಣಕಾಸಿನ ನೆರವೂ ದೊರೆತು ಅದು ಪಶ್ಚಿಮ ಯೂರೋಪು ಹಾಗೂ ಉತ್ತರ ಅಮೇರಿಕಾದಲ್ಲಿ ತನ್ನ ಬೆಳೆ ಬಿತ್ತಿತು. ವಹಾಬೀ ಗುರು ಶೇಖ್ ಅಬ್ದ್ ಅಲ್ ಇಬ್ನ್ ಬಾಜ್ ತಬ್ಲೀಘಿಗೆ ತನ್ನ ಪೂರ್ಣ ಬೆಂಬಲ ಘೋಷಿಸಿದನಲ್ಲದೆ ವಹಾಬೀ ಪ್ರಚಾರಕರನ್ನೂ ತಬ್ಲೀಘಿಗಳೊಂದಿಗೆ ಜಗತ್ತಿನಾದ್ಯಂತ ಕಳುಹಿಸಿದ. ಹೀಗೆ ಅತ್ತ ವಹಾಬೀ ಜಾಲವೂ ಬೆಳೆಯಿತು. ಸೌದಿಯ ಹಣದಿಂದ "ವರ್ಲ್ಡ್ ಮುಸ್ಲಿಂ ಲೀಗ್"ನ ಪೋಷಕತ್ವದೊಂದಿಗೆ ತಬ್ಲೀಘಿಯೂ ಬೃಹತ್ತಾಗಿ ಬೆಳೆಯಿತು. 1978ರಲ್ಲಿ ಇಂಗ್ಲೆಂಡಿನ ಡ್ರ್ಯುಸ್ ಬರಿಯಲ್ಲಿ ದೊಡ್ಡ ಕಟ್ಟಡವೊಂದನ್ನು ತನ್ನ ಮುಖ್ಯ ಕಛೇರಿಯನ್ನಾಗಿ ಮಾಡಿಕೊಂಡು ಯೂರೋಪಿನ ಮೂಲೆಮೂಲೆಗೂ ಹಬ್ಬಿತು.

           ಅಪ್ಘಾನಿಸ್ತಾನದಲ್ಲಿ ರಷ್ಯಾ ವಿರುದ್ಧ ಹೋರಾಡಲು 1980ರಲ್ಲಿ ತಬ್ಲೀಘಿಗಳ ನೇತೃತ್ವದಲ್ಲಿ ಹರ್ಕತ್ ಉಲ್ ಜಿಹಾದ್ ಅಲ್ ಇಸ್ಲಾಮ್ ಎಂಬ ಭಯೋತ್ಪಾದಕ ಸಂಘಟನೆ ಪಾಕಿಸ್ತಾನದಲ್ಲಿ ಹುಟ್ಟಿತು. ಬಳಿಕ 1980ರಲ್ಲಿ ಪಾಕಿಸ್ತಾನದ ತಬ್ಲೀಘಿಗಳ ಮುಖ್ಯ ಕಛೇರಿಯಿರುವ ರಾಯ್ ವಿಂಡ್ ನಲ್ಲಿ ಹರ್ಕತ್ ಉಲ್ ಮುಜಾಹಿದೀನ್ ಎಂಬ ಉಗ್ರ ಸಂಘಟನೆಯನ್ನು ಇದೇ ತಬ್ಲೀಘಿಗಳು ಹುಟ್ಟು ಹಾಕಿದರು. 1998ರಲ್ಲಿ ಏರ್ ಇಂಡಿಯಾ ವಿಮಾನವನ್ನು ಅಪಹರಿಸಿ ಮೌಲಾನಾ ಮಸೂದ್ ಅಝರ್ ಮತ್ತವನ ಸಂಗಡಿಗರನ್ನು ಭಾರತದ ಸೆರೆಯಿಂದ ಬಿಡಿಸಿಕೊಂಡವರು ಹರ್ಕತ್ ಉಲ್ ಮುಜಾಹಿದೀನ್ ಉಗ್ರ ಸಂಘಟನೆಯಲ್ಲಿದ್ದ ತಬ್ಲೀಘಿ ಜಮಾತ್ಗಳೇ. 2002ರಲ್ಲಿ ಪಾಕಿಸ್ತಾನಕ್ಕೆ ಸಬ್ ಮೆರಿನ್ ತಯಾರಿಸಲೆಂದು ಬಂದು ಕೆಲಸ ಮಾಡುತ್ತಿದ್ದ ಫ್ರೆಂಚ್ ಇಂಜಿನಿಯರುಗಳಿದ್ದ ವಾಹನ ಸ್ಫೋಟಿಸಿದ್ದೂ ಅವರೇ. ರಾಯ್ ವಿಂಡ್ ನಲ್ಲಿನ ತಬ್ಲೀಘಿ ಜಮಾತ್ ಕಛೇರಿ ಉಗ್ರ ಸಂಘಟನೆಗಳಿಗೆ ವಿದ್ಯಾರ್ಥಿಗಳನ್ನು ಒದಗಿಸಿಕೊಡುವ ಕೆಲಸ ಮಾಡುತ್ತಿತ್ತು. ಮುಂದಿನ ಇಪ್ಪತ್ತು ವರ್ಷಗಳಲ್ಲಿ ಇವರು 6000ಕ್ಕೂ ಹೆಚ್ಚು ಉಗ್ರರನ್ನು ತರಬೇತುಗೊಳಿಸಿದರು. ಇದೇ ಉಗ್ರರು ಬಳಿಕ ತಾಲಿಬಾನ್, ಆಲ್ಖೈದಾ ಸಂಘಟನೆಗಳಿಗೆ ಸೇರಿದರು. ಇವರೇ ಹುಟ್ಟುಹಾಕಿದ ಇನ್ನೊಂದು ಉಗ್ರ ಸಂಘಟನೆ ಹರ್ಕತ್ ಉಲ್ ಜಿಹಾದ್ ಇ ಇಸ್ಲಾಮಿ 2006ರಲ್ಲಿ ಸಂಕಟ ಮೋಚನ ಮಂದಿರಕ್ಕೆ ಬಾಂಬಿಟ್ಟಿತು. 2011ರಲ್ಲಿ ದೆಹಲಿಯಲ್ಲಿ ಬಾಂಬಿಟ್ಟು ಹದಿನಾಲ್ಕು ಜನರನ್ನು ಸಾಯಿಸಿತು. ಗೋಧ್ರಾದಲ್ಲಿ ಕರಸೇವಕರನ್ನು ಜೀವಂತ ಸುಟ್ಟ ಪ್ರಕರಣದಲ್ಲಿ ಪಾತ್ರವಹಿಸಿದ ಮೌಲಾನಾ ಉಮರ್ ತಬ್ಲೀಘೀ ಜಮಾತಿನ ಸದಸ್ಯ. 1994ರಲ್ಲಿ ಪ್ಯಾರಿಸ್ ಹಾಗೂ ಮೊರಾಕ್ಕೋದಲ್ಲಿ , 2003ರಲ್ಲಿ ಕ್ಯಾಸಬ್ಲ್ಯಾಂಕ ದಲ್ಲಿ ನಡೆದ ಯಹೂದಿ ಚರ್ಚ್ ಮೇಲೆ ಬಾಂಬು ದಾಳಿ ಮಾಡಿದ್ದೂ ತಬ್ಲೀಘಿಗಳೇ!

           ಫಿಲಿಫೈನ್ಸ್ ನಲ್ಲಿ ತಬ್ಲೀಘಿಗಳು ಹನ್ನೊಂದು ಸಾವಿರ ಸದಸ್ಯರನ್ನು ಒಟ್ಟುಗೂಡಿಸಿದ್ದಾರೆ. ಸೌದಿಯ ದುಡ್ಡು ಬಳಸಿಕೊಂಡು ತಬ್ಲೀಘಿಗಳು ಮೂಲಭೂತವಾದವನ್ನು ಹರಡುತ್ತಿದ್ದಾರೆ. ಮಾತ್ರವಲ್ಲ ಪಾಕಿಸ್ತಾನ ಮೂಲದ ಭಯೋತ್ಪಾದಕರಿಗೆ ಆಶ್ರಯ ನೀಡುತ್ತಿದ್ದಾರೆ ಎಂದು ಫಿಲಿಪೀನ್ಸ್ ಸರಕಾರ ಕಿಡಿಕಾರಿದೆ. ಪಾಕಿಸ್ತಾನ ಮತ್ತು ಅಲ್ಜೀರಿಯಾದಿಂದ ಪ್ರತೀ ವರ್ಷವೂ ಅಂದಾಜು 900 ಜನರನ್ನು ಉಗ್ರತರಬೇತಿಗೆ ತಬ್ಲೀಘಿ ಜಮಾತ್ ಕಳುಹಿಸುತ್ತಿದೆ. 1999ರಲ್ಲಿ ತನ್ನ ದೇಶದ 400ಕ್ಕೂ ಹೆಚ್ಚು ಯುವಕರನ್ನು ತಬ್ಲೀಘಿ ಜಮಾತ್ ಉಗ್ರತರಭೇತಿಗೆ ಕಳಿಸಿತ್ತು ಅಂತ ಉಜ್ಬೇಕಿಸ್ತಾನ್ ಆಪಾದನೆ ಮಾಡಿತ್ತು. 1998-99ರಲ್ಲಿ ಇಂಗ್ಲೆಂಡು, ಫ್ರಾನ್ಸ್ ಗಳಿಂದ ಸಾವಿರಾರು ಯುವಕರನ್ನು ತಬ್ಲೀಘಿ ಉಗ್ರತರಬೇತಿಗೆ ಕಳುಹಿಸಿತ್ತು. ಅಮೇರಿಕಾದಲ್ಲಿ ವಲಸಿಗರನ್ನು ಬಳಸಿಕೊಂಡು ಬೆಳೆದ ಜಮಾತ್ ಕನಿಷ್ಟ ಎರಡು ಸಾವಿರ ಅಮೇರಿಕರನ್ನರನ್ನು ಪಾಕಿಸ್ತಾನದಲ್ಲಿ ತರಬೇತುಗೊಳಿಸಿ ತಾಲಿಬಾನ್, ಆಲ್ಖೈದಾಗಳಿಗೆ ಸೇರಿಸಿತ್ತು. ನ್ಯೂಯಾರ್ಕ್ ನ ಕ್ವೀನ್ಸ್ನಲ್ಲಿರುವ ಅಲ್ ಫಲಾಹ್ ಮಸೀದಿ ಸದ್ಯಕ್ಕೆ ತಬ್ಲೀಘಿ ಜಮಾತ್ ನ ಕೇಂದ್ರ ಕಛೇರಿ. ಸೌದಿಯಿಂದ ನಿಯಂತ್ರಿಸಲ್ಪಡುವ ವರ್ಲ್ಡ್ ಮುಸ್ಲಿಂ ಲೀಗ್, ವರ್ಲ್ಡ್ ಅಸ್ಸೆಂಬ್ಲೀ ಆಫ್ ಮುಸ್ಲಿಂ ಯೂಥ್, ಇಂಟರ್ನ್ಯಾಷನಲ್ ಇಸ್ಲಾಮಿಕ್ ರಿಲೀಫ್ ಫಂಡ್ ಮುಂತಾದ ಸಂಘಟನೆಗಳುಮೂಲ ಅಮೇರಿಕರನ್ನರನ್ನು ವ್ಯವಸ್ಥಿತವಾಗಿ ಮತಾಂತರಿಸುವ ತಬ್ಲೀಘಿಗಳ ಕಾರ್ಯಕ್ಕೆ ಹಣ ಸಹಾಯ ಮಾಡುತ್ತಿವೆ. ವಿಶ್ವದಲ್ಲಿ ಅತೀ ಹೆಚ್ಚು ಕೊರೋನಾ ರೋಗಿಗಳಿರುವ ದೇಶ ಅಮೇರಿಕಾ. ಇದನ್ನು ಹರಡುವಲ್ಲಿ ತಬ್ಲೀಘಿಗಳ ಪಾತ್ರವನ್ನು ಅಲ್ಲಗೆಳೆಯಲಾಗದು. ದೆಹಲಿಯಲ್ಲಿ ತಬ್ಲೀಘಿಗಳ ಬೃಹತ್ ಸಭೆ ನಡೆದಂತೆ ಅದೇ ಸಮಯದಲ್ಲಿ ಪಾಕಿಸ್ತಾನದ ರಾಯ್ವಿಂಡಿನಲ್ಲಿ ಸುಮಾರು ಎರಡೂವರೆ ಲಕ್ಷ ಜನರನ್ನು ಸೇರಿಸಿ ತಬ್ಲೀಘಿಗಳ ಬೃಹತ್ ಸಮಾವೇಶ ನಡೆದಿತ್ತು. ಸಭೆಯ ಬಳಿಕ ಅವರೆಲ್ಲಾ ಪಾಕಿಸ್ತಾನದ ಹಳ್ಳಿ ಹಳ್ಳಿಗೂ ಹೋಗಿ ಕೊರೋನಾವನ್ನು ಹರಡಿದರು. ಒಂದು ಮೂಲದ ಪ್ರಕಾರ 15ಸಾವಿರ ಪಾಕ್ ಯೋಧರಿಗೆ ಕೋರೋನಾ ರೋಗವಿದೆ. ಅಲ್ಲಿ ಪರೀಕ್ಷಾ ಸಾಮಗ್ರಿಗಳಿಲ್ಲದ ಕಾರಣ ನಿಜವಾದ ಸಂಖ್ಯೆ ಎಷ್ಟೆಂದು ದೊರಕುತ್ತಿಲ್ಲವಷ್ಟೇ! ಪಾಕಿಸ್ತಾನ ಕೊರೋನ ಬಂದವರನ್ನು, ಕೊರೋನಾದಿಂದ ಸತ್ತವರ ಹೆಣಗಳನ್ನು ತಂದು ಭಾರತದ ಗಡಿಗಳಲ್ಲಿ ಗುಡ್ಡೆ ಹಾಕುತ್ತಿದೆ. ಕೊರೋನಾ ಬರಿಸಿಕೊಂಡ ಉಗ್ರರಿಗೆ ಭಾರತದ ಒಳಗೆ ನುಸುಳಲು ಸಹಾಯ ಮಾಡುತ್ತಿದೆ.

            ಭಾರತದ ರಾಷ್ಟ್ರಪತಿಯಾಗಿದ್ದ ಝಾಕೀರ್ ಹುಸ್ಸೈನ್ ತಬ್ಲೀಘಿ ಜಮಾತ್ ಸಹವರ್ತಿಯಾಗಿದ್ದ. ಪಾಪ್ ಸಿಂಗರ್ ಜುನೈದ್ ತಬ್ಲೀಘಿಗಳೊಡನೆ ಸಂಪರ್ಕವಿರಿಸಿಕೊಂಡಿದ್ದ. ಕ್ರಿಕೆಟರುಗಳಾಗಿದ್ದ ಶಾಹಿದ್ ಅಫ್ರಿದಿ, ಹಿಂದೆ ಕ್ರೈಸ್ತನಾಗಿದ್ದು ಇಸ್ಲಾಮಿಗೆ ಮತಾಂತರ ಹೊಂದಿದ್ದ ಮಹಮ್ಮದ್ ಯೂಸುಫ್, ಸಕ್ಲೈನ್ ಮುಷ್ತಾಕ್, ಇಂಜಮಾಮುಲ್ ಹಕ್, ಸಯೀದ್ ಅನ್ವರ್ ಇವರೆಲ್ಲಾ ತಬ್ಲೀಘಿ ಜಮಾತಿನ ಸಕ್ರಿಯ ಸದಸ್ಯರು! ಜಿಯಾ ಉಲ್ ಹಕ್, ನವಾಜ್ ಷರೀಫ್ ನ ಅಪ್ಪ ಮುಹಮ್ಮದ್ ಷರೀಫ್ ತಬ್ಲೀಘಿಗಳ ಅನ್ನದಾತರೂ, ಹಣಕಾಸು ಸೌಲಭ್ಯ ಒದಗಿಸುವವರೂ ಆಗಿದ್ದರು. ಪಾಕಿಸ್ತಾನದ ರಾಷ್ಟ್ರಪತಿಯಾಗಿದ್ದ ಮುಹಮ್ಮದ್ ರಫೀಕ್ ತರಾರ್ ಮತ್ತು ಐ ಎಸ್ ಐ ಮುಖ್ಯಸ್ಥ ಜಾವೇದ್ ನಾಸಿರ್ ತಬ್ಲೀಘಿ ಜಮಾತ್ ನ ಸದಸ್ಯರಾಗಿದ್ದವರೇ. ಬೆನಜಿರ್ ಭುಟ್ಟೋ ಸರಕಾರವನ್ನು ಕಿತ್ತೊಗೆಯಲು ಸಂಚು ಹೂಡಿದ್ದೂ ಈ ತಬ್ಲೀಘಿಗಳೇ. ತನ್ನ ಮತ ಪ್ರಚಾರಕ್ಕಷ್ಟೇ ಇರುವ ಸಂಘಟನೆ ಎನ್ನುವ ಹಣೆಪಟ್ಟಿಯನ್ನು ಬಳಸಿಕೊಂಡು ಹಲವು ಭಯೋತ್ಪಾದನಾ ಕೃತ್ಯಗಳಿಗೆ ತಬ್ಲೀಘಿ ಜಮಾತ್ ಸಹಾಯ ಮಾಡಿದೆ. ಮೊರಾಕೋದ ಅಲ್ ಸಲಫಿಯಾಹ್ ಅಲ್ ಜಿಹಾದಿಯಾ ಎಂಬ ಉಗ್ರ ಸಂಘಟನೆ ತನ್ನ ಕರಪತ್ರದಲ್ಲಿ ತನ್ನ ಸದಸ್ಯರಿಗೆ ತಬ್ಲೀಘಿ ಜಮಾತ್ ನ ಸದಸ್ಯರಾಗುವಂತೆ ಕೇಳಿಕೊಂಡಿತ್ತು.

         ತಮ್ಮದೇ ಮಸೀದಿಗಳನ್ನು ನಡೆಸುವ ತಬ್ಲೀಘಿಗಳು ತಾವು ತೆರಳಿದ ಊರಿನ ಮಸೀದಿಯನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುತ್ತಾರೆ. ಅಲ್ಲಿ ತಮ್ಮ ಮತಾಂತರ ಕಾರ್ಯಕ್ರಮವಾದ “ದಾವಾ”ಗಳಲ್ಲಿ ಭಾಗವಹಿಸುವಂತೆ ಆ ಊರಿನ ಯುವಕರನ್ನು  ಪ್ರೇರೇಪಿಸುತ್ತಾರೆ. ಮನಸ್ಸು ಕೆರಳಿಸುವ ಮತೀಯ ಭಾಷಣಗಳನ್ನು ತೋರಿಸಿ ಅವರನ್ನು ಮೂಲಭೂತವಾದಕ್ಕೆ ವಾಲುವಂತೆ ಮಾಡುತ್ತಾರೆ. ಬಳಿಕ ನಿಧಾನವಾಗಿ ಇಸ್ಲಾಮಿನ ಉನ್ನತ ಶಿಕ್ಷಣದ ಆಮಿಷವೊಡ್ಡಿ ತಮ್ಮ ಕೇಂದ್ರ ಕಚೇರಿಯಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಕಳಿಸಿಕೊಡುತ್ತಾರೆ. ಅಲ್ಲಿಂದ ಕಟ್ಟರ್ ಮೂಲಭೂತವಾದಿ ಎಂದು ಗುರುತಿಸಿದವರನ್ನು ರಾಯ್ ವಿಂಡಿಗೆ ಕಳುಹಿಸಿ ಭಯೋತ್ಪಾದನಾ ತರಬೇತಿ ಕೊಡಿಸುತ್ತಾರೆ. ಕೊರೋನಾ ಪರೀಕ್ಷೆ ಮಾಡಿಸದೆ ಅಂಡಲೆಯುವ, ಆಸ್ಪತ್ರೆಗೆ ಕರೆದೊಯ್ಯುವಾಗ ಬಸ್ಸಿಂದ ಸಿಕ್ಕಸಿಕ್ಕವರ ಮೇಲೆ ಉಗುಳುವ, ಕ್ವಾರಂಟೈನ್ಗೆ ಒಳಪಡಿಸಿದಾಗ ತಾವು ಕೇಳಿದ್ದೆಲ್ಲಾ ಕೊಡಬೇಕೆಂದು ಜಬರ್ದಸ್ತು ಮಾಡುವ, ಆಸ್ಪತ್ರೆಯಲ್ಲೇ ಜತೆಜತೆಯಾಗಿ ಕೂತು ನಮಾಜ್ ಮಾಡುವ, ದಾದಿಯರ ಮುಂದೆ ನಗ್ನರಾಗಿ ತಿರುಗುವ, ಅಶ್ಲೀಲ ಹಾಡುಗಳನ್ನು ಜೋರುದನಿಯಲ್ಲಿ ಹಾಡುವ, ಸಿಗರೇಟಿಗಾಗಿ ಪೀಡಿಸುವ, ಮೂತ್ರವನ್ನು ನೀರಿನ ಬಾಟಲಿಯಲ್ಲಿ ಸಂಗ್ರಹಿಸಿಡುವ, ಎಲ್ಲರೆದುರೇ ಮಲವಿಸರ್ಜನೆ ಮಾಡುವ, ಸಾಯುವ ಮುನ್ನ ಊರಿಗೇ ರೋಗ ಹಬ್ಬಿಸಿ ಸಾಯುತ್ತೇವೆ ಎನ್ನುವ, ವೈದ್ಯರು, ಆರೋಗ್ಯ ಕಾರ್ಯಕರ್ತರು, ಪೊಲೀಸರ ಮೇಲೆಯೇ ಕಲ್ಲೆಸೆಯುವ, ತಮ್ಮ ವಿರುದ್ಧ ಬರೆದವರಿಗೆ ಜೀವ ಬೆದರಿಕೆಯೊಡ್ಡುವ, ತಮ್ಮ ವಿರುದ್ಧ ಬರೆದವನನ್ನು ಗುಂಡಿಟ್ಟು ಕೊಲ್ಲುವ ಈ ತಬ್ಲೀಘಿಗಳದ್ದೂ ವ್ಯವಸ್ಥಿತ ಸಂಚು ಎಂದು ಬುದ್ಧಿಯಿದ್ದ ಯಾರಿಗಾದರೂ ಅನ್ನಿಸುವುದಿಲ್ಲವೇ? ಅನ್ನಿಸದೇ ಇದ್ದರೆ ಆತ ತನ್ನತನವನ್ನು ಮಾರಿಕೊಂಡಿದ್ದಾನೆ, ಮುಸ್ಲಿಂ ಮತಬೇಟೆಗೆ ಹಪಹಪಿಸುತ್ತಿದ್ದಾನೆ ಎಂದೇ ಅರ್ಥ!

1 ಕಾಮೆಂಟ್‌:

 1. ಆತ್ಮೀಯರೇ,
  ಧನ್ಯವಾದಗಳು ನಿಮ್ಮ ಎಲ್ಲಾ ಲೇಖನಗಳನ್ನು ತಪ್ಪದೆ ಓದಿದೆ ಎಕ್ಸ್ಟ್ರಾಡಿನರಿ ಸೂಪರ್ ನಿಮ್ಮಲ್ಲಿ ಒಬ್ಬ ಅಕಾಡಮಿಕ್ scholer ಇದ್ದಾನೆ ಅಂತ ನಿರೂಪಿಸಿದ್ದೀರಾ ಹೀಗೆ ಇನ್ನು ಬಹಳಷ್ಟು ಲೇಖನಗಳು ನಿಮ್ಮಿಂದ ಬರಲಿ.
  ಹಿಂದೂಗಳು ಧರ್ಮಧ ರಕ್ಷಣೆ ಬಗ್ಗೆ ತಿಳಿದುಕೊಳ್ಳುವುದು ಯಾವಾಗ , ಯಾರು ತಿಳಿಸಿಕೊಡುತ್ತಾರೆ.
  ಮುಸಲ್ಮಾನರು ಭಾರತಕ್ಕೆ ಬ೦ದು ಸಾವಿರ ವರ್ಷವಾದರೂ ಅವರ ವಿಗ್ರಹಭಂಜಕ ನಡೆ ಬಗ್ಗೆ ಹಿಂದುಗಳಿಗೆ ಸ್ವಲ್ಪವಾದರೂ ಅರಿವಿಲ್ಲವಲ್ಲ ಇವತ್ತು ಭಾರತದ ಯಾವುದೇ ರಾಜ್ಯವಾಗಲಿ ಅಲ್ಲಿಯ ಊರುಗಳಲ್ಲಿ ಮುಸ್ಲಿಂ ಏರಿಯಾ ದೊಡ್ಡದಾಗುತ್ತಾ ಬಂದಿದೆ
  ಅಲ್ಲಿಂದ ಹಿಂದೂಗಳು ಓಡಿಹೋಗುತ್ತಿದ್ದಾರೆ, ಇದರಬಗ್ಗೆ ಯಾರುಮಾತಾಡುತ್ತಿಲ್ಲ
  ಯಾವ ಬ್ಲಾಗರ್ ಸಹ ಈ ಬಗ್ಗೆ ಬರೆಯುತಿಲ್ಲ ನನಗೆ ತಿಳಿದಮಟ್ಟಿಗೆ
  - ಧೀ ಶಕ್ತಿ ಒಂದೇ ಮುಸ್ಲಿಂ ಇವರ ಬಗ್ಗೆ ನೈಜ ಇತಿಹಾಸದ ಮುಖಾಂತರ ತಿಳಿಸುತಿದ್ದಾರೆ
  ಆದರೆ ವಾಸ್ತವವಾಗಿ ಲವ್ -ಜೆಹಾದಿ ,ಇಸ್ಲಾಮಿಕ್ ಬ್ಯಾಂಕಿಂಗ್ , ಇತ್ಯಾದಿ
  ಇಸ್ಲಾಮಿಕ್ ಬ್ಯಾಂಕಿಂಗ್ - ಮುಂದಿನ ಎಲೆಕ್ಷನ್ನಲ್ಲಿ ಕಾಂಗ್ರೆಸ್ ಭಾರತದಲ್ಲಿ ಬಂದರೆ, ರಿಸರ್ವ್ ಬ್ಯಾಂಕ್ permission ಕೊಡುತ್ತೆ ಅಲ್ಲಿಗೆ ಹಿಂದುಗಳ ಮೇಲ್ವರ್ಗ ಕ್ರಿಶ್ಚಿಯನ್ ಮತಾಂತರ ಬಹಳ ಸುಲಭ ಯಾಕೆಂದರೆ ಇಸ್ಲಾಮಿಕ್ ಟೆರ್ರ್ರಿಸ್ಟ್ ಎದುರಿಸಲು ಕ್ರಿಶ್ಚಿಯನ್ ಮತಾಂತರ
  ಒಂದೇ ಮಾರ್ಗ ಅನ್ಯತಾ ಬೇರೆಇಲ್ಲ . ಇಸ್ಲಾಮಿಕ್ ಬ್ಯಾಂಕಿಂಗ್ - ಮುಸ್ಲಿಂ ಶ್ರೀಮಂತರು
  ಹಣವನ್ನು ಫಿಕ್ಸೆಡ್ ಮಾಡುತ್ತಾರೆ ನೋ ಇಂಟರೆಸ್ಟ್ ಆ ಹಣವನ್ನು ರಿಯಲ್ ಎಸ್ಟೇಟ್ ನಲ್ಲಿ
  ತೊಡಗಿಸುತ್ತಾರೆ ಯಾವರೀತಿ ಅಂದರೆ ಹಿಂದುಗಳ ಮೇಲ್ವರ್ಗ ಯಾವ ಏರಿಯಾ ನೋಡಿ ಕೊಂಡು ಅಲ್ಲಿ ಮನೆ ಖರೀದಿ / ಬಾಡಿಗೆ ತೆಗಿದುಕೊಂಡು ಕೆಳವರ್ಗದ ಮುಸ್ಲಿಂ ಗೆ ಕಡಿಮೆ /ಸುಲಭ ಕಂತು ಕಟ್ಟಲು ಸಹಾಯ ಮಾಡುತ್ತಾರೆ ನಿಧಾನವಾಗಿ ಮುಸ್ಲಿಂ ಸಂಖ್ಯೆ ಜಾಸ್ತಿಮಾಡುತ್ತಾರೆ ನಂತರ ಕೀಟಲೆ,ದೊಂಬಿ ,ಜಗಳ , ಶುರುಮಾಡುತ್ತಾರೆ ಅಲ್ಲಿಗೆ
  ನಿಧಾನವಾಗಿ ಹಿಂದುಗಳು ಜಾಗ ಖಾಲಿಮಾಡುತ್ತಾರೆ ಉದಾ : ಬೆಂಗಳೂರಿನ ಪಾದರಾಯನಪುರ ,ಒಂದುಕಾಲಕ್ಕೆ ಹಿಂದುಗಳು ಹೆಚ್ಚಿದ್ದರು ಆದರೆ ಈಗ ಕೇವಲ ಮುಸ್ಲಿಂ ಏರಿಯಾ ಆಗಿದೆ ಪೋಲಿಸ್ ಸಹ ಪರ್ಮಿಷನ್ ತೆಗಿದುಕೊಂಡು ಹೂಗಬೇಕು , ಇದು
  ಹಿಂದುಗಳ ಮೇಲ್ವರ್ಗದವರಿಗೆ ತಿಳಿದು ಜಾಣಕುರುಡು . ಹೀಗಾದರೆ ನಮ್ಮ ಮುಂದಿನ ಪೀಳಿಗೆಗೆ ಇರುವುದು ಒಂದೇ ಮಾರ್ಗ ಅನ್ಯತಾ ಬೇರೆಇಲ್ಲ ಆದುವೇ ಹಿಂದುಗಳ ಮೇಲ್ವರ್ಗ ಕ್ರಿಶ್ಚಿಯನ್ ಮತಾಂತರ.
  ಈ ಬಗ್ಗೆ ನಿಮ್ಮ ಒಂದು ಲೇಖನದ ನೀರೀಕ್ಷೆ ಬಯಸುತ್ತೇನೆ

  ವಂದನೆಗಳು
  ಇ೦ತಿ ನಿಮ್ಮ ಅಭಿಮಾನಿ
  ಕಲ್ಲೇಶ ಡಿಪ್ಲೋಮ ಲೋಹಶಾಸ್ತ್ರ
  ಮೈಸೂರು 9380926439.

  ಪ್ರತ್ಯುತ್ತರಅಳಿಸಿ