ಪುಟಗಳು

ಗುರುವಾರ, ಮಾರ್ಚ್ 31, 2016

ಸಂಘದ ಸಸಿಯಿಂದು ಹೆಮ್ಮರವಾಗಿದೆ...ನೋಡು ಬಾ ಕೇಶವ

ಸಂಘದ ಸಸಿಯಿಂದು ಹೆಮ್ಮರವಾಗಿದೆ...ನೋಡು ಬಾ ಕೇಶವ

            1897ರ ಜೂನ್ ತಿಂಗಳು. ಭಾರತದ ಹಳ್ಳಿ, ಪಟ್ಟಣಗಳು ವಿಕ್ಟೋರಿಯಾ ರಾಣಿ ಪಟ್ಟವೇರಿದ 60ನೇ ವರ್ಷದ ಸಂಭ್ರಮಾಚರಣೆಗೆ ಸಿದ್ಧವಾಗಿದ್ದವು. ಎಲ್ಲೆಡೆ ಭಿತ್ತಿಪತ್ರಗಳು, ತಳಿರು ತೋರಣ, ಸಡಗರ, ಬಡವರಿಗೆ ಅನ್ನದಾನ, ಚಿಂತಕರಿಗೆ ಪದವಿಪ್ರದಾನ! ಶಾಲೆಗಳಲ್ಲಿ ಹುಡುಗರು ಹೊಸಬಟ್ಟೆ ತೊಟ್ಟು ಮಿಠಾಯಿ ಚಪ್ಪರಿಸಿ ಸಂಭ್ರಮಿಸುತ್ತಿದ್ದರು. ನಾಗಪುರದ ಆ ಹುಡುಗ ಮಾತ್ರ ಖಿನ್ನನಾಗಿದ್ದ. ಮಿಠಾಯಿಯನ್ನು ತಿಪ್ಪೆಗೆಸೆದವನೇ ಮನೆಗೆ ಬಂದು ಸುಮ್ಮನೆ ಕುಳಿತುಬಿಟ್ಟ. ಅಣ್ಣ “ಯಾಕೋ ಮಿಠಾಯಿ ಸಿಗಲಿಲ್ಲವೋ” ಎಂದು ಕೇಳಿದೊಡನೆ "ನಮ್ಮ ಭೋಸಲೆ ರಾಜರನ್ನು ಕಿತ್ತೆಸೆದ ಆಕ್ರಮಕ ಅರಸೊತ್ತಿಗೆಯ ಸಮಾರಂಭವನ್ನು ಸಂಭ್ರಮಿಸುವುದಾದರೂ ಹೇಗೆ?" ಎನ್ನುವ ವಿಷಾದಪೂರ್ಣ ಕಿಡಿನುಡಿಯೊಂದು ಹೊರಬಿತ್ತು. ಮಿಠಾಯಿಯಲ್ಲಿದ್ದ ದಾಸ್ಯದ ಕಹಿಯನ್ನು ಎಂಟು ವರ್ಷದ ಹುಡುಗನ ರಾಷ್ಟ್ರಾಭಿಮಾನ ಗ್ರಹಿಸಿತ್ತು.

                1889ರ ಏಪ್ರಿಲ್ 1, ವಿರೋಧಿ ನಾಮ ಸಂವತ್ಸರದ ಮೊದಲ ದಿನ. ಶಕರ ಮೇಲೆ ಶಾಲಿವಾಹನನ ವಿಜಯದ 1811ನೇ ವರ್ಷಾಚರಣೆಗೆ ನಾಗಪುರದ ಪ್ರತಿ ಮನೆ ಸಿದ್ಧವಾಗಿತ್ತು. ಭಾನುವಾರದ ಆ ದಿನ ಭಾಸ್ಕರನ ಕಿರಣ ಬುವಿಯ ಚುಂಬಿಸುವ ಸಮಯಕ್ಕೆ ಸರಿಯಾಗಿ ಬಾಲ ರವಿಯೊಬ್ಬ ಉದಯಿಸಿದ. ಬಲಿರಾಮ ಪಂತ ಹಾಗೂ ರೇವತಿದೇವಿಯ ಆರು ಜನ ಮಕ್ಕಳಲ್ಲಿ ಐದನೆಯವನೇ ಕೇಶವ. ಧರ್ಮರಕ್ಷಣೆಗಾಗಿ ಶಂಕರಾಚಾರ್ಯರಿಂದ ನೇಮಿಸಲ್ಪಟ್ಟ ಪೂರ್ವಜರನ್ನು ಹೊಂದಿದ್ದ ಕಶ್ಯಪ ಗೋತ್ರದ ದೇಶಸ್ಥ ಬ್ರಾಹ್ಮಣ ವಂಶವದು. ಅಪ್ಪ ಪುರೋಹಿತರು. ಮಹಾಕೋಪಿಷ್ಠ! ತಾಯಿ ಶಾಂತಸ್ವಭಾವದ ಸದ್ಗೃಹಿಣಿ. ಕಿತ್ತು ತಿನ್ನುವ ಬಡತನ. ಮನೆಯವರೆಲ್ಲರೂ ಗಾಢ ನಿದ್ದೆಯಲ್ಲಿದ್ದಾಗ ಕೇಶವ ಹಾಗೂ ಆತನ ಇಬ್ಬರು ಸಹೋದರರು ಎದ್ದು ರಾತ್ರೋ ರಾತ್ರಿ ಬಾವಿಯ ಹೂಳು ತೆಗೆದು ನಿರ್ಮಲಗೊಳಿಸಿದಂತಹ ಅನೇಕ ಬಾಲಸಾಹಸಗಳಿಗೆ ಎಣೆಯಿರಲಿಲ್ಲ. ಹದಿಮೂರು ತುಂಬುವಾಗ ಹೆತ್ತವರು ಇಲಿಜ್ವರಕ್ಕೆ ಬಲಿಯಾದರು. ಮನೆಯಲ್ಲಿನ ವಿಪರೀತ ಕೆಲಸ, ಬರಿಯ ಹೊಟ್ಟೆ, ಸ್ವಾಭಿಮಾನದ ನಡುವೆಯೂ ಕೇಶವನ ವಿದ್ಯೆ ಓಡತೊಡಗಿತು. ಶಿವಾಜಿ ಆದರ್ಶನಾದ. ತಿಲಕರ ಭಾಷಣದಲ್ಲಿ ಮೈಮರೆತ. ಗೆಳೆಯರ ಚರ್ಚಾಮಂಡಳಿಯೊಂದನ್ನೇ ಹುಟ್ಟು ಹಾಕಿದ. 1857ರ ಸ್ವಾತಂತ್ರ್ಯ ಸಂಗ್ರಾಮದ ಸುವರ್ಣ ಮಹೋತ್ಸವ ಆಗಷ್ಟೇ ಮುಗಿದಿತ್ತು. ಫಡಕೆಯೆಂಬ ಕಿಡಿ ಆರದಂತೆ ಸಾವರ್ಕರ್ ಎಂಬ ಅಗ್ನಿದಿವ್ಯ ಮೊರೆದಿತ್ತು. "ವಂದೇ ಮಾತರಂ" ಕಿವಿಗೆ ಬಿದ್ದೊಡನೆ ಬ್ರಿಟಿಷರ ಎದೆ ಒಡೆವ ಕಾಲವದು.  ನಾಗಪುರದ ನೀಲ್ ಸಿಟಿ ವಿದ್ಯಾಲಯ. ಶಿಕ್ಷಣ ಇಲಾಖೆಯ ಪರೀಕ್ಷಾಧಿಕಾರಿ ಬರುವ ಸುದ್ದಿ ಕೇಳಿ ಅಧ್ಯಾಪಕರ ಸಹಿತ ವಿದ್ಯಾರ್ಥಿಗಡಣ ಗಂಭೀರವಾಗಿ ಕುಳಿತಿತ್ತು. ಸೂಜಿ ಬಿದ್ದರೂ ಕೇಳುವಷ್ಟು ಮೌನ! ಅಧಿಕಾರಿ ಮುಖ್ಯೋಪಾಧ್ಯಾಯರ ಜೊತೆ ಮೆಟ್ರಿಕ್ ವಿದ್ಯಾರ್ಥಿಗಳ ತರಗತಿಯೊಳಕ್ಕೆ ಕಾಲಿಟ್ಟದ್ದೇ ತಡ "ವಂದೇ ಮಾತರಂ" ಎಂಬ ಒಕ್ಕೊರಲ ಧ್ವನಿ ಸಿಂಹ ಘರ್ಜನೆಯಂತೆ ಕಿವಿಗಪ್ಪಳಿಸಿತು. ಕನಲಿದ ತನಿಖಾಧಿಕಾರಿ ಮುಂದಿನ ತರಗತಿಗೆ ಕಾಲಿಟ್ಟ. ಅಲ್ಲೂ ಅದೇ ರಣಮಂತ್ರದ ಉದ್ಘೋಷ! ಕೆರಳಿ ಕೆಂಡವಾದ ಅಧಿಕಾರಿ "ಇದು ರಾಜದ್ರೋಹ! ವಂದೇ ಮಾತರಂ ಹೇಳಿದವರನ್ನು ಶಾಲೆಯಿಂದ ಹೊರಗಟ್ಟಿ" ಎಂದು ಕಟ್ಟಪ್ಪಣೆ ಮಾಡಿ ಹೊರನಡೆದ. ವಂದೇ ಮಾತರಂ ಎಂದು ಘರ್ಜಿಸಿದ ಆ ಎರಡೂ ತರಗತಿಯ ವಿದ್ಯಾರ್ಥಿಗಳನ್ನು ಶಾಲೆಯಿಂದ ಹೊರಹಾಕಲಾಯಿತು. ಆದರೇನು ಶಾಲೆಯ ವಿದ್ಯಾರ್ಥಿ ಸಮೂಹಕ್ಕೆ ದೇಶಭಕ್ತಿಯ ಕಿಚ್ಚು ಹಚ್ಚಿದ ಕೇಶವನ ಸಂಘ ತತ್ವದ "ಬಲ" ಅಲ್ಲಿ ಮೊಳಕೆಯೊಡೆದಿತ್ತು!

                ನೀಲ್ ಸಿಟಿಯಿಂದ ಯವತಮಾಳದ ರಾಷ್ಟ್ರೀಯ ವಿದ್ಯಾಶಾಲೆ, ಅದು ಬ್ರಿಟಿಷರ ಕೆಂಗಣ್ಣಿಗೆ ಗುರಿಯಾಗಿ ಬಿದ್ದು ಹೋದಾಗ ಪುಣೆ, ಅಮರಾವತಿ ಹೀಗೆ ಬಡತನದ ಬೇಗೆಯ ನಡುವೆಯೂ ವಿದ್ಯೆಯನ್ನು ಅರಸಿಕೊಂಡು ಹೋದ ಕೇಶವ ಕಲ್ಕತ್ತ ರಾಷ್ಟ್ರೀಯ ವಿದ್ಯಾಪೀಠದ ‘ಪ್ರವೇಶಿಕಾ’ ಪರೀಕ್ಷೆಯಲ್ಲಿ ಉತ್ತೀರ್ಣನಾಗಿ ಕ್ರಾಂತಿಯ ಗರ್ಭಗುಡಿ ಸೇರಿದ. ನದಿ ದಾಮೋದರ ಉಕ್ಕಿ ಹರಿದಿತ್ತು. ಲಕ್ಷಾಂತರ ಜನ ಮನೆಮಠ ಕಳೆದುಕೊಂಡು ಅಸಹಾಯಕರಾಗಿದ್ದರು. ಇಪ್ಪತ್ನಾಲ್ಕರ ತರುಣ ಕೇಶವ ತನ್ನ ಗೆಳೆಯರನ್ನು ಕಟ್ಟಿಕೊಂಡು ಹಸಿದವರ ತೃಷೆ ತೀರಿಸ ಹೊರಟ. ಹಗಲಿರುಳು ಭಾಷೆ, ಜಾತಿ, ಪ್ರಾಂತಗಳ ಗೋಡೆ ದಾಟಿ ನೊಂದವರ ಕಣ್ಣೀರು ಒರೆಸಿ ಹಸಿದವರಿಗೆ ಆಹಾರ ಒದಗಿಸಿದ. ಜೀವನದಲ್ಲಿ ಭರವಸೆ ಕಳೆದುಕೊಂಡವರಿಗೆ ಧೈರ್ಯ ತುಂಬಿದ. “ಸಂಘ ಸೇವೆ”ಯ ಬುಗ್ಗೆ ಚಿಮ್ಮತೊಡಗಿತ್ತು!

              ಕಲ್ಕತ್ತಾದಲ್ಲಿ ಕ್ರಾಂತಿಕಾರಿ ಸಂಘಟನೆ ಅನುಶೀಲನಾ ಸಮಿತಿಯಲ್ಲಿದ್ದುಕೊಂಡು ಬ್ರಿಟಿಷರ ವಿರುದ್ಧ ಸಾಹಿತ್ಯ ಸೃಷ್ಟಿಸಿ ಜನರಿಗೆ ತಲುಪಿಸತೊಡಗಿದ ಕೇಶವ. ಅನುಶೀಲನ ಸಮಿತಿಯಲ್ಲಿ ಕಾರ್ಯಕರ್ತರಿಗೆ ನೀಡುತ್ತಿದ್ದ ತರಬೇತಿಯೇ ವಿಶಿಷ್ಟವಾಗಿತ್ತು. ಕಾರ್ಯಕರ್ತರನ್ನು ಎರಡು ಗುಂಪುಗಳನ್ನಾಗಿಸಿ ಖಡ್ಗ, ಭರ್ಜಿಗಳನ್ನು ಕೊಟ್ಟು ಧರ್ಮ ಯುದ್ಧ ನಡೆಸಲಾಗುತ್ತಿತ್ತು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಿತ್ಯ ಶಾಖೆಗೆ ಇದೇ ಬೀಜರೂಪ ಒದಗಿಸಿತು! ವೈದ್ಯಕೀಯ ಪದವಿ ಪಡೆದ ಡಾಕ್ಟರ್ ಜೀ ತನ್ನ ಕೆಲಸ ರೋಗ ಬಂದ ವ್ಯಕ್ತಿಯೊಬ್ಬನಿಗೆ ಚಿಕಿತ್ಸೆ ಮಾಡುವುದಲ್ಲ, ಬದಲಾಗಿ ಹಿಂದೂ ಸಮಾಜಕ್ಕೆ ಬಂದಿರುವ ರೋಗಕ್ಕೆ ಮದ್ದು ಹುಡುಕುವುದು ಎನ್ನುವುದನ್ನು ಮನಗಂಡರು. ನಾಗಪುರಕ್ಕೆ ಬಂದು ಕ್ರಾಂತಿಸಂಘಟನೆಯಲ್ಲಿ ತೊಡಗಿದರು. ದೇಶಕ್ಕೆ ಬಂದೆರಗಿದ ಘೋರ ದಾಸ್ಯದ ಕುರಿತು ಜನರಮನಮುಟ್ಟುವ ಭಾಷಣ, ಜನರಿಂದ ಹಣ ಸಂಗ್ರಹ ಮಾಡಿ ಅದರಿಂದ ಶಸ್ತ್ರಾಸ್ತ್ರಗಳನ್ನು ಕೊಂಡು ಕ್ರಾಂತಿಕಾರಿಗಳಿಗೆ ಸರಬರಾಜು ಮಾಡತೊಡಗಿದರು. ನಾಗಪುರದ ಕಾಮಾಠಿಯಲ್ಲಿದ್ದ ಸೇನಾನೆಲೆಯಲ್ಲಿನ ಯೋಧರೊಂದಿಗೆ ಗೆಳೆತನ ಬೆಳೆಸಿ ಗುಟ್ಟಾಗಿ ಶಸ್ತ್ರಸಂಗ್ರಹಕ್ಕೆ ತೊಡಗಿದರು. ರಾಷ್ಟ್ರೀಯ ಉತ್ಸವ ಮಂಡಲವನ್ನು ರಚಿಸಿ ಶಿವಾಜಿ ಜಯಂತಿ, ಗಣೇಶೋತ್ಸವ, ಶಸ್ತ್ರ ಪೂಜೆಗಳನ್ನು ನಡೆಸಿ ತರುಣರನ್ನು ಹುರಿದುಂಬಿಸತೊಡಗಿದರು. ಅಸಹಕಾರ ಚಳುವಳಿಯಲ್ಲಿ ಭಾಗಿಯಾಗಿ ಭಾಷಣದ ಮೂಲಕ ಜನರನ್ನು ಪ್ರೇರೇಪಿಸಿದ ಕಾರಣ ರಾಜದ್ರೋಹದ ಆಪಾದನೆಯಡಿ ಬಂಧಿಸಿ ಒಂದು ವರ್ಷ ಕಠಿಣ ಕಾರಾಗೃಹ ಶಿಕ್ಷೆಯೂ ದೊರಕಿತು.


                ಅಸಹಕಾರದ ವೈಫಲ್ಯಕ್ಕೆ ಅಶಿಸ್ತು, ಪ್ರಲೋಭನೆ, ದೂರದೃಷ್ಠಿಯಿಲ್ಲದಿರುವುದೇ ಕಾರಣವೆಂದು ಡಾಕ್ಟರ್ ಜೀ ಅರಿತರು. ಹಾಗೆಯೇ ಖಿಲಾಫತ್ತಿನ ಹುಚ್ಚಿನಿಂದ ಹಿಂದೂಗಳಿಗಾದ ಅನ್ಯಾಯಕ್ಕೆ ಅವರ ಹೃದಯ ಮರುಗಿತು. ಇದಕ್ಕಾಗಿ ಹಿಂದೂಗಳನ್ನು ಸಂಘಟಿಸಿ ಶಿಸ್ತುಬದ್ಧ ಹಾಗೂ ಪರಾಕ್ರಮಶೀಲರನ್ನಾಗಿಸುವ ಅನಿವಾರ್ಯತೆಯನ್ನು ಮನಗಂಡು ಹೆಚ್ಚು ಹೆಚ್ಚು ಹಿಂದೂ ತರುಣರೊಡನೆ ಸಂಪರ್ಕ ಬೆಳೆಸಿರು. 1925ರ ವಿಜಯದಶಮಿಯಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಸ್ಥಾಪಿಸಿದರು. ಹನಿಹನಿ ಕೂಡಿ ಹಳ್ಳವಾಗುವಂತೆ ಬಡವ-ಬಲ್ಲಿದ, ಬ್ರಾಹ್ಮಣ-ಅಬ್ರಾಹ್ಮಣ ಎನ್ನುವ ಭೇಧವಿಲ್ಲದೆ ಸಂಘ ಬೆಳೆಯಿತು. ಅವರ ದಿನವೆಲ್ಲಾ ಸಂಘ ಕಾರ್ಯದಲ್ಲೇ ಕಳೆಯುತ್ತಿತ್ತು. ಆದರೆ ಬಡತನ ಮಾತ್ರ ಅವರ ಅನವರತದ ಸಂಗಾತಿಯಾಗಿತ್ತು. ಗೆಳೆಯರು ಪ್ರತಿ ತಿಂಗಳು ಅವರಿಗೆ ಹಣ  ಕೊಡಿಸುವ ಯೋಜನೆ ಹಾಕಿದಾಗ “ನನ್ನ ಸ್ವಂತಕ್ಕಾಗಿ ಸಮಾಜದ ಹಣ ಖರ್ಚು ಮಾಡುವುದು ಬೇಡ" ಎಂದುಬಿಟ್ಟರು. ಸಂಘದ ಕಾರ್ಯ ನಾಗಪುರಕ್ಕೆ ಸೀಮಿತವಾಗದೆ ಉಳಿದ ರಾಜ್ಯಗಳಲ್ಲಿಯೂ ಹಬ್ಬ ತೊಡಗಿತು. ಡಾಕ್ಟರ್ ಜೀ ಆಸೇತು ಹಿಮಾಚಲ ಸಂಚರಿಸಿ ಸಂಘದ ಸಸಿ ನೆಡುತ್ತಾ ಬಂದರು. 1930ರಲ್ಲಿ ಸತ್ಯಾಗ್ರಹ ಆಂದೋಲನದಲ್ಲಿ ಭಾಗವಹಿಸಿದ್ದಕ್ಕಾಗಿ ಸಿಕ್ಕಿದ 9 ತಿಂಗಳ ಸೆರೆವಾಸ ವಿವಿಧ ಕಡೆಗಳ ತರುಣರನ್ನು ಸಂಘಕಾರ್ಯಕ್ಕೆ ಪ್ರೇರೇಪಿಸಲು ನೆರವಾಯಿತು. ಸಂಘದ ಸರಳತೆ, ಸಮಭಾವ, ತ್ಯಾಗ, ಸೇವಾ ಮನೋಭಾವಕ್ಕೆ ಸುಭಾಷ್, ಮಾಳವೀಯ, ಗಾಂಧಿಯಂತ ನಾಯಕರೇ ಮನಸೋತರು.


                  ಹಿಂದುತ್ವ ಮತ್ತು ರಾಷ್ಟ್ರೀಯತೆ ಬೇರೆಯಲ್ಲ. ಹಿಂದೂಗಳ ಸಂಘಟನೆಗಾಗಿ ಸಂಘವನ್ನು ಡಾಕ್ಟರ್ ಜೀ ಪ್ರಾರಂಭಿಸಿದ್ದರೂ ಅವರು ಅದಕ್ಕಿಟ್ಟ ಹೆಸರು ರಾಷ್ಟ್ರೀಯ ಸ್ವಯಂಸೇವಕ ಸಂಘ! ಹಿಂದೂಗಳನ್ನು ಸಂಘಟಿಸಿದರೆ ದೇಶ ಸದೃಢವಾಗುತ್ತದೆನ್ನುವುದು ಅವರ ವಿಶ್ವಾಸವಾಗಿತ್ತು. ಸಮಾನ ರಾಷ್ಟ್ರೀಯ ಧ್ಯೇಯದಿಂದ ಒಡಗೂಡಿದ ಜನರ ಸಂಘಟನೆಯೇ ಸಂಘ ಎಂದಿದ್ದರವರು. ಸ್ವಯಂಸೇವಕ ಎಂದರೆ ಸ್ವ ಇಚ್ಛೆಯಿಂದ ಶಿಸ್ತುಬದ್ಧನಾಗಿದ್ದು, ಸ್ವಾರ್ಥ ತೊರೆದು ಸರ್ವ ಸಮರ್ಪಣಾಭಾವದಿಂದ ಕಷ್ಟ-ದುಃಖಗಳನ್ನು ಲೆಕ್ಕಿಸದೆ ಸ್ವಪ್ರೇರಣೆಯಿಂದ ದೇಶಕ್ಕಾಗಿ ಕೆಲಸ ಮಾಡುವ ದೇಶಭಕ್ತ ಎನ್ನುವ ವ್ಯಾಖ್ಯೆಯನ್ನೇ ಕೊಟ್ಟರು. ಇಂದಿಗೂ ಈ ಬಗೆಯ ನಿಷ್ಠೆ ಕಂಡುಬರುವುದು ಇಬ್ಬರಲ್ಲಿ ಮಾತ್ರ, ಒಬ್ಬ ಭಾರತೀಯ ಸೈನಿಕ, ಇನ್ನೊಬ್ಬ ಕರಸೇವಕ! ಪ್ರತಿನಿತ್ಯ ಒಂದೆಡೆ ಎಲ್ಲರೂ ಪರಸ್ಪರ ಕಲೆತು ಕಲಿತು ಆಟವಾಡಿ ತಾಯಿ ಭಾರತಿಯನ್ನು ಪೂಜಿಸುವ ಮೂಲಕ ಜಾತಿ, ಮತ, ಪಂಥ ಭೇದಗಳನ್ನು ಮರೆತು ಹಿಂದೂ ಸಮಾಜವನ್ನು ಸಂಘಟಿಸಿ ಅಸೀಮ ಪಡೆಯೊಂದನ್ನು ಕಟ್ಟಬಹುದೆಂದು ಅವರು ತೋರಿಸಿಕೊಟ್ಟರು. ಪುರೋಹಿತ ವಂಶದಿಂದ ಬಂದವರಾದರೂ ಆ ಕಾಲಕ್ಕೆ ತೀರಾ ಆಧುನಿಕ ನಿಲುವಿನ ಪ್ರತೀಕವಾಗಿದ್ದ ಖಾಕಿ ಚಡ್ಡಿ ಮತ್ತು  ಅಂಗಿಯನ್ನು ಸಂಘಟನೆಯ ಸಮವಸ್ತ್ರವನ್ನಾಗಿ ಮಾಡಿದ್ದು ಕ್ರಾಂತಿಕಾರಕವೇ ಆಗಿತ್ತು. ಕೆಳಜಾತಿಯವರ ನೆರಳೂ ಸೋಕಬಾರದೆಂಬ ನಿಯಮಗಳಿದ್ದ ಕಾಲಕ್ಕೆ ಬ್ರಾಹ್ಮಣನೊಬ್ಬ ಜಾತಿಭೇದ ಮರೆತು ಎಲ್ಲರನ್ನೂ ಒಂದುಗೂಡಿಸಿದ್ದು ಸಾಮಾನ್ಯ ಸಾಧನೆಯೇನು?

               ಆಜನ್ಮ ಬ್ರಹ್ಮಚಾರಿಯಾಗಿ ಮನೆ-ಮಠಗಳನ್ನು ಮರೆತು ಸಂತನಂತೆ ಸರಳತೆಯೇ ಮೈವೆತ್ತಂತೆ ಬದುಕಿದ ಆ ಜೀವ ಹಿಂದೂ ಸಮಾಜದ ಸಂಘಟನೆಗಾಗಿ ರಾಷ್ಟ್ರವೇ ತನ್ನ ಮನೆಯೆನ್ನುವಂತೆ ಬದುಕಿತು. ಹೊಟ್ಟೆಗೆ ಬಟ್ಟೆ ಕಟ್ಟಿಕೊಂಡು, ಬರಿಗಾಲಲ್ಲಿ ಸಂಚರಿಸಿ ಹಿಂದೂ ಸಮಾಜದಲ್ಲಿ ಚಾರಿತ್ರ್ಯವಂತ ಪಡೆಯೊಂದನ್ನು ಕಟ್ಟಿತು. ಬದುಕಿದ ಐವತ್ತೊಂದು ವರ್ಷ ಮಾತ್ರವಲ್ಲದೆ ಇಂದಿಗೂ ಅನೇಕರನ್ನು ಆ ಆತ್ಮ ಪ್ರಭಾವಿಸುತ್ತಲೇ ಇದೆ. ವಿಷ್ಣು ಸರ್ವ ವ್ಯಾಪಿ. ಈ ಕೇಶವನೂ ಸರ್ವವ್ಯಾಪಿಯಾಗಿ ಇಂದು ಜಗದ ತುಂಬಾ ಹಬ್ಬಿ ನಿಂತಿದ್ದಾನೆ. 91 ವರ್ಷಗಳ ಹಿಂದೆ ಆತ ಹಚ್ಚಿದ ಸಣ್ಣ ಹಣತೆ ಇಂದು ಲಕ್ಷಾಂತರ ದೀಪಗಳಾಗಿ, ಭಾರತದ ಮೂಲೆ ಮೂಲೆಯನ್ನು ಬೆಳಗುತ್ತಾ ದೇಶದ ಗಡಿ ದಾಟಿ ಪ್ರಕಾಶ ಬೀರುತ್ತಿದೆ. ಇಂದು ಸಂಘವೆಂಬ ಬೃಹತ್ ಮರದ ಬಗೆಬಗೆಯ ಕೊಂಬೆಗಳು ಹಲವು ರೀತಿಯಲ್ಲಿ ಸಮಾಜದ ಹಲವು ವಿಭಾಗಗಳಲ್ಲಿ ಬೆಳೆದು ಕಾರ್ಯಾಚರಿಸುತ್ತಿವೆ. ಯುಗಾದಿಯ ಶುಭದಿನದಂದು ಜನಿಸಿ ನವ ಭಾರತದ ಸುವರ್ಣ ಯುಗಕ್ಕೆ ಕಾರಣನಾದ ಯುಗ ಪ್ರವರ್ತಕನ ಜನ್ಮ ದಿನದಂದು ಏನೆನ್ನಲಿ? ಒಂದೇ..."ಸಂಘದ ಸಸಿಯಿಂದು ಹೆಮ್ಮರವಾಗಿದೆ...ನೀನೇ ನೋಡು ಬಾ ಕೇಶವ" ಎಂದು!

ಸತ್ಯಂ ಶಿವಂ ಸುಂದರಂ

ಸತ್ಯಂ ಶಿವಂ ಸುಂದರಂ

          "ಶಂ ಕರೋತಿ ಇತಿ ಶಂಕರಃ"
ಶಂ ಎಂದರೆ ಶುಭ ಅಥವಾ ಕಲ್ಯಾಣ. ಯಾರು ಕಲ್ಯಾಣಕಾರಕನೋ ಅವನೇ ಶಂಕರ. ಶಿವ ಎನ್ನುವ ಶಬ್ಧ "ವಶ್" ಶಬ್ಧದಿಂದ ವರ್ಣ ವ್ಯತ್ಯಾಸವಾಗಿ ರೂಪುಗೊಂಡಿದೆ. ಅಂದರೆ ಸ್ವಯಂ ಪ್ರಕಾಶ ಎಂದರ್ಥ. ಪರಿಪೂರ್ಣ ಪಾವಿತ್ರ್ಯ, ಪರಿಪೂರ್ಣ ಜ್ಞಾನ, ಪರಿಪೂರ್ಣ ಸಾಧನೆಗಳು ಯಾರಲ್ಲಿರುತ್ತವೆಯೋ ಅವನೇ "ಮಹಾದೇವ"! ಅವನು ಕಾಲಪುರುಷನೂ ಹೌದು(ಮಹಾಕಾಲೇಶ್ವರ). ಗಂಗಾಧರನ ಇನ್ನೊಂದು ಹೆಸರು ಸ್ತೇನಪತಿ. ಸ್ತೇನ ಎಂದರೆ ಕಳ್ಳ. ಹಿಂದೆ ಕಳ್ಳರು ಊರ ಹೊರಗಿನ ಶಿವಾಲಯಗಳಲ್ಲಿ ಅಡಗಿಕೊಳ್ಳುತ್ತಿದ್ದರು. ತಪ್ಪುಕಾಣಿಕೆಯಾಗಿ ನೀಡುತ್ತಿದ್ದರು. ಭಾಲಚಂದ್ರನಿಗೆ ಪಿಂಗಲಾಕ್ಷ ಎನ್ನುವ ಹೆಸರೂ ಇದೆ. ಪಿಂಗಲಾ ಎಂದರೆ ಗೂಬೆಯ ಒಂದು ಜಾತಿ. ಈ ಪಕ್ಷಿಗೆ ಭೂತ, ವರ್ತಮಾನ, ಭವಿಷ್ಯದ ಬಗ್ಗೆ ತಿಳಿಯುತ್ತದೆ. ಚಿಂತೆಯಿಲ್ಲದಿರುವ ಅವನು ಅಘೋರ. ಸಹಜ ಭಾವದಲ್ಲಿ ಅಹಂ ರಹಿತ ಅವಸ್ಥೆಯಲ್ಲಿರುವ ಜೀವಕ್ಕೆ ಭೋಲಾ ಎಂದು ಹೆಸರು. ಯೋಗ ಶಾಸ್ತ್ರಕ್ಕನುಸಾರ ಮೂರನೇ ಕಣ್ಣೆಂದರೆ ಸುಷುಮ್ನಾ ನಾಡಿ. ಶಿವನು ಜಿತೇಂದ್ರಿಯ. ಸಮುದ್ರಮಥನದಿಂದ ಉದ್ಭವವಾದ ಹಾಲಾಹಾಲವನ್ನು ಕುಡಿದ ಈ ಮಹಾವೈರಾಗಿ. ವಿಷ ಉದರ ಸೇರದಿರಲೆಂದು ಶಿವನ ಕುತ್ತಿಗೆಯನ್ನು ಒತ್ತಿ ಹಿಡಿದಳು ಪಾರ್ವತಿ. ಶಿವ ನೀಲಕಂಠನೆನಿಸಿಕೊಂಡ. ನೆನೆದಾಕ್ಷಣ ಸುಪ್ರೀತನಾಗಿ ಅನುಗ್ರಹಿಸುವ ಕಾರಣ ಶಿವನು ಅಶುತೋಷ! ದಕ್ಷಿಣಾ ಎಂಬ ಶಬ್ಧ ಬುದ್ಧಿವಾಚಕ, ದಕ್ಷಿಣಾಮೂರ್ತಿಯು ಅದ್ವೈತದ ಸಾರ. ವೀಣಾಧರ, ಯೋಗ, ಜ್ಞಾನ ಹಾಗೂ ವ್ಯಾಖ್ಯಾನ ಇವು ದಕ್ಷಿಣಾ ಮೂರ್ತಿಯ ನಾಲ್ಕು ರೂಪಗಳು.

         ಹರಿಹರರಲ್ಲಿ ಭೇದವಿಲ್ಲ ಎನ್ನುವುದಕ್ಕೆ ಒಂದು ನಿದರ್ಶನ ಮಧುರೈಯ ಮೀನಾಕ್ಷಿ ಸುಂದರೇಶ ದೇವಾಲಯ. ಅಲ್ಲಿ ವಿಷ್ಣು ತನ್ನ ಸಹೋದರಿ ಶಕ್ತಿಯನ್ನು ಶಿವನಿಗೆ ಧಾರೆಯೆರೆದು ಕೊಡುವ ದೃಶ್ಯ ಸುಮನೋಹರ. ಶಕ್ತಿಯೆಲ್ಲವೂ ಬ್ರಹ್ಮದಲ್ಲಿದೆ. ಆ ಶಕ್ತಿಯಿಂದ ಜಗತ್ತಿನ ಎಲ್ಲಾ ಕಾರ್ಯಚಟುವಟಿಕೆಗಳು ನಡೆಯುತ್ತವೆ. ಬ್ರಹ್ಮವೇ ಪರಮೇಶ್ವರ. ಶಕ್ತಿಯೇ ಅಂಬಾಳ್. ಈ ಶಕ್ತಿಯಿಂದಲೇ ವಿಷ್ಣು ವಿಶ್ವವನ್ನು ಕಾಪಾಡುತ್ತಾನೆ. ಬ್ರಹ್ಮ, ಅದರ ಶಕ್ತಿ, ಅದು ಮಾಡುವ ಕಾರ್ಯ ಒಂದಕ್ಕೊಂದು ಬೇರೆಯಲ್ಲ. ಎಲ್ಲವೂ ಬ್ರಹ್ಮವೇ! ಅನವರತವೂ ಪರಮಾತ್ಮ ಸ್ವರೂಪದಲ್ಲಿರುವವರು ಈ ಮೂವರೇ ಎನ್ನುವುದು ಅಪ್ಪಯ್ಯ ದೀಕ್ಷಿತರ ಉಕ್ತಿ. ಎರಡು ಸಭೆಗಳು. ಒಂದರಲ್ಲಿ ಎಲ್ಲವನ್ನೂ ಅಡಗಿಸುವವನು ತಾಂಡವಕ್ಕೆ ತೊಡಗಿದ್ದಾನೆ(ಚಿದಂಬರಂ). ಅವನಿಂದಲೇ ವಿಶ್ವ ವ್ಯಾಪಾರ ನಡೆಯುತ್ತಿದೆ. ಇನ್ನೊಂದರಲ್ಲಿ ಎಲ್ಲರನ್ನೂ ಕುಣಿಸಬೇಕಾದವ ನಿದ್ರಿಸುತ್ತಿದ್ದಾನೆ(ಶ್ರೀರಂಗಂ). ಯೋಗನಿದ್ರೆ! ಎರಡೂ ಸಭೆಗಳಲ್ಲಿರುವವನು ಒಬ್ಬನೇ! ಅದೇ ಬ್ರಹ್ಮ. ಅವನು ದಕ್ಷಿಣಾಮೂರ್ತಿ. ಅವನು ಜ್ಞಾನದ ಅಧಿದೇವತೆ. ಅವನು ರಮಣನಾಗಿ ಮೌನದಿಂದಲೇ ಜಗವ ಬೆಳಗಿದ. ಅವನು ಅರುಣಾಚಲ.

"ಆಪಾತಾಳ ನಭಸ್ಥಲಾಂತ ಭುವನ ಬ್ರಹ್ಮಾಂಡ ಮಾವಿಸ್ಫುರತ್ ಜ್ಯೋತಿಃ
ಸ್ಫಾಟಿಕ ಲಿಂಗ ಮೌಳಿ ವಿಲಸತ್ಪೂರ್ಣೇಂದು ವಾನ್ತಾಮೃತೈಃ|
ಅಸ್ತೋಕಾಪ್ಲುತಮೇಕ ಮೀಶಮನಿಶಂ ರುದ್ರಾನುವಾಕಾನ್ ಜಪನ್
ಧ್ಯಾಯೇ ದೀಪ್ಸಿತ ಸಿದ್ಧಯೇ ಧ್ರುವಪದ ವಿಪ್ರೋಭಿಷಿಂಚೇಚ್ಛೀವಂ||"

ವಿಶ್ವದ ಪಾತಾಳದಿಂದ ಆಕಾಶದವರೆಗೂ ಬೆಳಗುತ್ತಿರುವ ಸ್ಫಟಿಕಲಿಂಗಕ್ಕೆ ಅಭಿಷೇಕ ಮಾಡಬೇಕು. ಸ್ಫಟಿಕ ಲಿಂಗಕ್ಕೆ ತನ್ನದೇ ಆದ ಬಣ್ಣವಿಲ್ಲ. ಅದರ ಮೇಲಿಟ್ಟ ಯಾವುದೇ ವಸ್ತುವಿನ ಬಣ್ಣವನ್ನಾದರೂ ಅದು ಪ್ರತಿಫಲಿಸುತ್ತದೆ. ಹಸಿರು ಬಿಲ್ವಪತ್ರೆಯನ್ನು ಅದರ ಮೇಲಿಟ್ಟರೆ ಲಿಂಗವು ಹಸಿರಾಗಿ ಕಾಣುತ್ತದೆ. ಕೆಂಪು ಹೂವನ್ನಿಟ್ಟರೆ ಲಿಂಗವು ಕೆಂಪಾಗಿ ಕಾಣುತ್ತದೆ. ಜ್ಞಾನವು ಪರಿಶುದ್ಧವಾಗಿರುವಂತೆ ಸ್ಫಟಿಕ ಲಿಂಗವೂ ಪರಿಶುದ್ಧವಾಗಿರುತ್ತದೆ. ತನ್ನಷ್ಟಕ್ಕೆ ತಾನೇ ಅದು ಬದಲಾಗುವುದಿಲ್ಲ. ಬ್ರಹ್ಮವು ಅವ್ಯಯವಾದರೂ ಅದು ನಮ್ಮ ಮನೋಧರ್ಮಕ್ಕೆ ಅನುಗುಣವಾಗಿ ತೋರಿಬರುತ್ತದೆನ್ನುವ ಸತ್ಯಕ್ಕೆ ದೃಷ್ಟಾಂತ ಸ್ಫಟಿಕ ಲಿಂಗ! ಅದು ಏನನ್ನೂ ಮುಚ್ಚಿಡುವುದಿಲ್ಲ. ಅದು ಸಂಪೂರ್ಣವಾಗಿ ಪರಿಶುದ್ಧ ಮತ್ತು ದೋಷರಹಿತ. ಪರಬ್ರಹ್ಮದ ನಿರ್ಗುಣಕ್ಕೆ ಅದು ದೃಷ್ಟಾಂತ.

ಶಿವನು ಮೂರ್ತರೂಪದಲ್ಲಿ ಚಂದ್ರಮೌಳಿಯೂ ಹೌದು ಗಂಗಾಧರನೂ ಕೂಡಾ. ಆತ ತನ್ನ ಶಿರಸ್ಸಿನಲ್ಲಿರುವ ಕಮಲದ ಚಂದ್ರಮಂಡಲದಲ್ಲಿನ ಪ್ರಭೆಯ ಮೇಲೆ ಧ್ಯಾನಿಸುತ್ತಾನೆ. ಆ ಚಂದ್ರಬಿಂಬದಿಂದ ಗಂಗೆ ಹರಿದುಬರುತ್ತದೆ. ಆಗ ಆತ ಪರಮಾನಂದವನ್ನು ಹೊಂದುತ್ತಾನೆ. ವಿಶ್ವರೂಪಿಯಾದ ಜ್ಯೋತಿರ್ಲಿಂಗವೇ ತಣ್ಣಗಾದರೆ ವಿಶ್ವವೇ ತಂಪಾಗುತ್ತದೆ. ರುದ್ರಾಭಿಷೇಕ ಮಾಡಲು ಇದೇ ಕಾರಣ. ಒಳ್ಳೆಯದು ಕೆಟ್ಟದ್ದು ಎಲ್ಲವೂ ಶಿವಸ್ವರೂಪವೇ. ಇಡೀ ವಿಶ್ವವೇ ಶಿವಲಿಂಗವಾಗಿದೆ. ಲಿಂಗವು ಅಂಡಾಕಾರವಾಗಿದೆ. ಅದಕ್ಕೆ ಆದಿ-ಅಂತ್ಯಗಳಿಲ್ಲ. ವಿಶ್ವವು "ಆವಿಸ್ಫುರತ್", ಲಿಂಗವೂ! ಶಿವನು ಜ್ಯೋತಿರ್ಲಿಂಗವಾಗಿ ಅನಂತ ಬ್ರಹ್ಮಾಂಡವನ್ನು ವ್ಯಾಪಿಸುವ ರಾತ್ರಿಯೇ ಶಿವರಾತ್ರಿ. ಶಂಭುವು ಜ್ಯೋತಿಸ್ವರೂಪನಾಗಿ ನಿಂತಾಗ ವಿಷ್ಣು ವರಾಹ ರೂಪ ತಾಳಿ ಶಿವನ ಪದತಲದ ದರ್ಶನಕ್ಕೆ ಹೊರಟ. ಬ್ರಹ್ಮ ಹಂಸವಾಗಿ ಹಾರುತ್ತಾ ಶಿವನ ಶಿರ ಅರಸುತ್ತಾ ಹೊರಟ. ಎರಡೂ ಕಾಣಲಿಲ್ಲ. ಆದರೆ ತಿರುಗಿಬಂದ ಹಂಸ ತಾನು ಕಂಡೆನೆಂದು ಸುಳ್ಳು ಹೇಳಿತು. ಹಾಗಾಗಿಯೇ ಬ್ರಹ್ಮನಿಗೆ ಪ್ರತ್ಯೇಕ ಪೂಜೆಯಿಲ್ಲ. ಪರಿವಾರದ ಒಂದು ಭಾಗವಾಗಿ ಮಾತ್ರ ಅವನು ಪೂಜಿಸಲ್ಪಡುತ್ತಾನೆ. ಆದಿ ಅಂತ್ಯವಿಲ್ಲದ ಪರಮೇಶ್ವರನ ಈ ಸ್ವರೂಪವೇ ಶಿವದೇಗುಲಗಳಲ್ಲಿರುವ ಲಿಂಗೋದ್ಭವ ಮೂರ್ತಿ. ಅದರ ಕೆಳಗೆ ವರಾಹ ಮೂರ್ತಿಯೂ ಮೇಲೆ ಹಂಸಮೂರ್ತಿಯೂ ಇರುತ್ತದೆ.

              ಮೂರ್ತಿಶಾಸ್ತ್ರದ ಪ್ರಕಾರ ಮಾನವನಿರ್ಮಿತ ಶಿವಲಿಂಗದ ರುದ್ರಭಾಗದ ಮೇಲೆ ಬ್ರಹ್ಮಸೂತ್ರಗಳೆಂಬ ರೇಖೆಗಳಿರಬೇಕು. ದೈವಿಕ ಮತ್ತು ಆರ್ಷಕ ಲಿಂಗಗಳಲ್ಲಿ ಇಂತಹ ರೇಖೆಗಳಿರುವುದಿಲ್ಲ. ಮೇದಿನಿಕೋಶದಲ್ಲಿ ಲಿಂಗವೆಂದರೆ
"ಲಿಂಗಂ ಚಿಹ್ನೇನುಮಾನೆ ಚ ಸಾಂಖ್ಯೋಕ್ತಪ್ರಕೃತಾಮಪಿ|
ಶಿವಮೂರ್ತಿ ವಿಶೇಷೇ ಚ ಮೆಹನೇಪಿ ನಪುಂಸಕಮ್||" ಎನ್ನಲಾಗಿದೆ

          ಸೌರಾಷ್ಟ್ರದ ಸೋಮನಾಥ, ಶ್ರೀಶೈಲ ಮಲ್ಲಿಕಾರ್ಜುನ, ಉಜ್ಜೈನಿಯ ಮಹಾಕಾಲ, ಮಾಂಧಾತದ ಓಂಕಾರೇಶ್ವರ, ಕೇದಾರನಾಥ, ಭೀಮಾಶಂಕರ, ಕಾಶಿ ವಿಶ್ವನಾಥ, ನಾಸಿಕದ ತ್ರೈಂಬಕೇಶ್ವರ, ವೈದ್ಯನಾಥ, ದಾರುಕಾವನದ ನಾಗೇಶ್ವರ, ರಾಮೇಶ್ವರ, ವೇರುಳದ ಘೃಷ್ಮೇಶ್ವರ ಹೀಗೆ ಹನ್ನೆರಡು ಜ್ಯೋತಿರ್ಲಿಂಗಗಳು. ತೈತ್ತಿರೀಯ ಉಪನಿಷತ್ತಿನಲ್ಲಿ ಬ್ರಹ್ಮ, ಮಾಯೆ, ಜೀವ, ಮನಸ್ಸು, ಬುದ್ಧಿ, ಚಿತ್ತ, ಅಹಂಕಾರ ಹಾಗೂ ಪಂಚ ಮಹಾಭೂತಗಳು ಈ ಹನ್ನೆರಡು ತತ್ವಗಳನ್ನು ಹನ್ನೆರಡು ಜ್ಯೋತಿರ್ಲಿಂಗಗಳೆಂದು ಕರೆಯಲಾಗಿದೆ. ಹಾಗೆಯೇ ಇವು ಶಿವಲಿಂಗದ ಹನ್ನೆರಡು ಖಂಡಗಳನ್ನು, ದ್ವಾದಶಾದಿತ್ಯರನ್ನು, ಸುಪ್ತಾವಸ್ಥೆಯಲ್ಲಿರುವ ಜ್ವಾಲಾಮುಖಿಯ ಉದ್ರೇಕಸ್ಥಾನಗಳನ್ನು, ಬ್ರಹ್ಮ ಅಥವಾ ಆತ್ಮಲಿಂಗವನ್ನು ಸಂಕೇತಿಸುತ್ತವೆ. ಜ್ಯೋತಿರ್ಲಿಂಗಗಳು ದಕ್ಷಿಣಾಭಿಮುಖವಾಗಿರುತ್ತವೆ. ಅಂದರೆ ಪಾಣಿಪೀಠದ ಹರಿನಾಳ ದಕ್ಷಿಣದಿಕ್ಕಿಗಿರುತ್ತದೆ. ಪಾಣಿಪೀಠವನ್ನು ಸುವರ್ಣಶಂಖಿನೀ ಎಂದೂ ಕರೆಯಲಾಗುತ್ತಿತ್ತು. ವೀರ್ಯಾಣು ಮತ್ತು ಸುವರ್ಣ ಕಾಂತಿಮಯ ಅಧಃಶಾಯಿ ಹಾಗೂ ಜನ್ಮಕ್ಕೆ ಬರುವ ನವಜಾತ ಶಿಶುಗಳು ಪಾಣಿಪೀಠದಂತೆಯೇ ಕಾಣಿಸುತ್ತವೆ. ಪಾಣಿ ಪೀಠ ಭಗದ ಪ್ರತೀಕ. ಲಿಂಗದ ಪ್ರತೀಕ ಶಿವಲಿಂಗ. ಶಿವಲಿಂಗದಲ್ಲಿ ಸೃಜನ ಮತ್ತು ಪಾವಿತ್ರ್ಯ ಒಟ್ಟಿಗಿದ್ದರೂ ಜಗದ ಉತ್ಪತ್ತಿ ಶಿವನ ಸಂಕಲ್ಪದಿಂದಾಯಿತು. ಶಿವ ಪಾರ್ವತಿಯರು ಜಗದ ಮಾತಾಪಿತರಾಗಿರುವುದು ಹೀಗೆ. ಪಿಂಡ ರೂಪದಲ್ಲಿರುವ ಶಿವಲಿಂಗ ಇಂಧನ ಶಕ್ತಿಯ ಪ್ರತೀಕ. ಅಣುಸ್ಥಾವರಗಳ ಆಕಾರವೂ ಶಿವಲಿಂಗದಂತಿರುತ್ತದೆ. ನರ್ಮದಾ ನದಿಯಲ್ಲಿ ವಿಶಿಷ್ಟಾಕಾರದ ಬೆಣಚು ಕಲ್ಲುಗಳಿವೆ. ಇವು ಬಾಣಲಿಂಗಗಳು. ಬಾಣಾಸುರ ಪೂಜೆಗಾಗಿ ಇವುಗಳನ್ನು ನಿರ್ಮಿಸಿ ನರ್ಮದಾ ತೀರದ ಬೆಟ್ಟದಲ್ಲಿ ವಿಸರ್ಜನೆ ಮಾಡಿದ್ದ. ಬಾಣಲಿಂಗ ಅಚ್ಛಿದ್ರ ಕಲ್ಲು. ಬೇಗನೆ ಸವೆಯುವುದಿಲ್ಲ, ಭಾರವಾಗಿರುತ್ತವೆ. ಗಂಗೆ ಯಮುನೆಗಳಲ್ಲೂ ಸಿಗುತ್ತವೆ. ಪಾದರಸವನ್ನು ಘನೀಭವಿಸಿ ಶಿವಲಿಂಗವನ್ನು ತಯಾರಿಸಲಾಗುತ್ತದೆ. ಘನೀಕೃತಗೊಳಿಸುವ ಮೊದಲು 16 ರೀತಿಯ ಪ್ರಕ್ರಿಯೆಗಳಿಂದ ಅದನ್ನು ದೋಷರಹಿತವನ್ನಾಗಿಸಲಾಗುತ್ತದೆ. ಪಾದರಸವನ್ನು ಘನೀಭವಿಸುವ 24 ವಿಧಾನಗಳಿವೆ. ಪಾದರಸದ ಶಿವಲಿಂಗದಲ್ಲಿ 12 ಜ್ಯೋತಿರ್ಲಿಂಗಗಳ ಶಕ್ತಿಯಿರುತ್ತದೆ. ಪಾದರಸದಿಂದ ತಯಾರಿಸಿದ ಸೋಮನಾಥನ ಲಿಂಗವು ನೆಲದಿಂದ 5ಮೀ ಎತ್ತರದಲ್ಲಿ ಯಾವುದೇ ಆಧಾರವಿಲ್ಲದೆ ತೇಲಾಡುತ್ತಿತ್ತು. ಶರ್ವ, ಭವ, ರುದ್ರ, ಉಗ್ರ, ಭೀಮ, ಪಶುಪತಿ, ಮಹಾದೇವ, ಈಶಾನ ಇವು ಕ್ರಮವಾಗಿ ಪೃಥ್ವಿ, ಜಲ, ತೇಜ, ವಾಯು, ಆಕಾಶ, ಚಂದ್ರ, ಸೂರ್ಯ, ಜೀವಾತ್ಮ ತತ್ವಗಳ ಪ್ರತೀಕಗಳು. ಶಿವಕಾಂಚಿ-ಪೃಥ್ವಿ, ಜಂಬುನಾಥ-ಜಲ, ಅರುಣಾಚಲಮ್-ತೇಜ, ಕಾಳಹಸ್ತಿ-ವಾಯು, ಚಿದಂಬರಮ್-ಆಕಾಶ ಇವು ಪಂಚಮಹಾಭೂತ ಶಿವಲಿಂಗಗಳು.

ದೈತ್ಯರ ಸಂಹಾರ ಮಾಡುವಾಗ ಕಾಳಿ ಬಿರುಗಾಳಿಯಾದಳು. ಅವಳನ್ನು ಶಾಂತಗೈಯ್ಯಲು ಶಿವನು ಶವದಂತೆ ಬಿದ್ದುಕೊಂಡನು. ಶಿವನ ಶವದ ಸ್ಪರ್ಶವಾದೊಡನೆ ಕಾಳಿ ಶಾಂತವಾದಳು. ಶಿವನು ಆದಿಯೋಗಿಯೂ ಹೌದು, ಮಹಾಯೋಗಿಯೂ! ಶಿವನ ಡಮರುವಿನ ನಾದದಿಂದ ಐವತ್ತೆರಡು ಬೀಜಮಂತ್ರಗಳು ನಿರ್ಮಾಣವಾಗಿ ವಿಶ್ವದ ಉತ್ಪತ್ತಿಗೆ ಕಾರಣವಾದವು. ಡಮರುವಿನ ನಾದದಿಂದ 52 ಅಕ್ಷರಗಳ ಮೂಲಧ್ವನಿ ಹಾಗೂ ಹದಿನಾಲ್ಕು ಮಾಹೇಶ್ವರ ಸೂತ್ರಗಳ ರೂಪದಲ್ಲಿ ವರ್ಣಮಾಲೆಯ ನಿರ್ಮಾಣವಾಯಿತು.  ವಿಶ್ವದ ಪ್ರತಿಯೊಂದು ಕಾರ್ಯಕ್ಕೂ ಕಾರಣ ಶಿವನ ತಾಂಡವವೇ! ಅವನು ನಟರಾಜ. ಶಿವತ್ವವೆಂದರೆ ಆತ್ಮತತ್ವ. ಅದೇ ಪರಮಶಿವ. ಅವನು ಎಲ್ಲವನ್ನೂ ವ್ಯಾಪಿಸಿಕೊಂಡಿದ್ದಾನೆ. ವಿಶ್ವವು ಆತನ ಸ್ಫುರಣ. ಜಗತ್ತಿನ ಪ್ರತಿಯೊಂದೂ ಪರಮಶಿವನ ಪ್ರತಿಬಿಂಬ. ಬಿಂಬವಿಲ್ಲದೆ ಪ್ರತಿಬಿಂಬ ಇರುವುದೆಂದರೆ ಹೀಗೆ! ಅದು ಮಾಯೆ. ಅದು ಶಿವನು ಸ್ವೇಚ್ಛೆಯಿಂದ ಧರಿಸಿದ ರೂಪ. ಅಂತೆಯೇ ಅವನು ಜ್ಞಾನಕಾರಕ! ವೈಚಿತ್ರ್ಯವೆಂದರೆ ಇದೇ. ಸೃಷ್ಟಿ-ಲಯ, ಶಾಂತ-ರೌದ್ರ, ಶೀತಲ-ಭಸ್ಮಿಸುವ ತೇಜ, ಸಾತ್ವಿಕತೆ-ತಾಮಸಿಕತೆ ಹಾಗೂ ಮಾಯೆ-ಜ್ಞಾನ ಎಲ್ಲಾ ಪರಸ್ಪರ ವೈರುಧ್ಯಗಳು ಶಿವನಲ್ಲಿವೆ. ಜಗವೇ ಶಿವ ಅಥವಾ ಶಿವನೇ ಬ್ರಹ್ಮ!

"ರುತಂ ರಾತಿ ಇತಿ ರುದ್ರಃ"
ದುಃಖವನ್ನು ನಾಶ ಮಾಡುವವನೇ ರುದ್ರ. ರುತ ಎಂದರೆ ತತ್ಪ್ರತಿಪಾದ್ಯ ಆತ್ಮವಿದ್ಯೆ. ಅದನ್ನು ಉಪಾಸಕರಿಗೆ ಕರುಣಿಸುವವನೇ ರುದ್ರ. ಶೈವಾಗಮದಲ್ಲಿ ಭೈರವನ ಅರವತ್ನಾಲ್ಕು ವಿಧಗಳನ್ನು ಹೆಸರಿಸಲಾಗಿದೆ. ಒಂದು ವರ್ಗಕ್ಕೆ ಎಂಟು ಭೈರವರಂತೆ ಎಂಟು ವರ್ಗಗಳು.
"ಪ್ರಯೋಗ ಮುದ್ಧತಂ ಸ್ಮೃತ್ವಾ ಸ್ವಪ್ರಯುಕ್ತಂ ತತೋ ಹರಃ|
ತಂಡುನಾಂ ಸ್ವಗಣಾಗ್ರಣ್ಯಾ ಭರತಾಯ ನ್ಯದೀದಿಶತ್||
ಲಾಸ್ಯಮಸ್ಯಾಗ್ರತಃ ಪ್ರೀತ್ಯಾ ಪಾರ್ವತ್ಯಾ ಸಮದೀದಿಶತ್|
ಬುದ್ ದ್ವಾಥ ತಾಂಡವಂ ತಂಡೋರ್ಮರ್ತೇಭ್ಯೋ ಮನಯೋವದನ್||" (ಸಂಗೀತ ರತ್ನಾಕರ)
ಶಿವನು ತಾನು ಮಾಡಿದ ನೃತ್ಯವನ್ನು ತನ್ನ ಗಣ ಪ್ರಮುಖ ತಂಡುವಿನ ಮುಖಾಂತರ ಹಾಗೂ ಲಾಸ್ಯ ಎಂಬ ನೃತ್ಯವನ್ನು ಪಾರ್ವತಿಯ ಮುಖಾಂತರ ಭರತಮುನಿಗೆ ಮಾಡಿ ತೋರಿಸಿದ. ತಾಂಡವದಲ್ಲಿ ಆನಂದ, ಸಂಧ್ಯಾ, ಕಾಳಿಕಾ, ತ್ರಿಪುರ, ಗೌರೀ, ಸಂಹಾರ, ಉಮಾ ತಾಂಡವಗಳೆಂಬ ಏಳು ಪ್ರಕಾರಗಳಿವೆ. ತಾಂಡವದ ಪ್ರತಿಯೊಂದು ಮುದ್ರೆಗೂ ವ್ಯಾಪಕ ಅರ್ಥವಿರುತ್ತದೆ. ಸಾಮಾನ್ಯವಾಗಿ ಕಾಣಸಿಗುವ ಶಿವನ ಆನಂದ ತಾಂಡವದ ಒಂದು ಮುದ್ರೆಯನ್ನು ನೋಡೋಣ. ಅಲ್ಲಿ ಕಿವಿಗಳಲ್ಲಿನ ವಿಭಿನ್ನ ಕುಂಡಲಗಳು ಅರ್ಧನಾರೀಶ್ವರನನ್ನು, ಹಿಂದಿನ ಬಲಗೈಯಲ್ಲಿನ ಡಮರುಗ ನಾದ ಹಾಗೂ ಶಬ್ಧ ಬ್ರಹ್ಮದ ಉತ್ಪತ್ತಿಯನ್ನು, ಹಿಂದಿನ ಎಡಗೈಯಲ್ಲಿನ ಅಗ್ನಿ ಚರಾಚರದ ಶುದ್ಧಿಯನ್ನು, ಮುಂದಿನ ಬಲಗೈ ಅಭಯವನ್ನು, ಮುಂದಿನ ಎಡಗೈ ಜೀವಗಳ ಮುಕ್ತಿಗಾಗಿ ಮೇಲೆ ಎತ್ತಿರುವ ಕಾಲಿನ ಕಡೆಗೆ ಸಂಕೇತವನ್ನು, ಬಲಗಾಲ ಕೆಳಗೆ ಬಿದ್ದಿರುವ ಅಪಸ್ಮಾರ ಅಥವಾ ಮಯಲಕ ಹೆಸರಿನ ದೈತ್ಯ ಅವಿದ್ಯೆ ಮತ್ತು ಅಜ್ಞಾನದ ನಾಶವನ್ನು, ಸುತ್ತಲಿನ ಚಕ್ರ ಮಾಯಾಚಕ್ರವನ್ನು, ಚಕ್ರಕ್ಕೆ ತಗಲಿಸಿರುವ ಕೈಕಾಲು ಮಾಯೆಯನ್ನು ಪವಿತ್ರಗೊಳಿಸುವುದನ್ನು, ಚಕ್ರದಿಂದ ಹೊರಡುವ ಜ್ವಾಲೆಗಳಿಂದ ಹೊರಹೊಮ್ಮುವ ಐದು ಸ್ಪುಲ್ಲಿಂಗಗಳು ಸೂಕ್ಷ್ಮ ಪಂಚತತ್ವಗಳನ್ನು ಪ್ರತಿಪಾಡಿಸುತ್ತವೆ. ಆನಂದ ತಾಂಡವದ ಒಂದು ಭಂಗಿಯೇ ಇಷ್ಟಾದರೆ ಸಂಪೂರ್ಣ ತಾಂಡವದ ಅದರಲ್ಲೂ ಅದರ ಎಲ್ಲಾ ಏಳು ಪ್ರಕಾರಗಳ ಗೂಢತೆ ಎಷ್ಟಿರಬಹುದು?

             ತಾಂಡವದ ಝೇಂಕಾರವೇ ಎಲ್ಲಾ ವಿಶ್ವ ಕ್ರಿಯೆಗಳಿಗೆ ಕಾರಣ. ಬ್ರಹ್ಮನ ರಾತ್ರಿಕಾಲದಲ್ಲಿ ನಿಶ್ಚಲವಾಗಿದ್ದ ಪ್ರಕೃತಿ ಶಿವನು ಆನಂದದ ಉನ್ಮಾದದಿಂದ ಎದ್ದಾಗ ಅವನ ತಾಂಡವದಿಂದ ಉಂಟಾಗುವ ಸ್ಪಂದನ ತರಂಗಗಳಿಂದ ಎಚ್ಚೆತ್ತು ಅವನ ಸುತ್ತಲೂ ವೈಭವಯುತವಾಗಿ ನರ್ತಿಸಲಾರಂಭಿಸುತ್ತದೆ. ನರ್ತಿಸುತ್ತಲೇ ಪ್ರಕೃತಿಯ ಅಸಂಖ್ಯ ಪ್ರಕಟರೂಪಗಳನ್ನು ಧಾರಣೆ ಮಾಡುವ ಶಿವ ಕಾಲದ ಆದ್ಯಂತ ನರ್ತಿಸುತ್ತಲೇ ನಾಮರೂಪಗಳನ್ನೆಲ್ಲಾ ಸಂಹರಿಸಿ ಹೊಸತೊಂದು ವಿಶ್ರಾಂತಿಯ ಅವಸ್ಥೆಗೆ ಕಳುಹುತ್ತಾನೆ. ಈ ನರ್ತನ ಕಾವ್ಯವೂ ಹೌದು, ವಿಜ್ಞಾನವೂ ಹೌದು. ಅದು ಪುರುಷ-ಪ್ರಕೃತಿಗಳ ಸತ್ತ್ವ ಚಲನೆಯ, ಕ್ರಿಯೆಯ ವಿಕಾಸದ ಒಂದು ಅಭಿವ್ಯಕ್ತಿ. ಯುಗಯುಗಗಳಿಂದ ದಾಟಿ ಬಂದಿರುವ ಒಂದು ನೈಜವಾದ ಸೃಜನ ಶಕ್ತಿ. ಆಧ್ಯಾತ್ಮಿಕ ಕಾವ್ಯವನ್ನು ರೂಪಿಸುವ ನಾದ ಮತ್ತು ಲಯಗಳ ಮೂರ್ತ ರೂಪ. ಸತ್ತೆಯ ಏಕತೆಯನ್ನರುಹುವ ಶಿವನ ತಾಂಡವದ ವೈಶ್ವಿಕ ಲಯವು ಪ್ರಾಣಗರ್ಭಿತ ವಸ್ತುದ್ರವ್ಯವನ್ನು ಸೆಳೆದು ಅನಂತ ಸೌಂದರ್ಯೋಪೇತ ವೈವಿಧ್ಯವನ್ನು ಪ್ರಕಟೀಕರಿಸುತ್ತದೆ. ಶಿವನ ಈ ನೃತ್ಯ ರೂಪಕವು  ಆಧ್ಯಾತ್ಮಿಕ, ಕಲಾತ್ಮಕ, ತಾತ್ವಿಕ, ವೈಜ್ಞಾನಿಕ ವಲಯಗಳೆಲ್ಲವನ್ನೂ ಸಂಯುಕ್ತಗೊಳಿಸುವ ಶಕ್ತಿಯಿದ್ದ ಕಾರಣದಿಂದಲೇ ಇವೆಲ್ಲವನ್ನೂ ಪ್ರಭಾವಿಸಿತು. ಧಾರ್ಮಿಕರಿಗೆ ಆರಾಧನೆಯ ವಿಧಾನವಾಗಿ ಗೋಚರಿಸಿದರೆ, ಕಲಾವಿದರಿಗೆ ಕಲೆಯ ಮೂಲವಾಗಿ ಗೋಚರಿಸಿತು. ತತ್ವಶಾಸ್ತ್ರಜ್ಞರಿಗೆ ಸೃಷ್ಟಿಯ ಉಗಮದ ರಹಸ್ಯವನ್ನು ಉಣಿಸಿತು. ಭೌತ ಶಾಸ್ತ್ರಜ್ಞ ಫ್ರಿಟ್ಜೊಪ್ ಕಾಪ್ರಾನಂತಹವರಿಗೆ ದ್ರವ್ಯರಾಶಿಯ ಸೂಕ್ಷ್ಮಾಣುಕಣಗಳ ನರ್ತನವಾಗಿ ಹೊಸದೃಷ್ಟಿ ನೀಡಿದರೆ ಕಾರ್ಲಸಗನ್ ಶಿವನ ರೂಪದಲ್ಲಿ ಆಧುನಿಕ ಖ-ಭೌತೀಯ ಕಲ್ಪನೆಗಳ ಪೂರ್ವಸೂಚನೆಯನ್ನು ಕಂಡ.
ಸೋಮವಾರ, ಮಾರ್ಚ್ 21, 2016

ಪ್ರತ್ಯೇಕತೆಯ ವಿಷ ಬೀಜ… ವಿವಿಗಳಲ್ಲೇ ಅದಕ್ಕೆ ಜಾಗ

ಪ್ರತ್ಯೇಕತೆಯ ವಿಷ ಬೀಜ… ವಿವಿಗಳಲ್ಲೇ ಅದಕ್ಕೆ ಜಾಗ 


                    ಇಲ್ಲಿನ ಅನ್ನ ತಿಂದು ಈ ದೇಶದ ವಿರುದ್ಧವೇ ಮಸಲತ್ತು ಮಾಡುವ ಪರಿಪಾಠ ಇಂದು ನಿನ್ನೆಯದಲ್ಲ. ಎಂದು ಯಾರು ಇಲ್ಲಿಗೆ ಆಕ್ರಮಕರಾಗಿ ಬಂದು ಕೊನೆಗೆ ಇಲ್ಲೇ ನೆಲೆ ಊರಿದರೋ ಅಂದಿನಿಂದಲೇ ಈ ಪ್ರತ್ಯೇಕತಾ ಮನೋಭಾವ ಚಾಲ್ತಿಯಲ್ಲಿದೆ. ಎಲ್ಲವೂ ತಮ್ಮದ್ದು, ತಮಗಾಗಿ ಇರುವಂತಹದ್ದು, ತಾವು ಮಾತ್ರ ಶ್ರೇಷ್ಠ, ಉಳಿದವರೆಲ್ಲರೂ ಕಾಫಿರರು ಎನ್ನುವ ಅವರ ಮನೋಭಾವವೇ ಉಳಿದವರ ಮೇಲೆ ಆಕ್ರಮಣ ಮಾಡಿ ಅವರದ್ದನ್ನು ವಶಪಡಿಸಿಕೊಳ್ಳಲು, ಸಾಧ್ಯವಾಗದಿದ್ದಾಗ ಕುತಂತ್ರದಿಂದ ಇಂಚಿಂಚಾಗಿ ತಮ್ಮದಾಗಿಸಿಕೊಳ್ಳಲು ಕಾರಣ. ಇಂತಹ ಕುತಂತ್ರಕ್ಕೆ ಇಲ್ಲಿರುವ ಕೆಲ ಮಂದಮತಿಗಳು, ವೈಚಾರಿಕ ವ್ಯಭಿಚಾರಿಗಳು, ಮೂರ್ಖರೂ ಬಲಿಯಾಗಿ ದೇಶದ ಭದ್ರತೆಗೆ ಮಾರಕವಾಗಿರುವುದು ದೊಡ್ಡ ದುರಂತ. ಇಂದು ಪ್ರಪಂಚದ ಶಾಂತಿ ಕದಡುತ್ತಿರುವುದು ಜಿಹಾದ್ ಎನ್ನುವ ಮೂರಕ್ಷರದ ಅಫೀಮು. ತಮ್ಮವರದಲ್ಲದವರೆಲ್ಲರೂ ಕಾಫಿರರು, ಅವರನ್ನು ಹೇಗಾದರೂ ಮತಾಂತರಿಸಿ ಇಲ್ಲವೇ ತರಿದು ಹಾಕಿ ಎನ್ನುವ ಈ ನಶೆ ಸಾಮ್ರಾಜ್ಯ ಕಟ್ಟಲೂ ನೆರವಾಯಿತು. ಅದು ಖಡ್ಗವನ್ನು ಮಾತ್ರ ನೆಚ್ಚಿಕೊಂಡಿರಲಿಲ್ಲ. ಖಡ್ಗದ ಬಲದಿಂದ ಕೆಲಸವಾಗದಿದ್ದಾಗ ಉಳಿದ ದಾರಿಗಳ ಬಗ್ಗೆಯೂ ಅದರ ಗಮನ ಹರಿಯಿತು. ತಮ್ಮ ಸಂಖ್ಯೆ ಹೆಚ್ಚಿಸಿಕೊಂಡು ಜಗತ್ತನ್ನು "ದಾರ್ ಉಲ್ ಇಸ್ಲಾಂ" ಆಗಿಸುವ ಇವರ ಹುಚ್ಚಿನ ಫಲವಾಗಿ ಜಿಹಾದ್ ಬಹುರೂಪಗಳಲ್ಲಿ ನಡೆಯಿತು. ಲವ್-ರೇಪ್-ಸೆಕ್ಸ್ ಜಿಹಾದ್, ರಾಜಕೀಯ-ಭೂಮಿ-ವ್ಯಾಪಾರಿಕ ಜಿಹಾದ್ ಇವ್ಯಾವುವೂ ನಡೆಯದಿದ್ದಾಗ ವೈಚಾರಿಕ ಜಿಹಾದ್! ಇವಕ್ಕೆ ದೇಶವೆಂದರೆ ಅರ್ಥ ಗೊತ್ತಿಲ್ಲದ, ಅಭಿಮಾನವಿಲ್ಲದ, ಭಾರತವನ್ನು ದೇಶವೆಂದೇ ಪರಿಗಣಿಸದ ಎಡವಟ್ಟು ಚಿಂತಕರ ಬೆಂಬಲ ಬೇರೆ!


                   ಸರ್ ಸೈಯ್ಯದ್ ಮೊಹಮದ್ ಖಾನನಿಂದ ಆಧುನಿಕ ಹಾಗೂ ವೈಜ್ಞಾನಿಕ ಶಿಕ್ಷಣವನ್ನು ನೀಡುವ ಸಲುವಾಗಿ ಹುಟ್ಟಿಕೊಂಡ ಸಂಸ್ಥೆ "ಮೊಹಮ್ಮದನ್ ಆಂಗ್ಲೋ ಯೂನಿವರ್ಸಿಟಿ"! ಇದಕ್ಕಾಗಿ ದತ್ತಿ-ದೇಣಿಗೆಗಳನ್ನು ನೀಡಿದ್ದು ಹಿಂದೂ ರಾಜರುಗಳೇ! ಅದಕ್ಕಾಗಿ ಅವರನ್ನು ಪ್ರೇರೇಪಿಸಿದ್ದು ಈ ಮಣ್ಣಿನ ಸಹಜ ಸಹಿಷ್ಣುತೆಯ ಭೋಳೇ ಸ್ವಭಾವ. 1874ರಲ್ಲಿ ಅಲಿಗಢದಲ್ಲಿ ಒಂದು ಶಾಲೆಯಾಗಿ ಆರಂಭಗೊಂಡ ಇದು ನಾಲ್ಕೇ ವರ್ಷಗಳಲ್ಲಿ ಕಾಲೇಜಿನ ಸ್ಥಾನಮಾನ ಪಡೆಯಿತು. "ಹಿಂದೂ ಮುಸ್ಲಿಮರಿಬ್ಬರೂ ನನ್ನೆರಡು ಕಣ್ಣುಗಳಿದ್ದಂತೆ" ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿದ್ದ  ಸೈಯ್ಯದ್ ಮಹಮ್ಮದ್ ಖಾನನ ಕುಟಿಲತೆ ಕೆಲವೇ ಸಮಯದಲ್ಲಿ ಬಯಲಾಯಿತು. ಎಷ್ಟಾದರೂ ತನ್ನ ಮತದ ಮೇಲಿರುವ ನಿಷ್ಠೆಯನ್ನಾತ ಬಿಟ್ಟುಕೊಟ್ಟಾನೆಯೇ? ತಮ್ಮನ್ನು ತಾವು ಇತಿಹಾಸಕಾರರು ಎಂದು ಕರೆದುಕೊಂಡವರಿಂದ ಉದಾರವಾದಿ ಎಂದು ಹೊಗಳಲ್ಪಟ್ಟ ಈ ಖಾನನಿಗೆ 1885ರಲ್ಲಿ ಸ್ಥಾಪಿಸಲ್ಪಟ್ಟ "ಸೆಕ್ಯುಲರ್ ಕಾಂಗ್ರೆಸ್" ಹಿಂದೂ ಸಂಘಟನೆಯಾಗಿ ಕಂಡಿತು. ಆತ ಮುಸ್ಲಿಮರ ಸಂಘಟನೆಗೆ ತೊಡಗಿದ. 1898ರಲ್ಲಿ ಸಾಯುವ ಮೊದಲು ಮುಸ್ಲಿಂ ಲೀಗಿನ ಸ್ಥಾಪನೆಗೆ ಬುನಾದಿ ಹಾಕಿದ್ದನಾತ. ಇದರ ಫಲವೇ 1906ರಲ್ಲಿ ಮುಸ್ಲಿಂ ಲೀಗಿನ ಸ್ಥಾಪನೆ. ಅದಕ್ಕೆ ಬೀಜಾರೋಪವಾದದ್ದು ಈ ಮೊಹಮ್ಮದ್ ಆಂಗ್ಲೋ ಓರಿಯಂಟಲ್ ಕಾಲೇಜಿನಲ್ಲೇ! ಪ್ರತ್ಯೇಕತಾವಾದದ ಮನೋಭಾವದಿಂದಾಗಿಯೇ ಹುಟ್ಟಿದ್ದ ಅದು ಪ್ರತ್ಯೇಕತೆಯನ್ನು ಒಡಲಲ್ಲಿಟ್ಟುಕೊಂಡೇ ಬೆಳೆಯಿತು. ಬ್ರಿಟಿಷರ ಕುಟಿಲ ಕಾರ್ಯಕ್ರಮ "ವಂಗ ಭಂಗ"ವನ್ನು ಬೆಂಬಲಿಸಿತು ಮುಸ್ಲಿಂ ಲೀಗ್. ಸ್ವದೇಶಿ ವಸ್ತುಗಳ ಬಳಕೆ-ವಿದೇಶೀ ವಸ್ತುಗಳ ಬಹಿಷ್ಕಾರ ಚಳುವಳಿಯನ್ನು ವಿರೋಧಿಸಿತು. 1920ರಲ್ಲಿ ಇದೇ ವಿವಿ ಅಲಿಗಢ ಮುಸ್ಲಿಂ ವಿವಿಯಾಗಿ ಬದಲಾಯಿತು. ಬ್ರಿಟಿಷರು ಈ ವಿವಿಗೆ ಕಂದಾಯಮುಕ್ತ ಭೂಮಿಯನ್ನು ನೀಡಿದ್ದರು. ಪ್ರತ್ಯೇಕ ಇಸ್ಲಾಂ ರಾಷ್ಟ್ರ ರಚನೆಗೆ ಬಲತಂದುಕೊಟ್ಟಿದ್ದು ಇದೇ ಅಲಿಗಢ ವಿವಿ. ಆಧುನಿಕ ಶಿಕ್ಷಣದ ಮುಖವಾಡ ಹೊತ್ತಿದ್ದ ವಿಶ್ವವಿದ್ಯಾಲಯ ಮೂಲಭೂತವಾದಿಗಳ ಅರಮನೆಯಾಯಿತು. ಇದರಿಂದ ಬೇಸತ್ತ ಕೆಲ ಸೌಮ್ಯ ಹಾಗೂ ಸುಧಾರಣಾವಾದಿ ಮುಸ್ಲಿಮರು ಇದರಿಂದ ಹೊರಬಂದು ಜಾಮಿಯಾ ಮಿಲಿಯಾ ಎಂಬ ವಿವಿಯೊಂದನ್ನು ಹುಟ್ಟುಹಾಕಿದರೆಂದರೆ ಅಲಿಘಢ ವಿವಿಯ ಭಾರತ ವಿರೋಧಿ ಚಟುವಟಿಕೆ ಯಾವ ಪರಿಯದ್ದಿರಬಹುದು? ಪ್ರತ್ಯೇಕತಾವಾದದ ಕನಸುಬಿತ್ತಿದ್ದ ಅಲಿಗಢ ಭಾರತದ ವಿಭಜನೆಗೂ ಕಾರಣವಾಯಿತು. ಸ್ವಾತಂತ್ರ್ಯೋತ್ತರದಲ್ಲಿ ಜಾಮಿಯಾ ಮಿಲಿಯಾವೂ ದೇಶದ್ರೋಹಿಗಳ ಗೂಡಾಗಿರುವುದು ಮುಸ್ಲಿಮರೆಂದಿಗೂ ಬದಲಾಗುವುದಿಲ್ಲ ಎಂದು ಮತ್ತೆ ಮತ್ತೆ ಗೋಚರವಾಗುವ, ಹಾಗೂ ಇದನ್ನು ಕಂಡೂ ನಿದ್ರಿಸುತ್ತಿರುವ ಹಿಂದೂಗಳ ಎದುರಿಗಿರುವ ಘೋರ ಸತ್ಯ!


                 ಮುಸ್ಲಿಂ ಲೀಗ್ ಸ್ಥಾಪನೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದ ಮತಭ್ರಾಂತ ಸಹೋದರರಾದ ಮಹಮ್ಮದ್ ಹಾಗೂ ಶೌಕತ್ ಓದಿದ್ದು ಅಲಿಗಢದಲ್ಲಿಯೇ! 1913ರಲ್ಲಿ ಕಾನ್ಪುರದಲ್ಲಿ ರಸ್ತೆಗಾಗಿ ಮಸೀದಿಯ ಭಾಗವೊಂದನ್ನು ಒಡೆದಾಗ ಇಂಗ್ಲೆಂಡಿಗೇ ಹೋಗಿ ಇದರ ವಿರುದ್ಧ ಹೋರಾಡಿ ಬ್ರಿಟಿಷರೇ ಮತ್ತೆ ಆ ಮಸೀದಿಯನ್ನು ಕಟ್ಟಿಕೊಡುವಂತೆ ಮಾಡಿದ ಮಹಾಮತಾಂಧ ಛಲಗಾರ ಈ ಮಹಮ್ಮದ್ ಅಲಿ! ಅಪಾರ ಶ್ರೀಮಂತ ಮನೆತನದಿಂದ ಬಂದಿದ್ದ ಇವರಿಬ್ಬರೂ ಕೋಲ್ಕತಾದಿಂದ ದೆಹಲಿಗೆ ತಮ್ಮ ವಾಸ್ತವ್ಯವನ್ನು ಬದಲಿಸಿ ಮುಸ್ಲಿಂ ವಿಚಾರಧಾರೆಯನ್ನು ಬಿತ್ತುವ ಸಲುವಾಗಿ "ಹಮ್ ದರ್ದ್" ಎನ್ನುವ ಉರ್ದು ಪತ್ರಿಕೆಯನ್ನು ಪ್ರಾರಂಬಿಸಿದರು. 1914ರಲ್ಲಿ ಬಾಲ್ಕನ್-ತುರ್ಕಿ ಯುದ್ಧ ನಡೆದಾಗ ತುರ್ಕಿಯನ್ನು ಬೆಂಬಲಿಸಿ ಲೇಖನಗಳನ್ನೂ ಬರೆದರು. ಶಿಕ್ಷಣ-ರಾಜಕೀಯ-ಅಂತಾರಾಷ್ಟ್ರೀಯ ಸಂಗತಿಗಳೆಲ್ಲದರಲ್ಲೂ ಮುಸ್ಲಿಂ ಹಿತಾಸಕ್ತಿಯನ್ನೇ ಮುಂದುಮಾಡುತ್ತಿದ್ದ ಈ ಸಹೋದರರು ಮೊಹಮ್ಮದನ್ ಆಂಗ್ಲೋ ವಿವಿಗಾಗಿ ಹಣಸಂಗ್ರಹಕ್ಕೆ ತೊಡಗಿದರು. ಹೀಗೆ ಆಂಗ್ಲೋ ವಿವಿ ಅಲಿಗಢವಾಗಿ ಬದಲಾಯಿತು. ಆ ಸಂದರ್ಭದಲ್ಲೇ ಖಲೀಫನ ಅಧಿಕಾರ ನಿರಾತಂಕವಾಗಿ ಮುಂದುವರಿಯಬೇಕೆಂದು ಆಗ್ರಹಿಸಲು ಖಿಲಾಫತ್ ಚಳುವಳಿ ಶುರುವಾಗಿತ್ತು. ಈ ಅಲಿ ಸಹೋದರರು ಅದನ್ನು ಭಾರತದಲ್ಲೂ ಹುಟ್ಟುಹಾಕಿದರು. ಆಗ ತಾನೇ ದಕ್ಷಿಣ ಆಫ್ರಿಕಾದಿಂದ ಹಿಂದಿರುಗಿದ್ದ ಸ್ವಯಂಘೋಷಿತ ನಾಯಕ ಗಾಂಧಿ ಈ ಖಿಲಾಫತ್ ಚಳುವಳಿಗೆ ಬೆಂಬಲ ನೀಡಿದರು. ಖಿಲಾಫತ್ತಿನ ವ್ಯಸನದಿಂದಾಗಿ ಮಲಬಾರಿನಿಂದ ಮುಲ್ತಾನಿನವರೆಗೆ ಹಿಂದೂಗಳು ಭೀಕರ ಅತ್ಯಾಚಾರಕ್ಕೊಳಗಾದರು. ವಿಪರ್ಯಾಸವೆಂದರೆ ಗಾಂಧಿ ಅಂತಹ ವೇಳೆಯಲ್ಲೂ ಖಿಲಾಫತ್ತಿಗಾಗಿ ಹಿಂದೂಗಳಿಂದಲೇ ಧನಸಂಗ್ರಹಕ್ಕೆ ತೊಡಗಿ ಇಂತಹವನಿಂದ ಇಷ್ಟು ದುಡ್ಡು ಬಂತೆಂಬ ಪಟ್ಟಿ ಮಾಡುವುದರಲ್ಲಿ ವ್ಯಸ್ತರಾಗಿ ಹೋಗಿದ್ದರು. ಕೋಪ ಬ್ರಿಟಿಷರ ಮೇಲೆ, ಚಳುವಳಿ ಬ್ರಿಟಿಷರ ವಿರುದ್ಧ, ಬಲಿಯಾದದ್ದು ಹಿಂದೂಗಳು! ಬ್ರಿಟಿಷರು ಖಿಲಾಫತ್ತಿಗೆ ಕವಡೆ ಕಿಮ್ಮತ್ತು ಕೊಡದಿದ್ದರೂ ಅಲಿ ಸಹೋದರ ರಿಗೆ ಈ ಗಾಂಧಿ ಹಾಗೂ ಅವರ ಚೇಲಾಗಳನ್ನು ಹೇಗೆ ತಮ್ಮ ಹಿತಕ್ಕೆ ಸಹಕಾರಿಯಾಗುವಂತೆ ಬಳಸಿಕೊಳ್ಳಬಹುದೆಂಬುದರ ದಾರಿ ಗೋಚರಿಸಿತ್ತು.


                 ಸಯ್ಯದ್ ಅಹಮದ್ ಖಾನ್ ಹಾಗೂ ಮಹಮ್ಮದ್ ಇಕ್ಬಾಲರ ಪ್ರತ್ಯಕ್ಷ ಪರೋಕ್ಷ ಪಾತ್ರದಿಂದ ಮುಸಲ್ಮಾನರಲ್ಲಿದ್ದ ಕೋಮುಪ್ರಜ್ಞೆ ಮತ್ತಷ್ಟು ಹೆಚ್ಚಾಯಿತು. ಅಲಿಗಢ ವಿವಿ ಪ್ರತ್ಯೇಕ ಸ್ವತಂತ್ರ ದೇಶವೊಂದನ್ನು ಪಡೆಯಬೇಕೆಂಬ ಮಹತ್ವಾಕಾಂಕ್ಷೆಯನ್ನು ಮುಸ್ಲಿಮರಲ್ಲಿ ಬಿತ್ತಿತು. ಮಹಮ್ಮದ್ ಇಕ್ಬಾಲ್ ಮುಸ್ಲಿಂ ಲೀಗಿನ ಅಧ್ಯಕ್ಷನಾಗಿ 1930ರಲ್ಲಿ ನಡೆದ ಮುಸ್ಲಿಂ ಲೀಗಿನ ರಜತಸಂಭ್ರಮದಲ್ಲಿ ಪಂಜಾಬ್, ಸಿಂಧ್, ಬಲೂಚ್ ಗಳನ್ನೊಳಗೊಂಡ ಪ್ರತ್ಯೇಕ ಮುಸ್ಲಿಂ ರಾಷ್ಟ್ರದ ಕನಸನ್ನು ಬಿತ್ತಿದ. ಇದು ಮುಂದಕ್ಕೆ ಅಲಿಗಢ ಚಳುವಳಿಯಾಗಿ ಬೆಳೆಯಿತು. ರಹಮತ್ ಅಲಿ ಚೌಧರಿ "ಪಾಕಿಸ್ತಾನ್" ಎನ್ನುವ ಹೆಸರನ್ನೂ ಕೊಟ್ಟ. ಇಕ್ಬಾಲನ ಎಡೆಬಿಡದ ಪತ್ರಗಳು ಹಾಗೂ ತನ್ನ ರಾಷ್ಟ್ರೀಯವಾದಿ ಮನಸ್ಥಿತಿ&ಕಾರ್ಯದೆಡೆಗಿನ ಗಾಂಧೀ-ನೆಹರೂಗಳ ಅವಗಣನೆ ಜಿನ್ನಾನನ್ನು ಪ್ರತ್ಯೇಕತಾವಾದಿಯಾಗಿ ಮಾಡಿ ಇಕ್ಬಾಲನ ಕನಸನ್ನೂ ರಹಮತನ ಹೆಸರನ್ನೂ ಒಟ್ಟಿಗೆ ಸೇರಿಸಿತು. ವಿದ್ಯಾರ್ಥಿ ಶಕ್ತಿಯನ್ನು ಭಾರತ ವಿರೋಧಿ ಕಾರ್ಯಕ್ಕೆ ಬಳಸಿಕೊಂಡ ಜಿನ್ನಾ 'ನಮಗೆ ನಮ್ಮದೇ ಆದ ಜೀವನ ವಿಧಾನವಿದೆ. ಭಾರತ ಸ್ವತಂತ್ರವಾದರೆ ಅದು ಹಿಂದು ಸಂಸ್ಕೃತಿಯ ರಾಷ್ಟ್ರವಾಗುತ್ತದೆ. ಎಲ್ಲಿ ಮುಸ್ಲಿಮರು ಬಹುಸಂಖ್ಯೆಯಲ್ಲಿ ಇರುವರೋ ಅಲ್ಲೆಲ್ಲಾ ಅವರು ಭಾರತದಿಂದ ಪ್ರತ್ಯೇಕವಾಗಬೇಕಿದೆ. ನಿಮ್ಮ ಗುರಿ ಏನಿದ್ದರೂ ಪಾಕಿಸ್ತಾನದ ನಿರ್ಮಾಣ. ಬದುಕುವುದಾದರೂ ಸಾಯುವುದಾದರೂ ಈ ಗುರಿಯ ಈಡೇರಿಕೆಗಾಗಿ ಎನ್ನುವ ಧ್ಯೇಯವಿರಲಿ' ಎನ್ನುತ್ತಾ ಕರಾಳ ದಿನದ ಆಚರಣೆಗೆ ಕರೆ ನೀಡಿದ. 1946ರ ಆಗಸ್ಟ್ 16ರಂದು ನಡೆದ ನೇರ ಕಾರ್ಯಾಚರಣೆಯಲ್ಲಿ ಭಾಗವಹಿಸಿದವರು ಸ್ವತಂತ್ರ ಪಾಕಿಸ್ತಾನದ ಬ್ರೈನ್ ವಾಶ್ ಮಾಡಿಸಿಕೊಂಡ ವಿದ್ಯಾರ್ಥಿಗಳೇ. ಅವರು ದೂರದ ವಾಯವ್ಯ ಪ್ರಾಂತ್ಯಗಳಲ್ಲಿ ನಡೆದ ಹಿಂದು-ಸಿಕ್ಖರ ಮಾರಣಹೋಮದಲ್ಲೂ ಭಾಗವಹಿಸಿದ್ದರು. ಇವರಲ್ಲಿ ಅಂದಿನ ಅಲಿಗಢ ವಿವಿಯ ವಿದ್ಯಾರ್ಥಿಗಳದ್ದೇ ಸಿಂಹಪಾಲು. ಹೀಗೆ ಪಾಕಿಸ್ತಾನ ನಿರ್ಮಾಣ ಚಳವಳಿಯ ಬೌದ್ಧಿಕ ಕೇಂದ್ರವಾಗಿ ಅಲಿಗಢ ವಿವಿ ಕೆಲಸ ಮಾಡಿತು. ಪ್ರತ್ಯೇಕತೆಯ ಭಾವದಿಂದ ಆರಂಭವಾಗಿ ಪ್ರತ್ಯೇಕತೆಯ ವಿಷ ಬೀಜವನ್ನು ವಿದ್ಯಾರ್ಥಿಗಳ ಮನಸ್ಸಿನಲ್ಲಿ ಬಿತ್ತಿ ಬೆಳೆಸುವ ವಿದ್ಯಾಲಯವೊಂದು ಹೇಗೆ ದೇಶ ಒಡೆಯಲು ಕಾರಣವಾಗಬಹುದು ಎನ್ನುವುದಕ್ಕೆ ಸ್ಪಷ್ಟ ನಿದರ್ಶನ ಅಲಿಗಢ ವಿವಿ! ವಿಪರ್ಯಾಸವೆಂದರೆ ದೇಶವಿಭಜನೆಗೆ ಕಾರಣನಾದ ಮಹಮ್ಮದ್ ಇಕ್ಬಾಲ್ ಹೆಸರಲ್ಲಿ ಇಂದಿಗೂ ಪ್ರತಿವರ್ಷ ಉರ್ದು ಕವಿಗಳಿಗೆ ಪ್ರಶಸ್ತಿ ನೀಡಲಾಗುತ್ತಿದೆ!


                    ಇವತ್ತು ಭಾರತದಲ್ಲಿ ಎಲ್ಲೇ ಬಾಂಬ್ ಸಿಡಿಯಲಿ, ಅದರ ಕೊಂಡಿ ಒಂದೋ ಅಲಿಗಢಕ್ಕಿರುತ್ತದೆ ಅಥವಾ ಭಟ್ಕಳಕ್ಕೆ ಇದ್ದೇ ಇರುತ್ತದೆ. 80 ಹಾಗೂ 90ರ ದಶಕದಲ್ಲಿ ಭಾರತದಲ್ಲಿ ಕೋಮುಗಲಭೆಗೆ ಕಾರಣವಾದದ್ದು ಭಯೋತ್ಪಾದಕರ ಜೊತೆ ನಂಟು ಹೊಂದಿದ್ದ "ಸ್ಟೂಡೆಂಟ್ ಇಸ್ಲಾಮಿಕ್ ಮೂವ್ ಮೆಂಟ್ಸ್ ಆಫ್ ಇಂಡಿಯಾ"(ಸಿಮಿ) ಎಂಬ ದೇಶದ್ರೋಹಿ ಸಂಘಟನೆ. 1977ರಲ್ಲಿ ಮಹಮ್ಮದ್ ಸಿದ್ದಿಕಿಯಿಂದ ಆರಂಭಗೊಂಡ ಇದು ಅಲಿಗಢದ್ದೇ ಪಿಂಡ! ಸಿಮಿಯ ಕಾರ್ಯಕರ್ತರಲ್ಲಿ ಅನೇಕರು ಅಲಿಗಢದ "ವಿದ್ಯೆ" ಪಡೆದವರೇ! ಆದರೆ ರಾಷ್ಟ್ರವಿರೋಧಿ ಕಾರ್ಯದಲ್ಲಿ ತೊಡಗಿದ್ದ ಸಿಮಿಯನ್ನು ನಿಷೇಧಿಸಬೇಕಾದರೆ ಕೇಂದ್ರದಲ್ಲಿ ಭಾಜಪಾ ಸರಕಾರವೇ ಬರಬೇಕಾಯಿತು. ಆದರೇನು? 1956ರಲ್ಲಿ ಜಮಾತೆ ಇಸ್ಲಾಮಿ ಹಿಂದ್ ಎಂಬ ವಿದ್ಯಾರ್ಥಿ ಸಂಘಟನೆ ಬೆಳೆದು ಸಿಮಿಯಾಗಿ ನಲವತ್ತೈದು ವರ್ಷಗಳಲ್ಲಿ ದೇಶದಲ್ಲಿ ಕೋಮುಗಲಭೆ-ಭಯೋತ್ಪಾದನೆಗಳ ಸರಣಿಯನ್ನೇ ಹುಟ್ಟುಹಾಕಿ ದೇಶದ ನಾಲ್ಕೂ ದಿಕ್ಕುಗಳಲ್ಲಿ(ಕಾಶ್ಮೀರ, ಬಂಗಾಳ, ಕೇರಳ, ಮಹಾರಾಷ್ಟ್ರ) ತನ್ನ ನೆಲೆ ಭದ್ರಪಡಿಸಿಕೊಂಡಿತ್ತು. ಮುಂದೆ ಬೇರೆ ಬೇರೆ ಹೆಸರುಗಳಿಂದ ರಕ್ತಬೀಜನಂತೆ ಹುಟ್ಟಿ ದೇಶದಾದ್ಯಂತ ಭಯೋತ್ಪಾದನೆಯನ್ನು ಸೃಷ್ಟಿ ಮಾಡುತ್ತಲೇ ಇದೆ!


                 ಇದೇ ವಿಶ್ವವಿದ್ಯಾಲಯದ ಕಾರ್ಯನಿರ್ವಾಹಕ ಮಂಡಳಿ 2005ರಲ್ಲಿ ವಿವಿಯಲ್ಲಿ ಅರ್ಹತೆಯನ್ನು ಪರಿಗಣಿಸದೇ ಮುಸ್ಲಿಮರಿಗೆ 50% ಮೀಸಲಾತಿ ಒದಗಿಸಬೇಕೆಂದು ಹಕ್ಕೊತ್ತಾಯ ಮಂಡಿಸಿತು. ಅದಕ್ಕೆ ಆಗಿನ ಕೇಂದ್ರ ಮಾನವ ಸಂಪನ್ಮೂಲ ಸಚಿವ ಅರ್ಜುನ್ ಸಿಂಗ್ ಜೈ ಅಂದುಬಿಟ್ಟರು. ವಿಪರ್ಯಾಸವೆಂದರೆ ಅಂತಹ ವಿವಿಯಲ್ಲಿ ವಿದ್ಯಾರ್ಥಿನಿಯರಿಗೆ ಗ್ರಂಥಾಲಯ ಪ್ರವೇಶ ದೊರಕಿಸಿಕೊಡಲು ಉಚ್ಛ ನ್ಯಾಯಾಲಯ ಮಧ್ಯೆ ಬರಬೇಕಾಯಿತು. ವಿದ್ಯಾರ್ಥಿಗಳಲ್ಲಿ ಸದಾ ಪ್ರತ್ಯೇಕತಾವಾದದ ವಿಷ ಬೀಜ ಬಿತ್ತುವ ಈ ವಿವಿಗೆ ಐದು ಆಫ್ ಕ್ಯಾಂಪಸುಗಳನ್ನು ಹಿಂದೆ ಕೇಂದ್ರದಲ್ಲಿದ್ದ ಯುಪಿಎ ಸರಕಾರ ಮಂಜೂರು ಮಾಡಿತ್ತು. 75% ಮುಸ್ಲಿಮರೇ ತುಂಬಿರುವ, ಸಿಮಿಯ ಅಡಗುದಾಣ ಮಲಪ್ಪುರಂನಲ್ಲಿನ ಆಫ್ ಕ್ಯಾಂಪಸ್ಸಿಗೆ ಕೇರಳ ಸರಕಾರ 300 ಎಕರೆ ಜಾಗವನ್ನೊದಗಿಸಿದೆ. ಇಷ್ಟಾದ ಮೇಲೂ ಕೇರಳ ಮುಖ್ಯಮಂತ್ರಿ ಈ ವಿವಿಗೆ ನಿಧಿ ಒದಗಿಸಬೇಕೆಂದು ಬೇಡುವ ಸಲುವಾಗಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿಯವರನ್ನು ಸ್ವತಃ ಭೇಟಿಯಾಗಿ ಮುಖಕ್ಕೆ ಉಗಿಸಿಕೊಂಡು ಬಂದಿದ್ದಾರೆ! ಅತ್ತ ಕೇಂದ್ರ ದೇಶದಲ್ಲಿ ಅಲ್ಲೋಲಕಲ್ಲೋಲಕ್ಕೆ ಕಾರಣವಾಗುತ್ತಿರುವ ಈ ವಿವಿಯ ಅಲ್ಪಸಂಖ್ಯಾತ ದರ್ಜೆಯನ್ನು ತೆಗೆದುಹಾಕುವ ಕ್ರಮದ ಕುರಿತು ಚಿಂತಿಸುತ್ತಿದೆ. ಆ ಪ್ರಕರಣ ಸರ್ವೋಚ್ಛನ್ಯಾಯಾಲಯದ ಅಂಗಳದಲ್ಲಿದೆ.


                 ಕಳೆದ ಶತಮಾನದ ಆದಿ ಭಾಗದಲ್ಲಿ ಅಲಿಗಢ ವಿವಿಯಲ್ಲಿ ತನ್ನ ಶಿಕ್ಷಣವನ್ನು ಪೂರೈಸಿದ್ದ ಸ್ವಾತಂತ್ರ್ಯ ಹೋರಾಟಗಾರ ರಾಜಾ ಮಹೇಂದ್ರ ಪ್ರತಾಪ್ ಮುಂದೆ ಮೂರು ಎಕರೆಗಿಂತಲೂ ಹೆಚ್ಚು ಜಾಗವನ್ನು ದೇಣಿಗೆಯಾಗಿ ನೀಡಿದ್ದ. ಆದರೆ ಕಳೆದ ವರ್ಷ ಆತನ ಜನ್ಮದಿನಾಚರಣೆಯನ್ನು ಆಚರಿಸಲೇ ಈ ವಿದ್ಯಾಲಯ ನಿರಾಕರಿಸಿತು. ತಮ್ಮಲ್ಲೇ ವಿದ್ಯಾಭ್ಯಾಸ ಮಾಡಿದ್ದ, ವಿದ್ಯಾಲಯಕ್ಕೆ ದೇಣಿಗೆ ನೀಡಿದ್ದ, ದೇಶದ ಸ್ವಾತಂತ್ರ್ಯಕ್ಕಾಗಿ ತನ್ನದೆಲ್ಲವನ್ನೂ ಸಮರ್ಪಿಸಿದ್ದವನ ಜನ್ಮದಿನವನ್ನು ಆಚರಿಸಲು ಯಾವುದೇ ವಿದ್ಯಾಲಯವಾದರೂ ಹೆಮ್ಮೆ ಪಡಬೇಕು. ಅಂತಹ ದೇಶಭಕ್ತನಿಗೆ ಆತ "ಹಿಂದೂ" ಎನ್ನುವ ಒಂದೇ ಕಾರಣಕ್ಕೆ ಅವಮಾನ ಮಾಡುವ ಇಂತಹ ವಿದ್ಯಾಲಯಗಳು ಸಮಾಜಕ್ಕೆ ಎಂತಹ ವಿದ್ಯಾರ್ಥಿಗಳನ್ನು ರೂಪಿಸಿಕೊಡಬಹುದು? ಸ್ವಾತಂತ್ರ್ಯ ಹೋರಾಟಗಾರನಾಗಿದ್ದ ತಮ್ಮದೇ ವಿದ್ಯಾಲಯದ ಹಳೇ ವಿದ್ಯಾರ್ಥಿಯ ಜನ್ಮದಿನವನ್ನು ಆಚರಿಸದ ಈ ವಿದ್ಯಾಲಯ ಉಳಿದ ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಕೊಟ್ಟೀತೇ?


                     ಅಲಿಗಢ ತಾನು ಹುಟ್ಟಿದಂದಿನಿಂದ ಪ್ರತ್ಯೇಕತೆಯ ವಿಷ ಬೀಜವನ್ನು ಬಿತ್ತುತ್ತಲೇ ಇದೆ. ಇದಕ್ಕಾಗಿ ಅಲಿಗಢ ಸೃಷ್ಟಿಸಿದ ಭಯೋತ್ಪಾದನಾ ದಾಳಿಗಳೇನು ಕಡಿಮೆಯೇ? 2008ರ ಮುಂಬಯಿ ಮೇಲಿನ ಭಯೋತ್ಪಾದನಾ ದಾಳಿಯ ರೂವಾರಿ ಹಫೀಜ್ ಸಯ್ಯದನ ಚಿಕ್ಕಪ್ಪ ಓದಿದ್ದು ಈ ವಿವಿಯಲ್ಲೇ. ಮೊದಲೇ ಮತಾಂಧವಾಗಿದ್ದ ಆತನ ಕುಟುಂಬ ಮುಸ್ಲಿಂ ಲೀಗನ್ನು ಬೆಂಬಲಿಸಿತ್ತು. ವಿಭಜನೆಯಾದಾಗ ಪಾಕಿಸ್ತಾನಕ್ಕೆ ತೆರಳಿದ ಮೇಲೂ ಈ ಕುಟುಂಬದ ಭಾರತ ದ್ವೇಷ ಆರಿರಲಿಲ್ಲ. ಅದು ಹಫೀಜ್ ರೂಪದಲ್ಲಿ ಭಾರತದ ಮೇಲೆರಗಿತು. ಹೀಗೆ ಅಖಂಡ ಭಾರತವನ್ನು ತ್ರಿಖಂಡವನ್ನಾಗಿಸಿದ ಖ್ಯಾತಿ ಅಲಿಗಢ ಮುಸ್ಲಿಂ ವಿವಿಯದ್ದು. ಉಗ್ರರನ್ನು ತಯಾರಿಸುವ ಜಾಗ ಎಂಬ ತನ್ನ ಬಿರುದನ್ನು ಅಲಿಗಢ ಮತ್ತೆ ಮತ್ತೆ ಜಗತ್ತಿಗೆ ಪ್ರಚುರಪಡಿಸುತ್ತಲೇ ಇದೆ. ಉಪನ್ಯಾಸಕರ ಮೇಲೆ ಹಲ್ಲೆ, ವಿದ್ಯಾರ್ಥಿ ಗುಂಪುಗಳ ನಡುವೆ ಘರ್ಷಣೆ, ಕುಲಪತಿಗಳಿಗೆ ಘೇರಾವ್, ಉಪನ್ಯಾಸಕರ ನಡುವೆ ಘರ್ಷಣೆ, ಹಣದ ದುರುಪಯೋಗ, ಕುಲಪತಿಗಳ ಬದಲಾವಣೆ, ಕೊಲೆ, ಕ್ಷುಲ್ಲಕ ಕಾರಣಕ್ಕೆ ಪ್ರತಿಭಟನೆ ಇವೆಲ್ಲಾ ಅಲಿಗಢ ವಿವಿಯ ದಿನಚರಿಯ ಭಾಗಗಳು! ಜೆ.ಎನ್.ಯು, ಜಾಧವಪುರ ವಿವಿಗಳು ಇದರ ಕೂಸುಗಳು ಅಷ್ಟೇ!


                   "ಜಂಗ್ ರಹೇಗಿ ಜಂಗ್ ರಹೇಗಿ, ಭಾರತ್ ಕಿ ಬರ್ಬಾದಿ ತಕ್'. 'ಜಂಗ್ ರಹೇಗಿ ಜಂಗ್ ರಹೇಗಿ ಕಾಶ್ಮೀರ್ ಕಿ ಆಜಾದಿ ತಕ್', 'ಪಾಕಿಸ್ತಾನ್ ಜಿಂದಾಬಾದ್', 'ಗೋ ಬ್ಯಾಕ್ ಇಂಡಿಯಾ', 'ಭಾರತ್ ತೇರೇ ತುಕಡೇ ತುಕಡೇ ಕರ್ ದೇಂಗೆ', 'ಅಫ್ಜಲ್ ಹಮೆ ಶರ್ಮಿಂದಾ ಹೈ, ತೇರೇ ಕಾತಿಲ್ ಜಿಂದಾ ಹೈ' " ಎನ್ನುವ ಘೋಷಣೆ ಕೇವಲ ಜೆ.ಎನ್.ಯುನಲ್ಲಿ ಮಾತ್ರ ಮೊಳಗಿದ್ದಲ್ಲ. ರಾಷ್ಟ್ರದ ವಿವಿಧ ಶೈಕ್ಷಣಿಕ ಸಂಸ್ಥೆಗಳಲ್ಲಿ ಇಂತಹ ಘಟನೆಗಳು ನಡೆದಿವೆ. ಯಾಕುಬ್ ಮೆಮನ್, ಅಫ್ಜಲ್ಗುರು ಮುಂತಾದ ದೇಶದ್ರೋಹಿಗಳನ್ನು ಗಲ್ಲಿಗೇರಿಸಿದ ದಿನದ ವಾರ್ಷಿಕ ಆಚರಣೆ ಮಾಡಿ ಅವರಿಗೆ ಸಂತಾಪ ವ್ಯಕ್ತಪಡಿಸಲಾಗುತ್ತದೆ. 1969ರಲ್ಲಿ ಪ್ರಾರಂಭವಾದ ಜೆ.ಎನ್.ಯುನ ನಿಯಮಾವಳಿ, ನೇಮಕಾತಿಗಳನ್ನು ನಿರ್ಧರಿಸಿದವರು ಕಮ್ಯುನಿಸ್ಟ್ ಚಿಂತಕರು. ಪ್ರಕಾಶ್ ಕಾರಟರದ್ದು ಇದರಲ್ಲಿ ಪ್ರಮುಖ ಪಾತ್ರ. ಹೀಗಾಗಿ ಇಲ್ಲಿ ಎಡವಿಚಾರಧಾರೆಗೆ ಹೆಚ್ಚಿನ ಪ್ರಾಧಾನ್ಯತೆ! ನೆಹರೂ ತನ್ನ ಕಮ್ಯೂನಿಸ್ಟ್ ವಿಚಾರದೆಡೆಗಿನ ಒಲವಿನಿಂದ ಈ ದೇಶದ ಸಂವಿಧಾನವನ್ನೇ ಬದಲಾಯಿಸಿದರೆ ಕಮ್ಯೂನಿಷ್ಟರು ಆಯಕಟ್ಟಿನ ಸ್ಥಾನದಲ್ಲಿ ಕೂತು ದೇಶದ ಸಂಸ್ಕೃತಿಯನ್ನೇ ಹತ್ಯೆಗೈದರು.


                    ಜೆ.ಎನ್.ಯುನಲ್ಲಿ ಒಬ್ಬ ವಿದ್ಯಾರ್ಥಿಯ ಬೋಧನಾ ಶುಲ್ಕ ರೂ.217, ವೈದ್ಯಕೀಯ ಶುಲ್ಕ ರೂ.9, ಕ್ರೀಡಾಶುಲ್ಕ ರೂ.16, ಲೈಬ್ರರಿ ಶುಲ್ಕ ರೂ.16, ತಿಂಗಳ ಹಾಸ್ಟೆಲ್ ಶುಲ್ಕ ರೂ.20 ಮಾತ್ರ! ಹೀಗೆ ಒಟ್ಟು ಎಲ್ಲಾ ಶುಲ್ಕಗಳು ಸೇರಿ ವರ್ಷಕ್ಕೆ 400 ರೂ. ಕೂಡಾ ದಾಟುವುದಿಲ್ಲ. ಪಿಹೆಚ್ ಡಿ, ಎಂಫಿಲ್ ಮತ್ತು ಪ್ರೀ ಪಿಹೆಚ್ ಡಿ ವಿದ್ಯಾರ್ಥಿಗಳ ಭೋದನಾ ಶುಲ್ಕ ವಾರ್ಷಿಕ 240 ರೂಗಳು, ಅವರ ಕ್ರೀಡಾ ಶುಲ್ಕ 14 ರೂ, ಲಿಟರರಿ ಮತ್ತು ಕಲ್ಚರಲ್ ಶುಲ್ಕ 16 ರೂ. ಎಲ್ಲಾ ಶುಲ್ಕಗಳನ್ನು ಒಟ್ಟು ಸೇರಿಸಿದರೂ ವಾರ್ಷಿಕವಾಗಿ 500 ರೂ. ದಾಟುವುದಿಲ್ಲ. ಅಲ್ಲದೆ ಪ್ರತಿ ವಿದ್ಯಾರ್ಥಿಗೆ ರೂ. 3.00 ಲಕ್ಷ ರೂ. ಗಳನ್ನು ಸಬ್ಸಿಡಿ ರೂಪದಲ್ಲಿ ಸರ್ಕಾರ ಭರಿಸುತ್ತಿದೆ. ಅಂದರೆ ಸುಮಾರು 255 ಕೋಟಿ ರೂ.ಗಳು ಈ ರೂಪದಲ್ಲಿ ವ್ಯರ್ಥವಾಗುತ್ತಿದೆ. ಈ ಸಬ್ಸಿಡಿ, ಈ ಅನುದಾನ ಎಲ್ಲಾ ನಮ್ಮ ನಿಮ್ಮೆಲ್ಲರ ತೆರಿಗೆ ಹಣ. ಇಷ್ಟೆಲ್ಲವನ್ನೂ ಪಡೆದುಕೊಳ್ಳುವ ಜೆ ಎನ್ ಯು ನ ಕೆಲವು ವಿದ್ಯಾರ್ಥಿಗಳು ದೇಶಕ್ಕೆ ಮರಳಿ ನೀಡುತ್ತಿರುವುದು ಲಾಲ್ ಸಲಾಂ ಘೋಷಣೆ, ಇಂಡಿಯಾ ಗೋ ಬ್ಯಾಕ್ ಘೋಷಣೆ, ಭಾರತ ವಿರೋಧಿ ಚಟುವಟಿಕೆ! ಇದು ಇತ್ತೀಚಿನ ಬೆಳವಣಿಗೆಯಲ್ಲ, ವಿದ್ಯಾಲಯದ ಹುಟ್ಟಿನಿಂದಲೇ ಬಂದ ಜಾಡ್ಯವಾಗಿದೆ. ಏಪ್ರಿಲ್, 2000ದಲ್ಲಿ ಇದೇ ವಿವಿ ಅಹಮದ್ ಫರಾಜ್ ಮತ್ತು ಫಾಮಿದಾ ರಿಯಾಜ್ ಎಂಬ ಇಬ್ಬರು ಪಾಕಿಸ್ತಾನದ ಕವಿಗಳನ್ನು  ಆಹ್ವಾನಿಸಿ ಕಾರ್ಯಕ್ರಮ ಏರ್ಪಡಿಸಿದ್ದರು. ಈ ಕಾರ್ಯಕ್ರಮದಲ್ಲಿ ಭಾರತದ ಇಬ್ಬರು ಸೇನಾಧಿಕಾರಿಗಳೂ ಭಾಗವಹಿಸಿದ್ದರು. ಕಾರ್ಗಿಲ್ ಯುದ್ಧದ ಬಿಸಿ ಆರುತ್ತಿದ್ದ ದಿನಗಳವು. ಕಾರ್ಯಕ್ರಮದಲ್ಲಿ ಭಾರತವಿರೋಧಿ ಕಲಾಪಗಳಿದ್ದುದನ್ನು ಗಮನಿಸಿದ ಸೇನಾಧಿಕಾರಿಗಳು ಭಾರತವಿರೋಧಿ ಅಂಶಗಳ ಬಗ್ಗೆ ಪ್ರತಿಭಟಿಸಿದರು. ಪ್ರತಿಭಟಿಸಿದ್ದಕ್ಕಾಗಿ ಅವರುಗಳ ಮೇಲೆ ಹಲ್ಲೆ ನಡೆಯಿತು. ಒಬ್ಬ ಸೇನಾಧಿಕಾರಿ ಗಾಳಿಯಲ್ಲಿ ಗುಂಡು ಹಾರಿಸಿದ್ದರಿಂದಾಗಿ ಅವರಿಬ್ಬರು ಅಲ್ಲಿಂದ ಬಚಾವಾಗಿ ಬಂದರು. ಇಲ್ಲದಿದ್ದರೆ ಭಾರತದಲ್ಲಿರುವ ಪಾಕಿ ಪ್ರಿಯರಿಂದ ಭಾರತದ ರಕ್ಷಣೆ ಮಾಡಿದವರ ಕೊಲೆಯಾಗುತ್ತಿತ್ತು. 2010ರಲ್ಲಿ ಛತ್ತೀಸಘಡ ರಾಜ್ಯದ ದಾಂತೆವಾಡ ಜಿಲ್ಲೆಯ ಚಿಂತಲ್ನಾರ್ ಗ್ರಾಮದ ಬಳಿ 300 ಜನ ನಕ್ಸಲರ ತಂಡ ನೆಲಬಾಂಬು ಉಡಾಯಿಸಿ 76 ಪೋಲಿಸರ ಹತ್ಯೆಗೈದಿದ್ದರು. ಆಗ ಇದೇ ವಿವಿಯಲ್ಲಿ 'ಜೆ.ಎನ್.ಯು. ಫೋರಮ್ ಅಗೆನೆಸ್ಟ್ ವಾರ್ ಆನ್ ಪೀಪಲ್' ಹೆಸರಿನಲ್ಲಿ ಒಂದು ಸಭೆ ಏರ್ಪಡಿಸಿ ಸಿ.ಆರ್.ಪಿ.ಎಫ್. ಜವಾನರ ಹತ್ಯೆಯನ್ನು ಸಿಹಿ ಹಂಚಿ ಸಂಭ್ರಮಿಸಿದ್ದರು. ಆಗ ಅವರುಗಳು ಕೂಗಿದ್ದ ಘೋಷಣೆಗಳು - 'ಇಂಡಿಯ ಮುರ್ದಾಬಾದ್', 'ಮಾವೋವಾದ್ ಜಿಂದಾಬಾದ್'!


                 ತಮ್ಮ ಕ್ರೌರ್ಯಕ್ಕೆ ಬೌದ್ಧಿಕ ಭದ್ರತೆಯನ್ನು ಒದಗಿಸಿಕೊಳ್ಳುವುದಕ್ಕಾಗಿ ಮಾವೋವಾದಿಗಳು, ಜಿಹಾದಿಗಳು, ಮಿಷನರಿಗಳು ಕಂಡುಕೊಂಡ ದಾರಿಯೇ ಭಾರತದ ಶಿಕ್ಷಣ ಕ್ಷೇತ್ರ. ಸ್ವಾತಂತ್ರ್ಯದ ಕಾಲದಿಂದಲೂ ಈ ದೇಶದ ಶಿಕ್ಷಣ ಎಡಪಂಥಿಯರ ಕೈಯಲ್ಲೇ ಇತ್ತು. ಸ್ವತಃ ನೆಹರೂ ಈ ಪಂಥದ ಆರಾಧಕರಾಗಿದ್ದರಿಂದ ವಿಶ್ವವಿದ್ಯಾಲಯಗಳಲ್ಲಿ, ಶಿಕ್ಷಣ ಕ್ಷೇತ್ರಗಳಲ್ಲೆಲ್ಲಾ ಅವರುಗಳೇ ತುಂಬಿಕೊಂಡರು. ಮೆಕಾಲೆ ಪ್ರಣೀತ ಶಿಕ್ಷಣವನ್ನೇ ಮತ್ತೊಮ್ಮೆ ಉರು ಹೊಡಿಸಲು ಇವರು ಸಿದ್ಧರಾಗಿ ನಿಂತರು. ನಾವು ಕಟ್ಟಿದ ತೆರಿಗೆಯಿಂದ ಬೆಳೆದು ನಮ್ಮ ಮೇಲೇ ಎರಗುವ ಗೋಮುಖವ್ಯಾಘ್ರಗಳನ್ನು ಬೆಳೆಸಿದರು. ಜೆ.ಎನ್.ಯು ಬಂದು ಸೇರಿಕೊಂಡ, ಈಗಲೂ ಪ್ರೊಫೆಸರ್ ಎಮೆರಿಟಾ ಗೌರವ ಪಡೆದು ಇಲ್ಲಿಯೇ ತಳವೂರಿರುವ ರೋಮಿಲಾ ಥಾಪರ್ ಎಡಚರ ಪಾಲಿಗೆ ಶ್ರೇಷ್ಠ ಇತಿಹಾಸ ಲೇಖಕಿ. ಆಕೆಯ ಇತಿಹಾಸ ಕೃತಿಗಳಲ್ಲಿರುವುದು ಭಾರತ ವಿರೋಧಿ ಧೋರಣೆ, ಮಾರ್ಕ್ಸ್ ಚಿಂತನೆಯೇ! ಆಕೆಯ ಇತಿಹಾಸ ಪುಸ್ತಕಗಳನ್ನು ಆಧರಿಸಿ ಇವತ್ತಿಗೂ ಪಠ್ಯಪುಸ್ತಕಗಳನ್ನು ರಚಿಸಲಾಗುತ್ತದೆ, ತರಗತಿಗಳಲ್ಲಿ ಬೋಧಿಸಲಾಗುತ್ತದೆ. ಅದರಿಂದಾಗಿಯೇ ಜಗತ್ತೆಲ್ಲಾ ಧಿಕ್ಕರಿಸಿದ ಮೇಲೂ ಆರ್ಯ ಆಕ್ರಮಣವೆಂಬ ಪೊಳ್ಳುವಾದ ಭಾರತದಲ್ಲಿ ಮೆರೆದಾಡುತ್ತಿದೆ. ಈಕೆಯಂಥವರು ತುಂಬಿದ ನಂಜನ್ನುಂಡು ಬೆಳೆಯುವ ವಿದ್ಯಾರ್ಥಿಗಳು ವ್ಯವಸ್ಥೆಯ ಭಾಗವಾದಾಗ ವಿಷ ಎಲ್ಲೆಡೆ ಹರಡಿಕೊಳ್ಳುತ್ತದೆ. ಪತ್ರಿಕೆ-ಸಿನಿಮಾ-ಸಾಹಿತ್ಯ-ದೃಶ್ಯ ಮಾಧ್ಯಮಗಳಲ್ಲಿ ಇವರದ್ದೇ ಕಾರುಬಾರು.


                 ದೇಶ ವಿರೋಧಿ ಕೃತ್ಯಗಳನ್ನು ಎಸಗಿದಾಗ ಅದರ ಪರವಾಗಿ ವಾದಿಸಲು ಎಡಪಂಥದ ಚಿಂತಕರ ಪಟಾಲಂ ಸಿದ್ಧವಾಗಿಯೇ ಇರುತ್ತದೆ. ಅವರ ನಾಜೂಕಿನ ಆಂಗ್ಲಭಾಷೆಯ ಮಾತಿನ ಚಾತುರ್ಯವನ್ನು ಅಂತಹುದೇ ಶಿಕ್ಷಣ ಪಡೆದ ನಮ್ಮ ಸಾಮಾನ್ಯ ದೇಶವಾಸಿಗಳು ಕೇಳಿದೊಡನೆ ಮರುಳಾಗಿ ಸತ್ಯವೆಂದೇ ನಂಬಿ ಬಿಡುತ್ತಾರೆ. ವೈಚಾರಿಕ ಮತಾಂತರವೆಂದರೆ ಇದೇ. ಈಗ ಜೆ.ಎನ್.ಯು, ಜಾಧವಪುರಗಳಲ್ಲಿ ಆಗುತ್ತಿರುವುದು ಅದೇ! ಸ್ವತಂತ್ರ ಭಾರತದ ಸಾರ್ವಭೌಮತ್ವವನ್ನು ಎತ್ತಿ ಹಿಡಿಯುವ ಸಂಸತ್ತಿನ ಮೇಲೆ ದಾಳಿ ಮಾಡಿದ್ದ ಉಗ್ರ ಅಫ್ಜಲ್ ಕುರಿತು ಸಹಾನುಭೂತಿ ಹಾಗೂ ಅವನ ಭಾರತವಿರೋಧಿ ನಿಲುವನ್ನು ಸಮರ್ಥಿಸುವ ವಿದ್ಯಾರ್ಥಿಗಳು ಈ ವಿವಿಗಳಲ್ಲಿದ್ದಾರೆ. ಹಾಗೆಯೇ ಅವರ ವರ್ತನೆಯನ್ನು ಗಂಭೀರವಾಗಿ ಸ್ವೀಕರಿಸಿ ಅದೊಂದು ರೀತಿಯಲ್ಲಿ ಪ್ರಜಾಪ್ರಭುತ್ವದೊಳಗೇ ಇರುವ 'ಬಂಡಾಯ' ಎಂದು ವ್ಯಾಖ್ಯಾನಿಸುವ ಅಧ್ಯಾಪಕರೂ ಅಲ್ಲೇ ಇದ್ದಾರೆ.  ಎಲ್ಲೆಲ್ಲಾ ಮುಸಲ್ಮಾನರು ಜಾಸ್ತಿ ಇದ್ದಾರೋ ಅಲ್ಲೆಲ್ಲಾ ಪಾಕಿಸ್ತಾನಗಳು ಜನ್ಮ ತಳೆಯಬೇಕೆಂಬ ಜಿನ್ನಾ ಕನಸು ಪೂರ್ಣವಾಗಿ ಕೊನೆ ಉಸಿರು ಎಳೆದಿಲ್ಲ ಎನ್ನುವುದಕ್ಕೆ ಹೈದರಾಬಾದ್ ಕೇಂದ್ರೀಯ ವಿವಿ, ಜೆಎನ್ಯು, ಜಾಧವಪುರ ವಿವಿಯೊಳಗೆ ಭಾರತದ ಅಖಂಡತೆ , ಸಾರ್ವಭೌಮತೆಯ ವಿರುದ್ಧ ಬೇಯುತ್ತಿರುವ ಅಡುಗೆಯೇ ಸಾಕ್ಷಿ!

ವಿವಿಗಳ ಸುತ್ತ ಬೆಳೆಯುತಿದೆ ಪ್ರತ್ಯೇಕತೆಯ ಹುತ್ತ

ವಿವಿಗಳ ಸುತ್ತ ಬೆಳೆಯುತಿದೆ ಪ್ರತ್ಯೇಕತೆಯ ಹುತ್ತ


                ಮತ್ತೊಮ್ಮೆ ಪ್ರತ್ಯೇಕತಾವಾದದ ಪರ ಕೂಗೆದ್ದಿದೆ. ಅಷ್ಟೇ ಬಲವಾಗಿ ದೇಶದ ಏಕತೆಯನ್ನೂ ಸಮಗ್ರತೆಯನ್ನೂ ಸಾಮಾನ್ಯ ಭಾರತೀಯ ಎತ್ತಿ ತೋರಿದ್ದಾನೆ. ಈ ಪ್ರತ್ಯೇಕತಾವಾದಕ್ಕೆ ಕಾರಣವೇನು ಎನ್ನುವುದನ್ನು ಹುಡುಕ ಹೊರಟರೆ ಗೋಚರವಾಗುವುದು ಇವ್ಯಾಂಜೆಲಿಸಮ್, ಕಮ್ಯೂನಿಸಮ್ ಹಾಗೂ ಇಸ್ಲಾಮಿಸಮ್! ಪಶ್ಚಿಮದ ಹಣವನ್ನು ಭಾರತದೊಳಗೆ ಸುರಿದು ಮತಾಂತರದ ಮೂಲಕ ಭಾರತ ವಿರೋಧಿ ಶಕ್ತಿಯನ್ನು ರೂಪಿಸುತ್ತಿರುವ ಕ್ರಿಶ್ಚಿಯನ್ ಮತಾಂತರಿಗಳು ಒಂದೆಡೆಯಾದರೆ ಚೀನಾದಿಂದ ಶಸ್ತ್ರಾಸ್ತ್ರಗಳನ್ನು ತಂದು ಉಗ್ರರನ್ನು ಪೋಷಿಸಿ ಭಾರತವನ್ನು ಅಸ್ಥಿರ ಗೊಳಿಸುತ್ತಿರುವ ಮಾವೋವಾದಿಗಳು ಇನ್ನೊಂದೆಡೆ. ಇವರಿಬ್ಬರನ್ನೂ ಮೀರಿಸುವಂತೆ ತಮ್ಮ ಮೂಲವೇ ಅರಬ್ ಎಂದು ಬೊಬ್ಬಿರಿಯುತ್ತಾ ಸದಾ ದಾಂಧಲೆ ಸೃಷ್ಟಿಸುವ ಇಸ್ಲಾಮೀ ಜಿಹಾದಿಗಳದ್ದು ಭಯಂಕರ ಭೀಬತ್ಸತೆ! ವಿಪರ್ಯಾಸವೆಂದರೆ ಪ್ರಪಂಚದ ವಿವಿಧ ರಾಷ್ಟ್ರಗಳಲ್ಲಿ ಪರಸ್ಪರ ಶತ್ರುಗಳಾಗಿರುವ ಈ ಮೂವರು ಭಾರತದಲ್ಲಿ ಮಿತ್ರರು! ಪ್ರತ್ಯೇಕವಾದದ ಮೂಲಬೇರು ಇವುಗಳೇ!


              ಪ್ರತ್ಯೇಕತಾವಾದಕ್ಕೆ ಸ್ವಾತಂತ್ರ್ಯ ಪೂರ್ವದ ಇತಿಹಾಸವಿದೆ. ಪ್ರತ್ಯೇಕತಾವಾದದ ಮನೋಭಾವದಿಂದಾಗಿಯೇ ಹುಟ್ಟಿ ಪ್ರತ್ಯೇಕತೆಯನ್ನು ಒಡಲಲ್ಲಿಟ್ಟುಕೊಂಡೇ ಬೆಳೆದು ಅಖಂಡ ಭಾರತವನ್ನು ತ್ರಿಖಂಡವನ್ನಾಗಿಸಿದ ಖ್ಯಾತಿ ಅಲಿಗಢ ಮುಸ್ಲಿಂ ವಿವಿಯದ್ದು. ಸ್ವಯಂ ಇತಿಹಾಸಕಾರರು ಎಂದು ಕರೆದುಕೊಂಡವರಿಂದ ಉದಾರವಾದಿ ಎಂದು ಹೊಗಳಲ್ಪಟ್ಟ ಅಲಿಗಢದ ಸ್ಥಾಪಕ ಸರ್ ಸೈಯ್ಯದ್ ಮೊಹಮದ್ ಖಾನನಿಗೆ 1885ರಲ್ಲಿ ಸ್ಥಾಪಿಸಲ್ಪಟ್ಟ "ಸೆಕ್ಯುಲರ್ ಕಾಂಗ್ರೆಸ್" ಹಿಂದೂ ಸಂಘಟನೆಯಾಗಿ ಕಂಡಿತು. 1898ರಲ್ಲಿ ಸಾಯುವ ಮೊದಲು ಮುಸ್ಲಿಂ ಲೀಗಿನ ಸ್ಥಾಪನೆಗೆ ಬುನಾದಿ ಹಾಕಿದ್ದನಾತ. "ವಂಗ ಭಂಗ"ವನ್ನು ಬೆಂಬಲಿಸಿತು ಮುಸ್ಲಿಂ ಲೀಗ್. ಸ್ವದೇಶಿ ವಸ್ತುಗಳ ಬಳಕೆ-ವಿದೇಶೀ ವಸ್ತುಗಳ ಬಹಿಷ್ಕಾರ ಚಳುವಳಿಯನ್ನು ವಿರೋಧಿಸಿತು. ಪ್ರತ್ಯೇಕ ಇಸ್ಲಾಂ ರಾಷ್ಟ್ರ ರಚನೆಗೆ ಬಲತಂದುಕೊಟ್ಟಿತು. ಆಧುನಿಕ ಶಿಕ್ಷಣದ ಮುಖವಾಡ ಹೊತ್ತಿದ್ದ ವಿಶ್ವವಿದ್ಯಾಲಯ ಮೂಲಭೂತವಾದಿಗಳ ಅರಮನೆಯಾಯಿತು. ಬೇಸತ್ತ ಕೆಲ ಸೌಮ್ಯ ಹಾಗೂ ಸುಧಾರಣಾವಾದಿ ಮುಸ್ಲಿಮರು ಇದರಿಂದ ಹೊರಬಂದು ಜಾಮಿಯಾ ಮಿಲಿಯಾ ಎಂಬ ವಿವಿಯೊಂದನ್ನು ಹುಟ್ಟುಹಾಕಿದರೆಂದರೆ ಅಲಿಘಢ ವಿವಿಯ ಭಾರತ ವಿರೋಧಿ ಚಟುವಟಿಕೆ ಯಾವ ಪರಿಯದ್ದಿರಬಹುದು?


                 ಮುಸ್ಲಿಂ ಲೀಗ್ ಸ್ಥಾಪನೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದ ಮತಭ್ರಾಂತ ಸಹೋದರರಾದ ಮಹಮ್ಮದ್ ಹಾಗೂ ಶೌಕತ್ ಓದಿದ್ದು ಅಲಿಗಢದಲ್ಲಿಯೇ! ಖಲೀಫನ ಅಧಿಕಾರ ನಿರಾತಂಕವಾಗಿ ಮುಂದುವರಿಯಬೇಕೆಂದು ಆಗ್ರಹಿಸಲು ಶುರುವಾದ ಖಿಲಾಫತ್ ಚಳುವಳಿಯನ್ನು ಅಲಿ ಸಹೋದರರು ಭಾರತದಲ್ಲೂ ಹುಟ್ಟುಹಾಕಿದರು. ಖಿಲಾಫತ್ತಿನ ವ್ಯಸನದಿಂದಾಗಿ ಮಲಬಾರಿನಿಂದ ಮುಲ್ತಾನಿನವರೆಗೆ ಹಿಂದೂಗಳು ಭೀಕರ ಅತ್ಯಾಚಾರಕ್ಕೊಳಗಾದರು. ಮಹಮ್ಮದ್ ಇಕ್ಬಾಲ್ ಮುಸ್ಲಿಂ ಲೀಗಿನ ಅಧ್ಯಕ್ಷನಾಗಿ 1930ರಲ್ಲಿ ನಡೆದ ಮುಸ್ಲಿಂ ಲೀಗಿನ ರಜತಸಂಭ್ರಮದಲ್ಲಿ ಪಂಜಾಬ್, ಸಿಂಧ್, ಬಲೂಚ್ ಗಳನ್ನೊಳಗೊಂಡ ಪ್ರತ್ಯೇಕ ಮುಸ್ಲಿಂ ರಾಷ್ಟ್ರದ ಕನಸನ್ನು ಬಿತ್ತಿದ. ಇದು ಮುಂದಕ್ಕೆ ಅಲಿಗಢ ಚಳುವಳಿಯಾಗಿ ಬೆಳೆಯಿತು. ರಹಮತ್ ಅಲಿ ಚೌಧರಿ "ಪಾಕಿಸ್ತಾನ್" ಎನ್ನುವ ಹೆಸರನ್ನೂ ಕೊಟ್ಟ. ಇಕ್ಬಾಲನ ಎಡೆಬಿಡದ ಪತ್ರಗಳು ಹಾಗೂ ತನ್ನ ರಾಷ್ಟ್ರೀಯವಾದಿ ಮನಸ್ಥಿತಿ&ಕಾರ್ಯದೆಡೆಗಿನ ಗಾಂಧೀ-ನೆಹರೂಗಳ ಅವಗಣನೆ ಜಿನ್ನಾನನ್ನು ಪ್ರತ್ಯೇಕತಾವಾದಿಯಾಗಿ ಮಾಡಿ ಇಕ್ಬಾಲನ ಕನಸನ್ನೂ ರಹಮತನ ಹೆಸರನ್ನೂ ಒಟ್ಟಿಗೆ ಸೇರಿಸಿತು. ವಿದ್ಯಾರ್ಥಿ ಶಕ್ತಿಯನ್ನು ಭಾರತ ವಿರೋಧಿ ಕಾರ್ಯಕ್ಕೆ ಬಳಸಿಕೊಂಡ ಜಿನ್ನಾ ಕರಾಳ ದಿನದ ಆಚರಣೆಗೆ ಕರೆ ನೀಡಿದ. 1946ರ ಆಗಸ್ಟ್ 16ರಂದು ನಡೆದ ನೇರ ಕಾರ್ಯಾಚರಣೆಯಲ್ಲಿ ಭಾಗವಹಿಸಿದವರು ಸ್ವತಂತ್ರ ಪಾಕಿಸ್ತಾನದ ಬ್ರೈನ್ ವಾಶ್ ಮಾಡಿಸಿಕೊಂಡ ವಿದ್ಯಾರ್ಥಿಗಳೇ. ಅವರು ದೂರದ ವಾಯವ್ಯ ಪ್ರಾಂತ್ಯಗಳಲ್ಲಿ ನಡೆದ ಹಿಂದು-ಸಿಕ್ಖರ ಮಾರಣಹೋಮದಲ್ಲೂ ಭಾಗವಹಿಸಿದ್ದರು. ಇವರಲ್ಲಿ ಅಂದಿನ ಅಲಿಗಢ ವಿವಿಯ ವಿದ್ಯಾರ್ಥಿಗಳದ್ದೇ ಸಿಂಹಪಾಲು. ಹೀಗೆ ಪಾಕಿಸ್ತಾನ ನಿರ್ಮಾಣ ಚಳವಳಿಯ ಬೌದ್ಧಿಕ ಕೇಂದ್ರವಾಗಿ ಅಲಿಗಢ ವಿವಿ ಕೆಲಸ ಮಾಡಿತು. ವಿಪರ್ಯಾಸವೆಂದರೆ ದೇಶವಿಭಜನೆಗೆ ಕಾರಣನಾದ ಮಹಮ್ಮದ್ ಇಕ್ಬಾಲ್ ಹೆಸರಲ್ಲಿ ಇಂದಿಗೂ ಪ್ರತಿವರ್ಷ ಉರ್ದು ಕವಿಗಳಿಗೆ ಪ್ರಶಸ್ತಿ ನೀಡಲಾಗುತ್ತಿದೆ!


                80 ಹಾಗೂ 90ರ ದಶಕದಲ್ಲಿ ಭಾರತದಲ್ಲಿ ಕೋಮುಗಲಭೆಗೆ ಕಾರಣವಾದ ಭಯೋತ್ಪಾದಕರ ಜೊತೆ ನಂಟು ಹೊಂದಿದ್ದ "ಸ್ಟೂಡೆಂಟ್ ಇಸ್ಲಾಮಿಕ್ ಮೂವ್ ಮೆಂಟ್ಸ್ ಆಫ್ ಇಂಡಿಯಾ"(ಸಿಮಿ) ಎಂಬ ದೇಶದ್ರೋಹಿ ಸಂಘಟನೆ ಅಲಿಗಢದ್ದೇ ಪಿಂಡ! 2008ರ ಮುಂಬಯಿ ಮೇಲಿನ ಭಯೋತ್ಪಾದನಾ ದಾಳಿಯ ರೂವಾರಿ ಹಫೀಜ್ ಸಯ್ಯದನ ಚಿಕ್ಕಪ್ಪ ಓದಿದ್ದು ಈ ವಿವಿಯಲ್ಲೇ. ಮೊದಲೇ ಮತಾಂಧವಾಗಿದ್ದ ಆತನ ಕುಟುಂಬ ಮುಸ್ಲಿಂ ಲೀಗನ್ನು ಬೆಂಬಲಿಸಿತ್ತು. ವಿಭಜನೆಯಾದಾಗ ಪಾಕಿಸ್ತಾನಕ್ಕೆ ತೆರಳಿದ ಮೇಲೂ ಈ ಕುಟುಂಬದ ಭಾರತ ದ್ವೇಷ ಆರಿರಲಿಲ್ಲ. ಅದು ಹಫೀಜ್ ರೂಪದಲ್ಲಿ ಭಾರತದ ಮೇಲೆರಗಿತು. ಕಳೆದ ಶತಮಾನದ ಆದಿ ಭಾಗದಲ್ಲಿ ಅಲಿಗಢ ವಿವಿಯಲ್ಲಿ ತನ್ನ ಶಿಕ್ಷಣವನ್ನು ಪೂರೈಸಿದ್ದ ಸ್ವಾತಂತ್ರ್ಯ ಹೋರಾಟಗಾರ ರಾಜಾ ಮಹೇಂದ್ರ ಪ್ರತಾಪ್ ಮುಂದೆ ಮೂರು ಎಕರೆಗಿಂತಲೂ ಹೆಚ್ಚು ಜಾಗವನ್ನು ದೇಣಿಗೆಯಾಗಿ ನೀಡಿದ್ದ. ಆದರೆ ಕಳೆದ ವರ್ಷ ಆತನ ಜನ್ಮದಿನಾಚರಣೆಯನ್ನು ಆಚರಿಸಲೇ ಈ ವಿದ್ಯಾಲಯ ನಿರಾಕರಿಸಿತು. ತಮ್ಮಲ್ಲೇ ವಿದ್ಯಾಭ್ಯಾಸ ಮಾಡಿದ್ದ, ವಿದ್ಯಾಲಯಕ್ಕೆ ದೇಣಿಗೆ ನೀಡಿದ್ದ, ದೇಶದ ಸ್ವಾತಂತ್ರ್ಯಕ್ಕಾಗಿ ತನ್ನದೆಲ್ಲವನ್ನೂ ಸಮರ್ಪಿಸಿದ್ದವನ ಜನ್ಮದಿನವನ್ನು ಆಚರಿಸಲು ಯಾವುದೇ ವಿದ್ಯಾಲಯವಾದರೂ ಹೆಮ್ಮೆ ಪಡಬೇಕು. ಅಂತಹ ದೇಶಭಕ್ತನಿಗೆ ಆತ "ಹಿಂದೂ" ಎನ್ನುವ ಒಂದೇ ಕಾರಣಕ್ಕೆ ಅವಮಾನ ಮಾಡುವ ಇಂತಹ ವಿದ್ಯಾಲಯಗಳು ಸಮಾಜಕ್ಕೆ ಎಂತಹ ವಿದ್ಯಾರ್ಥಿಗಳನ್ನು ರೂಪಿಸಿಕೊಡಬಹುದು? ಉಪನ್ಯಾಸಕರ ಮೇಲೆ ಹಲ್ಲೆ, ವಿದ್ಯಾರ್ಥಿ ಗುಂಪುಗಳ ನಡುವೆ ಘರ್ಷಣೆ, ಕುಲಪತಿಗಳಿಗೆ ಘೇರಾವ್, ಉಪನ್ಯಾಸಕರ ನಡುವೆ ಘರ್ಷಣೆ, ಹಣದ ದುರುಪಯೋಗ, ಕುಲಪತಿಗಳ ಬದಲಾವಣೆ, ಕೊಲೆ, ಕ್ಷುಲ್ಲಕ ಕಾರಣಕ್ಕೆ ಪ್ರತಿಭಟನೆ ಇವೆಲ್ಲಾ ಅಲಿಗಢ ವಿವಿಯ ದಿನಚರಿಯ ಭಾಗಗಳು! ಜೆ.ಎನ್.ಯು, ಜಾಧವಪುರ ವಿವಿಗಳು ಇದರ ಕೂಸುಗಳು ಅಷ್ಟೇ!


             "ಜಂಗ್ ರಹೇಗಿ ಜಂಗ್ ರಹೇಗಿ, ಭಾರತ್ ಕಿ ಬರ್ಬಾದಿ ತಕ್'. 'ಜಂಗ್ ರಹೇಗಿ ಜಂಗ್ ರಹೇಗಿ ಕಾಶ್ಮೀರ್ ಕಿ ಆಜಾದಿ ತಕ್', 'ಪಾಕಿಸ್ತಾನ್ ಜಿಂದಾಬಾದ್', 'ಗೋ ಬ್ಯಾಕ್ ಇಂಡಿಯಾ', 'ಭಾರತ್ ತೇರೇ ತುಕಡೇ ತುಕಡೇ ಕರ್ ದೇಂಗೆ', 'ಅಫ್ಜಲ್ ಹಮೆ ಶರ್ಮಿಂದಾ ಹೈ, ತೇರೇ ಕಾತಿಲ್ ಜಿಂದಾ ಹೈ' " ಎನ್ನುವ ಘೋಷಣೆ ಕೇವಲ ಜೆ.ಎನ್.ಯುನಲ್ಲಿ ಮಾತ್ರ ಮೊಳಗಿದ್ದಲ್ಲ. ರಾಷ್ಟ್ರದ ವಿವಿಧ ಶೈಕ್ಷಣಿಕ ಸಂಸ್ಥೆಗಳಲ್ಲಿ ಇಂತಹ ಘಟನೆಗಳು ನಡೆದಿವೆ. ಯಾಕುಬ್ ಮೆಮನ್, ಅಫ್ಜಲ್ಗುರು ಮುಂತಾದ ದೇಶದ್ರೋಹಿಗಳನ್ನು ಗಲ್ಲಿಗೇರಿಸಿದ ದಿನದ ವಾರ್ಷಿಕ ಆಚರಣೆ ಮಾಡಿ ಅವರಿಗೆ ಸಂತಾಪ ವ್ಯಕ್ತಪಡಿಸಲಾಗುತ್ತದೆ. ಜೆ.ಎನ್.ಯುನಲ್ಲಿ ಒಬ್ಬ ವಿದ್ಯಾರ್ಥಿಯ ಬೋಧನಾ ಶುಲ್ಕ ರೂ.217, ವೈದ್ಯಕೀಯ ಶುಲ್ಕ ರೂ.9, ಕ್ರೀಡಾಶುಲ್ಕ ರೂ.16, ಲೈಬ್ರರಿ ಶುಲ್ಕ ರೂ.16, ತಿಂಗಳ ಹಾಸ್ಟೆಲ್ ಶುಲ್ಕ ರೂ.20 ಮಾತ್ರ! ಹೀಗೆ ಒಟ್ಟು ಎಲ್ಲಾ ಶುಲ್ಕಗಳು ಸೇರಿ ವರ್ಷಕ್ಕೆ 400 ರೂ. ಕೂಡಾ ದಾಟುವುದಿಲ್ಲ. ಪಿಹೆಚ್ ಡಿ, ಎಂಫಿಲ್ ಮತ್ತು ಪ್ರೀ ಪಿಹೆಚ್ ಡಿ ವಿದ್ಯಾರ್ಥಿಗಳ ಭೋದನಾ ಶುಲ್ಕ ವಾರ್ಷಿಕ 240 ರೂಗಳು, ಅವರ ಕ್ರೀಡಾ ಶುಲ್ಕ 14 ರೂ, ಲಿಟರರಿ ಮತ್ತು ಕಲ್ಚರಲ್ ಶುಲ್ಕ 16 ರೂ. ಎಲ್ಲಾ ಶುಲ್ಕಗಳನ್ನು ಒಟ್ಟು ಸೇರಿಸಿದರೂ ವಾರ್ಷಿಕವಾಗಿ 500 ರೂ. ದಾಟುವುದಿಲ್ಲ. ಅಲ್ಲದೆ ಪ್ರತಿ ವಿದ್ಯಾರ್ಥಿಗೆ ರೂ. 3.00 ಲಕ್ಷ ರೂ. ಗಳನ್ನು ಸಬ್ಸಿಡಿ ರೂಪದಲ್ಲಿ ಸರ್ಕಾರ ಭರಿಸುತ್ತಿದೆ. ಅಂದರೆ ಸುಮಾರು 255 ಕೋಟಿ ರೂ.ಗಳು ಈ ರೂಪದಲ್ಲಿ ವ್ಯರ್ಥವಾಗುತ್ತಿದೆ. ಈ ಸಬ್ಸಿಡಿ, ಈ ಅನುದಾನ ಎಲ್ಲಾ ನಮ್ಮ ನಿಮ್ಮೆಲ್ಲರ ತೆರಿಗೆ ಹಣ. ಇಷ್ಟೆಲ್ಲವನ್ನೂ ಪಡೆದುಕೊಳ್ಳುವ ಜೆ ಎನ್ ಯು ನ ಕೆಲವು ವಿದ್ಯಾರ್ಥಿಗಳು ದೇಶಕ್ಕೆ ಮರಳಿ ನೀಡುತ್ತಿರುವುದು ಇಂಡಿಯಾ ಗೋ ಬ್ಯಾಕ್ ಘೋಷಣೆ! ಇದು ಇತ್ತೀಚಿನ ಬೆಳವಣಿಗೆಯಲ್ಲ, ವಿದ್ಯಾಲಯದ ಹುಟ್ಟಿನಿಂದಲೇ ಬಂದ ಜಾಡ್ಯವಾಗಿದೆ. ಏಪ್ರಿಲ್, 2000ದಲ್ಲಿ ಇದೇ ವಿವಿ ಅಹಮದ್ ಫರಾಜ್ ಮತ್ತು ಫಾಮಿದಾ ರಿಯಾಜ್ ಎಂಬ ಇಬ್ಬರು ಪಾಕಿಸ್ತಾನದ ಕವಿಗಳನ್ನು  ಆಹ್ವಾನಿಸಿ ಕಾರ್ಯಕ್ರಮ ಏರ್ಪಡಿಸಿದ್ದರು. ಈ ಕಾರ್ಯಕ್ರಮದಲ್ಲಿ ಭಾರತದ ಇಬ್ಬರು ಸೇನಾಧಿಕಾರಿಗಳೂ ಭಾಗವಹಿಸಿದ್ದರು. ಕಾರ್ಗಿಲ್ ಯುದ್ಧದ ಬಿಸಿ ಆರುತ್ತಿದ್ದ ದಿನಗಳವು. ಕಾರ್ಯಕ್ರಮದಲ್ಲಿ ಭಾರತವಿರೋಧಿ ಕಲಾಪಗಳಿದ್ದುದನ್ನು ಗಮನಿಸಿದ ಸೇನಾಧಿಕಾರಿಗಳು ಭಾರತವಿರೋಧಿ ಅಂಶಗಳ ಬಗ್ಗೆ ಪ್ರತಿಭಟಿಸಿದರು. ಪ್ರತಿಭಟಿಸಿದ್ದಕ್ಕಾಗಿ ಅವರುಗಳ ಮೇಲೆ ಹಲ್ಲೆ ನಡೆಯಿತು. ಒಬ್ಬ ಸೇನಾಧಿಕಾರಿ ಗಾಳಿಯಲ್ಲಿ ಗುಂಡು ಹಾರಿಸಿದ್ದರಿಂದಾಗಿ ಅವರಿಬ್ಬರು ಅಲ್ಲಿಂದ ಬಚಾವಾಗಿ ಬಂದರು. 2010ರಲ್ಲಿ ಛತ್ತೀಸಘಡ ರಾಜ್ಯದ ದಾಂತೆವಾಡ ಜಿಲ್ಲೆಯ ಚಿಂತಲ್ನಾರ್ ಗ್ರಾಮದ ಬಳಿ 300 ಜನ ನಕ್ಸಲರ ತಂಡ ನೆಲಬಾಂಬು ಉಡಾಯಿಸಿ 76 ಪೋಲಿಸರ ಹತ್ಯೆಗೈದಿದ್ದರು. ಆಗ ಇದೇ ವಿವಿಯಲ್ಲಿ 'ಜೆ.ಎನ್.ಯು. ಫೋರಮ್ ಅಗೆನೆಸ್ಟ್ ವಾರ್ ಆನ್ ಪೀಪಲ್' ಹೆಸರಿನಲ್ಲಿ ಒಂದು ಸಭೆ ಏರ್ಪಡಿಸಿ ಸಿ.ಆರ್.ಪಿ.ಎಫ್. ಜವಾನರ ಹತ್ಯೆಯನ್ನು ಸಿಹಿ ಹಂಚಿ ಸಂಭ್ರಮಿಸಿದ್ದರು. ಆಗ ಅವರುಗಳು ಕೂಗಿದ್ದ ಘೋಷಣೆಗಳು - 'ಇಂಡಿಯ ಮುರ್ದಾಬಾದ್', 'ಮಾವೋವಾದ್ ಜಿಂದಾಬಾದ್'!


              ಗುಪ್ತಚರ ವರದಿಯ ಪ್ರಕಾರ ಭಾರತದಲ್ಲಿ 15 ಸಾವಿರಕ್ಕೂ ಹೆಚ್ಚು ಬಂದೂಕುಧಾರಿ ಮಾವೋವಾದಿಗಳಿದ್ದಾರೆ. 16 ರಾಜ್ಯಗಳ 170 ಜಿಲ್ಲೆಗಳಲ್ಲಿ ಅವರು ಕ್ರಿಯಾಶೀಲರಾಗಿದ್ದಾರೆ. ನೇಪಾಳದಿಂದ ಕೇರಳದವರೆಗೆ ರೆಡ್ ಕಾರಿಡಾರಿಗೆ ಬೇಕಾದ ರಾಜಮಾರ್ಗವನ್ನು  ಅವರು ಮಾಡಿಕೊಂಡಿದ್ದಾರೆ. ಹಾಂ.. ಮೊನ್ನೆ ಜೆ.ಎನ್.ಯುನಲ್ಲಿ ದೇಶ ತುಂಡರಿಸುವ ವಾಗ್ಝರಿಯ ಕಾರ್ಯಕ್ರಮವನ್ನು ಆಯೋಜಿಸಿದ್ದು ಡೆಮೊಕ್ರ್ಯಾಟಿಕ್ ಸ್ಟುಡೆಂಟ್ಸ್ ಯುನಿಯನ್ ಎಂಬ ಮಾವೋವಾದಿ ಸಂಘಟನೆ! ಈ ರೆಡ್ ಕಾರಿಡಾರಿನಲ್ಲಿ ಬರುವ ಎಲ್ಲಾ ರಾಜ್ಯಗಳು ಕ್ರಿಶ್ಚಿಯನ್ ಇವ್ಯಾಂಜಲಿಸಂನ ಬಹುಮುಖ್ಯ ಕೇಂದ್ರಗಳೇ! ಈ ಭಾಗದಲ್ಲೆಲ್ಲಾ ನಕ್ಸಲರ ದರ್ಪ ಹೇಗಿದೆಯೆಂದರೆ ಸ್ವತಃ ಪೊಲೀಸರೂ ಅನೇಕ ಕಡೆಗಳಲ್ಲಿ ಹಳ್ಳಿಗಳಿಗೆ ಹೋಗಲು ಹೆದರುತ್ತಾರೆ. ಅಲ್ಲೆಲ್ಲಾ ಸಶಸ್ತ್ರ ನಕ್ಸಲ್ ಪಡೆ ಮತಾಂತರಿಗಳನ್ನು ತಮ್ಮೊಂದಿಗೆ ಒಯ್ದು ಜನರ ತಲೆ ತಿರುಗಿಸುತ್ತಾರೆ. ಈ ಎರಡು ದೇಶ ವಿರೋಧಿ ಶಕ್ತಿಗಳೊಂದಿಗೆ ಕೈ ಜೋಡಿಸಿರುವ ಮತ್ತೊಂದು ಬಳಗ ಜಿಹಾದಿಗಳದ್ದು. ಅಂತರರಾಷ್ಟ್ರೀಯ ಗುಪ್ತಚರ ವರದಿಯ ನಕ್ಸಲರಿಗೆ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿರುವುದು ಪಾಕ್ ಬೆಂಬಲಿತ ಭಯೋತ್ಪಾದಕ ಸಂಘಟನೆಗಳೇ! ತಮ್ಮ ಕ್ರೌರ್ಯಕ್ಕೆ ಬೌದ್ಧಿಕ ಭದ್ರತೆಯನ್ನು ಒದಗಿಸಿಕೊಳ್ಳುವುದಕ್ಕಾಗಿ ಮಾವೋವಾದಿಗಳು, ಜಿಹಾದಿಗಳು, ಮಿಷನರಿಗಳು ಕಂಡುಕೊಂಡ ದಾರಿಯೇ ಭಾರತದ ಶಿಕ್ಷಣ ಕ್ಷೇತ್ರ. ಸ್ವಾತಂತ್ರ್ಯದ ಕಾಲದಿಂದಲೂ ಈ ದೇಶದ ಶಿಕ್ಷಣ ಎಡಪಂಥಿಯರ ಕೈಯಲ್ಲೇ ಇತ್ತು. ಸ್ವತಃ ನೆಹರೂ ಈ ಪಂಥದ ಆರಾಧಕರಾಗಿದ್ದರಿಂದ ವಿಶ್ವವಿದ್ಯಾಲಯಗಳಲ್ಲಿ, ಶಿಕ್ಷಣ ಕ್ಷೇತ್ರಗಳಲ್ಲೆಲ್ಲಾ ಅವರುಗಳೇ ತುಂಬಿಕೊಂಡರು. ಮೆಕಾಲೆ ಪ್ರಣೀತ ಶಿಕ್ಷಣವನ್ನೇ ಮತ್ತೊಮ್ಮೆ ಉರು ಹೊಡಿಸಲು ಇವರು ಸಿದ್ಧರಾಗಿ ನಿಂತರು. ನಾವು ಕಟ್ಟಿದ ತೆರಿಗೆಯಿಂದ ಬೆಳೆದು ನಮ್ಮ ಮೇಲೇ ಎರಗುವ ಗೋಮುಖವ್ಯಾಘ್ರಗಳನ್ನು ಬೆಳೆಸಿದರು. ಜೆ.ಎನ್.ಯು ಬಂದು ಸೇರಿಕೊಂಡ, ಈಗಲೂ ಪ್ರೊಫೆಸರ್ ಎಮೆರಿಟಾ ಗೌರವ ಪಡೆದು ಇಲ್ಲಿಯೇ ತಳವೂರಿರುವ ರೋಮಿಲಾ ಥಾಪರ್ ಎಡಚರ ಪಾಲಿಗೆ ಶ್ರೇಷ್ಠ ಇತಿಹಾಸ ಲೇಖಕಿ. ಆಕೆಯ ಇತಿಹಾಸ ಕೃತಿಗಳಲ್ಲಿರುವುದು ಭಾರತ ವಿರೋಧಿ ಧೋರಣೆ, ಮಾರ್ಕ್ಸ್ ಚಿಂತನೆಯೇ! ಆಕೆಯ ಇತಿಹಾಸ ಪುಸ್ತಕಗಳನ್ನು ಆಧರಿಸಿ ಇವತ್ತಿಗೂ ಪಠ್ಯಪುಸ್ತಕಗಳನ್ನು ರಚಿಸಲಾಗುತ್ತದೆ, ತರಗತಿಗಳಲ್ಲಿ ಬೋಧಿಸಲಾಗುತ್ತದೆ. ಅದರಿಂದಾಗಿಯೇ ಜಗತ್ತೆಲ್ಲಾ ಧಿಕ್ಕರಿಸಿದ ಮೇಲೂ ಆರ್ಯ ಆಕ್ರಮಣವೆಂಬ ಪೊಳ್ಳುವಾದ ಭಾರತದಲ್ಲಿ ಮೆರೆದಾಡುತ್ತಿದೆ. ಈಕೆಯಂಥವರು ತುಂಬಿದ ನಂಜನ್ನುಂಡು ಬೆಳೆಯುವ ವಿದ್ಯಾರ್ಥಿಗಳು ವ್ಯವಸ್ಥೆಯ ಭಾಗವಾದಾಗ ವಿಷ ಎಲ್ಲೆಡೆ ಹರಡಿಕೊಳ್ಳುತ್ತದೆ. ಪತ್ರಿಕೆ-ಸಿನಿಮಾ-ಸಾಹಿತ್ಯ-ದೃಶ್ಯ ಮಾಧ್ಯಮಗಳಲ್ಲಿ ಇವರದ್ದೇ ಕಾರುಬಾರು.


               ದೇಶ ವಿರೋಧಿ ಕೃತ್ಯಗಳನ್ನು ಎಸಗಿದಾಗ ಅದರ ಪರವಾಗಿ ವಾದಿಸಲು ಎಡಪಂಥದ ಚಿಂತಕರ ಪಟಾಲಂ ಸಿದ್ಧವಾಗಿಯೇ ಇರುತ್ತದೆ. ಅವರ ನಾಜೂಕಿನ ಆಂಗ್ಲಭಾಷೆಯ ಮಾತಿನ ಚಾತುರ್ಯವನ್ನು ಅಂತಹುದೇ ಶಿಕ್ಷಣ ಪಡೆದ ನಮ್ಮ ಸಾಮಾನ್ಯ ದೇಶವಾಸಿಗಳು ಕೇಳಿದೊಡನೆ ಮರುಳಾಗಿ ಸತ್ಯವೆಂದೇ ನಂಬಿ ಬಿಡುತ್ತಾರೆ. ವೈಚಾರಿಕ ಮತಾಂತರವೆಂದರೆ ಇದೇ. ಈಗ ಜೆ.ಎನ್.ಯು, ಜಾಧವಪುರಗಳಲ್ಲಿ ಆಗುತ್ತಿರುವುದು ಅದೇ! ಸ್ವತಂತ್ರ ಭಾರತದ ಸಾರ್ವಭೌಮತ್ವವನ್ನು ಎತ್ತಿ ಹಿಡಿಯುವ ಸಂಸತ್ತಿನ ಮೇಲೆ ದಾಳಿ ಮಾಡಿದ್ದ ಉಗ್ರ ಅಫ್ಜಲ್ ಕುರಿತು ಸಹಾನುಭೂತಿ ಹಾಗೂ ಅವನ ಭಾರತವಿರೋಧಿ ನಿಲುವನ್ನು ಸಮರ್ಥಿಸುವ ವಿದ್ಯಾರ್ಥಿಗಳು ಈ ವಿವಿಗಳಲ್ಲಿದ್ದಾರೆ. ಹಾಗೆಯೇ ಅವರ ವರ್ತನೆಯನ್ನು ಗಂಭೀರವಾಗಿ ಸ್ವೀಕರಿಸಿ ಅದೊಂದು ರೀತಿಯಲ್ಲಿ ಪ್ರಜಾಪ್ರಭುತ್ವದೊಳಗೇ ಇರುವ 'ಬಂಡಾಯ' ಎಂದು ವ್ಯಾಖ್ಯಾನಿಸುವ ಅಧ್ಯಾಪಕರೂ ಅಲ್ಲೇ ಇದ್ದಾರೆ.  ಎಲ್ಲೆಲ್ಲಾ ಮುಸಲ್ಮಾನರು ಜಾಸ್ತಿ ಇದ್ದಾರೋ ಅಲ್ಲೆಲ್ಲಾ ಪಾಕಿಸ್ತಾನಗಳು ಜನ್ಮ ತಳೆಯಬೇಕೆಂಬ ಜಿನ್ನಾ ಕನಸು ಪೂರ್ಣವಾಗಿ ಕೊನೆ ಉಸಿರು ಎಳೆದಿಲ್ಲ ಎನ್ನುವುದಕ್ಕೆ ಹೈದರಾಬಾದ್ ಕೇಂದ್ರೀಯ ವಿವಿ, ಜೆಎನ್ಯು, ಜಾಧವಪುರ ವಿವಿಯೊಳಗೆ ಭಾರತದ ಅಖಂಡತೆ , ಸಾರ್ವಭೌಮತೆಯ ವಿರುದ್ಧ ಬೇಯುತ್ತಿರುವ ಅಡುಗೆಯೇ ಸಾಕ್ಷಿ!


ಶುಕ್ರವಾರ, ಮಾರ್ಚ್ 11, 2016

ರಾಷ್ಟ್ರೀಯತೆಯನ್ನು ಸೆಕ್ಯುಲರ್ ಮಾಡ ಹೊರಟ "ನವರಾಷ್ಟ್ರವಾದ"

ರಾಷ್ಟ್ರೀಯತೆಯನ್ನು ಸೆಕ್ಯುಲರ್ ಮಾಡ ಹೊರಟ "ನವರಾಷ್ಟ್ರವಾದ"


                     ವೈಚಾರಿಕಾ ವ್ಯಭಿಚಾರಿಗಳ ಅಸಹಿಷ್ಣು ಆಂದೋಲನವೆಂಬ ನಾಟಕದ ವಿರುದ್ಧ ಬೃಹತ್ ಜಾಥಾವನ್ನೇ ಕೈಗೊಂಡು ದೇಶದ ಸಾಮಾನ್ಯ ಜನತೆಯ ಗಮನ ಸೆಳೆದವರು ಅನುಪಮ್ ಖೇರ್. ಅಸಹಿಷ್ಣುತಾವಾದಿಗಳ ಢೋಂಗಿತನವನ್ನು, ಎಡಬಿಡಂಗಿತನವನ್ನು ಬಟಾಬಯಲು ಮಾಡಿ ರಾಷ್ಟ್ರೀಯವಾದಿಗಳಿಂದ ಭೇಷ್ ಅನ್ನಿಸಿಕೊಂಡು ಅಸಹಿಷ್ಣುತಾವಾದಿಗಳ ಅಸಹಿಷ್ಣುತೆಗೆ ಬಲಿಯಾದವರು ಅವರು. ಪ್ರತಿಯೊಂದು ಹಂತದಲ್ಲೂ ಬುಜೀಗಳ ಅರಚಾಟಕ್ಕೆ ತಕ್ಕ ಉತ್ತರ ನೀಡಿ ಪ್ರಸಕ್ತ ಕೇಂದ್ರ ಸರಕಾರದ ರಕ್ಷಣೆಗೆ ಹಲವು ಬಾರಿ ಧಾವಿಸಿದ್ದಾರೆ ಖೇರ್. ಇದಕ್ಕೆ ಅವರ ಪತ್ನಿ ಭಾಜಪಾ ಸಂಸದೆಯಾಗಿರುವುದೂ ಕಾರಣವಾಗಿರಬಹುದು ಅಥವಾ ಅದು ಸಾಮಾನ್ಯ ಭಾರತೀಯನ ದೇಶಪ್ರೇಮದ ಸೌಗಂಧದ ಸ್ಪುರಣವೂ ಆಗಿರಬಹುದು. ಆದರೆ ಅಂತಹ ಅನುಪಮ್ ಖೇರ್ ಎಡವಟ್ಟೊಂದನ್ನು ಮಾಡಿಕೊಂಡಿದ್ದಾರೆ. ಟೆಲಿಗ್ರಾಫ್ ರಾಷ್ಟ್ರೀಯ ಸಮ್ಮೇಳನದಲ್ಲಿ ಅಸಹಿಷ್ಣುತೆಯ ಬಗ್ಗೆ ನಡೆದ ಚರ್ಚೆಯಲ್ಲಿ ಮಾತಿನ ಭರದಲ್ಲಿ "ಬಾಯಿಗೆ ಬಂದಂತೆ ಅಸಂಬದ್ಧ ಮಾತುಗಳನ್ನಾಡುವ ಸಾಧ್ವಿ, ಯೋಗಿಗಳನ್ನು ಭಾಜಪಾದಿಂದ ಕಿತ್ತೆಸೆಯಬೇಕು, ಜೈಲಿಗೆ ಹಾಕಬೇಕು" ಎಂದಿದ್ದು ಅಲ್ಲೋಲಕಲ್ಲೋಲವನ್ನೇ ಸೃಷ್ಟಿ ಮಾಡಿದೆ. ಅವರು ಯಾರನ್ನೂ ನೇರವಾಗಿ ಉಲ್ಲೇಖ ಮಾಡಲಿಲ್ಲವಾದರೂ ಜಗಳ ಹಚ್ಚಿಡುವಲ್ಲಿ ಸದಾ ನಿರತವಾದ ಮಾಧ್ಯಮಗಳು ಅನುಪಮ್ ಉಲ್ಲೇಖಿಸಿದ್ದು ಯೋಗಿ ಆದಿತ್ಯನಾಥ್, ಸಾಧ್ವಿ ಪ್ರಾಚೀಯವರನ್ನು ಎಂಬಂತೆ ಬಿಂಬಿಸಿವೆ. ಕೆರಳಿದ ಯೋಗಿ ಆದಿತ್ಯನಾಥ್ ಹಾಗೂ ಸಾಧ್ವಿ ಪ್ರಾಚೀ ಸಹಜವಾಗೇ ಕಿಡಿಕಾರಿದ್ದಾರೆ. ಅನುಪಮ್ ತೆರೆಯ ಮೇಲೂ ನಿಜ ಜೀವನದಲ್ಲೂ ಖಳನಾಯಕರಂತೆಯೇ ವರ್ತಿಸುತ್ತಿದ್ದಾರೆ ಎಂದಿದ್ದು ಮಾಧ್ಯಮಗಳಿಗೆ ಆಜ್ಯವಾಗಿ ದೊರಕಿದೆ.

               ಅನುಪಮ್ ಖೇರ್ ತನ್ನ ಭಾಷಣದಲ್ಲಿ ಯೋಗಿ ಆದಿತ್ಯನಾಥ್ ಅವರನ್ನೇ ಉಲ್ಲೇಖಿಸಿದರೋ ಇಲ್ಲವೋ ಅಥವಾ ಅದು ಮಾಧ್ಯಮಗಳ ಸೃಷ್ಟಿಯೋ ಎನ್ನುವುದರ ಸ್ಪಷ್ಟನೆ ಅವರಿಂದಲೇ ಬರಬೇಕು.. ಒಂದು ವೇಳೆ ಖೇರ್ ಗುರಿ ಆದಿತ್ಯನಾಥ್ ಅವರೇ ಆಗಿದ್ದಲ್ಲಿ ಅನುಪಮ್ ಮಾಡಿದ್ದು ಬಹುದೊಡ್ಡ ತಪ್ಪು! ಯೋಗಿ ಆದಿತ್ಯನಾಥ್ ಅವರ ಕೃತಿಗಳನ್ನು ಸ್ವತಃ ಕಣ್ಣಾರೆ ನೋಡಿದ್ದರೆ ಖೇರ್ ಈ ಮಾತುಗಳನ್ನು ಆಡುತ್ತಿರಲಿಲ್ಲ. ಗೋಕಳ್ಳತನ, ಲವ್ ಜಿಹಾದ್ಗಳು ತಾರಕಕ್ಕೇರಿದ್ದ ಕಾಲದಲ್ಲಿ ಗೋರಖ್ ಪುರದ ಪೀಠವನ್ನೇರಿದವರು ಯೋಗಿ ಆದಿತ್ಯನಾಥ್. ಬಿ.ಎಸ್.ಸಿ ಪದವೀಧರರೂ ಆಗಿದ್ದ ಇಪ್ಪತ್ತೆರಡು ವರ್ಷದ ಈ ಕ್ಷತ್ರಿಯ ಯುವಕನ ಪೂರ್ವಾಶ್ರಮದ ಹೆಸರು ಅಜಯ್ ಸಿಂಗ್. ಕುಶಲ ಸಂಘಟಕರಾಗಿದ್ದ ಆದಿತ್ಯನಾಥರ ಮೇಲ್ವಿಚಾರಣೆಯಲ್ಲಿ ಗೋರಖ್ ಪುರ ತನ್ನ ಹಿಂದಿನ ಖದರನ್ನು ಮರಳಿ ಪಡೆಯತೊಡಗಿತು. ನಿಸ್ವಾರ್ಥ ಸೇವೆ, ಧಾರ್ಮಿಕ ಶಿಕ್ಷಣ, ಸಕಲರಿಗೂ ಸಿಗಬಹುದಾದ ವೈದ್ಯಕೀಯ ಸೇವೆ, ಸಾಮೂಹಿಕ ಸಹಭೋಜನ, ಸರ್ವರಿಗೂ ಶಿಕ್ಷಣದ ಮೂಲಕ ಹಿಂದೂ ಸಮಾಜವನ್ನು ಬೆಸೆದರು. ಅಕ್ರಮವಾಗಿ ಬೇರೂರಿದ್ದ ಇಸ್ಲಾಂ ಕುರುಹುಗಳನ್ನು ಕಿತ್ತೆಸೆದರು. ಮುಸ್ಲಿಮರ ಪುಂಡಾಟಕ್ಕೆ ತಕ್ಕ ಉತ್ತರವನ್ನು ನೀಡಿ ಹಿಂದೂಗಳ ತಂಟೆಗೆ ಬಂದರೆ ಉಳಿಗಾಲವಿಲ್ಲವೆಂದು ಬಹಿರಂಗವಾಗಿ ಸಾರಿದರು. ಗೆದ್ದಲು ಹುಳುಗಳಂತೆ ಹಿಂದೂಸಮಾಜದೊಳಗೆ ನುಗ್ಗಿ ಮತಾಂತರ ಮಾಡುತ್ತಿದ್ದ ಕ್ರೈಸ್ತ ಪಾದ್ರಿಗಳ ನಡು ಮುರಿದರು. ಮತಾಂತರಗೊಂಡವರನ್ನು ಮರಳಿ ಮಾತೃಧರ್ಮಕ್ಕೆ ಬರಮಾಡಿಕೊಂಡರು. 2005ರಲ್ಲಿ 5000ದಲಿತರನ್ನು ಮರಳಿ ಮಾತೃಧರ್ಮಕ್ಕೆ ಕರೆತಂದಾಗ ಎದುರಾದ ಬೃಹತ್ ವಿರೋಧಕ್ಕೆ ಬಗ್ಗದೆ ತಮ್ಮ ಹಿಂದೂಪರ ನಿಲುವನ್ನು ಸಮರ್ಥಿಸಿಕೊಂಡರು. ಇವತ್ತು ಗೋರಖ್ ಪುರ "ಗೋರಿ ಪುರ"ವಾಗದೆ ಶಿವಕ್ಷೇತ್ರವಾಗಿಯೇ ಉಳಿದಿದೆಯೆಂದಾದರೆ ಅದಕ್ಕೆ ಕಾರಣ ಯೋಗಿ ಆದಿತ್ಯನಾಥರು. ಆಡಿದ ಮಾತು ಮಾಡಿದ ಕೃತಿಗಳ ನಡುವಿನ ಸಾಮ್ಯತೆಯಿಂದಾಗಿಯೇ ಕೇವಲ ಇಪ್ಪತ್ತಾರು ವರ್ಷಕ್ಕೆ ಸಂಸದರಾದ ಆದಿತ್ಯನಾಥ್ 1999ರಿಂದ ಸತತವಾಗಿ ಅಗಾಧ ಅಂತರದಿಂದ ಗೆದ್ದು ಬರುವುದಕ್ಕೆ ಸಾಧ್ಯವಾಗಿದೆ. ಇಂತಹ ಕಾರ್ಯಗಳೆಲ್ಲ ಚಲನಚಿತ್ರಗಳಲ್ಲಷ್ಟೇ ಎಂದುಕೊಳ್ಳುವ, ಸಾಮಾನ್ಯ ಜನರೊಡನೆ ಒಡನಾಟವಿಲ್ಲದ ಅನುಪಮ್ ಖೇರ್'ಗೆ ಇದೆಲ್ಲಾ ಹೇಗೆ ಅರ್ಥವಾದೀತು?

              ರಾಷ್ಟ್ರೀಯತೆಯ ಬಗ್ಗೆಯಾಗಲೀ, ಹಿಂದುತ್ವದ ಬಗ್ಗೆಯಾಗಲೀ ಅನುಪಮರಿಂದ ಪಾಠ ಹೇಳಿಸಿಕೊಳ್ಳಬೇಕಾದ ಅನಿವಾರ್ಯತೆ ಯೋಗಿಗಿಲ್ಲ. ಹಿಂದುತ್ವವನ್ನು ರಾಷ್ಟ್ರೀಯತೆಯಿಂದ ಹೊರಗಿಡುವ ತಪ್ಪನ್ನು ಮಾಡಿದರೆ ಸಾಯುವುದು ರಾಷ್ಟ್ರೀಯತೆಯೇ ಹೊರತು ಹಿಂದುತ್ವವಲ್ಲ. ಅಷ್ಟಕ್ಕೂ ರಾಷ್ಟ್ರೀಯತೆಯೆಂದರೇನು? ರಾಷ್ಟ್ರ ಎನ್ನುವ ಪರಿಕಲ್ಪನೆಯನ್ನು ಕೊಟ್ಟದ್ದೇ ಸನಾತನ ಧರ್ಮ. ರಾಷ್ಟ್ರವಿಲ್ಲದೇ ಇದ್ದರೆ ರಾಷ್ಟ್ರೀಯತೆ ಎಲ್ಲಿಂದ ಹುಟ್ಟೀತು? ರಾಷ್ಟ್ರವೆಂದರೆ ಬರಿಯ ಕಲ್ಲುಮಣ್ಣುಗಳ ಭೂಭಾಗವಲ್ಲ. ರಾಷ್ಟ್ರ ಎಂದರೆ ಭೂಮಿಯ ಒಂದು ತುಂಡಾಗಲಿ, ಜನತೆಯ ಒಂದು ಗುಂಪಾಗಲಿ ಅಲ್ಲ. ಅದೊಂದು ಸಜೀವ ಸೃಷ್ಟಿ. ಒಂದೇ ಪರಂಪರೆ, ಇತಿಹಾಸ, ಒಂದೇ ಬಗೆಯ ಆಸೆ ಆಕಾಂಕ್ಷೆಗಳು, ಸುಖ ದುಃಖಗಳು, ಒಂದೇ ಶತ್ರು ಮಿತ್ರ ಭಾವನೆ ಹೊಂದಿ, ಒಂದು ನಿರ್ದಿಷ್ಟ ನೈಸರ್ಗಿಕ ಮೇರೆಗಳನ್ನುಳ್ಳ ಭೂಭಾಗದಲ್ಲಿ ಮಕ್ಕಳಂತೆ ಬೆಳೆದು ಬರುವ ಜನಾಂಗವೇ ಒಂದು ರಾಷ್ಟ್ರ. ವರ್ತಮಾನ ಕಾಲದ ಕೇವಲ ಉದ್ದಗಲಗಳ ಗುಣಾಕಾರಕ್ಕೆ ರಾಷ್ಟ್ರ ಒಳಪಡುವುದಿಲ್ಲ. ಭೂತದ ಇತಿಹಾಸ, ಪರಂಪರೆಗಳ ಆಳ ಅದಕ್ಕಿರುತ್ತದೆ. ವಾಸ್ತವಿಕವಾಗಿ ಭಾರತ ಎಂಬ ಹೆಸರೇ ಇದು ನಮ್ಮ ತಾಯಿ ಎಂದು ಸೂಚಿಸುತ್ತದೆ. ತಮ್ಮ ಮೂಲವನ್ನು ಮೆಕ್ಕಾ-ಮದೀನಾ-ವ್ಯಾಟಿಕನ್ನಿನಲ್ಲಿ ನೋಡುವವರ್ಯಾರು ಈ "ರಾಷ್ಟ್ರ"ವನ್ನು ತಾಯಿಯೆಂದು ಪೂಜಿಸಲಾರರು. ಭಾರತವನ್ನು ದೇಶವೆಂದೇ ಪರಿಗಣಿಸದ ಕಮ್ಯೂನಿಷ್ಟರಿಗೆ ಭಾರತ ರಾಷ್ಟ್ರವಾಗಿ ಹೇಗೆ ಗೋಚರಿಸೀತು? ರಾಷ್ಟ್ರವೆಂದರೆ ಸಂಸ್ಕೃತಿಯ ಪ್ರವಾಹ. ಆ ಸಂಸ್ಕೃತಿಯನ್ನು ನಾಶವಾಗದಂತೆ ತಡೆಯುವುದೂ ರಾಷ್ಟ್ರರಕ್ಷಣೆಯೇ. ಆ ಕೆಲಸವನ್ನೇ ಯೋಗಿ ಆದಿತ್ಯನಾಥ್ ಮಾಡುತ್ತಿರುವುದು. ಇದು ಎಡಪಂಥೀಯರ ಕಣ್ಣಿಗೆ ಉಗ್ರಹಿಂದುತ್ವದಂತೆ ರಾಚಿ ತಮ್ಮ ಬುಡಕ್ಕೆ ಬಿಸಿನೀರು ಬೀಳುತ್ತಿರುವುದನ್ನು ಕಂಡು ಅವರು ಅಬ್ಬರಿಸುತ್ತಾರೆ. ಅನುಪಮರಂತಹ ನವರಾಷ್ಟ್ರವಾದಿಗಳಿಗೆ ಈ ಬೊಬ್ಬೆಯೇ ಕೇಳುತ್ತದೆಯೇ ಹೊರತು ಆದಿತ್ಯನಾಥರ ಕಾರ್ಯದ ಮಹತ್ವ ಅರ್ಥವಾಗುವುದಿಲ್ಲ.

              ನೇರವಾಗಿ ಹಿಂದೂಧರ್ಮವನ್ನು ನಾಶಪಡಿಸಲು ಸಾಧ್ಯವಾಗದೇ ಇದ್ದಾಗ ಮತಾಂತರಿಗಳು ಹಿಡಿದದ್ದು ಅಡ್ಡ ಮಾರ್ಗ. ಅದಕ್ಕಾಗಿ ಅವರು ಸಮಾಜದ ಎಲ್ಲಾ ಕ್ಷೇತ್ರಗಳಲ್ಲೂ ಕೈಯಾಡಿಸಿದರು. ಭಾರತದ ಇತಿಹಾಸವನ್ನೇ ಬುಡಮೇಲು ಮಾಡಲು ನೋಡಿದರು. ಭಾರತೀಯ ಕಲೆಗಳನ್ನು ಕಲಿತು ಕಲಸುಮೇಲೋಗರವನ್ನಾಗಿಸಿ ಶಿಲುಬೆ-ಇಸ್ಲಾಮಿನ "ಕಲೆ" ಉಳಿಸಿ ಹೋದರು. ಇದು ನಮ್ಮ ಸೆಕ್ಯುಲರ್ ಇತಿಹಾಸಕಾರರ ಕಣ್ಣಿಗೆ "ಸಮನ್ವಯ ರಚನೆ"ಯಾಗಿ ಕಂಡಿತು. ವಿಪರ್ಯಾಸವೆಂದರೆ ವೈಭವದ ಶಿಖರವೇರಿದ್ದ ನಮ್ಮ ಆಧ್ಯಾತ್ಮಿಕ ಕೇಂದ್ರಗಳನ್ನು ನಾಶಪಡಿಸಿ ಅವುಗಳ ಅಸ್ಥಿಗಳನ್ನು ಉಪಯೋಗಿಸಿ ಮಾಡಿದ ರಚನೆಗಳು ನಮಗೆ ಸಹಿಷ್ಣುತೆಯ ಆಗರವಾಗಿ, ಹಿಂದೂ-ಮುಸ್ಲಿಂ ಸಮನ್ವಯ ರಚನೆಯೆಂಬ ಹೊಸ ತಳಿಯಾಗಿ ಕಾಣುತ್ತಿವೆ. ಅವನ್ನೇ ನಮ್ಮ ದೇಶದ ಹೆಮ್ಮೆಯೆಂಬಂತೆ ಜಗತ್ತಿಗೆ ತೋರಿಸುತ್ತಿದ್ದೇವೆ.  ಇದಕ್ಕೆ ಕಾರಣ ಮತಾಂತರಿಗಳು ನಮ್ಮ ಶಿಕ್ಷಣದ ಒಳಹೊಕ್ಕು ಕೊಟ್ಟ ವೈಚಾರಿಕ ಮತಾಂತರವೆಂಬ ಶಿಕ್ಷೆ! ಇಂತಹ ಶಿಕ್ಷಣವನ್ನು ಪಡೆದ ಕಾರಣದಿಂದಲೇ ಭರತ ನಾಟ್ಯ ಕ್ರಿಸ್ತ ನಾಟ್ಯವಾಗಿ ಬದಲಾದರೂ ನಮಗೆ ತಿಳಿಯಲಿಲ್ಲ. ಆರ್ಯ-ದ್ರಾವಿಡ ವಿಭಜನೆ ಮಾಡಿ ವಲಸೆ ಬಂದ ಆರ್ಯರು ಮೂಲ ನಿವಾಸಿ ದ್ರಾವಿಡರನ್ನು ಜೀತಕ್ಕಾಗಿ ಇರಿಸಿಕೊಂಡರು ಎಂಬ ಕಟ್ಟುಕಥೆಯನ್ನೇ ಇತಿಹಾಸವೆಂದು ಭ್ರಮಿಸುತ್ತಿದ್ದೇವೆ. ದೇವಾಲಯಕ್ಕೆ ಬೆಂಕಿಬಿದ್ದರೂ ಸಹಿಷ್ಣುಗಳಾಗಿದ್ದೇವೆ. ಹಿಂದೂ ಹುಡುಗಿಯೊಬ್ಬಳು ಲವ್ ಜಿಹಾದಿಗೆ ಬಲಿಯಾದಾಗ "ಕಾಲದ ಬದಲಾವಣೆ"ಯೆಂದು ಮುಗುಮ್ಮಾಗಿ ಕುಳಿತುಬಿಡುತ್ತೇವೆ. ಪಕ್ಕದ ಮನೆ ಹುಡುಗ ಮತಾಂತರವಾದಾಗಲೂ ಊರ ಉಸಾಬರಿ ನಮಗೇಕೆ ಎಂದು ಸುಮ್ಮನಿರುತ್ತೇವೆ. ತಲವಾರ್ ತೋರಿಸಿ ಮನೆಯ ಹಟ್ಟಿಯಿಂದಲೇ ಗೋವನ್ನು ಕಟುಕರು ಒಯ್ದಾಗಲೂ ನಮಗೆ "ಆಹಾರ ಸ್ವಾತಂತ್ರ್ಯ"ದ ನೆನಪಾಗುತ್ತದೆ. ಸಾಲುಸಾಲಾಗಿ "ಕಮ್ಮಿ ನಿಷ್ಠರು" ದೇಶದ್ರೋಹ ಘೋಷಣೆ ಕೂಗಿದಾಗ ಏನೋ ರಾಜಕೀಯ ಇದೆ ಎಂದು ಬದಿಗೆ ಸರಿಸುತ್ತೇವೆ. ಹೆಚ್ಚೇಕೆ ಯಾವನಾದರೂ ಭಯೋತ್ಪಾದಕ ಬಂಧಿತನಾದಾಗ "ಎಲ್ಲರೂ ಹಾಗಿರುವುದಿಲ್ಲ" ಎಂದು ನಮ್ಮ ನಡುವಿನ ಯಾರೋ ಉಸುರಿದಾಗ ಹೌದೆಂದು ತಲೆಯಾಡಿಸಿಬಿಡುತ್ತೇವೆ. ಇದಕ್ಕೆಲ್ಲಾ ಕಾರಣ ನಾವು ಪಾಲಿಸಬೇಕಾದ ಧರ್ಮದ ಬಗ್ಗೆ, ರಕ್ಷಿಸಬೇಕಾದ ನಮ್ಮ ಸಂಸ್ಕೃತಿಯ ಬಗ್ಗೆ ನಮಗೊಂದು ರೀತಿಯ ಅಸಡ್ಡೆಯ ಭಾವನೆ ಬೆಳೆದು ಬಿಟ್ಟಿದೆ. ದೇಶದ ಬಗ್ಗೆ ಒಲವಿದ್ದರೂ ಈ ಬಗ್ಗೆ ಮಾತನಾಡಿದರೆ ಯಾರು ತನ್ನನ್ನು ಕೋಮುವಾದಿ ಎಂದುಬಿಡುತ್ತಾರೋ, ಎಲ್ಲಿ ತನ್ನ ಮುಸ್ಲಿಂ-ಕ್ರೈಸ್ತ ಸ್ನೇಹಿತರಿಗೆ ಬೇಸರವಾಗುತ್ತದೋ ಎಂಬ ಭಯ! ಈ ಜಾಢ್ಯವನ್ನು ಸರಿಯಾಗಿ ಬಳಸಿಕೊಂಡ ಸೆಕ್ಯುಲರುಗಳು ಇಂತಹವರಿಗೆ ಸೌಮ್ಯ ಹಿಂದೂಗಳು ಅಥವಾ ಸೌಮ್ಯ ರಾಷ್ಟ್ರೀಯವಾದಿಗಳೆಂಬ ಪಟ್ಟಕಟ್ಟಿಬಿಟ್ಟಿದ್ದಾರೆ. ಅಂದರೆ ನಮ್ಮ ದೇಶದ ಮೇಲೆ ಉಗ್ರರು ಘಾತಕವಾಗಿ ಎರಗಿದಾಗಲೂ, ದೇಶದ ಅನ್ನ ತಿಂದವರು ದೇಶವನ್ನೇ ತುಂಡು ಮಾಡುತ್ತೇವೆ ಎಂದಾಗಲೂ, ನಮ್ಮ ದೇವಸ್ಥಾನಗಳನ್ನು ಪುಡಿಪುಡಿಗಟ್ಟಿದಾಗಲೂ, ನಮ್ಮ ಅಕ್ಕತಂಗಿಯರ ಮೈಮೇಲೆ ಕೈಹಾಕಿದಾಗಲೂ, ನಮ್ಮ ಸಂಸ್ಕೃತಿ-ಇತಿಹಾಸ-ಶಿಕ್ಷಣ-ಕಲೆ-ಜನಾಂಗವನ್ನೇ ಮತಾಂತರ ಮಾಡಿದಾಗಲೂ ಸುಮ್ಮನಿರುವುದು, ಗಾಂಧಿಯ ಅಹಿಂಸೆಯನ್ನು ಪಾಲಿಸುವುದು ಸೌಮ್ಯ ಹಿಂದುತ್ವವೇ? ಇದರ ವಿರುದ್ಧ ಹೋರಾಡುವುದು ಉಗ್ರಹಿಂದುತ್ವವಾದರೆ  ಈ ಬಗೆಯ ಹಿಂದುತ್ವ ಸಿದ್ಧಾಂತದ ಉಗಮಕ್ಕೆ ಕಾರಣರಾರು? ಹಿಂದೂಗಳನ್ನು ಈ ರೀತಿಯಲ್ಲಿ ಒಡೆಯುವ ಬುದ್ಧಿಜೀವಿಗಳ ಹುನ್ನಾರವನ್ನು ಅಭಿವೃದ್ಧಿ ಒಂದೇ ಸಾಕೆನ್ನುವ "ನವರಾಷ್ಟ್ರೀಯವಾದಿಗಳು" ಅರ್ಥೈಸಿಕೊಳ್ಳಬೇಕು. ತನ್ನ ಹಿಂದೂ ಆಡಳಿತ ನೀತಿಯನ್ನು ಸಡಿಲಿಸಿದ ಕಾರಣದಿಂದ ಹಾದಿ ಬೀದಿಯಲ್ಲಿ ಚಿನ್ನ ಮಾರುತ್ತಿದ್ದ ಕಾಲದ ವೈಭವೋಪೇತ ವಿಜಯನಗರ ಸಾಮ್ರಾಜ್ಯವೇ ಉಳಿಯಲಿಲ್ಲ. ಧರ್ಮ ಸಂಸ್ಕೃತಿಯೆಡೆಗಿನ ಶೃದ್ಧೆಯನ್ನು ಮೈಗೂಡಿಸಿಕೊಳ್ಳದಿದ್ದ ಚಂದ್ರಗುಪ್ತನ ಬೃಹತ್ತಾದ ಮೌರ್ಯ ಸಾಮ್ರಾಜ್ಯವನ್ನೇ ಆಗಿನ ಕಾಲದ ಅವೈದಿಕ ಮತಾಂಧರು ನಾಶಮಾಡಿಬಿಟ್ಟರು.  ಇನ್ನು ಸೆಕ್ಯುಲರುಗಳಿಂದ ತುಂಬಿರುವ ಈಗಿನ ಭಾರತದ ಪಾಡೇನು?

              ಮತಾಂತರಗೊಂಡವರನ್ನು ಮರಳಿ ಮಾತೃಧರ್ಮಕ್ಕೆ ಕರೆತರುವುದು ಉಗ್ರಹಿಂದುತ್ವವಾದರೆ ಆ ಹಿಂದುತ್ವವೇ ಭಾರತಕ್ಕೆ ಬೇಕಾಗಿರುವುದು. ಕಾನೂನೆಂಬುದು ಕ್ರಮ ಕೈಗೊಳ್ಳದಿದ್ದಾಗ ಗೋಕಳ್ಳರನ್ನು ಹಿಡಿದು ಬಾರಿಸುವುದು ಕೋಮುವಾದವಾಗುವುದಾದರೆ ಅದರ ಅಗತ್ಯವೇ ಸಮಾಜದ ರಕ್ಷಣೆಗೆ ಬೇಕಾಗುವುದು. ಲವ್ ಜಿಹಾದ್ ವಿರುದ್ಧ ದನಿಯೆತ್ತಿ ಕಾರ್ಯಾಚರಣೆ ಮಾಡುವುದು ಉಗ್ರಹಿಂದುತ್ವವಾದರೆ ಅದರ ಅವಶ್ಯಕತೆಯೇ ತುರ್ತಾಗಿ ಇರುವುದು. ದೇಶದ್ರೋಹಿಗಳನ್ನು ಸದೆಬಡಿಯುವುದು ಉಗ್ರಹಿಂದುತ್ವವಾದರೆ ಭಾರತವನ್ನು "ರಾಷ್ಟ್ರ"ವಾಗುಳಿಸಲು ಅದೇ ಬೇಕು. ಹಿಂದುತ್ವದಲ್ಲಿ ಉಗ್ರ-ಸೌಮ್ಯ ಎನ್ನುವುದೆಲ್ಲಾ ಇಲ್ಲ. ಅದೆಲ್ಲಾ ಎಡಚರ, ಎಲ್ಲೂ ಸಲ್ಲದವರ ಕಲ್ಪನೆಯಷ್ಟೇ. ಇದಕ್ಕೆಲ್ಲಾ ಬಲಿಯಾಗುವ ಹಿಂದೂವಿನ ಭೋಳೇತನ ಯಾವತ್ತು ನಾಶವಾಗುವುದೋ? ದೇಶ ಸ್ವಾತಂತ್ರ್ಯಹೋರಾಟ ನಡೆಸುತ್ತಿದ್ದ ಕಾಲದಲ್ಲೇ ಸಾವರ್ಕರ್ ದೇಶದ ಮುಂದಿನ ಭವಿಷ್ಯ ಹೇಗಿರಬೇಕೆಂದು ತಮ್ಮ ಅನಿಸಿಕೆಯನ್ನು ಸ್ಪಷ್ಟವಾಗಿ ವ್ಯಕ್ತಪಡಿಸಿದ್ದರು. ಸೈನ್ಯವನ್ನು ಹಿಂದೂಕರಣಗೊಳಿಸಿ, ರಾಜಕೀಯವನ್ನು ಸೈನಿಕೀಕರಣಗೊಳಿಸಿ ಎನ್ನುವ ಅವರ ಘೋಷಣೆಯ ಗೂಡಾರ್ಥವನ್ನು ಯಾರೂ ಅರ್ಥೈಸಿಕೊಳ್ಳಲಿಲ್ಲ. ಅರ್ಥೈಸಿಕೊಂಡು ಅನುಸರಿಸಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. "ಸಿಂಧೂವಿನಿಂದ ಸಮುದ್ರದವರೆಗೆ ಚಾಚಿಕೊಂಡಿರುವ ಈ ಪವಿತ್ರ ಭರತ ಭೂಮಿಯನ್ನು ತನ್ನ ಪಿತೃ ಭೂಮಿಯಾಗಿ, ತನ್ನ ತವರನ್ನಾಗಿ ಯಾರು ಸ್ವೀಕರಿಸುತ್ತಾನೋ ಅವನೇ ಹಿಂದೂ. ಸಂವಿಧಾನವನ್ನು ರಚಿಸುವಾಗ ಭಾರತವನ್ನು ಹಿಂದೂರಾಷ್ಟ್ರ ಎಂದು ಘೋಷಿಸುವಂತೆಯೂ, ಹಿಂದೂಗಳಿಗೆ ಪ್ರಧಾನ ಸ್ಥಾನಮಾನವಿತ್ತು, ಅಲ್ಪಸಂಖ್ಯಾತರು ಇಲ್ಲಿನ ರಾಷ್ತ್ರೀಯತೆ-ಸಂಸ್ಕೃತಿ-ಸಂವಿಧಾನವನ್ನು ಒಪ್ಪಿ ಹಿಂದೂಗಳೊಡನೆ ಸಾಮರಸ್ಯದೊಡನೆ ಬಾಳಿದರೆ ಮಾತ್ರ ಅವರಿಗಿಲ್ಲಿ ಇರಲು ಅವಕಾಶ ಕೊಡಬೇಕೆಂಬ" ಸಾವರ್ಕರ್ ವಾದವನ್ನು ಯಾರೂ ಕಿವಿಗೆ ಹಾಕಿಕೊಳ್ಳಲಿಲ್ಲ. ಕೇಳುತ್ತಿದ್ದರೆ ದೇಶವನ್ನು ನೆಹರೂ ಕುಟುಂಬ ತನ್ನ ಪಿತ್ರಾರ್ಜಿತ ಆಸ್ತಿಯಂತೆ ಬಳಸಲು ಸಾಧ್ಯವಾಗುತ್ತಿರಲಿಲ್ಲ. ಮತಾಂತರ, ಮತಾಂಧತೆಗೆ ಕಡಿವಾಣ ಬೀಳುವುದರ ಜೊತೆಗೆ ರಾಷ್ಟ್ರೀಯತೆಯ ಶಿಕ್ಷಣ ದೊರೆತು ಇಂದಿನ ಸೆಕ್ಯುಲರ್ ಪಡೆ ಮಸಣದತ್ತ ಮುಖಮಾಡುತ್ತಿತ್ತು! ರಾಷ್ಟ್ರೀಯವಾದದಲ್ಲೂ ನವಬೌದ್ಧರ ರೀತಿಯ ಅವಕಾಶವಾದಿತನದ "ನವರಾಷ್ಟ್ರೀಯವಾದ" ಹುಟ್ಟುತ್ತಿರಲಿಲ್ಲ. ಸಾವರ್ಕರ್ ನೀಡಿದ್ದ ಹಿಂದುತ್ವದ ಪರಿಕಲ್ಪನೆಯಲ್ಲಿ ದೇಶ ಸಾಗಿದ್ದರೆ ಸೌಮ್ಯ ಹಿಂದುತ್ವ-ಉಗ್ರ ಹಿಂದುತ್ವ ಎನ್ನುವ ವರ್ಗೀಕರಣ ಮಾಡಿ ಒಳಗೊಳಗೆ ಕಾರ್ಯ ಸಾಧಿಸಿಕೊಳ್ಳುವ ಎಡಚರ ಕೈ ಮಡಚಿ ಹೋಗುತ್ತಿತ್ತು!