ಪುಟಗಳು

ಗುರುವಾರ, ಡಿಸೆಂಬರ್ 27, 2012

ಭಾರತ ದರ್ಶನ - ೨೩


ಭಾರತ ದರ್ಶನ - ೨೩:

                  ಸಹ್ಯಾದ್ರಿಯ ಇನ್ನೊಂದು ವಿಶೇಷ ಎಂದರೆ, ಯಾವಾತನ ಹೆಸರು ಕರ್ಣಪಟಲಕ್ಕೆ ಬಿದ್ದೊಡನೆ ಪ್ರತಿಯೊಬ್ಬ ಹಿಂದೂವಿನ ಹೃದಯ ಅರಳಿ ಕ್ಷಾತ್ರ ತೇಜ ಪುಟಿದು ನಿಲ್ಲುತ್ತೋ ಅಂತಹ ಹಿಂದೂ ಹೃದಯ ಸಾಮ್ರಾಟನಿಗೆ ಜನ್ಮ ನೀಡೋ ಭಾಗ್ಯ ದೊರೆತುದು. ಹೌದು ಶಿವಾಜಿಯ ಹೆಸರು ಕೇಳಿದೊಡನೆ ಹಿಂದೂವಿನ ಕಂಗಳ ಕಾಂತಿ ಪ್ರಜ್ವಲಿಸತೊಡಗುತ್ತೆ. ಒಂದು ವೇಳೆ ಹಾಗಾಗಾದೇ ಇದ್ದರೆ ಅವ ಹಿಂದುವಾಗಿದ್ದೇನು ಪ್ರಯೋಜನ?

                    ಹೌದು, ಇಂದಿನ ಪೀಳಿಗೆಗೆ ಶಿವಾಜಿಯ ಬಗ್ಗೆ ಗೊತ್ತಿಲ್ಲ. ಗೊತ್ತುಪಡಿಸಿಕೊಳ್ಳುವ ಮನಸ್ಥಿತಿಯೂ ಇಲ್ಲ. ಕಾರಣ ಅವೆರಡನ್ನು ನಾವು ಹೇಳಿಕೊಟ್ಟಿಲ್ಲ! ನಮ್ಮ ಪಠ್ಯ ಪುಸ್ತಕಗಳಲ್ಲಿ ಶಿವಾಜಿಗೆ ಕಲ್ಪಿಸಿರೋದು ಕೇವಲ ಒಂದೇ ಪುಟದ ವ್ಯಾಖ್ಯೆ! ಅದರಲ್ಲಿ ಅರ್ಧ ಪುಟ ಅವನ ಭಾವಚಿತ್ರಕ್ಕೆ ಹೋದರೆ ಉಳಿದರ್ಧದಲ್ಲಿ ಅವನನ್ನು ವರ್ಣಿಸುವುದು ಹೇಗೆ ಸಾಧ್ಯ? ಈಗಂತು ಆ ಒಂದು ಪುಟವೂ ಉಳಿದಿಲ್ಲ. ಬ್ರಿಟಿಷ್ ಇತಿಹಾಸಕಾರರು ಉದ್ದೇಶಪೂರ್ವಕವಾಗಿ ಮರೆಮಾಚಲು ಯತ್ನಿಸಿದ ಇತಿಹಾಸ ಕಥನವನ್ನು ನಮ್ಮವರೂ ಸರಿಪಡಿಸಲಿಲ್ಲ. 'ಮಹಾತ್ಮ' ಅಂತ ಕರೆಯಿಸಿಕೊಂಡ ಕೆಲವು ದೇಶದ್ರೋಹಿಗಳಿಗೆ ಈ ಹಿಂದೂ ಹೃದಯ ಸಾಮ್ರಾಟ ದಾರಿ ತಪ್ಪಿದ ದೇಶಭಕ್ತರಲ್ಲೊಬ್ಬನಾಗಿಬಿಟ್ಟ. ಅವನ ಭಟ್ಟಂಗಿಗಳು ಈ ಛತ್ರಪತಿಯನ್ನು ಇತಿಹಾಸದ ಪುಟಗಳಿಂದಲೇ ತೆಗೆದು ಹಾಕುವ ಪ್ರಯತ್ನ ಮಾಡಿದರು, ಮಾಡುತ್ತಲೇ ಇದ್ದಾರೆ!

                  ಶಿವಾಜಿಯ ಮಹತ್ವ ನಮಗೆ ಅರಿವಾಗೋದು ಯಾವಾಗ?
ಅಕಸ್ಮಾತ್ ಆತ ಹುಟ್ಟದೇ ಇರುತ್ತಿದ್ದರೆ ಏನಾಗುತ್ತಿತ್ತು?
ಉತ್ತರದಲ್ಲಿ ಮೊಘಲ್ ಶಾಹಿ, ದಕ್ಷಿಣದಲ್ಲಿ ಆದಿಲ್ ಶಾಹಿ, ಅದರ ಆಚೆ ಈಚೆ ಇಮಾಮ್ ಶಾಹಿ, ಕುತುಬ್ ಶಾಹಿ, ನಿಜಾಮ್ ಶಾಹಿ, ಬರೀದ್ ಶಾಹಿ, ಅಯೋಧ್ಯೆಯಲ್ಲಿ ನವಾಬ, ಬಂಗಾಳದಲ್ಲಿ ನವಾಬ, ತಮಿಳುನಾಡಿನಲ್ಲಿ ಫ್ರೆಂಚರು, ಗೋವಾದಲ್ಲಿ ಪೋರ್ಚುಗೀಸರು, ಸೂರತ್ನಲ್ಲಿ ಬ್ರಿಟಿಷರು, ಪಕ್ಕದಲ್ಲೇ ಡಚ್ಚರು! ಆಧುನಿಕ ಯೂರೋಪ್ನ ತೋಪುಗಳು ತಾಯಿ ಭಾರತಿಯ ಮಾಂಗಲ್ಯವನ್ನು ಭಗ್ನ ಮಾಡಲು ಸಜ್ಜಾಗಿ ನಿಂತಿದ್ದವು! ಧರ್ಮ ಶೃದ್ಧೆ ಮರೆಯಾಗಿದ್ದ, ಕ್ಷಾತ್ರ ತೇಜ ಕಡಿಮೆಯಾಗಿದ್ದ, ಸಂಸ್ಕೃತಿ ನಶಿಸುತ್ತಿದ್ದ ಅಂತಹ ಸಂದರ್ಭದಲ್ಲಿ ಶಿವಾಜಿ ಎದ್ದು ಬಂದ!

ಬಾಲ ಶಿವಾಜಿ ಹೇಳಿದ್ದೇನು?
" ಹಿಂದೂ ಧರ್ಮ ಪ್ರತಿಷ್ಠಾಯೈ ಸಿದ್ಧಖಡ್ಗ ಸದಾವಯಮ್|"

                 ನಮ್ಮ ಸ್ಥಿತಿ ಹೇಗಿತ್ತು ಆವಾಗ?

ಭೂಷಣ ಅನ್ನೋ ಕವಿ ಹೇಳುತ್ತಾನೆ,

"ಕಾಶಿಜೀ ಕೀ ಕಳಾ ಜಾತೀ
ಮಥುರಾ ಮಸ್ಜಿದ್ ಹೋತಿ|
ಯದಿ ಶಿವಾಜಿ ನ ಹೋತಾ
ಸುನ್ನತ್ ಹೋತಿ ಸಬ್ ಕೀ||"

ಅಂದರೇನು?
ಕಾಶಿ ಕಳಾಹೀನವಾಗ್ತಾ ಇತ್ತು, ಮಥುರಾ ಮಸೀದಿಯಾಗಿ ಬದಲಾಗ್ತಾ ಇತ್ತು. ಅಕಸ್ಮಾತ್ ಶಿವಾಜಿ ಹುಟ್ಟದೇ ಇರುತ್ತಿದ್ದರೆ ಇಡೀ ದೇಶ ಇಸ್ಲಾಂ ಸಂಸ್ಕಾರ(!) ಪಡೆಯುತ್ತಿತ್ತು!

                 ನಮ್ಮ ರಾಷ್ಟ್ರ, ಧರ್ಮ, ಕಲೆ, ಸಾಹಿತ್ಯ, ಸಂಸ್ಕೃತಿಗಳು ವಿನಾಶದ ಅಂಚನ್ನು ತಲುಪಿದ್ದಾಗ ಅದರ ಸಂರಕ್ಷಣೆಗಾಗಿ ಎದ್ದು ಬಂದ ಶಿವಾಂಶ ಆತ ಎಂದು ಸ್ವಾಮಿ ವಿವೇಕಾನಂದರು ಹೇಳುತ್ತಾರೆ! ನಮ್ಮ ಕಾವ್ಯ ಪುರಾಣಗಳಲ್ಲಿ ವರ್ಣನೆಗೆ ಸಿಲುಕಿರುವ ಅಭಿಜಾತ ನಾಯಕನ ಸಕಲ ಸದ್ಗುಣಗಳ ಸಾಕಾರ ಮೂರ್ತಿ ಶಿವಾಜಿ!

                   ಸ್ವರಾಜ್ಯದ ರಕ್ಷಣೆಗಾಗಿ ಜನರನ್ನು ಜೋಡಿಸಲು ಯತ್ನಿಸಿದ. ನಾಡಿನಲ್ಲಿ ಅವನಿಗೆ ಸಹಕಾರ ಸಿಗಲಿಲ್ಲ. ನಮ್ಮ ಪರಂಪರೆಯೇ ಹಾಗೆ! ಗೆಲುವು ಖಚಿತವಾಗುವವರೆಗೆ ನಾವು ಯಾರಿಗೂ ಸಹಾಯ ಮಾಡೋಲ್ಲ. ಇದು ಇಂದು ನಿನ್ನೆಯ ಮಾತಲ್ಲ. ರಾಮ ರಾವಣರ ಯುದ್ಧ ನಡೆದಾಗ ದೇವತೆಗಳು ಜೈಕಾರ ಹಾಕುತ್ತಿದ್ದರು. ಯಾರಿಗೆ ಅಂತ ಗೊತ್ತಿಲ್ಲ. ರಾಮಾಯ ಸ್ವಸ್ತಿ, ರಾವಣಾಯ ಸ್ವಸ್ತಿ! ಶ್ರೀರಾಮ ಭುವಿಗಿಳಿದ ಭಗವಂತ ಅವನು ಗೆಲ್ಲಲೇಬೇಕು ಆದರೆ ನಂಬೋದು ಹ್ಯಾಗೆ? ಯಾಕೆಂದರೆ ರಾಮ ಸೈನ್ಯ ಸಮೇತ ಅಯೋಧ್ಯೆಯಿಂದ ಬಂದವನಲ್ಲ. ಅವನ ಸೈನ್ಯವೋ ಕಪಿಗಳ ಹಿಂಡು. ಒಂದು ಹೇಳಿದರೆ ಹತ್ತು ಮಾಡುವಂತಹವು. ಹೀಗಿರುವಾಗ ಅವನು ಗೆಲ್ಲಬಹುದು ಅಂತ ನಂಬಿ ಜೈಕಾರ ಹಾಕೋದು ಹೇಗೆ? ಅಕಸ್ಮಾತ್ ರಾವಣ ಗೆದ್ದರೆ ಸುಮ್ಮನೇ ಬಿಟ್ಟಾನೆಯೇ? ಹಾಗಂತ ರಾವಣನಿಗೆ ಜೈಕಾರ ಹಾಕಿ ರಾಮ ಗೆದ್ದರೆ ರಾಮನಿಗೆ ಮುಖ ತೋರ್ಸೋದು ಹೇಗೆ? ಅದಕ್ಕೆ ರಗಳೆಯೇ ಬೇಡ. ಸುಮ್ಮನೇ ಜೈ ಅಂದು ಬಿಡೋದು! ೮೦ ದಿವಸದ ಯುದ್ಧ ಮುಗಿಯಿತು. ರಾವಣನ ಪಕ್ಷದ ಪ್ರಮುಖರೆಲ್ಲ ನೆಲಕಚ್ಚಿದರು. ೮೧ನೇ ದಿವಸ. ಆಗಸ್ಥ್ಯರು ಬಂದು ರಾಮನಿಗೆ ಆದಿತ್ಯ ಹೃದಯ ಮಂತ್ರ ಉಪದೇಶಿಸಿದರು. ಇನ್ನು ರಾಮ ಗೆಲ್ಲೋದು ಖಚಿತ ಎಂದಾದಾಗ ಇಂದ್ರ ರಾಮನಿಗೆ ಸಾರಥಿ ಮಾತಲಿ ಸಹಿತವಾಗಿ ತನ್ನ ರಥ ಕಳುಹಿಸಿಕೊಟ್ಟ. ಅಲ್ಲಿಯ ತನಕ ರಥಿಕ ರಾವಣ, ವಿರಥಿ ರಾಮ! ಅಂದರೆ ಗೆಲ್ಲುವವರ ಪರ ನಿಂತರೆ ಲಾಭಕರ ಎಂಬ ಚಿಂತನೆ!

                ಶಿವಾಜಿಗೂ ಹಾಗೆ. ನಗರದಲ್ಲಾರು ಬೆಂಬಲಿಸಲಿಲ್ಲ. ಹಳ್ಳಿಗಳಿಗೆ ಹೋದ. ರೈತಾಪಿ ಮಕ್ಕಳನ್ನು,ಮಾವಳಿಗಳನ್ನು ಸಂಘಟಿಸಿದ. ಉಡಲು ಬಟ್ಟೆ, ಹೊಟ್ಟೆಗೆ ಹಿಟ್ಟು ಇಲ್ಲದ ಬಡ ಮಕ್ಕಳನ್ನು ಗೆಳೆತನ ಮಾಡಿದ. ಅವರಲ್ಲಿ ರಾಷ್ಟ್ರ ಭಕ್ತಿ ತುಂಬೋದು ಹೇಗೆ? ಭಾಷಣ ಮಾಡಲಿಲ್ಲ. ಎರಡು ಗುಂಪು ಮಾಡಿದ. ಒಂದು ಗುಂಪಿಗೆ ಮೊಘಲರು, ಇನ್ನೊಂದಕ್ಕೆ ಮರಾಠರು ಅಂತ ಹೆಸರಿಟ್ಟ. ಯುದ್ಧದ ಆಟ. ಆದರೊಂದು ಷರತ್ತು! ಆಟ ಮುಗಿಯುವ ವೇಳೆಗೆ ಮೊಘಲರ ಗುಂಪು ಸೋತು ಮಕಾಡೆ ಮಲಗಿಬಿಡಬೇಕು. ಪರಿಣಾಮ ಏನು? ಮಕ್ಕಳಿಗೆ ಆಡುತ್ತಾ ಆಡುತ್ತಾ ಮೊಘಲರು ಅಂದರೆ ಸೋಲುವವರು, ಮರಾಠರು ಎಂದೆಂದಿಗೂ ಗೆಲ್ಲುವವರು ಅಂತ ಮನಸ್ಸಿನಲ್ಲಿ ಅಛ್ಛಳಿಯದೆ ಉಳಿದು ಬಿಟ್ಟಿತು.

                   "ಮಂತ್ರ್ ಛೋಟಾ, ತಂತ್ರ ಸೋಭೇ, ಪರೇಶಿರ್ ಠರಲೇತೆ" ಚಿಕ್ಕ ಮಂತ್ರ, ಚೊಕ್ಕ ತಂತ್ರ, ಹೇಗೆ ಯಶಸ್ವಿಯಾಯಿತು ನೋಡಿ! ಈ ತಂತ್ರ ಬಳಸಿ ಎಂಥಾ ವ್ಯಕ್ತಿತ್ವ ನಿರ್ಮಾಣ ಮಾಡುತ್ತಾನೆ ಶಿವಾಜಿ! ತಾನಾಜಿ ಮಾಲಸುರೆ, ನೇತಾಜಿ ಫಾಲಕರ್, ಮಾಮಾ ಬಲೇಕರ್, ಏಸಾಜಿ, ಕಂಕಾಜಿ..... ಒಬ್ಬೊಬ್ಬರೂ ನರಸಿಂಹಗಳು, ನರವ್ಯಾಘ್ರಗಳು.

ನೆನಪು ಮಾಡಿಕೊಳ್ಳಿ,
                   ಒಂದು ದಿನ ಜೀಜಾ ಮಾತೆ ಕೊಂಡಾಣದತ್ತ ಕೈ ತೋರಿಸಿ ಅಲ್ಲಿ ಭಗವಾಧ್ವಜ ಹಾರಬೇಕು ಅಂತ ಹೇಳುತ್ತಾಳೆ. ಮಾತೆಯ ಮಾತೆಂದರೆ ಅದು ಆಜ್ಞೆ ಅಲ್ವಾ? ಆದರೆ ಆ ದುರ್ಗಮ ಕೋಟೆ ಗೆಲ್ಲುವ ಸಾಮರ್ಥ್ಯ ಶಿವಾಜಿ ಪಾಳಯದಲ್ಲಿ ಇದ್ದಿದ್ದು ತಾನಾಜಿಗೆ ಮಾತ್ರ. ಕರೆಸೋಣ ಅಂದರೆ ಅವನ ಮಗನ ಮದುವೆ. ತಾನಾಜಿಯ ೧೩ ವರ್ಷದ ಮಗ ರಾಯಬಾನ ಮದುವೆ. ಮನೆಯಲ್ಲಿ ಮದುವೆ ಇರೋವಾಗ ಯಾರಾದರೂ ಯುದ್ಧಕ್ಕೆ ಹೊರಡೋಕಾಗುತ್ತಾ? ಆದರೆ ತಾನಾಜಿಗೆ ಜೀಜಾ ಮಾತೆಯ ಮನದಿಚ್ಛೆ ತಿಳಿಯಿತು. ಜೀಜಾ ಮಾತೆಯ ಬಳಿ ಬಂದು " ತಾಯಿ ನಿಮ್ಮಾಸೆ ಎನಗಾಜ್ಞೆ" ಎನ್ನುತ್ತಾನೆ. ಆಗ ಜೀಜಾ ಮಾತೆ ಮಗೂ ನಿನ್ನ ಮಗನ ಮದುವೆ ಮುಗಿಯಲಿ ಎಂದಾಗ ಅವ ಹೇಳೊ ಮಾತು ಕೇಳಿ, " ತಾಯಿ ಮೊದಲು ಕೊಡಾಣದ ಮದುವೆ. ನಂತರ ನನ್ನ ಮಗನ ಮದುವೆ ಆದರಾಯಿತು. ಶಿವಾಜಿ ರಾಜ. ನನ್ನ ಮಗ ಅವನಿಗೂ ಮಗನಂತೆಯೇ ತಾನೇ? ಹಾಗಾಗಿ ನನ್ನ ಮಗನ ಮದುವೆ ಅವನೇ ಮಾಡಲಿ. ಕೊಂಡಾಣದ ಮದುವೆ ನಾನು ಮಾಡ್ತೇನೆ." ಹೀಗೆ ರಣವೀಳ್ಯ ಪಡೆದೇ ಬಿಟ್ಟ.

                ಶಿವಾಜಿಯ ಸೈನ್ಯ ಕೊಂಡಾಣವನ್ನು ಗೆದ್ದಿತು. ಆದರೆ ತಾನಾಜಿಯ ಬಲಿದಾನವಾಯಿತು. ಸುದ್ದಿ ತಿಳಿದ ಶಿವಾಜಿಯ ಬಾಯಿಂದ  ಅಶ್ರುಧಾರೆಯೊಂದಿಗೆ ಹೊರಬಂದ ಮಾತು " ಗಢ್ ಆಲಾ, ಪಣ್ ಸಿಂಹ ಗೇಲಾ"- ಕೋಟೆ ಬಂತು ಆದರೆ ಸಿಂಹ ಹೊರಟು ಹೋಯಿತು. ತಾನಾಜಿಗೆ ಆ ಕೋಟೆಯಲ್ಲಿಯೇ ಸಮಾಧಿ ಮಾಡಿ ಅದಕ್ಕೆ ಸಿಂಹಗಢ ಅಂತ ಹೆಸರಿಟ್ಟ ಶಿವಾಜಿ. ಅದಿಂದು ನಮ್ಮ ತೀರ್ಥಕ್ಷೇತ್ರ.

                   ಹೇಗಿತ್ತು ತಾನಾಜಿಯ ಮನೆಯ ಸ್ಥಿತಿ ಆಗ?
ಮನೆಯಲ್ಲಿ ಮಂಗಲ ಕಾರ್ಯ, ತಂದೆಯ ಸ್ಮಶಾನ ಯಾತ್ರೆ!
ಮಗ ಹಸೆಮಣೆ ಏರಿದ, ತಂದೆ ಚಿತೆ ಏರಿದ!
ಸೊಸೆ ತಾಳಿ ಕಟ್ಟಿಕೊಂಡಳು, ಅತ್ತೆ ಮಾಂಗಲ್ಯ ಬಿಚ್ಚಿಟ್ಟಳು!
ಒಂದೇ ಮನೆಯಲ್ಲಿ!

೧೩ ವರ್ಷದ ರಾಯಬಾ ಮದುವೆಯಾಗ್ತಿದ್ದ ಹಾಗೆ ತಂದೆಯನ್ನು ಕಳೆದುಕೊಂಡ. ತಂದೆಯ ೧೨ನೇ ದಿವಸದ ಕೆಲಸ ಮುಗಿಸಿ ೧೮ನೇ ದಿವಸ ಅಪ್ಪನ ಖಡ್ಗ ಹಿಡಿದು ರಣಾಂಗಣಕ್ಕೆ ಧುಮುಕುತ್ತಾನೆ. ತಂದೆಯ ಕೆಲಸ ಪೂರೈಸಲು!

ಯಾವ ಶಾಲಾ ಕಾಲೇಜುಗಳಲ್ಲಿ ಈ ರೀತಿಯ ದೇಶಭಕ್ತಿಯ ಶಿಕ್ಷಣ ಕೊಡಲಾಗುತ್ತೆ? ಅದಕ್ಕಾಗಿಯೇ ಸಹ್ಯಾದ್ರಿಯ ಬಳಿ ಬಂದಾಗ ಶಿವಾಜಿ ಕಣ್ಮುಂದೆ ಬರೋದು!

                         ಹೀಗೆ ತನ್ನ ಪರಾಕ್ರಮ, ಬುದ್ಧಿಶಕ್ತಿಯಿಂದ ಆದಿಲ್ ಶಾಹಿ, ಮೊಘಲ್ ಶಾಹಿಗಳ ಎದೆ ಬಿರಿದು, ತೋರಣ, ಪನ್ನಾಳ, ಚಾಕಣ, ಪುರಂದರ, ವಿಶಾಲಗಢ, ರಾಯಗಢ, ಪ್ರತಾಪಗಢ ಮುಂತಾದ ಅಭೇದ್ಯ ಕೋಟೆಗಳನ್ನು ಶಿವಾಜಿ ಮಹಾರಾಜರು ಸ್ವರಾಜ್ಯಕ್ಕೆ ಜೋಡಿಸಿದರು. ತಂಜಾವೂರಿನಿಂದ ಸೂರತ್ನವರೆಗೆ ಮಿಂಚಿನಂತೆ ಸಂಚರಿಸಿದರು. ಪ್ರತ್ಯಕ್ಷ ಔರಂಗಜೇಬನ ಅರಮನೆ ಹೊಕ್ಕು, ಆ ವಿಷಸರ್ಪದ ಹೆಡೆ ಮೆಟ್ಟಿ, ಬಾಲ ತಿರುವಿ, ಸೆರೆಮನೆ ಸೇರಿ ಆಶ್ಚರ್ಯಕರ ರೀತಿಯಲ್ಲಿ ಪಾರಾಗಿ ಬರುತ್ತಾರೆ! ತನ್ನ ಕೊಲ್ಲ ಬಂದ ಬಿಜಾಪುರದ ಸೊಕ್ಕಿನ ದೈತ್ಯ ಸರದಾರ ಅಫಜಲ ಖಾನನನ್ನು ಹೆಡೆಮುರಿ ಕಟ್ಟಿದರು. ಕೊನೆಗೊಮ್ಮೆ ೧೬೭೪ರ ಆನಂದ ನಾಮ ಸಂವತ್ಸರದ ಜೇಷ್ಠ ಶುದ್ಧ ತ್ರಯೋದಶಿಯ ದಿನ ರಾಯಗಢದಲ್ಲಿ ಸಿಂಹಾಸನವೇರಿ ಛತ್ರಪತಿಯಾಗಿ ನಮ್ಮ ಸಮಾಜದ ಶೃದ್ಧಾಕೇಂದ್ರವಾದರು. ಶಿವಾಜಿಯನ್ನನುಸರಿಸಿ ಹೋದ ಮರಾಠ ಕುದುರೆಗಳು ಮೊಘಲರನ್ನು ಮೆಟ್ಟಿ, ಕಾಬೂಲ್ ನದಿಯ ನೀರನ್ನು ಕುಡಿದು ತಮ್ಮ ಸ್ವರಾಜ್ಯ ದಾಹ ತಣಿಸಿಕೊಳ್ಳುತ್ತವೆ. ಎಂತಹ ರೋಮ ಹರ್ಷಕ ಇತಿಹಾಸವಿದು!

                  ಇದೇ ಸಹ್ಯಾದ್ರಿ ಗರ್ಭದಲ್ಲಿ ದೈತ್ಯರಾದ ಅತಿಬಲ, ಮಹಾಬಲರ ಸಂಹಾರವಾಗಿದೆ.
ಪನ್ನಾಳದ ಪಾವನ ಖಿಂಡಿಯಲ್ಲಿ ಶಿವಾಜಿ ಮಹಾರಾಜರ ರಕ್ಷಣೆಗಾಗಿ ಹಿರಿಯ ಸೇನಾನಿ ಬಾಜೀಪ್ರಭು ದೇಶಪಾಂಡೆ ತನ್ನ ಎರಡೂ ಕೈಗಳಲ್ಲಿ ಖಡ್ಗ ಹಿಡಿದು ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಹೋರಾಡಿ ಬಲಿದಾನ ನೀಡಿದ್ದಾನೆ.

                         ನಮ್ಮ ಧರ್ಮ ಸಂಸ್ಕೃತಿಯ ರಕ್ಷಣೆಗಾಗಿ ಗುರು ಗೋವಿಂದ ಸಿಂಹ ತನ್ನ ಪರಿವಾರವನ್ನು ಬಲಿಕೊಟ್ಟು ತನ್ನ ನಂತರದ ಹೋರಾಟಕ್ಕಾಗಿ "ಬಂದಾ ಬೈರಾಗಿ"ಗೆ ಪ್ರೇರಣೆ ನೀಡಿದ್ದು ಸಹ್ಯಾದ್ರಿ ಗರ್ಭದ ನಾಂದೇಡ್ ನಲ್ಲಿ. ಅಲ್ಲೇ ಅವರ ಬಲಿದಾನವಾಯಿತು. ಕಶ್ಯಪ, ಆತ್ರೇಯ, ಭರದ್ವಾಜ, ಗೌತಮ, ಆಗಸ್ಥ್ಯ ಮುಂತಾದ ಋಷಿವರ್ಯರ ಜೊತೆ ಸಂಬಂಧ ಹೊಂದಿರುವ ಈ ಶ್ರೇಷ್ಠ ಪರ್ವತ ಸಹ್ಯಾದ್ರಿಯ ನೆನಪು ಮಾಡಿಕೊಂಡರೆ ಹೃದಯ ಪುಳಕಿತಗೊಳ್ಳುತ್ತೆ. ಅಪ್ರತಿಮ ಸ್ವಾತಂತ್ರ್ಯ ವೀರರಾದ ವಾಸುದೇವ ಬಲವಂತ ಫಡಕೆ, ಛಾಪೇಕರ್ ಸಹೋದರರು, ಸಾವರ್ಕರ್ ಸಹೋದರರು,....ಗೋಡ್ಸೆ ಸಹೋದರರು ಹೀಗೆ ಅನೇಕ ಸ್ವಾತಂತ್ರ್ಯ ಯೋಧರನ್ನು ದೇಶಕ್ಕೆ ಸಮರ್ಪಿಸಿದ ಶಿಖರವಿದು. ಅದಕ್ಕಾಗಿಯೇ ನಾವು ಪರ್ವತಗಳಲ್ಲಿ ದೈವತ್ವವನ್ನು ಕಾಣುತ್ತೇವೆ.

ವಂದೇ ಮಾತರಂ

ಸೋಮವಾರ, ಡಿಸೆಂಬರ್ 17, 2012

ಉತ್ತರ ಕೊಡು ಮೌನಮೋಹನ.....!

ಉತ್ತರ ಕೊಡು ಮೌನಮೋಹನ.....!

1. 2009ರಲ್ಲಿ ರಷ್ಯಾದ ಹಳೇ ಹಡಗು(ಗೋರ್ಶ್ಕೋವ್) ಖರೀದಿ ಹಗರಣದ ತನಿಖೆಯ ಫಲಿತಾಂಶ ಏನು?
2. 2009ರಲ್ಲಿ ನಡೆದ ಶಸ್ತ್ರಾಸ್ತ್ರ ಖರೀದಿ ಹಗರಣ ಸರ್ಕಾರದ ಬೊಕ್ಕಸಕ್ಕೆ 9000 ಕೋಟಿ ರೂಪಾಯಿ ನಷ್ಟ ಉಂಟು ಮಾಡಿತು. ಅದರ ಆರೋಪಿಗಳನ್ನೇಕೆ ಶಿಕ್ಷಿಸಲಿಲ್ಲ?
3. 2011ರಲ್ಲಿ ಇಸ್ರೇಲ್ ನಿಂದ ರಾ(RAW) ಖರೀದಿ ಮಾಡಿದ 450 ಕೋಟಿ ರೂಪಾಯಿ ಅವ್ಯವಹಾರದ ಕಥೆ ಏನು?
4. ದೇಶದ 71ಶೇಕಡಾ ರಾಜ್ಯಗಳಲ್ಲಿ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಯೋಜನೆ ಜಾರಿಯಲ್ಲಿಲ್ಲ. ಹಾಗಾದರೆ ಆ ಹಣ ಏನಾಗುತ

್ತಿದೆ?
5.ರಾಷ್ಟ್ರದ ಖಜಾನೆಗೆ 1.76 ಲಕ್ಷ ಕೋಟಿ ರೂಪಾಯಿ ನಷ್ಟ ಉಂಟು ಮಾಡಿದ ೨ಜಿ ತರಂಗಾಂತರ (2G-spectrum) ಹಗರಣದ ಆರೋಪಿಗಳನ್ನು ಯಾಕೆ ಬಿಟ್ಟಿರಿ?
6. 2012ರ 1.84 ಲಕ್ಷ ಕೋಟಿ ಹಗರಣವನ್ನು ಮಾಡಿ ಮೌನಕ್ಕೆ ಶರಣಾದ ನಿಮ್ಮ ಬಾಯೊಳಗೇನು ಕಲ್ಲಿದ್ದಲು ತುಂಬಿತ್ತೇ?
7. ಜಗತ್ತಿನ ಎದುರು ಭಾರತದ ಮಾನ ಕಳೆದ ಕಾಮನ್ ವೆಲ್ತ್ ಹಗರಣದ ಆರೋಪಿಗಳಿಗೆ ಕಲ್ಲು ಸಕ್ಕರೆ ಕೊಟ್ಟಿದ್ದೀರಲ್ಲ, ಭಾರತ ಏನು ನಿಮ್ಮಪ್ಪನ ಆಸ್ತಿಯೇ?
8. 2002ರಲ್ಲಿ ಅಟಲ್ ಪ್ರಾರಂಭಿಸಿದ ರಾಷ್ಟ್ರೀಯ ನದಿ ಜೋಡಣೆ ಯೋಜನೆಯನ್ನು 2004ರಲ್ಲಿ ಅಸ್ತಿತ್ವಕ್ಕೆ ಬಂದ ನಿಮ್ಮ ಸರಕಾರ ಕತ್ತು ಹಿಸುಕಿ ಕೊಂದಿತಲ್ಲ. ಕಾರಣವೇನು?
9. ವಾಜಪೇಯಿ ಸರಕಾರಕ್ಕೆ ಹೆಸರು ಬರುವುದೆಂದು ಸುವರ್ಣಚತುಷ್ಪಥ ಯೋಜನೆಯನ್ನು ಮಕಾಡೆ ಮಲಗಿಸಿದಿರಲ್ಲ. ಯಾಕೆ?
10. ನೆರೆಯ ದೇಶಗಳ ಕರೆನ್ಸಿ ಸ್ಥಿರವಾಗಿರುವಾಗ ಭಾರತದ ರೂಪಾಯಿ ಮಾತ್ರ ಅಪಮೌಲ್ಯ ಆಗಲು ಕಾರಣವೇನು?
11. ಭಯೋತ್ಪಾದನೆಗೆ ಹವಾಲ ಹಣ ಪೂರೈಕೆಯಾಗುತ್ತದೆ ಎನ್ನುವ ನೀವು ಅದನ್ನು ನಿಲ್ಲಿಸಲು ಯಾಕೆ ಕ್ರಮ ಕೈಗೊಳ್ಳುವುದಿಲ್ಲ?
12. ಪ್ರತಿವರ್ಷ ಸಹಸ್ರ ಸಂಖ್ಯೆಯ ಜನರ ಜೀವ ತೆಗೆಯುತ್ತಿರೋ ನಕ್ಸಲರ ನಿಗ್ರಹಕ್ಕೆ ಏನು ಕ್ರಮ ಕೈಗೊಂಡಿದ್ದೀರಿ?
13. ಗುಜರಾತ್ನಲ್ಲಿ 11% ಕೃಷಿ ಕ್ಷೇತ್ರದಲ್ಲಿ ಏರಿಕೆಯಾಗಿರುವಾಗ ಇಡೀ ದೇಶದಲ್ಲಿ ಕೇವಲ 1% ಏರಿಕೆಯಾಗುತ್ತಿದೆ ಎನ್ನುತ್ತೀರಲ್ಲ ನಿಮ್ಮ ಪಟ್ಟವನ್ನು ಅಭಿವೃದ್ಧಿಯ ಹರಿಕಾರ ಮೋದಿಯ ಕೈಗೆ ಯಾಕೆ ಕೊಡಬಾರದು?
14. ರಾಷ್ಟ್ರದ ಇತಿಹಾಸದಲ್ಲೇ ಮೊದಲ ಬಾರಿಗೆ ಕಂಡುಬಂದ ಸರಕಾರ ಮತ್ತು ಸೇನೆಯ ನಡುವಿನ ಸಂಘರ್ಷಕ್ಕೆ ನಿಮ್ಮ ದೇಶದ್ರೋಹತನವೇ ಕಾರಣವಲ್ಲವೇ?
15. ವಿದ್ಯುತ್ ಉತ್ಪಾದನೆಯಲ್ಲಿ 40% ಉತ್ಪಾದನೆ ಸ್ಥಗಿತವಾಗಿದೆಯಲ್ಲ. ಏನು ಕ್ರ್ಮ ಕೈಗೊಂಡಿರಿ?
16. ಅಮರನಾಥ ಯಾತ್ರೆಯನ್ನು 38 ದಿನಗಳಿಗಿಳಿಸಿ ಹಝ್ ಯಾತ್ರೆಗೆ ಸಹಾಯಧನ ಹೆಚ್ಚಿಸಿದ ನಿಮ್ಮ ಓಟ್ ಬ್ಯಾಂಕ್ ರಾಜಕಾರಣಕ್ಕೆ ಏನು ಹೇಳಬೇಕು?
17. ಜಗತ್ತು ಕಂಡ ಬಹುದೊಡ್ಡ ಹಗರಣವಾದ ಯುರೇನಿಯಮ್ ಹಗರಣ ಯಾಕೆ ಮುಚ್ಚಿ ಹೋಯಿತು?
18. ನೀವೆ ಹೇಳಿದ ವೃತ್ತಿ ಕೌಶಲ ತರಬೇತಿ ಕೇಂದ್ರಗಳು ಎಲ್ಲಿ ಹೋದವು?
19. ಅಮರ್ ಜವಾನ್ ಸ್ಮಾರಕ ಮುರಿದ ಆರೋಪಿಗಳನ್ನು ಹಿಡಿದ ಡಿಸಿಪಿ ಪ್ರಮೋದ್ ತಾವ್ಡೆಗೆ " ಸುಭಾಷ್ ಚಂದ್ರ ಬೋಸ್ ತರಹ ಕನ್ನಡಕ ಹಾಕಿದ ತಕ್ಷಣ ಬಹಳ ಶಾಣ್ಯಾ ಎಂದು ಕೊಳ್ಳಬೇಡ, ಬಾಸ್ಟರ್ಡ್. ಬಿಟ್ಟು ಬಿಡು ಅವರನ್ನು" ಅಂತ ಬೈದ ಕಮೀಷನರ್ ಅರೂಪ್ ಪಟ್ನಾಯಕ್ ನಿಗೆ ಆರೋಪಿಗಳನ್ನು ಬಂಧಿಸದಂತೆ ಆರ್ಡರ್ ಮಾಡಿದ ನಿಮ್ಮ ಸರಕಾರ ಏನು ಪಾಕಿಸ್ತಾನದಿಂದ ಚುನಾಯಿತವಾದದ್ದೇ?
20. ಇಟಲಿಯ ಪರಿಚಾರಿಕೆಯ ಮಾತು ಕೇಳಿಕೊಂಡು ನಾಯಿಯ ಹಾಗೆ ಅವಳ ಹಿಂದೆ ಬಾಲ ಅಲ್ಲಾಡಿಸುತ್ತೀಯಲ್ಲ, ಸಿಖ್ಖರ ಸ್ವಾಭಿಮಾನದ ಒಂದು ಅಂಶವಾದರೂ ನಿನ್ನಲ್ಲಿದೆಯಾ? ಭಾರತೀಯ ಅಂತ ನಿನ್ನನ್ನು ಹೇಗೆ ಕರಿಯೋದು?

ಈ ದೇಶದ ಸಂಪತ್ತಿನ ಮೇಲೆ ಮೊದಲ ಹಕ್ಕು ಅಲ್ಪಸಂಖ್ಯಾತರದ್ದು ಎನ್ನಲು ನಿನಗೆ ನಾಚಿಕೆಯಾಗುವುದಿಲ್ಲ! ಅಡ್ವಾಣಿಜೀಗೆ ನಿಮ್ಮ ಜ್ಯೋತಿಷಿಯನ್ನು ಬದಲಿಸಿಕೊಳ್ಳಿ ಅಂತ ವ್ಯಂಗ್ಯ ಮಾಡಲು ನಿನ್ನ ನಾಲಗೆ ಹೊರಳುತ್ತದೆ! ಸಾವಿರ ಉತ್ತರಗಳಿಗಿಂತ ನನ್ನ ಮೌನ ಮೇಲು ಎಂದ ಹಾಗಲ್ಲ, ಉತ್ತರ ಕೊಡು ಮೌನಮೋಹನ!

ಶನಿವಾರ, ಡಿಸೆಂಬರ್ 15, 2012

ಭಾರತ ದರ್ಶನ-೨೨







                       ಎರಡೂವರೆ ಶತಮಾನಗಳ ಕಾಲ ಜಗತ್ತಿನ ಕಣ್ಣು ಕೋರೈಸಿದ ಸ್ವರ್ಣಸಾಮ್ರಾಜ್ಯ ವಿಜಯನಗರದ ಹಂಪೆ. ಸಹ್ಯಾದ್ರಿಯ ಗರ್ಭದಲ್ಲಿ ಹೊಸಪೇಟೆಯ ಬಳಿ ಈ ಐತಿಹಾಸಿಕ ಸ್ಥಳವಿದೆ. ೧೫೬೫ರಲ್ಲಿ ವಿಜಯನಗರದ ಪತನವಾದಾಗ ವಿರೋಧಿ ಮತಾಂಧರು ನಡೆಸಿದ ಕೃತ್ಯ ಎಂತಹ ಕ್ರೂರಿಗಳನ್ನು ಕೂಡಾ ನಾಚಿಸುವಂತಹದ್ದು. ಆಗ ನಡೆದ ಮನುಕುಲದ ಮನಕಲಕುವ ಲೂಟಿ ಮತ್ತು ಪೈಶಾಚಿಕ ಕೃತ್ಯಗಳಿಂದ ವಿರೂಪಾಕ್ಷ ಮಂದಿರ ಅದೃಷ್ಟವಶಾತ್ ಪಾರಾಯಿತು. ಪುಣ್ಯ ಸಲಿಲೆ ತುಂಗಭದ್ರೆ ವಿರೂಪಾಕ್ಷನ ಪಾದ ಪ್ರೋಕ್ಷಿಸುತ್ತಿದ್ದಾಳೆ.

                       ರಾಮಾಯಣದ ಸುವರ್ಣ ಸಂಪುಟಕ್ಕೆ ಮೆರುಗು ನೀಡಿದ ತಾಣ ಹಂಪೆ. ಮತಂಗ ಮುನಿಯ ಆಶ್ರಮ ಇಲ್ಲಿನ ಪಂಪಾ ಸರೋವರದ ಸಮೀಪದಲ್ಲಿತ್ತು. ಮಹಾಪರಾಕ್ರಮಿ, ರಾವಣನನ್ನೇ ನಡುಗಿಸಿದ ವಾನರೇಂದ್ರ ವಾಲಿಯ ಕಿಶ್ಕಿಂಧ ಇರುವುದು ಇಲ್ಲೇ. ಜಿತೇಂದ್ರಿಯ, ರಾಮಬಂಟ, ರಾಮಾಯಣದ ಅನರ್ಘ್ಯರತ್ನ ಹನುಮನ ಅಂಜನಾದ್ರಿಯೂ ಇಲ್ಲೇ ಇದೆ. ವಾಲಿಯಿಂದ ತಿರಸ್ಕರಿಸಲ್ಪಟ್ಟು, ಹೆಂಡತಿಯನ್ನು ಕಳೆದುಕೊಂಡ ಸುಗ್ರೀವ ದುಃಖದಲ್ಲಿದ್ದ ಸ್ಥಳ ಋಷ್ಯಮೂಕ ಇದೇ ಪರಿಸರದಲ್ಲಿದೆ. ಇಲ್ಲೇ ಪಂಪಾ ಸರೋವರದ ಬಳಿ ರಾಮಾಂಜನೇಯರ ಸಮ್ಮಿಲನವಾಯಿತು. ಹನುಮ ಅಂದಿನಿಂದ ಪುರುಷೋತ್ತಮನ ದಾಸನಾದ. ಮಾತ್ರವಲ್ಲ ಅಗ್ನಿಸಾಕ್ಷಿಯಾಗಿ ರಾಮ ಸುಗ್ರೀವರ ಸಖ್ಯ ಮಾಡಿಸಿದ. ಶ್ರೀರಾಮನಿಗಾಗಿ ವರುಷಗಳ ಪರ್ಯಂತ ಕಾಯುತ್ತ ಅವನಿಗಾಗಿ ಅವನದೇ ಧ್ಯಾನದಲ್ಲಿ ಆತ್ಮಯಜ್ಞ ಮಾಡಿದ ಶಬರಿಯ ಪವಿತ್ರ ತಾಣವಿದು. ಸಪ್ತಸಾಲಭೇದ, ವಾಲಿವಧೆ ಮುಂತಾದ ಪ್ರಸಂಗ ನಡೆದ ಸ್ಥಳ. ವಿರೂಪಾಕ್ಷ, ವಿಜಯ ವಿಠ್ಠಲರು ನೆಲೆ ನಿಂತ ಅದ್ಭುತ ಸಮನ್ವಯ ಕ್ಷೇತ್ರ.

                        ಇಂತಹ ಪವಿತ್ರ ಸ್ಥಳದಲ್ಲಿ ಹರಿಹರ ಬುಕ್ಕ ದೇವರು ಮಹಾನ್ ತಪಸ್ವಿ ವಿದ್ಯಾರಣ್ಯರ ಮಾರ್ಗದರ್ಶನದಲ್ಲಿ ವಿಶಾಲ ಸಾಮ್ರಾಜ್ಯವನ್ನು ಕಟ್ಟಿದರು. ಈ ಸಾಮ್ರಾಜ್ಯ ವಿಜಯಶಾಲಿ ಹಿಂದುತ್ವದ ಧ್ವಜವನ್ನು ಬಾನೆತ್ತರದಲ್ಲಿ ಮುಕ್ತವಾಗಿ ಹಾರುವಂತೆ ಮಾಡಿತು. ಮುಂದೆ ಎರಡೂವರೆ ಶತಮಾನಗಳ ಕಾಲ ಈ ಪ್ರಭುತ್ವ ಧರ್ಮವೈರಿಗಳಿಗೆ ದಕ್ಷಿಣ ಭಾರತದಲ್ಲಿ ತಲೆ ಎತ್ತಲೂ ಅವಕಾಶ ಕೊಡಲಿಲ್ಲ. ಇಡೀ ರಾಷ್ಟ್ರವನ್ನು ನುಂಗಲಿಕ್ಕೆ ಕಾಡ್ಗಿಚ್ಚಿನಂತೆ ಬಂದ ಇಸ್ಲಾಮಿ ಮತಾಂಧರನ್ನು ಸಾಮ್ರಾಜ್ಯ ಚತುಃಸೀಮೆಯ ಹೊರಗೇ ಎದುರಿಸಿತು. ಇವತ್ತು ದಕ್ಷಿಣದಲ್ಲಿ ಉಳಿದಿರಬಹುದಾದ ಹಿಂದುತ್ವ, ಧರ್ಮಪೀಠಗಳು, ಸ್ಥಾಪತ್ಯ, ಕಲಾವೈಭವಗಳಿಗೆ ಇಡೀ ರಾಷ್ಟ್ರ ವಿಜಯನಗರ ಸಾಮ್ರಾಜ್ಯಕ್ಕೆ ಋಣಿಯಾಗಿರಬೇಕು.

                              ಸಹ್ಯಾದ್ರಿ ಗರ್ಭದ ಮಂಡ್ಯದ ಮೇಲುಕೋಟೆ ರಾಮಾನುಜಾಚಾರ್ಯರ ಲೀಲಾಭೂಮಿ. ಅವರು ಚೋಳರಾಜನ ಕಿರುಕುಳದಿಂದ ನೊಂದು ಮೇಲುಕೋಟೆಗೆ ಬಂದವರು. ೧೩ ವರ್ಷಗಳ ಕಾಲ ಮೇಲುಕೋಟೆ ಅವರಿಗೆ ಆಶ್ರಯ ಕೊಟ್ಟಿತು. ಅಲ್ಲೇ ಅವರು ಚೆಲುವ ನಾರಾಯಣನನ್ನು ಪ್ರತಿಷ್ಠಾಪಿಸಿದರು. ಅವರ ಸಂಪರ್ಕದಿಂದ ಜೈನ ದೊರೆ ಬಿಟ್ಟಿದೇವ ವಿಷ್ಣುವರ್ಧನನಾದ. ಆ ದೊರೆ ವಿಷ್ಣುವರ್ಧನ ಬೇಲೂರು ಚೆನ್ನಕೇಶವ ದೇವಸ್ಥಾನವನ್ನು ಕಟ್ಟಿಸಿದ. ಶ್ರೀ ರಾಮಾನುಜರು ಸಾಮಾಜಿಕ ಸಾಮರಸ್ಯ ಮತ್ತು ದಲಿತರನ್ನು ಮೇಲಕ್ಕೆತ್ತಲು ಒತ್ತಾಸೆ ನೀಡಿದರು. ಭಾರ್ಗವ ಕ್ಷೇತ್ರವಾದ ಉಡುಪಿ ಕೃಷ್ಣನ ಬೀಡು. ದ್ವೈತ ಪ್ರತಿಪಾದಕ ಮಧ್ವರು ಉಡುಪಿಯ ಪಾಜಕದಲ್ಲಿ ಜನಿಸಿದರು. ಅವರಿಂದೊದಗಿದ ಅಷ್ಠಮಠಗಳು ಸಂಸ್ಕೃತಿಯ ಉಳಿಸಲೋಸುಗ ಶ್ರಮಿಸುತ್ತಿವೆ.

                      ಸಹ್ಯಾದ್ರಿಯ ದಕ್ಷಿಣಭಾಗವನ್ನು ಮಲಯಾ ಅಂತ ಕರೆಯುತ್ತೇವೆ. ಅದು ಶ್ರೀಗಂಧದ ನೆಲೆವೀಡು. ಆದ್ವೈತ, ವೇದಾಂತಗಳ ಮೂಲಕ ಬೌಧ್ಧ ಆಕ್ರಮಣದಿಂದ ಹಿಂದು ಧರ್ಮವನ್ನು ಕಾಪಾಡಿ, ಧರ್ಮದ ಪುನರುತ್ಥಾನ ಮಾಡಿ, ಭಾರತದಾದ್ಯಂತ ಸಂಚರಿಸಿ ಅಲ್ಲಲ್ಲಿ ಶಕ್ತಿ, ಹರಿ, ಹರ ಪೀಠಗಳನ್ನು ನಿರ್ಮಿಸಿ ಭಾರತವನ್ನು ಸಮನ್ವಯ ಹಾಗೂ ಏಕತ್ರಗೊಳಿಸಿದ ಶಂಕರಾಚಾರ್ಯರು ಮಲಯಾದ ಗರ್ಭವಾದ ಕಾಲಟಿಯಲ್ಲೇ ಜನಿಸಿದರು. ಇಲ್ಲಿನ ಇನ್ನೊಂದು ಕ್ಷೇತ್ರ ವರ್ಕಳ. ನಾರಾಯಣ ಗುರುಗಳ ಕರ್ಮಭೂಮಿ. ವಿಕೃತ ವರ್ಣವ್ಯವಸ್ಥೆಗೆ ಸಿಲುಕಿ ನರಳುತ್ತಿದ್ದ ಸಮಾಜವನ್ನು ಧರ್ಮ, ಶಿಕ್ಷಣ, ಸಂಸ್ಕಾರ ನೀಡಿ ಮೇಲಕ್ಕೆತ್ತಿ ಕೇರಳವನ್ನು ಕಾಪಾಡಿದ ಮಹಾಪುರುಷ ಆತ. ಮಲಯಾದ ಗರ್ಭದಲ್ಲೇ ಇರುವ ಬೆಟ್ಟ ಶಬರಿಮಲೆ. ರಾಮನಿಗಾಗಿ ಆತ್ಮಯಜ್ಣ್ಯ ಮಾಡಿದ ಮಾತೆ ಶಬರಿಯ ಪಾದ ಸ್ಪರ್ಷದಿಂದ ಪುನೀತವಾದ ಇದರ ನೆತ್ತಿಯಲ್ಲೇ ಹರಿಹರ ಸುತ ಅಯ್ಯಪ್ಪನ ನೆಲೆ.

( ಮುಂದಿನ ಭಾಗ ಹಿಂದೂ ಹೃದಯ ಸಾಮ್ರಾಟ ಛತ್ರಪತಿ ಶಿವಾಜಿ ಮಹಾರಾಜನ ಹುಟ್ಟು, ಕೆಚ್ಚು, ಹೆಚ್ಚುಗಳಿಗೆ ಸಾಕ್ಷಿಯಾದ ಸಹ್ಯಾದ್ರಿಯ ಸೀಮೆಯ ಬಗ್ಗೆ.)

ಸೋಮವಾರ, ಡಿಸೆಂಬರ್ 10, 2012

ಭಾರತ ದರ್ಶನ-೨೧



              ಹಿಮಾಲಯದಲ್ಲಿ ಇನ್ನೂ ಅನೇಕ ಕ್ಷೇತ್ರಗಳಿವೆ. ಪಶುಪತಿನಾಥ, ಮುಕ್ತಿನಾಥ, ಸ್ವಯಂಭೂನಾಥ, ಮತ್ಸ್ಯೇಂದ್ರನಾಥ, ವೈಷ್ಣೋದೇವಿ, ಹೇಮಕುಂಡ...ಹೀಗೆ ಅಸಂಖ್ಯ ಪವಿತ್ರ ಕ್ಷೇತ್ರಗಳು. ಪಾರ್ವತಿಯ ಸಮ್ಮುಖದಲ್ಲಿ ಪರಶಿವ ಪಾರ್ಥನಿಗೆ ಪಾಶುಪತ ನೀಡಿದ ಪವಿತ್ರ ಕ್ಷೇತ್ರ ಪಶುಪತಿನಾಥ.

          ಕೇವಲ ತೀರ್ಥಕ್ಷೇತ್ರ ಮಾತ್ರವಲ್ಲ, ಹವಾಮಾನದ ದೃಷ್ಠಿಯಿಂದಲೂ ಹಿಮಾಲಯ ನಮಗೆ ಮಹದುಪಕಾರ ಮಾಡಿದೆ. ಕೆಲವೇ ವರ್ಷಗಳ ಹಿಂದೆ ರಷ್ಯಾದಲ್ಲಿ ಅಣುವಿಕಿರಣ ಸೋರಿಕೆ ಆದಾಗ ಭಾರತವನ್ನು ಆ ವಿಷಾನಿಲದಿಂದ ಕಾಪಾಡಿದ್ದು ಇದೇ ಹಿಮಾಲಯ. ದಕ್ಷಿಣ ಸಮುದ್ರದಿಂದ ಬರುವ ಗಾಳಿಯನ್ನು ಹಿಡಿದಿಟ್ಟು ವಿಪುಲ ಜಲವೃಷ್ಟಿಗೈಯ್ಯುತ್ತದೆ. ಹಿಮಾಲಯದಿಂದ ಹರಿದು ಬರುವ ನದಿಗಳಿಂದಾಗಿ ಭಾರತ ಸುಜಲಾಂ ಸುಫಲಾಂ ಆಗಿದೆ. ಹೀಗಾಗಿಯೇ ಹಿಮಾಲಯ ಅಂದ ತಕ್ಷಣ ಈ ನಾಡಿನ ಪ್ರತಿ ಮಗುವಿನ ವೀಣಾ ತಂತಿಯನ್ನು ಸ್ಪರ್ಷ ಮಾಡಿದ ಹಾಗಾಗುತ್ತೆ!

        ಹಿಮಾಲಯದಂತೆಯೇ ದಕ್ಷಿಣದ ರಾಜ್ಯಗಳಿಗೆ ಸಹಾಯಕವಾಗಿ ನಿಂತಿರುವುದು ಸಹ್ಯಾದ್ರಿ. ಕರ್ನಾಟಕಕ್ಕೆ ಸಹ್ಯಾದ್ರಿಯ ಕೊಡುಗೆ ಅಪಾರ. ನಮ್ಮ ದೇಶದ ಪಶ್ಚಿಮದಲ್ಲಿ ದಕ್ಷಿಣೋತ್ತರವಾಗಿ ಹಬ್ಬಿ ನಿಂತಿರುವ ಭವ್ಯ ಗಿರಿಗಹ್ವರ ಸಹ್ಯಾದ್ರಿ. ಕೊಂಕಣ ಸೀಮೆಯ ರತ್ನಾಗಿರಿಯಿಂದ ಮೌನ ತಪಸ್ವಿನಿ ಕನ್ಯಾಕುಮಾರಿಯವರೆಗೆ ತಲೆ ಎತ್ತಿ ನಿಂತ ಭವ್ಯ ಗಿರಿ ಪೀಠವಿದು. ಸಪ್ತಗಿರಿಗಳಲ್ಲೊಂದಾಗಿ ನಮಗೆ ಪ್ರಾತಸ್ಮರಣೀಯವಾಗಿರುವ ಇದು ಹಿಮಾಲಯದ ನಂತರದ ಅತೀ ದೊಡ್ಡ ಪರ್ವತ.

              ತಾಪಿ ನದೀ ತೀರದಿಂದ ಕುಮಾರಿ ಪೀಠದವರೆಗೆ ಹಬ್ಬಿರುವ ಈ ಮಾಲಿಕೆಯನ್ನು ಮೂರು ಭಾಗಗಳಾಗಿ ವಿಂಗಡಿಸಬಹುದು. ತಾಪಿಯಿಂದ ದಕ್ಷಿಣಕ್ಕಿರುವ ೮೦೦ ಮೈಲು ಉದ್ದದ ಸೀಮೆಯೇ ಪ್ರಧಾನ ಸಹ್ಯಾದ್ರಿ. ನಂತರ ಸುಮಾರು ೧೬ ಮೈಲು ಉದ್ದದ ಪಾಲ್ಘಾಟ್ ಕಣಿವೆ. ನಂತರ ಸುಮಾರು ೨೦೦ ಮೈಲು ಉದ್ದದ ಮಲಯ ಪರ್ವತ ಶ್ರೇಣಿ. ಸಹ್ಯಾದ್ರಿ ಶಿಖರಗಳ ಸರಾಸರಿ ಎತ್ತರ ೪೦೦೦ ಅಡಿಗಳು. ಮಹಾರಾಷ್ಟ್ರದ ಕಳುಸುಬಾಯಿ ಅನ್ನೋ ಶಿಖರ ೫೪೨೦ ಅಡಿ ಎತ್ತರವಿದೆ. ಕರ್ನಾಟಕದಲ್ಲಿ ಸಹ್ಯಾದ್ರಿ ಶಿಖರಗಳು ಸುಮಾರು ಆರರಿಂದ ಎಂಟು ಸಾವಿರ ಅಡಿ ಎತ್ತರವಿದ್ದಾವೆ. ನೀಲಗಿರಿ ನಡುವಿನ ದೊಡ್ಡ ಬೆಟ್ಟ ೮೧೨೫ ಅಡಿ ಎತ್ತರವಿದೆ.

            ಸಹ್ಯಾದ್ರಿಯ ಬ್ರಹ್ಮಗಿರಿಯ ತ್ರ್ಯಂಬಕ ಕ್ಷೇತ್ರದಲ್ಲಿ ಗೌತಮ ಮುನಿಯ ತಪಸ್ಸಿನಿಂದಾಗಿ ಗೋದಾವರಿ ಜನಿಸಿದ್ದಾಳೆ. ಕೃಷ್ಣೆ, ಭೀಮೆಯರೂ ಸಹ್ಯಾದ್ರಿಯ ಸಲಿಲೆಗಳೇ. ಇವುಗಳೊಂದಿಗೆ ತುಂಗಾ, ಭದ್ರಾ, ಕಾಳಿ, ಶರಾವತಿ, ವರದಾ, ಕಾವೇರಿ, ಘಟಪ್ರಭಾ, ಮಲಪ್ರಭಾ, ಗಂಗಾವತಿ, ವೇದಾವತಿ, ವಾಶಿಷ್ಠಿ, ನೇತ್ರ, ನಂದಿನಿ, ನಳಿನಿ, ಸೀತಾ, ಕುಮಾರಧಾರ, ಮಾಲತಿ, ಅರ್ಕಾವತಿ, ಮಾಂಡವಿ, ಹೇಮಾ, ಕಪಿಲಾ, ಸುವರ್ಣಾಮುಖಿ...ಎಲ್ಲವೂ ಸಹ್ಯಾದ್ರಿಯ ವರಪ್ರಸಾದ. ದ್ವಾದಶ ಜ್ಯೋತಿರ್ಲಿಂಗಗಳ ಪೈಕಿ ಆರು ಸಹ್ಯಾದ್ರಿಯ ಮಡಿಲಲ್ಲಿವೆ.

         ಇದರ ಗರ್ಭದಲ್ಲೇ ಪಂಚವಟೀ ಇದೆ.  ಅದೇ ಈಗಿನ ನಾಸಿಕ್. ರಾಮ ಸೀತಾ, ಲಕ್ಷ್ಮಣ ಸಮೇತನಾಗಿ ಹದಿನಾಲ್ಕು ವರ್ಷ ವನವಾಸದ ಬಹುಪಾಲು ಭಾಗವನ್ನು ಕಳೆದ ಪುಣ್ಯಭೂಮಿಯಿದು. ನಾಸಿಕ ಅಂದರೆ ಮೂಗು. ರಾಮನಾಜ್ಞೆಯ ಮೇರೆಗೆ ಮರ್ಯಾದೆ ಮೀರಿ ವ್ಯವಹರಿಸಿದ ಹೆಣ್ಣು, ರಾಕ್ಷಸಿ, ಶೂರ್ಪನಖಿಯ ಮೂಗನ್ನು ಸೌಮಿತ್ರಿ ಕತ್ತರಿಸಿದ ಜಾಗವಿದು. ತನ್ಮೂಲಕ ಕೋಪಗೊಂಡು ಎರಗಿದ ಖರ ದೂಷಣರನ್ನು ರಾಮ ಯಮಪುರಿಗಟ್ಟಿದ ಕ್ಷೇತ್ರವಿದು. ಮಾಯಾಜಿಂಕೆಯಾಗಿ ಬಂದ ಮಾರೀಚ ಮುಕ್ತಿ ಹೊಂದಿದ ಜಾಗ. ಲೋಕ ಮಾತೆ ಸೀತೆಯನ್ನು ಖಳ ರಾವಣ ಅಪಹರಿಸಿ ರಾಮಾಯಣಕ್ಕೆ ತಿರುವು ನೀಡಿದ ಸ್ಥಳ. ದಾಟಬಾರದ, ದಾಟಿದಲ್ಲಿ ಅಪಾಯ ಖಚಿತವಾದ ಲಕ್ಷ್ಮಣ ರೇಖೆ ಸೃಷ್ಠಿಯಾದ ಜಾಗವಿದು. ಮಾತೆ ಸೀತೆಯ ಮಾನ ರಕ್ಷಣೆಗೆ ಪಕ್ಷಿರಾಜ ಜಟಾಯು ಪ್ರಾಣ ಪಣವಿಟ್ಟು ಹೋರಾಡಿದ ಪವಿತ್ರ ಭೂಮಿ. ಭೂಮಿಗಿಳಿದ ಭಗವಂತ ಪತ್ನಿಯನ್ನು ಕಳಕೊಂಡು ಕಣ್ಣೀರ ಕೋಡಿ ಹರಿಸಿದ ಜಾಗ.

            ಇಲ್ಲೇ ಹತ್ತಿರದಲ್ಲಿ ಗೌತಮರ ತಪೋಭೂಮಿ ಇದೆ. ಗೋದೆಯ ಉಗಮ ಇಲ್ಲೇ. ಶಿವ ತ್ರಯಂಬಕೇಶ್ವರನಾಗಿ ನೆಲೆ ನಿಂತ ಸ್ಥಳ. ಕಟಿಯಲ್ಲಿ ಕರವಿಟ್ಟು ಇಟ್ಟಿಗೆಯ ಮೇಲೆ ನಿಂತ ಪಾಂಡುರಂಗನ ಪಂಡರಾಪುರ ಚಂದ್ರಭಾಗ ತೀರದಲ್ಲಿದೆ. ಗೋದೆಯ ದಡದಲ್ಲಿ ಪ್ರತಿಷ್ಠಾನಪುರ ಈಗಿನ ಪೈಠಣ್ ಇದೆ. ಶಕಕರ್ತ ಶಾಲಿವಾಹನನ ರಾಜಧಾನಿ ಇದು. ಎಂಟು ಶತಮಾನಗಳ ಕಾಲ ಸಾಗರೋತ್ತರವಾಗಿ ಭಾರತದ ಸಂಸ್ಕೃತಿಯನ್ನು ಹಬ್ಬಿಸಿ ಮೆರೆಯಿತದು. ಸಮರ್ಥ ರಾಮದಾಸರ ತಪೋಭೂಮಿ ಸಜ್ಜನಘಢ, ಕೊಲ್ಹಾಪುರದ ಮಹಾಲಕ್ಷ್ಮಿ, ಅಜಂತಾ, ಎಲ್ಲೋರಾ, ಅಷ್ಟವಿನಾಯಕ ಕ್ಷೇತ್ರಗಳು ಹೀಗೆ ಅಸಂಖ್ಯ ಕ್ಷೇತ್ರಗಳು ಸಹ್ಯಾದ್ರಿಯ ಗರ್ಭದಲ್ಲಿವೆ. ಸಹ್ಯಾದ್ರಿಯ ತಪ್ಪಲ ಬಸವನ ಬಾಗೇವಾಡಿಯಲ್ಲಿ "ಲಿಂಗ ಮಧ್ಯೇ ಜಗತ್ಸರ್ವಂ ಸತ್ಯಂ ಶಿವಂ ಸುಂದರಂ. ಕಾಯಕವೇ ಕೈಲಾಸ " ಎಂದ ಅಣ್ಣ ಬಸವಣ್ಣನ ಜನನವಾಯಿತು.

ಶನಿವಾರ, ಡಿಸೆಂಬರ್ 8, 2012

ಎದ್ದೇಳು ಅರ್ಜುನ.....!

ಎದ್ದೇಳು ಅರ್ಜುನ.....!


ಅಗ್ನಿದಃ ಗರದಶ್ಚೈವ ಶಸ್ತ್ರಪಾಣಿರ್ಧನಾಪಹಃ |
ಕ್ಷೇತ್ರ-ಧಾರಾ-ಹರಶ್ಚೈವ ಷಡೇತೇ ಆತತಾಯಿನಃ ||

                  " ಪರರ ಆಸ್ತಿ-ಪಾಸ್ತಿಗೆ ಬೆಂಕಿಯಿಕ್ಕುವವನು, ವಿಷವಿಕ್ಕುವವನು, ಆಯುಧ ಹಿಡಿದ ಹಂತಕನು, ಇತರರ ಸಂಪತ್ತನ್ನು ಅಪಹರಿಸುವವನು, ಪರರ ಭೂಮಿಯನ್ನು ಕಬಳಿಸುವವನು, ಮತ್ತು ಪರ ಸ್ತ್ರೀಯನ್ನು ಹೊತ್ತೊಯ್ಯುವವನು ಹೀಗೆ ಆರು ಬಗೆಯ ದುರ್ಜನರಿರುತ್ತಾರೆ. ಇಂತಹವರನ್ನು ಕಂಡಲ್ಲಿಯೇ "ಜಹಿ, ಮಾ ವ್ಯತಿಷ್ಠ" (ಕೊಲ್ಲು, ಹಿಂಜರಿಯದಿರು) ಎನ್ನುತ್ತವೆ ಧರ್ಮಶಾಸ್ತ್ರಗಳು.

ಆದರೆ ನಾವಿದನ್ನು ಪಾಲಿಸುತ್ತಿದ್ದೇವೆಯೇ?

                        ನಮ್ಮ ಆಸ್ತಿಯನ್ನು ಕಬಳಿಸಿದ ಚೀನಿಯರನ್ನು ಕೊಲ್ಲುವುದಿರಲಿ, ರತ್ನಗಂಬಳಿ ಹಾಸಿ ಅವರ ಉತ್ಪಾದನೆಗಳನ್ನೇ ನಮ್ಮ ಎಲ್ಲಾ ಕ್ಷೇತ್ರಗಳಲ್ಲಿ ಬಳಸುವ ಮೂಲಕ ಮರ್ಯಾದೆಯನ್ನೇ ಬಿಟ್ಟು ಬಿಟ್ಟಿದ್ದೇವೆ. ಸಾಮಾನ್ಯನೊಬ್ಬನ ಮೊಬೈಲ್ ಫೋನ್ ನಿಂದ ಹಿಡಿದು ರಕ್ಷಣಾ ವಿಭಾಗ, ಸ್ಯಾಟಲೈಟ್ ಹೀಗೆ ಎಲ್ಲಾ ಕ್ಷೇತ್ರಗಳನ್ನು ಅವು ಆವರಿಸಿಕೊಂಡಿದ್ದು, ಅವುಗಳಲ್ಲಿರುವ ಸಿದ್ಧ ಪ್ರೋಗ್ರಾಮ್ ಗಳು ಸಮಯಕ್ಕೆ ಸರಿಯಾಗಿ ಚಿಗಿತುಕೊಂಡರೆ ನಮ್ಮ ಅಂತರ್ಜಾಲ(ಇಂಟರ್ನೆಟ್), ಮೊಬೈಲ್ ಆದಿಯಾಗಿ ಎಲ್ಲಾ ಸಂವಹನ ವ್ಯವಸ್ಥೆ ಸ್ಥಗಿತಗೊಳ್ಳುತ್ತದೆ. ಅದೇ ಸಮಯಕ್ಕೆ ಸರಿಯಾಗಿ ಚೀನೀ ಸೇನೆ ತನ್ನ ಅತ್ಯಾಧುನಿಕ ಶಸ್ತ್ರಾಸ್ತ್ರಗಳೊಂದಿಗೆ ನಮ್ಮ ಮೇಲೆರಗಿದರೆ ಆ ಭಗವಂತನೇ ಹಿಂದೂಸ್ಥಾನವನ್ನು ರಕ್ಷಿಸಬೇಕು!

                      ನಮ್ಮ ಮಾಜಿ ಪ್ರಧಾನಿ, ಸಚ್ಚರಿತ, "ಪರಿಶುದ್ಧ ರಾಜಕಾರಣಿ" ದಿವಂಗತ ಶಾಸ್ತ್ರಿಯವರಿಗೆ ವಿಷವಿಕ್ಕಿದ, ಭಯೋತ್ಪಾದನೆಯ ಆಯುಧ ಹಿಡಿದು ಸದಾ ನಮ್ಮನ್ನು ಬೆದರಿಸುತ್ತಿರುವ, ನಮ್ಮ ಆಸ್ತಿ ಪಾಸ್ತಿ, ಸಂಪತ್ತೆಲ್ಲವನ್ನೂ ನುಂಗಿ ನೀರು ಕುಡಿದಿರುವ ಪಾಕಿಸ್ತಾನ ಇನ್ನೂ ಇದೆಯಲ್ಲ!
ನಮ್ಮ ಸ್ತ್ರೀಯರನ್ನು ಅಪಹರಿಸುತ್ತಿರುವ ಜಿಹಾದಿಗಳನ್ನು ಜೀವಂತ ಬಿಡುತ್ತಿದ್ದೇವಲ್ಲಾ?

                        ನಮ್ಮ ಭೂಮಿಯನ್ನು ಕಬಳಿಸುತ್ತಿರುವ ರಾಜಕಾರಣಿಗಳು, ರಿಯಲ್ ಎಸ್ಟೇಟ್ ಉದ್ಯಮಿಗಳು, ನಮ್ಮ ಸಂಪತ್ತನ್ನು ದೋಚುತ್ತಿರುವ ಇಟಲಿಯ ನಾಯಿಗಳು, ಮತ್ತವುಗಳ ಹಿಂ'ಬಾಲ'ಕರು ಇನ್ನೂ ಬದುಕಿದ್ದಾರೆ!
ನಮ್ಮ ಜನರ ಮನಸ್ಸಿನಲ್ಲಿ ಏನೇನೋ ತುಂಬಿ ಅವರ ಬದುಕನ್ನು ಮೂರಾಬಟ್ಟೆ ಮಾಡಿ, ಅವರ ನೆಮ್ಮದಿ ಎಂಬ ಸಂಪತ್ತನ್ನೇ ನಾಶ ಮಾಡುವ ಢೋಂಗಿ ಜಾತ್ಯಾತೀತ(ಸೂಡೋ ಸೆಕ್ಯುಲರ್)ವಾದಿ ಕಮ್ಯೂನಿಷ್ಟರನ್ನು ಯಾಕೆ ಸಾಯಿಸುವುದಿಲ್ಲ?
ನಮ್ಮವರ ಮನೆಗಳಲ್ಲಿ ಅನ್ನ ತಿಂದು, ಕಮ್ಮಿನಿಷ್ಟರ ದುರ್ಭೋಧನೆಗೊಳಗಾಗಿ ಅನ್ನ ಹಾಕಿದವರನ್ನೇ ಕೊಲ್ಲುವ ನಕ್ಸಲೈಟರಿನ್ನೂ ಜೀವಂತವಿದ್ದಾರೆ!

                    ಲವ್ ಜಿಹಾದ್, ಭೂ ಜಿಹಾದ್, ವ್ಯಾಪಾರಿಕ ಜಿಹಾದ್, ರಾಜಕೀಯ ಜಿಹಾದ್, ಮಾಧ್ಯಮ ಜಿಹಾದ್, ಮಾಡಿ ಧರ್ಮದ ಅಂತಃಸತ್ವವನ್ನೇ ಉಡುಗಿಸುತ್ತಿರುವವರನ್ನು ಕತ್ತರಿಸದೇ ಯಾಕೆ ಬದುಕಗೊಡುತ್ತೀರಿ?
ಸೇವೆ ಮತ್ತು ಶಿಕ್ಷಣದ ಹೆಸರಲ್ಲಿ ಗೆದ್ದಲು ಹುಳುಗಳಂತೆ ಹೊಕ್ಕು ನಮ್ಮ ಸಂಸ್ಕೃತಿಯನ್ನು ತಮ್ಮ ದೇವನ ತೆರದಿ ಶಿಲುಬೆಗೇರಿಸಲು ಯತ್ನಿಸುತ್ತಿರುವ ಕಪಟಿಗಳನ್ನು ಯಾಕೆ ಇರಗೊಡುತ್ತೀರಿ?
ನಮ್ಮ ಆಯುರ್ವೇದ, ಸಸ್ಯ ಸಂಪತ್ತನ್ನು ಹಾಳುಗೆಡವುತ್ತಿರುವ ವಿದೇಶಿ ವಸ್ತುಗಳನ್ನು ಯಾಕೆ ಬಳಸುತ್ತಿದ್ದೀರಿ?

                   ನಿಮ್ಮ ಮುಂದಿನ ಪೀಳಿಗೆ ಸಂಸ್ಕೃತಿ, ಧರ್ಮ, ಜೊತೆಗೆ ನಿಮ್ಮನ್ನೂ ಗೌರವದಿಂದ ಕಾಣಬೇಕಾದರೆ ನಿದ್ದೆಯಿಂದ ಎಚ್ಚೆತ್ತುಕೊಳ್ಳಿ.
" ಅಹಿಂಸಾ ಪರಮೋ ಧರ್ಮ" ಹೌದು. ಆದರೆ ಅದು ಇನ್ನೂ ಮುಂದುವರಿದು "ಧರ್ಮ ಹಿಂಸಾ ತಥೈವಚ" ಎಂದೂ ಹೇಳುತ್ತದೆ ಎನ್ನುವುದನ್ನು ಮರೆಯದಿರಿ!

ಎದ್ದೇಳು ಅರ್ಜುನ!

ಬುಧವಾರ, ಡಿಸೆಂಬರ್ 5, 2012

ಸುಪ್ತ ರಾಗ


ಮಧು ಮಧುರ ಈ ಮೈತ್ರಿ
ಸುಮಧುರವು ಶುಭ್ರರಾತ್ರಿ|
ಹೊರಟಿಹುದು ಪಂಚ ಶರಧಿ
ಶಶಿ ಮೂಡಿಹನು ಮನದಿ||

ಮುದ ನೀಡೋ ಶ್ವೇತ ಕುಮುದ
ತಿಳಿನೀರ ಶುಭ್ರ ಜಲದಿ|
ಜತೆ ಹಂಸ ಆಡುತಿರಲು
ಆ ಚಂದ್ರ ಹಾಸ ಮೂಡಿ||

ಬಾಗಿಹುದು ಆಮ್ರ ಫಲವು
ಪಿಸು ಮಾತು ಶುಕ ರವವು|
ಅನುರಣಿಪ ಮಂದ್ರ ರಾಗ
ಕಳೆದ್ಹೋಯ್ತು ಆ ವಿರಾಗ||

ಅನುದಿನವು ನಾಟ್ಯರಾಣಿ
ಕಡೆದಿರಲು ಚತುರ ಶಿಲ್ಪಿ|
ನಟವರನು ಹರಸುತಿರಲು
ನಾಚಿಹುದು ಗಿರಿ ಮಯೂರ||

ಹಠವಾದಿ ಮಂದ ಮಾರುತ
ಛಲದೊಳಿಹ ಗೋವಿಂದ ಸುತ|
ಜೋಡಿಯೊಳು ಮಿನುಗು ತಾರೆ
ಓ ಪ್ರಿಯೆ ನಾ ನಿನಗೆ ಅಭಾರೆ||

ಬುಧವಾರ, ನವೆಂಬರ್ 28, 2012

ಇಂಥವರೂ ಇದ್ದಾರೆ...!!!



                     ಇವತ್ತು ಮನಸ್ಸು ರೋಷಗೊಂಡ ಘಟನೆಯೊಂದು ನಡೆಯಿತು. ಆಟೋವೊಂದರಲ್ಲಿ ಹೋಗುತ್ತಿದ್ದೆ. ಒಬ್ಬ ಹುಡುಗ ಹಾಗೂ ಹುಡುಗಿಯೊಬ್ಬಳು ಅದೇ ಆಟೋದಲ್ಲಿ ಇದ್ದರು. ಬಹುಷ ಒಂದೇ ಶಾಲೆಯವರಿರಬೇಕು, ಸಮವಸ್ತ್ರ ಏಕರೂಪದ್ದಿತ್ತು. ಸ್ವಲ್ಪ ದೂರ ಹೋಗುತ್ತಿದ್ದಂತೆ ಆಟೋ ಚಾಲಕ ಮಾತಾಡಲು ಶುರು ಮಾಡಿದ. ನನ್ನಲ್ಲಿ ಅಂತ ತಿಳಿದಿದ್ದರೆ ನಿಮ್ಮದು ತಪ್ಪು ಕಲ್ಪನೆಯಾದೀತು! ಆ ಹುಡುಗಿಯಲ್ಲಿ...ನೀನ್ಯಾಕೆ ಇನ್ನೂ ನಿನ್ನ ಭಾವಚಿತ್ರ ಕೊಟ್ಟಿಲ್ಲ...ಇವತ್ತು ನನ್ನ ತಂಗಿ ನಿನ್ನ ತರಗತಿ ಬಳಿ ಬರುತ್ತಾಳೆ...ಅವಳ ಕೈಲಿ ಕೊಡು...ಹೀಗೆ ಸಾಗಿತ್ತು ಮಾತು.. ಹುಡುಗಿಯು ಮಧ್ಯ ಮಧ್ಯದಲ್ಲಿ ನಗುವುದು ಅದೇನೋ ಬಡಬಡಿಸುವುದು ಮಾಡುತ್ತಿದ್ದಳು. ಮಾತಿನ ಮಧ್ಯೆ ಆ ಆಟೋ ಚಾಲಕ ಹುಡುಗಿಯಲ್ಲಿ..ನಿನ್ನ ತಾಯಿ ಸತ್ತಿದ್ದಾಳಾ ಇಲ್ಲಾ ಇನ್ನೂ ಬದುಕಿದ್ದಾಳಾ...ಅವಳು ಮೊದಲು ಸಾಯಬೇಕು. ಆಗ ನಿಮ್ಮಪ್ಪ ಆಟೋಮ್ಯಾಟಿಕ್ ಆಗಿ ನಿನ್ನನ್ನು ನನಗೆ ಕೊಡುತ್ತಾನೆ..ಎಂದುಬಿಟ್ಟ. ಆಶ್ಚರ್ಯವೆಂದರೆ ಹುಡುಗಿ ಆಗಲೂ ನಗುತ್ತಿದ್ದಳೇ ಹೊರತು ಯಾವುದೇ ವಿರೋಧ ವ್ಯಕ್ತಪಡಿಸಲಿಲ್ಲ!

                   ಅಲ್ಲಾ ಪ್ರೀತಿಸೋದು ತಪ್ಪು ಅಂತಾ ನಾನು ಹೇಳೋದಿಲ್ಲ. ಅಥವಾ ಅವ ಆಟೋ ಚಾಲಕ ಅಂತನೂ ಅಲ್ಲ. ಭಾವನೆ ಎಲ್ಲರಲ್ಲೂ ಇರುವಂತದ್ದೇ! ಪ್ರೀತಿ ಎಂಬುದು ವಯೋ ಸಹಜವೆ! ಆದರೆ ತನ್ನ ಪ್ರೀತಿಗಾಗಿ ಅವಳ ತಾಯಿಯನ್ನು ಸಾಯಬಯಸುವುದು, ಹಾಗೆ ಹೇಳಿದಾಗಲೂ ಆಕೆ ಸುಮ್ಮನಿರುವುದು ಎಷ್ಟು ಸರಿ? ನವ ಮಾಸ ಪರ್ಯಂತ ಅಪಾರ ನೋವುಂಡು ಸಂಸ್ಕೃತಿ, ಬದುಕಿನ ಪಾಠ ಕಲಿಸುವ ಪ್ರತ್ಯಕ್ಷ ದೇವತೆಯನ್ನು ನಿಂದಿಸುವ ಪರಿಗೆ ಬೇರೆಯವರಾಗಿದ್ದರೆ ಕಪಾಳ ಮೋಕ್ಷ ಮಾಡುತ್ತಿದ್ದರು. ಆ ಹುಡುಗ(ಆಟೋ ಚಾಲಕ)ನೂ ಅಷ್ಟೇ. ಒಂದು ವೇಳೆ ಅದೇ ಮಾತನ್ನು ಹುಡುಗಿ ಆಡಿದ್ದಿದ್ದರೆ ಸುಮ್ಮನಿರುತ್ತಿದ್ದನೇ?
                       ಮನ ಕಲಕಿದ ಈ ಘಟನೆ ಇಡೀ ದಿವಸ ನನ್ನ ಮನಸ್ಸನ್ನು ಆವರಿಸಿತ್ತು. ತಡೆದುಕೊಳ್ಳಲಾಗದೇ ನಿಮ್ಮೊಂದಿಗೇ ಹಂಚಿಕೊಂಡಿದ್ದೇನೆ.
ನಿಮಗೆ ಅತೀವ ದುಃಖವಾಗಿದ್ದಾಗ ನಿಮಗೆ ಸಾಂತ್ವನ ಹೇಳುವ ಏಕಮಾತ್ರ ವ್ಯಕ್ತಿ ತಾಯಿ. ನೀವು ದುಃಖ ಮುಚ್ಚಿಟ್ಟು ನಗುತ್ತಿದ್ದರೂ ನಿಮ್ಮ ಮನಸ್ಥಿತಿ ಅವಳಿಗೆ ಅರ್ಥ ಆಗುತ್ತೆ. ನಿಮ್ಮ ಬದುಕಿನ ಮೊದಲ ಗುರು, ಮೊದಲ ಸ್ನೇಹಿತೆ ಆಕೆ! ನೀವು ಮಗುವಾಗಿದ್ದಾಗ, ಅನಾರೋಗ್ಯ ಪೀಡಿತರಾಗಿದ್ದಾಗ, ಉಳಿದವರು ನಿಮ್ಮನ್ನು ಅಪಹಾಸ್ಯ, ದೂಷಣೆಗೊಳಪಡಿಸಿದಾಗಲೂ ನಿಮ್ಮ ಕೈ ಹಿಡಿದು ನಡೆಸುವವಳು ಅವಳೇ! ಆದ್ದರಿಂದ ಅವಳನ್ನು ದೂಷಿಸುವಾಗ ಎಚ್ಚರದಿಂದಿರಿ, ದೂಷಿಸುವ ಮೊದಲು ಯೋಚಿಸಿ.

ಶನಿವಾರ, ನವೆಂಬರ್ 24, 2012

ಭಾರತ ದರ್ಶನ-೨೦:

                  ಸತಿಯೊಂದಿಗೆ ಶ್ರೀರಾಮ ಶಿವನ ಪೂಜೆ ಮಾಡಿದ ಪವಿತ್ರ ಕ್ಷೇತ್ರ ರಾಮೇಶ್ವರ. ಅಲ್ಲಿಂದ ಶಿವಭಕ್ತರು ಉತ್ತರದ ರಾಮೇಶ್ವರದ ಕಡೆಗೆ ಪಯಣಿಸುತ್ತಾರೆ. ಅಲ್ಲೊಂದು ನೈಸರ್ಗಿಕ ಗುಹೆ. ಸಮುದ್ರ ಮಟ್ಟದಿಂದ ೧೩೦೦೦ ಅಡಿ ಎತ್ತರದಲ್ಲಿರುವ ಆ ಗುಹೆಯಲ್ಲೊಂದು ಪವಾಡ.ಪ್ರತಿ ತಿಂಗಳ ಶುಕ್ಲ ಪಕ್ಷದಂದು ನೀರು ಹಿಮದ ರೂಪದಲ್ಲಿ ತೊಟ್ಟಿಕ್ಕಿ ಲಿಂಗ ರೂಪ ಧಾರಣೆ ಮಾಡುತ್ತೆ. ಹುಣ್ಣಿಮೆಯ ದಿನ ಹತ್ತಾರು ಅಡಿ ಎತ್ತರದ ಲಿಂಗವನ್ನು ನಾವಲ್ಲಿ ಕಾಣಬಹುದು. ಕೃಷ್ಣ ಪಕ್ಷದಲ್ಲಿ ಚಂದ್ರ ಕರಗುತ್ತಾ ಹೋದಂತೆ ಲಿಂಗವೂ ಕರಗುತ್ತಾ ಬರುತ್ತೆ! ಅಮವಾಸ್ಯೆ ದಿನ ಬಾನಿನಲ್ಲಿ ಅವನಿರೋದಿಲ್ಲ. ಭುವಿಯಲ್ಲಿ ಇವನಿರೋದಿಲ್ಲ!

                ಶ್ರಾವಣ ಪೂರ್ಣಿಮೆಯ ದಿನ ಅಲ್ಲಿ ದೊಡ್ಡ ಜಾತ್ರೆ ನಡೆಯುತ್ತೆ. ಅಮರನಾಥಕ್ಕೆ ಹೋಗೋದು ಅಷ್ಟು ಸುಲಭವಲ್ಲ. ಕಡಿದಾದ ದಾರಿಯಲ್ಲಿ ನಡೆದು ಸಾಗಬೇಕು. ಎಚ್ಚರದಿಂದ ಹೋದರೆ ಅಮರನಾಥ. ಎಚ್ಚರ ತಪ್ಪಿದರೆ ಕೈಲಾಸ! ಜಾಗೃತಾವಸ್ಥೆಯಲ್ಲಿ ಸಾಗಿದರೆ ಸೃಷ್ಠಿಯ ಸೌಂದರ್ಯವನ್ನು ಸವಿಯಬಹುದು.ವ್ಯತ್ಯಾಸವಾದರೆ ಸೃಷ್ಠಿಯ ರಹಸ್ಯವನ್ನು ನೋಡಬೇಕಾಗುತ್ತೆ! ಅಂಥ ಅಪಾಯಕಾರಿ ದಾರಿ. ಆದರೂ ಜನ ಧಾವಿಸುತ್ತಾರೆ. ಯೋಚನೆ ಮಾಡಿ| ಶ್ರಾವಣ ಮಾಸ, ಮಳೆಗಾಲ, ಕಾರ್ಮುಗಿಲು, ಹಿಮಾಲಯ, ಕಾಲುದಾರಿ, ಅಮರ ಗಂಗೆಯ ಭಯಾನಕ ಆಳವಾದ ಕಣಿವೆ, ಜೊತೆಗೆ ಭಯೋತ್ಪಾದಕರ ಅಟ್ಟಹಾಸ!
ಆದರೂ ಜನ ಹೋಗುತ್ತಾರೆ ಯಾಕೆ?
ಯಾಕೆಂದರೆ ಶ್ರಾವಣ ಪೂರ್ಣಿಮೆಯಂದು ಶಿವ ಪಾರ್ವತಿಗೆ ರಾಮ ಮಂತ್ರ ಉಪದೇಶ ಮಾಡಿದ ಪವಿತ್ರ ಜಾಗವದು!
ಅದಕ್ಕಾಗಿಯೇ
" ಆ ಮಂತ್ರ ಈ ಮಂತ್ರ ಜಪಿಸಿ ನೀ ಕೆಡಬೇಡ|
  ಸೋಮಶೇಖರ ತನ್ನ ಭಾಮೆಗೆ ಪೇಳಿದ ಮಂತ್ರ||
  ರಾಮ ಮಂತ್ರವ ಜಪಿಸೋ||"
ಎನ್ನುತ್ತಾರೆ ದಾಸರು.

ರಾಮ ಶಿವನ ಪೂಜೆ ಮಾಡುತ್ತಾನೆ, ಶಿವ ಸತಿಗೆ ರಾಮಮಂತ್ರ ಉಪದೇಶ ಮಾಡುತ್ತಾನೆ. ಅವರಿಬ್ಬರ ಭಕ್ತರು ತನ್ನ ದೇವ ದೊಡ್ಡವ ಅಂತ ಹೊಡೆದಾಡಿಕೊಳ್ಳುತ್ತಾರೆ!

ಒಬ್ಬ ಸಂಸ್ಕೃತ ಕವಿ ಅದ್ಭುತ ಸಮನ್ವಯ ಶ್ಲೋಕ ಬರೆಯುತ್ತಾನೆ.

" ಪಾಯಾತ್ ಕುಮಾರ ಜನಕಃ ಶಶಿಖಂಡ ಮೌಳಿಃ|
  ಶಂಖಪ್ರಭಶ್ಚ ನಿಧನಶ್ಚ ಗವೀಶಯಾನಃ||
  ಗಂಗಾಂಚ ಪನ್ನಗಧರಶ್ಚ ಉಮಾವಿಲಾಸಃ|
  ಆಧ್ಯಕ್ಷರೇಣ ಸಹಿತೋ ರಹಿತೋಪಿ ದೇವಾಃ||

ಈ ಎಲ್ಲ ಪದಗಳ ಅರ್ಥ ಶಿವ ನನ್ನನ್ನು ಕಾಪಾಡಲಿ ಎಂದು. ಇವುಗಳೆಲ್ಲದರ ಮೊದಲ ಅಕ್ಷರ ತೆಗೆದರೆ ಹರಿ ನನ್ನನ್ನು ಕಾಪಾಡಲಿ ಎಂದಾಗುತ್ತೆ!
( ಪಾಯಾತ್ = ಕಾಪಾಡಲಿ.
ಕುಮಾರ ಜನಕ = ಸುಬ್ರಹ್ಮಣ್ಯನ ತಂದೆ; ಮಾರ ಜನಕ = ಮನ್ಮಥ ಪಿತ.
ಶಶಿಖಂಡಮೌಳಿಃ = ಚಂದ್ರನ ತುಂಡನ್ನು(ಬಿದಿಗೆ ಚಂದ್ರ) ಶಿರದಲ್ಲಿ ಧರಿಸಿದವ ; ಶಿಖಂಡಮೌಳಿಃ = ನವಿಲು ಗರಿಯನ್ನು ಶಿರದಲ್ಲಿ ಧರಿಸಿದವ.
ಶಂಖಪ್ರಭಶ್ಚ = ಬಿಳುಪಾದ ಮೈಬಣ್ಣದವ ; ಖಪ್ರಭಶ್ಚ = ಆಕಾಶದ ಮೈಬಣ್ಣದವ, ನೀಲಮೇಘಶ್ಯಾಮ.
ನಿಧನಶ್ಚ = ಹಣವಿಲ್ಲದವ, ಲಯಕಾರಿ ; ಧನಶ್ಚ = ಲಕ್ಷ್ಮೀಪತಿ.
ಗವೀಶಯಾನಃ = ಹಸುವಿನ ಒಡೆಯ( ಎತ್ತು )ನನ್ನು ವಾಹನವಾಗುಳ್ಳವ ; ವೀಶಯಾನಃ = ಪಕ್ಷಿಗಳ ಒಡೆಯ( ಗರುಡ )ನನ್ನು ವಾಹನವಾಗುಳ್ಳವ.
ಗಂಗಾಂಚ = ಗಂಗಾಧರ ; ಗಾಂಚ = ಗೋವುಗಳನ್ನು ಸಲಹಿದವ, ಗೋಪಾಲಕೃಷ್ಣ.
ಪನ್ನಗಧರ = ನಾಗಾಭರಣ ; ನಗಧರ = ಪರ್ವತ ಎತ್ತಿಹಿಡಿದವ, ಗೋವರ್ಧನ ಗಿರಿಧಾರಿ.
ಉಮಾ ವಿಲಾಸಃ = ಉಮಾಪತಿ ; ಮಾವಿಲಾಸಃ = ಲಕ್ಷ್ಮೀಪತಿ, ಮಾಧವ.)

ಕೊನೆಯಲ್ಲಿ ಕವಿಯ ಆಶಯವೇನು?
ಮೊದಲಕ್ಷರ ಸಹಿತವಾಗಿ ಅಥವಾ ರಹಿತವಾಗಿ ಸ್ತುತಿಸಲ್ಪಡುವ ಒಬ್ಬನೇ ದೇವರು ನಮ್ಮನ್ನು ಕಾಪಾಡಲಿ. ಎಂಥಾ ಸಾಮರಸ್ಯ! ಎಂಥಾ ಅದ್ಭುತ ಶ್ಲೋಕ!
ಶೈವ ವೈಷ್ಣವರು ತಮ್ಮ ತಮ್ಮ ದೇವರಿಗಾಗಿ ಹೊಡೆದಾಡುವ ಮೊದಲು ಈ ಶ್ಲೋಕದ ಕಡೆ ಗಮನ ಕೊಡಿ, ಮಾತೆಯ ರಕ್ಷಣೆಗಾಗಿ ಹೋರಾಡಿ!

ವಂದೇ ಮಾತರಂ






ಶುಕ್ರವಾರ, ನವೆಂಬರ್ 16, 2012

ಭಾರತ ದರ್ಶನ-೧೯



                       ಹಿಮಾಲಯದಲ್ಲಿ ಸುಮಾರು ಹತ್ತು ಹನ್ನೊಂದು ಸಾವಿರ ಅಡಿ ಎತ್ತರದಲ್ಲಿ ಗಂಗೋತ್ರಿ ಮತ್ತು ಯಮುನೋತ್ರಿಗಳಿವೆ. ಯಮುನೋತ್ರಿಯನ್ನು ನೋಡಿದಾಗ ಇಳಿದು ಸ್ನಾನ ಮಾಡಬೇಕು ಅನ್ನೋ ಬಯಕೆ ಮೂಡೋದು ಸಹಜ. ಆದರೆ ಹಾಗೇನಾದರೂ ಮಾಡಿದರೆ ಅದೇ ಕೊನೆ ಸ್ನಾನ ಆಗಬಹುದು! ಅಷ್ಟು ಕೊರೆಯುವ ಚಳಿ! ಆದರೆ ಭಗವಂತನ ಲೀಲಾ ವಿನೋದ ನೋಡಿ. ಒಂದು ಕಡೆ ನೀರು ಹೆಪ್ಪುಗಟ್ಟಿದೆ. ಅಲ್ಲೇ ಪಕ್ಕದ ಕುಂಡದಲ್ಲಿ ನೀರು ಕುದಿಯುತ್ತಿದೆ! ಎಂತಹ ಕುದಿತ...ಅಲ್ಲಿ ಹೋದ ಯಾತ್ರಿಗಳು ಅಕ್ಕಿಯನ್ನು ಬಟ್ಟೆಯಲ್ಲಿ ಗಂಟು ಕಟ್ಟಿ ನೀರೊಳಗೆ ಇಡ್ತಾರೆ, ಐದು ನಿಮಿಷದಲ್ಲಿ ಬೆಂದು ಅನ್ನವಾಗಿರುತ್ತೆ! ಅಲ್ಲಿ ಸ್ನಾನ ಮಾಡಿ ಕೇದಾರ ಮತ್ತು ಬದರಿನಾಥನಿಗೆ ಅಭಿಷೇಕ ಮಾಡಿ ಅಲ್ಲಿನ ತೀರ್ಥವನ್ನು ಬಂಧುಬಾಂಧವರಿಗೆ ಹಂಚೋದು ನಮ್ಮ ವಿಶೇಷ ಪರಂಪರೆ.

                          ಬದರಿ ರಾಷ್ಟ್ರದ ಶೀರ್ಷಸ್ಥಾನ. ನರ ನಾರಾಯಣ ಪರ್ವತಗಳ ನಡುವೆ ಬದರೀನಾಥನ ಭವ್ಯ ಮಂದಿರ. ಭಗವಾನ್ ವೇದ ವ್ಯಾಸರ ತಪೋಭೂಮಿ. ವ್ಯಾಸ ಗುಹೆಯಿರುವ ಜಾಗ. ಸತ್ಯಯುಗದಲ್ಲಿ ನಾರಾಯಣನಿಂದ, ತ್ರೇತೆಯಲ್ಲಿ ದತ್ತಾತ್ರೇಯನಿಂದ, ದ್ವಾಪರದಲ್ಲಿ ವ್ಯಾಸರಿಂದ, ಮತ್ತು ಈ ಕಲಿಯುಗದಲ್ಲಿ ಶಂಕರ ಭಗವತ್ಪಾದರಿಂದ ಬದರಿಯ ಪ್ರತಿಷ್ಠೆ ಹೆಚ್ಚಿತು. ಇಲ್ಲಿನ ವಿಗ್ರಹದ ಪ್ರಾಣ ಪ್ರತಿಷ್ಠೆ ಮಾಡಿದ್ದು ಶಂಕರ ಭಗವತ್ಪಾದರು.

                           ಬದರಿಯಿಂದ ಉತ್ತರದಲ್ಲಿ ಅಲಕೆಯ ದಡದಲ್ಲಿ ಬ್ರಹ್ಮಕಪಾಲವಿದೆ. ಹೃಷಿಕೇಶ ಶೈವ ವೈಷ್ಣವರಿಬ್ಬರಿಗೂ ಶೃದ್ಧಾಕೇಂದ್ರ. ಇಲ್ಲಿಯ ವಿಶೇಷ ಆಚಾರ್ಯ ಶಂಕರರಿಂದ ಸ್ಥಾಪಿತವಾದ ಭರತ ಮಂದಿರ. ಭರತನಿಗಾಗಿ ಮಂದಿರ ಇರೋದು ಹೃಷಿಕೇಶ ಮತ್ತು ಕೇರಳದಲ್ಲಿ ಮಾತ್ರ. ರಾಮಾಯಣದಲ್ಲಿ ದೇವತ್ವ ಪ್ರಾಪ್ತವಾದದ್ದು ರಾಮ ಮತ್ತು ಹನುಮನಿಗೆ ಮಾತ್ರ. ಅವರಿಗಾಗಿ ದೇವಾಲಯಗಳೂ ಇವೆ.ಸೀತೆ, ಲಕ್ಷ್ಮಣರೂ ಇವರೊಂದಿಗೇ ಪೂಜಿಸಲ್ಪಡುತ್ತಾರೆ. ಆದರೆ ಭರತ!
ಅವನಿಗಾಗಿ ಶಂಕರರು ಮಂದಿರವನ್ನೇಕೆ ನಿರ್ಮಿಸಿದರು? ಯಾಕೆಂದರೆ ಭರತ ಕೇವಲ ವ್ಯಕ್ತಿಯಲ್ಲ. ಅದೊಂದು ಮೌಲ್ಯ! ಅದೊಂದು ನೀತಿ! ತತ್ವಜ್ಞಾನ! ತಾಯಿಯ ಪಿತೂರಿಯಿಂದ ಸಿಕ್ಕ ಸಾಮ್ರಾಜ್ಯದ ಅಧಿಕಾರವನ್ನು ತ್ಯಜಿಸಿ ಅಣ್ಣನಂತೆ ಜಟಾವಲ್ಕಲಧಾರಿಯಾಗಿ ೧೪ ವರ್ಷ ನಂದಿಗ್ರಾಮದಲ್ಲಿ ದರ್ಭೆಯ ಹಾಸಿಗೆಯ ಮೇಲೆ ಮಲಗಿ ಅಣ್ಣನ ಪಾದುಕೆಗಳನ್ನು ಸಿಂಹಾಸನದಲ್ಲಿರಿಸಿ ರಾಜ್ಯಭಾರ ಮಾಡುತ್ತಾನೆ. ಇಂತಹ ತಮ್ಮನನ್ನು ಪಡೆಯಲು ದೇವರೇ ಹುಟ್ಟಿ ಬರಬೇಕಾಯಿತು! ಹೃಷಿಕೇಶ ಸ್ವಾಮಿ ಶಿವಾನಂದರ ಸಾಧನಾ ಕೇಂದ್ರ.

                            ಹರಿದ್ವಾರ ಹಿಮಾಲಯದ ಶ್ರೇಷ್ಠ ಕ್ಷೇತ್ರಗಳಲ್ಲೊಂದು. ಇದನ್ನು ಮಾಯಾಪುರಿ, ಗಂಗಾದ್ವಾರ ಮತ್ತು ಕಂಕಲ ಮೊದಲಾದ ಹೆಸರುಗಳಿಂದ ಕರೆದಿದ್ದಾರೆ. ಗಂಗೆ ತನ್ನ ಪ್ರವಹಿಸುವ ಹಾದಿಯಲ್ಲಿ ಮೊತ್ತ ಮೊದಲು ಬಯಲು ಪ್ರದೇಶ ಕಾಣೋದು ಇಲ್ಲೇ. ಹಾಗಾಗಿಯೇ ಇಡೀ ಮೈದಾನವನ್ನು ಬಳಸಿ ಬಾಚಿ ತಬ್ಬಿ ಹರಿದಿದ್ದಾಳೆ. ಒಂದು ದಡದಲ್ಲಿ ನಿಂತರೆ ಇನ್ನೊಂದು ದಡ ಕಾಣ್ಸೊಲ್ಲ. ಹೀಗಾಗಿಯೆ ಇದು ಗಂಗಾದ್ವಾರ. ಗಂಗೆ ಶಂತನುವನ್ನು ಮೋಹಿಸಿ ದೇವವ್ರತ(ಭೀಷ್ಮ)ನಿಗೆ ಜನ್ಮವಿತ್ತದ್ದು ಇಲ್ಲೇ. ಭರದ್ವಾಜರು ಘೃತಾಚಿ ಎಂಬ ಅಪ್ಸರೆಯನ್ನು ಮೋಹಿಸಿ ದ್ರೋಣಾಚಾರ್ಯರು ಜನಿಸಿದ್ದು ಇಲ್ಲಿಯೇ. ದಕ್ಷಯಜ್ಞ ನಡೆದ ಕ್ಷೇತ್ರ ಇದು. ರಾಮಲಕ್ಷ್ಮಣರ ಪಾದಸ್ಪರ್ಶ ಆದ ಭೂಮಿ. ಭರ್ತೃಹರಿ ಮುಕ್ತಿ ಕಂಡ ತಾಣ ಇದು. ಹರಿದ್ವಾರ ಹರದ್ವಾರವೆಂದೂ ಕರೆಯಲ್ಪಡುತ್ತದೆ. ಒಟ್ಟಾರೆ ಹಿಮಾಲಯದ ದ್ವಾರ ಇದು. ಮುಂದೆ ಹೋದರೆ ಕೇದಾರ, ಶಿವಕ್ಷೇತ್ರ ಮತ್ತು ಬದರಿ, ಹರಿಕ್ಷೇತ್ರ!
ಇದನ್ನು ಬಿಟ್ಟು ಶೈವ ವೈಷ್ಣವರು ಸಂಕುಚಿತ ಮನೋಭಾವದಿಂದ ವರ್ತಿಸಿದರೆ ರಾಷ್ಟ್ರದ ಆತ್ಮ ದುರ್ಬಲವಾಗುತ್ತೆ.

 (ಮುಂದಿನ ಭಾಗ ಶೈವ ವೈಷ್ಣವ ಸಮನ್ವಯ ಶ್ಲೋಕ ಸಹಿತ, ನಿರೀಕ್ಷಿಸಿ...)

ಶುಕ್ರವಾರ, ನವೆಂಬರ್ 9, 2012

ಭಾರತ ದರ್ಶನ-೧೮

ಭಾರತ ದರ್ಶನ-೧೮:

              ಜಗತ್ತಿನ ಇತರ ದೇಶಗಳಿಗೆ ಜಡವಾಗಿ ಕಾಣುವ ಪರ್ವತಗಳು ನಮ್ಮ ಪಾಲಿಗೆ ಭಗವದಂಶವೇ ಸರಿ. ಇದಕ್ಕೆ ಕಾರಣಗಳು ಹಲವು. ಕೆಲವು ಪರ್ವತಗಳು ದೇವತೆಗಳ ವಾಸಸ್ಥಾನ ಅಂತ ನಾವು ನಂಬುತ್ತೇವೆ. ಕೆಲವು ಪರ್ವತಗಳು ಋಷಿಮುನಿಗಳ ತಪೋಭೂಮಿ. ಇನ್ನು ಕೆಲವು ಪವಿತ್ರ ನದಿಗಳ ಉಗಮ ಸ್ಥಾನ. ಹೆಚ್ಚಿನವುಗಳಲ್ಲಿ ನಮ್ಮ ಹಿರಿಯರು ದೇವಾಲಯಗಳನ್ನು ನಿರ್ಮಿಸಿದ್ದಾರೆ.

          ಭಾರತದ ಉತ್ತರ ಸೀಮೆಯುದ್ದಕ್ಕೂ ಹಬ್ಬಿಕೊಂಡಿರುವ ಪ್ರಚಂಡ ಪರ್ವತ ಸೀಮಾ ಹಿಮಾಲಯ. ಹಿಮಾಲಯ ಅನ್ನೋ ಶಬ್ಧ ಹಿಂದೂವಿನ ಕಿವಿಗೆ ಬಿದ್ದೊಡನೆ ಅವನ ಹೃದಯ ಅರಳಿ ಹಲವು ದಿವ್ಯ ಭಾವಗಳ ನಾಡಿಗಳು ಮೀಟತೊಡಗುತ್ತವೆ. ಭಾರತದ ಇತಿಹಾಸದ ಘಟನಾವಳಿಗಳಿಗೆ ಮೂಕ ಸಾಕ್ಷಿ ಹಿಮಾಲಯ. ಜಗತ್ತಿನ ಅತ್ಯಂತ ಎತ್ತರದ ಶಿಖರವನ್ನು ಕವಿಯೊಬ್ಬ ಮುಗಿಲ ಹಾರ ಅಂತ ವರ್ಣಿಸಿದ್ದಾನೆ.
    "ಹರನ ಮಂದಿರ ಗಿರಿಯ ಕಂದರ
     ಅತುಲ ಸುಂದರ ಮುಗಿಲ ಹಾರ!
     ನರ ಕಿರಾತನ ಸೆಣಸಿ ದಣಿಸಿ
     ಪಾಶುಪತ ಪಡೆದವರ ಕ್ಷೇತ್ರ!
     ಶೈಲ ಕುಲ ಸಾಮ್ರಾಟ ಪೀಠ!"
ಎಂದು ವರ್ಣಿಸಿದ್ದಾನೆ.

       ಕುಮಾರ ಸಂಭವದಲ್ಲಿ ಕಾಳಿದಾಸ ಹಿಮಾಲಯವನ್ನು ಪರ್ವತಗಳ ರಾಜ, ದೇವತೆಗಳ ಆತ್ಮ, ಭೂಮಿಯ ಅಳತೆಗೋಲು ಅಂದಿದ್ದಾನೆ. ವಾಲ್ಮೀಕಿ ಶ್ರೀರಾಮನ ಧೈರ್ಯವನ್ನು ಹಿಮಾಲಯಕ್ಕೆ ಹೋಲಿಸಿದ್ದಾನೆ. ಭಾರವಿ ಹಿಮಾಲಯವನ್ನು ವೇದಗಳಿಗೆ ಹೋಲಿಸಿದ್ದಾನೆ.
       ಹಲವು ಋಷಿ ಮುನಿಗಳ ಆಶ್ರಮ ಹಿಮಾಲಯದಲ್ಲಿತ್ತು. ವಸಿಷ್ಠರ ಆಶ್ರಮ ಹಿಮಾಲಯದ ತಪ್ಪಲಲ್ಲಿತ್ತು. ಮಾಲಿನೀ ತೀರದಲ್ಲಿ ಕಣ್ವಾಶ್ರಮ, ತಮಸೆಯ ತಟಿಯಲ್ಲಿ ವಾಲ್ಮೀಕಿ ಆಶ್ರಮ, ಬದರಿಯ ಮಾಣಾ ಗ್ರಾಮದಲ್ಲಿ ವ್ಯಾಸಾಶ್ರಮ ಇತ್ತು. ಇಲ್ಲೇ ವ್ಯಾಸರು ಭಾರತ ಮತ್ತು ಭಾಗವತಗಳನ್ನು ಬರೆದರು. ಆಚಾರ್ಯ ಶಂಕರರು ಹಿಮಾಲಯದ ಭಾಗಗಳಲ್ಲಿ ದೇವಾಲಯಗಳ ಸಮೂಹವನ್ನೇ ಸೃಷ್ಠಿಸಿದರು.

           ಈ ನಗಾಧಿರಾಜನಿಂದ ಆರ್ವಾಚೀನ ಕಾಲದಲ್ಲಿ ಸ್ವಾಮಿ ವಿವೇಕಾನಂದ, ರಾಮತೀರ್ಥ, ಅಖಂಡಾನಂದ, ಶೃದ್ಧಾನಂದ, ಮಹರ್ಷಿ ದಯಾನಂದ ಸರಸ್ವತೀ, ಶ್ರೀ ಗುರೂಜಿ ಗೊಳ್ವಾಲ್ಕರ ಕೂಡಾ ಪ್ರಭಾವಿಸಲ್ಪಟ್ಟರು. ಅನೇಕ ಸಾಧು ಸಂತರು ಇಂದಿಗೂ ಹಿಮಾಲಯದಲ್ಲಿ ಅವ್ಯಕ್ತ ರೂಪದಲ್ಲಿ ಸಾಧನಾನಿರತರಾಗಿದ್ದಾರೆ. ಉತ್ತುಂಗ ಹಿಮಚ್ಛಾದಿತ ಶುಭ್ರದವಳ ಶಿಖರಗಳು, ನೇರವಾಗಿ ತಲೆಯೆತ್ತಿ ನಿಂತ ಗಿರಿಗಳು, ಆಳವಾದ ಕಣಿವೆಗಳು, ವೇಗವಾಗಿ ಹರಿಯುವ ನದಿಗಳು,ಗಹನಾರಣ್ಯ, ಬಗೆ ಬಗೆಯ ಫಲ ಪುಷ್ಪಗಳಿಂದ ಅಲಂಕೃತವಾದ ವೃಕ್ಷವಲ್ಲಿಗಳು, ಈ ಎಲ್ಲ ಹಿಮಾದ್ರಿಯ ನೈಸರ್ಗಿಕ ವೈಭವ ನೋಡುವಾಗ ಮನಸ್ಸು ಪ್ರಸನ್ನಗೊಳ್ಳುತ್ತದೆ. ಧರ್ಮ, ಸಂಸ್ಕೃತಿ, ಸಾಹಿತ್ಯ, ಕಲೆ, ಸಂಗೀತ, ಶಿಲ್ಪ ಇತ್ಯಾದಿ ಜೀವನದ ಎಲ್ಲಾ ಕ್ಷೇತ್ರಗಳ ಮೇಲೆ ಹಿಮಾಲಯ ಪ್ರಭಾವ ಬೀರಿದೆ. ಆದ್ದರಿಂದಲೇ ಅದು ಕಲ್ಲು ಮಣ್ಣುಗಳ ಬೆಟ್ಟವಲ್ಲ, ಪರಶಿವನ ಆಲಯವೆಂದೇ ನಮ್ಮ ನಂಬಿಕೆ.

           ಸಮುದ್ರ ಮಟ್ಟದಿಂದ ಸುಮಾರು ೨೩೦೦೦ ಅಡಿ ಎತ್ತರದಲ್ಲಿದೆ ಕೈಲಾಸ. ಅದು ಶಿವನ ನಿವಾಸ. ನಮ್ಮೆಲ್ಲರ ಶ್ವಾಸ. ಸಧ್ಯಕ್ಕೆ ಚೀನಾದ ವಶ. ಅಷ್ಟದಳಾಕೃತಿಯ ಬಿಳಿಯ ಹೂವಿನ ಮಧ್ಯದಲ್ಲಿ ಸ್ಪಟಿಕದ ಶಿವಲಿಂಗ ಇಟ್ಟರೆ ಹೇಗೆ ಕಾಣುತ್ತೋ ಹಾಗೆ ಕೈಲಾಸ ನಮಗೆ ಗೋಚರವಾಗುತ್ತೆ. ಅದರ ಬುಡದಲ್ಲಿದೆ ರಾಕ್ಷಸ ತಲ. ರಾವಣ ಆತ್ಮಲಿಂಗ ಪ್ರಾಪ್ತಿಗಾಗಿ ಕೈಲಾಸವನ್ನು ಅಲುಗಾಡಿಸಲು ಹೋಗಿ ಸೋತು ತಪಸ್ಸು ಮಾಡಿದ ಸ್ಥಳ ಅದು.ರಾಕ್ಷಸ ತಲದಿಂದ ಅನತಿ ದೂರದಲ್ಲಿ ಮಾನಸ. ಮನಸ್ಸಿನಷ್ಟು ತಿಳಿಯಾದ ಸ್ಪಟಿಕ ಶುಭ್ರ ಜಲವುಳ್ಳ ತಳ ಕಾಣುವ ರಾಜ ಹಂಸಗಳು ವಿಹರಿಸುವ ಸರೋವರ. ಅಂಡಾಕೃತಿಯ ಈ ಸರೋವರದಿಂದ ಸಿಂಧೂ, ಸರಯೂ, ಬ್ರಹ್ಮಪುತ್ರಗಳು ಹುಟ್ಟುತ್ತವೆ. ಇದೊಂದು ಶಕ್ತಿ ಪೀಠವು ಹೌದು.

ಶನಿವಾರ, ನವೆಂಬರ್ 3, 2012

ಭಾರತ ದರ್ಶನ-೧೭

ಭಾರತ ದರ್ಶನ-೧೭:



                 ಭೂಮಿಯನ್ನು ನಾವು ತಾಯಿ ಅಂತ ಗೌರವಿಸುತ್ತೇವೆ. ನಮ್ಮ ಹಿರಿಯರು ಹೇಳಿದರು

"ಅಮ್ಮಾ ನಾನು ನಿನ್ನಲ್ಲಿ ಅರಳ್ತೀನಿ, ಹೊರಳ್ತೀನಿ, ಕೊನೆಗೆ ನಿನ್ನಲ್ಲೇ ಮರಳ್ತೀನಿ. ನಿನ್ನ ಅಂಗಳದಲ್ಲೇ ಆಟ ಆಡ್ತೀನಿ. ಕೊನೆಗೆ ನಿನ್ನ ಮಡಿಲಲ್ಲೇ ವಿಶ್ರಾಂತಿ ಪಡೀತೀನಿ." ಹೀಗೆ ನಮ್ಮ ಭೌತಿಕ ಮತ್ತು ಭೌದ್ಧಿಕ ಸಾಹಸಗಳಿಗೆ ಪ್ರೇರಣೆಯಾಗಿರುವ ಮನುಕುಲಕ್ಕೆ ಆಧಾರವಾಗಿರುವ ಬದುಕಿದ್ದಾಗಲೂ ಸತ್ತ ಮೇಲೂ ನೆಲೆ ಕಲ್ಪಿಸುವ ಭೂಮಿ ತಾಯಿಯಲ್ಲದೆ ಮತ್ತೇನು?



                    ನೀರನ್ನು ಗಂಗಾಜಲ ಅಂತ ಪೂಜಿಸ್ತೀವಿ. ಮನೆಗೆ ಬಂದವರಿಗೆ ಗಂಗೋದಕ ಕೊಟ್ಟು ಉಪಚರಿಸುತ್ತೇವೆ. ಮನೆಯಲ್ಲಿ ಕಲಷದಲ್ಲಿ ಗಂಗೆಯನ್ನು ಆವಾಹಿಸಿ ಪೂಜಿಸುತ್ತೇವೆ. ಹಿರಿಯರು ಸತ್ತಾಗ ದುಃಖವಾದರೂ ಅವರು ಗಂಗೋದಕ ಸ್ವೀಕರಿಸಿ ಪ್ರಾಣ ತೊರೆದರೆಂದರೆ ಸಮಾಧಾನವೂ ಆಗುತ್ತೆ. ಗಂಗೆಯನ್ನು ಸ್ವೀಕರಿಸೋದು ಅಥವಾ ಗಂಗೆಯನ್ನು ದಾಟೋದು ಅಂದರೆ ಜನನ ಮರಣಗಳ ಚಕ್ರ ದಾಟೋದು ಅಂತರ್ಥ.

                       ಮನೆಯಲ್ಲಿ ನೀರು ಕುಡಿಯುವಾಗ ಮಗೂ ಅದು ಗಂಗೆ,ತೀರ್ಥ ಎಂಜಲು ಮಾಡಬಾರದು ಅಂತ ತಾಯಿ ಮಗುವನ್ನು ಎಚ್ಚರಿಸುತ್ತಾಳೆ(ಇಂದು???). ಸ್ನಾನ ಮಾಡುವಾಗ, ಪೂಜೆ ಮಾಡುವಾಗ ಗಂಗೆ ಯಮುನೆಯರೇ ಮೊದಲಾದ ಸಪ್ತ ಜಾಹ್ನವಿಗಳನ್ನು ನಾವು ಆವಾಹನೆ ಮಾಡುತ್ತೇವೆ. ಜಗತ್ತಿನ ಎಲ್ಲಾ ನಾಗರೀಕತೆಗಳು ಬೆಳಕು ಕಂಡು ಬೆಳೆದದ್ದು ನದೀ ತಟಗಳಲ್ಲೇ. ಅತ್ಯಂತ ಪ್ರಾಚೀನ ಸಂಸ್ಕೃತಿ ನಾಗರೀಕತೆಯ ಜೋಗುಳ ಹಾಡಿದ್ದು ಸಿಂಧೂ-ಸರಸ್ವತೀಯರ ಮಡಿಲಲ್ಲೇ. ಅದರಿಂದಾಗಿಯೇ ಅದಕ್ಕೆ ಮಾತೃ ಸ್ಥಾನ. ಮನುಕುಲದ ಮೊದಲ ರಾಜಧಾನಿ ಅಯೋಧ್ಯೆ ನಿರ್ಮಾಣವಾದದ್ದು ಸರಯೂ ನದೀ ತೀರದಲ್ಲಿ. ಮನುಕುಲದ ಮೊದಲ ವಿಶ್ವವಿದ್ಯಾಲಯ ನಿರ್ಮಾಣವಾದದ್ದೂ ಗಂಗೆಯ ತಟದಲ್ಲಿ. ಲೋಕ ಕಲ್ಯಾಣಕ್ಕಾಗಿ ಪ್ರಜಾಪತಿ ಬ್ರಹ್ಮ ಮಾಡಿದ ಮೊದಲ ಯಾಗ ನಡೆದದ್ದು ತ್ರಿವೇಣಿ ಸಂಗಮ ಪ್ರಯಾಗದಲ್ಲಿ.

                      ಮಗಧದ ರಾಜಧಾನಿ ಪಾಟಲೀಪುತ್ರ ಗಂಗೆಯ ತಟದಲ್ಲಿ ನಿರ್ಮಾಣವಾಯಿತು. ಚಂದ್ರವಂಶೀಯರ ರಾಜಧಾನಿಗಳಾದ ಹಸ್ತಿನಾವತಿ, ಇಂದ್ರಪ್ರಸ್ಥ ನಿರ್ಮಾಣವಾದದ್ದು ಗಂಗೆ ಯಮುನೆಯರ ತಟಗಳಲ್ಲೇ. ಶಕಕರ್ತರಾದ ವಿಕ್ರಮ, ಶಾಲಿವಾಹನರ ರಾಜಧಾನಿಗಳು ಕ್ಷಿಪ್ರ ಮತ್ತು ಗೋದೆಯರ ಆರೈಕೆ ಪಡೆದವು. ತುಂಗೆಯ ತಟದಲ್ಲಿ ವಿಜಯನಗರವಿದ್ದಿತು.ದಕ್ಷಿಣದ ಬಹುತೇಕ ರಾಜ ಮನೆತನಗಳಿಗೆ ಕಾವೇರಿಯ ಬಗ್ಗೆ ಅಪಾರವಾದ ಗೌರವವಿತ್ತು. ನೀರನ್ನು ತಾಯಿ ಅಂತ ಗೌರವಿಸಿದ್ದು ಕೃತಜ್ಞತೆಯ ಕಾರಣಕ್ಕಾಗಿ. ಶಾಲಾ, ಕಾಲೇಜುಗಳಲ್ಲಿ ನೀರು ಜಲಜನಕ ಆಮ್ಲಜನಕಗಳ ಮಿಶ್ರಣ ಅಂತ ಕಲಿತ ಹುಡುಗ ಮನೆಗೆ ಬಂದು ಅಮ್ಮಾ H2O ಕೊಡು ಅಂತ ಕೇಳಲ್ಲ. ನೀರನ್ನು ಗಂಗೆ ಅಂತ ಮಗುವಿಗೆ ಹೇಳಿಕೊಡಬೇಕಾದವಳು ತಾಯಿ. ಅದಕ್ಕೇ ಮೇಷ್ಟ್ರ H2O ತರಗತಿ ಕೋಣೆಗಷ್ಟೇ ಸೀಮಿತವಾಗುತ್ತೆ. ತಾಯಿ ಹೇಳಿಕೊಟ್ಟ ಪಾಠ ಕೊನೇತನಕ ಉಳಿಯುತ್ತೆ.



                     "ಗಾವೋ ವಿಶ್ವಸ್ಯ ಮಾತರಃ" ಅಂದರು ಹಿರಿಯರು. ತಾಯ ಎದೆ ಹಾಲು ನಿಂತ ನಂತರ ಜೇವನ ಪೂರ್ತಿ ಹಾಲುಣಿಸೋ ಹಸುವನ್ನು ತಾಯಿ ಅನ್ನದೇ ಇರಲಿಕ್ಕಾಗುತ್ತದೆಯೇ? ಕೃಷಿ ಆಧಾರಿತ ಭಾರತದ ಅರ್ಥ ವ್ಯವಸ್ಥೆಯ ಪ್ರತೀಕ ಹಸು. ಹಸುಗಳಿಂದ ಭಾರತಕ್ಕೆ ಪ್ರತೀ ವರ್ಷ ೨ ಲಕ್ಷ ಕೋಟಿ ವರಮಾನ ಬರುತ್ತೆ. ೫ ಲಕ್ಷ ಗ್ಯಾಲನ್ ನಷ್ಟು ಹಾಲು ಸಿಗುತ್ತೆ. ಗೋಮೂತ್ರದಲ್ಲಿ ಔಷಧೀಯ ಗುಣ ಇದೆ. ಭಾರತಕ್ಕೆ ಅದರ ಪೇಟೆಂಟ್ ಸಿಕ್ಕಿದೆ. ಭೂಮಿಯ ಸಾರ ಹೆಚ್ಚಿಸಲು ಗೋಮಯ ಬೇಕು. ದೇಹಶುದ್ಧಿಗೆ ಪಂಚಗವ್ಯ ಸ್ವೀಕಾರ ಮಾಡುತ್ತೇವೆ. ಅಮೃತದಂತಹ ಹಾಲು, ಔಷಧಿ ತುಂಬಿದ ಗೋಮೂತ್ರ, ನೆಲಕ್ಕೆ ಶಕ್ತಿ ಕೊಡೋ ಗೋಮಯ, ಅಷ್ಟೇ ಅಲ್ಲ ಹಸುವಿನ ಉಸಿರಿನಿಂದ ಮನುಕುಲ ಉಳಿದಿದೆ! ಯಂತ್ರೋಪಕರಣಗಳು ಬಂದ ನಂತರವೂ ಗ್ರಾಮೀಣ ಭಾರತದ ನೂರಕ್ಕೆ ಎಪ್ಪತ್ತು ಶೇಕಡಾ ಸಾಗಾಣಿಕೆ ಎತ್ತಿನ ಗಾಡಿಗಳಿಂದ ಆಗುತ್ತೆ. ಇವುಗಳಿಂದ ಭಾರತಕ್ಕೆ ವರ್ಷಕ್ಕೆ ಒಂದು ಲಕ್ಷ ಲೀಟರ್ ಡೀಸೆಲ್ ಉಳಿತಾಯ ಆಗುತ್ತೆ. ಅಂದರೆ ವರ್ಷಕ್ಕೆ ೧೨೦೦೦ ಕೋಟಿ ರೂಪಾಯಿಗಳ ವಿದೇಶಿ ವಿನಿಮಯದ ಉಳಿತಾಯ. ಈ ಜೀವಿಗಳ ಮೇಲೆ ಸ್ವಲ್ಪನಾದರೂ ಕೃತಜ್ಞತೆ ಬೇಡ್ವಾ?



ಮೈಸೂರಿನ ಸಾವಯುವ ಕೃಷಿಕ ಮಿತ್ರರೊಬ್ಬರು ತಮ್ಮ ಹೊಲದಲ್ಲಿ ಈ ರೀತಿ ಬರೆದು ಹಾಕಿದ್ದಾರೆ,

" ಎತ್ತು ಹೊಗೆ ಉಗುಳಲ್ಲ ಮತ್ತು ಟ್ರಾಕ್ಟರ್ ಸಗಣಿ ಹಾಕಲ್ಲ"

ಎಂಥಾ ಮಾತು. ಅದಕ್ಕೆ ನಾವು ಗೋವನ್ನು ತಾಯಿಯಂತೆ ಕಂಡು ಪೂಜಿಸುತ್ತೇವೆ.



                            ೧೯೪೭ರಲ್ಲಿ ಸ್ವಾತಂತ್ರ್ಯ ಸಿಕ್ಕಾಗ ಜನಸಂಖ್ಯೆ ೩೩ ಕೋಟಿ ಇದ್ದರೆ ಪಶುಗಳ ಸಂಖ್ಯೆ ೪೧ ಕೋಟಿ ಇತ್ತು. ಇವತ್ತು ಜನಸಂಖ್ಯೆ ೧೨೦ ಕೋಟಿಗೇರಿದೆ, ಪಶುಗಳ ಸಂಖ್ಯೆ ೧೧ ಕೋಟಿಗಿಳಿದಿದೆ! ಕಸಾಯಿ ಖಾನೆಗಳ ಸಂಖ್ಯೆ ೩೦೬ರಿಂದ ೩೬ಸಾವಿರಕ್ಕೇರಿದೆ!! ಕೇವಲ ದೆಹಲಿಯೊಂದರಲ್ಲಿಯೇ ೫೦ಸಾವಿರ ಕಟುಕರು ಪ್ರತಿನಿತ್ಯ ೧ ಲಕ್ಷ ಲೀಟರ್ ಹಸುವಿನ ರಕ್ತವನ್ನು ಗಟಾರದ ಮೂಲಕ ಯಮುನೆಗೆ ಹರಿಸುತ್ತಾರೆ! ಎಂತಹ ಮಾಲಿನ್ಯ!! ಎಂತಹ ಪೈಶಾಚಿಕ ಕೃತ್ಯ!!! ನಾವು ಈಗಲೂ ಕಣ್ಣು ತೆರೆಯದಿದ್ದರೆ, ಕಣ್ಣು ತೆರೆಯೋ ಭಾಗ್ಯದಿಂದ ವಂಚಿತರಾಗಬೇಕಾಗುತ್ತೆ.



                        ಈ ನೆಲ, ಜಲ, ಪ್ರಕೃತಿ, ವೇದ, ಗೋವುಗಳು ತಾಯಿ ಅಂತ ನಮಗೆ ಕಲಿಸಿಕೊಡಬೇಕಾದವಳು ನಮ್ಮ ತಾಯಿ. ತಾಯಿಯ ನಡವಳಿಕೆ ನೋಡಿ ಮಗು ಕಲಿಯುತ್ತೆ. ತಾಯಿ ನೆಲ, ಜಲ, ಸೂರ್ಯ, ಗೋವು, ತುಳಸಿ, ವಟವೃಕ್ಷಗಳಿಗೆ ನಮಸ್ಕರಿಸುವಾಗ ಜತೆಗಿದ್ದು ಅನುಕರಿಸುವ ಮಗುವಿಗೆ ಕ್ರಮೇಣ ತಾನಿವುಗಳಿಗೆ ಋಣಿಯಾಗಿರಬೇಕೆಂಬ ಭಾವ ಬಲಿಯುತ್ತೆ. ಹಾಗಾದರೆ ಇಂದಿನ ತಾಯಂದಿರು ತಮ್ಮ ಕರ್ತವ್ಯದಿಂದ ವಿಮುಖರಾಗುತ್ತಿದ್ದಾರೆಂದಾಯಿತಲ್ಲವೇ?



                         ಕಬಡ್ಡಿ ಆಟಕ್ಕೆ ಮುಂಚೆ ಆಟಗಾರನೊಬ್ಬ ಮಧ್ಯ ರೇಖೆಯಲ್ಲಿನ ಮಣ್ಣನ್ನು ಹಣೆಗೊತ್ತಿಕೊಳ್ಳೋದು ಕಬಡ್ಡಿ ಆಟದ ನಿಯಮಗಳಲ್ಲೇನಾದರೂ ಬರೆದಿದೆಯಾ? ಕಟ್ಟಡ ಕಟ್ಟೋಕೆ ಮುಂಚೆ ಭೂಮಿ ಪೂಜೆ ಮಾಡ್ತೇವೆ. ನೇಗಿಲು ನೆಲಕ್ಕೆ ತಾಗಿಸುವ ಮುಂಚೆ ಅಮ್ಮಾ ಬಂಗಾರದ ಬೆಳೆ ಕೊಡು ಅಂತ ಪ್ರಾರ್ಥನೆ ಮಾಡುತ್ತೇವೆ. ಇವೆಲ್ಲಾ ತಾಯಿ ಕಲಿಸಿದ ಪಾಠ. ಇಂತಹ ಶಿಕ್ಷಣ ಸಿಕ್ಕಿದ ಮಗುವಿನ ಮನಸ್ಸಿನಲ್ಲಿ ರಾಷ್ಟ್ರದ ಬಗ್ಗೆ ಅಭಿಮಾನ ಮೂಡುತ್ತೆ, ರಾಷ್ಟ್ರಕ್ಕೆ ಅಪಮಾನ ಆದರೆ ಮನಸ್ಸು ಸಿಡಿದೇಳುತ್ತೆ. ಇದನ್ನೇ ಶಾಲೆಗಳಲ್ಲಿ ಕಲಿಸಹೋದರೆ ಕೇಸರೀಕರಣ ಅಂತಾರಲ್ಲ! ತಾಯಿಯನ್ನು ತಾಯಿ ಅಂತ ಗೌರವಿಸುವುದನ್ನು ನಿಮ್ಮ ಮುಂದಿನ ಪೀಳಿಗೆಗೆ ಹೇಳಿಕೊಡೋದು ನಿಮಗೆ ಬೇಡವೆ? ನಮ್ಮ ಇತಿಹಾಸದ ಸಾರ್ವಭೌಮತ್ವವನ್ನು ಹೇಳಿಕೊಡೋದನ್ನು, ನಮ್ಮ ರಾಷ್ಟ್ರಪುರುಷ ಸ್ವಾತಂತ್ರ್ಯ ವೀರರ ಹೆಸರುಗಳನ್ನು ಪಠ್ಯ ಪುಸ್ತಕಗಳಿಂದ ತೆಗೆಯಲಾಗಿದೆ. ನಮ್ಮ ಮಕ್ಕಳು ಭೃಷ್ಟ, ಲಂಚಕೋರ. ಮತಾಂಧ, ದೇಶದ್ರೋಹಿ ರಾಜಕಾರಣಿಗಳ ಬಗ್ಗೆ ಪಠ್ಯ ಪುಸ್ತಕಗಳಲ್ಲಿ ಓದಬೇಕಾದ ದೌರ್ಭಾಗ್ಯ ಬಂದಿದೆ!

ಬುಧವಾರ, ಅಕ್ಟೋಬರ್ 31, 2012

ಭಾರತ ದರ್ಶನ-೧೬


ಭಾರತ ದರ್ಶನ-೧೬:

      ನಮ್ಮ ಹಿರಿಯರು ಈ ನೆಲದೊಂದಿಗೆ ತಾಯಿ ಮಗನ ಸಂಬಂಧವನ್ನು ಕಂಡುಕೊಂಡರು. ಅಥರ್ವವೇದದ ಭೂಮಿಸೂಕ್ತವನ್ನು ಈ ದೇಶದ ಮೊದಲ ರಾಷ್ಟ್ರಗೀತೆ ಅಂತ ಹೇಳಿದ್ದಾರೆ. ಆ ವೇದದ ಒಂದು ಮಾತು, ಆಂಗೀರಸ ಅನ್ನುವ ಋಷಿ ಹೇಳಿದ ಆ ಮಾತು...
"ಮಾತಾ ಭೂಮಿಃ ಪುತ್ರೋಹಂ ಪೃಥಿವ್ಯಾಃ"
ಅಂದರೆ ಭೂಮಿ ನನ್ನ ತಾಯಿ ನಾನವಳ ಮಗು.
       ಈ ಮಾತು ಜಗತ್ತಿನ ಚಿಂತನಾ ವಿಧಾನವನ್ನೇ ಬದಲಾಯಿಸಿತು. ಭೂಮಿಯನ್ನು ಜಡವಸ್ತು ಅಂತ ಭಾವಿಸಿದ್ದ ಜಗತ್ತಿನ ಕಣ್ಣು ತೆರೆಸಲಾಯಿತು. ಅವರೆಲ್ಲಾ ತಮ್ಮ ತಮ್ಮ ದೇಶವನ್ನು ತಾಯಿಯಂತೆ ಕಾಣಲು ಪ್ರಾರಂಭಿಸಿದರು. ಇಂಗ್ಲೆಂಡಿನ ಶಾಲಾ ಮಕ್ಕಳು ಪ್ರಾರ್ಥನೆ ಆದ ನಂತರ " oh mother England, with all the faults I love the" ಎನ್ನಲು ಪ್ರಾರಂಭಿಸಿದ್ದು ಭಾರತೀಯ ಸಂಸ್ಕೃತಿಯ ಪ್ರಭಾವವಲ್ಲದೆ ಮತ್ತೇನು?

      ತಾಯಿ ಮಗುವಿನ ಸಂಬಂಧ ಅತ್ಯಂತ ಪವಿತ್ರವಾದದ್ದು. ನಮ್ಮಲ್ಲಿ ಮಾತ್ರವಲ್ಲ ಇಡೀ ಸೃಷ್ಠಿಯಲ್ಲಿ ಮಾತೃತ್ವದ ಭಾವ ಇದೆ. ಪಕ್ಷಿಗಳು ಆಹಾರ ಸಿಕ್ಕಾಗ ತಾವು ತಿನ್ನದೆ ಮರಿಗಳಿಗೆ ತಂದುಣಿಸುತ್ತವೆ. ಬೆಕ್ಕು ತನ್ನ ಮರಿಗಳ ರಕ್ಷಣೆಗಾಗಿ ಸುರಕ್ಷಿತ ಸ್ಥಳ ಹುಡುಕುತ್ತಾ ಹುಡುಕುತ್ತಾ ಹನ್ನೆರಡು ಕಡೆ ಸ್ಥಾನಾಂತರ ಮಾಡುತ್ತಂತೆ. ಮಂಗ ಮರದಿಂದ ಮರಕ್ಕೆ ಹಾರುವಾಗ ಒಂದು ಕೈಯಲ್ಲಿ ಮರಿಯನ್ನು ಭದ್ರಪಡಿಸಿಕೊಳ್ಳುತ್ತಾ ಅಪಾಯವನ್ನು ತನ್ನ ಮೈಮೇಲೆಳೆದುಕೊಂಡು ಇನ್ನೊಂದು ಕೈಯನ್ನು ಚಾಚುತ್ತಾ ಚಾಚುತ್ತಾ ನೆಗೆಯುತ್ತೆ. ಸಿಂಹಿಣಿಯ ಹಲ್ಲು ಮತ್ತು ಉಗುರು ನಮಗೆ ಶೂಲ.ಆದರೆ ಅದರ ಮರಿಗಳಿಗದು ಕುಸುಮಕೋಮಲ. ಹಸು ಮತ್ತು ಕರುವಿನ ಸಂವಾದವನ್ನು "ವಾತ್ಸಲ್ಯದ ಮಹಾಕಾವ್ಯ" ಅಂತ ನಮ್ಮ ಹಿರಿಯರು ಹೇಳಿದ್ದಾರೆ. ಕರುವಿನ ಹಗ್ಗ ಬಿಚ್ಚಿ, ಎರಡೇ ನೆಗೆತಕ್ಕೆ ತಾಯಿ ಬಳಿ ತಲುಪುತ್ತೆ. ಹಸು ಬಳಿ ಬಂದ ಕರುವಿನ ಮೈಯನ್ನು ನೆಕ್ಕುತ್ತೆ. ಮನೆಯಲ್ಲಿಯೂ  ಅಂಗಳದಲ್ಲಿ ಆಟವಾಡಿ ದಣಿದು, ಬಳಲಿ, ಬಾಯಾರಿ ಬಂದ ಮಗುವನ್ನು ತಾಯಿ ಬರಸೆಳೆದು ಹಣೆಗೆ ಮುತ್ತನ್ನೀಯುತ್ತಾಳೆ.

       ಕರು ಹಾಲು ಕುಡಿಯುವುದನ್ನು ನೋಡಿದ್ದೀರಾ? ಸುಮ್ಮನೇ ನಿಂತು ಹಾಲು ಕುಡಿಯಲ್ಲ.  ಹಾಲು ಕುಡಿಯುವಾಗ ನೆಗೆಯುತ್ತೆ, ಕುಣಿಯುತ್ತೆ, ಕೆನೆಯುತ್ತೆ, ಕೆಚ್ಚಲಿಗೆ ತನ್ನ ನೆತ್ತಿಯನ್ನು ಚುಚ್ಚುತ್ತಾ ಚುಚ್ಚುತ್ತಾ ಹಾಲು ಕುಡಿಯುತ್ತೆ. ಮಗುವಿನ ಲೀಲೆ ಅದು. ಮಗು ಹಾಲು ಕುಡಿಯುವಾಗ ಅಮ್ಮನಿಗೆ ಒದೆಯುತ್ತೆ. ತಾಯಿ ಮಗುವಿನ ಪಾದವನ್ನು ದೇವರ ಪಾದ ಅಂತ ಚುಂಬಿಸಿ ಕಣ್ಣಿಗೊತ್ತಿಕೊಳ್ಳುತ್ತಾಳೆ. ತನಗೆ ಒದ್ದು ಅದಕ್ಕೆಲ್ಲಿ ನೋವಾಯ್ತೋ ಅಂತ ಪಾದವನ್ನು ನೀವುತ್ತಾಳೆ. ಆದರೆ ಪಶು ಪಕ್ಷಿಗಳು ಮತ್ತು ಮನುಷ್ಯರ ತಾಯಿ ಮಗುವಿನ ಸಂಬಂಧದಲ್ಲಿ ಒಂದು ವ್ಯತ್ಯಾಸ ಇದೆ.
      ಪಶು ಪಕ್ಷಿಗಳಲ್ಲಿ ಈ ಸಂಬಂಧ ಹೆಚ್ಚು ಕಾಲ ಉಳಿಯಲ್ಲ. ಮರಿ ಬೆಳೆಯುತ್ತೆ, ರೆಕ್ಕೆ ಬಲಿಯುತ್ತೆ, ನೀಲಾಕಾಶ ನೋಡುತ್ತೆ, ಮೈ ಜುಮ್ಮೆನ್ನುತ್ತೆ, ರೆಕ್ಕೆ ಬಡಿದು ಬಾನಿಗೇರುತ್ತೆ, ಸ್ವಾವಲಂಬಿ ಆಗುತ್ತೆ, ತಾಯಿಯನ್ನು ಮರೆಯುತ್ತೆ.ಇದೇ ರೀತಿ ಪ್ರಾಣಿ ಸಂಕುಲ ತನ್ನ ಆಹಾರ ಅರಸಲು ಶುರು ಮಾಡಿದೊಡನೆ ಸ್ವಾವಲಂಬಿ ಆಗುತ್ತೆ. ಆದರೆ ಮನುಷ್ಯ ಸ್ವಾವಲಂಬಿ ಆದ ಮೇಲೆ ಅಪ್ಪ ಅಮ್ಮನನ್ನು ಮರೆಯೋಲ್ಲ.
" ತಾಯಿ ತಂದೆಯರ ಸೇವೆಯ ಯೋಗ
ಬರಬಾರದೆ ಬಾಳಿನಲಿ ಬೇಗ"
ಅನ್ನೋದೆ ನಮ್ಮ ಬಾಳಿನ ಪಲ್ಲವಿ.

      ಕಣ್ಣೇ ಇಲ್ಲದ ಅಪ್ಪ ಅಮ್ಮನನ್ನು ಹೆಗಲ ಮೇಲೆ ಹೊತ್ತು ತೀರ್ಥಯಾತ್ರೆ ಮಾಡಿಸಿದ ಶ್ರವಣಕುಮಾರ ನಮಗೆ ಆದರ್ಶ.
ತಂದೆಯ ಮಾತ ಉಳಿಸಲೋಸುಗ ಚಿಕ್ಕಮ್ಮನ ಸಂತೋಷಕ್ಕಾಗಿ ತಮ್ಮನಿಗೆ ರಾಜ್ಯದಧಿಕಾರಬಿಟ್ಟು ಅಡವಿಗೆ ತೆರಳಿದ ಪೊಡವಿಪತಿ ಶ್ರೀರಾಮಚಂದ್ರ ಈ ದೇಶದ ಆದರ್ಶ. ಆದರೆ ಇಂದು.....?

       ನಮ್ಮ ಅಕ್ಕ ತಂಗಿಯರಿಗೆ ವೇದ, ಶೃತಿ, ಗೀತಾ ಮುಂತಾದ ಹೆಸರಿಡುತ್ತೇವೆ. ನಮ್ಮನ್ನು ಭಗವಂತ( ಜ್ಞಾನ ) ನೆಡೆಗೆ ಒಯ್ಯುವ ಎಲ್ಲವನ್ನೂ ತಾಯಿ ಅಂತ ಗೌರವಿಸುತ್ತೇವೆ. ನಮಗೆ ಉಪಕರಿಸುವ ಎಲ್ಲದಕ್ಕೂ ಕೃತಜ್ಞರಾಗಿರಬೇಕು ಎಂಬುದರ ಅಭಿವ್ಯಕ್ತಿ ಅದು. ಹಾಗಾಗಿಯೇ ನಾವು ವೇದ, ಉಪನಿಷತ್, ನೆಲ, ಜಲ, ಹಸು, ಪ್ರಕೃತಿ,.....ಹೀಗೆ ಎಲ್ಲವನ್ನೂ ತಾಯಿ ರೂಪದಲ್ಲಿ ಕಾಣುತ್ತೇವೆ.

||ವಂದೇ ಮಾತರಂ||

ಶನಿವಾರ, ಅಕ್ಟೋಬರ್ 27, 2012

ಭಾರತ ದರ್ಶನ-೧೫

ಭಾರತ ದರ್ಶನ-೧೫:

ಉತ್ತರದಲ್ಲಿ ಉತ್ತುಂಗ ಹಿಮವಂತ, ದಕ್ಷಿಣದ ತುದಿಯಲ್ಲಿ ಅಗಾಧ ಶರಧಿ. ಮೇಲೆ ಕಿರೀಟ ಪ್ರಾಯದ ಹಿಮವರ್ಷ. ಕೆಳಗೆ ತಾಯಿಯ ಚರಣಕ್ಕೆ ನೀಲಸಿಂಧು ಜಲಸ್ಪರ್ಷ. ತನ್ಮಧ್ಯೆ ಭಾರತ ವರ್ಷ.

ಭಾರತ ಪ್ರಶಂಸೆ:

"ಪೃಥಿವ್ಯಾಂ ಭಾರತಂ ವರ್ಷಂ ಕರ್ಮಭೂಮಿರುದಾಹೃತಾ||" - ಬ್ರಹ್ಮಾಂಡ ಪುರಾಣ
(ಜಗತ್ತಿನಲ್ಲಿ ಭಾರತವೇ ಕರ್ಮಭೂಮಿ ಎಂದು ತಿಳಿಯಲ್ಪಡುತ್ತದೆ.)

"ಜಾಂಬವೇ ಭಾರತಂ ವರ್ಷಂ ತೀರ್ಥಂ ತ್ರೈಲೋಕ್ಯ ವಿಶ್ರುತಂ|
ಕರ್ಮ ಭೂಮಿರ್ಯತಃ ಪುತ್ರ ತಸ್ಮಾತ್ ತೀರ್ಥಂ ತದುಚ್ಯತೇ||" -ಬ್ರಹ್ಮಾಂಡ ಪುರಾಣ
(ತ್ರಿಲೋಕಗಳಲ್ಲೇ ಜಂಬೂದ್ವೀಪದ ಭಾರತ ವರ್ಷವು ಜಗತ್ಪ್ರ್ಸಿದ್ಧ ತೀರ್ಥವಾಗಿದೆ. ಅದು ಕರ್ಮಭೂಮಿಯಾಗಿರುವುದರಿಂದಲೇ ತೀರ್ಥ ಎನಿಸಿದೆ.)

"ದೇವನಾಮಪಿ ವಿಪ್ರರ್ಷೇ ಸದಾಹ್ಯೇಷ ಮನೋರಥಃ |
ಅಪಿ ಮಾನುಷ್ಯಮಾಪ್ಸ್ಯಾಮೋ ದೇವತ್ವಾತ್ ಪ್ರಚ್ಯುತಾಃ ಕ್ಷಿತೌ ||
ಮನುಷ್ಯಃ ಕುರುತೇ ತತ್ತು ಯನ್ನ ಶಕ್ಯಂ ಸುರಾಸುರೈಃ || "-ಮಾರ್ಕಂಡೇಯ ಪುರಾಣ
(ಹೇ ವಿಪ್ರರ್ಷೇ ! ದೈವತ್ವದಿಂದ ಚ್ಯುತರಾದ ಬಳಿಕ ಭಾರತದಲ್ಲಿ ಮನುಷ್ಯತ್ವ ಪ್ರಾಪ್ತವಾಗಲೆಂದು ದೇವತೆಗಳೂ ಮನೋರಥ ಹೊಂದಿರುತ್ತಾರೆ. ಯಾವುದು ಸುರಾಸುರರಿಗೆ ಸಾಧ್ಯವಾಗದೋ ಅದನ್ನು ಮನುಷ್ಯ ಮಾಡಬಲ್ಲನು.)

"ಅತ್ರಾಪಿ ಭಾರತಂ ಶ್ರೇಷ್ಠಂ ಜಂಬೂದ್ವೀಪೇ ಮಹಾಮುನೇ |
ಯತೋ ಹಿ ಕರ್ಮ ಭೂರೇಷಾ ಯತ್ಯೋ ಭೋಗಭೂಮಯಃ ||
ಅತ್ರ ಜನ್ಮ ಸಹಸ್ರಾಣಾಂ ಸಹಸ್ರೈರಪಿ ಸತ್ತಮ |
ಕದಾಚಿಲ್ಲಭತೇ ಜಂತುರ್ಮಾನುಷ್ಯಂ ಪುಣ್ಯ ಸಂಚಯಾತ್ ||" -ಮಹಾಭಾರತ
(ಜಂಬೂದ್ವೀಪವೆಂಬ ಜಗತ್ತಿನ ಭಾಗದಲ್ಲಿ ಭಾರತವು ಶ್ರೇಷ್ಠವಾದ ದೇಶವು. ಏಕೆಂದರೆ ಇದು ಕರ್ಮಭೂಮಿಯು. ಇತರ ದೇಶಗಳು ಬರಿಯ ಭೋಗ ಭೂಮಿಗಳು. ಸಾವಿರಾರು ಜನ್ಮಗಳ ಪುಣ್ಯ ಸಂಚಯನದಿಂದ ಮಾತ್ರ ಭಾರತದಲ್ಲಿ ಜೀವಿಯು ಮನುಷ್ಯ ಜನ್ಮ ಪಡೆಯುತ್ತಾನೆ.)

"ಸ್ವರ್ಗದಲ್ಲಿ ಹತ್ತಾರು ಯುಗಗಳ ಕಾಲ ಬಾಳುವುದಕ್ಕಿಂತ ಭಾರತದಲ್ಲಿ ಕೆಲವು ಕ್ಷಣಗಳು ಜೀವಿಸುವುದು ಮೇಲು" -ಶ್ರೀ ಮದ್ಭಾಗವತ 
"ಅನ್ಯಸ್ಥಾನೇ ವೃಥಾ ಜನ್ಮ ನಿಷ್ಫಲಂ ಚ ಗತಾಗತಮ್ |
ಭಾರತೀ ಚ ಕ್ಷಣಂ ಜನ್ಮ ಸಾರ್ಥಕಂ ಶುಭಂ ಕರ್ಮದಮ್ ||"
(ಇತರ ಭಾಗಗಳಲ್ಲಿ ಹುಟ್ಟುವುದು ವ್ಯರ್ಥವೇ ಸರಿ. ಅದರಿಂದ ಮಹತ್ವದ ಫಲವಿಲ್ಲ. ಭಾರತದಲ್ಲಿನ ಹುಟ್ಟು ಕ್ಷಣಕಾಲವಾದರೂ ಫಲಕಾರಿಯೇ.)
ಓರ್ವ ಮಹಾನುಭಾವ ಹೇಳುತ್ತಾನೆ 
"ಪ್ರತಿ ಜನ್ಮನಿ ಮೇ ಚಿತ್ತಂ ವಿತ್ತಂ ದೇಹಶ್ಚ ಸಂತಿ
ತತ್ ಸೇವಾ ನಿರತು ಭೂಯುರ್ಮಾತಾ ತ್ವಂ ಕರುಣಾಮಯಿ|"
(ಹೇ ತಾಯೇ ನೀನು ಅತ್ಯಂತ ಕರುಣಾಳು. ನನಗೆ ನಿನ್ನಲ್ಲಿಯೇ ಜನ್ಮ ದೊರೆಯಲಿ. ಪ್ರತಿ ಜನ್ಮದಲ್ಲಿಯೂ ನನ್ನ ಮನಸ್ಸು, ಸಂಪತ್ತು, ಶರೀರ ಮತ್ತು ಸಂತತಿಯೂ ಅರ್ಥಾತ್ ನನ್ನದೆಂಬುದೆಲ್ಲವೂ ನಿನ್ನ ಸೇವೆಗೆ ಮುಡಿಪಾಗಿರಲಿ)

ಭಾರತ ಭಕ್ತನೊಬ್ಬ ಹೇಳುತ್ತಾನೆ,
"ನಮೇ ವಾಂಛಾಸ್ತಿ ಯಶಸಿ ವಿದ್ವತ್ತ್ವೇನ ಚ ವಾ ಸುಖೇ|
ಪ್ರಭುತ್ವೇ ನೈವ ವಾ ಸ್ವರ್ಗೇ ಮೋಕ್ಶೇಪ್ಯಾನಂದದಾಯಕೇ||
ಪರಂತು ಭಾರತೇ ಜನ್ಮ ಮಾನವಸ್ಯ ಚ ವಾ ಪಶೋಃ |
ವಿಹಂಗಸ್ಯ ಚ ವಾ ಜಂತೋರ್ವೃಕ್ಷ ಪಾಷಾಣಯೋರಪಿ ||"
(ನನಗೆ ಕೀರ್ತಿಯ ಆಸೆಯಿಲ್ಲ ವಿದ್ವಾಂಸನಾಗಿ ಮೆರೆಯಬೇಕೆಂಬ ಇಚ್ಛೆಯೂ ಇಲ್ಲ. ನನಗೆ ಯಾವುದೇ ವಿಧದ ಸುಖವೂ ಬೇಡ. ನಾನೊಬ್ಬ ದೊರೆಯಾಗಿ ಆಳಬೇಕೆಂದು ಬಯಸುವುದಿಲ್ಲ. ಸಕಲ ಸುಖದ ಆಗರವಾದ ಸ್ವರ್ಗವಾಗಲಿ, ಪರಮಾನಂದದ ಮೋಕ್ಷವಾಗಲಿ ನನಗೆ ಬೇಡ. ನನಗಿರುವುದೊಂದೇ ಆಸೆ. ಅದೆಂದರೆ ಭಾರತದಲ್ಲಿ ಜನಿಸಬೇಕು. ಮನುಷ್ಯ, ಪಶು-ಪಕ್ಷಿ, ಇಲ್ಲವೇ ಹುಳುವಾಗಿಯಾದರೂ ಇಲ್ಲೇ ಹುಟ್ಟಲು ಅವಕಾಶ ಕೊಡು ಭಗವಾನ್. ಅದು ಸಾಧ್ಯವಿಲ್ಲವೆಂದಾದರೆ ಕೊನೆ ಪಕ್ಷ ಗಿಡ ಮರದ ರೂಪದಲ್ಲಾದರೂ ಅಥವಾ ಕಲ್ಲು ಬಂಡೆಯಾಗಿಯಾದರೂ ನನಗೆ ಭಾರತದಲ್ಲಿ ಜನ್ಮ ಕೊಡು)

ಆದರೆ ಇಂದು.....?

ಗುರುವಾರ, ಅಕ್ಟೋಬರ್ 25, 2012

ಹಿಂದೂಮಹಾಸಾಗರ!

                               ಹಿಂದೂಮಹಾಸಾಗರ!

ಒಂದು ಭಾವ.....ಒಂದು ಬಿಂದು.....

ದೇಶ ರಕ್ಷಣೆಗಾಗಿ ತನ್ನ ಪ್ರಾಣವನ್ನೇ ಪಣವಾಗಿಟ್ಟು ಹೋರಾಡಿ ಮತಾಂಧ ಹಾಗೂ ಕಮ್ಮಿನಿಷ್ಟ ಉಗ್ರರಿಗೆ ಬಲಿಯಾಗಿ, ತಾಯ ಪಾದಕ್ಕೆ ಕುಸುಮಗಳಾಗಿ ಅರ್ಪಿತವಾದ ಅಸಂಖ್ಯಾತ ಬಿಂದು ಬಿಂದುಗಳಿಗೆ ಅರ್ಪಣೆ....


ಮನದ ಬೇಗುದಿ ಸುಪ್ತ ಜ್ವಾಲೆ
ಹೃದಯ ಮಿಡಿದಿದೆ ಧೈನ್ಯ ಸ್ಥಿತಿಯು
ಕರುಳ ಹಿಂಡುವ ತಾಯ ಶೋಕ
ಕ್ರಾಂತಿಯ ಶಬ್ಧ! ಮಾತಿನ ಮೋಡಿ!

ಎದೆಯ ನಡುಗಿಪ ಸಿಡಿಲ ಠೇಂಕಾರ
ಬೆಳಕ ನಾಚಿಸೋ ಮಿಂಚಿನ ಲಾಸ್ಯ
ಬಲಾಹಕನ ಕಬಂಧ ಹಸ್ತವ ಕಿತ್ತೆಸೆಯೋ ತವಕ
ಕ್ರಾಂತಿಯ ಬಿಂದು! ವರ್ಷಧಾರೆ!

ಅಗ್ನಿಕುಂಡ ಉರಿಯುತಿಹುದು
ಯಜ್ಞ ಧೂಮ ಹಬ್ಬುತಿಹುದು
ಅಗ್ನಿ ಹವಿಸ್ಸ ಬೇಡುತಿಹನು
ಕ್ರಾಂತಿಯ ಕಿಡಿಯು! ಅಗ್ನಿ ಜ್ವಾಲೆ!

ಧರ್ಮ ಸಂಸ್ಕೃತಿ ದೇಶದಾತ್ಮ ತುಳಿಯುತಿರಲು ರಕ್ಕಸ
ದೇಶ ರಕ್ಶಣೆ ಶೃದ್ಧಾ ಕಾರ್ಯ ವಿಮುಖನೇಕೆ ಸೋದರ
ಕುಗ್ಗಲೇತಕೆ ನುಗ್ಗು ಮುಂದಕೆ ಮಾತೃ ರಕ್ಷಣೆ ಪೀಠಿಕೆ
ಗುಂಡಿನ ಮೊರೆತ! ರುಧಿರ ಸಿಂಚನ!

ಜನ್ಮವಾಗಲಿ ಮನೆಮನದೊಳು ಹಿಂದೂ ಕೇಸರ ಶಿವಾಜಿಯ
ಬಂಧು ಭಗಿನಿಯರೆ ಎದ್ದು ನಿಲ್ಲಿರಿ ದೇಶ ನಿಮ್ಮದು ಮರೆತಿರಾ
ಬಿಂದು ಬಿಂದುವು ಬಂದು ಸೇರುತ ಸಿಂಧು ಸುಧೆಯು ಹರಿಯಲಿ
ಕ್ರಾಂತಿಯ ಸಿಂಧು! ಹಿಂದೂ ಮಹಾಸಾಗರ !

ಸೋಮವಾರ, ಅಕ್ಟೋಬರ್ 22, 2012

ಭಾರತ ದರ್ಶನ-೧೨

ಭಾರತ ದರ್ಶನ-೧೨:

ಮಾತೃಭೂಮಿಯ ಅಖಂಡತೆಯಲ್ಲಿ ಭಕ್ತಿ ಮತ್ತು ನಂಬಿಕೆ ವೈದಿಕ ಯುಗದಿಂದಲೂ ನಮ್ಮ ಹೃದಯದಲ್ಲಿ ಹರಿಯುತ್ತಿದೆ. ಪಶ್ಚಿಮದ ಆರ್ಯನ್(ಇರಾನ್) ಮತ್ತು ಪೂರ್ವದ ಶೃಂಗಪುರಗಳೊಂದಿಗೆ ಎರಡೂ ಸಮುದ್ರಗಳಲ್ಲಿ ತನ್ನೆರಡು ಬಾಹುಗಳನ್ನದ್ದುತ್ತಾ ತನ್ನ ಪವಿತ್ರ ಚರಣಗಳಲ್ಲಿ ದಕ್ಷಿಣ ಸಮುದ್ರ ಅರ್ಪಿಸಿದ ಪದ್ಮದಳದಂತಹ ಲಂಕೆಯನ್ನು ಒಳಗೊಂಡ ಮಾತೃಭೂಮಿಯ ದಿವ್ಯ ಸ್ವರೂಪವೇ ಸಾವಿರಾರು ವರ್ಷಗಳಿಂದ ನಮ್ಮ ಸಮಾಜದ ಕಣ್ಮುಂದೆ ಬೆಳಗುತ್ತಿದೆ!

ನಮ್ಮ ಜನತೆಯ ಶೀಲ ಮತ್ತು ಸಂಸ್ಕೃತಿಗಳ ಮೇಲೆ ಅಚ್ಚಳಿಯದ ನಿಚ್ಚಳ ಮುದ್ರೆಯನ್ನೊತ್ತಿದವ ರಾಷ್ಟ್ರಪುರುಷ ಪ್ರಭು ಶ್ರೀರಾಮಚಂದ್ರ. "ಸಮುದ್ರ ಇವ ಗಾಂಭೀರ್ಯೇ,ಸ್ಥೈರ್ಯೇಣ ಹಿಮವಾನ್ ಇವ" ಅಂದರೆ ಗಾಂಭೀರ್ಯದಲ್ಲಿ ಸಮುದ್ರದಂತೆ, ಧೈರ್ಯದಲ್ಲಿ ಹಿಮಾಲಯದಂತೆ ಎಂದು ವಾಲ್ಮೀಕಿ ಮಹರ್ಷಿಗಳು ಹಾಡಿ ಹೊಗಳಿದ ಮರ್ಯಾದಾ ಪುರುಷೋತ್ತಮ ಆತ.

ಪ್ರಾಚೀನ ಕಾಲದಿಂದಲೂ ನಮ್ಮ ಶಿಕ್ಷಣ ಪದ್ದತಿಯಲ್ಲಿ ಏಕಸೂತ್ರತೆ ಕಂಡುಬರುತ್ತದೆ. ವೇದಶಾಸ್ತ್ರಗಳ ಅಧ್ಯಯನ-ಅಧ್ಯಾಪನದಲ್ಲಿ ಗುರು ಶಿಷ್ಯ ಪರಂಪರೆ ಇಡೀ ದೇಶದಲ್ಲಿ ಒಂದೇ ರೀತಿಯಲ್ಲಿತ್ತು. ಒಂದೇ ರೀತಿಯ ಪಠ್ಯಕ್ರಮ ರಾಷ್ಟ್ರದಾದ್ಯಂತ ಜಾರಿಯಲ್ಲಿತ್ತು. ಪಾಣಿನಿಯ ಅಷ್ಟಾಧ್ಯಾಯಿ, ಪತಂಜಲಿಯ ಮಹಾಭಾಷ್ಯವು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ವ್ಯಾಕರಣದ ಮುಖ್ಯ ಗ್ರಂಥಗಳಾಗಿದ್ದವು. ಪಂಚಮಹಾಕಾವ್ಯಗಳು ಮತ್ತು ಪಂಚತಂತ್ರ ಮೊದಲಾದುವು ಎಲ್ಲೆಡೇ ಕಲಿಸಲ್ಪಡುತ್ತಿದ್ದವು. ಕಾಶಿ, ತಕ್ಷಶಿಲೆ, ಮಥುರಾ, ನವದ್ವೀಪ, ಕಂಚಿ, ಉಜ್ಜಯಿನಿ, ನಲಂದಾ, ಉದಂತಪುರಿ, ವಿಕ್ರಮಶೀಲ ಮೊದಲಾದ ವಿಶ್ವವಿದ್ಯಾಲಯಗಳಲ್ಲಿ ದೇಶದ ನಾನಾ ಭಾಗಗಳ ವಿದ್ಯಾರ್ಥಿಗಳು ಕಲಿಯುತ್ತಿದ್ದರು. ಈ ವಿದ್ಯಾರ್ಥಿಗಳು ಅಧ್ಯಯನದ ಬಳಿಕ ಜ್ಞಾನ, ಸಂಸ್ಕೃತಿಯ ಪ್ರವಾಹವನ್ನು ತಮ್ಮ ತಮ್ಮ ಪ್ರದೇಶಗಳಿಗೆ ಒಯ್ಯುತ್ತಿದ್ದರು.

ಏಕಾತ್ಮತೆಯ ಈ ಸೂತ್ರ ಕಲೆ ಮತ್ತು ಶಿಲ್ಪಗಳಲ್ಲೂ ಗೋಚರವಾಯಿತು. ಮೂರ್ತಿ ನಿರ್ಮಾಣದಲ್ಲಿ ಎಲ್ಲ ಪ್ರಮುಖ ದೇವತೆಗಳ ಆಕಾರ ಇಡೀ ದೇಶದಲ್ಲಿ ಒಂದೇ ರೀತಿ ಮೂಡಿತು. ಶಿವ, ದುರ್ಗಾ, ವಿಷ್ಣು, ಸೂರ್ಯ, ತೀರ್ಥಂಕರ, ಬುದ್ಥ, ಕಾರ್ತಿಕೇಯ, ಗಣಪತಿ,... ಮೊದಲಾದ ಪ್ರತಿಮೆಗಳನ್ನು ಕಂಡಾಗ ಯಾವುದೋ ಅಖಿಲ ಭಾರತ ಸಂಸ್ಥೆಯೇ ಈ ಶಿಲ್ಪಗಳ ವ್ಯವಸ್ಥೆ ಮಾಡಿದೆಯೇನೋ ಎಂದು ಅನಿಸದಿರದು. ಕಮಲ, ಕಲಷ, ಸ್ವಸ್ತಿಕ, ಧರ್ಮಚಕ್ರ, ಕಲ್ಪವೃಕ್ಷ, ಅಷ್ಟದಳ ಮುಂತಾದ ಸಂಕೇತಗಳು ಒಂದೇ ರೀತಿ ಇವೆ!

ವಂದೇ ಮಾತರಂ
-ಮುಂದುವರಿಯುವುದು

ಭಾರತ ದರ್ಶನ-೧೩

ಭಾರತ ದರ್ಶನ-೧೩:

ಬೆಳಗೆದ್ದೊಡನೇ ಎರಡು ಕರಗಳನ್ನು ನೋಡುತ್ತಾ
"ಕರಾಗ್ರೇ ವಸತೇ ಲಕ್ಷ್ಮೀ ಕರ ಮಧ್ಯೇ ಸರಸ್ವತೀ।
ಕರ ಮೂಲೇ ಸ್ಥಿತೇ ಗೌರಿ ಪ್ರಭಾತೇ ಕರ ದರ್ಶನಂ॥
ಎಂದು ಪ್ರಾರ್ಥಿಸುತ್ತಿದ್ದ ಮನಸ್ಸುಗಳ ಕರ ಮೂಲದಲ್ಲಿ ಇಂದು ಮೊಬೈಲ್, ರಿಮೋಟ್ ಕಂಟ್ರೋಲರ್, ಟ್ಯಾಬ್ ಬಂದು ಕೂತದ್ದು ಎಂಥಾ ವಿಪರ್ಯಾಸ!

ಹಿರಿಯರು ಚಾಪೆಯಿಂದ ನೆಲಕ್ಕೆ ಕಾಲು ಸ್ಪರ್ಶಿಸುವ ಮುಂಚೆಯೇ
"ಸಮುದ್ರ ವಸನೇ ದೇವಿ ಪರ್ವತಸ್ತನ ಮಂಡಲೇ।
ವಿಷ್ಣುಪತ್ನೀ ನಮಸ್ತುಭ್ಯಂ ಪಾದಸ್ಪರ್ಶಂ ಕ್ಷಮಸ್ವಮೇ॥"
ಎಂದು ಕಾಲುಗಳಿಂದ ಭೂಮಿತಾಯಿಯನ್ನು ಮೆಟ್ಟುವ ಸಲುವಾಗಿ ಕ್ಷಮಾಪಣೆ ಕೇಳುವ ಪರಿಪಾಠ ತಾಯಿಯ ಉದರವನ್ನೇ ಬಗೆದು ಹಣ ಮಾಡುವ ನಮಗೆ ಹೇಗೆ ಬರಬೇಕು?

ಹೌದು ನಮ್ಮ ದೇಶವನ್ನು ನಾವು ಕಂಡದ್ದೇ ಹಾಗೇ!

ಜಗತ್ತಿನ ಇತರರಿಗೆ ಕೇವಲ H2O ಆಗಿ ಕಾಣುವ ನೀರು ನಮಗೆ ತಾಯಿ, ತೀರ್ಥ! ಎಲ್ಲ ನದಿಗಳ ಹೆಸರನ್ನು ಅಕ್ಕತಂಗಿಯರಿಗಿಟ್ಟು ಗೌರವಿಸಿದವರು ನಾವು. ಸ್ನಾನ ಮಾಡುವಾಗ, ಕಲಷ ಪೂಜೆ ಮಾಡುವಾಗ ಎಲ್ಲ ನದಿಗಳನ್ನು ಆವಾಹನೆ ಮಾಡುತ್ತಾ
"ಗಂಗೇ ಚ ಯಮುನೇ ಚೈವ ಗೋದಾವರಿ ಸರಸ್ವತೀ।
ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು॥" ಎನ್ನುತ್ತಾ ನದಿಗಳನ್ನು ಸ್ಮರಿಸುತ್ತೇವೆ.

ದೇಶದಾದ್ಯಂತ ನಿಂತಿರುವ ಪುಣ್ಯ ಕ್ಷೇತ್ರಗಳಂತೂ ಭಾರತದ ಮೌಲಿಕ ಏಕತೆಯ ಸಜೀವ ಸಾಕ್ಷಿಗಳಾಗಿವೆ.
"ಅಯೋಧ್ಯಾ ಮಥುರಾ ಮಾಯಾ ಕಾಶೀ ಕಾಂಚೀ ಅವಂತಿಕಾ।
ಪುರೀ ದ್ವಾರಾವತೀ ಚೈವ ಸಪ್ತೈತಾ ಮೋಕ್ಷದಾಯಿಕಾಃ॥"
ಎಂದು ಸಪ್ತ ಮೋಕ್ಷದಾಯಕ ನಗರಗಳನ್ನು ಸ್ಮರಿಸುವುದು ನಮ್ಮ ದಿನಚರಿಯ ಭಾಗವೇ ಆಗಿತ್ತು.(ಮಾಯಾ-ಹರಿದ್ವಾರ, ಅವಂತಿಕಾ-ಉಜ್ಜಯಿನಿ)

ಜಗದ ಜನರಿಗೆ ಜಡವಾಗಿ ಕಾಣುವ ಪರ್ವತಗಳು ನಮಗೆ ದೈವಾಂಶ ಸ್ವರೂಪವೇ. ಅದಕ್ಕಾಗಿಯೇ
"ಮಹೇಂದ್ರೋ ಮಲಯಃ ಸಹ್ಯೋ ದೇವತಾತ್ಮಾ ಹಿಮಾಲಯಃ।
ಧ್ಯೇಯೋ ರೈವತಕೋ ವಿಂಧ್ಯೋ ಗಿರಿಶ್ಚಾರಾವಲಿಸ್ತಥಾ॥"

ಶಿವಭಕ್ತನಾದರೆ ರಾಮೇಶ್ವರದಿಂದ ಕೈಲಾಸದವರೆಗೆ ಶಿವನೇ ರಾಷ್ಟ್ರವ್ಯಾಪಿಯಾಗಿ ದ್ವಾದಶ ಜ್ಯೋತಿರ್ಲಿಂಗ ರೂಪದಲ್ಲಿ ನಿಂತಿರುವುದನ್ನು ನೋಡೂತ್ತಾನೆ! ಶಿವನ ಅಡಿ ರಾಮೇಶ್ವರದಲ್ಲಾದರೆ ಮುಡಿ ಕೈಲಾಸದಲ್ಲಿ. ಕಾಶಿ ಕಂಚಿಗಳು ಶಿವನ ಎರಡು ಕಣ್ಣುಗಳು ಎಂದವನ ನಂಬಿಕೆ.
ವೈಷ್ಣವನಾದಲ್ಲಿ ಕಂಚಿ, ಗುರುವಾಯೂರುಗಳಿಂದ ಬದರಿಯವರೆಗೆ(108 ವೈಷ್ಣವ ಸ್ಥಾನಗಳು) ಸಾಗುತ್ತಾನೆ.
ಅದ್ವೈತಿಯಾದರೆ ಪ್ರಹರಿಗಳಂತೆ ನಿಂತ ನಾಲ್ಕು ಶಂಕರಾಚಾರ್ಯ ಪೀಠಗಳು ಆತನನ್ನು ದೇಶದ ನಾಲ್ಕು ಮೂಲೆಗೆ ಕರೆದೊಯ್ಯುತ್ತವೆ.
ಶಕ್ತಿಯ ಆರಾಧಕನಾದರೆ ಬಲೂಚಿಸ್ತಾನದ ಹಿಂಗುಲಾತದಿಂದ ಅಸ್ಸಾಮಿನ ಕಾಮಾಕ್ಷಿಯವರೆಗೆ, ಹೈಮಾಚಲದ ಜ್ವಾಲಾಮುಖಿಯಿಂದ ದಕ್ಷಿಣದ ಕುಮಾರಿ ಕ್ಷೇತ್ರದವರೆಗೆ 51 ಶಕ್ತಿಪೀಠಗಳಿವೆ. ಈ ತೀರ್ಥ ಕ್ಷೇತ್ರಗಳೇ ಸಂಸ್ಕೃತಿ ಪ್ರಸಾರದ ಕೇಂದ್ರಗಳಾದುವು. ಈ ಕ್ಷೇತ್ರಗಳಿಂದ ಈ ಭೂಮಿಗೆ ದೈವತ್ವ ಪ್ರಾಪ್ತವಾಯಿತು. ನಮ್ಮ ಸಮಾಜದ ಬಂಧುಗಳಲ್ಲಿ ಭಾರತದ ಏಕಾತ್ಮತೆ ಈ ತೀರ್ಥಗಳ ರೂಪದಲ್ಲಿ ದೃಢವಾಗಿ ಪ್ರಕಟಗೊಂಡಿದೆ.

॥ವಂದೇ ಮಾತರಂ॥

ಭಾರತ ದರ್ಶನ-೧೪

ಭಾರತ ದರ್ಶನ-೧೪:

ಭಾರತ ಒಂದು ರಾಷ್ಟ್ರವಾಗಿತ್ತೇ?

       ರಾಷ್ಟ್ರೀಯತೆ ನಮಗೆ ಬ್ರಿಟಿಷರು ಕೊಟ್ಟ ಕೊಡುಗೆ ಎಂದು ನಂಬಿರುವ ಹಲವು "ಪಂಡಿತರು" ನಮ್ಮಲ್ಲಿದ್ದಾರೆ. ಸತ್ಯವೆಂದರೆ ಚರಿತ್ರೆ ಕಣ್ಣು ಬಿಡುವ ಮೊದಲೇ ನಾವು ಒಂದು ರಾಷ್ಟ್ರವಾಗಿ ಅರಳಿ ನಿಂತಿದ್ದೆವು. ಪಾಶ್ಚಾತ್ಯರು ಮಾನವಂತರಾಗುವ ಮೊದಲೇ ನಾವು ಒಂದು ಅಖಂಡ ಮಾತೃಭೂಮಿಯಲ್ಲಿ ನೆಲೆಸಿದ ರಾಷ್ಟ್ರವಾಗಿದ್ದೆವು.

       " ಪೃಥಿವ್ಯಾ ಸಮುದ್ರಾ ಪರ್ಯಂತಾಯಾ ಏಕರಾಟ್ " (ಸಮುದ್ರದವರೆಗಿನ ಇಡೀ ಭೂಮಿ ಒಂದು ರಾಷ್ಟ್ರ.) ಎಂಬುದು ವೇದಗಳ ಕಹಳೆಯ ಮೊಳಗು. ಸಹಸ್ರಾರು ವರ್ಷಗಳ ಹಿಂದೆಯೇ ನಮ್ಮ ಪರಾಕ್ರಮಿ ಪೂರ್ವಜರು ನಾಡಿನ ನಾಲ್ಕು ಸೀಮೆಗಳನ್ನು ತಿಳಿಸುವ ಈ ಮಾತು ಹೇಳಿದರು:
"ಉತ್ತರಂ ಯತ್ಸಮುದ್ರಸ್ಯ ಹಿಮಾದ್ರೇಶ್ಚೈವ ದಕ್ಶಿಣಮ್ |
ವರ್ಷಂ ತದ್ ಭಾರತಮ್ ನಾಮ ಭಾರತೀ ಯತ್ರ ಸಂತತಿಃ ||" -ವಿಷ್ಣುಪುರಾಣ
(ಸಾಗರದಿಂದ ಉತ್ತರಕ್ಕೆ ಹಿಮಾಲಯದಿಂದ ದಕ್ಶಿಣಕ್ಕೆ ಇರುವ ಭೂಮಿ ಭರತ ವರ್ಷ. ಭಾರತೀಯರು ಇದರ ಮಕ್ಕಳು)

        ವಾಯುಪುರಾಣ ಇದೇ ಮಾತಿಗೆ ಮನ್ನಣೆ ಕೊಡುತ್ತಾ
" ಆಯತೋ ಹ್ಯಾಕುಮಾರಿಕ್ಯಾದಾಗಂಗಪ್ರಭಾವಶ್ಚವೈ ||" (ಕನ್ಯಾಕುಮಾರಿಯಿಂದ ಗಂಗೆಯ ಉಗಮ ಸ್ರೋತದವರೆಗೆ ಹಬ್ಬಿದ ಈ ಭೂಮಿ ಭಾರತ) ಎಂದಿದೆ.
" ಹಿಮಾಲಯಾತ್ ಸಮಾರಭ್ಯ ಯಾವದಿಂದುಸರೋವರಂ |
ತಂ ದೇವ ನಿರ್ಮಿತಂ ದೇಶಂ ಹಿಂದೂಸ್ಥಾನಂ ಪ್ರಚಕ್ಷತೇ ||"
                                       - ಬಾರ್ಹಸ್ಪತ್ಯಶಾಸ್ತ್ರ
(ಹಿಮಾಲಯದಿಂದ ಇಂದು ಸರೋವರ(ಹಿಂದೂಮಹಾಸಾಗರ)ದವರೆಗೆ ವ್ಯಾಪಿಸಿರುವ ದೇಶವೇ ಹಿಂದೂಸ್ಥಾನವೆಂದು ಪ್ರಸಿದ್ಧವಾಗಿದೆ.)

        
           ವೇದಗಳಲ್ಲೂ ನಾಡನ್ನು ಕುರಿತು ಮಾತೃಭಾವ ವ್ಯಕ್ತವಾಗಿದೆ.ಭೂಮಿಸೂಕ್ತವನ್ನು ಭಾರತದ ರಾಷ್ಟ್ರಗೀತೆ ಎಂದರೂ ತಪ್ಪಾಗಲಾರದು. ಈ ಸೂಕ್ತದಲ್ಲಿ ಬರುವ ೬೩ ಮಂತ್ರಗಳೂ ದೇಶಭಕ್ತಿಯ ಭಾವನೆಯನ್ನೇ ಹೊರಸೂಸುತ್ತವೆ. ರಾಮಾಯಣದಲ್ಲಿ
" ಇಕ್ವಾಕೂಣಾಮಿಯಂ ಭೂಮಿಃ ಸಶೈಲವನಕಾನನಾ |
  ಮೃಗಪಕ್ಷಿ ಮನುಷ್ಯಾಣಾಂ ನಿಗ್ರಹಾನುಗ್ರಹಾವಪಿ || "
( ಪರ್ವತ, ಉದ್ಯಾನ, ಕಾಡುಗಳಿಂದ ತುಂಬಿದ ಈ ಭೂಮಿ ಇಕ್ವಾಕು ವಂಶದವರಿಗೆ ಸೇರಿದ್ದು, ಇದರಲ್ಲಿ ಮೃಗ, ಪಕ್ಷಿ, ಮನುಷ್ಯರಿಗೆ ನಿಗ್ರಹ, ಅನುಗ್ರಹ ನೀಡುವುದೆಲ್ಲವೂ ಅವರ ಪಾಲಿಗೇ ಸೇರಿದ್ದು.)

       "ಅಸ್ತ್ಯುತ್ತರಸ್ಯಾಂ ದಿಶಿ ದೇವತಾತ್ಮಾ ಹಿಮಾಲಯೋ ನಾಮ ನಗಾಧಿರಾಜಃ |
       ಪೂರ್ವಾಪರೌ ತೋಯನಿಧೀ ವಗಾಹ್ಯ ಸ್ಥಿತಃ ಪೃಥಿವ್ಯಾ ಇವ ಮಾನದಂಡಃ || "
                                -ಕುಮಾರಸಂಭವದಲ್ಲಿ ಕಾಳಿದಾಸ
(ಉತ್ತರ ದಿಕ್ಕಿನಲ್ಲಿ ದೇವತೆಗಳ ಆತ್ಮದಂತಿರುವ ಪರ್ವತ ರಾಜ ಹಿಮಾಲಯವಿದೆ. ಪೂರ್ವ ಪಶ್ಚಿಮಗಳಲ್ಲಿ ಸಮುದ್ರವನ್ನಾಲಂಗಿಸುತ್ತಾ ಭೂಮಿಯ ಮಾನದಂಡದಂತೆ ಅದು ಸ್ಥಿರವಾಗಿ ನಿಂತಿದೆ. )

      "ಹಿಮವತ್ಸಮುದ್ರಾಂತರಮುದೀಚೀನಂ ಯೋಜನಸಹಸ್ರಪರಿಮಾಣಂ - ಆಚಾರ್ಯ ಚಾಣಕ್ಯ
    (ಸಾಗರಗಳ ಉತ್ತರಕ್ಕೆ ಹಿಮಾಲಯದವರೆಗೆ ದೇಶದ ಉದ್ದ ಸಾವಿರ ಯೋಜನಗಳು)


         ಇವುಗಳ ಜೊತೆಯಲ್ಲೇ ಆಸೇತು ಹಿಮಾಚಲ, ಕನ್ಯಾಕುಮಾರಿಯಿಂದ ಕೈಲಾಸ, ಕಾಶಿ ರಾಮೇಶ್ವರ, ಕಛ್ ನಿಂದ ಕಾಮರೂಪ, ಅಟಕ್ ನಿಂದ ಕಟಕ್... ಮುಂತಾದ ನುಡಿಗಟ್ಟುಗಳ ಮೂಲಕ ನಮ್ಮ ಸಮಾಜವು ಭಾರತದ ಉದ್ದ ಅಗಲ, ವ್ಯಾಪ್ತಿಯನ್ನು ಸ್ಪಷ್ಟಪಡಿಸಿದೆ.

      ಅಂದರೆ ವಿಶ್ವದ ಉಳಿದೆಲ್ಲೆಡೆ ಕತ್ತಲು ಕವಿದಿದ್ದಾಗ , "ಸ್ವಂ ಸ್ವಂ ಚರಿತ್ರಂ ಶಿಕ್ಷೇರನ್ ಪೃಥಿವ್ಯಾಂ ಸರ್ವಮಾನವಃ ಎಂಬ ಕರೆ ನೀಡಿ ಜಗತ್ತಿಗೆ ಜ್ಞಾನದ ಬೆಳಕು ನೀಡಿದ ಜಗದ್ಗುರು ಭಾರತ. ಬದುಕಿನ ಜಂಜಡತೆಯ ಕತ್ತಲಿನಿಂದ ಭವಬಂಧನದ ಮೃತ್ಯುವಿನಿಂದ ಪರಮ ಸತ್ಯದ ಸಾಕ್ಷಾತ್ಕಾರದ ಬೆಳಕಿನೆಡೆಗೆ ಅಮೃತತ್ವದೆಡೆಗೆ ಸಾಗಿದ ಅತೀವ ಸುಭಗರ ನಾಡು "ಭಾರತ".


ವಂದೇ ಮಾತರಂ...
 

ಸೋಮವಾರ, ಅಕ್ಟೋಬರ್ 15, 2012

ಭಾರತ ದರ್ಶನ-೮


    ಕನ್ನಡದ ಕವಿವಾಣಿಯೇನು.....?
 " ಹಲವು ಭಾಷೆ ನುಡಿ ಲಿಪಿಗಳ ತೋಟ|
 ವಿವಿಧ ಮತ ಪಂಥಗಳ ರಸದೂಟ||
 ಕಾಣಲು ಕಾಮನ ಬಿಲ್ಲಿನ ನೋಟ|
 ನಮ್ಮೀ ತಾಯ್ನೆಲವು|| "
    ಈ ಚಿಂತನೆ ಇರೋದ್ರಿಂದಲೇ ಭಾರತದಲ್ಲೊಂದು ಅದ್ಭುತ ಸಮನ್ವಯದ ಭಾವ ಕಂಡುಬರುತ್ತೆ. ಮತ ಬೇರೆ ಅಥವಾ ದೇವರ ಹೆಸರು ಬೇರೆ ಅನ್ನೋ ಕಾರಣಕ್ಕೆ ನಾವು ಯಾರನ್ನೂ ದ್ವೇಷ ಮಾಡ್ಲಿಲ್ಲ.ಅಥವಾ ಎಲ್ಲರೂ ನಮ್ಮ ಮತಕ್ಕೇ ಸೇರ್ಬೇಕು, ನಮ್ಮ ದೇವರನ್ನೇ ಪೂಜೆ ಮಾಡ್ಬೇಕು ಅಂತ ಹಠ ಹಿಡಿದು ಮತಾಂತರ ಮಾಡಲಿಲ್ಲ! ಹಿಂದುತ್ವದಲ್ಲಿ ಉದಾತ್ತತೆ ಇದೆ, ಉದಾರತೆ ಇದೆ.
     ಅಸಹಿಷ್ಣು ಮತಾಂಧ ಬಲಾತ್ಕಾರದ ಮತಾಂತರಗಳಲ್ಲಿ ತೊಡಗಿರುವಂತಹ ಆಕ್ರಮಕ ಮತೀಯರನ್ನು ಭಾರತೀಯ ಪರಂಪರೆಯಂತೆ ಬದುಕಲು ಕಲಿಯಿರಿ, ಎಲ್ಲರನ್ನು ಗೌರವಿಸಿ ಅಂತ ಹೇಳೋದು ಬಿಟ್ಟು ನಮ್ಮ ಬುದ್ಧಿಜೀವಿಗಳು ಸಹಿಷ್ಣುತೆಯ ಪಾಠವನ್ನು ಹಿಂದೂಗಳಿಗೇ ಹೇಳೋದು ಎಂಥಾ ವಿಡಂಬನೆ?
    ಹಿಂದೂ ಕೋಮುವಾದಿಯಾಗಲು ಸಾಧ್ಯವೇ ಇಲ್ಲ! ಹತ್ತು ಸಾವಿರ ವರ್ಷಗಳ ಹಿಂದೆ ದೀರ್ಘತಮಸ್ ಅನ್ನೋ ಋಷಿ ಹೇಳಿದ "ಏಕಂ ಸತ್ ವಿಪ್ರಾ: ಬಹುದಾ ವದಂತಿ " ಅನ್ನೋದನ್ನ ಅಕ್ಷರಷ: ಇಂದಿಗೂ ಪಾಲಿಸುತ್ತಿರುವ ಹಿಂದೂವಿಗೆ ಸಹಿಷ್ಣುತೆಯ ಪಾಠದ ಅಗತ್ಯವೇ ಇಲ್ಲ|| ಬಂಧುಗಳೇ ಹಿಂದೂ ಸಂಸ್ಕಾರದ ಬಲದಿಂದ ನಾನು ಹೆಮ್ಮೆಯಿಂದ ಹೇಳಬಲ್ಲೆ " ಅಕಸ್ಮಾತ್ ಏಸುಕ್ರಿಸ್ತ ಭಾರತದಲ್ಲಿ ಹುಟ್ಟಿರುತ್ತಿದ್ದರೆ ಆತನಿಗೆ ಅಂತ ಕ್ರೂರ ಸಾವು ಖಂಡಿತ ಬರುತ್ತಿರಲಿಲ್ಲ. ನಾನು ದೇವರ ಮಗ ಎಂದ ಆತನನ್ನು ಪಾಪಿಗಳು ಮೊಳೆ ಹೊಡೆದು ಸಾಯಿಸಿದರು!"
     ಆದರೆ ನಮ್ಮಲ್ಲೊಬ್ಬ ಇದ್ದ. ಅವನು ದೇವರೇ ಇಲ್ಲ ಅಂದ! ದೇವರಿಲ್ಲ, ಧರ್ಮವಿಲ್ಲ, ಸ್ವರ್ಗ,ನರಕ,ಪಾಪ,ಪುಣ್ಯಗಳಾವುವೂ ಇಲ್ಲ. ಎಲ್ಲಾ ಸುಳ್ಳು. ಎಷ್ಟು ದಿನ ಇರ್ತೀವಿ, ಸತ್ತ ಮೇಲೆ ಏನಾಗ್ತೀವೋ ಅನ್ನೋದೂ ಗೊತ್ತಿಲ್ಲ. ಇದ್ದಷ್ಟು ದಿನ ಚೆನ್ನಾಗಿರಿ ಎಂದ. ಅವನನ್ನು ಚಾರ್ವಾಕ ಅಂತ ಈ ದೇಶ ಗೌರವಿಸಿತು. ಅವನು ಹೇಳಿದ್ದೇನು?
     "ಯಾವಜ್ಜೀವಿ ಸುಖಂ ಜೀವಿ ಭಸ್ಮೀ ಭೂತಸ್ಯ ದೇಹಸ್ಯ ಆಗಮನಂ ಕೃತ: |
      ತಸ್ಮಾತ್ ಇರಣಂ ಕೃತ್ವಾ ಘೃತಂ ಪಿಭೇತ್ ||"
     ಸತ್ತ ಮೇಲೆ ದೇಹವನ್ನು ಸುಡ್ತಾರೆ ಅಥವಾ ಮಣ್ಣು ಮಾಡುತ್ತಾರೆ. ಆಮೇಲೆ ವಾಪಾಸು ಬರಲು ಹೇಗೆ ಸಾಧ್ಯ? ಅದಕ್ಕೋಸ್ಕರ ಚೆನ್ನಾಗಿ ಬದುಕುವುದನ್ನು ಕಲಿಯಿರಿ. ಹಣ ಇಲ್ಲದಿದ್ದರೆ ಸಾಲ ಮಾಡಿಯಾದರೂ ತುಪ್ಪ ತಿನ್ನಿ! ಇದ್ದಷ್ಟು ದಿನ ಚೆನ್ನಾಗಿರಿ ಎಂದ ಚಾರ್ವಾಕನನ್ನು ನಾವು ಕಲ್ಲು ಹೊಡೆದು ಸಾಯಿಸಲಿಲ್ಲ, ಋಷಿ, ಧೃಷ್ಥಾರ ಅಂತ ಗೌರವಿಸಿದೆವು!
      ಗೆಲಿಲಿಯೋ ಐದು ಶತಮಾನಗಳ ಹಿಂದೆ ಸ್ಥಿರ ಸೂರ್ಯನ ಸುತ್ತ ಭೂಮಿ ಸುತ್ತುತ್ತೆ ಅಂತ ವೈಜ್ಞಾನಿಕ ಸತ್ಯ ಹೇಳಿದ. ಚರ್ಚು ಜೈಲಿಗೆ ತಳ್ಳಿತು! ಅದಕ್ಕೂ ಸಾವಿರ ವರ್ಷಗಳ ಹಿಂದೆಯೇ ಆರ್ಯಭಟ ಇದೇ ಸತ್ಯವನ್ನು ಈ ನೆಲದಲ್ಲಿ ಹೇಳಿದ್ದ. ಸ್ಥಿರ ಸೂರ್ಯನ ಸುತ್ತ ಭೂಮಿ ಪ್ರದಕ್ಶಿಣೆ ಹಾಕುತ್ತಾ ಅಕ್ಷದ ಮೇಲೆ ಒಂದು ಸುತ್ತು ಹಾಕಿದಾಗ ಒಂದು ದಿನ ಆಗುತ್ತೆ. ಸುತ್ತುವಾಗ ಜರಗುತ್ತೆ. ಜರಗುತ್ತಾ, ಜರಗುತ್ತಾ ಸೂರ್ಯನಿಗೆ ಪ್ರದಕ್ಶಿಣೆ ಬರೋವಾಗ ಒಂದು ಸಂವತ್ಸರ ಆಗುತ್ತೆ ಎಂದಿದ್ದ. ಒಂದು ಪ್ರದಕ್ಶಿಣೆ ಹಾಕಲು ಅದು ತೆಗೆದು ಕೊಳ್ಳುವ ಸಮಯ ಎಷ್ಟು? ೩೬೫.೨೫೮೭೭೫೬೪೮೪ ಸೆಕೆಂಡುಗಳು ಅಂತ ಖಗೋಳ ವಿಜ್ಞಾನಿ ಸ್ಮಾರ್ಟ್ ಗಿಂತ ಮೊದಲೇ ಭಾಸ್ಕರಾಚಾರ್ಯ ಹೇಳಿದ್ದ. ಆರ್ಯಭಟ ಹಾಗೂ ಭಾಸ್ಕರಾಚಾರ್ಯರನ್ನು ಈ ಸಮಾಜ ಶಿಕ್ಷೆಗೆ ಗುರಿ ಪಡಿಸಲಿಲ್ಲ.ವಿಜ್ಞಾನಿಗಳು ಅಂತ ಗೌರವಿಸಿತು. ಇದನ್ನೆಲ್ಲಾ ಗಮನದಲ್ಲಿಟ್ಟುಕೊಂಡು ಹಿಂದೂ ಸಮಾಜದ ವಿಶ್ಲೇಷಣೆ ಮಾಡಬೇಕಾಗಿದೆ.
      ಬಂಧುಗಳೇ, ತಾಯಿ ಭಾರತಿ ದಕ್ಶಿಣದಲ್ಲಿ ಕನ್ಯಾಕುಮಾರಿಯಾಗಿ ಉತ್ತರಕ್ಕೆ ಹೊರಟು ಕೃಷ್ಣೆ, ಗೋದೆಯರಲಿ ಮಿಂದು, ವಿಂಧ್ಯನನು ಹತ್ತಿಳಿದು ಗಂಗೆ, ಯಮುನೆಯರನು ಕೊರಳಲ್ಲಿ ಬಳಸಿ, ಕೈಲಾಸವಾಸಿ ಶಂಕರನನ್ನು ಸೇರಿ ಅನ್ನಪೂರ್ಣೆಯಾಗಿ ನಮ್ಮನ್ನು ಒಳಗೊಂಡಂತೆ ಮನುಕುಲವನ್ನು ಸಲಹುತ್ತಿರುವಂತಹ ದಿವ್ಯ ಮಂಗಲ ದೃಶ್ಯವನ್ನು ಹೃದಯದಲ್ಲಿ ಧಾರಣೆ ಮಾಡಿಕೊಳ್ಳೋಣ........ವಂದೇ ಮಾತರಂ

ಭಾರತ ದರ್ಶನ-೯


ಚರಿತ್ರೆ ಕಣ್ಣುಬಿಡುವ ಮೊದಲೇ ನಾವು ಒಂದು ರಾಷ್ಟ್ರವಾಗಿ ಅರಳಿ ನಿಂತಿದ್ದೆವು!
ಹಿಂದೂಸ್ಥಾನದ ಹಿರಿಮೆ ಏನು?
೧. ಕಳೆದ ಹತ್ತುಸಾವಿರ ವರ್ಷಗಳ ತಮ್ಮ ಇತಿಹಾಸದಲ್ಲಿ ಹಿಂದೂಗಳು ಯಾವುದೇ ಅನ್ಯದೇಶಗಳನ್ನು ರಾಜನೈತಿಕ ವಿಜಯ ಸಾಧಿಸಿ ತಮ್ಮ ವಸಾಹತುವನ್ನಾಗಿ ಮಾಡಿಕೊಂಡಿಲ್ಲ.

೨. ಸಂಖ್ಯಾನುಕ್ರಮಣಿಕೆಯನ್ನು, ದಶಮಾಂಶ ಪದ್ದತಿಯನ್ನೂ, ಶೂನ್ಯದ ಬಳಕೆಯನ್ನೂ ಜಗತ್ತಿಗೆ ಪರಿಚಯಿಸಿದವರು ಹಿಂದುಗಳು.

೩. "ಪೈ"ನ ಬೆಲೆಯನ್ನು ಕಂಡುಹಿಡಿದವನು ಬೋಧಾಯನ. ಪೈಥಾಗೋರಸ್ ಪ್ರಮೇಯ ಎಂದು ಹೇಳಲಾಗುವ ಪ್ರಮೇಯವನ್ನೂ ಇವನೇ ಕಂಡು ಹಿಡಿದನು.(ಕ್ರಿ.ಪೂ. ೬ನೇ ಶತಮಾನ)

೪. ಬೀಜಗಣಿತ, ತ್ರಿಕೋಣಮಿತಿ, ಕ್ಯಾಲ್ಕುಲಸ್ - ಇವುಗಳು ಪ್ರಪಂಚಕ್ಕೆ ಭಾರತ ನೀಡಿದ ಕೊಡುಗೆಗಳು. 11 ಶತಮಾನದಲ್ಲಿ ಶ್ರೀಧರಾಚಾರ್ಯನು ವರ್ಗ ಸಮೀಕರಣ(quadratic equation)ವನ್ನು ಕಂಡುಹಿಡಿದನು.

೫. ಗ್ರೀಕರು, ರೋಮನ್ನರು ಉಪಯೋಗಿಸಿದ್ದ ಅತೀ ದೊಡ್ಡ ಸಂಖ್ಯೆ ಎಂದರೆ 10ರ ಘಾತ 6. ಆದರೆ ವೇದಕಾಲದಲ್ಲಿ ಹಿಂದೂಗಳು 10ರ ಘಾತ 53(10 to the power 53)ನ್ನು ನಿಶ್ಚಿತ ಹೆಸರಿನೊಡನೆ ಬಳಸುತ್ತಿದ್ದರು. ನಾವು ಈಗಲಾದರೂ ಅಷ್ಟು ದೊಡ್ಡ ಸಂಖ್ಯೆಯನ್ನು ಬಳಸುತ್ತಿಲ್ಲ!

೬. ಕೊಲಂಬಸ್ಗಿಂತ ಮೊದಲೇ ಹಿಂದೂಗಳು ಅಮೇರಿಕಾಕ್ಕೆ ತಲುಪಿದ್ದರು ಎನ್ನುವುದಕ್ಕೆ ಅಜ್ತೀಸರ ದೇವಾಲಯದಲ್ಲಿ ದೊರೆತಿರುವ ಭಾರತೀಯ ಕಲೆಗಳ ನಮೂನೆಗಳು ಸಾಕ್ಷಿ.

೭. ವಾಸ್ಕೋಡಗಾಮನ ಹಡಗನ್ನು ನಾವಿಕನೊಬ್ಬ ಆಫ್ರಿಕಾದಿಂದ ದಕ್ಷಿಣ ಭಾರತಕ್ಕೆ ಕರೆ ತಂದನು. ಭಾರತೀಯ ಹಡಗು ಅವನ ಹಡಗಿಗಿಂತ ಹಲವು ಪಟ್ಟು ದೊಡ್ಡದಿತ್ತು.

೮. ಬೈನರಿ ಸಂಖ್ಯೆಗಳ(0 ಮತ್ತು 1) ಉಲ್ಲೇಖ ಮತ್ತು ಬಳಕೆ ವೇದಕಾಲದಲ್ಲೇ ಇತ್ತು.

೯. ವೇದಗಣಿತ ಎಂಥಾ ಕ್ಲಿಷ್ಟ ಸಮಸ್ಯೆಯನ್ನೂ ಕ್ಷಣಮಾತ್ರದಲ್ಲಿ, ಒಂದೆರಡು ಸಾಲುಗಳಲ್ಲಿ ಪರಿಹರಿಸಬಲ್ಲ ಪ್ರಾಚೀನ ಹಿಂದೂ ಗಣಿತ ಯಂತ್ರ.

೧೦. ಖಗೋಳ ವಿಜ್ಞಾನಿ ಸ್ಮಾರ್ಟಗಿಂತ ಮೊದಲೇ ಭೂಮಿ ಸೂರ್ಯನನ್ನು ಸುತ್ತಲು 365.2587756484 ಎಂದು 5ನೇ ಶತಮಾನದಲ್ಲೇ ಭಾಸ್ಕರಾಚಾರ್ಯ ಲೆಕ್ಕಹಾಕಿದ್ದನು.
-ಇನ್ನೂ ಇದೆ!

ಭಾರತ ದರ್ಶನ-೧೦



"ರತ್ನಾಕರಾಧೌತಪದಾಂ ಹಿಮಾಲಯ ಕಿರೀಟಿನೀಂ।
ಬ್ರಹ್ಮರಾಜರ್ಷಿ ರತ್ನಾಢ್ಯಾಂ ವಂದೇ ಭಾರತ ಮಾತರಂ॥"

೧. ಮಾನವನಿಗೆ ತಿಳಿದಿದ್ದ ಪ್ರಪ್ರಥಮ ಚಿಕಿತ್ಸಾಪದ್ದತಿ ಆಯುರ್ವೇದ. ಇದರ ಜನಕ ಚರಕ, ಗ್ರಂಥ ಚರಕಸಂಹಿತಾ.

೨. ಜಗತ್ತಿನ ಪ್ರಪ್ರಥಮ ವಿಶ್ವವಿದ್ಯಾಲಯ ಕ್ರಿ.ಪೂ. ೭೦೦ರಲ್ಲಿ ತಕ್ಷಶಿಲೆಯಲ್ಲಿ ಸ್ಥಾಪಿಸಲಾಯಿತು. ಪ್ರಪಂಚದ ವಿವಿದೆಡೆಯಿಂದ ೧೦,೫೦೦ ವಿಧ್ಯಾರ್ಥಿಗಳು, ೬೦ಕ್ಕೂ ಹೆಚ್ಚು ವಿಷಯಗಳನ್ನು ಕಲಿಯುತ್ತಿದ್ದರು.

೩. ನೌಕಾಯಾನದ ಕಲೆ ವೇದಕಾಲದಲ್ಲೇ ಪ್ರಚಲಿತದಲ್ಲಿತ್ತು.(ವಿವರಣೆ ಮುಂದಿನ ಭಾಗದಲ್ಲಿ) ನ್ಯಾವಿಗೇಷನ್ ಪದ ಸಂಸ್ಕೃತದ 'ನವಗತಿ' ಪದದಿಂದ ಉತ್ಪತ್ತಿಯಾಗಿದೆ. ಅಂತೆಯೇ ನೇವಿ ಪದ ಸಂಸ್ಕೃತದ 'ನೌ' ಶಬ್ಧದಿಂದ ಹುಟ್ಟಿದೆ.

೪. 1896ನೇ ಇಸವಿಯವರೆಗೇ ಭಾರತ ರತ್ನಗಳ ಏಕಮಾತ್ರ ಆಗರವಾಗಿತ್ತು.

೫. ವೈರ್ ಲೆಸ್ ತಂತ್ರಜ್ಞಾನವನ್ನು ಕಂಡುಹಿಡಿದವರು ಜಗದೀಶ ಚಂದ್ರ ಬೋಸರೇ ಹೊರತು ಮಾರ್ಕೋನಿಯಲ್ಲ ಎಂದು IEEE ಧೃಢಪಡಿಸಿದೆ.

೬. ಶಸ್ತ್ರಚಿಕಿತ್ಸೆಯ ಜನಕ ಸುಶ್ರುತ. ಆಗಿನ ಕಾಲದಲ್ಲಿಯೇ ಸಿಜೇರಿಯನ್, ಕಣ್ಣಿನ ಪೊರೆಯ ಶಸ್ತ್ರಚಿಕಿತ್ಸೆ, ಕೃತಕ ಅಂಗಜೋಡಣೆ, ಮೂಳೆ ಮುರಿತ, ಮೂತ್ರಕೋಶದ ಕಲ್ಲುಗಳು, ಪ್ಲಾಸ್ಟಿಕ್ ಸರ್ಜರಿ, ಮೆದುಳಿನ ಶಸ್ತ್ರಚಿಕಿತ್ಸೆಗಳನ್ನೂ ಮಾಡುತ್ತಿದ್ದರು. ಅನಸ್ತೇಶಿಯಾ, 125ಕ್ಕೂ ಹೆಚ್ಚು ಶಲ್ಯಚಿಕಿತ್ಸೆಯ ಶಸ್ತ್ರಗಳನ್ನು ಅವರು ಉಪಯೋಗಿಸುತ್ತಿದ್ದರು. ಶರೀರಶಾಸ್ತ್ರ, ಜಂತು-ವನಸ್ಪತಿ,....ಗಳಿಗೆ ಸಂಬಧಿಸಿದ ಅನೇಕ ಉಲ್ಲೇಖಗಳೂ, ಗ್ರಂಥಗಳೂ ಇವೆ.

೭. ವ್ಯವಸಾಯಕ್ಕಾಗಿ ಜಲಾಶಯ ಅಣೆಕಟ್ಟುಗಳ ನಿರ್ಮಾಣ ಪ್ರಥಮ ಬಾರಿಗೆ ಆದದ್ದು ಸೌರಾಷ್ಟ್ರದಲ್ಲಿ.

೮. ಕ್ರಿ.ಪೂ. 150ರಲ್ಲಿದ್ದ ಶಕರ ದೊರೆ ಪ್ರಥಮ ರುದ್ರಮಾನನ ಪ್ರಕಾರ ರೈವತಕ ಪರ್ವತದಲ್ಲಿ 'ಸುದರ್ಶನ' ಎಂಬ ಕೊಳವನ್ನು ಚಂದ್ರಗುಪ್ತ ಮೌರ್ಯನ ಕಾಲದಲ್ಲಿ ಕಟ್ಟಲಾಗಿತ್ತು.

೯. ಚದುರಂಗ( ಚೆಸ್, ಶತರಂಜ್, ಅಷ್ಟಪಾದ)ದ ಮೂಲಸ್ಥಾನ ಭಾರತ.

೧೦. ವಿಮಾನಶಾಸ್ತ್ರದ ಜನಕ ಮಹರ್ಷಿ ಭಾರಧ್ವಾಜ. ಇದರಲ್ಲಿ ವಿಮಾನಕ್ಕಾಗಿ ಉಪಯೋಗಿಸಬಹುದಾದ ವಿವಿಧ ಇಂಧನಗಳು, ಅವುಗಳನ್ನು ತಯಾರಿಸುವ ವಿಧಾನ, ವಿವಿಧ ಗಾತ್ರದ, ವೇಗದ, ಇಂಧನ ಕ್ಷಮತೆಯ ವಿಮಾನಗಳ ತಯಾರಿಕಾ ವಿಧಾನಗಳು ಇವೆ. ಇದೇ ಗ್ರಂಥದ ಆಧಾರದಲ್ಲಿ ಆನೇಕಲ್ ಸುಬ್ರಾಯಭಟ್ಟರ ಮಾರ್ಗದರ್ಶನದಲ್ಲಿ ಮಹಾರಾಷ್ಟ್ರದಲ್ಲಿ ತಲ್ಪಾಡೆ ದಂಪತಿಗಳು 1896ರಲ್ಲಿ ವಿಮಾನ ರಚಿಸಿ ಯಶಸ್ವಿ ವಿಮಾನ ಹಾರಾಟ ನಡೆಸಿದ್ದರು. ಇದಕ್ಕೆ ಮಹಾದೇವ ಗೋವಿಂದ ರಾನಡೆ ಹಾಗೂ ಗಾಯಕ್ವಾಡಿನ ಮಹಾರಾಜ ಸಾಕ್ಷಿಯಾಗಿದ್ದರು. ಆದರೆ ಪತ್ನಿಯ ಸಾವಿನ ನಂತರ ತಲ್ಪಾಡೆ ತಮ್ಮ ಸಂಶೋಧನೆಯಿಂದ ವಿಮುಖರಾದಾಗ ಈ ತಂತ್ರಜ್ಞಾನ ಬ್ರಿಟಿಷರ ಕುತಂತ್ರದಿಂದ ರೈಟ್ ಬ್ರದರ್ಸ್ ಗೆ ಸೇರಿ 1922ರಲ್ಲಿ ಅವರು ಈ ಸಂಶೋಧನೆಯ ಒಡೆಯರೆನಿಸಿಕೊಂಡರು.
-ಇನ್ನೂ ಇದೆ!

ಭಾರತ ದರ್ಶನ-೧೧



ಇಂದಿಗೂ ಕೆಲವರು ಬ್ರಿಟಿಷರಿಂದ ನಮಗೆ ಶೈಕ್ಷಣಿಕವಾಗಿ, ಸಂಚಾರ ವ್ಯವಸ್ಥೆಯಿಂದಾಗಿ ಲಾಭ ಆಗಿದೆ ಎಂದೇ ಭಾವಿಸುತ್ತಾರೆ! ಆದರೆ ವಾಸ್ತವವಾಗಿ ಬ್ರಿಟಿಷರು ಮಾಡಿದ್ದು ಭಾರತದ ಅಂತಃಸತ್ವದ ಲೂಟಿಯೇ ಹೊರತು ನಮ್ಮ ಉತ್ಕರ್ಷವಲ್ಲ.
ನೀವೇ ಯೋಚಿಸಿ ಹುಬ್ಬಳ್ಳಿಯಿಂದ ಅಂದಿನ ಬ್ರಹನ್ನಗರಗಳಾದ ಪುಣೆ ಮೀರಜ್ ಗಳಿಗೆ ಹೋಗಬೇಕಾಗಿದ್ದ ರೈಲು ಮಾರ್ಗ ಅಳ್ನಾವರ, ಲೋಂಡಾಗಳತ್ತ ಯಾಕೆ ತಿರುಗಿ ಬಿಡುತ್ತೆ? ಪಶ್ಚಿಮ ಘಟ್ಟಕ್ಕೆ ತಾಗಿ ಅಲ್ಲಿಂದ ಮತ್ತೆ ಉತ್ತರಕ್ಕೆ ತಿರುಗಿ ಬೆಳಗಾವಿಯತ್ತ ಸಾಗುತ್ತದೆ. ಅಂದರೆ ಬ್ರಿಟಿಷರಿಗೆ ಜನರ ಪ್ರಯಾಣಕ್ಕಿಂತ ಅರಣ್ಯೋತ್ಪನ್ನ ಸಾಗಾಣಿಕೆಯೇ ಪ್ರಮುಖವಾಗಿತ್ತು ಎಂದಾಯಿತಲ್ವೇ?
"ನಮ್ಮ ಶಿಕ್ಷಣ ಯೋಜನೆಗಳನ್ನು ಮುಂದುವರಿಸಿದರೆ ಮೂವತ್ತು ವರ್ಷ ಕಳೆದ ಬಳಿಕ ಒಬ್ಬನೇ ಒಬ್ಬ ವಿಗ್ರಹಾರಾಧಕನೂ ಉಳಿದಿರುವುದಿಲ್ಲ."-ಮೆಕಾಲೆ(1836)
ಅಂದರೆ ಅಲೌಕಿಕ ಮತ್ತು ಲೌಕಿಕ ಜ್ಞಾನವೆರಡನ್ನೂ ಬೋಧಿಸುತ್ತಿದ್ದ ಭಾರತೀಯ ಶಿಕ್ಷಣ ಮೂಲೆಗೆ ಸರಿಯಿತು. ಜನರನ್ನು ನಿಶ್ಯಕ್ತ, ನಿರ್ವೀರ್ಯ, ವಿಚಾರಶೂನ್ಯರನ್ನಾಗಿಸುವ ಮೆಕಾಲೆ ಶಿಕ್ಷಣ ಆ ಜಾಗವನ್ನು ಆಕ್ರಮಿಸಿತು!
(ಹದಿಹರೆಯದ ಹುಡುಗರನ್ನು ಮಾತಾಡಿಸಿ ನೋಡಿ, ಹೆಚ್ಚಿನವರಿಗೆ ಚಲನಚಿತ್ರ, ಕಂಪ್ಯೂಟರ್, ವೀಡಿಯೋ ಗೇಮ್ಸ್ ಬಿಟ್ಟರೆ ಏನೂ ತಿಳಿದಿರುವುದಿಲ್ಲ!)

ಋಗ್ವೇದದ ಕಾಲದಲ್ಲೇ ಸಾರಿಗೆ ಸಂಪರ್ಕ ಅತ್ಯುನ್ನತ ಮಟ್ಟದಲ್ಲಿತ್ತು. ಋಗ್ವೇದದಲ್ಲಿ 'ಜಲಯಾನ'- ನೀರು ಮತ್ತು ಗಾಳಿಯಲ್ಲಿ ನಡೆಸಬಹುದಾದ ವಾಹನ; 'ಕಾರಾ'- ನೆಲ ಮತ್ತು ನೀರಿನಲ್ಲಿ ನಡೆಸಬಹುದಾದ ವಾಹನ;ತ್ರಿತಳ, ತ್ರಿಚಕ್ರರತ್ನ, ವಾಯುರತ್ನ ಇವುಗಳ ಉಲ್ಲೇಖವಿದೆ.

ಆಗಸ್ತ್ಯ ಸಂಹಿತೆಯಲ್ಲಿ ಎರಡು ರೀತಿಯ ವಿಮಾನಗಳ ಉಲ್ಲೇಖವಿದೆ. 'ಛತ್ರ' ಯಾ ಅಗ್ನಿಯಾನ: ಶತ್ರುಗಳು ಬೆಂಕಿ ಹಚ್ಚಿದರೆ ಅಥವಾ ನೈಸರ್ಗಿಕ ಕಾಡ್ಗಿಚ್ಚು ಸಂಭವಿಸಿದರೆ ಪಾರಾಗಲು ಇದನ್ನು ಬಳಸುತ್ತಿದ್ದರು. 'ವಿಮಾನ ದ್ವಿಗುಣಂ' ಎಂಬ ವಾಯುಯಾನ ಈಗಿನ ಪ್ಯಾರಾಚೂಟ್ಗಳಂತೆ ಬಳಕೆಯಲ್ಲಿತ್ತು.

ಭರಧ್ವಾಜನ ಯಾತ್ರಾ ಸರ್ವಸ್ವ ಅಥವಾ ಬ್ರಹದ್ವಿಮಾನ ಶಾಸ್ತ್ರದಲ್ಲಿ ವಿಮಾನ ತಯಾರಿಸುವ ಮತ್ತು ಹಾರಿಸುವ ತಂತ್ರಜ್ಞಾನದ ವಿವರಗಳಿವೆ. ವಿಮಾನ ತಯಾರಿಕೆಗೆ ಬೇಕಾದ ಲೋಹ, ಮಿಶ್ರಲೋಹಗಳು, ಬಳಸಬಹುದಾದ ಇಂಧನ ಮತ್ತು ಅದನ್ನು ತಯಾರಿಸುವ ವಿಧಾನಗಳ ವಿವರಣೆ ಇದೆ. ಎಂಥ ಹೊಡೆತ ಬಿದ್ದರು ತುಂಡಾಗದ 'ಅಭೇದ್ಯ', ಬೆಂಕಿ ತಗುಲಿದರು ಸುಡದ 'ಅದಾಹ್ಯ', ಬೇರ್ಪಡಿಸಲಾಗದ 'ಅಛೇದ್ಯ' ಎಂಬ ಮೂರು ರೀತಿಯ ವಿಮಾನಗಳನ್ನು ತಯಾರಿಸುವ ಮಾಹಿತಿ ಇದೆ!
ಭಾರಧ್ವಾಜನ ಇದೇ ಗ್ರಂಥದಲ್ಲಿ ದೂರದಿಂದಲೇ ವಿವಿಧ ತಂತ್ರಜ್ಞಾನ ಬಳಸಿ ಶತ್ರು ವಿಮಾನ ನಾಶ ಮಾಡುವ, ಪಕ್ಕದ ವಿಮಾನದಲ್ಲಿ ಏನು ನಡೆಯುತ್ತಿದೆ ಎಂದು ತಿಳಿಯಬಲ್ಲ 'ಶಬ್ಧಗ್ರಾಹಿ' ಯಂತ್ರದ, ಪೈಲಟ್ ಮತ್ತು ಪ್ರಯಾಣಿಕರು ಧರಿಸಬೇಕಾದ ಬಟ್ಟೆ, ತಿನ್ನಬಹುದಾದ ಆಹಾರ ಮತ್ತಿತರ ವಿಚಾರಗಳಿವೆ.

ಚಾಣಕ್ಯನ ಅರ್ಥಶಾಸ್ತ್ರದಲ್ಲಿ ಹರಿಶ್ಚಂದ್ರನ ಕಾಲದಲ್ಲಿದ್ದ ವೈಮಾನಿಕ ನಗರ 'ಸೌಭ ದೇಶ', ಆಕಾಶದಲ್ಲಿ ಯುದ್ಧ ಮಾಡುವ ತರಬೇತಿ ಪಡೆದ ಸೈನಿಕರ(ಆಕಾಶ ಯೋಧಿನ: ) ಉಲ್ಲೇಖವಿದೆ. ಅಂದರೆ ಆ ಕಾಲದಲ್ಲೇ ವಾಯುಯುದ್ಧಗಳು ಸಂಭವಿಸುತ್ತಿದ್ದವು ಎಂದಾಯಿತಲ್ಲವೇ?
ಕ್ರಿ. ಪೂ. 240ರ ಸುಮಾರಿಗೆ ಸಾಮ್ರಾಟ ಅಶೋಕನ ಕಾಲದಲ್ಲಿ ಆಕಾಶಯಾನಕ್ಕೆ ಬಳಸುವ ರಥಗಳಿದ್ದವು.

1896ರಲ್ಲಿ ಆನೇಕಲ್ ಸುಬ್ರಾಯ ಭಟ್ಟರ ಮಾರ್ಗದರ್ಶನದಲ್ಲಿ ಶಿವಕರ್ ಬಾಪೂಜಿ ತಲ್ಪಾಡೆ ಮತ್ತವರ ಪತ್ನಿ ವಿಮಾನ ರಚಿಸಿದ್ದು ಭಾರಧ್ವಾಜನ ವಿಮಾನ ಶಾಸ್ತ್ರ ಆಧರಿಸಿಯೇ! ಆಗ ಅವರು ಸೂರ್ಯಕಿರಣ, ಪಾದರಸ, ನಕ್ಷರಸಗಳನ್ನು ಇಂಧನವಾಗಿ ಬಳಸಿದ್ದರು. 1500 ಅಡಿ ಎತ್ತರಕ್ಕೆ ಹಾರಿ ಯಶಸ್ವಿಯಾಗಿ ಕೆಳಗಿಳಿದ ಈ ವಿಮಾನ ಪರೀಕ್ಷೆಯ ಬಗ್ಗೆ ಅಂದಿನ ಪ್ರಸಿದ್ಧ ಮರಾಠಿ ಪತ್ರಿಕೆ 'ದಿ ಕೇಸರಿ' ವರದಿ ಪ್ರಕಟಿಸಿತ್ತು. ಈ ಪರೀಕ್ಷೆಗೆ ಅಂದಿನ ಬರೋಡಾ ಮಹಾರಾಜ ಸಯ್ಯಾಜಿರಾವ್ ಗಾಯಕ್ ವಾಡ್ ಮತ್ತು ಜಸ್ಟೀಸ್ ಗೋವಿಂದ ರಾನಡೆ ಸಾಕ್ಷಿಯಾಗಿದ್ದರು. ಪತ್ನಿಯ ನಿಧನದ ನಂತರ ತಲ್ಪಾಡೆ ಇದರ ಬಗ್ಗೆ ಆಸಕ್ತಿ ಕಳಕೊಂಡರು. ಅವರ ನಿಧನಾನಂತರ ಅವರ ಸಂಬಂಧಿಕರು ಈ ತಂತ್ರಜ್ಞಾನವನ್ನು ರೈಟ್ ಸಹೋದರರಿಗೆ ಮಾರಿದರು!

ವಿಶ್ವದ ಬಹುತೇಕ ರಾಷ್ಟ್ರಗಳು ಹುಟ್ಟುವ ಮೊದಲೇ ಭಾರತ ವೈಜ್ಞಾನಿಕತೆಯ ತುತ್ತತುದಿಯಲ್ಲಿತ್ತು ಎಂಬುದಕ್ಕೆ ವಿಮಾನ ಶಾಸ್ತ್ರ ಒಂದು ಸಣ್ಣ ಉದಾಹರಣೆ. ನಮ್ಮ ಕಲ್ಪನೆಗೂ ನಿಲುಕದ ಹಲವು ಸಂಶೋಧನೆಗಳು ಆಗಿಹೋಗಿವೆ. ಅವುಗಳ ದಾಖಲೀಕರಣ ಆಗಿಲ್ಲ. ಅಥವಾ ಅಳಿದು ಹೋಗಿವೆ. ಅಥವಾ ಅಳಿಸಲಾಗಿದೆ!
ಬಂಧುಗಳೇ," ಭಾರತವನ್ನು, ಭಾರತೀಯ ಸಂಸ್ಕೃತಿಯನ್ನು ಪಾಶ್ಚಾತ್ಯ ಕಣ್ಣಿಂದ ನೋಡುವುದನ್ನು ಬಿಡಿ. ದೇಶದ ಹಲವೆಡೇ ಅಜ್ಞಾತವಾಗಿ ವೇದಗಳ ಸಂಶೋಧನೆಯಲ್ಲಿ ತೊಡಗಿಹ ಸಂಸ್ಥೆಗಳಿಗೆ ನಿಮ್ಮದಾದ ಸಹಾಯ ಮಾಡಿ."
"ವಂದೇ ಮಾತರಂ"
-ಇನ್ನೂ ಇದೆ

ಶನಿವಾರ, ಅಕ್ಟೋಬರ್ 6, 2012

ಭಾರತದರ್ಶನ-೭

               ಯೌವನವತಿ ವಿಧವೆಯೊಬ್ಬಳು ತನ್ನತ್ತ ಆಕರ್ಷಿತಳಾಗಿ ತನುಸುಖಕ್ಕಾಗಿ ಪೀಡಿಸಿದಾಗ ತಾನಿದ್ದ ಮೂರನೇ ಮಹಡಿಯಿಂದ ಹಾರಿ ತನ್ನ ಬ್ರಹ್ಮಚರ್ಯತ್ವವನ್ನು ಉಳಿಸಿಕೊಂಡ ಧ್ಯೆಯನಿಷ್ಠ ದೇಶಭಕ್ತ ಚಂದ್ರಶೇಖರ ಆಜಾದ್!
ಬ್ರಹ್ಮಚರ್ಯವೆಂದರೆ ಸ್ತ್ರೀಯರೊಡನೆ ಬೆತ್ತಲೆ ಮಲಗುವುದಲ್ಲ ಅಂತ ಯಾವ ಮೂಢನಿಗಾದರೂ ತಿಳಿದ ವಿಷಯ. ಆದರೂ ಅಂತಹ ಕೃತ್ಯ ಮಾಡಿದವ ಮಹಾತ್ಮ ಅಂತ ಕರೆಸಿಕೊಂಡ! ಆದರೆ ಚಂದ್ರಶೇಖರ ಆಜಾದನಂತಹ ಅಪ್ರತಿಮ ದೇಶಭಕ್ತನನ್ನು ಜನಮಾನಸದಿಂದಲೇ ಮರೆಸುವ ಪ್ರಯತ್ನ ನಡೆಯಿತು, ನಡೆ

ಯುತ್ತಿದೆ.
                ಸ್ತ್ರೀಯ ಸ್ಥಾನವನ್ನು ನಮ್ಮ ಹಿರಿಯರು ಹೇಗೆ ಗುರುತಿಸಿದ್ದರು? ಅದನ್ನು ವಿದ್ಯಾನಂದರ ಬಾಯಿಂದಲೇ ಕೇಳೋಣ.
ತ್ಯಾಗದ ಸಂಕೇತವಾದ ಕುಂಕುಮ ನಮ್ಮ ತಾಯಂದಿರ ಹಣೆಯಲ್ಲಿರುತ್ತೆ. ಸ್ತ್ರೀಯೊಬ್ಬಳು ನಮ್ಮ ಕಣ್ಮುಂದೆ ಬಂದಾಗ ಅವಳು ಯಾರ ತಾಯಿ ಅಥವಾ ಯಾರ ಮಗಳು ಅಂತ ನಾವು ಗುರುತಿಸುತ್ತೇವೆಯೇ ಹೊರತು ಯಾರ ಹೆಂಡತಿ ಅಂತಲ್ಲ. ಉದಾಹರಣೆಗೆ ಜೀಜಾಮಾತೆ ಯಾರು ಅಂತ ದೇಶದ ಯಾವುದೇ ಮೂಲೆಯಲ್ಲಿ ಕೇಳಿ ನೋಡಿ. ನಿಮಗೆ ಸಿಗೋ ಉತ್ತರ ವೀರ ಶಿವಾಜಿಯ ತಾಯಿ! ಷಾಹಜಿಯ ಹೆಂಡತಿ ಅಂತ ಯಾರೂ ಹೇಳಲ್ಲ. ಭುವನೇಶ್ವರಿ ದೇವಿ ಯಾರು? ವೀರ ಸನ್ಯಾಸಿ ವಿವೇಕಾನಂದರ ತಾಯಿ ಅನ್ನುತ್ತೇವೆಯೇ ವಿನಾ ಕಲ್ಕತ್ತಾದ ವಕೀಲ ವಿಶ್ವನಾಥ ದತ್ತರ ಹೆಂಡತಿ ಅಂತ ಯಾರೂ ಹೇಳಲ್ಲ. ಕೌಸಲ್ಯ ಯಾರು? ಮರ್ಯಾದಾ ಪುರುಷೋತ್ತಮ ಪ್ರಭು ಶ್ರೀರಾಮನ ತಾಯಿ ಅಂತೇವೆಯೇ ಹೊರತು ಶ್ರೀಮತಿ ದಶರಥ ಅಂತ ಯಾರೂ ಅನ್ನಲ್ಲ! ಕುಂತಿದೇವಿಯನ್ನು ಯಾರಾದರೂ ಮಿಸೆಸ್ ಪಾಂಡು ಅಂತ ಹೇಳಿದರೆ ಎಷ್ಟು ಸಂಕೋಚ ಆಗಬಹುದು ನಮಗೆ! ಅಕೆ ಪಾಂಡವರ ತಾಯಿ, ಕುಂತಿಭೋಜನ ಸಾಕುಮಗಳು ಎಂದಾಗಲೇ ನಮಗೆ ಸಮಾಧಾನ ಆಗುತ್ತೆ. ಹಾಗೆ ನಮ್ಮ ತಾಯಿ ಭಾರತಿ.
           ಭಾರತ ಎಂದರೆ ಜೋಡ್ಸೋದು, ಸಮನ್ವಯ ಎಂದರ್ಥ. ಭಾವ ರಾಗ ತಾಳಗಳ ಸಮನ್ವಯವೇ ಸಂಗೀತ.
ಅಂದರೆ ಸ್ವರಗಳಲ್ಲಿ ಸಾಮರಸ್ಯ ಉಂಟಾದರೆ ಸಂಗೀತ, ಜನರ ಹೃದಯದಲ್ಲಿ ಸಾಮರಸ್ಯ ಉಂಟಾದರೆ ಭಾರತ!
ಅಂದರೆ ವಿವಿಧತೆಯಲ್ಲಿ ಏಕತೆ ಕಾಣುವಂತಹ ಸಂದೇಶ ಅದು.
-ಮುಂದುವರಿಯುವುದು

ಭಾರತ ದರ್ಶನ-೬

                    ತಾನು ಮಾತ್ರವಲ್ಲ, ತನ್ನ ಸಂಪರ್ಕಕ್ಕೆ ಬಂದವರೆಲ್ಲರನ್ನು ಸ್ವಾತಂತ್ರ್ಯ ಯಜ್ಞದ ಅಗ್ನಿಕಣಗಳನ್ನಾಗಿಸಿದವರು ವೀರ ಸಾವರ್ಕರ್!
ಇಲ್ಲದಿದ್ದರೆ ಬೀದಿ ಬದಿಯಲ್ಲಿ ಪುಂಡರೊಡನೆ ಚೇಷ್ಟೆಯಲ್ಲಿ ಕಾಲ ಕಳೆಯುತ್ತಿದ್ದ ಹೆಳವ ಆಬಾ ಪಾಂಗಳೆಯ ಬಾಯಿಂದ ತಾಯಿಯ ಗುಣಗಾನ ಕಾವ್ಯರಸಧಾರೆಯಾಗಿ ಹರಿಯಲು ಸಾಧ್ಯವೇ? ಇಂಜಿನಿಯರಿಂಗ್ ಮಾಡಲು ಹೋಗಿ ಮೋಜು-ಮಸ್ತಿ ಮಾಡುತ್ತಾ ಹುಡುಗಿಯರನ್ನು ಚುಡಾಯಿಸುತ್ತಿದ್ದ ಧಿಂಗ್ರಾನಿಂದ ಕರ್ಜನ್ ವಾಯ್ಲಿಯ ಸಂಹಾರ ಸಾಧ್ಯವಿತ್ತೆ? ಇವೆರಡು ಉದಾಹರಣೆ ಅಷ್ಟೇ. ಆದ

ರೆ ಅಂತಹ ಅಪ್ರತಿಮ ದೇಶಭಕ್ತ ಸ್ವಾತಂತ್ರ್ಯವೀರ ಸಾವರ್ಕರರನ್ನು ನಾವು ನಡೆಸಿಕೊಂಡ ರೀತಿ ಎಂತಹ ಹೀನ ವ್ಯಕ್ತಿಯಲ್ಲಿಯಾದರೂ ರೋಷ ಉಕ್ಕಿಸುವಂತಹದ್ದು ಅಲ್ಲವೇ? ತಾತ್ಯಾಟೋಪೆಯ ಕಥನ ಬರೆದ ನಂತರ ಸಾವರ್ಕರ್ ಕಣ್ಣೀರ್ಗರೆಯುತ್ತಾ ಹೇಳಿದ್ದರು, "ತಾತ್ಯಾ ನೀ ಇಂತಹ ಹತಭಾಗ್ಯ ದೇಶದಲ್ಲಿ ಯಾಕೆ ಹುಟ್ಟಿದೆ? ಬೇರಾವ ದೇಶದಲ್ಲಾದರು ಹುಟ್ಟಿದ್ದರೆ ನಿನ್ನ ವಿಗ್ರಹವನ್ನು ಮನೆಮನೆಯಲ್ಲಿಟ್ಟು ಪೂಜಿಸುತ್ತಿದ್ದರು!" ವಾಸ್ತವದಲ್ಲಿ ಅವರಿದನ್ನು ತಾತ್ಯಾಟೋಪೆಗೆ ಹೇಳಿದ್ದರೂ ನಾವು ತಾತ್ಯಾರಾವ್ ಸಾವರ್ಕರರಿಗೆ ಇದೇ ಪರಿಸ್ಥಿತಿ ತಂದೆವಲ್ಲ! ಭಾರತದ ಹತಭಾಗ್ಯ ಪರಿಸ್ಥಿತಿಗೆ ಕಾರಣ ನಾವೇ ಅಲ್ಲವೇ? ಇತಿಹಾಸವನ್ನು ಮರೆತ ದೇಶ ಅವನತಿಗೆ ಸಾಗುತ್ತದೆ ಎಂಬುದಕ್ಕೆ ಇದಕ್ಕಿಂತ ಮತ್ತೊಂದು ಉದಾಹರಣೆ ಬೇಕೆ?
ಹಾಗಾದರೆ ಹೇಗಿತ್ತು ಭಾರತ?ಕೇಳಿ ವಿದ್ಯಾನಂದರ ಧ್ವನಿಯಲ್ಲಿ-
                       "ವಿಶ್ವಸಂತತಿಯೆಲ್ಲಾ ನಿನ್ನ ಪುಣ್ಯೋದರದ ಹಸುಗೂಸುಗಳೆಂದು ಹಾಲುಣಿಸಿದೆ. ಒಂದೇ ತೊಟ್ಟಿಲೊಳಿಟ್ಟು ತೂಗಿ ಶೋಭನವಾಗಿ ಪ್ರೇಮ ಸಂಗೀತದಲಿ ಮೈಮರೆಸಿದೆ" ಎಂಬ ಕವಿವಾಣಿ ಎಷ್ಟು ಚೆನ್ನ. ಮಗು ಭರತನಿಂದಾಗಿ ದೇಶ ಭಾರತವೆನಿಸಿತು ಎಂದು ಎಲ್ಲರಿಗೂ ತಿಳಿದಿದೆ. ಇದರ ಹಿಂದಿರುವ ಒಂದು ಸಾಂಸ್ಕೃತಿಕ ಮೌಲ್ಯ ಗಮನಿಸಿ. ನಮ್ಮ ತಾಯಿಯನ್ನ ಗುರುತಿಸಿದ್ದು ಆಕೆಯ ಮಗನ ಮೂಲಕ! ಹೆಣ್ಣು ಮಕ್ಕಳನ್ನು ಮಾತೃಸ್ವರೂಪದಲ್ಲಿ ಕಾಣೋದು ನಮ್ಮ ಸಂಸ್ಕೃತಿ. ಕಣ್ಣಿಗೆ ಕಾಣುವ ಸಕಲ ಸ್ತ್ರೀ ಅಂಶವನ್ನು ಜಗಜ್ಜನನಿ ಪಾರ್ವತಿ ಸ್ವರೂಪದಲ್ಲಿ ನೋಡುವ ಸಂಸ್ಕೃತಿ ನಮ್ಮದು. ಇದು ಬರೀ ತತ್ವಜ್ಞಾನ ಅಲ್ಲ ವ್ಯವಹಾರದಲ್ಲಿದೆ!
                     ಮನೆಯಲ್ಲಿ ನೋಡಿ, ತಂದೆ ತನ್ನ ಮಗಳನ್ನ ಅಮ್ಮಾ ಅಂತ ಕರೀತಾನೆ. ಮನೆಗೆ ಬಂದವರು ಆಗಷ್ಟೇ ಅಂಬೆಗಾಲಿಕ್ಕುವ ಬೊಚ್ಚು ಬಾಯೊಳು ಕಿಲಕಿಲ ನಗುವ ಮಗುವನ್ನು ಮುತ್ತಕ್ಕೀ ಏನಮ್ಮಾ ಅಂತ ಅನ್ನಲ್ವಾ? ತನ್ನ ಮಗಳನ್ನ ತಾಯಿ ರೂಪದಲ್ಲಿ ಕಾಣೋ ವ್ಯಕ್ತಿಗೆ ಕೈ ಹಿಡಿದ ಹೆಂಡತಿಯನ್ನು ತಾಯಿ ರೂಪದಲ್ಲಿ ಕಾಣೋದು ಕಷ್ಟವಾಗಲ್ಲ. ಧರ್ಮಪತ್ನಿಯನ್ನ ದೇವಿರೂಪದಲ್ಲಿ ಕಂಡು ಪರಮಹಂಸರು ಆರಾಧನೆ ಮಾಡಿದ್ರಲ್ಲ!
ಮನೆಯಲ್ಲಿನ ಸಂವಾದ ಸ್ವಲ್ಪ ಗಮನಿಸಿ. ಮನೇಲಿ ಹೆಂಡ್ತೀನಾ ಕರೆಯುವಾಗ ಗಂಡ ನೇರವಾಗಿ ಕರೆಯೋಲ್ಲ. ಮಗುವನ್ನು ಕರೆದು ಅಮ್ಮ ಎಲ್ಲಿದ್ದಾಳೆ ಅಮ್ಮನ್ನ ಕರಿ ಎನ್ನುತ್ತಾನೆಯೇ ಹೊರತು ನನ್ನ ಹೆಂಡ್ತೀನಾ ಕರಿ ಎನ್ನಲ್ಲ. ಹಾಗೆಯೇ ಹೆಂಡ್ತೀ ಗಂಡನನ್ನು ಕರೆಯುವಾಗ ಮಗು ಅಪ್ಪ ಎಲ್ಲಿದ್ದಾರೆ ನೋಡು. ಸ್ವಲ್ಪ ಕರಿ ಎನ್ನುತ್ತಾಳೆಯೇ ಹೊರತು ನನ್ನ ಹಸ್ಬೆಂಡನ ಕರಿ ಎನ್ನಲ್ಲ. ಶಬ್ಧಗಳೇನೋ ಸರಿ. ನಮಗದು ಹಿಡಿಸಲ್ಲ. ಅದರಲ್ಲಿ ನಮ್ಮ ಸಂಸ್ಕೃತಿಯ ಪ್ರವಾಹ ಇಲ್ಲ!
ಇಲ್ಲೆಲ್ಲಾ ನಮ್ಮ ಸಂಸ್ಕೃತಿಯನ್ನು ಉಳಿಸಿಕೊಂಡ ನಾವು ಇನ್ನೊಬ್ಬರಿಗೆ ತನ್ನ ಹೆಂಡತಿಯನ್ನು ಪರಿಚಯಿಸುವಾಗ ಇವಳು ನನ್ನ ಮಿಸ್ಸೆಸ್ಸು ನಾನವಳ ಹಸ್ಬೆಂಡ್ ಹೀಗೆಲ್ಲಾ ಹೇಳ್ತಾರೆ. ನಮ್ಮ ಹಿರಿಯರು ಹೀಗೆ ಹೇಳ್ತಾ ಇರಲಿಲ್ಲ. ಅವರು "ಈಕೆ ನನ್ನ ಕುಟುಂಬ. ನನ್ನ ಮಗುವಿನ ತಾಯಿ" ಎಂದು ಪರಿಚಯಿಸುತ್ತಿದ್ದರು. ಎಷ್ಟು ಸುಂದರವಾದ ಪದ್ದತಿ! ಹೆಂಡತಿ ಎಂಬ ಶಬ್ಧ ಗೌಣ. ಯಾಕೆಂದರೆ ಹೆಂಡತಿ ಅನ್ನೋ ಶಬ್ಧದಲ್ಲಿ ಭೋಗದ ವಾಸನೆ ಇದೆ. ತಾಯಿ ಅನ್ನುವ ಶಬ್ಧದಲ್ಲಿ ತ್ಯಾಗದ ಸುಗಂಧ ಇದೆ!
(ಮುಂದಿನ ಭಾಗ ಮೇಲಿನ ವಿಷಯದ ಪೂರಕ ಮಾಹಿತಿಗಳೊಂದಿಗೆ)
-ಮುಂದುವರಿಯುವುದು

ಸೋಮವಾರ, ಅಕ್ಟೋಬರ್ 1, 2012

ಭಾರತ ದರ್ಶನ-೫

ವಾಸುದೇವ ಬಲವಂತ ಫಡಕೆ!
ಮಹಾರಾಷ್ಟ್ರದಲ್ಲಿ ರಾಮೋಶಿಗಳ ಪಡೆ ಕಟ್ಟಿ ಬ್ರಿಟಿಷರ ವಿರುದ್ಧ ಹೋರಾಡಿದ ಈ ವೀರ ದೂರದ ಮರಳುಗಾಡು ಏಡನ್ ನಗರದಲ್ಲಿ ಬಂಧನದಲ್ಲಿ ವೀರಸ್ವರ್ಗ ಪಡೆಯುವಾಗ ಭರತ ಭೂಮಿಯ ಪವಿತ್ರ ಮೃತ್ತಿಕೆ(ಮಣ್ಣು) ಆ ಯೋಧನ ಮುಷ್ಠಿಯಲ್ಲಿ ಭದ್ರವಾಗಿತ್ತು!
ಆತನ ಈ ಅಚಲ ನಿಷ್ಟೆ ಆತನಿಂದಾಗಿ ಪಡೆದ ಸ್ವಾತಂತ್ರ್ಯವನ್ನು ಅನುಭವಿಸುತ್ತಿರೋ ನಮಗೆ ಇದೆಯೇ? ನಾವು ನಮ್ಮತನವನ್ನೇ ಮರೆತಿದ್ದೇವೆ ಎಂದೆನಿಸುತ್ತಿಲ್ಲವೆ?
ಯಾಕೀ ಮಾತು?
ಕೇಳಿ ವಿದ್ಯಾನಂದರ ಅಮೃತವಾಣಿ.
ನಮ್ಮ ದೇಶದ ಇಕ್ಕೆಲಗಳಲ್ಲಿರುವ ಸಮುದ್ರಗಳೆರಡರ ಹೆಸರುಗಳ ಬಗ್ಗೆ ಯೋಚಿಸಿದ್ದೀರಾ? ಅರಬ್ಬೀ ಸಮುದ್ರ ಮತ್ತು ಬಂಗಾಳ ಕೊಲ್ಲಿ! ನಮ್ಮ ಸಮುದ್ರಕ್ಕೆ ನಮ್ಮ ಮೇಲೆ ಆಕ್ರಮಣ ಮಾಡಿದ ಅರಬ್ಬರ ಹೆಸರೇಕೆ? ನಮ್ಮ ಹಿರಿಯರು ಪಶ್ಚಿಮ ಸಮುದ್ರಕ್ಕೆ ರತ್ನಾಕರ ಪೂರ್ವ ಸಮುದ್ರಕ್ಕೆ ಮಹೋದಧಿ ಅಂತ ಹೆಸರಿಟ್ಟಿದ್ದರು. ಸ್ವಾತಂತ್ರ್ಯ ವೀರ ಸಾವರ್ಕರ್ ದಾಸ್ಯದ ಹೆಸರುಗಳನ್ನು ಬದಲಾಯಿಸೋಕೆ ಕರೆ ಕೊಟ್ಟರು. ಪಶ್ಚಿಮ ಸಮುದ್ರಕ್ಕೆ ಸಿಂಧೂ ಬಂದು ಸೇರುತ್ತೆ, ಪೂರ್ವ ಸಮುದ್ರಕ್ಕೆ ಗಂಗೆ ಬಂದು ಸೇರ್ಕೊತ್ತಾಳೆ. ಹಾಗಾಗಿ ದಾಸ್ಯದ ಹೆಸರುಗಳನ್ನು ಬಿಟ್ಟು ಕನಿಷ್ಟ ಆ ನದಿಗಳ ಹೆಸರಿಂದ ಅಂದರೆ ಸಿಂಧೂ ಸಾಗರ ಮತ್ತು ಗಂಗಾ ಸಾಗರ ಅಂತ ಕರೆಯೋಣ ಅಂತ ಹೇಳಿದರು. ನಮ್ಮ ರಾಜಕಾರಣಿಗಳು,ನಾವೂ ಕಿವಿಗೊಡಲೇ ಇಲ್ಲ!
ನಮ್ಮಹೆಸರುಗಳ ಮೇಲೆ ಆಕ್ರಮಣ ನಡೆಯಿತು ಎನ್ನುವುದಕ್ಕೆ ಇದೆರಡು ಉದಾಹರಣೆ ಅಷ್ಟೆ! ಇಂತದೆಷ್ಟಿರಬಹುದು? ದೇಶದ ಉದ್ದಗಲಕ್ಕೆ ಒಮ್ಮೆ ಕಣ್ಣು ಹಾಯಿಸಿ.
ಜಗತ್ತಿನ ಅತೀ ಎತ್ತರದ ಶಿಖರ ಅದು ನಮ್ಮ ತೀರ್ಥ. ಅದರ ಹೆಸರು ಗೊತ್ತಾ ಮಗು ಎಂದು ನಮ್ಮ ದೇಶದ ಯಾವುದಾದರೂ ಮಗುವನ್ನು ಕೇಳಿ ನೋಡಿ. ಮೌಂಟ್ ಎವರೆಷ್ಟ್ ಅಲ್ವಾ ಅಂಕಲ್ ಎನ್ನುತ್ತದೆ ಆ ಮಗು. ಈ ಅಂಕಲ್, ಮೌಂಟ್, ಎವರೆಷ್ಟ್ ಯಾವುವೂ ನಮ್ಮದಲ್ಲ. ನಮ್ಮ ಋಷಿಗಳ ಕಾಲದಲ್ಲಿ ಇಂಗ್ಲೀಷ್ ಹುಟ್ಟಿಯೇ ಇರಲಿಲ್ಲ. ಜಗತ್ತಿನ ಅತ್ಯುನ್ನತ ಶಿಖರಕ್ಕೆ ನಮ್ಮ ಪೂರ್ವಜರು ಸಾಗರಮಾಥಾ ಅಂತ ಹೆಸರಿಟ್ಟಿದ್ದರು. ಅಂದರೆ ಶಿವನ ನೆತ್ತಿ ಅಂತ ಅರ್ಥ. ಗೌರಿ ಶಂಕರ ಎಂದಾಗ ನಮ್ಮ ಹೃದಯ ಅರಳುತ್ತೆ, ಎವರೆಷ್ಟ್ ಎಂದಾಗ ಭಾವನೆಗಳು ನಿರ್ಮಾಣ ಆಗೋದೇ ಇಲ್ಲ! ಕೆಲವೊಂದನ್ನು ಅವರಿಗೆ ಉಚ್ಚಾರ ಮಾಡಲಿಕ್ಕೆ ಆಗಲೇ ಇಲ್ಲ. ಉದಾಹರಣೆಗೆ ಈಶಾನ್ಯ ಭಾರತದ ಒಂದು ಉತ್ತುಂಗ ಶಿಖರ ಕಾಂಚನ ಗಂಗಾ. ಹಿಮಾಲಯದಲ್ಲಿ ಎತ್ತರಕ್ಕೆ ಅದಕ್ಕೆ ಮೂರನೇ ಸ್ಥಾನ. ಮುಂಜಾನೆ ಮುಂಜಾನೆ ಅರುಣನ ಚಿನ್ನದ ಕಿರಣ ಈ ಮುಗಿಲು ಚುಂಬಿಸೋ ಬೆಳ್ಳಿ ಬೆಟ್ಟದ ಮೇಲೆ ಬಿದ್ದಾಗ ಇಡೀ ಬೆಟ್ಟವೇ ಚಿನ್ನದ ಗಟ್ಟಿಯಂತೆ ಹೊಳೆಯುತ್ತೆ. ಪ್ರಕೃತಿಯ ಈ ಪವಾಡದಿಂದ ಮುದಗೊಂಡ ನಮ್ಮ ಹಿರಿಯರು ಈ ಬೆಟ್ಟಕ್ಕೆ ಕಾಂಚನ ಗಂಗಾ ಎಂದು ಕರೆದರು. ಬ್ರಿಟಿಷರ ಬಾಯಲ್ಲಿ ಅದು ಕಿಂಚನ್ ಚುಂಗಾ ಆಗಿದೆ! ಹಾಗೆಯೇ ಶಕ್ತಿ ಪೀಠ ಕಾಳೀ ಘಾಟ್ ಇವತ್ತು ಕೋಲ್ಕತ್ತಾ ಆಗಿದೆ. ಬಂಗಾಳದ ಇನ್ನೊಂದು ಶಿವಕ್ಷೇತ್ರ ದುರ್ಜಯಲಿಂಗ. ತಪಸ್ಸು ಕೆಡಿಸಲು ಬಂದ ಮನ್ಮಥನನ್ನು ಹಣೆಗಣ್ಣಿನ ಕಿಡಿನೋಟದಿಂದ ಹಿಡಿಬೂದಿ ಮಾಡಿದ ಆ ತ್ರಿಪುರಾರಿ ಲಿಂಗ ರೂಪದಲ್ಲಿ ನೆಲೆನಿಂತ ಕ್ಷೇತ್ರ ಅದು. ಅವನು ಅಜೇಯ, ಅದಕ್ಕೇ ಅದು ದುರ್ಜಯ ಲಿಂಗ. ಬ್ರಿಟಿಷರ ಬಾಯಲ್ಲಿ ಅದು ಡಾರ್ಜ್ ಲಿಂಗ್ ಆಯ್ತು, ಈಗಲೂ ಉಳಿದುಕೊಂಡಿದೆ! ಕನ್ನಡ ಕೆನರಾ ಆಯ್ತು. ಕೊಡಗು ಕೂರ್ಗ್, ಮಡಿಕೇರಿ ಮರ್ಕೆರಾ!
ಹಿಮಾಲಯದ ತಪ್ಪಲಲ್ಲಿರೋ ದ್ರೋಣಧಾರಾ ಡೆಹರಾಡೂನ್ ಆಯ್ತು, ಮಹಾರಾಷ್ಟ್ರದ ಧಾರಾಶಿವ ಉಸ್ಮನಾಬಾದ್ ಆಗಿದೆ! ಆಂದ್ರದ ಪಾಲಾಮೂರ್ ಮೆಹಬೂಬ್ ನಗರ ಆಗಿದೆ, ಸಕಲೇಶಪುರಕ್ಕೆ ಟಿಪ್ಪು ಮಾಂಜರಾಬಾದ್ ಅಂತ ಹೆಸರಿಟ್ಟಿದ್ದ!
ಬೀದರನ ಜಯಸಿಂಹಪುರ ಹುಮನಾಬಾದ್ ಆಗಿದೆ! ಆಂಧ್ರದ ರಾಜಧಾನಿ ಭಾಗ್ಯನಗರ ಹೈದರಾಬಾದ್ ಆಗಿದೆ! ಯಾದವರ ದೇವಗಿರಿ ದೌಲತಾಬಾದ್, ಉತ್ತರಪ್ರದೇಶದ ರಾಮಘರ್ ಈಗ ಅಲಿಘರ್! ಕೃಷ್ಣನ ಸಹಪಾಠಿ ಗೆಳೆಯ ಸುಧಾಮನ ಊರು ಸುಧಾಮ ಪುರಿ ಪೋರಬಂದರ್ ಆಗಿ ಡರ್ ಪೋಕ್ ದೇಶದ್ರೋಹಿಗಳಿಗೆ ಜನ್ಮವೆತ್ತಿದೆ!
ಪ್ರಜಾಪತಿ ಬ್ರಹ್ಮ ಯಾಗ ಮಾಡಿದ ತ್ರಿವೇಣಿ ಸಂಗಮ ಅಕ್ಷಯ ವಟವೃಕ್ಷ ಇರೋ ತೀರ್ಥರಾಜ ಪ್ರಯಾಗ, ಅದನ್ನು ಅಕ್ಬರ್ ಅಲಹಬಾದ್ ಅಂತ ಬದಲಾಯಿಸಿದ್ದಾನೆ! ಕಾಶಿಯನ್ನ ಔರಂಗಜೇಬ್ ಮಹಮ್ಮದಾಬಾದ್ ಅಂತ ಮಾಡಿದ್ದ! ಅಯೋಧ್ಯೆ ಫೈಜಾಬಾದ್ ಆಯ್ತು, ಭವಾನಿಪುರ ಢಾಕಾ ಆಯ್ತು. ಶ್ರೀರಾಮನ ಕಿರಿಯ ಮಗ ಮಹಾರಾಜ ಲವನ ರಾಜಧಾನಿ ಲವಪುರ ಲಾಹೋರ್ ಆಗಿ ಪಾಕಿಸ್ತಾನಕ್ಕೆ ಸೇರಿತು! ಗಾಂಧಾರ ಅಪ್ಘಾನಿಸ್ಥಾನ ಆಗಿದೆ. ಪ್ರಹ್ಲಾದನಿಗೆ ಜನ್ಮವಿತ್ತ ಪ್ರಹ್ಲಾದ ಪುರಿ ಯಾ ಹಿರಣ್ಯಾಕ್ಷ ನಗರಿ ಮುಲ್ತಾನ್ ಆಗಿ ಪಾಕಿಸ್ತಾನದಲ್ಲಿ ನಾರುತ್ತಿದೆ! ಕೃಷ್ಣ ಇಟ್ಟ ಹೆಸರು ಇಂದ್ರಪ್ರಸ್ಥ ಇವತ್ತು ದಿಲ್ಲಿ ಆಗಿದೆ!
ಹೆಸರಿನ ಮೇಲಿನ ಆಕ್ರಮಣ ಅಲ್ಲಿಗೆ ನಿಲ್ಲಲಿಲ್ಲ. ಮನೆ ಮನ ಪ್ರವೇಶ ಮಾಡಿತು. ಅಮ್ಮ ಮಮ್ಮಿ ಆದಳು. ಅಪ್ಪ ಡ್ಯಾಡಿ ಆದ. ಗಂಡಸರೆಲ್ಲಾ ಅಂಕಲ್ಸ್, ಹೆಂಗಸರೆಲ್ಲಾ ಆಂಟಿಗಳು. ಭಾರತ ಇಂಡಿಯಾ!
ಬಂಧುಗಳೇ ಒಳ್ಳೇ ಸಂಗತಿಗಳನ್ನು ಜಗತ್ತಿನ ಎಲ್ಲಾ ಕಡೆಯಿಂದ ಸ್ವೀಕಾರ ಮಾಡಿದವರು ನಾವು! ಆದರೆ ತೆಗೆದು ಕೊಳ್ಳುವಾಗ ಯೋಚನೆ ಮಾಡ್ಬೇಕು. ಅದರಿಂದ ನಮ್ಮ ಸಂಸ್ಕೃತಿಗೆ ಒಳ್ಳೆಯದಾಗುತ್ತಾ ಅಂತ ಯೋಚಿಸಬೇಕು!
ಮಮ್ಮಿ ಅನ್ನೋ ಶಬ್ಧಕ್ಕೆ ಹೆಣ ಅನ್ನೋ ಅರ್ಥ ಇದೆಯಲ್ಲಾ! ನೈಲ್ ನದಿ ಕಣಿವೆಯ ಈಜಿಪ್ಷಿಯನ್ ಜನ ಶವಗಳನ್ನು ಬಿಳಿ ಬಟ್ಟೆಗಳಲ್ಲಿ ಸುತ್ತಿ ಪಿರಮಿಡ್ಗಳಲ್ಲಿ ಇರಿಸ್ತಾ ಇದ್ದರು! ಜನ್ಮ ಕೊಟ್ಟ ಭಾಗ್ಯದಾತೆನಾ ಹೆಣ ಅಂತಾ ಅರ್ಥ ಬರೋ ಶಬ್ಧದಲ್ಲಿ ಕರೆಯೋದು ಸರೀನಾ? ತಾಯಿನಾ ಗುರುತಿಸೋಕೆ ನಮ್ಮಲ್ಲೇನು ಶಬ್ಧದ ದಾರಿದ್ರ್ಯ ಇದೆಯಾ? ಅಮ್ಮಾ, ತಾಯಿ, ಆಯಿ, ಮಾತೆ, ಅವ್ವೆ, ಅಬ್ಬೆ... ಎಷ್ಟೊಂದು ಶಬ್ಧಗಳು! ಶಬ್ಧದ ಜೊತೆಗೆ ಸಂಸ್ಕೃತಿ ಹರಿಯುತ್ತೆ. ಹಾಗಾಗಿ ಮಕ್ಕಳಿಗೆ ಶಬ್ಧಗಳನ್ನು ಕಲಿಸುವಾಗ ಎಚ್ಚರವಹಿಸಬೇಕು! ಭಾರತ( ಅರ್ಥಕ್ಕೆ ಭಾರತ ದರ್ಶನ-೨ ನೋಡಿ) ಇಂಡಿಯಾ ಆದದ್ದು ಹೇಗೆ? ಆ ಪದಕ್ಕೆ ಅರ್ಥವೇ ಇಲ್ಲ. ವಾಯುವ್ಯ ಭಾರತವನ್ನು ಅತಿಕ್ರಮಿಸಿದ ಅಲೆಗ್ಸಾಂಡರ್ ಸಿಂಧೂ ನದಿಯನ್ನು ನೋಡಿದ.(ಸಿಂಧೂ ಎಂದರೆ ಪವಿತ್ರ ಅಥವಾ ಮಂಗಲ ಎಂದರ್ಥ) ಅಲೆಗ್ಸಾಂಡರ್ ಬಾಯಲ್ಲಿ ಅದು ಇಂಡೋಸ್ ಆಯ್ತು. ಇಂಡೋಸ್ ನಿಂದ ಇಂಡಿಕಾ, ಇಂಡಿಯಾ ಶಬ್ಧಗಳು ಬಂದವು. ಹೀಗಾಗಿ ಇಂಡಿಯಾ ಎಂದಾಗ ನಮ್ಮ ತಾಯಿಯ ಮುಡಿಗೆ ಕೈ ಹಾಕಿದ ಅಲೆಗ್ಸಾಂಡರ್ ನೆನಪಾಗುತ್ತೆ!
 

ಶುಕ್ರವಾರ, ಸೆಪ್ಟೆಂಬರ್ 28, 2012

ಭಾರತ ದರ್ಶನ-೪

"ಗಾಯಂತಿ ದೇವಾಃ ಕಿಲ ಗೀತಕಾನಿ ಧನ್ಯಾಸ್ತು ಯೇ ಭಾರತ ಭೂಮಿಭಾಗೇ।
ಸ್ವರ್ಗಾಪವರ್ಗಾಸ್ಪದ ಹೇತುಭೂತೇ ಭವಂತಿ ಭೂಯಃ ಪುರುಷಾಃ ಸುರತ್ವಾತ್॥"
(ಸ್ವರ್ಗಕ್ಕೆ ಮುಕ್ತಿಗೆ ದ್ವಾರವಾದ ಭಾರತದಲ್ಲಿ ಹುಟ್ಟಿದವರು ದೇವತೆಗಳಿಗಿಂತ ಧನ್ಯರು ಎಂದು ದೇವತೆಗಳು ಹಾಡಿ ಹೊಗಳಿದ್ದಾರೆ). ಜಗನ್ಮಾತೆ ಆದಿಶಕ್ತಿ ಮಹಾದುರ್ಗೆ ಮೈತಾಳಿದ ಜೀವಂತ ಅವತಾರವೇ ಭಾರತಮಾತೆ ಎಂದರು ಮಹಾಯೋಗಿ ಅರವಿಂದ.
ಪ್ರತಿಯೊಂದು ಜೀವಿಗೆ ಹುಟ್ಟು ಹೇಗೋ ಸಾವೂ ಅನಿವಾರ್ಯ. ಇದು ಜೀವಿಗೆ ಮಾತ್ರವಲ್ಲ. ಜನಾಂಗಕ್ಕೂ ಕೂಡಾ! ಜಗತ್ತಿನಲ್ಲಿ ಅದೆಷ್ಟೋ ಜನಾಂಗಗಳು ಈ ಜನನ ಮರಣಗಳ ಪ್ರಭಾವಕ್ಕೆ ಸಿಲುಕಿ ಯಾ ಕಾಲದ ಕ್ರೂರ ಆಘಾತಕ್ಕೆ ಸಿಲುಕಿಯೋ ನಾಶವಾದವು. ಆದರೆ ಭಾರತ ಮಾತ್ರ ಇದಕ್ಕೆ ಅಪವಾದ. ಇದರ ಹುಟ್ಟನ್ನು ನಿರ್ಧರಿಸುವಲ್ಲಿ ಇತಿಹಾಸಕಾರರಿಗೆ ಯಶಸ್ಸು ಸಿಕ್ಕಿಲ್ಲ. ಜ್ಞಾತ ಜಗತ್ತಿನಲ್ಲಿ ತಾಯಿ ಶಾರದೆಯ ಪ್ರಥಮ ವೀಣಾ ಝೇಂಕಾರ ಋಗ್ವೇದದ ರೂಪದಲ್ಲಿ ಹೊರಹೊಮ್ಮಿತು ಎಂದರೆ ಅತಿಶಯೋಕ್ತಿ ಆಗಲಾರದು. ವಿಶ್ವದ ಬಹುತೇಕ ನಾಗರೀಕತೆಗಳು ಹುಟ್ಟಿದವು, ಕೆಲಕಾಲ ಮಿಂಚು ಹುಳಗಳಂತೆ ಮಿಂಚಿದವು, ಅಲ್ಪಾಯುಗಳಾಗಿ ಕಾಲಗರ್ಭ ಸೇರಿದವು. ಇಡೀ ಯೂರೋಪಗೆ ತತ್ವಜ್ಞಾನ ನೀಡಿದ ಹಾಗೂ ನಾವು ಈ ವಿಶ್ವವನ್ನು ಆಳಲು ಹುಟ್ಟಿದವರು, ಉಳಿದೆಲ್ಲರು ನಮ್ಮ ದಾಸ್ಯವನ್ನು ಒಪ್ಪಿಕೊಳ್ಳಬೇಕು ಅಂತ ಉನ್ಮತ್ತವಾಗಿ ಘೋಷಿಸಿ ಮೆರೆದ ಗ್ರೀಕರು ಇಂದು ಎಲ್ಲಿದ್ದಾರೆ? ಅಸಹಿಷ್ಣು ಏಕದೇವೋಪಾಸಕ ಮತಾಂಧ ಸಿರಿಲ್ನ ಆಕ್ರಮಣದಿಂದ ತತ್ತರಿಸಿದ ಆ ಪ್ರಾಚೀನ ದೇಶ ತನ್ನ ಹೆಸರನ್ನು ಬಿಟ್ಟು ಉಳಿದೆಲ್ಲವನ್ನು ಕಳಕೊಂಡಿತು. ಆತನ ಆಕ್ರಮಣದ ಬಳಿಕ ಮತ್ತೆಂದೂ ಇನ್ನೊಬ್ಬ ಪ್ಲೇಟೋ, ಸಾಕ್ರಟೀಸ್, ಯೂಕ್ಲಿಡ್, ಪೈಥಾಗೋರಸ್ನಂತಹ ಜ್ಞಾನಿಗಳು, ತತ್ವಜ್ಞಾನಿಗಳು ಹುಟ್ಟಲೇ ಇಲ್ಲ! ಅಲೆಗ್ಸಾಂಡರ್ ಸೆಲ್ಯೂಕಸ್ ನಂತಹ ಪರಾಕ್ರಮಿಗಳು ಜನ್ಮವೆತ್ತಲೇ ಇಲ್ಲ.ತನ್ನತನ ಕಳಕೊಂಡ ದೇಶ ಮತ್ತೆ ಮೆರೆಯುವುದೆಂತು ಸಾಧ್ಯ? ಅಂತೆಯೇ ಯುಪ್ರೈಟಿಸ್& ಟೈಗ್ರಿಸ್ ನದಿಗಳ ದಡದ ಮೇಲೆ ಬೆಳೆದ ಮೆಸಪಟೋಮಿಯನ್ ಯಾ ಬ್ಯಾಬಿಲೋನಿಯನ್ ನಾಗರೀಕತೆ ಇಂದಿಲ್ಲ. ಆ ಪ್ರದೇಶ ಇದೆ, ನದಿಗಳಿವೆ, ಆದರೆ ಆ ಸಭ್ಯತೆ ಇಲ್ಲ! ಅದನ್ನಿವತ್ತು ಇರಾಕ್ ಅಂತ ಕರಿತೀವಿ.
ನಾಲ್ಕು ಸಾವಿರ ವರ್ಷಗಳ ಹಿಂದೆ ನೈಲ್ ನದಿ ಕಣಿವೆಯ ಈಜಿಪ್ಷಿಯನ್ ನಾಗರೀಕತೆ ಸಾವಿಗೀಡಾಯಿತು. ಅಲ್ಲಿ ಇಂದು ಪೂರ್ವಜರ ಸ್ಮರಣೆಯೂ ಸಾಧ್ಯವಿಲ್ಲವಾಗಿದೆ. ಸಾವಿರದ ಮುನ್ನೂರು ವರ್ಷಗಳ ಹಿಂದೆ ಇಸ್ಲಾಂ ಆಕ್ರಮಣಕ್ಕೆ ತುತ್ತಾದ ಪರ್ಷಿಯಾ ಇಂದು ಇರಾನ್ ಆಗಿದೆ. ಆಕ್ರಮಣಕ್ಕೆ ಮುನ್ನ ಕೋಟ್ಯಾಂತರ ಸಂಖ್ಯೆಯಲ್ಲಿದ್ದ ಪಾರ್ಸಿಗಳ ಸಂಖ್ಯೆ ಇಂದು ಇಡೀ ವಿಶ್ವದಲ್ಲಿ ೧ ಲಕ್ಷದ ನಲವತ್ತು ಸಾವಿರ ಮಾತ್ರ! ಇಡೀ ಯೂರೋಪ್ಗೆ ಸ್ವಾಭಿಮಾನವನ್ನು ಏಕಶಾಸನದ ಪ್ರಜ್ಞೆಯನ್ನು ನೀಡಿದ ಸೀಸರನ ರೋಮನ್ ಸಾಮ್ರಾಜ್ಯ ಎಲ್ಲಿದೆ? ಸ್ವಾಮಿ ವಿವೇಕಾನಂದರು ಹೇಳಿದರು ಸೀಸರ್ ಆಳುತ್ತಿದ್ದ ಕಡೆ ಇಂದು ಜೇಡರ ಬಲೆಗಳು ತುಂಬಿಕೊಂಡಿದ್ದಾವೆ ಅಂತ!
1492ರಲ್ಲಿ ಕೊಲಂಬಸ್ ಅಮೇರಿಕಾಕ್ಕೆ ಕಾಲಿಟ್ಟ. ಆಗ ಅಲ್ಲಿ ಮಾಯನ್ ಸಂಸ್ಕೃತಿಯ ಹತ್ತುಕೋಟಿ ಜನ ವಾಸವಾಗಿದ್ದರು. ಈಗ ಅವರ ಸಂಖ್ಯೆ ಕೇವಲ 60000! ಜನಸಂಖ್ಯೆ ಕುಸಿದದ್ದು ಹೇಗೆ? ಕೊಲಂಬಸ್ ಅಮೇರಿಕಾವನ್ನು ಲೂಟಿ ಮಾಡಿದ! ನಂತರ ಅವನ ದೇಶದ ಸೇನೆ ಬಂತು. ಮುಗ್ಧ ಮಾಯನ್ನರನ್ನು ಕಂಡಕಂಡಲ್ಲಿ ಕೊಚ್ಚಿ ಕೊಂದರು!ಸಂಸ್ಕೃತಿ ವಿನಾಶಕ್ಕೊಳಗಾಯಿತು.
ಹೀಗೆ ಗ್ರೀಕ್, ಮಾಯನ್, ರೋಮನ್, ಅಜೆಟಿಕ್, ಐಗುಪ್ತ, ಈಜಿಪ್ಷಿಯನ್, ಚಾಂಡಿಯನ್, ಬ್ಯಾಬಿಲೋನಿಯನ್, ಇಂಕಾ, ಸಿಥಿಯನ್, ಪಾರ್ಥಿಯನ್, ಇತ್ಯಾದಿ ಬಹುತೇಕ ನಾಗರೀಕತೆಗಳು ಸಂಸ್ಕೃತಿಗಳು ನಾಶವಾದವು! ಕೆಲವು ನೈಸರ್ಗಿಕ ವಿಕೋಪಕ್ಕೆ ತುತ್ತಾದರೆ ಹಲವು ಅಸಹಿಷ್ಣು ಮತಾಂಧರಿಗೆ ಬಲಿಯಾದವು. ಆದರೆ ಅವೆಲ್ಲಕ್ಕೂ ಪ್ರಾಚೀನವಾದ ಭಾರತೀಯ ಸಂಸ್ಕೃತಿ.....?
ಇಂದಿಗೂ ಉಳಿದಿದೆ!
ಆಕ್ರಮಕರು ನಮ್ಮಲ್ಲೂ ಬಂದರು. ಕಳೆದ ಎರಡೂವರೆ ಸಾವಿರ ವರ್ಷಗಳಲ್ಲಿ ಅದೆಷ್ಟು ಆಕ್ರಮಣಗಳನ್ನು ನಾವು ಎದುರಿಸಬೇಕಾಯಿತು? ಗ್ರೀಕರು, ಹೂಣರು, ಕುಶಾನರು, ಶಕರು, ಮಂಗೋಲರು, ಮೊಘಲರು, ಪಠಾಣರು, ಹಪ್ಶಿಗಳು, ತುರ್ಕಿಗಳು, ಇರಾನಿಗಳು, ಅಪ್ಘಾನಿಗಳು,ಪ್ರೆಂಚ್, ಡಚ್, ಪೋರ್ಚುಗೀಸರು, ಆಂಗ್ಲರು! ಅಷ್ಟೇ ಅಲ್ಲ ಸ್ವಾತಂತ್ರ್ಯಾನಂತರ 2ಸಲ ಚೀನಾ 4ಸಲ ಪಾಕಿಸ್ಥಾನ. ಅಂದರೆ ಅಲೆಗ್ಸಾಂಡರ್ನಿಂದ ಹಿಡಿದು ಫರ್ವೇಜ್ ಮುಷರಫ್ ವರೆಗೆ ಅದೆಷ್ಟು ಸೈನಿಕ ಆಕ್ರಮಣ. ಅಂತೆಯೇ ಚಾರ್ವಾಕನಿಂದ ಹಿಡಿದು ತಥಾಕಥಿತ ಎಡ ಬುದ್ಧಿಜೀವಿಗಳವರೆಗೆ ಅದೆಂಥಾ ಕ್ರೂರ ವೈಚಾರಿಕ ಆಕ್ರಮಣ!
ಆದರೂ ಭಾರತ ಸತ್ತಿಲ್ಲ! ಉಳಿದೆಲ್ಲವೂ ಆಕ್ರಮಕರ ಮೊದಲ ಹೊಡೆತಕ್ಕೆ ನಾಶವಾದರೆ ಭಾರತ ಜಗದ್ವಂದ್ಯವಾಗಿ ನಿಂತಿದೆ. ಆದರೆ ನಾವು ಇತಿಹಾಸದ ಈ ಪ್ರೇರಣಾದಾಯಿತ್ವವನ್ನು, ನಮ್ಮ ಸಂಸ್ಕೃತಿಯ ಚಿರಂಜೀವಿತ್ವವನ್ನು ನಮ್ಮ ಮಕ್ಕಳಿಗೆ ತಿಳಿಸ್ತೀವಾ? ಮೆಕಾಲೆ ಯಾ ಗುಲಾಮೀ ಮಾನಸಿಕತೆಯ ಕೆಲವು ಇತಿಹಾಸಕಾರರು ಭಾರತದ ಇತಿಹಾಸ ಎಂದರೆ ಸೋಲಿನ ಇತಿಹಾಸ ಅಂತ ನಮ್ಮ ಮಕ್ಕಳಿಗೆ ಬೋಧಿಸುವಂತೆ ಮಾಡಿದ್ದಾರೆ! ಮೇಲಿಂದ ಮೇಲೆ ಆಕ್ರಮಣಗಳಾದದ್ದು ನಿಜ. ಕೆಲವು ಸಲ ಸೋತಿದ್ದೂ ನಿಜ, ಆದರೆ ಸತ್ತಿಲ್ಲ! ಕೆಲವು ಆಕ್ರಮಕರು ನಮ್ಮನ್ನಾಳಿರಬಹುದು, ಆದರೆ ಮಾತೃಭೂಮಿಯ ಮೇಲೆ ಅವರ ಸಾರ್ವಭೌಮತ್ವಕ್ಕೆ ನಾವು ಮಾನ್ಯತೆ ಕೊಟ್ಟಿಲ್ಲ! ದೇಶದ ಯಾವುದಾದರೊಂದು ಮೂಲೆಯಲ್ಲಿ ನಾಡ ಮುಕ್ತಿಗಾಗಿ ಕಿಡಿ ಸಿಡೀತಾನೇ ಇತ್ತು. ಪುರೂರವನಿಂದ ಹಿಡಿದು ಸಾವರ್ಕರ್, ನೇತಾಜಿಯವರೆಗೆ ಪ್ರತೀ ಶತಮಾನದಲ್ಲಿ ಹಲವು ಸೇನಾನಿಗಳ ನೇತೃತ್ವದಲ್ಲಿ ಸಂಘರ್ಷ ಮಾಡಿದ್ದೀವಿ. ಅದರ ಫಲವೇ ಸ್ವಾತಂತ್ರ್ಯ! ಅಂದರೆ ಭಾರತದ ಇತಿಹಾಸ ಸೋಲಿನ ಇತಿಹಾಸ ಅಲ್ಲ, ಸಂಘರ್ಷದ ಇತಿಹಾಸ! ಗೆಲುವಿನ ಇತಿಹಾಸ! ದಾಸ್ಯ ಇದ್ದಾಗ ಸಂಘರ್ಷಕ್ಕೆ ಮತ್ತು ಶಾಂತಿ ಇದ್ದಾಗ ವಿಕಾಸಕ್ಕೆ ನಮಗೆ ಪ್ರೇರಣೆ ದೊರೆತಿದ್ದು ನಮ್ಮ ಸಂಸ್ಕೃತಿಯಿಂದ, ನಮ್ಮ ಸಂಸ್ಕಾರದಿಂದ, ಮತ್ತು ಈ ನೆಲದಲ್ಲಿ ಹಿರಿಯರು ಕಂಡ ಮಾತೃಸ್ವರೂಪದಿಂದ!

ಭಾರತದರ್ಶನ-೩

ಭಾರತವೆಂದರೆ,
ವಿದೇಶದಲ್ಲಿ ಧರ್ಮದ ಅಮೃತಧಾರೆ ಹರಿಸಿದ ಸ್ವಾಮಿ ವಿವೇಕಾನಂದ ತಾಯ್ನಾಡಿನಲ್ಲಿ ಇಳಿಯುತ್ತಿದ್ದಂತೆ ಮಣ್ಣಿನಲ್ಲಿ ಹೊರಳಾಡುತ್ತಾ ಆನಂದದ ತುತ್ತ ತುದಿಗೇರಿದರು. ಸ್ವರ್ಣಲಂಕೆಯ ವೈಭವದಿಂದ ವಿಚಲಿತಗೊಂಡ ಅನುಜ ಲಕ್ಷ್ಮಣನನ್ನು ಕಂಡ ಪ್ರಭು ಶ್ರೀರಾಮ "ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ" ಎಂದು ಕೊಂಡಾಡಿದ.

ನಾನೇ ಭಾರತ ಎಂದರು ರಮಣ ಮಹರ್ಷಿಗಳು. ಎನ್ನ ಪಾದಗಳೇ ಕನ್ಯಾಕುಮಾರಿ, ಹೃದಯವೇ ಇಂದ್ರಪ್ರಸ್ಥ(ದಿಲ್ಲಿ), ಶಿರವೇ ಕಾಶ್ಮೀರ, ಅಂಗಾಂಗಗಳು ಉಳಿದ ರಾಜ್ಯಗಳು, ಎಂದು ಅಡಿಯಿಂದ ಮುಡಿಯವರೆಗೆ ತಾಯಿ ಭಾರತಿಯನ್ನು ಆವಾಹನೆ ಮಾಡಿಬಿಟ್ಟರವರು.(ಅಣ್ಣ ಚಕ್ರವರ್ತಿ ಸೂಲಿಬೆಲೆ ಹೇಳುತ್ತಿರುತ್ತಾರೆ...ದಿಲ್ಲಿ ಎಂದರೆ ದಿಲ್ ಕಣ್ರೀ. ಅಲ್ಲಿ ಅಟ್ಯಾಕ್ ಆದರೆ ಹಾರ್ಟ್ ಅಟ್ಯಾಕ್ ಆದಂತೆ. ಮಂಡಿನೋವು ಅಂತ ಯಾರಾದರೂ ಅಂದರೆ ಕರ್ನಾಟಕಕ್ಕೇನೋ ಗ್ರಹಚಾರ ಕಾದಿದೆ ಅಂತ.)(ನಾವು ಕಾಶ್ಮೀರದರ್ಧ ಕಳೆದುಕೊಂಡಿದ್ದೇವೆ.ಅದಕ್ಕೆ ನಮ್ಮ ಬುಧ್ಧಿ ಬರಿದಾಗಿದೆ. ನಮ್ಮ ದೇಶಧ ಬಗ್ಗೆ ಏನೂ ಗೊತ್ತಿಲ್ಲ.)

"ಅಮ್ಮಾ ನಿನ್ನ ಸೇವೆಯೆಂದರೆ ಪ್ರಭು ಶ್ರೀರಾಮನ ಸೇವೆ. ನಿನ್ನಂತಹ ದೊಡ್ಡ ತಾಯಿಗೆ ನನ್ನಂತಹ ದಡ್ಡ ಮಗ ರಕ್ತವನ್ನಲ್ಲದೆ ಬೇರೇನನ್ನು ಕೊಡಲು ಸಾಧ್ಯ" ಎಂದು ರುಧಿರ ತರ್ಪಣ ಮಾಡಿದ ಧಿಂಗ್ರಾ. "ಅಮ್ಮ ನಿನಗಾಗಿ ನನ್ನ ಬರವಣಿಗೆಯನ್ನು ಮೀಸಲಿರಿಸಿದೆ. ನನ್ನ ಕಾವ್ಯಕ್ಕೆ ನೀನೆ ಪ್ರೇರಣೆಯಾದೆ. ನಿನ್ನ ಸೇವೆಯೆಂದರೆ ಅದು ದೇವದೇವತೆಗಳನ್ನು ಪ್ರಸನ್ನಗೊಳಿಸುವ ಕಾರ್ಯ." ಎಂದು ತನ್ನ ಕಾವ್ಯರಸಧಾರೆಯಿಂದ ತಾಯಿಯ ಅಭಿಷೇಕ ಮಾಡಿ ಕ್ರಾಂತಿಯಜ್ಞದ ನೇತಾರನಾಗಿ ತನ್ನನ್ನೂ ತನ್ನೆಲ್ಲ ಬಂಧು ಬಳಗವನ್ನು ಕ್ರಾಂತಿ ಯಜ್ಞಕ್ಕೆ ತಳ್ಳಿದರು ವೀರ ಸಾವರ್ಕರ್. ಅವರ ಮಾತು ಕೇಳಿ "ಆ ಸಿಂಧು ಸಿಂಧು ಪರ್ಯಂತ ಯಸ್ಯ ಭಾರತ ಭೂಮಿಕಾ।
ಪಿತೃಭೂಪುಣ್ಯಭೂಶ್ಚೈವ ಸವೈ ಹಿಂದೂ ರಿತಿಸ್ಮೃತಃ"- ಯಾವನು ಸಿಂಧುವಿಂದ ಸುತ್ತುವರಿದ ಭವ್ಯ ಭಾರತವನ್ನು ತನ್ನ ಕರ್ಮಭೂಮಿ ಯಾ ಪಿತೃ ಯಾ ಮಾತೃಭೂಮಿಯಾಗಿ ಪರಿಗಣಿಸುತ್ತಾನೋ ಆತ ಎಲ್ಲೇ ಇರಲಿ ಆತ ಹಿಂದೂ!

ಶುಕ್ರವಾರ, ಸೆಪ್ಟೆಂಬರ್ 21, 2012

ಬೇಕಿರೋದು ಸಶಸ್ತ್ರ ಕ್ರಾಂತಿ!

ಬಾಂಗ್ಲಾ, ಪಾಕಿಸ್ತಾನದಿಂದ ಬಂದ, ಬರುತ್ತಿರುವ ದೇಶದ್ರೋಹಿಗಳಿಗೆ ರೇಷನ್ ಕಾರ್ಡ್ , ಪೌರತ್ವ, ಕೊನೆಗೆ ಚುನಾವಣೆಯಲ್ಲಿ ಸ್ಪರ್ದಿಸಲು ಅವಕಾಶ, ಮಂತ್ರಿಗಿರಿ ನೀಡುವ ಷಂಡ ಸರಕಾರಕ್ಕೆ ಅಸ್ಸಾಂ ಹಿಂದುಗಳಿಗೆ ಕನಿಷ್ಟ ಭದ್ರತೆ, ಸಾಂತ್ವನ ಒದಗಿಸುವ ಮನಸ್ಸು ಹೃದಯ ಇಲ್ಲವೇ? ಪಾಕಿಸ್ತಾನ ಬಾಂಗ್ಲಾದಿಂದ ತನು ಮನ ಧನ ಮಾನ ಆಸ್ತಿ ಹಾನಿಗೊಂಡು ಕಣ್ಣೀರು ಸುರಿಸುತ್ತಾ ಭಾರತವೊಂದೇ ಅಭಯ ಎಂಬ ಆಶಾಭಾವನೆಯಿಂದ ಬರುತ್ತಿರೋ ಅಸಂಖ್ಯಾತ ಹಿಂದುಗಳಿಗೆ ಆಶ್ರಯ ಕೊಡದ ಸರಕಾರದ ಮಂತ್ರಿ ಮತ್ತವರ ಹೊಗಳುಭಟರನ್ನು ಗುಂಡಿಟ್ಟು ಕೊಲ್ಲಬೇಕಲ್ಲವೆ!
ಬೊಗಳದ ನಾಯಿ ಕಳ್ಳ ನಾಯಿ ಅದು ಕಚ್ಚುತ್ತೆ ಎಂಬುದು ಎಷ್ಟು ಸತ್ಯ ನೋಡಿ! ಮನಮೋಹನ ಯಾಕೆ ಮೌನವಾಗಿದ್ದ ಗೊತ್ತೆ? ಯಾಕೆಂದರೆ ಕಲ್ಲಿದ್ದಲನ್ನೇ ನುಂಗಿದ್ದ!
ಕಣ್ಣು ಕಿವಿ ಇಲ್ಲದ ನಾಲಗೆ ಬಿದ್ದು ಹೋದ ಈ ದೇಶದ್ರೋಹಿ ರಾಜಕಾರಣಿಗಳಿಗೆ ಚಳವಳಿ ಉಪವಾಸಗಳು ನಾಟೋದಿಲ್ಲ. ಬ್ರಿಟಿಷರನ್ನು ಓಡಿಸಿದ ಹಾಗೆ ಈ ಬ್ರಿಟಿಷ್ ಮಾನಸಿಕತೆಯವರನ್ನು ಸುಡಬೇಕಾದರೆ ಸಶಸ್ತ್ರಕ್ರಾಂತಿಯೊಂದೇ ದಾರಿ!
ಬರ್ಮಾದಲ್ಲಿ ಮುಸ್ಲಿಮರು ಸತ್ತರೆ ಯೋಧರ ಸ್ಮೃತಿಚಿಹ್ನೆಗಳನ್ನೇ ಒಡೆದು ಹಾಕುವ, ಹಿಂದುಗಳನ್ನು ಹೊಡೆಯುವ ಕೊಲ್ಲುವ, ರಾಷ್ಟ್ರೀಯ ಆಸ್ತಿಪಾಸ್ತಿ ಹಾನಿ ಮಾಡುವ ವಿಷಯಗಳು ಮಾಧ್ಯಮಗಳ ಟಿ ಆರ್ ಪಿಯನ್ನು ಹೆಚ್ಚಿಸುವುದಿಲ್ಲ ಅಲ್ಲವೆ? ಮಾನಗೆಟ್ಟ ಮಾಧ್ಯಮ ಬುದ್ದಿಜೀವಿಗಳು ಈಗೆಲ್ಲಿ ಸತ್ತು ಹೋಗಿದ್ದಾರೆ? ಅಸ್ಸಾಮಿಗರ ಸಹಾಯಕ್ಕೆ ನಿಂತಿರೋದು ಅದೇ ನೀವು ಚಡ್ಡಿ ಅಂತ ಹೇಳೋ RSSನ ಗೂಂಡಾಗಳು! ಈಗೇನು ನಿಮ್ಮ ನಾಲಗೆ ಬಿದ್ದು ಹೋಗಿದೆಯೇ?

ಒಂದು ಕಥೆ-ಒಂದು ವ್ಯಥೆ!

ಒಂದು ಕಥೆ-ಒಂದು ವ್ಯಥೆ!

ಹುಡುಗಿಯರಿಬ್ಬರು ಇಬ್ಬರು ಹುಡುಗರೊಡನೆ ಲಲ್ಲೆಗರೆಯುತ್ತ ಸಾಗುತ್ತಿದ್ದಾರೆ. ವಸನವೋ ಹೇಳತೀರದು.ವ್ಯಸನವಾಗಿದೆ.
ಮಾರ್ಗ ಮಧ್ಯದಲ್ಲಿ ಬಡತನವೇ ಮೈವೆತ್ತಂತಿರುವ ಹರಿದ ಸೀರೆ ಉಟ್ಟ ಹೆಂಗಸೊಬ್ಬಳು ಹಸಿವು ಬಾಯಾರಿಕೆಯಿಂದ ಬಿದ್ದು ನರಳುತ್ತಿದ್ದಾಳೆ.ಅವಳನ್ನು ನೋಡಿ ಈ ಹುಡುಗ ಹುಡುಗಿಯರು ಸಹಾಯ ಮಾಡೋ ಬದಲು ತಮಾಷೆ ಅವಹೇಳನ ಮಾಡಲಾರಂಭಿಸಿದರು.
ಆಗ ಆ ತಾಯಿ ಮನಸ್ಸಲ್ಲೇ ಅಂದುಕೊಂಡಳು, "ನನ್ನ ಪ್ರಾಣ ಹೋಗುತ್ತಿದೆ. ಆದರೆ ಮಾನ ಉಳಿದಿದೆ. ಅವರ ಮಾನ ಉಳಿದಿಲ್ಲ. ಹಾಗಾಗಿ ಪ್ರಾಣವೂ!"
ಪ್ರಾಣ ಹೋಗಿತ್ತು. ಧರ್ಮ ಸತ್ತಿತ್ತು!

ಭಾರತ ದರ್ಶನ1


ಭಾರತ ದರ್ಶನ...
ಕೇಳಿದೊಡನೆ ನೆನಪಾಗೋದು ತಾಯಿ ಭಾರತಿಯೆ ಮೈವೆತ್ತಂತಿದ್ದ ಸಹನೆ ತಾಳ್ಮೆಗಳ ಸಾಕಾರ ಮೂರ್ತಿ, ವಾಕ್ಪಟು, ದೃಷ್ಟಾರ, ಅಪ್ರತಿಮ ದೇಶಭಕ್ತ ವಿದ್ಯಾನಂದ ಶೆಣೈ. ಮುಖತ ಭೇಟಿಯಾಗದಿದ್ದರೂ,ಅವರ ಉಪನ್ಯಾಸದಿಂದ ಪ್ರಭಾವಿತರಾದವರು ಅನೇಕ. ನೀವು ಕೇಳಿರಬಹುದು ಆತ ಮಾತಾಡುತ್ತಿದ್ದಂತೆ ನಿಂತ ನಿಲುವಲ್ಲೆ ಏಕಚಿತ್ತರಾಗಿ ಕೇಳುತ್ತಿದ್ದವರೆಷ್ಟೋ ಮಂದಿ!ಬುದ್ಧಿ ಇಲ್ಲದ ಕಮ್ಯೂನಿಷ್ಟರು, ದೇಶ ಮಾರುವ ಕಾಂಗ್ರೆಸ್ಸಿಗರೂ,ದೇಶ ದೂರುವ ಯುವಜನಾಂಗ ಕೂಡಾ ಈ ಬ್ರಹ್ಮಾಚಾರಿಯ ವಾಕ್ಪ್ರವಾಹದಲ್ಲಿ ತೇಲಿ ಹೋದರೆಂದರೆ ಅದೆಂಥ ಮಾತಿನ ಮೋಡಿ ಇರಬಹುದು?
ವಿದ್ಯಾನಂದರು ಹೇಳುತ್ತಾರೆ....
ಭಾರತ ದರ್ಶನ ಎಂದರೆ ಭಾಷೆಯ ವಿಲಾಸ ಅಲ್ಲ. ಅದು ಭಾವನೆಗಳ ಸಂಯೋಜನೆ.ನಮ್ಮೆಲ್ಲರ ಹೃದಯದ ಭಾವನೆಗಳಿಗೆ ಕೊಟ್ಟ ಮೂರ್ತ ರೂಪ!!!
... ಬಂಧುಗಳೇ ಭಾರತ ವಿಶ್ವದ ಅತ್ಯಂತ ಪ್ರಾಚೀನ ರಾಷ್ಟೃ. ಇಲ್ಲಿಗೆ ವಿಶ್ವದ ಎಲ್ಲೆಡೆಯಿಂದ ಜನ ಬಂದರು. ಕೆಲವರು ಪ್ರವಾಸಿಗಳಾಗಿ,ಕೆಲವರು ದುರಾಸೆಯಿಂದ. ದಾಳಿ ಇಟ್ಟರು, ನುಗ್ಗಿದರು, ನುಂಗಿದರು, ಹಿಗ್ಗಿದರು, ಕುಗ್ಗಿದರು,ಕಲಿತರು, ಕಲಿಸಿದರು, ಬೆರೆತರು, ಬೇರೆಯಾದರು. ನಮ್ಮವರು ಬೇರೆ ಕಡೆ ಹೋದರು, ಬೆಳಕು ಚೆಲ್ಲಿದರು, ಕೂಡಿ ಬಾಳಿದರು. ನಾಗರೀಕತೆಯ ಉದಯಕಾಲವೆಂದು ಹೇಳಲಾಗುವ ಕಾಲದಲ್ಲೂ ಭಾರತ ಮುಂಚೂಣಿಯಲ್ಲಿತ್ತು. ನಾಗರೀಕತೆಯ ಅಸ್ತಮದ ಈ ಕಾಲದಲ್ಲೂ ಭಾರತ ತನ್ನ ಸಂಸ್ಕೃತಿಯನ್ನು ಉಳಿಸಿಕೊಂಡಿದೆ.ಅದು ಸನಾತನವೂ ಹೌದು, ನೂತನವು ಹೌದು.

ಜಗತ್ತಿನ ಇತಿಹಾಸದಲ್ಲಿ ಪ್ರಾಚೀನವೆನಿಸಿದ ಎಂದೋ ಕಣ್ಮರೆಯಾದ ಬ್ಯಾಬಿಲೋನಿಯನ್, ಚಾಂಡಿಯನ್, ಐಗುಪ್ತ, ಯವನ ರಾಷ್ಟ್ರಗಳಿಗಿಂತಲೂ ಹಳೆಯದಾದ ಮತ್ತು ಹಿರಿದಾದ ಸಂಸ್ಕೃತಿ ಭಾರತದ್ದು. ಮಾತ್ರವಲ್ಲ ಅದು ಇಂದಿಗೂ ಜಗತ್ತಿನ ಬಲಾಢ್ಯ ರಾಷ್ತ್ರಗಳಿಗೆ ಭುಜಕ್ಕೆ ಭುಜ ಕೊಟ್ಟು ನಿಂತಿದೆ. ಅದಕ್ಕೆ ಅದು ಸನಾತನ ಹಾಗೂ ನೂತನ!!!