ಪುಟಗಳು

ಶನಿವಾರ, ಅಕ್ಟೋಬರ್ 27, 2012

ಭಾರತ ದರ್ಶನ-೧೫

ಭಾರತ ದರ್ಶನ-೧೫:

ಉತ್ತರದಲ್ಲಿ ಉತ್ತುಂಗ ಹಿಮವಂತ, ದಕ್ಷಿಣದ ತುದಿಯಲ್ಲಿ ಅಗಾಧ ಶರಧಿ. ಮೇಲೆ ಕಿರೀಟ ಪ್ರಾಯದ ಹಿಮವರ್ಷ. ಕೆಳಗೆ ತಾಯಿಯ ಚರಣಕ್ಕೆ ನೀಲಸಿಂಧು ಜಲಸ್ಪರ್ಷ. ತನ್ಮಧ್ಯೆ ಭಾರತ ವರ್ಷ.

ಭಾರತ ಪ್ರಶಂಸೆ:

"ಪೃಥಿವ್ಯಾಂ ಭಾರತಂ ವರ್ಷಂ ಕರ್ಮಭೂಮಿರುದಾಹೃತಾ||" - ಬ್ರಹ್ಮಾಂಡ ಪುರಾಣ
(ಜಗತ್ತಿನಲ್ಲಿ ಭಾರತವೇ ಕರ್ಮಭೂಮಿ ಎಂದು ತಿಳಿಯಲ್ಪಡುತ್ತದೆ.)

"ಜಾಂಬವೇ ಭಾರತಂ ವರ್ಷಂ ತೀರ್ಥಂ ತ್ರೈಲೋಕ್ಯ ವಿಶ್ರುತಂ|
ಕರ್ಮ ಭೂಮಿರ್ಯತಃ ಪುತ್ರ ತಸ್ಮಾತ್ ತೀರ್ಥಂ ತದುಚ್ಯತೇ||" -ಬ್ರಹ್ಮಾಂಡ ಪುರಾಣ
(ತ್ರಿಲೋಕಗಳಲ್ಲೇ ಜಂಬೂದ್ವೀಪದ ಭಾರತ ವರ್ಷವು ಜಗತ್ಪ್ರ್ಸಿದ್ಧ ತೀರ್ಥವಾಗಿದೆ. ಅದು ಕರ್ಮಭೂಮಿಯಾಗಿರುವುದರಿಂದಲೇ ತೀರ್ಥ ಎನಿಸಿದೆ.)

"ದೇವನಾಮಪಿ ವಿಪ್ರರ್ಷೇ ಸದಾಹ್ಯೇಷ ಮನೋರಥಃ |
ಅಪಿ ಮಾನುಷ್ಯಮಾಪ್ಸ್ಯಾಮೋ ದೇವತ್ವಾತ್ ಪ್ರಚ್ಯುತಾಃ ಕ್ಷಿತೌ ||
ಮನುಷ್ಯಃ ಕುರುತೇ ತತ್ತು ಯನ್ನ ಶಕ್ಯಂ ಸುರಾಸುರೈಃ || "-ಮಾರ್ಕಂಡೇಯ ಪುರಾಣ
(ಹೇ ವಿಪ್ರರ್ಷೇ ! ದೈವತ್ವದಿಂದ ಚ್ಯುತರಾದ ಬಳಿಕ ಭಾರತದಲ್ಲಿ ಮನುಷ್ಯತ್ವ ಪ್ರಾಪ್ತವಾಗಲೆಂದು ದೇವತೆಗಳೂ ಮನೋರಥ ಹೊಂದಿರುತ್ತಾರೆ. ಯಾವುದು ಸುರಾಸುರರಿಗೆ ಸಾಧ್ಯವಾಗದೋ ಅದನ್ನು ಮನುಷ್ಯ ಮಾಡಬಲ್ಲನು.)

"ಅತ್ರಾಪಿ ಭಾರತಂ ಶ್ರೇಷ್ಠಂ ಜಂಬೂದ್ವೀಪೇ ಮಹಾಮುನೇ |
ಯತೋ ಹಿ ಕರ್ಮ ಭೂರೇಷಾ ಯತ್ಯೋ ಭೋಗಭೂಮಯಃ ||
ಅತ್ರ ಜನ್ಮ ಸಹಸ್ರಾಣಾಂ ಸಹಸ್ರೈರಪಿ ಸತ್ತಮ |
ಕದಾಚಿಲ್ಲಭತೇ ಜಂತುರ್ಮಾನುಷ್ಯಂ ಪುಣ್ಯ ಸಂಚಯಾತ್ ||" -ಮಹಾಭಾರತ
(ಜಂಬೂದ್ವೀಪವೆಂಬ ಜಗತ್ತಿನ ಭಾಗದಲ್ಲಿ ಭಾರತವು ಶ್ರೇಷ್ಠವಾದ ದೇಶವು. ಏಕೆಂದರೆ ಇದು ಕರ್ಮಭೂಮಿಯು. ಇತರ ದೇಶಗಳು ಬರಿಯ ಭೋಗ ಭೂಮಿಗಳು. ಸಾವಿರಾರು ಜನ್ಮಗಳ ಪುಣ್ಯ ಸಂಚಯನದಿಂದ ಮಾತ್ರ ಭಾರತದಲ್ಲಿ ಜೀವಿಯು ಮನುಷ್ಯ ಜನ್ಮ ಪಡೆಯುತ್ತಾನೆ.)

"ಸ್ವರ್ಗದಲ್ಲಿ ಹತ್ತಾರು ಯುಗಗಳ ಕಾಲ ಬಾಳುವುದಕ್ಕಿಂತ ಭಾರತದಲ್ಲಿ ಕೆಲವು ಕ್ಷಣಗಳು ಜೀವಿಸುವುದು ಮೇಲು" -ಶ್ರೀ ಮದ್ಭಾಗವತ 
"ಅನ್ಯಸ್ಥಾನೇ ವೃಥಾ ಜನ್ಮ ನಿಷ್ಫಲಂ ಚ ಗತಾಗತಮ್ |
ಭಾರತೀ ಚ ಕ್ಷಣಂ ಜನ್ಮ ಸಾರ್ಥಕಂ ಶುಭಂ ಕರ್ಮದಮ್ ||"
(ಇತರ ಭಾಗಗಳಲ್ಲಿ ಹುಟ್ಟುವುದು ವ್ಯರ್ಥವೇ ಸರಿ. ಅದರಿಂದ ಮಹತ್ವದ ಫಲವಿಲ್ಲ. ಭಾರತದಲ್ಲಿನ ಹುಟ್ಟು ಕ್ಷಣಕಾಲವಾದರೂ ಫಲಕಾರಿಯೇ.)
ಓರ್ವ ಮಹಾನುಭಾವ ಹೇಳುತ್ತಾನೆ 
"ಪ್ರತಿ ಜನ್ಮನಿ ಮೇ ಚಿತ್ತಂ ವಿತ್ತಂ ದೇಹಶ್ಚ ಸಂತಿ
ತತ್ ಸೇವಾ ನಿರತು ಭೂಯುರ್ಮಾತಾ ತ್ವಂ ಕರುಣಾಮಯಿ|"
(ಹೇ ತಾಯೇ ನೀನು ಅತ್ಯಂತ ಕರುಣಾಳು. ನನಗೆ ನಿನ್ನಲ್ಲಿಯೇ ಜನ್ಮ ದೊರೆಯಲಿ. ಪ್ರತಿ ಜನ್ಮದಲ್ಲಿಯೂ ನನ್ನ ಮನಸ್ಸು, ಸಂಪತ್ತು, ಶರೀರ ಮತ್ತು ಸಂತತಿಯೂ ಅರ್ಥಾತ್ ನನ್ನದೆಂಬುದೆಲ್ಲವೂ ನಿನ್ನ ಸೇವೆಗೆ ಮುಡಿಪಾಗಿರಲಿ)

ಭಾರತ ಭಕ್ತನೊಬ್ಬ ಹೇಳುತ್ತಾನೆ,
"ನಮೇ ವಾಂಛಾಸ್ತಿ ಯಶಸಿ ವಿದ್ವತ್ತ್ವೇನ ಚ ವಾ ಸುಖೇ|
ಪ್ರಭುತ್ವೇ ನೈವ ವಾ ಸ್ವರ್ಗೇ ಮೋಕ್ಶೇಪ್ಯಾನಂದದಾಯಕೇ||
ಪರಂತು ಭಾರತೇ ಜನ್ಮ ಮಾನವಸ್ಯ ಚ ವಾ ಪಶೋಃ |
ವಿಹಂಗಸ್ಯ ಚ ವಾ ಜಂತೋರ್ವೃಕ್ಷ ಪಾಷಾಣಯೋರಪಿ ||"
(ನನಗೆ ಕೀರ್ತಿಯ ಆಸೆಯಿಲ್ಲ ವಿದ್ವಾಂಸನಾಗಿ ಮೆರೆಯಬೇಕೆಂಬ ಇಚ್ಛೆಯೂ ಇಲ್ಲ. ನನಗೆ ಯಾವುದೇ ವಿಧದ ಸುಖವೂ ಬೇಡ. ನಾನೊಬ್ಬ ದೊರೆಯಾಗಿ ಆಳಬೇಕೆಂದು ಬಯಸುವುದಿಲ್ಲ. ಸಕಲ ಸುಖದ ಆಗರವಾದ ಸ್ವರ್ಗವಾಗಲಿ, ಪರಮಾನಂದದ ಮೋಕ್ಷವಾಗಲಿ ನನಗೆ ಬೇಡ. ನನಗಿರುವುದೊಂದೇ ಆಸೆ. ಅದೆಂದರೆ ಭಾರತದಲ್ಲಿ ಜನಿಸಬೇಕು. ಮನುಷ್ಯ, ಪಶು-ಪಕ್ಷಿ, ಇಲ್ಲವೇ ಹುಳುವಾಗಿಯಾದರೂ ಇಲ್ಲೇ ಹುಟ್ಟಲು ಅವಕಾಶ ಕೊಡು ಭಗವಾನ್. ಅದು ಸಾಧ್ಯವಿಲ್ಲವೆಂದಾದರೆ ಕೊನೆ ಪಕ್ಷ ಗಿಡ ಮರದ ರೂಪದಲ್ಲಾದರೂ ಅಥವಾ ಕಲ್ಲು ಬಂಡೆಯಾಗಿಯಾದರೂ ನನಗೆ ಭಾರತದಲ್ಲಿ ಜನ್ಮ ಕೊಡು)

ಆದರೆ ಇಂದು.....?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ