ಇಂದಿಗೂ ಕೆಲವರು ಬ್ರಿಟಿಷರಿಂದ ನಮಗೆ ಶೈಕ್ಷಣಿಕವಾಗಿ, ಸಂಚಾರ
ವ್ಯವಸ್ಥೆಯಿಂದಾಗಿ ಲಾಭ ಆಗಿದೆ ಎಂದೇ ಭಾವಿಸುತ್ತಾರೆ! ಆದರೆ ವಾಸ್ತವವಾಗಿ ಬ್ರಿಟಿಷರು
ಮಾಡಿದ್ದು ಭಾರತದ ಅಂತಃಸತ್ವದ ಲೂಟಿಯೇ ಹೊರತು ನಮ್ಮ ಉತ್ಕರ್ಷವಲ್ಲ.
ನೀವೇ ಯೋಚಿಸಿ ಹುಬ್ಬಳ್ಳಿಯಿಂದ ಅಂದಿನ ಬ್ರಹನ್ನಗರಗಳಾದ ಪುಣೆ ಮೀರಜ್ ಗಳಿಗೆ
ಹೋಗಬೇಕಾಗಿದ್ದ ರೈಲು ಮಾರ್ಗ ಅಳ್ನಾವರ, ಲೋಂಡಾಗಳತ್ತ ಯಾಕೆ ತಿರುಗಿ ಬಿಡುತ್ತೆ?
ಪಶ್ಚಿಮ ಘಟ್ಟಕ್ಕೆ ತಾಗಿ ಅಲ್ಲಿಂದ ಮತ್ತೆ ಉತ್ತರಕ್ಕೆ ತಿರುಗಿ ಬೆಳಗಾವಿಯತ್ತ
ಸಾಗುತ್ತದೆ. ಅಂದರೆ ಬ್ರಿಟಿಷರಿಗೆ ಜನರ ಪ್ರಯಾಣಕ್ಕಿಂತ ಅರಣ್ಯೋತ್ಪನ್ನ ಸಾಗಾಣಿಕೆಯೇ
ಪ್ರಮುಖವಾಗಿತ್ತು ಎಂದಾಯಿತಲ್ವೇ?
"ನಮ್ಮ ಶಿಕ್ಷಣ ಯೋಜನೆಗಳನ್ನು ಮುಂದುವರಿಸಿದರೆ ಮೂವತ್ತು ವರ್ಷ ಕಳೆದ ಬಳಿಕ ಒಬ್ಬನೇ ಒಬ್ಬ ವಿಗ್ರಹಾರಾಧಕನೂ ಉಳಿದಿರುವುದಿಲ್ಲ."-ಮೆಕಾಲೆ(1836)
ಅಂದರೆ ಅಲೌಕಿಕ ಮತ್ತು ಲೌಕಿಕ ಜ್ಞಾನವೆರಡನ್ನೂ ಬೋಧಿಸುತ್ತಿದ್ದ ಭಾರತೀಯ ಶಿಕ್ಷಣ
ಮೂಲೆಗೆ ಸರಿಯಿತು. ಜನರನ್ನು ನಿಶ್ಯಕ್ತ, ನಿರ್ವೀರ್ಯ, ವಿಚಾರಶೂನ್ಯರನ್ನಾಗಿಸುವ ಮೆಕಾಲೆ
ಶಿಕ್ಷಣ ಆ ಜಾಗವನ್ನು ಆಕ್ರಮಿಸಿತು!
(ಹದಿಹರೆಯದ ಹುಡುಗರನ್ನು ಮಾತಾಡಿಸಿ ನೋಡಿ, ಹೆಚ್ಚಿನವರಿಗೆ ಚಲನಚಿತ್ರ, ಕಂಪ್ಯೂಟರ್, ವೀಡಿಯೋ ಗೇಮ್ಸ್ ಬಿಟ್ಟರೆ ಏನೂ ತಿಳಿದಿರುವುದಿಲ್ಲ!)
ಋಗ್ವೇದದ ಕಾಲದಲ್ಲೇ ಸಾರಿಗೆ ಸಂಪರ್ಕ ಅತ್ಯುನ್ನತ ಮಟ್ಟದಲ್ಲಿತ್ತು.
ಋಗ್ವೇದದಲ್ಲಿ 'ಜಲಯಾನ'- ನೀರು ಮತ್ತು ಗಾಳಿಯಲ್ಲಿ ನಡೆಸಬಹುದಾದ ವಾಹನ; 'ಕಾರಾ'- ನೆಲ
ಮತ್ತು ನೀರಿನಲ್ಲಿ ನಡೆಸಬಹುದಾದ ವಾಹನ;ತ್ರಿತಳ, ತ್ರಿಚಕ್ರರತ್ನ, ವಾಯುರತ್ನ ಇವುಗಳ
ಉಲ್ಲೇಖವಿದೆ.
ಆಗಸ್ತ್ಯ ಸಂಹಿತೆಯಲ್ಲಿ ಎರಡು ರೀತಿಯ ವಿಮಾನಗಳ
ಉಲ್ಲೇಖವಿದೆ. 'ಛತ್ರ' ಯಾ ಅಗ್ನಿಯಾನ: ಶತ್ರುಗಳು ಬೆಂಕಿ ಹಚ್ಚಿದರೆ ಅಥವಾ ನೈಸರ್ಗಿಕ
ಕಾಡ್ಗಿಚ್ಚು ಸಂಭವಿಸಿದರೆ ಪಾರಾಗಲು ಇದನ್ನು ಬಳಸುತ್ತಿದ್ದರು. 'ವಿಮಾನ ದ್ವಿಗುಣಂ' ಎಂಬ
ವಾಯುಯಾನ ಈಗಿನ ಪ್ಯಾರಾಚೂಟ್ಗಳಂತೆ ಬಳಕೆಯಲ್ಲಿತ್ತು.
ಭರಧ್ವಾಜನ ಯಾತ್ರಾ ಸರ್ವಸ್ವ ಅಥವಾ ಬ್ರಹದ್ವಿಮಾನ ಶಾಸ್ತ್ರದಲ್ಲಿ ವಿಮಾನ ತಯಾರಿಸುವ
ಮತ್ತು ಹಾರಿಸುವ ತಂತ್ರಜ್ಞಾನದ ವಿವರಗಳಿವೆ. ವಿಮಾನ ತಯಾರಿಕೆಗೆ ಬೇಕಾದ ಲೋಹ,
ಮಿಶ್ರಲೋಹಗಳು, ಬಳಸಬಹುದಾದ ಇಂಧನ ಮತ್ತು ಅದನ್ನು ತಯಾರಿಸುವ ವಿಧಾನಗಳ ವಿವರಣೆ ಇದೆ.
ಎಂಥ ಹೊಡೆತ ಬಿದ್ದರು ತುಂಡಾಗದ 'ಅಭೇದ್ಯ', ಬೆಂಕಿ ತಗುಲಿದರು ಸುಡದ 'ಅದಾಹ್ಯ',
ಬೇರ್ಪಡಿಸಲಾಗದ 'ಅಛೇದ್ಯ' ಎಂಬ ಮೂರು ರೀತಿಯ ವಿಮಾನಗಳನ್ನು ತಯಾರಿಸುವ ಮಾಹಿತಿ ಇದೆ!
ಭಾರಧ್ವಾಜನ ಇದೇ ಗ್ರಂಥದಲ್ಲಿ ದೂರದಿಂದಲೇ ವಿವಿಧ ತಂತ್ರಜ್ಞಾನ ಬಳಸಿ ಶತ್ರು
ವಿಮಾನ ನಾಶ ಮಾಡುವ, ಪಕ್ಕದ ವಿಮಾನದಲ್ಲಿ ಏನು ನಡೆಯುತ್ತಿದೆ ಎಂದು ತಿಳಿಯಬಲ್ಲ
'ಶಬ್ಧಗ್ರಾಹಿ' ಯಂತ್ರದ, ಪೈಲಟ್ ಮತ್ತು ಪ್ರಯಾಣಿಕರು ಧರಿಸಬೇಕಾದ ಬಟ್ಟೆ, ತಿನ್ನಬಹುದಾದ
ಆಹಾರ ಮತ್ತಿತರ ವಿಚಾರಗಳಿವೆ.
ಚಾಣಕ್ಯನ
ಅರ್ಥಶಾಸ್ತ್ರದಲ್ಲಿ ಹರಿಶ್ಚಂದ್ರನ ಕಾಲದಲ್ಲಿದ್ದ ವೈಮಾನಿಕ ನಗರ 'ಸೌಭ ದೇಶ',
ಆಕಾಶದಲ್ಲಿ ಯುದ್ಧ ಮಾಡುವ ತರಬೇತಿ ಪಡೆದ ಸೈನಿಕರ(ಆಕಾಶ ಯೋಧಿನ: ) ಉಲ್ಲೇಖವಿದೆ. ಅಂದರೆ
ಆ ಕಾಲದಲ್ಲೇ ವಾಯುಯುದ್ಧಗಳು ಸಂಭವಿಸುತ್ತಿದ್ದವು ಎಂದಾಯಿತಲ್ಲವೇ?
ಕ್ರಿ. ಪೂ. 240ರ ಸುಮಾರಿಗೆ ಸಾಮ್ರಾಟ ಅಶೋಕನ ಕಾಲದಲ್ಲಿ ಆಕಾಶಯಾನಕ್ಕೆ ಬಳಸುವ ರಥಗಳಿದ್ದವು.
1896ರಲ್ಲಿ ಆನೇಕಲ್ ಸುಬ್ರಾಯ ಭಟ್ಟರ ಮಾರ್ಗದರ್ಶನದಲ್ಲಿ ಶಿವಕರ್ ಬಾಪೂಜಿ
ತಲ್ಪಾಡೆ ಮತ್ತವರ ಪತ್ನಿ ವಿಮಾನ ರಚಿಸಿದ್ದು ಭಾರಧ್ವಾಜನ ವಿಮಾನ ಶಾಸ್ತ್ರ ಆಧರಿಸಿಯೇ!
ಆಗ ಅವರು ಸೂರ್ಯಕಿರಣ, ಪಾದರಸ, ನಕ್ಷರಸಗಳನ್ನು ಇಂಧನವಾಗಿ ಬಳಸಿದ್ದರು. 1500 ಅಡಿ
ಎತ್ತರಕ್ಕೆ ಹಾರಿ ಯಶಸ್ವಿಯಾಗಿ ಕೆಳಗಿಳಿದ ಈ ವಿಮಾನ ಪರೀಕ್ಷೆಯ ಬಗ್ಗೆ ಅಂದಿನ
ಪ್ರಸಿದ್ಧ ಮರಾಠಿ ಪತ್ರಿಕೆ 'ದಿ ಕೇಸರಿ' ವರದಿ ಪ್ರಕಟಿಸಿತ್ತು. ಈ ಪರೀಕ್ಷೆಗೆ ಅಂದಿನ
ಬರೋಡಾ ಮಹಾರಾಜ ಸಯ್ಯಾಜಿರಾವ್ ಗಾಯಕ್ ವಾಡ್ ಮತ್ತು ಜಸ್ಟೀಸ್ ಗೋವಿಂದ ರಾನಡೆ
ಸಾಕ್ಷಿಯಾಗಿದ್ದರು. ಪತ್ನಿಯ ನಿಧನದ ನಂತರ ತಲ್ಪಾಡೆ ಇದರ ಬಗ್ಗೆ ಆಸಕ್ತಿ ಕಳಕೊಂಡರು.
ಅವರ ನಿಧನಾನಂತರ ಅವರ ಸಂಬಂಧಿಕರು ಈ ತಂತ್ರಜ್ಞಾನವನ್ನು ರೈಟ್ ಸಹೋದರರಿಗೆ ಮಾರಿದರು!
ವಿಶ್ವದ ಬಹುತೇಕ ರಾಷ್ಟ್ರಗಳು ಹುಟ್ಟುವ ಮೊದಲೇ ಭಾರತ ವೈಜ್ಞಾನಿಕತೆಯ
ತುತ್ತತುದಿಯಲ್ಲಿತ್ತು ಎಂಬುದಕ್ಕೆ ವಿಮಾನ ಶಾಸ್ತ್ರ ಒಂದು ಸಣ್ಣ ಉದಾಹರಣೆ. ನಮ್ಮ
ಕಲ್ಪನೆಗೂ ನಿಲುಕದ ಹಲವು ಸಂಶೋಧನೆಗಳು ಆಗಿಹೋಗಿವೆ. ಅವುಗಳ ದಾಖಲೀಕರಣ ಆಗಿಲ್ಲ. ಅಥವಾ
ಅಳಿದು ಹೋಗಿವೆ. ಅಥವಾ ಅಳಿಸಲಾಗಿದೆ!
ಬಂಧುಗಳೇ," ಭಾರತವನ್ನು, ಭಾರತೀಯ
ಸಂಸ್ಕೃತಿಯನ್ನು ಪಾಶ್ಚಾತ್ಯ ಕಣ್ಣಿಂದ ನೋಡುವುದನ್ನು ಬಿಡಿ. ದೇಶದ ಹಲವೆಡೇ ಅಜ್ಞಾತವಾಗಿ
ವೇದಗಳ ಸಂಶೋಧನೆಯಲ್ಲಿ ತೊಡಗಿಹ ಸಂಸ್ಥೆಗಳಿಗೆ ನಿಮ್ಮದಾದ ಸಹಾಯ ಮಾಡಿ."
"ವಂದೇ ಮಾತರಂ"
-ಇನ್ನೂ ಇದೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ