ಪುಟಗಳು

ಶನಿವಾರ, ಅಕ್ಟೋಬರ್ 6, 2012

ಭಾರತದರ್ಶನ-೭

               ಯೌವನವತಿ ವಿಧವೆಯೊಬ್ಬಳು ತನ್ನತ್ತ ಆಕರ್ಷಿತಳಾಗಿ ತನುಸುಖಕ್ಕಾಗಿ ಪೀಡಿಸಿದಾಗ ತಾನಿದ್ದ ಮೂರನೇ ಮಹಡಿಯಿಂದ ಹಾರಿ ತನ್ನ ಬ್ರಹ್ಮಚರ್ಯತ್ವವನ್ನು ಉಳಿಸಿಕೊಂಡ ಧ್ಯೆಯನಿಷ್ಠ ದೇಶಭಕ್ತ ಚಂದ್ರಶೇಖರ ಆಜಾದ್!
ಬ್ರಹ್ಮಚರ್ಯವೆಂದರೆ ಸ್ತ್ರೀಯರೊಡನೆ ಬೆತ್ತಲೆ ಮಲಗುವುದಲ್ಲ ಅಂತ ಯಾವ ಮೂಢನಿಗಾದರೂ ತಿಳಿದ ವಿಷಯ. ಆದರೂ ಅಂತಹ ಕೃತ್ಯ ಮಾಡಿದವ ಮಹಾತ್ಮ ಅಂತ ಕರೆಸಿಕೊಂಡ! ಆದರೆ ಚಂದ್ರಶೇಖರ ಆಜಾದನಂತಹ ಅಪ್ರತಿಮ ದೇಶಭಕ್ತನನ್ನು ಜನಮಾನಸದಿಂದಲೇ ಮರೆಸುವ ಪ್ರಯತ್ನ ನಡೆಯಿತು, ನಡೆ

ಯುತ್ತಿದೆ.
                ಸ್ತ್ರೀಯ ಸ್ಥಾನವನ್ನು ನಮ್ಮ ಹಿರಿಯರು ಹೇಗೆ ಗುರುತಿಸಿದ್ದರು? ಅದನ್ನು ವಿದ್ಯಾನಂದರ ಬಾಯಿಂದಲೇ ಕೇಳೋಣ.
ತ್ಯಾಗದ ಸಂಕೇತವಾದ ಕುಂಕುಮ ನಮ್ಮ ತಾಯಂದಿರ ಹಣೆಯಲ್ಲಿರುತ್ತೆ. ಸ್ತ್ರೀಯೊಬ್ಬಳು ನಮ್ಮ ಕಣ್ಮುಂದೆ ಬಂದಾಗ ಅವಳು ಯಾರ ತಾಯಿ ಅಥವಾ ಯಾರ ಮಗಳು ಅಂತ ನಾವು ಗುರುತಿಸುತ್ತೇವೆಯೇ ಹೊರತು ಯಾರ ಹೆಂಡತಿ ಅಂತಲ್ಲ. ಉದಾಹರಣೆಗೆ ಜೀಜಾಮಾತೆ ಯಾರು ಅಂತ ದೇಶದ ಯಾವುದೇ ಮೂಲೆಯಲ್ಲಿ ಕೇಳಿ ನೋಡಿ. ನಿಮಗೆ ಸಿಗೋ ಉತ್ತರ ವೀರ ಶಿವಾಜಿಯ ತಾಯಿ! ಷಾಹಜಿಯ ಹೆಂಡತಿ ಅಂತ ಯಾರೂ ಹೇಳಲ್ಲ. ಭುವನೇಶ್ವರಿ ದೇವಿ ಯಾರು? ವೀರ ಸನ್ಯಾಸಿ ವಿವೇಕಾನಂದರ ತಾಯಿ ಅನ್ನುತ್ತೇವೆಯೇ ವಿನಾ ಕಲ್ಕತ್ತಾದ ವಕೀಲ ವಿಶ್ವನಾಥ ದತ್ತರ ಹೆಂಡತಿ ಅಂತ ಯಾರೂ ಹೇಳಲ್ಲ. ಕೌಸಲ್ಯ ಯಾರು? ಮರ್ಯಾದಾ ಪುರುಷೋತ್ತಮ ಪ್ರಭು ಶ್ರೀರಾಮನ ತಾಯಿ ಅಂತೇವೆಯೇ ಹೊರತು ಶ್ರೀಮತಿ ದಶರಥ ಅಂತ ಯಾರೂ ಅನ್ನಲ್ಲ! ಕುಂತಿದೇವಿಯನ್ನು ಯಾರಾದರೂ ಮಿಸೆಸ್ ಪಾಂಡು ಅಂತ ಹೇಳಿದರೆ ಎಷ್ಟು ಸಂಕೋಚ ಆಗಬಹುದು ನಮಗೆ! ಅಕೆ ಪಾಂಡವರ ತಾಯಿ, ಕುಂತಿಭೋಜನ ಸಾಕುಮಗಳು ಎಂದಾಗಲೇ ನಮಗೆ ಸಮಾಧಾನ ಆಗುತ್ತೆ. ಹಾಗೆ ನಮ್ಮ ತಾಯಿ ಭಾರತಿ.
           ಭಾರತ ಎಂದರೆ ಜೋಡ್ಸೋದು, ಸಮನ್ವಯ ಎಂದರ್ಥ. ಭಾವ ರಾಗ ತಾಳಗಳ ಸಮನ್ವಯವೇ ಸಂಗೀತ.
ಅಂದರೆ ಸ್ವರಗಳಲ್ಲಿ ಸಾಮರಸ್ಯ ಉಂಟಾದರೆ ಸಂಗೀತ, ಜನರ ಹೃದಯದಲ್ಲಿ ಸಾಮರಸ್ಯ ಉಂಟಾದರೆ ಭಾರತ!
ಅಂದರೆ ವಿವಿಧತೆಯಲ್ಲಿ ಏಕತೆ ಕಾಣುವಂತಹ ಸಂದೇಶ ಅದು.
-ಮುಂದುವರಿಯುವುದು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ