ಪುಟಗಳು

ಸೋಮವಾರ, ಅಕ್ಟೋಬರ್ 15, 2012

ಭಾರತ ದರ್ಶನ-೮


    ಕನ್ನಡದ ಕವಿವಾಣಿಯೇನು.....?
 " ಹಲವು ಭಾಷೆ ನುಡಿ ಲಿಪಿಗಳ ತೋಟ|
 ವಿವಿಧ ಮತ ಪಂಥಗಳ ರಸದೂಟ||
 ಕಾಣಲು ಕಾಮನ ಬಿಲ್ಲಿನ ನೋಟ|
 ನಮ್ಮೀ ತಾಯ್ನೆಲವು|| "
    ಈ ಚಿಂತನೆ ಇರೋದ್ರಿಂದಲೇ ಭಾರತದಲ್ಲೊಂದು ಅದ್ಭುತ ಸಮನ್ವಯದ ಭಾವ ಕಂಡುಬರುತ್ತೆ. ಮತ ಬೇರೆ ಅಥವಾ ದೇವರ ಹೆಸರು ಬೇರೆ ಅನ್ನೋ ಕಾರಣಕ್ಕೆ ನಾವು ಯಾರನ್ನೂ ದ್ವೇಷ ಮಾಡ್ಲಿಲ್ಲ.ಅಥವಾ ಎಲ್ಲರೂ ನಮ್ಮ ಮತಕ್ಕೇ ಸೇರ್ಬೇಕು, ನಮ್ಮ ದೇವರನ್ನೇ ಪೂಜೆ ಮಾಡ್ಬೇಕು ಅಂತ ಹಠ ಹಿಡಿದು ಮತಾಂತರ ಮಾಡಲಿಲ್ಲ! ಹಿಂದುತ್ವದಲ್ಲಿ ಉದಾತ್ತತೆ ಇದೆ, ಉದಾರತೆ ಇದೆ.
     ಅಸಹಿಷ್ಣು ಮತಾಂಧ ಬಲಾತ್ಕಾರದ ಮತಾಂತರಗಳಲ್ಲಿ ತೊಡಗಿರುವಂತಹ ಆಕ್ರಮಕ ಮತೀಯರನ್ನು ಭಾರತೀಯ ಪರಂಪರೆಯಂತೆ ಬದುಕಲು ಕಲಿಯಿರಿ, ಎಲ್ಲರನ್ನು ಗೌರವಿಸಿ ಅಂತ ಹೇಳೋದು ಬಿಟ್ಟು ನಮ್ಮ ಬುದ್ಧಿಜೀವಿಗಳು ಸಹಿಷ್ಣುತೆಯ ಪಾಠವನ್ನು ಹಿಂದೂಗಳಿಗೇ ಹೇಳೋದು ಎಂಥಾ ವಿಡಂಬನೆ?
    ಹಿಂದೂ ಕೋಮುವಾದಿಯಾಗಲು ಸಾಧ್ಯವೇ ಇಲ್ಲ! ಹತ್ತು ಸಾವಿರ ವರ್ಷಗಳ ಹಿಂದೆ ದೀರ್ಘತಮಸ್ ಅನ್ನೋ ಋಷಿ ಹೇಳಿದ "ಏಕಂ ಸತ್ ವಿಪ್ರಾ: ಬಹುದಾ ವದಂತಿ " ಅನ್ನೋದನ್ನ ಅಕ್ಷರಷ: ಇಂದಿಗೂ ಪಾಲಿಸುತ್ತಿರುವ ಹಿಂದೂವಿಗೆ ಸಹಿಷ್ಣುತೆಯ ಪಾಠದ ಅಗತ್ಯವೇ ಇಲ್ಲ|| ಬಂಧುಗಳೇ ಹಿಂದೂ ಸಂಸ್ಕಾರದ ಬಲದಿಂದ ನಾನು ಹೆಮ್ಮೆಯಿಂದ ಹೇಳಬಲ್ಲೆ " ಅಕಸ್ಮಾತ್ ಏಸುಕ್ರಿಸ್ತ ಭಾರತದಲ್ಲಿ ಹುಟ್ಟಿರುತ್ತಿದ್ದರೆ ಆತನಿಗೆ ಅಂತ ಕ್ರೂರ ಸಾವು ಖಂಡಿತ ಬರುತ್ತಿರಲಿಲ್ಲ. ನಾನು ದೇವರ ಮಗ ಎಂದ ಆತನನ್ನು ಪಾಪಿಗಳು ಮೊಳೆ ಹೊಡೆದು ಸಾಯಿಸಿದರು!"
     ಆದರೆ ನಮ್ಮಲ್ಲೊಬ್ಬ ಇದ್ದ. ಅವನು ದೇವರೇ ಇಲ್ಲ ಅಂದ! ದೇವರಿಲ್ಲ, ಧರ್ಮವಿಲ್ಲ, ಸ್ವರ್ಗ,ನರಕ,ಪಾಪ,ಪುಣ್ಯಗಳಾವುವೂ ಇಲ್ಲ. ಎಲ್ಲಾ ಸುಳ್ಳು. ಎಷ್ಟು ದಿನ ಇರ್ತೀವಿ, ಸತ್ತ ಮೇಲೆ ಏನಾಗ್ತೀವೋ ಅನ್ನೋದೂ ಗೊತ್ತಿಲ್ಲ. ಇದ್ದಷ್ಟು ದಿನ ಚೆನ್ನಾಗಿರಿ ಎಂದ. ಅವನನ್ನು ಚಾರ್ವಾಕ ಅಂತ ಈ ದೇಶ ಗೌರವಿಸಿತು. ಅವನು ಹೇಳಿದ್ದೇನು?
     "ಯಾವಜ್ಜೀವಿ ಸುಖಂ ಜೀವಿ ಭಸ್ಮೀ ಭೂತಸ್ಯ ದೇಹಸ್ಯ ಆಗಮನಂ ಕೃತ: |
      ತಸ್ಮಾತ್ ಇರಣಂ ಕೃತ್ವಾ ಘೃತಂ ಪಿಭೇತ್ ||"
     ಸತ್ತ ಮೇಲೆ ದೇಹವನ್ನು ಸುಡ್ತಾರೆ ಅಥವಾ ಮಣ್ಣು ಮಾಡುತ್ತಾರೆ. ಆಮೇಲೆ ವಾಪಾಸು ಬರಲು ಹೇಗೆ ಸಾಧ್ಯ? ಅದಕ್ಕೋಸ್ಕರ ಚೆನ್ನಾಗಿ ಬದುಕುವುದನ್ನು ಕಲಿಯಿರಿ. ಹಣ ಇಲ್ಲದಿದ್ದರೆ ಸಾಲ ಮಾಡಿಯಾದರೂ ತುಪ್ಪ ತಿನ್ನಿ! ಇದ್ದಷ್ಟು ದಿನ ಚೆನ್ನಾಗಿರಿ ಎಂದ ಚಾರ್ವಾಕನನ್ನು ನಾವು ಕಲ್ಲು ಹೊಡೆದು ಸಾಯಿಸಲಿಲ್ಲ, ಋಷಿ, ಧೃಷ್ಥಾರ ಅಂತ ಗೌರವಿಸಿದೆವು!
      ಗೆಲಿಲಿಯೋ ಐದು ಶತಮಾನಗಳ ಹಿಂದೆ ಸ್ಥಿರ ಸೂರ್ಯನ ಸುತ್ತ ಭೂಮಿ ಸುತ್ತುತ್ತೆ ಅಂತ ವೈಜ್ಞಾನಿಕ ಸತ್ಯ ಹೇಳಿದ. ಚರ್ಚು ಜೈಲಿಗೆ ತಳ್ಳಿತು! ಅದಕ್ಕೂ ಸಾವಿರ ವರ್ಷಗಳ ಹಿಂದೆಯೇ ಆರ್ಯಭಟ ಇದೇ ಸತ್ಯವನ್ನು ಈ ನೆಲದಲ್ಲಿ ಹೇಳಿದ್ದ. ಸ್ಥಿರ ಸೂರ್ಯನ ಸುತ್ತ ಭೂಮಿ ಪ್ರದಕ್ಶಿಣೆ ಹಾಕುತ್ತಾ ಅಕ್ಷದ ಮೇಲೆ ಒಂದು ಸುತ್ತು ಹಾಕಿದಾಗ ಒಂದು ದಿನ ಆಗುತ್ತೆ. ಸುತ್ತುವಾಗ ಜರಗುತ್ತೆ. ಜರಗುತ್ತಾ, ಜರಗುತ್ತಾ ಸೂರ್ಯನಿಗೆ ಪ್ರದಕ್ಶಿಣೆ ಬರೋವಾಗ ಒಂದು ಸಂವತ್ಸರ ಆಗುತ್ತೆ ಎಂದಿದ್ದ. ಒಂದು ಪ್ರದಕ್ಶಿಣೆ ಹಾಕಲು ಅದು ತೆಗೆದು ಕೊಳ್ಳುವ ಸಮಯ ಎಷ್ಟು? ೩೬೫.೨೫೮೭೭೫೬೪೮೪ ಸೆಕೆಂಡುಗಳು ಅಂತ ಖಗೋಳ ವಿಜ್ಞಾನಿ ಸ್ಮಾರ್ಟ್ ಗಿಂತ ಮೊದಲೇ ಭಾಸ್ಕರಾಚಾರ್ಯ ಹೇಳಿದ್ದ. ಆರ್ಯಭಟ ಹಾಗೂ ಭಾಸ್ಕರಾಚಾರ್ಯರನ್ನು ಈ ಸಮಾಜ ಶಿಕ್ಷೆಗೆ ಗುರಿ ಪಡಿಸಲಿಲ್ಲ.ವಿಜ್ಞಾನಿಗಳು ಅಂತ ಗೌರವಿಸಿತು. ಇದನ್ನೆಲ್ಲಾ ಗಮನದಲ್ಲಿಟ್ಟುಕೊಂಡು ಹಿಂದೂ ಸಮಾಜದ ವಿಶ್ಲೇಷಣೆ ಮಾಡಬೇಕಾಗಿದೆ.
      ಬಂಧುಗಳೇ, ತಾಯಿ ಭಾರತಿ ದಕ್ಶಿಣದಲ್ಲಿ ಕನ್ಯಾಕುಮಾರಿಯಾಗಿ ಉತ್ತರಕ್ಕೆ ಹೊರಟು ಕೃಷ್ಣೆ, ಗೋದೆಯರಲಿ ಮಿಂದು, ವಿಂಧ್ಯನನು ಹತ್ತಿಳಿದು ಗಂಗೆ, ಯಮುನೆಯರನು ಕೊರಳಲ್ಲಿ ಬಳಸಿ, ಕೈಲಾಸವಾಸಿ ಶಂಕರನನ್ನು ಸೇರಿ ಅನ್ನಪೂರ್ಣೆಯಾಗಿ ನಮ್ಮನ್ನು ಒಳಗೊಂಡಂತೆ ಮನುಕುಲವನ್ನು ಸಲಹುತ್ತಿರುವಂತಹ ದಿವ್ಯ ಮಂಗಲ ದೃಶ್ಯವನ್ನು ಹೃದಯದಲ್ಲಿ ಧಾರಣೆ ಮಾಡಿಕೊಳ್ಳೋಣ........ವಂದೇ ಮಾತರಂ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ