ಪುಟಗಳು

ಸೋಮವಾರ, ಅಕ್ಟೋಬರ್ 15, 2012

ಭಾರತ ದರ್ಶನ-೧೦"ರತ್ನಾಕರಾಧೌತಪದಾಂ ಹಿಮಾಲಯ ಕಿರೀಟಿನೀಂ।
ಬ್ರಹ್ಮರಾಜರ್ಷಿ ರತ್ನಾಢ್ಯಾಂ ವಂದೇ ಭಾರತ ಮಾತರಂ॥"

೧. ಮಾನವನಿಗೆ ತಿಳಿದಿದ್ದ ಪ್ರಪ್ರಥಮ ಚಿಕಿತ್ಸಾಪದ್ದತಿ ಆಯುರ್ವೇದ. ಇದರ ಜನಕ ಚರಕ, ಗ್ರಂಥ ಚರಕಸಂಹಿತಾ.

೨. ಜಗತ್ತಿನ ಪ್ರಪ್ರಥಮ ವಿಶ್ವವಿದ್ಯಾಲಯ ಕ್ರಿ.ಪೂ. ೭೦೦ರಲ್ಲಿ ತಕ್ಷಶಿಲೆಯಲ್ಲಿ ಸ್ಥಾಪಿಸಲಾಯಿತು. ಪ್ರಪಂಚದ ವಿವಿದೆಡೆಯಿಂದ ೧೦,೫೦೦ ವಿಧ್ಯಾರ್ಥಿಗಳು, ೬೦ಕ್ಕೂ ಹೆಚ್ಚು ವಿಷಯಗಳನ್ನು ಕಲಿಯುತ್ತಿದ್ದರು.

೩. ನೌಕಾಯಾನದ ಕಲೆ ವೇದಕಾಲದಲ್ಲೇ ಪ್ರಚಲಿತದಲ್ಲಿತ್ತು.(ವಿವರಣೆ ಮುಂದಿನ ಭಾಗದಲ್ಲಿ) ನ್ಯಾವಿಗೇಷನ್ ಪದ ಸಂಸ್ಕೃತದ 'ನವಗತಿ' ಪದದಿಂದ ಉತ್ಪತ್ತಿಯಾಗಿದೆ. ಅಂತೆಯೇ ನೇವಿ ಪದ ಸಂಸ್ಕೃತದ 'ನೌ' ಶಬ್ಧದಿಂದ ಹುಟ್ಟಿದೆ.

೪. 1896ನೇ ಇಸವಿಯವರೆಗೇ ಭಾರತ ರತ್ನಗಳ ಏಕಮಾತ್ರ ಆಗರವಾಗಿತ್ತು.

೫. ವೈರ್ ಲೆಸ್ ತಂತ್ರಜ್ಞಾನವನ್ನು ಕಂಡುಹಿಡಿದವರು ಜಗದೀಶ ಚಂದ್ರ ಬೋಸರೇ ಹೊರತು ಮಾರ್ಕೋನಿಯಲ್ಲ ಎಂದು IEEE ಧೃಢಪಡಿಸಿದೆ.

೬. ಶಸ್ತ್ರಚಿಕಿತ್ಸೆಯ ಜನಕ ಸುಶ್ರುತ. ಆಗಿನ ಕಾಲದಲ್ಲಿಯೇ ಸಿಜೇರಿಯನ್, ಕಣ್ಣಿನ ಪೊರೆಯ ಶಸ್ತ್ರಚಿಕಿತ್ಸೆ, ಕೃತಕ ಅಂಗಜೋಡಣೆ, ಮೂಳೆ ಮುರಿತ, ಮೂತ್ರಕೋಶದ ಕಲ್ಲುಗಳು, ಪ್ಲಾಸ್ಟಿಕ್ ಸರ್ಜರಿ, ಮೆದುಳಿನ ಶಸ್ತ್ರಚಿಕಿತ್ಸೆಗಳನ್ನೂ ಮಾಡುತ್ತಿದ್ದರು. ಅನಸ್ತೇಶಿಯಾ, 125ಕ್ಕೂ ಹೆಚ್ಚು ಶಲ್ಯಚಿಕಿತ್ಸೆಯ ಶಸ್ತ್ರಗಳನ್ನು ಅವರು ಉಪಯೋಗಿಸುತ್ತಿದ್ದರು. ಶರೀರಶಾಸ್ತ್ರ, ಜಂತು-ವನಸ್ಪತಿ,....ಗಳಿಗೆ ಸಂಬಧಿಸಿದ ಅನೇಕ ಉಲ್ಲೇಖಗಳೂ, ಗ್ರಂಥಗಳೂ ಇವೆ.

೭. ವ್ಯವಸಾಯಕ್ಕಾಗಿ ಜಲಾಶಯ ಅಣೆಕಟ್ಟುಗಳ ನಿರ್ಮಾಣ ಪ್ರಥಮ ಬಾರಿಗೆ ಆದದ್ದು ಸೌರಾಷ್ಟ್ರದಲ್ಲಿ.

೮. ಕ್ರಿ.ಪೂ. 150ರಲ್ಲಿದ್ದ ಶಕರ ದೊರೆ ಪ್ರಥಮ ರುದ್ರಮಾನನ ಪ್ರಕಾರ ರೈವತಕ ಪರ್ವತದಲ್ಲಿ 'ಸುದರ್ಶನ' ಎಂಬ ಕೊಳವನ್ನು ಚಂದ್ರಗುಪ್ತ ಮೌರ್ಯನ ಕಾಲದಲ್ಲಿ ಕಟ್ಟಲಾಗಿತ್ತು.

೯. ಚದುರಂಗ( ಚೆಸ್, ಶತರಂಜ್, ಅಷ್ಟಪಾದ)ದ ಮೂಲಸ್ಥಾನ ಭಾರತ.

೧೦. ವಿಮಾನಶಾಸ್ತ್ರದ ಜನಕ ಮಹರ್ಷಿ ಭಾರಧ್ವಾಜ. ಇದರಲ್ಲಿ ವಿಮಾನಕ್ಕಾಗಿ ಉಪಯೋಗಿಸಬಹುದಾದ ವಿವಿಧ ಇಂಧನಗಳು, ಅವುಗಳನ್ನು ತಯಾರಿಸುವ ವಿಧಾನ, ವಿವಿಧ ಗಾತ್ರದ, ವೇಗದ, ಇಂಧನ ಕ್ಷಮತೆಯ ವಿಮಾನಗಳ ತಯಾರಿಕಾ ವಿಧಾನಗಳು ಇವೆ. ಇದೇ ಗ್ರಂಥದ ಆಧಾರದಲ್ಲಿ ಆನೇಕಲ್ ಸುಬ್ರಾಯಭಟ್ಟರ ಮಾರ್ಗದರ್ಶನದಲ್ಲಿ ಮಹಾರಾಷ್ಟ್ರದಲ್ಲಿ ತಲ್ಪಾಡೆ ದಂಪತಿಗಳು 1896ರಲ್ಲಿ ವಿಮಾನ ರಚಿಸಿ ಯಶಸ್ವಿ ವಿಮಾನ ಹಾರಾಟ ನಡೆಸಿದ್ದರು. ಇದಕ್ಕೆ ಮಹಾದೇವ ಗೋವಿಂದ ರಾನಡೆ ಹಾಗೂ ಗಾಯಕ್ವಾಡಿನ ಮಹಾರಾಜ ಸಾಕ್ಷಿಯಾಗಿದ್ದರು. ಆದರೆ ಪತ್ನಿಯ ಸಾವಿನ ನಂತರ ತಲ್ಪಾಡೆ ತಮ್ಮ ಸಂಶೋಧನೆಯಿಂದ ವಿಮುಖರಾದಾಗ ಈ ತಂತ್ರಜ್ಞಾನ ಬ್ರಿಟಿಷರ ಕುತಂತ್ರದಿಂದ ರೈಟ್ ಬ್ರದರ್ಸ್ ಗೆ ಸೇರಿ 1922ರಲ್ಲಿ ಅವರು ಈ ಸಂಶೋಧನೆಯ ಒಡೆಯರೆನಿಸಿಕೊಂಡರು.
-ಇನ್ನೂ ಇದೆ!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ