ಪುಟಗಳು

ಮಂಗಳವಾರ, ಜುಲೈ 24, 2012

ಮರೆತು ಹೋದ ಮಹಾವೀರ.....!

ನ್ಯಾಯಾಧೀಶ ಕೇಳುತ್ತಿದ್ದಾನೆಃ ನೀನು ಸಬ್ ಇನ್ಸ್ಪೆಕ್ಟರ್ಗೆ ಕಲ್ಲಿಂದ ಹೊಡೆದೆಯಾ?
"ಹೌದು..." ಹುಡುಗ ಉತ್ತರಿಸಿದ..
"ನಾನು ತಪ್ಪು ಮಾಡಿದೆನೆಂದು ಅನಿಸುತ್ತದೆ...
ಕಲ್ಲಿಂದ ಹೊಡೀಬಾರದಿತ್ತು... ಲಾಠಿಯಿಂದ ಅವನ ತಲೆ ಒಡೆದು ಹಾಕಬೇಕಿತ್ತು. ಪೂಜ್ಯ ಶಂಕರಾನಂದರನ್ನು ಸಾಯಬಡಿದ ಅವನನ್ನು, ನನ್ನ ಕೈಯಲ್ಲಿ ಪಿಸ್ತೂಲ್ ಇದ್ದರೆ ಗುಂಡಿಟ್ಟು ಸಾಯಿಸುತ್ತಿದ್ದೆ!"
"ಏಯ್ ಇದು ನ್ಯಾಯಾಲಯ ಸರಿಯಾಗಿ ಮಾತಾಡು"
"ಹಾಂ ಇದು ನ್ಯಾಯದೇವತೆಗೆ ನೇಣು ಹಾಕೋ ಅನ್ಯಾಯಾಲಯ"
"ಮುಚ್ಚುಬಾಯಿ! ನಿನ್ನ ಹೆಸರೇನು?"
ಕ್ಷಣ ಯೋಚಿಸಿ
"ಆಜಾದ್...!" ವಂದೇ ಮಾತರಂ ಮಾರ್ಧನಿಸಿತು!
"ನಿನ್ನ ಅಪ್ಪನ ಹೆಸರು...?"
"ಸ್ವಾಧೀನತೆ!"
"ನಿನ್ನ ಮನೆ ಎಲ್ಲಿ?"
"ನನ್ನ ಮನೆ... ಸೆರೆಮನೆ!"
ಸಿಟ್ಟಿಗೆದ್ದ ನ್ಯಾಯಾಧೀಶ 12 ಛಡಿ ಏಟುಗಳ ಶಿಕ್ಷೆ ವಿಧಿಸಿದ.
3 ಅಡಿ ಉದ್ದದ ಹುಡುಗನಿಗೆ ಅಡಿಗೆ ನಾಲ್ಕರಂತೆ 12 ಛಡಿ ಏಟು!
ಆದರೆ ಹುಡುಗ ಹೇಳುತ್ತಾನೆ."ಮ್ಯಾಜಿಸ್ಟ್ರೇಟರೆ ಬೇಕಾದರೆ ಇನ್ನೂ ಹೆಚ್ಚೇ ಕೊಡಿ"
ದೃಷ್ಟಾರ ವಿದ್ಯಾನಂದ ಶೆಣೈಯವರ ಆ ಕಂಚಿನ ಕಂಠ ಆಲಿಸುತ್ತಿದ್ದರೆ ಅದೇನೋ ರೋಮಾಂಚನ!
ಮುಂದೆ ಜೈಲಿನ ನಿಯಮದಂತೆ ಕೊಟ್ಟ 3ಆಣೆಯನ್ನು ಜೈಲರನ ಮುಖಕ್ಕೆಸೆದ ಬಾಲಕ
"ಮೈ ಆಜಾದ್ ಹೂಂ! ಆಜಾದ್ ಹೀ ರಹೂಂಗಾ...ಆಜಾದ್ ಹೀ ಮರೂಂಗಾ"
ಎಂಬ ಭೀಷಣ ಪ್ರತಿಜ್ಞೆ ಮಾಡುತ್ತಾನೆ!
ಹೀಗೆ ಚಂದ್ರಶೇಖರ ತಿವಾರಿ ಆಜಾದ್ ಆದ!
ವೇಶ್ಯೆಯೊಬ್ಬಳು ಮಹಡಿಯೊಂದರಲ್ಲಿ ಬಂಧಿಸಿ ಕಾಮಿಸಬಯಸಿದಾಗ ಆ ಮೂರನೇ ಮಹಡಿಯ ಕಿಟಕಿಯಿಂದ ಹಾರಿ ಹೋದ ಅಖಂಡ ಬ್ರಹ್ಮಚಾರಿ!(ಬ್ರಹ್ಮಚರ್ಯವೆಂದರೆ ಇದು!ನಗ್ನ ಹುಡುಗಿಯರೊಡನೆ ಬೆತ್ತಲೆ ಮಲಗುವುದಲ್ಲ!)
ಅದೆಷ್ಟೋ ಕಷ್ಟನಷ್ಟಗಳು ಬಂದಾಗಲೂ ತನ್ನ ಪ್ರತಿಜ್ಞೆ ಮರೆಯದ ಭೀಷ್ಮ!
ಪಂಡಿತ ರಾಮಪ್ರಸಾದ ಬಿಸ್ಮಿಲರ ಪ್ರೀತಿಯ ಶಿಷ್ಯನಾಗಿ, ಭಗತ್ ಸಿಂಗ್ ಮುಂತಾದವರಿಗೆ ನಾಯಕನಾಗಿ ತನ್ನೊಂದಿಗಿದ್ದವರೆಲ್ಲ ವೀರ ಸ್ವರ್ಗವನ್ನಪ್ಪಿದ ನಂತರವೂ ತಾತ್ಯಾಟೋಪೆಯಂತೆ ಏಕಾಂಗಿಯಾಗಿ ಹೋರಾಡಿದ ಮಹಾಪ್ರತಾಪಿ!
ಸಾವಿನಲ್ಲೂ ಪ್ರತಿಜ್ಞೆ ಉಳಿಸಿಕೊಂಡ ಪ್ರಳಯರುದ್ರ!
ತನ್ನ ದೇಶವಾಸಿಗಳಿಂದಲೇ ಅನಾದರಣೆಗೊಳಗಾಗಿ ಮರೆತು ಹೋದ ಮಹಾವೀರ!
"ಹೃದಯ ಮಿಡಿಯುತಿದೆ
ರೋಮ ನಿಮಿರಿ ನಿಂತಿದೆ
ಕಂಬನಿ ಹರಿಯುತಿದೆ
ಎದೆ ತಹತಹಿಸುತಿದೆ
ಮನವು ನಿನ್ನ ಬಾ ಎನ್ನುತಿದೆ
ಜೀವ ಕಾಯುತಿದೆ
ಬರುವೆಯಾ ಓ ಧೀರ!"

ಭಾನುವಾರ, ಜುಲೈ 22, 2012

ಧರ್ಮ ಸತ್ತು ಬಿದ್ದಿತ್ತು.....!



ಆತ ವಿನಯದಿಂದ ವಿದ್ವತ್ಪೂರ್ಣವಾಗಿ ತನ್ನ ವಾದ ಮಂಡಿಸುತ್ತಿದ್ದ...
"ಧರ್ಮ ನಶಿಸುತ್ತಿದೆ.ಕೃತದಲ್ಲಿ ಧರ್ಮಕ್ಕೆ ನಾಲ್ಕು ಕಾಲು. ತ್ರೇತೆಯಲ್ಲಿ ಮೂರು,ದ್ವಾಪರದಲೆರಡು ಮತ್ತು ಕಲಿಯುಗದೊಳೊಂದು..."

ಆಗೊಬ್ಬ ಹೇಳಿದ: ನೀನು ಹೇಳುವುದೆಲ್ಲ ಗೊಡ್ಡು ಪುರಾಣ. ಹೊರಗಿಂದ ಮತಗಳೇ ಧರ್ಮ. ಅವುಗಳ ಆಚರಣೆಯೇ ಧರ್ಮ.ಸನಾತನ ಎಂಬುದೊಂದು ಇಲ್ಲ.....
ಧರ್ಮದ ಒಂದು ಕಾಲು ಮುರಿಯಿತು!

ಆಗಿಬ್ಬರು ಬಂದು ಮೊದಲಿನ ಪಂಡಿತನನ್ನು ಬೆದರಿಸಿ ಎರಡನೆಯವ ಹೇಳಿದ್ದೆ ಸರಿ ಎಂದು ವಾದಿಸತೊಡಗಿದರು ಮಾತ್ರವಲ್ಲ ಪ್ರಚಾರಕ್ಕೂ ತೊಡಗಿದರು!
ಧರ್ಮದ ಎರಡನೆ ಕಾಲು ಮುರಿಯಿತು!

ಪಂಡಿತನ ವಿರುದ್ಧ ಅಪಪ್ರಚಾರ ಪ್ರತಿಭಟನೆಗಳು ನಡೆದವು!
ಮೂರನೇ ಕಾಲೂ ಮುರಿಯಲ್ಪಟ್ಟಿತು!

ಪಂಡಿತನ ಮೇಲೆ ಮಾರಣಾಂತಿಕ ಹಲ್ಲೆ ನಡೆಯಿತು. ಪಂಡಿತನ ಜೊತೆಗಿದ್ದವರೂ ದೂರಾದರು ಮತ್ತು ವಿರುದ್ಧ ಮಾತಾಡಲಾರಂಭಿಸಿದರು!

ಧರ್ಮ ಸತ್ತು ಬಿದ್ದಿತ್ತು!

ಮಂಗಳವಾರ, ಜುಲೈ 17, 2012

ಫೆಸಿಫಿಕ್ ನಿಂದ ಅಟ್ಲಾಂಟದವರೆಗೆ 500 ವರ್ಷಗಳ ಕಾಲ ರಕ್ತದ ಕೋಡಿಯೇ ಹರಿಯಿತು.....

ಸ್ವಾಮಿ ವಿವೇಕಾನಂದರ ಮಾತನ್ನು ಕೇಳಿ:
"ದೇವದೂತ ಗ್ರೇಬ್ರಿಯಲ್ ಒಂದು ದಿನ ಗುಹೆಯಲ್ಲಿ ತನ್ನ ಬಳಿ ಬಂದುದಾಗಿಯೂ, ದಿವ್ಯಾಶ್ವವಾದ ಹರಾಕ್ ಮೇಲೆ ತನ್ನನ್ನು ಕರೆದೊಯ್ದಿದ್ದಾಗಿಯೂ, ತಾನು ಸ್ವರ್ಗಕ್ಕೆ ಭೇಟಿ ನೀಡಿದ್ದಾಗಿಯೂ ಮಹಮ್ಮದ್ ತಿಳಿಸಿದ್ದಾರೆ.ನೀವು ಕುರಾನ್ ಓದಿದರೆ ಅಚ್ಚರಿಯ ಸತ್ಯಗಳು ಅಂಧವಿಶ್ವಾಸದೊಂದಿಗೆ ಮಿಶ್ರಣವಾದುದನ್ನ ಕಾಣುವಿರಿ. ನೀವದನ್ನು ಹೇಗೆ ವಿವರಿಸುತ್ತೀರಿ? ಅವರು ಪ್ರೇರಣೆ ಪಡೆದಿದ್ದಲ್ಲ. ಆಕಸ್ಮಿಕವಾಗಿ ಸಿಕ್ಕಿದ್ದು, ಅವರು ತರಬೇತಿ ಪಡೆದ ಯೋಗಿಯಲ್ಲ.ತಾವು ಮಾಡುತ್ತಿರುವ ಬಗ್ಗೆ ಅವರಿಗೆ ವಿವರಣೆ ತಿಳಿದಿರಲಿಲ್ಲ. ಮಹಮ್ಮದ್ ರಿಂದ ಜಗತ್ತಿಗೆ ಆದ ಒಳ್ಳೆಯದು ಮತ್ತು ಮತಾಂಧತೆಯಿಂದ ಆದ ಮಹಾ ಕೆಡುಕುಗಳ ಬಗ್ಗೆ ಚಿಂತಿಸಿ. ಅವರ ಭೋದನೆಗಳಿಂದ ಲಕ್ಷಾಂತರ ಜನರು ಸಾಮೂಹಿಕ ಕಗ್ಗೊಲೆಯಾದುದರ ಬಗ್ಗೆ ಮಕ್ಕಳಿಂದ ವಿಯೋಗ ಹೊಂದಿದ ತಾಯಂದಿರು, ಅನಾಥರಾದ ಮಕ್ಕಳು,ಅತ್ಯಾಚಾರಕ್ಕೊಳಗಾದ ಮಾನಿನಿಯರು, ಇಡೀ ದೇಶಗಳು ನಾಶವಾದ ಬಗ್ಗೆ ಯೋಚಿಸಿ.
ಎಲ್ಲ ಕಾಲ ಮತ್ತು ದೇಶಗಳಲ್ಲಿ ಮಹಾನ್ ಆಧ್ಯಾತ್ಮಿಕ ವ್ಯಕ್ತಿಗಳು ಒಬ್ಬರಿಗಿಂತ ಒಬ್ಬರು ಭಿನ್ನರಲ್ಲ. ನೈಜ ಧರ್ಮವಿರುವಲ್ಲಿ ದೈವಿಕ ಜ್ಯೋತಿ ವಿಶಾಲ ಮನಸ್ಸನ್ನು ಕಾಣುತ್ತೇವೆ. ಇದರಿಂದ ಎಲ್ಲೆಡೆ ಬೆಳಕು ಕಾಣಲು ಸಾಧ್ಯವಾಗುತ್ತದೆ. ಈ ವಿಷಯದಲ್ಲಿ ಮುಸ್ಲಿಮರು ಅಪಕ್ವರು ಮತ್ತು ಭಿನ್ನ ವರ್ಗದವರು. ಒಬ್ಬನೇ ದೇವರು ಅದಕ್ಕಿಂತ ಮೀರಿದ್ದು ಕೆಟ್ಟದ್ದು ಮತ್ತದನ್ನು ನಂಬುವವರನ್ನು ನಾಶ ಮಾಡಬೇಕು ಬೇರೆಯವರ ಧರ್ಮಗ್ರಂಥಗಳನ್ನು ಸುಡಬೇಕು. ಫೆಸಿಫಿಕ್ ನಿಂದ ಅಟ್ಲಾಂಟದವರೆಗೆ 500 ವರ್ಷಗಳ ಕಾಲ ರಕ್ತದ ಕೋಡಿಯೇ ಹರಿಯಿತು ಅದು ಮಹಮ್ಮದೀಯರ ಧರ್ಮ!

ದುಂಬಿ ಚುಂಬಿಸ ಹೊರಟಿದೆ!

ಮಳೆಯ ಹನಿಯದು ಇಳೆಯ ಚುಂಬಿಸೆ
ಪುಳಕಗೊಂಡುದು ಧಾರಿಣಿ
ವರ್ಷಧಾರೆಯ ಸೊಬಗ ಈಕ್ಷಿಸೆ
ಹರುಷಗೊಂಡುದು ಜನಮಣಿ॥
ಪಕ್ಷಿವೃಂದವು ಗೂಡ ಸೇರಿರೆ
ಶಿಖಿಯು ಗರಿಯ ಬಿಚ್ಚಿದೆ
ಬಿಂದು ಸೋಕಲು ಸುಮವು ಪರವಶ
ದುಂಬಿ ಚುಂಬಿಸ ಹೊರಟಿದೆ॥
ಮೇಘನಾದವು ಕುಂಭದ್ರೋಣವು
ಒಡಲ ಜ್ವಾಲೆಯು ಕರಗಿರೆ
ಪ್ರೀತಿ ಬುಗ್ಗೆ ನಡೆಯು ಲಜ್ಜೆ
ಜಗವ ವಿಹರಿಸ ಹೊರಟಿದೆ॥
ಪಕ್ಷಿ ಕೊರಳೊಳು ನಾದ ಹೊರಟಿರೆ
ಪೂರ್ಣಗೊಂಡುದು ಸಪ್ತಸ್ವರ
ಗಾನ ಲೀಲೆಯು ಮನಕೆ ಮೋಡಿಯು
ಎದ್ದು ಹೊರಟಿದೆ ಸುಪ್ತಸ್ವರ॥
ಇರುವೆ ಸಾಲದು ಎದ್ದು ಹೊರಟಿದೆ
ಶಿಸ್ತುಸಂಯಮ ಮಿಳಿತದಿ
ಇಂದುಧರನೆ ಪೊರೆಯಲೆನುತ
ಯೋಗಿ ಮುಳುಗಿದ ಜೋಗದಿ॥

ಗುರುವಾರ, ಜುಲೈ 12, 2012

ತಂತ್ರ.....ಪಾರತಂತ್ರ್ಯ.....ಜೀತ


ತಂತ್ರ.....ಪಾರತಂತ್ರ್ಯ.....ಜೀತ

ಕೇವಲ ಆಚಾರ, ವಿಚಾರ,ಮಾತು,ಕ್ರಿಯೆ,ಮಾನಸಿಕತೆ ಮಾತ್ರವಲ್ಲ...ಹೆಸರುಗಳೂ ಮತಾಂತರ ಹೊಂದಿದವು...
ದುರ್ಜಯಲಿಂಗ ಡಾರ್ಜಲಿಂಗ್ ಆಯ್ತು..
ಪ್ರಯಾಗ ಅಲಹಬಾದ್ ಆಯ್ತು...
ಇಂದ್ರಪ್ರಸ್ಥ ದಿಲ್ಲಿ ಆಗೋಯ್ತು...
ಕನ್ನಡ ಕೆನರಾ ಆಯ್ತು...ಭಾಗ್ಯನಗರ ಹೈದರಾಬಾದ್ ಆಗಿ ನಲುಗಿತು..ದ್ರೋಣಧಾರಾ ಡೆಹರಾಡೂನ್ ಆಗಿ ಬದಲಾಯಿತು...
ರಾಮಸೇತು...ಆಡಮ್ ಸೇತುವೆ ಆಗಿ ಮುಳುಗೋಯ್ತು
ಜಗತ್ತಿನ ಅತೀ ಎತ್ತರದ ಶಿಖರ ಸಾಗರ ಮಾತಾ ಮೌಂಟ್ ಎವರೆಷ್ಟ್ ಆಗಿ ಕುಬ್ಜವಾಯ್ತು...
ತರಣಿಯ ಕಿರಣ ಉಣಿಸಿದಾಗ ಚಿನ್ನದ ಬಣ್ಣದಲಿ ಕುಣಿಯುವ ಕಾಂಚನ ಗಂಗಾ..ಕಾಂಚನಜುಂಗಾ ಆಗಿ ದಂಗಾಯಿತು....
ಬ್ರಹ್ಮ ದೇಶ -ಮ್ಯಾನ್ ಮಾರ್ , ಗಾಂಧಾರ-ಅಫ್ಘಾನಿಸ್ತಾನ, ಲವಪುರ-ಲಾಹೋರ್,ಪ್ರಹ್ಲಾದ ನಗರಿ- ಮುಲ್ತಾನ್ ಗಳಾದವು..
ಕೊಡಗು ಕೂರ್ಗ್ ಆಗಿ ಕುಳ್ಳಗಾಯಿತು
ಸಿಂಧು ಅಂದರೆ ಪವಿತ್ರ ಎಂದರ್ಥ...ಆದರೆ ಇಂಡಸ್ ಆಗಿ ಮಂಡಿಯೂರಿತು...
ವಂಗ-ಬೆಂಗಾಲ್, ಕಾಶಿ-ಮಹಮ್ಮದಬಾದ್,ಇನ್ನೂ ಏನೇನೋ....ಅಬ್ಬಬ್ಬಾ....
ಮನೆ ಮನೆಗೂ ಹಬ್ಬಿತು...ಅಪ್ಪ ಡ್ಯಾಡ್ ಆದ...ಅಮ್ಮ ಮಮ್ಮಿ ಆಗಿ ಶವವಾದಳು...ಜೀವಚ್ಛವವಾದಳು....
ಅಮ್ಮಾ....

ಗುರುವಾರ, ಜುಲೈ 5, 2012

ಉಳಿದ ವೇದನೆ.....



ಋಷಿ ಮುನಿ ಪೂಜಿತ ಸುಮನಸ ವಂದಿತ
ಸುಮನಯ ಪಾದ ಪದ್ಮ।
ಇನಕುಲ ಪಾಲಿತ ಶಶಿಕುಲ ಪೋಷಿತ
ಸಿರಿವರ ರಾಜಪದ್ಮ॥
ಸಾತ್ವಿಕ ಶಕ್ತಿ ತಾತ್ವಿಕ ಪ್ರೇರಣಾ
ಅಚ್ಚಳಿಯ ನಿಚ್ಚಳ ಪ್ರಭಾವ।
ಭಗವದ್ಗೀತ ಜೀವನ ಧರ್ಮ
ದುಷ್ಟ ಶಿಕ್ಷಣ ಶಿಷ್ಟ ರಕ್ಷಣ॥
ಹಿಂಗದ ದಾಹ ಇಂಗಿದ ತ್ಯಾಗ
ದಾಸ್ಯ ಶೃಂಖಲಾ ತನುಮನ ತಳಮಳ।
ಬಂಧಿತ ಮನಸು ಕುಂದಿತು ತಿನಿಸು
ಸಂಸ್ಕೃತಿ ಮರೆಸುವ ಷಡ್ಯಂತ್ರ ರೂಪಿತ॥
ಅರಿವಿನ ತೋರಣ ರುಧಿರದ ಸಿಂಚನ
ಸ್ವಾತಂತ್ರ್ಯದ ಪರಮಾನ್ನ।
ಮುಕುಲಿತ ನಯನ ವಿಕಸಿತ ವದನ
ಗರಿಗೆದರಿತು ಸ್ವಾಭಿಮಾನ॥
ಮರೆತಿರೆ ಸಂಸ್ಕೃತಿ ಅಳಿದಿದೆ ಸುಕೃತಿ
ಜಾತ್ಯಾತೀತತೆ ಸೋಗು ಜಾತಿಯ ಪೀಡೆ।
ಬೌದ್ಧಿಕ ದಾಸ್ಯ ಇತಿಹಾಸದ ಶೋಷಣೆ
ಗೃಹಬಂಧನ ಕಾರಣ ಉಳಿದಿದೆ ವೇದನೆ॥