ತಂತ್ರ.....ಪಾರತಂತ್ರ್ಯ.....ಜೀತ
ಕೇವಲ ಆಚಾರ, ವಿಚಾರ,ಮಾತು,ಕ್ರಿಯೆ,ಮಾನಸಿಕತೆ ಮಾತ್ರವಲ್ಲ...ಹೆಸರುಗಳೂ ಮತಾಂತರ ಹೊಂದಿದವು...
ದುರ್ಜಯಲಿಂಗ ಡಾರ್ಜಲಿಂಗ್ ಆಯ್ತು..
ಪ್ರಯಾಗ ಅಲಹಬಾದ್ ಆಯ್ತು...
ಇಂದ್ರಪ್ರಸ್ಥ ದಿಲ್ಲಿ ಆಗೋಯ್ತು...
ಕನ್ನಡ ಕೆನರಾ ಆಯ್ತು...ಭಾಗ್ಯನಗರ ಹೈದರಾಬಾದ್ ಆಗಿ ನಲುಗಿತು..ದ್ರೋಣಧಾರಾ ಡೆಹರಾಡೂನ್ ಆಗಿ ಬದಲಾಯಿತು...
ರಾಮಸೇತು...ಆಡಮ್ ಸೇತುವೆ ಆಗಿ ಮುಳುಗೋಯ್ತು
ಜಗತ್ತಿನ ಅತೀ ಎತ್ತರದ ಶಿಖರ ಸಾಗರ ಮಾತಾ ಮೌಂಟ್ ಎವರೆಷ್ಟ್ ಆಗಿ ಕುಬ್ಜವಾಯ್ತು...
ತರಣಿಯ ಕಿರಣ ಉಣಿಸಿದಾಗ ಚಿನ್ನದ ಬಣ್ಣದಲಿ ಕುಣಿಯುವ ಕಾಂಚನ ಗಂಗಾ..ಕಾಂಚನಜುಂಗಾ ಆಗಿ ದಂಗಾಯಿತು....
ಬ್ರಹ್ಮ ದೇಶ -ಮ್ಯಾನ್ ಮಾರ್ , ಗಾಂಧಾರ-ಅಫ್ಘಾನಿಸ್ತಾನ, ಲವಪುರ-ಲಾಹೋರ್,ಪ್ರಹ್ಲಾದ ನಗರಿ- ಮುಲ್ತಾನ್ ಗಳಾದವು..
ಕೊಡಗು ಕೂರ್ಗ್ ಆಗಿ ಕುಳ್ಳಗಾಯಿತು
ಸಿಂಧು ಅಂದರೆ ಪವಿತ್ರ ಎಂದರ್ಥ...ಆದರೆ ಇಂಡಸ್ ಆಗಿ ಮಂಡಿಯೂರಿತು...
ವಂಗ-ಬೆಂಗಾಲ್, ಕಾಶಿ-ಮಹಮ್ಮದಬಾದ್,ಇನ್ನೂ ಏನೇನೋ....ಅಬ್ಬಬ್ಬಾ....
ಮನೆ ಮನೆಗೂ ಹಬ್ಬಿತು...ಅಪ್ಪ ಡ್ಯಾಡ್ ಆದ...ಅಮ್ಮ ಮಮ್ಮಿ ಆಗಿ ಶವವಾದಳು...ಜೀವಚ್ಛವವಾದಳು....
ಅಮ್ಮಾ....
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ