ಪುಟಗಳು

ಮಂಗಳವಾರ, ಜುಲೈ 17, 2012

ದುಂಬಿ ಚುಂಬಿಸ ಹೊರಟಿದೆ!

ಮಳೆಯ ಹನಿಯದು ಇಳೆಯ ಚುಂಬಿಸೆ
ಪುಳಕಗೊಂಡುದು ಧಾರಿಣಿ
ವರ್ಷಧಾರೆಯ ಸೊಬಗ ಈಕ್ಷಿಸೆ
ಹರುಷಗೊಂಡುದು ಜನಮಣಿ॥
ಪಕ್ಷಿವೃಂದವು ಗೂಡ ಸೇರಿರೆ
ಶಿಖಿಯು ಗರಿಯ ಬಿಚ್ಚಿದೆ
ಬಿಂದು ಸೋಕಲು ಸುಮವು ಪರವಶ
ದುಂಬಿ ಚುಂಬಿಸ ಹೊರಟಿದೆ॥
ಮೇಘನಾದವು ಕುಂಭದ್ರೋಣವು
ಒಡಲ ಜ್ವಾಲೆಯು ಕರಗಿರೆ
ಪ್ರೀತಿ ಬುಗ್ಗೆ ನಡೆಯು ಲಜ್ಜೆ
ಜಗವ ವಿಹರಿಸ ಹೊರಟಿದೆ॥
ಪಕ್ಷಿ ಕೊರಳೊಳು ನಾದ ಹೊರಟಿರೆ
ಪೂರ್ಣಗೊಂಡುದು ಸಪ್ತಸ್ವರ
ಗಾನ ಲೀಲೆಯು ಮನಕೆ ಮೋಡಿಯು
ಎದ್ದು ಹೊರಟಿದೆ ಸುಪ್ತಸ್ವರ॥
ಇರುವೆ ಸಾಲದು ಎದ್ದು ಹೊರಟಿದೆ
ಶಿಸ್ತುಸಂಯಮ ಮಿಳಿತದಿ
ಇಂದುಧರನೆ ಪೊರೆಯಲೆನುತ
ಯೋಗಿ ಮುಳುಗಿದ ಜೋಗದಿ॥

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ