ಪುಟಗಳು

ಗುರುವಾರ, ಜುಲೈ 5, 2012

ಉಳಿದ ವೇದನೆ.....



ಋಷಿ ಮುನಿ ಪೂಜಿತ ಸುಮನಸ ವಂದಿತ
ಸುಮನಯ ಪಾದ ಪದ್ಮ।
ಇನಕುಲ ಪಾಲಿತ ಶಶಿಕುಲ ಪೋಷಿತ
ಸಿರಿವರ ರಾಜಪದ್ಮ॥
ಸಾತ್ವಿಕ ಶಕ್ತಿ ತಾತ್ವಿಕ ಪ್ರೇರಣಾ
ಅಚ್ಚಳಿಯ ನಿಚ್ಚಳ ಪ್ರಭಾವ।
ಭಗವದ್ಗೀತ ಜೀವನ ಧರ್ಮ
ದುಷ್ಟ ಶಿಕ್ಷಣ ಶಿಷ್ಟ ರಕ್ಷಣ॥
ಹಿಂಗದ ದಾಹ ಇಂಗಿದ ತ್ಯಾಗ
ದಾಸ್ಯ ಶೃಂಖಲಾ ತನುಮನ ತಳಮಳ।
ಬಂಧಿತ ಮನಸು ಕುಂದಿತು ತಿನಿಸು
ಸಂಸ್ಕೃತಿ ಮರೆಸುವ ಷಡ್ಯಂತ್ರ ರೂಪಿತ॥
ಅರಿವಿನ ತೋರಣ ರುಧಿರದ ಸಿಂಚನ
ಸ್ವಾತಂತ್ರ್ಯದ ಪರಮಾನ್ನ।
ಮುಕುಲಿತ ನಯನ ವಿಕಸಿತ ವದನ
ಗರಿಗೆದರಿತು ಸ್ವಾಭಿಮಾನ॥
ಮರೆತಿರೆ ಸಂಸ್ಕೃತಿ ಅಳಿದಿದೆ ಸುಕೃತಿ
ಜಾತ್ಯಾತೀತತೆ ಸೋಗು ಜಾತಿಯ ಪೀಡೆ।
ಬೌದ್ಧಿಕ ದಾಸ್ಯ ಇತಿಹಾಸದ ಶೋಷಣೆ
ಗೃಹಬಂಧನ ಕಾರಣ ಉಳಿದಿದೆ ವೇದನೆ॥

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ