ಆತ ವಿನಯದಿಂದ ವಿದ್ವತ್ಪೂರ್ಣವಾಗಿ ತನ್ನ ವಾದ ಮಂಡಿಸುತ್ತಿದ್ದ...
"ಧರ್ಮ ನಶಿಸುತ್ತಿದೆ.ಕೃತದಲ್ಲಿ ಧರ್ಮಕ್ಕೆ ನಾಲ್ಕು ಕಾಲು. ತ್ರೇತೆಯಲ್ಲಿ ಮೂರು,ದ್ವಾಪರದಲೆರಡು ಮತ್ತು ಕಲಿಯುಗದೊಳೊಂದು..."
ಆಗೊಬ್ಬ ಹೇಳಿದ: ನೀನು ಹೇಳುವುದೆಲ್ಲ ಗೊಡ್ಡು ಪುರಾಣ. ಹೊರಗಿಂದ ಮತಗಳೇ ಧರ್ಮ. ಅವುಗಳ ಆಚರಣೆಯೇ ಧರ್ಮ.ಸನಾತನ ಎಂಬುದೊಂದು ಇಲ್ಲ.....
ಧರ್ಮದ ಒಂದು ಕಾಲು ಮುರಿಯಿತು!
ಆಗಿಬ್ಬರು ಬಂದು ಮೊದಲಿನ ಪಂಡಿತನನ್ನು ಬೆದರಿಸಿ ಎರಡನೆಯವ ಹೇಳಿದ್ದೆ ಸರಿ ಎಂದು ವಾದಿಸತೊಡಗಿದರು ಮಾತ್ರವಲ್ಲ ಪ್ರಚಾರಕ್ಕೂ ತೊಡಗಿದರು!
ಧರ್ಮದ ಎರಡನೆ ಕಾಲು ಮುರಿಯಿತು!
ಪಂಡಿತನ ವಿರುದ್ಧ ಅಪಪ್ರಚಾರ ಪ್ರತಿಭಟನೆಗಳು ನಡೆದವು!
ಮೂರನೇ ಕಾಲೂ ಮುರಿಯಲ್ಪಟ್ಟಿತು!
ಪಂಡಿತನ ಮೇಲೆ ಮಾರಣಾಂತಿಕ ಹಲ್ಲೆ ನಡೆಯಿತು. ಪಂಡಿತನ ಜೊತೆಗಿದ್ದವರೂ ದೂರಾದರು ಮತ್ತು ವಿರುದ್ಧ ಮಾತಾಡಲಾರಂಭಿಸಿದರು!
ಧರ್ಮ ಸತ್ತು ಬಿದ್ದಿತ್ತು!
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ