ಪುಟಗಳು

ಭಾನುವಾರ, ಸೆಪ್ಟೆಂಬರ್ 28, 2014

ಅಮೃತಧಾರೆ

  ಅಮೃತಧಾರೆ
            1857ರ ಸ್ವಾತಂತ್ರ್ಯ ಸಂಗ್ರಾಮ ಬ್ರಿಟಿಷರನ್ನು ಬೆಂಬಿಡದೆ ಕಾಡುತ್ತಿತ್ತು. ಭಾರತದ ಚಿಂತನಶೀಲ ಬೌದ್ಧಿಕ ವರ್ಗವನ್ನು ತಮ್ಮೆಡೆಗೆ ಸೆಳೆದುಕೊಳ್ಳುವುದೇ ಇಂತಹ ಸಂಗ್ರಾಮ ಮರುಕಳಿಸದಂತೆ ಮಾಡಲು ಇರುವ ಏಕೈಕ ಉಪಾಯ ಎಂದರಿತ ಬ್ರಿಟಿಷರು 1885ರಲ್ಲಿ ತಮ್ಮವನೇ ಆದ ಎ.ಓ.ಹ್ಯೂಮ್ ನ ಮುಂದಾಳತ್ವದಲ್ಲಿ ಕಾಂಗ್ರೆಸಿನ ಸ್ಥಾಪನೆ ಮಾಡಿದರು. ಆದರೆ ತಾಯಿ ಭಾರತಿ ರತ್ನಗರ್ಭಾ ವಸುಂಧರೆ. ಅಂತಹ ಅಂಧಕಾರದ ಸಮಯದಲ್ಲಿ ಅತ್ಯಂತ ತೇಜಸ್ವೀ ಪುರುಷನೊಬ್ಬನಿಗೆ ಜನ್ಮ ನೀಡಿದಳು. ಅವರೇ ಮಹರ್ಷಿ ದಯಾನಂದರು. ಅವರು ಗಾಢಾಂಧಕಾರವನ್ನು ತೊಲಗಿಸಲು ದೀಪವೊಂದನ್ನು ಹಚ್ಚಿದರು. ಅದೇ ಆರ್ಯ ಸಮಾಜ. ಆ ದೀವಿಗೆಯ ಒಂದೊಂದು ಕಿಡಿಯೂ ಕ್ರಾಂತಿಯ ಕಿಡಿ!
            ಭಾರತೀಯರ ಮುಂದೆ ಈಗ ಎರಡು ದಾರಿಗಳಿದ್ದವು. ಬ್ರಿಟಿಷ್ ಸರಕಾರದ ಆಶೀರ್ವಾದ ಪಡೆದು ಅವರ ಮಾತುಗಳಿಗೆ ಅನುಕೂಲಕರವಾಗಿ ನಡೆಯಬಲ್ಲ ವ್ಯಕ್ತಿಗಳನ್ನು ತಯಾರು ಮಾಡುವ ಕಾರ್ಖಾನೆ ಕಾಂಗ್ರೆಸ್ ಒಂದು ಕಡೆಯಾದರೆ ಭಾರತದ ವೇದಕಾಲೀನ ಮೌಲ್ಯಗಳನ್ನಾಧರಿಸಿ ಭಾರತದ ಪುನರ್ನಿರ್ಮಾಣ ಮಾಡಲು ಹೊರಟಿದ್ದ ಆರ್ಯ ಸಮಾಜ ಇನ್ನೊಂದೆಡೆ. ಈ ಎರಡೂ ಪ್ರಭಾವಗಳು ತರುಣ ಪೀಳಿಗೆಯ ಮರಣ ಭಯ ನೀಗಿಸಿದ ಶ್ರೇಷ್ಠ ಕ್ರಾಂತಿಕಾರಿ ಭಗತ್ ಸಿಂಗನ ವಂಶವೃಕ್ಷಕ್ಕಾಯಿತು ಎಂಬುದೇ ವಿಶೇಷವಾದ ಸಂಗತಿ. ಆ ವಂಶದ ಪೂರ್ವಜ ಖೇಮ ಸಿಂಹನ ಅಗ್ರ ಪುತ್ರ ಸುರ್ಜನ ಸಿಂಹ ಬ್ರಿಟಿಷರ ಪಾದಸೇವೆ ಮಾಡುವುದರೊಂದಿಗೆ ಆ ಧಾರೆಯೇ ಭಾರತಕ್ಕೆ ವಿಷಧಾರೆಯಾದರೆ ಮಧ್ಯಮ ಅರ್ಜುನ ಸಿಂಹನ ಕ್ಷಾತ್ರ-ಬ್ರಹ್ಮತೇಜ ಕ್ರಾಂತಿಧಾರೆಯಾಗಿ ಅವನ ಪೀಳಿಗೆಯೇ ತಾಯಿ ಭಾರತಿಯ ಪಾಲಿಗೆ ಅಮೃತಧಾರೆಯಾಗಿ ಹರಿಯಿತು. ಅಂತಹ ಅಮೃತಧಾರೆಯ ಒಂದು ಬಿಂದುವೇ ಸರದಾರ ಭಗತ್ ಸಿಂಗ್!
          ಅರ್ಜುನ ಸಿಂಹನಿಗೆ ಋಷಿ ದಯಾನಂದರ ದರ್ಶನವಾಗುವುದರೊಂದಿಗೆ ಆತನ ವ್ಯಕ್ತಿತ್ವವೇ ಬದಲಾಯಿತು. ಮಹರ್ಷಿಗಳು ಸ್ವಹಸ್ತದಿಂದ ಜನಿವಾರ ಹಾಕಿದ ಕೆಲವೇ ಕೆಲವು ವ್ಯಕ್ತಿಗಳಲ್ಲಿ ಆತನೊಬ್ಬನಾಗಿದ್ದ. ಆತ ಮಾಂಸ ತಿನ್ನುವುದನ್ನು ಬಿಟ್ಟ. ಮಧ್ಯದ ಬಾಟಲಿಯನ್ನು ತಿಪ್ಪೆಗೆಸೆದ! ಹವನಕುಂಡ ಆತನಿಗೆ ಪ್ರಿಯವಾಯಿತು! ಸಂಧ್ಯಾವಂದನೆ, ಪ್ರಾರ್ಥನೆ, ಸಾಮಾಜಿಕ ಕ್ರಾಂತಿ ಆತನ ಜೀವಾಳವಾಯಿತು. ಆತನ ಸಾಂಸ್ಕೃತಿಕ ಪುನರ್ಜನ್ಮವಾಗಿತ್ತು. ಜೊತೆಗೇ ಆ ವಂಶದ್ದೂ! ಅಂದಿನ ರಾಜಕೀಯ-ಸಾಮಾಜಿಕ ಜೀವನವನ್ನು ಸೂಕ್ಷ್ಮವಾಗಿ ಗಮನಿಸಿದಲ್ಲಿ ಅದೊಂದು ಕ್ರಾಂತಿಕಾರಿ ಬದಲಾವಣೆ! ದೇವಸ್ಥಾನಗಳೇ ಆರ್ಯ ಸಮಾಜದಿಂದ ದೂರವಿದ್ದ ಕಾಲದಲ್ಲಿ ಬಹುದೂರದ ಗುರುದ್ವಾರದಿಂದ ಆತ ಆರ್ಯ ಸಮಾಜದ ಭವನವನ್ನು ಪ್ರವೇಶಿಸಿದ್ದನೆಂದರೆ ಆ ವಂಶಕ್ಕೆ "ಕ್ರಾಂತಿ" ಎಂಬುದು ರಕ್ತಗತವಾಗಿ ಬಂದಿತ್ತೇನೋ! ಪ್ರಸಿದ್ಧ ಯುನಾನಿ ವೈದ್ಯನಾಗಿದ್ದ ಜೊತೆಗೇ ಕೃಷಿಯನ್ನೇ ವೃತ್ತಿಯಾಗಿರಿಸಿಕೊಂಡಿದ್ದ ಪರಿಶ್ರಮಿ ಅರ್ಜುನ ಸಿಂಹ ಅನೇಕರಿಗೆ ದೀಕ್ಷೆ ನೀಡುವ, ಪ್ರಕಾಂಡ ಪಂಡಿತರೊಂದಿಗೆ ಅಮೋಘ ಚರ್ಚೆ ಮಾಡುವ ಮಟ್ಟಕ್ಕೆ ಬೆಳೆದು ಆರ್ಯ ಸಮಾಜದ ಪ್ರಮುಖ ಪ್ರತಿನಿಧಿಯಾದ. ಆತ್ಮವಿಸ್ಮೃತಿಯಿಂದ ಹೊರಬಂದು ಆತ್ಮಜ್ಞಾನವನ್ನು ಪಡೆದು ಆತ್ಮವಿಶ್ವಾಸದಿಂದ ಕೂಡಿರುವ ಆತ್ಮಜಾಗೃತ ಸಮಾಜವನ್ನು ಯಾರಿಗೂ ಗುಲಾಮಗಿರಿಯಲ್ಲಿಡಲು ಸಾಧ್ಯವಿಲ್ಲವೆಂಬ ಆರ್ಯ ಸಮಾಜದ ಚಿಂತನೆಯ ಅರಿವು ಅರ್ಜುನ ಸಿಂಹನಿಗಿತ್ತು.
          ಇದನ್ನು ಮನಗಂಡಿದ್ದ ಬ್ರಿಟಿಷರು ಆರ್ಯಸಮಾಜವನ್ನು ಬಗ್ಗು ಬಡಿಯಲು "ಆರ್ಯ ಸಮಾಜಿಗಳು ಗುರು ಗ್ರಂಥ ಸಾಹಿಬ್ ಗೆ ಅವಮಾನ ಮಾಡುತ್ತಿದ್ದಾರೆಂದು" ಸಾಂಪ್ರದಾಯವಾದಿಗಳ ಮುಖೇನ ಮೊಕದ್ದಮೆ ಹೂಡಿದಾಗ ಅರ್ಜುನ ಸಿಂಹ ಹಿಂದೂ ಗ್ರಂಥಗಳು ಮತ್ತು ಗುರುಗ್ರಂಥ ಸಾಹಿಬ್ ನಲ್ಲಿದ್ದ ಸುಮಾರು ಏಳುನೂರು ಶ್ಲೋಕಗಳನ್ನು ಹೇಳಿ ಅವುಗಳು ಒಂದೇ ರೀತಿ ಇದ್ದುದನ್ನು ಎತ್ತಿ ತೋರಿಸಿ ಸಿಖ್ಖರೂ ಹಿಂದೂಗಳೇ ಎಂದು ಪ್ರಮಾಣಿಸಿ ತೋರಿಸಿದ. ರೈತನೂ, ಹಕೀಮನೂ, ಅದ್ವಿತೀಯ ಬರಹಗಾರನೂ, ಆರ್ಯ ಸಮಾಜಿಯೂ ಆಗಿದ್ದ ಅರ್ಜುನ ಸಿಂಹನ ಮನಸ್ಸು ಸದಾ ದೇಶದ ಕುರಿತಾಗೇ ಚಿಂತಿಸುತ್ತಿತ್ತು. ಆತ ತನ್ನ ತಮ್ಮ ಮೆಹರ್ ಸಿಂಹನ ಮಗ ಹರಿಸಿಂಹನ ಜೊತೆಗೂಡಿ ಬಾಂಬೊಂದನ್ನು ತಯಾರಿಸಿ ಪರೀಕ್ಷಿಸಿದ. ಅದರ ಸದ್ದು ಕೇಳಿ ಅನುಮಾನಗೊಂಡು ಬಂದ ಬ್ರಿಟಿಷ್ ಪೋಲಿಸರಿಗೆ ಅರ್ಜುನ ಸಿಂಹನ ಮೇಲೆ ಜನರಿಗಿದ್ದ ಅಪಾರ ಗೌರವದ ಕಾರಣ ಸಾಕ್ಷ್ಯ ಸಿಗಲೇ ಇಲ್ಲ. ಬ್ರಾಹ್ಮಣ-ಶೂದ್ರ ಭೇದ ಭಾವ ತೋರದೆ ಎಲ್ಲರೊಂದಿಗೆ ಊಟದಲ್ಲೂ-ನೋಟದಲ್ಲೂ ಸಮಾನ ಭಾವ ಇರಿಸಿದ್ದ, ಸಂಬಳವೇ ಸಿಗದ ಕಾಲದಲ್ಲಿ ತನ್ನ ನೌಕರರಿಗೆ ರೋಟಿಯ ಮೇಲೆ ದುಡ್ಡಿನ ಪಲ್ಯ ಇಟ್ಟು ಸತ್ಕರಿಸುತ್ತಿದ್ದ(ಇದು ಅವನಿದ್ದ ಸಮಾಜದ್ದೇ ಮಾತು) ಆತನ ಮೇಲೆ ಯಾರಿಗಾದರೂ ದ್ವೇಷ ಇದ್ದೀತೇ? ಕ್ರಾಂತಿಗೀತೆ ಶುರುವಾಗಿತ್ತು. ತನ್ನ ಮೂವರು ಪುತ್ರರಿಗೂ ಬುದ್ಧಿ ಪೂರ್ವಕ ಕ್ರಾಂತಿದೀಕ್ಷೆ ನೀಡಿದ. ದೇಶಕ್ಕಾಗಿ ನಡೆದ ಯಾವುದೇ ಕ್ರಾಂತಿಯಾದರೂ ಭಾಗವಹಿಸುತ್ತಿದ್ದ ಅರ್ಜುನನ ಅಗ್ರ ಪುತ್ರ ಕಿಶನ್ ಸಿಂಹ ತುಂಬು ಯೌವನದಲ್ಲಿ ಅಮರನಾದ! ದ್ವಿತೀಯ ಅಜಿತ್ ಸಿಂಹ ಭಾರತ ಮಾತಾ ಸೊಸೈಟಿಯ್ ಮುಖೇನ ಚಾಪೇಕರ್ ಸಹೋದರರು ಹಾರಿಸಿದ್ದ ಕಿಡಿಯನ್ನು ವಿದೇಶಗಳಿಗೂ ಹಬ್ಬಿಸಿದ, ತಾನೂ ಗಡೀಪಾರಾಗಿ ಹೋದ! ಮೂರನೆಯವ ಸ್ವರ್ಣ ಸಿಂಹ ಕೈಕೋಳ-ಬೇಡಿಗಳ ಚದುರಂಗದಾಟದಲ್ಲಿ ಜೀವನ ಪೂರ್ತಿ ಕಳೆದ! ಅರ್ಜುನ ಸಿಂಹ ತನ್ನ ಹಿರಿಯ ಮೊಮ್ಮಕ್ಕಳಾದ ಜಗತ್-ಭಗತ್ ರನ್ನು ಅವರ ಬ್ರಹ್ಮೋಪದೇಶದ ಸಮಯದಲ್ಲಿ ಯಜ್ಞವೇದಿಕೆಯ ಮೇಲೆ ನಿಲ್ಲಿಸಿಕೊಂಡು ದೇಶದ ಬಲಿ ವೇದಿಕೆಗೆ ದಾನ ಮಾಡುತ್ತೇನೆ ಎಂದು ಸಂಕಲ್ಪ ಮಾಡಿದ. ಅವರಿಬ್ಬರಿಗೂ ರಾಷ್ಟ್ರೀಯ ವಿಚಾರ-ಕ್ರಾಂತಿಯ ಸಂಸ್ಕಾರ ನೀಡಿದ. ಯಜ್ಞ ಕುಂಡದಲ್ಲಿ ಅಗ್ನಿಗೆ ಆಜ್ಯವೊದಗಿತ್ತು. ಪೂರ್ಣಾಹುತಿ ಬಾಕಿ ಇತ್ತು!
             1907 ಸೆಪ್ಟೆಂಬರ್ 28... ವಿಕ್ರಮ ಸಂವತ್ಸರದ 1964ರ ಆಶ್ವಯುಜ ಶುಕ್ಲ ತ್ರಯೋದಶಿ ಶನಿವಾರ ಬೆಳಿಗ್ಗೆ 9 ಗಂಟೆಗೆ ಈಗಿನ ಪಾಕಿಸ್ತಾನದಲ್ಲಿರುವ ಪಂಜಾಬಿನ ಲಾಯಲಾಪುರದ ಬಂಗಾ ಗ್ರಾಮದಲ್ಲಿ ಸೂರ್ಯ ತೇಜಸ್ಸೊಂದು ಭೂಮಿಗೆ ಬಿದ್ದಿತು! ಅದೇ ದಿನ ಚಿಕ್ಕಪ್ಪ ಅಜಿತನ  ಗಡೀಪಾರು ಶಿಕ್ಷೆ ಮುಗಿದ ಸುದ್ದಿ ಬಂತು, ತಂದೆ ಕಿಶನ್, ಚಿಕ್ಕಪ್ಪ ಸ್ವರ್ಣ ಸಿಂಹ ಜೈಲಿನಿಂದ ಬಿಡುಗಡೆಯಾಗಿದ್ದರು. ಎಲ್ಲರೂ ಮಗುವನ್ನು "ಭಾಗ್ಯವಂತ" ಎಂದು ಕರೆದರು. ಅಜ್ಜಿ ಜಯಾ ಕೌರ್ "ಭಗತ್" ಎಂದು ಹೆಸರಿಟ್ಟಳು! ಎಲ್ಲರ ಕಣ್ಮಣಿಯಾಗಿ ಬೆಳೆದ ಸುಂದರ-ಆಕರ್ಷಕ ರೂಪದ ಮಗು ಎರಡೂವರೆ ವರ್ಷವಾಗಿದ್ದಾಗ ತಂದೆಯ ಜೊತೆ ಜಮೀನಿಗೆ ಹೋದಾಗ ತಂದೆಯ ಕೈಬಿಟ್ಟು ಜಮೀನಿನಲ್ಲಿ ಚಿಕ್ಕ ಚಿಕ್ಕ ಹುಲ್ಲಿನ ಕಡ್ಡಿಗಳನ್ನು ನೆಡಲಾರಂಭಿಸಿತು. ತಂದೆ ಪ್ರೀತಿಯಿಂದ ಏನು ಮಾಡುತ್ತಿದ್ದೀಯಾ ಎಂದು ಕೇಳಿದರೆ "ಬಂದೂಕುಗಳನ್ನು ನೆಡುತ್ತಿದ್ದೇನೆ" ಎಂದು ಇನ್ನೂ ಸರಿಯಾಗಿ ಶಬ್ಧ ಉಚ್ಛಾರಣೆ ಮಾಡಲಾಗದ ಮಗುವಿನ ಉತ್ತರವನ್ನು ಕೇಳಿ ತಂದೆ ಹಾಗೂ ಸ್ನೇಹಿತ ಮೆಹ್ತಾ ದಿಗ್ಭ್ರಮೆಗೊಳಗಾದರು. ಬೆಳೆಯುವ ಸಿರಿ ಮೊಳಕೆಯಲ್ಲಿ!
          ನಾಲ್ಕನೆಯ ತರಗತಿಯಲ್ಲಿರುವಾಗಲೇ ಆತ ತನ್ನ ಮನೆಯಲ್ಲಿದ್ದ ಅಜಿತ್ ಸಿಂಹ, ಸೂಫೀ ಅಂಬಾಪ್ರಸಾದ, ಲಾಲಾ ಹರದಯಾಳ್ ಬರೆದಿದ್ದ ಐವತ್ತಕ್ಕೂ ಹೆಚ್ಚು ಪುಸ್ತಕಗಳನ್ನು ಓದಿ ಮುಗಿಸಿದ್ದ. ಅವುಗಳಲ್ಲಿದ್ದದ್ದು ಬರೇ ರಾಜಕೀಯ-ಸ್ವಾತಂತ್ರ್ಯ ಸಂಗ್ರಾಮದ ಘಟನೆಗಳು! ಆತನಲ್ಲಿ ಬ್ರಿಟಿಷ್ ವಿರೋಧಿ ದ್ವೇಷಾಗ್ನಿ ಝಗಝಗಿಸಲಾರಂಭಿಸಿತು! ಭಾರತಾ ಮಾತಾ ಸೊಸೈಟಿಯ ಆಂದೋಳನ ಶುರುವಾದಾಗ ಶಿಶುವಾಗಿದ್ದ, ಗದರ್ ಪಾರ್ಟಿಯ ಆಂದೋಳನದ ಬೆಳವಣಿಗೆಯನ್ನು ಹೆಜ್ಜೆಹೆಜ್ಜೆಗೂ ಕೇಳಿಸಿಕೊಂಡಿದ್ದ ಆತ ಗದರ್ ಆಂದೋಳನ ತಾರಕಕ್ಕೇರಿದಾಗ ಅದರಲ್ಲೊಬ್ಬನಾದ! 1919ರ ಏಪ್ರಿಲ್ 13! ಜಲಿಯನ್ ವಾಲಾ ಬಾಗ್ ನಲ್ಲಿ ಬ್ರಿಟಿಷರು ದೇಶೀರಕ್ತದ ಹೋಳಿ ಆಚರಿಸಿದ್ದರು! ಹನ್ನೆರಡು ವರ್ಷದ ಭಗತ್ ಮರುದಿನ ಶಾಲೆಗೆ ಹೋದವನು ಸಮಯಕ್ಕೆ ಸರಿಯಾಗಿ ಮರಳಲಿಲ್ಲ. ಜಲಿಯನ್ ವಾಲಾ ಬಾಗಿಗೆ ಹೋಗಿ ರಕ್ತದಿಂದ ನೆನೆದಿದ್ದ ಮಣ್ಣನ್ನು ಹಣೆಗೆ ಹಚ್ಚಿಕೊಂಡ. ಸ್ವಲ್ಪ ಮಣ್ಣನ್ನು ಶೀಶೆಯಲ್ಲಿ ತುಂಬಿಸಿಕೊಂಡು ಮನೆಗೆ ಬಂದ. ಆ ಶೀಶೆಯ ನಾಲ್ಕೂ ಕಡೆ ಹೂವುಗಳನ್ನಿರಿಸಿ ಭಕ್ತಿಯಿಂದ ನಮಿಸಿದ. ಅದು ದಿನನಿತ್ಯದ ಪೂಜೆಯಾಯಿತು! ಸ್ನೇಹಿತ ಜಯದೇವನ ಮುಖೇನ ತಂದೆಗೆ ಶಾಲೆ ಬಿಟ್ಟು ಕ್ರಾಂತಿಗೆ ಧುಮುಕುವ ವಿಚಾರ ಅರುಹಿದ ಭಗತ್ ಗೆ ವಿದೇಶೀ ವಸ್ತುಗಳ ಹೋಳಿ ಆಚರಣೆ ಕ್ರಾಂತಿಯ ಎರಡನೆ ಮೆಟ್ಟಿಲಾಯಿತು.
              ಆಗ ಸಿಡಿದಿತ್ತು ಚೌರಿಚೌರಾ! ಪೊಲೀಸರನ್ನು ಠಾಣೆಯೊಳಗೆ ಕೂಡಿ ಹಾಕಿದ ದೇಶಭಕ್ತ ಗುಂಪು ಠಾಣೆಗೇ ಬೆಂಕಿ ಹಚ್ಚಿತು. ಗಾಂಧಿ ಹಿಂಸೆ ತಲೆದೋರಿದೆ ಎಂದು ತನ್ನ ಆಂದೋಲನವನ್ನೇ ಹಿಂತೆಗೆದುಕೊಂಡರು. ಡಾ. ಮೂಂಜೆ, ಲಾಲಾ ಲಜಪತ್ ರಾಯ್ ಇದನ್ನು ಕಟುವಾಗಿ ಟೀಕಿಸಿದರು. ಭಗತನ ಮನಸ್ಸು ಹೊಯ್ದಾಟವಾಡುತ್ತಿತ್ತು. ಕ್ರಾಂತಿಯೇ.....ಅಹಿಂಸೆಯೇ? ಆಗ ನಗುನಗುತ್ತ ಬಲಿವೇದಿಯನ್ನೇರಿದ ಕರ್ತಾರ್ ಸಿಂಗ್ ಸರಾಬಾನ ಪುಣ್ಯಕರ್ಮವು ಭಗತ್ ಸಿಂಹನ ಎದೆಯಲ್ಲಿ ಹೊಳೆಯುತ್ತಾ ಕರ್ತಾರನ ಆತ್ಮವೇ ಅವನ ನರನಾಡಿಗಳಲ್ಲಿ ತುಂಬಿಕೊಂಡಿತು! ಅಸಂಖ್ಯಾತ ಜನರನ್ನು ಸೆಳೆದರೂ ಅಹಿಂಸೆಯ ಹಾದಿ ದೇಶವನ್ನು ಸ್ವಾತಂತ್ರ್ಯ ಸಾಧನೆಯ ಕಡೆಗೆ ಕೊಂಡೊಯ್ಯುವುದಿಲ್ಲ ಎಂದವನ ಅಂತರ್ವಾಣಿ ನುಡಿಯಲಾರಂಭಿಸಿತು.
                ಭಗತ್ ಮೆಟ್ರಿಕ್ ಪಾಸಾಗಿರಲಿಲ್ಲ. ಒಂಭತ್ತನೇ ತರಗತಿಯಲ್ಲಿ ಅಸಹಕಾರೀ ಆಂದೋಲನಕ್ಕಾಗಿ ಶಾಲೆ ಬಿಟ್ಟಿದ್ದ ಅವನ ಬುದ್ಧಿಮತ್ತೆಯನ್ನು ಗುರುತಿಸಿದ್ದ ಭಾಯಿ ಪರಮಾನಂದರು ಆತನನ್ನು ನ್ಯಾಷನಲ್ ಕಾಲೇಜಿಗೆ ಸೇರಿಸಲು ನೆರವಾದರು. ಪ್ರೊ. ಜಯಚಂದ್ರ ವಿದ್ಯಾಲಂಕಾರರ ಸಂಪರ್ಕದಿಂದ ಭಗತನೊಳಗಿನ ಭೂಗತ ಕ್ರಾಂತಿಕಾರಿ ಅರಳಲಾರಂಭಿಸಿದ. ಕಾಲೇಜಿನಲ್ಲಿ ನಾಟಕದ ಕ್ಲಬ್ವೊಂದನ್ನು ಸ್ಥಾಪಿಸಿ ಅದರ ಮೂಲಕ ರಾಣಾ ಪ್ರತಾಪ, ಸಾಮ್ರಾಟ್ ಚಂದ್ರಗುಪ್ತರ ನಾಟಕವನ್ನು ಆರಂಭಿಸಿದ. ಅದಕ್ಕೆ ಸರ್ಕಾರದ ಕಾಕದೃಷ್ಟಿ ಬಿತ್ತು. ಮದುವೆಗೆ ಮನೆಯವರ ಒತ್ತಡ ಹೆಚ್ಚಾದಾಗ ನಿಶ್ಚಿತಾರ್ಥಕ್ಕೆ ಕೆಲವೇ ದಿನಗಳಿರುವಾಗ ಲಾಹೋರಿಗೆ ಪರಾರಿಯಾದ. ಅಲ್ಲಿಂದ ಕಾನ್ಪುರ ತಲುಪಿದ. ಅಲ್ಲಿ ಬಂಗಾಲಿ ಕ್ರಾಂತಿಕಾರಿಗಳೊಡನೊಂದಾಗಿ ಹೋದ. ಗಣೇಶ ಶಂಕರ ವಿದ್ಯಾರ್ಥಿಯ "ಪ್ರತಾಪ್" ಪತ್ರಿಕೆಗೆ ಬಲವಂತ ಸಿಂಹ ಎಂಬ ಹೆಸರಲ್ಲಿ ಲೇಖನಗಳನ್ನು ಬರೆಯಲಾರಂಭಿಸಿದ. ಮದುವೆಗೆ ಬಲವಂತ ಮಾಡುವುದಿಲ್ಲ ಎಂದು ಮಾತುಕೊಟ್ಟ ಕಾರಣ ಮತ್ತೆ ಮನೆಗೆ ಹಿಂದಿರುಗಿದ. ಜೈತೋಂನಲ್ಲಿ ಭಗತ್ ಸಿಂಹನ ಕಾರ್ಯದಿಂದ ಅವಮಾನಿತನಾದ ಕಿಶನ್ ಸಿಂಗನ ಕುಟುಂಬ ವರ್ಗಕ್ಕೆ ಸೇರಿದ ಮ್ಯಾಜಿಸ್ಟ್ರೇಟ್ ದಿಲ್ ಬಾಗ್ ಸಿಂಹ ಭಗತನನ್ನು ಹಿಡಿಯಲು ವಾರಂಟ್ ತರಿಸಿದ. ಆದರೆ ಭಗತ್ ಸಿಗದೆ ಮಾಯವಾದ. ಮುಂದೆ ಲಾಹೋರಿನಲ್ಲಿ ನೌಜವಾನ್ ಭಾರತ್ ಸಭಾದ ಸ್ಥಾಪನೆಯಲ್ಲಿ ತೊಡಗಿದ. ಕರ್ತಾರನ ಬಲಿದಾನದ ದಿನವನ್ನು ಕರ್ತಾರನ ಫೋಟೋ ಮೇಲೆ ರಕ್ತದಭಿಷೇಕ ಮಾಡಿ ಕ್ರಾಂತಿದೀಕ್ಷೆ ನೀಡುವ ಮೂಲಕ ಬಹಿರಂಗವಾಗಿ ಆಚರಿಸಲಾಯಿತು. ಇದರ ಮಧ್ಯೆ ಪಂಡಿತ್ ರಾಮ ಪ್ರಸಾದರ ನೇತೃತ್ವದಲ್ಲಿ ನಡೆದ ಕಾಕೋರಿ ಕಾಂಡದಲ್ಲಿ ಭಾಗಿಯಾದ. 1927ರ ಜುಲೈನಲ್ಲಿ ಮೊದಲ ಬಾರಿಗೆ ಪೊಲೀಸರ ಕೈಗೆ ಸಿಕ್ಕಿಬಿದ್ದ. ಕೆಲವು ವಾರಗಳ ಬಳಿಕ ಅರವತ್ತು ಸಾವಿರ ರೂಪಾಯಿಗಳ ಮುಚ್ಚಳಿಕೆ ಬರೆಸಿಕೊಂಡು ಅವನನ್ನು ಬಿಡುಗಡೆ ಮಾಡಲಾಯಿತು. ಸೈಮನ್ ಕಮೀಷನ್ನಿನ ವಿರುದ್ಧ ಹೋರಾಡುತ್ತಿದ್ದ ಲಾಲಾ ಲಜಪತ್ ನೇತೃತ್ವದ ಹೋರಾಟಗಾರರ ಮೇಲೆ ಸ್ಕಾಟ್ ನ ಆದೇಶದಂತೆ ಸ್ಯಾಂಡರ್ಸ್ ಮುಗಿಬಿದ್ದ. ಪಂಜಾಬಿನ ವೃದ್ಧ ವೀರ ಕೇಸರಿಯ ಶರೀರ ಸ್ಯಾಂಡರ್ಸನ ಲಾಠಿ ಏಟುಗಳ ಆಘಾತಕ್ಕೆ ಜರ್ಝರಿತವಾಯಿತು. ಸ್ಕಾಟ್ ನ ಬಲಿಗೆ ಬಲೆ ಹೆಣೆಯಲಾಯಿತು. ಆದರೆ ಜಯಗೋಪಾಲ ತಪ್ಪಾಗಿ ಗುರುತಿಸಿದ್ದರಿಂದ ಸ್ಕಾಟಿನ ಬದಲಾಗಿ ರಾಜಗುರು ಹಾಗೂ ಭಗತ್ ಸಿಂಹನ ಗುಂಡುಗಳಿಗೆ ಸ್ಯಾಂಡರ್ಸ್ ಬಲಿಯಾದ. ಅದೇನೆ ಇರಲಿ ಸೂರ್ಯ ಮುಳುಗದ ಸಾಮ್ರಾಜ್ಯಕ್ಕೆ ಸೂರ್ಯ ಮುಳುಗುವ ಮೊದಲೇ ಮರ್ಮಾಘಾತವಾಯಿತು!
              ಅಸೆಂಬ್ಲಿಯಲ್ಲಿ ಬಾಂಬು ಎಸೆಯುವ ಯೋಜನೆ ಭಗತನದ್ದು. ವ್ಯೂಹ ರಚನೆ ಆಜಾದರದ್ದು. ಆಜಾದ್ ಅಂದರು "ಬಾಂಬು ಎಸೆದವರು ಕೂಡಲೇ ಓಡಿ ಬರಬೇಕು. ಅವರನ್ನು ನಾನು ರಕ್ಷಿಸುತ್ತೇನೆ". ಆದರೆ ಬಾಂಬು ಎಸೆದು ಎಲ್ಲರೆದುರು ನಿಂತು ನಾವು ಯಾಕೆ ಎಸೆದೆವೆಂದು ಹೇಳಬೇಕು, ಓಡಬಾರದು ಎಂಬುದು ಭಗತ್ ನಿಲುವಾಗಿತ್ತು. ಭಗತ್ ನ ಹಠಕ್ಕೆ ಎಲ್ಲರೂ ಒಪ್ಪಲೇಬೇಕಾಯಿತು. ಸೂರ್ಯ ಮುಳುಗದ ಸಾಮ್ರಾಜ್ಯದ ಕಿವುಡರ ಅಸೆಂಬ್ಲಿಯಲ್ಲಿ ಕ್ರಾಂತಿಯ ಬಾಂಬು ಸಿಡಿದಿತ್ತು. ಆದರೆ ಭಗತ್-ದತ್ತ ತ್ಯಾಗದ ಹುಚ್ಚಿಗೊಳಗಾಗಿ ಬಂಧನಕ್ಕೊಳಗಾದರು! ಚಂದ್ರಶೇಖರ್ ಆಜಾದ್ ವೇಶಮರೆಸಿಕೊಂಡು ಬಂದು ಭಗತ್ ನನ್ನು ಬಿಡಿಸಲೆತ್ನಿಸಿದರು. ಆದರೆ ಭಗತನ ಹಠ ಅದಕ್ಕೊಪ್ಪಲಿಲ್ಲ..."ಸರ್-ಫರೋಶಿ ಕೀ ತಮನ್ನಾ..." ಹೇಡಿಗಳು ತಮ್ಮ ಸ್ವಾಭಾವಿಕ ಮೃತ್ಯುವಿನ ಮೊದಲೇ ಎಷ್ಟೋ ಸಲ ಸಾಯುತ್ತಾರೆ. ಆದರೆ ವೀರನಿಗೆ ಮೃತ್ಯು ಬರುವುದು ಒಂದೇ ಸಲ! ಅದೇನೋ ಸರಿ. ಆದರೆ ಭಗತ್ ಆಜಾದರ ಮಾತಿಗೆ ಒಪ್ಪುತ್ತಿದ್ದರೆ ಭಾರತಕ್ಕೆ ಇಂದಿನ ದುರ್ದೆಶೆ ತಪ್ಪುತ್ತಿತ್ತೇನೋ ಅಂತ ಬಹಳ ಸಲ ಅನ್ನಿಸಿದೆ. ಯಾಕೆಂದರೆ ಕುತಂತ್ರಿಗಳ ಜೊತೆ ಹೋರಾಡುವಾಗ ಕೃಷ್ಣತಂತ್ರ-ಚಾಣಕ್ಯ ನೀತಿಯೇ ಬೇಕಾದದ್ದು. ಅದೇನೇ ಇರಲಿ ಆತ ಸಾಮ್ರಾಜ್ಯಶಾಹಿಗಳಿಗೆ ಪದಾಘಾತ ನೀಡಿ ರಾಜಗುರು-ಸುಖದೇವರೊಂದಿಗೆ ನಗುನಗುತ್ತಾ ಸ್ವಾತಂತ್ರ್ಯ ಯಜ್ಞಕ್ಕೆ ಪೂರ್ಣಾಹುತಿ ನೀಡಿ ತಾತ ಅರ್ಜುನನ ಸಂಕಲ್ಪವನ್ನು ಪೂರೈಸಿದ. ಫಾಸಿಕೋಣೆಯಲ್ಲಿ ಗಂಭೀರ ಅಧ್ಯಯನಗಳೊಂದಿಗೆ ತನ್ನ "ಆತ್ಮಕಥೆ", "ದಿ ಡೋರ್ ಟು ಡೆತ್", "ಐಡಿಯಲ್ ಆಫ್ ಸೋಷಿಯಾಲಿಸಮ್", "ಸ್ವಾಧೀನತಾ ಕೀ ಲಢಾಯೀ ಮೇಂ ಪಂಜಾಬ್ ಕಾ ಪಹಲಾ ಉಭಾರ್" ಎಂಬ ಪುಸ್ತಕಗಳನ್ನೂ ಬರೆದ.
             ಸರದಾರ ಅರ್ಜುನ ಸಿಂಹ ಅತ್ಯಂತ ಸಾಹಸದಿಂದ ಅಂಧವಿಶ್ವಾಸ ಮತ್ತು ಪರಂಪರಾವಾದಗಳ ಜಡತೆಯಿಂದ ಮುಚ್ಚಿಹೋಗಿದ್ದ ತನ್ನ ಮನೆಯ ಬಾಗಿಲನ್ನು ಮುಕ್ತವಾಗಿ ತೆರೆದ. ಅಡ್ಡಾದಿಡ್ಡಿಯಾಗಿದ್ದ ಮಾರ್ಗವನ್ನು ಶುಚಿಗೊಳಿಸಿ ತನ್ನ ಮನೆಯಂಗಳದಲ್ಲಿ ಯಜ್ಞವೇದಿಕೆಗಳನ್ನು ಅಣಿ ಮಾಡಿದ. ಸರದಾರ್ ಕಿಶನ್ ಸಿಂಹ ಆ ಮನೆಯ ಅಂಗಳವನ್ನು ತೊಳೆದು ಸಾರಿಸಿ ಯಜ್ಞವೇದಿಕೆಯ ಮೇಲೆ ವಿಶಾಲವಾದ ಯಜ್ಞಕುಂಡವೊಂದನ್ನು ಸ್ಥಾಪಿಸಿದ. ಸರ್ದಾರ್ ಅಜಿತಸಿಂಹ್ ಆ ಯಜ್ಞಕುಂಡದಲ್ಲಿ ಸಮಿತ್ತುಗಳನ್ನು ಜೋಡಿಸಿ ಅದರಲ್ಲಿ ಅಗ್ನಿಯನ್ನು ಪ್ರತಿಷ್ಠಾಪಿಸಿದ. ಸ್ವರ್ಣ ಸಿಂಹ ಅದನ್ನೂದಿ ಉರಿಯನ್ನೆಬ್ಬಿಸಿದ. ಅಜಿತ್ ಸಿಂಗ್ ಇಂಧನವನ್ನು ಹುಡುಕುತ್ತಾ ಹೋದಾಗ ಕಿಶನ್ ಸಿಂಹ ಅದರ ರಕ್ಷಣೆ ಮಾಡುತ್ತಿದ್ದ. ಆದರೆ ಭಗತ್ ಸಿಂಗ್ ಅಲ್ಲಿ ಇಲ್ಲಿ ಎಂದು ಇಂಧನವನ್ನು ಹುಡುಕದೆ ತನ್ನ ಜೀವನವನ್ನೇ ಇಂಧನವಾಗಿ ಮಾಡಿ ಆ ಯಜ್ಞಕುಂಡಕ್ಕೆ ಧುಮುಕಿದ. ಅದರ ಜ್ವಾಲೆ ದೇಶದಾದ್ಯಂತ ಹರಡಿತು. ಅಮೃತಧಾರೆಯು ತಾಯಿ ಭಾರತಿಗೆ ಅಭಿಷೇಕ ಮಾಡಿ ಅಮರವಾಯಿತು.

ಬುಧವಾರ, ಸೆಪ್ಟೆಂಬರ್ 24, 2014

ಮಹಾಯಾನ

ಮಂಗಳದಾ ಈ ಸುದಿನ ಮಧುರವಾಗಿದೆ
ಬಂಗಾರದ ತಾಯಿ ಹಣೆಯ ಸಿಂಧೂರ ಬೆಳಗಿದೆ|
ಸಿಂಹಗಳ ನಾಡಿನ ವೀರಕಲಿಗಳ
ಕನಸು ನನಸಾಗಿಸೋ ಜ್ಞಾನ ಜ್ಯೋತಿ ಬೆಳಗಿದೆ||

ಅಂಗಾರಕನ ಶೃಂಗಾರಕೆ ತಲೆಯ ಬಾಗುತ
ಬಂಗಾರದ ಭೂಮಿಯಿಂದ ತಾಯಿ(MOM) ಸಾಗುತ|
ವರುಷದೊಳಗೆ ಸೇರಿಕೊಳ್ಳೋ ಮಹಾಯಾನದಿ
ತನ್ನದಾದ ಕಕ್ಷೆಯೊಳಗೆ ಸೇರಿಕೊಳ್ಳುತಾ||

ಮೊದಲ ಯತ್ನದೊಳೇ ದಕ್ಕಿದೆ ಗೆಲುವು
ಜಗದೆದುರು ಎದೆಯುಬ್ಬಿಸಿದ ಗೆಲುವು|
ವಿಜಯ ನಿನಾದ ಕೇಳುತಿದೆ ಜನಮನದಿಂದ
ಮನಸೋತ ವರುಣ ತಾ ನಮೋ ಎಂದ||

ಶುಕ್ರವಾರ, ಸೆಪ್ಟೆಂಬರ್ 19, 2014

ಅಯೋಧ್ಯೆ ನಶಿಸುತ್ತಲೇ ಇದೆ...ಮೆಕ್ಕಾ ಬೆಳೆಯುತ್ತಲೇ ಇದೆ!

ಅಯೋಧ್ಯೆ ನಶಿಸುತ್ತಲೇ ಇದೆ...ಮೆಕ್ಕಾ ಬೆಳೆಯುತ್ತಲೇ ಇದೆ!
             ಉತ್ತರದ ಸಿಂಕಿಯಾಂಗ್ ಮತ್ತು ಟ್ರಾನ್ಸೊಕ್ಸಿಯಾನಾಗಳಿಂದ ದಕ್ಷಿಣದ ಕನ್ಯಾಕುಮಾರಿಯ ತನಕ, ಪಶ್ಚಿಮದಲ್ಲಿ ಇಂದಿನ ಇರಾನಿನ ಸೀಸ್ತಾನ್ ಪ್ರಾಂತ್ಯದಿಂದ ಪೂರ್ವದ ಅಸ್ಸಾಮಿನವರೆಗೆ ಸುಮಾರು 1100 ವರ್ಷಗಳಲ್ಲಿ 154 ಕಡೆ ಹಿಂದೂ ದೇವಾಲಯಗಳ ಮೇಲೆ "ಸತತವಾಗಿ" ದಾಳಿಗಳಾದವು. ಸುದೀರ್ಘ ಕಾಲ ಹಿಂದೂ ಸಂಸ್ಕೃತಿಯ ತೊಟ್ಟಿಲಾಗಿ ಜಗತ್ತಿನ ಕಣ್ಣು ಕೋರೈಸುತ್ತಿದ್ದ ಈ ಪ್ರದೇಶವು, ದೇವಾಲಯಗಳು ಹಾಗೂ ವಿಹಾರಗಳ ಚೆಲ್ಲಾಡಿದ ಅವಶೇಷಗಳಿಂದ ತುಂಬಿ ಹೋಯಿತು. ಮಧ್ಯಕಾಲದಲ್ಲಿ ಇಲ್ಲೆಲ್ಲಾ ನಿರ್ಮಾಣಗೊಂಡವೆನ್ನಲಾದ ಮಸೀದಿ-ಮಝರ್-ಝಯಾರತ್-ದರ್ಗಾಗಳೆಲ್ಲಾ ನಾಶಪಡಿಸಲಾದ ಮಠ-ಮಂದಿರಗಳ ಜಾಗಗಳಲ್ಲೇ ಅವುಗಳದೇ ಅವಶೇಷಗಳಿಂದ ನಿರ್ಮಿಸಲ್ಪಟ್ಟವು ಎಂಬ ಸೂರ್ಯ ಸತ್ಯ ಪ್ರಾಚ್ಯವಸ್ತು ಸಂಶೋಧನೆ ಹಾಗೂ ಉತ್ಖನನಗಳಿಂದ ಖಚಿತವಾಗಿ ತಿಳಿದುಬರುತ್ತವೆ. ಮಾತ್ರವಲ್ಲ ನೋಡುಗರ ಸೂಕ್ಷ್ಮ ಕಣ್ಣಿಗೆ ಸರಾಗವಾಗಿ ಗೋಚರಿಸುತ್ತವೆ.
               ಹಿಂದೂಗಳ ಹಾಗೂ ಹಿಂದೂ ದೇವಾಲಯಗಳ ಮೇಲೆ ನಡೆಸಿದ ಕುಕೃತ್ಯಗಳಿಂದಾಗಿಯೇ ಇಸ್ಲಾಮಿನ ಚರಿತ್ರೆಯಲ್ಲಿ ಶಾಶ್ವತ ಸ್ಥಾನಗಳನ್ನು ಗಳಿಸಿಕೊಂಡಿರುವ ಮೊಹಮದ್ ಬಿನ್ ಕಾಸಿಂ, ಮಹಮದ್ ಘಜನಿ, ಇಲ್ತಮಿಷ್, ಅಲ್ಲಾವುದ್ದೀನ್ ಖಿಲ್ಜಿ, ಫಿರೋಜ್ ಶಾ ತುಘಲಕ್, ಒಂದನೇ ಅಹಮದ್ ಶಾ, ಮೊಹಮದ್ ಬೆಗ್ಧಾ, ಸಿಕಂದರ್ ಲೋದಿ, ಔರಂಗಜೇಬ್, ದಕ್ಷಿಣದಲ್ಲಿ ಟಿಪ್ಪು ಹಾಗೂ ಬಹಮನಿ ಸುಲ್ತಾನರು ಭಾರತೀಯರು ಬರೆದ ಇತಿಹಾಸ ಗ್ರಂಥಗಳಲ್ಲೂ ತಮ್ಮ ಮತಾಂಧತೆಯ ಕೃತ್ಯಗಳನ್ನು ಮೂಲೆಗೊತ್ತಿ ಪ್ರಶಂಸೆಗೊಳಗಾಗಿರುವುದು ಇತಿಹಾಸಕ್ಕೆ ಮಾಡಿದ ಅಪಚಾರ. ಎಡಪಂಥೀಯ ಕಣ್ಣಿನಿಂದ ನೋಡುವವರು, ಇತಿಹಾಸದ ಬಗ್ಗೆ ತಿಳಿಯಲೊಲ್ಲದವರನ್ನು ಬಿಡಿ, ಕೆಲವು ರಾಷ್ಟ್ರೀಯವಾದಿಗಳೂ ಅಕ್ಬರನಂತಹ ಜಿಹಾದಿಯನ್ನು ಪರಮತ ಸಹಿಷ್ಣು ಅಂತ ಭಾವಿಸುತ್ತಾರೆಂದರೆ ನಮ್ಮವರನ್ನು ದಾರಿ ತಪ್ಪಿಸಿದ ಪರಿ ಎಂತಹುದಿರಬಹುದು! ಆತನ ಸುಲ್ಹ್-ಇ-ಕುಲ್ ನೀತಿಯೇ ಇದಕ್ಕೆ ವರದಾನವಾದದ್ದು. ಆದರೆ ಆತ ಚಿತ್ತೋಡನ್ನು ನಾಶಪಡಿಸುವಾಗ ಜಿಹಾದ್ ಎಂದೇ ಪರಿಗಣಿಸಿದ್ದು ಮರೆಯಾಗಿ ಹೋಯಿತು! ಆತನ ಸುಲ್ಹ್-ಇ-ಕುಲ್ ನೀತಿಯ ಉದ್ದೇಶ ಕಂದಾಚಾರಿ ಉಲೇಮಾಗಳ ಕಪಿಮುಷ್ಠಿಯಿಂದ ತನ್ನನ್ನು ತಾನು ಬಿಡಿಸಿಕೊಳ್ಳುವುದಾಗಿತ್ತೇ ಹೊರತು ಹಿಂದೂಗಳನ್ನು ಸಮಾನವಾಗಿ ಕಾಣುವ ದೃಷ್ಠಿಯಾಗಿರಲಿಲ್ಲ ಎಂಬ ಅಂಶ ಬೆಳಕಿಗೆ ಬರಲೇ ಇಲ್ಲ. ದೀನ್ ಇಲಾಹಿ ಹೆಸರಿನಲ್ಲಿ ಎಷ್ಟೊಂದು ಜನರನ್ನು ವೈಚಾರಿಕವಾಗಿ ಮತಾಂತರಿಸಲಾಯಿತು! ಇದೆಲ್ಲವನ್ನೂ ತನ್ನ ಪರವಾಗಿ ಬಳಸಿಕೊಂಡು ಸಾಯುವವರೆಗೆ ರಜಪೂತ ಸ್ತ್ರೀಯರನ್ನು ತನ್ನ ಜನಾನದಲ್ಲಿ ತುಂಬಿಸಿಕೊಂಡ ಅವನ "ಲವ್ ಜಿಹಾದ್" ಮರೆಯಲು ಸಾಧ್ಯವೇ? ತಾನು ಮಾಡದಿದ್ದರೂ ತನ್ನ ಕೈಕೆಳಗಿನ ಅಧಿಕಾರಿಗಳಿಂದ ದೇವಾಲಯಗಳ ನಾಶ ಮಾಡಿಸಿದ ಆತನನ್ನು ಪರಮತ ಸಹಿಷ್ಣು ಎಂದರೆ ಅದು ಇತಿಹಾಸದ ವಿಕೃತಿಯಲ್ಲದೆ ಇನ್ನೇನು? ಅವನ ಮುಂದಿನ ಸಂತತಿಗಳಾಗಿದ್ದ ಮದಿರೆ-ಮಾನಿನೀಲೋಲರಾಗಿದ್ದ ಜಹಾಂಗೀರ್ ಹಾಗೂ ಮದನಕಾಮರಾಜ ಷಹಜಹಾನರಂತೂ ಅಕ್ಬರನ ಕಾರ್ಯಕ್ಕೆ ಮತ್ತಷ್ಟು ಮೆರುಗು ತಂದರು! ಇನ್ನು ಇವರೆಲ್ಲರ ಮೂರ್ತರೂಪ ಔರಂಗಜೇಬನನ್ನು ಕೇಳಬೇಕೆ? ಅವನ ಕಾಲದಲ್ಲಿ ದೇವಾಲಯ ನಾಶ ಎನ್ನುವುದು ದಿನನಿತ್ಯದ ಆಟ!
               ಮುಲ್ತಾನ್, ಥಾನೇಶ್ವರ್, ಕಾಂಗ್ರಾ, ಮಥುರಾ, ಸೋಮನಾಥ, ವಾರಾಣಸಿ, ಉಜ್ಜಯಿನಿ, ಚಿದಂಬರಂ, ಪುರಿ, ದ್ವಾರಕ, ಗಿರ್ ನಾರ್, ಕಾಂಚೀಪುರಗಳು ಸತತವಾಗಿ ದಾಳಿಗೊಳಗಾದವು. ಕೇವಲ ದಾಳಿ ಮಾತ್ರವಲ್ಲ; "ಅಲ್ಲಿನ ಶಿಲ್ಪಕಲಾ ಸಂಪತ್ತನ್ನು ಲೂಟಿ ಮಾಡಲಾಯಿತು", "ಉರುಳಿಸಲಾಯಿತು", "ಹಾಳುಗೆಡವಲಾಯಿತು", "ಜ್ವಲಿಸುವ ವಸ್ತುಗಳಿಂದ ಸುಡಲಾಯಿತು", "ಕುದುರೆಗಳಿಂದ ತುಳಿಸಿ ನಿಶ್ಯೇಷ ಮಾಡಲಾಯಿತು", "ಕುರುಹು ಕೂಡಾ ಉಳಿಯದಂತೆ ಅವುಗಳ ತಳಪಾಯದಿಂದಲೇ ನಿರ್ನಾಮಗೊಳಿಸಲಾಯಿತು" ಎಂದು ಸ್ವತಃ ಆ ಕಾಲದ ಮುಸ್ಲಿಮ್ ಇತಿಹಾಸಕಾರರೇ ಇವುಗಳೆಲ್ಲಾ ತಮ್ಮರಸರ ಸಾಧನೆಯೆಂಬಂತೆ ಹಾಡಿ ಹೊಗಳಿದ್ದಾರೆ. ಘಜನಿ ಮಹಮ್ಮದ್ ಮಥುರಾದ ಸುಮಾರು 1000 ದೇವಾಲಯಗಳನ್ನು, ಕನೋಜ ಹಾಗೂ ಅದರ ಸುತ್ತಮುತ್ತಲಿನ ಹತ್ತುಸಾವಿರ ದೇವಾಲಯಗಳನ್ನು ಲೂಟಿ ಮಾಡಿ ಸುಟ್ಟು ಹಾಕಿದನು! ಕೇವಲ ಕಾಂಗ್ರಾದ ಮೇಲೆ ಘಜನಿ ದಾಳಿ ಮಾಡಿದಾಗ ಏಳು ಕೋಟಿ ದಿರ್ಹಾಮ್, ಏಳು ಲಕ್ಷ ಮಣ ಚಿನ್ನ-ಬೆಳ್ಳಿಗಳನ್ನು ದೋಚಿದ್ದನೆಂದರೆ ಆತ ಭಾರತದ ಮೇಲೆ ಹದಿನೇಳು ಸಲ ದಾಳಿ ಮಾಡಿದಾಗ ದೋಚಿದ ಐಶ್ವರ್ಯ ಎಷ್ಟಿರಬಹುದು? ಅವನ ಉತ್ತರಾಧಿಕಾರಿಗಳಲ್ಲೊಬ್ಬನಾದ ಇಬ್ರಾಹಿಮನು ಗಂಗಾ - ಯಮುನಾ ದೋ ಅಬ್ ಪ್ರಾಂತ್ಯದಲ್ಲಿ  ಹಾಗೂ ಮಾಳವದಲ್ಲಿ ತಲಾ 1000 ದೇವಾಲಯಗಳನ್ನು ನೆಲಸಮ ಮಾಡಿದನು. ಘೋರಿ ಅಹಮದನು ವಾರಾಣಸಿಯ 1000 ದೇವಾಲಯಗಳನ್ನು ನಾಶಪಡಿಸಿದರೆ ಕುತುಬುದ್ದೀನ್ ಐಬಕ್ ಆನೆಗಳನ್ನು ಬಳಸಿಕೊಂಡು ದೆಹಲಿಯ 1000 ದೇವಾಲಯಗಳನ್ನು, ಬಿಜಾಪುರದ ಒಂದನೇ ಅಲಿ ಆದಿಲ್ ಶಾನು ಕರ್ನಾಟಕದಲ್ಲಿ 300ಕ್ಕೂ ಹೆಚ್ಚು ದೇವಾಲಯಗಳನ್ನು ನೆಲಸಮ ಮಾಡಿದರು. ಅಲ್ಲದೆ ಕುತುಬುದ್ದೀನ್ ಐಬಕ್ ವಿಶಾಲದೇವದ ಸಂಸ್ಕೃತ ವಿಶ್ವವಿದ್ಯಾಲಯವನ್ನು ನಾಶಗೊಳಿಸಿದ. ಬಖ್ತಿಯಾರ್ ಖಿಲ್ಜಿಯು ವಿಶ್ವವಿದ್ಯಾಲಯಗಳ ಪಟ್ಟಣವಾಗಿದ್ದ ಬಿಹಾರದ ಓದಂತಿಪುರವನ್ನು ಸೂರೆಮಾಡಿದ. ಅಲ್ಲಿನ ದೇವಾಲಯಗಳೂ ಸುಟ್ಟುರಿದು ಹೋದವು. ಇಲ್ತಮಿಶ್ ಮಾಳವ-ವಿದಿಶಾಗಳಲ್ಲಿದ್ದ ದೇವಾಲಯಗಳನ್ನು ನಾಶ ಮಾಡಿದ ಮೇಲೆ ಉಜ್ಜಯಿನಿಯ ಮಹಾಕಾಲ ದೇವಾಲಯವನ್ನು ಧ್ವಂಸ ಮಾಡಿ ನೆಲಸಮಗೊಳಿಸಿದ. ಅಲ್ಲಿದ್ದ ಶಕಪುರುಷ ವಿಕ್ರಮನ ಮೂರ್ತಿಯನ್ನು ಕಿತ್ತೆಸೆದ. ಹಲವಾರು ವಿಗ್ರಹಗಳನ್ನು ದೆಹಲಿಯ ಮಸೀದಿಗಳಲ್ಲಿ ಹಾಸುಗಲ್ಲಾಗಿ ಹಾಕಿದ.  ಖಾಯೀಮ್ ಶಾ ಎಂಬ ಸೂಫಿ ಫಕೀರ ತಿರುಚಿರಾಪಳ್ಳಿಯಲ್ಲಿ 12 ದೇವಾಲಯಗಳನ್ನು ನಾಶಪಡಿಸಿದನು. ಇವೆಲ್ಲವೂ ಲಭ್ಯವಾಗಿರುವ ದಾಖಲೆಗಳಾದರೆ ಇನ್ನು ಮುಸ್ಲಿಮ್ ಇತಿಹಾಸಕಾರರ ವರ್ಣನೆಗಳಲ್ಲಿರುವ ಆದರೆ ಇಷ್ಟರವರೆಗೆ ಖಚಿತ ಆಧಾರ ಸಿಗದಿರುವ, ಹಾಗೂ ಅವರು ಬರೆಯದೇ ಉಳಿದವುಗಳು ಇನ್ನೆಷ್ಟೋ?
                ಅರಬರಿಗೆ "ಸೋಮನಾಥ" ಇಸ್ಲಾಂ ಪೂರ್ವದ ಕಾಲದಿಂದಲೇ ಪರಿಚಿತವಿತ್ತು. ಬಹುಷಃ ಗುಜರಾತಿಗೆ ಭೇಟಿ ನೀಡುತ್ತಿದ್ದ ಅರಬ್ ವರ್ತಕರು ಈ ವೈಭವೋಪೇತ ಶಿವ ದೇವಾಲಯದ ಬಗ್ಗೆ ತಮ್ಮ ದೇಶದ ಜನರಿಗೆ ತಿಳಿಸಿದ್ದಿರಬೇಕು. ಇಸ್ಲಾಂ ಪೂರ್ವದ ಅರಬರಿಗೆ ಸೋಮನಾಥ ಒಂದು ಯಾತ್ರಾ ಸ್ಥಳವಾಗಿರುವ ಸಾಧ್ಯತೆಯೂ ಬಹಳಷ್ಟಿದೆ. ಏಕೆಂದರೆ ಅವರು ಹಿಂದೂ 'ವಿಗ್ರಹಾರಾಧಕರಾಗಿದ್ದು' ಸೋಮನಾಥ ಬಗ್ಗೆ ಭಕ್ತಿ ಶೃದ್ಧೆಗಳನ್ನು ಹೊಂದಿದ್ದರೆ ಆಶ್ಚರ್ಯವಿಲ್ಲ. ಅವರ ಧಾರ್ಮಿಕ ಮೌಲ್ಯಗಳಲ್ಲಿ ಇಸ್ಲಾಂ ವ್ಯಾಪಕ ಬದಲಾವಣೆ ತಂದರೂ ಕೂಡಾ ಈ ಭಕ್ತಿಯ ಒಂದು ಭಾಗ ನಂತರ ಕೂಡಾ ಉಳಿದಿರಬೇಕು. ಇದಕ್ಕೆ ಹಿಂದಿನ ಅರಬರ ದೇವತೆ ಮನಾತ್ ಕಥೆಯಲ್ಲಿ ಅದರ ಒಂದು ಸುಳಿವು ಸಿಗುತ್ತದೆ. ಪ್ರವಾದಿಗಳು ಮನಾತ್ ದೇವತೆಯ ನಾಶಕ್ಕೆ ಯತ್ನಿಸಿದಾಗ ಆಕೆ ಅಲ್ಲಿಂದ ತಪ್ಪಿಸಿಕೊಂಡು ಸೋಮನಾಥ ದೇವಾಲಯದಲ್ಲಿ ಆಶ್ರಯ ಪಡೆದಿರಬೇಕು ಎನ್ನುತ್ತದೆ ಈ ಕಥೆ. ಈ ಕಥೆಯನ್ನು ಸಮರ್ಥಿಸುವ ಸಲುವಾಗಿ ಸೋ ಮತ್ತು ಮನಾತ್ ಎಂದು ವಿಭಜಿಸಲಾಯಿತು. ಹಲವು ಚರಿತ್ರೆಗಳಲ್ಲಿ ಇದರ ಉಲ್ಲೇಖವಿದೆ ಎನ್ನುತ್ತಾರೆ ಭಾರತದ ನೈಜ ಇತಿಹಾಸ ಬರೆದ ದಿವಂಗತ ಸೀತಾರಾಮ್ ಗೋಯಲ್. ಮುಂದೆ ಬಂದ ಮತ ಪ್ರವರ್ತಕರು ಕೇವಲ ವಿಗ್ರಹಗಳನ್ನು ಭಂಜಿಸುವುದು ಮಾತ್ರವಲ್ಲ, ಅವುಗಳ ಮೇಲಿನ ಆಭರಣಗಳನ್ನೂ ದೋಚಿದಾಗಲೂ, ಅವುಗಳನ್ನು ಒಡೆದಾಗಲೂ, ಅಪವಿತ್ರಗೊಳಿಸಿದಾಗ್ಯೂ ಈ ವಿಗ್ರಹಗಳಿಗೆ ತಿಳಿಯುವುದಿಲ್ಲ ಎಂದು ಏಕದೇವೋಪಾಸನೆಯ ಅರ್ಥವನ್ನು ಹಿಗ್ಗಿಸಿದರು. ಆದ್ದರಿಂದ ಸೀಸ್ತಾನಿನಲ್ಲಿ ಓರ್ವ ವಿಗ್ರಹ ಭಂಜಕನು ವಿಗ್ರಹದ ಕೈಗಳನ್ನು ಮುರಿದು, ಕಣ್ಣುಗಳನ್ನೇ ಕಿತ್ತು ಹಾಕಿದನು. ಮೊಹಮದ್ ಬಿನ್ ಕಾಸಿಂ ಮುಲ್ತಾನಿನಲ್ಲಿ ವಿಗ್ರಹದ ಕತ್ತಿನ ಹಾರವನ್ನು ತೆಗೆದು ಅಲ್ಲಿ ಗೋಮಾಂಸವನ್ನಿರಿಸಿದ! ಅಪಾರ ಪ್ರಮಾಣದ ಹಣ ಅಥವಾ ಚಿನ್ನವನ್ನು ಕೊಟ್ಟು ವಿಗ್ರಹಗಳನ್ನು ಬಿಡಿಸಿಕೊಳ್ಳಲು ಹಿಂದೂಗಳು ಪ್ರಯತ್ನಿಸಿದ್ದರು. ಆದರೆ ಆ ಮತಾಂಧರಿಗೆ "ಕೇವಲ ಹಣಕ್ಕಿಂತ" "ಅಲ್ಲಾನ ದೃಷ್ಟಿಯಲ್ಲಿ ಯೋಗ್ಯರಾಗುವುದು" ಬೇಕಾಗಿತ್ತು. ಇದನ್ನೇ ಘಜನಿಯು ಅಲ್ಲಾನು ಒಂದು ದಿನ ತನ್ನ ಹೆಸರನ್ನು ಬರೆಯುವಾಗ ಅಲ್ಲಿ ತಾನೊಬ್ಬ "ವಿಗ್ರಹ ಭಂಜಕ"ನಾಗಿ ಕಾಣಿಸಿಕೊಳ್ಳಬೇಕೆ ಹೊರತು "ವಿಗ್ರಹ ಮಾರಾಟಗಾರನಾಗಿ" ಅಲ್ಲ ಎಂದು ಘೋಷಿಸಿಕೊಂಡಿದ್ದನು! ಹಿಂದೂ ದೇವಾಲಯಗಳ ನಾಶವನ್ನು ಆರ್ಥಿಕ ಹಿನ್ನೆಲೆಯಲ್ಲಿ ವ್ಯಾಖ್ಯಾನಿಸಿದ "ಮಹಾನ್ ಇತಿಹಾಸಕಾರ"ರಿಗೆ ಈ ಅಂಶಗಳೇಕೆ ಗೋಚರಿಸಲಿಲ್ಲ?
              ಘಜನಿ, ಸೋಮನಾಥವೂ ಸೇರಿದಂತೆ ದೇವರ ಹಲವು ಮೂರ್ತಿಗಳನ್ನು ಕೈಯಾರೆ ಸ್ವತಃ ಒಡೆದು ಹಾಕಿದ್ದ. ಆ ಪ್ರತಿಮೆಗಳ ಕೆಲವು ತುಂಡುಗಳನ್ನು ತನ್ನ ರಾಜಧಾನಿ ಘಜನಿಯಲ್ಲಿ ಇರಿಸಿಕೊಂಡು ಉಳಿದವುಗಳನ್ನು ಮೆಕ್ಕಾ, ಮದೀನಾ, ಬಾಗ್ದಾದ್ ಗಳಿಗೆ ಕಳುಹಿಸಿಕೊಟ್ಟಿದ್ದನು. ಶಿವಲಿಂಗವನ್ನು ತುಂಡರಿಸಿ ಘಜನಿಯ ಜಾಮೀ ಮಸೀದಿಯ ಮೆಟ್ಟಿಲುಗಳನ್ನಾಗಿ ಮಾಡಿದ. ಮುಂದಿನ ಸುಲ್ತಾನರೂ ಇವನನ್ನೇ ಅನುಸರಿಸಿದರು. 1258ರಲ್ಲಿ ಚೆಂಗಿಸ್ ಖಾನನ ಮೊಮ್ಮಗ ಹಲಾಕುವು ಖಲೀಪನನ್ನು ಮಣ್ಣುಮುಕ್ಕಿಸಿ ಬಾಗ್ದಾದ್ ನಗರವನ್ನು ನೆಲಸಮಮಾಡಿದಾಗ ಹಿಂದೂಸ್ಥಾನದಲ್ಲಿ ಸಂಪಾದಿಸಿದ ಈ ಪ್ರತಿಮೆಗಳ ಭಗ್ನ ಭಾಗಗಳನ್ನು ತಮ್ಮ ಪವಿತ್ರ ಸ್ಥಾನಗಳಿಗೆ ಸಾಗಿಸುವ ಅವಕಾಶದಿಂದ ವಂಚಿತರಾದ ಮತಾಂಧರು ಅವುಗಳನ್ನು ಲಾಹೋರ್, ಮುಲ್ತಾನ್, ದೆಹಲಿ, ಲಖ್ನೋ, ದೌಲತಾಬಾದ್, ಗುಲ್ಬರ್ಗಾ, ಮಥುರಾ, ಬಹರಾನ್ ಪುರ, ಬೀದರ್, ಮಾಂಡು, ಅಹಮದಾಬಾದ್, ಆಗ್ರಾ, ಬಿಜಾಪುರ, ಗೋಲ್ಕೊಂಡಾ, ಹೈದರಾಬಾದ್, ಔರಂಗಾಬಾದ್ ಗಳಂತಹ ಮಸೀದಿಗಳ ಮುಂದೆ ಮೆಟ್ಟಿಲುಗಳಾಗಿ ಚೆಲ್ಲಾಡಿದರು. ಔರಂಗಜೇಬನ ಕಾಲದಲ್ಲಿ ವಿಗ್ರಹದ ಭಾಗಗಳನ್ನು ಗಾಡಿಗಳಲ್ಲಿ ತುಂಬಿಸಿ ತರಲಾಗುತ್ತಿತ್ತು. ಬಿಜಾಪುರದ ಒಂದನೇ ಅಲಿ ಆದಿಲ್ ಷಾ ಕರ್ನಾಟಕದಲ್ಲಿ ದಂಡಯಾತ್ರೆಯನ್ನು ಕೈಗೊಂಡಾಗ ಐದು ಸಾವಿರಕ್ಕೂ ಹೆಚ್ಚು ವಿಗ್ರಹಗಳನ್ನು ಸ್ವತಃ ಒಡೆದು ಹಾಕಿದ್ದ. ಫಿರೋಜ್ ಷಾ ತುಘಲಕ್ ಪುರಿ ದೇವಸ್ಥಾನದ ವಿಗ್ರಹಕ್ಕೆ ರಂಧ್ರ ಕೊರೆದು ಅದನ್ನು ಹಗ್ಗದಿಂದ ಕಟ್ಟಿ ದೆಹಲಿಯವರೆಗೂ ರಸ್ತೆಯಲ್ಲಿ ಎಳೆದುಕೊಂಡು ಹೋದನು. ಕಾಂಗ್ರಾದ ಜ್ವಾಲಾಮುಖಿ ದೇವಿಯ ವಿಗ್ರಹವನ್ನೊಡೆದು ಅದರ ಚೂರುಗಳನ್ನು ಗೋಮಾಂಸದಲ್ಲಿ ಬೆರೆಸಿ ಅದನ್ನು ಚೀಲಗಳಲ್ಲಿ ತುಂಬಿ ಬ್ರಾಹ್ಮಣರ ಕೊರಳಿಗೆ ನೇತು ಹಾಕಲಾಯಿತು. ಕಾಂಗ್ರಾದ ವಿಗ್ರಹದ ಭಗ್ನ ಭಾಗಗಳನ್ನು ಕಟುಕರಿಗೆ ನೀಡಿ ಮಾಂಸ ಮಾರಲು ಅವುಗಳನ್ನು ತೂಕದ ಕಲ್ಲುಗಳನ್ನಾಗಿ ಬಳಸುವಂತೆ ಆಜ್ಞೆ ಮಾಡಿದನು. ಅದೇ ವಿಗ್ರಹದ ತಾಮ್ರದ ಛತ್ರವನ್ನು ಕರಗಿಸಿ ಹಂಡೆಯನ್ನು ತಯಾರಿಸಲಾಯಿತು. ಮುಂದೆ ಮುಸ್ಲಿಮರು ನಮಾಜಿಗೆ ಹೋಗುವ ಮುನ್ನ ಕೈ-ಕಾಲು, ಮುಖ ತೊಳೆಯಲು ಅದನ್ನು ಬಳಸಲಾಗುತ್ತಿತ್ತು. ಮಾಳವದ ಮೊಹಮ್ಮದ್ ಖಿಲ್ಜಿಯು ಕುಂಭಲಗಢದ ವಿಗ್ರಹವನ್ನು ಸುಟ್ಟು ಅದನ್ನು ಹಿಂದೂಗಳು ವೀಳ್ಯಕ್ಕೆ ಸುಣ್ಣವಾಗಿ ಬಳಸುವಂತೆ ಮಾಡಿದನು. ಮಲ್ಲಿಕಾಫರನು ಚಿದಂಬರಂನ ಸುವರ್ಣ ದೇವಾಲಯ, ಶ್ರೀರಂಗಮ್-ಕಣ್ಣಾನೂರ್ ಸುತ್ತಲಿನ ದೇವಾಲಯಗಳನ್ನು ಧ್ವಂಸಗೊಳಿಸಿದನು. ಮಧುರೆಯ ಸೊಕ್ಕನಾಥ ದೇವಾಲಯಕ್ಕೆ ಬೆಂಕಿ ಇಟ್ಟನು. ತೈಮೂರ್, ಖಟ್ಮಂಡುವಿನ ಸ್ವಯಂಭೂನಾಥ ದೇವಾಲಯವನ್ನು ಧ್ವಂಸಗೊಳಿಸಿದ ಇಲ್ಯಾಸ್ ಶಾಹ್, ಅಯೋಧ್ಯೆಯ ರಾಮಮಂದಿರವನ್ನು ನಾಶ ಮಾಡಿದ ಬಾಬರ್ ಹಾಗೂ ಅವರ ಮುಂದಿನ ಸಂತಾನ ಈ ಕೃತ್ಯಗಳನ್ನು ಅನುಕರಿಸುತ್ತಲೇ ಬಂದಿತು.
             ಇನ್ನು ಮಹಾ ಜಾತ್ಯಾತೀತ ಕವಿ ಹಾಗೂ ಸಂತ ಎಂದು 'ಮಹಾನ್ ಇತಿಹಾಸಕಾರ'ರಿಂದ ಸ್ತುತಿಸಲ್ಪಟ್ಟ ಅಮೀರ್ ಖುಸ್ರು ಈ ದೇವಾಲಯಗಳ ನಾಶದ ಬಗ್ಗೆ ಬರೆದ ವರ್ಣನೆ ನೋಡಿದರೆ ಆತ ಹಾಗೂ ಆತನನ್ನು ಸ್ತುತಿಸಿದವರು ಎಂತಹವರು ಎನ್ನುವುದರ ಅರಿವಾಗುತ್ತದೆ. ಆತ ಬರೆಯುತ್ತಾನೆ..."ಸೋಮನಾಥ ದೇವಾಲಯವನ್ನು ಪವಿತ್ರ ಮೆಕ್ಕಾದ ಕಡೆಗೆ ತಲೆ ಬಾಗುವಂತೆ ಮಾಡಲಾಯಿತು. ದೇವಾಲಯವು ತನ್ನ ತಲೆಯನ್ನು ತಗ್ಗಿಸಿ ಸಮುದ್ರಕ್ಕೆ ಹಾರಿತು.ದೇವಳವು ಮೊದಲು ಪ್ರಾರ್ಥನೆ ಸಲ್ಲಿಸಿ ನಂತರ ಸ್ನಾನ ಮಾಡಿತು........ಲಿಂಗ ಮಹಾದೇವ ಎನ್ನುವ ಚಿದಂಬರಂ ಕಲ್ಲಿನ ವಿಗ್ರಹದ ಮೇಲೆ ಕಾಫಿರ ಹೆಂಗಳೆಯರು ತಮ್ಮ ಯೋನಿಗಳನ್ನು ಉಜ್ಜುತ್ತಿದ್ದರು. ಇಸ್ಲಾಮಿನ ಕುದುರೆಗಳು ಅದನ್ನು ಒಡೆಯುವವರೆಗೆ ಇದು ನಡೆದುಕೊಂಡುಬಂದಿತ್ತು. ವಿಗ್ರಹಗಳೆಲ್ಲಾ ಎಷ್ಟು ಎತ್ತರಕ್ಕೆ ಹಾರಿದವೆಂದರೆ ಒಂದೇ ಜಿಗಿತಕ್ಕೆ ಲಂಕಾದ ಕೋಟೆಯನ್ನು ಮುಟ್ಟಿದವು...ಖಲೀಫರ ಖಡ್ಗ ಧಾರೆಯು ತನ್ನ ಮಾರ್ಗದರ್ಶನದ ಬೆಳಕಿನಿಂದ ಹಿಂದೂಸ್ಥಾನದ ಕತ್ತಲೆಯನ್ನೆಲ್ಲಾ ಕಳೆದಿದೆ...ಜಿನ್ ಗಳ ಕಾಲದಿಂದಲೇ ಸೈತಾನತ್ವದಿಂದ ತುಂಬಿಕೊಂಡಿದ್ದ ಹಿಂದೂ ದೇವರುಗಳ ಹಲವು ಕೇಂದ್ರಗಳನ್ನು ನೆಲಸಮ ಮಾಡಲಾಯಿತು. ಸುಲ್ತಾನರು ದೇವಗಿರಿಯ ದಂಡಯಾತ್ರೆಯಿಂದ ಆರಂಭಿಸಿ, ಹಲವು ದೇವಾಲಯಗಳನ್ನು, ಅಲ್ಲಿನ ಮೂರ್ತಿಗಳನ್ನು ಒಡೆದು ಹಾಕಿದ ಪರಿಣಾಮವಾಗಿ ಕಾಫಿರರ ಎಲ್ಲಾ ಅಶುದ್ಧಿಗಳು ದೂರಾದವು. ದೇವಕಟ್ಟಳೆಯ ಬೆಳಕು ಈ ಎಲ್ಲಾ ಅಪವಿತ್ರ ಕ್ಷೇತ್ರಗಳನ್ನು ಬೆಳಗುವಂತಾಗಿದೆ...ಅಲ್ಲಾನಿಗೆ ಶ್ಲಾಘನೆಯಿರಲಿ" ದಕ್ಷಿಣ ಭಾರತದಲ್ಲಿ ಮುಸ್ಲಿಮ್ ಪಡೆಗಳು ವಿಜಯ ಸಾಧಿಸಿದಾಗ ಹೀಗೆಲ್ಲಾ ಬರೆದ ಖುಸ್ರು "ಮಹಾನ್ ಇತಿಹಾಸಕಾರ"ರಿಗೆ ಯಾವ ಕಣ್ಣಿನಿಂದ "ಸೆಕ್ಯುಲರ್" ಆಗಿ ಕಂಡನೋ ದೇವರೇ ಬಲ್ಲ. ಈಗ ಸಂಶಯ ಉದಿಸುವುದು ಸೆಕ್ಯುಲರ್ ಪದದ ಬಗೆಗೆ. ಹಿಂದೂ ಎನ್ನುವ ಎಲ್ಲದಕ್ಕೂ ಮಸಿ ಬಳಿಯುತ್ತಾ ಇಸ್ಲಾಮೀ ಎನ್ನುವ ಎಲ್ಲದಕ್ಕೂ ಸುಂದರತೆಯ ಲೇಪ ಹಚ್ಚುವ ಛದ್ಮವೇಷವೇ ಈ ಸೆಕ್ಯುಲರಿಸಂ ಅಲ್ಲದೆ ಇನ್ನೇನು?
                   ಇದಕ್ಕೆಲ್ಲಾ ಮೂಲ ಕಾರಣ ಏನು ಅನ್ನುವಾಗ ಸಿಗುವ ಉತ್ತರ ಆ ಮತ ಹಾಗೂ ಬೋಧನೆ! ಅದು ಆರಂಭವಾದದ್ದಾದರೂ ಹೇಗೆ? ಒಂದಾದ ಮೇಲೊಂದರಂತೆ ಪ್ರದೇಶಗಳ ಮೇಲೆ ದಾಳಿ ಮಾಡಿ, ಅಲ್ಲಿನ ಮುಗ್ಧ ಜನರನ್ನು ಕತ್ತರಿಸಿ ಹಾಕಲಾಯಿತು, ಬಲ ಪ್ರಯೋಗದ ಮೂಲಕ ಮತಾಂತರಿಸಲಾಯಿತು, ಭಾರೀ ಸಂಖ್ಯೆಯ ಸ್ತ್ರೀ-ಪುರುಷ-ಮಕ್ಕಳನ್ನು ಗುಲಾಮರನ್ನಾಗಿ, ಉಪಪತ್ನಿಯರನ್ನಾಗಿ ಮಾಡಿ ಆ ಎಲ್ಲಾ ಪ್ರದೇಶಗಳ ಕಲೆ-ಸಂಸ್ಕೃತಿ-ಕಟ್ಟಡಗಳನ್ನು ನಾಶ ಮಾಡಲಾಯಿತು. ಗ್ರಂಥಾಲಯಗಳನ್ನು ಸುಟ್ಟು, ಸಾಧುಗಳು-ವಿದ್ವಾಂಸರುಗಳನ್ನು ಕೊಂದುಹಾಕಲಾಯಿತು. ಖುರಾನಿನ ಹೆಚ್ಚಿನ ಭಾಗವನ್ನು ಬೈಬಲಿನಿಂದ ಎರವಲು ಪಡೆದದ್ದು. ಅಲ್ಲದೆ ಇಸ್ಲಾಂ ಪೂರ್ವ ಅರಬರ ದೇವತೆಯಾದ ಅಲ್ಲಾನನ್ನು ಅಪಹರಿಸಿ ಉಳಿದ ದೇವತೆಗಳೆಲ್ಲವನ್ನು ಸಹಿಸದ ತಮ್ಮ ಉಗ್ರ ದೇವತೆಯನ್ನಾಗಿಸಿದ ಇಸ್ಲಾಂನ ಅನುಯಾಯಿಗಳು ಉಗ್ರರಾಗದೇ ಇದ್ದಾರೆಯೇ? ಅವರ "ನಬಿ" ಎನ್ನುವ ಪ್ರವಾದಿ ಮೊಹಮ್ಮದನ ಒಂದು ಹೆಸರನ್ನು ಹೀಬ್ರೂ ಪದಭಂಡಾರದಿಂದ ಪಡೆದದ್ದು. ಹೀಗೆ ದೇವರು-ತತ್ವ ಎಲ್ಲವನ್ನು ಬೇರೆಯವರಿಂದ ಕೊಳ್ಳೆ ಹೊಡೆದು ತಮ್ಮದೇ ಅಭಿಪ್ರಾಯ(ಮತ)ವನ್ನು ಇತರರ ಮೇಲೆ ಹೇರುವ ಈ ಸಮುದಾಯಕ್ಕೆ ಕೊಳ್ಳೆಹೊಡೆಯುವ-ಅಪಹರಿಸುವ-ಬಲಾತ್ಕರಿಸುವ ಗುಣ ಜನ್ಮಜಾತ. ಅವರು ಪ್ರವಾದಿಯ ಮಾತುಗಳನ್ನಷ್ಟೇ ಅನುಸರಿಸಬಹುದೇ ಹೊರತು ತಮ್ಮ ವಿಚಾರ ಶಕ್ತಿಯನ್ನು ಬಳಸುವಂತಿಲ್ಲ!
             ಇಸ್ಲಾಮೀ ಕಥೆಗಳು ಕೂಡಾ ಪ್ರವಾದಿ ಮೊಹಮ್ಮದನನ್ನು ಹುಟ್ಟಿನಿಂದಲೇ ವಿಗ್ರಹ ಭಂಜಕನಾಗಿ, ಅಲ್ಲಾ ಹೊರತುಪಡಿಸಿ ಇತರ ದೇವತೆಗಳ ಬದ್ಧ ದ್ವೇಷಿಯಾಗಿಯೇ ಚಿತ್ರಿಸಿವೆ. ಕಾಬಾದಲ್ಲಿ ಆತ ತನ್ನ ಅನುಯಾಯಿಗಳ ಜೊತೆ ಸೇರಿ ಯಾರಿಗೂ ಕಾಣದಂತೆ ಅಲ್ಲಿನ ವಿಗ್ರಹವನ್ನು ನಾಶ ಮಾಡಿದ. ಆ ಬಳಿಕ ಮೆಕ್ಕಾದಲ್ಲಿ ಆ ಕಾರ್ಯ ಮಾಡಲು ಯತ್ನಿಸಿದನಾದರೂ ಅದು ವಿಫಲವಾಯಿತು. ಮೆಕ್ಕಾದಿಂದ ಹೆದರಿ ಪಲಾಯನಗೈಯ್ಯುವ ವೇಳೆಯಲ್ಲಿ ಮದೀನಾದಿಂದ ಮೂರು ಮೈಲು ದೂರವುಳ್ಳ ಕುಬಾ ಎನ್ನುವಲ್ಲಿ ಇಸ್ಲಾಂ ಇತಿಹಾಸದ ಮೊದಲ ಮಸೀದಿಯನ್ನು ಆತ ಕಟ್ಟಿದ. ಮುಂದೆ ಮದೀನಾದಲ್ಲಿ ಈತನ ಅನುಯಾಯಿಗಳು ಹೆಚ್ಚಾದೊಡನೆ ಸ್ಮಶಾನವಿದ್ದ ಜಾಗದಲ್ಲಿ ಅಲ್ಲಿನ ವಿಗ್ರಹಾರಾಧಕರ ಸಮಾಧಿಗಳನ್ನು ಕಿತ್ತೆಸೆದು, ಖರ್ಜೂರದ ಮರಗಳನ್ನು, ಹಳೆಯ ಕಟ್ಟಡಗಳನ್ನು ನಾಶ ಮಾಡಿ ಎರಡನೆಯ ಮಸೀದಿಯನ್ನು ಸ್ಥಾಪಿಸಲಾಯಿತು. ತನ್ನ ದರೋಡೆಕೋರ-ವಿಗ್ರಹಭಂಜಕ ಸೈನ್ಯ ಬಲವಾದೊಡನೆ ಆತ ಮೆಕ್ಕಾದ ಮೇಲೆ ದಾಳಿ ಮಾಡಿದ. ಅಲ್ಲಿದ್ದವರನ್ನೆಲ್ಲಾ ಬಲತ್ಕಾರದಿಂದ ಮತಾಂತರಿಸಿ, ಒಪ್ಪದವರನ್ನು ನಿವಾರಿಸಿ ಮುಂದೆ ಕಾಬಾದಲ್ಲಿದ್ದ 360 ವಿಗ್ರಹಗಳನ್ನು ನಾಶಪಡಿಸಿದ. ಕಾಬಾದ ಪ್ರಧಾನ ವಿಗ್ರಹ ಹೊಬಾಲ್ ನನ್ನು ಹೊಸ್ತಿಲಾಗಿ ಬಳಸಲಾಯಿತು. ಅಂದಿನಿಂದ ವಿಗ್ರಹಭಂಜನೆಯು ಇಸ್ಲಾಮ್ ಮತಶಾಸ್ತ್ರದ ಪ್ರಮುಖ ಹಾಗೂ ಶಾಶ್ವತ ಅಂಗವಾಗಿ ಉಳಿದುಕೊಂಡಿತು. ಆದರೆ ಅಲ್ಲಿ ಒಂದು "ಕಲ್ಲ"ನ್ನು ಉಳಿಸಲಾಯಿತು. ಅದು ನೇರವಾಗಿ ಸ್ವರ್ಗದಿಂದ ಇಳಿದು ಬಂದಿರುವುದಾಗಿಯೂ ತನ್ನ ಹಿಂಬಾಲಕರು ತನ್ನಂತೆಯೇ ಆ ಶಿಲೆಗೆ ಮುತ್ತಿಕ್ಕಿದರೆ ಆತನಿಗೆ ಒಳ್ಳೆಯದಾಗುತ್ತದೆ ಎಂದು ತಿಳಿಸಲಾಯಿತು. ಹೀಗೆ ಕತ್ತಿಯ ಮೊನೆಯಿಂದ ಹೆದರಿಸಿ-ಬೆದರಿಸಿ-ಕೊಂದು-ತಿಂದು ಆರಂಭವಾದ ಈ ಮತ ಅದೇ ಪರಂಪರೆಯನ್ನು ಮುಂದುವರಿಸಿ ವಿಶ್ವದಾದ್ಯಂತ ಹಬ್ಬಿತು.  ಎದುರಿಗೆ ಸಿಕ್ಕಿದೆಲ್ಲವನ್ನೂ ನಾಶಮಾಡುತ್ತಾ ಬಂದಿತು... ಯೂರೋಪಿನ ಚರ್ಚುಗಳಿಗೂ, ಇರಾನಿನಲ್ಲಿನ ಜರತುಷ್ಟ್ರರ ಅಗ್ನಿ ದೇವಾಲಯಗಳಿಗೂ ಇದೇ ಗತಿಯಾಯಿತು. ಆದರೆ ಅತೀ ಹೆಚ್ಚು ಹಾನಿಯಾದದ್ದು ಹಿಂದೂ ದೇವಾಲಯಗಳಿಗೇನೇ!
               ಪ್ರಾಚ್ಯಶಾಸ್ತ್ರ ಸಂಶೋಧನಾ ಉತ್ಖನನಗಳ ಮೂಲಕ ಅರೇಬಿಯಾ ಹಾಗೂ ಸಿಂಧ್ ನಡುವೆ ನಿರಂತರ ಸಂಪರ್ಕವಿತ್ತು ಎಂಬುದಾಗಿ ಸಾಬೀತಾಗಿದೆ. ಭಾರತೀಯ ವ್ಯಾಪಾರಿಗಳ ಜನವಸತಿಗಳು ಪಶ್ಚಿಮ ಸಮುದ್ರ, ಕೆಂಪು ಸಮುದ್ರ, ಪರ್ಶಿಯನ್ ಕೊಲ್ಲಿ, ಮೆಡಿಟರೇನಿಯನ್ ಸಮುದ್ರಗಳ ದಡದಲ್ಲಿರುವ ದೇಶಗಳ ಉದ್ದಗಲಕ್ಕೂ ಹಬ್ಬಿದ್ದವು. ಅಲ್ಲದೆ ಇಸ್ಲಾಂ ಉದಯದ ವೇಳೆ ಅರೇಬಿಯಾದಲ್ಲಿ ಹಿಂದೂಗಳ ವ್ಯಾಪಕ ಅಸ್ತಿತ್ವವಿತ್ತು ಎಂಬುದಕ್ಕೆ ಇಬನ್ ಇಶಾಕ್ ಸಾಕ್ಷ್ಯಗಳನ್ನು ನೀಡಿದ್ದಾನೆ. "ಆಲ್-ಹಾರಿತ್ ನಿಂದ ನಿಯೋಗವೊಂದು ಪ್ರವಾದಿಯ ಭೇಟಿಗಾಗಿ ಬಂದಿದ್ದಾಗ  ಪ್ರವಾದಿಗಳು ಅವರು ಹಿಂದೂಸ್ತಾನೀಯರಂತೆ ಕಾಣುತ್ತಾರೆ ಎಂದುಚ್ಚರಿಸಿದರು." ಎಂದು ಬರೆದಿದ್ದಾನೆ. ಹಾಗಾಗಿ ಕಾಬಾ ಒಂದು ಹಿಂದೂ ದೇವಾಲಯವಾಗಿತ್ತು ಎನ್ನುವ ವಾದಕ್ಕೆ ಪುಷ್ಠಿ ದೊರೆತಿದೆ. ಅಲ್ಲದೆ ಕಾಬಾ ಒಂದು ಪಾಗನ್ ದೇವಾಲಯ-ಅಬ್ರಹಾಂ ಅದನ್ನು ಸ್ಥಾಪಿಸಿದ ಎನ್ನುವುದು ಕಪೋಲಕಲ್ಪಿತ ಎನ್ನುವುದು ಸಂಶೋಧನೆಗಳಿಂದ ಸಾಬೀತಾಗಿದೆ. ಜನಪ್ರಿಯ ಮುಸ್ಲಿಮ್ ಇತಿಹಾಸಕಾರ ಫರಿಶ್ತಾ "ಇಸ್ಲಾಮ್ ಉದಯಕ್ಕೆ ಮುನ್ನ ಕಾಬಾದಲ್ಲಿನ ವಿಗ್ರಹಗಳನ್ನು ಪೂಜಿಸುವ ಸಲುವಾಗಿ ಹಿಂದೂಗಳು ಯಾತ್ರೆ ಕೈಗೊಳ್ಳುತ್ತಿದ್ದರು" ಎಂದಿದ್ದಾನೆ. ಅಲ್ಲದೆ ಪ್ರವಾದಿಯು ಲಾತ್ ಮತ್ತು ಮನಾತ್ ಎಂಬ ಸ್ತ್ರೀ ದೇವತೆಗಳನ್ನು ನಾಶ ಪಡಿಸಲೆತ್ನಿಸಿದಾಗ ಅವು ಸೋಮನಾಥದಲ್ಲಿ ರಕ್ಷಣೆ ಪಡೆದವು ಎನ್ನುವ ಮುಸ್ಲಿಮರ ನಂಬಿಕೆಯನ್ನು ನೋಡಿದಾಗ ಕಾಬಾದಲ್ಲಿದ್ದದ್ದು ಹಿಂದೂ ದೇವತೆಯೇ ಎನ್ನುವುದು ನಿಸ್ಸಂಶಯ. ಅಲ್ಲದೆ ಗುರುನಾನಕ್ ಕೂಡಾ ಕಾಬಾದಲ್ಲಿರುವುದು ಹಿಂದೂ ದೇವಾಲಯ-ಅಲ್ಲಿರುವುದು ಶಿವಲಿಂಗ. ಅಲ್ಲಿ ಪೂಜೆ ಮಾಡುತ್ತಿದ್ದವರ ನಡುವೆ ಹುಟ್ಟಿದವನೊಬ್ಬ ಅಥರ್ವವೇದವನ್ನು ತಿರುಚಿ ತನ್ನದೇ ಮತವನ್ನು ಖಡ್ಗಬಲದಿಂದ ಸೃಷ್ಟಿಸಿದ ಎಂದಿದ್ದಾರೆ. ಮುಸ್ಲಿಂ ಇತಿಹಾಸಕಾರರೂ ಅಲ್ಲಿದ್ದ ಹಿಂದೂಗಳು ಮುಸಲ್ಮಾನರ ಆಕ್ರಮಣವಾದಾಗ ಜೀವವುಳಿಸಿಕೊಳ್ಳಲು ಓಡಿಹೋದರು ಎಂದು ಉಲ್ಲೇಖಿಸಿದ್ದಾರೆ. ಒಟ್ಟಿನಲ್ಲಿ ಜಗತ್ತಿನ ಎಲ್ಲಾ ಕಡೆ ಇದ್ದ ಹಿಂದೂ ದೇವಾಲಯಗಳು ಇಸ್ಲಾಂ ಎಂಬ ಪಾಶವೀಯ ಮತದ ದುರಾಕ್ರಮಣಕ್ಕೆ ಬಲಿಯಾದವು....ಬಲಿಯಾಗುತ್ತಲೇ ಇವೆ!
         ಇಂದು ಉಳಿದಿರುವ ದೇವಾಲಯಗಳಾದರೂ ಸುಸ್ಥಿತಿಯಲ್ಲಿವೆಯೇ? ಹೆಚ್ಚಿನ ದೇವಾಲಯಗಳು ಮುಜರಾಯಿ ಇಲಾಖೆಗೊಳಪಟ್ಟಿದ್ದು ದೇವಾಲಯಗಳಿಂದ ಬರುವ ಆದಾಯವೇನೂ ಹಿಂದೂ ಸಮಾಜದ ಪೋಷಣೆಗೆ ಬಳಕೆಯಾಗುವುದಿಲ್ಲ. ಈಗಲೂ ಸರಕಾರದ ಅಸಡ್ಡೆಯಿಂದ, ಬುದ್ದಿಜೀವಿಗಳ ಚಿತಾವಣೆಯಿಂದ ದೇವಾಲಯಗಳು, ಅಲ್ಲಿನ  ಕಲಾ ಕೆತ್ತನೆಗಳು, ಭಿತ್ತಿ ಚಿತ್ರಗಳು, ಶಿಲಾ ಶಾಸನಗಳು ನಶಿಸುತ್ತಲೇ ಇವೆ. ಅಂದು ಕತ್ತಿ ಹಿಡಿದ ಮತಾಂಧ ಇಸ್ಲಾಮಿಗಳು ಮಾತ್ರವಿದ್ದರು. ಇಂದು ಅವರೊಂದಿಗೆ ಇದೋ ಇಲ್ಲಿದೆ, ಬನ್ನಿ ನಾಶ ಮಾಡಿ ಎಂದು ಕೈತೋರಿಸುವ, ಅವರ ಕಾರ್ಯವಾದ ನಂತರ ರಕ್ಷಣೆ ಕೊಡುವ ಮತಿಹೀನ ವಿಕೃತಿಗಳೂ, ಅದನ್ನು ಸಾಧನೆಯೆಂಬಂತೆ-ತಾವು ಹೇಳಿದ್ದೆ ಸತ್ಯವೆಂಬಂತೆ ಬರೆದಿಡುವ ಇತಿಹಾಸ ವಿಕೃತಕಾರರೂ ಇದ್ದಾರೆ. ಇನ್ನೇನು ಭಯ! ಇಸ್ಲಾಮಿಗಳ ಸಂಖ್ಯೆ ಹೆಚ್ಚಿರುವ ಕಡೆಗಳಲ್ಲಿ ದೇವಾಲಯಗಳು ಉರುಳುತ್ತಲೇ ಇವೆ. ದೇವಾಲಯಗಳ ಗೋಡೆಗಳನ್ನು ಚರ್ಚು ಮಸೀದಿಗಳು ಆಕ್ರಮಣ ಮಾಡುತ್ತಲೇ ಇವೆ. ಇತಿಹಾಸದ ಭೀಕರ ದಾಳಿಗಳ ಹೊರತಾಗಿಯೂ ನಾವು ನಮ್ಮನ್ನು ಉಳಿಸಿಕೊಂಡಿದ್ದೇವೆ ನಿಜ. ಆದರೆ ನಮ್ಮವರಿಗೆ ದೇವಾಲಯಕ್ಕೆ ಬೆಂಕಿ ಬಿದ್ದರೂ, ವಿರೂಪಗೊಳಿಸಿದ ಇತಿಹಾಸವನ್ನೇ ಮತ್ತೆ ಮತ್ತೆ ಬೋಧಿಸುತ್ತಿದ್ದರೂ, ಮತಾಂಧರು ನಮ್ಮ ಮೇಲೆ ಅನವರತ ಎರಗುತ್ತಲೇ ಇರುವಾಗಲೂ ಎಚ್ಚರವಾಗುವುದೇ ಇಲ್ಲ. ರಾಮನ ಜನ್ಮ ಭೂಮಿಯಲ್ಲಿ ಆತನಿಗೊಂದು ಆಲಯವನ್ನೇ ನಮ್ಮಿಂದ ಕಟ್ಟಲಾಗಲಿಲ್ಲ. ಇನ್ನು ಉಳಿದ ದೇವಾಲಯಗಳ ಪಾಡೇನು? ಇತಿಹಾಸ ತಿಳಿಯದ-ವರ್ತಮಾನದ ಅರಿವು ಇರದ-ಭವಿಷ್ಯದ ಚಿಂತೆ ಇರದ ಜನಾಂಗ ಎಷ್ಟು ಕಾಲ ಉಳಿದೀತು? ಹಾ... ಅಯೋಧ್ಯೆ ನಶಿಸುತ್ತಲೇ ಇದೆ...ಮೆಕ್ಕಾ ಬೆಳೆಯುತ್ತಲೇ ಇದೆ!

ಭಾನುವಾರ, ಸೆಪ್ಟೆಂಬರ್ 14, 2014

ಕಲ್ಲೇಟು ತಿಂದೂ ಬೆಲ್ಲದ ಸವಿಯ ಉಣಬಡಿಸಿತು ಭಾರತೀಯ ಸೇನೆ

ಕಲ್ಲೇಟು ತಿಂದೂ ಬೆಲ್ಲದ ಸವಿಯ ಉಣಬಡಿಸಿತು ಭಾರತೀಯ ಸೇನೆ!
             ಏಳು ದಿನಗಳ ಮಗುವನ್ನು ರಕ್ಷಿಸಿದರು. ಏಳು ವರ್ಷಗಳ ಬಾಲೆಯನ್ನೂ. ಎಪ್ಪತ್ತು ವರ್ಷದ ವೃದ್ಧರನ್ನೂ! ರಕ್ಷಿಸುವಾಗ ಜಾತಿ-ಮತಗಳಾವುವೂ ಅಡ್ಡಿಯಾಗಲಿಲ್ಲ. ಪ್ರತ್ಯೇಕವಾದಿ-ಏಕತಾವಾದಿ, ಪರಿಸರ ರಕ್ಷಕ-ಪರಿಸರ ಭಕ್ಷಕ, ದೇಶಪ್ರೇಮಿ-ದೇಶದ್ರೋಹಿ ಅಂತ ಯಾರನ್ನೂ ವಿಂಗಡಿಸಲಿಲ್ಲ. ಎಲ್ಲರನ್ನೂ ಪ್ರವಾಹದ ವಿರುದ್ದ ಈಜಿ ದಡ ಸೇರಿಸಿದರು. ಪ್ರೀತಿ ತೋರಿದವರನ್ನೂ ರಕ್ಷಿಸಿದರು. ತಮ್ಮ ಮೇಲೆ ಕಲ್ಲೆಸೆದವರನ್ನೂ ರಕ್ಷಿಸಿದರು! ಬಾಂಬಿಟ್ಟವರನ್ನೂ! ಏಕೆಂದರೆ ಭಾರತೀಯ ಸೈನಿಕರಲ್ಲೂ, ಸಂಘದ ಸ್ವಯಂಸೇವಕರಲ್ಲೂ ಇರುವುದು ದೇಶದ ಮೇಲಿನ ಅಪರಿಮಿತ ಭಕ್ತಿ! ತತ್ಪರಿಣಾಮದಿಂದ ರಾಗ-ದ್ವೇಷಗಳೆರಡೂ ಮರೆಯಾಗಿ ಸೇವೆಯ ಮೂರ್ತರೂಪವಷ್ಟೇ ಅಲ್ಲಿ ಉಳಿದು ಬಿಡುತ್ತದೆ! ಹೌದು, ಶತಮಾನದಲ್ಲೇ ಅತ್ಯಂತ ಭೀಕರ ಪ್ರವಾಹಕ್ಕೆ ಸಿಲುಕಿ ನಲುಗುತ್ತಿದೆ ಜಮ್ಮು ಕಾಶ್ಮೀರ! ಝೀಲಂ ಮತ್ತು ತಾವಿ ನದಿಗಳು ಉಕ್ಕೇರಿ ಹರಿದುದರ ಪರಿಣಾಮ ಕಾಶ್ಮೀರ ಕಣಿವೆ ಸಂಪೂರ್ಣ ಜಲಾವೃತಗೊಂಡು ಜಗತ್ತಿನ ದೊಡ್ಡ ಸರೋವರದಂತೆ ಭಾಸವಾಗುತ್ತಿದೆ.  ಪ್ರವಾಹದುರಿಯಲ್ಲಿ ಸಿಲುಕಿದ ಸ್ಥಳೀಯರು-ಪ್ರವಾಸಿಗರನ್ನು ರಕ್ಷಿಸುವ ಕಾರ್ಯದಲ್ಲಿ ಸೇನೆಯೊಂದಿಗೆ ಕೈ ಜೋಡಿಸಿದ್ದು ಕೋಮುವಾದಿಗಳು ಎಂದು ಕರೆಯಲ್ಪಡುವ ಅದೇ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರು!
                   1893ರಿಂದಲೂ ಆಗಾಗ್ಗೆ ಇಂತಹ ಪ್ರವಾಹ ಪರಿಸ್ಥಿತಿ ಉದ್ಭವವಾಗುತ್ತಲೇ ಇದೆ. 1903ರಲ್ಲಿ ದಾಲ್ ಸರೋವರದ ನೀರು ಉಕ್ಕೇರಿ ಕಾಶ್ಮೀರ ಕಣಿವೆ ಅಕ್ಷರಷಃ ಸರೋವರವಾಗಿ ಮಾರ್ಪಟ್ಟಿತ್ತು. ಮೂರು ಸಾವಿರಕ್ಕೂ ಅಧಿಕ ಮನೆಗಳು, 70 ಕಿಮೀಗೂ ಅಧಿಕ ರಸ್ತೆ, ಅಪಾರ ಪ್ರಮಾಣದ ಬೆಳೆ ನಾಶವಾಗಿ ಶ್ರೀನಗರ ಸ್ಮಶಾನ ಸದೃಶವಾಗಿತ್ತು. ವ್ಯವಸ್ಥಿತ ಹಾಗೂ ಸ್ಪಷ್ಟ ಯೋಜನೆಗಳಿಲ್ಲದ ನಗರೀಕರಣ, ಪರ್ವತ-ಕಾಡು ಕಡಿದು ಹೆಚ್ಚಿಸಿದ ಕೃಷಿಭೂಮಿ, ಸರೋವರಗಳ ನಿರ್ವಹಣೆ ಮಾಡದೆ ಅವುಗಳ ದಡದಲ್ಲಿ ಅಲ್ಲದೆ ಸರೋವರಗಳಿಗೂ ಕನ್ನ ಹಾಕಿ ಬೆಳೆದ ಅಕ್ರಮ ಕಟ್ಟಡಗಳು, ಜಲವಿದ್ಯುತ್ ಯೋಜನೆಗಳು, ಸ್ಥಳೀಯ ಸರಕಾರದ ವೈಫಲ್ಯ ಪ್ರತಿ ಬಾರಿಯೂ ಪ್ರವಾಹ ಹಾಗೂ ಪ್ರವಾಹದಿಂದ ಉದ್ಭವವಾದ ಪರಿಸ್ಥಿತಿಗೆ ಮೂಲ ಕಾರಣಗಳಾಗಿ ಸ್ಪಷ್ಟವಾಗಿ ಗೋಚರವಾಗುತ್ತವೆ. ದಾಲ್ ಸರೋವರದ ನೀರು ಏರಿಕೆಯಾಗುತ್ತಿದ್ದ ಹಾಗೆ ಅದನ್ನು ಆಂಚಾರ್ ಮತ್ತು ವುಲಾರ್ ಸರೋವರಗಳಿಗೆ ಬಿಡಲೆಂದಿರುವ ಫ್ಲಡ್ ಗೇಟುಗಳನ್ನು ತೆರೆಯದೇ ಇದ್ದುದು ಸ್ಥಳೀಯ ಸರಕಾರದ ನಿರ್ಲಕ್ಷ್ಯವನ್ನು ತೋರಿಸುತ್ತದೆ. ಓಮರ್ ಅಬ್ದುಲ್ಲಾ ಸರಕಾರದ ಅಸಮರ್ಥತೆ ಹಾಗೂ ದುರಾಡಳಿತವೇ ಇದಕ್ಕೆಲ್ಲಾ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
                ಕಾಶ್ಮೀರ ಕಣಿವೆಯಲ್ಲಿ 1000ಕ್ಕೂ ಅಧಿಕ ಹಳ್ಳಿಗಳು ಪ್ರವಾಹಕ್ಕೆ ಬಲಿಯಾಗಿವೆ. 400ಕ್ಕೂ ಅಧಿಕ ಹಳ್ಳಿಗಳು ಸಂಪೂರ್ಣ ಜಲಾವೃತವಾಗಿವೆ. ಕೆಲವೆಡೇ ಏಳು ಅಡಿಗಳಿಗಿಂತಲೂ ಅಧಿಕ ನೀರು ತುಂಬಿಕೊಂಡಿದೆ. ಅತ್ತ ಭಾರತೀಯ ಸೈನ್ಯಕ್ಕೂ ಈ ಪ್ರವಾಹ ಅಪಾರ ನಷ್ಟವನ್ನುಂಟುಮಾಡಿದೆ. ಕಾಶ್ಮೀರ ಕಣಿವೆಯಲ್ಲಿದ್ದ ಹೆಚ್ಚಿನ ಸೈನಿಕ ಕ್ಯಾಂಪುಗಳು ಮುಳುಗಡೆಯಾದ ಕಾರಣ ಅಪಾರ ಪ್ರಮಾಣದ ಶಸ್ತಾಸ್ತ್ರಗಳು ನಷ್ಟವಾಗಿವೆ. ಅನೇಕ ರೈಫಲ್ಸುಗಳು, ಗ್ರೇನೇಡುಗಳು, ಬಾಂಬುಗಳು ನೀರಿನಲ್ಲಿ ಕೊಚ್ಚಿಕೊಂಡುಹೋಗಿವೆ. 1.5 ಲಕ್ಷಕ್ಕೂ ಹೆಚ್ಚು ಜನರನ್ನು ಇದುವರೆಗೆ ರಕ್ಷಿಸಲಾಗಿದೆ.  ಬೆಳಿಗ್ಗೆ ನಾಲ್ಕು ಗಂಟೆಯಿಂದ ಮಧ್ಯರಾತ್ರಿಯವರೆಗೂ ಪರಿಹಾರ ಕಾರ್ಯಕ್ರಮದಲ್ಲಿ ಭಾಗವಹಿಸುವ ಯೋಧಪಡೆಗೆ ವಿಶ್ರಾಂತಿಯೆಂಬುದೇ ಮರೀಚಿಕೆಯಾಗಿದೆ. ಭಾರತೀಯ ವಾಯುಪಡೆ 35 ಹೆಲಿಕಾಫ್ಟರುಗಳನ್ನು, 53 ಏರ್ ಕ್ರಾಫ್ಟ್ ಗಳನ್ನು ಪರಿಹಾರ ಕಾರ್ಯಕ್ಕಾಗಿ ಬಳಸುತ್ತಿದೆ ಭಾರತೀಯ ರೈಲ್ವೇ ಹೆಚ್ಚುವರಿ ರೈಲುಗಳನ್ನು ವ್ಯವಸ್ಥೆಗೊಳಿಸಿದ್ದು, ಪರಿಹಾರ ಸಾಮಗ್ರಿಗಳನ್ನು ಸಾಗಿಸುತ್ತಿದೆ. ಔಷಧ-ಆಹಾರ-ವಸನ-ವಸತಿ ನಿರ್ಮಾಣ ಸಾಮಗ್ರಿಗಳನ್ನು ಪ್ರತ್ಯೇಕ ಬೋಗಿಗಳಲ್ಲಿ ಸಾಗಿಸುತ್ತಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘ ಹಗಲೂ ರಾತ್ರಿ ಪೀಡಿತರನ್ನು ಸಂರಕ್ಷಿಸುವ ಕಾರ್ಯದಲ್ಲಿ ಸೇನೆಯ ಕೈ ಬಲಪಡಿಸಿದ್ದು ಮಾತ್ರವಲ್ಲದೆ ಕಟ್ಟಡ ನಿರ್ಮಾಣ, ಆಹಾರ ಪೂರೈಕೆ ಮುಂತಾದುದನ್ನು ಎಂದಿನಂತೆ ಯಾವುದೇ ಪ್ರಚಾರವಿಲ್ಲದೆ ಮಾಡುತ್ತಿದೆ.  ಪ್ರತಿದಿನ ಒಂದು ಲಕ್ಷಕ್ಕೂ ಹೆಚ್ಚು ಆಹಾರದ ಪೊಟ್ಟಣಗಳನ್ನು ಉಚಿತವಾಗಿ ವಿತರಿಸುತ್ತಿದೆ ಅಮೃತಸರದ ಚಿನ್ನದ ಮಂದಿರ. ಅನೇಕ ಸಂಘ ಸಂಸ್ಥೆಗಳು ಭಂಡಾರಗಳನ್ನು ತೆರೆದು ಧರ್ಮಾರ್ಥ ಆಹಾರ ವಿತರಣೆಯನ್ನು ಆರಂಭಿಸಿವೆ. ಆದರೆ ತಾನೊಬ್ಬನೇ ಕಾಶ್ಮೀರದ ರಕ್ಷಕನೆನ್ನುವಂತೆ ಬೊಬ್ಬಿರಿಯುತ್ತಿದ್ದ ಪ್ರತ್ಯೇಕತಾವಾದಿ ಹುರಿಯತ್ ಕಾನ್ಫರೆನ್ಸ್ ಪಕ್ಷ ಕಾಶ್ಮೀರದಲ್ಲಿ ಇಂಥಾ ಸಂಧಿಗ್ಧ ಪರಿಸ್ಥಿತಿ ಬಂದಿದ್ದಾಗ ಕಾಣೆಯಾಗಿದೆ.
                  ಯಾವ ಸೈನ್ಯವನ್ನು ಕಾಶ್ಮೀರಿಗಳು ಅನುಮಾನದ ಕಣ್ಣಿನಿಂದ ನೋಡುತ್ತಿದ್ದರೋ, ಪ್ರತ್ಯೇಕತಾವಾದಿಗಳು ಪ್ರತಿದಿನವೂ ಯಾವ ಸೈನ್ಯವನ್ನು ಗುರಿಯಾಗಿಸಿ ಅರಚುತ್ತಿದ್ದರೋ, ಜಿಹಾದಿಗಳು ಯಾವ ಸೈನ್ಯದ ಮೇಲೆ ಬಾಂಬು ಒಗೆಯುತ್ತಿದ್ದರೋ ಅಂತಹ ಭಾರತೀಯ ಸೈನ್ಯವೇ ಇಂದು ಅವರ ರಕ್ಷಣೆಗೆ ಬೇಕಾಯಿತು ಎನ್ನುವುದು ಅಪ್ಪಟ ಸತ್ಯ. ಆದರೆ ಬಂದ ಪ್ರವಾಹದಲ್ಲಿ ಕಾಶ್ಮೀರದ ಸಮಸ್ಯೆಗಳು-ಪ್ರತ್ಯೇಕತಾವಾದಿ ಮನಸ್ಸುಗಳು ಕೊಚ್ಚಿಕೊಂಡು ಹೋಗಿ ಅವರ ಮನಸ್ಥಿತಿ ಬದಲಾಗಿದೆ ಎನ್ನೋಣವೆ? ಇಲ್ಲ! ಜಗತ್ತು ಮುಳುಗಿ ಹೋದರು ತಾವು ಬದಲಾಗುವುದಿಲ್ಲ ಎನ್ನುತ್ತಿದ್ದಾರೆ ಜಿಹಾದಿಗಳು! ಸೈನ್ಯ ರಕ್ಷಣಾ ಮತ್ತು ಪರಿಹಾರ ಕಾರ್ಯದಲ್ಲಿ ಸಮರೋಪಾದಿಯಲ್ಲಿ ಮುನ್ನುಗ್ಗುತ್ತಿರುವಂತೆ ಯಾವುದೇ ಭೇದವೆಣಿಸದೇ ಪ್ರವಾಹದುರಿಗೆ ಸಿಲುಕಿದ ಉಳಿದವರಂತೆ ತಮ್ಮನ್ನೂ ರಕ್ಷಿಸಿದ ಯೋಧರತ್ತ ಕಲ್ಲು ತೂರುತ್ತಿದ್ದಾರೆ ಪ್ರತ್ಯೇಕವಾದಿಗಳು. ಅಸಹಾಯಕರನ್ನು ರಕ್ಷಿಸಲು ಬರುತ್ತಿದ್ದ ಹೆಲಿಕಾಪ್ಟರುಗಳ ಮೇಲೂ ಕಲ್ಲು ತೂರಿದರು. ಕೆಲವು ಸ್ಥಳಗಳಲ್ಲಿ ಹೆಲಿಕಾಫ್ಟರುಗಳನ್ನು ಇಳಿಯಗೊಡಲಿಲ್ಲ. ಪ್ರವಾಸಿಗರಿಗೆ ಪಾಕಿಸ್ತಾನ ಪರ ಘೋಷಣೆ ಕೂಗಿ, ಅಲ್ಲಾನಿಗೆ ಜೈಕಾರ ಹಾಕಿ ಇಲ್ಲದಿದ್ದರೆ ನೀವು ಪ್ರಾಣ ಸಹಿತ ಹಿಂದಿರುಗಲಾರಿರಿ ಎಂದು ಧಮಕಿ ಹಾಕುತ್ತಿದ್ದಾರೆ. ಮೊದಲು ಸ್ಥಳೀಯರಾದ ನಮ್ಮನ್ನು ರಕ್ಷಿಸಿ, ಪ್ರವಾಸಿಗರು ಸತ್ತರೆ ಸಾಯಲಿ ಎಂದು ಯೋಧರ ಜೊತೆ ಜಗಳಕ್ಕಿಳಿಯುತ್ತಿದ್ದಾರೆ. ಯಾವುದೇ ಮತಭೇದವೆಣಿಸದೇ ಭಾರತೀಯರು ಕಾಶ್ಮೀರಿ ಮುಸ್ಲಿಮರನ್ನು ರಕ್ಷಿಸಿದ್ದಾರೆ. ಆದರೆ ಅದು ಏಕಮುಖ ಮಾತ್ರ ಎನ್ನುತ್ತಾರೆ ಭಾರತವನ್ನು ಪ್ರೀತಿಸುವ ಪ್ಯಾರಿಸ್ಸಿನ ಪತ್ರಕಾರ ಪ್ರಾಂಕೋಯಿಸ್ ಗೌತಿಯರ್. ಅದನ್ನು ಸಹಾಯ ಮಾಡುತ್ತಿರುವಾಗಲೇ ನಿಜ ಮಾಡುತ್ತಿದ್ದಾರೆ ಕಾಶ್ಮೀರಿಗಳು! ತಾವು ಕಾಶ್ಮೀರದ ಮುಸ್ಲಿಮರನ್ನು ರಕ್ಷಿಸಲಿಕ್ಕಿರುವವರು ಎಂಬಂತೆ ಪೋಸು ಕೊಡುತ್ತಿದ್ದ ಪ್ರತ್ಯೇಕವಾದಿಗಳು ಪ್ರವಾಹ ಬಂದಾಗ ಜನರ ರಕ್ಷಣೆಗೇಕೆ ಇಳಿಯಲಿಲ್ಲ. ಸದಾ ಪ್ರತ್ಯೇಕವಾದಿಗಳ ಪರವಾಗಿರುವ ಕೆಲವು ಮಾಧ್ಯಮ ಮಂದಿ ಪ್ರವಾಹ ಪೀಡಿತ ಸ್ಥಳಗಳಲ್ಲಿ ಪ್ರವಾಸ ಮಾಡುತ್ತಾ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಇತ್ತ ಸೈನ್ಯ ರಕ್ಷಣೆ ಹಾಗೂ ಪರಿಹಾರದ ಕಾರ್ಯದಲ್ಲಿ ತೊಡಗಿದ್ದರೆ ಅತ್ತ ಭಯೋತ್ಪಾದಕರು ಇದೇ ಸುಸಂದರ್ಭವೆಂದು ಗಡಿಯಲ್ಲಿ ನುಸುಳಿ ಬರುತ್ತಿದ್ದಾರೆ.
                ಅಲ್ಲದೇ ಈ ಪ್ರತ್ಯೇಕತಾವಾದಿಗಳ ಮನಸ್ಥಿತಿ ಹೇಗಿದೆಯೆಂದರೆ ಸೈನ್ಯ ಇರುವುದೇ ಸೇವೆ ಮಾಡಲು. ಹಾಗಾಗಿ ಸೈನ್ಯಕ್ಕೇನೂ ಈ ಪರಿಹಾರ ಕಾರ್ಯದ ಹೆಗ್ಗಳಿಕೆಯನ್ನು ಕೊಡಬೇಕಾಗಿಲ್ಲ ಎಂಬುದು ಅವರ ನಿಲುವು. ಅಲ್ಲದೆ ತಮ್ಮದೇ ಹುಡುಗರು ಅಷ್ಟು ಸಹಾಯ ಮಾಡಿದರು, ನೀರು ತುಂಬಿದ ಸ್ಥಳಗಳಲ್ಲಿ ಪ್ರತಿದಿನ ಈಜಿ ಹಲವಾರು ಜನರನ್ನು ರಕ್ಷಿಸಿದರು ಎಂದು ಸುಳ್ಳೇ ಸುಳ್ಳು ಸುದ್ದಿಗಳನ್ನು ಟ್ವಿಟರ್, ಬ್ಲಾಗುಗಳಲ್ಲಿ ಗೀಚುತ್ತಿದ್ದಾರೆ. ವಾಸ್ತವವಾಗಿ ಅವರು ಮಾಡುತ್ತಿರುವುದು ಯೋಧರ ಕಡೆಗೆ ಕಲ್ಲು ತೂರಾಟ, ಯೋಧರ ಜೊತೆ ಜಗಳ, ಹಾಗೂ ಅಳಿದುಳಿದ ಮನೆಗಳಿಂದ ದೋಚುವಿಕೆ, ಪ್ರವಾಸಿಗರಿಗೆ ಧಮಕಿ ಹಾಕುವುದು ಇವೇ ಮುಂತಾದುವು! ಅಲ್ಲದೆ ಕೆಲವು ಕಡೆ ಜವಾನರಿಗೆ ಬಡಿದು ಪೀಡಿತರ ರಕ್ಷಣೆಗೆಂದು ಒಯ್ಯುತ್ತಿದ್ದ ದೋಣಿಯನ್ನು ಮುರಿದು ಹಾಕಲಾಗಿದೆ. ಅಲ್ಲಲ್ಲಿ ನಮಗೆ ಭಾರತದ ಸೈನ್ಯದ ನೆರವು ಬೇಕಿಲ್ಲ ಎನ್ನುವ ಬ್ಯಾನರುಗಳು ಕೂಡಾ ಕಾಣಸಿಗುತ್ತಿವೆ. ಸೇನಾ ಮುಖ್ಯಸ್ಥ ಜನರಲ್ ದಲ್ಬೀರ್ ಸಿಂಗ್ ಸುಹಾಗ್ ಕಟ್ಟಕಡೆಯ ವ್ಯಕ್ತಿಯನ್ನು ರಕ್ಷಿಸುವವರೆಗೆ ನಾವು ವಿರಮಿಸುವುದಿಲ್ಲ. ಅವರು ನಮ್ಮತ್ತ ಕಲ್ಲೆಸೆಯಲಿ-ಹಲ್ಲೆ ಮಾಡಲಿ ನಮ್ಮ ಕರ್ತವ್ಯ ನಾವು ಮಾಡುತ್ತೇವೆ ಎಂದಿದ್ದಾರೆ. ಕಷ್ಟಕಾಲದಲ್ಲಿ ತಮ್ಮ ರಕ್ಷಣೆಗೆ ಬಂದ ಭಾರತೀಯ ಸೈನ್ಯದ ಶ್ರೇಷ್ಠ ಕಾರ್ಯದಿಂದಲೂ ಅವರು ತಮ್ಮ ಮನಸ್ಥಿತಿಯನ್ನು ಬದಲಾಯಿಸಿಕೊಂಡಿಲ್ಲವೆಂದರೆ ಅಂಥವರು ಮುಂದೆ ಕಾಶ್ಮೀರ ಕಣಿವೆಯಲ್ಲಿ ಪಂಡಿತರ ಮರುಸ್ಥಾಪನೆಯಾದನಂತರ ಅವರನ್ನು ಬದುಕಗೊಡುವರೇ? ಹಾಗಾಗಿ ಈ ಪ್ರತ್ಯೇಕತವಾದಿಗಳನ್ನು ನಿಗ್ರಹಿಸಬೇಕಾದ ತುರ್ತು ಅವಶ್ಯಕತೆ ಕೇಂದ್ರ ಸರಕಾರದ ಮುಂದೆ ಇದೆ. ಪ್ರತ್ಯೇಕವಾದಿಗಳು ಕಾಶ್ಮೀರಿ ಪಂಡಿತರಿಗೆ ಕೌಸರ್ ನಾಗ್ ಸರೋವರ ಯಾತ್ರೆಗೆ ಅಡ್ಡಿಪಡಿಸಿದರು. ಹಾಗಾಗಿ ಕೌಸರ್ ನಾಗಿನಿಂದ ಹೊರಡುವ ನದಿ "ವೇಶವ್" ತಾನೇ ಪಂಡಿತರ ಬಳಿ ಹರಿದು ಬಂತೋ ಎಂಬಂತೆ ಭಾಸವಾಗುತ್ತಿದೆ ಕಾಶ್ಮೀರದ ಈಗಿನ ಪರಿಸ್ಥಿತಿಯನ್ನು ನೋಡಿದರೆ!

ಮಂಗಳವಾರ, ಸೆಪ್ಟೆಂಬರ್ 9, 2014

ಹರೇ ರಾಮ ಎಂದ ಮುಗ್ಧ ಸುಮನಸನನ್ನೂ ಬಿಡಲಿಲ್ಲವಲ್ಲ ಪಾಪಿಗಳು


             "ಅನ್ಯಾಯವು ಸುಮ್ಮನೆ ಸಾಯುವುದಿಲ್ಲ. ತನ್ನ ಮೇಲೆ ಬೆಳೆದಿರುವ ಎಷ್ಟೋ ಜೀವಿಗಳನ್ನೂ, ಕಟ್ಟಡಗಳನ್ನು ಬಲಿ ತೆಗೆದುಕೊಂಡೇ ಹೋಗುತ್ತದೆ. ಮನುಷ್ಯಕೋಟಿಯು ನೈತಿಕವಾಗಿ, ಆಧ್ಯಾತ್ಮಿಕವಾಗಿ ಕೆಡುಕಿನ ಸ್ಪರ್ದೆಯಿಲ್ಲದೆ ಪೂರ್ಣ ಶಾಂತಿಯಿಂದ ಬಾಳುವ ಕಾಲವು ಬರಲಿ ಎಂದು ಆಶಿಸೋಣ. ಅದು ಎಂದಾದರೂ ಸರಿ. ಅಷ್ಟರವರೆಗೆ ಯುದ್ಧಸಿದ್ಧತೆಯನ್ನು ಅದಕ್ಕೆ ಜೀವನದಲ್ಲಿ ಗೌರವಸ್ಥಾನವನ್ನು ಮಾನವನು ಬಿಡುವಂತಿಲ್ಲ" ಮಹರ್ಷಿ ಅರವಿಂದರ ಮಾತು ಎಷ್ಟು ಅರ್ಥಪೂರ್ಣ. ಆದರೆ ನಾವು ಅದನ್ನು ಮರೆತೇ ಬಿಟ್ಟೆವು. ಈಗ ಶತ್ರುಗಳು ಹೊರಗಿನಿಂದಲ್ಲ. ನಮ್ಮೊಳಗಿನಿಂದಲೇ ನಮ್ಮವರನ್ನೇ ದಾಳವಾಗಿ ಉಪಯೋಗಿಸಿಕೊಂಡು ನಮ್ಮ ದಿಗ್ದರ್ಶಕರನ್ನು ಒಬ್ಬೊಬ್ಬರನ್ನಾಗಿ ನೇಪಥ್ಯಕ್ಕೆ ಸರಿಸಲು ಪ್ರಯತ್ನಿಸಿದಾಗಲೂ, ಯುದ್ಧ ಬಿಡಿ-ಯುದ್ಧ ಸಿದ್ಧತೆ ಹಾಗಿರಲಿ ಕನಿಷ್ಟ ನಮ್ಮ ಅರಿವಿಗೂ ಬರುತ್ತಿಲ್ಲವೆಂದಾದರೆ ವಿಪರ್ಯಾಸವಲ್ಲವೆ?

                ಶಂಕರಾಚಾರ್ಯರು ಮಲ್ಲಿಕಾರ್ಜುನನ ಸನ್ನಿಧಿಯಲ್ಲಿ ಕುಳಿತಿದ್ದಾಗ, ತಬ್ಬಲಿ ಜಿಂಕೆಮರಿಗೆ ಹೆಬ್ಬುಲಿಯೊಂದು ಹಾಲುಣಿಸಿದ್ದನ್ನು ಕಂಡರು. ಅಂತಹ ಶೋಕರಹಿತವಾದ ದೃಶ್ಯವನ್ನು ಕಂಡ ಶಂಕರಾಚಾರ್ಯರು ಅಲ್ಲಿ ಮಠವನ್ನು ಸ್ಥಾಪನೆ ಮಾಡಿ ಆ ಸ್ಥಳವನ್ನು ಅಶೋಕ ಎಂದು ಕರೆದರು. ಅಂತಹ ಶೋಕರಹಿತ ಸ್ಥಳದಲ್ಲಿ ಗೋಮಾತೆಯ ರಕ್ಷಣೆಗಾಗಿ ಕಾಮದುಘಾ(ಕೇಳಿದ್ದನ್ನು ಕೊಡಬಲ್ಲಂತಹ ಗೋಮಾತೆ) ಯೋಜನೆಯನ್ನು ಅಂದರೆ ಅಳಿವಿನ ಅಂಚಿನಲ್ಲಿರುವ ವಿಶಿಷ್ಟ ಭಾರತೀಯ ಗೋತಳಿಗಳ ಸಂರಕ್ಷಣೆ, ಸಂವರ್ಧನೆ, ಸಂಶೋಧನೆ, ಜಾಗೃತಿಯನ್ನು ಗೋಸಮ್ಮೇಳನದಂತಹ ಅಪರೂಪದ ಕಾರ್ಯಕ್ರಮಗಳ ಮೂಲಕ ಮಾಡಿಕೊಂಡು ಬಂದವರು ರಾಘವೇಶ್ವರ ಶ್ರೀಗಳು. ಶ್ರೀ ಭಾರತೀ ಗುರುಕುಲ ವಿಶ್ವವಿದ್ಯಾಲಯದ ಮೂಲಕ ವೇದಗಳು, ವೇದಾಂಗಗಳು, ಉಪವೇದಗಳು, ಆಯುರ್ವೇದ, ಅರ್ಥಶಾಸ್ತ್ರ, ಅರುವತ್ತನಾಲ್ಕು ಕಲೆಗಳನ್ನು ಕಲಿಸಿ-ಉಳಿಸಿ-ಬೆಳೆಸುವ ಪ್ರಯತ್ನವನ್ನು ಅನವರತ ನಡೆಸುತ್ತಿದ್ದಾರೆ ಶ್ರೀಗಳು. ಕೊಡಚಾದ್ರಿ ಉಳಿವಿಗಾಗಿ ಯಶಸ್ವಿ ಹೋರಾಟ, ಗೋಕರ್ಣದ ವೈಭವದ ಮರುಸ್ಥಾಪನೆ ಮಾಡಿ, ಜಗತ್ತು ಶೋಕರಹಿತವಾಗಬೇಕು. ಜಗತ್ತು ವೈರಮುಕ್ತವಾಗಬೇಕು. ಸರ್ವರೂ ಸಹಬಾಳ್ವೆ ಮತ್ತು ಸಂತೋಷದಿಂದ ಜೀವನ ನಡೆಸಬೇಕು ಎಂದು ಸರ್ವಥಾ ಪ್ರತಿಪಾದಿಸುತ್ತಾ, ರಾಮಕಥೆಯ ಮೂಲಕ ಜನರ ಮನಸ್ಸಿನಲ್ಲಿರುವ ದುಷ್ಟಪ್ರವೃತ್ತಿಗಳನ್ನು ಕಿತ್ತೊಗೆದು ರಾಮರಾಜ್ಯದ ಕನಸನ್ನು ಸಾಕಾರಗೊಳಿಸಲು ಸರ್ವಪ್ರಯತ್ನ ಮಾಡುತ್ತಿರುವ ಮುಗ್ಧ ಮನಸ್ಸಿನ ಸ್ವಾಮೀಜಿಯ ಮೇಲೆ ಒಂದರ ಹಿಂದೆ ಒಂದು ದುರುದ್ದೇಶಪೂರ್ವಕ ಆರೋಪಗಳನ್ನು ಮಾಡಿ ಶ್ರೀಗಳನ್ನೂ-ಶ್ರೀಗಳ ಭಕ್ತರನ್ನು ನಿತ್ಯ ಶೋಕಿಗಳನ್ನಾಗಿಸುವ ಶತ್ರುಗಳ ಹುನ್ನಾರವನ್ನು ಕಂಡಾಗ ನನಗೆ ಅರವಿಂದರ ಮೇಲಿನ ಮಾತುಗಳು ನೆನಪಿಗೆ ಬಂದವು.

             ಆರೋಪಿ ದಿವಾಕರ ಶಾಸ್ತ್ರಿ ಇವರು ಕೆಲವು ವ್ಯಾವಹಾರಿಕ ಕಾರಣದಿಂದ ಮಠದ ಸೇವೆಯಿಂದ ನಿವೃತ್ತರಾಗಿದ್ದರು; ಆದರೆ ಆಡಳಿತ ಸಮಿತಿಯಿಂದ ಕೈಬಿಟ್ಟಿರುವುದು ಸರಿಯಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಆದ್ದರಿಂದ ಅವರನ್ನು ಗೋಕರ್ಣ ಮಹಾಬಲೇಶ್ವರ ದೇವಸ್ಥಾನದ ಅಭಿವೃದ್ಧಿ ಸಮಿತಿಗೆ ಸದಸ್ಯರನ್ನಾಗಿ ಮಾಡಲಾಯಿತು. ಶಾಸ್ತ್ರಿ ಇವರು ಸಾಗರ ಹೊಸಗುಂದದ ಉಮಾಮಹೇಶ್ವರ ದೇವಸ್ಥಾನಕ್ಕೆ ಸ್ವಾಮೀಜಿಯವರ ಹೆಸರಿನಲ್ಲಿ ಟ್ರಸ್ಟ್ ಸ್ಥಾಪನೆ ಮಾಡಿದರು. ಅದರ ಲೆಕ್ಕ ಕೇಳಿದ್ದ ಹಿನ್ನೆಲೆಯಲ್ಲಿದಾಗ ಸಿಟ್ಟಾಗಿದ್ದರು. ಅಂದಿನಿಂದ ಶ್ರೀಗಳ ವಿರುದ್ಧ ಆರೋಪ ಮಾಡುವ ಷಡ್ಯಂತ್ರ ಮಾಡುವ ಕೃತ್ಯ ನಡೆಸಿದ್ದರು. ಶ್ರೀಗಳಿಗೆ ‘ಬ್ಲ್ಯಾಕ್ ಮೇಲ್’ ಮಾಡಿ ಮೂರು ಕೋಟಿ ರೂಪಾಯಿಗಳ ಬೇಡಿಕೆ ಇಟ್ಟಿದ್ದರು. ಇವೆಲ್ಲ ಪ್ರಕರಣಗಳ ಹಿನ್ನೆಲೆಯಲ್ಲಿ ಆರಕ್ಷಕರು ದಿವಾಕರ ಮತ್ತು ಪ್ರೇಮಲತಾ ಶಾಸ್ತ್ರಿ ದಂಪತಿಗಳನ್ನು ಬಂಧಿಸಿದ್ದರು. ಮಠದ ಅನ್ನ ತಿಂದು ಶ್ರೀಗಳ ಮೇಲೆ ಅತ್ಯಾಚಾರ ಆರೋಪ ಹೊರಿಸಿರುವುದರ ಹಿಂದೆ ಏನೋ ಷಡ್ಯಂತ್ರ ಇದೆ ಎನ್ನುವುದು ಪ್ರತಿಯೊಬ್ಬ ನೀತಿವಂತ ಮನುಜನ ಅಭಿಪ್ರಾಯವಾಗಿದೆ.

                   ರಾಘವೇಶ್ವರ ಭಾರತೀ ಶ್ರೀಗಳ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಲು ಆತುರದ ಪ್ರಯತ್ನ ನಡೆಸಿರುವುದು ಮೇಲ್ನೋಟಕ್ಕೆ ಗೋಚರವಾಗುತ್ತಿದೆ.  ಸಿಐಡಿ ತನಿಖೆಗೆ ಆದೇಶಿಸಿದ ಬಳಿಕವೂ ರಾಘವೇಶ್ವರ ಶ್ರೀಗಳ ವಿರುದ್ಧ ಐಪಿಸಿ ಸೆಕ್ಷನ್ 376ನ್ನು ಸೇರಿಸಲು ಗಿರಿನಗರ ಪೊಲೀಸರ ಮೇಲೆ ಪ್ರಭಾವಿಗಳು ಒತ್ತಡ ಹೇರುತ್ತಿದ್ದಾರೆ ಎನ್ನಲಾಗುತ್ತಿತ್ತು. ಸೋಮವಾರ ಬೆಳಗ್ಗೆ ಈ ಸಂಬಂಧ ಬೆಂಗಳೂರು ಅಧೀನ ನ್ಯಾಯಾಲಯದಲ್ಲಿ ಗಿರಿನಗರ ಪೊಲೀಸ್ ಠಾಣಾಧಿಕಾರಿಗಳು ಅರ್ಜಿ ಸಲ್ಲಿಸಿ ಐಪಿಸಿ ಸೆಕ್ಷನ್ 376ನ್ನು ಸೇರಿಸಲು ಅನುಮತಿ ಕೇಳಿದ್ದಾರೆ. ಆದರೆ ಈ ಅರ್ಜಿಯ ಬಗ್ಗೆ ಯಾವುದೇ ತೀರ್ಪು ನೀಡದೆ ಪರ್ಮಿಟೆಡ್ ಟು ಪುಟಪ್ ಎಂದು ನ್ಯಾಯಾಧೀಶರು ಸಹಿ ಮಾಡಿರುವುದನ್ನೇ ಪರ್ಮಿಟೆಡ್ ಎಂದು ವ್ಯಾಖ್ಯಾನಿಸಿ ಅತ್ಯಾಚಾರ ಪ್ರಕರಣ ದಾಖಲಿಸುವ ಆತುರದ ನಿರ್ಣಯ ಮಾಡಲಾಗಿದೆ. ಇದಲ್ಲದೇ ಹೈಕೋರ್ಟ್‌ಗೂ ಇದೇ ರೀತಿಯ ತಪ್ಪು ಮಾಹಿತಿಯನ್ನು ಒದಗಿಸಲಾಗಿದೆ.  ಈ ಮೂಲಕ ಪ್ರಕರಣವನ್ನು ತಿರುಚಿ ತಮ್ಮ ದುರುದ್ದೇಶ ಈಡೇರಿಸಿಕೊಳ್ಳಲು ಮುಂದಾಗಿರುವುದು ಕಂಡುಬರುತ್ತದೆ. ಸಿಐಡಿ ತನಿಖೆಗೆ ಆದೇಶಿಸಿದ ಬಳಿಕವೂ ಕಾನೂನು ಸುವ್ಯವಸ್ಥೆ ವಿಭಾಗದ ಪೊಲೀಸರು ಮಧ್ಯ ಪ್ರವೇಶಿಸುತ್ತಿರುವುದು ವಿಚಾರಣೆಯಲ್ಲಿನ ಹಸ್ತಕ್ಷೇಪವನ್ನು ಪ್ರದರ್ಶಿಸುತ್ತಿದೆ. ಪೊಲೀಸರ ಈ ಕ್ರಮವನ್ನು ಪ್ರಶ್ನಿಸಿ ಶ್ರೀಮಠದ ವಕೀಲರು ಅಧೀನ ನ್ಯಾಯಾಲಯದಲ್ಲಿ ಆಕ್ಷೇಪಣಾ ಅರ್ಜಿ ಸಲ್ಲಿಸಿದ್ದಾರೆ. ಸಿಐಡಿ ತನಿಖೆಯನ್ನು ವಿಳಂಬ ಮಾಡುತ್ತ, ವ್ಯಾಪ್ತಿ ಮೀರಿ ಕಾನೂನು ಸುವ್ಯವಸ್ಥೆ ವಿಭಾಗದ ಮೂಲಕ ತನಿಖೆ ನಡೆಸಲು ಒತ್ತಡ ಹೇರಲಾಗುತ್ತಿದೆ.

              ನಿನ್ನೆ ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಲಯ ಪ್ರಕರಣದ ವಿಚಾರಣೆಯನ್ನು 1 ದಿನ ಮುಂದೂಡುವಂತೆ ಹೇಳಿತ್ತು. ಆದರೆ ಇಂದು ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಂತರ ತಡೆಯಾಜ್ಞೆ ನೀಡಿರುವ ನ್ಯಾಯಾಲಯ ಪ್ರಕರಣದ ತನಿಖೆಗೆ 1 ವಾರಗಳ ಕಾಲ ತಡೆ ನೀಡಿದೆ. ರಾಮಚಂದ್ರಾಪುರದ ಮಠಾಧೀಶರಾದ ರಾಘವೇಶ್ವರ ಶ್ರೀಗಳ ವಿರುದ್ಧದ  ದೂರಿನ ಸತ್ಯಾಸತ್ಯತೆಯನ್ನು ಪರಿಶೀಲಿಸಬೇಕಿದೆ. ಹಿಂದಿನಿಂದಲೂ ಮಠದ ವಿರುದ್ಧ ಕೆಲವು ದೂರುಗಳ ದಾಖಲಾಗಿದ್ದವು. ದುರುದ್ದೇಶಪೂರ್ವಕವಾಗಿ ಮಠದ ವಿರುದ್ಧ ಕೆಲವರು ಪಿಐಎಲ್‌ಗಳನ್ನು ದಾಖಲಿಸಿದ್ದರು. ಹಾಗಾಗಿ  ರಾಮಚಂದ್ರಾಪುರ ಮಠಾಧೀಶರಾದ ರಾಘವೇಶ್ವರ ಭಾರತಿ ಶ್ರೀಗಳನ್ನು ಬಂಧಿಸುವಂತಿಲ್ಲ ಎಂದು ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.

             ಹಿಂದೂಗಳೇ ಮೈಕೊಡವಿಕೊಂಡು ಮೇಲೇಳಿ...ಅವರು ಹವ್ಯಕರ ಸ್ವಾಮೀಜೀ...ಏನಾದರೆ ನಮಗೇನು ಎನ್ನುವ ಜಾತಿಬುದ್ಧಿಯನ್ನು ಪ್ರದರ್ಶಿಸಿ ಮತ್ತೊಮ್ಮೆ ಮಗದೊಮ್ಮೆ ಶತ್ರು ತೋಡಿದ ಹಳ್ಳಕ್ಕೆ ಬೀಳದಿರಿ. ನಾವು ಒಗ್ಗಟ್ಟಾಗದಿದ್ದರೆ...ಇವತ್ತು ಸ್ವಾಮೀಜಿ, ನಾಳೆ ನಾವು ಬಲಿಯಾಗುತ್ತೇವೆ. ಒಂದು ಕಡೆಯಿಂದ ಜಿಹಾದಿಗಳು-ಮತಾಂತರಿಗಳು ನಮ್ಮನ್ನು ಜರ್ಝರಿತರನ್ನಾಗಿ ಮಾಡಿದ್ದರೆ ಇನ್ನೊಂದು ಕಡೆಯಿಂದ ಎಡಬಿಡಂಗಿ ಎಡಪಂಥೀಯರು-ಭಾರತ ವಿರೋಧಿಗಳು-ಮತಬ್ಯಾಂಕ್ ರಾಜಕಾರಣಿಗಳು ನಮ್ಮನ್ನು ಒಡೆಯುತ್ತಿದ್ದಾರೆ...
ಹರೇ ರಾಮ ಎಂದ ಮುಗ್ಧ ಸುಮನಸನನ್ನೂ ಬಿಡಲಿಲ್ಲವಲ್ಲ ಪಾಪಿಗಳು...ಹಿಂದೂಗಳೇ ರಾಮನಾಮದ ಬಲ ತೋರಿಸುವ ಕಾಲ ಸನ್ನಿಹಿತವಾಗಿದೆ. "ಅಹಿಂಸಾ ಪರಮೋ ಧರ್ಮ" ಎಂಬುದು "ಧರ್ಮ ಹಿಂಸಾ ತಥೈವಚ" ಎಂದು ಮುಂದುವರೆಯುತ್ತದೆ ಎನ್ನುವುದನ್ನು ಮರೆಯಬೇಡಿ...ಮತ್ತೊಮ್ಮೆ ಅರವಿಂದರ ಮಾತು ಮಾರ್ದನಿಸಲಿ...ಎದ್ದೇಳು ಓ ನನ್ನ ಹಿಂದೂ ಬಂಧು.