ಪುಟಗಳು

ಗುರುವಾರ, ಜನವರಿ 21, 2016

ಕಣ್ಣ ದೃಷ್ಠಿ ಕುಸಿಯುತ್ತಿದೆ...ಹುಣ್ಣ ಸೃಷ್ಟಿ ಏರುತ್ತಿದೆ!

ಕಣ್ಣ ದೃಷ್ಠಿ ಕುಸಿಯುತ್ತಿದೆ...ಹುಣ್ಣ ಸೃಷ್ಟಿ ಏರುತ್ತಿದೆ!

                     ಜಗತ್ತಿನ ಇತಿಹಾಸದಲ್ಲಿ ಪ್ರಾಚೀನವೆನಿಸಿದ ಎಂದೋ ಕಣ್ಮರೆಯಾದ ಬ್ಯಾಬಿಲೋನಿಯನ್, ಚಾಂಡಿಯನ್, ಐಗುಪ್ತ, ಯವನ ರಾಷ್ಟ್ರಗಳಿಗಿಂತಲೂ ಹಳೆಯದಾದ ಮತ್ತು ಹಿರಿದಾದ ಸಂಸ್ಕೃತಿ ಭಾರತದ್ದು. ಅತ್ಯಂತ ಪ್ರಾಚೀನ ರಾಷ್ಟ್ರವಾದ ಭಾರತಕ್ಕೆ ವಿಶ್ವದ ಎಲ್ಲೆಡೆಯಿಂದ ಜನ ಬಂದರು. ಇಲ್ಲಿನ ಸಾಂಸ್ಕೃತಿಕ ಶ್ರೀಮಂತಿಕೆ, ಏಕರೂಪತೆಗೆ ಮನಸೋತು ಇಲ್ಲಿಯೇ ಹಲವರು ನೆಲೆ ನಿಂತರು. ಹಾಗೆ ಬಂದವರೂ ಇಲ್ಲಿನ ಜೀವನ ಪದ್ದತಿಯನ್ನು ಅಳವಡಿಸಿಕೊಂಡರು. ಇಲ್ಲಿ ಅರಳಿರುವ ಸನಾತನ ಧರ್ಮದ ವಿಶೇಷತೆಯೇ ಅದಕ್ಕೆ ಕಾರಣ. ಆದರೆ ಯಾವಾಗ ಈ ಪುಣ್ಯಗರ್ಭೆಯ ವರಸುತ ಪೃಥ್ವೀರಾಜನನ್ನು ಮೋಸದಿಂದ ಘೋರಿ ಸೋಲಿಸಿದನೋ ಅಂದಿನಿಂದ ಇಲ್ಲಿಯ ಸಂಸ್ಕೃತಿಗೆ ಆಘಾತಗಳು ಆರಂಭವಾದವು. ಮುಸ್ಲಿಮರು ಹಾಗೂ ನಂತರ ಬಂದ ಕ್ರೈಸ್ತರು ಇಲ್ಲಿನ ಸಂಸ್ಕೃತಿಯ ಭಾಗವಾಗದೆ ಇಲ್ಲಿನ ಜೀವನ ಪದ್ದತಿಯೊಂದಿಗೆ ಹೊಂದಿಕೊಳ್ಳಲಾಗದೆ ಈ ದೇಶ ಬಹುಸಂಸ್ಕೃತಿಯ ಆಡುಂಬೋಲವಾಗಲು ಕಾರಣವಾದರು. ಅಷ್ಟೇ ಆದರೆ ಸಮಸ್ಯೆ ಉಂಟಾಗುತ್ತಿರಲಿಲ್ಲವೇನೋ! ಕತ್ತಿ ಹಿರಿದು, ಪ್ರಲೋಭನೆ ಒಡ್ಡಿ, ಸಂದರ್ಭದ ಲಾಭ ಪಡೆದು ಇಲ್ಲಿನ ಶಾಂತಿಪ್ರಿಯ ಜನರನ್ನು ತಮ್ಮ ಮತಕ್ಕೆ ಸೇರಿಸಿಕೊಳ್ಳಲಾರಂಭಿಸಿದ ಅವರ ಕುಟಿಲತನ, ಅಧಿಕಾರ ಪಡೆಯಲೋಸುಗ ಅವರು ಮಾಡಿದ/ಮಾಡುತ್ತಿರುವ ಷಡ್ಯಂತ್ರಗಳು, ತಮ್ಮ ಸಂಖ್ಯೆ ಹೆಚ್ಚಿಸಿಕೊಳ್ಳಲು ಅವರು ಮಾಡುತ್ತಿರುವ ಕುತಂತ್ರಗಳು ಹಾಗೂ ಪಡೆದುಕೊಂಡ ಸವಲತ್ತುಗಳು ಇವತ್ತು ದೇಶಕ್ಕೇ ಮಾರಕವಾಗುತ್ತಿದೆ. ಕ್ಷಣಕ್ಷಣಕ್ಕೂ ಏರುತ್ತಿರುವ ಅವರ ಸಂಖ್ಯೆ ಹಿಂದೂಗಳನ್ನು ಭಯಭೀತರನ್ನಾಗಿಸುತ್ತಿದೆ.

                 ಗೌರವ್ ಶರ್ಮಾ, ಲಖ್ನೋದ ಓರ್ವ ಕಥಕ್ ನೃತ್ಯಪಟು. ಸಾಮಾಜಿಕ ಜಾಲತಾಣದಲ್ಲಿ ಜಾಲಾಡುತ್ತಿರುವಾಗ ಈತನಿಗೆ ರಿಝ್ವಾನ್ ಎಂಬ ಪಾಕಿಸ್ತಾನಿಯೊಬ್ಬನ ಪರಿಚಯವಾಗುತ್ತದೆ. ಕ್ರಮೇಣ ಈ ಪರಿಚಯ ಪ್ರೇಮಕ್ಕೆ ತಿರುಗುತ್ತದೆ! ಅರೇ ಸಮಾನ ಲಿಂಗಿಗಳ ನಡುವೆ ಪ್ರೇಮ! ಕಲಿಗಾಲ, ಅದರಲ್ಲೂ ಈಗ ಕಾನೂನುಬದ್ಧ...ಇರಲೂಬಹುದು ಎಂದುಕೊಂಡಿರಾ...? ಅಷ್ಟಕ್ಕೇ ನಿಲ್ಲಲಿಲ್ಲ ಈ ಪ್ರೇಮಪ್ರಕರಣ. ಸರಣಿ ಶಸ್ತ್ರಚಿಕಿತ್ಸೆಗೊಳಗಾದ ಗೌರವ್ ೯ ತಿಂಗಳಲ್ಲಿ ಲಿಂಗ ಬದಲಾವಣೆ ಮಾಡಿಕೊಂಡು ಹೆಣ್ಣಾಗಿ ಬದಲಾಗುತ್ತಾನೆ! ಇವರಿಬ್ಬರ ನಡುವೆ ಇನ್ನೇನು ಕೆಲ ತಿಂಗಳಲ್ಲಿ ಮದುವೆಯು ನಡೆಯುತ್ತದೆ. ಇದೇನು ಕಥೆಯೇ ಎಂದು ಹುಬ್ಬೇರಿಸಬೇಡಿ! ಇದು ಕಥೆಯಲ್ಲ, ನೈಜ ಘಟನೆ. ಮುಖತಃ ಭೇಟಿಯಾಗದೆ, ಕೇವಲ ಸ್ಕೈಪ್ ಮುಖಾಂತರ ಒಬ್ಬರಿಗೊಬ್ಬರು ಪರಿಚಯ ಮಾಡಿಕೊಂಡ "ಸಮಾನ ಲಿಂಗಿಗಳಿಬ್ಬರು" ಪ್ರೇಮಿಸಲು ಅಲ್ಲಲ್ಲಾ ಕಾಮಿಸಲು ಶುರು ಮಾಡಿ ಕೊನೆಗೆ ಹಿಂದೂ ಹುಡುಗ ತನ್ನ ಲಿಂಗವನ್ನೇ ಪರಿವರ್ತನೆ ಮಾಡಿಕೊಂಡು ಮತಾಂತರಕ್ಕೊಳಗಾದ ಪರಿ! ಇದು ಮತಾಂತರದ ಹೊಸ ಅಸ್ತ್ರವೇ? ಗೊತ್ತಿಲ್ಲ. ಕೆಲವೇ ದಿನಗಳಲ್ಲಿ ಅರಿವಾಗಬಹುದು. ಆದರೆ ಆಗ ಕಾಲ ಮಿಂಚಿರುತ್ತದೆ!

                   ಸ್ವಾತಂತ್ರ್ಯ ಪೂರ್ವದಲ್ಲಿ ೧೯೪೧ರ ಜನಗಣತಿಯಂತೆ ಭಾರತದಲ್ಲಿ ಹಿಂದೂಗಳ ಸಂಖ್ಯೆ ೭೩.೮೧%, ಮುಸ್ಲಿಮರ ಸಂಖ್ಯೆ ೨೪.೨೮% ಇದ್ದರೆ ಕ್ರೈಸ್ತರದ್ದು ಕೇವಲ ೧.೯೧%. ಭಾರತದ ವಿಭಜನೆಯಾದಾಗ ಎಲ್ಲಾ ಮುಸಲ್ಮಾನರು ಪಾಕಿಸ್ತಾನಕ್ಕೆ ಹೋಗಬೇಕಿತ್ತಾದರೂ ಕೆಲವರು ಇಲ್ಲೇ ಉಳಿದರು. ಹೀಗೆ ೧೯೫೧ರಲ್ಲಿ ಜನಗಣತಿ ನಡೆದಾಗ ಭಾರತದಲ್ಲಿದ್ದ ಹಿಂದೂಗಳ ಸಂಖ್ಯೆ ೮೭%, ಮುಸ್ಲಿಮರ ಸಂಖ್ಯೆ ೧೦.೪೩% ಹಾಗೂ ಕ್ರೈಸ್ತರ ಸಂಖ್ಯೆ ೨.೩೩%. ೨೦೧೧ಕ್ಕಾಗುವ ಹಿಂದೂಗಳ ಸಂಖ್ಯೆ ೮೨.೫೯% ಆದರೆ ಮುಸಲರದ್ದು ೧೪.೨೩%! ಇದರಲ್ಲೇನು ವಿಶೇಷ. ಉಳಿದವರ ಸಂಖ್ಯೆ ಹೆಚ್ಚಿದಂತೆ ಮುಸ್ಲಿಮರ ಸಂಖ್ಯೆಯೂ ಹೆಚ್ಚುತ್ತಿದೆ ಅಂತ ಭಾವಿಸಿದರೆ ಅದು ನಮ್ಮ ಮೂರ್ಖತನ ಅಷ್ಟೇ. ವಾಸ್ತವದಲ್ಲಿ ಮುಸ್ಲಿಮರ ಸಂಖ್ಯೆ ವಿಪರೀತ ಏರುಗತಿಯಲ್ಲೇ ಸಾಗಿದ್ದರೆ ಹಿಂದೂಗಳ ಸಂಖ್ಯೆ ಕಡಿಮೆಯಾಗುತ್ತಲೇ ಇದೆ.  ಅದರಲ್ಲೂ ಅಸ್ಸಾಂ, ಪಶ್ಚಿಮ ಬಂಗಾಳ, ಕೇರಳ, ಗೋವಾ, ಉತ್ತರಾಖಂಡ, ಜಮ್ಮು ಕಾಶ್ಮೀರ, ದೆಹಲಿ ಹಾಗೂ ಹರಿಯಾಣಗಳಲ್ಲಿ ಮುಸಲರ ಸಂಖ್ಯೆ ವೇಗವಾಗಿ ಹೆಚ್ಚುತ್ತಿದೆ. ೨೦೦೧ಕ್ಕೆ ಹೋಲಿಸಿದಲ್ಲಿ ಈ ರಾಜ್ಯಗಳಲ್ಲಿ ಮುಸಲ್ಮಾನರ ಸಂಖ್ಯಾ ಹೆಚ್ಚಳ ರಾಷ್ಟ್ರೀಯ ಜನಸಂಖ್ಯಾ ಏರಿಕೆ ದರ ೦.೮%ಕ್ಕಿಂತ ಬಹಳ ಅಧಿಕವಾಗಿದ್ದು, ಅಸ್ಸಾಂನಲ್ಲಿ ೩.೩%, ಬಂಗಾಳದಲ್ಲಿ ೨.೩% ಏರಿಕೆ ಕಂಡು ಬಂದಿದೆ.
ಇದೇ ವೇಳೆ ಪಾಕಿಸ್ತಾನದಲ್ಲಿ ೧೯೪೧ರಲ್ಲಿ ೨೦% ಇದ್ದ ಹಿಂದೂಗಳ ಸಂಖ್ಯೆ ೨೦೧೧ಕ್ಕಾಗುವಾಗ ಕೇವಲ ೧.೬%! ಬಾಂಗ್ಲಾದಲ್ಲಿ ೩೦% ದಿಂದ ೯%ಕ್ಕೆ ಹಿಂದೂಗಳ ಸಂಖ್ಯೆ ಇಳಿದಿದೆ. ೨೦೧೧ರಲ್ಲಿ ಅತೀಹೆಚ್ಚು ಮುಸ್ಲಿಂ ಬಾಹುಳ್ಯವಿರುವ ದೇಶ ಇಂಡೋನೇಷಿಯಾವಾಗಿತ್ತು. ಸುಮಾರು ೨೧ಕೋಟಿ ಮುಸಲರು ಇಂಡೋನೇಷಿಯಾದಲ್ಲಿದ್ದರೆ ಪಾಕಿಸ್ತಾನದಲ್ಲಿ ೧೮ಕೋಟಿ, ಭಾರತದಲ್ಲಿ ೧೭.೨೨ ಕೋಟಿಯಷ್ಟು ಮುಸಲ್ಮಾನ ಸಂಖ್ಯೆಯಿತ್ತು. ಬಾಂಗ್ಲಾದಲ್ಲಿ ಸುಮಾರು ೧೩ಕೋಟಿಯಷ್ಟಿದ್ದರೆ, ಮುಂದಿನ ಸ್ಥಾನ ಆಫ್ರಿಕನ್ ದೇಶಗಳಾದ ನೈಜೀರಿಯಾ, ಈಜಿಪ್ಟುಗಳದ್ದು.

                 ಕೆಲವು ಬಲಪಂಥೀಯ ಧೋರಣೆಯುಳ್ಳವರಲ್ಲೂ ಮುಸ್ಲಿಮರ ಸಂಖ್ಯೆ ಹೆಚ್ಚಿದರೆ ನಮಗೇನು ತೊಂದರೆಯಾಗಲಾರದು. ಅಭಿವೃದ್ಧಿ, ಶಿಕ್ಷಣಗಳಿಂದಾಗಿ ಅವರಿಂದಾಗುವ ಅಪಾಯವನ್ನು ನಿವಾರಿಸಿಕೊಳ್ಳಬಹುದು ಎನ್ನುವ ಸೆಕ್ಯುಲರ್ ಬುದ್ಧಿಯಿದೆ. ಇದು ನಿಜವೇ ಆಗಿದ್ದ ಪಕ್ಷದಲ್ಲಿ ಯಾವುದೇ ಇಂಜಿನಿಯರ್, ಡಾಕ್ಟರುಗಳು ಭಯೋತ್ಪಾದಕರಾಗಬಾರದಿತ್ತು. ಆದರೆ ನಿಜಸ್ಥಿತಿಯೇ ಬೇರೆ. ಇನ್ನು ಕೆಲವರಲ್ಲಿ ಹದಿನಾಲ್ಕರಷ್ಟಿರುವ ಅವರೇನು ಮಾಡಿಯಾರು ಎನ್ನುವ ಉಡಾಫೆಯನ್ನೂ ಕಾಣಬಹುದು. ಆದರೆ ಎರಡು ವಾರಗಳ ಹಿಂದೆ ನಡೆದ ಮಾಲ್ಡಾ ಘಟನೆ ಇಂತಹ ವಾದವೆಲ್ಲವನ್ನೂ ತಳ್ಳಿ ಹಾಕುತ್ತದೆ. ಪ್ರತಿಭಟನೆಯೊಂದರಲ್ಲಿ ಸೇರಿದ ಎರಡೂವರೆ ಲಕ್ಷಕ್ಕೂ ಹೆಚ್ಚಿನ ಮುಸಲರು ಹಿಂದೂಗಳ ಮನೆಗಳು, ಪೊಲೀಸ್ ಸ್ಟೇಷನ್, ವಾಹನಗಳು, ದೇವಾಲಯಗಳನ್ನು ಸುಟ್ಟು ಹಾಕಿ ಒಂದು ವಾರಕ್ಕೂ ಹೆಚ್ಚು ಕಾಲ ಹಿಂದೂಗಳನ್ನು ಭೀತಿಯ ಬೇಲಿಯೊಳಗೆ ಬಂಧಿಸಿದರು. ಪೊಲೀಸ್ ಪಡೆಗಳನ್ನೇ ಬೆದರಿಸಿ, ಸೆಕ್ಯುಲರ್ ರಾಜಕಾರಣಿಗಳ ಸಹಾಯ ಪಡೆದು ಮಾರಣಹೋಮ ನಡೆಸಿದರು. ಶೇ ಹದಿನಾಲ್ಕರಷ್ಟಿರುವಾಗಲೇ ತಮಗೆ ಬೇಕಾದ್ದನ್ನು ಪಡೆದುಕೊಂಡು ದೇಶದ ರಾಜಕಾರಣವನ್ನು, ಸಮಾಜದ ಮನಸ್ಥಿತಿಯನ್ನು ತಮಗೆ ಅನುಕೂಲಕರವಾಗುವಂತೆ ಪರಿವರ್ತಿಸಬಲ್ಲವರಾದರೆ ಈ ಸಂಖ್ಯೆ ಹೆಚ್ಚಾದಂತೆ ಹಿಂದೂಗಳ ಪರಿಸ್ಥಿತಿ ಏನಾಗಬಹುದು?

               ೨೦೦೧ರಿಂದ ೨೦೧೧ರ ನಡುವೆ ಭಾರತದಲ್ಲಿ ಆದ ಜನಸಂಖ್ಯಾ ಏರಿಕೆ ೧೨.೮%. ಹಿಂದೂಗಳ ಸಂಖ್ಯೆ ೧೬.೮%ನಷ್ಟು ಏರಿದ್ದರೆ, ಮುಸಲರ ಏರಿಕೆಯ ಪ್ರಮಾಣ ೨೪.೬%! ಇದೇ ರೀತಿಯ ಏರುಗತಿ ಮುಂದುವರಿದಲ್ಲಿ ೨೦೬೧ಕ್ಕಾಗುವಾಗ ಹಿಂದೂಗಳೇ ಅಲ್ಪಸಂಖ್ಯಾತರಾಗುವ ಭೀತಿ ಎದುರಾಗಿದೆ. ಕಳೆದ ಮೂವತ್ತು ವರ್ಷಗಳಲ್ಲಂತೂ ಹಿಂದೂಗಳ ಸಂಖ್ಯೆ ವಿಪರೀತ ಕುಸಿಯುತ್ತಿದ್ದರೆ, ಏಳು ರಾಜ್ಯಗಳು ಹಾಗೂ ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ಹಿಂದೂಗಳೇ ಅಲ್ಪಸಂಖ್ಯಾತರಾಗಿರುವುದು ವಿಪರ್ಯಾಸ. ಜಮ್ಮು & ಕಾಶ್ಮೀರ, ಪಂಜಾಬ್, ನಾಗಾಲ್ಯಾಂಡ್, ಮಿಜೋರಾಂ, ಮೇಘಾಲಯ, ಮಣಿಪುರ, ಅರುಣಾಚಲ ಪ್ರದೇಶ, ಲಕ್ಷದ್ವೀಪಗಳಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗಿದ್ದು ಕೇರಳ, ಅಸ್ಸಾಂ, ಪಶ್ಚಿಮ ಬಂಗಾಳ, ಉತ್ತರಪ್ರದೇಶ, ಬಿಹಾರ ಆ ಹಾದಿಯಲ್ಲಿರುವ ರಾಜ್ಯಗಳು!

                ಅಕ್ರಮ ಗಡಿ ನುಸುಳುವಿಕೆ ಹಾಗೂ ಏಕರೂಪದ ಕಾನೂನು ಇಲ್ಲದಿರುವ ಕಾರಣ ಅಸ್ಸಾಂನ ಡುಬ್ರಿ, ಗೋಲ್ಪಾರಾ, ಬಾರ್ ಪೇಟ್, ನಾಗೋನ, ಹೈಲಂಕಾಡಿ, ಕರಿಂಗಂಜ್, ಮಾರಿಂಗಾನ, ದರಾಂಗ್, ಬೊಂಗೈಗಾಂವ್ ಮೊದಲಾದ ಜಿಲ್ಲೆಗಳಲ್ಲಿ ಮುಸ್ಲಿಮರ ಸಂಖ್ಯೆ ೫೦%ಗಿಂತಲೂ ಅಧಿಕವಾಗಿದೆ. ಅಲ್ಲದೆ ಏರಿಕೆಯ ಪ್ರಮಾಣವೂ ರಾಷ್ಟ್ರೀಯ ಸರಾಸರಿಗಿಂತ ಬಹಳ ಹೆಚ್ಚು. ಇದೇ ರೀತಿ ಉತ್ತರಪ್ರದೇಶದಲ್ಲಿ ಅತೀ ಹೆಚ್ಚು ಕೋಮುಗಲಭೆಗಳಾಗುವ ಮುಜಾಫರ್ ನಗರ್, ಮೊರಾದಾಬಾದ್, ರಾಂಪುರ, ಸಹರಾನ್ಪುರ ಸೇರಿದಂತೆ ಹತ್ತಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮುಸ್ಲಿಮರ ಸಂಖ್ಯೆ ೩೫%ಕ್ಕಿಂತ ಅಧಿಕವಾಗಿದೆ. ಪಶ್ಚಿಮ ಬಂಗಾಳದ ಮುರ್ಷಿದಾಬಾದ್, ಮೊನ್ನೆ ಗಲಭೆಯ ಕಿಚ್ಚು ಹಚ್ಚಿದ ಮಾಲ್ಡಾ, ಉತ್ತರ ದಿನಾಜ್ಪುರಗಳಲ್ಲಿ ಮುಸಲರು ೫೦%ಕ್ಕಿಂತ ಜಾಸ್ತಿಯಿದ್ದರೆ, ಹತ್ತು ಜಿಲ್ಲೆಗಳಲ್ಲಿ ಅವರ ಸಂಖ್ಯೆ ೨೫%ಗಿಂತಲೂ ಹೆಚ್ಚು! ಬಿಹಾರದ ಕಿಶನ್ ಗಂಜ್ ಹತ್ತಿರ ಹತ್ತಿರ ೭೦% ಮುಸಲರನ್ನು ಹೊಂದಿರುವ ಮಿನಿ ಪಾಕಿಸ್ತಾನ! ಕಾತಿಹಾರ್, ಅರಾರಿಯ, ಪೂರ್ನಿಯಾಗಳಲ್ಲಿ ೪೦% ಕ್ಕಿಂತಲೂ ಅಧಿಕ ಮುಸಲರಿದ್ದು, ಈ ಸಂಖ್ಯೆ ವಿಪರೀತ ಏರುತ್ತಿದೆ.

              ಕೇರಳದ ಮಲಪ್ಪುರಂ ಮಿನಿ ಪಾಕಿಸ್ತಾನವಾದರೆ, ಎರ್ನಾಕುಲಂ, ಇಡುಕ್ಕಿ, ಕೊಟ್ಟಾಯಂ, ಪಟ್ಟಣಂತಿಟ್ಟಗಳಲ್ಲಿ ಕ್ರೈಸ್ತರದ್ದೇ ಆಟಾಟೋಪ. ಕೇರಳದ ಹತ್ತು ಜಿಲ್ಲೆಗಳಲ್ಲಿ ಹಿಂದೂಗಳ ಜನಸಂಖ್ಯೆ ೬೦% ಕ್ಕಿಂತ ಕಡಿಮೆಯಿದೆ. ಅದರಲ್ಲೂ ಮಲಪ್ಪುರಂನಲ್ಲಿ ಹಿಂದೂಗಳ ಸಂಖ್ಯೆ ಕೇವಲ ೨೭.೬%! ಅಲ್ಲಿ ಮುಸಲರು ೭೦.೨೪% ಕ್ಕೆ ಬೆಳೆದಿದ್ದಾರೆ. ಕೇರಳದ ೨೪ ಲಕ್ಷ ಮುಸ್ಲಿಮರು ಉದ್ಯೋಗ ನಿಮಿತ್ತ ಭಾರತದ ಹೊರಗಿದ್ದಾರೆ. ಅದಕ್ಕಿಂತಲೂ ಹೆಚ್ಚು ಪ್ರಮಾಣದ ಮುಸ್ಲಿಂ ಜನಸಂಖ್ಯೆ ಮಲಪ್ಪುರಂ ಒಂದರಲ್ಲೇ ಇದೆ! ಮಲಪ್ಪುರಂ ಜಿಲ್ಲೆಗೆ ಪ್ರತಿವರ್ಷ ೮೫ ಸಾವಿರ ಕೋಟಿ ರೂಪಾಯಿ ಹಣ ಗಲ್ಫ್ ದೇಶಗಳಿಂದ ಹರಿದು ಬರುತ್ತದೆ. ಕೇರಳದ ಉಳಿದ ನಾಲ್ಕು ಜಿಲ್ಲೆಗಳಾದ ಕೊಲ್ಲಂ, ತಿರುವನಂತಪುರಂ, ಪಾಲಕ್ಕಾಡ್, ಅಲಪ್ಪುಳಗಳಲ್ಲಿ ಕೂಡಾ ಹಿಂದೂಗಳ ಸಂಖ್ಯೆ ೭೦% ಕ್ಕಿಂತ ಕಡಿಮೆ ಇದೆ. ಒಂದೇ ಮಗು ಸಾಕೆನ್ನುವ ಹಿಂದೂಗಳ ಮನಸ್ಥಿತಿಯೂ ಹಿಂದೂಗಳ ಸಂಖ್ಯೆ ಕುಸಿಯಲು ಕಾರಣ. ಕೇರಳದಲ್ಲಿ ೪೦% ಹಿಂದೂ ದಂಪತಿಗಳಿಗೆ ಒಂದೇ ಮಗು ಇದೆ. ೨೦೦೧ರಲ್ಲಿ ಈ ಪ್ರಮಾಣ ಕೇವಲ ೧೦% ಇತ್ತು!

                ಇತ್ತ ಕರ್ನಾಟಕವೂ ನಿಧಾನವಾಗಿ ಮುಸ್ಲಿಂ ಬಾಹುಳ್ಯದ ರಾಜ್ಯವಾಗುವತ್ತ ದಾಪುಗಾಲಿಡುತ್ತಿದೆ. ಕರ್ನಾಟಕದಲ್ಲಿ ಹಿಂದೂಗಳು ೮೪%, ಮುಸ್ಲಿಮರು ೧೨.೯೨%, ಕ್ರೈಸ್ತರು ೧.೯೨%. ತೋರಿಕೆಗೆ ಹಿಂದೂಗಳ ಸಂಖ್ಯೆ ಜಾಸ್ತಿಯಿದ್ದ ಹಾಗೆ ಕಂಡರೂ ಬೆಂಗಳೂರಿಗೆ ಹೊರರಾಜ್ಯಗಳಿಂದ ಬಂದಿರುವ ಲಕ್ಷಾಂತರ ಹಿಂದೂಗಳ ಕೊಡುಗೆ ಈ ಸಂಖ್ಯೆಗಿದೆ ಎನ್ನುವುದನ್ನು ನಾವು ಮರೆಯಬಾರದು. ದಕ್ಷಿಣ ಕನ್ನಡದಲ್ಲಿ ಹಿಂದೂಗಳ ಸಂಖ್ಯೆ ೬೭.೧೮%, ಮುಸ್ಲಿಮರ ಸಂಖ್ಯೆ ೨೪.೦೨%! ಧಾರವಾಡ, ಬೀದರ್, ಗುಲ್ಬರ್ಗಗಳಲ್ಲಿ ಹಿಂದೂ ಹಾಗೂ ಮುಸಲರ ಸಂಖ್ಯೆ ೩:೧ ಪ್ರಮಾಣದಲ್ಲಿದೆ! ಹಾವೇರಿ, ಕೊಡಗು, ಬಿಜಾಪುರ, ರಾಯಚೂರುಗಳು ನಂತರದ ಸ್ಥಾನಗಳಲ್ಲಿರುವ ಜಿಲ್ಲೆಗಳು. ಕರ್ನಾಟಕದಲ್ಲಿ ಆತಂಕದಲ್ಲಿರುವ ಇತರ ಜಿಲ್ಲೆಗಳಾದ ದಾವಣೆಗೆರೆ, ಗದಗ, ಶಿವಮೊಗ್ಗ, ಯಾದಗಿರಿ, ಬಳ್ಳಾರಿ, ಉತ್ತರಕನ್ನಡ, ಕೋಲಾರ, ಬೆಂಗಳೂರುಗಳಲ್ಲಿ ಮುಸ್ಲಿಮರ ಸಂಖ್ಯೆ ೧೪% ಕ್ಕಿಂತಲೂ ಹೆಚ್ಚು. ಚಿಕ್ಕಬಳ್ಳಾಪುರ, ಬಾಗಲಕೋಟೆ, ಕೊಪ್ಪಳ, ಮೈಸೂರು, ಬೆಳಗಾವಿ, ರಾಮನಗರಗಳಲ್ಲಿ ಈ ಸಂಖ್ಯೆ ೧೨% ದಷ್ಟಿದೆ. ದಕ್ಷಿಣ ಕನ್ನಡದಲ್ಲಿ ಕ್ರೈಸ್ತರ ಸಂಖ್ಯೆ ೮.೨%. ಬೆಂಗಳೂರು, ಉಡುಪಿಗಳಲ್ಲಿ ೬%, ಕೊಡಗು, ಬೀದರ್, ಉತ್ತರಕನ್ನಡಗಳು ನಂತರದ ಸ್ಥಾನದಲ್ಲಿರುವ ಜಿಲ್ಲೆಗಳು. ತಾಲೂಕುಗಳಲ್ಲಿ ಮೈಸೂರು ೧೬.೨೫%, ಮಡಿಕೇರಿ ೨೦.೪೯%, ಕೋಲಾರ ೨೦.೧೩%, ಮುಳಬಾಗಿಲು ೧೬.೨೬%, ಶಿಡ್ಲಘಟ್ಟ & ಚಿಂತಾಮಣಿ ೧೪% ರಷ್ಟು ಮುಸ್ಲಿಮರಿದ್ದು ಅವರ ಸಂಖ್ಯೆ ವೇಗವಾಗಿ ವರ್ಧಿಸುತ್ತಿದೆ. ದಕ್ಷಿಣಕನ್ನಡದ ಬಂಟ್ವಾಳದಲ್ಲಿ ೨೦೧೧ರಲ್ಲಿ ಮುಸ್ಲಿಂ ಜನಸಂಖ್ಯೆ ೩೨.೪೭%! ದಕ್ಷಿಣ ಕನ್ನಡದಲ್ಲಿ ಉಂಟಾಗುವ ಗಲಭೆಗಳ ಮೂಲ ಹೆಚ್ಚಿನ ಬಾರಿ ಬಂಟ್ವಾಳದಲ್ಲೇ ಇರುತ್ತದೆ. ಇಲ್ಲಿ ಆಯ್ಕೆಯಾಗುವ ಜನಪ್ರತಿನಿಧಿಯದ್ದು ತುಷ್ಟೀಕರಣದಲ್ಲಿ ಎತ್ತಿದ ಕೈ. ಇಲ್ಲಿ ಬಾಂಬ್ ತಯಾರಿಕಾ ಕೇಂದ್ರಗಳಿರುವ ಬಗ್ಗೆ ಗುಮಾನಿಯಿದ್ದು  ಕೆಲವು ವರ್ಷಗಳ ಹಿಂದೆ ತಯಾರಿಕಾ ಕೇಂದ್ರವೊಂದರಲ್ಲಿ ಸ್ಫೋಟವೊಂದು ನಡೆದಾಗ "ಮೇಲಿನ ವ್ಯಕ್ತಿ"ಗಳಿಂದ ಆಜ್ಞೆ ಬಂದು ಬಂಧಿಸಿದ ಕೆಲವೇ ಘಂಟೆಗಳಲ್ಲಿ ಆರೋಪಿಯನ್ನು ಬಿಡುಗಡೆ ಮಾಡಲಾಗಿತ್ತು. ಇದಲ್ಲದೆ ಮಂಗಳೂರು, ಪುತ್ತೂರು, ಬೆಳ್ತಂಗಡಿಗಳಲ್ಲೂ ಮುಸ್ಲಿಮರ ಸಂಖ್ಯೆ ೨೦% ಕ್ಕಿಂತ ಮೇಲಿದೆ. ಭಟ್ಕಳದಲ್ಲಿ ಮುಸ್ಲಿಮರ ಸಂಖ್ಯೆ ೩೩.೧೯%! ಮೇಲಾಗಿ ಇದು ಭಯೋತ್ಪಾದಕರ ತವರುಮನೆ! ಗುಲ್ಬರ್ಗ, ಬೀದರ್, ಸವಣೂರು, ಶಿಗ್ಗಾಂವ್, ಹೊಮ್ನಾಬಾದ್ ಗಳಲ್ಲಿ ಮುಸ್ಲಿಮರ ಸಂಖ್ಯೆ ೨೫%ಕ್ಕಿಂತಲೂ ಹೆಚ್ಚು. ಕರ್ನಾಟಕದ ೪೭ ತಾಲೂಕುಗಳು ಮುಸ್ಲಿಂ ಸಂಖ್ಯೆ ಹೆಚ್ಚಿರುವ ಮಾತ್ರವಲ್ಲದೆ ವೇಗವಾಗಿ ವರ್ಧಿಸುತ್ತಿರುವ "ಪೀಡಿತ" ಪ್ರದೇಶಗಳಾಗಿವೆ.

              ಅರುಣಾಚಲ ಪ್ರದೇಶದಲ್ಲಿ ೨೦೦೧ರಲ್ಲಿ ೧೮.೭% ಇದ್ದ ಕ್ರೈಸ್ತರ ಸಂಖ್ಯೆ ೨೦೧೧ರಲ್ಲಿ ೩೦.೩%ದಷ್ಟಾಗಿದೆ. ಮೇಘಾಲಯ, ಮಣಿಪುರ, ತ್ರಿಪುರ, ಸಿಕ್ಕಿಂ, ತಮಿಳುನಾಡು, ಒರಿಸ್ಸಾ ಹಾಗೂ ಜಾರ್ಖಂಡ್'ಗಳಲ್ಲಿ ಕ್ರೈಸ್ತರ ಏರಿಕೆಯ ಪ್ರಮಾಣ ರಾಷ್ಟ್ರೀಯ ಜನಸಂಖ್ಯಾ ಏರಿಕೆಗಿಂತ ಬಹಳ ಅಧಿಕವಾಗಿದ್ದು, ಮೇಘಾಲಯದಲ್ಲಿ ೭೫% ಕ್ರೈಸ್ತರೇ ತುಂಬಿದ್ದಾರೆ. ಶೇ. ೬ರಷ್ಟು ಹಿಂದೂಗಳು ಕ್ರೈಸ್ತರಾಗಿ ಮತಾಂತರವಾಗಿದ್ದರೂ ಮೀಸಲಾತಿ ಹಾಗೂ ಸರ್ಕಾರದಿಂದ ಸಿಗುವ ಸವಲತ್ತುಗಳಿಗಾಗಿ ಅವರು ಜನಗಣತಿಯ ಸಮಯದಲ್ಲಿ ಹಿಂದೂಗಳೆಂದೇ ನೋಂದಾಯಿಸಿಕೊಂಡಿರುತ್ತಾರೆ. ಹೀಗಾಗಿ ದೇಶದಲ್ಲಿ ೩% ಇರುವ ಕ್ರೈಸ್ತ್ರರ ಸಂಖ್ಯೆ ೯% ದವರೆಗೂ ಏರುತ್ತದೆ. ಆಗ ಹಿಂದೂಗಳ ಸಂಖ್ಯೆ ೭೬% ಕ್ಕಿಳಿಯುತ್ತದೆ!

                ಜಾಗತಿಕವಾಗಿ ಮುಸಲ್ಮಾನ ಮಹಿಳೆಯರು ಹೆರುವ ಮಕ್ಕಳ ಸಂಖ್ಯೆ ಹೆಚ್ಚು ಎನ್ನುವುದು ಎಲ್ಲರಿಗೂ ತಿಳಿದ ವಿಚಾರವೆ. ಈ ಸರಾಸರಿ ಮುಸ್ಲಿಂ ಮಹಿಳೆಯಲ್ಲಿ ೩.೧, ಕ್ರೈಸ್ತರದ್ದು ೨.೭, ಹಿಂದೂಗಳದ್ದು ೨.೧! ಆರು ವರ್ಷದೊಳಗಿನ ಮಕ್ಕಳ ಪ್ರಮಾಣದಲ್ಲೂ ಮುಸಲರೇ ಮುಂದು. ಅವರಲ್ಲಿ ಈ ಪ್ರಮಾಣ ೧೮.೭%, ಹಿಂದೂಗಳದ್ದು ೧೫.೬%, ಕ್ರೈಸ್ತರದ್ದು ೧೩.೬%!
೨೦೧೪ರ ಲೋಕಸಭಾ ಚುನಾವಣೆಯಲ್ಲಿ ಬಸ್ತಿ, ಮೋಹನ್ ಲಾಲ್ ಗಂಜ್, ರಾಬರ್ಟ್ ಗಂಜ್, ಮಿರ್ಜಾಪುರ, ಅಲಿಘಡ್, ಫತೇಪುರಗಳಲ್ಲಿ ಗೆದ್ದ ಅಭ್ಯರ್ಥಿಗಳು ಪಡೆದ ಮತಗಳ ಸಂಖ್ಯೆ ೧೩% ಕ್ಕಿಂತಲೂ ಕಡಿಮೆ! ಉತ್ತರಪ್ರದೇಶದ ಗೋವಿಂದನಗರ, ಫಾರೂಖಾ ಬಾದ್, ಕಂಥ್ ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲ್ಲುವ ಅಭ್ಯರ್ಥಿಗಳು ಪಡೆವ ಮತಗಳು ೧೨%ದಷ್ಟೂ ಇರುವುದಿಲ್ಲ. ಕರ್ನಾಟಕದಲ್ಲಿ ಅತೀ ಹೆಚ್ಚು ಮುಸ್ಲಿಂ ಬಾಹುಳ್ಯವಿರುವ ಭಟ್ಕಳದಲ್ಲಿ ೨೦೧೩ರ ಪುರಸಭೆ ಚುನಾವಣೆಯಲ್ಲಿ ೨೩ ಸ್ಥಾನಗಳಲ್ಲಿ ೧೩ ಮಂದಿ ಅವಿರೋಧವಾಗಿ ಆಯ್ಕೆಯಾದರು. ಅವುಗಳಲ್ಲಿ ೯ ಮಂದಿ ಮುಸ್ಲಿಮರು! ಅಲ್ಲಿ ಹಿಂದೂಗಳ ಸಂಖ್ಯೆ ಮುಸ್ಲಿಮರ ಸಂಖ್ಯೆಗಿಂತ ಎರಡು ಪಟ್ಟು ಇದ್ದರೂ ಅತೀ ಹೆಚ್ಚಿನ ಮುಸ್ಲಿಂ ಅಭ್ಯರ್ಥಿಗಳು ಜಯಗಳಿಸಲು ಅದರಲ್ಲೂ ಹೆಚ್ಚಿನವರು ಅವಿರೋಧವಾಗಿ ಆಯ್ಕೆಯಾಗಲು ಕಾರಣವೇನು? ಹಿಂದೂಗಳ ಮತ ಯಾವಾಗಲೂ ಜಾತಿ ಆಧಾರದಲ್ಲಿ ಒಡೆಯುತ್ತಿರುವುದರ ಸ್ಪಷ್ಟ ನಿದರ್ಶನ ಹೆಚ್ಚಿನ ಕ್ಷೇತ್ರಗಳಲ್ಲಿ ನೋಡಬಹುದಾದರೂ ಹಿಂದೂಗಳ ಅರ್ಧದಷ್ಟಿದ್ದು ಇಡೀ ಭಟ್ಕಳವನ್ನು ಅಲ್ಲಾಡಿಸುವ ಮುಸ್ಲಿಮರು ತಂತ್ರಗಾರಿಕೆಯನ್ನು ಇಲ್ಲಿ ಪ್ರದರ್ಶಿಸುತ್ತಿದ್ದಾರೆನ್ನುವುದು ಸುಸ್ಪಷ್ಟ. ಇಂತಹ ಪ್ರಜಾಪ್ರಭುತ್ವ ವಿರೋಧಿ ನಡೆಯನ್ನು ಯಾರೂ ಖಂಡಿಸದೇ ಉಳಿದಿರುವುದು ಆಶ್ಚರ್ಯವೇ ಸರಿ! ಇದೇ ರೀತಿ ಮುಂದುವರಿದಲ್ಲಿ ಕೆಲವೇ ವರ್ಷಗಳಲ್ಲಿ ಕೇಂದ್ರ ಸರಕಾರದಲ್ಲಿ ಮುಸ್ಲಿಂ ಸಂಸದರ ಸಂಖ್ಯೆಯೇ ಅಧಿಕವಾಗಿ ಅಧಿಕಾರದ ಜುಟ್ಟು ಅಲ್ಪ ಸಂಖ್ಯಾತರ(?) ಕೈ ಸೇರಿ ಈ ದೇಶ ಮತ್ತೊಂದು ಪಾಕಿಸ್ತಾನವಾಗಿ ಬದಲಾದರೂ ಆಶ್ಚರ್ಯವಿಲ್ಲ. ಪ್ರತಿ ಬಾರಿ ಮತದಾನದ ಪ್ರಮಾಣ ೬೫% ದಾಟುವುದಿಲ್ಲ. ಇದಕ್ಕೆ ಕಾರಣ ಹಿಂದೂಗಳೇ. ಮುಸ್ಲಿಮ್, ಕ್ರೈಸ್ತರಲ್ಲಿ ನಿರಕ್ಷರ ಕುಕ್ಷಿಗಳೂ ಹೋಗಿ ಮತ ಚಲಾಯಿಸಿ ಬರುತ್ತಾರೆ. ಆದರೆ ಹಿಂದೂಗಳಲ್ಲಿ ಸುಶಿಕ್ಷಿತರೇ ಮತದಾನದ ದಿನ ಮನೆಯೊಳಗೆ ಕೂತು ರಜೆಯ ಮಜಾ ಅನುಭವಿಸುತ್ತಿರುತ್ತಾರೆ!

            ಹಿಡಿಯಷ್ಟಿದ್ದ ಮತೀಯರಿಂದ ಹಿಂದೂ ಸಮಾಜ ಸದಾ ದೌರ್ಜನ್ಯಕ್ಕೆ ಗುರಿಯಾಗುತ್ತಲೇ ಬಂದಿದೆ. ವೇಗವಾಗಿ ವರ್ಧಿಸುತ್ತಿರುವ ಅವರ ಸಂಖ್ಯೆಯಿಂದಾಗಿ ಕೆಲ ದಶಕಗಳಲ್ಲಿ ಹಿಂದೂಗಳು ಸರ್ವನಾಶವಾಗುವ ಭೀಕರ ಪರಿಸ್ಥಿತಿ ತಲೆದೋರೀತು. ಸೆಕ್ಯುಲರ್ ಪಕ್ಷಗಳು ಮುಲ್ಲಾ ಹಾಗೂ ಮಿಷನರಿಗಳೊಂದಿಗೆ ಒಪ್ಪಂದ ಮಾಡಿಕೊಂಡು ಹಲವು ಸವಲತ್ತುಗಳನ್ನು ನೀಡಲು ದೇಶದ ಸಂವಿಧಾನದಲ್ಲಿ ಒಪ್ಪಿಕೊಂಡಿವೆ. ಇಸ್ಲಾಂ ಹಾಗೂ ಕ್ರೈಸ್ತ ಮತಗಳವರಿಗೆ ಸಾಧ್ಯವಾದಷ್ಟು ಪಂಥಗಳನ್ನು ಸೃಷ್ಟಿಸಿಕೊಳ್ಳಲು ಹಾಗೂ ವಿಸ್ತರಿಸಲು ಸ್ವಾತಂತ್ರ್ಯವನ್ನು ನೀಡಲಾಗಿದೆ. ಇದರಿಂದ ಮುಸ್ಲಿಂ ಹಾಗೂ ಕ್ರೈಸ್ತರಿಗೆ ತಮ್ಮ ಕಬಂಧ ಬಾಹುಗಳನ್ನು ಚಾಚಲು ಅವಕಾಶ ಮಾಡಿಕೊಟ್ಟಂತಾಗಿದೆ. ವಿದೇಶಗಳಿಂದ ಬರುವ ಅಪಾರ ಪ್ರಮಾಣದ ನೆರವಿನ ಜೊತೆ ಸರಕಾರಗಳಿಂದ ಸಿಗುವ ಬಗೆಬಗೆಯ ಸವಲತ್ತುಗಳು ತಮ್ಮ ಸಂಖ್ಯಾಬಲ ವಿಸ್ತರಣೆಗೆ ಈ ಮತಗಳಿಗೆ ನೆರವಾಗಿವೆ. ರಾಜಕೀಯವಾಗಿ ನೆಲೆಗೊಳ್ಳಲು ಪಕ್ಷಗಳನ್ನು ಸ್ಥಾಪಿಸಿಕೊಂಡ ಈ ಅಲ್ಪಸಂಖ್ಯಾತ(?) ಮತಗಳು ಆಯಾ ರಾಜ್ಯಗಳಲ್ಲಿ ಪ್ರಾದೇಶಿಕ ಅಥವಾ ತಮಗೆ ಸಹಕರಿಸುವ ರಾಷ್ಟ್ರೀಯ ಪಕ್ಷದೊಡನೆ ಸೇರಿ ಕೆಲಸ ಮಾಡುತ್ತವೆ. ಇದರ ಹಿಂದೆ ಅಧಿಕಾರ ಪಡೆಯುವುದು, ತನ್ಮೂಲಕ ತಮ್ಮ ಸವಲತ್ತುಗಳನ್ನು ಹೆಚ್ಚಿಸಿಕೊಳ್ಳುವುದು, ತಮ್ಮ ಆಟಾಟೋಪಕ್ಕೆ ರಾಜಕೀಯ ರಕ್ಷಣೆಯನ್ನು ಪಡೆಯುವ ಸ್ಪಷ್ಟ ಉದ್ದೇಶವಿರುತ್ತದೆ. ಬಂಗಾಳ, ಅಸ್ಸಾಂಗಳಲ್ಲಿ ಅಕ್ರಮ ನುಸುಳುವಿಕೆಯಿಂದಾಗಿ ಕೆಲವು ಜಿಲ್ಲೆಗಳಲ್ಲಂತೂ ಮುಸ್ಲಿಮರೇ ಬಹು ಸಂಖ್ಯಾತರು. ರಾಜಕೀಯ ಪಕ್ಷಗಳು ತಮ್ಮ ಮತಬ್ಯಾಂಕ್ ಭದ್ರತೆಗೆ ಇವರಿಗೆ ಬೇಕಾದ ಎಲ್ಲಾ ಸವಲತ್ತುಗಳನ್ನು ಕೊಟ್ಟಾಗಿದೆ. ಕೆಲವು ಕ್ಷೇತ್ರಗಳಲ್ಲಂತೂ ಅಕ್ರಮವಾಗಿ ಒಳ ಬಂದವರೇ ಗೆಲ್ಲತೊಡಗಿದ್ದಾರೆ. ಈಶಾನ್ಯ ಭಾಗದ ಅರುಣಾಚಲ ಪ್ರದೇಶ, ಮೇಘಾಲಯ, ಮಣಿಪುರ, ತ್ರಿಪುರ, ಸಿಕ್ಕಿಂ, ನಾಗಾಲ್ಯಾಂಡುಗಳಲ್ಲಿ ನಡೆದ ಅವ್ಯಾಹತ ಮತಾಂತರದ ಕಾರಣ ಹಿಂದೂಗಳನ್ನು ದುರ್ಭೀನು ಹಿಡಿದು ಹುಡುಕಬೇಕಾದ ಅನಿವಾರ್ಯತೆ ಇದೆ. ಅಲ್ಲಿ ಮುಖ್ಯಮಂತ್ರಿಗಳಾಗಬೇಕಾದರೆ ಆತ/ಆಕೆ ಕ್ರೈಸ್ತಳೇ ಆಗಿರಬೇಕೆಂಬ ಅಲಿಖಿತ ನಿಯಮವೇ ರೂಪುಗೊಂಡಿರುವುದು ವಿಪರ್ಯಾಸ.

             ಪೂರ್ವ ಹಾಗೂ ಈಶಾನ್ಯ ರಾಜ್ಯಗಳಲ್ಲಿ ಅಕ್ರಮ ನುಸುಳುಕೋರರಿಗೆ ರಾಜಕೀಯ ಪಕ್ಷಗಳು ಬೆಂಬಲ ಸೂಚಿಸಿದರೆ ದಕ್ಷಿಣ ಭಾರತದಲ್ಲಿ ಒಡೆದಾಳುವ ರಾಜಕಾರಣವೇ ಮುಸ್ಲಿಮರ ಬಲವರ್ಧನೆಗೆ ಸಹಕಾರಿಯಾಗಿದೆ. ೧೯೪೧ರಲ್ಲಿ ಮುಸ್ಲಿಂ ಲೀಗಿನ ೨೮ನೇ ವಾರ್ಷಿಕ ಸಮ್ಮೇಳನದಲ್ಲಿ ಜಿನ್ನಾ, ದ್ರಾವಿಡ ಸಿದ್ಧಾಂತಿ ಇ.ವಿ ರಾಮಸ್ವಾಮಿ ನಾಯಕರೊಂದಿಗೆ ವೇದಿಕೆ ಹಂಚಿಕೊಂಡು ದ್ರಾವಿಡ ಸ್ಥಾನವನ್ನು ಪ್ರತ್ಯೇಕಿಸುವಲ್ಲಿ ಸಹಾಯಹಸ್ತ ಚಾಚಿದ್ದು ನೆನಪಿರಬಹುದು. ಅಲ್ಲಿಂದಾಚೆಗೆ ಮುಸ್ಲಿಂ ಲೀಗ್ ತಮಿಳುನಾಡಿನ ಅಧಿಕಾರರೂಢ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ರಾಜಕೀಯವಾಗಿ ಬಲಿಷ್ಟಗೊಂಡಿತು. ಇವಿಆರ್ ಮುಸ್ಲಿಂ ಲೀಗಿನ ಮೀಟಿಂಗುಗಳಲ್ಲಿ ಭಾಗಿಯಾಗುತ್ತಾ ಹಿಂದೂಗಳ ಮೇಲೆ ನಿರಂತರ ದಾಳಿ ಮಾಡಿದರು. ಹಿಂದೂಗಳ ಮತಾಂತರಕ್ಕೆ ಇದು ಪರೋಕ್ಷ ಕಾರಣವೂ ಆಯಿತು. ತಮಿಳುನಾಡಿನಲ್ಲಿ ಬಾಂಬುಸ್ಫೋಟಗಳು, ಅಕ್ರಮ ಶಸ್ತ್ರಾಸ್ತ್ರ ಸಾಗಾಟ, ಕಳ್ಳ ನೋಟಿನ ದಂಧೆಯಂತಹ ಚಟುವಟಿಕೆಗಳಿಗೆ ಕಾರಣವಾದ ಭಯೋತ್ಪಾದಕ ಸಂಘಟನೆಗಳಲ್ಲಿ ಮುಸ್ಲಿಂ ಲೀಗಿನ ಕಾರ್ಯಕರ್ತರೇ ಇದ್ದು ದ್ರಾವಿಡವಾದಿ ಪಕ್ಷಗಳು ಅವರಿಗೆ ಅಗತ್ಯ ರಕ್ಷಣೆಯನ್ನೂ ಕೊಡುತ್ತವೆ. ಕೇರಳದಲ್ಲಿ ಅದಿಕಾರಕ್ಕಾಗಿ ಮುಸ್ಲಿಂ ಲೀಗ್ ಪಕ್ಷದ  ಹುಟ್ಟಿಗೆ ಕಾರಣವಾದವರು ಕಮ್ಯೂನಿಷ್ಟರು. ಈಗ ಕೇರಳದಲ್ಲಿ ಮುಸ್ಲಿಮರೇ ಬಹುಸಂಖ್ಯಾತರಾಗಿರುವ ಮಲಪ್ಪುರಂ ಜಿಲ್ಲೆಯನ್ನು ಹುಟ್ಟು ಹಾಕಿದಾತ ಕಮ್ಯೂನಿಸ್ಟ್ ಮುಖ್ಯಮಂತ್ರಿ ನಂಬೂದರಿ ಪಾಡ್. ಕೇರಳವಂತೂ ಜಿಹಾದೀ ಚಟುವಟಿಕೆಯ-ಮತಾಂತರದ ನೆಲೆ. ಅಲ್ಲಿ ಭಯೋತ್ಪಾದಕ ಪಕ್ಷವಾದ ಅಬ್ದುಲ್ ನಾಸಿರ್ ಮದನಿಯ ಪಿಡಿಪಿಯ ಕಾರ್ಯಚಟುವಟಿಕೆಗಳಿಗೆ ಅಲ್ಲಿನ ಉಳಿದ ಸೆಕ್ಯುಲರ್ ಪಕ್ಷಗಳು ಬೆಂಗಾವಲಾಗಿ ನಿಂತಿವೆ. ಕರ್ನಾಟಕದಲ್ಲಿ ಅಹಿಂದ ರಾಜಕಾರಣ ಮುಸ್ಲಿಮರಿಗೆ ತಮ್ಮ ಕಾರಸ್ಥಾನವನ್ನು ವಿಸ್ತರಿಸಿಕೊಳ್ಳಲು ನೆರವಾಗುತ್ತಿದೆ. ತಮಿಳುನಾಡು, ಕೇರಳ, ಕರ್ನಾಟಕಗಳಲ್ಲಿ ನಿರಂತರವಾಗಿ ಹಿಂದೂಗಳ ಮೆಲೆ ನಡೆಯುತ್ತಿರುವ ದಾಳಿ ಕೆಲವೇ ದಶಕಗಳಲ್ಲಿ ಹಿಂದೂಗಳ ಸರ್ವನಾಶಕ್ಕೆ ಕಾರಣವಾದರೂ ಆಶ್ಚರ್ಯವಿಲ್ಲ. ದೇಶದ ಉಳಿದ ರಾಜ್ಯಗಳ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಿಲ್ಲ. ಅಲ್ಪಸಂಖ್ಯಾತರ ಅಭ್ಯುದಯಕ್ಕಾಗಿ ಇರುವ ಸಾಚಾರ್, ರಂಗನಾಥ ಮಿಶ್ರಾ ವರದಿಗಳು ಹಿಂದೂಗಳ ಆರ್ಥಿಕ-ಸಾಮಾಜಿಕ-ಸಾಂಸ್ಕೃತಿಕ-ಶೈಕ್ಷಣಿಕ ಸ್ವಾತಂತ್ರ್ಯವನ್ನು ಕಿತ್ತು ತಿನ್ನುತ್ತಿರುವ ರಣಪಿಶಾಚಿಗಳು. ದಿಲ್ಲಿಯ ಸ್ಟೀಫನ್ಸ್ ಕಾಲೇಜಿನ ಪ್ರಾಂಶುಪಾಲ ಅನಿಲ್ ವಿಲ್ಸನ್ ಹಾಗೂ ತೆಹೀರ್ ಮಹಮೂದ್ ಅವರಂತಹ ವ್ಯಕ್ತಿಗಳನ್ನೊಳಗೊಂಡಿದ್ದ ರಂಗನಾಥ್ ಮಿಶ್ರಾ ಆಯೋಗ ದಲಿತ ಕ್ರೈಸ್ತರಿಗೂ ಮೀಸಲಾತಿ ನೀಡುವಂತೆ ಆಗ್ರಹಿಸಿತು. ತಾಯಿ ಸೋನಿಯಾ ಅಭಯದಿಂದ ಸ್ಯಾಮುವೆಲ್ ರಾಜಶೇಖರ ರೆಡ್ಡಿ ಅವಿಭಜಿತ ಆಂಧ್ರದಲ್ಲಿ ಮಾಡಿದ ಹಾನಿಯೇನು ಕಡಿಮೆಯೇ? ಬೆಳಗೆದ್ದೊಡನೆ ಜನಶ್ರೀಯಂತಹ ಚಾನಲ್ಲುಗಳಲ್ಲಿ "ಈ ಸಂಖ್ಯೆಗೆ ಕರೆ ಮಾಡಿ. ನಿಮ್ಮ ಪರವಾಗಿ ಯೇಸುವಿನಲ್ಲಿ ಪ್ರಾರ್ಥಿಸಿ ನಿಮ್ಮ ಸಮಸ್ಯೆಯನ್ನು ನಿವಾರಿಸುತ್ತೇವೆಂಬ" ಮತಾಂತರದ ಗಿಮಿಕ್ಕುಗಳೂ ಪ್ರಾರಂಭವಾಗಿವೆ. ೨೦೧೪ರ ಕೊನೆಯ ಭಾಗದಲ್ಲಿ ಬೆಂಗಳೂರು, ಮುಂಬೈ, ಹೈದರಾಬಾದ್ ನಗರಗಳಲ್ಲಿ "ಬದುಕು ಬದಲಾಯಿಸುವ ಪುಸ್ತಕ ಓದಲು ಈ ಸಂಖ್ಯೆಗೆ ಕರೆ ಮಾಡಿ" ಎಂದು ಲಕ್ಷಾಂತರ ಮಂದಿಯನ್ನು ಮತಾಂತರ ಮಾಡಿದ ಕ್ರೈಸ್ತರ ಆಟಾಟೋಪ ಎಂದು ನಿಂತೀತು?

               ಹಿಂದೂಗಳನ್ನು ಮತಾಂತರಗೊಳಿಸಲು ಮುಸ್ಲಿಮರು ಜಿಹಾದನ್ನೇ ಪ್ರಮುಖ ಅಸ್ತ್ರವಾಗಿ ಉಪಯೋಗಿಸುತ್ತಿದ್ದಾರೆ. ನೇರ ದೈಹಿಕ ಆಕ್ರಮಣ, ಲವ್ ಜಿಹಾದ್, ಸೆಕ್ಸ್ ಜಿಹಾದ್, ರೇಪ್ ಜಿಹಾದ್, ಲ್ಯಾಂಡ್ ಜಿಹಾದ್, ವೈಣಿಕ ಜಿಹಾದ್ ಹೀಗೆ ಹಲವು ರೂಪಗಳನ್ನು ತಾಳಿರುವ ಈ ಜಿಹಾದಿಗೆ ಸೆಕ್ಯುಲರುಗಳ ಸಮರ್ಥನೆಯೂ ವರದಾನವಾಗಿದ್ದು ಮುಸ್ಲಿಮರ ಸಂಖ್ಯಾಬಲ ವರ್ಧನೆಗೆ ನೆರವಾಗಿದೆ. ಅತ್ತ ಕ್ರೈಸ್ತರು ಹಿಂದೂಗಳ ಮತಾಂತರಕ್ಕೆ ಹಿಂದೂ ಸಂಪ್ರದಾಯ-ಪದ್ದತಿಗಳ ಅನುಕರಣೆಯನ್ನೇ ಬಂಡವಾಳವಾಗಿ ಮಾಡಿಕೊಂಡಿದ್ದಾರೆ. ಇದಲ್ಲದೆ ಮುಕ್ಕೋಟಿ ದೇವತೆಗಳೊಂದಿಗೆ ಅಲ್ಲಾ, ಯೇಸುಗಳು ನಮಗೆ ಹೆಚ್ಚಾಗಲಾರರು ಎನ್ನುವ ಹಿಂದೂಗಳ ಭೋಳೇತನವೂ ಕಾರಣ. ಇಸ್ಲಾಂ, ಕ್ರೈಸ್ತರ ಇತಿಹಾಸದ ಬಗ್ಗೆ ಪ್ರತಿಯೊಬ್ಬ ಹಿಂದೂವಿಗೆ ತಿಳಿಯದೇ ಇರುವುದು, ತಥಾಕಥಿತ ವಿಚಾರವಾದಿಗಳ ಸೆಕ್ಯುಲರ್ ಬುದ್ಧಿ ಇದಕ್ಕೆ ಕಾರಣವಾಗಿರಬಹುದು. ಆದರೆ ಹಿಂದೂಗಳನ್ನು ಜಾಗೃತಿಗೊಳಿಸುವುದು ಇಂದಿನ ಅವಶ್ಯಕತೆಯಾಗಿದೆ.

            ಇತ್ತ ಹಿಂದೂಗಳ ಸಂಖ್ಯೆ ಕುಸಿಯಲು ಹಲವಾರು ಕಾರಣಗಳಿವೆ. "ನಾವಿಬ್ಬರು ನಮಗೊಬ್ಬರು" ಎನ್ನುವಂತಾದ ಕೌಟುಂಬಿಕ ಪಲ್ಲಟನ ಮುಖ್ಯ ಕಾರಣವಾದರೆ ಇರುವ ಒಂದು ಸಂತಾನವೂ ನಗರದತ್ತ ವಾಲುತ್ತಿರುವುದು ಇನ್ನೊಂದು ಕಾರಣ. ಹೀಗಾಗಿ ಹೊಲ, ಗದ್ದೆ, ತೋಟಗಳು ಪಾಳು ಬಿದ್ದು ಅಲ್ಪಸಂಖ್ಯಾತರ ವಶವಾಗುತ್ತಿವೆ. ಮುಸ್ಲಿಂ ಬಾಹುಳ್ಯದ ಪ್ರದೇಶಗಳಲ್ಲಿ ಇದು ಲ್ಯಾಂಡ್ ಜಿಹಾದ್ ಆಗಿ ಪರಿವರ್ತನೆಗೊಳ್ಳುತ್ತಿದೆ. ಹಿಂದೂಗಳ ಸಂಖ್ಯೆ ಅರ್ಧದಷ್ಟು ಕಡಿಮೆಯಾಗಿರುವ ಕೇರಳದಲ್ಲಿ ಹಿಂದೂಗಳು ಕೆಲಸ ಕೊಡುವವರಿಂದ ಕೆಲಸಕ್ಕೆ ಹೋಗುವವರಾಗಿ ಬದಲಾಗಿರುವುದು ಇನ್ನುಳಿದ ಭಾಗದ ಹಿಂದೂಗಳಿಗೆ ಪಾಠವಾಗಬೇಕಿತ್ತು. ಆದರೆ ಹಿಂದೂಗಳ ನಿರ್ಲಕ್ಷ್ಯವೇ ಅವರ ಅವಸಾನಕ್ಕೆ ಕಾರಣವಾಗುತ್ತಿದೆ. ವಿಭಕ್ತ ಕುಟುಂಬಗಳಿಂದಾಗಿ ಸಂಬಂಧಗಳೂ ಮರೆಯಾಗುತ್ತಿವೆ. ಸೈನ್ಯಕ್ಕೆ ಸೇರುವವರ ಸಂಖ್ಯೆಯೂ ಗಣನೀಯವಾಗಿ ಕುಸಿಯುತ್ತಿದೆ. ಪರಿವಾರಗಳಲ್ಲಿ ಜನರಿಗಿಂತ ವಸ್ತುಗಳೇ ಜಾಸ್ತಿಯಾಗಿ ಭೋಗವಾದವೇ ಪ್ರಧಾನವಾಗುತ್ತಿದೆ.

              ಇದಕ್ಕೇನು ಪರಿಹಾರ? ಭಾರತದಲ್ಲಿನ ಈ ಸ್ಥಿತಿಗೆ ಮುಖ್ಯಕಾರಣ "ಸೆಕ್ಯುಲರಿಸಂ" ಎನ್ನುವ ಭೂತ. ಇವತ್ತು ಕ್ರೈಸ್ತ, ಇಸ್ಲಾಂ ಅನ್ನು ಹೊಗಳುವುದು, ಹಿಂದೂ ಧರ್ಮವನ್ನು ತೆಗಳುವುದೇ ಸೆಕ್ಯುಲರಿಸಂ ಎನಿಸಿಕೊಂಡಿದೆ. ಹಿಂದೂಗಳಲ್ಲಿರುವ ಇಂತಹ ಮನೋಭಾವನೆಯನ್ನು ತೊಡೆದು ಹಾಕಬೇಕು. ಸನಾತನ ಧರ್ಮದ ಸಂಸ್ಕೃತಿಯಲ್ಲಿ ಕೃತಕವಾದುದೇನೂ ಇಲ್ಲ. ಅದು ಮಾನವನ ಮನಸ್ಸಿನ ಹೊರಭಾಗದಿಂದ ನಿರ್ಮಿಸಿದ ಸಂಸ್ಕೃತಿಯಾಗಲೀ, ಕ್ರೈಸ್ತ, ಇಸ್ಲಾಂ, ಕಮ್ಯೂನಿಸಂಗಳಂತೆ ಬಲಾತ್ಕಾರವಾಗಿ ಹೇರಿದಂತಹುದಲ್ಲ. ಹಾಗಾಗಿಯೇ ಭಾರತವನ್ನು "ರಾಷ್ಟ್ರ"ವನ್ನಾಗಿಸಿದ ಹಿಂದೂ ಸಂಸ್ಕೃತಿಯೇ ಭಾರತದ ರಾಷ್ಟ್ರೀಯ ಸಂಸ್ಕೃತಿ ಎಂದು ಘೋಷಿಸಬೇಕು. ಇಲ್ಲಿನ ಮುಖ್ಯಧಾರೆಯೊಂದಿಗೆ ಹೊಂದಿಕೊಳ್ಳಲು ಇಷ್ಟಪಡದ ಪರಕೀಯ ಸಂಸ್ಕೃತಿಗಳು ಅಲ್ಪಸಂಖ್ಯಾತರ ಹಕ್ಕು ಎನ್ನುವ ಹೆಸರಿನಲ್ಲಿ ಬೆಳೆಯುವುದಕ್ಕೆ ಅವಕಾಶ ನಿರಾಕರಿಸಬೇಕು. ಇದಕ್ಕಾಗಿ ದೇಶದಲ್ಲಿ ಏಕರೂಪದ ನಾಗರಿಕ ಸಂಹಿತೆ, ಮತಾಂತರದ ನಿಷೇಧ, ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿರುವವರನ್ನು ನಿರ್ದಾಕ್ಷಿಣ್ಯವಾಗಿ ನಾಶ ಮಾಡುವುದು, ಮೀಸಲಾತಿಯನ್ನು ತೆಗೆದುಹಾಕಿ ಸರ್ವರಿಗೂ ಸಮಪಾಲು ಭಾವದ ಆಡಳಿತ, ತುಷ್ಟೀಕೃತ ರಾಜಕಾರಣದ ಕಟ್ಟುನಿಟ್ಟಿನ ನಿಷೇಧಗಳನ್ನು ಕಡ್ಡಾಯವಾಗಿ ಜಾರಿಗೆ ತರಬೇಕು. ಹಿಂದೂ ಸಮಾಜವೇ ಇಲ್ಲಿನ ರಾಷ್ಟ್ರೀಯ ಸಮಾಜ ಎಂದು ಘೋಷಿಸಬೇಕು. ಹಿಂದೂಗಳ ಮೇಲೆ ಆಗುವ ಪ್ರತ್ಯಕ್ಷ/ಪರೋಕ್ಷ ದಾಳಿಗೆ ಅದು ಯಾವುದೇ ರೂಪದಲ್ಲಿರಲಿ ಅಂತಹ ದಾಳಿಕೋರರನ್ನು ಶಿಕ್ಷಿಸಬೇಕು. ಸನಾತನ ಧರ್ಮ ನಾಸ್ತಿಕತೆ, ಆಜ್ಞೇಯತಾವಾದ, ಭೌತವಾದ ಸೇರಿದಂತೆ ಎಲ್ಲಾ ಬಗೆಯ ಆಶೋತ್ತರಗಳಿಗೆ ಅವಕಾಶವೀವ ಮತವಾಗಿದೆ. ಇಲ್ಲಿ ಅವಕಾಶವಿಲ್ಲದ ಸಂಗತಿಗಳೆಂದರೆ ಮತದ ಹೆಸರಿನಲ್ಲಿ ನಡೆವ ಬಲಪ್ರಯೋಗಗಳು ಮತ್ತು ವಂಚನೆಗಳು ಮಾತ್ರ. ಹಾಗಾಗಿ ಭರತಖಂಡದಲ್ಲಿ ಸ್ಥಾನವಿರುವ ಏಕೈಕ ಮತವೆಂದರೆ ಅದು ಸನಾತನ ಧರ್ಮದ ಸಹಜ ಆಧ್ಯಾತ್ಮಿಕತೆ ಎಂದು ಘೋಷಿಸಿ, ಪಾಲಿಸಬೇಕು. ನೈಜ ಇತಿಹಾಸ, ರಾಷ್ಟ್ರೀಯತೆಗೆ ಪೂರಕವಾದ ಪಠ್ಯಕ್ರಮಗಳನ್ನು, ಹಿಂದೂ ಶೈಕ್ಷಣಿಕ ಕ್ರಮವನ್ನು ಅಳವಡಿಸಬೇಕು. ಇದೆಲ್ಲವನ್ನು ಮಾಡದಿದ್ದರೆ ಯಾವ ಅಭಿವೃದ್ಧಿಯೂ ಹಿಂದೂಗಳನ್ನು, ಭಾರತವನ್ನುಳಿಸಲಾರದು.

ಸತ್ಯದ ಸಮಾಧಿಯ ಮೇಲೆ ಸೆಕ್ಯುಲರ್ ನರ್ತನ

ಸತ್ಯದ ಸಮಾಧಿಯ ಮೇಲೆ ಸೆಕ್ಯುಲರ್ ನರ್ತನ

              ಜಾತಿ ಜಾತಿಗಳನ್ನು ಎತ್ತಿಕಟ್ಟಿ ತಮ್ಮ ಬೇಳೆ ಬೇಯಿಸಿಕೊಳ್ಳುವುದೇ ಜಾತ್ಯಾತೀತತೆ. ತಮ್ಮ ಸಹಾಯಕ್ಕೆ ಒದಗುತ್ತದೆ, ತಮ್ಮ ಮತ ಬ್ಯಾಂಕ್ ಭದ್ರಗೊಳ್ಳುತ್ತದೆ ಎಂದು ಖಾತರಿ ಆದೊಡನೆ ದೇಶದ್ರೋಹವೂ ಸೆಕ್ಯುಲರಿಸಮ್ಮಿನ ಪೆಟ್ಟಿಗೆಯೊಳಗೆ ಭದ್ರವಾಗಿ ಕುಳಿತುಕೊಳ್ಳುತ್ತದೆ. ಈ ಜಾತಿ ರಾಜಕೀಯದಲ್ಲಿ ಮನುಷ್ಯತ್ವ ನಗಣ್ಯವಾಗುತ್ತದೆ. ಭಾವನೆಗಳಿಗೆ ಸಮಾಧಿ ಕಟ್ಟಲಾಗುತ್ತದೆ. ಕೊಳೆತು ನಾರುತ್ತಿರುವ ಶವವನ್ನು ಮುಂದಿರಿಸಿಕೊಂಡು ನರಿ ನಾಯಿಗಳು ಜೊಲ್ಲು ಸುರಿಸುತ್ತಾ ಊಳಿಡುತ್ತಿರುತ್ತವೆ. ಸುಳ್ಳನ್ನು ಮತ್ತೆ ಮತ್ತೆ ಹೇಳಿದಾಗ ಅದೇ ಸತ್ಯವಾಗುವ ಅಪಾಯವಿರುತ್ತದೆ. ಸುಳ್ಳು ಎದ್ದು ಹೊರಟು ಊರ ಜಾತ್ರೆಯಲ್ಲಿ ಜನರ ನಡುವೆ ಕುಣಿಯುತ್ತಿರುವಾಗ ಸತ್ಯ ಇನ್ನೂ ಎದ್ದು ಕುಳಿತುಕೊಳ್ಳುವ ಆಲೋಚನೆಯಲ್ಲಿ ತೊಡಗಿರುತ್ತದೆ. ನಮ್ಮ ಮಾಧ್ಯಮಗಳು, ಬುದ್ಧಿಜೀವಿಗಳು, ಸೆಕ್ಯುಲರುಗಳು ಮಾಡುತ್ತಿರುವುದೂ ಇದನ್ನೇ! ಅದಕ್ಕೆ ಇತ್ತೀಚಿನ ಉದಾಹರಣೆಯೇ ರೋಹಿತ್ ವೆಮುಲಾ ಆತ್ಮಹತ್ಯೆ ಪ್ರಕರಣ.

                  ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಯಾಕೂಬ್ ಮೆನನ್ ಅನ್ನು ಗಲ್ಲಿಗೇರಿಸಬಾರದು ಎಂದು ಅಂಬೇಡ್ಕರ್ ಸ್ಟೂಡೆಂಟ್ಸ್ ಅಸೋಸಿಯೇಷನ್ ವಿಶ್ವವಿದ್ಯಾಲಯದ ಕ್ಯಾಂಪಸ್ಸಿನೊಳಗೆ ಧರಣಿ ನಡೆಸಿತ್ತು. ಆ ಪ್ರತಿಭಟನೆಯಲ್ಲಿ "ಒಬ್ಬ ಯಾಕೂಬನನ್ನು ಗಲ್ಲಿಗೇರಿಸಿದರೆ ಪ್ರತಿಯಾಗಿ ಸಾವಿರ ಯಾಕೂಬರು ಹುಟ್ಟಿ ಬರುತ್ತಾರೆ" ಎಂದು ಮುಂತಾದ ಘೋಷಣೆಗಳನ್ನೂ ಕೂಗಲಾಗಿತ್ತು. ಇವರ ದೇಶದ್ರೋಹಿ ಕಾರ್ಯವನ್ನು ಸುಶೀಲ್ ಕುಮಾರ್ ನೇತೃತ್ವದಲ್ಲಿ ಎಬಿವಿಪಿ ಆಕ್ಷೇಪಿಸಿತು. ಇದರಿಂದ ಸಿಟ್ಟಿಗೆದ್ದ ಈ ಸಂಘಟನೆಯ ಕಾರ್ಯಕರ್ತರು ಸುಶೀಲ್ ಕುಮಾರ್ ಹಾಗೂ ಇನ್ನಿಬ್ಬರಿಗೆ ಹಿಗ್ಗಾಮುಗ್ಗಾ ಥಳಿಸಿದ್ದರು. ವಿಚಿತ್ರವೆಂದರೆ ದಲಿತರ ಪರವಾಗಿ ಹೋರಾಡುವ ಈ ಸಂಘಟನೆ ಹಲ್ಲೆ ಮಾಡಿದ್ದ ಆ ಇನ್ನಿಬ್ಬರು ವಿದ್ಯಾರ್ಥಿಗಳು ದಲಿತರು! ಹೈದರಾಬಾದ್ ವಿವಿಯ ಆವರಣದಲ್ಲಿ ನಡೆದ ಈ ಘಟನೆಯ ಕುರಿತು ಆಡಳಿತ ಮಂಡಳಿ ಮೌನ ತಾಳಿತ್ತು. ದೂರು ಕೊಟ್ಟಾಗಲೂ ಕ್ರಮ ಕೈಗೊಳ್ಳದೇ ಇದ್ದಾಗ ಸುಶೀಲ್ ಅನಿವಾರ್ಯವಾಗಿ ಸಚಿವ ಬಂಡಾರು ದತ್ತಾತ್ರೇಯ ಅವರನ್ನು ಸಂಪರ್ಕಿಸಿ ನ್ಯಾಯ ಬೇಡಬೇಕಾಯಿತು. ಬಂಡಾರು ದತ್ತಾತ್ರೇಯ ಈ ವಿಚಾರವನ್ನು ಸಚಿವೆ ಸ್ಮೃತಿ ಇರಾನಿ ಗಮನಕ್ಕೆ ತಂದ ಬಳಿಕ ಈ ಘಟನೆಗೆ ಕಾರಣರಾದ ಐದು ಮಂದಿ ವಿದ್ಯಾರ್ಥಿಗಳನ್ನು ವಿವಿಯ ಹಾಸ್ಟೆಲಿನಿಂದ ತೆಗೆದು ಹಾಕಲಾಗಿತ್ತು. ಆ ಐದು ಮಂದಿಯಲ್ಲಿ ಒಬ್ಬನಾಗಿದ್ದ ರೋಹಿತ್. ಆ ಬಳಿಕ ಉಳಿದ ನಾಲ್ವರೊಡನೆ ಸೇರಿ ಎರಡು ವಾರಗಳ ಕಾಲ ಪ್ರತಿಭಟನೆಯನ್ನೂ ಮಾಡಿದ್ದ ರೋಹಿತ್. ತನ್ನ ಕೃತ್ಯದ ಸಮರ್ಥನೆಗೆ ಜಾತಿ ಸರ್ಟಿಫಿಕೇಟನ್ನು ಎಳೆದು ತಂದಿದ್ದ.

              ಅಂತಹ ರೋಹಿತ್ ಆತ್ಮಹತ್ಯೆ ಮಾಡಿಕೊಂಡ. ಆತ ಬರೆದಿಟ್ಟ ಮೃತ್ಯುಪತ್ರದಲ್ಲಿ "ನನ್ನ ಸಾವಿಗೆ ಯಾರೂ ಕಾರಣರಲ್ಲ. ನಾನು ಕಾರ್ಲ್ ಸಗಾನ್’ನಂತೆ ವಿಜ್ಞಾನ ಲೇಖಕನಾಗಬೇಕೆಂದು ಬಯಸಿದ್ದೆ. ನನ್ನ ಕನಸುಗಳೆಲ್ಲ ಮುರುಟಿಹೋದ ದುಃಖದಲ್ಲಿ ಸಾವಿಗೆ ಶರಣಾಗುತ್ತಿದ್ದೇನೆ" ಎಂದು ಬರೆದು ಅಸುನೀಗಿದ್ದ. ಆದರೆ ಆತನ ಆತ್ಮಹತ್ಯೆಯನ್ನು ಹಲವು ತಿಂಗಳುಗಳ ಹಿಂದೆ ನಡೆದ ಮೇಲಿನ ಪ್ರಕರಣದ ಜೊತೆ ತಳುಕು ಹಾಕಲಾಯಿತು. ಎಬಿವಿಪಿ, ಬಂಡಾರು ದತ್ತಾತ್ರೇಯ, ಸ್ಮೃತಿ ಇರಾನಿಯವರೇ ಅದಕ್ಕೆ ಕಾರಣವೆನ್ನಲಾಯಿತು. ಯಾವಾಗ “ದ ಹಿಂದೂ” ಪತ್ರಿಕೆ “ದಲಿತ ವಿದ್ಯಾರ್ಥಿಯ ಅಮಾನವೀಯ ಆತ್ಮಹತ್ಯೆ” ಎನ್ನುವ ಶೀರ್ಷಿಕೆ ಕೊಟ್ಟು ಸುದ್ದಿ ಸೃಷ್ಟಿ ಮಾಡಿತೋ ಆಗ ದಾದ್ರಿ ಘಟನೆಯ ಬಳಿಕ ಕೆಲಸವಿಲ್ಲದೆ ನೊಣ ಹೊಡೆಯುತ್ತಿದ್ದ ಸೆಕ್ಯುಲರುಗಳಿಗೆ ನಿಧಿ ಸಿಕ್ಕಿದಂತಾಯಿತು. ಕೇಂದ್ರ ಸರಕಾರ ದಲಿತ ವಿರೋಧಿ ಎನ್ನುವ ಪ್ರಚಾರವೂ ನಡೆಯಿತು. ಕೆಲವಂತೂ ಗುಜರಾತಿನ ಯಾವುದೋ ಊರಿನಲ್ಲಿರುವ ಅಂಗನವಾಡಿ ಪ್ರಕರಣವನ್ನು ಹಿಡಿದು ಮೋದಿ ದಲಿತ ವಿರೋಧಿ ಎನ್ನುವ ಹಣೆಪಟ್ಟಿಯನ್ನೇ ಕಟ್ಟಿ ಬಿಟ್ಟರು. ಆದರೆ ರೋಹಿತ್ ನಿಜವಾಗಿ ದಲಿತನಾಗಿದ್ದನೆ? ಅಣ್ಣನ ಬಳಿ ಓಬಿಸಿ ಪ್ರಮಾಣಪತ್ರ, ಪರಿವಾರ "ವಡ್ಡರ"(ಓಬಿಸಿ) ಜನಾಂಗ; ಆದರೆ ರೋಹಿತನದ್ದು ಮಾತ್ರ "ಎಸ್.ಸಿ" ಪ್ರಮಾಣಪತ್ರ! ಇಂದು, ನಿಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ನಮ್ಮ ಕುಟುಂಬದ ಜಾತಿ ಬದಲಾಯಿಸಬೇಡಿ ಎಂದು ವೇಮುಲನ ಮನೆಯವರು ಅಲವತ್ತುಕೊಳ್ಳುತ್ತಿದ್ದಾರೆ.

              ೨೦೧೦ರಲ್ಲಿ ವಿಶ್ವವಿದ್ಯಾಲಯ ಸೇರಿಕೊಂಡಾಗ ರೋಹಿತ್ ಯಾವುದೇ ದಲಿತ ಚಳುವಳಿಯಲ್ಲಿ ಭಾಗವಹಿಸಿರಲಿಲ್ಲ. ಆತನ ಸ್ನೇಹಿತರು ಹೇಳುವಂತೆ ಆತನ ವಾಸ್ತವ್ಯದ ಕೋಣೆಯಲ್ಲಿ ವಿವೇಕಾನಂದರ ಚಿತ್ರಗಳು ರಾರಾಜಿಸುತ್ತಿದ್ದವು. ಸಾಮಾಜಿಕ ಜಾಲತಾಣಗಳಲ್ಲಿ ಭಾರತವನ್ನು ಪ್ರೀತಿಸುವ, ಭಾರತದ ಪರವಾದ ಅನೇಕ ಸಂದೇಶಗಳನ್ನೂ ಹಾಕಿದ್ದ. ಮೋದಿಯವರ ಗುಜರಾತ್ ಸೋಲಾರ್ ಪ್ರೊಜೆಕ್ಟ್ ನಿಂದ ಪ್ರಭಾವಿತನಾಗಿದ್ದ. ಆಡಮ್ ಹಾಗೂ ಈವ್ ರ ಹುಟ್ಟಿನ ಬಗ್ಗೆ ಪ್ರಶ್ನಿಸಿದ್ದ. ಮಾಧ್ಯಮಗಳ ಇಬ್ಬಂದಿತನದ ಬಗ್ಗೆಯೂ ಪ್ರಶ್ನಿಸಿದ್ದ. ರಾಹುಲ್ ಗಾಂಧಿಯ ಬಗ್ಗೆ ಜೋಕ್ ಮಾಡುತ್ತಿದ್ದ. ಸುಬ್ರಹ್ಮಣಿಯನ್ ಸ್ವಾಮಿಯವರು ಕಾಂಗ್ರೆಸ್ಸನ್ನು ಪ್ರಶ್ನಿಸಿ ಹಾಕಿದ್ದ ವಿಚಾರಗಳನ್ನು ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದ. ಅಣ್ಣಾ ಹಜಾರೆಯವರ ಭೃಷ್ಟಾಚಾರ ವಿರೋಧಿ ಹೋರಾಟದಿಂದ ಪ್ರಭಾವಿತನಾಗಿದ್ದ. ದೆಹಲಿಯ ರೇಪ್ ಬಗ್ಗೆ ಸರಕಾರದ ವಿರುದ್ಧ ಸಿಡಿದೆದ್ದಿದ್ದ. ಅಂತಹ ವೇಮುಲ ಬದಲಾಗಿ ಹೋದ. ಆತ ಈಗ ಕೇಜ್ರಿವಾಲರ ಆಪ್ ಅನ್ನು ಅಪ್ಪಿಕೊಂಡ. ಕಮ್ಯೂನಿಸ್ಟ್ ವಿಚಾರಧಾರೆಗಳು ಆತನಿಗಿಷ್ಟವಾದವು. ದಲಿತ ಸಂಘಟನೆಯನ್ನು ಸೇರಿದ. ಓವೈಸಿಯನ್ನು ಹಾಡಿ ಹೊಗಳಲಾರಂಭಿಸಿದ. ಯಾಕೂಬ್ ಮೆನನನ್ನು ಬೆಂಬಲಿಸಿದ. ಹಿಂದುತ್ವ, ಹಿಂದೂಗಳನ್ನು ವಿರೋಧಿಸಿದ. ಎಬಿವಿಪಿಯ ಭಿತ್ತಿಪತ್ರ ಕಂಡಲ್ಲೆಲ್ಲಾ ಹರಿದೆಸೆಯಲಾರಂಭಿಸಿದ.  “ಹಿಂದುತ್ವವನ್ನು ತೋರಿಸುವ ಕೇಸರಿ ಬಣ್ಣ ಎಲ್ಲೇ ಕಂಡರೂ ಹರಿದು ಹಾಕುತ್ತೇನೆ. ವಿಶ್ವವಿದ್ಯಾಲಯದಲ್ಲಿರಲಿ, ಹೊರಗಿರಲಿ, ಅಥವಾ ಮನೆಯಲ್ಲೇ ಆಗಲಿ! ಮನೆಯಲ್ಲಿ ಕೇಸರಿ ಬಣ್ಣದ ಸೀರೆ ಕಂಡರೂ ಹರಿದೆಸೆಯುತ್ತೇನೆ” ಎಂದು ಕಿಡಿ ಕಾರಲಾರಂಭಿಸಿದ. ವಿವಿಯ ಆವರಣದಲ್ಲಿ "ಬೀಫ್ ಫೆಸ್ಟಿವಲ್" ಆಯೋಜನೆ ಮಾಡಿದ್ದ. ಎಬಿವಿಪಿಯ ಹುಡುಗರ ಮೇಲೆ ಆತ ಹಲ್ಲೆ ಮಾಡಿದ್ದಕ್ಕೆ ಒಂದು ಕೇಸು ಕೂಡಾ ದಾಖಲಾಗಿತ್ತು. ಹೀಗೆ ಐದು ವರ್ಷಗಳಲ್ಲಿ ಆತನ ವ್ಯಕ್ತಿತ್ವದಲ್ಲಿ ಅಗಾಧ ಬದಲಾವಣೆಗಳಾದವು.

                "ಒಬ್ಬ ಮನುಷ್ಯನ ಮೌಲ್ಯವನ್ನು ಆತನ ಆ ಸಮಯದ ವ್ಯಕ್ತಿತ್ವ ಹಾಗೂ ಅದರ ಸನಿಹದ ಸಾಧ್ಯತೆಗಳೊಂದಿಗೆ ಗುರುತಿಸಲಾಗುತ್ತದೆ. ಮನುಷ್ಯನನ್ನು ಒಂದು ಮತವಾಗಿ, ಒಂದು ಸಂಖ್ಯೆಯಾಗಿ, ಒಂದು ವಸ್ತುವಾಗಿ ನೋಡಿಕೊಂಡಿದ್ದೇವೆಯೇ ಹೊರತು ಒಂದು ಮನಸ್ಸಾಗಿ ಅಲ್ಲ...." ಎಂದು ಆತ ಬರೆದಿಟ್ಟು ಹೋದ ವಾಕ್ಯ ಆತನ ಮನಸ್ಸಿನ ತುಮುಲವನ್ನು ಬಿಚ್ಚಿಡುತ್ತದೆ. ಅಂದರೆ ತನ್ನಲ್ಲಾದ ಬದಲಾವಣೆ ಸಹಜದ್ದಲ್ಲವೆಂದು ಆತನಿಗೆ ಅರಿವಾಗತೊಡಗಿತ್ತೇ? ದಲಿತರನ್ನು ಮೇಲ್ಜಾತಿಯವರು ಶತಮಾನಗಳಿಂದ ತುಳಿಯುತ್ತಿದ್ದಾರೆ; ಅವರ ಸ್ವಾತಂತ್ರ್ಯವನ್ನು ಹತ್ತಿಕ್ಕಲಾಗಿದೆ ಎಂಬ ಅವೇ ಹಳಸಲು ಸಾಲುಗಳ ಹಿಂದಿನ ಮರ್ಮವನ್ನು ಆತ ಅರ್ಥ ಮಾಡಿಕೊಂಡಿದ್ದನೇ? ದಲಿತರಲ್ಲಿ ಮೇಲ್ಜಾತಿಯವರ ಬಗೆಗೆ ದ್ವೇಷವನ್ನು ತುಂಬಿ ಅವರನ್ನು ಶಾಶ್ವತವಾಗಿ ತಮ್ಮ ಮತಬ್ಯಾಂಕ್ ಆಗಿ ಉಪಯೋಗಿಸಿಕೊಳ್ಳುವ ಸೆಕ್ಯುಲರುಗಳ ಹುನ್ನಾರ ಆತನಿಗೆ ಅರಿವಾದಾಗ ಕಾಲ ಮಿಂಚಿ ಹೋಯಿತೆಂಬ ಭ್ರಮೆಯಲ್ಲಿ ಸಿಕ್ಕಿಬಿದ್ದನೇ? ಈ ವಿಷವರ್ತುಲದಿಂದ ಹೊರಬರುವ ಉಪಾಯ ಕಾಣದೆ ವಿಜ್ಞಾನದ ಲೇಖಕನಾಗುವ ತನ್ನ ಕನಸು ಕನಸಾಗಿಯೇ ಉಳಿಯಿತೆಂಬ ಹತಾಷೆ ಆತನಲ್ಲಿ ಮನೆಮಾಡಿತ್ತೇ? ಆತ ಬರೆದಿಟ್ಟ ಸಾಲುಗಳು ಇಂತಹ ಹಲವಾರು ಪ್ರಶ್ನೆಗಳನ್ನು ಹುಟ್ಟು ಹಾಕಿವೆ.  ಸಮಾಜದ ಸ್ವಾಸ್ಥ್ಯ ಕೆಡಿಸುವ, ಯುವಕರ "ಬ್ರೈನ್ ವಾಷ್" ಮಾಡುವ, ಮನಸ್ಸನ್ನು ವಿಕಾರಗೊಳಿಸಿ ಗೊಂದಲಮಯವಾಗಿಸುವ ಸಿದ್ಧಾಂತವೊಂದು ಜೀವವೊಂದನ್ನು ಹೇಗೆ ಬಲಿ ತೆಗೆದುಕೊಳ್ಳುತ್ತದೆ ಎನ್ನುವುದಕ್ಕೆ ಜ್ವಲಂತ ಉದಾಹರಣೆ ರೋಹಿತನ ಪ್ರಕರಣ.

             ಆದರೆ ರೋಹಿತ್ ವೆಮುಲಾನ ಚಟ್ಟಕ್ಕೆ ಕೊಟ್ಟ ಬೆಂಕಿಯಲ್ಲಿ ಈಗ ತಾನೆ ಯೂರೋಪ್ ಪ್ರವಾಸ ಮುಗಿಸಿ ಬಂದವರೆಲ್ಲಾ ಚಳಿ ಕಾಯಿಸುತ್ತಿದ್ದಾರೆ. ಮಾಲ್ಡಾದಲ್ಲಿ ಮತಾಂಧರು ಐಸಿಸ್ ಮಾದರಿಯ ದಾಳಿ ಎಸಗಿದಾಗ, ಪಠಾಣ್ ಕೋಟ್ ಭಯೋತ್ಪಾದಕ ದಾಳಿಯಾದಾಗ, ಸಾವಿರಾರು ರೈತರು ಆತ್ಮಹತ್ಯೆ ಮಾಡಿಕೊಂಡಾಗ, ಪ್ರಶಾಂತ್ ಪೂಜಾರಿಯಂತಹ ಹಲವು ಮುಗ್ಧರ ಹತ್ಯೆಯಾದಾಗ ತುಟಿಪಿಟಿಕ್ಕೆನ್ನದವರೆಲ್ಲಾ ಈಗ ಬಾಯಿಗೆ ಬಂದಂತೆ ಗಳಹುತ್ತಿದ್ದಾರೆ. ದೇಶಕ್ಕಾಗಿ ಪ್ರಾಣಕೊಟ್ಟ ಮಹಾದಿಕ್, ನಿರಂಜನರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಲು ದಾರಿ ಮರೆತು ಹೋದವರೆಲ್ಲಾ ಈಗ ಹೈದರಾಬಾದಿನಲ್ಲಿ ಠಿಕಾಣಿ ಹೂಡಿದ್ದಾರೆ. ರೈತನೊಬ್ಬನ ಆತ್ಮಹತ್ಯೆಗೆ ಕಾರಣರಾಗಿ ಆತ ರೈತನೇ ಅಲ್ಲ ಎಂದು ಹೇಳಿ ಛೀಮಾರಿ ಹಾಕಿಕೊಂಡವರೆಲ್ಲಾ ರೋಹಿತನ ಜಾತಿ ಬದಲಾಯಿಸಿ ಆಗಿದೆ.

            ಕೇಂದ್ರದಲ್ಲಿ ಎನ್ಡಿಎ ನೇತೃತ್ವದ ಸರಕಾರ ಬಂದಾಗಿನಿಂದ ಅತೀ ಹೆಚ್ಚು "ಟಾರ್ಗೆಟ್" ಆಗುತ್ತಿರುವವರು ಸಚಿವೆ ಸ್ಮೃತಿ ಇರಾನಿ. ಟಾರ್ಗೆಟ್ ಮಾಡುತ್ತಿರುವವರು ಸೆಕ್ಯುಲರುಗಳು. ಅಂದರೆ ಸ್ಮೃತಿ ಇರಾನಿ ಸರಿಯಾದ ಪಥದಲ್ಲಿದ್ದಾರೆನ್ನುವುದೇ ಅರ್ಥ! ಸ್ಮೃತಿಯ ಕಾರ್ಯಗಳು "ಇಷ್ಟರವರೆಗೆ ತಾವು ನಡೆದದ್ದೇ ದಾರಿ. ಭಾರತ ಇರುವುದು ತಾವು ಕೂತು ಉಣ್ಣಲು" ಎಂದು ಭಾವಿಸಿದವರ ಮತಿಗೆಡಿಸುತ್ತಿವೆ.

ಸೋಮವಾರ, ಜನವರಿ 11, 2016

ಅಗ್ನಿ...

ಅಗ್ನಿ...
ಊರ್ಧ್ವಮುಖಿ...
ಮರಗಳೊಡಲಲ್ಲಿ ಹುದುಗಿರುವ ಚೇತನ!
ಜಗವ ಸುಡಲು ಒಂದು ಕಿಡಿ ಸಾಕು...ಹಾಗೆಯೇ ಜಗವ ಬೆಳಗಲೂ!
ಮೂಲಕ್ಕೆ ಕಿಂಚಿತ್ತೂ ಧಕ್ಕೆಯಾಗದಂತೆ ಅನಂತ ದೀಪಗಳನ್ನು ಹಚ್ಚಬಹುದು. ಭೇದವೆಲ್ಲಿದೆ? ಆತ್ಮಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇಕೇ?
ದಹನದ ಎಲ್ಲಾ ರೂಪಗಳೂ ಅಗ್ನಿಯೇ!
ವಿನಾಶಕ್ಕೆಳೆಸಿದರೆ ಸರ್ವಸ್ವವನ್ನೂ ಸುಟ್ಟು ಹಾಕುತ್ತದೆ. ಅದರ ಬೆಳಕಲ್ಲಿ ಒಳಗನ್ನು ಹುಡುಕಹೊರಟರೆ ತನ್ನ ಸ್ವರೂಪ ತೋರಿಸುತ್ತದೆ!
ಅಗ್ನಿ ಪವಿತ್ರ; ಅದು ಎಲ್ಲವನ್ನೂ ಸುಡುವುದು; ಮನುಷ್ಯನ ಅಹಂ ಅನ್ನೂ!
>> ಹಿಂದೆ ಹೋಮಕುಂಡದಲ್ಲಿ ಪ್ರತಿಷ್ಠಾಪಿಸಲು ಬಳಸುತ್ತಿದ್ದ ಅಗ್ನಿಯ ಹುಟ್ಟೇ ವಿಶೇಷ. ಖದಿರದ ತಟ್ಟೆಯ ಮೇಲೆ ಚಕ್ರವೊಂದಕ್ಕೆ ಸಿಕ್ಕಿಸಿದ ಅಶ್ವತ್ಥದ ಎಲೆ ತಿರುಗುವಂತೆ ಮಾಡಿ ಆ ಘರ್ಷಣೆಯಿಂದ ಅಗ್ನಿ ಎದ್ದು ಬರುತ್ತಿತ್ತು. (ಅಶ್ವತ್ಥದ ಎಲೆ ತುದಿಯಿಂದ ಮೊಬೈಲ್ ಬ್ಯಾಟರಿ ಚಾರ್ಜ್ ಮಾಡಬಹುದು ಎಂಬ ಸುದ್ದಿ ಸುಳ್ಳಿರಲಿಕ್ಕಿಲ್ಲ; ಸಂಶೋಧನೆ ಅಗತ್ಯವಿದೆ)

ಬುಧವಾರ, ಜನವರಿ 6, 2016

ಮಮತಾ ಮುಲ್ಲಾ ಸಂಘ - ಹೊತ್ತಿ ಉರಿಯುತಿಹುದು ವಂಗ!

ಮಮತಾ ಮುಲ್ಲಾ ಸಂಘ - ಹೊತ್ತಿ ಉರಿಯುತಿಹುದು ವಂಗ!

    ಎರಡೂವರೆ ಲಕ್ಷಕ್ಕಿಂತಲೂ ಹೆಚ್ಚು ಜನ ನಡು ರಸ್ತೆಯಲ್ಲಿ ನಿಂತು ಕಿರುಚಾಡುತ್ತಿದ್ದರು. ಆಗ ತಾನೇ ಬಂದ ಬಸ್ಸಿಗೆ ಬೆಂಕಿ ಹಚ್ಚಿದರು. ಗಡಿ ಭದ್ರತಾ ಪಡೆಯ ವಾಹನವೂ ಸೇರಿ ಇಪ್ಪತ್ತೈದಕ್ಕೂ ಹೆಚ್ಚು ವಾಹನಗಳು ಮತಾಂಧತೆಯ ಕಿಚ್ಚಿಗೆ ಆಹುತಿಯಾದವು. ಅಂಗಡಿ-ಮನೆ, ಪೊಲೀಸ್ ಸ್ಟೇಷನ್ನಿಗೂ ಬೆಂಕಿಬಿತ್ತು. ಆಸ್ತಿ ಪಾಸ್ತಿಯ ಲೂಟಿಯೂ ನಡೆಯಿತು. ಇದೆಲ್ಲವೂ ಒಂದೇ ದಿನ ಕೆಲವೇ ಕ್ಷಣಗಳಲ್ಲಿ ನಡೆದು ಹೋಯಿತು. ಇದರ ಉರಿ ಪಕ್ಕದ ಗ್ರಾಮ, ಜಿಲ್ಲೆಗಳಿಗೂ ವ್ಯಾಪಿಸಿ ಕಾಡ್ಗಿಚ್ಚಿನಂತೆ ಮೊರೆಯುತ್ತಿದೆ. ಇದ್ಯಾವುದೋ ಸಿರಿಯಾದಲ್ಲಿ ಐಸಿಸ್ ಉಗ್ರರ ಆಟಾಟೋಪ ಅಥವಾ ನೈಜೀರಿಯಾದಲ್ಲಿ ಬೋಕೋ ಹರಾಮಿಗಳ ದೌರ್ಷ್ಟ್ಯ ಎಂದುಕೊಂಡರೆ ನಿಮ್ಮ ಊಹೆ ತಪ್ಪು. ಇದು ನಡೆದದ್ದು, ನಡೆಯುತ್ತಿರುವುದು ನಮ್ಮ ಭಾರತದಲ್ಲೇ. ಯಾವ ಭೂಮಿಯಿಂದ ದೇಶವನ್ನೇ ಮಾತೆಯೆಂದು ಕರೆದು ಕರಮುಗಿವ ರಾಷ್ಟ್ರಗೀತೆ ಮೊಳಗಿತ್ತೋ, ಯಾವ ರಾಜ್ಯ ಬ್ರಿಟಿಷರ ಗದಗುಟ್ಟಿಸಿ ಓಡಿಸಿದ ನಾಯಕನಿಗೆ ಜನ್ಮನೀಡಿತ್ತೋ ಅದೇ ಬಂಗಾಳದಲ್ಲಿ ಇಂತಹೊದೊಂದು ಉರಿ ಕಳೆದೊಂದು ವಾರದಿಂದ ದಾವಾನಲದಂತೆ ಹಬ್ಬುತ್ತಿದೆ.

 ಮಾಲ್ಡಾ...ಭಾರತವನ್ನು ಬಾಂಗ್ಲಾದ ಜೊತೆ ಬೆಸೆದ ಬಂಗಾಳದ ಜಿಲ್ಲೆ! ಕೇವಲ ಭೂಪ್ರದೇಶ ಮಾತ್ರವಾಗಿದ್ದರೆ ಯಾವುದೇ ಸಮಸ್ಯೆಗಳೇ ಇರಲಿಲ್ಲ. ಅತ್ತಣ ಜನ ಇತ್ತ ಬಂದು ಭರ್ಜರಿ ವ್ಯಾಪಾರ ಮಾಡಿ ಹೋಗಲು, ಇತ್ತ ಬಂದು ರಿಕ್ಷಾ ಓಡಿಸಿ ತಮ್ಮ ಅನ್ನ ಸಂಪಾದಿಸಿಕೊಳ್ಳಲು ನೆರವಾಗುತ್ತಿರುವ ಜಿಲ್ಲೆ. ಮನೆಗೆ ಬಂದ ಶತ್ರುವಿಗೂ ಹೊಟ್ಟೆ ತುಂಬಾ ಉಣಬಡಿಸುವ ಗುಣಗ್ರಾಹೀ ದೇಶದಲ್ಲಿ ಅನ್ನ ಸಂಪಾದನೆಗೆ ಯಾವ ಅಡ್ಡಿ ಬಂದೀತು? ಆದರೆ ಬಂದ ಜನ ಸುಮ್ಮನುಳಿಯಬೇಕಲ್ಲ! ವ್ಯಾಪಾರದ ಜೊತೆಗೆ ಬಂದದ್ದು ನಕಲಿ ನೋಟಿನ ಮೂಟೆ! ಬಂದವರು ಎಂದಿನಂತೆ ತಮ್ಮ ಸುತ್ತ ಕಟ್ಟಿಕೊಂಡದ್ದು ಮತೀಯ ಕೋಟೆ! ನುಗ್ಗಿದವರು-ನುಗ್ಗುತ್ತಿರುವವರು ಸೇರಿ ಐವತ್ತು ಪ್ರತಿಶತಕ್ಕೂ ಅಧಿಕ ಮುಸ್ಲಿಂ ಜನಸಂಖ್ಯೆ ಇರುವ ಮಾಲ್ಡಾದಲ್ಲಿ ಲೂಟಿ-ದರೋಡೆ, ಮಕ್ಕಳ ಹತ್ಯೆ, ಹಿಂದೂಗಳ ಮೇಲಿನ ಅತ್ಯಾಚಾರ, ಕಳ್ಳಸಾಗಣೆ, ಬಾಂಬು ಸ್ಫೋಟಗಳೆಲ್ಲಾ ಮಾಮೂಲು ಸುದ್ದಿ. ಇದು ಕಚ್ಛಾ ಬಾಂಬ್ ತಯಾರಿಸುವವರ ಅಡ್ಡೆಯೂ ಹೌದು. ಮನೆಯಲ್ಲೇ ಹೆಂಡತಿ ಮಕ್ಕಳ ಸಹಕಾರದಿಂದ ಬಾಂಬ್ ತಯಾರಿಸಿ ಜಾತ್ರೆ ಗದ್ದೆಯಲ್ಲೋ, ರೈಲಿನಡಿಯೋ, ಗಡಿಭದ್ರತಾಪಡೆಯ ಮೇಲೋ ದಾಳಿ ಮಾಡುವ "ತಂತ್ರಜ್ಞಾನಿ"ಗಳಿಗೇನೂ ಇಲ್ಲಿ ಬರಗಾಲವಿಲ್ಲ.

              ನಕಲಿ ನೋಟು ಚಲಾವಣೆಯ ಮೂಲ ಇರುವುದು ಈ ಮಾಲ್ಡಾದಲ್ಲೇ. ಪಾಕಿಸ್ತಾನದ ಮುಜಾಫರಬಾದಿನಲ್ಲಿ ಮುದ್ರಣಗೊಂಡ ನಕಲಿ ನೋಟುಗಳನ್ನು ಕರಾಚಿ ವಿಮಾನ ನಿಲ್ದಾಣದ ಮೂಲಕ ಬಾಂಗ್ಲಾದೇಶಕ್ಕೆ ರವಾನಿಸಲಾಗುತ್ತದೆ. ಬಾಂಗ್ಲಾದಿಂದ ಅಕ್ರಮವಾಗಿ ಗಡಿಯೊಳಕ್ಕೆ ನುಸುಳುವವರು ಹಾಗೂ ಕೆಲಸ ಅರಸಿ ಭಾರತಕ್ಕೆ ತೆರಳುವವರ ಮೂಲಕ ನಕಲಿ ನೋಟುಗಳ ಕಂತೆಗಳನ್ನು ಮಾಲ್ಡಾ ಜಿಲ್ಲೆಗೆ ತಲುಪುವಂತೆ ನೋಡಿಕೊಳ್ಳಲಾಗುತ್ತದೆ. ಮಾಲ್ಡಾದಲ್ಲಿ ನಕಲಿ ನೋಟುಗಳನ್ನು ವಿಂಗಡಿಸಿ ಅಸ್ಸಾಂ ಹಾಗೂ ದಕ್ಷಿಣ ಭಾರತಕ್ಕೆ ರವಾನಿಸಲಾಗುತ್ತದೆ. ಕಳೆದ ವರ್ಷವೇ 1500 ಕೋಟಿ ರೂಪಾಯಿ ಮೊತ್ತದ ನಕಲಿ ನೋಟು ಭಾರತದೊಳಕ್ಕೆ ಪ್ರವೇಶಿಸಿತ್ತು. ಜೂನ್'ನಲ್ಲಿ ಈ ಖದೀಮತನ ಬಯಲಾಗುವವರೆಗೂ ರಾಜಾರೋಷವಾಗಿ ನಡೆದಿತ್ತು ಈ ದಂಧೆ. ನವೆಂಬರಿನಲ್ಲಿ ಮುಂಬಯಿಯಲ್ಲಿ 550 ರೂ. ಪಡೆದು 1000 ರೂಪಾಯಿ ಖೋಟಾ ನೋಟು ವಿತರಿಸುತ್ತಿದ್ದ ಬಾಂಗ್ಲಾದೇಶೀಯನೊಬ್ಬ ಬಲೆಗೆ ಬಿದ್ದಾಗ ಇಡೀ ದೇಶದಲ್ಲಿ ಹರಡಿರುವ ಈ ವಿಷಜಾಲ ಬೆಳಕಿಗೆ ಬಂದಿತ್ತು.
ಹೀಗೆ ಸದಾ ಅಶಾಂತಿ-ಹಿಂಸೆಗಳಿಂದಲೇ ಸದ್ದು ಮಾಡುತ್ತಿದ್ದ ಮಾಲ್ಡಾ ಕಳೆದೊಂದು ವಾರದಿಂದ ಹೊತ್ತಿ ಉರಿಯುತ್ತಿದೆ. ಒಂದು ತಿಂಗಳ ಹಿಂದೆ ಅಖಿಲ ಭಾರತ ಹಿಂದೂ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಕಮಲೇಶ್ ತಿವಾರಿಯವರು ನೀಡಿದ ಹೇಳಿಕೆಯನ್ನು ವಿರೋಧಿಸಿ ಹೇಳಿಕೆ ನೀಡಿದ ಒಂದು ತಿಂಗಳ ಬಳಿಕ ಪ್ರತಿಭಟನೆಯನ್ನು ಮುಸಲ್ಮಾನ ಸಂಘಟನೆಯೊಂದು ಹಮ್ಮಿಕೊಂಡಿತ್ತು. ಸುಮಾರು ಎರಡೂವರೆ ಲಕ್ಷಕ್ಕೂ ಅಧಿಕ ಮುಸಲರು ಮಾರಕಾಯುಧ, ದೊಡ್ಡ ದೊಡ್ಡ ಹಸಿರು ಬಾವುಟಗಳನ್ನು ಹಿಡಿದು ರಾಷ್ಟ್ರೀಯ ಹೆದ್ದಾರಿ 34ನ್ನು ಸಂಪೂರ್ಣವಾಗಿ ಆಕ್ರಮಿಸಿಕೊಂಡಿದ್ದರು. ಪ್ರತಿಭಟನೆ ಮಾಡುತ್ತಿದ್ದವರಲ್ಲಿ ಹೆಚ್ಚಿನವರಿಗೆ ತಿವಾರಿ ಏನು ಹೇಳಿದ್ದರೆಂದೇ ತಿಳಿದಿರಲಿಲ್ಲ. ಜಿಲ್ಲೆಯ ಮುಖ್ಯ ರಸ್ತೆಗಳನ್ನೆಲ್ಲಾ ಆವರಿಸಿಕೊಂಡು ಮಾರ್ಗ ಮಧ್ಯದಲ್ಲಿ ಸಿಕ್ಕಿದ ಬಸ್ಸಿನ ಚಾಲಕನ ಜೊತೆ ವಾಗ್ವಾದ ನಡೆಸಿ ಬಸ್ಸಿಗೆ ಬೆಂಕಿ ಹಚ್ಚಿದರು. ಅಷ್ಟರಲ್ಲೇ ಆ ದಾರಿಯಾಗಿ ಗಡಿಭದ್ರತಾ ಪಡೆಯ ವಾಹನವನ್ನೂ ಈ ಮತಾಂಧರು ಬಿಡಲಿಲ್ಲ. ಶನಿ, ದುರ್ಗಾ ದೇವಾಲಯ ಸೇರಿದಂತೆ ಹತ್ತಾರು ಹಿಂದೂ ದೇವಾಲಯಗಳನ್ನು ಸುಡಲಾಯಿತು. ಇಪ್ಪತ್ತೈದಕ್ಕು ಹೆಚ್ಚು ಹಿಂದೂಗಳ ಮನೆ, ಅಂಗಡಿಗಳು ಬೆಂಕಿಗೆ ಆಹುತಿಯಾದವು. ಕಾಲಿಯಾಚಾಕ್ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿ ಅಲ್ಲಿದ್ದ ಕಡತಗಳನ್ನೆಲ್ಲಾ ಸುಟ್ಟು ಹಾಕಿದರು. ಪೊಲೀಸ್ ಠಾಣೆಗೆ ಬೆಂಕಿ ಹಚ್ಚುವ ಮುನ್ನ ನರೇಂದ್ರ ಮೋದಿ ವಿರುದ್ಧ ಘೋಷಣೆಯನ್ನೂ ಕೂಗಿದ್ದರು ಈ ಪ್ರತಿಭಟನಾಕಾರರು. ಸುಮಾರು ಇಪ್ಪತ್ತೈದಕ್ಕೂ ಹೆಚ್ಚು ವಾಹನಗಳು ಬೆಂಕಿಗೆ ಆಹುತಿಯಾದವು. ಮನೆಗಳನ್ನೆಲ್ಲಾ ದೋಚಲಾಯಿತು. ಹಿಂದೂ ಹುಡುಗಿಯರಿಗೆ ಕಿರುಕುಳ ನೀಡಲಾಯಿತು. ಬಿಡಿಓ ಕಛೇರಿಯಲ್ಲಿದ್ದ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಲಾಯಿತು. ಬಾಂಬೆಸೆಯಲಾಯಿತು. ರೈಲ್ವೇ ನಿಲ್ದಾಣಗಳಲ್ಲಿ, ರೈಲ್ವೇ ಪಟರಿಗಳ ಮೇಲೆ ಕೂತು ಪ್ರತಿಭಟನೆ ನಡೆಸುವಾಗ ತಡೆಯಲು ಬಂದ ಪೊಲೀಸರ ಮೇಲೆ ಹಲ್ಲೆ ನಡೆಸಲಾಯಿತು. ಇಪ್ಪತ್ತಕ್ಕೂ ಹೆಚ್ಚು ಪೊಲೀಸ್ ವಾಹನಗಳಿಗೆ ಬೆಂಕಿ ಹಚ್ಚಲಾಯಿತು.

              ಮಾಲ್ಡಾ ಜಿಲ್ಲೆಯ ಬಾಲಿಯಾದಂಗಾ, ಮೊದಾಬರಿ, ಡಂಗಾ, ಕಾಳಿಯಾಚಕ್ ಹಾಗೂ ಮೊಹಬ್ಬತ್ ಪುರ್ ಮೊದಲಿನಿಂದಲೂ ಭಾರತವಿರೋಧಿ ಚಟುವಟಿಕೆಯ ಕೇಂದ್ರ ಸ್ಥಾನಗಳು. ಪೊಲೀಸರಿಗೆ ದೊರಕಿದ ಸಾಕ್ಷ್ಯಾಧಾರಗಳ ಪ್ರಕಾರ ಇದೊಂದು ವ್ಯವಸ್ಥಿತ ದಂಗೆ. ತೃಣಮೂಲ ಕಾಂಗ್ರೆಸ್, ಕಾಂಗ್ರೆಸ್ ಹಾಗೂ ಕಮ್ಯೂನಿಸ್ಟ್ ಪಕ್ಷಗಳ ನೇತಾರರು ಸೇರಿಕೊಂಡು ಹಿಂದೂಗಳ ಮೇಲೆ ಹಾಗೂ ಪೊಲೀಸ್-ಭದ್ರತಾ ಪಡೆಯ ಮೇಲೆ ದಾಳಿ ನಡೆಸಲು ನಡೆಸಿದ ವ್ಯವಸ್ಥಿತ ಪಿತೂರಿ. ಕಾಳಿಯಾಚಕ್ ಪೊಲೀಸ್ ಠಾಣೆಯನ್ನು ಸುಡುವಾಗ ದಂಗೆಕೋರರು ಮೊದಲು ಬೆಂಕಿ ಇಕ್ಕಿದ್ದು ಅಪರಾಧಗಳ ಪಟ್ಟಿ ಇರುವ ಮಹತ್ವದ ಕಡತಗಳಿರುವ ಜಾಗಕ್ಕೆ! ಇದಕ್ಕೆ ಕಾರಣವೂ ಇಲ್ಲದಿಲ್ಲ. ಜಿಲ್ಲಾ ಪೊಲೀಸ್ ಗಡಿ ಭದ್ರತಾ ಪಡೆಯ ನೆರವಿನಿಂದ ನಕಲಿ ನೋಟು ದಂಧೆ, ಕಳ್ಳ ಸಾಗಣೆ, ಅಕ್ರಮ ನುಸುಳುವಿಕೆ, ಬಾಂಬ್ ತಯಾರಿಕೆಗೆ ಕಡಿವಾಣ ಹಾಕಿತ್ತು. ಇದರಲ್ಲಿ ತೊಡಗಿಸಿಕೊಂಡವರ ಪಟ್ತಿಯೊಂದನ್ನೂ ತಯಾರಿಸಲಾಗಿತ್ತು. ಹೀಗಾಗಿ ಕಳೆದೊಂದು ವರ್ಷದಿಂದ ಜಿಲ್ಲೆಯಲ್ಲಿ ಶಾಂತಿ-ಸುವ್ಯವಸ್ಥೆ ನೆಲೆಸಿತ್ತು. ತಮ್ಮ ಆದಾಯ ಹಾಗೂ ಮತಬ್ಯಾಂಕಿಗೆ ಪೆಟ್ಟುಬೀಳುತ್ತಿರುವುದನ್ನು ಮನಗಂಡ ನೇತಾರರು ಇಂತಹುದೊಂದು ವ್ಯವಸ್ಥಿತ ಷಡ್ಯಂತ್ರ ಹೆಣೆದರು. ಮುಸ್ಲಿಮರು 50% ಗಿಂತ ಜಾಸ್ತಿಯಾದರೆ ಏನಾಗುತ್ತೆ ಎನ್ನುವುದಕ್ಕೆ ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆ ಜ್ವಲಂತ ನಿದರ್ಶನ!

               ಒಂದು ವಾರದಿಂದ ಮಾಲ್ಡಾ ಹಾಗೂ ಅದರ ಸುತ್ತಲಿನ ನಾಲ್ಕು ಜಿಲ್ಲೆಗಳು ಸುಡುತ್ತಿದ್ದರೆ ಮಾಧ್ಯಮಗಳು ಪಠಾಣ್ ಕೋಟ್ ದಾಳಿಯ ನೆಪ ಹೂಡಿ ನರೇಂದ್ರಮೋದಿಯವರನ್ನು ಹಣಿಯುವುದರಲ್ಲಿ ವ್ಯಸ್ತವಾಗಿದ್ದವು. ಝೀ ಸುದ್ದಿ ವಾಹಿನಿಯೊಂದನ್ನು ಬಿಟ್ಟರೆ ಉಳಿದವರಿಗೆಲ್ಲಾ ಮಾಲ್ಡಾ ನೆನಪಾದದ್ದು ಸುಟ್ಟುರಿದ ಮೇಲೆಯೇ. ದಾದ್ರಿ ಘಟನೆಯಾದ ತಕ್ಷಣ ಅಲ್ಲಿಗೆ ಓಡಿದ್ದ ಯಾವ ರಾಜಕೀಯ ನೇತಾರನೂ ಬಂಗಾಳಕ್ಕೆ ಕಾಲಿಡಲಿಲ್ಲ. ದಾದ್ರಿ ಘಟನೆಯನ್ನು ಅಸ್ತ್ರವಾಗಿರಿಸಿ ಸರಕಾರವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಮುಜುಗುರ ಅನುಭವಿಸುವಂತೆ ಮಾಡಿದ ಯಾವುದೇ ಸುದ್ದಿ ಮಾರಾಟಗಾರರು ಮಾಲ್ಡಾ ಹೊತ್ತಿ ಉರಿಯುತ್ತಿರುವ ಬಗ್ಗೆ ಕನಿಷ್ಠ ಟ್ವೀಟೂ ಮಾಡಲಿಲ್ಲ! ತಮ್ಮ ಐಷಾರಾಮಿ ಜೀವನಕ್ಕೆ ಬೆಂಕಿ ಬಿದ್ದಾಗ ದಾದ್ರಿಯ ನೆಪ ಹೂಡಿ ಅಸಹಿಷ್ಣುತೆಯ ನಾಟಕವಾಡಿದ ಪ್ರಶಸ್ತಿ ವಾಪಸಿಗರ ಪ್ರಶಸ್ತಿಗಳೆಲ್ಲಾ ಮಾಲ್ಡಾಕ್ಕೆ ಬರುವಾಗ ಬರಿದಾಗಿದ್ದವು.

             ಲಾಸ್ ವೇಗಾಸ್'ನಲ್ಲಿ ನಡೆವ ಘಟನೆಗಳಾವುವು ಹೊರಜಗತ್ತಿಗೆ ತಿಳಿಯುವುದಿಲ್ಲ ಎನ್ನುವ ಮಾತಿದೆ. ಅದೇ ರೀತಿ ಬಂಗಾಳದಲ್ಲಿ ನಡೆಯುವ ಘಟನೆಗಳು ಮಮತಾರ ಮುಲ್ಲಾ ಮಮತೆಯ ಅಡಿಯಲ್ಲಿ ಹೂತುಹೋಗುತ್ತಿವೆ. ಲಾಲೂವಿನ ಬಿಹಾರ "ಜಂಗಲ್ ರಾಜ್" ಆದರೆ ಮಮತಾರ ಬಂಗಾಳ "ದಂಗಾ ರಾಜ್" ಆಗಿ ಬದಲಾಗಿದೆ. ತೂಕ್ತುಕಿ ಮಂಡಲ್ ರೇಪ್ ಜಿಹಾದ್ ಪ್ರಕರಣವನ್ನು ಸಂಘದ ಗಿಮಿಕ್ ಎಂದು ಬಿಂಬಿಸಹೊರಟ ತೃಣಮೂಲ ಕಾಂಗ್ರೆಸ್ಸಿನದ್ದು ಪ್ರತಿದಿನ-ಪ್ರತಿಕ್ಷಣ ಮುಸ್ಲಿಂ ಓಲೈಕೆ ರಾಜಕಾರಣವೇ. ಮಹಿಳಾ ಫೂಟ್ ಬಾಲ್ ಟೂರ್ನಿ ನಡೆಸದಂತೆ ಫತ್ವಾ ಹೊರಡಿಸಿದ ಪ್ರಕರಣವಾಗಲೀ, ತಸ್ಲಿಮಾ ನಸ್ರೀನ್ ಮೇಲಿನ ಹಲ್ಲೆ ನಡೆಸಿದ, ಫತ್ವಾ ಹೊರಡಿಸಿದ ಪ್ರಕರಣವಾಗಲೀ ಮಮತಾರ ಮುಸ್ಲಿಂ ಮಮತೆಯನ್ನು ರಾಜಾರೋಷವಾಗಿ ತೋರಿಸಿದವು. ಜೊತೆಗೆ ಶಾರದಾ ಚಿಟ್ ಫಂಡ್ ಹಗರಣದಲ್ಲಿ ಭಯೋತ್ಪಾದಕ ಸಂಘಟನೆಗೆ ಮಮತಾರ ಪಕ್ಷದಿಂದ ಹರಿದ ಹಣದ ಹೊಳೆ ಭಾರತದ ನ್ಯಾಯ ವ್ಯವಸ್ಥೆ ಗಟ್ಟಿಯಾಗಿದ್ದಿದ್ದರೆ ಮಮತಾರನ್ನು ಕಂಬಿಗಳ ಹಿಂದೆ ನಿಲ್ಲಿಸುತ್ತಿತ್ತು. ವಿಜಯದಶಮಿ ಹಾಗೂ ಈದ್ ಒಂದೇ ದಿನ ಬಂತೆಂದು ವಿಜಯದಶಮಿಯನ್ನೇ ಒಂದು ದಿನ ಮುಂದೂಡಿದ ಮಮತಾ ಹಿಂದೂ ಹೌದೋ ಎಂದು ಎಲ್ಲರೂ ಪ್ರಶ್ನಿಸುವಂತಾಗಿತ್ತು. ಕಳೆದ ಮೂರು ವರ್ಷದಿಂದ ಬಂಗಾಳದಲ್ಲಿ ಹಿಂದೂಗಳು ದುರ್ಗಾಪೂಜೆ ಆಚರಿಸುವಂತಿಲ್ಲ. "ಪ್ರಧಾನಿಯವರಿಗೆ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕವಿದೆ" ಎಂಬ ಅರ್ಥಹೀನ ಆರೋಪ ಮಾಡುವ ಇದ್ರಿಸ್ ಆಲಿಯಂಥ ಸಂಸದ, ಮನೆಯಲ್ಲೇ ಬಾಂಬು ತಯಾರಿಸುವ, ಭಯೋತ್ಪಾದಕರಿಗೆ ಬಹಿರಂಗವಾಗಿಯೇ ಬೆಂಬಲ ನೀಡುವ, ನುಸುಳುಕೋರರಿಗೆ, ಕಳ್ಳಸಾಗಣಿಕೆಗಾರರಿಕೆ, ನಕಲಿನೋಟುಜಾಲಕ್ಕೆ ಸುವ್ಯವಸ್ಥೆ ಒದಗಿಸಿಕೊಡುವ ಸಂಸದರನ್ನು ಹೊಂದಿರುವ ತೃಣಮೂಲ ಕಾಂಗ್ರೆಸನ ಆಡಳಿತ ಕಮ್ಯೂನಿಸ್ಟ್ ಪಕ್ಷದ ಮುಂದುವರಿದ ಅಧ್ಯಾಯದಂತಿದೆ. ಬಂಗಾಳದ ತಲಕುಪುರದ ಮದ್ರಸಾವೊಂದರಲ್ಲಿ ಶಿಕ್ಷಕ ಮಾಸೂಮ್ ಅಖ್ತರ್ ರಾಷ್ಟ್ರಗೀತೆ ಹೇಳಿಕೊಟ್ಟ ಎಂಬ ಒಂದೇ ಒಂದು ಕಾರಣಕ್ಕೆ ತನ್ನದೇ ಬಾಂಧವರಿಂದ ಹಿಗ್ಗಾಮುಗ್ಗ ಹೊಡೆಸಿಕೊಂಡು ಮನೆಯಲ್ಲಿ ಮಲಗಬೇಕಾಯ್ತು. ಆತ ರಕ್ಷಣೆಗಾಗಿ ಪೊಲೀಸರನ್ನು ಬೇಡಿದರೆ ಪೊಲೀಸರು ಮುಸಲರಿಗೆ ಹೆದರಿ ತಮ್ಮಿಂದ ರಕ್ಷಣೆ ನೀಡಲಾಗದು ಎನ್ನುವ ಲಿಖಿತ "ಭರವಸೆ" ನೀಡಿದ್ದಾರೆ. ಒಬ್ಬ ಮುಸ್ಲಿಮನ ಪರಿಸ್ಥಿತಿಯೇ ಹೀಗಾದರೆ ಹಿಂದೂಗಳ ಪರಿಸ್ಥಿತಿ ಹೇಗಿರಬಹುದು?

             ವಂದೇ ಮಾತರಂ ಮಂತ್ರ ಸ್ಪುರಿಸಿದ, ರಾಮಕೃಷ್ಣ, ಅರವಿಂದ, ವಿವೇಕಾನಂದ, ಬಂಕಿಮ, ಜತೀನ್, ಸುಭಾಷ್ ಜನಿಸಿದ, ಬ್ರಿಟಿಷರ ಅಹಂಗೆ ಕೊಳ್ಳಿ ಇಟ್ಟ, ಅಸಂಖ್ಯ ಕ್ರಾಂತಿ ವೀರರಿಗೆ ಜನ್ಮ ಕೊಟ್ಟ ನೆಲ ಇಂದು ದೆವ್ವಗಳ ಬೀಡಾಗಿದೆ. ಮಮತಾರ ಮುಲ್ಲಾ ಸಂಘದಿಂದ ವಂಗ ಹೊತ್ತಿ ಉರಿಯುತ್ತಿದೆ. ಈ ಉರಿ ದೇಶವನ್ನಿಡೀ ವ್ಯಾಪಿಸಿಕೊಳ್ಳುವ ದಿನ ದೂರವಿಲ್ಲ. ರಾಜಕೀಯ ಪಕ್ಷಗಳ ಓಲೈಕೆ ರಾಜಕಾರಣಕ್ಕೆ ಬಲಿಯಾಗುತ್ತಿರುವುದು ದೇಶ. ಹೊರಗಿನಿಂದ ಬಂದು ದಾಳಿ ಮಾಡುವವರನ್ನು ಮಸಣಕ್ಕಟ್ಟುವ ಜೊತೆಗೆ ಒಳಗಿನ ಶತ್ರುಗಳಿಗೊಂದು ಗತಿ ತೋರಿಸದಿದ್ದರೆ ಭಾರತದ ಸ್ಥಿತಿ ಅಧೋಗತಿ! "ಸೆಕ್ಯುಲರ್" ಭಾವವನ್ನು ಬಿಟ್ಟು ನಿರ್ದಾಕ್ಷಿಣ್ಯವಾಗಿ "ಭಯೋತ್ಪಾದನೆಯ ಮೂಲ"ವನ್ನು ಹೊಸಕಿ ಹಾಕದಿದ್ದರೆ ಯಾವ ಅಭಿವೃದ್ಧಿಯೂ ದೇಶವನ್ನು ಉಳಿಸಲಾರದು.