ಪುಟಗಳು

ಸೋಮವಾರ, ಜನವರಿ 11, 2016

ಅಗ್ನಿ...

ಅಗ್ನಿ...
ಊರ್ಧ್ವಮುಖಿ...
ಮರಗಳೊಡಲಲ್ಲಿ ಹುದುಗಿರುವ ಚೇತನ!
ಜಗವ ಸುಡಲು ಒಂದು ಕಿಡಿ ಸಾಕು...ಹಾಗೆಯೇ ಜಗವ ಬೆಳಗಲೂ!
ಮೂಲಕ್ಕೆ ಕಿಂಚಿತ್ತೂ ಧಕ್ಕೆಯಾಗದಂತೆ ಅನಂತ ದೀಪಗಳನ್ನು ಹಚ್ಚಬಹುದು. ಭೇದವೆಲ್ಲಿದೆ? ಆತ್ಮಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇಕೇ?
ದಹನದ ಎಲ್ಲಾ ರೂಪಗಳೂ ಅಗ್ನಿಯೇ!
ವಿನಾಶಕ್ಕೆಳೆಸಿದರೆ ಸರ್ವಸ್ವವನ್ನೂ ಸುಟ್ಟು ಹಾಕುತ್ತದೆ. ಅದರ ಬೆಳಕಲ್ಲಿ ಒಳಗನ್ನು ಹುಡುಕಹೊರಟರೆ ತನ್ನ ಸ್ವರೂಪ ತೋರಿಸುತ್ತದೆ!
ಅಗ್ನಿ ಪವಿತ್ರ; ಅದು ಎಲ್ಲವನ್ನೂ ಸುಡುವುದು; ಮನುಷ್ಯನ ಅಹಂ ಅನ್ನೂ!
>> ಹಿಂದೆ ಹೋಮಕುಂಡದಲ್ಲಿ ಪ್ರತಿಷ್ಠಾಪಿಸಲು ಬಳಸುತ್ತಿದ್ದ ಅಗ್ನಿಯ ಹುಟ್ಟೇ ವಿಶೇಷ. ಖದಿರದ ತಟ್ಟೆಯ ಮೇಲೆ ಚಕ್ರವೊಂದಕ್ಕೆ ಸಿಕ್ಕಿಸಿದ ಅಶ್ವತ್ಥದ ಎಲೆ ತಿರುಗುವಂತೆ ಮಾಡಿ ಆ ಘರ್ಷಣೆಯಿಂದ ಅಗ್ನಿ ಎದ್ದು ಬರುತ್ತಿತ್ತು. (ಅಶ್ವತ್ಥದ ಎಲೆ ತುದಿಯಿಂದ ಮೊಬೈಲ್ ಬ್ಯಾಟರಿ ಚಾರ್ಜ್ ಮಾಡಬಹುದು ಎಂಬ ಸುದ್ದಿ ಸುಳ್ಳಿರಲಿಕ್ಕಿಲ್ಲ; ಸಂಶೋಧನೆ ಅಗತ್ಯವಿದೆ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ