ಕಣ್ಣ ದೃಷ್ಠಿ ಕುಸಿಯುತ್ತಿದೆ...ಹುಣ್ಣ ಸೃಷ್ಟಿ ಏರುತ್ತಿದೆ!
ಜಗತ್ತಿನ ಇತಿಹಾಸದಲ್ಲಿ ಪ್ರಾಚೀನವೆನಿಸಿದ ಎಂದೋ ಕಣ್ಮರೆಯಾದ ಬ್ಯಾಬಿಲೋನಿಯನ್, ಚಾಂಡಿಯನ್, ಐಗುಪ್ತ, ಯವನ ರಾಷ್ಟ್ರಗಳಿಗಿಂತಲೂ ಹಳೆಯದಾದ ಮತ್ತು ಹಿರಿದಾದ ಸಂಸ್ಕೃತಿ ಭಾರತದ್ದು. ಅತ್ಯಂತ ಪ್ರಾಚೀನ ರಾಷ್ಟ್ರವಾದ ಭಾರತಕ್ಕೆ ವಿಶ್ವದ ಎಲ್ಲೆಡೆಯಿಂದ ಜನ ಬಂದರು. ಇಲ್ಲಿನ ಸಾಂಸ್ಕೃತಿಕ ಶ್ರೀಮಂತಿಕೆ, ಏಕರೂಪತೆಗೆ ಮನಸೋತು ಇಲ್ಲಿಯೇ ಹಲವರು ನೆಲೆ ನಿಂತರು. ಹಾಗೆ ಬಂದವರೂ ಇಲ್ಲಿನ ಜೀವನ ಪದ್ದತಿಯನ್ನು ಅಳವಡಿಸಿಕೊಂಡರು. ಇಲ್ಲಿ ಅರಳಿರುವ ಸನಾತನ ಧರ್ಮದ ವಿಶೇಷತೆಯೇ ಅದಕ್ಕೆ ಕಾರಣ. ಆದರೆ ಯಾವಾಗ ಈ ಪುಣ್ಯಗರ್ಭೆಯ ವರಸುತ ಪೃಥ್ವೀರಾಜನನ್ನು ಮೋಸದಿಂದ ಘೋರಿ ಸೋಲಿಸಿದನೋ ಅಂದಿನಿಂದ ಇಲ್ಲಿಯ ಸಂಸ್ಕೃತಿಗೆ ಆಘಾತಗಳು ಆರಂಭವಾದವು. ಮುಸ್ಲಿಮರು ಹಾಗೂ ನಂತರ ಬಂದ ಕ್ರೈಸ್ತರು ಇಲ್ಲಿನ ಸಂಸ್ಕೃತಿಯ ಭಾಗವಾಗದೆ ಇಲ್ಲಿನ ಜೀವನ ಪದ್ದತಿಯೊಂದಿಗೆ ಹೊಂದಿಕೊಳ್ಳಲಾಗದೆ ಈ ದೇಶ ಬಹುಸಂಸ್ಕೃತಿಯ ಆಡುಂಬೋಲವಾಗಲು ಕಾರಣವಾದರು. ಅಷ್ಟೇ ಆದರೆ ಸಮಸ್ಯೆ ಉಂಟಾಗುತ್ತಿರಲಿಲ್ಲವೇನೋ! ಕತ್ತಿ ಹಿರಿದು, ಪ್ರಲೋಭನೆ ಒಡ್ಡಿ, ಸಂದರ್ಭದ ಲಾಭ ಪಡೆದು ಇಲ್ಲಿನ ಶಾಂತಿಪ್ರಿಯ ಜನರನ್ನು ತಮ್ಮ ಮತಕ್ಕೆ ಸೇರಿಸಿಕೊಳ್ಳಲಾರಂಭಿಸಿದ ಅವರ ಕುಟಿಲತನ, ಅಧಿಕಾರ ಪಡೆಯಲೋಸುಗ ಅವರು ಮಾಡಿದ/ಮಾಡುತ್ತಿರುವ ಷಡ್ಯಂತ್ರಗಳು, ತಮ್ಮ ಸಂಖ್ಯೆ ಹೆಚ್ಚಿಸಿಕೊಳ್ಳಲು ಅವರು ಮಾಡುತ್ತಿರುವ ಕುತಂತ್ರಗಳು ಹಾಗೂ ಪಡೆದುಕೊಂಡ ಸವಲತ್ತುಗಳು ಇವತ್ತು ದೇಶಕ್ಕೇ ಮಾರಕವಾಗುತ್ತಿದೆ. ಕ್ಷಣಕ್ಷಣಕ್ಕೂ ಏರುತ್ತಿರುವ ಅವರ ಸಂಖ್ಯೆ ಹಿಂದೂಗಳನ್ನು ಭಯಭೀತರನ್ನಾಗಿಸುತ್ತಿದೆ.ಗೌರವ್ ಶರ್ಮಾ, ಲಖ್ನೋದ ಓರ್ವ ಕಥಕ್ ನೃತ್ಯಪಟು. ಸಾಮಾಜಿಕ ಜಾಲತಾಣದಲ್ಲಿ ಜಾಲಾಡುತ್ತಿರುವಾಗ ಈತನಿಗೆ ರಿಝ್ವಾನ್ ಎಂಬ ಪಾಕಿಸ್ತಾನಿಯೊಬ್ಬನ ಪರಿಚಯವಾಗುತ್ತದೆ. ಕ್ರಮೇಣ ಈ ಪರಿಚಯ ಪ್ರೇಮಕ್ಕೆ ತಿರುಗುತ್ತದೆ! ಅರೇ ಸಮಾನ ಲಿಂಗಿಗಳ ನಡುವೆ ಪ್ರೇಮ! ಕಲಿಗಾಲ, ಅದರಲ್ಲೂ ಈಗ ಕಾನೂನುಬದ್ಧ...ಇರಲೂಬಹುದು ಎಂದುಕೊಂಡಿರಾ...? ಅಷ್ಟಕ್ಕೇ ನಿಲ್ಲಲಿಲ್ಲ ಈ ಪ್ರೇಮಪ್ರಕರಣ. ಸರಣಿ ಶಸ್ತ್ರಚಿಕಿತ್ಸೆಗೊಳಗಾದ ಗೌರವ್ ೯ ತಿಂಗಳಲ್ಲಿ ಲಿಂಗ ಬದಲಾವಣೆ ಮಾಡಿಕೊಂಡು ಹೆಣ್ಣಾಗಿ ಬದಲಾಗುತ್ತಾನೆ! ಇವರಿಬ್ಬರ ನಡುವೆ ಇನ್ನೇನು ಕೆಲ ತಿಂಗಳಲ್ಲಿ ಮದುವೆಯು ನಡೆಯುತ್ತದೆ. ಇದೇನು ಕಥೆಯೇ ಎಂದು ಹುಬ್ಬೇರಿಸಬೇಡಿ! ಇದು ಕಥೆಯಲ್ಲ, ನೈಜ ಘಟನೆ. ಮುಖತಃ ಭೇಟಿಯಾಗದೆ, ಕೇವಲ ಸ್ಕೈಪ್ ಮುಖಾಂತರ ಒಬ್ಬರಿಗೊಬ್ಬರು ಪರಿಚಯ ಮಾಡಿಕೊಂಡ "ಸಮಾನ ಲಿಂಗಿಗಳಿಬ್ಬರು" ಪ್ರೇಮಿಸಲು ಅಲ್ಲಲ್ಲಾ ಕಾಮಿಸಲು ಶುರು ಮಾಡಿ ಕೊನೆಗೆ ಹಿಂದೂ ಹುಡುಗ ತನ್ನ ಲಿಂಗವನ್ನೇ ಪರಿವರ್ತನೆ ಮಾಡಿಕೊಂಡು ಮತಾಂತರಕ್ಕೊಳಗಾದ ಪರಿ! ಇದು ಮತಾಂತರದ ಹೊಸ ಅಸ್ತ್ರವೇ? ಗೊತ್ತಿಲ್ಲ. ಕೆಲವೇ ದಿನಗಳಲ್ಲಿ ಅರಿವಾಗಬಹುದು. ಆದರೆ ಆಗ ಕಾಲ ಮಿಂಚಿರುತ್ತದೆ!
ಸ್ವಾತಂತ್ರ್ಯ ಪೂರ್ವದಲ್ಲಿ ೧೯೪೧ರ ಜನಗಣತಿಯಂತೆ ಭಾರತದಲ್ಲಿ ಹಿಂದೂಗಳ ಸಂಖ್ಯೆ ೭೩.೮೧%, ಮುಸ್ಲಿಮರ ಸಂಖ್ಯೆ ೨೪.೨೮% ಇದ್ದರೆ ಕ್ರೈಸ್ತರದ್ದು ಕೇವಲ ೧.೯೧%. ಭಾರತದ ವಿಭಜನೆಯಾದಾಗ ಎಲ್ಲಾ ಮುಸಲ್ಮಾನರು ಪಾಕಿಸ್ತಾನಕ್ಕೆ ಹೋಗಬೇಕಿತ್ತಾದರೂ ಕೆಲವರು ಇಲ್ಲೇ ಉಳಿದರು. ಹೀಗೆ ೧೯೫೧ರಲ್ಲಿ ಜನಗಣತಿ ನಡೆದಾಗ ಭಾರತದಲ್ಲಿದ್ದ ಹಿಂದೂಗಳ ಸಂಖ್ಯೆ ೮೭%, ಮುಸ್ಲಿಮರ ಸಂಖ್ಯೆ ೧೦.೪೩% ಹಾಗೂ ಕ್ರೈಸ್ತರ ಸಂಖ್ಯೆ ೨.೩೩%. ೨೦೧೧ಕ್ಕಾಗುವ ಹಿಂದೂಗಳ ಸಂಖ್ಯೆ ೮೨.೫೯% ಆದರೆ ಮುಸಲರದ್ದು ೧೪.೨೩%! ಇದರಲ್ಲೇನು ವಿಶೇಷ. ಉಳಿದವರ ಸಂಖ್ಯೆ ಹೆಚ್ಚಿದಂತೆ ಮುಸ್ಲಿಮರ ಸಂಖ್ಯೆಯೂ ಹೆಚ್ಚುತ್ತಿದೆ ಅಂತ ಭಾವಿಸಿದರೆ ಅದು ನಮ್ಮ ಮೂರ್ಖತನ ಅಷ್ಟೇ. ವಾಸ್ತವದಲ್ಲಿ ಮುಸ್ಲಿಮರ ಸಂಖ್ಯೆ ವಿಪರೀತ ಏರುಗತಿಯಲ್ಲೇ ಸಾಗಿದ್ದರೆ ಹಿಂದೂಗಳ ಸಂಖ್ಯೆ ಕಡಿಮೆಯಾಗುತ್ತಲೇ ಇದೆ. ಅದರಲ್ಲೂ ಅಸ್ಸಾಂ, ಪಶ್ಚಿಮ ಬಂಗಾಳ, ಕೇರಳ, ಗೋವಾ, ಉತ್ತರಾಖಂಡ, ಜಮ್ಮು ಕಾಶ್ಮೀರ, ದೆಹಲಿ ಹಾಗೂ ಹರಿಯಾಣಗಳಲ್ಲಿ ಮುಸಲರ ಸಂಖ್ಯೆ ವೇಗವಾಗಿ ಹೆಚ್ಚುತ್ತಿದೆ. ೨೦೦೧ಕ್ಕೆ ಹೋಲಿಸಿದಲ್ಲಿ ಈ ರಾಜ್ಯಗಳಲ್ಲಿ ಮುಸಲ್ಮಾನರ ಸಂಖ್ಯಾ ಹೆಚ್ಚಳ ರಾಷ್ಟ್ರೀಯ ಜನಸಂಖ್ಯಾ ಏರಿಕೆ ದರ ೦.೮%ಕ್ಕಿಂತ ಬಹಳ ಅಧಿಕವಾಗಿದ್ದು, ಅಸ್ಸಾಂನಲ್ಲಿ ೩.೩%, ಬಂಗಾಳದಲ್ಲಿ ೨.೩% ಏರಿಕೆ ಕಂಡು ಬಂದಿದೆ.
ಇದೇ ವೇಳೆ ಪಾಕಿಸ್ತಾನದಲ್ಲಿ ೧೯೪೧ರಲ್ಲಿ ೨೦% ಇದ್ದ ಹಿಂದೂಗಳ ಸಂಖ್ಯೆ ೨೦೧೧ಕ್ಕಾಗುವಾಗ ಕೇವಲ ೧.೬%! ಬಾಂಗ್ಲಾದಲ್ಲಿ ೩೦% ದಿಂದ ೯%ಕ್ಕೆ ಹಿಂದೂಗಳ ಸಂಖ್ಯೆ ಇಳಿದಿದೆ. ೨೦೧೧ರಲ್ಲಿ ಅತೀಹೆಚ್ಚು ಮುಸ್ಲಿಂ ಬಾಹುಳ್ಯವಿರುವ ದೇಶ ಇಂಡೋನೇಷಿಯಾವಾಗಿತ್ತು. ಸುಮಾರು ೨೧ಕೋಟಿ ಮುಸಲರು ಇಂಡೋನೇಷಿಯಾದಲ್ಲಿದ್ದರೆ ಪಾಕಿಸ್ತಾನದಲ್ಲಿ ೧೮ಕೋಟಿ, ಭಾರತದಲ್ಲಿ ೧೭.೨೨ ಕೋಟಿಯಷ್ಟು ಮುಸಲ್ಮಾನ ಸಂಖ್ಯೆಯಿತ್ತು. ಬಾಂಗ್ಲಾದಲ್ಲಿ ಸುಮಾರು ೧೩ಕೋಟಿಯಷ್ಟಿದ್ದರೆ, ಮುಂದಿನ ಸ್ಥಾನ ಆಫ್ರಿಕನ್ ದೇಶಗಳಾದ ನೈಜೀರಿಯಾ, ಈಜಿಪ್ಟುಗಳದ್ದು.
ಕೆಲವು ಬಲಪಂಥೀಯ ಧೋರಣೆಯುಳ್ಳವರಲ್ಲೂ ಮುಸ್ಲಿಮರ ಸಂಖ್ಯೆ ಹೆಚ್ಚಿದರೆ ನಮಗೇನು ತೊಂದರೆಯಾಗಲಾರದು. ಅಭಿವೃದ್ಧಿ, ಶಿಕ್ಷಣಗಳಿಂದಾಗಿ ಅವರಿಂದಾಗುವ ಅಪಾಯವನ್ನು ನಿವಾರಿಸಿಕೊಳ್ಳಬಹುದು ಎನ್ನುವ ಸೆಕ್ಯುಲರ್ ಬುದ್ಧಿಯಿದೆ. ಇದು ನಿಜವೇ ಆಗಿದ್ದ ಪಕ್ಷದಲ್ಲಿ ಯಾವುದೇ ಇಂಜಿನಿಯರ್, ಡಾಕ್ಟರುಗಳು ಭಯೋತ್ಪಾದಕರಾಗಬಾರದಿತ್ತು. ಆದರೆ ನಿಜಸ್ಥಿತಿಯೇ ಬೇರೆ. ಇನ್ನು ಕೆಲವರಲ್ಲಿ ಹದಿನಾಲ್ಕರಷ್ಟಿರುವ ಅವರೇನು ಮಾಡಿಯಾರು ಎನ್ನುವ ಉಡಾಫೆಯನ್ನೂ ಕಾಣಬಹುದು. ಆದರೆ ಎರಡು ವಾರಗಳ ಹಿಂದೆ ನಡೆದ ಮಾಲ್ಡಾ ಘಟನೆ ಇಂತಹ ವಾದವೆಲ್ಲವನ್ನೂ ತಳ್ಳಿ ಹಾಕುತ್ತದೆ. ಪ್ರತಿಭಟನೆಯೊಂದರಲ್ಲಿ ಸೇರಿದ ಎರಡೂವರೆ ಲಕ್ಷಕ್ಕೂ ಹೆಚ್ಚಿನ ಮುಸಲರು ಹಿಂದೂಗಳ ಮನೆಗಳು, ಪೊಲೀಸ್ ಸ್ಟೇಷನ್, ವಾಹನಗಳು, ದೇವಾಲಯಗಳನ್ನು ಸುಟ್ಟು ಹಾಕಿ ಒಂದು ವಾರಕ್ಕೂ ಹೆಚ್ಚು ಕಾಲ ಹಿಂದೂಗಳನ್ನು ಭೀತಿಯ ಬೇಲಿಯೊಳಗೆ ಬಂಧಿಸಿದರು. ಪೊಲೀಸ್ ಪಡೆಗಳನ್ನೇ ಬೆದರಿಸಿ, ಸೆಕ್ಯುಲರ್ ರಾಜಕಾರಣಿಗಳ ಸಹಾಯ ಪಡೆದು ಮಾರಣಹೋಮ ನಡೆಸಿದರು. ಶೇ ಹದಿನಾಲ್ಕರಷ್ಟಿರುವಾಗಲೇ ತಮಗೆ ಬೇಕಾದ್ದನ್ನು ಪಡೆದುಕೊಂಡು ದೇಶದ ರಾಜಕಾರಣವನ್ನು, ಸಮಾಜದ ಮನಸ್ಥಿತಿಯನ್ನು ತಮಗೆ ಅನುಕೂಲಕರವಾಗುವಂತೆ ಪರಿವರ್ತಿಸಬಲ್ಲವರಾದರೆ ಈ ಸಂಖ್ಯೆ ಹೆಚ್ಚಾದಂತೆ ಹಿಂದೂಗಳ ಪರಿಸ್ಥಿತಿ ಏನಾಗಬಹುದು?
೨೦೦೧ರಿಂದ ೨೦೧೧ರ ನಡುವೆ ಭಾರತದಲ್ಲಿ ಆದ ಜನಸಂಖ್ಯಾ ಏರಿಕೆ ೧೨.೮%. ಹಿಂದೂಗಳ ಸಂಖ್ಯೆ ೧೬.೮%ನಷ್ಟು ಏರಿದ್ದರೆ, ಮುಸಲರ ಏರಿಕೆಯ ಪ್ರಮಾಣ ೨೪.೬%! ಇದೇ ರೀತಿಯ ಏರುಗತಿ ಮುಂದುವರಿದಲ್ಲಿ ೨೦೬೧ಕ್ಕಾಗುವಾಗ ಹಿಂದೂಗಳೇ ಅಲ್ಪಸಂಖ್ಯಾತರಾಗುವ ಭೀತಿ ಎದುರಾಗಿದೆ. ಕಳೆದ ಮೂವತ್ತು ವರ್ಷಗಳಲ್ಲಂತೂ ಹಿಂದೂಗಳ ಸಂಖ್ಯೆ ವಿಪರೀತ ಕುಸಿಯುತ್ತಿದ್ದರೆ, ಏಳು ರಾಜ್ಯಗಳು ಹಾಗೂ ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ಹಿಂದೂಗಳೇ ಅಲ್ಪಸಂಖ್ಯಾತರಾಗಿರುವುದು ವಿಪರ್ಯಾಸ. ಜಮ್ಮು & ಕಾಶ್ಮೀರ, ಪಂಜಾಬ್, ನಾಗಾಲ್ಯಾಂಡ್, ಮಿಜೋರಾಂ, ಮೇಘಾಲಯ, ಮಣಿಪುರ, ಅರುಣಾಚಲ ಪ್ರದೇಶ, ಲಕ್ಷದ್ವೀಪಗಳಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗಿದ್ದು ಕೇರಳ, ಅಸ್ಸಾಂ, ಪಶ್ಚಿಮ ಬಂಗಾಳ, ಉತ್ತರಪ್ರದೇಶ, ಬಿಹಾರ ಆ ಹಾದಿಯಲ್ಲಿರುವ ರಾಜ್ಯಗಳು!
ಅಕ್ರಮ ಗಡಿ ನುಸುಳುವಿಕೆ ಹಾಗೂ ಏಕರೂಪದ ಕಾನೂನು ಇಲ್ಲದಿರುವ ಕಾರಣ ಅಸ್ಸಾಂನ ಡುಬ್ರಿ, ಗೋಲ್ಪಾರಾ, ಬಾರ್ ಪೇಟ್, ನಾಗೋನ, ಹೈಲಂಕಾಡಿ, ಕರಿಂಗಂಜ್, ಮಾರಿಂಗಾನ, ದರಾಂಗ್, ಬೊಂಗೈಗಾಂವ್ ಮೊದಲಾದ ಜಿಲ್ಲೆಗಳಲ್ಲಿ ಮುಸ್ಲಿಮರ ಸಂಖ್ಯೆ ೫೦%ಗಿಂತಲೂ ಅಧಿಕವಾಗಿದೆ. ಅಲ್ಲದೆ ಏರಿಕೆಯ ಪ್ರಮಾಣವೂ ರಾಷ್ಟ್ರೀಯ ಸರಾಸರಿಗಿಂತ ಬಹಳ ಹೆಚ್ಚು. ಇದೇ ರೀತಿ ಉತ್ತರಪ್ರದೇಶದಲ್ಲಿ ಅತೀ ಹೆಚ್ಚು ಕೋಮುಗಲಭೆಗಳಾಗುವ ಮುಜಾಫರ್ ನಗರ್, ಮೊರಾದಾಬಾದ್, ರಾಂಪುರ, ಸಹರಾನ್ಪುರ ಸೇರಿದಂತೆ ಹತ್ತಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮುಸ್ಲಿಮರ ಸಂಖ್ಯೆ ೩೫%ಕ್ಕಿಂತ ಅಧಿಕವಾಗಿದೆ. ಪಶ್ಚಿಮ ಬಂಗಾಳದ ಮುರ್ಷಿದಾಬಾದ್, ಮೊನ್ನೆ ಗಲಭೆಯ ಕಿಚ್ಚು ಹಚ್ಚಿದ ಮಾಲ್ಡಾ, ಉತ್ತರ ದಿನಾಜ್ಪುರಗಳಲ್ಲಿ ಮುಸಲರು ೫೦%ಕ್ಕಿಂತ ಜಾಸ್ತಿಯಿದ್ದರೆ, ಹತ್ತು ಜಿಲ್ಲೆಗಳಲ್ಲಿ ಅವರ ಸಂಖ್ಯೆ ೨೫%ಗಿಂತಲೂ ಹೆಚ್ಚು! ಬಿಹಾರದ ಕಿಶನ್ ಗಂಜ್ ಹತ್ತಿರ ಹತ್ತಿರ ೭೦% ಮುಸಲರನ್ನು ಹೊಂದಿರುವ ಮಿನಿ ಪಾಕಿಸ್ತಾನ! ಕಾತಿಹಾರ್, ಅರಾರಿಯ, ಪೂರ್ನಿಯಾಗಳಲ್ಲಿ ೪೦% ಕ್ಕಿಂತಲೂ ಅಧಿಕ ಮುಸಲರಿದ್ದು, ಈ ಸಂಖ್ಯೆ ವಿಪರೀತ ಏರುತ್ತಿದೆ.
ಕೇರಳದ ಮಲಪ್ಪುರಂ ಮಿನಿ ಪಾಕಿಸ್ತಾನವಾದರೆ, ಎರ್ನಾಕುಲಂ, ಇಡುಕ್ಕಿ, ಕೊಟ್ಟಾಯಂ, ಪಟ್ಟಣಂತಿಟ್ಟಗಳಲ್ಲಿ ಕ್ರೈಸ್ತರದ್ದೇ ಆಟಾಟೋಪ. ಕೇರಳದ ಹತ್ತು ಜಿಲ್ಲೆಗಳಲ್ಲಿ ಹಿಂದೂಗಳ ಜನಸಂಖ್ಯೆ ೬೦% ಕ್ಕಿಂತ ಕಡಿಮೆಯಿದೆ. ಅದರಲ್ಲೂ ಮಲಪ್ಪುರಂನಲ್ಲಿ ಹಿಂದೂಗಳ ಸಂಖ್ಯೆ ಕೇವಲ ೨೭.೬%! ಅಲ್ಲಿ ಮುಸಲರು ೭೦.೨೪% ಕ್ಕೆ ಬೆಳೆದಿದ್ದಾರೆ. ಕೇರಳದ ೨೪ ಲಕ್ಷ ಮುಸ್ಲಿಮರು ಉದ್ಯೋಗ ನಿಮಿತ್ತ ಭಾರತದ ಹೊರಗಿದ್ದಾರೆ. ಅದಕ್ಕಿಂತಲೂ ಹೆಚ್ಚು ಪ್ರಮಾಣದ ಮುಸ್ಲಿಂ ಜನಸಂಖ್ಯೆ ಮಲಪ್ಪುರಂ ಒಂದರಲ್ಲೇ ಇದೆ! ಮಲಪ್ಪುರಂ ಜಿಲ್ಲೆಗೆ ಪ್ರತಿವರ್ಷ ೮೫ ಸಾವಿರ ಕೋಟಿ ರೂಪಾಯಿ ಹಣ ಗಲ್ಫ್ ದೇಶಗಳಿಂದ ಹರಿದು ಬರುತ್ತದೆ. ಕೇರಳದ ಉಳಿದ ನಾಲ್ಕು ಜಿಲ್ಲೆಗಳಾದ ಕೊಲ್ಲಂ, ತಿರುವನಂತಪುರಂ, ಪಾಲಕ್ಕಾಡ್, ಅಲಪ್ಪುಳಗಳಲ್ಲಿ ಕೂಡಾ ಹಿಂದೂಗಳ ಸಂಖ್ಯೆ ೭೦% ಕ್ಕಿಂತ ಕಡಿಮೆ ಇದೆ. ಒಂದೇ ಮಗು ಸಾಕೆನ್ನುವ ಹಿಂದೂಗಳ ಮನಸ್ಥಿತಿಯೂ ಹಿಂದೂಗಳ ಸಂಖ್ಯೆ ಕುಸಿಯಲು ಕಾರಣ. ಕೇರಳದಲ್ಲಿ ೪೦% ಹಿಂದೂ ದಂಪತಿಗಳಿಗೆ ಒಂದೇ ಮಗು ಇದೆ. ೨೦೦೧ರಲ್ಲಿ ಈ ಪ್ರಮಾಣ ಕೇವಲ ೧೦% ಇತ್ತು!
ಇತ್ತ ಕರ್ನಾಟಕವೂ ನಿಧಾನವಾಗಿ ಮುಸ್ಲಿಂ ಬಾಹುಳ್ಯದ ರಾಜ್ಯವಾಗುವತ್ತ ದಾಪುಗಾಲಿಡುತ್ತಿದೆ. ಕರ್ನಾಟಕದಲ್ಲಿ ಹಿಂದೂಗಳು ೮೪%, ಮುಸ್ಲಿಮರು ೧೨.೯೨%, ಕ್ರೈಸ್ತರು ೧.೯೨%. ತೋರಿಕೆಗೆ ಹಿಂದೂಗಳ ಸಂಖ್ಯೆ ಜಾಸ್ತಿಯಿದ್ದ ಹಾಗೆ ಕಂಡರೂ ಬೆಂಗಳೂರಿಗೆ ಹೊರರಾಜ್ಯಗಳಿಂದ ಬಂದಿರುವ ಲಕ್ಷಾಂತರ ಹಿಂದೂಗಳ ಕೊಡುಗೆ ಈ ಸಂಖ್ಯೆಗಿದೆ ಎನ್ನುವುದನ್ನು ನಾವು ಮರೆಯಬಾರದು. ದಕ್ಷಿಣ ಕನ್ನಡದಲ್ಲಿ ಹಿಂದೂಗಳ ಸಂಖ್ಯೆ ೬೭.೧೮%, ಮುಸ್ಲಿಮರ ಸಂಖ್ಯೆ ೨೪.೦೨%! ಧಾರವಾಡ, ಬೀದರ್, ಗುಲ್ಬರ್ಗಗಳಲ್ಲಿ ಹಿಂದೂ ಹಾಗೂ ಮುಸಲರ ಸಂಖ್ಯೆ ೩:೧ ಪ್ರಮಾಣದಲ್ಲಿದೆ! ಹಾವೇರಿ, ಕೊಡಗು, ಬಿಜಾಪುರ, ರಾಯಚೂರುಗಳು ನಂತರದ ಸ್ಥಾನಗಳಲ್ಲಿರುವ ಜಿಲ್ಲೆಗಳು. ಕರ್ನಾಟಕದಲ್ಲಿ ಆತಂಕದಲ್ಲಿರುವ ಇತರ ಜಿಲ್ಲೆಗಳಾದ ದಾವಣೆಗೆರೆ, ಗದಗ, ಶಿವಮೊಗ್ಗ, ಯಾದಗಿರಿ, ಬಳ್ಳಾರಿ, ಉತ್ತರಕನ್ನಡ, ಕೋಲಾರ, ಬೆಂಗಳೂರುಗಳಲ್ಲಿ ಮುಸ್ಲಿಮರ ಸಂಖ್ಯೆ ೧೪% ಕ್ಕಿಂತಲೂ ಹೆಚ್ಚು. ಚಿಕ್ಕಬಳ್ಳಾಪುರ, ಬಾಗಲಕೋಟೆ, ಕೊಪ್ಪಳ, ಮೈಸೂರು, ಬೆಳಗಾವಿ, ರಾಮನಗರಗಳಲ್ಲಿ ಈ ಸಂಖ್ಯೆ ೧೨% ದಷ್ಟಿದೆ. ದಕ್ಷಿಣ ಕನ್ನಡದಲ್ಲಿ ಕ್ರೈಸ್ತರ ಸಂಖ್ಯೆ ೮.೨%. ಬೆಂಗಳೂರು, ಉಡುಪಿಗಳಲ್ಲಿ ೬%, ಕೊಡಗು, ಬೀದರ್, ಉತ್ತರಕನ್ನಡಗಳು ನಂತರದ ಸ್ಥಾನದಲ್ಲಿರುವ ಜಿಲ್ಲೆಗಳು. ತಾಲೂಕುಗಳಲ್ಲಿ ಮೈಸೂರು ೧೬.೨೫%, ಮಡಿಕೇರಿ ೨೦.೪೯%, ಕೋಲಾರ ೨೦.೧೩%, ಮುಳಬಾಗಿಲು ೧೬.೨೬%, ಶಿಡ್ಲಘಟ್ಟ & ಚಿಂತಾಮಣಿ ೧೪% ರಷ್ಟು ಮುಸ್ಲಿಮರಿದ್ದು ಅವರ ಸಂಖ್ಯೆ ವೇಗವಾಗಿ ವರ್ಧಿಸುತ್ತಿದೆ. ದಕ್ಷಿಣಕನ್ನಡದ ಬಂಟ್ವಾಳದಲ್ಲಿ ೨೦೧೧ರಲ್ಲಿ ಮುಸ್ಲಿಂ ಜನಸಂಖ್ಯೆ ೩೨.೪೭%! ದಕ್ಷಿಣ ಕನ್ನಡದಲ್ಲಿ ಉಂಟಾಗುವ ಗಲಭೆಗಳ ಮೂಲ ಹೆಚ್ಚಿನ ಬಾರಿ ಬಂಟ್ವಾಳದಲ್ಲೇ ಇರುತ್ತದೆ. ಇಲ್ಲಿ ಆಯ್ಕೆಯಾಗುವ ಜನಪ್ರತಿನಿಧಿಯದ್ದು ತುಷ್ಟೀಕರಣದಲ್ಲಿ ಎತ್ತಿದ ಕೈ. ಇಲ್ಲಿ ಬಾಂಬ್ ತಯಾರಿಕಾ ಕೇಂದ್ರಗಳಿರುವ ಬಗ್ಗೆ ಗುಮಾನಿಯಿದ್ದು ಕೆಲವು ವರ್ಷಗಳ ಹಿಂದೆ ತಯಾರಿಕಾ ಕೇಂದ್ರವೊಂದರಲ್ಲಿ ಸ್ಫೋಟವೊಂದು ನಡೆದಾಗ "ಮೇಲಿನ ವ್ಯಕ್ತಿ"ಗಳಿಂದ ಆಜ್ಞೆ ಬಂದು ಬಂಧಿಸಿದ ಕೆಲವೇ ಘಂಟೆಗಳಲ್ಲಿ ಆರೋಪಿಯನ್ನು ಬಿಡುಗಡೆ ಮಾಡಲಾಗಿತ್ತು. ಇದಲ್ಲದೆ ಮಂಗಳೂರು, ಪುತ್ತೂರು, ಬೆಳ್ತಂಗಡಿಗಳಲ್ಲೂ ಮುಸ್ಲಿಮರ ಸಂಖ್ಯೆ ೨೦% ಕ್ಕಿಂತ ಮೇಲಿದೆ. ಭಟ್ಕಳದಲ್ಲಿ ಮುಸ್ಲಿಮರ ಸಂಖ್ಯೆ ೩೩.೧೯%! ಮೇಲಾಗಿ ಇದು ಭಯೋತ್ಪಾದಕರ ತವರುಮನೆ! ಗುಲ್ಬರ್ಗ, ಬೀದರ್, ಸವಣೂರು, ಶಿಗ್ಗಾಂವ್, ಹೊಮ್ನಾಬಾದ್ ಗಳಲ್ಲಿ ಮುಸ್ಲಿಮರ ಸಂಖ್ಯೆ ೨೫%ಕ್ಕಿಂತಲೂ ಹೆಚ್ಚು. ಕರ್ನಾಟಕದ ೪೭ ತಾಲೂಕುಗಳು ಮುಸ್ಲಿಂ ಸಂಖ್ಯೆ ಹೆಚ್ಚಿರುವ ಮಾತ್ರವಲ್ಲದೆ ವೇಗವಾಗಿ ವರ್ಧಿಸುತ್ತಿರುವ "ಪೀಡಿತ" ಪ್ರದೇಶಗಳಾಗಿವೆ.
ಅರುಣಾಚಲ ಪ್ರದೇಶದಲ್ಲಿ ೨೦೦೧ರಲ್ಲಿ ೧೮.೭% ಇದ್ದ ಕ್ರೈಸ್ತರ ಸಂಖ್ಯೆ ೨೦೧೧ರಲ್ಲಿ ೩೦.೩%ದಷ್ಟಾಗಿದೆ. ಮೇಘಾಲಯ, ಮಣಿಪುರ, ತ್ರಿಪುರ, ಸಿಕ್ಕಿಂ, ತಮಿಳುನಾಡು, ಒರಿಸ್ಸಾ ಹಾಗೂ ಜಾರ್ಖಂಡ್'ಗಳಲ್ಲಿ ಕ್ರೈಸ್ತರ ಏರಿಕೆಯ ಪ್ರಮಾಣ ರಾಷ್ಟ್ರೀಯ ಜನಸಂಖ್ಯಾ ಏರಿಕೆಗಿಂತ ಬಹಳ ಅಧಿಕವಾಗಿದ್ದು, ಮೇಘಾಲಯದಲ್ಲಿ ೭೫% ಕ್ರೈಸ್ತರೇ ತುಂಬಿದ್ದಾರೆ. ಶೇ. ೬ರಷ್ಟು ಹಿಂದೂಗಳು ಕ್ರೈಸ್ತರಾಗಿ ಮತಾಂತರವಾಗಿದ್ದರೂ ಮೀಸಲಾತಿ ಹಾಗೂ ಸರ್ಕಾರದಿಂದ ಸಿಗುವ ಸವಲತ್ತುಗಳಿಗಾಗಿ ಅವರು ಜನಗಣತಿಯ ಸಮಯದಲ್ಲಿ ಹಿಂದೂಗಳೆಂದೇ ನೋಂದಾಯಿಸಿಕೊಂಡಿರುತ್ತಾರೆ. ಹೀಗಾಗಿ ದೇಶದಲ್ಲಿ ೩% ಇರುವ ಕ್ರೈಸ್ತ್ರರ ಸಂಖ್ಯೆ ೯% ದವರೆಗೂ ಏರುತ್ತದೆ. ಆಗ ಹಿಂದೂಗಳ ಸಂಖ್ಯೆ ೭೬% ಕ್ಕಿಳಿಯುತ್ತದೆ!
ಜಾಗತಿಕವಾಗಿ ಮುಸಲ್ಮಾನ ಮಹಿಳೆಯರು ಹೆರುವ ಮಕ್ಕಳ ಸಂಖ್ಯೆ ಹೆಚ್ಚು ಎನ್ನುವುದು ಎಲ್ಲರಿಗೂ ತಿಳಿದ ವಿಚಾರವೆ. ಈ ಸರಾಸರಿ ಮುಸ್ಲಿಂ ಮಹಿಳೆಯಲ್ಲಿ ೩.೧, ಕ್ರೈಸ್ತರದ್ದು ೨.೭, ಹಿಂದೂಗಳದ್ದು ೨.೧! ಆರು ವರ್ಷದೊಳಗಿನ ಮಕ್ಕಳ ಪ್ರಮಾಣದಲ್ಲೂ ಮುಸಲರೇ ಮುಂದು. ಅವರಲ್ಲಿ ಈ ಪ್ರಮಾಣ ೧೮.೭%, ಹಿಂದೂಗಳದ್ದು ೧೫.೬%, ಕ್ರೈಸ್ತರದ್ದು ೧೩.೬%!
೨೦೧೪ರ ಲೋಕಸಭಾ ಚುನಾವಣೆಯಲ್ಲಿ ಬಸ್ತಿ, ಮೋಹನ್ ಲಾಲ್ ಗಂಜ್, ರಾಬರ್ಟ್ ಗಂಜ್, ಮಿರ್ಜಾಪುರ, ಅಲಿಘಡ್, ಫತೇಪುರಗಳಲ್ಲಿ ಗೆದ್ದ ಅಭ್ಯರ್ಥಿಗಳು ಪಡೆದ ಮತಗಳ ಸಂಖ್ಯೆ ೧೩% ಕ್ಕಿಂತಲೂ ಕಡಿಮೆ! ಉತ್ತರಪ್ರದೇಶದ ಗೋವಿಂದನಗರ, ಫಾರೂಖಾ ಬಾದ್, ಕಂಥ್ ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲ್ಲುವ ಅಭ್ಯರ್ಥಿಗಳು ಪಡೆವ ಮತಗಳು ೧೨%ದಷ್ಟೂ ಇರುವುದಿಲ್ಲ. ಕರ್ನಾಟಕದಲ್ಲಿ ಅತೀ ಹೆಚ್ಚು ಮುಸ್ಲಿಂ ಬಾಹುಳ್ಯವಿರುವ ಭಟ್ಕಳದಲ್ಲಿ ೨೦೧೩ರ ಪುರಸಭೆ ಚುನಾವಣೆಯಲ್ಲಿ ೨೩ ಸ್ಥಾನಗಳಲ್ಲಿ ೧೩ ಮಂದಿ ಅವಿರೋಧವಾಗಿ ಆಯ್ಕೆಯಾದರು. ಅವುಗಳಲ್ಲಿ ೯ ಮಂದಿ ಮುಸ್ಲಿಮರು! ಅಲ್ಲಿ ಹಿಂದೂಗಳ ಸಂಖ್ಯೆ ಮುಸ್ಲಿಮರ ಸಂಖ್ಯೆಗಿಂತ ಎರಡು ಪಟ್ಟು ಇದ್ದರೂ ಅತೀ ಹೆಚ್ಚಿನ ಮುಸ್ಲಿಂ ಅಭ್ಯರ್ಥಿಗಳು ಜಯಗಳಿಸಲು ಅದರಲ್ಲೂ ಹೆಚ್ಚಿನವರು ಅವಿರೋಧವಾಗಿ ಆಯ್ಕೆಯಾಗಲು ಕಾರಣವೇನು? ಹಿಂದೂಗಳ ಮತ ಯಾವಾಗಲೂ ಜಾತಿ ಆಧಾರದಲ್ಲಿ ಒಡೆಯುತ್ತಿರುವುದರ ಸ್ಪಷ್ಟ ನಿದರ್ಶನ ಹೆಚ್ಚಿನ ಕ್ಷೇತ್ರಗಳಲ್ಲಿ ನೋಡಬಹುದಾದರೂ ಹಿಂದೂಗಳ ಅರ್ಧದಷ್ಟಿದ್ದು ಇಡೀ ಭಟ್ಕಳವನ್ನು ಅಲ್ಲಾಡಿಸುವ ಮುಸ್ಲಿಮರು ತಂತ್ರಗಾರಿಕೆಯನ್ನು ಇಲ್ಲಿ ಪ್ರದರ್ಶಿಸುತ್ತಿದ್ದಾರೆನ್ನುವುದು ಸುಸ್ಪಷ್ಟ. ಇಂತಹ ಪ್ರಜಾಪ್ರಭುತ್ವ ವಿರೋಧಿ ನಡೆಯನ್ನು ಯಾರೂ ಖಂಡಿಸದೇ ಉಳಿದಿರುವುದು ಆಶ್ಚರ್ಯವೇ ಸರಿ! ಇದೇ ರೀತಿ ಮುಂದುವರಿದಲ್ಲಿ ಕೆಲವೇ ವರ್ಷಗಳಲ್ಲಿ ಕೇಂದ್ರ ಸರಕಾರದಲ್ಲಿ ಮುಸ್ಲಿಂ ಸಂಸದರ ಸಂಖ್ಯೆಯೇ ಅಧಿಕವಾಗಿ ಅಧಿಕಾರದ ಜುಟ್ಟು ಅಲ್ಪ ಸಂಖ್ಯಾತರ(?) ಕೈ ಸೇರಿ ಈ ದೇಶ ಮತ್ತೊಂದು ಪಾಕಿಸ್ತಾನವಾಗಿ ಬದಲಾದರೂ ಆಶ್ಚರ್ಯವಿಲ್ಲ. ಪ್ರತಿ ಬಾರಿ ಮತದಾನದ ಪ್ರಮಾಣ ೬೫% ದಾಟುವುದಿಲ್ಲ. ಇದಕ್ಕೆ ಕಾರಣ ಹಿಂದೂಗಳೇ. ಮುಸ್ಲಿಮ್, ಕ್ರೈಸ್ತರಲ್ಲಿ ನಿರಕ್ಷರ ಕುಕ್ಷಿಗಳೂ ಹೋಗಿ ಮತ ಚಲಾಯಿಸಿ ಬರುತ್ತಾರೆ. ಆದರೆ ಹಿಂದೂಗಳಲ್ಲಿ ಸುಶಿಕ್ಷಿತರೇ ಮತದಾನದ ದಿನ ಮನೆಯೊಳಗೆ ಕೂತು ರಜೆಯ ಮಜಾ ಅನುಭವಿಸುತ್ತಿರುತ್ತಾರೆ!
ಹಿಡಿಯಷ್ಟಿದ್ದ ಮತೀಯರಿಂದ ಹಿಂದೂ ಸಮಾಜ ಸದಾ ದೌರ್ಜನ್ಯಕ್ಕೆ ಗುರಿಯಾಗುತ್ತಲೇ ಬಂದಿದೆ. ವೇಗವಾಗಿ ವರ್ಧಿಸುತ್ತಿರುವ ಅವರ ಸಂಖ್ಯೆಯಿಂದಾಗಿ ಕೆಲ ದಶಕಗಳಲ್ಲಿ ಹಿಂದೂಗಳು ಸರ್ವನಾಶವಾಗುವ ಭೀಕರ ಪರಿಸ್ಥಿತಿ ತಲೆದೋರೀತು. ಸೆಕ್ಯುಲರ್ ಪಕ್ಷಗಳು ಮುಲ್ಲಾ ಹಾಗೂ ಮಿಷನರಿಗಳೊಂದಿಗೆ ಒಪ್ಪಂದ ಮಾಡಿಕೊಂಡು ಹಲವು ಸವಲತ್ತುಗಳನ್ನು ನೀಡಲು ದೇಶದ ಸಂವಿಧಾನದಲ್ಲಿ ಒಪ್ಪಿಕೊಂಡಿವೆ. ಇಸ್ಲಾಂ ಹಾಗೂ ಕ್ರೈಸ್ತ ಮತಗಳವರಿಗೆ ಸಾಧ್ಯವಾದಷ್ಟು ಪಂಥಗಳನ್ನು ಸೃಷ್ಟಿಸಿಕೊಳ್ಳಲು ಹಾಗೂ ವಿಸ್ತರಿಸಲು ಸ್ವಾತಂತ್ರ್ಯವನ್ನು ನೀಡಲಾಗಿದೆ. ಇದರಿಂದ ಮುಸ್ಲಿಂ ಹಾಗೂ ಕ್ರೈಸ್ತರಿಗೆ ತಮ್ಮ ಕಬಂಧ ಬಾಹುಗಳನ್ನು ಚಾಚಲು ಅವಕಾಶ ಮಾಡಿಕೊಟ್ಟಂತಾಗಿದೆ. ವಿದೇಶಗಳಿಂದ ಬರುವ ಅಪಾರ ಪ್ರಮಾಣದ ನೆರವಿನ ಜೊತೆ ಸರಕಾರಗಳಿಂದ ಸಿಗುವ ಬಗೆಬಗೆಯ ಸವಲತ್ತುಗಳು ತಮ್ಮ ಸಂಖ್ಯಾಬಲ ವಿಸ್ತರಣೆಗೆ ಈ ಮತಗಳಿಗೆ ನೆರವಾಗಿವೆ. ರಾಜಕೀಯವಾಗಿ ನೆಲೆಗೊಳ್ಳಲು ಪಕ್ಷಗಳನ್ನು ಸ್ಥಾಪಿಸಿಕೊಂಡ ಈ ಅಲ್ಪಸಂಖ್ಯಾತ(?) ಮತಗಳು ಆಯಾ ರಾಜ್ಯಗಳಲ್ಲಿ ಪ್ರಾದೇಶಿಕ ಅಥವಾ ತಮಗೆ ಸಹಕರಿಸುವ ರಾಷ್ಟ್ರೀಯ ಪಕ್ಷದೊಡನೆ ಸೇರಿ ಕೆಲಸ ಮಾಡುತ್ತವೆ. ಇದರ ಹಿಂದೆ ಅಧಿಕಾರ ಪಡೆಯುವುದು, ತನ್ಮೂಲಕ ತಮ್ಮ ಸವಲತ್ತುಗಳನ್ನು ಹೆಚ್ಚಿಸಿಕೊಳ್ಳುವುದು, ತಮ್ಮ ಆಟಾಟೋಪಕ್ಕೆ ರಾಜಕೀಯ ರಕ್ಷಣೆಯನ್ನು ಪಡೆಯುವ ಸ್ಪಷ್ಟ ಉದ್ದೇಶವಿರುತ್ತದೆ. ಬಂಗಾಳ, ಅಸ್ಸಾಂಗಳಲ್ಲಿ ಅಕ್ರಮ ನುಸುಳುವಿಕೆಯಿಂದಾಗಿ ಕೆಲವು ಜಿಲ್ಲೆಗಳಲ್ಲಂತೂ ಮುಸ್ಲಿಮರೇ ಬಹು ಸಂಖ್ಯಾತರು. ರಾಜಕೀಯ ಪಕ್ಷಗಳು ತಮ್ಮ ಮತಬ್ಯಾಂಕ್ ಭದ್ರತೆಗೆ ಇವರಿಗೆ ಬೇಕಾದ ಎಲ್ಲಾ ಸವಲತ್ತುಗಳನ್ನು ಕೊಟ್ಟಾಗಿದೆ. ಕೆಲವು ಕ್ಷೇತ್ರಗಳಲ್ಲಂತೂ ಅಕ್ರಮವಾಗಿ ಒಳ ಬಂದವರೇ ಗೆಲ್ಲತೊಡಗಿದ್ದಾರೆ. ಈಶಾನ್ಯ ಭಾಗದ ಅರುಣಾಚಲ ಪ್ರದೇಶ, ಮೇಘಾಲಯ, ಮಣಿಪುರ, ತ್ರಿಪುರ, ಸಿಕ್ಕಿಂ, ನಾಗಾಲ್ಯಾಂಡುಗಳಲ್ಲಿ ನಡೆದ ಅವ್ಯಾಹತ ಮತಾಂತರದ ಕಾರಣ ಹಿಂದೂಗಳನ್ನು ದುರ್ಭೀನು ಹಿಡಿದು ಹುಡುಕಬೇಕಾದ ಅನಿವಾರ್ಯತೆ ಇದೆ. ಅಲ್ಲಿ ಮುಖ್ಯಮಂತ್ರಿಗಳಾಗಬೇಕಾದರೆ ಆತ/ಆಕೆ ಕ್ರೈಸ್ತಳೇ ಆಗಿರಬೇಕೆಂಬ ಅಲಿಖಿತ ನಿಯಮವೇ ರೂಪುಗೊಂಡಿರುವುದು ವಿಪರ್ಯಾಸ.
ಪೂರ್ವ ಹಾಗೂ ಈಶಾನ್ಯ ರಾಜ್ಯಗಳಲ್ಲಿ ಅಕ್ರಮ ನುಸುಳುಕೋರರಿಗೆ ರಾಜಕೀಯ ಪಕ್ಷಗಳು ಬೆಂಬಲ ಸೂಚಿಸಿದರೆ ದಕ್ಷಿಣ ಭಾರತದಲ್ಲಿ ಒಡೆದಾಳುವ ರಾಜಕಾರಣವೇ ಮುಸ್ಲಿಮರ ಬಲವರ್ಧನೆಗೆ ಸಹಕಾರಿಯಾಗಿದೆ. ೧೯೪೧ರಲ್ಲಿ ಮುಸ್ಲಿಂ ಲೀಗಿನ ೨೮ನೇ ವಾರ್ಷಿಕ ಸಮ್ಮೇಳನದಲ್ಲಿ ಜಿನ್ನಾ, ದ್ರಾವಿಡ ಸಿದ್ಧಾಂತಿ ಇ.ವಿ ರಾಮಸ್ವಾಮಿ ನಾಯಕರೊಂದಿಗೆ ವೇದಿಕೆ ಹಂಚಿಕೊಂಡು ದ್ರಾವಿಡ ಸ್ಥಾನವನ್ನು ಪ್ರತ್ಯೇಕಿಸುವಲ್ಲಿ ಸಹಾಯಹಸ್ತ ಚಾಚಿದ್ದು ನೆನಪಿರಬಹುದು. ಅಲ್ಲಿಂದಾಚೆಗೆ ಮುಸ್ಲಿಂ ಲೀಗ್ ತಮಿಳುನಾಡಿನ ಅಧಿಕಾರರೂಢ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ರಾಜಕೀಯವಾಗಿ ಬಲಿಷ್ಟಗೊಂಡಿತು. ಇವಿಆರ್ ಮುಸ್ಲಿಂ ಲೀಗಿನ ಮೀಟಿಂಗುಗಳಲ್ಲಿ ಭಾಗಿಯಾಗುತ್ತಾ ಹಿಂದೂಗಳ ಮೇಲೆ ನಿರಂತರ ದಾಳಿ ಮಾಡಿದರು. ಹಿಂದೂಗಳ ಮತಾಂತರಕ್ಕೆ ಇದು ಪರೋಕ್ಷ ಕಾರಣವೂ ಆಯಿತು. ತಮಿಳುನಾಡಿನಲ್ಲಿ ಬಾಂಬುಸ್ಫೋಟಗಳು, ಅಕ್ರಮ ಶಸ್ತ್ರಾಸ್ತ್ರ ಸಾಗಾಟ, ಕಳ್ಳ ನೋಟಿನ ದಂಧೆಯಂತಹ ಚಟುವಟಿಕೆಗಳಿಗೆ ಕಾರಣವಾದ ಭಯೋತ್ಪಾದಕ ಸಂಘಟನೆಗಳಲ್ಲಿ ಮುಸ್ಲಿಂ ಲೀಗಿನ ಕಾರ್ಯಕರ್ತರೇ ಇದ್ದು ದ್ರಾವಿಡವಾದಿ ಪಕ್ಷಗಳು ಅವರಿಗೆ ಅಗತ್ಯ ರಕ್ಷಣೆಯನ್ನೂ ಕೊಡುತ್ತವೆ. ಕೇರಳದಲ್ಲಿ ಅದಿಕಾರಕ್ಕಾಗಿ ಮುಸ್ಲಿಂ ಲೀಗ್ ಪಕ್ಷದ ಹುಟ್ಟಿಗೆ ಕಾರಣವಾದವರು ಕಮ್ಯೂನಿಷ್ಟರು. ಈಗ ಕೇರಳದಲ್ಲಿ ಮುಸ್ಲಿಮರೇ ಬಹುಸಂಖ್ಯಾತರಾಗಿರುವ ಮಲಪ್ಪುರಂ ಜಿಲ್ಲೆಯನ್ನು ಹುಟ್ಟು ಹಾಕಿದಾತ ಕಮ್ಯೂನಿಸ್ಟ್ ಮುಖ್ಯಮಂತ್ರಿ ನಂಬೂದರಿ ಪಾಡ್. ಕೇರಳವಂತೂ ಜಿಹಾದೀ ಚಟುವಟಿಕೆಯ-ಮತಾಂತರದ ನೆಲೆ. ಅಲ್ಲಿ ಭಯೋತ್ಪಾದಕ ಪಕ್ಷವಾದ ಅಬ್ದುಲ್ ನಾಸಿರ್ ಮದನಿಯ ಪಿಡಿಪಿಯ ಕಾರ್ಯಚಟುವಟಿಕೆಗಳಿಗೆ ಅಲ್ಲಿನ ಉಳಿದ ಸೆಕ್ಯುಲರ್ ಪಕ್ಷಗಳು ಬೆಂಗಾವಲಾಗಿ ನಿಂತಿವೆ. ಕರ್ನಾಟಕದಲ್ಲಿ ಅಹಿಂದ ರಾಜಕಾರಣ ಮುಸ್ಲಿಮರಿಗೆ ತಮ್ಮ ಕಾರಸ್ಥಾನವನ್ನು ವಿಸ್ತರಿಸಿಕೊಳ್ಳಲು ನೆರವಾಗುತ್ತಿದೆ. ತಮಿಳುನಾಡು, ಕೇರಳ, ಕರ್ನಾಟಕಗಳಲ್ಲಿ ನಿರಂತರವಾಗಿ ಹಿಂದೂಗಳ ಮೆಲೆ ನಡೆಯುತ್ತಿರುವ ದಾಳಿ ಕೆಲವೇ ದಶಕಗಳಲ್ಲಿ ಹಿಂದೂಗಳ ಸರ್ವನಾಶಕ್ಕೆ ಕಾರಣವಾದರೂ ಆಶ್ಚರ್ಯವಿಲ್ಲ. ದೇಶದ ಉಳಿದ ರಾಜ್ಯಗಳ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಿಲ್ಲ. ಅಲ್ಪಸಂಖ್ಯಾತರ ಅಭ್ಯುದಯಕ್ಕಾಗಿ ಇರುವ ಸಾಚಾರ್, ರಂಗನಾಥ ಮಿಶ್ರಾ ವರದಿಗಳು ಹಿಂದೂಗಳ ಆರ್ಥಿಕ-ಸಾಮಾಜಿಕ-ಸಾಂಸ್ಕೃತಿಕ-ಶೈಕ್ಷಣಿಕ ಸ್ವಾತಂತ್ರ್ಯವನ್ನು ಕಿತ್ತು ತಿನ್ನುತ್ತಿರುವ ರಣಪಿಶಾಚಿಗಳು. ದಿಲ್ಲಿಯ ಸ್ಟೀಫನ್ಸ್ ಕಾಲೇಜಿನ ಪ್ರಾಂಶುಪಾಲ ಅನಿಲ್ ವಿಲ್ಸನ್ ಹಾಗೂ ತೆಹೀರ್ ಮಹಮೂದ್ ಅವರಂತಹ ವ್ಯಕ್ತಿಗಳನ್ನೊಳಗೊಂಡಿದ್ದ ರಂಗನಾಥ್ ಮಿಶ್ರಾ ಆಯೋಗ ದಲಿತ ಕ್ರೈಸ್ತರಿಗೂ ಮೀಸಲಾತಿ ನೀಡುವಂತೆ ಆಗ್ರಹಿಸಿತು. ತಾಯಿ ಸೋನಿಯಾ ಅಭಯದಿಂದ ಸ್ಯಾಮುವೆಲ್ ರಾಜಶೇಖರ ರೆಡ್ಡಿ ಅವಿಭಜಿತ ಆಂಧ್ರದಲ್ಲಿ ಮಾಡಿದ ಹಾನಿಯೇನು ಕಡಿಮೆಯೇ? ಬೆಳಗೆದ್ದೊಡನೆ ಜನಶ್ರೀಯಂತಹ ಚಾನಲ್ಲುಗಳಲ್ಲಿ "ಈ ಸಂಖ್ಯೆಗೆ ಕರೆ ಮಾಡಿ. ನಿಮ್ಮ ಪರವಾಗಿ ಯೇಸುವಿನಲ್ಲಿ ಪ್ರಾರ್ಥಿಸಿ ನಿಮ್ಮ ಸಮಸ್ಯೆಯನ್ನು ನಿವಾರಿಸುತ್ತೇವೆಂಬ" ಮತಾಂತರದ ಗಿಮಿಕ್ಕುಗಳೂ ಪ್ರಾರಂಭವಾಗಿವೆ. ೨೦೧೪ರ ಕೊನೆಯ ಭಾಗದಲ್ಲಿ ಬೆಂಗಳೂರು, ಮುಂಬೈ, ಹೈದರಾಬಾದ್ ನಗರಗಳಲ್ಲಿ "ಬದುಕು ಬದಲಾಯಿಸುವ ಪುಸ್ತಕ ಓದಲು ಈ ಸಂಖ್ಯೆಗೆ ಕರೆ ಮಾಡಿ" ಎಂದು ಲಕ್ಷಾಂತರ ಮಂದಿಯನ್ನು ಮತಾಂತರ ಮಾಡಿದ ಕ್ರೈಸ್ತರ ಆಟಾಟೋಪ ಎಂದು ನಿಂತೀತು?
ಹಿಂದೂಗಳನ್ನು ಮತಾಂತರಗೊಳಿಸಲು ಮುಸ್ಲಿಮರು ಜಿಹಾದನ್ನೇ ಪ್ರಮುಖ ಅಸ್ತ್ರವಾಗಿ ಉಪಯೋಗಿಸುತ್ತಿದ್ದಾರೆ. ನೇರ ದೈಹಿಕ ಆಕ್ರಮಣ, ಲವ್ ಜಿಹಾದ್, ಸೆಕ್ಸ್ ಜಿಹಾದ್, ರೇಪ್ ಜಿಹಾದ್, ಲ್ಯಾಂಡ್ ಜಿಹಾದ್, ವೈಣಿಕ ಜಿಹಾದ್ ಹೀಗೆ ಹಲವು ರೂಪಗಳನ್ನು ತಾಳಿರುವ ಈ ಜಿಹಾದಿಗೆ ಸೆಕ್ಯುಲರುಗಳ ಸಮರ್ಥನೆಯೂ ವರದಾನವಾಗಿದ್ದು ಮುಸ್ಲಿಮರ ಸಂಖ್ಯಾಬಲ ವರ್ಧನೆಗೆ ನೆರವಾಗಿದೆ. ಅತ್ತ ಕ್ರೈಸ್ತರು ಹಿಂದೂಗಳ ಮತಾಂತರಕ್ಕೆ ಹಿಂದೂ ಸಂಪ್ರದಾಯ-ಪದ್ದತಿಗಳ ಅನುಕರಣೆಯನ್ನೇ ಬಂಡವಾಳವಾಗಿ ಮಾಡಿಕೊಂಡಿದ್ದಾರೆ. ಇದಲ್ಲದೆ ಮುಕ್ಕೋಟಿ ದೇವತೆಗಳೊಂದಿಗೆ ಅಲ್ಲಾ, ಯೇಸುಗಳು ನಮಗೆ ಹೆಚ್ಚಾಗಲಾರರು ಎನ್ನುವ ಹಿಂದೂಗಳ ಭೋಳೇತನವೂ ಕಾರಣ. ಇಸ್ಲಾಂ, ಕ್ರೈಸ್ತರ ಇತಿಹಾಸದ ಬಗ್ಗೆ ಪ್ರತಿಯೊಬ್ಬ ಹಿಂದೂವಿಗೆ ತಿಳಿಯದೇ ಇರುವುದು, ತಥಾಕಥಿತ ವಿಚಾರವಾದಿಗಳ ಸೆಕ್ಯುಲರ್ ಬುದ್ಧಿ ಇದಕ್ಕೆ ಕಾರಣವಾಗಿರಬಹುದು. ಆದರೆ ಹಿಂದೂಗಳನ್ನು ಜಾಗೃತಿಗೊಳಿಸುವುದು ಇಂದಿನ ಅವಶ್ಯಕತೆಯಾಗಿದೆ.
ಇತ್ತ ಹಿಂದೂಗಳ ಸಂಖ್ಯೆ ಕುಸಿಯಲು ಹಲವಾರು ಕಾರಣಗಳಿವೆ. "ನಾವಿಬ್ಬರು ನಮಗೊಬ್ಬರು" ಎನ್ನುವಂತಾದ ಕೌಟುಂಬಿಕ ಪಲ್ಲಟನ ಮುಖ್ಯ ಕಾರಣವಾದರೆ ಇರುವ ಒಂದು ಸಂತಾನವೂ ನಗರದತ್ತ ವಾಲುತ್ತಿರುವುದು ಇನ್ನೊಂದು ಕಾರಣ. ಹೀಗಾಗಿ ಹೊಲ, ಗದ್ದೆ, ತೋಟಗಳು ಪಾಳು ಬಿದ್ದು ಅಲ್ಪಸಂಖ್ಯಾತರ ವಶವಾಗುತ್ತಿವೆ. ಮುಸ್ಲಿಂ ಬಾಹುಳ್ಯದ ಪ್ರದೇಶಗಳಲ್ಲಿ ಇದು ಲ್ಯಾಂಡ್ ಜಿಹಾದ್ ಆಗಿ ಪರಿವರ್ತನೆಗೊಳ್ಳುತ್ತಿದೆ. ಹಿಂದೂಗಳ ಸಂಖ್ಯೆ ಅರ್ಧದಷ್ಟು ಕಡಿಮೆಯಾಗಿರುವ ಕೇರಳದಲ್ಲಿ ಹಿಂದೂಗಳು ಕೆಲಸ ಕೊಡುವವರಿಂದ ಕೆಲಸಕ್ಕೆ ಹೋಗುವವರಾಗಿ ಬದಲಾಗಿರುವುದು ಇನ್ನುಳಿದ ಭಾಗದ ಹಿಂದೂಗಳಿಗೆ ಪಾಠವಾಗಬೇಕಿತ್ತು. ಆದರೆ ಹಿಂದೂಗಳ ನಿರ್ಲಕ್ಷ್ಯವೇ ಅವರ ಅವಸಾನಕ್ಕೆ ಕಾರಣವಾಗುತ್ತಿದೆ. ವಿಭಕ್ತ ಕುಟುಂಬಗಳಿಂದಾಗಿ ಸಂಬಂಧಗಳೂ ಮರೆಯಾಗುತ್ತಿವೆ. ಸೈನ್ಯಕ್ಕೆ ಸೇರುವವರ ಸಂಖ್ಯೆಯೂ ಗಣನೀಯವಾಗಿ ಕುಸಿಯುತ್ತಿದೆ. ಪರಿವಾರಗಳಲ್ಲಿ ಜನರಿಗಿಂತ ವಸ್ತುಗಳೇ ಜಾಸ್ತಿಯಾಗಿ ಭೋಗವಾದವೇ ಪ್ರಧಾನವಾಗುತ್ತಿದೆ.
ಇದಕ್ಕೇನು ಪರಿಹಾರ? ಭಾರತದಲ್ಲಿನ ಈ ಸ್ಥಿತಿಗೆ ಮುಖ್ಯಕಾರಣ "ಸೆಕ್ಯುಲರಿಸಂ" ಎನ್ನುವ ಭೂತ. ಇವತ್ತು ಕ್ರೈಸ್ತ, ಇಸ್ಲಾಂ ಅನ್ನು ಹೊಗಳುವುದು, ಹಿಂದೂ ಧರ್ಮವನ್ನು ತೆಗಳುವುದೇ ಸೆಕ್ಯುಲರಿಸಂ ಎನಿಸಿಕೊಂಡಿದೆ. ಹಿಂದೂಗಳಲ್ಲಿರುವ ಇಂತಹ ಮನೋಭಾವನೆಯನ್ನು ತೊಡೆದು ಹಾಕಬೇಕು. ಸನಾತನ ಧರ್ಮದ ಸಂಸ್ಕೃತಿಯಲ್ಲಿ ಕೃತಕವಾದುದೇನೂ ಇಲ್ಲ. ಅದು ಮಾನವನ ಮನಸ್ಸಿನ ಹೊರಭಾಗದಿಂದ ನಿರ್ಮಿಸಿದ ಸಂಸ್ಕೃತಿಯಾಗಲೀ, ಕ್ರೈಸ್ತ, ಇಸ್ಲಾಂ, ಕಮ್ಯೂನಿಸಂಗಳಂತೆ ಬಲಾತ್ಕಾರವಾಗಿ ಹೇರಿದಂತಹುದಲ್ಲ. ಹಾಗಾಗಿಯೇ ಭಾರತವನ್ನು "ರಾಷ್ಟ್ರ"ವನ್ನಾಗಿಸಿದ ಹಿಂದೂ ಸಂಸ್ಕೃತಿಯೇ ಭಾರತದ ರಾಷ್ಟ್ರೀಯ ಸಂಸ್ಕೃತಿ ಎಂದು ಘೋಷಿಸಬೇಕು. ಇಲ್ಲಿನ ಮುಖ್ಯಧಾರೆಯೊಂದಿಗೆ ಹೊಂದಿಕೊಳ್ಳಲು ಇಷ್ಟಪಡದ ಪರಕೀಯ ಸಂಸ್ಕೃತಿಗಳು ಅಲ್ಪಸಂಖ್ಯಾತರ ಹಕ್ಕು ಎನ್ನುವ ಹೆಸರಿನಲ್ಲಿ ಬೆಳೆಯುವುದಕ್ಕೆ ಅವಕಾಶ ನಿರಾಕರಿಸಬೇಕು. ಇದಕ್ಕಾಗಿ ದೇಶದಲ್ಲಿ ಏಕರೂಪದ ನಾಗರಿಕ ಸಂಹಿತೆ, ಮತಾಂತರದ ನಿಷೇಧ, ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿರುವವರನ್ನು ನಿರ್ದಾಕ್ಷಿಣ್ಯವಾಗಿ ನಾಶ ಮಾಡುವುದು, ಮೀಸಲಾತಿಯನ್ನು ತೆಗೆದುಹಾಕಿ ಸರ್ವರಿಗೂ ಸಮಪಾಲು ಭಾವದ ಆಡಳಿತ, ತುಷ್ಟೀಕೃತ ರಾಜಕಾರಣದ ಕಟ್ಟುನಿಟ್ಟಿನ ನಿಷೇಧಗಳನ್ನು ಕಡ್ಡಾಯವಾಗಿ ಜಾರಿಗೆ ತರಬೇಕು. ಹಿಂದೂ ಸಮಾಜವೇ ಇಲ್ಲಿನ ರಾಷ್ಟ್ರೀಯ ಸಮಾಜ ಎಂದು ಘೋಷಿಸಬೇಕು. ಹಿಂದೂಗಳ ಮೇಲೆ ಆಗುವ ಪ್ರತ್ಯಕ್ಷ/ಪರೋಕ್ಷ ದಾಳಿಗೆ ಅದು ಯಾವುದೇ ರೂಪದಲ್ಲಿರಲಿ ಅಂತಹ ದಾಳಿಕೋರರನ್ನು ಶಿಕ್ಷಿಸಬೇಕು. ಸನಾತನ ಧರ್ಮ ನಾಸ್ತಿಕತೆ, ಆಜ್ಞೇಯತಾವಾದ, ಭೌತವಾದ ಸೇರಿದಂತೆ ಎಲ್ಲಾ ಬಗೆಯ ಆಶೋತ್ತರಗಳಿಗೆ ಅವಕಾಶವೀವ ಮತವಾಗಿದೆ. ಇಲ್ಲಿ ಅವಕಾಶವಿಲ್ಲದ ಸಂಗತಿಗಳೆಂದರೆ ಮತದ ಹೆಸರಿನಲ್ಲಿ ನಡೆವ ಬಲಪ್ರಯೋಗಗಳು ಮತ್ತು ವಂಚನೆಗಳು ಮಾತ್ರ. ಹಾಗಾಗಿ ಭರತಖಂಡದಲ್ಲಿ ಸ್ಥಾನವಿರುವ ಏಕೈಕ ಮತವೆಂದರೆ ಅದು ಸನಾತನ ಧರ್ಮದ ಸಹಜ ಆಧ್ಯಾತ್ಮಿಕತೆ ಎಂದು ಘೋಷಿಸಿ, ಪಾಲಿಸಬೇಕು. ನೈಜ ಇತಿಹಾಸ, ರಾಷ್ಟ್ರೀಯತೆಗೆ ಪೂರಕವಾದ ಪಠ್ಯಕ್ರಮಗಳನ್ನು, ಹಿಂದೂ ಶೈಕ್ಷಣಿಕ ಕ್ರಮವನ್ನು ಅಳವಡಿಸಬೇಕು. ಇದೆಲ್ಲವನ್ನು ಮಾಡದಿದ್ದರೆ ಯಾವ ಅಭಿವೃದ್ಧಿಯೂ ಹಿಂದೂಗಳನ್ನು, ಭಾರತವನ್ನುಳಿಸಲಾರದು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ