ಪುಟಗಳು

ಶನಿವಾರ, ಫೆಬ್ರವರಿ 20, 2021

'ಹಲಾಲ್' ಹೆಸರಲ್ಲಿ ಸಾಂಸ್ಕೃತಿಕ ಮತಾಂತರ

 'ಹಲಾಲ್' ಹೆಸರಲ್ಲಿ  ಸಾಂಸ್ಕೃತಿಕ ಮತಾಂತರ




           ಕೊರೋನಾ ಶುರುವಾದ ಹೊಸತರಲ್ಲಿ ಅದರ ಹರಡುವಿಕೆಗೆ ಕಾರಣವಾದ ತಬ್ಲೀಘಿಗಳ ನಡೆಗೆ ದೇಶ ಕುದ್ದು ಹೋಗಿತ್ತು. ತಬ್ಲೀಘಿಗಳನ್ನು ಬೆಂಬಲಿಸಿದ ವಿಶ್ವಾಸಘಾತುಕ ಹುಟ್ಟುಗುಣವಿರುವವರ ವಿರುದ್ಧವೂ ದೇಶ ಎದ್ದು ನಿಂತಿತು. ಮುಂಬೈನಲ್ಲಿ ಮುಖಕ್ಕೆ ಮಾಸ್ಕ್ ಹಾಕದೆ, ಆಹಾರ ಪದಾರ್ಥವನ್ನು ವಿತರಿಸಲು ಬೇಕಾದ ಯಾವ ನಿಯಮವನ್ನೂ ಅನುಸರಿಸದೆ, ಮನೆಗೆ ಆಹಾರವಸ್ತು ತಂದುಕೊಟ್ಟವನಿಂದ ಅದನ್ನು ಸ್ವೀಕರಿಸುವುದನ್ನು ನಿರಾಕರಿಸಿದ್ದ ವ್ಯಕ್ತಿಯನ್ನು, "ಡೆಲಿವರಿ ಹುಡುಗ ಮುಸಲ್ಮಾನನೆಂಬ ಕಾರಣಕ್ಕೆ ಆಹಾರ ನಿರಾಕರಿಸಿದರು" ಎಂಬ ನೆಪವೊಡ್ಡಿ ಬಂಧಿಸಿಲಾಯಿತು. ತನ್ನ ಆರೋಗ್ಯದ ದೃಷ್ಟಿಯಿಂದ ಸರಕಾರವೇ ವಿಧಿಸಿದ ನಿಯಮದಂತೆ ಆಹಾರವನ್ನು ಪಡೆದುಕೊಳ್ಳಬಹುದಾದ ಆ ವ್ಯಕ್ತಿಯ ಹಕ್ಕನ್ನು ಸುಳ್ಳು ಆಪಾದನೆಯೊಡ್ಡಿ ಸರಕಾರದ ಇಲಾಖೆಯೇ ಮೊಟಕುಗೊಳಿಸಿತು! ಇದನ್ನು ಕಂಡು ರೊಚ್ಚಿಗೆದ್ದ ಹಿಂದೂಗಳು ತಿರುಗಿ ಬಿದ್ದರು. ಕೇಸರಿ ಧ್ವಜ ಹಿಂದೂಗಳ ಅಂಗಡಿಯ ಮುಂದೆ ಹೆಚ್ಚತೊಡಗಿತು. ಚೆನ್ನೈನಲ್ಲಿನ ಜೈನ್ ಸಮುದಾಯಕ್ಕೆ ಸೇರಿದ ಅಂಗಡಿಯ ಮಾಲಿಕರು "ನಾವು ಶುದ್ಧವಾದ ಆಹಾರ ಪದಾರ್ಥಗಳನ್ನು ನೇರ ನಿಮ್ಮ ಮನೆಗೆ ತಲುಪಿಸುತ್ತೇವೆ. ಹಾಗೂ ನಮ್ಮಲ್ಲಿ ಮುಸಲ್ಮಾನ ಕೆಲಸಗಾರರು ಇರುವುದಿಲ್ಲ" ಎಂಬ ಜಾಹೀರಾತನ್ನೂ ಪ್ರಕಟಿಸಿದ್ದೇ ತಡ, ವಾಟ್ಸ್ ಆಪ್'ನಲ್ಲಿ ಬಂದ ಜಾಹೀರಾತನ್ನು ಆಧಾರವಾಗಿಟ್ಟುಕೊಂಡೇ ಪೊಲೀಸರು ಆ ಅಂಗಡಿ ಮಾಲಿಕರ ಮೇಲೆ ಪ್ರಕರಣ ದಾಖಲಿಸಿ ಅವರನ್ನು ಬಂಧಿಸಿಬಿಟ್ಟರು. ಬಹುತ್ವವನ್ನು ಗೌರವಿಸಬೇಕು ಎನ್ನುವ, ಸೆಕ್ಯುಲರ್ ಎಂಬ ಲೊಳಲೊಟ್ಟೆಯ ಸಿದ್ಧಾಂತ ಸದಾ ಪ್ರತಿಪಾದಿಸಲ್ಪಡುವ ರಾಷ್ಟ್ರದಲ್ಲಿ ಜೈನರಿಗೆ ತಮ್ಮ ಆಹಾರ ಸಂಸ್ಕೃತಿಯ ಪ್ರಕಾರ ಜಾಹೀರಾತು ಕೊಡಲು ಅವಕಾಶ ಸಿಗಲಿಲ್ಲ. ಆದರೆ ತದ್ವಿರುದ್ಧವಾಗಿ ಹಲಾಲ್ ಸಂಸ್ಕೃತಿಗೆ ರಾಜಾತಿಥ್ಯ ದೊರೆಯುತ್ತಲೇ ಇದೆ!


             ಏನಿದು ಹಲಾಲ್? ಇಸ್ಲಾಮಿನಲ್ಲಿ ಅನುಮತಿಸಲಾಗಿರುವಂತಹವನ್ನು ಹಲಾಲ್ ಎಂದೂ ನಿಷೇಧಕ್ಕೊಳಪಟ್ಟಿರುವಂಥವನ್ನು ಹರಾಮ್ ಎಂದೂ ಕರೆಯಲಾಗುತ್ತದೆ. ಯಾವ ಆಹಾರ ಪದಾರ್ಥವನ್ನು ತಿನ್ನಬೇಕು, ತಿನ್ನುವ ಮುನ್ನ ಅದನ್ನು ಹೇಗೆ ಕತ್ತರಿಸಬೇಕು, ಇವೆಲ್ಲವೂ ಕುರಾನ್ ಮತ್ತು ಹದೀಸ್ಗಳಲ್ಲಿ ಹೇಳಿರುವಂತೆ ಆಚರಿಲ್ಪಟ್ಟರೆ ಮಾತ್ರ ತಿನ್ನಲು ಯೋಗ್ಯವಾದಂಥವು. ಹರಾಮ್ ಆದುದನ್ನು ತಿಂದರೆ ಆತನ ಪ್ರಾರ್ಥನೆಯನ್ನು ಅವರ ಭಗವಂತ ಕೇಳಲಾರನಂತೆ! ಹಲಾಲ್, ಝಟ್ಕಾದಂತೆ ಒಂದೇ ಏಟಿಗೆ ಪ್ರಾಣಿಯನ್ನು ಕಡಿದು ಅದಕ್ಕೆ ನೋವು ಅರಿವಾಗದಂತೆ ಮಾಡುವ ವಿಧಾನವಲ್ಲ. ಹಲಾಲ್ನಲ್ಲಿ ಪ್ರಾಣಿ ನರಳುತ್ತಾ ಸಾಯುತ್ತದೆ. ಆಸ್ಟ್ರೇಲಿಯಾ, ಇಂಗ್ಲೆಂಡು ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ ಪ್ರಾಣಿಗಳನ್ನು ಕೊಲ್ಲುವಮುನ್ನ ಪ್ರಜ್ಞೆ ತಪ್ಪಿಸಬೇಕೆಂಬ ನಿಯಮವಿದೆ. ಹಲಾಲ್'ನಲ್ಲಿ ‘ಬಿಸ್ಮಿಲ್ಲಾ’ ಎನ್ನುತ್ತಾ ಪ್ರಾಣಿಯ ಕುತ್ತಿಗೆಯನ್ನು ನಿಧಾನವಾಗಿ ಕತ್ತರಿಸಬೇಕು. ಆ ಸಮಯದಲ್ಲಿ ಮೌಲ್ವಿಯೊಬ್ಬ ಕಲ್ಮಾ ಓದಬೇಕು! ಈ ರೀತಿ ಪ್ರಾಣಿಯನ್ನು ಕತ್ತರಿಸುವವ ಮುಸಲ್ಮಾನನೇ ಆಗಿರಬೇಕು.  ಹೀಗೆ ಕತ್ತರಿಸುವಾಗ ಚಾಕು ಚೂಪಾಗಿದ್ದು ಆ ಪ್ರಾಣಿಯ ಕನಿಷ್ಠಪಕ್ಷ ಎರಡು ರಕ್ತನಾಳಗಳನ್ನು, ಕಂಠದಭಾಗವನ್ನು ಕತ್ತರಿಸಬೇಕು. ಆದರೆ ಬೆನ್ನಹುರಿಯನ್ನು ಕತ್ತರಿಸುವಂತಿಲ್ಲ. ಕುತ್ತಿಗೆಯ ಭಾಗದಿಂದಲೇ ಎಲ್ಲಾ ರಕ್ತ ಹೊರಹೋಗುವಂತೆ ನೋಡಿಕೊಂಡು ಪ್ರಾಣಿ ಪೂರ್ಣ ಸತ್ತಿದೆ ಎಂದಮೇಲೆ ಮುಂದಿನ ಹಂತಕ್ಕೆ ಕೈ ಹಾಕಬೇಕು. ಹೀಗೆ ಪ್ರಾಣಿಯನ್ನು ವಿಲವಿಲ ಒದ್ದಾಡುವಂತೆ ಮಾಡಿ ಚಿತ್ರಹಿಂಸೆ ಕೊಟ್ಟು ಕೊಲ್ಲುವ ಕ್ರೌರ್ಯದ ಪರಮಾವಧಿ ಹಲಾಲ್!


               ಈ ಹಲಾಲ್ ಎನ್ನುವುದು ಅವರ ಆಚರಣೆಯಲ್ಲವೇ? ನಾವ್ಯಾಕೆ ತಲೆ ಕೆಡಿಸಿಕೊಳ್ಳಬೇಕು ಎನ್ನುವ ಆಲೋಚನೆಯಲ್ಲೇ ಅನ್ಯರು ಇರುವುದಂತೂ ಸತ್ಯ. ಆದರೆ ಹಲಾಲ್ ಹೇರಿಕೆ ಕೇವಲ ಇಸ್ಲಾಮಿನ ಒಳಗೆ ಮಾತ್ರ ಉಳಿದಿಲ್ಲ ಅದು ಇಸ್ಲಾಮೇತರರ ಒಳಗೂ ಇಳಿಯುತ್ತಿದೆ; ಇಳಿಸಲಾಗುತ್ತಿದೆ! ಹಲಾಲ್ ಕೇವಲ ಪ್ರಾಣಿಗಳನ್ನು ಕೊಯ್ಯುವ ಒಂದು ವಿಧಾನವಾಗಿ ಮಾತ್ರ ಇದ್ದಿದ್ದರೆ ಯಾರದ್ದೂ ತಕರಾರಿರಲಿಲ್ಲ. ಇಲ್ಲಿ ಅವರೊಳಗಿನ ಆಚರಣೆಯನ್ನು ಯಾರೂ ವಿರೋಧಿಸುತ್ತಿಲ್ಲ. ಆದರೆ ಈ ಆಚರಣೆ ನೆಪದಲ್ಲಿ ಮಾರುಕಟ್ಟೆಯನ್ನು ಆಕ್ರಮಿಸಿಕೊಂಡು,  ಹಿಂದುಳಿದ ವರ್ಗಗಳಿಂದ ಉದ್ಯೋಗವನ್ನು ಕಸಿದುಕೊಂಡು ತಮ್ಮವರಿಗೆ ಮಾತ್ರ ಉದ್ಯೋಗ ದಕ್ಕಿಸಿಕೊಳ್ಳುವ ಅವರ ವ್ಯಾಪಾರ ಜಿಹಾದ್ ಬಗ್ಗೆ ವಿರೋಧವಿದೆ. ಅದಕ್ಕಿಂತಲೂ ತಮ್ಮ ಆಚರಣೆಯನ್ನು ಅನ್ಯರ ಮೇಲೂ ಹೇರುವ ಈ ಪ್ರಚ್ಛನ್ನ ಜಿಹಾದ್ ಬಗ್ಗೆ ವಿರೋಧವಿದೆ. ಮೊದಲೆಲ್ಲಾ ಮುಸ್ಲಿಮರ ಅಂಗಡಿಗಳಲ್ಲಿ ಮಾತ್ರವಿದ್ದ "ಹಲಾಲ್" ಬೋರ್ಡ್ ಇತ್ತೀಚೆಗೆ ಹಿಂದೂಗಳ, ಕ್ರೈಸ್ತರ ಅಂಗಡಿ, ಹೋಟೆಲುಗಳಲ್ಲೂ ಕಾಣಿಸಿಕೊಳ್ಳತೊಡಗಿತು. ಹಲಾಲ್ ಮಾಡಬೇಕಾದವನು ಮುಸಲ್ಮಾನನೇ ಆಗಿರಬೇಕು ಎಂಬ ಅದರ ನಿಯಮದ ಪ್ರಕಾರ ಹಲಾಲ್ ಪ್ರಮಾಣಪತ್ರ ಪಡೆದ ಪ್ರತಿಯೊಂದು ಅಂಗಡಿಯೂ ಮುಸಲ್ಮಾನರನ್ನೇ ಆ ಪ್ರಕ್ರಿಯೆಗೆ ಇಟ್ಟುಕೊಳ್ಳಬೇಕು. ಇದರಿಂದ ಪರಂಪರಾಗತವಾಗಿ ಮಾಂಸ ಕತ್ತರಿಸುತ್ತಿದ್ದ ಹಿಂದೂಗಳ ಅಥವಾ ಹಿಂದೂ ಅಂಗಡಿಗಳಲ್ಲಿ ಆ ಕೆಲಸಕ್ಕಿದ್ದ ಹಿಂದೂಗಳ, ಕ್ರೈಸ್ತರ ಕೆಲಸಕ್ಕೆ ಕುತ್ತಾಯಿತು. ಅಲ್ಲದೆ ಮೇಲಿನ ಎರಡು ಪ್ರಕರಣಗಳಲ್ಲಿ ನಿರ್ದಿಷ್ಟ ಜಾತಿಯನ್ನು ಹೇಳಿದ ನೆಪವೊಡ್ಡಿ ಬಂಧಿಸಿದ ಸರಕಾರೀ ವ್ಯವಸ್ಥೆ ಹಲಾಲ್ ಪ್ರಮಾಣಪತ್ರ ಪಡೆದ ಅಂಗಡಿಯೂ ನಿರ್ದಿಷ್ಟವಾಗಿ ಮುಸ್ಲಿಮರನ್ನೇ ಕೆಲಸಕ್ಕಿಟ್ಟುಕೊಂಡಿದ್ದೇನೆ ಎಂದು ಸಾರಿ ಹೇಳುವಾಗ ಅವರನ್ನೇಕೆ ಬಂಧಿಸುವುದಿಲ್ಲ? ಸೆಕ್ಯುಲರ್ ದೇಶದಲ್ಲಿ ಕೆಲವರಿಗೆ ಮಾತ್ರ ಹಕ್ಕುಗಳು, ರಿಯಾಯಿತಿಗಳು ಹೆಚ್ಚೆಂದೇ?


              ಒಂದು ಆಸ್ಪತ್ರೆಗೆ ಹಲಾಲ್ ಪ್ರಮಾಣಪತ್ರ ಸಿಗಬೇಕಾದರೆ, ಅಲ್ಲಿನ ಕ್ಯಾಂಟೀನ್ಗೆ ಕೋಳಿಯನ್ನು ತರುವವ, ಕ್ಯಾಂಟೀನಿನಲ್ಲಿ ಆ ಕೋಳಿಯನ್ನು ಹಲಾಲ್ ಮಾಡುವವ ಇಬ್ಬರೂ ಮುಸಲ್ಮಾನರಾಗಿರಬೇಕಾಗುತ್ತದೆ. ಮಾತ್ರವಲ್ಲ ಆಸ್ಪತ್ರೆಯಲ್ಲಿ ಅನ್ಯ ಮತದ ಪ್ರಾರ್ಥನಾ ಮಂದಿರಗಳು ಇರುವಂತಿಲ್ಲ; ಅವು ಹರಾಮ್ ಆಗುತ್ತವೆ. ಅಲ್ಲಿ ಮುಸ್ಲಿಮರ ಪ್ರಾರ್ಥನೆಗೆ ಕೋಣೆಗಳನ್ನು ಮೀಸಲಿಡಬೇಕಾಗುತ್ತದೆ. ಹೀಗೆ ಅಲ್ಲಿನ ಉದ್ಯೋಗಗಳೆಲ್ಲಾ ಮುಸ್ಲಿಮರ ಪಾಲಾಗುತ್ತವೆ. ಮುಂದಿನ ದಿನಗಳಲ್ಲಿ ಇವರ ಬೇಡಿಕೆಗಳು ಮತ್ತಷ್ಟು ಹೆಚ್ಚುತ್ತವೆ. ಕೋಳಿ ಸಾಕಾಣಿಕೆಯ ಜಾಗವೂ ಹರಾಮ್ ವಸ್ತುಗಳಿಂದ ಮುಕ್ತವಾಗಿರಬೇಕು ಎನ್ನಲಾಗುತ್ತದೆ, ಅಂದರೆ ಕೋಳಿ ಫಾರಂ ಸುತ್ತಲೂ ಹಂದಿ,ನಾಯಿಗಳು ಸುಳಿದಾಡದಂತಹ ವಾತಾವರಣ ಇರಬೇಕಾಗುತ್ತದೆ. ಕೇವಲ ಕೋಳಿ ಕೊಯ್ಯುವ, ಅದನ್ನು ಸರಬರಾಜು ಮಾಡುವವ ಶರಿಯಾ ಪಾಲಿಸುವ ಮುಸ್ಲಿಂ ಆಗಿದ್ದರೆ ಸಾಲದು, ಕೋಳಿ ಸಾಕುವವನು ನಮ್ಮವನೇ ಆಗಿರಬೇಕು ಎನ್ನುವ ಬೇಡಿಕೆ ಶುರುವಾಗುತ್ತದೆ. ಇದು ಮತಾಂತರಕ್ಕೂ ಎಡೆ ಮಾಡಿಕೊಡುತ್ತದೆ. ಪ್ರತಿ ಹಂತದಲ್ಲೂ ಮುಸ್ಲಿಮರಿಗೆ ಉದ್ಯೋಗ ದೊರಕಿಸಿಕೊಡುವುದು ಮಾತ್ರವಲ್ಲದೇ ಹಿಂದುಳಿದ-ದಲಿತ ವರ್ಗದಿಂದ ಅವರ ಪಾರಂಪರಿಕ ವ್ಯವಹಾರಗಳನ್ನು ಕಸಿದುಕೊಳ್ಳುವ ಗುಪ್ತ ಉಪಾಯ ಇವರದ್ದು.


           ಪ್ರಾಣಿಗಳನ್ನು ಕತ್ತರಿಸುವ ಈ ವಿಧಾನದಿಂದ ನಮಗೇನೂ ಸಮಸ್ಯೆಯಿಲ್ಲ ಎಂದು ಸಸ್ಯಾಹಾರಿಗಳು ನೆಮ್ಮದಿಯ ನಿಟ್ಟುಸಿರೇನು ಬಿಡಬೇಕೂಂತಿಲ್ಲ. ಯಾಕೆಂದರೆ ಮೊದಲನೆಯದಾಗಿ ಇದು ಹಿಂದೂಗಳ ವ್ಯವಹಾರ, ಸಂಸ್ಕೃತಿಗೆ ಮಾರಕವಾಗುವ ಸಮಸ್ಯೆ. ಎರಡನೆಯದಾಗಿ ಹಲಾಲ್'ನ ಕಬಂಧ ಬಾಹು ಮಾಂಸಾಹಾರಕ್ಕಷ್ಟೇ ಸೀಮಿತವಾಗುಳಿದಿಲ್ಲ. ಒಣ ಹಣ್ಣು, ಎಣ್ಣೆ, ಸಿಹಿ ಪದಾರ್ಥ, ಗೋಧಿ, ಮೈದಾ ಮುಂತಾದ ಧಾನ್ಯಗಳು, ಬಿಸ್ಕೆಟ್, ಚಾಕೊಲೇಟು ಮುಂತಾದ ಆಹಾರ ಪದಾರ್ಥಗಳು, ಆಹಾರ ತಯಾರಿ, ಸಾಬೂನು, ಶ್ಯಾಂಪೂ, ಹಲ್ಲುಜ್ಜುವ ಪುಡಿ & ಪೇಸ್ಟ್, ಕಾಡಿಗೆ, ಲಿಪ್‌ಸ್ಟಿಕ್ ಇತ್ಯಾದಿ ಸೌಂದರ್ಯವರ್ಧಕ ವಸ್ತುಗಳು, ಟಿಷ್ಯೂ ಪೇಪರ್, ಗೃಹನಿರ್ಮಾಣಸಂಸ್ಥೆಗಳು, ಮಾಲ್ಗಳು, ಆಸ್ಪತ್ರೆಗಳು, ಔಷಧಿಗಳು, ರೈಲ್ವೇ-ವಿಮಾನಯಾನ ಸಂಸ್ಥೆಗಳಲ್ಲಿನ ಆಹಾರ ತಯಾರಿ, ಪ್ರವಾಸೋದ್ಯಮ, ಸರಕು ಸಾಗಣೆ ಎಲ್ಲವೂ ಹಲಾಲ್ ಪ್ರಮಾಣೀಕೃತವಾಗುತ್ತಿವೆ. ಹಲ್ದಿರಾಮ್’ನ ಶಾಕಾಹಾರಿ ಆಹಾರವೂ, ಮ್ಯಾಕ್‌ಡೊನಾಲ್ಡ್‌ನ ಬರ್ಗರ್ ಹಾಗೂ ಡಾಮಿನೋಸ್‌ನ ಪಿಝ್ಝಾಗಳೂ ಹಲಾಲ್ ಪ್ರಮಾಣೀಕೃತವಾಗಿವೆ! ಅರೆ ಇವೆಲ್ಲಾ ಹೇಗೆ ಹಲಾಲ್ ಆದವು? ಇವುಗಳನ್ನೆಲ್ಲಾ ಹಲಾಲ್ ವ್ಯಾಪ್ತಿಗೆ ತಂದವರು ಮುಂದಕ್ಕೆ ಇವುಗಳ ಉತ್ಪಾದನೆ, ಕಚ್ಚಾವಸ್ತುಗಳ ಸಂಗ್ರಹಣೆ, ಆಯಾ ಕೆಲಸಗಳ ಉಸ್ತುವಾರಿ ಎಲ್ಲವೂ ಶರಿಯಾ ಪಾಲಿಸುವ ಮುಸ್ಲಿಮನಿಂದಲೇ ಆಗಬೇಕು ಎನ್ನುತ್ತಾರೆ. ಹೀಗೆ ಮತೀಯ ಆಧಾರದ ಮೇಲೆ ಆರಂಭವಾದ ಸಮಾನಾಂತರ ಅರ್ಥವ್ಯವಸ್ಥೆ ಏಕಸ್ವಾಮ್ಯವನ್ನು ಸಾಧಿಸಿ ಮೆರೆಯುತ್ತದೆ. ದೇಶವನ್ನು ಪಾಕಿಸ್ತಾನವನ್ನಾಗಿಸುತ್ತದೆ.


               ಭಾರತದಲ್ಲಿ ಸರಕಾರೀ ಮಟ್ಟದಲ್ಲಿ ಈ ಪ್ರಮಾಣಪತ್ರ ಪಡೆಯುವ ನಿಯಮವನ್ನು ಶುರು ಮಾಡಿದವ ಮಣಿಶಂಕರ್ ಅಯ್ಯರ್. ಹೌದು ವೀರ ಸಾವರ್ಕರರನ್ನು ನಿಂದಿಸಿದ್ದ ಅದೇ ದೇಶದ್ರೋಹಿ ಮಣಿಶಂಕರ್ ಅಯ್ಯರ್. ನರೇಂದ್ರ ಮೋದಿಯವರನ್ನು ಸೋಲಿಸಲು ಪಾಕಿಸ್ತಾನದ ಸಹಾಯಹಸ್ತ ಬೇಡಿದ್ದ ಅದೇ ಮಣಿಶಂಕರ್ ಅಯ್ಯರ್. ಮುಸ್ಲಿಮರ ಜೊತೆ ಸೇರಿಕೊಂಡು ಇಂತಹುದೊಂದು ಸಮಾನಾಂತರ ಅರ್ಥವ್ಯವಸ್ಥೆಯನ್ನು ಸೃಷ್ಟಿಸಿದ ಕಾಂಗ್ರೆಸ್ ಇಡೀ ದೇಶಕ್ಕೆ ಹಲಾಲ್ ಉಣಿಸುತ್ತಿದೆ. ಇದು ಹಿಂದೂ ಹಾಗೂ ಕ್ರೈಸ್ತರ ಮೇಲಿನ ಜೆಜಿಯಾ! ಈ ಹಲಾಲ್ ಪ್ರಮಾಣಪತ್ರಕ್ಕಾಗಿ 20,500 ರೂಪಾಯಿ ಹಾಗೂ ಪ್ರತೀವರ್ಷ ನವೀಕರಣಕ್ಕಾಗಿ 15,000 ರೂಪಾಯಿ ಶುಲ್ಕವಿದೆ.  ಅದರ ಮೇಲೆ ಯಾವೆಲ್ಲ ವಸ್ತುಗಳಿಗೆ ಹಲಾಲ್ ಮುದ್ರೆ ಬೇಕೋ ಅದಕ್ಕೆ ಪ್ರತ್ಯೇಕ ಶುಲ್ಕ ತೆರಬೇಕಾಗುತ್ತದೆ. ಒಟ್ಟಾರೆ ಈ ಮೊತ್ತ ವರ್ಷಕ್ಕೆ ಐವತ್ತುಸಾವಿರದಷ್ಟಾಗುತ್ತದೆ. ಇಸ್ಲಾಮೀ ದೇಶಗಳಿಗೆ ರಫ್ತು ಮಾಡುವ ಉತ್ಪಾದನೆಗಳಿಗೆ ‘ಹಲಾಲ್ ಪ್ರಮಾಣಪತ್ರ’ ಇರಲೇಬೇಕಾಗುತ್ತದೆ! ವಿಪರ್ಯಾಸವೆಂದರೆ ತಮ್ಮ ವ್ಯಾಪಾರ ವೃದ್ಧಿಯ ದುರಾಸೆಯಿಂದ ಹಲ್ದಿರಾಮ್, ಪತಂಜಲಿ, ಶ್ರೀಶ್ರೀ, ಬಿಕಾನೇರ್ ಸಹಿತ ಭಾರತದ ಹಲವು ಸಂಸ್ಥೆಗಳು ಈ ಪ್ರಮಾಣಪತ್ರವನ್ನು ಪಡೆದು ಹಿಂದೂಗಳ ಮೇಲೆ ಜಿಹಾದೀ ಸಂಸ್ಕೃತಿಯನ್ನು ಹೇರುತ್ತಿವೆ! ಈ ದೇಶದ ಯಾವುದೇ ಫೈವ್ ಸ್ಟಾರ್ ಹೋಟಲ್ ಹಲಾಲ್ ಪ್ರಮಾಣಪತ್ರವಿಲ್ಲದೆ ಕಾರ್ಯಾಚರಿಸುವುದಿಲ್ಲ. ಹೋಟೆಲ್, ಡಾಬಾ ಮಾತ್ರವಲ್ಲದೆ ಏರ್ ಲೈನ್ಸ್, ಸೈನ್ಯದ ಆಹಾರದಲ್ಲಿಯೂ ಕೂಡಾ ಹಲಾಲ್ ನುಗ್ಗಿದೆ! ತನ್ನನ್ನು ಜಾತ್ಯತೀತ ಎಂದು ಹೇಳಿಕೊಳ್ಳುವ ಹಿಂದಿನ ಕೇಂದ್ರ ಸರಕಾರವು ಭಾರತೀಯ ರೈಲ್ವೆ, ಏರ್ ಇಂಡಿಯಾ ಹಾಗೂ ಪ್ರವಾಸೋದ್ಯಮ ಮಂಡಳಿಯಂತಹ ಸರಕಾರಿ ಸಂಸ್ಥೆಗಳಲ್ಲಿಯೂ ಹಲಾಲ್ ಅನ್ನು ಕಡ್ಡಾಯ ಮಾಡಲು ಅನುಮತಿ ನೀಡಿತ್ತು. ಹೆಚ್ಚೇಕೇ ಸಂಸತ್ತಿನ ಕ್ಯಾಂಟೀನನ್ನು ಹಲಾಲ್ ಮುಕ್ತಗೊಳಿಸಲು ಸ್ಪೀಕರ್ ಓಂ ಬಿರ್ಲಾ ಜೀ ಓಂಕಾರ ಹೇಳಬೇಕಾಯಿತು! ಕಟ್ಟಡವೂ ಹಲಾಲ್ ಪ್ರಮಾಣೀಕೃತವಾಗಬೇಕು ಎಂದು ಕೇರಳದಲ್ಲಿ ಮುಸ್ಲಿಮರು ಬೊಬ್ಬಿರಿಯಲು ಶುರು ಮಾಡಿದ್ದಾರೆ. ಸಿಮೆಂಟ್, ಮರಳು, ಮರ, ಕಬ್ಬಿಣಕ್ಕೂ ಹಲಾಲ್'ಗೂ ಏನು ಸಂಬಂಧ?ಸರಕಾರಗಳೂ ಮತಬ್ಯಾಂಕ್ ಭದ್ರತೆಗೆ ಈ ಹಲಾಲ್'ನ ದಾಸರಾಗಿವೆ. ಕಳೆದ ವರ್ಷ ರಮಝಾನ್ ಸಮಯದಲ್ಲಿ ನ್ಯೂಯಾರ್ಕ್ ಮುನ್ಸಿಪಾಲಿಟಿ 5 ಲಕ್ಷ  ಹಲಾಲ್ ಕಿಟ್ ಗಳನ್ನು ಉಚಿತವಾಗಿ ವಿತರಿಸಿತ್ತು! ಕೊರೋನಾ ವ್ಯಾಕ್ಸೀನ್ ಕೂಡಾ ಹಲಾಲ್ ಆಗಬೇಕೆಂದು ಕೂಗೆದ್ದಿತ್ತು. ಹಲಾಲ್ ಪ್ರಮಾಣಪತ್ರ ಇನ್ನು ಮನುಷ್ಯರಿಗೆ ಮಾತ್ರ ಬಾಕಿ ಅನ್ನುತ್ತೀರಾ? ಮಲೇಶಿಯಾದಲ್ಲಿ ಅದೂ ಶುರುವಾಗಿದೆ. ಇತ್ತೀಚೆಗೆ ಅಲ್ಲಿ ಕಾಮಿಡಿಯನ್ ಒಬ್ಬರೂ ತನಗೂ ಹಲಾಲ್ ಪ್ರಮಾಣಪತ್ರ ಕೊಟ್ಟ ಬಗ್ಗೆ ತಾನು ಈಗ 'ಹಲಾಲ್ ಪ್ರಮಾಣೀಕೃತ ಕಾಮಿಡಿಯನ್' ಎಂದು ವ್ಯಂಗ್ಯವಾಡಿದ್ದರು. ಹಲಾಲ್ ಬ್ಯುಸಿನೆಸ್ ಈಗ 110ಕೋಟಿ ರೂಪಾಯಿಗಳಿಗೇರಿದೆ. ಇದರಿಂದ ಎರಡು ಕೋಟಿಯಷ್ಟು ಹಿಂದೂಗಳು ಕೆಲಸ ಕಳೆದುಕೊಂಡಿದ್ದಾರೆ. ಆ ಜಾಗಕ್ಕೆ ಮುಸ್ಲಿಮರು ಬಂದಿದ್ದಾರೆ.


             ಭಾರತ ಸರ್ಕಾರದ ‘ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಪ್ರಾಧಿಕಾರ’ ಹಾಗೂ ಅನೇಕ ರಾಜ್ಯಗಳಲ್ಲಿ ‘ಆಹಾರ ಮತ್ತು ಔಷಧಿ ಪ್ರಾಧಿಕರಣ’ ಈ ವಿಭಾಗಗಳು ಇರುವಾಗ ‘ಹಲಾಲ್ ಪ್ರಮಾಣಪತ್ರ’ ನೀಡುವ ಅನೇಕ ಇಸ್ಲಾಮೀ ಸಂಸ್ಥೆಗಳ ಆವಶ್ಯಕತೆ ಏನಿದೆ?  ಜಾತ್ಯತೀತ ಭಾರತದಲ್ಲಿ ಸರಕಾರದ 'ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಪ್ರಾಧಿಕಾರ(FSSAI)'ದಿಂದ ಪ್ರಮಾಣಪತ್ರವನ್ನು ಪಡೆದ ನಂತರ ಈ ಖಾಸಗೀ ಇಸ್ಲಾಮೀ ಪ್ರಮಾಣಪತ್ರ ಪಡೆಯಲು ಕಡ್ಡಾಯವೇಕೆ? ಈ ಹದಿನೇಳು ಪ್ರತಿಶತ ಜನರ ಮತೀಯ ಆಚರಣೆಯನ್ನು ಬಹುಸಂಖ್ಯಾತರ ಮೇಲೆ ಹೇರುವುದರ ಉದ್ದೇಶವಾದರೂ ಏನು? ‘ಹಲಾಲ್’ ಪದದ ಅರ್ಥ ಇಸ್ಲಾಮ್‌ಗನುಸಾರ ಮಾನ್ಯತೆ ಪಡೆದ ಎಂದು! ಹಾಗಾಗಿ ಈ ‘ಹಲಾಲ್ ಪ್ರಾಮಾಣಪತ್ರ’ ಕೊಡುವವರು ಖಾಸಗಿ ಇಸ್ಲಾಮಿ ಸಂಸ್ಥೆಗಳು! ಹೀಗೆ ‘ಹಲಾಲ್ ಪ್ರಮಾಣೀಕೃತ’ದಿಂದ ಸಿಗುವ ಕೋಟಿಗಟ್ಟಲೆ ಹಣವು ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರಗಳಿಗೆ ಸಿಗದೇ ಅದು ಕೆಲವು ಇಸ್ಲಾಮೀ ಸಂಘಟನೆಗಳ ಪಾಲಾಗುತ್ತದೆ. ಈ ಸಂಘಟನೆಗಳು ಭಯೋತ್ಪಾದಕ ಕೃತ್ಯಗಳಲ್ಲಿ ಸಿಲುಕಿದ ಮತಾಂಧರನ್ನು ಬಿಡುಗಡೆ ಮಾಡಲು ಕಾನೂನಿನ ನೆರವು ನೀಡುತ್ತಿವೆ. ಅದೇ ರೀತಿ ಕೇಂದ್ರ ಸರಕಾರವು ಮಾಡಿದ ದೇಶ ಪರವಾದ ಕಾನೂನುಗಳಾದ ಸಿಎಎ, ವಿಧಿ370ರ ರದ್ದತಿ ಮುಂತಾದುವನ್ನು ವಿರೋಧಿಸುವವರಿಗೆ ದಂಗೆಯನ್ನು ಮಾಡಲು ಬೇಕಾದ ಸಹಾಯವನ್ನು ತನುಮನಧನದಿಂದ ಕೊಡುತ್ತವೆ.


            ಭಾರತದಲ್ಲಿ ಹಲಾಲ್ ಅನ್ನು ಪ್ರಾಮಾಣಿಕರಿಸುವ ಸಂಸ್ಥೆ ಜಮಾತ್-ಇ -ಉಲೆಮಾ ಎಂಬ ಇಸ್ಲಾಮಿಕ್ ಸಂಸ್ಥೆ. ಹಲಾಲ್ ಪ್ರಮಾಣ ಪತ್ರ ಪಡೆಯಲು ಮತ್ತು ಅದನ್ನು ನವೀಕರಿಸಲು ಕಟ್ಟಬೇಕಾದ ಶುಲ್ಕದಿಂದ ಬಂದ ಹಣವನ್ನು ಈ ಸಂಸ್ಥೆ ಭಯೋತ್ಪಾದಕ ಚಟುವಟಿಕೆಗಳಿಗೆ ಹಂಚುತ್ತದೆ. ಭಯೋತ್ಪಾದನಾ ಚಟುವಟಿಕೆಗಳಲ್ಲಿ ಭಾಗಿಯಾದವರಿಗೆ ಕಾನೂನು ರೀತ್ಯಾ ನೆರವು ನೀಡುವುದು ಇದರ ಒಂದು ಭಾಗ. ಹಲಾಲ್ ಉದ್ಯಮದಿಂದ ಬಂದ ಹಣದ ಒಂದು ಪಾಲು ಇಸ್ಲಾಂನ ಧಾರ್ಮಿಕ ಕಾರ್ಯಗಳಲ್ಲಿ ಬಳಕೆಯಾಗಬೇಕು ಎನ್ನುವುದು ಮುಸ್ಲಿಮರ ನಿಯಮ. ಆ ಹಣದಲ್ಲಿ ನಡೆಯುವ ಮದರಾಸವೊಂದು ಅಲ್ಲಿರುವ ಪುಟ್ಟ ಮಕ್ಕಳ ತಲೆಯಲ್ಲಿ ಕಾಫೀರರ ವಿರುದ್ಧ ದ್ವೇಷವನ್ನು ಕಟ್ಟಿಕೊಡುತ್ತದೆ. ನಮ್ಮ ಕಾಲಮೇಲೆ ನಾವೇ ಚಪ್ಪಡಿ ಎಳೆದುಕೊಳ್ಳುವುದು ಎಂದರೆ ಇದೇ ತಾನೇ? ಮುಸಲ್ಮಾನರು ಮಸೀದಿಗಳಿಗೆ ನೀಡುವ ಝಕಾತ್(ದೇಣಿಗೆ)ನ್ನು ಈ ರೀತಿಯಾದ ದೇಶವಿರೋಧಿ ಚಟುವಟಿಕೆ ಗಳಿಗೆ ಬಳಸುವುದು ಅನವರತವೂ ದೃಢಪಟ್ಟ ಸಂಗತಿ. 2016 ನೆ ಇಸವಿಯಲ್ಲಿ ಇದೇ ಸಂಘಟನೆಯ ಕಾನೂನು ಘಟಕದ ಅಧ್ಯಕ್ಷ ಗುಲ್ಜಾರ್ ಅಜ್ಮಿ, "ಜಿಹಾದ್ನಿಂದ ಜೈಲಿನಲ್ಲಿ ಕೊಳೆಯುತ್ತಿರುವ ನಮ್ಮ ಹುಡುಗರನ್ನು ರಕ್ಷಿಸಲು ಈ ರೀತಿಯಾದ ಹಣವನ್ನು ಬಳಸಿಕೊಳ್ಳುತ್ತೇವೆ. ಇದಕ್ಕೆ ಅಲ್ಲಾಹುವಿನ ಸಮ್ಮತಿಯಿದೆ" ಎಂದಿದ್ದ. ಹಲಾಲ್ ಪ್ರಮಾಣಪತ್ರ ನೀಡುವ ಇಂತಹ ದೇಶ ದ್ರೋಹಿ ಸಂಘಟನೆಗಳು 108 ಭಯೋತ್ಪಾದಕರನ್ನು ಜೈಲಿನಿಂದ ಬಿಡುಗಡೆಗೊಳಿಸಿದೆ. ಹಲಾಲ್, ಝಕಾತ್'ಗಳಿಂದ ಬಂದ ಎರಡು ಕೋಟಿಗೂ ಹೆಚ್ಚು ಹಣವನ್ನು ಇದಕ್ಕೆ ನಿಯೋಗಿಸಲಾಗಿದೆ. ಅಸೋಸಿಯೇಷನ್ ಆಫ್ ಮುಸ್ಲಿಮ್ ಪ್ರೊಫೆಷನಲ್ಸ್ ಎಂಬ  ಸಂಘಟನೆಯು ಮಾಡಿದ ಸರ್ವೆ(2016)ಯ ಪ್ರಕಾರ ಭಾರತದಲ್ಲಿರುವ 17.18 ಕೋಟಿ ಮುಸ್ಲಿಂ ಜನಸಂಖ್ಯೆಯಲ್ಲಿ ಕೇವಲ 10% ನಷ್ಟು ಜನರು ಝಕಾತ್ ಕಟ್ಟಿದರೂ, ಬರೋಬ್ಬರಿ 7,500 ಕೋಟಿಯಷ್ಟು ಹಣ ಸಂಗ್ರಹವಾಗುತ್ತದೆ. ಜನವರಿ 1, 2019 ರಂದು NIA ಉತ್ತರ ಪ್ರದೇಶ ಹಾಗೂ ದೆಹಲಿಯಲ್ಲಿ ಭಯೋತ್ಪಾದರನ್ನು ಹೆಡೆಮುರಿಕಟ್ಟುವುದರಲ್ಲಿ ಯಶಸ್ವಿಯಾಯಿತು, ಆದರೆ ಇದೇ ಜಮಾತ್ ಉಲೆಮಾ ಇ ಹಿಂದ್ ಸಂಘಟನೆ ಇವರಿಗೆ ಕಾನೂನು ನೆರವು ನೀಡಿ ಪ್ರಕರಣದಿಂದ ಖುಲಾಸೆ ಗೊಳಿಸಿತು. ಇಡೀ ದೇಶದಲ್ಲಿ ಕೊರೊನ ಹರಡಿಸಿದ ತಬ್ಲೀಘಿ ಜಮಾತಿಗಳ ಪರವಾಗಿ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲನ್ನು ಹತ್ತಿದ್ದೂ ಇದೇ ಸಂಸ್ಥೆ. ಪಶ್ಚಿಮ ಬಂಗಾಳದ ಉಲೆಮಾ ರಾಜ್ಯಾಧ್ಯಕ್ಷ ಸಿದ್ದಿಕುಲ್ಲಾ ಎನ್.ಆರ್.ಸಿ ಹಾಗೂ ಸಿಎಎಗೆ ಯಾವುದೇ ದಾಖಲೆಗಳನ್ನು ನೀಡಬೇಡಿ ಎಂದು ಮುಸ್ಲಿಮರಿಗೆ ಹೇಳಿದ್ದ.


              2020ರ ಕ್ರಿಸ್ಮಸ್ ಸಮಯದಲ್ಲಿ ಹಲಾಲ್ ವಿರುದ್ಧ ಕೇರಳದ ಕ್ರೈಸ್ತರು ದನಿ ಎತ್ತಿದರು. ಯೇಸುವಿನ ಜನ್ಮ ದಿನದಂದು ನಮಗೇಕೆ ಹಲಾಲ್ ಮಾಂಸ ಸರಬರಾಜು ಮಾಡುತ್ತೀರಿ ಎಂದು ಸರಕಾರವನ್ನು ಪ್ರಶ್ನಿಸಿದಾಗ ಪಿಣರಾಯಿ ಸರಕಾರ ಆ ದನಿಯ ಸದ್ದಡಗಿಸಲು ಯತ್ನಿಸಿತು. ಕ್ರೈಸ್ತರ ಸಂಘಟನೆಯಾದ ‘ಚರ್ಚ್ಸ್ ಆಕ್ಸಲರಿ ಆಫ್ ಸೋಷಿಯಲ್ ಆಕ್ಷನ್’ ‘ಹಲಾಲ್ ಮಾಂಸವನ್ನು ಸೇವಿಸದಂತೆ” ಕ್ರೈಸ್ತರಿಗೆ, ಕರೆ ನೀಡಿತ್ತು. ಹಲಾಲ್ ಮಟನ್ ವಿಷಕಾರಿ. ಪ್ರಾಣಿಯು ನರಳಿ ನರಳಿ ನಿಧಾನವಾಗಿ ಸಾಯುವಾಗ ಅದರ ಮೆದುಳು ಕೆಲಸ ಮಾಡುತ್ತಿರುವುದರಿಂದ ಕೆಟ್ಟ ಭಾವನೆಗಳು ಪ್ರವಹಿಸುತ್ತವೆ. ನರವ್ಯವಸ್ಥೆ, ಅಂಗಾಂಗಗಳು, ಮೂಳೆಗಳು ಮತ್ತು ದೇಹದ ಎಲ್ಲಾ ಭಾಗಗಳು ಬದುಕುಳಿಯುವ ಹಂಬಲದಿಂದ ಹಿಗ್ಗಿಸಲು ಪ್ರಯತ್ನಿಸುತ್ತವೆ. ಆದ್ದರಿಂದ ಸಂಪೂರ್ಣ ದೇಹವು ಹೆಣಗಾಡಿ ನರಳಿ ಪ್ರಾಣಿಯು ಸಾಯುತ್ತದೆ. ಇಂತಹಾ ಮಾಂಸವನ್ನು ತಿನ್ನುವುದರಿಂದ ಆ ಭಾವನೆಗಳು, ಆ ಕ್ರೌರ್ಯ ತಿಂದವನ ದೇಹವನ್ನು ಸೇರುತ್ತವೆ. ಅವನ ಪ್ರವೃತ್ತಿಯೂ ಕ್ರೌರ್ಯವಶವಾಗುತ್ತದೆ. ಭಾರತ ಸರ್ಕಾರದ ಕೃಷಿ ಮತ್ತು ಸಂಸ್ಕರಿತ ಆಹಾರ ಉತ್ಪನ್ನ ರಫ್ತು ಅಭಿವೃದ್ಧಿ ಪ್ರಾಧಿಕಾರ(APEDA)ವು  ಹಲಾಲ್ ಪದವನ್ನು ಸರಕಾರಿ ದಸ್ತಾವೇಜ್ 'ರೆಡ್ ಮೀಟ್ ಮ್ಯಾನ್ಯುಯೆಲ್' ನಿಂದ ತೆಗೆದುಹಾಕಿದೆ. ಸರ್ಕಾರದ ಈ ನಡೆಯಿಂದ 'ಹಲಾಲ್ ಸರ್ಟಿಫಿಕೇಟ್' ನ ಅವಶ್ಯಕತೆಯು ಇಲ್ಲವಾಗಿ ಎಲ್ಲಾ ರೀತಿಯ ಅಧಿಕೃತ ಮಾಂಸ ವ್ಯಾಪಾರಿಗಳು ತಮ್ಮ ನೋಂದಣಿಯನ್ನು ಮಾಡಿಸಿಕೊಳ್ಳಬಹುದಾಗಿದೆ. ಇದರೊಂದಿಗೆ ಇಸ್ಲಾಂ ಸಂಸ್ಥೆಗಳ 'ಹಲಾಲ್ ಪ್ರಮಾಣಪತ್ರ'ದ ಆಟ ಅಂತ್ಯವಾದಂತಾಯಿತು. ಈ ಕಾರಣಕ್ಕೆ ನಾವು ಕೇಂದ್ರ ಭಾಜಪಾ ಸರಕಾರವನ್ನು ಅಭಿನಂದಿಸಬೇಕು.


ಭಾಗ್ಯನಗರದ ಜನನವಾದ ಬಗೆ…..

ಭಾಗ್ಯನಗರದ ಜನನವಾದ ಬಗೆ…..


               "ಗೋಲ್ಕೊಂಡಾ ಕೋಟೆಯ ಭೌತಿಕ ಪುರಾವೆಗಳನ್ನು ಮರುಪರಿಶೀಲಿಸಿದಾಗ ಕೋಟೆಯ ಅಂತರತಮ ಆವರಣದ ಗೋಡೆಗಳು ಹದಿಮೂರು ಅಥವಾ ಹದಿನಾಲ್ಕನೆಯ ಶತಮಾನದ ಆರಂಭಿಕ ಭಾಗಕ್ಕೆ ಚೆನ್ನಾಗಿ ಹೊಂದುತ್ತವೆ. ಈ ಗೋಡೆಗಳು ಕೋಟೆಗೆ ಮತ್ತೆ ಜೋಡಿಸಲ್ಪಟ್ಟ(ಶಾಸನದಲ್ಲಿ ಉಲ್ಲೇಖಿತವಾದ)ವುಗಳಿಂದ ಪ್ರತ್ಯೇಕತೆಯನ್ನು ತಮ್ಮ ವಿಶಿಷ್ಟತೆಯಿಂದಾಗಿ ಕಾಯ್ದುಕೊಂಡಿವೆ. ಇವು ಎರಡು ಪಕ್ಕದ ಆವರಣಗಳನ್ನು 'ಬಾಲ ಹಿಸಾರ್'ನ ಮೇಲ್ಭಾಗದೊಂದಿಗೂ, ಮೂರನೆಯದನ್ನು ಪರ್ವತದ ತಳದೊಂದಿಗೂ ರೂಪಿಸಿವೆ. ಗಾರೆಯಿಲ್ಲದೆ ಚೌಕ ಹಾಗೂ ಆಯತಾಕಾರವಾಗಿ ಕತ್ತರಿಸಲ್ಪಟ್ಟ ಬೃಹದಾಕಾರದ ಗ್ರಾನೈಟ್ ಶಿಲೆಗಳಿಂದ ಇವು ಮಾಡಲ್ಪಟ್ಟಿವೆ. ನೆಲ ಭಾಗವೂ ಅನಿಯಮಿತವಾಗಿ ಕತ್ತರಿಸಿದ ಆದರೆ ಸರಿಯಾಗಿ ಜೋಡಿಸಲ್ಪಟ್ಟ ಗ್ರಾನೈಟ್ ಶಿಲೆಗಳಿಂದ ಮಾಡಲ್ಪಟ್ಟಿವೆ. ಪರ್ವತದ ಅನಿಯಮಿತ ಆಕಾರದ ಕಲ್ಲುಗಳ ಜೊತೆ ಕೌಶಲ್ಯಪೂರ್ಣವಾಗಿ ಈ ಶಿಲೆಗಳನ್ನು ಜೋಡಿಸಿ ಗೋಡೆಗಳನ್ನು ಪರ್ವತದ ಮೇಲೆ ಹಾಗೂ ಸುತ್ತ ಕಟ್ಟಲಾಗಿದೆ. ಮುಂದಿನ ಯಾವುದೇ ನಿರ್ಮಾಣದಲ್ಲೂ ಈ ಗೋಡೆಗಳ ಮೇಲ್ಭಾಗವನ್ನು ಮಾರ್ಪಡಿಸಿಲ್ಲ. ಕೋಟೆಗಳ ಮೇಲೆ ಆಯತಾಕಾರದ ಬುರುಜುಗಳನ್ನು ಅಲ್ಲಲ್ಲಿ ಇಡಲಾಗಿದೆ. ಕೌಶಲ್ಯಪೂರ್ಣವಾಗಿ ಕತ್ತರಿಸಲ್ಪಟ್ಟ ಶಿಲೆಗಳಲ್ಲಿ ಚೌಕಾಕಾರದ ರಂಧ್ರಗಳನ್ನು ಕೊರೆದು ಅಲ್ಲಿ ಪರ್ವತದ ಕಲ್ಲುಗಳಿಂದ ಗೋಡೆಯನ್ನು ಪ್ರತ್ಯೇಕಿಸುವ ಸಲುವಾಗಿ ಮರ/ಲೋಹದ ತುಂಡುಗಳನ್ನು ತೂರಿಸಲಾಗಿದೆ.....ಹೀಗೆ ಒಟ್ಟಾರೆಯಾಗಿ ಈ ಎಲ್ಲಾ ಗುಣಲಕ್ಷಣಗಳು ಬಾಲ ಹಿಸಾರ್ ನ ಮೇಲ್ಭಾಗದ ಗೋಡೆಗಳನ್ನು ಕೋಟೆಯ ಉಳಿದ ರಚನೆಗಳಿಂದ ಪ್ರತ್ಯೇಕಿಸುತ್ತವೆ. ಇದರ ಹೊರ ಆವರಣದ ಗೋಡೆಯ ಕಾಲ ಹದಿನಾರನೆಯ ಶತಮಾನ(ಶಾಸನಾಧರಿತ)" ಇದು ಪುರಾತತ್ವ ಶಾಸ್ತ್ರಜ್ಞ ಮಣಿಕಾ ಸರ್ದಾರ್ ನಿರೂಪಿಸಿರುವ ವಿವರಗಳು. ಅಲ್ಲಿಗೆ ಗೋಲ್ಕೊಂಡಾ, ಸುಲ್ತಾನ್ ಖುಲಿಯಿಂದ ನಿರ್ಮಾಣಗೊಂಡಿದೆಯೆಂಬ ತಿರುಚುವ ಇತಿಹಾಸಕಾರರ ವಾದ ಸೋತು ಹೋಯಿತು. ಆತ ಹುಟ್ಟುವ ಮೊದಲೇ ಆ ಕೋಟೆಯಿತ್ತು. ಹಾಗಾದರೆ ಇದರ ನಿರ್ಮಾಣ ಮಾಡಿದ್ದು ಯಾರು? ಹದಿಮೂರನೆಯ ಶತಮಾನದಲ್ಲಿ ಇದು ಯಾರ ವಶದಲ್ಲಿತ್ತು? ಇದಕ್ಕೂ ಉತ್ತರ ಸಿಕ್ಕಿದೆ.


            ಹನ್ನೆರಡು - ಹದಿಮೂರನೇ ಶತಮಾನದಲ್ಲಿ ಆಂಧ್ರದಲ್ಲಿ ಪ್ರಬಲವಾಗಿದ್ದ ರಾಜವಂಶ ಕಾಕತೀಯರದ್ದು. ಗೋಲ್ಕೊಂಡಾ ಅವರ ವಶದಲ್ಲಿತ್ತು. ಅಲ್ಲಿನ ಕೋಟೆಯನ್ನು ನಿರ್ಮಿಸಿದವರು ಇವರೇ. ಗಣಪತಿ ದೇವ ಈ ಸಾಮ್ರಾಜ್ಯದ ಸ್ಥಾಪಕ.  ಬಾಲ್ಯದಲ್ಲಿಯೇ ದೇವಗಿರಿಯ ಯಾದವರಿಗೆ ಸೆರೆಸಿಕ್ಕಿ ಬಳಿಕ ಬಿಡಿಸಿಕೊಂಡು ಸ್ವತಂತ್ರವಾದ ಸಾಮ್ರಾಜ್ಯವನ್ನು ಸ್ಥಾಪಿಸಿದ.ಅದು ಶತಮಾನಕ್ಕೂ ಹೆಚ್ಚು ಕಾಲ ಬೆಳೆದು ವೈಭವದ ದಿನಗಳನ್ನು ಕಂಡುದದರ ಹಿಂದೆ ಗಣಪತಿದೇವನ ಪರಿಶ್ರಮವಿದೆ. ಗೋಲ್ಕೊಂಡಾ ಕೋಟೆ ಬಹುಷಃ ಇವನಿಂದಲೇ ನಿರ್ಮಾಣಗೊಂಡಿರಬೇಕು. ಹೇಗಿದ್ದರೂ ಈ ಕೋಟೆ ಕಾಕತೀಯರ ಕಾಲದಲ್ಲೇ ಆಗಿತ್ತು ಎಂಬುದಕ್ಕೆ ಮೊಘಲ್ ಚರಿತ್ರೆಗಳಾದ ಮಾಸಿರ್-ಐ-ಆಲಮ್‌ಗಿರಿ ಮತ್ತು ಮುಂಟಖಾಬ್ ಅಲ್ ಲುಬಾಬ್'ಗಳಲ್ಲೇ ಉಲ್ಲೇಖಗಳಿವೆ. ಅಲ್ಲದೇ ಹಿಂದೂ ರಾಜರಿಂದ ಅದು ಮುಸ್ಲಿಂ ದೊರೆಗಳ ಕೈಗೆ ಸಿಕ್ಕಿದುದನ್ನೂ ಅವು ಉಲ್ಲೇಖಿಸಿವೆ. "ಹಿಂದೆ ಮಂಗಲ್ ಎಂದು ಕರೆಯಲ್ಪಡುತ್ತಿದ್ದು ದೇವರಾಯ ಎಂಬ ಹಿಂದೂ ಅರಸನಿಂದ ಆಳಲ್ಪಡುತ್ತಿದ್ದು, ಅವನಿಂದ ಬಹಮನಿಗಳು ಕಿತ್ತುಕೊಂಡರು. ಬಳಿಕ ಸುಲ್ತಾನ್ ಮಹಮ್ಮದ್ ಬಹಮನಿಯ ಗುಲಾಮನಾದ ಅಲಿ ನಖಿ ಕುತುಬ್ ಮುಲ್ಕ್'ನ ಸ್ವಾಧೀನಕ್ಕೆ ಬಂತು" ಎಂದು ಇವುಗಳಲ್ಲಿ ಉಲ್ಲೇಖಿಸಲಾಗಿದೆ.


              ಕುತುಬ್ ಶಾಹಿ ರಾಜವಂಶವನ್ನು ಸ್ಥಾಪಿಸಿದವ ಸುಲ್ತಾನ್ ಖುಲಿ ಕುತುಬ್ ಮುಲ್ಕ್ (ಸಾ.ಯು. 1470-1543). ಉಳಿದ ಮುಸ್ಲಿಮ ಆಕ್ರಮಣಕಾರರಂತೆ ಭಾರತದಲ್ಲಿನ ಅಪಾರ ಸಂಪತ್ತು ಹಾಗೂ ಅವಕಾಶಗಳ ಸುದ್ದಿ ಕೇಳಿ ಬಂದವನೀತ. ಬಂದದ್ದು ಇರಾನಿನ ಹಮದನ್'ನಿಂದ. ಭಾರತದ ಪಶ್ಚಿಮ ಕರಾವಳಿಯ ಚೌಲ್ ಎಂಬ ಬಂದರು ನಗರಕ್ಕೆ ಕಾಲಿಟ್ಟ ಈತ, ಒಂದು ಮುಷ್ಟಿ ಕಪ್ಪು ಮಣ್ಣನ್ನು ಕೈಯಲ್ಲಿ ಹಿಡಿದು ಭಾರತದಾದ್ಯಂತ ಶಿಯಾ ಮತವನ್ನು ಹಬ್ಬಿಸುವುದಾಗಿ ಪ್ರತಿಜ್ಞೆ ಮಾಡಿದ. ಬಹಮನಿ ರಾಜ ಶಿಹಾಬುದ್ದೀನ್ ಮಹಮೂದ್ ಕೈಕೆಳಗೆ ಚಾಕರಿಗೆ ಆರಂಭಿಸಿದ ಆತ ಶೀಘ್ರವಾಗಿ ಪ್ರಮುಖ ಹುದ್ದೆಗಳನ್ನು ಪಡೆಯುತ್ತಾ ತೆಲಿಂಗ(ಈಗಿನ ತೆಲಂಗಾಣದ ಮೂಲ) ದೇಶದ ರಾಜ್ಯಪಾಲನಾದ. 1518ರಲ್ಲಿ ಬಹಮನಿ ಸುಲ್ತಾನ ಮರಣ ಹೊಂದಿದ ಬಳಿಕ, ಸುಲ್ತಾನ್ ಖುಲಿ ಗೋಲ್ಕೊಂಡದಲ್ಲಿ ಸ್ವತಂತ್ರ ಆಡಳಿತಗಾರನಾಗಿ ತನ್ನನ್ನು ತಾನು ಸ್ಥಾಪಿಸಿಕೊಂಡ. ಗೋಲ್ಕೊಂಡಾ ಕೋಟೆಯಲ್ಲಿ ಹಲವು ಮಾರ್ಪಾಡುಗಳನ್ನು ಮಾಡಿದ. ಕೆಲವು ಆವರಣಗಳನ್ನು ಸೇರಿಸಿದ. ಕೋಟೆಯ ಕೇಂದ್ರದಲ್ಲಿದ್ದ ದೇವಾಲಯವನ್ನು ಮಸೀದಿಯಾಗಿ ಪರಿವರ್ತಿಸಿದ. ಇವತ್ತಿಗೂ ಹೈದರಾಬಾದಿನ ಹಳೆಯ ಮಸೀದಿ ಎಂದು ಕರೆಯಲ್ಪಡುವ ಜಾಮಿ ಮಸೀದೀ ಇದೇ!


           ಗಣಪುರದ ಕೋಟಗುಡಿಯ ದ್ವಾರದ ಪಡಿಯಚ್ಚಿನಂತಿರುವ ಹದಿಮೂರನೆಯ ಶತಮಾನದ ದ್ವಾರ, ಸ್ತಂಭಗಳು, ಬಳ್ಳಿ, ರತ್ನ-ವಜ್ರ, ಶಾಖೆಗಳ ಕೆತ್ತನೆಗಳು, ಬಂಡೆಯಲ್ಲಿ ಕೆತ್ತಲಾದ ಶಿಲ್ಪ ಎಲ್ಲವೂ ಅಲ್ಲಿ ದೇವಾಲಯವಿದ್ದುದನ್ನು, ಬಳಿಕ ನಾಶ ಮಾಡಿ ಮಸೀದಿಯಾಗಿಸಿದುದನ್ನು ಸಾರಿ ಹೇಳುತ್ತವೆ. ಬೆಟ್ಟದ ದೇವಾಲಯವನ್ನು ತಾರಾಮತಿ ಮಸೀದಿಯಾಗಿ ಪರಿವರ್ತಿಸಲಾಯಿತು. ಬಳಿಕ ಅಕ್ಕಣ್ಣ-ಮಾದಣ್ಣ ದೇವಸ್ಥಾನವನ್ನು ಔರಂಗಜೇಬನು ನಾಶಪಡಿಸಿದನು. ಆದಾಗ್ಯೂ, ಗುಹಾ ದೇವಾಲಯಗಳು ಇಂದಿಗೂ ಉಳಿದುಕೊಂಡಿವೆ. ಗೋಲ್ಕೊಂಡ ಕೋಟೆಯೊಳಗೆ ಇಂದಿಗೂ ಜಗದಂಬಾ ಗುಹಾ ದೇವಾಲಯವಿದೆ.




            ಯಾವ ಹಿಂದೂ ದೇವಾಲಯವನ್ನು ಸುಲ್ತಾನ್ ಖುಲಿ ಮಸೀದಿಯಾಗಿ ಪರಿವರ್ತಿಸಿದನೋ ಅಲ್ಲಿ ಆತ ನಮಾಜ್ ಮಾಡುತ್ತಿದ್ದಾಗ ಆತನ ಮಗ ಜಮ್ಶೆಡ್ ಖುಲಿ ಅವನನ್ನು ಇರಿದು ಕೊಂದ. ಬಳಿಕ ಸಿಂಹಾಸನವನ್ನೂ ಆಕ್ರಮಿಸಿಕೊಂಡ. ತನ್ನ ಪಟ್ಟಕ್ಕೆ ಕುತ್ತು ತರಬಲ್ಲನೆಂದು ಸಹೋದರ ಇಬ್ರಾಹಿಂ ಖುಲಿಯನ್ನು ಕೊಲ್ಲಿಸಲು ಯತ್ನಿಸಿದ. ಹೆದರಿದ ಇಬ್ರಾಹಿಮ್ ಖುಲಿ ಪ್ರಬಲ ಹಿಂದೂ ಸಾಮ್ರಾಜ್ಯ ವಿಜಯನಗರಕ್ಕೆ ಪಲಾಯನ ಮಾಡಿದ. ಕೃಷ್ಣದೇವರಾಯನ ಅಳಿಯ ರಾಮರಾಯ ಆತನಿಗೆ ಏಳು ವರ್ಷಗಳಷ್ಟು ದೀರ್ಘ ಕಾಲ ಆಶ್ರಯ ಕೊಟ್ಟ. ಮಾತ್ರವಲ್ಲ ಜಹಗೀರುಗಳನ್ನೂ ದಯಪಾಲಿಸಿದ. ಜಗಮಗಿಸುವ ಹಿಂದೂ ಸ್ವರ್ಣ ಸಾಮ್ರಾಜ್ಯವನ್ನು ಸ್ಥಾಪಿಸುವ ಉದ್ದೇಶ ಹೊತ್ತು ಎದ್ದಿದ್ದ ವಿಜಯನಗರ ತನ್ನ ಅರಸರ ಸೆಕ್ಯುಲರ್ ನೀತಿಯಿಂದ ತನ್ನ ಅವಸಾನದ ಬೀಜವನ್ನೂ ಒಡಲೊಳಗೆ ಹೊತ್ತುಕೊಂಡಿತ್ತು. ಬುಕ್ಕದೇವರಾಯನ ಕಾಲದಲ್ಲೇ ಅಲ್ಲೊಂದು ಮಸೀದಿ ನಿರ್ಮಾಣವಾಗಿತ್ತು. ಮುಸ್ಲಿಮರಿಗೆ ಹಿಂದೂ ರಾಜನನ್ನು ಗೌರವಿಸುವ ಶಂಕೆ ಬಂದಾಗ ಇದನ್ನು ನೋಡಿಯಾದರೂ ಗೌರವಿಸಲಿ ಎಂದು ಆಸ್ಥಾನದಲ್ಲಿ ಖುರಾನಿನ ಪ್ರತಿಯೊಂದನ್ನು ಇಟ್ಟುಕೊಂಡಿದ್ದರು. ಅಳಿಯ ರಾಮರಾಯನ ಕಾಲದಲ್ಲಂತೂ ಈ ಸೆಕ್ಯುಲರುತನ ಮೇರೆ ಮೀರಿತು. ಆಗ ಸೈನ್ಯದಲ್ಲಿ ಮುಸ್ಲಿಮರ ಜಮಾವಣೆಯೂ ಜಾಸ್ತಿಯಾಯಿತು. ರಾಜ್ಯದಲ್ಲಿ ಮಸೀದಿಗಳ ಸಂಖ್ಯೆಯೂ ಬೆಳೆಯಿತು. ಮುಸ್ಲಿಮರಿಗೆಂದೇ ಮಾರುಕಟ್ಟೆ ಜಾಗವೂ ದೊರಕಿತು. ತನ್ನ ಸಹೋದರ ಹಾಗೂ ಆಸ್ಥಾನವಾಸಿಗಳ ವಿರೋಧದ ನಡುವೆಯೂ ಅವರಿಗೆ ಪ್ರಾಣಿ(ಗೋವು?) ಹತ್ಯೆಗೆ ಅವಕಾಶವನ್ನೂ ರಾಮರಾಯ ಮಾಡಿಕೊಟ್ಟಿದ್ದ. ಯಾವ ಸಾಮ್ರಾಜ್ಯ ಮತಾಂಧತೆಯನ್ನು ಮಣ್ಣು ಮುಕ್ಕಿಸಲು ಮಣ್ಣಿನಿಂದ ಎದ್ದು ನಿಂತಿತ್ತೋ ಅಲ್ಲಿಯೇ ಮೈಮರೆವೂ ಆವರಿಸಿತ್ತು. ಇಬ್ರಾಹಿಮ್ ಖುಲಿಯ ವಿಚಾರದಲ್ಲಿ ಆದದ್ದೂ ಅದೇ. ಆತನಿಗೆ ಭಾಗೀರಥಿ ಎನ್ನುವ ರಾಜಪರಿವಾರದ ಹುಡುಗಿಯನ್ನು ಮದುವೆ ಮಾಡಿಕೊಡಲಾಯಿತು. ರಾಮರಾಯನಂತೂ ಆತನನ್ನು ಫರ್ಜಾಂಡ್' (ಮಗ) ಎಂದೇ ಸಂಬೋಧಿಸುತ್ತಿದ್ದ.


          ಜಮ್ಷೆಡ್ ಸತ್ತ ಬಳಿಕ ಗೋಲ್ಕೊಂಡಾವನ್ನು ಗೆಲ್ಲಲು ತನ್ನ ಫರ್ಜಾಂಡ್ ಇಬ್ರಾಹಿಂನಿಗೆ ರಾಮರಾಯ ಸಹಾಯವನ್ನು ಮಾಡಿದ. ಆ ಯುದ್ಧದಲ್ಲಿ, ರಾಮರಾಯರ ಆಶ್ರಯದಲ್ಲಿ ಇಬ್ರಾಹಿಂಗೆ ಹಿಂದೂಗಳ ಅಪಾರ ಬೆಂಬಲವೂ ದೊರಕಿತು ಎಂಬುದನ್ನು ಗಮನಿಸಬೇಕು. ಗೋಲ್ಕೊಂಡಕ್ಕೆ ಹೋಗುವ ದಾರಿಯಲ್ಲಿ ಕೊಯಿಲ್ಕೊಂಡ ಕೋಟೆಯಲ್ಲಿ, ಹಿಂದೂಗಳು ಅವನಿಗೆ ನಿಷ್ಠೆ ಮತ್ತು ಬೆಂಬಲವನ್ನು ಸೂಚಿಸುವ ಪ್ರತಿಜ್ಞೆ ಮಾಡಿದರು. ಕೊಯಿಲ್‌ಕೊಂಡ ಶಾಸನದಲ್ಲಿ, ಹಿಂದೂಗಳು "ನಾವು ಇಬ್ರಾಹಿಂ ಖುಲಿಯನ್ನು ಬೆಂಬಲಿಸುವ ಪ್ರತಿಜ್ಞೆಯನ್ನು ಮಾಡುತ್ತಿದ್ದೇವೆ. ನಮ್ಮಲ್ಲಿ ಯಾರಾದರೂ ಈ ವಾಗ್ದಾನವನ್ನು ಮುರಿದರೆ ವಾರಣಾಸಿಯಲ್ಲಿ ಹಸುಗಳು ಮತ್ತು ಬ್ರಾಹ್ಮಣರನ್ನು ಕೊಲೆ ಮಾಡಿದ ಸಮಾನವಾದ ಪಾಪಕ್ಕೆ ಗುರಿಯಾಗುತ್ತಾರೆ" ಎಂದು ಭರವಸೆ ನೀಡಿದರು. ಮಾತ್ರವಲ್ಲದೆ ಅದೇ ಇಬ್ರಾಹಿಂನನ್ನು ಮಲ್ಕಿಭಾ (ರಾಮ) ಎಂದು ಕರೆಯಲಾಯಿತು, (ಮಲಿಕ್) ಇಬ್ರಾಹಿಂನನ್ನು ಭಗವಾನ್ ರಾಮನೊಂದಿಗೆ ಸಮೀಕರಿಸಲಾಯಿತು. ರಾಜನೊಬ್ಬ ಮೂರ್ಖ ಹಾಗೂ ಸೆಕ್ಯುಲರ್ ಚಿಂತಕನಾದಾಗ ಯಾವೆಲ್ಲಾ ಅಪಸವ್ಯಗಳು ಆಗಬಹುದೋ ಅದೆಲ್ಲವೂ ಆಯಿತು!


            ಆದರೆ ಎಲ್ಲಾ ಮುಸ್ಲಿಮರ ಹುಟ್ಟುಗುಣದಂತೆಯೇ ಉಪಕಾರ ಸ್ಮರಣೆ ಇಬ್ರಾಹಿಂನಲ್ಲಿ ಉಳಿಯಲಿಲ್ಲ. ರಾಮರಾಯರು ಅಹ್ಮದ್ ನಗರದ ಮೇಲೆ ದಂಡೆತ್ತಿ ಹೋದಾಗ ಆ ರಾಜ್ಯವನ್ನು ಗೆದ್ದು ಆತನೆಲ್ಲಿ ಬಲಿಷ್ಠನಾಗುತ್ತಾನೋ ಎಂಬ ಹೊಟ್ಟೆ ಉರಿಯಿಂದ ಹಳೆಯ ದ್ವೇಷವನ್ನು ಮರೆತು ಅಹ್ಮದ್ ನಗರದ ಸುಲ್ತಾನ ನಿಜಾಂಷಾನಿಗೆ ಇಬ್ರಾಹಿಂ ಬೆಂಬಲ ನೀಡಿದ. ಇದರಿಂದ ಉರಿದೆದ್ದ ರಾಮರಾಯರು ಕಲ್ಯಾಣಿಕೋಟೆಯ ಮೇಲೆ ದಂಡೆತ್ತಿ ಹೋದ ಸಂದರ್ಭದಲ್ಲಿ ಗೋಲ್ಕೊಂಡಾ ರಾಜ್ಯವನ್ನು ಧೂಳೀಪಟ ಮಾಡಿ ಇಬ್ರಾಹಿಂನಿಗೆ ಪಾಠ ಕಲಿಸಿದರು. ಪಾನ್ ಗಲ್, ಗಣಪುರಗಳನ್ನು ರಾಮರಾಯರಿಗೆ ಅರ್ಪಿಸಿ ಇಬ್ರಾಹಿಂ ಸಂಧಿ ಮಾಡಿಕೊಳ್ಳಬೇಕಾಯಿತು. ಇಷ್ಟಾದ ಮೇಲೂ ಇಬ್ರಾಹಿಂನ ಜನ್ಮಜಾತ ಬುದ್ಧಿ ಬದಲಾಗಲಿಲ್ಲ. ರಾಮರಾಯನನ್ನು ಸದೆಬಡಿಯಲು ನಾವೆಲ್ಲಾ ಒಟ್ಟಾಗಬೇಕು ಎಂಬ ಸಂದೇಶ ತನ್ನ ಶತ್ರು ಬಿಜಾಪುರದ ಆದಿಲ್ ಷಾನಿಂದ ಬಂದದ್ದೇ ತಡ ಜೊಲ್ಲು ಸುರಿಸಿಕೊಂಡು ಸನ್ನದ್ಧನಾದ. ಹೊಸ ಸ್ನೇಹವನ್ನು ನೆಂಟಸ್ತನದಿಂದ ಬಲಪಡಿಸಿಕೊಳ್ಳಲು ತನ್ನ ಮಗಳನ್ನು ಆದಿಲ್ ಷಾನಿಗೂ ಅವನ ತಂಗಿಯನ್ನು ತನ್ನ ಮಗನಿಗೂ ತಂದುಕೊಳ್ಳಲು ಒಪ್ಪಿಕೊಂಡ. ಸಂಯುಕ್ತರಂಗ ವಂಚನೆಯಿಂದ ಯುದ್ಧಕ್ಕೆ ಆರಂಭಿಸಿತು. ರಘುನಾಥರಾಯ ಧರೆಗುರುಳಿ, ವೆಂಕಟಾದ್ರಿಯ ಕಣ್ಣು ಹೋದುದನ್ನು ಕಂಡ ರಾಯರು ಅಕ್ಷರಶಃ ಪ್ರಳಯ ರುದ್ರನಂತೆ ಮುಸ್ಲಿಂ ಸೈನ್ಯವನ್ನು ಚೆಂಡಾಡಿದರು. ಚದುರಿ ಹೋದ ಸೈನ್ಯವನ್ನು ಒಗ್ಗೂಡಿಸಿಕೊಂಡು, ಓಡಿ ಹೋಗಲು ಹವಣಿಸುತ್ತಿದ್ದ ಗೋಲ್ಕೊಂಡಾ,  ಬಿಜಾಪುರ ಸುಲ್ತಾನರನ್ನು ಹುರಿದುಂಬಿಸಿದ ನಿಜಾಂಷಾ ತಾಮ್ರದ ನಾಣ್ಯಗಳನ್ನು ಒತ್ತಾಗಿ ತುಂಬಿದ್ದ ಗುಂಡುಗಳನ್ನು ಫಿರಂಗಿಗಳಿಂದ ಸ್ಫೋಟಿಸಿ ವಿಜಯನಗರದ ಸೈನ್ಯ ದಿಕ್ಕಾಪಾಲಾಗುವಂತೆ ಮಾಡಿದ. ಅದೇ ಸಮಯದಲ್ಲಿ ರಾಯರು ನಂಬಿದ್ದ ಮುಸ್ಲಿಂ ಸರದಾರರು, ಸೈನಿಕರೆಲ್ಲಾ ನಿಷ್ಠೆ ಬದಲಾಯಿಸಿಬಿಟ್ಟರು. ಅಹ್ಮದ್ ನಗರದ ಮದ್ದಾನೆಯೊಂದು ಪಲ್ಲಕ್ಕಿಯಲ್ಲಿದ್ದ ರಾಮರಾಯರನ್ನು ಕೆಳಕ್ಕೆ ಬೀಳಿಸಿ ಸೊಂಡಿಲಿನಲ್ಲಿ ಎತ್ತಿಕೊಂಡಿತು. ಆ ವಯೋವೃದ್ಧ ವೀರನನ್ನು ಬಂಧಿಸಿ ನಿಜಾಂಷಾ ಬಳಿ ಕರೆದೊಯ್ದಾಗ ಆತ ರಾಯರ ತಲೆಕಡಿದು ಎಲ್ಲರಿಗೂ ಕಾಣುವಂತೆ ಪ್ರದರ್ಶಿಸಿದ. ರಾಜ ಸೋತನೆಂದು ಸೈನ್ಯ ಬೆದರಿ ಚೆಲ್ಲಾಪಿಲ್ಲಿಯಾಯಿತು. ಎರಡುಪಟ್ಟು ಹೆಚ್ಚು ಸೈನ್ಯಬಲವಿದ್ದರೂ ವಿಜಯನಗರದ ಸೈನ್ಯ ವಂಚಕರಿಂದಾಗಿ, ಅಲ್ಲಲ್ಲ ಸೆಕ್ಯುಲರ್ ಮತಿಭ್ರಾಂತತೆಯಿಂದಾಗಿ ಸೋತು ಹೋಯಿತು. ಕೃಷ್ಣೆ ಕೆಂಪಾದಳು. ಆ ಒಂದು ದಿವಸವೇ ಒಂದು ಲಕ್ಷ ಕಾಫಿರರನ್ನು ಕತ್ತರಿಸಿ ಕೆಡವಲಾಯಿತು ಎಂದು ಫಿರಿಸ್ತಾ ಬರೆದಿದ್ದಾನೆ. ಕಲ್ಲಿನಲ್ಲಿ ಕೆತ್ತಿದ ರಾಮರಾಯನ ತಲೆಯನ್ನು ಬಿಜಾಪುರದ ಕೋಟೆಯಲ್ಲಿ ಮಲಮೂತ್ರಗಳು ಹರಿಯುವ ಒಳಚರಂಡಿಗೆ ಕಿಂಡಿಯಾಗಿ ಇರಿಸಿದ ಆ ಮತಾಂಧರ ಕ್ರೌರ್ಯಕ್ಕೆ ವಿಜಯನಗರ ಬೆಚ್ಚಿಬಿತ್ತು. ಸತತ ಆರು ತಿಂಗಳು ನಗರವನ್ನು ಸೂರೆಗೈಯ್ಯಲಾಯಿತು. ಮಹಿಳೆ, ಹಸುಳೆ, ಶಿಲ್ಪಕಲೆ ಎಲ್ಲದರ ಮೇಲೂ ಅವರ ಅತ್ಯಾಚಾರ ವಿಜೃಂಭಿಸಿತು. ತುಂಗಾಭದ್ರೆಯ ಒಡಲು ರಕ್ತದಿಂದ ತುಂಬಿಹೋಯಿತು. ಸ್ವರ್ಣ ಹಂಪೆ ಹಾಳು ಹಂಪೆಯಾಯಿತು. ಕಲಿಯುಗದ ಹಸಿಯ ಹಿರಿಮಸಣವಾಯಿತು. "ತಾಳವಿಲ್ಲದೆಲೆ, ಬೇತಾಳನಂದದಿ ಕುಣಿವ ಕಾಳನರ್ತಕನ ಕಾಲ್ಕೆಳಗೆ ತೊತ್ತುಳಿಗೊಂಡು ಹಾಳಾಗಿ ಹುಡಿಗೂಡಿ ಹೋದ ಕನ್ನಡನಾಡಿಗಿದಿರಾಗಿ ಬಂದು ನಿಂದು | ಹಾಳುಗಳ ಹೊರವೊಳಗೆ ಹಾಳುಗಳ ಸಾಲುಗಳು, ಬೀಳುಗಳ ಬದಿಬದಿಗೆ ಬೀಳುಗಳ ಬಾಳುಗಳು, ಕಾಳರಕ್ಕಸನ ಕಡೆಕೂಳು ಬಾಳಕವಾದ ನಾಡ ನಡುಮನೆಯ ಕಂಡೆ" ಎಂದು ಹಂಪೆ ಹಾಳಾದ ಬಗೆಯನ್ನು ಕಂಡು ಕಣ್ಣೀರು ಸುರಿಸಿದ್ದಾರೆ ಬೇಂದ್ರೆ ಕವಿ.


             ಆರು ತಿಂಗಳ ಕಾಲ ಅವ್ಯಾಹತವಾಗಿ ಮತಾಂಧರು ವಿಜಯನಗರವನ್ನು ಲೂಟಿ ಮಾಡಿ ಸುಟ್ಟು ಹಾಕಿದರು. ಈ ಸಂಪತ್ತಿನ ಹಂಚಿಕೆಯಲ್ಲಿ ಅವರ ಮಧ್ಯೆಯೇ ಜಗಳ ಶುರುವಾಯಿತು. ಬಳಿಕ ಅವರಿಗೆ ತಮ್ಮ ಸರದಾರರ ಮೇಲೆಯೇ ಗುಮಾನಿ ಶುರುವಾಯಿತು. ಪತ್ತೆ ಹಚ್ಚಲು ಇಬ್ರಾಹಿಂ ಸ್ವತಃ ತನ್ನ ಭಾವ ಹಾಗೂ ಸಂಪತ್ತನ್ನು ಸೂರೆಗೈಯ್ಯಲು ತಾನು ನೇಮಿಸಿದ್ದ ಸರದಾರ ಮುಸ್ತಫಾ ಖಾನನ ಜೊತೆ ರಂಗಕ್ಕಿಳಿದ. ಮುಸ್ತಫಾ ಖಾನ್ ಗೊಲ್ಕೊಂಡಾದ ಸರಹದ್ದಿನಲ್ಲಿದ್ದ ಮುದ್ಗಲ್, ತೆಕ್ಕಲ್ಕೋಟ್ ಹಾಗೂ ರಾಯಚೂರಿನ ಕೋಟೆಗಳನ್ನು ಆದಿಲ್ ಷಾನಿಗೆ ಹಸ್ತಾಂತರಿಸಿದ ಸುದ್ದಿ ತಿಳಿದು ಅವನನ್ನು, ಅವನಲ್ಲಿದ್ದ ಸಂಪತ್ತನ್ನೆಲ್ಲಾ ಕಿತ್ತುಕೊಂಡು ಆ ಕೆಲಸದಿಂದ ಕಿತ್ತೆಸೆದ. ವಿಜಯನಗರದ ಲೂಟಿಯಿಂದ ಇಬ್ರಾಹಿಂಗೆ ಸಿಕ್ಕಿದ ಪಾಲೇ ಎಷ್ಟಿತ್ತೆಂದರೆ ಮೂವತ್ತು ವರ್ಷಗಳ ಬಳಿಕ ಅದರ ಒಂದು ಪಾಲನ್ನು ಬಳಸಿ ಹೈದರಾಬಾದ್ ನಗರವನ್ನು ನಿರ್ಮಿಸಲಾಯಿತು. ಹೌದು, ವಿಜಯನಗರವನ್ನು ಲೂಟಿ ಮಾಡುವ ಮೂಲಕ ಪಡೆದ ಹಣದಿಂದ ಇಬ್ರಾಹಿಂನ ಮರಣಾನಂತರ ಅವನ ಮಗ ಮುಹಮ್ಮದ್ ಖುಲಿ ಹೈದರಾಬಾದ್ ನಗರವನ್ನು ನಿರ್ಮಿಸಿದ. ಅಲ್ಲಿ ಹಾಗೂ ಗೋಲ್ಕೊಂಡಾ ಕೋಟೆಯಲ್ಲಿ ಈ ಸಂಪತ್ತನ್ನು ಇರಿಸಿ ಕಾವಲಿಗೆ ನಿಷ್ಠಾವಂತ ಮುಸ್ಲಿಮ್ ಹಾಗೂ ಯೂರೋಪಿಯನ್ ಸೈನ್ಯವನ್ನಿಡಲಾಯಿತು. ವಿಜಯನಗರದಿಂದ ಸೂರೆಗೈದ ಅಪಾರ ವಜ್ರಗಳನ್ನು ಸಮುದ್ರ ಮೂಲಕ ವಿದೇಶಕ್ಕೆ ಮಾರಾಟ ಮಾಡುವ ವ್ಯಾಪಾರವೂ ಶುರುವಾಯಿತು. ಮುಸ್ಲಿಮರಿಗೆ ಅಪಾರ ಪ್ರಮಾಣದ ಭೂಮಿಯನ್ನು ಹಂಚಲಾಯಿತು. ಯಥಾಪ್ರಕಾರ ಹಿಂದೂಗಳ ಪಾಲಿಗೆ ತೆರಿಗೆ ಕಟ್ಟುವುದು ಮಾತ್ರ ಉಳಿಯಿತು!


           ಇಬ್ರಾಹಿಂ ಖುಲಿಯ ಮರಣಾನಂತರ ಗೋಲ್ಕೊಂಡಾದ ಪಟ್ಟವನ್ನೇರಿದವನು ಅವನ ಮಗ ಮಹಮ್ಮದ್ ಖುಲಿ. ಅವನ ಹೆಂಡತಿಯ ಹೆಸರು ಭಾಗ್ಮತಿ. ಅವಳ ಹೆಸರಿನಿಂದಲೇ ಈಗಿನ ಹೈದರಾಬಾದ್ ನಗರ ಭಾಗ್ಯನಗರವೆಂದು ಕಟ್ಟಲ್ಪಟ್ಟಿತು. ಮೊನ್ನೆ ಮೊನ್ನೆ ಯೋಗಿಜೀಯವರು ಹೈದರಾಬಾದ್ ಅನ್ನು ಭಾಗ್ಯನಗರವೆಂದು ಮರು ನಾಮಕರಣ ಮಾಡುತ್ತೇವೆ ಎಂದಾಗ ಸೆಕ್ಯುಲರ್ ಬ್ರಿಗೇಡಿನಿಂದ ಹೈದರಾಬಾದಿನ ನಿಜ ಇತಿಹಾಸವನ್ನು ಬಚ್ಚಿಡುವ ಕಾರ್ಯ ಆರಂಭವಾಯಿತು. "ಹೈದರಾಬಾದ್ ಭಾಗ್ಯನಗರವಾಗಿರಲೇ ಇಲ್ಲ. ಭಾಗ್ಮತಿ ಇರಲೇ ಇಲ್ಲ" ಎಂಬ ಹೇಳಿಕೆಗಳೂ, ಲೇಖನಗಳೂ, ವಿಡೀಯೋಗಳು, ಸಾಮಾಜಿಕ ಜಾಲತಾಣಗಳಲ್ಲಿ ಬರವಣಿಗೆಗಳೂ ಪುಂಖಾನುಪುಂಖವಾಗಿ ಬಂದವು. ಕೆಲವರು ಇನ್ನೂ ಮುಂದಕ್ಕೆ ಹೋಗಿ ಯೋಗಿ ಜೀಯವರು ಉತ್ತರಪ್ರದೇಶದಲ್ಲಿ ಕಾನೂನು ಮಾಡಿ ಯಾವುದನ್ನು ನಿಷೇಧಿಸಿರುವರೋ ಅದೇ ಲವ್ ಜಿಹಾದ್ ಈ ಪ್ರಕರಣದಲ್ಲಿ ನಡೆದಿತ್ತು; ಹಾಗಾಗಿ ಭಾಗ್ಯನಗರವೆಂದು ನಾಮಕರಣ ಮಾಡುವುದು ಹಾಸ್ಯಾಸ್ಪದ ಎಂದು ಯೋಗಿಜೀಯವರನ್ನು ಹಳಿಯಲು ಯತ್ನಿಸಿದರು. ಮಹಮ್ಮದ್ ಖುಲಿ ಹಾಗೂ ಭಾಗ್ಮತಿಯ ವಿವಾಹದ ಮೆರವಣಿಗೆಯ ಸಮಕಾಲೀನ ಕುತುಬ್ ಶಾಹಿ ಚಿತ್ರಕಲೆಯೊಂದು ಅಶ್ಮೋಲಿಯನ್ ಮ್ಯೂಸಿಯಂನಲ್ಲಿದೆ. ಇದನ್ನು ಮಾಡಿದವ ಅವರ ಮೊಮ್ಮಗನೇ. ಆರತಿಗಳನ್ನು ಹೊತ್ತ ಮಹಿಳೆಯರೊಂದಿಗೆ ಮದುಮಕ್ಕಳು ಇರುವ ಹಿಂದೂ ಶೈಲಿಯ ವಿವಾಹವನ್ನು ಈ ಚಿತ್ರದಲ್ಲಿ ನೋಡಬಹುದು. ಮುಸ್ಲಿಮನೊಬ್ಬ ಹಿಂದೂ ಶೈಲಿಯ ವಿವಾಹವಾದುದಕ್ಕೆ ಕಾರಣವೇನು?



           ಭಾಗ್ಯನಗರ ಹಾಗೂ ಚಾರ್ ಮಿನಾರ್ ಅನ್ನು ನಿರ್ಮಿಸಿದವ ಇದೇ ಮಹಮ್ಮದ್ ಖುಲಿ. ಆತನ ತಾಯಿ ಹಿಂದೂ. ಆಕೆ ಮಗನನ್ನು ಹಿಂದೂ ಸಂಪ್ರದಾಯದಂತೆಯೇ ಬೆಳೆಸಿದಳು. "ಕುಲಿಯತ್" ಎಂದು ಕರೆಯಲ್ಪಡುವ ಅವನ ಉರ್ದು ಕವಿತೆಗಳಲ್ಲಿ ಸ್ವತಃ ಆತನೇ ಇದನ್ನು ಬರೆದಿದ್ದಾನೆ. ಅದರಲ್ಲಿ ಆತ "ನಾನು ನನ್ನ ಹಿಂದೂ ತಾಯಿಯ ಕೃಪೆಯಿಂದ ಅವಳ ಮಡಿಲಲ್ಲಿ ಬೆಳೆದೆ. ಈಗ ನಾನು ನನ್ನ ಮೂಲ ಧರ್ಮವನ್ನು, ನಂಬಿಕೆಯನ್ನು ಬಿಟ್ಟು ಹೊಸ ಮತವನ್ನು ಸ್ವೀಕರಿಸಿದೆ" ಎಂದಿದ್ದಾನೆ. ಹೀಗೆ ಹಿಂದೂ ಧರ್ಮವನ್ನು ತೊರೆದ ಆತ ತನ್ನ ಪೂರ್ವಜರ ಷಿಯಾ ಸಂಪ್ರದಾಯವನ್ನು ಅಳವಡಿಸಿಕೊಂಡ. ಆದರೆ ಅದಕ್ಕೂ ಮುಂಚೆಯೇ ಆತನಿಗೆ ಭಾಗ್ಮತಿಯೊಂದಿಗೆ ಪ್ರೀತಿಯೂ ಶುರುವಾಗಿತ್ತು. 1589ರಲ್ಲೇ ಅಂದರೆ ಅವನು ಹಿಂದೂ ಆಗಿರುವಾಗಲೇ ಅವಳೊಡನೆ ಹಿಂದೂ ಪದ್ದತಿಯಂತೆ ವಿವಾಹವೂ ಆಗಿತ್ತು. ಹಾಗೆಯೇ ಮದುವೆಯಾದ ಬಳಿಕವೂ ಆಕೆ ಮತಾಂತರವಾದುದಕ್ಕೆ ಯಾವುದೇ ಆಧಾರಗಳಿಲ್ಲ. ಅವಳಿಗೆ ಗೋರಿ ಯಾಕೆ ಇಲ್ಲ ಎನ್ನುವುದೇ ಇದನ್ನು ವಿವರಿಸುತ್ತದೆ. ಆದ್ದರಿಂದ ಇದು ಲವ್ ಜಿಹಾದ್ ಆಗಿತ್ತು ಎನ್ನುವುದು ಸತ್ಯದೂರ ವಿಚಾರ.



           ಹೈದರಾಬಾದ್‌ನ ಸಲಾರ್ ಜಂಗ್ ಮ್ಯೂಸಿಯಂನಲ್ಲಿ ಭಾಗಮತಿಯ ಹಳೆಯ ಚಿತ್ರವಿದೆ. ಅವಳ ಪ್ರಭಾವ ಪ್ರಚಂಡದ್ದದ್ದಾಗಿರಬೇಕು. ಅವಳೊಂದಿಗೆ 1,000 ಸೈನಿಕರು ಇದ್ದರು. ಖುಲಿ ಅವಳನ್ನು "ಹೈದರ್ ಮಹಲ್" (ಧೈರ್ಯಶಾಲಿ ಪ್ರಿಯೆ) ಎಂದು ವರ್ಣಿಸಿದ್ದಾನೆ. ಹೈದರಾಬಾದ್ ಮತ್ತು ಭಾಗ್ ನಗರ ಈ ಎರಡೂ ಹೆಸರೂ ಅವಳದ್ದೇ. ಅವಳು ಕಿರೀಟ ಧಾರಣೆ ಮಾಡುತ್ತಿದ್ದಳು. ಅವಳ ಸೌಂದರ್ಯ, ಪ್ರೀತಿ, ಸ್ವಭಾವ ಹಾಗೂ ಧೈರ್ಯವನ್ನು ವರ್ಣಿಸುತ್ತಾ ಅವಳೇಕೆ ಕಿರೀಟ ಧರಿಸಲು ಅರ್ಹಳು ಎಂದು ತನ್ನ ಕುಲಿಯತ್ ಕವಿತೆಯಲ್ಲಿ ವಿವರಿಸಿದ್ದಾನೆ ಮಹಮ್ಮದ್ ಖುಲಿ. ಕೆಲವರು ಭಾಗ್ ನಗರ ಎಂದರೆ ಉದ್ಯಾನಗಳ ನಗರವೆಂದು ಹೆಸರನ್ನು ತಿರುಚಲು ಯತ್ನಿಸಿದರೂ ಫ್ರೆಂಚ್ ಯಾತ್ರಿಕರ ಬರಹಗಳು ಇವನ್ನು ಅಲ್ಲಗಳೆಯುತ್ತವೆ. ತನ್ನ ಹೆಂಡತಿಯ ಇಚ್ಛೆಯಂತೆ ಅವಳ ಪ್ರೀತಿಗಾಗಿ ರಾಜನು ಅವಳ ಹೆಸರನ್ನು ಈ ನಗರಕ್ಕೆ ಇರಿಸಿದ್ದಾನೆಂದು ಆ ಯಾತ್ರಿಕರು ಬರೆದಿದ್ದಾರೆ. ಮಾತ್ರವಲ್ಲ ಭಾಗ್ಯನಗರದ ನಿರ್ಮಾಣದ ಹೊತ್ತಲ್ಲಿ ಅಲ್ಲಿ ಉದ್ಯಾನಗಳೇ ಇರಲಿಲ್ಲ. ಅಲ್ಲದೆ ಇಬ್ರಾಹಿಂನ ಯೋಜನೆಗಳ ವೈಫಲ್ಯದಿಂದಾಗಿ ಆ ಭಾಗಕ್ಕೆ ನೀರಾವರಿ ವ್ಯವಸ್ಥೆಯೂ ಸಮರ್ಪಕವಾಗಿರಲಿಲ್ಲ. ಇನ್ನೂ ಗಿಡಗಳು ಬೆಳೆಯುವುದೆಂತು? ಉದ್ಯಾನಗಳನ್ನು ನಿರ್ಮಿಸುವುದೆಂತು? ಹದಿನೇಳನೇ ಶತಮಾನದಿಂದೀಚೆಗೆ ಬಶೀರ್ ಬಾಘ್ ಹಾಗೂ ಹುಸೈನ್ ನಗರಗಳಲ್ಲಿ ಉದ್ಯಾನಗಳು ನಿರ್ಮಿತವಾದವಷ್ಟೇ. ಭಾಗ್ಯನಗರಕ್ಕೆ ಭಾಗ್ಯಮತಿಯ ಹೆಸರಿಡಲಾಗಿದೆ; ಉದ್ಯಾನಗಳಿಂದ ಆ ಹೆಸರು ಬಂದದ್ದಲ್ಲ ಎಂಬ ಅಂಶವು ನಾಣ್ಯಗಳ ಮೇಲೆ ಹೈದರಾಬಾದ್‌ನ ಕಾಲಸೂಚಕ ಹೆಸರು "ಫರ್ಖುಂಡಾ ಬುನ್ಯಾಡ್" ಎಂದಿರುವುದರಿಂದಲೇ ಸಾಬೀತಾಗಿದೆ. ಪರ್ಷಿಯನ್ ಭಾಷೆಯಲ್ಲಿ ಫರ್ಖುಂಡಾ ಎಂದರೆ ಅದೃಷ್ಟ (ಸಂಸ್ಕೃತದ ಭಾಗ್ಯ) ಎಂಬರ್ಥವೇ ಹೊರತು "ಉದ್ಯಾನಗಳು" (ಪರ್ಷಿಯನ್ನಿನ ಬಾಗ್) ಎಂದಲ್ಲ. ಅಲ್ಲದೆ ತೆಲುಗಿನಲ್ಲಿ ಭಾಗ್ ಹಾಗೂ ಭಾಗ್ಯ ಎರಡೂ ಸಮನಾರ್ಥಕ ಪದಗಳು.


          ಭಾಗಮತಿಯ ಅಸ್ತಿತ್ವಕ್ಕೆ ಸಮಕಾಲೀನ ಮೊಘಲ್ ಪುರಾವೆಗಳಿವೆ. ಅವಳ ಜೀವಿತಾವಧಿಯಲ್ಲಿ, ಅಬುಲ್ ಫಜಲ್'ನ ಸಹೋದರ 1591 ರಲ್ಲಿ ಹೈದರಾಬಾದಿಗೆ ಬಂದಿದ್ದ. ಅವನು ನೀಡಿರುವ ಸಾಕ್ಷ್ಯವು ಭಾಗಮತಿಯ ಅಸ್ತಿತ್ವವನ್ನು ಸಾಬೀತು ಮಾಡುವ ಮೂಲಕ ಆಕೆಯ ಐತಿಹಾಸಿಕತೆಯನ್ನು ನಿರಾಕರಿಸುವವರಿಗೆ ಕಪಾಳಮೋಕ್ಷ ಮಾಡುತ್ತಿದೆ. ಅವನು ಆಕೆಯನ್ನು ಘಾಟಿ ಹೆಂಗಸು, ವೇಶ್ಯೆ, ರಾಜನ ಹಳೆಯ ಪ್ರೇಯಸಿ ಎಂದು ಜರೆದು ಅವಳ ಮಾತು ಕೇಳಿ ಅಲ್ಲಿನ ಅರಸ, ಸರದಾರರು ನಮಗೆ ತೊಂದರೆ ಕೊಡುವವರೇ ಆಗಿದ್ದಾರೆ ಎಂದು ಬರೆದಿದ್ದಾನೆ. ಇನ್ನೊಬ್ಬ ಸಮಕಾಲೀನ ಮುಸ್ಲಿಂ ಚರಿತ್ರಕಾರ ನಿಜಾಮುದ್ದೀನ್ 1594 ರಲ್ಲಿ ಭಾಗಮತಿಯ ಬಗ್ಗೆ ಅವಳ ಜೀವಿತಾವಧಿಯಲ್ಲಿಯೇ ಬರೆದಿದ್ದಾನೆ. ಹೈದರಾಬಾದ್ / ಭಾಗ್ಯನಗರಕ್ಕೆ  ಅವಳ ಹೆಸರನ್ನು ಇಡಲಾಗಿದೆ ಎಂದು ಅವನು ಸಾಕ್ಷ್ಯ ನೀಡುತ್ತಾನೆ. ಆತನೂ ಆಕೆಯನ್ನು ಸುಲ್ತಾನನ ಹಿಂದೂ ವೇಶ್ಯೆ, ಅವಳ ಜೊತೆಗೆ ಸಾವಿರ ಕುದುರೆ ಸವಾರರನ್ನು ರಾಜ ಇಟ್ಟಿದ್ದಾನೆ ಎಂದು ಹೀನಾಯವಾಗಿ ಬರೆದಿದ್ದಾನೆ. ಇನ್ನೊಬ್ಬ ಸಮಕಾಲೀನ ಮುಸ್ಲಿಂ ಇತಿಹಾಸಕಾರ ಫೆರಿಷ್ತಾ, ಹೈದರಾಬಾದ್ / ಭಾಗ್ಯನಗರಕ್ಕೆ ಭಾಗ್ಮತಿಯ ಹೆಸರಿಡಲಾಗಿದೆ ಎಂದೇ ಬರೆದಿದ್ದಾನೆ. ಈ ಎಲ್ಲಾ ಮುಸ್ಲಿಂ ಇತಿಹಾಸಕಾರರು ಅವಳ ಬಗೆಗೆ ಅವಮಾನಕರ ಭಾಷೆ ಬಳಸಿದುದಕ್ಕೆ ಕಾರಣವೇನಿರಬಹುದು? ಆಕೆ ಮತಾಂತರವಾಗಿರದೇ ಇದ್ದುದು ಹಾಗೂ ನಗರಕ್ಕೆ ಆಕೆಯ(ಹಿಂದೂ ರಾಣಿಯ) ಹೆಸರಿನ್ನಿರಿಸಿರುವುದನ್ನು ಸಹಿಸಲು ಆ ಮತಾಂಧರಿಗೆ ಸಾಧ್ಯವಾಗಿಲ್ಲ ಅನ್ನಿಸುತ್ತದೆ. 19ನೇ ಶತಮಾನದಲ್ಲಿಯೂ ಈ ಹೆಸರನ್ನೇ ಬಳಸಲಾಗುತ್ತಿತ್ತು. ಬ್ರಿಟಿಷ್ ಇಐಸಿ ಕಾರ್ಟೋಗ್ರಾಫರ್ ಆರನ್ ಅರೋಸ್ಮಿತ್ ಅವರು 1816ರಲ್ಲಿ ತಾನು ಮಾಡಿದ ನಕ್ಷೆಯಲ್ಲಿ ಭಾಗ್ನಗರ್ ಎಂದೇ ನಮೂದಿಸಿದ್ದಾರೆ.


ಈ ಎಲ್ಲಾ ಸಾಕ್ಷ್ಯಗಳು ಹೈದರಾಬಾದಿಗೆ ಭಾಗಮತಿಯ ಹೆಸರಿಡಲಾಗಿದೆ ಎಂದು ಸ್ಪಷ್ಟವಾಗಿ ಹೇಳುತ್ತವೆ. ಆದರೂ ಭಾಗ್ಯಲಕ್ಷ್ಮಿ ದೇವಸ್ಥಾನಕ್ಕೆ ದಾಳಿ ಮಾಡಲಾಗಿದೆ. ಸೆಕ್ಯುಲರ್ ಬುದ್ಧಿಯ ಪುರಾತತ್ವ ಇಲಾಖೆ ಭಾಗ್ಯಲಕ್ಷ್ಮಿ ದೇವಸ್ಥಾನವನ್ನು "ಅನಧಿಕೃತ ನಿರ್ಮಾಣ" ಎಂದು ಕರೆದು ಅದನ್ನು ಧ್ವಂಸ ಮಾಡಲು ಮುಂದಾಗುತ್ತದೆ.


          ಪುರಾತತ್ವ ಇಲಾಖೆ ದೇವಾಲಯವನ್ನು "ಅನಧಿಕೃತ ನಿರ್ಮಾಣ" ಎಂದು ಕರೆದರೆ, ಸರ್ಕಾರದ ದತ್ತಿ ಇಲಾಖೆಯು ಚಾರ್ಮಿನಾರ್‌ನ ಭಾಗ್ಯಲಕ್ಷ್ಮಿ ದೇವಾಲಯವನ್ನು 'ನೋಂದಾಯಿತ ದೇವಾಲಯಗಳಲ್ಲಿ' ಒಂದೆಂದು ಪಟ್ಟಿಮಾಡಿದೆ! ರಾಜ್ಯ ಸರ್ಕಾರವು ದೇವಾಲಯದ ಆದಾಯವನ್ನು ತನ್ನ ಸೆಕ್ಯುಲರ್ ಉದ್ದೇಶಗಳಿಗಾಗಿ ಬಳಸಿಕೊಳ್ಳಲು ಹಿಂಜರಿದಿಲ್ಲ! 2012ರಲ್ಲಿ ದೇವಾಲಯದ ಸಂಘಟಕರು ದೀಪಾವಳಿಗಾಗಿ ತಾತ್ಕಾಲಿಕ ನಿರ್ಮಾಣವನ್ನು ಮಾಡಲು ಬಯಸಿದಾಗ, ಪೊಲೀಸರು ಅವರನ್ನು ಬಲವಂತವಾಗಿ ತಡೆದರು. ಒಂದೆಡೆ ದೇವಾಲಯದ ಆದಾಯವನ್ನು ಕಸಿದುಕೊಳ್ಳುವುದು ಇನ್ನೊಂದೆಡೆ ದೇವಾಲಯವನ್ನು "ಅನಧಿಕೃತ" ಎಂದು ಕರೆದು ತಾತ್ಕಾಲಿಕ ನಿರ್ಮಾಣಕ್ಕೂ ಅನುಮತಿಸುವುದಿಲ್ಲ ಎನ್ನುವ ಈ ಇಬ್ಬಗೆಯ ನೀತಿ ವಿಚಿತ್ರವಲ್ಲವೆ? ದೇವಾಲಯವು ಪಾರಂಪರಿಕ ತಾಣವಾದ ಚಾರ್ಮಿನಾರ್‌ಗೆ ಹಾನಿಯನ್ನುಂಟುಮಾಡುತ್ತಿದೆ ಮತ್ತು ಅದನ್ನು ತೆಗೆದುಹಾಕಬೇಕು ಎನ್ನುವ ಅವರು ಚಾರ್ಮಿನಾರ್ ಸಂಕೀರ್ಣದ ಒಳಗೆ ಮತ್ತು ಚಾರ್ಮಿನಾರ್ ಜಾಗವನ್ನು ಅತಿಕ್ರಮಿಸಿ ಇತ್ತೀಚೆಗೆ ನಿರ್ಮಿಸಲಾದ ಸೂಫಿ ಚಿಲ್ಲಾ ಬಗ್ಗೆ ಮೌನ ವಹಿಸುತ್ತಾರೆ! ಭಾಗ್ಯಲಕ್ಷ್ಮಿ ದೇವಸ್ಥಾನದ ಅರ್ಚಕರೂ ಸಹಾ ನಿಜಾಮನ ಕಾಲದಲ್ಲಿ ಚಾರ್ಮಿನಾರ್ ಪಕ್ಕದಲ್ಲಿ ದೇವಿಯನ್ನು ಹೊಂದಿರುವ ಶಾಶ್ವತ ದೇವಾಲಯವಿತ್ತು ಎಂದು ಹೇಳಿಕೊಂಡಿಲ್ಲ. ಬದಲಿಗೆ ಅವರು ಹೇಳಿದ್ದು ಅಲ್ಲಿ ತಲೆತಲಾಂತರದಿಂದ ಪವಿತ್ರ ಶಿಲೆಯಿದೆ ಮತ್ತು ದೀಪಾವಳಿಯ ಸಮಯದಲ್ಲಿ ಪೆಂಡಾಲ್ ಹಾಕಿ ಪೂಜಿಸಲಾಗುತ್ತಿತ್ತು ಎಂದು. ಇದರ ಬಗ್ಗೆ ಆಕ್ಷೇಪವೆತ್ತುವವರು ಹಲವು ಸಾವಿರ ದೇವಾಲಯಗಳನ್ನು ಮತಾಂಧರು ಭಗ್ನಗೊಳಿಸುದುದರ ಬಗ್ಗೆ ಯಾಕೆ ಮೌನವಹಿಸುತ್ತಾರೆ?


ರಾಮನದ್ದಾಯಿತು; ಕೃಷ್ಣನನ್ನೂ ಸೆರೆವಾಸದಿಂದ ಬಿಡಿಸಬೇಕಾಗಿದೆ...

 ರಾಮನದ್ದಾಯಿತು; ಕೃಷ್ಣನನ್ನೂ ಸೆರೆವಾಸದಿಂದ ಬಿಡಿಸಬೇಕಾಗಿದೆ...


 


         ಶ್ರೀ ವಲ್ಲಭರ ಮಧುರಾಷ್ಟಕವು "ಮಥುರಾಧಿಪತೇರಖಿಲಂ ಮಧುರಂ", ಶ್ರೀಕೃಷ್ಣನಿಗೆ ಸಂಬಂಧಿಸಿದ ಎಲ್ಲವೂ ಮಧುರವಾದುದು ಎಂದು ವರ್ಣಿಸುತ್ತಾ ಮಧುರ ಭಾವವನ್ನು ಉಂಟುಮಾಡುತ್ತದೆ. ಆದರೆ ಕೃಷ್ಣನ ಜೀವನವು ಮಧುರವಾಗಿತ್ತೇ ಎಂದು ನೋಡಿದರೆ ಅದು ಕಲ್ಲುಮುಳ್ಳುಗಳ ಹಾದಿಯಾಗಿದ್ದದ್ದು ಕಂಡುಬರುತ್ತದೆ. ಭಕ್ತರನ್ನು ಭವಬಂಧನದಿಂದ ಬಿಡುಗಡೆ ಮಾಡುವವನ ಜನ್ಮವೇ ಕಾರಾಗೃಹದ ಬಂಧನದಲ್ಲಾಯಿತು. ಜೀವ ಉಳಿಸಲು ಅಪ್ಪ ವಸುದೇವ ರಾತ್ರೋರಾತ್ರಿ ತುಂಬಿ ಹರಿಯುತ್ತಿದ್ದ ಯಮುನೆಯನ್ನು ದಾಟಿ ಗೋಕುಲದಲ್ಲಿ ಗೋಪಬಾಲನನ್ನು ತಂದಿರಿಸಬೇಕಾಯಿತು. ಮುಂದೆ ಕಂಸ ಕಳಿಸಿದ ಪೂತನಿ, ಶಕಟ, ಧೇನುಕ, ವತ್ಸ, ನಗ, ಹಯ, ವೃಷಭ, ಕಾಳಿಂಗರನ್ನು ಸದೆಬಡಿಯಬೇಕಾಯಿತು. ಕುವಲಪೀಡಾ, ಚಾಣೂರ, ಮುಷ್ಠಿಕರನ್ನು ಮೆಟ್ಟಿ ನಿಲ್ಲಬೇಕಾಯಿತು. ಮಲ್ಲಮಾವ ಕಂಸನನ್ನು ಸಂಹರಿಸಬೇಕಾಯಿತು. ಬಳಿಕವೂ ಎಷ್ಟು ಬಾರಿ ನಾಶಗೈದರೂ ಮತ್ತೆ ಮತ್ತೆ ದಾಳಿ ಎಸಗುತ್ತಿದ್ದ ಅಜ್ಜ(ಕಂಸನ ಮಾವ) ಜರಾಸಂಧನಿಂದ ನೆಮ್ಮದಿ ಕಾಣಲು ದ್ವಾರಕೆಗೆ ಹೋಗಿ ನೆಲೆಸಬೇಕಾಯಿತು. ಅಂತಹಾ ಕಠಿಣ ಜೀವನದಲ್ಲೂ ಸದಾ ಹಸನ್ಮುಖಿಯಾಗಿದ್ದ, ಭಕ್ತರಿಗೆ ಸದಾ ಮಧುರನಾಗಿದ್ದ ಮಥುರಾಧಿಪತಿಯನ್ನು ಭಕ್ತರು ಮಧುರಾಧಿಪತಿ ಎಂದೇ ಕೊಂಡಾಡಿದ್ದು ಸಹಜವೇ ಆಗಿದೆ. ಮಥುರಾಧಿಪತಿಗಿದ್ದ ಈ ಕಠಿಣ ಪರಿಸ್ಥಿತಿ ಆತನ ಜನ್ಮಸ್ಥಾನ ಮಥುರೆಗೂ ಬಂದಿತು. ಮತ್ತದು ತಮ್ಮದಲ್ಲದ್ದನ್ನು ಸದಾ ಭಂಜಿಸುವ ಬರ್ಬರ ಮತೀಯರಿಂದಲೇ ಎನ್ನುವುದು ಜಾತ್ಯಾತೀತರು ಮುಚ್ಚಿಡಲು ನೋಡಿದರೂ ತೆರೆದು ತೋರುತ್ತಿರುವ ಸತ್ಯ!


             ಪ್ರಾಚೀನ ಕಾಲದಲ್ಲಿ ಮಹಾರಣ್ಯವಾಗಿದ್ದ ಮಥುರಾ ಮಧು ರಾಕ್ಷಸನ ಅಂಕೆಗೆ ಒಳಪಟ್ಟಿತ್ತು. ಪ್ರಭು ಶ್ರೀರಾಮನ ಅಶ್ವಮೇಧದ ತುರಗವನ್ನು ತಡೆದ ಈತ ಹಾಗೂ ಈತನ ಮಗ ಲವಣಾಸುರ ಹಯವ ಕಾಯಲು ಬಂದ ಶತ್ರುಘ್ನನೊಡನೆ ಕಾದು ಮಡಿದರು. ಮಧುವನ, ಮಥುರಾ ಎಂದು ಶತ್ರುಘ್ನನಿಂದ ನಾಮಕರಣಗೊಂಡಿತು. ಮುಂದೆ ಅದು ಶತ್ರುಘ್ನನ ಮಗನಾದ ಶೂರಸೇನನ ಪಾಲಿಗೆ ಬಂತು. ಇಂತಹಾ ಮಥುರಾ ದ್ವಾಪರೆಯಲ್ಲಿ ಯದು ವಂಶಜರ ವಶಕ್ಕೆ ಬಂದು ರಾಜಾ ಉಗ್ರಸೇನನ ಆಳ್ವಿಕೆಯಲ್ಲಿ ಮೆರೆಯಿತು. ತಂದೆಯನ್ನು ಸೆರೆಗೆ ತಳ್ಳಿದ ಕಂಸ ಪ್ರಜಾಪೀಡಕನಾಗಿ ಮೆರೆದ. ಅಶರೀರವಾಣಿಯನ್ನು ಕೇಳಿ ತಂಗಿ-ಭಾವರನ್ನು ಸೆರೆಯಲ್ಲಿಟ್ಟು ಅವರಿಂದ ಜೀವ ತಳೆದ ಆರು ಮಕ್ಕಳನ್ನು ಅಪ್ಪಳಿಸಿ ಕೊಂದ. ಕೃಷ್ಣ ಬಲರಾಮರಿಬ್ಬರು ತಪ್ಪಿ, ಕೃಷ್ಣನನ್ನು ಕೊಲ್ಲುವ ಹಂಚಿಕೆಗಳೂ ವಿಫಲವಾಗಿ ಕೊನೆಗೆ ಅವರಿಂದಲೇ ಸಂಹರಿಸಲ್ಪಟ್ಟ. ಕೃಷ್ಣ ತನ್ನ ಅಜ್ಜ ಉಗ್ರಸೇನನನ್ನು ಸಿಂಹಾಸನದಲ್ಲಿ ಕುಳ್ಳಿರಿಸಿದ. ತನ್ನ ಅಳಿಯನ ಸಾವಿನಿಂದ ದುಃಖಿತನಾದ ಜರಾಸಂಧ ಕಾಲಯವನನನ್ನು ಜೊತೆ ಸೇರಿಸಿಕೊಂಡು ಯಾದವರ ಮೇಲೆ ಸತತ ಆಕ್ರಮಣ ಮಾಡಿದ. ಜರಾಸಂಧನ ಉಪಟಳದಿಂದ ತಪ್ಪಿಸಿಕೊಳ್ಳಲು ಕೃಷ್ಣ ದ್ವಾರಕೆಗೆ ತೆರಳಿದ.

 

             ಸಪ್ತಮೋಕ್ಷದಾಯಕ ಕ್ಷೇತ್ರಗಳಲ್ಲಿ ಮಥುರೆಯೂ ಒಂದು. ಸರ್ವಪಾಪಹರಳಾದ ಯಮುನೆಯ ತಟದಲ್ಲಿ ಸ್ಥಿತವಾದ ಮಥುರಾಮಂಡಲವು 20 ಯೋಜನಗಳಷ್ಟು ವ್ಯಾಪಿಸಿದೆ ಎಂದು ವರಾಹಪುರಾಣವು ವರ್ಣಿಸಿದೆ. ಶ್ರೀಕೃಷ್ಣನ ಬಾಲ ಲೀಲೆಗಳಿಗೆ ಸಾಕ್ಷಿಯಾಗಿ, ಗೋಕುಲ, ವೃಂದಾವನ, ಗೋವರ್ಧನಗಳಿಂದ ಒಡಗೂಡಿ ವ್ರಜಮಂಡಲವೆಂದು ಪ್ರಖ್ಯಾತಿಯಾದ ಈ ಪ್ರದೇಶ ಅತ್ಯಂತ ಸಮೃದ್ಧ ಪ್ರದೇಶವಾಗಿತ್ತು. ಭಾಗವತ ಸಂಪ್ರದಾಯವೂ ಇಲ್ಲೇ ಮೊಳಕೆಯೊಡೆಯಿತು. ಬುದ್ಧನ ಪದಸ್ಪರ್ಶದಿಂದ ಪುನೀತವಾಯಿತು. ಜೊತೆಗೆ ವೈದಿಕ ಮತಕ್ಕೂ ಇಲ್ಲಿ ಗ್ರಹಣ ಹಿಡಿಯಿತು. ಉಪಗುಪ್ತ, ಅಶೋಕರಿಂದಾಗಿ ಹಿಂದೂಗಳನ್ನು ಬೌದ್ಧ ಮತಕ್ಕೆ ಮತಾಂತರಿಸುವ ಕೇಂದ್ರವಾಯಿತು. ಉಪಗುಪ್ತ ಮಥುರಾ ಹಾಗೂ ಸುತ್ತಮುತ್ತಲಿನ ಹಿಂದೂಗಳನ್ನು ಬೌದ್ಧರನ್ನಾಗಿಸಿದ. ಅವನಿಂದ ಮತಾಂತರಗೊಂಡ ಹದಿನೆಂಟು ಸಾವಿರಕ್ಕೂ ಹೆಚ್ಚು ಮಂದಿ ಬೌದ್ಧ ಮತ ಪ್ರಚಾರಕ್ಕೆ ದೇಶವಿದೇಶಗಳಲ್ಲಿ ಹರಡಿಕೊಂಡರು. ಅಶೋಕ ನಡೆಸುತ್ತಿದ್ದ ಬಲವಂತದ ಮತಾಂತರ ಜಗತ್ಪ್ರಸಿದ್ಧ. ಹ್ಯೂಯೆನ್ ತ್ಸಾಂಗ್ ಮಥುರಾಕ್ಕೆ ಭೇಟಿ ಕೊಟ್ಟಾಗ ಅಲ್ಲಿ ಐದು ಮಂದಿರಗಳು, ಅಶೋಕನು ಕಟ್ಟಿಸಿದ ಮೂರು ಸ್ತೂಪಗಳು, ಇಪ್ಪತ್ತು ಬೌದ್ಧವಿಹಾರಗಳು ಇದ್ದುದನ್ನು ದಾಖಲಿಸಿದ್ದಾನೆ. ಬಳಿಕ ಕುಶಾನರ ಕಾಲದಲ್ಲಿ ಮಥುರಾದಲ್ಲಿ ಜೈನರ ಪ್ರಭಾವ ಹೆಚ್ಚಿತು. ಹೀಗಿದ್ದ ಮಥುರಾದಲ್ಲಿ ವೈದಿಕಧರ್ಮ ಪುನರುಜ್ಜೀವನಗೊಂಡದ್ದು ಶ್ರೀಶಂಕರವಿಜಯದ ಬಳಿಕವೇ.


             ಇಂದಿರುವ ಕೃಷ್ಣಜನ್ಮಭೂಮಿ ದೇವಾಲಯವು ಕೃಷ್ಣನು ಜನಿಸಿದ ನಿಜವಾದ ಸ್ಥಳವಲ್ಲ. ಇದು ಕೃಷ್ಣನ ನಿಜವಾದ ಜನ್ಮಸ್ಥಳದ ಪಕ್ಕದಲ್ಲಿ ನಿರ್ಮಿಸಲ್ಪಟ್ಟ ದೇವಾಲಯ. 1949ರಲ್ಲಿ ತೆಗೆದ ಮಥುರಾದ ಶಾಹಿ ಈದ್ಗಾದ ಚಿತ್ರ ಇದನ್ನು ಸ್ಪಷ್ಟಪಡಿಸುತ್ತದೆ. ಶಾಹಿ ಈದ್ಗಾದ ತಳಪಾಯದಲ್ಲಿ ಮತ್ತು ಅದರ ಸುತ್ತಲೂ ಭಗ್ನಗೊಂಡ ದೇವಾಲಯದ ಅವಶೇಷಗಳನ್ನು ಕಾಣಬಹುದು. ಈ ಅವಶೇಷಗಳ ಮೇಲ್ಭಾಗದಲ್ಲಿ ಪುರಾತತ್ವ ಇಲಾಖೆಯಿಂದ ನಿಲ್ಲಿಸಲ್ಪಟ್ಟ "ಶ್ರೀಕೃಷ್ಣಜನ್ಮಭೂಮಿ" ಎಂಬ ಫಲಕವನ್ನು ನೋಡಬಹುದು. "ಹಿಂದೂಗಳು ತಮ್ಮ ದೇವರಾದ ಭಗವಾನ್ ಶ್ರೀಕೃಷ್ಣನ ಜನ್ಮಸ್ಥಾನವೆಂದು ನಂಬುವ ಜಾಗ" ಎಂಬ ಉಲ್ಲೇಖ ಈ ಫಲಕದಲ್ಲಿದೆ. ಹಿಂದೆ ಇಲ್ಲಿ ಭವ್ಯವಾದ ಕೇಶವದೇವ ಮಂದಿರವಿತ್ತು. ಮಹಮದ್ ಘಜನಿ ಎಂಬ ಮತಾಂಧ ಸಾಮಾನ್ಯ ಯುಗ 1017ರಲ್ಲಿ ಮಥುರಾದ ಮೇಲೆ ದಾಳಿ ಮಾಡಿದ. ನಗರದ ಸಕಲ ಸಂಪತ್ತನ್ನು ದೋಚಿ ಮಥುರೆಗೆ ಬೆಂಕಿ ಇಟ್ಟ. ಚಿನ್ನದ ದೊಡ್ಡ ಐದು ವಿಗ್ರಹಗಳು ಸೇರಿದಂತೆ 25ಸಾವಿರ ಪೌಂಡ್ ಸಂಪತ್ತನ್ನು ಆತ ದೋಚಿದ. ಬಳಿಕ ಮಥುರಾದ ಮೇಲೆ ದಾಳಿಯೆಸಗಿದವ ಸಿಕಂದರ್ ಲೋದಿ, 1500ರಲ್ಲಿ. 1618 ರಲ್ಲಿ, ಓರ್ಛಾ ರಾಜ ವೀರ್ ಸಿಂಗ್ ದೇವಾ ಬುಂದೇಲಾ 33ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಮಂದಿರವನ್ನು ಮರು ನಿರ್ಮಿಸಿದ. ನೆನಪಿರಲಿ ಆ ಕಾಲದಲ್ಲಿ ಒಂದು ರೂಪಾಯಿ, 296ಕೆಜಿ ಅಕ್ಕಿಗೆ ಸಮನಾಗಿತ್ತು. ಅಂದರೆ ಈ ಬೃಹತ್ ಮೊತ್ತದ ಮೌಲ್ಯವೆಷ್ಟೆಂದು ಊಹಿಸಿಕೊಳ್ಳಬಹುದು.


             ಆದರೆ ಮಥುರೆಯ ಭವಿಷ್ಯ ಮಧುರವಾಗಲಿಲ್ಲ. ಮುಂದೆ ಅದು ಮತಾಂಧ ಔರಂಗಜೇಬನ ಬರ್ಬರತೆಗೆ ಬಲಿಯಾಯಿತು. 1670ರಲ್ಲಿ ಔರಂಗಜೇಬನ ಆದೇಶದ ಮೇರೆಗೆ ಅಬ್ದ-ಇನ್-ನಬೀರಖಾನ್ ಜನ್ಮಸ್ಥಾನದಲ್ಲಿದ್ದ ಕೇಶವದೇವ ಮಂದಿರವನ್ನು ನೆಲಸಮಗೊಳಿಸಿ ಅದರ ಅವಶೇಷಗಳನ್ನು ಬಳಸಿಕೊಂಡು ಶಾಹಿ ಈದ್ಗಾವನ್ನು ನಿರ್ಮಿಸಿದ. ಅಂದಿನಿಂದ ಅದನ್ನು ಮರಳಿ ಪಡೆಯಲು ಹಿಂದೂಗಳ ಹೋರಾಟ ಇಂದಿಗೂ ಜಾರಿಯಲ್ಲಿದೆ. 18ನೇ ಶತಮಾನದಲ್ಲಿ ಮರಾಠರು ಮಥುರಾ ಮಾಲೀಕತ್ವವನ್ನು ಪಡೆಯಲು ಪ್ರಯತ್ನಿಸಿದರು. ಆದರೆ ಸಾಧ್ಯವಾಗಲಿಲ್ಲ. 1804ರಲ್ಲಿ ಮಥುರಾ ಬ್ರಿಟಿಷರ ನಿಯಂತ್ರಣಕ್ಕೆ ಬಂತು. 1815ರಲ್ಲಿ ಈಸ್ಟ್ ಇಂಡಿಯಾ ಕಂಪನಿ, ಕೃಷ್ಣ ಜನ್ಮಭೂಮಿಯ 13.37 ಎಕರೆ ಭೂಮಿಯನ್ನು ಹರಾಜು ಹಾಕಿತು. ಆಗ ಇದನ್ನು ಬನಾರಸ್‌ನ ಶ್ರೀಮಂತ ಬ್ಯಾಂಕರ್ ರಾಜ ಪತ್ನಿಮಲ್ 45 ಲಕ್ಷಕ್ಕೆ ಖರೀದಿಸಿದರು. ಅದರಲ್ಲಿ ಶಾಹಿ ಈದ್ಗಾವೂ ಸೇರಿತ್ತು. ಆ ದಿನಗಳಲ್ಲಿ ಈ ಮಸೀದಿ ಹಿಂದೂ ಅವಶೇಷಗಳ ಮೇಲೆ ನಿರ್ಮಿಸಲಾದ, ಕೈಬಿಟ್ಟ, ಯಾವುದೇ ರೀತಿಯ ಚಟುವಟಿಕೆಗಳಿಲ್ಲದ ಸ್ಥಳವಾಗಿತ್ತು. 1921ರಲ್ಲಿ ಮುಸ್ಲಿಮರು ಈ ಭೂಮಿಯ ಮೇಲಿನ ಮಾಲಿಕತ್ವವನ್ನು ಪ್ರಶ್ನಿಸಿದರು. 1935ರಲ್ಲಿ  ಅಲಹಾಬಾದ್ ಹೈಕೋರ್ಟ್ ರಾಜಾ ಪತ್ನಿಮಲ್ ಅವರ ವಂಶಸ್ಥರ ಪರವಾಗಿ ತೀರ್ಪು ನೀಡಿತು. ಗಮನಿಸಿ ಈಸ್ಟ್ ಇಂಡಿಯಾ ಕಂಪನಿಯು ಹರಾಜು ಹಾಕಿದಾಗ ಯಾವುದೇ ಮುಸ್ಲಿಮರು ಈ ಭೂಮಿಯನ್ನು ಖರೀದಿಸಲು ಮುಂದೆ ಬರಲಿಲ್ಲ. ಆದರೆ ಭೂಮಿಯನ್ನು ಖರೀದಿಸಿದ ನಂತರ, ಅವರು ನ್ಯಾಯಾಲಯಗಳಲ್ಲಿ ಮಾಲೀಕತ್ವವನ್ನು ಪ್ರಶ್ನಿಸಲು ಪ್ರಾರಂಭಿಸಿದರು. ಇದರಿಂದ ಇಂದಿನ ಕಾಲದಲ್ಲೂ ಜಗಳಕ್ಕೆ ಮೂಲಕಾರಣರು ಯಾರು ಎನ್ನುವ ಅಂಶ ತಿಳಿಯುತ್ತದೆ. ಜೊತೆಗೆ ತಮ್ಮದಲ್ಲದ ಭೂಮಿಯನ್ನು ಕಿತ್ತುಕೊಳ್ಳಲು ಹವಣಿಸುವ ಆಕ್ರಮಣಕಾರೀ ಮನಸ್ಥಿತಿಯಿಂದ ಹೊರಬರಲಾಗದ ಕುರಾನ್ ಪೀಡಿತರ ಧೋರಣೆಯನ್ನು ಪ್ರತ್ಯಕ್ಷೀಕರಿಸುತ್ತದೆ. ರಾಜಾ ಪತ್ನಿಮಲ್ ಅವರ ವಂಶಸ್ಥರ ಪರವಾಗಿ ನ್ಯಾಯಾಲಯವು ತೀರ್ಪು ನೀಡಿದ ನಂತರವೂ, ಸ್ಥಳೀಯ ಮುಸ್ಲಿಮರ ಸತತ ಬೆದರಿಕೆ ಹಾಗೂ ಅಡಚಣೆಯುಂಟುಮಾಡುವ ಪ್ರವೃತ್ತಿಯಿಂದಾಗಿ ಅಲ್ಲಿ ದೇವಾಲಯವನ್ನು ಮರುನಿರ್ಮಿಸುವ ಯೋಜನೆಯನ್ನು ಮುಂದುವರಿಸಲು ಆಗಲೇ ಇಲ್ಲ. 1944ರಲ್ಲಿ ಪತ್ನಿಮಲ್ ವಂಶಜರು ಈ ಭೂಮಿಯನ್ನು ಮದನ್ ಮೋಹನ್ ಮಾಳವೀಯ, ಗಣೇಶ ಗೋಸ್ವಾಮಿ, ಭಿಕೆನ್ ಲಾಲರಿಗೆ ಮಾರಾಟ ಮಾಡಿದರು.


            1947ರ ಬಳಿಕ ಬಿರ್ಲಾ ಈ ಭೂಮಿಯನ್ನು ಖರೀದಿಸಿದರು. ಆತ ಕೃಷ್ಣ ಜನ್ಮಭೂಮಿ ಟ್ರಸ್ಟ್ ಅನ್ನು ರಚಿಸಿದರು. 1968ರಲ್ಲಿ, ಟ್ರಸ್ಟ್ ಮತ್ತು ಶಾಹಿ ಈದ್ಗಾ ಸಮಿತಿಯ ನಡುವೆ ಒಪ್ಪಂದವೊಂದು ನಡೆದು ಮಸೀದಿಯ ಪಕ್ಕದ ಭೂಮಿ ಟ್ರಸ್ಟ್‌ಗೆ ಸೇರಿತು ಮತ್ತು ಈದ್ಗಾ ನಿರ್ವಹಣೆ ಈದ್ಗಾ ಸಮಿತಿಗೆ ಸೇರಿತು. ಆದರೆ ಈದ್ಗಾದ ಮೇಲೆ ಟ್ರಸ್ಟ್‌, ಕಾನೂನು ರೀತಿ ಯಾವುದೇ ಹಕ್ಕನ್ನು ಪಡೆಯುವಂತಿರಲಿಲ್ಲ! ಸಂಕ್ಷಿಪ್ತವಾಗಿ ಹೇಳುವುದಾದರೆ ಈ ಒಪ್ಪಂದವು ಮೂಲ ಕೃಷ್ಣ ದೇವಾಲಯದ ಮೇಲ್ಭಾಗದಲ್ಲಿ ನಿರ್ಮಿಸಲಾದ ಶಾಹಿ ಈದ್ಗಾದ ಅಸ್ತಿತ್ವವನ್ನು ಗುರುತಿಸಿತು. ಅಲ್ಲಿಯವರೆಗೆ ಆ ಮಸೀದಿಗೆ ಕಾನೂನು ರೀತ್ಯಾ ಯಾವುದೇ ಅಸ್ತಿತ್ವವಿರಲಿಲ್ಲ. ಈ ಒಪ್ಪಂದದ ಬಳಿಕವೇ ಆ ಮಸೀದಿಯಲ್ಲಿ ಕಾರ್ಯಚಟುವಟಿಕೆ ಆರಂಭಗೊಂಡಿತು. ಒಪ್ಪಂದಕ್ಕೆ ಬರುವ ಮೊದಲು ಯಾವುದೇ ಹಿಂದೂ ಸಂಘಟನೆ ಅಥವಾ ಸಾರ್ವಜನಿಕರನ್ನು ಸಂಪರ್ಕಿಸಿಲ್ಲ ಎಂಬುದನ್ನು ಗಮನಿಸಬೇಕು. ಇದು ನೇರವಾಗಿ ಬಿರ್ಲಾಗಳು ಹಾಗೂ ಶಾಹಿ ಈದ್ಗಾ ಸಮಿತಿಯ ನಡುವೆ ಇತ್ತು. ಈ ಒಪ್ಪಂದವು ಹಿಂದೂಗಳಿಗೆ ಈದ್ಗಾದ ದಕ್ಷಿಣಕ್ಕೆ ಒಂದು ಸಣ್ಣ ತುಂಡು ಭೂಮಿಯನ್ನಷ್ಟೇ ನೀಡಿತು. ಇದೇ ಒಪ್ಪಂದದ ಮೇರೆಗೆ ವಿವಾದಿತ ಸ್ಥಳದಲ್ಲಿ ಯಾವುದೇ ಬದಲಾವಣೆ ಮಾಡಬಾರದು; ನಿರ್ಮಾಣಗಳ ಯಥಾಸ್ಥಿತಿಯನ್ನು ಕಾಪಾಡಿಕೊಳ್ಳಬೇಕು ಎಂದು ಮಥುರಾ ಸಿವಿಲ್ ಕೋರ್ಟ್ ತೀರ್ಪು ನೀಡಿತು. ಅಂದರೆ ಈ ಒಪ್ಪಂದದಿಂದ ಹಿಂದೂಗಳು ಮೋಸ ಹೋಗಿದ್ದಾರೆಂದು ಬೇರೆ ಹೇಳಬೇಕಾಗಿಲ್ಲ. ಆಧುನಿಕ ಕೃಷ್ಣ ಜನ್ಮಭೂಮಿ ದೇವಾಲಯವು 1982 ರಲ್ಲಿ ಪೂರ್ಣಗೊಂಡಿತು. ವೃಂದಾವನದ ನಿವಾಸಿ ಮನೋಹರ್ ಲಾಲ್ ಶರ್ಮಾ ಅವರು 1968ರ ಒಪ್ಪಂದವನ್ನು ಪ್ರಶ್ನಿಸಿ ಮಥುರಾ ಜಿಲ್ಲಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದರು ಮತ್ತು 1947 ರ ಆಗಸ್ಟ್ 15 ರಂದು ಇದ್ದಂತೆ ಎಲ್ಲ ಪೂಜಾ ಸ್ಥಳಗಳಲ್ಲಿ ಯಥಾಸ್ಥಿತಿಯನ್ನು ಕಾಪಾಡುವ "ಧಾರ್ಮಿಕ ಪೂಜಾ ಸ್ಥಳ ಕಾಯಿದೆ - 1991"ನ್ನು ರದ್ದುಗೊಳಿಸುವ ಮನವಿಯನ್ನು ಸಲ್ಲಿಸಿದರು. ಈ ಪ್ರಕರಣ ಇನ್ನೂ ನ್ಯಾಯಾಲಯದಲ್ಲಿ ಬಾಕಿ ಇದೆ.



          ಶಿವ, ರಾಮ, ಕೃಷ್ಣರು ಈ ದೇಶದ ಅಸ್ಮಿತೆಗಳು. ಮರ್ಯಾದಾ ಪುರುಷೋತ್ತಮನ ಜನ್ಮಸ್ಥಾನದ ವಿವಾದ ಬಗೆಹರಿದು ಮಂದಿರದ ಕಾರ್ಯವೇನೋ ಆರಂಭವಾಗಿದೆ. ಕಾಶಿ ವಿಶ್ವೇಶನ ದೇವಾಲಯ ಹಾಗೂ ಕೃಷ್ಣನ ಜನ್ಮಸ್ಥಾನ ಭಕ್ತರಿಗಾಗಿ ಕಾಯುತ್ತಿವೆ. ಸರಕಾರ, ನ್ಯಾಯಾಲಯಗಳೂ ಇದಕ್ಕೆ ಮನಸ್ಸು ಮಾಡಿ ಮುಂದಡಿಯಿಡಬೇಕಿದೆ. ಮಥುರಾಧೀಶನ ಜನ್ಮಸ್ಥಾನದಲ್ಲೇ ಅವನ ಪ್ರತಿಷ್ಠೆ ಮಧುರವಾಗಿ ನೆರವೇರಲಿ. ಜೊತೆಗೆ ಗೋಪಾಲನ ಭೂಮಿಯಲ್ಲಿ ನಿರ್ಭಯದ ಗೋಪಥವೂ ನಿರ್ಮಾಣವಾಗಲಿ.

ಭಾರತದ ಬೌದ್ಧಿಕ ಕ್ಷತ್ರಿಯ ಈ ಸೀತಾರಾಮ

 ಭಾರತದ ಬೌದ್ಧಿಕ ಕ್ಷತ್ರಿಯ ಈ ಸೀತಾರಾಮ




             ಪುಸ್ತಕವೊಂದರ ಮುದ್ರಣ ಮುಗಿದು ರಕ್ಷಾಕವಚವನ್ನು ಹಾಕಿಸಲು ಜೋಡಿಸಿ ಇಡಲಾಗಿತ್ತು. ಮುದ್ರಣಾಲಯದ ಕೆಲಸಗಾರರಲ್ಲಿ ಮುಸ್ಲಿಮರೂ ಇದ್ದರು. ಪುಸ್ತಕಕ್ಕೆ ರಕ್ಷಾಕವಚವನ್ನು ಹಾಕುವ ಮುಸ್ಲಿಂ ಹುಡುಗನೊಬ್ಬ ಅದರಲ್ಲಿದ್ದ ಇಸ್ಲಾಮ್, ಹದೀಸ್ ಎಂಬ ಪದಗಳನ್ನು ಕಂಡು ಒಂದು ಪುಸ್ತಕವನ್ನು ತೆಗೆದುಕೊಂಡು ಹೋಗಿ ಇಮಾಮ್ ಒಬ್ಬನ ಕೈಲಿಟ್ಟ! ತಾಸಿನೊಳಗಾಗಿ ಒಂದು ದೊಡ್ಡ ಮತಾಂಧ ಗುಂಪು ಮುದ್ರಣಾಲಯಕ್ಕೆ ಬಂತು. ಲೇಖಕ, ಪ್ರಕಾಶಕರಿಬ್ಬರೂ ಹಿಂದೂಗಳು; ಹಿಂದೂಗಳು ಇಸ್ಲಾಮ್ ಬಗ್ಗೆ ಬರೆದಿದ್ದಾರೆಂದರೆ ಅದು ತಮ್ಮ ಮತದ ನಿಂದನೆಯೇ ಆಗಿರಬೇಕು ಎಂದು ಸದಾ ಭಾವಿಸುವ ಆ ಅಸಹನೀಯ ವರ್ಗ ತಕ್ಷಣವೇ ಮುದ್ರಣಾಲಯಕ್ಕೆ ಬೆಂಕಿ ಹಚ್ಚುವುದಾಗಿ ಘೋಷಿಸಿತು. ಬೆಂಕಿ ಹಚ್ಚುವುದೆಂದರೆ ಅವರಿಗೆ ಆಟವಾಡಿದಂತೆ ನೋಡಿ. ನ್ಯೂಯಾರ್ಕ್, ಪ್ಯಾರಿಸ್, ನೈಜೀರಿಯಾ, ದೆಹಲಿ, ಬೆಂಗಳೂರು ಹೀಗೆ ವಿವಿಧ ಭೂಪ್ರದೇಶದಲ್ಲಿ, ವಿವಿಧ ಸಂಸ್ಕೃತಿ, ಸಂಸ್ಕಾರ, ಕಾನೂನು, ಮತಧರ್ಮಗಳನ್ನು ಪಾಲಿಸುವ ಜನರ ನಡುವಿನಲ್ಲಿ ಎಲ್ಲೇ ಇದ್ದರೂ ಅವರ ಬೆಂಕಿ ಹಚ್ಚುವಿಕೆಯಲ್ಲಿ ವ್ಯತ್ಯಾಸವಾಗದು! ಬೆದರಿದ ಮುದ್ರಣಾಲಯದ ಮಾಲಕ ಪ್ರಕಾಶಕರಿಗೆ ಕರೆ ಮಾಡಿ "ದಯವಿಟ್ಟು ನಿಮ್ಮ ಪುಸ್ತಕ ತೆಗೆದುಕೊಂಡು ಹೋಗಿ ಬಿಡಿ. ಜನರ ಗುಂಪೇ ಜಮೆಯಾಗಿದೆ. ನನ್ನ ಬಳಿ ಕೆಲಸ ಮಾಡುವ ಮುಸ್ಲಿಂ ಹುಡುಗರೇ ಬೆಂಕಿ ಹಚ್ಚಲು ತಯಾರಾಗಿ ನಿಂತಿದ್ದಾರೆ" ಎಂದು ಗೋಗರೆದ. ಪುಸ್ತಕಗಳನ್ನು ತೆಗೆದುಕೊಂಡು ಹೋದ ಪ್ರಕಾಶಕರು, ನಿರೀಕ್ಷಣಾ ಜಾಮೀನನ್ನು ಪಡೆದುಕೊಂಡು, ಛಲದಿಂದ ಪುಸ್ತಕವನ್ನು ಪ್ರಕಟಿಸಿಯೇ ಬಿಟ್ಟರು. ಅಸಹನೀಯ ವರ್ಗ ನ್ಯಾಯಾಲಯದ ಬಾಗಿಲು ತಟ್ಟಿತು. ಭಯೋತ್ಪಾದಕರಿಗಾಗಿ ರಾತ್ರೋರಾತ್ರಿ ಬಾಗಿಲು ತೆರೆಯುವ ವ್ಯವಸ್ಥೆ ಇರುವ ನ್ಯಾಯಾಲಯ ನಮ್ಮ ದೇಶದ್ದು! ಇನ್ನು ಇದನ್ನು ಬಿಟ್ಟೀತೇ? ನ್ಯಾಯಾಲಯ ಎಂಟು ಜನರ ತಂಡವನ್ನು ಪುಸ್ತಕದ ಪರಿಶೀಲನೆಗಾಗಿ ನೇಮಿಸಿತು. ದಶಕಕ್ಕೂ ಹೆಚ್ಚು ಕಾಲ ನಡೆದ ವಿಚಾರಣೆಯ ಕೊನೆಗೆ, ಪುಣ್ಯಕ್ಕೆ, "ಆ ಪುಸ್ತಕದಲ್ಲಿ ಇಸ್ಲಾಮಿಗೆ ಅವಹೇಳನವಾಗುವಂಥಾದ್ದು ಏನೂ ಇಲ್ಲ. ಪುಸ್ತಕದಲ್ಲಿನ ಅರ್ಥಗಳು ಮೂಲಕ್ಕೆ ನಿಷ್ಠವಾಗಿವೆ. " ಎಂಬ ತೀರ್ಪು ಬಂತು. ಆದರೆ ಮುಸ್ಲಿಮರ ಮತೀಯ ನಂಬಿಕೆಗೆ ಧಕ್ಕೆ ಉಂಟುಮಾಡಿದೆ ಎಂಬ ನೆಪವೊಡ್ಡಿ ಆಗಿನ ಕೇಂದ್ರ ಸರಕಾರ ಆ ಪುಸ್ತಕವನ್ನು ನಿಷೇಧಿಸಿತು. ಈ ದೇಶದಲ್ಲಿ ಹಿಂದೂಗಳು ಅಸಹಿಷ್ಣುಗಳು ಎಂದು ಕಳೆದ ಆರು ವರ್ಷಗಳಿಂದ ಬೊಬ್ಬೆ ಹಾಕಲಾಗುತ್ತಿದೆ. ಆದರೆ ನಿಜವಾದ ಅಸಹಿಷ್ಣುಗಳು ಯಾರು, ನಿಜವಾದ ಅಸಹನೆ ಯಾರಲ್ಲಿದೆ ಎಂದು ಇತಿಹಾಸವನ್ನು, ವರ್ತಮಾನವನ್ನು ಸೆಕ್ಯುಲರ್ ಪರದೆಯನ್ನು ಸರಿಸಿದ ಕಣ್ಣಿನಿಂದ ವೀಕ್ಷಿಸಿದರೆ ಅರಿವಾದೀತು. ಅಂದ ಹಾಗೆ ಆ ಪುಸ್ತಕದ ಹೆಸರು “ ಅಂಡರ್ಸ್ಟ್ಯಾಂಡಿಂಗ್ ಇಸ್ಲಾಮ್ ಥ್ರೂ ಹದೀಸ್”. ಬರೆದವರು ಶ್ರೀ ರಾಮಸ್ವರೂಪರು. ಛಲ ಬಿಡದ ಆ ಪ್ರಕಾಶಕ ಶ್ರೀ ಸೀತಾರಾಮ ಗೋಯಲ್. ಆಧುನಿಕ ಭಾರತದ  ಬೌದ್ಧಿಕ ನವಕ್ಷತ್ರಿಯರು.


           ಹರ್ಯಾಣದ ಬಡ ಕುಟುಂಬವೊಂದರಲ್ಲಿ 1921ರ ಅಕ್ಟೋಬರ್ 16ರಂದು ಸೀತಾರಾಮ ಗೋಯಲರ ಜನನವಾಯಿತು. ಹದಿನೆಂಟನೇ ಶತಮಾನದ ಪೂರ್ವಾರ್ಧದಲ್ಲಿ, ಅನಕ್ಷರಸ್ಥರಾಗಿದ್ದರೂ ಹದಿನೆಂಟು ಸಾವಿರ ಪದ್ಯಗಳನ್ನು ರಚಿಸಿ ಹಾಡುತ್ತಿದ್ದ ಸಂತ ಗರೀಬದಾಸರ ಪ್ರಭಾವ ಗೋಯಲರ ಪೂರ್ವಿಕರ ಮೇಲಾಗಿತ್ತು. ಆ ಪದ್ಯಗಳಿಂದಲೇ ಗೋಯಲರ ಪೂರ್ವಿಕರ ಸುಪ್ರಭಾತವಾಗುತ್ತಿತ್ತು. ಅವರ ತಂದೆ ಓದುತ್ತಿದ್ದ ಗುರು ಗ್ರಂಥ್ ಸಾಹೇಬ್, ಕಬೀರ, ಗುರು ನಾನಕ್, ರವಿದಾಸ್, ನಾಮದೇವ, ಧನ್ನ ಮುಂತಾದ ಸಂತರ ಕತೆಗಳು ಬಾಲಕ ಗೋಯಲರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದು ಬಿಟ್ಟವು. ಅಂತೆಯೇ ಸೂಫಿ ಸಂತರ ಕತೆಗಳೂ ಅವರನ್ನು ಪ್ರಭಾವಿಸಿದವು. ಕ್ರಾಂತಿಕಾರಿ ಜತೀಂದ್ರನಾಥ ದಾಸರ ಪಾರ್ಥಿವ ಶರೀರದ ಮೆರವಣಿಗೆ, ಉಪ್ಪಿನ ಸತ್ಯಾಗ್ರಹ, ಕ್ರಾಂತಿಕಾರಿ ಸರ್ದಾರ್ ಭಗತ್ ಸಿಂಗರ ಬಲಿದಾನಗಳು ಬಾಲಕ ಗೋಯಲ್‍ಗೆ ನಮ್ಮ ದೇಶಕ್ಕೊದಗಿರುವ ದುಃಸ್ಥಿತಿಯನ್ನು ಅರಿವಿಗೆ ತಂದುಕೊಟ್ಟಿತು.


           ಗೋಯಲರಿದ್ದ ಹಳ್ಳಿಯಲ್ಲಿ ಆರ್ಯ ಸಮಾಜದ ಪ್ರಭಾವ ಬಹಳವಿತ್ತು. ನಿರ್ಗುಣ ಪರಂಪರೆಯ ಗರೀಬದಾಸರ ಶಿಷ್ಯರಾದ ಕಾರಣ ಆ ಪರಂಪರೆಯ ಪ್ರಭಾವವೇ ಅವರ ಪರಿವಾರದ ಮೇಲೆ ಬಹಳವಿದ್ದು ಗಂಡಸರು ಮೂರ್ತಿಪೂಜೆಯಲ್ಲಿ ಅಷ್ಟಾಗಿ ಭಾಗವಹಿಸುತ್ತಿರಲಿಲ್ಲ. ಸ್ವಾತಂತ್ರ್ಯ ಹೋರಾಟಗಾರರಾಗಿ ಜೈಲು ವಾಸ ಅನುಭವಿಸಿದ್ದಲ್ಲದೆ, ಹರಿಜನೋದ್ಧಾರಕ್ಕಾಗಿ ಶ್ರಮಿಸುತ್ತಿದ್ದ ಅವರ ಸಮುದಾಯದ ಓರ್ವ ವ್ಯಕ್ತಿಯ ಜೀವನಾದರ್ಶಗಳು ಗೋಯಲರ ಮೇಲೆ ಗಾಢ ಪ್ರಭಾವನ್ನುಂಟುಮಾಡಿತು. "ಸತ್ಯಾರ್ಥ ಪ್ರಕಾಶ"ದ ಪ್ರಖರ ವಿಚಾರಗಳು ಗೋಯಲರ ವಿಚಾರ ಧಾರೆಗೆ ಇನ್ನಷ್ಟು ಪಕ್ವತೆಯನ್ನು ತಂದುಕೊಟ್ಟಿತು. ರೋಮಾರೋಲಾ ಬರೆದ ಶ್ರೀರಾಮಕೃಷ್ಣ ಪರಮಹಂಸರ, ವಿವೇಕಾನಂದರ ಜೀವನ ಚರಿತ್ರೆಗಳು ಅವರನ್ನು ಅಧ್ಯಾತ್ಮದತ್ತ ಸೆಳೆದವು. ನ್ಯೂ ಟೆಸ್ಟ್ ಮೆಂಟಿನ ಕ್ರಿಸ್ತನ ಉಪದೇಶದ ಭಾಗ ಅವರಿಗೆ ಎಷ್ಟು ಇಷ್ಟ ಆಯಿತೆಂದರೆ ಆತ ಕ್ರಿಸ್ತನ ಭಾವಚಿತ್ರವೊಂದನ್ನು ತಂದು ತನ್ನ ಕೊಠಡಿಯಲ್ಲಿ ಪರಮಹಂಸ, ವಿವೇಕಾನಂದ, ರಾಮತೀರ್ಥರ ಚಿತ್ರಗಳ ಜೊತೆ ತೂಗು ಹಾಕಿದರು!


           ಓದುವ ಹುಚ್ಚಿನ ಜೊತೆಗೆ ಗಾಂಧೀವಾದದ ಹುಚ್ಚೂ ಬಾಲಕ ಗೋಯಲರಿಗೆ ಹತ್ತಿತು. ವಿದ್ಯಾರ್ಜನೆಯ ದಿನಗಳಲ್ಲಿ ಗಾಂಧೀವಾದಿ ಎಂದು ಕರೆಸಿಕೊಳ್ಳಲು ಅವರಿಗೆ ಹೆಮ್ಮೆಯಾಗುತ್ತಿತ್ತು. ಹರಿಜನ ಆಶ್ರಮವೊಂದರಲ್ಲಿ ಕೆಲವು ತಿಂಗಳು ಸ್ವಯಂಸೇವಕನಾಗಿಯೂ ದುಡಿದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪರಿಚಯ ಅವರಿಗಾದದ್ದೂ ಇದೇ ಸಮಯದಲ್ಲೇ. ಗಾಂಧಿ ಸಮೂಹ, ಸಮಾಜವಾದವನ್ನು ಅಪ್ಪಿಕೊಂಡಾಗ ಗೋಯಲರಿಗೆ ಭ್ರಮನಿರಸನವಾಯಿತು. ಹೆರಾಲ್ಡ್ ಲಸ್ಕಿಯ “ಕಮ್ಯೂನಿಸಂ”, ಎಡ್ಗರ್ ಸ್ನೋ ರಚಿಸಿದ “ರೆಡ್ ಸ್ಟಾರ್ ಓವರ್ ಚೈನಾ” ಅವರನ್ನು ಎಡಪಂಥೀಯತೆಯತ್ತ ಸೆಳೆಯಿತು.  ಮಾರ್ಕ್ಸನ "ಕಮ್ಯೂನಿಸ್ಟ್ ಮ್ಯಾನಿಫೆಸ್ಟೋ” ಓದಿದ ಮೇಲಂತೂ ಉಸಿರು ಬಿಗಿಹಿಡಿಯುವಂತಾಯಿತವರಿಗೆ. ಶ್ರೇಣೀಕೃತ ವ್ಯವಸ್ಥೆಯನ್ನು ತೊಡೆದುಹಾಕಿ ಸರ್ವಸಮಾನತೆ ಮೂಡಿಸಬೇಕು ಎಂಬ ಇಚ್ಛೆ ಅವರಲ್ಲಿ ಬಲವಾಗುತ್ತಾ ಸಾಗಿತು. ಬಾಲ್ಯದಲ್ಲಿ ಗರೀಬ್‍ದಾಸರ ನಿರ್ಗುಣ ಪಂಥದ ಭಕ್ತರಾಗಿದ್ದ ಆತ ಇಪ್ಪತ್ತೆರಡರ ವಯಸ್ಸಿನ ಹೊತ್ತಿಗೆ ಕಮ್ಯೂನಿಸ್ಟಿನ ಭಕ್ತರಾಗಿ ಬದಲಾಗಿದ್ದರು!


      ಪ್ರತ್ಯೇಕ ರಾಷ್ಟ್ರಕ್ಕಾಗಿ ಹಪಹಪಿಸುತ್ತಿದ್ದ ಮುಸ್ಲಿಮ್ ಲೀಗ್, ತನ್ನ ಕಾರ್ಯ ಸಾಧನೆಗಾಗಿ 1946ರ ಆಗಸ್ಟ್ 16ರಂದು “ನೇರ ಕಾರ್ಯಾಚರಣೆ ದಿನ” ಹೆಸರಲ್ಲಿ ಬಂಗಾಳದಲ್ಲಿ ರಕ್ತದ ಹೊಳೆ ಹರಿಸಿತು. ಹಿಂದೂಗಳ ಮನೆ-ಅಂಗಡಿಗಳಿಗೆ ಬೆಂಕಿ ಹಚ್ಚಲಾಯಿತು. ಹಿಂದೂ ಹೆಂಗಳೆಯರ ಮೇಲೆ ಅತ್ಯಾಚಾರ ನಡೆಸಲಾಯಿತು. ಅಬಾಲವೃದ್ಧರಾದಿಯಾಗಿ ಹಿಂದೂಗಳನ್ನು ಕತ್ತರಿಸಿ ಬೀದಿ ಬೀದಿಗಳಲ್ಲಿ ಚೆಲ್ಲಲಾಯಿತು. ರಸ್ತೆರಸ್ತೆಗಳಲ್ಲಿ ಹೆಣಗಳ ರಾಶಿ ಬಿದ್ದಿತು. ಹೂಗ್ಲಿ ನದಿಯಲ್ಲಿ ಹೆಣಗಳು ತೇಲಿಹೋದವು. ಬಂಗಾಳದ ನದಿ, ಕಾಲುವೆಗಳು ರಕ್ತದಿಂದ ಕೆಂಪಾದವು. ಮೂರು ದಿನಗಳ ಅವಧಿಯಲ್ಲಿ 5000ಕ್ಕೂ ಹೆಚ್ಚು ಹಿಂದೂಗಳು ಕೊಲೆಯಾಗಿ ಹೋದರು. ಲಕ್ಷಕ್ಕೂ ಹೆಚ್ಚುಮಂದಿ ಪ್ರಾಣ-ಮಾನ ಭಯದಿಂದ ಕೋಲ್ಕತ್ತಾವನ್ನು ಬಿಟ್ಟು ತೆರೆಳಬೇಕಾಯಿತು. ಗುಂಪು ಗಲಭೆ, ದೊಂಬಿಗಳ ರಕ್ಕಸನೃತ್ಯಕ್ಕೆ ಗೋಯಲ್ ಸಾಕ್ಷಿಯಾದರು. ನಾಸ್ತಿಕನಾದರೂ ಮುಸ್ಲಿಮರು ಅವರಿಗೇನು ರಿಯಾಯಿತಿ ತೋರಲಿಲ್ಲ. ಉಳಿದ ಹಿಂದೂಗಳಂತೆ ಅವರು ಕೂಡ ತನ್ನ ಹೆಂಡತಿ ಮತ್ತು ಒಂದು ವರ್ಷದ ಮಗುವನ್ನು ಎತ್ತಿಕೊಂಡು ಗಲ್ಲಿಯಿಂದ ಗಲ್ಲಿಗೆ, ಕೇರಿಯಿಂದ ಕೇರಿಗೆ ಜೀವಭಯದಿಂದ ಓಡಬೇಕಾಯಿತು. ಒಬ್ಬ ಗೋಪಾಲ್ ಮುಖ್ಯೋಪಾಧ್ಯಾಯರು ಇಲ್ಲದಿರುತ್ತಿದ್ದರೆ  ಕೋಲ್ಕತ್ತಾ, ಹೂಗ್ಲಿ ಸೇರಿದಂತೆ ಬಂಗಾಳದ ಬಹುಭಾಗ ಇಸ್ಲಾಮ್ ಮಯವಾಗಿ ಪಾಕಿಸ್ತಾನದ ಭಾಗವಾಗಿ ಬಿಡುತ್ತಿದ್ದವು!


          ಗೋಯಲರ ವೈಚಾರಿಕ ವಿಕಾಸಕ್ಕೆ ಕಾರಣರಾದವರು ಅವರ ಸ್ನೇಹಿತ ರಾಮಸ್ವರೂಪರು. ದೆಹಲಿ ವಿಶ್ವವಿದ್ಯಾಲಯದಲ್ಲಿ ಜೊತೆಯಾಗಿದ್ದ ಈ ಇಬ್ಬರೂ ದಿಗ್ಗಜಗಳ ನಡುವೆ ಘನಘೋರ ಚರ್ಚೆಗಳಾಗುತ್ತಿದ್ದವು. ರಾಮಸ್ವರೂಪರು ಭಾರತೀಯ ಸಾಂಸ್ಕೃತಿಕ ಹಿನ್ನೆಲೆಯಲ್ಲಿ ಪ್ರಚಲಿತ ಹಾಗೂ ಐತಿಹಾಸಿಕ ಘಟನೆಗಳನ್ನು ವಿಶ್ಲೇಷಿಸುತ್ತಿದ್ದರೆ, ಗೋಯಲರ ವಿಚಾರ ವಿಮರ್ಷೆಗೆ ಕಮ್ಯೂನಿಸ್ಟ್ ಸಿದ್ಧಾಂತವೇ ಅಡಿಪಾಯವಾಗಿತ್ತು. ಗೋಯಲ್ ಯಾವುದನ್ನೂ ಕುರುಡಾಗಿ ನಂಬುತ್ತಿರಲಿಲ್ಲ, ಒಪ್ಪುತ್ತಿರಲಿಲ್ಲ. ಆಳವಾದ ಅಧ್ಯಯನ, ಪರಾಮರ್ಶೆಗಳಿಂದಲೇ ಖಚಿತ ಅಭಿಪ್ರಾಯಕ್ಕೆ ಬರುತ್ತಿದ್ದರು. 1948ರ ವೇಳೆಗೆ ಕಮ್ಯೂನಿಸ್ಟ್ ಪಕ್ಷವನ್ನೇ  ಸೇರಲು ಹೊರಟಿದ್ದ ಗೋಯಲ್‍ರಿಗೆ, ಕಮ್ಯೂನಿಸ್ಟ್ ಪಕ್ಷ ನಿಷೇಧವಾದ ಕಾರಣ ಅದು ಸಾಧ್ಯವಾಗಲಿಲ್ಲ. ವಿಧಿ ಅವರಿಂದ ಬೇರೊಂದನ್ನು ಬಯಸಿತ್ತು. ಅವರ ಸಂಸ್ಕೃತದ ಪ್ರಾಧ್ಯಾಪಕರೊಬ್ಬರಿಂದ “ಆರ್ಯರು ಭಾರತವನ್ನು ಆಕ್ರಮಿಸಿ ದ್ರಾವಿಡರನ್ನು ದಕ್ಷಿಣಕ್ಕೆ ಓಡಿಸಿದರು ಎಂಬ ಪಶ್ಚಿಮದ ವಾದಸರಣಿಯು ಮೋಸದ್ದು" ಎಂದು ಅರಿವಾದಾಗ ಗೋಯಲ್ ಆಘಾತಕ್ಕೆ ಒಳಗಾಗಿಬಿಟ್ಟರು. ಬ್ರಿಟಿಷರು ಬರೆಸಿ ಶಾಲೆಗಳಲ್ಲಿ ಉರು ಹೊಡೆಸುತ್ತಿದ್ದ ಸುಳ್ಳು ಇತಿಹಾಸ ಉಂಟುಮಾಡಿದ್ದ ಮೋಡಿಯಿಂದ ಬಿಡಿಸಿಕೊಳ್ಳುವುದು ಅಷ್ಟು ಸುಲಭವಾಗಿರಲಿಲ್ಲ.


           ಮಾನವೀಯತೆಯನ್ನು ಮರೆತ ಕಮ್ಯೂನಿಸ್ಟ್ ಸ್ಟಾಲಿನ್ನನ ರಷ್ಯಾದ ಪ್ರಭುತ್ವ ನಿರ್ದೇಶಿತ ಬಂಡವಾಳಶಾಹೀ ಭಯೋತ್ಪಾದನೆಯ ಹುನ್ನಾರ ಅವರಿಗೆ ಈಗ ಅರ್ಥವಾಗಿತ್ತು. ಇಂತಹಾ ವೈಚಾರಿಕ ಗೊಂದಲದ ಸ್ಥಿತಿಯಲ್ಲಿ ಗೋಯಲರಿಗೆ ಮಾರ್ಗದರ್ಶನ ಮಾಡಿದ್ದು ಗೆಳೆಯ ರಾಮಸ್ವರೂಪರ ವಿಚಾರಧಾರೆಯೇ. ತಾನು ಇದುವರೆಗೆ ಕಲಿತದ್ದು, ನಂಬಿದ್ದೆಲ್ಲವೂ ಕಮ್ಯುನಿಸ್ಟರು ತಮ್ಮ ಸಿದ್ಧಾಂತ ಪ್ರಸಾರಕ್ಕಾಗಿ ಸೃಷ್ಟಿಸಿದ ಕಟ್ಟುಕತೆಗಳು ಎಂಬುದನ್ನು ತಿಳಿದ ಮೇಲೆ ಗೋಯಲ್ ಮರು ಅಧ್ಯಯನಕ್ಕೆ ಕೂತರು. ಗೋಯಲ್‍ರ “ಹೌ ಐ ಬಿಕೇಮ್ ಎ ಹಿಂದು” ಕೃತಿಯು ಅವರ ಈ ವೈಚಾರಿಕ ಪಯಣವನ್ನು  ಕಟ್ಟಿಕೊಟ್ಟಿದೆ. ಆರ್ಯಸಮಾಜದಿಂದ ಗಾಂಧೀವಾದದೆಡೆಗೆ, ಗಾಂಧೀವಾದದಿಂದ ಎಡವಾದಕ್ಕೆ, ಅಲ್ಲಿಂದ ಭಾರತೀಯತೆಗೆ ಗೋಯಲರ ಪಯಣದ ಹಾದಿಯನ್ನು ಈ ಕೃತಿ ಬಹು ಚೆನ್ನಾಗಿ ಚಿತ್ರಿಸಿದೆ.


            ವಸ್ತುನಿಷ್ಟವಾಗಿ ಬರೆಯುವವರೇ ವಿರಳ. ಅದರಲ್ಲೂ ಸೆಕ್ಯುಲರುಗಳು ಮುಚ್ಚಿಡುವ ಸತ್ಯವನ್ನು ತೆರೆದಿಡುವವರಂತೂ ಮತ್ತೂ ವಿರಳ. ಆ ವಿರಳಾತಿ ವಿರಳರಲ್ಲಿ ಇಂದಿಗೂ ಭಯಾನಕವೆಂದೇ ಸಮಾಜ, ಸರಕಾರ ಭಾವಿಸುವ ಸತ್ಯಗಳನ್ನು ನೇರವಾಗಿ, ಸರಳ ಭಾಷೆಯಲ್ಲಿ ಬರೆದವರಲ್ಲಿ ಸೀತಾರಾಮ ಗೋಯಲ್ ಪ್ರಮುಖರು. ಕೃತಕತೆಯ ನಯನಾಜೂಕುಗಳೂ ಅವರದ್ದಲ್ಲ. ಸತ್ಯವನ್ನು ಬರೆದ ಮೇಲೆ ಅದರಿಂದ ತನಗೊದಗಬಹುದಾದ ಅಪಾಯದ ಅರಿವಿದ್ದೂ ನಿರ್ಭೀತಿಯಿಂದ ಸತ್ಯ ಹೇಳಿದ ಬೌದ್ಧಿಕ ನಿಷ್ಠುರ ಅವರು. ಈ ಕಾರಣದಿಂದಲೇ ಅವರ ಲೇಖನಗಳನ್ನು, ಪುಸ್ತಕಗಳನ್ನು ಪ್ರಕಟಿಸಲು ಹಿಂದು ಮುಂದು ನೋಡಿದವರೇ ಹೆಚ್ಚು. ಆಗ  ಗೋಯಲ್ ತಮ್ಮ ಗೆಳೆಯರೊಬ್ಬರ ನೆರವಿನಿಂದ ಭಾರತಿ ಸಾಹಿತ್ಯ ಸದನ ಎಂಬ ಪ್ರಕಾಶನ ಸಂಸ್ಥೆಯನ್ನು ಸ್ಥಾಪಿಸಿ ಪುಸ್ತಕಗಳನ್ನು ಪ್ರಕಟಿಸತೊಡಗಿದರು. ಭಾರತವನ್ನು ಆಕ್ರಮಿಸಿ ಆಳಿದವರ ವಿಕೃತಿಗಳನ್ನು ಎಡವಾದಿಗಳು ತಿರುಚಿ ವೈಭವೀಕರಿಸಿದುದನ್ನು,  ಗೋಯಲ್ ಐತಿಹಾಸಿಕ ದಾಖಲೆಗಳನ್ನಿಟ್ಟು ಬಯಲಿಗೆಳೆದರು. ಆರ್ಯ ಆಕ್ರಮಣವಾದದ ಪೊಳ್ಳುತನವನ್ನು ಸಾಕ್ಷಿ ಸಮೇತ ಬಯಲಿಗೆಳೆದರು. 1982ರಲ್ಲಿ ರಾಮಸ್ವರೂಪರೊಂದಿಗೆ, ದೆಹಲಿಯಲ್ಲಿ “ವಾಯ್ಸ್ ಆಫ್ ಇಂಡಿಯಾ” ಸಂಸ್ಥೆಯನ್ನು ಸ್ಥಾಪಿಸಿದ ಗೋಯಲ್ ಅದರ ಮುಖಾಂತರ ಇತಿಹಾಸದ ನಿಜ ಚಿತ್ರಣವನ್ನು ದಾಖಲಿಸಿದರು. ಕೆ.ಎಸ್. ಲಾಲ್, ಕೊನ್ರಾಡ್ ಎಲ್ಸ್ಟ್, ಡೇವಿಡ್ ಫ್ರಾಲಿ (ವಾಮದೇವ ಶಾಸ್ತ್ರೀ), ಶ್ರೀಕಾಂತ ತಲಗೇರಿ, ನವರತ್ನ ಎಸ್. ರಾಜಾರಾಮ್ ಮುಂತಾದ ವಿದ್ವಾಂಸರ ಮಹತ್ತ್ವದ ಗ್ರಂಥಗಳು ಈ ಸಂಸ್ಥೆಯ ಮುಖಾಂತರ ಬೆಳಕು ಕಂಡವು.


             “ಕಮ್ಯುನಿಸ್ಟ್ ಪಾರ್ಟಿ ಇನ್ ಚೈನಾ – ಎ ಸ್ಟಡಿ ಇನ್ ಟ್ರೀಸನ್”, “ದ ಚೈನಾ ಡಿಬೇಟ್ – ಹೂಮ್ ಷಲ್ ವಿ ಬಿಲೀವ್”, “ಚೈನಾ ಈಸ್ ರೆಡ್ ವಿದ್ ಪೆಸೆಂಟ್ಸ್ ಬ್ಲಡ್”, “ರೆಡ್ ಬ್ರದರ್ ಆರ್ ಯೆಲ್ಲೋ ಸ್ಲೇವ್?”, “ಮೈಂಡ್ ಮರ್ಡರ್ ಇನ್ ಮಾವೋ ಲ್ಯಾಂಡ್” ಮುಂತಾದ ಪುಸ್ತಕಗಳನ್ನು 1953ರಲ್ಲೇ ಬರೆದು ಭಾರತದ ಮುಂದಿನ ಶತ್ರು ಚೀನಾ ಎನ್ನುವುದನ್ನು ಸ್ಪಷ್ಟ ದನಿಯಲ್ಲಿ ಆತ ಹೇಳಿದ್ದರು. "ಮಾರ್ಕ್ಸ್ ವಾದ ಹಾಗೂ ಅದರಿಂದ ಹುಟ್ಟಿಕೊಂಡ ವಾದಗಳೆಲ್ಲವೂ ಸೆಕ್ಯುಲರಿಸಮ್ಮಿನ ಇನ್ನೊಂದು ರೂಪ; ಕಮ್ಯುನಿಸಂ ಎಂಬುದು ಮಿದುಳು, ಹೃದಯಗಳಿಲ್ಲದ ರಾಕ್ಷಸ. ರಿಲಿಜನ್‍ಗಳ ಅತ್ಯಂತ ಆಳದಲ್ಲಿರುವ ಮೂಲಭೂತ ಗುರಿ ಒಂದೇ – ವಿಸ್ತರಣೆ. ಚೀನಾದಲ್ಲಿ ಕಮ್ಯುನಿಸ್ಟ್ ಸರಕಾರ ಮಾಡುತ್ತಿರುವುದೂ ಅದನ್ನೇ. ಮತವನ್ನು ಅಫೀಮು ಎನ್ನುತ್ತಾ, ಹಿಂದುತ್ವವನ್ನು ಮುಕ್ತವಾಗಿ ದ್ವೇಷಿಸುತ್ತಾ ಇಸ್ಲಾಂ ಹಾಗೂ ಕ್ರೈಸ್ತ ಮತಗಳೊಟ್ಟಿಗೆ ಗುಪ್ತ ಪ್ರಣಯ ನಡೆಸುವ ನಾಚಿಕೆಗೇಡಿನ ಮತವೇ ಮಾರ್ಕ್ಸ್ ವಾದ. ಈ ಮೂರರ ಮೂಲ ಬೈಬಲ್ಲಿನಲ್ಲೇ ಇದೆ. ಲೆನಿನ್, ಸ್ಟಾಲಿನ್, ಮಾವೋಗಳು ನಡೆಸಿದ ಹತ್ಯಾಕಾಂಡದ ಬಗೆಗೆ ಚಕಾರ ಎತ್ತದವರು ಉಳಿದೆರಡು ಮತಗಳ ದೌರ್ಜನ್ಯವನ್ನೂ ತಡೆಯುವವರಲ್ಲ. ಹಿಂದೂಗಳನ್ನು ಎದುರಿಸಬೇಕಾಗಿ ಬಂದಾಗ ಇವು ಮೂರೂ ಪರಸ್ಪರ ಕೈಜೋಡಿಸುತ್ತವೆ." ಎಂದು ಸ್ಪಷ್ಟ ಶಬ್ಧಗಳಲ್ಲಿ ಮಾರ್ಕ್ಸ್ ವಾದದ ಹಾಗೂ ಅದರ ಜೊತೆ ಕೈಜೋಡಿಸಿರುವ ಇಸ್ಲಾಂ, ಕ್ರೈಸ್ತ ಮತಾಂಧತೆಯ ಕುತಂತ್ರವನ್ನು ಬಯಲಿಗೆಳೆದಿದ್ದರು.


            ಅಂತರ್ಯದಲ್ಲಿ ಕಮ್ಯೂನಿಷ್ಟನಾಗಿದ್ದು, ರಷ್ಯಾದ ಸಮಾಜವಾದೀ ಆರ್ಥಿಕ ನೀತಿಯನ್ನು ಭಾರತದಲ್ಲಿ ಹೇರಿ ಈ ದೇಶವನ್ನು ಸರ್ವನಾಶಗೈದ ನೆಹರೂರ ಆರ್ಥಿಕ ನೀತಿಯನ್ನು ಖಂಡತುಂಡವಾಗಿ ವಿರೋಧಿಸಿದವರಲ್ಲಿ ಗೋಯಲ್ ಅಗ್ರಗಣ್ಯರು. ನೆಹರೂ ಅವರ ಕಮ್ಯೂನಿಸ್ಟ್ ಪ್ರೀತಿ, ರಷ್ಯಾ- ಚೀನಾದ ಮೇಲಿನ ಕುರುಡು ನಂಬಿಕೆ, ಅದರಿಂದಾಗಿ ದೇಶಕ್ಕಾದ ನಷ್ಟ, ಪಾಕಿಸ್ತಾನದ ಜೊತೆಗಿನ ಅವರ ಚೆಲ್ಲಾಟ ಕುರಿತಂತೆ ಆರ್ಗನೈಸರ್ ಪತ್ರಿಕೆಯಲ್ಲಿ ಸರಣಿ ಲೇಖನಗಳನ್ನು ಗೋಯಲ್ ಬರೆದರು. ಇದೇ ಕಾರಣಕ್ಕೆ 62ರ ಚೀನಾ ಯುದ್ಧದ ಸಮಯದಲ್ಲಿ ಗೋಯಲರನ್ನು ಜೈಲಿಗಟ್ಟಿದ್ದರು ನೆಹರೂ. ಮಾತ್ರವಲ್ಲ ಅವರ ಪಾಸ್ ಪೋರ್ಟ್ ಅರ್ಜಿಯನ್ನೂ ತಿರಸ್ಕರಿಸುವಂತೆ ಆದೇಶಿಸಿದ್ದರು. ಕಮ್ಯೂನಿಸಮ್ಮನ್ನು ವಿರೋಧಿಸಿದ್ದಕ್ಕಾಗಿ ನೆಹರೂ ಆಡಳಿತದ ಕೆಂಗಣ್ಣಿಗೆ ಗುರಿಯಾಗಿ ಬದುಕುಳಿಯಲು ಅವರು ಭಾರೀ ಹೋರಾಟವನ್ನೇ ಮಾಡಬೇಕಾಯಿತು.


             "ಹಿಂದೂ ಧರ್ಮಶಾಸ್ತ್ರಗಳು ಆತತಾಯಿಗಳನ್ನು ಶಿಕ್ಷಿಸು ಎನ್ನುತ್ತವೆ. ಆದರೆ ಸೆಮೆಟಿಕ್ ಮತಗಳಲ್ಲಿ ಅನ್ಯ ಮತೀಯರನ್ನು ಕೊಲ್ಲುವ, ಅವರ ಆಸ್ತಿಗೆ ಬೆಂಕಿಯಿಕ್ಕುವ, ಅವರ ಸ್ತ್ರೀಯರನ್ನು ಅಪಹರಿಸಿ ಅತ್ಯಾಚಾರಗೈಯುವ, ಅವರ ಭೂಮಿಯನ್ನು ಕಬಳಿಸುವವನನ್ನು ಹೊಗಳಿ ಆತನಿಗೆ ಸ್ವರ್ಗದಲ್ಲಿ ಸಿಗುವ ಸವಲತ್ತುಗಳನ್ನು ವರ್ಣಿಸುತ್ತವೆ. ಅಂತಹುವುದಕ್ಕೆ ಬೆಂಬಲ ಕೊಡುವವರನ್ನೇ ಸೂಫಿಗಳು, ಸಾಧುಗಳು, ಪ್ರವಾದಿಗಳು ಎಂಬ ಬಿರುದುಗಳಿಂದ ವರ್ಣಿಸಲಾಗುತ್ತದೆ. ಯಾರು ಇವುಗಳನ್ನು ವಿರೋಧಿಸುತ್ತಾರೋ ಅವರನ್ನು ಶಿಕ್ಷಿಸಬೇಕು ಎಂದು ಈ ಮತಗ್ರಂಥಗಳು ಹೇಳುತ್ತವೆ. ಅವರ ಆಚರಣೆಗಳನ್ನು ಗುರುತಿಸಿದ ಹಿಂದೂಗಳಿಗೆ ಅವುಗಳ ಹಿಂದಿರುವ ಉದ್ದೇಶಗಳು ಗೋಚರಿಸಲೇ ಇಲ್ಲ. ಅವರ ಈ ಉಗ್ರ ನಡವಳಿಕೆಗಳು ಅವರ ಗ್ರಂಥಗಳಲ್ಲಿ ಬೋಧಿಸಲ್ಪಟ್ಟಿಲ್ಲ, ನಿಜವಾದ ಇಸ್ಲಾಂ, ಕ್ರಿಸ್ತ ಚಿಂತನೆಗಳನ್ನು ಅವರಿಗೆ ಹೇಳಿದಲ್ಲಿ ಅವರನ್ನು ಸರಿದಾರಿಗೆ ತರಬಹುದು ಎನ್ನುವ ವಿಚಾರಗಳನ್ನು ಕೆಲವು ಹಿಂದೂ ನಾಯಕರೇ ಹಿಂದೂಗಳ ತಲೆಯಲ್ಲಿ ತುಂಬಿದರು. ಇಂತಹಾ ವಿಚಿತ್ರ ಭ್ರಮೆಯ ಪ್ರಮುಖ ಮೂರ್ತಿವೆತ್ತ ರೂಪವೇ ಗಾಂಧಿ! ಈ ಭ್ರಮೆಯ ಮುಂದುವರಿದ ರೂಪವೇ ಇಂದಿನ "ಸರ್ವಧರ್ಮ ಸಮಭಾವದ ಸೆಕ್ಯುಲರಿಸಂ"! ಅಲ್ಲದೇ ಕ್ರೈಸ್ತ, ಇಸ್ಲಾಮ್ ಮತಗಳ ಕುರುಡು ನಂಬಿಕೆಗಳಿಗೆ ದೈವತ್ವವನ್ನೂ ಆರೋಪಿಸಲಾಯಿತು. ಅವುಗಳನ್ನು ಪ್ರಶ್ನಿಸಿದವರನ್ನು ಕಾನೂನಿನ ಕುಣಿಕೆಯಲ್ಲಿ ಬಿಗಿಯಲಾಯಿತು". ಇಂತಹಾ ವಿಶ್ಲೇಷಣೆ ಗೋಯಲರಲ್ಲದೆ ಮತ್ಯಾರು ಮಾಡಲು ಸಾಧ್ಯ?


           ರಾಷ್ಟ್ರೀಯತೆಯ ದನಿಯನ್ನು ಬಲಗೊಳಿಸಲು ಶಿವಾಜಿಯ ಕುರಿತು ಪುಸ್ತಕ ಬರೆದ ಮೊದಲಿಗರು ಆತ. ಸೆಮೆಟಿಕ್ ಮತಗಳನ್ನು ವಿಶ್ಲೇಷಿಸುತ್ತಾ ಗೋಯಲ್ ಸಾಲು ಸಾಲು ಪುಸ್ತಕಗಳನ್ನೇ ಬರೆದರು. ಭಾರತದಲ್ಲಿನ ಸೆಕ್ಯುಲರಿಸಮ್ ಹೇಗೆ ಇವುಗಳೊಂದಿಗೆ ಸೇರಿ ಹಿಂದೂಗಳಿಗೆ ಅನ್ಯಾಯವೆಸಗಿ ಭಾರತವನ್ನು ಸಾಂಸ್ಕೃತಿಕ, ಧಾರ್ಮಿಕ ಹಾಗೂ ನೈತಿಕವಾಗಿ ದುರ್ಬಲವಾಗಿಸುತ್ತಿದೆ ಎನ್ನುವುದನ್ನು ಅವರಷ್ಟು ನೇರವಾಗಿ ವಿಶ್ಲೇಷಿಸಿದವರಿಲ್ಲ. ಮುಸ್ಲಿಂ ಪ್ರತ್ಯೇಕತಾವಾದಕ್ಕೆ ಕಾರಣಗಳು, ಅವುಗಳ ಪರಿಣಾಮಗಳನ್ನು ಕುರಿತು ಬರೆಯುವಾಗ ಮುಸ್ಲಿಂ ರಾಜರುಗಳು, ಸೂಫಿ ಸಂತರು, ಮುಸ್ಲಿಂ ರಾಜಕಾರಣಿಗಳು, ಕಾಂಗ್ರೆಸ್ಸಿನ ಒಳಗಿದ್ದು ಭಾರತೀಯತೆಯ ಸೋಗು ಹಾಕಿದ ಎಲ್ಲಾ ಮತಾಂಧರ ಜನ್ಮ ಜಾಲಾಡಿದರು. ಮುಚ್ಚು ಮರೆ ಮಾಡದೇ ಜಿಹಾದ್ ಬಗ್ಗೆ ನೇರವಾಗಿ ಹೇಳಿಕೊಳ್ಳುತ್ತಿದ್ದ ಮತಾಂಧ ಪಡೆ ಆಧುನಿಕ ವೈಚಾರಿಕತೆ ಬೆಳೆದಂತೆ ಹೇಗೆ ಮೃದು ಮಾತಿನ ನಾಟಕೀಯ ಅಲಂಕಾರವನ್ನು ತನ್ನದಾಗಿಸಿಕೊಂಡು ಹಿಂದೂಗಳನ್ನು ಯಾಮಾರಿಸುತ್ತಿದೆ ಎನ್ನುವುದನ್ನು ವಿವರವಾಗಿ ಬರೆದರು. ಸೆಕ್ಯುಲರಿಸಮ್ಮಿನ ಅಡಿಯಲ್ಲಿ ಹೇಗೆ ಹಿಂದೂಗಳು ಮುಸ್ಲಿಮರಿಗಿಂತ, ಕ್ರೈಸ್ತರಿಗಿಂತ ಕಡಿಮೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಪಡೆದಿದ್ದಾರೆ ಎನ್ನುವುದನ್ನೂ ವಿಮರ್ಷಿಸಿದರು. ರಾಜಕೀಯವಾಗಿ ಈ ಎಲ್ಲಾ ಶಕ್ತಿಗಳು ಬಲಿಷ್ಟವಿದ್ದ ಕಾಲದಲ್ಲಿ ಹೀಗೆ ನೇರವಾಗಿ ಬರೆಯುವುದು ಅಷ್ಟು ಸುಲಭವೂ ಆಗಿರಲಿಲ್ಲ ಎನ್ನುವುದನ್ನು ಗಮನಿಸಿದರೆ ಈ ಬರಹಗಳ ಮಹತ್ವ ಅರ್ಥವಾದೀತು. ಅದರಲ್ಲೂ ಪ್ರವಾದಿಯ ಬಗ್ಗೆ ಒಂದಕ್ಷರ ನುಡಿದರೆ ಕತ್ತು ಕೊಯ್ಯುವ ಮತಾಂಧರಿರುವಾಗ, ಸರ್ಕಾರಗಳು, ವ್ಯವಸ್ಥೆ ಅವರ ಪರವಾಗಿರುವಾಗ, ನ್ಯಾಯಾಲಯಗಳ ಪ್ರಕ್ರಿಯೆ ಆಮೆಗತಿಯಲ್ಲಿರುವಾಗ ಅವರ ಈ ಕಾರ್ಯ ಹರಸಾಹಸವೇ ಸರಿ. ಅಂಡರ್ಸ್ಟ್ಯಾಂಡಿಂಗ್ ಇಸ್ಲಾಮ್ ಥ್ರೂ ಹದೀಸ್ ಪ್ರಕಟಿಸಿದ ಮೇಲೆ ಹದಿನೈದು ವರ್ಷ ನ್ಯಾಯಾಲಯಕ್ಕೆ ಅವರು ಅಲೆಯಬೇಕಾಯಿತು. ಬಳಿಕವೂ ಸರಕಾರದಿಂದ ಅದರ ಮೇಲಿದ್ದ ನಿಷೇಧ ಕೊನೆಗೊಳ್ಳಲಿಲ್ಲ. "ದ ಕಲಕತ್ತಾ ಕುರಾನ್ ಪೆಟಿಷನ್” ಪ್ರಕಟಿಸಿದಾಗ ಅದನ್ನು ಮುಟ್ಟುಗೋಲು ಹಾಕಿಕೊಳ್ಳಬೇಕೆಂಬ ಕೂಗೆದ್ದಿತು. “ದ ಡೆಡ್ ಹ್ಯಾಂಡ್ ಆಫ್ ಇಸ್ಲಾಮ್” ಪುಸ್ತಕದ ಕುರಿತಂತೆ ಇಲ್ಲಿನ ವ್ಯವಸ್ಥೆ ಹನ್ನೊಂದು ವರ್ಷ ಅವರನ್ನು ನ್ಯಾಯಾಲಯಕ್ಕೆ ಅಲೆದಾಡಿಸಿತು.


              "ಕ್ರೈಸ್ತಮತವು ಬಲಶಾಲಿ ಪರಭಕ್ಷಕ ಸಾಮ್ರಾಜ್ಯಶಾಹೀ ವ್ಯವಸ್ಥೆ ಅಷ್ಟೇ. ಅದು ಎಂದಿಗೂ ಧರ್ಮವಾಗಿರಲಿಲ್ಲ. ಹಿಂದೂ ಧರ್ಮ ಮತ್ತು ಕ್ರೈಸ್ತ ಮತಗಳ ನಡುವಿನ ಘರ್ಷಣೆ ಪರಸ್ಪರ ವಿರುದ್ಧವಾದ ಜೀವನ ಪಥಗಳ, ಚಿಂತನೆಗಳ ಮುಖಾಮುಖಿ. ಇನ್ನೂ ನಿಖರವಾಗಿ ಹೇಳಬೇಕೆಂದರೆ ಅದು ದೈವೀ ಮತ್ತು ಅಸುರೀ ಶಕ್ತಿಗಳ ನಡುವಿನ ಸಂಗ್ರಾಮ" ಇದು ಕ್ರೈಸ್ತ ಮತದ ಬಗೆಗಿನ ಅವರ ಸ್ಪಷ್ಟ ಅಭಿಪ್ರಾಯ. ಮೊದಮೊದಲು ನೇರವಾಗಿಯೇ ಕಾರ್ಯಾಚರಿಸುತ್ತಿದ್ದ ಕ್ರೈಸ್ತ ಮತಾಂಧ ಪಡೆ ಹಿಂದೂಗಳಿಂದ ವಿರೋಧ ಬಂದ ತಕ್ಷಣ, ಮಧುರ ಮಾತುಗಳೊಂದಿಗೆ ಆಮಿಷವೊಡ್ಡಲು ತಯಾರಾಯಿತು. ಕ್ರೈಸ್ತ ಮತಶಾಸ್ತ್ರವನ್ನು ಭಾರತೀಯತೆಗೆ ಅನ್ವಯವಾಗುವಂತೆ ವ್ಯಾಖ್ಯಾನಿಸಲು ಆರಂಬಿಸಿತು. ಕ್ರೈಸ್ತ ಮತಾಂತರಿಗಳು ತಮಗೆ ಅಡ್ಡ ಬಂದವರನ್ನು ಕೋಮುವಾದಿಗಳು, ಹಿಂದೂ ನಾಝಿಗಳು ಎಂದು ಕರೆದರು. ಅದಕ್ಕೆ ಜಾತ್ಯಾತೀತರೂ ದನಿ ಸೇರಿಸಿದರು. ಪರಸ್ಪರರ ರಕ್ಷಣೆಗೆ ಸ್ಥಳೀಯವಾದ ಸಂಘ, ಸಂವಾದಗಳೂ ಹುಟ್ಟಿಕೊಂಡವು. ಗಾಂಧಿಯವರಂತೂ ಕ್ರೈಸ್ತ ಮತವೂ ಹಿಂದೂ ಧರ್ಮದಷ್ಟೇ ಮಹಾನ್ ಧರ್ಮ ಎಂದು ಘೋಷಿಸಿಬಿಟ್ಟರು! ಹೆಚ್ಚೇಕೇ, ಕ್ರೈಸ್ತರಿಗೆ ಹಿಂದೂಗಳನ್ನು ಮತಾಂತರಿಸುವ ಹಕ್ಕನ್ನು ಸಂವಿಧಾನವೇ ಕೊಟ್ಟುಬಿಟ್ಟಿತು! ಬರಬರುತ್ತಾ ಗಾಂಧಿವಾದಿಗಳು ಕ್ರೈಸ್ತ ಮತ ಪ್ರಚಾರ ಕೇಂದ್ರಗಳ  ಚಟುವಟಿಕೆಯಲ್ಲಿ ಸಕ್ರಿಯವಾಗಿ ಅಥವಾ ನಿಷ್ಕ್ರಿಯವಾಗಿ ಭಾಗವಹಿಸಲಾರಂಭಿಸಿದರು. ಅಲ್ಲದೆ ಈ ಮತಾಂತರ ಕೇಂದ್ರಗಳು ಹೆಣ್ಣುಮಕ್ಕಳ ಮಾರಾಟ ಕೇಂದ್ರಗಳಾಗಿ ಬೆಳೆದವು. ಭಾರತೀಯರೂ ಗೌರವಿಸುವ ಮದರ್ ಥೆರೇಸಾ ಸಿಸ್ಟರ್ಸ್ ಆಫ್ ಚಾರಿಟಿ ಎಂಬ ಹೆಣ್ಣು ಗುಲಾಮರ ಜಾಲಕ್ಕೆ ಅಧಿಪತಿಯಾಗಿದ್ದರು. ಬಡ ಕುಟುಂಬಗಳಿಗೆ ಹಣಕೊಟ್ಟು ಹೆಣ್ಣುಮಕ್ಕಳನ್ನು ಖರೀದಿಸಿ ಅವರನ್ನು "ಯೇಸುಕ್ರಿಸ್ತನ ವಧುಗಳನ್ನಾಗಿಸಿ" ಗುಲಾಮರಂತೆ ಅಹರ್ನಿಶಿ ದುಡಿಸಲಾಗುತ್ತಿತ್ತು. ಹೀಗೆ ಗೋಯಲರು ಮತಾಂತರಿಗಳ ಕೃತ್ಯದ ಬಗೆಗೆ ನಿಯೋಗೀ ಸಮಿತಿ ವರದಿ ಹಾಗೂ ಫಣಿಕ್ಕರ್ ಅವರ "ಏಷ್ಯಾ ಆಂಡ್ ವೆಸ್ಟರ್ನ್ ಡಾಮಿನೆನ್ಸ್" ಮುಂತಾದ ನಿಖರ ಆಕರಗಳನ್ನು ಅವಲಂಬಿಸಿ, ಸ್ವತಃ ಚರ್ಚುಗಳ ಅಪಸವ್ಯಗಳನ್ನು ಕಂಡು ತಮ್ಮ "ಹುಸಿ-ಜಾತ್ಯಾತೀತವಾದ", "ಅಭಿವ್ಯಕ್ತಿ ಸ್ವಾತಂತ್ರ್ಯ" ಮುಂತಾದ ಪುಸ್ತಕಗಳಲ್ಲಿ ಮತಾಂತರಿಗಳ ಹುನ್ನಾರಗಳನ್ನು ಬಯಲಿಗೆಳೆದಿದ್ದಾರೆ. ಭಾರತದ ಜನರ ಬಡತನವನ್ನೂ ಅನಾರೋಗ್ಯವನ್ನೂ ಬಳಸಿಕೊಳ್ಳುವುದರ ಮೂಲಕ ಥೆರೇಸಾ ಬೇರೆ ಬೇರೆ ಮೂಲಗಳಿಂದ ಸಂಗ್ರಹಿಸುವ ಧನಸಂಪನ್ಮೂಲ, ಆಕೆಯ ಮತಾಂಧತೆ ಹಾಗೂ ಆಕೆ ಮಾಡುತ್ತಿದ್ದ ಮತಾಂತರ ಕಾರ್ಯಗಳ ಬಗ್ಗೆ ವಿಸ್ತಾರವಾಗಿ ಬರೆದರು. ಆದರೆ ಅದನ್ನು ಗಂಭೀರವಾಗಿ ತೆಗೆದುಕೊಳ್ಳುವವರೇ ಇರಲಿಲ್ಲ. ಇಂತಹಾ ಬೌದ್ಧಿಕ ಕ್ಷತ್ರಿಯನನ್ನೂ ಮತಾಂತರಿಸಲು ಬಿಹಾರಿನ ಹಜಾರಿಬಾಗಿನ ಕ್ಯಾಥೋಲಿಕ್ ಚರ್ಚಿನ ಪಾದ್ರಿಯೊಬ್ಬ ಪ್ರಯತ್ನಿಸಿದ್ದ!


            ಗೋಯಲರ ಇನ್ನೊಂದು ಮಹತ್ವದ ಕೆಲಸ ಎಂದರೆ ಬೃಹತ್ ಭಾರತದಾದ್ಯಂತ ಮತಾಂಧತೆಯ ಕತ್ತಿಗೆ ನಲುಗಿ ನಾಶವಾದ, ಮಸೀದಿಗಳಾಗಿ ಬದಲಾದ ದೇವಾಲಯಗಳ ಬಗ್ಗೆ ಬರೆದದ್ದು. “ಹಿಂದೂ ಟೆಂಪಲ್ಸ್ – ವಾಟ್ ಹ್ಯಾಪನ್ಡ್ ಟು ದೆಮ್?” ಹಾಗೂ "ಇಸ್ಲಾಮ್ vis-a-vis ಹಿಂದೂ ಟೆಂಪಲ್ಸ್"(ಇಸ್ಲಾಮ್ ಆಕ್ರಾಂತ ಹಿಂದೂ ದೇವಾಲಯಗಳು) ಮುಂತಾದ ಪುಸ್ತಕಗಳಾಗಿ ಅವು ಹೊರಬಂದವು. ಉತ್ತರದ ಸಿಂಕಿಯಾಂಗ್ ಮತ್ತು ಟ್ರಾನ್ಸೊಕ್ಸಿಯಾನಾಗಳಿಂದ ದಕ್ಷಿಣದ ಕನ್ಯಾಕುಮಾರಿಯ ತನಕ, ಪಶ್ಚಿಮದಲ್ಲಿ ಇಂದಿನ ಇರಾನಿನ ಸೀಸ್ತಾನ್ ಪ್ರಾಂತ್ಯದಿಂದ ಪೂರ್ವದ ಅಸ್ಸಾಮಿನವರೆಗೆ ಸುಮಾರು 1100 ವರ್ಷಗಳಲ್ಲಿ 154 ಕಡೆ ಹಿಂದೂ ದೇವಾಲಯಗಳ ಮೇಲೆ "ಸತತವಾಗಿ" ಆದ ದಾಳಿಗಳು, ಅದರಿಂದ ಸುದೀರ್ಘ ಕಾಲ ಹಿಂದೂ ಸಂಸ್ಕೃತಿಯ ತೊಟ್ಟಿಲಾಗಿ ಜಗತ್ತಿನ ಕಣ್ಣು ಕೋರೈಸುತ್ತಿದ್ದ ಈ ಪ್ರದೇಶವು, ದೇವಾಲಯಗಳು ಹಾಗೂ ವಿಹಾರಗಳ ಚೆಲ್ಲಾಡಿದ ಅವಶೇಷಗಳಿಂದ ತುಂಬಿ ಹೋದ ಕರುಣಾಜನಕ ಘಟನೆಗಳು ಇವುಗಳಲ್ಲಿವೆ. ಮಧ್ಯಕಾಲದಲ್ಲಿ ಇಲ್ಲೆಲ್ಲಾ ನಿರ್ಮಾಣಗೊಂಡವೆನ್ನಲಾದ ಮಸೀದಿ-ಮಝರ್-ಝಯಾರತ್-ದರ್ಗಾಗಳೆಲ್ಲಾ ನಾಶಪಡಿಸಲಾದ ಮಠ-ಮಂದಿರಗಳ ಜಾಗಗಳಲ್ಲೇ ಅವುಗಳದೇ ಅವಶೇಷಗಳಿಂದ ನಿರ್ಮಿಸಲ್ಪಟ್ಟವು ಎಂಬ ಸೂರ್ಯ ಸತ್ಯವನ್ನು ಗೋಯಲ್ ಜಗತ್ತಿನ ಎದುರು ತೆರೆದಿಟ್ಟರು. ಗೋಯಲರು ತಮ್ಮ ಮೊದಲ ಸಂಪುಟದಲ್ಲಿ ಕೊಟ್ಟ ವಿವರವೇ ಸುಮಾರು ಎರಡು ಸಾವಿರ ಇಂತಹಾ(ದೇವಸ್ಥಾನಗಳನ್ನು ಒಡೆದು ಹಾಕಿ ಅವುಗಳ ಅಡಿಪಾಯದ ಮೇಲೆ ಮಸೀದಿ ಕಟ್ಟಿದ) ಪ್ರಕರಣಗಳನ್ನು! ಆ ದೇವಾಲಯಗಳನ್ನು ಕಟ್ಟಿದ ರಾಜ, ಕೆಡಹಿದ ಮತಾಂಧ, ಅವುಗಳ ಕಾಲ ಎಲ್ಲವನ್ನೂ ವಿವರವಾಗಿ ನಮೂದಿಸಿದರು. ಆದರೇನು? ಇವೆಲ್ಲಾ ಯಾವುದೇ ಪಠ್ಯಪುಸ್ತಕಗಳಿಗೆ ಆಕರಗಳಾಗಲಿಲ್ಲ. ಯಾವುದೇ ವಿಶ್ವ ವಿದ್ಯಾಲಯಗಳಲ್ಲಿ ಇವುಗಳ ಬಗೆಗೆ ಚರ್ಚೆ, ಸಂವಾದಗಳೂ ನಡೆಯಲಿಲ್ಲ.ಯಾವುದೇ ಸರಕಾರೀ ಗ್ರಂಥಾಲಯಗಳಿಗೂ ಈ ಪುಸ್ತಕಗಳು ಹೋಗದಂತೆ ವ್ಯವಸ್ಥಿತವಾಗಿ ತಡೆಹಿಡಿಯಲಾಯಿತು. ಹೆಚ್ಚೇಕೇ, ಯಾವುದೇ ಪತ್ರಿಕೆಗಳೂ ಇವುಗಳ ಬಗ್ಗೆ ವಿಮರ್ಶೆ ಬರೆಯುವ ಗೋಜಿಗೆ ಹೋಗಲಿಲ್ಲ; ಆ ಯೋಗ್ಯತೆಯೂ ಪತ್ರಿಕೆಗಳಿಗೆ ಇಲ್ಲ ಬಿಡಿ!


             ಇಂತಹಾ ಅಪರೂಪದ ಬೌದ್ಧಿಕ ಕ್ಷತ್ರಿಯನ ಜನ್ಮ ಶತಮಾನೋತ್ಸವದ ವರ್ಷವಿದು. ಅವರ ಬಗ್ಗೆ, ಅವರು ಬರೆದುದರ ಬಗ್ಗೆ, ಅವರ ಜೀವನ ಪಯಣದ ಬಗ್ಗೆ ಬರೆದಷ್ಟೂ ಮುಗಿಯದು. ಕಳೆದೆರಡು  ಶತಮಾನಗಳಲ್ಲಿ  ಪಾಶ್ಚಾತ್ಯರು, ಕಮ್ಯೂನಿಸ್ಟರು, ಕಾಂಗ್ರೆಸ್ಸಿಗರು ವಿರೂಪಗೊಳಿಸಿದ್ದ "ಭಾರತೀಯ ಇತಿಹಾಸ"ವನ್ನು ಸರಿದಾರಿಗೆ ತರಲು  ಅಪಾರವಾಗಿ ಶ್ರಮಿಸಿದ, ಸೋದರ ಮತಗಳಾದ ಇಸ್ಲಾಂ, ಕಮ್ಯೂನಿಸ್ಟ್ ಹಾಗೂ ಕ್ರೈಸ್ತಮತಗಳ ಕುತಂತ್ರ, ದ್ರೋಹಗಳನ್ನು ಬಯಲಿಗೆಳೆದ ಅವರನ್ನು ಈ ದೇಶದ ವ್ಯವಸ್ಥೆ ನಡೆಸಿಕೊಂಡ ಪರಿ ಮಾತ್ರ ನ್ಯಾಯಯುತವಾಗಿರಲಿಲ್ಲ. ಅವರನ್ನು ಮನುವಾದಿ, ಉಗ್ರಚಿಂತಕ, ಮೂಲಭೂತವಾದಿ ಎಂದು ಸದಾಕಾಲ ಜರೆಯಲಾಯಿತು. ದಾಖಲೆಗಳನ್ನೇ ಆಧಾರವಾಗಿಟ್ಟೂ ಬರೆದವನನ್ನು ವಿಶ್ವವಿದ್ಯಾಲಯಗಳ ಮೆಟ್ಟಿಲು ಹತ್ತದಂತೆ ತಡೆಯಲಾಯಿತು. ಪೊಳ್ಳು ಇತಿಹಾಸಕಾರರೆಲ್ಲಾ ಸರಕಾರದ ಸವಲತ್ತು ಪಡೆದು, ವಿಮಾನಗಳಲ್ಲಿ ವಿದೇಶ ಯಾನ ಮಾಡುತ್ತಾ ಈ ದೇಶಕ್ಕೇ ಕೇಡು ಬಗೆಯುತ್ತಿದ್ದರೆ ಗೋಯಲರು ದೆಹಲಿಯ ಸುಡುವ ಬೆಂಕಿಯಲ್ಲಿ ನ್ಯಾಯಾಲಯದಿಂದ ನ್ಯಾಯಾಲಯಕ್ಕೆ ಅಲೆಯುತ್ತಿದ್ದರು. ನೆಹರೂ ಎಂಬ ಕಮ್ಯೂನಿಷ್ಟನಂತೂ ಅವರ ಜೀವನವನ್ನು ನರಕಮಯವನ್ನಾಗಿ ಮಾಡಿಬಿಟ್ಟ!


ಸಮಾನ ನಾಗರಿಕ ಸಂಹಿತೆಯ ಅನುಷ್ಠಾನದಲ್ಲಡಗಿದೆ ರಾಷ್ಟ್ರಹಿತ

 ಸಮಾನ ನಾಗರಿಕ ಸಂಹಿತೆಯ ಅನುಷ್ಠಾನದಲ್ಲಡಗಿದೆ ರಾಷ್ಟ್ರಹಿತ


 


           "ವಿವಾಹಿತ ಮುಸ್ಲಿಂ ಮಹಿಳೆಯ ಇಚ್ಛೆಗೆ ವಿರುದ್ಧವಾಗಿ ಎರಡನೇ ಮದುವೆಯಾಗುವ ಆಕೆಯ ಗಂಡನ ನಡೆ ಕ್ರೌರ್ಯವೇ ಸರಿ. ಇಂತಹಾ ಪ್ರಕರಣಗಳಲ್ಲಿ ಆ ಮಹಿಳೆ ವಿಚ್ಛೇದನದ ಮೊರೆ ಹೋಗಬಹುದು." ಎಂದು ಕಲ್ಬುರ್ಗಿಯ ವಿಭಾಗೀಯ ಉಚ್ಛ ನ್ಯಾಯಪೀಠ ಮಹತ್ವದ ತೀರ್ಪೊಂದನ್ನು ಕಳೆದ ಶುಕ್ರವಾರ ನೀಡಿದೆ. ಸತತ ಯುದ್ಧಗಳನ್ನು ಮಾಡುತ್ತಿದ್ದುದರಿಂದ ಸತ್ತ ಸೈನಿಕರ ವಿಧವೆ ಪತ್ನಿಯರನ್ನು ಬದುಕಿನುದ್ದಕ್ಕೂ ರಕ್ಷಣೆ ಮಾಡುವರಾರು ಎಂಬ ಪ್ರಶ್ನೆಗೆ ಉತ್ತರವಾಗಿ ಅಂತಹಾ ಮಹಿಳೆಯರ ರಕ್ಷಣೆಯ ಸಲುವಾಗಿ ಪ್ರವಾದಿ ಮೊಹಮ್ಮದ್ ಒಂದಕ್ಕಿಂತ ಹೆಚ್ಚು ಮದುವೆಯಾಗುವುದನ್ನು ಪ್ರೋತ್ಸಾಹಿಸಿದರು. 1500 ವರ್ಷಗಳ ಹಿಂದೆ ಚಲಾವಣೆಗೆ ಬಂದ ಇಂತಹಾ ವಿಲಕ್ಷಣ ಪದ್ದತಿಯನ್ನು ಸಮುದಾಯವೊಂದು ಷರೀಯತ್ ನೆರಳಿನಲ್ಲಿ ಇಂದಿಗೂ ದುರ್ಬಳಕೆ ಮಾಡಿಕೊಳ್ಳುವುದು ಎಷ್ಟು ಸೂಕ್ತ? ಈ ರೀತಿಯ ಪದ್ದತಿಯನ್ನು ಇವತ್ತಿನ ಸಾಮಾಜಿಕ, ಧಾರ್ಮಿಕ ಹಾಗೂ ಆರ್ಥಿಕ ನೆಲೆಗಟ್ಟಿನಡಿಯಲ್ಲಿ ಮರುವಿಮರ್ಶೆ ಮಾಡುವ ಅಗತ್ಯವಿದೆ ಎಂದು ಪೀಠ ಕಟುವಾಗಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿತು. ಪೀಠದ ತೀರ್ಪು ಸ್ವಾಗತಾರ್ಹವೇ. ಆದರೆ ನಾವು ಮೂಲ ವಿಷಯಕ್ಕೆ ಬರೋಣ. ಇದೇನು, ವಿಚ್ಛೇದನವಾಗದೇ ಎರಡನೆ ಮದುವೆ? ಹಿಂದೂಗಳಿಗೋ ಅಥವಾ ಇನ್ನಿತರ ಮತೀಯರಿಗೆ ಇಲ್ಲದ ರಿಯಾಯಿತಿ ಮಸ್ಲಿಂ ಸಮುದಾಯಕ್ಕೆ ಮಾತ್ರ ಯಾಕಿದೆ? ಪ್ರಜಾಪ್ರಭುತ್ವ ಜೊತೆಗೆ ಜಾತ್ಯಾತೀತ ಎಂದೆಲ್ಲಾ ಹಣೆಪಟ್ಟಿ ಕಟ್ಟಿಕೊಂಡ ದೇಶದಲ್ಲಿ ಯಾಕೆ ಒಂದು ಕೋಮಿಗೆ ಒಂದು ಕಾನೂನು, ಇನ್ನೊಂದಕ್ಕೆ ಅವರದೇ ಮತೀಯ ಕಾನೂನು; ಬಹುಸಂಖ್ಯಾತರಿಗೊಂದು ಕಾನೂನು, ಅಲ್ಪಸಂಖ್ಯಾತರಿಗೊಂದು ಕಾನೂನು; ಜಾತಿಗೊಂದು ಕಾನೂನು? ಇದಕ್ಕಿಂತ ದೊಡ್ಡ ಕ್ರೌರ್ಯ ಇನ್ನೇನಿದೆ? ವಿಶ್ವದ ಅತೀ ದೊಡ್ದ ಪ್ರಜಾಪ್ರಭುತ್ವ ದೇಶದಲ್ಲಿ ಸಮಾನ ನಾಗರಿಕ ಸಂಹಿತೆ ಯಾಕಿಲ್ಲ?


             ವಿವಿಧ ಜಾತಿ, ಮತ, ಆಚರಣೆಗಳಿರುವ ಭಾರತದಲ್ಲಿ ಆಯಾ ಮತದ ವಿವಿಧ ಆಚರಣೆಗಳಿಗೆ ಅನುಗುಣವಾಗಿ ಕಾನೂನುಗಳಿವೆ. ವಿವಿಧ ಮತಗಳಿಗೆ ಆಯಾ ಮತದ ವೈಯುಕ್ತಿಕ ಕಾನೂನುಗಳಿವೆ. ಅಂದರೆ ಕೌಟುಂಬಿಕ, ವಿವಾಹ, ವಿಚ್ಛೇದನ, ದತ್ತು ಸ್ವೀಕಾರ, ಆಸ್ತಿ ಇತ್ಯಾದಿ ವಿಚಾರಗಳಿಗೆ ಸಂಬಂಧಿಸಿದಂತೆ ಆಯಾ ವೈಯುಕ್ತಿಕ ಕಾನೂನುಗಳಿಗೆ ಅನುಗುಣವಾಗಿ ತೀರ್ಪುಗಳೂ ಬರುತ್ತವೆ. ಸಮಾನ ನಾಗರಿಕ ಸಂಹಿತೆ ಇದೆಲ್ಲವನ್ನೂ ತೆಗೆದು ಹಾಕಿ ಜಾತಿ, ಮತ ಭೇದವಿಲ್ಲದೆ ಒಂದೇ ಕಾನೂನಿನಡಿ ಎಲ್ಲರೂ ಬರುವಂತೆ ಮಾಡುತ್ತದೆ. ಸಮಾನ ನಾಗರಿಕ ಸಂಹಿತೆ ಪ್ರಜಾಪ್ರಭುತ್ವ ರಾಷ್ಟ್ರವೊಂದರ ನೈಜ ಜಾತ್ಯಾತೀತ ಲಕ್ಷಣವೂ ಹೌದು. ಇದರಿಂದ ಕೇವಲ ಮುಸ್ಲಿಂ ಮಹಿಳೆಯರಿಗೆ ಮಾತ್ರ ನ್ಯಾಯ ಸಿಕ್ಕಿದಂತಾಗುವುದಿಲ್ಲ; ಇಲ್ಲಿನ ಬಹುಸಂಖ್ಯಾತರಿಗೂ ನ್ಯಾಯ ಸಿಗುತ್ತದೆ.  ಇದು ಸಮಾನತೆಯನ್ನು ಪ್ರತಿಪಾದಿಸುತ್ತದೆ; ಮಹಿಳೆಯರ ಹಕ್ಕುಗಳಿಗೂ ಪೂರಕವಾಗಿದೆ. ಮತದ ಹೆಸರಲ್ಲಿ ನಡೆಯುವ ಅನ್ಯಾಯಕ್ಕೂ ಇದು ಅಂತ್ಯ ಹಾಡುತ್ತದೆ. ಮತ ಬ್ಯಾಂಕ್ ರಾಜಕಾರಣವನ್ನೂ ನಿಲ್ಲಿಸುತ್ತದೆ. ಅಲ್ಲದೇ ನ್ಯಾಯಾಂಗದ ಹೊರೆಯನ್ನು ಕಡಿಮೆಗೊಳಿಸುವುದಕ್ಕೂ, ಮಹತ್ವದ ಸಮಯದ ಉಳಿತಾಯಕ್ಕೂ ಇದು ಪ್ರಯೋಜನಕಾರಿ.


             ದೇಶದಲ್ಲಿ ಸಮಾನ ನಾಗರಿಕ ಸಂಹಿತೆಯ ಬೇಡಿಕೆ ಇಂದು ನಿನ್ನೆಯದಲ್ಲ. ಬ್ರಿಟಿಷರ ಕಾಲದಲ್ಲೇ ಅದು ಹುಟ್ಟಿತ್ತು. 1840ರಲ್ಲೇ ಭಾರತದಲ್ಲಿ ಏಕರೂಪದ ಕಾನೂನು ಬೇಕು ಎಂಬ ಬಗ್ಗೆ ದಿ ಲೆಕ್ಸ್‌ ಲೊಸಿ ವರದಿ ಸಲ್ಲಿಕೆಯಾಗಿತ್ತು. ದೇಶ ಸ್ವತಂತ್ರವಾದ ಬಳಿಕ ಸಂವಿಧಾನ ರಚನೆ ಸಂದರ್ಭ ಇದರ ಬಗ್ಗೆ ಚರ್ಚೆಯಾಗಿತ್ತು. ಆದರೆ ಸೆಕ್ಯುಲರ್ ತಲೆಗಳೇ ಹೆಚ್ಚಿದ್ದ ಕಾರಣ ಬ್ರಿಟಿಷ್ ಪಳಿಯುಳಿಕೆ ಕಾನೂನುಗಳನ್ನು ಮುಂದುವರೆಸಿ, "ಭಾರತದ ಭೌಗೋಳಿಕ ಪ್ರದೇಶಾದ್ಯಂತ ಪೌರರ ಹಿತವನ್ನು ಕಾಪಾಡುವುದಕ್ಕಾಗಿ ಏಕರೂಪ ನಾಗರಿಕ ಸಂಹಿತೆ ಅಳವಡಿಸುವುದು ಸರ್ಕಾರದ ಕರ್ತವ್ಯ" ಎಂದು ಸಂವಿಧಾನದ ಅನುಚ್ಛೇದ 44ರಲ್ಲಿ, ರಾಜ್ಯನೀತಿಯ ನಿರ್ದೇಶಕ ತತ್ತ್ವಗಳಲ್ಲಿ ಇದನ್ನು ಸೇರಿಸಿಲಾಯಿತು. ಅಷ್ಟೇ ಅಲ್ಲ, ಹಿಂದೂ ವೈಯಕ್ತಿಕ ಕಾನೂನಿನಲ್ಲಿ ಮೂಲಭೂತ ಬದಲಾವಣೆಗಳನ್ನು ತರುವ ಪ್ರಯತ್ನಕ್ಕೂ ಆ ಸಂದರ್ಭದಲ್ಲಿ ಪ್ರಯತ್ನಿಸಲಾಯಿತು. ಈ ಕ್ರಮದಿಂದ, ಕೆಲವೇ ಮಂದಿಯ 'ಪ್ರಗತಿಪರ ವಿಚಾರಗಳನ್ನು' ಇಡೀ ಹಿಂದೂ ಸಮುದಾಯದ ಮೇಲೆ ಹೇರಿದಂತಾಗುತ್ತದೆ ಎಂದು ಸಂವಿಧಾನರಚನಾ ಸಭೆಯ ಅಧ್ಯಕ್ಷರಾಗಿದ್ದ ಬಾಬೂ ರಾಜೇಂದ್ರ ಪ್ರಸಾದ್ 1948ರಲ್ಲಿ ಎಚ್ಚರಿಕೆ ನೀಡಿದ್ದರು. ಈ ಪ್ರಯತ್ನವನ್ನು ಸರ್ದಾರ್ ವಲ್ಲಭಭಾಯಿ ಪಟೇಲ್, ಪಟ್ಟಾಭಿ ಸೀತಾರಾಮಯ್ಯ, ಎಂ. ಎ. ಅಯ್ಯಂಗಾರ್, ಕೈಲಾಸನಾಥ ಕಾಟ್ಜು ಹಾಗೂ ಮದನಮೋಹನ ಮಾಳವೀಯರೂ ವಿರೋಧಿಸಿದ್ದರು. 1949ರ ಡಿಸೆಂಬರ್ ತಿಂಗಳಿನಲ್ಲಿ ಹಿಂದು ಸಂಹಿತೆ ವಿಧೇಯಕ (ಹಿಂದು ಕೋಡ್ ಬಿಲ್) ಕುರಿತು ಚರ್ಚೆ ನಡೆದಾಗ 28 ಮಂದಿ ಸದಸ್ಯರ ಪೈಕಿ 23 ಮಂದಿ ವಿಧೇಯಕವನ್ನು ವಿರೋಧಿಸಿದರು. ವಿಧೇಯಕವನ್ನು ಸಂಸತ್ತಿಗೆ ವಾಪಸು ಕಳಿಸುವುದಾಗಿ ಇಲ್ಲವೇ ಅದರ ವಿರುದ್ಧ 'ವಿಟೋ' ಅಧಿಕಾರ ಚಲಾಯಿಸುವುದಾಗಿ ರಾಷ್ಟ್ರಪತಿ ಬಾಬೂ ರಾಜೇಂದ್ರ ಪ್ರಸಾದ್ ಅವರು 1951ರ ಸೆಪ್ಟಂಬರ್ 15ರಂದು ನೇರ ಬೆದರಿಕೆ ಹಾಕಿದರು. ಅಂದರೆ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಹಿಂದೂಗಳ ನಂಬಿಕೆ, ಆಚರಣೆಗಳನ್ನು ಪ್ರಗತಿಪರತೆ, ಜಾತ್ಯಾತೀತತೆಯ ಸೋಗಿನಲ್ಲಿ ಹಿಂದೂ ಬಿಲ್ ಕೋಡ್ ಮೂಲಕ ನಿಷ್ಕ್ರಿಯಗೊಳಿಸಲು ಸಂಚು ಹಾಕಲಾಗಿತ್ತು! ಆದರೆ ಇದೇ ಚರ್ಚೆ ಉಳಿದ ಮತೀಯರ ವೈಯುಕ್ತಿಕ ಕಾನೂನುಗಳ ವಿಷಯದಲ್ಲಿ ನಡೆಯಲಿಲ್ಲ. ಅವುಗಳಲ್ಲಿ ಸುಧಾರಣೆ ತರುವ ಪ್ರಯತ್ನಕ್ಕೆ ಕೈ ಹಾಕಲೇ ಇಲ್ಲ. ಕಾರಣ ಅದರಿಂದ ನೆಹರೂರ ಮತಬ್ಯಾಂಕಿಗೆ ನಷ್ಟವಾಗುತ್ತಿತ್ತು.


              1985ರಲ್ಲಿ ಶಾ ಬಾನೋ ಪ್ರಕರಣದ ಸಂದರ್ಭ, ಸಮಾನ ನಾಗರಿಕ ಸಂಹಿತೆ ಜಾರಿಗೊಳಿಸುವಂತೆ ಸುಪ್ರೀಂ ಕೋರ್ಟ್ ಸಂಸತ್ತಿಗೆ ನಿರ್ದೇಶನ ನೀಡಿತ್ತು. ಏಕರೂಪದ ನಾಗರಿಕ ಸಂಹಿತೆ ಬಗ್ಗೆ ಸುಪ್ರೀಂ ಕೋರ್ಟ್‌ ಅಭಿಪ್ರಾಯ ವ್ಯಕ್ತಪಡಿಸಿದ ಮೊದಲ ಪ್ರಕರಣ ಇದು. 5 ಮಕ್ಕಳ ತಾಯಿಯಾಗಿದ್ದ ಶಾ ಬಾನೋಗೆ ಆಕೆಯ ಪತಿ ತ್ರಿವಳಿ ತಲಾಖ್ ಹೇಳಿ 1978ರಲ್ಲಿ ವಿಚ್ಛೇದನ ನೀಡಿದ್ದ. ಆಕೆ ತನ್ನ ಮಾಜಿ ಪತಿಯಿಂದ ಜೀವನಾಂಶ ಪಡೆವ ಸಲುವಾಗಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಭಾರತೀಯ ದಂಡ ಸಂಹಿತೆ ಸೆಕ್ಷನ್ 125 ಪ್ರಕಾರ ತಲಾಖ್ ನೀಡಿದ ಪತಿಯಿಂದ ಜೀವನಾಂಶ ಕೇಳುವ ಹಕ್ಕು ಆಕೆಗಿದೆ ಎಂದು ಜೀವನಾಂಶ ನೀಡುವಂತೆ ನ್ಯಾಯಪೀಠ ಆದೇಶಿಸಿತ್ತು. ಆದರೆ ಮುಸಲ್ಮಾನರ ಒತ್ತಡದಿಂದ ಜೊತೆಗೆ ತನ್ನ ಮತಬ್ಯಾಂಕ್ ಭದ್ರಪಡಿಸಿಕೊಳ್ಳುವ ಸಲುವಾಗಿ ಮಧ್ಯಪ್ರವೇಶಿಸಿದ ರಾಜೀವ್‌ ಗಾಂಧಿ ಇದು ಮುಸ್ಲಿಂ ವೈಯಕ್ತಿಕ ಕಾನೂನುಗಳಿಗೆ ವಿರುದ್ಧ ಎಂದು ಹೇಳಿ, ಇದಕ್ಕೆ ವಿರುದ್ಧವಾದ ಮುಸ್ಲಿಂ ಮಹಿಳೆಯರ (ರಕ್ಷಣೆ ಮತ್ತು ಹಕ್ಕುಗಳು, ವಿಚ್ಛೇದನ ಕುರಿತ ಹಕ್ಕು) ಕಾಯ್ದೆ-1986ನ್ನು ಜಾರಿಗೆ ತಂದರು. ಸಂವಿಧಾನದ ಆಶಯದ ವಿರುದ್ಧವಾಗಿ ನಡೆಸಿದ ಈ ಉಪಕ್ರಮದಲ್ಲಿ ಜಾತ್ಯಾತೀತ ತತ್ವಗಳು ಎಲ್ಲಿ ಅಡಗಿದ್ದವು? ಭಾರತದಲ್ಲಿ ಮುಸ್ಲಿಮರಿಗೆ ವೈಯಕ್ತಿಕ ಕಾನೂನು ಆಗಿ ಷರೀಯತ್ ಮತ್ತು ಹದಿತ್ ಗಳ ಕಾನೂನು ಪಾಲನೆಗೆ ಮುಸ್ಲಿಂ ವೈಯಕ್ತಿಕ ಕಾನೂನು(ಷರೀಯತ್) ಅನ್ವಯ ಕಾಯ್ದೆ-1937 ಅವಕಾಶ ಮಾಡಿಕೊಟ್ಟಿದೆ. ಸ್ವಾತಂತ್ರ್ಯಾನಂತರವೂ, ದೇಶ ಒಡೆದು ಮುಸ್ಲಿಮರಿಗೆ ಪ್ರತ್ಯೇಕ ಭಾಗ ಕೊಟ್ಟ ಬಳಿಕವೂ ಈ ಬ್ರಿಟಿಷ್ ಪಳಿಯುಳಿಕೆಯನ್ನೇ ಮುಂದುವರೆಸಿದ್ದು ಮಾತ್ರ ವಿಪರ್ಯಾಸ. ಯಾವುದಾದರೂ ಬಿಕ್ಕಟ್ಟಿಗೆ ಕುರಾನ್ ಚೌಕಟ್ಟಿನಲ್ಲಿ ಪರಿಹಾರ ಸಿಗದಿದ್ದಲ್ಲಿ ಷರೀಯತನ್ನು ವ್ಯಾಖ್ಯಾನ ಮಾಡುವ ಅವಕಾಶ ಮುಸ್ಲಿಂ ಮತದ ಗುರುಗಳಿಗಿದೆ. ಆದರೆ, ಮುಸ್ಲಿಂ ಮಹಿಳೆಯ ವಿಷಯಕ್ಕೆ ಬಂದಾಗ, ಲಿಂಗ ಮತ್ತು ಮತಾಚರಣೆಯ ವಿಷಯದಲ್ಲಿ ಸಮಾನತೆ ಇಲ್ಲ, ತಾರತಮ್ಯ ನೀತಿ ವಿರುದ್ಧ ರಕ್ಷಣೆಯೂ ಸಿಗುವುದಿಲ್ಲ. ಬಹುಪತ್ನಿತ್ವ ಪದ್ಧತಿಯು ಇಸ್ಲಾಂನ ಅವಿಭಾಜ್ಯ ಅಂಗವೂ ಅಲ್ಲ. ಆದರೆ ಮತಬ್ಯಾಂಕಿಗಾಗಿ ಈ ವೈಯುಕ್ತಿಕ ಕಾನೂನನ್ನು ಮುಂದುವರೆಸಿದ್ದು ಕಾಂಗ್ರೆಸ್ಸಿನ ಕುಟಿಲ ನೀತಿ. ಢೋಂಗಿ ಜಾತ್ಯಾತೀತತೆ ಮತ್ತು ಮತಬ್ಯಾಂಕ್ ರಾಜಕಾರಣ ಯಾವ ಕನಿಷ್ಠ ಮಟ್ಟಕ್ಕೆ ಇಳಿದಿದೆಯೆಂದರೆ ವಕ್ಫ್ ಮಂಡಳಿಗೆ ನ್ಯಾಯಾಂಗ(ಷರಿಯಾ ಕೋರ್ಟ್) ಸ್ಥಾನಮಾನ ನೀಡುವ ಕುರಿತು ತೆಲಂಗಾಣ ಸರಕಾರ ಯೋಚಿಸುತ್ತಿದೆ.


             ಭಾರತದ ಜನಸಂಖ್ಯೆ ನಾಗಾಲೋಟದಿಂದ ಏರುತ್ತಲೇ ಇದೆ. ಇದರಿಂದ ನಿರುದ್ಯೋಗವೂ ಹೆಚ್ಚುತ್ತಿದೆ. ಇದು ಅಭಿವೃದ್ಧಿಯ ಮೇಲೆ ನೇರ ಪರಿಣಾಮ ಬೀರುತ್ತಿದೆ. ಹೀಗೆ ಜನಸಂಖ್ಯೆ ಹೆಚ್ಚಲು ಕಾರಣವೇನು? ಹಿಂದೂಗಳು ಸೇರಿದಂತೆ ಕೆಲವು ಮತೀಯರು ಸ್ವನಿಯಂತ್ರಣ ಹೇರಿಕೊಂಡಿರುವಾಗ ಮುಸ್ಲಿಮರಲ್ಲಿ ಮಾತ್ರ(ಕೆಲವು ಪ್ರಜ್ಞಾವಂತರನ್ನು ಹೊರತುಪಡಿಸಿ) ಅಂತಹಾ ಯಾವುದೇ ಉಪಕ್ರಮ ಯಾಕಿಲ್ಲ? ಇದರ ಜೊತೆಗೆ ಬಹುಪತ್ನಿತ್ವವೂ ಸೇರಿ ಜನಸಂಖ್ಯೆಯ ಏರಿಕೆಗೆ ಕಾರಣವಾಗಿರುವುದು ಢೋಂಗಿ ಸೆಕ್ಯುಲರ್ ಅಲ್ಲದ ಕಣ್ಣಿಗೆ ರಾಚುವ ಸತ್ಯ. ಪ್ರಜಾಪ್ರಭುತ್ವದಲ್ಲಿ ಸಂಖ್ಯಾಬಲಕ್ಕೆ ಹೆಚ್ಚಿನ ಮಹತ್ವವಿರುವುದರಿಂದ ಜೊತೆಗೆ ವೈಯುಕ್ತಿಕ ಮತೀಯ ಕಾನೂನಿನ ಬಲವೂ, ಮತೀಯ ಮುಖಂಡರ ಪ್ರೇರೇಪಣೆಯೂ ಸೇರಿ ತಮ್ಮ ಸಂಖ್ಯಾ ಬಲವನ್ನು ಹೆಚ್ಚಿಸಿಕೊಳ್ಳುವ ಈ ಕಾರ್ಯಕ್ಕೆ ಸಮಾನ ಕಾನೂನು ಅಲ್ಲದೆ ಮತ್ತಿನ್ನಾವುದರಿಂದ ತಡೆ ನೀಡಬಹುದು? ಇಲ್ಲಿ ಕೇವಲ ಜನಸಂಖ್ಯಾ ಹೆಚ್ಚಳದಿಂದ ಮಾತ್ರ ದೇಶಕ್ಕೆ ತೊಂದರೆಯಾಗಿರುವುದಲ್ಲ. ಆ ರೀತಿಯ ಜನಸಂಖ್ಯಾ ಹೆಚ್ಚಳ ದೇಶದ ಕೆಲವು ಜಿಲ್ಲೆಗಳ ಜನಸಂಖ್ಯಾ ಚಿತ್ರಣವನ್ನು ಬದಲಿಸಿ ಅಲ್ಲಿನ  ಸಾಮಾಜಿಕ ಸಮತೋಲನವನ್ನೇ ಹದಗೆಡಿಸಿದೆ. ಕೇರಳ, ಬಂಗಾಳ, ಅಸ್ಸಾಂ, ಬಿಹಾರ, ಆಂಧ್ರಪ್ರದೇಶ, ತೆಲಂಗಾಣದ ಹಲವು ಜಿಲ್ಲೆಗಳು ಈ ಪಟ್ಟಿಯಲ್ಲಿವೆ. ಅಂತಹಾ ಜಿಲ್ಲೆಗಳಲ್ಲಿ ಅಕ್ರಮ ಗೋ ಸಾಗಾಟ & ಹತ್ಯೆ, ಮಾದಕದ್ರವ್ಯ ಜಾಲದಂತಹಾ ಅಕ್ರಮ ಚಟುವಟಿಕೆಗಳು ಮೇರೆ ಮೀರಿವೆ. ಹತ್ಯೆ, ಹೊಡೆದಾಟ, ದಂಗೆ ಕೂಡಾ! ಇಂತಹಾ ಜಿಲ್ಲೆಗಳಲ್ಲಿ ಸಾತ್ವಿಕನಾದ ಪ್ರಜೆಗೆ ನೆಮ್ಮದಿಯ ಜೀವನ ನಡೆಸಲು ಯಾವ ಕಾನೂನು, ಯಾವ ಸರಕಾರ ಸಹಾಯ ಮಾಡುತ್ತದೆ?


                ಕಾನೂನಿನ ಮುಂದೆ ಎಲ್ಲ ನಾಗರಿಕರೂ ಸಮಾನರು ಎನ್ನುವ ವಾಕ್ಯಗಳೆಲ್ಲಾ ಪುಂಖಾನುಪುಂಖವಾಗಿ ಸಿಗುತ್ತವೆ. ಅಲ್ಪಸಂಖ್ಯಾತ, ಬಹುಸಂಖ್ಯಾತ ಹಾಗೂ ಮೀಸಲಾತಿಯ ಕಾನೂನಿನ ಮುಂದೆಯೂ ಎಲ್ಲರೂ ಸಮಾನರೆ? ಯಾವುದಾದರೂ ದೊಡ್ಡ ಸಂಶೋಧನೆಯಾದಾಗ ಅಥವಾ ಸಂಶೋಧನೆಗೆ ಪ್ರಶಸ್ತಿ ಸಿಕ್ಕಿದಾಗ ನೋಡಿ ಭಾರತೀಯರೇ ಇಲ್ಲ ಎನ್ನುವ ಮಾತು ಹೇರಳವಾಗಿ ಕಾಣಸಿಗುತ್ತದೆ. ಕನಿಷ್ಠ ಅಂಕ ಪಡೆದು ಉತ್ತೀರ್ಣನಾಗಿ ಮೀಸಲಾತಿಯ ಮೂಲಕ ಮಹತ್ವದ ಹುದ್ದೆ ಪಡೆದಾತನಿಂದ ಸಾಧನೆ ಹೇಗೆ ಸಾಧ್ಯ?  ಗರಿಷ್ಠ ಅಂಕ ಪಡೆದರೂ ಸಣ್ಣಪುಟ್ಟ ಕೆಲಸ ಸಿಗಲೂ ಪರದಾಡುವ ಪರಿಸ್ಥಿತಿಯಿರುವಾಗ ಭಾರತದಿಂದ ಯಾರೂ ಇಲ್ಲ ಎನ್ನುವ ಮಾತಿಗೆ ಮೂಲ ಕಾರಣ ಏನು ಅಂತ ತಿಳುವಳಿಕೆಯುಳ್ಳ ಯಾರಿಗಾದರೂ ಅರ್ಥವಾಗಬೇಕಲ್ಲವೇ? ಸರಿಯಾದ ಅವಕಾಶ ಕೊಡದೆ ಪ್ರತಿಭಾ ಪಲಾಯನ ಎಂದು ಬೊಬ್ಬಿರಿಯುತ್ತಾ ಇದ್ದರೆ ವಿದೇಶಗಳು ಭಾರತದ ಮೆದುಳುಗಳನ್ನು ಬಳಸಿಕೊಂಡು ಬಲಿಷ್ಠವಾಗುತ್ತಲೇ ಇರುತ್ತವೆ. ಆರ್ಥಿಕವಾಗಿ ಬಲಿಷ್ಟನಾಗಿದ್ದವನೂ ಮೀಸಲಾತಿಯ ಲಾಭ ಪಡೆದು ಕನಿಷ್ಟ ಅಂಕಗಳಿಸಿದ್ದರೂ ಉನ್ನತ ಶಿಕ್ಷಣ ಪಡೆಯುತ್ತಾನೆ, ಉತ್ತಮ ಸರಕಾರೀ ಹುದ್ದೆಯನ್ನು ಪಡೆಯುತ್ತಾನೆ, ಬೇಗನೆ ಭಡ್ತಿಯನ್ನೂ ಹೊಂದುತ್ತಾನೆ! ಅದೇ ಆರ್ಥಿಕವಾಗಿ ದುರ್ಬಲನಾಗಿದ್ದವ ಚತುರಮತಿಯಾಗಿದ್ದು ಉತ್ತಮ ಅಂಕಗಳನ್ನು ಪಡೆದಿದ್ದರೂ ಉನ್ನತ ಶಿಕ್ಷಣ, ಸರಕಾರೀ ನೌಕರಿಯಿಂದ ವಂಚಿತನಾಗುತ್ತಾನೆ. ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂದಾದರೆ ಈ ತಾರತಮ್ಯ ಏಕಿದೆ? ಮೀಸಲಾತಿ ಕಾನೂನಿನಲ್ಲಿರುವ ಅಪಾಯ ಇಷ್ಟಕ್ಕೇ ಸೀಮಿತವಾಗಿಲ್ಲ. ಕ್ರೈಸ್ತ, ಮುಸ್ಲಿಮ್ ಮತೀಯರು ದಲಿತ ಸಮುದಾಯಕ್ಕಿರುವ ಹಕ್ಕನ್ನು ವಂಚನೆಯಿಂದ ತಮ್ಮದಾಗಿಸಿಕೊಳ್ಳುತ್ತಿರುವುದೂ ಯಥೇಚ್ಛವಾಗಿ ನಡೆಯುತ್ತಿದೆ. ಒಂದು ಉದಾಹರಣೆ ಗಮನಿಸಿ; ಎಸ್.ಸಿ ಮೀಸಲು ಕ್ಷೇತ್ರವಾಗಿದ್ದ ಹರಿದ್ವಾರ ಜಿಲ್ಲಾ ಪಂಚಾಯತಿನಲ್ಲಿ ಕಳೆದ ಐದು ವರ್ಷಗಳಿಂದ ಮುಸ್ಲಿಂ ಮಹಿಳೆಯೊಬ್ಬಳು ಸದಸ್ಯೆಯಾಗಿ ಕೂತಿದ್ದಳು. ಮೂಲತಃ ಜಾಟ್ ಆಗಿದ್ದ ಆಕೆ ಮುಸ್ಲಿಮನೊಬ್ಬನನ್ನು ಮದುವೆಯಾಗಿ ಮತಾಂತರವೂ ಆಗಿದ್ದಳು. ಯಾವ ವಿರೋಧ, ಒತ್ತಡಕ್ಕೂ ಆಕೆ ಬಗ್ಗಿರಲಿಲ್ಲ. ಕಾನೂನೂ ಕ್ರಮವೂ ಜರಗಲಿಲ್ಲ. ಕಾನೂನು ಕ್ರಮ ಒತ್ತಟ್ಟಿಗಿರಲಿ, FIR ದಾಖಲಾಗಿದ್ದೇ ಕಳೆದ ವಾರ. ಆಕೆ ಈಗಲೂ ರಾಜಾರೋಷವಾಗಿ ತಿರುಗುತ್ತಲೇ ಇದ್ದಾಳೆ. ಇಂತಹುದ್ದೇ ಪ್ರಕರಣ ನಮ್ಮ ಸಂಸತ್ತಿನಲ್ಲೇ ಇದೆ. 2014ರಲ್ಲಿ ಪಶ್ಚಿಮ ಬಂಗಾಳದ ಆರಾಮ್ ಭಾಗ್ ಕ್ಷೇತ್ರದಿಂದ ಗೆದ್ದಾಕೆ ಆಫ್ರಿನ್ ಅಲಿ. ಅದು ಎಸ್.ಸಿ ಮೀಸಲು ಕ್ಷೇತ್ರ! ಆಕೆ ಹುಟ್ಟಿದ್ದು ಹಿಂದೂವಾಗಿ(ಅಪರೂಪಾ ಪೊದ್ದರ್) ಮದುವೆಯಾಗಿ ಮತಾಂತರವೂ ಆದಳು. ಭಾಜಪಾ ಆಕೆಯ ಮೇಲೆ ಚುನಾವಣಾ ಆಯೋಗಕ್ಕೆ ದೂರು ದಾಖಲಿಸಿದಾಗ ತಾನು ಹೆಸರು ಮಾತ್ರ ಬದಲಾಯಿಸಿದ್ದೇನೆ,ಮತವನ್ನಲ್ಲ ಎಂದಳು! ಅಂದರೆ ಈ ಮೀಸಲಾತಿ ಕಾನೂನಿನ ದುರುಪಯೋಗ ಅದೆಷ್ಟು ನಡೆದಿದೆ. ನಿಜವಾಗಿ ತುಳಿತಕ್ಕೊಳಗಾದವರಿಗೆ ಅದರ ಉಪಯೋಗವೇ ಆಗುತ್ತಿಲ್ಲ. ಮೀಸಲಾತಿಯನ್ನು ಬಳಸಿಕೊಂಡು ಬಲಿಷ್ಠನಾದವನೇ ತನಗೆ, ತನ್ನ ಮಕ್ಕಳಿಗೆ ಅನ್ನುತ್ತಾ ಪದೇ ಪದೇ ಅದನ್ನು ಬಳಸುತ್ತಾ ಅರ್ಹರಿಗೆ ಸಿಗದಂತೆ ಮಾಡುತ್ತಿರುವ ಪ್ರಕರಣಗಳು ಅದೆಷ್ಟಿವೆ? ಸಮಾನ ನಾಗರಿಕ ಸಂಹಿತೆ ಅನುಷ್ಠಾನವಾದರೆ ಇಂತಹಾ ಅನ್ಯಾಯ, ಅಪಸವ್ಯಗಳಿಗೆ ಅವಕಾಶವೇ ಇಲ್ಲವಲ್ಲ.


              ಹಿಂದೂ ಮತ್ತು ಕ್ರೈಸ್ತ ವಿವಾಹ ಕಾನೂನು ಪ್ರಕಾರ ಪುರುಷನಿಗೆ 21, ಮಹಿಳೆಗೆ 18 ವರ್ಷ ಪೂರ್ತಿಯಾಗಿರಬೇಕು. ಆದರೆ ಮುಸ್ಲಿಂ ವೈಯಕ್ತಿಕ ಕಾನೂನು ಪ್ರಕಾರ, 15 ವರ್ಷಕ್ಕೆ ಮೈನೆರೆದರೆ ಮದುವೆ ಮಾಡಬಹುದು. ಹಿಂದು ವಿವಾಹ ಕಾಯ್ದೆ 1955ರ ಪ್ರಕಾರ ಬಹುಪತ್ನಿತ್ವ ಶಿಕ್ಷಾರ್ಹ ಅಪರಾಧ. ಕ್ರೈಸ್ತ ಧಾರ್ವಿುಕ ಕಾನೂನು ಪ್ರಕಾರವೂ ನಿಷೇಧವಿದೆ. ಮುಸ್ಲಿಂ ವೈಯಕ್ತಿಕ ಕಾನೂನು ನಾಲ್ವರು ಪತ್ನಿಯರನ್ನು ಹೊಂದಲು ಪುರುಷನಿಗೆ ಅವಕಾಶ ಕಲ್ಪಿಸುತ್ತದೆ. ಒಂದು ವರ್ಷ ಅಥವಾ ಅದಕ್ಕಿಂತ ಹೆಚ್ಚು ವರ್ಷ ಪತಿ-ಪತ್ನಿ ಬೇರೆ ಬೇರೆ ವಾಸವಿದ್ದರೆ ಹಿಂದೂ ವೈಯಕ್ತಿಕ ಕಾನೂನು ವಿಚ್ಛೇದನಕ್ಕೆ ಅನುಮತಿಸುತ್ತದೆ. ಕ್ರೈಸ್ತ ವೈಯಕ್ತಿಕ ಕಾನೂನು ಪ್ರಕಾರ 2 ವರ್ಷ. ಮುಸ್ಲಿಂ ವೈಯಕ್ತಿಕ ಕಾನೂನು ಪ್ರಕಾರ ತ್ರಿವಳಿ ತಲಾಖ್ ಹೇಳಿದರಷ್ಟೇ ಸಾಕಿತ್ತು. ಕಳೆದ ವರ್ಷ ತ್ರಿವಳಿ ತಲಾಖ್ ಅನ್ನು ಮೋದಿ ಸರಕಾರ ನಿಷೇಧಿಸಿದ ಕಾರಣ ಮುಸ್ಲಿಂ ಹೆಂಗಳೆಯರು ನಿಟ್ಟುಸಿರು ಬಿಡುವಂತಾಗಿದೆ. ಟರ್ಕಿ, ಮೊರಾಕ್ಕೋ, ಟ್ಯುನೀಷಿಯಾ, ಇಂಡೋನೇಷ್ಯಾದಂತಹಾ ಮುಸ್ಲಿಂ ಬಹುಸಂಖ್ಯಾತ ದೇಶಗಳಲ್ಲೇ ಬಹುಪತ್ನಿತ್ವಕ್ಕೆ ನಿಷೇಧ ಇರುವಾಗ ಭಾರತದಂತಹಾ ಜಾತ್ಯಾತೀತ ರಾಷ್ಟ್ರದಲ್ಲಿ ಮುಸ್ಲಿಮರಿಗೊಂದು ಪ್ರತ್ಯೇಕ ಕಾನೂನು ಏಕಿದೆ?


              ಪ್ರತೀ ಬಾರಿ ಮುಸ್ಲಿಮರನ್ನು ಪ್ರತ್ಯೇಕ ಭಾವದಿಂದ ನೋಡಲಾಗುತ್ತದೆ ಎಂಬ ಮಾತು ಕೆಲವು ಬುದ್ಧಿಹೀನ ಜೀವಿಗಳಿಂದ ಬರುತ್ತದೆ. ಆದರೆ ದೇಶದ ಏಕರೂಪದ ಕಾನೂನು ಬಿಟ್ಟು ತಮ್ಮದೇ ಮತೀಯ ಕಾನೂನು ತಮಗಿರಬೇಕು ಎಂದು ಒತ್ತಾಯಿಸಿ ಅವರೇ ಪಡೆದುಕೊಂಡ ಮೇಲೆ ಪ್ರತ್ಯೇಕವಾಗಿರುವುದೇ ಅವರ ಸ್ವಭಾವವೆಂದಾಯಿತಲ್ಲವೇ? ಪ್ರತ್ಯೇಕವಿರಬೇಕು ಎಂಬ ಕಾರಣಕ್ಕೆ ದೇಶವನ್ನು ವಿಭಜಿಸಿದ್ದೂ ಅವರೇ ಅಲ್ವೇ. ಇಂದಿಗೂ ಈ ನೆಲದ ಕಾನೂನಿಗೆ ಗೌರವ ಕೊಡದೆ ಸಿಕ್ಕಲ್ಲೆಲ್ಲಾ ಬಾಂಬು ಇಡುವುದು, ಮಾದಕ ದ್ರವ್ಯಗಳ ಸರಬರಾಜು ಮಾಡುವುದು, ಗುಂಪಲ್ಲಿ ಬಂದು ಹಿಂದೂಗಳ ಮನೆ ಸುಡುವುದು, ತಮಗೆ ಮಾರಕವೇ ಆಗದ ಸಿಎಎ ವಿರುದ್ಧ ನಿಲ್ಲುವುದು, ಭಯೋತ್ಪಾದನೆಯ ವಿರುದ್ಧ ಮಾತಾಡದೇ ಇರುವುದು ಇವೆಲ್ಲಾ ಅವರ ಪ್ರತ್ಯೇಕತಾ ಮನಃಸ್ಥಿತಿಯೇ ಅಲ್ಲವೇ? ಇತ್ತೀಚೆಗೆ ನಮ್ಮ ದೇಶದಲ್ಲಿ ಈ ಸಮಾನ ನಾಗರಿಕ ಸಂಹಿತೆ ಜಾರಿಗೆ ಬರಬಾರದು ಎಂದು ವಿರೋಧಿಸಿ ಮುಸ್ಲಿಂ ಹೆಣ್ಣುಮಕ್ಕಳ ಸಂಘಟನೆಯೊಂದು ಪ್ರತಿಭಟನೆ ನಡೆಸಿತು. ಎದುರಿಗೆ ಮಹಿಳಾ ಸಂಘಟನೆಗಳ ಒಕ್ಕೂಟ ಎಂದು ಬ್ಯಾನರ್ ಕೈಯಲ್ಲಿ ಹಿಡಿದಿದ್ದ ಯುವಕರಿಂದ ಹಿಡಿದು ಆ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿದ ಅಷ್ಟೂ ಜನರೂ ಪುರುಷರೇ ಆಗಿದ್ದರು! ಒಬ್ಬಳೇ ಒಬ್ಬ ಮಹಿಳೆಯ ಮುಖ ಅದರಲ್ಲಿ ಕಾಣಿಸಲಿಲ್ಲ. ಈ ಸಮಾನ ನಾಗರಿಕ ಸಂಹಿತೆಗೆ ಮುಸ್ಲಿಂ ಪುರುಷರು ಹೆದರುವುದು ಯಾಕೆ? ನಮ್ಮ ಮತವೇ ನಮಗೆ ಕಾನೂನು, ಅನ್ನ, ನೀರು ಕೊಟ್ಟ ನೆಲದ ಕಾನೂನಲ್ಲ ಎಂಬ ಪ್ರತ್ಯೇಕತಾ ಮನೋಭಾವೇ ಅಲ್ಲವೇ?


            2019 ಸೆಪ್ಟೆಂಬರಿನಲ್ಲಿ ಗೋವಾದ ಆಸ್ತಿ ಸಂಬಂಧಿತ ವಿಷಯವೊಂದರ ವಿಚಾರಣೆ ಸಂದರ್ಭದಲ್ಲಿ ಸಮಾನ ನಾಗರಿಕ ಸಂಹಿತೆಯ ಉತ್ತಮ ಉದಾಹರಣೆ ಎಂದು ಗೋವಾ ರಾಜ್ಯವನ್ನು ಸುಪ್ರೀಂ ಕೋರ್ಟು ಬಣ್ಣಿಸಿತು. ಇಡೀ ದೇಶಕ್ಕೆ ಸಮಾನ ನಾಗರಿಕ ಸಂಹಿತೆ ಜಾರಿಯಾಗುವ ನಿರೀಕ್ಷೆಯನ್ನೂ ವ್ಯಕ್ತಪಡಿಸಿತು. ಪೂರ್ಣವಾದ ಕಾನೂನು ಅಲ್ಲದಿದ್ದರೂ, ಅದಕ್ಕೆ ಸನಿಹವಾದ ಏಕರೂಪ ನಾಗರಿಕ ಸಂಹಿತೆಯೊಂದು ಗೋವಾದಲ್ಲಿದೆ. ಗೋವಾ ನಾಗರಿಕ ಸಂಹಿತೆ ಅಥವಾ ಗೋವಾ ಕೌಟುಂಬಿಕ ಕಾನೂನು ಎಂಬ ಹೆಸರಲ್ಲಿ ಇದು ಅಸ್ತಿತ್ವದಲ್ಲಿದೆ. ಭಾರತದ ಉಳಿದ ರಾಜ್ಯಗಳಲ್ಲಿರುವ ವೈಯಕ್ತಿಕ ಕಾನೂನುಗಳು ಇಲ್ಲಿಲ್ಲ. ವಿವಾಹಿತ ಪುರುಷ-ಮಹಿಳೆಗೆ ಆಸ್ತಿ ಮೇಲೆ ಸಮಾನ ಹಕ್ಕಿದೆ. ವಿಚ್ಛೇದನವಾದರೆ ಆಸ್ತಿ ಸಮಾನ ಹಂಚಿಕೆಯಾಗುತ್ತದೆ. ಪಿತ್ರಾರ್ಜಿತ ಆಸ್ತಿಯಲ್ಲಿ ಅರ್ಧದಷ್ಟರ ಮೇಲೆ ಮಕ್ಕಳಿಗೆ ಹಕ್ಕಿರುತ್ತದೆ. ಮುಸ್ಲಿಮರು ಬಹುಪತ್ನಿತ್ವ ಪಾಲಿಸುವಂತಿಲ್ಲ. ಗೋವಾದಲ್ಲಿ ಪಾಲನೆಯಾಗುವ ಕಾನೂನು ಇಡೀ ದೇಶಕ್ಕೆ ಯಾಕೆ ಸಾಧ್ಯವಿಲ್ಲ?


              ಬ್ರಿಟಿಷರ ಒಡೆದಾಳುವ ನೀತಿಯನ್ನು ತನ್ನದಾಗಿಸಿಕೊಂಡ ಕಾಂಗ್ರೆಸ್ ೬೦ ವರ್ಷಗಳ ಕಾಲ ತಾನೇ ಕೊಟ್ಟ ಜಾತ್ಯಾತೀತ ರಾಷ್ಟ್ರವೆಂಬ ಹಣೆಪಟ್ಟಿಯನ್ನು ಕೇವಲ ಭಾಷಣಗಳಿಗೆ ಸೀಮಿತವಾಗಿಸಿ, ಓಲೈಕೆ ರಾಜಕಾರಣದ ವಿಷಬೀಜವನ್ನು ಬಿತ್ತಿ, ಅದನ್ನು ಹೆಮ್ಮರವಾಗಿಸಿತು. ಇದರಿಂದ ಈ ರಾಷ್ಟ್ರದಲ್ಲಿ ಜಾತಿ, ಮತಗಳೇ ಇಂದು ಎಲ್ಲ ಕ್ಷೇತ್ರಗಳ ಪ್ರಮುಖ ವಿಚಾರ ಹಾಗೂ ವಿವಾದಗಳಾಗಿ ಪರಿವರ್ತನೆಯಾಗಿದ್ದು, ವಿಶ್ವ ಭ್ರಾತೃತ್ವವನ್ನು ಪ್ರಪಂಚಕ್ಕೆ ಸಾರಿದ ಭಾರತದ ಮಾನವನ್ನು ಜಾಗತಿಕ ಮಟ್ಟದಲ್ಲಿ ಹರಾಜು ಹಾಕಿತು. ಇಂದು ಹೆಮ್ಮರವಾಗಿ ಬೆಳೆದು ನಿಂತಿರುವ ಈ ವಿಚಾರಗಳು ಸಂವಿಧಾನದ ಮೂಲ ಆಶಯ ಹಾಗೂ ಈ ದೇಶದ ಅತ್ಯುನ್ನತ ನ್ಯಾಯಾಂಗ ವ್ಯವಸ್ಥೆಯನ್ನೇ ಉಲ್ಲಂಘಿಸುವ ಮಟ್ಟಕ್ಕೆ ಮತಾಧಾರಿತ ಕಾನೂನು ಹಾಗೂ ವ್ಯವಸ್ಥೆಗಳನ್ನು ರೂಪಿಸಿ, ಸುಸಂಸ್ಕೃತ ಸಮಾಜವನ್ನೇ ನಾಶ ಮಾಡಲು ಅವಕಾಶ ಮಾಡಿಕೊಟ್ಟಿವೆ. ಈ ಎಲ್ಲಾ ಅಪಸವ್ಯಗಳಿಗೆ ಕೊನೆ ಹಾಡಬೇಕಾದರೆ ಸಮಾನ ನಾಗರಿಕ ಸಂಹಿತೆ ಜಾರಿಯಾಗಲೇಬೇಕು. ಹಾಂ…..ಕೇವಲ ವಿವಾಹ, ವಿಚ್ಛೇದನ, ದತ್ತು, ಪೋಷಕತ್ವ ಮತ್ತು ಮಗುವಿನ ಪಾಲನೆ, ನಿರ್ವಹಣೆ, ಉತ್ತರಾಧಿಕಾರಿ ಮತ್ತು ವಾರಸುದಾರಿಕೆ ವಿಷಯಗಳಿಗೆ ಮಾತ್ರ ಸಮಾನ ನಾಗರಿಕ ಸಂಹಿತೆ ಸೀಮಿತವಾಗಬಾರದು. ಶಿಕ್ಷಣ, ಮೀಸಲಾತಿ ಸೇರಿದಂತೆ ಸಾರ್ವಜನಿಕವಾದ ಎಲ್ಲಾ ರೀತಿಯ ವಿಚಾರಗಳಿಗೂ ಅನ್ವಯವಾಗಬೇಕು. ಕೇವಲ ಸಮಾನ ನಾಗರಿಕ ಸಂಹಿತೆ ಜಾರಿಯಾಗುವುದರಿಂದ ಪ್ರಯೋಜನವಿಲ್ಲ. ಅದರ ಅನುಷ್ಠಾನವೂ ಸರಿಯಾದ ರೀತಿಯಲ್ಲಿ ನಡೆಯಬೇಕು. ಈಗಿನಂತೆ ಕಾನೂನು ಇದ್ದರೂ ಮತಾಂಧರಿಗೆ ಹೆದರಿಯೋ, ಸೆಕ್ಯುಲರ್ ಬುದ್ಧಿಗೆ ಬಲಿ ಬಿದ್ದೋ ಆ ಕಾನೂನನ್ನು ಅನುಷ್ಠಾನಗೈಯ್ಯದಿರುವ ಅವ್ಯವಸ್ಥೆಗೆ ಅದೂ ಬಲಿಯಾಗಬಾರದು. ಆಗ ಮಾತ್ರ ಸಾಮಾನ್ಯ ಪ್ರಜೆಯೊಬ್ಬ ನೆಮ್ಮದಿಯ ಜೀವನ ನಡೆಸಲು ಸಾಧ್ಯ.


           "118ನೇ ವಿಧಿಯಲ್ಲಿನ ಭಾರತೀಯ ಉತ್ತರಾಧಿಕಾರ ಕಾಯ್ದೆಯು ಅಸಂವಿಧಾನಾತ್ಮಕ. 44ನೇ ವಿಧಿಯನ್ವಯ ಸಮಾನ ನಾಗರಿಕ ಸಂಹಿತೆಯನ್ನು ಜಾರಿಗೊಳಿಸುವುದು ಸರ್ಕಾರದ ಕರ್ತವ್ಯ" ಎಂದು ನ್ಯಾಯಮೂರ್ತಿ ವಿ.ಎಸ್ ಖಾರೆ ನೇತೃತ್ವದ ತ್ರಿಸದಸ್ಯ ನ್ಯಾಯಪೀಠವು 2003ರಲ್ಲಿ ಅಭಿಪ್ರಾಯಪಟ್ಟಿತ್ತು. 2015 ಅಕ್ಟೋಬರಿನಲ್ಲಿ ಸಮಾನ ನಾಗರಿಕ ಸಂಹಿತೆಯ ಅವಶ್ಯಕತೆಯನ್ನು ಎತ್ತಿಹಿಡಿದ ಸರ್ವೋಚ್ಛ ನ್ಯಾಯಾಲಯ‌ "ದೇಶದಲ್ಲಿ ಹಲವು ಧಾರ್ಮಿಕ ಕಟ್ಟುಪಾಡುಗಳ ವೈಯಕ್ತಿಕ ಕಾನೂನುಗಳಿಂದ ಗೊಂದಲವಿದೆ. ವಿವಿಧ ವಿಚಾರಗಳಿಗೆ ಸಂಬಂಧಿಸಿದಂತೆ ಮತಗಳಿಗೆ ಅವುಗಳದ್ದೇ ಆದ ನಿರ್ಧಾರಗಳಿರಬಹುದು. ಅದನ್ನೆಲ್ಲ ನಾವು ಒಪ್ಪಿಕೊಳ್ಳಲಾಗದು. ಪೌರರ ಹಿತ ಕಾಯುವುದಕ್ಕಾಗಿ ಸಮಾನ ನಾಗರಿಕ ಸಂಹಿತೆ ಜಾರಿಗೊಳಿಸುವುದು ಉತ್ತಮ. ಈ ಬಗ್ಗೆ ಕೇಂದ್ರ ಸರ್ಕಾರ ತನ್ನ ಸ್ಪಷ್ಟ ಅಭಿಪ್ರಾಯ ವ್ಯಕ್ತಪಡಿಸಬೇಕು" ಎಂದಿತು. ಬಳಿಕ ಕೇಂದ್ರ ಸರ್ಕಾರ ಏಕರೂಪ ನಾಗರಿಕ ಸಂಹಿತೆ ಜಾರಿ ಕುರಿತು ಪರಾಮರ್ಶೆ ನಡೆಸುವಂತೆ ಕಾನೂನು ಆಯೋಗಕ್ಕೆ ಸೂಚನೆ ನೀಡಿತು. ಅದರಂತೆ ನ್ಯಾ. ಡಾ. ಬಿ.ಎಸ್.ಚೌಹಾಣ್ ನೇತೃತ್ವದ ಕೇಂದ್ರ ಕಾನೂನು ಆಯೋಗವು ಸಮಾನ ನಾಗರಿಕ ಸಂಹಿತೆ ಜಾರಿಗೆ ಸಂಬಂಧಿಸಿದ ಪ್ರಶ್ನಾವಳಿಯನ್ನು ಪ್ರಕಟಿಸಿ ಸಾರ್ವಜನಿಕ ಅಭಿಪ್ರಾಯವನ್ನು ಕೋರಿತು. ಈ ಸಮೀಕ್ಷೆಯ ಸಂಪುರ್ಣ ಅಧ್ಯಯನ ನಂತರ, ಕಾನೂನು ಜಾರಿಗೊಳಿಸಲು ಕೇಂದ್ರ ಸರಕಾರ ತೀರ್ಮಾನಿಸುತ್ತದೆ. ದೇಶದ ಅಭಿವೃದ್ಧಿ ಪರವಾದ ಹಲವಾರು ಕೆಲಸಗಳನ್ನು ಮಾಡಿರುವ, ಹಲವಾರು ಅನಿಷ್ಟ ಸಂಪ್ರದಾಯಗಳನ್ನು ಕಾನೂನು ಮುಖಾಂತರ ನಿಷೇಧಿಸಿರುವ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಭಾಜಪಾ ಸರಕಾರ ಏಕರೂಪದ ನಾಗರಿಕ ಸಂಹಿತೆಯನ್ನು ಅನುಷ್ಠಾನಗೊಳಿಸಿ ನಿಜಾರ್ಥದ ಜಾತ್ಯಾತೀತ ತತ್ವ ಪಾಲನೆಯಾಗುವಂತೆ ಮಾಡುತ್ತದೆ ಎನ್ನುವ ವಿಶ್ವಾಸವಿದೆ.

ಐದೂವರೆ ಶತಮಾನಗಳ ಪ್ರತಿರೋಧ

 ಐದೂವರೆ ಶತಮಾನಗಳ ಪ್ರತಿರೋಧ


                 ಭಾರತದ ಇತಿಹಾಸವನ್ನು ಸೋಲಿನ ಇತಿಹಾಸವನ್ನಾಗಿ ಇಂದಿಗೂ ಪಠ್ಯಪುಸ್ತಕಗಳಲ್ಲಿ ಬೋಧಿಸಲಾಗುತ್ತಿದೆ. ಮೊಘಲರನ್ನು, ಬ್ರಿಟಿಷರನ್ನು ವೈಭವೀಕರಿಸುವ ಇಂತಹಾ ಇತಿಹಾಸದ ಘಟನೆಗಳನ್ನು ಒರೆಗಲ್ಲಿಗೆ ಹಚ್ಚಿದಾಗ ಮಿಂಚಿನೋಪಾದಿಯಲ್ಲಿ ಅವರನ್ನು ಹಣ್ಣುಗಾಯಿ ನೀರುಗಾಯಿ ಮಾಡಿದ ವೀರರ ಯಶೋಗಾಥೆ ಗೋಚರಿಸುತ್ತದೆ. ಅದರಲ್ಲೂ ಭಾರತೀಯರ ಅಂತಿಮ ಸೋಲನ್ನು ಮಾತ್ರ ಕಣ್ಣಿಗೆ ಕಟ್ಟುವಂತೆ ವಿವರಿಸಿದ ತಥಾಕಥಿತ ಇತಿಹಾಸಕಾರರು ಐದೂವರೆ ಶತಮಾನಗಳಷ್ಟು ದೀರ್ಘಕಾಲ ಅಂದರೆ ಸುಮಾರು ಹನ್ನೆರಡನೇ ಶತಮಾನದ ಅಂತಿಮ ದಶಕದವರೆಗೂ ಹಿಂದೂಗಳು ಆಕ್ರಮಣಕಾರರಿಗೆ ಒಡ್ಡಿದ ಪ್ರತಿರೋಧದ ಬಗೆಗೆ ಕೆಲವು ಸೊಲ್ಲುಗಳನ್ನೂ ಉಲ್ಲೇಖಿಸದಿರುವುದು ಅವರ ಸುಳ್ಳಿನ ಇತಿಹಾಸಕ್ಕೆ ಹಿಡಿದ ಕೈಗನ್ನಡಿಯಾಗಿದೆ. ತಾವು ಗೆದ್ದುಕೊಂಡ ಯಾವ ನಾಡಿನಲ್ಲೂ ಇಂತಹಾ ದೀರ್ಘಕಾಲದ ಪ್ರತಿರೋಧವನ್ನು ಮುಸ್ಲಿಮರು ಎದುರಿಸಿರಲಿಲ್ಲ ಹಾಗೂ ಉಳಿದೆಲ್ಲಾ ದೇಶಗಳು ತಮ್ಮೆಲ್ಲಾ ಸಂಸ್ಕೃತಿ - ಸಂಸ್ಕಾರಗಳನ್ನು ಕಳೆದುಕೊಂಡು ಇಸ್ಲಾಮೀಕರಣಗೊಂಡರೂ ಐದೂವರೆ ಶತಮಾನಗಳ ತೀವ್ರ ಪ್ರತಿರೋಧ ಹಾಗೂ ಐದು ಶತಮಾನಗಳ ಮುಸ್ಲಿಂ ಆಳ್ವಿಕೆಯ ನಡುವೆಯೂ ಮುಸ್ಲಿಮೇತರ ನಾಡಾಗಿ ಉಳಿಯಿತು ಎನ್ನುವುದನ್ನು ಗಮನಿಸಿದಾಗ ಭಾರತೀಯರ ಕ್ಷಾತ್ರಬಲ, ದೃಢಸಂಕಲ್ಪ ಎಂತಹದ್ದೂ ಎನ್ನುವುದರ ಅರಿವಾದೀತು.


            ಭಾರತದ ಮೇಲೆ ಮೊದಲ ಮುಸ್ಲಿಂ ದಾಳಿ ನಡೆದುದು ಸಾಮಾನ್ಯ ಯುಗದ 636ರಲ್ಲಿ. ಮಹಾರಾಷ್ಟ್ರ ಸಮುದ್ರ ತೀರದ ಥಾಣೆಯ ಮೇಲೆ ಎರಡನೇ ಖಲೀಫಾ ಉಮರನ ನೌಕಾದಳ ಉಸ್ಮಾನನ(ಸಕೀಫ್ ಬುಡಕಟ್ಟಿನವ) ನೇತೃತ್ವದಲ್ಲಿ ದಾಳಿ ಮಾಡಿತು. ಬಳಿಕ ದಕ್ಷಿಣ ಗುಜರಾತಿನ ಬರೂಚ್ ಮೇಲೆ ಹಕಾಮ್ ನೇತೃತ್ವದಲ್ಲಿ ದಾಳಿ ಮಾಡಿತು. ಈ ಎರಡೂ ಯುದ್ಧಗಳಲ್ಲಿ ತೀವ್ರ ಮುಖಭಂಗಗೊಂಡು ಇಸ್ಲಾಂ ಸೇನೆ ಓಡಿ ಹೋಗಬೇಕಾಯಿತು. ಆಗ ಈ ಭಾಗಗಳು ನಮ್ಮ ಹೆಮ್ಮೆಯ ಇಮ್ಮಡಿ ಪುಲಿಕೇಶಿಯ ಆಳ್ವಿಕೆಯಲ್ಲಿದ್ದವು. ಭಾರತದ ಮೇಲೆ ಮುಸ್ಲಿಮರ ಮೊದಲ ದಾಳಿಯನ್ನು ಎದುರಿಸಿ ಹಿಮ್ಮೆಟ್ಟಿಸಿದ ಕೀರ್ತಿ ಕನ್ನಡ ನಾಡಿನ ಸೈನ್ಯಕ್ಕಿದೆ. ಬಳಿಕ 643ರಲ್ಲಿ ಸಿಂಧ್'ನ ಮೇಲೆ ಆಕ್ರಮಣವೆಸಗಲು ದೇವಲ್(ದೇವಲಯ್) ಬಂದರಿನ ಮೂಲಕ ಹಕಾಮ್ ತನ್ನ ತಮ್ಮ ಮುಘೈರಾಹ್'ನನ್ನು ಕಳುಹಿಸಿದ. ಆ ಸಮಯದಲ್ಲಿ ಸಿಂಧ್ ಪ್ರಾಂತ್ಯವನ್ನು ಆಳುತ್ತಿದ್ದವ ರಾಜಾ ಚಚ್ ರಾಯ್. ಆತ ತನ್ನ ಸಾಮ್ರಾಜ್ಯವನ್ನು ಕಾಶ್ಮೀರದಿಂದ ಮಕ್ರಾನ್ ವರೆಗೂ, ರತ್ನಾಕರದಿಂದ ಕುರ್ದಾನ್ & ಕಿಕಾನನ್ ಪರ್ವತಗಳವರೆಗೂ ವಿಸ್ತರಿಸಿದ್ದ. ದೇವಲದಲ್ಲಿದ್ದ ಈತನ ಸರದಾರ ದೇವಜಿಯ ಮಗ ಸಾಮಹಾ ಅರಬ್ ಸೇನೆಯನ್ನು ಅಟ್ಟಾಡಿಸಿ ಬಡಿದು ಮುಘೈರಾಹ್'ನನ್ನು ಕೊಂದು ಹಾಕಿದ. ಹೀಗೆ ಸತತ ಮೂರು ಬಾರಿಯೂ ಖಲೀಫಾನಿಗೆದುರಾದದ್ದು ಭಯಾನಕ ಸೋಲುಗಳು. ಇದು ಅವನನ್ನು ಅಚ್ಚರಿ ಹಾಗೂ ಆಘಾತಕ್ಕೆ ಗುರಿ ಮಾಡಿತು. ಹಾಗಾಗಿ ಆತ ನೌಕಾದಳವನ್ನು ಬಿಟ್ಟು ಭೂಮಾರ್ಗವಾಗಿ ತನ್ನ ಕಾರ್ಯ ಸಾಧಿಸಿಕೊಳ್ಳಲು ಮಕ್ರಾನ್ ಮೇಲೆ ದಾಳಿ ಮಾಡಲು ನಿರ್ಧರಿಸಿದ. ಇರಾಕಿನ ನವಾಬ ಅಬು ಮೂಸಾ ಆತನ ಹಿಂದಿನ ಪ್ರಯತ್ನವನ್ನೆಲ್ಲಾ ತಿಳಿದು "ಭಾರತದ ಮೇಲೆ ದಂಡೆತ್ತಿ ಹೋಗುವುದು ಬೇಡ" ಎಂದು ಸಲಹೆ ನೀಡಿದ. ಹೀಗೆ ಖಲೀಫ ತೆಪ್ಪಗಾದ. ಮುಂದಿನ ಖಲೀಫ ಉಸ್ಮಾನನೂ ಭಾರತದ ಮೇಲೆ ದಾಳಿಯೆಸಗುವ ತಪ್ಪು ಮಾಡಲಿಲ್ಲ. ಆದರೆ ನಾಲ್ಕನೇ ಖಲೀಫ 660ರಲ್ಲಿ  ಭೂಮಾರ್ಗವಾಗಿ ತನ್ನ ಸೈನ್ಯವನ್ನು ಕಳುಹಿಸಿದ. 'ಕಿಕಾನ್'ನಲ್ಲಿ ನಡೆದ ಈ ಯುದ್ಧದಲ್ಲಿ ಅರಬ್ ಸೈನ್ಯ ನುಚ್ಚುನೂರಾಯಿತು.


           ಐದನೆಯ ಖಲೀಫ 661-680ರ ಅವಧಿಯಲ್ಲಿ ಭೂಮಾರ್ಗದ ಮೂಲಕ ಐದು ಬಾರಿ ದಾಳಿ ಮಾಡಿ ಸೋತು ಹೋದನು. ಆರನೆಯ ಬಾರಿ, 680ರಲ್ಲಿ ಮಕ್ರಾನ್ ಅನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದನು. ಆದರೆ ಮುಂದಿನ 28 ವರ್ಷಗಳಲ್ಲಿ ಸಿಂಧ್'ಗೆ ಸೈನ್ಯವನ್ನು ಕಳುಹಿಸುವ ಧೈರ್ಯವನ್ನೇ ಅರಬ್ಬರು ಮಾಡಲಿಲ್ಲ. ಸೇನಾಧಿಕಾರಿಗಳಾದ ಉಬೇದುಲ್ಲಾ ಹಾಗೂ ಬುದೈಲ್ 708ರಲ್ಲಿ ದೇವಲವನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸಿ ಗತಪ್ರಾಣರಾದರು. ಖಲೀಫನ ಸಾಮಂತ ಇರಾಕಿನ ಹಜ್ಜಾಜನು ದಾಳಿಗೆ ಅನುಮತಿ ಕೇಳಿದಾಗ "ಪ್ರತೀಬಾರಿ ದಾಳಿ ಮಾಡಿದಾಗ ಭಾರೀ ಸಂಖ್ಯೆಯಲ್ಲಿ ನಮ್ಮವರು ಹತರಾಗಿದ್ದಾರೆ. ಇದು ತುಂಬಾ ಆತಂಕದ ವಿಷಯ. ಹಾಗಾಗಿ ಇನ್ನು ಮುಂದೆ ಇಂತಹಾ ಸಂಚು ಹೂಡುವುದು ಬೇಡ" ಎಂದು ಆತ ಆಜ್ಞಾಪಿಸಿದ. ಹಜ್ಜಾಜನು ಬೃಹತ್ ಸೇನೆಯನ್ನು ರೂಪಿಸಿ 712ರಲ್ಲಿ ತನ್ನ ಅಳಿಯ ಮೊಹಮದ್ ಬಿನ್ ಖಾಸಿಂನನ್ನು "ನನ್ನ ವಶದಲ್ಲಿರುವ ಇರಾಕಿನ ಸಮಸ್ತ ಐಶ್ವರ್ಯವನ್ನೂ ಈ ದಾಳಿಗೆ ಮೀಸಲಿಡುತ್ತೇನೆ" ಎಂದು ಅಲ್ಲಾನ ಹೆಸರಲ್ಲಿ ಪ್ರತಿಜ್ಞೆ ಮಾಡಿ ಕಳುಹಿಸಿದ. ಪ್ರಚಂಡ ಪ್ರತಿರೋಧದ ನಡುವೆಯೂ ಕೆಲವು ವ್ಯಾಪಾರಿಗಳು ಹಾಗೂ ಸಾಮಂತರ ವಿಶ್ವಾಸದ್ರೋಹದಿಂದಾಗಿ ಮೂಲಸ್ಥಾನ(ಮುಲ್ತಾನ್) 713ರಲ್ಲಿ ಖಾಸಿಂನ ವಶವಾಯಿತು. ಆದರೇನು 714ರಲ್ಲಿ ಖಲೀಫನು ಖಾಸಿಂನನ್ನು ಹಿಂದಕ್ಕೆ ಕರೆಸಿದ ಕೂಡಲೇ ಇಲ್ಲಿನ ಜನರು ದಂಗೆಯೆದ್ದು ಸ್ವತಂತ್ರರಾದರು.


            ಅವಂತಿಯ ರಾಜ ನಾಗಭಟ್ಟನು 725ರಲ್ಲಿ ಅರಬ್ ಸೈನ್ಯವನ್ನು ಸದೆಬಡಿದಿದ್ದ. ಗುರ್ಜರ-ಪ್ರತೀಹಾರರ ಮೊದಲನೆಯ ಭೋಜ ಇದನ್ನು ತನ್ನ ಗ್ವಾಲಿಯರ್ ಶಾಸನದಲ್ಲಿ ಬರೆಸಿದ್ದಾನೆ. ಇನ್ನೊಮ್ಮೆ ಇಸ್ಲಾಂ ಸೈನ್ಯವು ಸಿಂಧ್,ಸೌರಾಷ್ಟ್ರ, ಗುರ್ಜರಗಳನ್ನು ಗೆದ್ದುಕೊಂಡು ನವಸಾರಿಯನ್ನು ಆಕ್ರಮಿಸಲು ಹವಣಿಸಿದಾಗ "ಅವನಿ ಜನಾಶ್ರಯ" ಚಾಲುಕ್ಯ ಪುಲಿಕೇಶಿ ಅರಬ್ ಸೈನ್ಯವನ್ನು ಹಣ್ಣುಗಾಯಿ ನೀರುಗಾಯಿ ಮಾಡಿದನು. ಈ ಬಗೆಗೆ 738 ರ ನವಸಾರಿ ಶಿಲಾಶಾಸನ ತಾಜಿಕಾ(ಅರಬ್) ಸೇನೆಯನ್ನು ಸೋಲಿಸಿದ ಈತನ ಪರಾಕ್ರಮವನ್ನು ಬಣ್ಣಿಸುತ್ತಾ "ಅನಿವರ್ತಕ-ನಿವರ್ತಯೀ", "ದಕ್ಷಿಣಾಪಥಸಾಧಾರ" ಎಂಬ ಬಿರುದುಗಳಿಂದ ಕೊಂಡಾಡಿದೆ. ಗುರ್ಜರ ಪ್ರತೀಹಾರರನ್ನು ಅರಬ್ ಇತಿಹಾಸಕಾರರು ಜುರ್ಸ್'ನ ದೊರೆಗಳು ಅನ್ನುತ್ತಿದ್ದರು. ಗುರ್ಜರ-ಪ್ರತೀಹಾರರ ಅರಸನೊಬ್ಬನನ್ನು ಕುರಿತು ಅರಬ್ ಇತಿಹಾಸಕಾರನೊಬ್ಬನು "ಭಾರತದ ರಾಜರಲ್ಲಿ ಇಸ್ಲಾಮಿಗೆ ಅವನಿಗಿಂತ ದೊಡ್ಡ ಶತ್ರುವಿಲ್ಲ" ಎಂದು ಬರೆದಿದ್ದಾನೆ. ಈ ಅರಸ ಯಾರೆಂದು ನಿಖರವಾಗಿ ಹೇಳಲಾಗದಿದ್ದರೂ ಪ್ರಸಿದ್ಧ ಪರಮಾರ ಭೋಜನೆಂದು ಊಹಿಸಬಹುದು.


                ಇತ್ತ ಕಾಶ್ಮೀರದತ್ತ ಬಂದ ಅರಬ್ ಸೇನೆಯನ್ನು ಮಣ್ಣುಮುಕ್ಕಿಸಿದ ಲಲಿತಾದಿತ್ಯ ಮುಕ್ತಾಪೀಡ ಸ್ವಾತ್, ಸಿಂಧ್, ಮುಲ್ತಾನ್ಗಳಿಂದ ಅರಬ್ಬರನ್ನು ಓಡಿಸಿದ. ಅಫ್ಘನ್ನರ ಮೇಲೆ ದಾಳಿ ಮಾಡಿ ಆತ ಕಾಬೂಲನ್ನು ಗೆದ್ದ. ಇರಾನಿನ ಕೆಲ ಭಾಗಗಳನ್ನೂ ತನ್ನ ವಶವಾಗಿಸಿಕೊಂಡ. ಕಾಬೂಲಿನ ಮುಖಾಂತರ   ಅಫ್ಘನ್ನಿನ ಈಶಾನ್ಯ ಭಾಗಗಳನ್ನು, ತುರ್ಕಿಸ್ತಾನ, ಟ್ರಾನ್ಸೊಕ್ಸಿಯಾನಾ(ಆಧುನಿಕ ಉಜ್ಬೇಕಿಸ್ತಾನ್, ತಜಕಿಸ್ತಾನ್, ದಕ್ಷಿಣ ಕಿರ್ಗಿಸ್ತಾನ್ ಮತ್ತು ನೈಋತ್ಯ ಕಝಕಿಸ್ತಾನಗಳೊಂದಿಗೆ ಕೂಡಿದ ಮಧ್ಯ ಏಷ್ಯದ ಭಾಗ)ಗಳಲ್ಲಿದ್ದ ಮುಸಲರ ಸೊಕ್ಕು ಮುರಿದ. ಬುಖಾರ್ ಪ್ರಾಂತ್ಯದ ಆಡಳಿತಗಾರ ಮುಮಿನ್ ನಾಲ್ಕು ನಾಲ್ಕು ಬಾರಿ ಲಲಿತಾದಿತ್ಯನ ಕೈಯಲ್ಲಿ ಏಟು ತಿಂದ. "ತನಗೆ ಸೋತು ಶರಣಾಗತರಾದುದರ ಕುರುಹಾಗಿ ತುರುಷ್ಕರ ಅರ್ಧ ತಲೆ ಬೋಳಿಸುವಂತೆ ಲಲಿತಾದಿತ್ಯ ಆದೇಶಿಸಿದ್ದ. ವಾಯುವ್ಯ ಭಾರತದ ಅನೇಕ ಭಾಗಗಳಿಂದ ಮುಸ್ಲಿಮರು ಕಾಲು ಕೀಳಬೇಕಾಯಿತು. ಕಸಬಾವನ್ನು ಹೊರತುಪಡಿಸಿ ಮಿಕ್ಕೆಲ್ಲಾ ಭಾಗಗಳ ಜನರು ಮತ್ತೆ ವಿಗ್ರಹಾರಾಧನೆಯಲ್ಲಿ ತೊಡಗಿದರು. ಸೋತು ಓಡಿದ ಮುಸ್ಲಿಮರಿಗೆ ಎಲ್ಲಿ ಹೋಗುವುದು ಎಂಬುದೇ ಗೊಂದಲವಾದಾಗ, ಅರಬ್ಬರ ಸಾಮಂತನೊಬ್ಬ ಸರೋವರದಾಚೆಯ ಆಲ್-ಹಿಂದ್ ಬಳಿ ಅವರೆಲ್ಲಾ ಇರಲು ವ್ಯವಸ್ಥೆ ಮಾಡಿದ. ಅದನ್ನು ಅತ್ ಮೆಹಫುಜಾ(ರಕ್ಷಿತ) ಎಂದು ಹೆಸರಿಟ್ಟು ಕರೆಯಲಾಯಿತು. ಮಸೂದಿ ಎಂಬ ಅರಬ್ ಇತಿಹಾಸಕಾರ "ಹಜ್ಜಾಜನು ಅರಬ್ ಸೇನಾಧಿಕಾರಿ ಅಬ್ದುಲ್ ರಹಮಾನನ ಅಧಿಕಾರವನ್ನು ವಜಾಗೊಳಿಸಿ ಬೇರೊಬ್ಬನನ್ನು ನೇಮಿಸುವುದಾಗಿ ಬೆದರಿಕೆ ಹಾಕಿದಾಗ ಅಬ್ದುಲ್ ರಹಮಾನನು ದಂಗೆಯೆದ್ದು ಹಿಂದೂರಾಜನೊಬ್ಬನ ಜೊತೆ ಹೊಂದಾಣಿಕೆ ಮಾಡಿಕೊಂಡು ಹಜ್ಜಾಜನ ವಿರುದ್ಧವೇ ಯುದ್ಧಕ್ಕೆ ಸಿದ್ಧನಾದ. ಈ ಒಪ್ಪಂದ ಕಾರ್ಯರೂಪಕ್ಕೆ ಬರದ ಕಾರಣ ಅಬ್ದುಲ್ ರಹಮಾನ್ ಆತ್ಮಹತ್ಯೆ ಮಾಡಿಕೊಂಡ. ಆದರೆ ಆ ಹಿಂದೂ ರಾಜ ಯುದ್ಧ ಮುಂದುವರೆಸಿದ. ಆತ ಪೂರ್ವ ಪರ್ಷಿಯಾವನ್ನು ವಶಪಡಿಸಿಕೊಂಡು ಟೈಗ್ರಿಸ್ ಮತ್ತು ಯುಫ್ರೆಟಿಸ್ ನಡಿಗಳ ದಡದವರೆಗೆ ಮುಂದುವರೆದಿದ್ದ. ಹಜ್ಜಾಜ ಶಾಂತಿ ಒಪ್ಪಂದ ಮಾಡಿಕೊಳ್ಳಲು ಪ್ರಯತ್ನಿಸಿದರೂ ಆತ ಖಲೀಫನಿಗೆ ಬಗ್ಗಲಿಲ್ಲ" ಎಂದು ಬರೆದಿದ್ದಾನೆ. ಆ ಸಮಯದಲ್ಲಿ ಅಂತಹಾ ಬಲಾಢ್ಯ ಹಿಂದೂ ಅರಸನಿದ್ದದ್ದು ಲಲಿತಾದಿತ್ಯನೇ. ಕಲ್ಹಣನ ರಾಜತರಂಗಿಣಿ ಒದಗಿಸಿದ ಮಾಹಿತಿಯೂ ಇದರೊಡನೆ ತಾಳೆಯಾಗುತ್ತದೆ.


                ಹತ್ತನೇ ಶತಮಾನದಲ್ಲಿ ಮುಸ್ಲಿಮರ ಕೈಗೆ ಸಿಕ್ಕಿದ್ದು ಮುಲ್ತಾನ್ ಮತ್ತು ಮನ್ಸುರಾ ಎಂಬ ಚಿಕ್ಕ ಸಂಸ್ಥಾನಗಳು ಮಾತ್ರ ಎನ್ನುವುದಕ್ಕೆ ಆ ಕಾಲದಲ್ಲಿ ಭಾರತಕ್ಕೆ ಭೇಟಿಕೊಟ್ಟ ಅರಬ್‍ ಪ್ರವಾಸಿಗಳ ಬರಹಗಳೇ ಸಾಕ್ಷಿ. ಪ್ರತೀಹಾರರು ಪ್ರತೀ ಬಾರಿಯೂ ಮುಲ್ತಾನಿನ ಮೇಲೆ ದಾಳಿ ಮಾಡಿದಾಗ ಅಲ್ಲಿದ್ದ ಹಿಂದೂ ದೇವಾಲಯವೊಂದು ಅರಬ್ಬರನ್ನು ಕಾಪಾಡುತ್ತಿತ್ತು! ಆ ದೇವಾಲಯಕ್ಕೆ ಹಿಂದೂಗಳು ಪ್ರತೀ ವರ್ಷ ದೂರದೂರದ ಪ್ರದೇಶಗಳಿಂದ ತೀರ್ಥಯಾತ್ರೆ ಕೈಗೊಳ್ಳುತ್ತಿದ್ದರು. ಅರಬ್ಬರು ಪ್ರತೀ ಬಾರಿ ಪ್ರತೀಹಾರರು ದಾಳಿಯೆಸಗಿದಾಗ ಈ ದೇವಾಲಯವನ್ನು ನಾಶ ಮಾಡುವ ಬೆದರಿಕೆ ಒಡ್ಡುತ್ತಿದ್ದರು. ಇದರಿಂದ ಪ್ರತೀಹಾರ ದೊರೆಗಳು ನಿರುಪಾಯರಾಗಿ ಹಿಂದಿರುಗಬೇಕಾಗುತ್ತಿತ್ತು. ಇಲ್ಲದಿದ್ದಲ್ಲಿ ಅರಬ್ಬರ ಕೈಯಲ್ಲಿದ್ದ ಪುಟ್ಟ ಮುಲ್ತಾನವೂ ಎಂದೋ ಭಾರತೀಯರ ಕೈಗೆ ಮರಳಿರುತ್ತಿತ್ತು. ಸಾಮಾನ್ಯ ಯುಗ 951ರಲ್ಲಿ ಇದನ್ನು ಅಲ್-ಇಸ್ರಾಖ್ರಿ ಎಂಬಾತ ನಮೂದಿಸಿದ್ದಾನೆ. ಹೀಗೆ ಮೂರು ಶತಮಾನಗಳ ಪರ್ಯಂತ ಸತತ ಹೋರಾಟ ನಡೆಸಿದರೂ ಅರಬ್ಬರಿಗೆ ದಕ್ಕಿದ್ದು ಮುಲ್ತಾನ್ ಹಾಗೂ ಮನ್ಸುರಾ ಮಾತ್ರ. ಅದೂ ಮೂರ್ತಿ ಭಂಜನೆಯನ್ನು ಬಿಟ್ಟು, ಮೂರ್ತಿಗಳನ್ನೇ ರಾಜಕೀಯ ತಂತ್ರವನ್ನಾಗಿ ಬಳಸಿಕೊಂಡ ಕಾರಣಕ್ಕಾಗಿ ಅಷ್ಟೇ. ಅಂದಿನ ಕಾಲಘಟ್ಟದಲ್ಲಿ ಸಂಖ್ಯೆಯಲ್ಲೂ, ಬರ್ಬರತೆ, ಆಕ್ರಮಣಶೀಲತೆಯಲ್ಲೂ ಜಗತ್ತಿನಲ್ಲೇ ಅಭೇದ್ಯವಾಗಿದ್ದ ಅರಬ್ಬರ ಬೃಹತ್ ಸೈನ್ಯವನ್ನು ಭಾರತದ ಚಿಕ್ಕಪುಟ್ಟ ಸಂಸ್ಥಾನಗಳ ಪುಟ್ಟ ಸೈನ್ಯಗಳು ಮೂರು ಶತಮಾನಗಳ ಪರ್ಯಂತ ತಡೆದು ನಿಲ್ಲಿಸಿದುದು ಸಣ್ಣ ಸಾಧನೆಯೇನಲ್ಲ. ಮಧ್ಯ ಏಷ್ಯಾದಲ್ಲಿ ಇಸ್ಲಾಮಿನ ಮತಾಂಧತೆಗೆ ವಿಗ್ರಹಾರಾಧಕರು ಸರ್ವನಾಶವಾಗಿ ಹೋದರೂ ಸಿಂಧ್ ಪ್ರಾಂತ್ಯದಲ್ಲಿ ಹಾಗಾಗಲಿಲ್ಲ. ದೇವಲ್ ಪ್ರಾಂತದ ದೇವಾಲಯಗಳನ್ನು ನಾಶ ಮಾಡಿ ಅಲ್ಲಿ ಮಸೀದಿಗಳನ್ನು ನಿರ್ಮಿಸಿ, ಮೂರು ದಿನಗಳ ಕಾಲ ನಿರಂತರ ಹತ್ಯಾಕಾಂಡ ನಡೆಸಿ, ಹಲವು ಹಿಂದೂಗಳನ್ನು ಬಂಧಿಸಿ, ಭಾರೀ ಸಂಪತ್ತನ್ನು ಲೂಟಿ ಮಾಡಿದರೂ ಇಸ್ಲಾಮಿನ ಕಠಿಣ ನಿಯಮಗಳನ್ನು ಮಧ್ಯ ಏಷ್ಯಾದಲ್ಲಿ ಜಾರಿ ಮಾಡಿದಂತೆ ಇಲ್ಲಿ ಸಾಧ್ಯವಾಗಲಿಲ್ಲ. ಮಾಡಿದ ಕಠಿಣ ನಿಯಮಗಳನ್ನು ಕೆಲವೇ ದಿನಗಳಲ್ಲಿ ಸಡಿಲಿಸಬೇಕಾಯಿತು. ಹಿಂದೂಗಳಿಗೆ ದೇವಾಲಯ ಮತ್ತೆ ಕಟ್ಟಿಕೊಳ್ಳಲು ಅವಕಾಶ ನೀಡಬೇಕಾಯಿತು. ಹಿಂದೆ ಅಲ್ಲಿದ್ದ ಸರಕಾರ ದೇವಾಲಯದ ಪೂಜಾ ಕೈಂಕರ್ಯ ಮಾಡುತ್ತಿದ್ದವರಿಗೆ ನೀಡುತ್ತಿದ್ದ ವರಮಾನವನ್ನು ನಿಲ್ಲಿಸಲೂ ಅವರಿಂದ ಸಾಧ್ಯವಾಗಲಿಲ್ಲ!


                ಕಾಶ್ಮೀರದ ಲಲಿತಾದಿತ್ಯ, ದಕ್ಷಿಣ ತಜಕಿಸ್ತಾನದ ನಾರಾಯಣ, ಸಮರಖಂಡ(ಈಗಿನ ಉಜ್ಬೆಕಿಸ್ತಾನದಲ್ಲಿದೆ)ದ ಗೋರಖ್ ಹಾಗೂ ಬುಖಾರ(ಈಗಿನ ಉಜ್ಬೆಕಿಸ್ತಾನದಲ್ಲಿದೆ)ದ ತುಷಾರಪತಿಯರ ಸಾಹಸದಿಂದ ಅರಬ್ಬರ ಅಬ್ಬರ ನಿರ್ಬಂಧಿಸಲ್ಪಟ್ಟಿತು. ಭಾರತದ ಭದ್ರ ಕೋಟೆ ಬಿರುಕು ಬಿಟ್ಟುದುದು ಸಬಕ್ತಜಿನನ ಮೋಸದ ಯುದ್ಧಕ್ಕೇನೆ. ಸಬಕ್ತಜಿನ್, ಶಾಹಿ ಜಯಪಾಲನನ್ನು ಕುತಂತ್ರದಿಂದ ಸೋಲಿಸಿದರೂ ಜಯಪಾಲ ಆತನನ್ನು ಭಾರತದ ಗಡಿಭಾಗಕ್ಕಷ್ಟೇ ಸೀಮಿತವಾಗಿರಿಸಿದ. ಮಹಾಲೂಟಿಕೋರ ಘಜನಿಯನ್ನಂತೂ ಆನಂದಪಾಲ ಸೋಲಿಸಿ ಹಿಮ್ಮೆಟ್ಟಿಸಿಬಿಟ್ಟ. ತನ್ನ ಕೊನೆಯ ಯುದ್ಧದಲ್ಲಿ ಆನಂದಪಾಲ ವಿಜಯದಂಚಿನಲ್ಲಿದ್ದಾಗ ಅವನು ಕುಳಿತಿದ್ದ ಆನೆಯನ್ನು ನುಸಿಗುಳಿಗೆಗಳಿಂದ ಘಜನಿಯ ಸೇನೆ ಹಿಮ್ಮೆಟ್ಟಿಸಿದಾಗ ತಮ್ಮ ರಾಜನೇ ಸೋತನೆಂದು ಸೇನೆ ಕಕ್ಕಾಬಿಕ್ಕಿಯಾಗಿ ಚದುರಿದ ಸಂದರ್ಭವನ್ನು ಸರಿಯಾಗಿ ಉಪಯೋಗಿಸಿಕೊಂಡ ಘಜನಿ ವಿಜಯಿಯಾದ. ಘಜನಿಯನ್ನು ದಿಟ್ಟವಾಗಿ ಎದುರಿಸಿದ ತ್ರಿಲೋಚನಪಾಲ ಹತ್ತು ದಿವಸಗಳ ಕಾಲ ರಣಭೀಕರವಾಗಿ ಹೋರಾಡಿ ಮೋಸಕ್ಕೊಳಗಾಗಿ ಹತನಾದ. ನೀಡರ ಭೀಮ ಖ್ಯಾತಿಯ ಭೀಮಪಾಲ ಘಜನಿಯನ್ನು ಅಟ್ಟಾಡಿಸಿಬಿಟ್ಟ(1015). ಭಾರತದ ಮೇಲಿನ ದಾಳಿಗಳಲ್ಲಿ ಮೊಹಮ್ಮದನು ಮೊದಲಬಾರಿಗೆ ಪೂರ್ಣಪ್ರಮಾಣದ ಸೋಲನ್ನು ಕಾಣಬೇಕಾಯಿತು ಎಂದು ಫಿರಿಷ್ತಾ ದಾಖಲಿಸಿದ್ದಾನೆ. ಯುದ್ಧದಲ್ಲಿ ಸೋತು ಜೀವ ಉಳಿಸಿಕೊಳ್ಳಲು ಓಡಿದ ಮೊಹಮ್ಮದ್ ನಿಂತದ್ದು ಘಜನಿಯಲ್ಲೇ! ಹೀಗೆ ಶಾಹಿಗಳು ಲೋಹಾರ(ಲೋಹ ಕೋಟ್)ದಿಂದ ಆಚೆಗೆ ಮುಂದುವರಿಯಲು ಘಜನಿಗೆ ಅವಕಾಶವನ್ನೇ ಕೊಡಲಿಲ್ಲ.  ಶಾಹಿ ವಂಶವೇ ಐವತ್ತು ವರ್ಷಗಳಿಗೂ ಅಧಿಕ ಕಾಲ ಸತತವಾದ ವಿದೇಶೀ ಆಕ್ರಮಣಕ್ಕೆ ತಡೆಯೊಡ್ಡಿ ನಿಂತು ಮಾತೃಭೂಮಿಯನ್ನು ರಕ್ಷಿಸಿತು. ಸತತ ಯುದ್ಧಗಳನ್ನು ಮಾಡಿ ಕಾಶ್ಮೀರದ ಬಾಗಿಲಿಗೆ ಬಂದು ಮುಟ್ಟಲು ಘಜನಿಗೆ ಇಪ್ಪತ್ತು ವರ್ಷಗಳೇ ಬೇಕಾದವು(1026). ಶಾಹಿ ವಂಶದ ಈ ಪರಿಯ ಶೌರ್ಯವನ್ನು, ಉದಾರತೆ, ಸತ್ಯ-ಧರ್ಮಗಳಿಂದ ನಡೆಸಿದ ಆಡಳಿತವನ್ನು ಆಲ್ಬರೂನಿ ಕೊಂಡಾಡಿದ್ದಾನೆ.


              1018ರಲ್ಲಿ ಘಜನಿಯು ಛಂದೇಲರ ವಿದ್ಯಾಧರನ ಮೇಲೆ ದಾಳಿ ಮಾಡಿದಾಗ ಆತ ಶಾಹಿಗಳನ್ನು ಇತರ ಹಿಂದೂರಾಜರನ್ನೂ ಒಟ್ಟುಗೂಡಿಸಿ ಬೃಹತ್ ಸೈನ್ಯವನ್ನು ಘಜನಿಯ ವಿರುದ್ಧ ಸಜ್ಜುಗೊಳಿಸಿದ. ಎತ್ತರದ ಸ್ಥಳವೊಂದರಲ್ಲಿ ನಿಂತು ಆ ಬೃಹತ್ ಸೈನ್ಯವನ್ನು ನೋಡಿ ತಾನು ಯಾಕಾದರೂ ಆಕ್ರಮಣ ಮಾಡಲು ಬಂದೆನೋ ಎಂದು ಪರಿತಪಿಸಿದ ಮೊಹಮ್ಮದನು ಬರಿಗೈಯಲ್ಲಿ ವಾಪಸ್ ಹೋಗಬೇಕಾಯಿತು ಎಂದು ನಿಜಾಮುದ್ದೀನ್ ಎಂಬ ಮುಸ್ಲಿಂ ಇತಿಹಾಸಕಾರ ಬರೆದಿದ್ದಾನೆ. 1022ರಲ್ಲಿ ಮತ್ತೆ ದಾಳಿಗೆ ಬಂದು ಅವಮಾನಿತನಾದ ಘಜನಿ ಛಂದೇಲರ ಗೊಡವೆಗೇ ಹೋಗಲಿಲ್ಲ. 1026ರಲ್ಲಿ ಘಜನಿಯು ಸೋಮನಾಥದ ಮೇಲೆ ದಾಳಿ ಮಾಡಿದಾಗ ಐವತ್ತು ಸಾವಿರದಷ್ಟು ಹಿಂದೂಗಳು ಪ್ರಾಣಾರ್ಪಣೆ ಮಾಡಿದರು. ಸೋಮನಾಥದ ಮೇಲೆ ಅವನ ದಾಳಿಯ ಸುದ್ದಿ ತಿಳಿದ ತಕ್ಷಣ ಅವನನ್ನು ಮಣ್ಣುಮುಕ್ಕಿಸಲು ಪರಮಾರ ಭೋಜ ಸಿದ್ಧನಾದ. ಪರಮಾರ ಭೋಜನ ವಿಚಾರ ತಿಳಿದಿದ್ದ ಘಜನಿ ತಾನು ಬಂದ ದಾರಿಯನ್ನು ಬಿಟ್ಟು ಮುಲ್ತಾನ್ & ಮನ್ಸುರಾ ಮಾರ್ಗವಾಗಿ ಹಿಂದಿರುಗಿದ. ಆದರೆ ಆ ದಾರಿಯಲ್ಲಿ ಜಾಟ್ ವೀರರು ಮಹಮ್ಮದನ ಸೈನ್ಯವನ್ನು ಸದೆ ಬಡಿದರು. ಮಾತ್ರವಲ್ಲ ಮನ್ಸುರಾದ ಮೇಲೆ ದಾಳಿ ಮಾಡಿ ಅಲ್ಲಿನ ಅಮೀರನನ್ನೇ ಮುಸ್ಲಿಂ ಮತ ತೊರೆಯುವಂತೆ ಒತ್ತಾಯಿಸಿದರು. ಹಿಂದೂರಾಜರುಗಳ ಸಹಕಾರವನ್ನು ಪಡೆದ ದೆಹಲಿಯ ಅರಸ, ಘಜನಿ ಮೊಹಮ್ಮದನ ಉತ್ತರಾಧಿಕಾರಿ ಮದೂದ್'ನು ನೇಮಿಸಿದ್ದ ಹನ್ಸಿ, ಥಾಣೇಸರ ಮುಂತಾದ ಪ್ರಾಂತ್ಯಗಳ ನವಾಬರನ್ನು ಯುದ್ಧದಲ್ಲಿ ಸೋಲಿಸಿದ(1043). ಬಳಿಕ ಹಿಂದೂಸೇನೆ ಕಾಂಗ್ರಾದ ನಾಗರಕೋಟೆಯನ್ನು ನಾಲ್ಕು ತಿಂಗಳ ಪರ್ಯಂತ ಮುತ್ತಿಗೆ ಹಾಕಿತು. ಸಹಾಯಕ್ಕೆ ಲಾಹೋರಿನಿಂದ ಸೇನೆಯೂ ಬರದೇ, ಆಹಾರವೂ ಇಲ್ಲದೆ ಮುಸ್ಲಿಮರು ಪರದಾಡಬೇಕಾಯಿತು ಎಂದು ಫಿರಿಷ್ತಾ ಬರೆದಿದ್ದಾನೆ. ಗೆದ್ದ ಪ್ರಾಂತ್ಯಗಳಲ್ಲಿನ ಧ್ವಂಸಗೊಂಡ ದೇವಾಲಯಗಳಲ್ಲಿ ಹೊಸ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಯಿತು.  ವಿಜಯ ಸಂಕೇತವಾಗಿ ಸಿಂಹಮುಖಗಳನ್ನು ಕೋಟೆಯ ಮೇಲೆ ಸ್ಥಾಪಿಸಲಾಯಿತು. ಪರಮಾರ ಭೋಜ ತಾನಿರುವವರೆಗೆ ಘಜನಿಯು ಭಾರತದೊಳಕ್ಕೆ ಬರದಂತೆ ತಡೆದ. ಆದರೆ ನಿಜವಾಗಿ ಭೋಜ ಹಾಗೂ ಕಲಚೂರಿ ಕರ್ಣನಿಗೆ ಮುಸ್ಲಿಂ ಆಕ್ರಮಣಕಾರಿಗಳು ಬಹುವಾಗಿ ಹೆದರುತ್ತಿದ್ದರು. ಇವರಿಬ್ಬರ ಅವಸಾನದ ಬಳಿಕವೇ ಮುಸ್ಲಿಮರು ತಮ್ಮ ದಾಳಿ ಮುಂದುವರೆಸಿದ್ದು. ಆದರೂ ಭಾರತೀಯರ ಪ್ರತಿರೋಧ ನಿಂತಿರಲಿಲ್ಲ. ಘಜನಿಯ ಸೋದರಳಿಯ ಸಾಲಾರ್ ಮಸೂದನನ್ನು ಬಹ್ರೈಚ್'ನ ರಾಜಾ ಸುಹೈಲ್ ದೇವ ಸೂರ್ಯಕುಂಡದ ಬಳಿ ವಧಿಸಿ ರಕ್ತತರ್ಪಣ ಕೊಟ್ಟ. ಷಹಜಾದ ಮೊಹಮ್ಮದನನ್ನು ಪರಮಾರ ಲಕ್ಷ್ಮದೇವನೂ, ಛಂದೇಲರೂ ಸೋಲಿಸಿ ಓಡಿಸಿದರು. ಕನೌಜಿನ ಗೋವಿಂದ ಚಂದ್ರನಂತೂ ಇಸ್ಲಾಮೀಸೇನೆಯನ್ನು ಮತ್ತೆ ಮತ್ತೆ ಪರಾಭವಗೊಳಿಸಿದ. ಅಜಯಮೇರು(ಅಜ್ಮೀರ್)ವಿನ ಅರುಣರಾಜ ಚೌಹಾನ(1133-1151)ನಿಂದ ಮುಸ್ಲಿಮರು ಅನುಭವಿಸಿದ ಸೋಲು ಬಲುದೊಡ್ಡದು. ಮುಸ್ಲಿಂ ಸೇನೆಯು ಸೋತು ಓಡಿದ ದಾರಿಗಳಲ್ಲಿ ಅನೇಕರ ಶವ ಬಿದ್ದಿತ್ತಂತೆ. ಅಜ್ಮೀರಿನ ವಸ್ತು ಸಂಗ್ರಹಾಲಯದಲ್ಲಿರುವ "ಚೌಹಾಣ ಪ್ರಶಸ್ತಿ" ಎಂಬ ಶಿಲಾಶಾಸನ "ಸೋತು ಸತ್ತ ಆಕ್ರಮಣಕಾರಿ ತುರುಷ್ಕರ ನೆತ್ತರಿನಿಂದ ಅಜ್ಮೀರದ ಭೂಮಿ ಹೇಗೆ ಕೆಂಪಾಗಿತ್ತೆಂದರೆ ಭೂತಾಯಿಯು ವಿಜಯೋತ್ಸವಕ್ಕಾಗಿ ಕೆಂಪುವಸ್ತ್ರ ಧರಿಸಿ ಅಲಂಕೃತಳಾಗಿದ್ದಾಳೆ" ಎಂದು ಈ ವಿಜಯವನ್ನು ಬಣ್ಣಿಸಿದೆ. ಅರುಣರಾಜನ ಉತ್ತರಾಧಿಕಾರಿ ವಿಗ್ರಹರಾಜ ಮ್ಲೇಚ್ಛರನ್ನು ಮತ್ತೆ ಮತ್ತೆ ಸೋಲಿಸಿ ಶತದ್ರು ನದಿಯ ದಕ್ಷಿಣ ಭಾಗವನ್ನು ಮುಸ್ಲಿಂ ಆಳ್ವಿಕೆಯಿಂದ ಮುಕ್ತಗೊಳಿಸಿ ಆರ್ಯಾವರ್ತದ ಹೆಸರಿಗೆ ಶೋಭೆ ತಂದ. ಆ ಬಳಿಕ ಆಕ್ರಮಣಕ್ಕೆ ಬಂದ ಮಹಮ್ಮದ್ ಘೋರಿಯನ್ನು ಗುಜರಾತಿನ ಚಾಲುಕ್ಯ ರಾಣಿ ನಾಯಕಿ ದೇವಿ ಒದ್ದೋಡಿಸಿದಳು. ಪೃಥ್ವೀರಾಜ ಚೌಹಾನನಂತೂ ಹಲವು ಬಾರಿ ಘೋರಿಯನ್ನು ಸೋಲಿಸಿದ. ಹಮ್ಮೀರ ಮಹಾಕಾವ್ಯ 7 ಬಾರಿ ಎಂದರೆ, ಪ್ರಬಂಧ ಚಿಂತಾಮಣಿ ಹಾಗೂ ಪೃಥ್ವೀರಾಜ ರಾಸೋ, ಪೃಥ್ವೀರಾಜನು 21 ಬಾರಿ ಘೋರಿಯನ್ನು ಕೆಡಹಿದ ಎಂದಿವೆ. ಕೊನೆಯ ಯುದ್ಧದಲ್ಲಿ(1192) ಘೋರಿ, ಪೃಥ್ವೀರಾಜನನ್ನು ಸೋಲಿಸಿದ್ದು ಮೋಸದಿಂದಷ್ಟೇ.



             ಹೀಗೆ ಈ 550 ವರ್ಷಗಳ ದೀರ್ಘ ಕಾಲದ ಪ್ರತಿರೋಧ ಕೇವಲ ತಮ್ಮ ಅಧಿಕಾರದ ಉಳಿವಿಗಾಗಿ ಮಾಡಿದ ಯುದ್ಧಗಳಲ್ಲ. ಅವು ಮತಾಂಧತೆಯನ್ನೇ ತುಂಬಿಕೊಂಡ ಶತ್ರುವು ನಮ್ಮ ಮಾತೃಭೂಮಿಯನ್ನು ಒಂದಿಂಚೂ ಆಕ್ರಮಿಸಲು ಬಿಡದೆ ನಮ್ಮ ಧರ್ಮ-ಸಂಸ್ಕೃತಿಗಳ ರಕ್ಷಣೆಗಾಗಿ ಹಿಂದೂಗಳು ದೀರ್ಘ ಕಾಲ ನಡೆಸಿದ ದೃಢ ಸಂಕಲ್ಪದ ಕೆಚ್ಚಿನ ಹೋರಾಟ. ಏಳುಬೀಳುಗಳ ನಡುವೆಯೂ ಹೊರಗಿನ ಶತ್ರುವಿಗೆ ಪರ್ವತಾಕಾರವಾಗಿ ನಿಂತು ದೇಶದೊಳಕ್ಕೆ ಅವನು ಪ್ರವೇಶಿಸದಂತೆ ನಡೆಸಿದ ಸ್ವಾಭಿಮಾನ ಭರಿತ ಹೋರಾಟ. ಕೇವಲ ಇಸ್ಲಾಮಿನ ವಿಜಯಗಾಥೆಗಳನ್ನಷ್ಟೇ ದಾಖಲಿಸಿದ ಇತಿಹಾಸಕಾರರು ಅವರಿಗೆ ತಿರುಗಿಸಿ ಹೊಡೆದ ಹಿಂದೂ ರಾಜರುಗಳ ಅಪ್ರತಿಮ ವೀರಗಾಥೆಯನ್ನು ದಾಖಲಿಸದೆ ಇತಿಹಾಸಕ್ಕೇ ಅನ್ಯಾಯ ಮಾಡಿದರು.