ಪುಟಗಳು

ಶುಕ್ರವಾರ, ಸೆಪ್ಟೆಂಬರ್ 28, 2012

ಭಾರತ ದರ್ಶನ-೪

"ಗಾಯಂತಿ ದೇವಾಃ ಕಿಲ ಗೀತಕಾನಿ ಧನ್ಯಾಸ್ತು ಯೇ ಭಾರತ ಭೂಮಿಭಾಗೇ।
ಸ್ವರ್ಗಾಪವರ್ಗಾಸ್ಪದ ಹೇತುಭೂತೇ ಭವಂತಿ ಭೂಯಃ ಪುರುಷಾಃ ಸುರತ್ವಾತ್॥"
(ಸ್ವರ್ಗಕ್ಕೆ ಮುಕ್ತಿಗೆ ದ್ವಾರವಾದ ಭಾರತದಲ್ಲಿ ಹುಟ್ಟಿದವರು ದೇವತೆಗಳಿಗಿಂತ ಧನ್ಯರು ಎಂದು ದೇವತೆಗಳು ಹಾಡಿ ಹೊಗಳಿದ್ದಾರೆ). ಜಗನ್ಮಾತೆ ಆದಿಶಕ್ತಿ ಮಹಾದುರ್ಗೆ ಮೈತಾಳಿದ ಜೀವಂತ ಅವತಾರವೇ ಭಾರತಮಾತೆ ಎಂದರು ಮಹಾಯೋಗಿ ಅರವಿಂದ.
ಪ್ರತಿಯೊಂದು ಜೀವಿಗೆ ಹುಟ್ಟು ಹೇಗೋ ಸಾವೂ ಅನಿವಾರ್ಯ. ಇದು ಜೀವಿಗೆ ಮಾತ್ರವಲ್ಲ. ಜನಾಂಗಕ್ಕೂ ಕೂಡಾ! ಜಗತ್ತಿನಲ್ಲಿ ಅದೆಷ್ಟೋ ಜನಾಂಗಗಳು ಈ ಜನನ ಮರಣಗಳ ಪ್ರಭಾವಕ್ಕೆ ಸಿಲುಕಿ ಯಾ ಕಾಲದ ಕ್ರೂರ ಆಘಾತಕ್ಕೆ ಸಿಲುಕಿಯೋ ನಾಶವಾದವು. ಆದರೆ ಭಾರತ ಮಾತ್ರ ಇದಕ್ಕೆ ಅಪವಾದ. ಇದರ ಹುಟ್ಟನ್ನು ನಿರ್ಧರಿಸುವಲ್ಲಿ ಇತಿಹಾಸಕಾರರಿಗೆ ಯಶಸ್ಸು ಸಿಕ್ಕಿಲ್ಲ. ಜ್ಞಾತ ಜಗತ್ತಿನಲ್ಲಿ ತಾಯಿ ಶಾರದೆಯ ಪ್ರಥಮ ವೀಣಾ ಝೇಂಕಾರ ಋಗ್ವೇದದ ರೂಪದಲ್ಲಿ ಹೊರಹೊಮ್ಮಿತು ಎಂದರೆ ಅತಿಶಯೋಕ್ತಿ ಆಗಲಾರದು. ವಿಶ್ವದ ಬಹುತೇಕ ನಾಗರೀಕತೆಗಳು ಹುಟ್ಟಿದವು, ಕೆಲಕಾಲ ಮಿಂಚು ಹುಳಗಳಂತೆ ಮಿಂಚಿದವು, ಅಲ್ಪಾಯುಗಳಾಗಿ ಕಾಲಗರ್ಭ ಸೇರಿದವು. ಇಡೀ ಯೂರೋಪಗೆ ತತ್ವಜ್ಞಾನ ನೀಡಿದ ಹಾಗೂ ನಾವು ಈ ವಿಶ್ವವನ್ನು ಆಳಲು ಹುಟ್ಟಿದವರು, ಉಳಿದೆಲ್ಲರು ನಮ್ಮ ದಾಸ್ಯವನ್ನು ಒಪ್ಪಿಕೊಳ್ಳಬೇಕು ಅಂತ ಉನ್ಮತ್ತವಾಗಿ ಘೋಷಿಸಿ ಮೆರೆದ ಗ್ರೀಕರು ಇಂದು ಎಲ್ಲಿದ್ದಾರೆ? ಅಸಹಿಷ್ಣು ಏಕದೇವೋಪಾಸಕ ಮತಾಂಧ ಸಿರಿಲ್ನ ಆಕ್ರಮಣದಿಂದ ತತ್ತರಿಸಿದ ಆ ಪ್ರಾಚೀನ ದೇಶ ತನ್ನ ಹೆಸರನ್ನು ಬಿಟ್ಟು ಉಳಿದೆಲ್ಲವನ್ನು ಕಳಕೊಂಡಿತು. ಆತನ ಆಕ್ರಮಣದ ಬಳಿಕ ಮತ್ತೆಂದೂ ಇನ್ನೊಬ್ಬ ಪ್ಲೇಟೋ, ಸಾಕ್ರಟೀಸ್, ಯೂಕ್ಲಿಡ್, ಪೈಥಾಗೋರಸ್ನಂತಹ ಜ್ಞಾನಿಗಳು, ತತ್ವಜ್ಞಾನಿಗಳು ಹುಟ್ಟಲೇ ಇಲ್ಲ! ಅಲೆಗ್ಸಾಂಡರ್ ಸೆಲ್ಯೂಕಸ್ ನಂತಹ ಪರಾಕ್ರಮಿಗಳು ಜನ್ಮವೆತ್ತಲೇ ಇಲ್ಲ.ತನ್ನತನ ಕಳಕೊಂಡ ದೇಶ ಮತ್ತೆ ಮೆರೆಯುವುದೆಂತು ಸಾಧ್ಯ? ಅಂತೆಯೇ ಯುಪ್ರೈಟಿಸ್& ಟೈಗ್ರಿಸ್ ನದಿಗಳ ದಡದ ಮೇಲೆ ಬೆಳೆದ ಮೆಸಪಟೋಮಿಯನ್ ಯಾ ಬ್ಯಾಬಿಲೋನಿಯನ್ ನಾಗರೀಕತೆ ಇಂದಿಲ್ಲ. ಆ ಪ್ರದೇಶ ಇದೆ, ನದಿಗಳಿವೆ, ಆದರೆ ಆ ಸಭ್ಯತೆ ಇಲ್ಲ! ಅದನ್ನಿವತ್ತು ಇರಾಕ್ ಅಂತ ಕರಿತೀವಿ.
ನಾಲ್ಕು ಸಾವಿರ ವರ್ಷಗಳ ಹಿಂದೆ ನೈಲ್ ನದಿ ಕಣಿವೆಯ ಈಜಿಪ್ಷಿಯನ್ ನಾಗರೀಕತೆ ಸಾವಿಗೀಡಾಯಿತು. ಅಲ್ಲಿ ಇಂದು ಪೂರ್ವಜರ ಸ್ಮರಣೆಯೂ ಸಾಧ್ಯವಿಲ್ಲವಾಗಿದೆ. ಸಾವಿರದ ಮುನ್ನೂರು ವರ್ಷಗಳ ಹಿಂದೆ ಇಸ್ಲಾಂ ಆಕ್ರಮಣಕ್ಕೆ ತುತ್ತಾದ ಪರ್ಷಿಯಾ ಇಂದು ಇರಾನ್ ಆಗಿದೆ. ಆಕ್ರಮಣಕ್ಕೆ ಮುನ್ನ ಕೋಟ್ಯಾಂತರ ಸಂಖ್ಯೆಯಲ್ಲಿದ್ದ ಪಾರ್ಸಿಗಳ ಸಂಖ್ಯೆ ಇಂದು ಇಡೀ ವಿಶ್ವದಲ್ಲಿ ೧ ಲಕ್ಷದ ನಲವತ್ತು ಸಾವಿರ ಮಾತ್ರ! ಇಡೀ ಯೂರೋಪ್ಗೆ ಸ್ವಾಭಿಮಾನವನ್ನು ಏಕಶಾಸನದ ಪ್ರಜ್ಞೆಯನ್ನು ನೀಡಿದ ಸೀಸರನ ರೋಮನ್ ಸಾಮ್ರಾಜ್ಯ ಎಲ್ಲಿದೆ? ಸ್ವಾಮಿ ವಿವೇಕಾನಂದರು ಹೇಳಿದರು ಸೀಸರ್ ಆಳುತ್ತಿದ್ದ ಕಡೆ ಇಂದು ಜೇಡರ ಬಲೆಗಳು ತುಂಬಿಕೊಂಡಿದ್ದಾವೆ ಅಂತ!
1492ರಲ್ಲಿ ಕೊಲಂಬಸ್ ಅಮೇರಿಕಾಕ್ಕೆ ಕಾಲಿಟ್ಟ. ಆಗ ಅಲ್ಲಿ ಮಾಯನ್ ಸಂಸ್ಕೃತಿಯ ಹತ್ತುಕೋಟಿ ಜನ ವಾಸವಾಗಿದ್ದರು. ಈಗ ಅವರ ಸಂಖ್ಯೆ ಕೇವಲ 60000! ಜನಸಂಖ್ಯೆ ಕುಸಿದದ್ದು ಹೇಗೆ? ಕೊಲಂಬಸ್ ಅಮೇರಿಕಾವನ್ನು ಲೂಟಿ ಮಾಡಿದ! ನಂತರ ಅವನ ದೇಶದ ಸೇನೆ ಬಂತು. ಮುಗ್ಧ ಮಾಯನ್ನರನ್ನು ಕಂಡಕಂಡಲ್ಲಿ ಕೊಚ್ಚಿ ಕೊಂದರು!ಸಂಸ್ಕೃತಿ ವಿನಾಶಕ್ಕೊಳಗಾಯಿತು.
ಹೀಗೆ ಗ್ರೀಕ್, ಮಾಯನ್, ರೋಮನ್, ಅಜೆಟಿಕ್, ಐಗುಪ್ತ, ಈಜಿಪ್ಷಿಯನ್, ಚಾಂಡಿಯನ್, ಬ್ಯಾಬಿಲೋನಿಯನ್, ಇಂಕಾ, ಸಿಥಿಯನ್, ಪಾರ್ಥಿಯನ್, ಇತ್ಯಾದಿ ಬಹುತೇಕ ನಾಗರೀಕತೆಗಳು ಸಂಸ್ಕೃತಿಗಳು ನಾಶವಾದವು! ಕೆಲವು ನೈಸರ್ಗಿಕ ವಿಕೋಪಕ್ಕೆ ತುತ್ತಾದರೆ ಹಲವು ಅಸಹಿಷ್ಣು ಮತಾಂಧರಿಗೆ ಬಲಿಯಾದವು. ಆದರೆ ಅವೆಲ್ಲಕ್ಕೂ ಪ್ರಾಚೀನವಾದ ಭಾರತೀಯ ಸಂಸ್ಕೃತಿ.....?
ಇಂದಿಗೂ ಉಳಿದಿದೆ!
ಆಕ್ರಮಕರು ನಮ್ಮಲ್ಲೂ ಬಂದರು. ಕಳೆದ ಎರಡೂವರೆ ಸಾವಿರ ವರ್ಷಗಳಲ್ಲಿ ಅದೆಷ್ಟು ಆಕ್ರಮಣಗಳನ್ನು ನಾವು ಎದುರಿಸಬೇಕಾಯಿತು? ಗ್ರೀಕರು, ಹೂಣರು, ಕುಶಾನರು, ಶಕರು, ಮಂಗೋಲರು, ಮೊಘಲರು, ಪಠಾಣರು, ಹಪ್ಶಿಗಳು, ತುರ್ಕಿಗಳು, ಇರಾನಿಗಳು, ಅಪ್ಘಾನಿಗಳು,ಪ್ರೆಂಚ್, ಡಚ್, ಪೋರ್ಚುಗೀಸರು, ಆಂಗ್ಲರು! ಅಷ್ಟೇ ಅಲ್ಲ ಸ್ವಾತಂತ್ರ್ಯಾನಂತರ 2ಸಲ ಚೀನಾ 4ಸಲ ಪಾಕಿಸ್ಥಾನ. ಅಂದರೆ ಅಲೆಗ್ಸಾಂಡರ್ನಿಂದ ಹಿಡಿದು ಫರ್ವೇಜ್ ಮುಷರಫ್ ವರೆಗೆ ಅದೆಷ್ಟು ಸೈನಿಕ ಆಕ್ರಮಣ. ಅಂತೆಯೇ ಚಾರ್ವಾಕನಿಂದ ಹಿಡಿದು ತಥಾಕಥಿತ ಎಡ ಬುದ್ಧಿಜೀವಿಗಳವರೆಗೆ ಅದೆಂಥಾ ಕ್ರೂರ ವೈಚಾರಿಕ ಆಕ್ರಮಣ!
ಆದರೂ ಭಾರತ ಸತ್ತಿಲ್ಲ! ಉಳಿದೆಲ್ಲವೂ ಆಕ್ರಮಕರ ಮೊದಲ ಹೊಡೆತಕ್ಕೆ ನಾಶವಾದರೆ ಭಾರತ ಜಗದ್ವಂದ್ಯವಾಗಿ ನಿಂತಿದೆ. ಆದರೆ ನಾವು ಇತಿಹಾಸದ ಈ ಪ್ರೇರಣಾದಾಯಿತ್ವವನ್ನು, ನಮ್ಮ ಸಂಸ್ಕೃತಿಯ ಚಿರಂಜೀವಿತ್ವವನ್ನು ನಮ್ಮ ಮಕ್ಕಳಿಗೆ ತಿಳಿಸ್ತೀವಾ? ಮೆಕಾಲೆ ಯಾ ಗುಲಾಮೀ ಮಾನಸಿಕತೆಯ ಕೆಲವು ಇತಿಹಾಸಕಾರರು ಭಾರತದ ಇತಿಹಾಸ ಎಂದರೆ ಸೋಲಿನ ಇತಿಹಾಸ ಅಂತ ನಮ್ಮ ಮಕ್ಕಳಿಗೆ ಬೋಧಿಸುವಂತೆ ಮಾಡಿದ್ದಾರೆ! ಮೇಲಿಂದ ಮೇಲೆ ಆಕ್ರಮಣಗಳಾದದ್ದು ನಿಜ. ಕೆಲವು ಸಲ ಸೋತಿದ್ದೂ ನಿಜ, ಆದರೆ ಸತ್ತಿಲ್ಲ! ಕೆಲವು ಆಕ್ರಮಕರು ನಮ್ಮನ್ನಾಳಿರಬಹುದು, ಆದರೆ ಮಾತೃಭೂಮಿಯ ಮೇಲೆ ಅವರ ಸಾರ್ವಭೌಮತ್ವಕ್ಕೆ ನಾವು ಮಾನ್ಯತೆ ಕೊಟ್ಟಿಲ್ಲ! ದೇಶದ ಯಾವುದಾದರೊಂದು ಮೂಲೆಯಲ್ಲಿ ನಾಡ ಮುಕ್ತಿಗಾಗಿ ಕಿಡಿ ಸಿಡೀತಾನೇ ಇತ್ತು. ಪುರೂರವನಿಂದ ಹಿಡಿದು ಸಾವರ್ಕರ್, ನೇತಾಜಿಯವರೆಗೆ ಪ್ರತೀ ಶತಮಾನದಲ್ಲಿ ಹಲವು ಸೇನಾನಿಗಳ ನೇತೃತ್ವದಲ್ಲಿ ಸಂಘರ್ಷ ಮಾಡಿದ್ದೀವಿ. ಅದರ ಫಲವೇ ಸ್ವಾತಂತ್ರ್ಯ! ಅಂದರೆ ಭಾರತದ ಇತಿಹಾಸ ಸೋಲಿನ ಇತಿಹಾಸ ಅಲ್ಲ, ಸಂಘರ್ಷದ ಇತಿಹಾಸ! ಗೆಲುವಿನ ಇತಿಹಾಸ! ದಾಸ್ಯ ಇದ್ದಾಗ ಸಂಘರ್ಷಕ್ಕೆ ಮತ್ತು ಶಾಂತಿ ಇದ್ದಾಗ ವಿಕಾಸಕ್ಕೆ ನಮಗೆ ಪ್ರೇರಣೆ ದೊರೆತಿದ್ದು ನಮ್ಮ ಸಂಸ್ಕೃತಿಯಿಂದ, ನಮ್ಮ ಸಂಸ್ಕಾರದಿಂದ, ಮತ್ತು ಈ ನೆಲದಲ್ಲಿ ಹಿರಿಯರು ಕಂಡ ಮಾತೃಸ್ವರೂಪದಿಂದ!

ಭಾರತದರ್ಶನ-೩

ಭಾರತವೆಂದರೆ,
ವಿದೇಶದಲ್ಲಿ ಧರ್ಮದ ಅಮೃತಧಾರೆ ಹರಿಸಿದ ಸ್ವಾಮಿ ವಿವೇಕಾನಂದ ತಾಯ್ನಾಡಿನಲ್ಲಿ ಇಳಿಯುತ್ತಿದ್ದಂತೆ ಮಣ್ಣಿನಲ್ಲಿ ಹೊರಳಾಡುತ್ತಾ ಆನಂದದ ತುತ್ತ ತುದಿಗೇರಿದರು. ಸ್ವರ್ಣಲಂಕೆಯ ವೈಭವದಿಂದ ವಿಚಲಿತಗೊಂಡ ಅನುಜ ಲಕ್ಷ್ಮಣನನ್ನು ಕಂಡ ಪ್ರಭು ಶ್ರೀರಾಮ "ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ" ಎಂದು ಕೊಂಡಾಡಿದ.

ನಾನೇ ಭಾರತ ಎಂದರು ರಮಣ ಮಹರ್ಷಿಗಳು. ಎನ್ನ ಪಾದಗಳೇ ಕನ್ಯಾಕುಮಾರಿ, ಹೃದಯವೇ ಇಂದ್ರಪ್ರಸ್ಥ(ದಿಲ್ಲಿ), ಶಿರವೇ ಕಾಶ್ಮೀರ, ಅಂಗಾಂಗಗಳು ಉಳಿದ ರಾಜ್ಯಗಳು, ಎಂದು ಅಡಿಯಿಂದ ಮುಡಿಯವರೆಗೆ ತಾಯಿ ಭಾರತಿಯನ್ನು ಆವಾಹನೆ ಮಾಡಿಬಿಟ್ಟರವರು.(ಅಣ್ಣ ಚಕ್ರವರ್ತಿ ಸೂಲಿಬೆಲೆ ಹೇಳುತ್ತಿರುತ್ತಾರೆ...ದಿಲ್ಲಿ ಎಂದರೆ ದಿಲ್ ಕಣ್ರೀ. ಅಲ್ಲಿ ಅಟ್ಯಾಕ್ ಆದರೆ ಹಾರ್ಟ್ ಅಟ್ಯಾಕ್ ಆದಂತೆ. ಮಂಡಿನೋವು ಅಂತ ಯಾರಾದರೂ ಅಂದರೆ ಕರ್ನಾಟಕಕ್ಕೇನೋ ಗ್ರಹಚಾರ ಕಾದಿದೆ ಅಂತ.)(ನಾವು ಕಾಶ್ಮೀರದರ್ಧ ಕಳೆದುಕೊಂಡಿದ್ದೇವೆ.ಅದಕ್ಕೆ ನಮ್ಮ ಬುಧ್ಧಿ ಬರಿದಾಗಿದೆ. ನಮ್ಮ ದೇಶಧ ಬಗ್ಗೆ ಏನೂ ಗೊತ್ತಿಲ್ಲ.)

"ಅಮ್ಮಾ ನಿನ್ನ ಸೇವೆಯೆಂದರೆ ಪ್ರಭು ಶ್ರೀರಾಮನ ಸೇವೆ. ನಿನ್ನಂತಹ ದೊಡ್ಡ ತಾಯಿಗೆ ನನ್ನಂತಹ ದಡ್ಡ ಮಗ ರಕ್ತವನ್ನಲ್ಲದೆ ಬೇರೇನನ್ನು ಕೊಡಲು ಸಾಧ್ಯ" ಎಂದು ರುಧಿರ ತರ್ಪಣ ಮಾಡಿದ ಧಿಂಗ್ರಾ. "ಅಮ್ಮ ನಿನಗಾಗಿ ನನ್ನ ಬರವಣಿಗೆಯನ್ನು ಮೀಸಲಿರಿಸಿದೆ. ನನ್ನ ಕಾವ್ಯಕ್ಕೆ ನೀನೆ ಪ್ರೇರಣೆಯಾದೆ. ನಿನ್ನ ಸೇವೆಯೆಂದರೆ ಅದು ದೇವದೇವತೆಗಳನ್ನು ಪ್ರಸನ್ನಗೊಳಿಸುವ ಕಾರ್ಯ." ಎಂದು ತನ್ನ ಕಾವ್ಯರಸಧಾರೆಯಿಂದ ತಾಯಿಯ ಅಭಿಷೇಕ ಮಾಡಿ ಕ್ರಾಂತಿಯಜ್ಞದ ನೇತಾರನಾಗಿ ತನ್ನನ್ನೂ ತನ್ನೆಲ್ಲ ಬಂಧು ಬಳಗವನ್ನು ಕ್ರಾಂತಿ ಯಜ್ಞಕ್ಕೆ ತಳ್ಳಿದರು ವೀರ ಸಾವರ್ಕರ್. ಅವರ ಮಾತು ಕೇಳಿ "ಆ ಸಿಂಧು ಸಿಂಧು ಪರ್ಯಂತ ಯಸ್ಯ ಭಾರತ ಭೂಮಿಕಾ।
ಪಿತೃಭೂಪುಣ್ಯಭೂಶ್ಚೈವ ಸವೈ ಹಿಂದೂ ರಿತಿಸ್ಮೃತಃ"- ಯಾವನು ಸಿಂಧುವಿಂದ ಸುತ್ತುವರಿದ ಭವ್ಯ ಭಾರತವನ್ನು ತನ್ನ ಕರ್ಮಭೂಮಿ ಯಾ ಪಿತೃ ಯಾ ಮಾತೃಭೂಮಿಯಾಗಿ ಪರಿಗಣಿಸುತ್ತಾನೋ ಆತ ಎಲ್ಲೇ ಇರಲಿ ಆತ ಹಿಂದೂ!

ಶುಕ್ರವಾರ, ಸೆಪ್ಟೆಂಬರ್ 21, 2012

ಬೇಕಿರೋದು ಸಶಸ್ತ್ರ ಕ್ರಾಂತಿ!

ಬಾಂಗ್ಲಾ, ಪಾಕಿಸ್ತಾನದಿಂದ ಬಂದ, ಬರುತ್ತಿರುವ ದೇಶದ್ರೋಹಿಗಳಿಗೆ ರೇಷನ್ ಕಾರ್ಡ್ , ಪೌರತ್ವ, ಕೊನೆಗೆ ಚುನಾವಣೆಯಲ್ಲಿ ಸ್ಪರ್ದಿಸಲು ಅವಕಾಶ, ಮಂತ್ರಿಗಿರಿ ನೀಡುವ ಷಂಡ ಸರಕಾರಕ್ಕೆ ಅಸ್ಸಾಂ ಹಿಂದುಗಳಿಗೆ ಕನಿಷ್ಟ ಭದ್ರತೆ, ಸಾಂತ್ವನ ಒದಗಿಸುವ ಮನಸ್ಸು ಹೃದಯ ಇಲ್ಲವೇ? ಪಾಕಿಸ್ತಾನ ಬಾಂಗ್ಲಾದಿಂದ ತನು ಮನ ಧನ ಮಾನ ಆಸ್ತಿ ಹಾನಿಗೊಂಡು ಕಣ್ಣೀರು ಸುರಿಸುತ್ತಾ ಭಾರತವೊಂದೇ ಅಭಯ ಎಂಬ ಆಶಾಭಾವನೆಯಿಂದ ಬರುತ್ತಿರೋ ಅಸಂಖ್ಯಾತ ಹಿಂದುಗಳಿಗೆ ಆಶ್ರಯ ಕೊಡದ ಸರಕಾರದ ಮಂತ್ರಿ ಮತ್ತವರ ಹೊಗಳುಭಟರನ್ನು ಗುಂಡಿಟ್ಟು ಕೊಲ್ಲಬೇಕಲ್ಲವೆ!
ಬೊಗಳದ ನಾಯಿ ಕಳ್ಳ ನಾಯಿ ಅದು ಕಚ್ಚುತ್ತೆ ಎಂಬುದು ಎಷ್ಟು ಸತ್ಯ ನೋಡಿ! ಮನಮೋಹನ ಯಾಕೆ ಮೌನವಾಗಿದ್ದ ಗೊತ್ತೆ? ಯಾಕೆಂದರೆ ಕಲ್ಲಿದ್ದಲನ್ನೇ ನುಂಗಿದ್ದ!
ಕಣ್ಣು ಕಿವಿ ಇಲ್ಲದ ನಾಲಗೆ ಬಿದ್ದು ಹೋದ ಈ ದೇಶದ್ರೋಹಿ ರಾಜಕಾರಣಿಗಳಿಗೆ ಚಳವಳಿ ಉಪವಾಸಗಳು ನಾಟೋದಿಲ್ಲ. ಬ್ರಿಟಿಷರನ್ನು ಓಡಿಸಿದ ಹಾಗೆ ಈ ಬ್ರಿಟಿಷ್ ಮಾನಸಿಕತೆಯವರನ್ನು ಸುಡಬೇಕಾದರೆ ಸಶಸ್ತ್ರಕ್ರಾಂತಿಯೊಂದೇ ದಾರಿ!
ಬರ್ಮಾದಲ್ಲಿ ಮುಸ್ಲಿಮರು ಸತ್ತರೆ ಯೋಧರ ಸ್ಮೃತಿಚಿಹ್ನೆಗಳನ್ನೇ ಒಡೆದು ಹಾಕುವ, ಹಿಂದುಗಳನ್ನು ಹೊಡೆಯುವ ಕೊಲ್ಲುವ, ರಾಷ್ಟ್ರೀಯ ಆಸ್ತಿಪಾಸ್ತಿ ಹಾನಿ ಮಾಡುವ ವಿಷಯಗಳು ಮಾಧ್ಯಮಗಳ ಟಿ ಆರ್ ಪಿಯನ್ನು ಹೆಚ್ಚಿಸುವುದಿಲ್ಲ ಅಲ್ಲವೆ? ಮಾನಗೆಟ್ಟ ಮಾಧ್ಯಮ ಬುದ್ದಿಜೀವಿಗಳು ಈಗೆಲ್ಲಿ ಸತ್ತು ಹೋಗಿದ್ದಾರೆ? ಅಸ್ಸಾಮಿಗರ ಸಹಾಯಕ್ಕೆ ನಿಂತಿರೋದು ಅದೇ ನೀವು ಚಡ್ಡಿ ಅಂತ ಹೇಳೋ RSSನ ಗೂಂಡಾಗಳು! ಈಗೇನು ನಿಮ್ಮ ನಾಲಗೆ ಬಿದ್ದು ಹೋಗಿದೆಯೇ?

ಒಂದು ಕಥೆ-ಒಂದು ವ್ಯಥೆ!

ಒಂದು ಕಥೆ-ಒಂದು ವ್ಯಥೆ!

ಹುಡುಗಿಯರಿಬ್ಬರು ಇಬ್ಬರು ಹುಡುಗರೊಡನೆ ಲಲ್ಲೆಗರೆಯುತ್ತ ಸಾಗುತ್ತಿದ್ದಾರೆ. ವಸನವೋ ಹೇಳತೀರದು.ವ್ಯಸನವಾಗಿದೆ.
ಮಾರ್ಗ ಮಧ್ಯದಲ್ಲಿ ಬಡತನವೇ ಮೈವೆತ್ತಂತಿರುವ ಹರಿದ ಸೀರೆ ಉಟ್ಟ ಹೆಂಗಸೊಬ್ಬಳು ಹಸಿವು ಬಾಯಾರಿಕೆಯಿಂದ ಬಿದ್ದು ನರಳುತ್ತಿದ್ದಾಳೆ.ಅವಳನ್ನು ನೋಡಿ ಈ ಹುಡುಗ ಹುಡುಗಿಯರು ಸಹಾಯ ಮಾಡೋ ಬದಲು ತಮಾಷೆ ಅವಹೇಳನ ಮಾಡಲಾರಂಭಿಸಿದರು.
ಆಗ ಆ ತಾಯಿ ಮನಸ್ಸಲ್ಲೇ ಅಂದುಕೊಂಡಳು, "ನನ್ನ ಪ್ರಾಣ ಹೋಗುತ್ತಿದೆ. ಆದರೆ ಮಾನ ಉಳಿದಿದೆ. ಅವರ ಮಾನ ಉಳಿದಿಲ್ಲ. ಹಾಗಾಗಿ ಪ್ರಾಣವೂ!"
ಪ್ರಾಣ ಹೋಗಿತ್ತು. ಧರ್ಮ ಸತ್ತಿತ್ತು!

ಭಾರತ ದರ್ಶನ1


ಭಾರತ ದರ್ಶನ...
ಕೇಳಿದೊಡನೆ ನೆನಪಾಗೋದು ತಾಯಿ ಭಾರತಿಯೆ ಮೈವೆತ್ತಂತಿದ್ದ ಸಹನೆ ತಾಳ್ಮೆಗಳ ಸಾಕಾರ ಮೂರ್ತಿ, ವಾಕ್ಪಟು, ದೃಷ್ಟಾರ, ಅಪ್ರತಿಮ ದೇಶಭಕ್ತ ವಿದ್ಯಾನಂದ ಶೆಣೈ. ಮುಖತ ಭೇಟಿಯಾಗದಿದ್ದರೂ,ಅವರ ಉಪನ್ಯಾಸದಿಂದ ಪ್ರಭಾವಿತರಾದವರು ಅನೇಕ. ನೀವು ಕೇಳಿರಬಹುದು ಆತ ಮಾತಾಡುತ್ತಿದ್ದಂತೆ ನಿಂತ ನಿಲುವಲ್ಲೆ ಏಕಚಿತ್ತರಾಗಿ ಕೇಳುತ್ತಿದ್ದವರೆಷ್ಟೋ ಮಂದಿ!ಬುದ್ಧಿ ಇಲ್ಲದ ಕಮ್ಯೂನಿಷ್ಟರು, ದೇಶ ಮಾರುವ ಕಾಂಗ್ರೆಸ್ಸಿಗರೂ,ದೇಶ ದೂರುವ ಯುವಜನಾಂಗ ಕೂಡಾ ಈ ಬ್ರಹ್ಮಾಚಾರಿಯ ವಾಕ್ಪ್ರವಾಹದಲ್ಲಿ ತೇಲಿ ಹೋದರೆಂದರೆ ಅದೆಂಥ ಮಾತಿನ ಮೋಡಿ ಇರಬಹುದು?
ವಿದ್ಯಾನಂದರು ಹೇಳುತ್ತಾರೆ....
ಭಾರತ ದರ್ಶನ ಎಂದರೆ ಭಾಷೆಯ ವಿಲಾಸ ಅಲ್ಲ. ಅದು ಭಾವನೆಗಳ ಸಂಯೋಜನೆ.ನಮ್ಮೆಲ್ಲರ ಹೃದಯದ ಭಾವನೆಗಳಿಗೆ ಕೊಟ್ಟ ಮೂರ್ತ ರೂಪ!!!
... ಬಂಧುಗಳೇ ಭಾರತ ವಿಶ್ವದ ಅತ್ಯಂತ ಪ್ರಾಚೀನ ರಾಷ್ಟೃ. ಇಲ್ಲಿಗೆ ವಿಶ್ವದ ಎಲ್ಲೆಡೆಯಿಂದ ಜನ ಬಂದರು. ಕೆಲವರು ಪ್ರವಾಸಿಗಳಾಗಿ,ಕೆಲವರು ದುರಾಸೆಯಿಂದ. ದಾಳಿ ಇಟ್ಟರು, ನುಗ್ಗಿದರು, ನುಂಗಿದರು, ಹಿಗ್ಗಿದರು, ಕುಗ್ಗಿದರು,ಕಲಿತರು, ಕಲಿಸಿದರು, ಬೆರೆತರು, ಬೇರೆಯಾದರು. ನಮ್ಮವರು ಬೇರೆ ಕಡೆ ಹೋದರು, ಬೆಳಕು ಚೆಲ್ಲಿದರು, ಕೂಡಿ ಬಾಳಿದರು. ನಾಗರೀಕತೆಯ ಉದಯಕಾಲವೆಂದು ಹೇಳಲಾಗುವ ಕಾಲದಲ್ಲೂ ಭಾರತ ಮುಂಚೂಣಿಯಲ್ಲಿತ್ತು. ನಾಗರೀಕತೆಯ ಅಸ್ತಮದ ಈ ಕಾಲದಲ್ಲೂ ಭಾರತ ತನ್ನ ಸಂಸ್ಕೃತಿಯನ್ನು ಉಳಿಸಿಕೊಂಡಿದೆ.ಅದು ಸನಾತನವೂ ಹೌದು, ನೂತನವು ಹೌದು.

ಜಗತ್ತಿನ ಇತಿಹಾಸದಲ್ಲಿ ಪ್ರಾಚೀನವೆನಿಸಿದ ಎಂದೋ ಕಣ್ಮರೆಯಾದ ಬ್ಯಾಬಿಲೋನಿಯನ್, ಚಾಂಡಿಯನ್, ಐಗುಪ್ತ, ಯವನ ರಾಷ್ಟ್ರಗಳಿಗಿಂತಲೂ ಹಳೆಯದಾದ ಮತ್ತು ಹಿರಿದಾದ ಸಂಸ್ಕೃತಿ ಭಾರತದ್ದು. ಮಾತ್ರವಲ್ಲ ಅದು ಇಂದಿಗೂ ಜಗತ್ತಿನ ಬಲಾಢ್ಯ ರಾಷ್ತ್ರಗಳಿಗೆ ಭುಜಕ್ಕೆ ಭುಜ ಕೊಟ್ಟು ನಿಂತಿದೆ. ಅದಕ್ಕೆ ಅದು ಸನಾತನ ಹಾಗೂ ನೂತನ!!!

ಭಾರತದರ್ಶನ-೨

ಭಾರತದರ್ಶನ-೨

ರಾಷ್ಟ್ರ ಎಂದರೆ ಭೂಮಿಯ ಒಂದು ತುಂಡಾಗಲಿ, ಜನತೆಯ ಒಂದು ಗುಂಪಾಗಲಿ ಅಲ್ಲ. ಅದೊಂದು ಸಜೀವ ಸೃಷ್ಟಿ. ಒಂದೇ ಪರಂಪರೆ, ಇತಿಹಾಸ, ಒಂದೇ ಬಗೆಯ ಆಸೆ ಆಕಾಂಕ್ಷೆಗಳು, ಸುಖ ದುಃಖಗಳು, ಒಂದೇ ಶತ್ರು ಮಿತ್ರ ಭಾವನೆ ಹೊಂದಿ, ಒಂದು ನಿರ್ದಿಷ್ಟ ನೈಸರ್ಗಿಕ ಮೇರೆಗಳನ್ನುಳ್ಳ ಭೂಭಾಗದಲ್ಲಿ ಮಕ್ಕಳಂತೆ ಬೆಳೆದು ಬರುವ ಜನಾಂಗವೇ ಒಂದು ರಾಷ್ಟ್ರ. ವರ್ತಮಾನ ಕಾಲದ ಕೇವಲ ಉದ್ದಗಲಗಳ ಗುಣಾಕಾರಕ್ಕೆ ರಾಷ್ಟ್ರ ಒಳಪಡುವುದಿಲ್ಲ. ಭೂತದ ಇತಿಹಾಸ, ಪರಂಪರೆಗಳ ಆಳ ಅದಕ್ಕಿರುತ್ತದೆ. ಮಾನವ ಜೀವನ ವ್ಯವಸ್ಥೆಯ ಅನೇಕ ಪ್ರಯೋಗಗಳ ಪರಿಪಾಕವಾಗಿ ಶ್ರೇಷ್ಠ ಸಾಂಸ್ಕೃತಿಕ ಸಂಪತ್ತು, ಆದರ್ಶ ಜೀವನ ಪದ್ದತಿಯನ್ನು ನಮ್ಮ ಪೂರ್ವಜರು ಬಹು ಮೊದಲೇ ನಿರ್ಮಿಸಿದರು. ತಮ್ಮ ದೇಶವನ್ನು ತಾಯಿ ಎಂದು ಕರೆದು ತಮ್ಮೆಲ್ಲಾ ಶೃದ್ಧಾಭಕ್ತಿಗಳನ್ನು ಆಕೆಯ ಪದತಲದಲ್ಲಿ ಅರ್ಪಿಸಿದರು.

ವಾಸ್ತವಿಕವಾಗಿ ಭಾರತ ಎಂಬ ಹೆಸರೇ ಇದು ನಮ್ಮ ತಾಯಿ ಎಂದು ಸೂಚಿಸುತ್ತದೆ. ಇದನ್ನು ಅಜನಾಭವರ್ಷ ಎಂದರು. ಅಂದರೆ ಅಜನ್ಮನ(ವಿಷ್ಣು) ನಾಭಿ ಕಮಲದ ಮೇಲೆ ಇದು ನಿಂತಿದೆ ಎಂದರ್ಥ(ಮದ್ಭಾಗವತ). ವಾಯು ಪುರಾಣದಲ್ಲಿ ಹೈಮವತವರ್ಷ ಎಂದರು. ಭರತ ಚಕ್ರವರ್ತಿಯಿಂದಾಗಿ ಭಾರತ ಎನಿಸಿತು. ಸ್ವಾಯಂಭುವ ಮನುವಿನ ಮಗ ಪ್ರಿಯವ್ರತ. ಆತನ ಮಗ ನಾಭಿ. ನಾಭಿಯ ಸುತ ಋಷಭ. ಇವನ ಜೇಷ್ಠ ಪುತ್ರನೇ ಭರತ. ಇದು ವಾಯುಪುರಾಣ, ಭಾಗವತ, ಮಾರ್ಕಂಡೇಯ ಪುರಾಣಗಳಿಂದ ಧೃಢಪಟ್ಟಿದೆ. ಆದರೆ ದುಶ್ಯಂತ ಶಕುಂತಲೆಯರ ಪುತ್ರ ಭರತನಿಂದಾಗಿ ಭಾರತವೆನಿಸಿತೆಂದು ಮಹಾಭಾರತದಲ್ಲಿದೆ. ಈತ ಚತುರ್ ದಿಕ್ಕುಗಳನ್ನು ಗೆದ್ದು ನೂರಕ್ಕೂ ಹೆಚ್ಚು ಅಶ್ವಮೇಧ ಯಾಗ ಮಾಡಿಸಿದನೆಂದು ಐತರೇಯ ಬ್ರಾಹ್ಮಣ ಹೇಳುತ್ತದೆ. ಇವುಗಳ ಪೈಕಿ 78ನ್ನು ಯಮುನೆಯ ತಟದಲ್ಲೂ, 55ನ್ನು ಗಂಗಾ ತೀರದಲ್ಲೂ ನಡೆಸಿದ್ದ ದಾಖಲೆ ಶತಪಥ ಬ್ರಾಹ್ಮಣದಲ್ಲಿದೆ.

ಭೃ ಎನ್ನುವ ಧಾತುವಿನಿಂದ ಭಾರತ ಹುಟ್ಟಿಕೊಂಡಿತು. ಅಂದರೆ ಪೋಷಿಸು, ಭರಿಸು ಎಂದರ್ಥ. ಇದಕ್ಕೆ ಬೆಳಕು, ಜ್ಞಾನ, ಭಗವಂತ ಎಂಬೀ ಅರ್ಥಗಳಿವೆ. ಆದ್ದರಿಂದ ವಿಶ್ವವನ್ನೇ ಪೋಷಿಸಿದ, ವಿಶ್ವಕ್ಕೆ ಬೆಳಕು ನೀಡಿದ, ಜ್ಞಾನ ನೀಡಿದ, ಭಗವಂತನ ನಾಡು ಭಾರತ! 'ಭಾರತ' ಇದು ಪ್ರಗತಿಯ ಚಿಹ್ನೆ. ನಾಟ್ಯಶಾಸ್ತ್ರದ ಹರಿಕಾರ ಭರತಮುನಿಯ ಬೀಡು. ನಟರಾಜನ ಪದತಲ ಸೋಂಕಿದ ಪುಣ್ಯನೆಲ. 'ಭಾ'ವ, 'ರಾ'ಗ, 'ತಾ'ಳಗಳ ಸಾಮರಸ್ಯದ ಭೂಮಿ! ಇದೇ ಇಲ್ಲಿನ ವಿವಿಧತೆಯಲ್ಲೂ ಏಕನಾದ ಹೊರಡಿಸಿಹುದು!
॥ವಂದೇ ಮಾತರಂ॥
-ಮುಂದುವರಿಯುವುದು