ಭಾರತ ದರ್ಶನ...
ಕೇಳಿದೊಡನೆ ನೆನಪಾಗೋದು ತಾಯಿ ಭಾರತಿಯೆ ಮೈವೆತ್ತಂತಿದ್ದ ಸಹನೆ ತಾಳ್ಮೆಗಳ ಸಾಕಾರ ಮೂರ್ತಿ, ವಾಕ್ಪಟು, ದೃಷ್ಟಾರ, ಅಪ್ರತಿಮ ದೇಶಭಕ್ತ ವಿದ್ಯಾನಂದ ಶೆಣೈ. ಮುಖತ ಭೇಟಿಯಾಗದಿದ್ದರೂ,ಅವರ ಉಪನ್ಯಾಸದಿಂದ ಪ್ರಭಾವಿತರಾದವರು ಅನೇಕ. ನೀವು ಕೇಳಿರಬಹುದು ಆತ ಮಾತಾಡುತ್ತಿದ್ದಂತೆ ನಿಂತ ನಿಲುವಲ್ಲೆ ಏಕಚಿತ್ತರಾಗಿ ಕೇಳುತ್ತಿದ್ದವರೆಷ್ಟೋ ಮಂದಿ!ಬುದ್ಧಿ ಇಲ್ಲದ ಕಮ್ಯೂನಿಷ್ಟರು, ದೇಶ ಮಾರುವ ಕಾಂಗ್ರೆಸ್ಸಿಗರೂ,ದೇಶ ದೂರುವ ಯುವಜನಾಂಗ ಕೂಡಾ ಈ ಬ್ರಹ್ಮಾಚಾರಿಯ ವಾಕ್ಪ್ರವಾಹದಲ್ಲಿ ತೇಲಿ ಹೋದರೆಂದರೆ ಅದೆಂಥ ಮಾತಿನ ಮೋಡಿ ಇರಬಹುದು?
ವಿದ್ಯಾನಂದರು ಹೇಳುತ್ತಾರೆ....
ಭಾರತ ದರ್ಶನ ಎಂದರೆ ಭಾಷೆಯ ವಿಲಾಸ ಅಲ್ಲ. ಅದು ಭಾವನೆಗಳ ಸಂಯೋಜನೆ.ನಮ್ಮೆಲ್ಲರ ಹೃದಯದ ಭಾವನೆಗಳಿಗೆ ಕೊಟ್ಟ ಮೂರ್ತ ರೂಪ!!!
... ಬಂಧುಗಳೇ ಭಾರತ ವಿಶ್ವದ ಅತ್ಯಂತ ಪ್ರಾಚೀನ ರಾಷ್ಟೃ. ಇಲ್ಲಿಗೆ ವಿಶ್ವದ ಎಲ್ಲೆಡೆಯಿಂದ ಜನ ಬಂದರು. ಕೆಲವರು ಪ್ರವಾಸಿಗಳಾಗಿ,ಕೆಲವರು ದುರಾಸೆಯಿಂದ. ದಾಳಿ ಇಟ್ಟರು, ನುಗ್ಗಿದರು, ನುಂಗಿದರು, ಹಿಗ್ಗಿದರು, ಕುಗ್ಗಿದರು,ಕಲಿತರು, ಕಲಿಸಿದರು, ಬೆರೆತರು, ಬೇರೆಯಾದರು. ನಮ್ಮವರು ಬೇರೆ ಕಡೆ ಹೋದರು, ಬೆಳಕು ಚೆಲ್ಲಿದರು, ಕೂಡಿ ಬಾಳಿದರು. ನಾಗರೀಕತೆಯ ಉದಯಕಾಲವೆಂದು ಹೇಳಲಾಗುವ ಕಾಲದಲ್ಲೂ ಭಾರತ ಮುಂಚೂಣಿಯಲ್ಲಿತ್ತು. ನಾಗರೀಕತೆಯ ಅಸ್ತಮದ ಈ ಕಾಲದಲ್ಲೂ ಭಾರತ ತನ್ನ ಸಂಸ್ಕೃತಿಯನ್ನು ಉಳಿಸಿಕೊಂಡಿದೆ.ಅದು ಸನಾತನವೂ ಹೌದು, ನೂತನವು ಹೌದು.
ಜಗತ್ತಿನ ಇತಿಹಾಸದಲ್ಲಿ ಪ್ರಾಚೀನವೆನಿಸಿದ ಎಂದೋ ಕಣ್ಮರೆಯಾದ ಬ್ಯಾಬಿಲೋನಿಯನ್, ಚಾಂಡಿಯನ್, ಐಗುಪ್ತ, ಯವನ ರಾಷ್ಟ್ರಗಳಿಗಿಂತಲೂ ಹಳೆಯದಾದ ಮತ್ತು ಹಿರಿದಾದ ಸಂಸ್ಕೃತಿ ಭಾರತದ್ದು. ಮಾತ್ರವಲ್ಲ ಅದು ಇಂದಿಗೂ ಜಗತ್ತಿನ ಬಲಾಢ್ಯ ರಾಷ್ತ್ರಗಳಿಗೆ ಭುಜಕ್ಕೆ ಭುಜ ಕೊಟ್ಟು ನಿಂತಿದೆ. ಅದಕ್ಕೆ ಅದು ಸನಾತನ ಹಾಗೂ ನೂತನ!!!
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ