ಪುಟಗಳು

ಶುಕ್ರವಾರ, ಸೆಪ್ಟೆಂಬರ್ 30, 2016

ಪದ್ಮಾವತಿಯ ಸ್ವರ್ಗಕ್ಕೆ ನರಕದರ್ಶನ ಮಾಡಿಸಿದ ಭಾರತೀಯ ಸೇನೆ!

ಪದ್ಮಾವತಿಯ ಸ್ವರ್ಗಕ್ಕೆ ನರಕದರ್ಶನ ಮಾಡಿಸಿದ ಭಾರತೀಯ ಸೇನೆ!

            ಸೂರ್ಯ ಇನ್ನೂ ಕಣ್ಣುಬಿಟ್ಟಿರಲಿಲ್ಲ. ಬೆಳಗ್ಗೆ 4.32ರ ಹೊತ್ತಿಗೆ ಫೋನ್ ರಿಂಗಣಿಸಿ ಅತ್ತ ಕಡೆಯಿಂದ "ಸಕ್ಸಸ್" ಎನ್ನುವ ಪದ ಕೇಳಿದ್ದೇ ತಡ 56 ಇಂಚಿನ ಎದೆಯುಬ್ಬಿ ನಿಂತಿತ್ತು. ಅದೇ ಹರ್ಷದಲ್ಲಿ ಕೇವಲ ಅರ್ಧ ಗಂಟೆಯಲ್ಲಿ ಎರಡು ದಿವಸಗಳ ಅಷ್ಟೂ ನಿದ್ದೆಯನ್ನು ಪೂರೈಸಿ ಆತ ಎಂದಿನಂತೆ ತನ್ನ ಕಾರ್ಯದಲ್ಲಿ ಮಗ್ನನಾದ. ಯಾವುದೇ ಹೇಳಿಕೆಯಿಲ್ಲ, ಟ್ವೀಟೂ ಇಲ್ಲ;  ಆತ ನಿರ್ಲಿಪ್ತ. ಭಾರತ ಶತಶತಮಾನಗಳಿಂದ ಇಂತಹ ನಾಯಕನಿಗೆ ಕಾದಿತ್ತು.

                ಉರಿಯ ಆಘಾತಕ್ಕೆ ಇಡೀ ದೇಶವೇ ಸಿಡಿದೆದ್ದಿತ್ತು. ಐವತ್ತಾರು ಇಂಚಿನೆದೆಯ ಸಾಮರ್ಥ್ಯದ ಬಗ್ಗೆ ಪ್ರಶ್ನೆಗಳೆದ್ದಿದ್ದವು. ಪಾಕಿಸ್ತಾನವನ್ನು ಇಲ್ಲವಾಗಿಸಿಬಿಡಿ ಎನ್ನುವ ಮಾತು ದೇಶದ ಮೂಲೆಮೂಲೆಯಿಂದ ಕೇಳಿಬಂದಿತ್ತು. ಯುದ್ಧಕ್ಕಿಳಿಯದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನವನ್ನು ಒಂಟಿಯಾಗಿಸಹೊರಟ ಸರಕಾರದ ಪ್ರಯತ್ನಗಳು ಸಾಮಾನ್ಯಜನತೆಗೆ ಅರ್ಥವಾಗಿರಲಿಲ್ಲ. ನೇರ ಯುದ್ಧವಲ್ಲದೆ ಪಾಕಿಸ್ತಾನ ಬುದ್ಧಿಕಲಿಯದು ಎನ್ನುತ್ತಿದ್ದ ಬಹುತೇಕ ಭಾರತೀಯರ ಅಸಹನೆಗೆ ಹುಟ್ಟಿದಂದಿನಿಂದ ಸದಾ ಉಪಟಳ ಮಾಡುತ್ತಲೇ ಬಂದಿರುವ ಪಾಕಿಸ್ತಾನದ ಕಿರಿಯೇಕಿರಿಯೇ ಕಾರಣವಲ್ಲದೆ ಮತ್ತೇನಲ್ಲ. ಆದರೆ ಸರಕಾರ ಯುದ್ಧಕ್ಕೆ ಮನಸ್ಸು ಮಾಡದೇ ಇದ್ದಾಗ ಜನ ಇವರೂ ಹಿಂದಿನವರಂತೆಯೇ, ಏನೂ ಪ್ರಯೋಜನವಿಲ್ಲ ಎನ್ನುವ ಅಸಮಧಾನ ಬಹಿರಂಗವಾಗಿಯೇ ಹೊರಸೂಸಿದ್ದರು. ಕೇರಳದಲ್ಲೂ ಮೋದಿ ಯುದ್ಧದ ಬಗ್ಗೆ ಮಾತಾಡದೆ, ಬಡತನದ ವಿರುದ್ಧ ಹೋರಾಡೋಣ; ಮನುಷ್ಯತ್ವದ ವಿರುದ್ಧವಲ್ಲ ಎಂದಾಗ ಮೋದಿ ಪಾಕಿಸ್ತಾನದ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದಿಲ್ಲವೆಂದೇ ಎಲ್ಲಾ ಯೋಚಿಸಿದ್ದರು. ಮೋದಿಯನ್ನು ವಿರೋಧಿಸುವ ಭರದಲ್ಲಿ ದೇಶವನ್ನೇ ವಿರೋಧಿಸುವ ರಾಷ್ಟ್ರಭಾವನೆಯಿಲ್ಲದ ಸಿಕ್ಯುಲರುಗಳಿಗಂತೂ ಕಳೆದ ಹತ್ತು ದಿನಗಳು ಪರ್ವಕಾಲ. ಆದರೆ ಅವರ ರಂಜಾನ್ ಮುಗಿಯುವ ಮೊದಲೇ ನಮ್ಮ ನವರಾತ್ರಿ ಸದ್ದಿಲ್ಲದೆ ಆರಂಭವಾಗಿ ಗುರುವಾರ ಸೂರ್ಯೋದಯಕ್ಕೆ ಸರಿಯಾಗಿ ವಿಜಯದಶಮಿ ವಿಜೃಂಭಿಸಿದಾಗ ಅವರಿಗೆಷ್ಟು ಉರಿದಿರಬೇಡ?

                ಪಠಾನ್ಕೋಟ್, ಉರಿ ಹೀಗೆ ಒಂದರ ಹಿಂದೊಂದರಂತೆ ಸೇನಾ ನೆಲೆಗಳ ಮೇಲೆ ದಾಳಿ ಆಗುತ್ತಿದೆ ಎಂದರೆ ಅದು ನಮ್ಮ ಗುಪ್ತಚರ ವೈಫಲ್ಯ ಎಂದು ದೂರುವ ಯಾರಿಗೂ ಇಂಥದೇ 17 ದಾಳಿಗಳನ್ನು ಸೇನೆ ವಿಫಲಗೊಳಿಸಿದ್ದು ತಿಳಿದೇ ಇಲ್ಲ. ಇರಲಿ. ಅಸಲಿಗೆ ಕಳೆದ ಹತ್ತು ದಿವಸ ಭಾರತ ಪಾಕಿಸ್ತಾನವನ್ನು ಅಕ್ಷರಃ ಕಟ್ಟಿ ಹಾಕಿತ್ತು. ಭಯೋತ್ಪಾದಕರನ್ನು ನಿಗ್ರಹಿಸಿ ಎಂದು ಮೊದಲ ಬಾರಿಗೆ ಅಮೇರಿಕಾ ಖಡಕ್ಕಾಗಿ ಎಚ್ಚರಿಕೆ ನೀಡಿತ್ತು. ಅಲ್ಲಿನ ಸಂಸತ್ತಿನಲ್ಲಿ ಪಾಕಿಸ್ತಾನದ ವಿರುದ್ಧ ಮಸೂದೆ ಮಂಡನೆಗೂ ಉಪಕ್ರಮವಾಗಿತ್ತು. ವಿಶ್ವಸಂಸ್ಥೆಯ ವೇದಿಕೆಯಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಪಾಕಿಸ್ತಾನವನ್ನು ಅಪರಾಧಿಯನ್ನಾಗಿ ಸಾಕ್ಷಿಸಮೇತ ತೋರ್ಪಡಿಸಿ ಜಗತ್ತಿನ ಮುಂದೆ ಪಾಕಿಸ್ತಾನವನ್ನು ಬೆತ್ತಲೆಯಾಗಿಸಿದರು. ಭಾರತ ಸಾರ್ಕ್ ಶೃಂಗ ಸಭೆಯನ್ನು ಬಹಿಷ್ಕರಿಸಿದಾಗ ಬಾಂಗ್ಲಾ, ಭೂತಾನ್, ಅಪ್ಘನ್ನರು ಭಾರತವಿಲ್ಲದ ಸಭೆಗೆ ತಾವೂ ಬರಲೊಲ್ಲವೆಂದರು. ಪಾಕಿಸ್ತಾನವು ತಮ್ಮ ಆಂತರಿಕ ವ್ಯವಹಾರಗಳಲ್ಲಿ ಕೈಯಾಡಿಸುತ್ತಿದೆ ಎಂದು ಬಾಂಗ್ಲಾ, ಅಫಘಾನಿಸ್ತಾನಗಳು ದೂರಿದರೆ, ಭಯೋತ್ಪಾದನೆಯ ಹೆಚ್ಚಳಕ್ಕೆ ಪಾಕಿಸ್ತಾನವೇ ಕಾರಣ ಎಂದು ಭೂತಾನ್ ದೂಷಿಸಿತು. ವಾಘಾ ಗಡಿಯ ಮೂಲಕ ಭಾರತದೊಂದಿಗೆ ವ್ಯಾಪಾರ ವಹಿವಾಟು ನಡೆಸುವುದಕ್ಕೆ ಪಾಕಿಸ್ತಾನವು ಅಫಘಾನಿಸ್ತಾನಕ್ಕೆ ಅವಕಾಶ ಮಾಡಿಕೊಡದಿದ್ದರೆ, ಮಧ್ಯ ಏಷ್ಯದ ಜತೆ ವ್ಯವಹರಿಸುವುದಕ್ಕೆ ಪಾಕಿಸ್ತಾನಕ್ಕೆ ಅನುಕೂಲ ಒದಗಿಸುತ್ತಿರುವ ಅಫ್ಘನ್ ಗಡಿಯನ್ನು ಮುಚ್ಚುತ್ತೇವೆ ಎಂದು ಅಫಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಗನಿ ಗುರಾಯಿಸಿದರು. ಇಸ್ರೇಲ್ ಭಾರತದ ಪರವಾಗಿ ಮಾತಾಡಿತು. ಜಪಾನ್, ದಕ್ಷಿಣ ಕೊರಿಯಾ, ಇರಾನ್, ಶ್ರೀಲಂಕಾಗಳು ಭಾರತದ ಪರವಹಿಸಿದವು. ಇಸ್ರೇಲ್ ಪ್ರಧಾನಿ ನೆತಾನ್ಯಾಹುವಂತೂ ಪಾಕಿಸ್ತಾನದ ಪ್ರಧಾನಿಯೂ ತಾನು ತಂಗುವ ಹೋಟೆಲ್ಲಿನಲ್ಲಿದ್ದಾರೆ ಎಂಬ ಕಾರಣಕ್ಕೆ ಹೋಟೆಲ್ ಕಾಯ್ದಿರಿಸಿದ್ದನ್ನೇ ರದ್ದು ಮಾಡಿದರು. ಹೀಗೆ ಒಟ್ಟಾರೆ ಭಾರತ ಪಾಕಿಸ್ತಾನವನ್ನು ವಿಶ್ವದಲ್ಲಿ ಒಬ್ಬಂಟಿಯನ್ನಾಗಿಸಿತ್ತು. ಅದು ಭಾರತದ ಮೊದಲ ಸರ್ಜಿಕಲ್ ಸ್ಟ್ರೈಕ್! ಅದು ಪಾಕಿಸ್ತಾನದ ವಿರುದ್ಧ ಭಾರತಕ್ಕೆ ಸಿಕ್ಕ ವ್ಯೂಹಯುಕ್ತಿಯ ರಾಜತಾಂತ್ರಿಕ ಜಯ!

                ಕಾರ್ಯಾಚರಣೆಯ ವಿಚಾರ ಮೋದಿ, ಧೋವಲ್ ಹಾಗೂ ಸೈನ್ಯಾಧಿಕಾರಿಗಳ ಹೊರತಾಗಿ ಯಾರಿಗೂ ತಿಳಿದಿರಲಿಲ್ಲ. ಕಳೆದೆರಡು ದಿವಸಗಳಂದ ನಿದ್ದೆಯಿಲ್ಲದೆ ಕಾರ್ಯಾಚರಣೆಯ ರೂಪುರೇಷೆಯನ್ನು ನಿರ್ಧರಿಸಿದ ಈ ತಂಡ ಭಾರತಕ್ಕೆ ಇಷ್ಟರವರೆಗೆ ಅಸಾಧ್ಯವಾದುದನ್ನು ಸಾಧಿಸಿಯೇ ಬಿಟ್ಟಿತು. ಮಾಜಿ ಯೋಧರೊಬ್ಬರು ಭಾರತ ಮೊದಲ ಬಾರಿ ಇಸ್ರೇಲಿನಂತೆ ಕಾರ್ಯಾಚರಣೆ ಮಾಡಿದೆ ಎಂದದ್ದು ಅತಿಶಯೋಕ್ತಿಯೇನಲ್ಲ. ಉರಿ ದಾಳಿಯ ಬೆನ್ನಲ್ಲೇ ಮಿಲಿಟರಿ ಕಾರ್ಯಾಚರಣೆಗಳ ಪ್ರಧಾನ ನಿರ್ದೇಶಕ (ಡಿಜಿಎಂಒ) ಲೆಫ್ಟಿನೆಂಟ್ ಜನರಲ್ ರಣಬೀರ್ ಸಿಂಗ್ "ನಮ್ಮಿಷ್ಟದ ಸ್ಥಳ ಮತ್ತು ಸಮಯದಲ್ಲಿ ಉತ್ತರ ನೀಡುತ್ತೇವೆ" ಎಂದಾಗ ಅದರಲ್ಲಿ ಸೇನೆಗೆ ಸಂಪೂರ್ಣ ಅಧಿಕಾರ ಸಿಕ್ಕಿರುವ ಸೂಚನೆಯಿತ್ತು. ಮೋದಿ ಕೇರಳದಲ್ಲಿ ಮಾತಾನಾಡುತ್ತಾ "ರಾಜಕಾರಣಿಗಳು ಮತ್ತು ನಾಗರಿಕರಂತೆ ಸೇನೆ ಮಾತಾಡುವುದಿಲ್ಲ. ತಮ್ಮ ಕಾರ್ಯದ ಮೂಲಕವೇ ಅದು ಉತ್ತರ ಕೊಡುತ್ತದೆ" ಎಂದಾಗ ಯಾರೂ ಅದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಮಾಧ್ಯಮಗಳು, ರಾಜಕೀಯ ಪರಿಣತರು, ಅಂತಾರಾಷ್ಟ್ರೀಯ ವಿಚಾರಗಳ ಪಂಟರುಗಳಿಗೂ ಮೋದಿಯ ನಡೆಯ ಸೂಕ್ಷ್ಮತೆ ಗೋಚರಿಸಿರಲಿಲ್ಲ. ಆದರೆ ಪ್ರಧಾನಿ ಹಾಗೂ ಸೇನೆ ತಮ್ಮ ಮುಂದಿನ ಗುರಿಯನ್ನು ನಿಶ್ಚಯಿಸಿ ಅದರಲ್ಲಿ ತೊಡಗಿಕೊಂಡಿದ್ದರು. ಮಧ್ಯರಾತ್ರಿ ಹನ್ನೆರಡರೂವರೆಗೆ "ಪಾಕಿಸ್ತಾನ ಆಕ್ರಮಿಸಿರುವ ಕಾಶ್ಮೀರ"ದೊಳಗೆ ನುಗ್ಗಿ ಉಗ್ರರನ್ನು ಅಟ್ಟಾಡಿಸಿ ಕೊಂದರು ನಮ್ಮ ವೀರಯೋಧರು. ಈ ಮಿಂಚಿನ ಕಾರ್ಯಾಚರಣೆಯಲ್ಲಿ ನಲವತ್ತು ಉಗ್ರರನ್ನು ಅವರ ಎಪ್ಪತ್ತೆರಡು ಕನ್ಯೆಯರ ಜಾಗಕ್ಕೆ ಕಳುಹಿಸಿ, ಪಾಕಿಸ್ತಾನದ ಚಿಹ್ನೆ ಇರುವ ಜಿಪಿಎಸ್ ಹಾಗೂ ಇತರೆ ವಸ್ತುಗಳನ್ನು ವಶಪಡಿಸಿಕೊಂಡು ಸೇನೆ ಮುಂಜಾವು ನಾಲ್ಕಕ್ಕೆ ಸೇನೆ ವಾಪಸ್ಸಾಯಿತು. ಕ್ರಾಂತಿವೀರ ಭಗತ್ ಸಿಂಹನ ಜನ್ಮದಿನಕ್ಕೆ ತಾಯಿ ಭಾರತಿಗೆ ಇಂತ ಭವ್ಯ ಉಡುಗೊರೆಯಲ್ಲದೆ ಇನ್ನೇನು ಬೇಕು?

                  ಅಟ್ಟಾಡಿಸಿ ಬಡಿದದ್ದಾಗಿದೆ. ಹಾಗಂತ ಮೈಮರೆಯಲು ಸಾಧ್ಯವೇ? ಪಾಕಿಸ್ತಾನ ಈಗ ಗಾಯಗೊಂಡಿದೆ. ಗುಂಡಿನ ಮೊರೆತದ ಶಬ್ಧದ ಉತ್ಪಾದನೆಯಷ್ಟೇ ಮೆದುಳಲ್ಲಿ ಉಂಟಾಗಬಲ್ಲ ಪಾಕ್ ಯಾವ ರೀತಿ ಎರಗುತ್ತದೆ ಎಂದು ಹೇಳಲಾಗದು. ಅತ್ತ ಎಲ್ಲ ಪಕ್ಷಗಳ ಬೆಂಬಲವನ್ನೂ ಪಡೆದುಕೊಂಡ ಮೋದಿ ಮುಂದಿನ ನಡೆಗೂ ಸಿದ್ಧರಾಗಿಯೇ ಇದ್ದಾರೆ. ಗಡಿಯಂಚಿನ ಎಲ್ಲ ಗ್ರಾಮಗಳಲ್ಲಿನ ಜನರನ್ನು ಸ್ಥಳಾಂತರಿಸಲಾಗಿದೆ. ಸೇನೆಯನ್ನು ಸನ್ನದ್ಧವಾಗಿರಿಸಲಾಗಿದೆ. ಮುಂದೆ ಉಂಟಾಗಬಹುದಾದ ಘಾತಗಳನ್ನು ಎದುರಿಸಲು ಕಳೆದ ಹನ್ನೊಂದು ದಿವಸದಲ್ಲಿ ಸಂಪೂರ್ಣ ಸಿದ್ಧತೆ ಮಾಡಿಯಾಗಿದೆ. "ನಾವು ಪಾಕಿಸ್ತಾನದ ಗಡಿಯನ್ನು ಉಲ್ಲಂಘಿಸಲೇ ಇಲ್ಲ. ಏಕೆಂದರೆ ಪಾಕ್ ಆಕ್ರಮಿತ ಕಾಶ್ಮೀರ ಅಧಿಕೃತವಾಗಿ ಭಾರತದ್ದೇ. ಅಲ್ಲಿನ ಉಗ್ರರನ್ನು ಭಾರತದ ಮಿಲಿಟರಿ ಸಂಹರಿಸಿದೆ ಅಷ್ಟೆ" ಎನ್ನುವ ಹೇಳಿಕೆ ಕೊಟ್ಟು ಜಾಗತಿಕ ವೇದಿಕೆಯಲ್ಲಿ ತಪ್ಪು ಪಾಕಿಸ್ತಾನದ್ದೇ, ಅದೇ ಕಾಶ್ಮೀರವನ್ನು ಹಿಂದೊಮ್ಮೆ ಆಕ್ರಮಿಸಿದ್ದು ಎಂದು ಬಿಂಬಿಸಲಾಗಿದೆ. ಸರ್ವಸನ್ನದ್ಧವಾಗಿ ಶತ್ರುವನ್ನು ಸರ್ವರೀತಿಯಲ್ಲೂ ಮುತ್ತಿ ಬೆಚ್ಚಿಬೀಳಿಸುವುದೆಂದರೆ ಹೀಗೆ. ಈ ಹನ್ನೊಂದು ದಿನದ ಸಿದ್ಧತೆ ಕೇವಲ ಪಾಕಿಸ್ತಾನವನ್ನು ಎದುರಿಸಲು ಮಾತ್ರವಲ್ಲ, ಅದು ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನ ನಿರ್ದೋಷಿತ್ವವನ್ನು ಸಾಬೀತು ಮಾಡುತ್ತಲೇ ಪಾಕಿಸ್ತಾನವನ್ನು ತರಿಯುವ ಸಿದ್ಧತೆಯೂ ಆಗಿತ್ತು. ಗುರುವಾರ ಬೆಳ್ಳಂಬೆಳಗ್ಗೆ ಉರಿದಾಳಿಯಾದ ಹನ್ನೊಂದು ದಿನಗಳ ಬಳಿಕ "ಉರಿದಾಳಿಗೆ ಸಂತಾಪ, ಕಳವಳ ವ್ಯಕ್ತಪಡಿಸಲು" ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರರು ಅಜಿತ್ ಧೋವಲ್ ಜೊತೆ ಕರೆ ಮಾಡಿ ಮಾತಾಡುತ್ತಾರೆಂದರೆ ಭಾರತದ ಈ ದಾಳಿಯ ಬಗ್ಗೆ ಅಮೇರಿಕಾಕ್ಕೆ ಗುಮಾನಿ ಬಂದಿರಲೇಬೇಕೆಂದಲ್ಲವೇ. ಆದರೆ ಇದಕ್ಕೆ ಸಿದ್ಧವಾಗಿದ್ದ ಭಾರತ ತನ್ನನ್ನು ಸಮರ್ಥಿಸಿಕೊಂಡುದುದು ಮಾತ್ರವಲ್ಲದೆ "ಅಣ್ವಸ್ತ್ರದ ವಿಚಾರದಲ್ಲಿ ಭಾರತದ ಜವಾಬ್ದಾರಿ ಬಗ್ಗೆ ಜಗತ್ತಿಗೆ ವಿಶ್ವಾಸವಿದೆ, ಆತಂಕವಿರುವುದು ಪಾಕಿಸ್ತಾನದ ಬಗ್ಗೆಯೇ" ಎಂಬ ಅಭಿಪ್ರಾಯವೂ ಹೊರಹೊಮ್ಮುವಂತೆ ಮಾಡಿತು.

                 ಪದ್ಮಾವತಿಯ ಸ್ವರ್ಗದ ದೇವತೆಗಳಿಗೆ ನರಕದ ದ್ವಾರ ತೋರಿಸಿದೆ ಭಾರತೀಯ ಸೇನೆ! ಇಂತಹ ಒಂದು ಪ್ರತೀಕಾರಕ್ಕೆ ಸೇನೆ ಕಾದಿತ್ತು. ಜನತೆ ಕಾದಿತ್ತು. ದೇಶಕ್ಕೆ ದೇಶವೇ ಕಾದಿತ್ತು. ವಿಡಂಬನೆ ಏನು ಗೊತ್ತಾ ಭಾರತ ತಿರುಗೇಟು ನೀಡಿದರೆ ಅಣ್ವಸ್ತ್ರ ಉಪಯೋಗಿಸುತ್ತೇವೆ ಎಂದು ಹೇಳಿದ್ದ ಪಾಕ್ ಇಂದು ಭಾರತ ಅಂತಹ ಕಾರ್ಯಾಚರಣೆ ನಡೆಸಿಯೇ ಇಲ್ಲ ಎಂದು ವಾದ ಹೂಡಿದ್ದು. ಇಷ್ಟರವರೆಗೆ "ಈ ದಾಳಿಯನ್ನು ನಾವು ಖಂಡಿಸುತ್ತೇವೆ. ಶಾಂತಿಯನ್ನು ಕಾಪಾಡುವ ನಮ್ಮ ಇಚ್ಛಾಶಕ್ತಿಯನ್ನು ನಮ್ಮ ದೌರ್ಬಲ್ಯ ಎಂದು ಭಾವಿಸಬಾರದು" ಎನ್ನುವ ಅಣಿಮುತ್ತುಗಳು ಭಾರತದ ಪ್ರಧಾನಿಗಳಿಂದ ಉದುರುತ್ತಿತ್ತು. ಇದೇ ಮೊದಲ ಬಾರಿಗೆ ಪಾಕ್ ಪ್ರಧಾನಿಯೊಬ್ಬರಿಂದ ಆ ಕ್ಷೀಣ ಸ್ವರ ಹೊರಟಿದೆ. ಅನ್ಯಾಯದ ವಿರುದ್ಧ ಸೆಟೆದು ನಿಂತಾಗ ಅನ್ಯಾಯಗಾರ ತೆಪ್ಪಗಾಗುತ್ತಾನೆ ಎನ್ನುವುದಕ್ಕೆ ನಿದರ್ಶನ ಇದು. ರುಧಿರಾಭಿಷೇಕದ ಬಳಿಕ ವಾರಣಾಸಿಯಲ್ಲಿ ಗಂಗಾರತಿಯೂ ಆಗಿದೆ. ದೇಶದೆಲ್ಲೆಡೆ ಜನ ಸಿಹಿ ಹಂಚಿ ಸಂಭ್ರಮಿಸುತ್ತಿದ್ದಾರೆ. ಅತ್ತ ಇರಾನ್ ಕೂಡಾ ತನ್ನ ಕೈಚಳಕ ತೋರಿದೆ! ಪಾಕಿಸ್ತಾನದ ಗಡಿಯಲ್ಲಿ ಮೋರ್ಟಾರ್ ಶೆಲ್'ಗಳನ್ನು ತೂರಿದೆ.

ಕೊನೆಯ ಮಾತು: ದೇಶದೊಳಗಿರುವ ಪಾಕ್ ಪ್ರೇಮಿಗಳ ಮೇಲೂ ಪಾಕಿಸ್ತಾನದ ಮೇಲೆ ಆದ ಇಂತಹ ಒಂದು ಕಾರ್ಯಾಚರಣೆಯ ಆಗಬೇಕಾಗಿದೆ!

ಬುಧವಾರ, ಸೆಪ್ಟೆಂಬರ್ 28, 2016

ಯಾರು ಮಹಾತ್ಮ? ಭಾಗ- ೬

ಯಾರು ಮಹಾತ್ಮ?
ಭಾಗ- ೬

             ಶಿಷ್ಯನೊಬ್ಬ ಗಾಂಧಿಯವರ ಅಹಿಂಸೆಯ ಆಚರಣೆಯ ಬಗ್ಗೆ ಕೇಳಿದಾಗ ಅರವಿಂದರು ಗಾಂಧಿಯವರ ಅಹಿಂಸೆಯ ಟೊಳ್ಳುತನವನ್ನು ಬಯಲಿಗೆಳೆಯುತ್ತಾರೆ. "ಮನುಷ್ಯನು ಸತ್ಯಾಗ್ರಹ ಅಥವಾ ಅಹಿಂಸೆಯನ್ನು ಕೈಗೊಂಡಾಗ ಅವನ ಸ್ವಭಾವಕ್ಕೆ ಏನಾಗುತ್ತದೆಯೆಂಬುದನ್ನು ಗಾಂಧಿ ತಿಳಿದಿಲ್ಲವೆಂದು ನನಗನಿಸುತ್ತದೆ. ಗಾಂಧಿ ಅದರಿಂದ ಮನುಷ್ಯರು ಶುದ್ಧಗೊಳ್ಳುತ್ತಾರೆಂದು ಭಾವಿಸುತ್ತಾರೆ. ಆದರೆ ಮನುಷ್ಯರು ಯಾತನೆಗೊಳಗಾದಾಗ ಅಥವಾ ಯಾತನೆಯನ್ನು ಸ್ವ ಇಚ್ಛೆಯಿಂದ ಅನುಭವಿಸಿದಾಗ ಅವರ ಪ್ರಾಣಕೋಶ ಬಲಗೊಳ್ಳುತ್ತದೆ. ಈ ಚಳವಳಿಗಳು ಪ್ರಾಣಕೋಶವನ್ನಷ್ಟೇ ಬಾಧಿಸುತ್ತವೆ. ಯಾವಾಗ ದಬ್ಬಾಳಿಕೆ ನಡೆಸುವ ಶಕ್ತಿಯನ್ನು ವಿರೋಧಿಸಲು ಸಾಧ್ಯವಿಲ್ಲವೋ ಆಗ ಅದನ್ನು ಸಹಿಸಿ ಬವಣೆಯನ್ನು ಅನುಭವಿಸುತ್ತೇನೆ ಎನ್ನುತ್ತೀಯಾ. ಆದರೆ ಈ ಸಹನೆ ಪ್ರಾಣಿಕವಾಗಿದ್ದು ಹೀಗೆ ಯಾತನೆಯುಂಡ ಮನುಷ್ಯ ತನಗೆ ಅಧಿಕಾರ ದೊರೆತಾಗ ಅತ್ಯಂತ ಹೀನ ಶೋಷಕನಾಗುತ್ತಾನೆ. ನಾವು ಹಿಂಸಾಪ್ರವೃತ್ತಿಯನ್ನಷ್ಟೇ ಪರಿವರ್ತಿಸಲು ಸಾಧ್ಯ. ಆದರೆ ಸತ್ಯಾಗ್ರಹದ ಆಚರಣೆಯಿಂದ ಅದನ್ನು ಪರಿವರ್ತಿಸಲಾಗದು. ಈ ರೀತಿಯ ಒಮ್ಮುಖವಾದ ತತ್ವಗಳಿಂದ ಬೂಟಾಟಿಕೆ, ಅಪ್ರಾಮಾಣಿಕತೆಗಳೇ ಮೇಲುಗೈ ಸಾಧಿಸಿ ಶುದ್ಧೀಕರಣ ಸಾಧ್ಯವಾಗದು. ನಾನು ಹೇಳಿದಂತೆ ಹಿಂಸಾಪ್ರವೃತ್ತಿಯ ಪರಿವರ್ತನೆಯಿಂದ ಶುದ್ಧೀಕರಣ ಸಾಧ್ಯ. ಪ್ರಾಚೀನ ಭಾರತದಲ್ಲಿದ್ದ ವ್ಯವಸ್ಥೆಯನ್ನೇ ನೋಡು.ಹೋರಾಟದ ಮನೋಭಾವದವನು ಕ್ಷತ್ರಿಯನಾಗುತ್ತಿದ್ದ. ಮತ್ತು ಆ ಕ್ಷಾತ್ರ ಪ್ರವೃತ್ತಿಯು ಸಾಧಾರಣ ಪ್ರಾಣಿಕ ಪ್ರಭಾವದಿಂದ ಮೇಲೇರುವಂತೆ ನೋಡಿಕೊಳ್ಳಲಾಗುತ್ತಿತ್ತು. ಅದರ ಗುರಿ ಆಧ್ಯಾತ್ಮೀಕರಣವಾಗಿತ್ತು. ಈ ವ್ಯವಸ್ಥೆ ಇಂದಿನ ಸಾತ್ವಿಕ ಪ್ರತಿರೋಧ ಸಾಧಿಸಲಾಗದ್ದನ್ನು, ಸಾಧಿಸಲಾರದ್ದನ್ನು ಸಾಧಿಸುವಲ್ಲಿ ಯಶಸ್ವಿಯಾಯಿತು. ಯಾವ ದಬ್ಬಾಳಿಕೆಯನ್ನೂ ಸಹಿಸದೆ ಹೋರಾಡುವವನೇ ಕ್ಷತ್ರಿಯ. ಆತ ಯಾರನ್ನೂ ಶೋಷಿಸಲಾರ." (ಇಂಡಿಯಾಸ್ ರೀಬರ್ತ್, ಶ್ರೀ ಅರಬಿಂದೋ) ಅಹಿಂಸೆಯ ಬಗೆಗಿನ ಅರವಿಂದರ ಈ ವಿಶ್ಲೇಷಣೆಯನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗಲೇ ಅದರ ಗಟ್ಟಿತನದ ಅರಿವಾದೀತು. ಗಾಂಧಿ ಪ್ರತಿಪಾದಿಸಿದ ಅಹಿಂಸೆಯನ್ನು ಪಾಲಿಸಿದವ ಅಧಿಕಾರ ಸಿಕ್ಕಾಗ ಹೀನಶೊಷಕನಾಗುತ್ತಾನೆ ಎಂದ ಅರವಿಂದರ ಮಾತಿಗೆ ಪ್ರತ್ಯಕ್ಷ ನಿದರ್ಶನ ಗಾಂಧಿ. ಅವರು ಕಾಂಗ್ರೆಸ್ಸಿನ ಸರ್ವಾಧಿಕಾರಿಯಾಗಿದ್ದಾಗ ಹೇಗೆ ಸುಭಾಷರು ಎರಡನೇ ಬಾರಿ ಅಧ್ಯಕ್ಷರಾಗುವುದನ್ನು ತಡೆದರು ಎನ್ನುವುದನ್ನು ನೆನಪಿಸಿಕೊಳ್ಳಿ. ಅದೇ ರೀತಿ "ಕಾಂಗ್ರೆಸ್ಸಿನಲ್ಲಿ ಅವರ ಮಾತೇ ಅಂತಿಮವಾಗಿತ್ತು" ಎನ್ನುವುದನ್ನು ಸೂಕ್ಷ್ಮವಾಗಿ, ಆಳವಾಗಿ ನೋಡಿದರೆ ಸಾಕು ಅರವಿಂದರ ಮಾತಿನ ಹೊಳಹು ಅಲ್ಲೇ ಗೋಚರಿಸುತ್ತದೆ.

            ಸತ್ಯಾಗ್ರಹಿಯು ತಾನು ಇತರರ ಮೇಲೆ ತರುವ ಒತ್ತಡದ ಬಗ್ಗೆ ತನಗೆ ಕಾಳಜಿಯಿಲ್ಲವೆಂದು ಹೇಳುವುದು ಕೂಡಾ ಹಿಂಸೆಯೇ. ನಿಜವಾದ ಅಹಿಂಸೆಯು ಬಾಹ್ಯ ಕ್ರಿಯೆಯಲ್ಲಿ ಅಥವಾ ಕ್ರಿಯೆಯಿಂದ ತಪ್ಪಿಸಿಕೊಳ್ಳುವಲ್ಲಿ ಇರದ ಒಂದು ಮನಃಸ್ಥಿತಿ. ಆಂತರಿಕ ಅಸ್ತಿತ್ವದಲ್ಲಿ ಯಾವುದೇ ಒತ್ತಡವು ಅಹಂಸೆಯ ಉಲ್ಲಂಘನೆಯೇ. ಅಹಮದಾಬಾದ್ ಗಿರಣಿಗಳ ಮುಷ್ಕರದಲ್ಲಿ ಗಿರಣಿಗಳ ಮಾಲಿಕರು ಹಾಗೂ ಕಾರ್ಮಿಕರ ನಡುವಿನ ವಿವಾದವನ್ನು ಬಗೆಹರಿಸಲು ಗಾಂಧಿಯವರು ಉಪವಾಸ ಕೈಗೊಂಡರು. ಗಿರಣಿಯ ಮಾಲಿಕರಿಗೆ ಗಾಂಧಿಯ ನಿಲುವು ಅರ್ಥವೇ ಆಗಲಿಲ್ಲ. ಕಾರ್ಮಿಕರ ಸಾವಿಗೆ ಜವಾಬ್ದಾರರಾಗಲು ಅವರು ಒಪ್ಪಲಿಲ್ಲ. ಬದಲಾಗಿ ಪರಿಹಾರ ವಿತರಿಸಲು ಒಪ್ಪಿಕೊಂಡರು. ಎಲ್ಲವೂ ಯಥಾಸ್ಥಿತಿಗೆ ಮರಳಿದ ಕೂಡಲೆ ಮಾಲಿಕರದ್ದು ಅದೇ ಹಳೆಯ ರಾಗ! ಅತ್ತ ಕಾರ್ಮಿಕರ ಸಮಸ್ಯೆಯೂ ಬಗೆಹರಿಯಲಿಲ್ಲ. ಇತ್ತ ಮಾಲೀಕನೂ ಬದಲಾಗಲಿಲ್ಲ. ಮೃತರಾದವರ ಕುಟುಂಬಕ್ಕೇನೋ ಒಂದಷ್ಟು ಪರಿಹಾರ ಸಿಕ್ಕಿತಷ್ಟೇ! ಇದು ಗಾಂಧಿಯವರ ಟೊಳ್ಳು ಅಹಿಂಸಾ ಸತ್ಯಾಗ್ರಹದ ಫಲಶ್ರುತಿ. ದಕ್ಷಿಣಾ ಆಫ್ರಿಕಾದಲ್ಲಿ ಆದುದು ಇದೇ. ಇಂತಹ ಪ್ರತಿರೋಧದಿಂದ ಅವರು ಕೆಲವು ರಿಯಾಯಿತಿಗಳನ್ನು ಪಡೆದದ್ದು ನಿಜ. ಆದರೆ ಅವರು ಭಾರತಕ್ಕೆ ಮರಳಿದ ನಂತರ ಅಲ್ಲಿನ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿತು. ಹಾಂ ಇಲ್ಲಿ ತಾವು ಮರಳಿದ ಬಳಿಕ ಪರಿಸ್ಥಿತಿ ಮತ್ತಷ್ಟು ಗಂಭೀರಗೊಂಡರೆ ಗಾಂಧಿಯದ್ದೇನು ತಪ್ಪು ಎಂದು ವಾದಿಸಬಹುದು. ಗಾಂಧಿಯನ್ನು ಸಾಮಾನ್ಯ ಮನುಷ್ಯ ಎಂದು ಬೆಂಬಲಿಗರು ನೋಡುತ್ತಿದ್ದರೆ ಆಗ ಈ ಪ್ರಶ್ನೆ ಸರಿ. ಆದರೆ ಗಾಂಧಿಯನ್ನು ಮಹಾತ್ಮ ಪಟ್ಟಕ್ಕೆ ಏರಿಸಿರುವುದರಿಂದಲೇ ಈ ತರ್ಕ-ಲೇಖನಮಾಲೆ ಹುಟ್ಟಿಕೊಂಡಿದುದು. ನಿಜಾರ್ಥದಲ್ಲಿ ಮಹಾತ್ಮನಿದ್ದಿದ್ದರೆ ಈ ಸಮಸ್ಯೆಗಳು ಸಂಪೂರ್ಣವಾಗಿ ಬಗೆ ಹರಿಯಬೇಕಿತ್ತು. ನಿಜವಾದ ಮಹಾತ್ಮನಾಗಿದ್ದರೆ ಶತ್ರುತ್ವದ ಭಾವನೆಯೇ ನಶಿಸುತ್ತಿತ್ತು. ಆದರೆ ಮೇಲಿನ ಎರಡೂ ಸಂದರ್ಭಗಳಲ್ಲಿ ಅಹಿಂಸೆ ತೋರಿಕೆಯ ವಸ್ತುವಾಗಿಬಿಟ್ಟಿತು. ಸಮಸ್ಯೆಗಳು ಮತ್ತಷ್ತು ಹೆಚ್ಚಾದವು.

           1924ರಲ್ಲಿ ಗಾಂಧಿ ತಮ್ಮ ಮಗ ದೇವದಾಸನನ್ನು ಅರವಿಂದರನ್ನು ಕಾಣಲು ಕಳುಹಿಸಿದರು. ಆತ ಅಹಿಂಸೆಯ ಬಗ್ಗೆ ಅರವಿಂದರ ದೃಷ್ಟಿಕೋನವನ್ನು ಕೇಳಿದಾಗ "ಅಪ್ಘನ್ನರು ಭಾರತವನ್ನು ಆಕ್ರಮಿಸಿದರೆ ಅದನ್ನು ಅಹಿಂಸೆಯಿಂದ ಹೇಗೆ ಎದುರಿಸುವಿರಿ" ಎಂದು ಮರುಪ್ರಶ್ನಿಸಿದರು. ಗಾಂಧಿಯ ಪ್ರತಿನಿಧಿಯಾಗಿ ಬಂದಿದ್ದ ದೇವದಾಸ ಅದಕ್ಕೆ ಉತ್ತರಿಸಲಿಲ್ಲ. ಅಲ್ಲ ಸಾಕ್ಷಾತ್ ಗಾಂಧಿಯೇ ಇರುತ್ತಿದ್ದರೂ ಅದಕ್ಕೆ ಉತ್ತರಿಸುತ್ತಿರಲಿಲ್ಲ ಬಿಡಿ.

             ಮಹಾಯುದ್ಧದ ಸಂದರ್ಭದಲ್ಲಿ ಗಾಂಧಿ ಬ್ರಿಟಿಷರನ್ನುದ್ದೇಶಿಸಿ ಬರೆದ ಬಹಿರಂಗ ಪತ್ರದಲ್ಲಿ. "ನಾನು ಕದನ ವಿರಾಮಕ್ಕೆ ಕೋರಿಕೊಳ್ಳುತ್ತೇನೆ. ನೀವು ನಾಝಿವಾದವನ್ನು ಮುಗಿಸಬೇಕೆಂದಿರುವಿರಿ. ನೀವು ನಾಝಿವಾದವನ್ನು ಅಹಿಂಸಾತ್ಮಕ ಅಸ್ತ್ರಗಳಿಂದ ಎದುರಿಸಬೇಕೆಂದು ನಾನು ಬಯಸುತ್ತೇನೆ. ನೀವು ನಿಮ್ಮದೆಂದು ಬಗೆದಿರುವ ನಿಮ್ಮೆಲ್ಲಾ ದೇಶಗಳನ್ನು ತಮ್ಮ ಅಧೀನಕ್ಕೆ ತೆಗೆದುಕೊಳ್ಳಲು ಹಿಟ್ಲರನನ್ನು ಆಹ್ವಾನಿಸಿ. ಅವರು ನಿಮ್ಮ ಅನೇಕ ಸುಂದರ ದ್ವೀಪ - ಕಟ್ಟಡಗಳನ್ನು ವಶಪಡಿಸಿಕೊಳ್ಳಲಿ. ಇವೆಲ್ಲವನ್ನು ಕೊಟ್ಟರೂ ನಿಮ್ಮ ಹೃದಯ ಮನಸ್ಸು ನಿಮ್ಮದಾಗುವುದು"(ಅಮೃತಬಜಾರ್ ಪತ್ರಿಕೆ, ಜುಲೈ 14, 1940). ಹ್ಹ..ಹ್ಹ ಹಿಂಸೆಯನ್ನು ಬಗ್ಗುವುದರ ಮೂಲಕ ವಿರೋಧಿಸಿ ಎನ್ನುವ ಸಲಹೆ...! ಆದರೆ ಬ್ರಿಟಿಷರು ಇದಕ್ಯಾವ ಕಿಮ್ಮತ್ತೂ ಕೊಡಲಿಲ್ಲ ಎನ್ನುವುದು ಬೇರೆ ಮಾತು! ಮಿತ್ರಪಕ್ಷಗಳು ನಾಝಿಗಳನ್ನು ಬಗ್ಗುಬಡಿದವು.

                 ತಪ್ಪಾಗಿ ಗ್ರಹಿಸಿದ ಗುರಿ, ಅದನ್ನು ಈಡೇರಿಸಲು ನಿಷ್ಕಪಟವಲ್ಲದ, ಮನಃಪೂರ್ವಕವಾಗಿಲ್ಲದ ಸೂಕ್ತವಿಧಾನಗಳನ್ನು ಹೊಂದಿರುವ ಕಾಂಗ್ರೆಸ್ ಒಕ್ಕಣ್ಣರಿಂದ ನಡೆಸಲ್ಪಡುತ್ತಿದೆ ಎಂದಿದ್ದರು ಅರವಿಂದರು. ಗಾಂಧಿಯ ಬಗ್ಗೆ ತಮ್ಮ ನಿಲುವುಗಳನ್ನು ಅರವಿಂದರು ವ್ಯಕ್ತಪಡಿಸಿದ್ದಾರೆ. "ಗಾಂಧಿಯನ್ನು ಕ್ರಿಶ್ಚಿಯನ್ನರಿಗಿಂತ ಹೆಚ್ಚು ಕ್ರಿಶ್ಚಿಯನ್ ಎಂದು ಹಲವು ಯೂರೋಪಿಯನ್ನರು ಹೇಳಿದ್ದರು. ಕೆಲವರಂತೂ "ಆಧುನಿಕ ಕ್ರಿಸ್ತ" ಎನ್ನುವ ಬಿರುದನ್ನೇ ಕೊಟ್ಟಿದ್ದರು. ಇದು ಸಂಪೂರ್ಣ ಸುಳ್ಳೇನೂ ಅಲ್ಲ. ಗಾಂಧಿಯವರ ಉಪದೇಶಗಳು ಕ್ರಿಶ್ಚಿಯನ್ ಮತದಿಂದ ಎರವಲು ಪಡೆದುದಾಗಿತ್ತು. ಅವರ ವೇಷ ಭಾರತೀಯವಾಗಿದ್ದರೂ ಅಂತಃಸತ್ವ ಕ್ರೈಸ್ತಮತದ್ದೇ ಆಗಿತ್ತು. ಅವರು ಕ್ರಿಸ್ತ ಆಗಿರಲಿಕ್ಕಿಲ್ಲ, ಆದರೆ ಯಾವ ಲೆಕ್ಕದಲ್ಲಿ ನೋಡಿದರೂ ಆ ಪ್ರೇರಣೆಯ ಮುಂದುವರಿದ ಭಾಗವೇ ಆಗಿದ್ದರು. ಟಾಲ್ ಸ್ಟಾಯ್, ಬೈಬಲ್ ನಿಂದ ಗಾಢ ಪ್ರಭಾವಕ್ಕೆ ಒಳಗಾಗಿರುವ ಗಾಂಧಿಯವರ ವ್ಯಾಖ್ಯಾನಗಳಲ್ಲೂ ಈ ಪ್ರಭಾವ ಎದ್ದು ಕಾಣುತ್ತದೆ. ಅವರ ಬೋಧನೆ, ಸಿದ್ಧಾಂತಗಳಲ್ಲಿ ಜೈನ ಧರ್ಮದ ಛಾಯೆಯಿದೆ. ಬಹಳಷ್ಟು ಸುಶಿಕ್ಷಿತರು ಗಾಂಧಿಯವರನ್ನು ಆಧ್ಯಾತ್ಮಿಕ ವ್ಯಕ್ತಿ ಎಂದು ಕರೆಯುತ್ತಾರೆ. ಆದರೆ ಅವರು ಬೋಧಿಸುವುದು ಭಾರತೀಯ ಆಧ್ಯಾತ್ಮವಲ್ಲ. ರಷ್ಯಾದ ಕ್ರೈಸ್ತ ಮತದಿಂದ ಎರವಲು ಪಡೆದ ಅಹಿಂಸೆ, ಸೈರಣೆ, ವೇದನೆ ಇತ್ಯಾದಿಗಳನ್ನು. ಗಾಂಧಿಯವರ ವ್ಯಕ್ತಿತ್ವ ಅತ್ಯಂತ ನೀರಸ. ಬೌದ್ಧಿಕ ತೀವ್ರತೆ, ಸಂಕಲ್ಪಶಕ್ತಿ ಇದ್ದರೂ ಅವರ ವ್ಯಕ್ತಿತ್ವ ರಷ್ಯನ್ನರಿಗಿಂತಲೂ ನೀರಸ. ಗಾಂಧಿಯವರ ಚಳುವಳಿ ಆರಂಭವಾದಾಗಲೇ ಅದು ಅಭಾಸಕ್ಕೆ ಅಥವಾ ದೊಡ್ಡ ಗೊಂದಲಕ್ಕೆ ಗುರಿಯಾಗುತ್ತದೆಯಂದು ನಾನು ಹೇಳಿದ್ದೆ. ಅದು ಎರಡಕ್ಕೂ ಗುರಿಯಾಗಿದೆ.

              ಎಲ್ಲಿಯವರೆಗೆ ನೀವು ಸದ್ಗುಣ ಸಂಪನ್ನರಾಗಿರಬೇಕಾಗುತ್ತದೋ ಅಲ್ಲಿಯವರೆಗೆ ಶುದ್ಧ ಆಧ್ಯಾತ್ಮಿಕ ಉನ್ನತಿ ಸಾಧಿಸಲು ಸಾಧ್ಯವಿಲ್ಲ. ಅಲ್ಲಿ ಕ್ರಿಯೆಯು ನೈತಿಕವೋ ಅಲ್ಲವೋ ಎಂದು ಚಿಂತಿಸಬೇಕಿಲ್ಲ. ಜನರಿಗೆ ನೀವು ನೈತಿಕತೆಯನ್ನು ಮೀರಿ ಹೋಗಿ ಎಂದಾಗ ಅವರು ಅದು ಒಳಿತು ಮತ್ತು ಕೆಡುಕುಗಳೆರಡರ ಕೆಳಗೆ ಕುಸಿಯಲು ಹೇಳುತ್ತಿದ್ದೀರಿ ಎಂದು ಭಾವಿಸುತ್ತಾರೆ. ಆದರೆ ಅದು ಅಪಾರ್ಥ. ನೈತಿಕತೆಯಿಂದ ನೀವು ಮಾನವರಾಗಬಹುದು. ಆದರೆ ಮಾನವತೆಯನ್ನು ಮೀರಿ ಹೋಗಲಾಗುವುದಿಲ್ಲ. ಕ್ರಿಶ್ಚಿಯನ್ನರಂತೆ ಜನರು ಯಾವಾಗಲೂ ನೈತಿಕತೆ ಮತ್ತು ಆಧ್ಯಾತ್ಮಿಕತೆ ನಡುವೆ ಗೊಂದಲ ಮಾಡಿಕೊಳ್ಳುತ್ತಾರೆ. ಕ್ರಿಶ್ಚಿಯನ್ನರಿಗೆ ನೈತಿಕತೆ ಹಾಗೂ ಆಧ್ಯಾತ್ಮಿಕತೆಯ ನಡುವೆ ವ್ಯತ್ಯಾಸವಿರುವುದಿಲ್ಲ. ಉದಾಹರಣೆಗೆ ಗಾಂಧಿಯವರು ಘೋಷಿಸಿರುವ ಉಪವಾಸವನ್ನೇ ತೆಗೆದುಕೊಳ್ಳಿ. ಪಾಪಮಾರ್ಜನೆಗಾಗಿ ಇರುವ ಕ್ರೈಸ್ತ ಮತೀಯರ ಕಲ್ಪನೆ ಅದು. ಅದಕ್ಕೆ ನೀಡಲಾದ ಬೇರೆಲ್ಲಾ ಕಾರಣಗಳು ಅದನ್ನು ಹಾಸ್ಯಾಸ್ಪದವನ್ನಾಗಿಸುತ್ತವೆ. ಭಾರತೀಯ ಸಂಸ್ಕೃತಿಗೆ ನೈತಿಕತೆಯ ಮೌಲ್ಯವೂ ಗೊತ್ತಿತ್ತು. ಅದರ ಮಿತಿಗಳೂ ತಿಳಿದಿದ್ದವು. ಉಪನಿಷತ್ತುಗಳು ಮತ್ತು ಗೀತೆ ನೈತಿಕತೆಯನ್ನು ಮೀರಿ ಹೋಗುವ ಆದರ್ಶಳಿಂದ ತುಂಬಿವೆ."(ಇಂಡಿಯಾಸ್ ರೀಬರ್ತ್- ಶ್ರೀ ಅರವಿಂದೋ)

ಗುರುವಾರ, ಸೆಪ್ಟೆಂಬರ್ 22, 2016

ಶಿಲೆಯಲ್ಲೂ ಕಲೆಯ ಬೆಳಗಿದ ಕಲಿಯುಗದ ಅಹಲ್ಯೆ

ಶಿಲೆಯಲ್ಲೂ ಕಲೆಯ ಬೆಳಗಿದ ಕಲಿಯುಗದ ಅಹಲ್ಯೆ


                   ರಾಜಾ ಹರಿಶ್ಚಂದ್ರನ ಸತ್ಯಸಂಧತೆಗೆ ಸಾಕ್ಷೀಭೂತವಾಗಿದ್ದ ಕಾಶಿಯಲ್ಲಿ "ಸತ್ಯ ನಾಥ" ಬಟಾಬಯಲಲ್ಲಿ ನಿಂತಿದ್ದ. ಭೀಷ್ಮನ ಪರಾಕ್ರಮಕ್ಕೆ ಸಾಕ್ಷಿಯಾಗಿದ್ದ ಭೂಮಿಯಲ್ಲಿ ಔರಂಗಜೇಬನ ಮತಾಂಧತೆಯ ಎದುರು ಕ್ಷಾತ್ರವೇ ಸೊರಗಿ ಹೋಗಿತ್ತು. ವಿದ್ವಜ್ಜನರು ಆಶ್ರಯವಿಲ್ಲದೆ ನಿರ್ಗತಿಕರಾಗಿದ್ದರು. ಜನರು ಜಜಿಯಾ ತೆತ್ತು ಬದುಕುವ ವಿಶ್ವಾಸವನ್ನೇ ಕಳೆದುಕೊಂಡಿದ್ದರು. ಆಲಯವಿಲ್ಲದೆ ದಿಗಂಬರನಾಗಿದ್ದ ಒಡೆಯನನ್ನು ಕಂಡು ಗಂಗೆ ಕಣ್ಣೀರು ಸುರಿಸುತ್ತಿದ್ದಳು. ಪಾಪಿ ಔರಂಗಜೇಬನಿಂದ ನಾಶಗೊಂಡು 70 ವರ್ಷಗಳ ಪರ್ಯಂತ ಮಣ್ಣಲ್ಲಿ ಮಣ್ಣಾಗಿದ್ದ ವಿಶ್ವನಾಥನ ಆಲಯವನ್ನು ಮತ್ತೆ ನಿರ್ಮಿಸಿ ರಾಷ್ಟ್ರೀಯ ಅಪಮಾನವೊಂದನ್ನು ಮುಕ್ತಿಗೊಳಿಸಿದಳು ಓರ್ವ ಮಹಿಳೆ! ಹೌದು, ಈ ದೇಶದ ಅದೆಷ್ಟೋ ರಾಜಮಹಾರಾಜರುಗಳಿಂದ ಸಾಧ್ಯವಾಗದೇ ಉಳಿದಿದ್ದ ಧೀರಕಾರ್ಯವನ್ನು ಮಾಡಿ ಭಾರತದ ಇತಿಹಾಸದಲ್ಲಿ ಚಿರಸ್ಥಾಯಿಯಾಗುಳಿದ ಆ ಮಹಾಮಾತೆ ಅಹಲ್ಯಾಬಾಯಿ ಕಟ್ಟಿದ ಶಿವಾಲಯವೇ ಇಂದಿಗೂ ಕಾಶಿ ವಿಶ್ವೇಶ್ವರನ ಸದನವಾಗಿದೆ.

              ಮಧ್ಯಾಹ್ನದ ಸಮಯ. ಸುಶೀಲೆ ಭೋಜನಕ್ಕೆ ಆಗಷ್ಟೇ ಕೂತಿದ್ದಾಳೆ. ಇನ್ನೇನು ಊಟಕ್ಕೆ ಅನುವಾಗಬೇಕು ಎನ್ನುವಾಗ ಹೊರಗಿನಿಂದ “ಅಮ್ಮಾ ಬಿಕ್ಷಾಂದೇಹಿ”ಎನ್ನುವ ಕೂಗು. ಎದ್ದು ಹೊರಗೆ ಬಂದು ನೋಡಿದರೆ ಕಾಷಾಯಧಾರಿ. ತನ್ನ ಪಾಲಿನ ಅನ್ನವನ್ನು ಆತನಿಗೆ ಬಡಿಸಿದಳಾ ಗೃಹಿಣಿ. ಉಂಡು ತೃಪ್ತಿನಾದ ಸಂನ್ಯಾಸಿ, “ನಿನ್ನ ಸಂತತಿಗೆ ಶ್ರೇಯಸ್ಸುಂಟಾಗಲಮ್ಮ” ಎಂದು ಹರಸಿದ. ಸುಶೀಲೆ ಕಣ್ಣೊರೆಸಿಕೊಂಡಳು. ಮಕ್ಕಳಿಲ್ಲದ ವಿಚಾರವರಿತ ಸಂನ್ಯಾಸಿ “ ದಂಪತಿಗಳೀರ್ವರೂ ಕೊಲ್ಲಾಪೂರದ ಮಹಾಲಕ್ಷ್ಮೀದೇವಿಯ ಸೇವೆ ಮಾಡಿ, ನಿಮಗೆ ಮಕ್ಕಳಾಗುತ್ತದೆ” ಎಂದು ಹರಸಿ ಹೋದ. ಸಂನ್ಯಾಸಿಯ ಮಾತಿನಂತೆ ಆ ದಂಪತಿಗಳು ಕೊಲ್ಲಾಪುರಕ್ಕೆ ತೆರಳಿ ದೇವಿಯ ಸೇವೆಗೈದರು. ಒಂದು ರಾತ್ರಿ ದಂಪತಿಗಳಿಗೆ ಸಿರಿಯು ಕನಸಿನಲ್ಲಿ ಕಾಣಿಸಿಕೊಂಡು “ನಿಮ್ಮ ಇಷ್ಟಾರ್ಥ ನೆರವೇರುತ್ತದೆ” ಎಂದು ಅನುಗ್ರಹಿಸಿದಂತಾಯಿತು. ಸಂತೋಷಗೊಂಡ ಅವರು ಊರಿಗೆ ಹಿಂತಿರುಗಿದರು. ಲಕ್ಷ್ಮಿಯ ಕೃಪೆಯಿಂದ 1725ರ ಒಂದು ಶುಭದಿನದಂದು ಸುಶೀಲೆ ಹೆಣ್ಣು ಮಗುವನ್ನು ಪ್ರಸವಿಸಿದಳು. ಆ ಮಗುವೇ ಇತಿಹಾಸದಲ್ಲಿ ಪ್ರಸಿದ್ಧಳಾದ ಅಹಲ್ಯಾಬಾಯಿ!

                 ಅಹಲ್ಯಾಬಾಯಿ ಔರಂಗಾಬಾದಿನ ಚೌಂಡಿ ಗ್ರಾಮದ ಮಾಣಕೋಜಿ ಪಟೇಲನ ಮಗಳು. ಹಿಂದುಳಿದ ವರ್ಗದಲ್ಲಿ ಹುಟ್ಟಿದ್ದರೂ ಶಿಕ್ಷಣ - ಸಂಸ್ಕಾರದಲ್ಲಿ ಅವಳಿಗೆ ಕೊರತೆಯಾಗಲಿಲ್ಲ ಎನ್ನುವುದರಲ್ಲಿಯೇ ಆಧುನಿಕಪೂರ್ವ ಭಾರತದಲ್ಲಿ ಈಗಿನ ಸೆಕ್ಯುಲರುಗಳೆನ್ನುವಂತೆ "ತುಳಿತ" ಸಾರ್ವತ್ರಿಕವೂ, ಸರ್ವೇಸಾಮಾನ್ಯವೂ ಆಗಿರಲಿಲ್ಲ ಎನ್ನುವುದು ಗಮನಿಸಬೇಕಾದ ಅಂಶ! ಆ ಕಾಲದಲ್ಲಿ ದೇಶದ ಯಾವುದೇ ಪ್ರಾಂತ್ಯದಲ್ಲೂ ಎಲ್ಲ ಬಗೆಯ ಆರ್ಥಿಕ-ಸಾಮಾಜಿಕ ಸ್ತರದವರಿಗೂ ಲಿಂಗಾತೀತವಾಗಿ ಆರ್ಷಸಂಸ್ಕೃತಿಯ ಅರಿವು-ಅನ್ವಯಗಳಿತ್ತು ಎನ್ನುವುದು ಇಂತಹ ಹಲವು ಉದಾಹರಣೆಗಳಿಂದ ಗೊತ್ತಾಗುತ್ತದೆ. ಧರ್ಮಪಾಲರ ಬರಹಗಳಿಂದಲೂ ಇದರ ಅರಿವಾಗುತ್ತದೆ. ಅವರು ಅಂಕಿಅಂಶಗಳ ಸಮೇತ ಆಂಗ್ಲರ ಮೊದಲಿನ ಹಾಗೂ ನಂತರದ ಭಾರತವನ್ನು ಚಿತ್ರಿಸಿಟ್ಟಿದ್ದಾರೆ. ಉತ್ತರಭಾರತದ ಪ್ರವಾಸ ಮುಗಿಸಿ ಪುಣೆಯತ್ತ ಹೊರಟಿದ್ದ ಸುಬೆದಾರ್ ಮಲ್ಹಾರಿ ರಾಯ ತನ್ನ ಸಂಗಡಿಗರ ಜೊತೆ ಚೌಂಡಿಯ ದೇವಾಲಯದಲ್ಲಿ ಆ ರಾತ್ರಿ ವಿಶ್ರಾಂತಿ ಪಡೆಯಲು ಬಂದಿದ್ದ. ಅಲ್ಲಿ ಸಾಧಾರಣ ರೂಪದ ಗಂಭೀರೆ ಅಹಲ್ಯೆಯನ್ನು ಕಂಡು ಅವಳಲ್ಲಿದ್ದ ರಾಜತೇಜಸ್ಸನ್ನು ಮನಗಂಡು ತನ್ನ ವಂಶವನ್ನು ಬೆಳಗಲು ಈಕೆ ತಕ್ಕ ಸೊಸೆಯೆಂದರಿತ. ಹೀಗೆ ಸುಯೋಗವೋ ಎನ್ನುವಂತೆ ಅಹಲ್ಯಾಬಾಯಿ ದಕ್ಷ ಮರಾಠ ನಾಯಕ, ಮಾಳವ ಸುಬೇದಾರ ಮಲ್ಹಾರೀ ರಾವ್ ಹೋಳ್ಕರನ ಮಗ ಖಂಡೇರಾಯನಿಗೆ ಪತ್ನಿಯಾದಳು. ಭೋಗಲಾಲಸಿ ಮಗನಿಂದ ರಾಜ್ಯ ಉದ್ಧಾರವಾಗದು ಎಂದು ಮನಗಂಡ ಮಲ್ಹಾರೀರಾಯ ವಿದ್ಯಾ-ವಿಕ್ರಮವಂತೆಯಾದ ಸೊಸೆಗೆ ರಾಜಕೀಯ ಶಿಕ್ಷಣ ನೀಡಿದ. ಯುದ್ಧವಿದ್ಯೆಯನ್ನೂ ಕಲಿಸಿದ. ಪಾಣಿಪತ್ ಕದನದ ಸಮಯದಲ್ಲಿ ತಾನೇ ಮುಂದೆ ನಿಂತು ಮದ್ದುಗುಂಡಿನ ವ್ಯವಸ್ಥೆ ಮಾಡಿದ್ದಳು ಅಹಲ್ಯಾಬಾಯಿ. ಆದರೆ ಮದುವೆಯಾದ ಕೆಲವೇ ಸಮಯದಲ್ಲಿ ಅಹಲ್ಯಾಬಾಯಿ ವಿಧವೆಯಾದಳು. ತನ್ನ ರಾಜಕೀಯ ಗುರು ಮಾವನನ್ನೂ ಕಳೆದುಕೊಂಡಳು. ಮಗ-ಮಗಳು-ಅಳಿಯನನ್ನೂ ಕಳೆದುಕೊಂಡು ಅಕ್ಷರಶಃ ಅನಾಥಳಾದಳು. ಇಂತಹ ದುರ್ಭರ ಸನ್ನಿವೇಶದಲ್ಲೂ ದೇಶಕ್ಕಾಗಿ ತಾನು ಬದುಕಿ ಎಲ್ಲಾ ಕಿರುಕುಳಗಳನ್ನೂ ಹತ್ತಿಕ್ಕಿ ಜಗತ್ತು ಮೂಗಿನ ಮೇಲೆ ಬೆರಳಿಡುವಂತೆ ಮೂವತ್ತುವರ್ಷಗಳ ಪರ್ಯಂತ ವಿಚಕ್ಷಣೆಯಿಂದ ರಾಜ್ಯವಾಳಿದಳು. ಮಾಳವವನ್ನು ಸರ್ವಾಂಗೀಣ ಅಭಿವೃದ್ಧಿಗೊಳಿಸಿ ಶಾಂತಿ-ಸೌಖ್ಯ-ಸಾಂಸ್ಕೃತಿಕ ನಗರಿಯನ್ನಾಗಿಸಿದಳು.

                ಪತಿ ಹಾಗೂ ಮಾವನನ್ನೂ ಕಳೆದುಕೊಂಡು ದುಃಖಿತಳಾಗಿದ್ದ ಅಹಲ್ಯಾಬಾಯಿಗೆ ಮತ್ತೊಂದು ಸುದ್ದಿ ಬರಸಿಡಿಲಿನಂತೆ ಎರಗಿತು. ಮಗ ಮಾಲೇರಾಯ ಕಾಯಿಲೆ ಬಿದ್ದು ತೀರಿಕೊಂಡ. ಆಗ ಗಂಗಾಧರ ಯಶವಂತರಾಯ “ಹೆಂಗಸಾದ ನೀವು ರಾಜ್ಯಭಾರ ಮಾಡುವುದು ಕಷ್ಟಸಾಧ್ಯ. ಆದ್ದರಿಂದ ಯಾವುದಾದರೂ ಒಬ್ಬ ಹುಡುಗನನ್ನು ದತ್ತು ತೆಗೆದುಕೊಳ್ಳಿ. ಅವನು ದೊಡ್ಡವನಾಗುವವರೆಗೆ ನಾನೇ ರಾಜ್ಯವನ್ನು ಆಳುತ್ತಿರುತ್ತೇನೆ” ಎಂದು ಕುಟಿಲತೆಯಿಂದ ರಾಜ್ಯವನ್ನು ಕಬಳಿಸಲು ನೋಡಿದ. ಆದರೆ ಅಹಲ್ಯಾಬಾಯಿ ಅದಕ್ಕೆ ಕವಡೆ ಕಾಸಿನ ಕಿಮ್ಮತ್ತನ್ನೂ ಕೊಡಲಿಲ್ಲ. ಈ ಅವಮಾನದಿಂದ  ಯಶವಂತರಾಯನಿಗೆ ಪಿತ್ತ ನೆತ್ತಿಗೇರಿತು. ಇವಳಿಗೆ ಸರಿಯಾಗಿ ಬುದ್ಧಿ ಕಲಿಸಬೇಕೆಂದು ಪೇಶ್ವೆ ಮಾಧವರಾಯನ ತಮ್ಮ ರಘುನಾಥರಾಯನಿಗೆ ಗುಟ್ಟಾಗಿ “ಹೋಳ್ಕರನ ಈ ರಾಜ್ಯಕ್ಕೆ ಈಗ ಗಂಡು ವಾರಸುದಾರರಿಲ್ಲ. ನೀವು ಇದನ್ನು ಸುಲಭವಾಗಿ ವಶಪಡಿಸಿಕೊಳ್ಳಬಹುದು. ಆದಷ್ಟು ಬೇಗ ಬನ್ನಿ” ಎಂದು ಪತ್ರ ಬರೆದ. ಹಿಂದುಮುಂದು ಯೋಚಿಸದ ರಘುನಾಥರಾಯ ಕೂಡಲೇ ಸೈನ್ಯ ಸಮೇತ ಹೊರಟುಬಿಟ್ಟ. ಆಗ ಅಹಲ್ಯಾಬಾಯಿಯ ನಂಬಿಕಸ್ಥ ದಿವಾನ ತುಕ್ಕೋಜಿರಾವ್ ಹೋಳ್ಕರ್ ಉತ್ತರಭಾರತದಲ್ಲಿ ಯುದ್ಧಕ್ಕೆ ತೆರಳಿದ್ದ. ಧೃತಿಗೆಡದ ಅಹಲ್ಯಾಬಾಯಿ ಯುದ್ಧಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿದಳು. ತಾನೇ ಸ್ವತಃ ನಿಂತು ತರಬೇತಿ ನೀಡಿದ ಮಹಿಳಾ ಪಡೆಯನ್ನು ಯುದ್ಧಕ್ಕೆ ಅಣಿಗೊಳಿಸಿದಳು. ಅಕ್ಕಪಕ್ಕದ ಸೀಮೆಯವರಾದ ಭೋಂಸ್ಲೆ, ಗಾಯಕವಾಡ್ ರಾಜರುಗಳಿಗೆ ಸಹಾಯ ಯಾಚಿಸಿ ಪತ್ರಗಳನ್ನು ಬರೆದಳು. ಇತ್ತ ರಘುನಾಥರಾಯನಿಗೂ ಒಂದು ಪತ್ರ ಬರೆದು, “ಮೀಸೆ ಹೊತ್ತ ಗಂಡಸರಿಗೆ ಹೆಣ್ಣೊಬ್ಬಳ ಬಳಿ ಕಾದಾಟ ಶೋಭೆಯೇ? ಹೆಣ್ಣೊಬ್ಬಳಿಂದ ಸೋತರೆ ನೀವು ಯಾರಿಗೂ ಮುಖ ತೋರಿಸುವಂತಿಲ್ಲ. ನೀವು ಬದುಕಿರುವವರೆಗೂ ಆ ಕೆಟ್ಟ ಕಳಂಕ ನಿಮಗೆ ಅಂಟಿಯೇ ಇರುತ್ತದೆ. ಹಾಗಾಗಿ ಯೋಚಿಸಿಯೇ ಮುಂದೆ ಬರುವುದೊಳಿತು” ಎನ್ನುತ್ತಾ ಚಾಣಾಕ್ಷ ತಂತ್ರವೊಂದನ್ನು ಉಪಯೋಗಿಸಿದಳು. ಈ ಪತ್ರ ರಘುನಾಥರಾಯನ ಜಂಘಾಬಲವನ್ನೇ ಉಡುಗಿಸಿತು. ಅಹಲ್ಯಾಬಾಯಿಯ ಸೇನಾ ಸಿದ್ಧತೆಯನ್ನು ಕೇಳಿದ್ದ ಹಾಗೂ ಅವಳ ರಣವಿಕ್ರಮದ ಅರಿವಿದ್ದ ಆತ ಮರ್ಯಾದೆ ಉಳಿಸಿಕೊಳ್ಳುವುದೇ ಮೇಲೆಂದು ಭಾವಿಸಿ ಅಹಲ್ಯಾಬಾಯಿಗೆ “ನಿಮ್ಮ ಮಗನ ಸಾವಿನಿಂದ ದುಃಖವಾಗಿದೆ. ಸಮಾಧಾನ ಹೇಳುವುದಕ್ಕಾಗಿಯೇ ನಾವು ಬಂದದ್ದು. ಆದರೆ ನೀವು ತಪ್ಪು ತಿಳಿದಿರುವಂತಿದೆ” ಎಂದು ಉತ್ತರಿಸಿದ. ರಘುನಾಥರಾಯನ ಈ ರೀತಿಯ ಶರಣಾಗತಿಯಿಂದ ಅಹಲ್ಯಾಬಾಯಿಯ ಕೀರ್ತಿ ಉತ್ತುಂಗಕ್ಕೇರಿತು.

                ಅಹಲ್ಯಾಬಾಯಿ ಯುದ್ಧಗಳನ್ನು ಆದಷ್ಟು ಮುಂದೂಡುತ್ತಿದ್ದಳು. ಯುದ್ಧದಿಂದ ವಿನಾಶ, ಜನಸಾಮಾನ್ಯರು ಕಷ್ಟಕ್ಕೆ ಈಡಾಗುತ್ತಾರೆ ಎಂದು ತಿಳಿದಿದ್ದಳು. ಆದರೆ ಅನಿವಾರ್ಯ ಸಂದರ್ಭಗಳಲ್ಲಿ ರಣಚಂಡಿಯಾಗುತ್ತಿದ್ದಳು. ಸ್ವಯಂ ರಣರಂಗಕ್ಕಿಳಿಯುತ್ತಿದ್ದ ಈ ತರುಣಿ ಚಂದ್ರಚೂಡ, ರಾಘೋಬಾರನ್ನು ದಿಟ್ಟತನದಿಂದ ಎದುರಿಸಿ ಬಡಿದಟ್ಟಿದಳು. ದಾಳಿಯೆಸಗಿದ ಚಂದ್ರಾವತದ ರಾಜಪುತ್ರರನ್ನು ಒದ್ದೋಡಿಸಿದಳು. ಸ್ತ್ರೀಶಕ್ತಿಯ ಪಡೆಯೊಂದನ್ನು ಕಟ್ಟಿದಳು. ಇಂದೋರಿನಿಂದ ಪುರಾಣ ಪ್ರಸಿದ್ಧ ಮಾಹಿಷ್ಮತಿ(ಮಹೇಶ್ವರ)ಗೆ ಬಂದು ಆ ಊರನ್ನು ಭವ್ಯ ದೇಗುಲಗಳಿಂದ, ಸ್ನಾನಘಟ್ಟಗಳಿಂದ, ವಿವಿಧ ಉದ್ಯಮ-ಅಭಿವೃದ್ಧಿ ಕಾರ್ಯಗಳಿಂದ ಅಲಂಕರಿಸಿದಳು. ಅವಳದ್ದು ಚಾಣಾಕ್ಷ-ಆದರ್ಶ ಪ್ರಜಾಪಾಲನೆ. ಕ್ಷಾತ್ರಧರ್ಮಕ್ಕೆ ಚ್ಯುತಿ ತಾರದ ಆಡಳಿತ. ಪ್ರಜೆಗಳಿಗೆ ಚೋರರ ಭಯವಿರಲಿಲ್ಲ. ದುಷ್ಟ ಅಧಿಕಾರಿಗಳ ತೊಂದರೆಯೂ ಇರಲಿಲ್ಲ. ದೀನದಲಿತರಿಗೆ ಅನ್ನಾಶ್ರಯ, ವಿದ್ವಜ್ಜನರಿಗೆ ಗೌರವ, ಅನವಶ್ಯಕ ಕರಭಾರವಿಲ್ಲದ ದಕ್ಷ ಆಡಳಿತ, ವೈಯುಕ್ತಿಕ ಶುದ್ಧ ಚಾರಿತ್ರ್ಯದ ಸರಳ ಜೀವನ ಹೀಗೆ ಸನಾತನ ಧರ್ಮಕ್ಕೆ ಕಿರೀಟಪ್ರಾಯವಾದ ಆಡಳಿತ ಅವಳದ್ದು. ಸ್ತ್ರೀಧನ, ವಿಧವಾ ಸೌಕರ್ಯ, ದತ್ತುಸ್ವೀಕಾರಕ್ಕೆ ಅವಳು ಮಾಡಿದ ಕಾನೂನುಗಳು ಸರ್ವಕಾಲಕ್ಕೂ ಅನುಕರಣೀಯ. ಅವಳ ಪ್ರಜಾವಾತ್ಸಲ್ಯ, ಸ್ವಯಂ ಬೇಹುಗಾರಿಕೆ, ಪ್ರಾಮಾಣಿಕ ಅಧಿಕಾರಿಗಳ, ಸೇವಕರ ಮೇಲಿನ ಔದಾರ್ಯ-ಹಿತಚಿಂತನೆಗಳು ದಂತಕಥೆಗಳೇ ಆಗಿ ಹೋಗಿವೆ. ತಾಯಿಯಂತೆ ಅವಳು ರಾಜ್ಯವನ್ನು ಪರಿಪಾಲಿಸಿದಳು. ದರೋಡೆಕೋರರನ್ನೂ ಚತುರೋಪಾಯಗಳಂದ ಮಣಿಸಿ ಸಂಸ್ಕರಿಸಿ ನಾಗರಿಕರನ್ನಾಗಿಸುತ್ತಿದ್ದಳು. ಕಳ್ಳರ ನಿಯಂತ್ರಣ ಮಾಡುವ ವೀರನಿಗೆ ಮಗಳು ಮುಕ್ತಾಬಾಯಿಯನ್ನು ಧಾರೆಯೆರೆಯುವುದಾಗಿ ಸಾರಿ ಅದರಂತೆ ನಡೆದು ವಿಕ್ರಮ ತೋರಿದ ಸಾಮಾನ್ಯ ಯೋಧ ಯಶವಂತರಾಯನನ್ನು ಅಳಿಯನನ್ನಾಗಿಸಿಕೊಂಡ ರಾಜಕೀಯ ಚತುರಮತಿ ಆಕೆ. ನ್ಯಾಯ ನಿರ್ಣಯದಲ್ಲಂತೂ ಆಕೆ ಅಸಮಾನಳು.

                    ಒಮ್ಮೆ ಶ್ರೀಮಂತ ವಿಧವೆಯೊಬ್ಬಳು ತನ್ನ ಅಪಾರ ಸಂಪತ್ತಿಗೆ ವಾರಸುದಾರನನ್ನು ದತ್ತು ತೆಗೆದುಕೊಳ್ಳಲು ನಿರ್ಧರಿಸಿದಾಗ ಅಧಿಕಾರಿಗಳು ಅದಕ್ಕೆ ಅನುಮತಿಸಲಿಲ್ಲ. ತನ್ನ ಆಸ್ತಿಯ ಒಂದಂಶವನ್ನು ಸರ್ಕಾರಕ್ಕೆ ನೀಡಿದರೆ ಮಾತ್ರ ಆಕೆ ದತ್ತು ತೆಗೆದುಕೊಳ್ಳಬಹುದೆಂದು ಅವರ ನಿರ್ಧಾರವಾಗಿತ್ತು. ಬೇರೆ ದಾರಿ ಕಾಣದ ಆ ವಿಧವೆ ಈ ವಿಷಯವನ್ನು ರಾಣಿಯ ದರ್ಬಾರಿನಲ್ಲಿ ಪ್ರಸ್ಥಾಪಿಸಿ ನ್ಯಾಯ ಒದಗಿಸಬೇಕೆಂದು ಮನವಿ ಮಾಡಿಕೊಂಡಳು. ದತ್ತು ತೆಗೆದುಕೊಳ್ಳಲು ಅನುಮತಿ ನೀಡಬಹುದೆಂದೂ, ಆದರೆ ಸರ್ಕಾರಕ್ಕೆ ಆ ವಿಧವೆಯ ಸಂಪತ್ತಿನಲ್ಲಿ ಕೆಲವಂಶವನ್ನು ಸಲ್ಲಿಸಬೇಕೆಂದು ಆಸ್ಥಾನದಲ್ಲಿ ನೆರೆದಿದ್ದ ಎಲ್ಲ ಅಧಿಕಾರಿಗಳ ಅಭಿಪ್ರಾಯವಾಗಿತ್ತು. ಆದರೆ ಅಹಲ್ಯಾಬಾಯಿ ಅವರ ಸಲಹೆಯನ್ನು ಒಪ್ಪದೆ, ವಿಧವೆಗೆ ಸ್ವಾಭಾವಿಕವಾಗಿ ಅವಳ ಗಂಡನ ಆಸ್ತಿಯ ಮೇಲೆ ಸಂಪೂರ್ಣ ಹಕ್ಕಿರುವುದರಿಂದ ಸರ್ಕಾರಕ್ಕೆ ಅದರಲ್ಲಿ ಭಾಗ ಪಡೆಯುವ ಯಾವ ಅಧಿಕಾರವೂ ಇಲ್ಲವೆಂದೂ, ಆ ವಿಧವೆ ತನ್ನಿಷ್ಟದಂತೆ ದತ್ತು ಪಡೆಯಬಹುದೆಂದೂ ಆದೇಶಿಸಿದಳು. ರಾಣಿಯ ನ್ಯಾಯ ತೀರ್ಮಾನದಿಂದ ಪ್ರಭಾವಿತಳಾದ ಆ ಮಹಿಳೆ ತನ್ನ ಸಮಸ್ತ ಸಂಪತ್ತನ್ನು ರಾಣಿಯೇ ವಹಿಸಿಕೊಂಡು ಅದನ್ನು ಜನೋಪಕಾರಿ ಕೆಲಸಗಳಿಗೆ ವಿನಿಯೋಗಿಸಬೇಕೆಂದೂ, ತಾನು ದತ್ತು ತೆಗೆದುಕೊಳ್ಳುವ ವಿಚಾರದಿಂದ ಹಿಂದೆ ಸರಿದಿರುವುದಾಗಿ ನುಡಿದಳು. ವಿಧವೆಯ ಮಾತನ್ನು ಕೇಳಿದ ಎಲ್ಲ ಸಭಾಸದರೂ, ಸ್ವತಃ ರಾಣಿಯೂ ಆಶ್ಚರ್ಯ ಚಕಿತರಾದರು. ರಾಣಿಯು ವಿಧವೆಯ ಮಾತನ್ನು ಒಪ್ಪದೆ, ಆ ಆಸ್ತಿಗೆ ಅವಳೇ ಒಡೆಯಳಾಗಿರುವುದರಿಂದ ಅದನ್ನು ಅವಳಿಷ್ಟ ಬಂದಂತೆ ಸದ್ವಿನಿಯೋಗ ಮಾಡಬಹುದೆಂದು ತಿಳಿಸಿದಳು. ರಾಣಿಯ ಮಾತುಗಳಿಂದ ಪ್ರಭಾವಿತಳಾದ ವಿಧವೆ ತನ್ನ ಸಂಪತ್ತನ್ನು ಸಮಾಜೋಪಯೋಗಿ ಕಾರ್ಯಗಳಿಗೆ ಬಳಸಿ ಎಲ್ಲರ ಗೌರವಾದರಕ್ಕೆ ಪಾತ್ರಳಾದಳು. ಇಂತಹ ಹಲವು ನಿದರ್ಶನಗಳು ಅಹಲ್ಯಾಬಾಯಿಯ ನ್ಯಾಯಪರತೆಗೆ ಸಾಕ್ಷಿಯಾಗಿವೆ.

                 ಅಹಲ್ಯಾ ಬಾಯಿಯ ಮಗ ಮಾಲೋಜಿ ಮಹಾಕ್ರೂರಿಯಾಗಿದ್ದ. ಅವನೊಮ್ಮೆ ಮುದ್ದು-ಮುಗ್ಧ ಕರುವಿನ ಮೇಲೆ ತನ್ನ ರಥವನ್ನು ಹಾಯಿಸಿಬಿಟ್ಟ. ತನ್ನ ಕರುವನ್ನು ಕಳೆದುಕೊಂಡ ಹಸು ತ್ವರಿತ ನ್ಯಾಯಕ್ಕಾಗಿ ಕಟ್ಟಿದ್ದ ಗಂಟೆಯ ಹಗ್ಗವನ್ನು ಎಳೆದೇ ಬಿಟ್ಟಿತು. ಮಾತು ಬಾರದ ಗೋಮಾತೆ ಮಾತಿಗೆ ಮೀರಿದ ವೇದನೆಯನ್ನು ಘಂಟಾನಾದದ ಮೂಲಕ ವ್ಯಕ್ತಪಡಿಸಿತ್ತು! ತಕ್ಷಣ ಹೊರಬಂದು ನೋಡಿ ಆಶ್ಚರ್ಯಗೊಂಡು ಗೋವಿನ ಮಾಲಕನ ಮೂಲಕ ನಿಜ ವಿಷಯ ಅರಿತ ಅಹಲ್ಯೆಯ ಮುಖದಿಂದ ಅಗ್ನಿವರ್ಷದಂತಹ ಆಜ್ಞೆಯೇ ಹೊರಹೊಮ್ಮಿತು. ಆಕೆ "ಮಾಲೋಜಿಯ ಕೈ-ಕಾಲು ಕಟ್ಟಿ, ಕರುವಿನ ಪ್ರಾಣಹರಣವಾದ ಸ್ಥಳದಲ್ಲಿಯೇ ಕೆಡವಿ, ಯಾವ ರಥವೇರಿ ಆ ಘೋರ ಕೃತ್ಯವನ್ನಾತ ನಡೆಸಿದ್ದನೋ ಅದೇ ರಥವನ್ನು ಆತನಮೇಲೆ ಹರಿಸಬೇಕೆಂದು" ಆಜ್ಞಾಪಿಸಿದಳು. ಯಾರೂ ರಾಜವಂಶದ ಕುಡಿಯ ಕೊಲೆಗೆ ಒಪ್ಪದಿದ್ದಾಗ ತಾನೇ ರಥವೇರಿ ಹಾಯಿಸಲು ಮುಂದಾದಳು. ಏನಾಶ್ಚರ್ಯ...ತನ್ನ ಕರುವನ್ನು ಕಳೆದುಕೊಂಡು ಅತೀವ ದುಃಖಗೊಳಗಾಗಿ ನ್ಯಾಯ ಬೇಡಿದ್ದ ಅದೇ ಗೋಮಾತೆ ರಥಕ್ಕೆ ಅಡ್ಡಲಾಗಿ ನಿಂತುಕೊಂಡಿತು. ಏನೋ ಕಾಕತಾಳೀಯ ಇರಬೇಕೆಂದು ಮತ್ತೆ ಮತ್ತೆ ಯತ್ನಿಸಲಾಗಿಯೂ ಗೋಮಾತೆ ಅಡ್ಡಬಂದು ರಾಜಕುಮಾರನನ್ನು ರಕ್ಷಿಸಿತು. ಆ ಸ್ಥಳಕ್ಕೆ ಇಂದಿಗೂ ಆಡಾ ಬಜಾರ್ ಎಂದು ಕರೆಯಲಾಗುತ್ತಿದೆ. ಹೀಗೆ ತನ್ನ ಮಗನೆಂಬ ಮಮಕಾರವನ್ನು ಬದಿಗಿಟ್ಟು ವಜ್ರಕಠೋರ ನಿರ್ಧಾರವನ್ನು ಕೈಗೊಂಡು ಸ್ವತಃ ಮಾಡಿ ತೋರಿಸಿದ ನ್ಯಾಯತಪರತೆ ಅವಳದ್ದು.

                  ಕೃಷಿ, ಗೋರಕ್ಷೆ, ವಾಣಿಜ್ಯಕ್ಕೆ ಒತ್ತಾಸೆಯಾಗಿ ಅದ್ಭುತ ದಂಡನೀತಿಯಿಂದ ಪ್ರಜಾನುರಾಗಿಯಾಗಿ, ಸುಸಜ್ಜಿತ ಸೈನ್ಯ, ಸದಾ ತುಂಬಿತುಳುಕುವ ಬೊಕ್ಕಸದಿಂದ ಮಾಳವ ಪ್ರಾಂತವನ್ನು ಶ್ರೀಮಂತಗೊಳಿಸಿದಳು. ಅಹಲ್ಯಾಬಾಯಿಯು ಮಾವ ಕುಳಿತ ಚಿನ್ನದ ಸಿಂಹಾಸನದ ಮೇಲೆ ಕೂರದೆ ನೆಲಹಾಸಿಗೆಯ ಮೇಲೆ ಕುಳಿತು ರಾಜಸಭೆಯನ್ನು ನಡೆಸುತ್ತಿದ್ದಳು. ತನ್ನ ಖಾಸಗಿ ಬೊಕ್ಕಸಕ್ಕೆ ಸೇರಿದ ಹದಿನಾರು ಕೋಟಿ ರೂಪಾಯಿಗಳೆಲ್ಲವನ್ನೂ ದೇಶಹಿತಕ್ಕೆ ವಿನಿಯೋಗಿಸಿದ ಕರ್ಮಯೋಗಿನಿಯಾಕೆ. ಪುಣೆಯ ದರ್ಬಾರಿನಲ್ಲಿ ಅವಳ ಮಾತಿಗೆ ಸದಾ ಪ್ರಥಮ ಪ್ರಾಶಸ್ತ್ಯವಿರುತ್ತಿತ್ತು. ಇಡಿಯ ಮರಾಠವಾಡೆ ಆಕೆಯನ್ನು ತಾಯಿಯಂತೆ ಆರಾಧಿಸುತ್ತಿತ್ತು. ಸಂಸ್ಥಾನವೊಂದರ ಅಧಿಕಾರಿಣಿಯಾಗಿದ್ದರೂ ಬಿಳಿಯ ಸೀರೆ ಧರಿಸಿ, ಭಸ್ಮ ಬಳಿದು ನಿಸ್ಪೃಹಳಾಗಿ ಸಂನ್ಯಾಸಿನಿಯಂತೆ ಜೀವನ ಸಾಗಿಸಿದ ತಪಸ್ವಿನಿ ಅವಳು. ಅಹಲ್ಯಾಬಾಯಿ ತನ್ನ ಮುಖಸ್ತುತಿಯನ್ನು ಎಂದೂ ಇಷ್ಟಪಡುತ್ತಿರಲಿಲ್ಲ. ಒಮ್ಮೆ ಪಂಡಿತ್ ಕುಶಾಲಿ ರಾಮ್ ಅಹಲ್ಯಾಬಾಯಿಯ ಧರ್ಮ ಕಾರ್ಯಗಳು ಮತ್ತು ಅವಳ ಸದ್ಗುಣಗಳ ವರ್ಣನೆಯುಳ್ಳ 'ಅಹಲ್ಯಾಬಾಯಿ ಕಾಮಧೇನು' ಎಂಬ ಹಲವು ಸಾವಿರ ಪದ್ಯಗಳ ಕೃತಿರಚಿಸಿ ಅವಳ ಸಮ್ಮುಖದಲ್ಲಿ ಓದಲು ತೊಡಗಿದಾಗ ನನ್ನ ಬಗ್ಗೆ ಬರೆದು ಜೀವನವನ್ನೇಕೆ ವ್ಯರ್ಥ ಮಾಡುತ್ತಿ. ದೇವರ ಬಗ್ಗೆ ಬರೆ ಎಂದು ಬುದ್ಧಿವಾದ ಹೇಳಿದಳು. ಪಂಡಿತ ಹೊರಟುಹೋದ ಬಳಿಕ ಆ ಕೃತಿಯನ್ನು ನರ್ಮದೆಯಲ್ಲಿ ಬಿಸುಟಲು ಆಜ್ಞಾಪಿಸಿದಳು. ಸಂಸ್ಕೃತ, ಮರಾಠಿ, ಹಿಂದಿಗಳಲ್ಲಿ ಪಾಂಡಿತ್ಯ ಹೊಂದಿದ್ದು, ರಾಜ್ಯದ ಸರ್ವಸ್ವವೂ ಶಿವಾರ್ಪಣೆಯೆಂದುಸುರಿ ತಾನು ಹೊರಡಿಸುವ ಆಜ್ಞೆಗಳೆಲ್ಲದರ ಮೇಲೆ "ಶ್ರೀಶಂಕರ" ಎಂದು ಸಹಿ ಮಾಡುತ್ತಿದ್ದಳಾಕೆ. ಸರ್ವ ಮತ-ಸಂಪ್ರದಾಯಗಳನ್ನೂ, ಕವಿಪಂಡಿತರನ್ನು, ಕಲೆಸಾಹಿತ್ಯಗಳನ್ನು ಪೋಷಿಸಿ ಬೆಳೆಸಿದಳು. ಕಾಶಿಯಲ್ಲಿ ಬ್ರಹ್ಮಪುರಿಯೆಂಬ  ಮಹಾ ಅಗ್ರಹಾರವನ್ನೇ ಸ್ಥಾಪಿಸಿ ಆಜೀವ ಪರ್ಯಂತ ಅಶನ-ವಸನ-ಸಂಭಾವನೆಗಳ ವ್ಯವಸ್ಥೆ ಮಾಡಿದಳು. ಸಂಸ್ಕೃತ ಪಾಠ ಶಾಲೆಗಳನ್ನು ಪ್ರಾರಂಭಿಸಿದಳು.

                ರಾಷ್ಟ್ರದ ಎಲ್ಲಾ ಪ್ರಮುಖ ನಗರಗಳಲ್ಲಿ, ತೀರ್ಥಕ್ಷೇತ್ರಗಳಲ್ಲಿ ಅಹಲ್ಯಾಬಾಯಿಯ ಅಧಿಕಾರಿಗಳೂ, ಆಶ್ರಯಸ್ಥಾನಗಳೂ ಇದ್ದವೆಂದರೆ ಅವಳ ದೂರದೃಷ್ಟಿ ಅರಿವಾದೀತು. ಆಸೇತುಹಿಮಾಚಲದ ಎಲ್ಲಾ ಪುಣ್ಯಕ್ಷೇತ್ರಗಳಲ್ಲೂ ಮಂದಿರ-ಧರ್ಮಛತ್ರ-ಸತ್ರ-ಸ್ನಾನಘಟ್ಟಗಳನ್ನು ನಿರ್ಮಾಣ ಮಾಡಿದಳು. ನರ್ಮದಾ ಪರಿಕ್ರಮಕ್ಕೆ ಇವಳ ಯೋಗದಾನ ಅಪರಿಮಿತ. ಅವಳು ನಿರ್ಮಿಸಿದ ಕೆರೆ, ಬಾವಿ, ಕಟ್ಟೆ-ಅಣೆಕಟ್ಟು, ಮಂಟಪ, ತೋಪುಗಳು ಲೆಖ್ಖವಿಲ್ಲದಷ್ಟು. ಶಿವರಾತ್ರಿಯಂತಹ ವಿಶೇಷ ದಿನಗಳಂದು ಗಂಗೋತ್ರಿಯಿಂದ ಗಂಗಾಜಲವನ್ನು ತಂದು ಎಲ್ಲಾ ದೇವಾಲಯಗಳಲ್ಲೂ ಅಭಿಷೇಕಗೈಯ್ಯುವ ವ್ಯವಸ್ಥೆಯನ್ನು ಅವಳು ರೂಪಿಸಿದ್ದಳು. ಗೋ, ಬ್ರಾಹ್ಮಣ, ಯಾತ್ರಿಕ, ಸಾಧು-ಸಂತರಿಗೆ ಆಶ್ರಯತಾಣಗಳನ್ನು ನಿರ್ಮಿಸಿದಳು. ದೇವಾಲಯಗಳ ನಿರ್ಮಾಣ, ಜೀರ್ಣೋದ್ಧಾರ, ಗೋಮಾಳಗಳ ವ್ಯವಸ್ಥೆ, ಪ್ರಾಣಿ-ಪಕ್ಷಿಗಳಿಗಾಗಿ ಕಾಳು-ಹುಲ್ಲು-ನೀರುಗಳ ವ್ಯವಸ್ಥೆ ಮಾಡಿದ್ದಳು. ಜಲಚರಗಳ ಆಹಾರಕ್ಕೆ ಕೆರೆಕಟ್ಟೆಗಳಿಗೆ ಮೂಟೆ ಮೂಟೆ ಆಹಾರವನ್ನು ಸುರಿಸುತ್ತಿದ್ದಳು. ತನ್ನ ಸ್ವಂತ ಹಣದಿಂದ ಫಸಲಿಗೆ ಬಂದ ಹೊಲಗಳನ್ನು ಕೊಂಡು ಅವುಗಳನ್ನು ಪಕ್ಷಿಗಳಿಗಾಗಿ ಬಿಡುತ್ತಿದ್ದಳು. ದನಕರುಗಳು ಸಂಜೆ ಹಟ್ಟಿಗೆ ತೆರಳುವ ದಾರಿಯಲ್ಲಿ ನೀರು, ಹುಲ್ಲುಗಳನ್ನು ಒದಗಿಸಲು ಏರ್ಪಾಡು ಮಾಡಿದ್ದಳು. ಮೀನುಗಳಿಗಾಗಿ ನರ್ಮದಾ ನದಿಯಲ್ಲಿ  ಪ್ರತಿದಿನವೂ ಅಕ್ಕಿಯನ್ನು ಹಾಕುತ್ತಿದ್ದಳು. ಇರುವೆಗಳಿಗೆ ಸಿಹಿಹಿಟ್ಟಿನಗುಳಿಗೆಗಳನ್ನು ಸಿದ್ಧಪಡಿಸಿದ್ದಳೆಂದರೆ ಆಕೆ ಎಂತಹ ಸೂಕ್ಷ್ಮಮತಿಯಾಗಿರಬೇಕು. ಅಗಲವಾದ ರಸ್ತೆಗಳನ್ನು ಮಾಡಿಸಿ ಸಾಲುಮರಗಳನ್ನೂ, ಹಣ್ಣಿನ ಗಿಡಗಳನ್ನೂ ನೆಡಿಸಿದಳು. ಹೀಗೆ ಮತಾಂಧತೆಯಿಂದ ಜರ್ಝರಿತಗೊಂಡಿದ್ದ ದೇಶಕ್ಕೆ ಧೈರ್ಯ-ಸಾಂತ್ವನಗಳನ್ನು ನೀಡಿದಳು ಈ ಕಲಿಯುಗದ ಅಹಲ್ಯೆ. ಇವಳ ಕಾರಣದಿಂದ ಹಿಂದೂಗಳು ಜೆಜಿಯಾ, ತೀರ್ಥಯಾತ್ರಾಕರ, ತೀರ್ಥಸ್ನಾನಕರಗಳಿಂದ ಮುಕ್ತರಾಗಿ ಪುಣ್ಯಕ್ಷೇತ್ರ ದರ್ಶನ ಮಾಡುವಂತಾಯಿತು. ನಮ್ಮ ಕಲೆ-ಸಾಹಿತ್ಯ-ಉತ್ಸವ-ಸಂಸ್ಕೃತಿಗಳು ಪುನರುತ್ಥಾನಗೊಂಡವು.

                 ನರ್ಮದೆ, ಕ್ಷಿಪ್ರಾ ನದಿಗಳ ಮೂಲ ಪ್ರದೇಶದಲ್ಲಿ, ಅನೇಕ ಯಾತ್ರಾ ಸ್ಥಳಗಳಲ್ಲಿ  ಹಲವಾರು ಛತ್ರಗಳನ್ನೂ ದಾನ ಕೊಡುವ ಅಂಗಡಿಗಳನ್ನೂ ಕಟ್ಟಿಸಿದಳು. ಸೌರಾಷ್ಟ್ರದ ಸೋಮನಾಥ, ಗಯೆಯ ವಿಷ್ಣು, ಕಾಶಿ ವಿಶ್ವೇಶ್ವರಾಲಯಗಳನ್ನು ಜೀರ್ಣೊದ್ದಾರಗೊಳಿಸಿದಳು. ಕಲ್ಕತ್ತೆಯಿಂದ ಕಾಶಿಯವರೆಗಿನ ರಸ್ತೆಯನ್ನು ಸರಿಪಡಿಸಿದಳು. ಭಾರತೀಯ ಸಂಸ್ಕೃತಿಕೋಶದಲ್ಲಿ ಅವಳು ಕಟ್ಟಿಸಿದ ದೇವಾಲಯಗಳು, ಜೀಣೋದ್ಧಾರ ಮಾಡಿಸಿರುವ ದೇವಾಲಯಗಳು, ನಿತ್ಯಪೂಜೆಗಾಗಿ ನೀಡಿರುವ ಶಾಶ್ವತ ಉಂಬಳಿಗಳ ಪಟ್ಟಿಯೇ ಇದೆ. ಅವಳು ತೆಗೆದಿರಿಸಿರುವ ಹಣದಲ್ಲಿ ಇಂದಿಗೂ ಶಿವರಾತ್ರಿ, ಏಕಾದಶಿಗಳಂದು ಕೇಂದ್ರ ಸರ್ಕಾರದ ಮುಖಾಂತರ ಪ್ರತಿ ರಾಜ್ಯಕ್ಕೂ ಗಂಗಾಜಲ ವಿತರಿಸಲಾಗುತ್ತಿದೆ. ಸಾವಿರಕ್ಕೂ ಹೆಚ್ಚು ದೇವಾಲಯಗಳನ್ನು ನಿರ್ಮಾಣ ಮಾಡಿಸಿದಳು. ಪ್ರಮುಖವಾಗಿ ಭಾರತದ ದ್ವಾದಶ ಜ್ಯೋತಿರ್ಲಿಂಗಗಳ ದೇವಾಲಯಗಳನ್ನು ಜೀಣೋದ್ಧಾರ ಮಾಡಿದಳು. ಮತಾಂಧ ಮೊಘಲರ ದುರಾಡಳಿತ, ಹಿಂದೂ ವಿರೋಧಿ ನೀತಿಗೆ ತನ್ನದೇ ರೀತಿಯ ಉತ್ತರ ಕೊಟ್ಟಳು. ಮಹೇಶ್ವರದಲ್ಲಿ ಅಹಲ್ಯಾಬಾಯಿಗೆ ದೇವಾಲಯವನ್ನೂ ನಿರ್ಮಿಸಲಾಗಿದೆ. ವಿಷ್ಣುಗಯಾದಲ್ಲೂ ಇವಳ ಮೂರ್ತಿಯಿದ್ದು ಪ್ರತಿನಿತ್ಯ ಪೂಜಿಸಲ್ಪಡುತ್ತಿದ್ದಾಳೆ. ಕೇಂದ್ರ ಸರ್ಕಾರ ಇವಳ ಗೌರವಾರ್ಥವಾಗಿ 1996ರಲ್ಲಿ ಇವಳ ಹೆಸರಿನಲ್ಲಿ ಅಂಚೆಚೀಟಿ ಬಿಡುಗಡೆ ಮಾಡಿದೆ. ಇತ್ತೀಚೆಗೆ ಸ್ತ್ರೀಶಕ್ತಿಯ ಪ್ರಶಸ್ತಿಗಳಲ್ಲಿ ಅಹಲ್ಯಾಬಾಯಿ ಹೋಳ್ಕರ್ ಪ್ರಶಸ್ತಿಯನ್ನೂ ಸ್ಥಾಪಿಸಿದೆ. ಇಂದೋರ್ನ ವಿಶ್ವವಿದ್ಯಾಲಯಕ್ಕೆ ದೇವಿ ಅಹಲ್ಯಾಬಾಯಿ ಹೋಳ್ಕರ್ ವಿದ್ಯಾಲಯ ಎಂದು ಮರುನಾಮಕರಣ ಮಾಡಲಾಗಿದೆ. ಇಂದೋರ್ ವಿಮಾನ ನಿಲ್ದಾಣಕ್ಕೆ ದೇವಿ ಅಹಲ್ಯಾಬಾಯಿ ಹೋಳ್ಕರ್ ವಿಮಾನ ನಿಲ್ದಾಣ ಎಂದು ಹೆಸರಿಡಲಾಗಿದೆ.

ಯಾರು ಮಹಾತ್ಮ? ಭಾಗ- ೫

ಯಾರು ಮಹಾತ್ಮ? 

ಭಾಗ- ೫


               1942ರ ಆಗಸ್ಟ್ 8ರಂದು ಮಧ್ಯರಾತ್ರಿ ಬಾಂಬೆ ಮೀಟಿಂಗ್ ಹಾಲಿನಲ್ಲಿ ಒಂದಷ್ಟು ಜನ ಒಟ್ಟು ಸೇರಿದ್ದರು. ಎಂದಿನ ಶೈಲಿಯಲ್ಲಿ ತುಂಡು ಬಟ್ಟೆ ತೊಟ್ಟು ಬಂದ ಫಕೀರನೊಬ್ಬ ಉದ್ರಿಕ್ತಗೊಂಡು ಭಾಷಣ ಮಾಡಲಾರಂಭಿಸಿದ. "ಈ ಕ್ಷಣವೇ ನನಗೆ ಸ್ವಾತಂತ್ರ್ಯ ಬೇಕು. ಇಂದೇ ಈ ರಾತ್ರಿಯೇ. ಸಾಧ್ಯವಾದರೆ ರಾತ್ರಿ ಕಳೆದು ಬೆಳಗಾಗುವುದರ ಒಳಗೆಯೇ" ಎಂದು ಘೋಷಣೆ ಮಾಡಿಬಿಟ್ಟ. ಬೆಂಬಲಿಗರು ಉಘೇ ಉಘೇ ಎಂದರು. "ಇಲ್ಲೊಂದು ಸಂಕ್ಷಿಪ್ತ ಮಂತ್ರವಿದೆ. ಮಾಡು ಇಲ್ಲವೇ ಮಡಿ. ನಾವು ಭಾರತವನ್ನು ಸ್ವತಂತ್ರಗೊಳಿಸಬೇಕು. ಇಲ್ಲವಾದಲ್ಲಿ ಈ ಪ್ರಯತ್ನದಲ್ಲಿ ಪ್ರಾಣಾರ್ಪಣೆ ಮಾಡಬೇಕು. ನಮ್ಮ ಗುಲಾಮಗಿರಿ ದೀರ್ಘಕಾಲದವರೆಗೆ ಮುಂದುವರಿಯುವುದನ್ನು ನೋಡಲು ನಾವು ಇರಬಾರದು." ಬೆಳಗಾಗುವುದರೊಳಗೆ ಆತ ಪಡೆದದ್ದು ಸ್ವಾತಂತ್ರ್ಯವಲ್ಲ ಬದಲಿಗೆ ಬ್ರಿಟಿಷ್ ಕಾರಾಗ್ರಹಕ್ಕೆ ಮತ್ತೊಂದು ಆಮಂತ್ರಣ! ಆತ ಬೇರಾರು ಅಲ್ಲ ಮೋಹನದಾಸ ಕರಮಚಂದ ಗಾಂಧಿ!


                 ಹೀಗೆ "ಮಾಡು ಇಲ್ಲವೇ ಮಡಿ" ಹೋರಾಟಕ್ಕೆ "ಮಾಡುವುದೇನು" ಎನ್ನುವುದರ ಸ್ಪಷ್ಟತೆಯೇ ಇರಲಿಲ್ಲ. ಈಗ ಪ್ರಚಾರಕ್ಕೋಸ್ಕರ ಕೆಲ ಸಂಘಟನೆಗಳು ಮಾಡುವ ಪ್ರತಿಭಟನೆ-ಮುಷ್ಕರಗಳಂತೆ ಹತ್ತರಲ್ಲಿ ಹನ್ನೊಂದು ಎನ್ನುವಂತೆ! ಯಾರು, ಏನು, ಎಲ್ಲಿ, ಎತ್ತ ಎನ್ನುವ ಸಂಬಂಧವೇ ಇಲ್ಲದೇ ಮಾತು ಓತಪ್ರೋತವಾಗಿ ಹರಿದಿತ್ತು. ಜನ ಗುಂಪಿನಲ್ಲಿ ಗೋವಿಂದ ಎಂದಿದ್ದರು. ಯಾವುದೇ ರೂಪುರೇಷೆಗಳಿಲ್ಲದೆ ಪರಿಣಾಮದ ಸ್ಪಷ್ಟತೆಯೂ ಇಲ್ಲದೆ ಸುಸಜ್ಜಿತ ಸಂಘಟನೆಯೂ ಇಲ್ಲದೆ ಘೋಷಣೆ ಮಾಡಿಯಾಗಿತ್ತು. ಬ್ರಿಟಿಷರು ಎಗರಾಡಿದವರನ್ನು ಜೈಲಿಗೆ ತಳ್ಳಿ ಮೂರೇ ವಾರಗಳಲ್ಲಿ ಪರಿಸ್ಥಿತಿಯನ್ನು ತಮ್ಮ ಹತೋಟಿಗೆ ತಂದುಕೊಂಡರು. ಈ ನಡುವೆ ಗಾಂಧಿಯ ತಂತ್ರವನ್ನೇ ಉಪಯೋಗಿಸಿಕೊಂಡು ಆಟವಾಡಿದ ಮುಸ್ಲಿಂ ಲೀಗ್ ಮಹಾಯುದ್ಧದಲ್ಲಿ ಬ್ರಿಟಿಷರ ಜೊತೆ ಸೇರಿ ತನಗೆ ಬೇಕಾದುದನ್ನು ಪಡೆದುಕೊಂಡಿತು!


              "ಕೊಲ್ಲುವುದು ಹಿಂಸೆ, ಕೊಲ್ಲಲ್ಪಡುವುದು ಅಹಿಂಸೆ" ಇದೇ ಗಾಂಧಿಯ ಅಹಿಂಸಾ ಸಿದ್ಧಾಂತ. ಹಿಂದೂಗಳು ಮುಸ್ಲಿಮರನ್ನು ಕೊಲ್ಲುವುದು ಹಿಂಸೆ. ಅದೇ, ಹಿಂದೂಗಳು ಮುಸ್ಲಿಮರಿಂದ ಹತ್ಯೆಗೀಡಾದರೆ ಅದು ಅಹಿಂಸೆ. ಗಾಂಧಿ ಬಣ್ಣಿಸಿದ್ದೇ ಹಾಗೆ... "ಹಿಂದೂಗಳು ಪುಕ್ಕಲರು, ಮುಸ್ಲಿಮರು ಭಯಪಡಿಸುವವರು". ನಿಜವಾದ ಅಹಿಂಸೆಯನ್ನು ಸಾಧಿಸಿದವನ ಎದುರಲ್ಲಿ ಹುಲಿ ಮತ್ತು ಆಡು ಪರಸ್ಪರ ಸ್ನೇಹದಿಂದ ಬಾಳುತ್ತವೆ. ವಾಲ್ಮೀಕಿ ಮಹರ್ಷಿಯ ಆಶ್ರಮದಲ್ಲಿ ವ್ಯಾಘ್ರ-ಅಜಗಳೆರಡು ಪರಸ್ಪರರ ಜೊತೆ ಆಡುತ್ತಿದ್ದವಂತೆ. ಭಗವಾನ್ ರಮಣ ಮಹರ್ಷಿಗಳ ಆಶ್ರಮದಲ್ಲಿ ಹಾವು ಹೆಡೆಯೆತ್ತಿ ನರ್ತಿಸುವಾಗ ನವಿಲು ತನ್ನ ತುರಾಯಿ ಪ್ರದರ್ಶಿಸುತ್ತಾ ಆಡುತ್ತಿತ್ತು. ಅಹಿಂಸೆಯ ಶಕ್ತಿ ಅದು.  "ನಿಜವಾದ ಅಹಿಂಸಾ ಸಾಧಕನ ಶಕ್ತಿ ಅದು!" ಆದರೆ ಗಾಂಧಿ ತನ್ನವರಿಗೆ ಅಹಿಂಸೆಯನ್ನು ಬೋಧಿಸುತ್ತಾ ಇದ್ದಾಗಲೇ ಅವರ ಕಣ್ಣೆದುರೇ ಸಾವಿರಾರು ಹಿಂದೂಗಳು ಮುಸ್ಲಿಮರಿಂದ ಹತರಾದರು. ಅದನ್ನು ನೋಡಿಯೂ ಗಾಂಧಿ ತನ್ನ ಅರ್ಥಹೀನ ಅಹಿಂಸೆಯನ್ನು ಬೋಧಿಸುತ್ತಾ ಕುಳಿತರು. ಅಹಿಂಸಾ ವ್ಯಕ್ತಿಗಳ ಸಾನ್ನಿಧ್ಯದಲ್ಲಿ ಹಿಂಸೆ ಮರೆತು ಅಹಿಂಸೆಯೇ ನೆಲೆಯಾಗುತ್ತದೆ ಆದರೆ ಗಾಂಧಿ ಎನ್ನುವ ಅಹಿಂಸಾ ಸಾಧಕನ(?) ಎದುರು ಹಾಗಾಗಲಿಲ್ಲ. ಎರಡರಲ್ಲಿ ಒಂದು ಮಾತ್ರ ಸತ್ಯವಾಗಲು ಸಾಧ್ಯ. ಮೊದಲನೆಯದಕ್ಕೆ ಸಹಸ್ರ ಸಹಸ್ರ ನಿದರ್ಶನಗಳಿದ್ದು, ಅದನ್ನು ಜಗತ್ತೇ ಒಪ್ಪಿಕೊಂಡಿದೆ. ಹಾಗಾದರೆ ಗಾಂಧಿಯ ಅಹಿಂಸೆ ಎನ್ನುವುದರಲ್ಲೇ ಏನೋ ದೋಷವಿರಲೇಬೇಕು. ಗ್ ಈ ಎರಡು ರೀತಿಯ ಅಹಿಂಸೆಗಳಲ್ಲಿನ ವ್ಯತ್ಯಾಸವನ್ನು ಅರಿತವರಿಗೆ ಗಾಂಧಿಯ ಅಹಿಂಸೆ ಎಷ್ಟು ಟೊಳ್ಳು ಎನ್ನುವುದು ಅರ್ಥವಾದೀತು. ಹಾಗೆಯೇ ಗಾಂಧಿಯನ್ನು ಅಹಿಂಸಾಸಾಧಕ, ಅವರ ಅಹಿಂಸೆಯಿಂದಲೇ ಭಾರತಕ್ಕೆ ಸ್ವಾತಂತ್ರ್ಯ ಬಂದಿತೆಂದು ದೊಡ್ಡ ಗಂಟಲಲ್ಲಿ ಅರಚಾಡುವ ಪ್ರತಿಯೊಬ್ಬ ಗಾಂಧಿವಾದಿಯೂ ಅಹಿಂಸೆ ಎಂದರೇನೆಂದು ಪ್ರಥಮತಃ ಅರಿತುಕೊಳ್ಳುವುದು ಐತಿಹಾಸಿಕ-ಸಾಮಾಜಿಕ ದೃಷ್ಟಿಯಿಂದ ಬಹಳ ಒಳ್ಳೆಯದು. ಕಣ್ಣೆದುರಿನಲ್ಲೇ ಅಸಂಖ್ಯ ಹಿಂದೂಗಳು ಮುಸ್ಲಿಮರಿಂದ ಹತ್ಯೆಗೊಳಗಾದರು ಎನ್ನುವುದರಲ್ಲೇ ಗಾಂಧಿಯ ಅಹಿಂಸೆ ಕೇವಲ ಬಹಿರಂಗ ಪ್ರತಿಪಾದನೆಯಷ್ಟೇ, ಆಂತರಂಗಿಕವಾಗಿ ಅವರು ಆಚರಿಸಿದ್ದು ಹಿಂಸೆಯನ್ನೇ ಎನ್ನುವುದು ವೇದ್ಯವಾಗುತ್ತದೆ. ಮನಸ್ಸಿನಲ್ಲಿ ಹಿಂಸೆಯ ವಿಚಾರಗಳನ್ನು ತುಂಬಿಕೊಂಡು ಗಾಂಧಿ ಅಹಿಂಸೆಯನ್ನು ಮುಖವಾಡವಾಗಿ, ರಾಜಕೀಯ ತಂತ್ರಗಾರಿಕೆಯಾಗಿ, ಆಯುಧವಾಗಿ ಬಳಸಿದರು. ಹೀಗೆ ಅವರ ಅಹಿಂಸಾ ಪ್ರತಿಜ್ಞೆಯು ಮಿಥ್ಯೆಯ ಪ್ರಮಾಣವಾಗಿ, ಆಷಾಢಭೂತಿಯ ಸ್ಲೋಗನ್ ಆಗಿ, "ರಾಷ್ಟ್ರ"ಕ್ಕೆ ಮೋಸವಾಗಿ ಮತ್ತು ಸ್ವಯಂವಂಚನೆಯಾಗಿ ಮಾರ್ಪಟ್ಟಿತು. ಇಂತಹ ವ್ಯಕ್ತಿ ಮಹಾತ್ಮ ಹೇಗಾಗುತ್ತಾರೆ?

               ಗಾಂಧಿ ಹಿಂದೂಗಳನ್ನು ದುರ್ಬಲಗೊಳಿಸುತ್ತಾ, ಮುಸ್ಲಿಮರು ನಮ್ಮವರನ್ನು ಕೊಲ್ಲುತ್ತಿದ್ದಾಗಲೂ ಸುಮ್ಮನೆ ಸಹಿಸಿಕೊಳ್ಳಿ ಎಂದು ಹೇಳಿದುದನ್ನೇ "ಅಹಿಂಸೆ" ಎಂದು ಈ ದೇಶದಲ್ಲಿ ಇಂದಿಗೂ ನಂಬಲಾಗುತ್ತದೆ. ಈ ದೇಶದಲ್ಲಿ ಸೆಕ್ಯುಲರ್ ಎನ್ನುವ ಪದ ಬಂದದ್ದೂ, ಈಗ ಬಳಕೆಯಾಗುತ್ತಿರುವುದೂ ಹಾಗೆಯೇ! ಪ್ರತಿಯೊಂದು ಭಯೋತ್ಪಾದನಾ ದಾಳಿ ನಡೆದಾಗಲೂ ಭಯೋತ್ಪಾದಕರಿಗೆ ಧರ್ಮವಿಲ್ಲ ಎನ್ನುವ ವ್ಯರ್ಥಾಲಾಪವೂ ಈ ಅರೆಬೆಂದ ಅಹಿಂಸೆಯ ಫಲವೇ! ಹಿಂಸೆಯನ್ನು ಅಹಿಂಸೆ ಎಂದು ಪ್ರತಿಪಾದಿಸುದುದರಲ್ಲೇ ಗಾಂಧಿಗೆ ಅಹಿಂಸೆಯ ಬಗ್ಗೆ ಇದ್ದ ಪ್ರಾಥಮಿಕ ತಿಳುವಳಿಕೆಯ ದೋಷ ಎದ್ದು ಕಾಣುತ್ತದೆ. ಯೋಗವಿದ್ಯಾಚಾರ್ಯ ಪಂಚಶಿಕು ಅಹಿಂಸೆಯನ್ನು ಹೀಗೆ ವ್ಯಾಖ್ಯಾನಿಸುತ್ತಾನೆ...
"ಯಥಾ ಯಥಾ ವ್ರತಾನಿ ಬಹೂನಿ ಸಮಾಧಿತ್ಸತೆ
ತಥಾ ತಥಾ ಕೃತಭ್ಯೋ ಹಿಂಸಾ ನಿದಾನೇಭ್ಯೋ ನಿವರ್ತಮಾನ
ಸ್ತಮೇವ ಅವದತರೂಪಾಂ ಅಹಿಂಸಾ ಕರೋತಿ"
- ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅನೇಕ ವ್ರತಗಳು/ಪ್ರಗತಿಯ ಒಂದೊಂದೇ ಹೆಜ್ಜೆಗಳನ್ನಿಡುತ್ತಾರೆ. ಆ ಆಚರಣೆಯ ಹಾದಿಯಲ್ಲಿ ಹಿಂಸೆಯ ಕಾರಣೋತ್ಪಾದಕ ಕೆಲಸಗಳನ್ನು ತ್ಯಜಿಸುತ್ತಾರೆ. ಮತ್ತು ಪರಿಪೂರ್ಣ ಅಹಿಂಸೆಯನ್ನು ಆಚರಿಸುತ್ತಾರೆ. ಅಹಿಂಸೆಯ ಆಚರಣೆ ಪ್ರತಿಯೊಬ್ಬನೂ ತನ್ನಲ್ಲೇ ತಾನು ಮಾಡಿಕೊಳ್ಳಬೇಕಾದ ಪರಿವರ್ತನೆ! ರಾಮಕೃಷ್ಣ ಪರಮಹಂಸರು ತಾನು ಇತರರಿಗೆ ಬೋಧಿಸುವ ಮುಂಚೆ ಅದೆಷ್ಟೇ ಸಣ್ಣ ವಿಷಯವಾಗಿರಲಿ ಅದನ್ನು ತಾನು ಮೊದಲು ಅಳವಡಿಸಿಳ್ಳುತ್ತಿದ್ದರು. ಮಹಾತ್ಮರೆಂದರೆ ಹಾಗೆ. ಆದರೆ ಗಾಂಧಿ ತಾನೇ ಸರಿಯಾಗಿ ಪಾಲಿಸದ ತನ್ನ ಅರೆಬೆಂದ ಅಹಿಂಸೆಯನ್ನು ಇತರರಿಗೆ ಮೊದಲು ಬೋಧಿಸುತ್ತಿದ್ದರು! ತನ್ನೆಲ್ಲೇ ಪರಿವರ್ತನೆ ಆಗದೆ ಇತರರಿಗೆ ಬೋಧನೆ! ಯಾವ ಸೀಮೆಯ ಮಹಾತ್ಮ? ಬ್ರಿಟಿಷರು ಭಾರತವನ್ನು ಯುಕ್ತಿಯಿಂದ ವಶಪಡಿಸಿಕೊಂಡು ಖಡ್ಗದ ಬಲದಿಂದ ಆಳಿದರು. ಅಂತಹವರನ್ನು ಅದೇ ಬಗೆಯ ಯುಕ್ತಿ-ಸಾಹಸಗಳಿಂದ ನಿವಾರಿಸಬೇಕಲ್ಲದೆ ಅಹಿಂಸೆಯ ಮೂರ್ಖವಿಚಾರದಿಂದಲೇ? ಹಿಂಸೆಯನ್ನೇ ಮೈಗೂಡಿಸಿಕೊಂಡ ನರಾಧಮರ ಎದುರು ಅಹಿಂಸೆ ಫಲಕಾರಿಯಾಗಬೇಕಾದರೆ ಆತ ಭಗವಾನ್ ರಮಣರಂತೆ, ಪ್ರಾಚೀನ ಋಷಿಮುನಿಗಳಂತೆ ನಿಜವಾದ ಅಹಿಂಸಾ ಸಾಧಕನಾಗಿರಬೇಕು.

              ಒಂದು ಗಣದ ಸೇನಾ ಮುಖ್ಯಸ್ಥನೊಬ್ಬ ಬುದ್ಧನ ಶಿಷ್ಯನಾಗಲು ದೀಕ್ಷೆ ಸ್ವೀಕರಿಸಬಯಸಿ ಬಂದ. ನೀನು ಯಾವ ಕಾರಣಕ್ಕೆ ನೀನು ಭಿಕ್ಷುವಾಗಲು ಬಯಸಿದ್ದೀಯೇ ಎಂದು ಬುದ್ಧ ಆತನನ್ನು ಪ್ರಶ್ನಿಸಿದ್ದ. ಆಗ ಆತ " ಶತ್ರುಗಳು ನಮ್ಮ ರಾಜ್ಯದ ಮೇಲೆ ದಂಡೆತ್ತಿ ಬಂದಿದ್ದಾರೆ. ನಾನೀಗ ನಮ್ಮ ಸೈನ್ಯವನ್ನು ಮುನ್ನಡೆಸಬೇಕಾಗಿದೆ. ಆದರೆ ಯುದ್ಧದಿಂದ ಎರಡೂ ಪಕ್ಷದಲ್ಲಿ ರಕ್ತಪಾತ ಮತ್ತು ಹಿಂಸೆ ಉಂಟಾಗುತ್ತದೆ. ಅದು ಪಾಪದ ಕೆಲಸ ಎಂದು ನನಗನಿಸುತ್ತದೆ. ಹೀಗಾಗಿ ನಾನು ನನ್ನ ಜವಾಬ್ದಾರಿ ತ್ಯಜಿಸಿ ನಿಮ್ಮ ರೀತಿ ಶಾಂತಿ-ಅಹಿಂಸೆಯ ಹಾದಿಯಲ್ಲಿ ಸಾಗಲು ಬಯಸಿ ಬಂದಿದ್ದೇನೆ" ಎಂದ. ಬುದ್ಧ ಆತನನ್ನು ಸಮಾಧಾನಪಡಿಸುತ್ತಾ ಹೇಳುತ್ತಾನೆ, "ನೀನು ಇಲ್ಲಿಗೆ ಬಂದೆ ಎನ್ನುವ ಕಾರಣಕ್ಕೆ ಶತ್ರುಗಳು ತಮ್ಮ ಆಕ್ರಮಣವನ್ನೇನೂ ನಿಲ್ಲಿಸುವುದಿಲ್ಲ. ಒಂದು ವೇಳೆ ಮುಗ್ಧ ಜನರನ್ನು ರಕ್ಷಿಸುವ ಹೊಣೆಗಾರಿಕೆಯನ್ನು ನೀನು ತ್ಯಜಿಸಿದ್ದೇ ಆದರೆ ಆ ಹಿಂಸೆಯ ಪಾಪವೆಲ್ಲಾ ನಿನ್ನ ತಲೆಗೇ ಸುತ್ತಿಕೊಳ್ಳುತ್ತದೆ. ಸಜ್ಜನರು ಹಾಗೂ ಪ್ರಾಮಾಣಿಕ ಜನರನ್ನು ಕಾಪಾಡುವುದೇ ಧರ್ಮ. ಹಾಗಾಗಿ ಹಿಂತಿರುಗಿ ಹೋಗಿ ನಿನ್ನ ಹೊಣೆಗಾರಿಕೆಯನ್ನು ನಿಭಾಯಿಸು". ಬುದ್ಧನ ಅಹಿಂಸೆ ಇದು! ಬುದ್ಧ ಇಲ್ಲಿ ಎರಡು ಅಂಶವನ್ನು ಎತ್ತಿ ಹಿಡಿಯುತ್ತಾನೆ. ಒಂದು ನಾಯಕನಾದವ ಹೇಗಿರಬೇಕು, ಅವನ ಕರ್ತವ್ಯಗಳೇನು ಎನ್ನುವುದು; ಎರಡನೆಯದ್ದು ನೈಜ ಅಹಿಂಸೆ ಎಂದರೆ ಹೇಗಿರಬೇಕು ಎನ್ನುವುದು. ಗಾಂಧಿಯ ಅಹಿಂಸೆಗೂ  ಬುದ್ಧನ ಅಹಿಂಸೆಗೂ ಅಜಗಜಾಂತರ!

ಸೋಮವಾರ, ಸೆಪ್ಟೆಂಬರ್ 19, 2016

ಮಥನ

ಹಾಲ್ಗಡಲಲ್ಲಿರುವಾಗ ಹಾಲಾಹಲಕ್ಕೆ ತಾನು ವಿಷ ಎಂದು ತಿಳಿದಿರುವುದಿಲ್ಲ. ಅಮೃತಕ್ಕೂ ತಾನಾರೆಂಬುದರ ಅರಿವಿರುವುದಿಲ್ಲ. ಮಥನವಾದಾಗಲೇ ಅದು ಅಮೃತವೋ ವಿಷವೋ ತಿಳಿದು ಬರುವುದು!
ಅದಕ್ಕೇ ಏಕವಾಗಿದ್ದರೇನೆ ಒಳ್ಳೆಯದು.
ಅನೇಕವಾದಾಗ ಅಸ್ತಿತ್ವದ ಪ್ರಶ್ನೆ!
ಅಮೃತವಾಗಲು ಪ್ರಯತ್ನಿಸುವುದು ಲೋಕಕ್ಕೇ ಕ್ಷೇಮ!

ಜಗತ್ತಿನ ಸತ್ಯ

ರಾಮ, ಕೃಷ್ಣರು ಮಣ್ಣಿನಲ್ಲಿ ಆಡುತ್ತಿದ್ದರು.
ಮಣ್ಣನ್ನೇ ಸೃಷ್ಟಿಸಿದವನದ್ದು ಮಣ್ಣನ್ನೇ ಹೊತ್ತುಕೊಂಡಿರುವವನ ಜೊತೆ ಸೇರಿ ಮಣ್ಣಿನಲ್ಲೇ ಆಟ!
ಇಂದಿನ ಪೀಳಿಗೆಗೆ ಮಣ್ಣೆಂದರೇನೆಂದೇ ಗೊತ್ತಿಲ್ಲದ ಸ್ಥಿತಿ! ಇನ್ನು ಆಟವೆಲ್ಲಿಂದ ಬಂತು!
ಮಣ್ಣು ಶ್ಯಾಮನ ಬಾಯ ಸೇರಿತು.
ರಾಮ ಬಂದು ಅಮ್ಮನಲ್ಲಿ ದೂರಿದ. "ಅಮ್ಮಾ...ಕಣ್ಣ ಮಣ್ಣ ತಿಂದ".
ತಾಯಿ ಬಂದು ಗದರಿದಳು.
"ಇಲ್ಲಮ್ಮಾ...ಅಣ್ಣ ಸುಳ್ಳು ಹೇಳುತ್ತಿದ್ದಾನೆ"
"ಹೌದೇ ಸತ್ಯ ಏನೆಂದು ನಾನೇ ಕಾಣುತ್ತೇನೆ. ಎಲ್ಲಿ ಬಾಯಿ ತೆರೆ"
ಕೃಷ್ಣ ಬಾಯಿ ತೆರೆದ. ಅಷ್ಟೇ...ಯಶೋದೆಯ ತೆರೆದ ಬಾಯಿ ತೆರೆದಂತೆಯೇ ಇತ್ತು!
ಯಶೋದೆ ಕಂಡದ್ದೂ ಸತ್ಯವೇ...ಜಗತ್ತಿನ ಸತ್ಯ!

ಬುಧವಾರ, ಸೆಪ್ಟೆಂಬರ್ 14, 2016

ಯಾರು ಮಹಾತ್ಮ? ಭಾಗ- ೪

ಯಾರು ಮಹಾತ್ಮ? 
ಭಾಗ- ೪

                       ವಿಭಜನೆಗೆ ಹಲವಾರು ವರುಷಗಳ ಮುನ್ನವೇ ಪಾಕಿಸ್ತಾನ ಸ್ಥಾಪನೆಗೆ ತಳಹದಿಯಾಗಿತ್ತು. ಎಲ್ಲಿದ್ದರೂ ತಮ್ಮ ಪ್ರತ್ಯೇಕ ಅಸ್ತಿತ್ವದಿಂದ ಗುರುತಿಸಿಕೊಳ್ಳುವ ಮನೋಭಾವವಿರುವ ಮುಸಲರಿಗೆ ಈ ಕಾರ್ಯಕ್ಕೆ ಬೀಜರೂಪ ಒದಗಿದ್ದು ಸೈಯ್ಯದ್ ಮೊಹಮ್ಮದನ "ಮೊಹಮ್ಮದನ್ ಆಂಗ್ಲೋ ಯೂನಿವರ್ಸಿಟಿ". ಮುಸ್ಲಿಂ ಲೀಗಿನ ಸ್ಥಾಪನೆಗೆ ಬೀಜಾರೋಪವಾದದ್ದು ಮುಂದೆ ಅಲಿಗಢ ವಿವಿಯಾಗಿ ಬದಲಾದ ಈ ಮೊಹಮ್ಮದ್ ಆಂಗ್ಲೋ ಓರಿಯಂಟಲ್ ಕಾಲೇಜಿನಲ್ಲೇ! ಮಹಮ್ಮದ್ ಇಕ್ಬಾಲ್ ಮುಸ್ಲಿಂ ಲೀಗಿನ ಅಧ್ಯಕ್ಷನಾಗಿ 1930ರಲ್ಲಿ ನಡೆದ ಮುಸ್ಲಿಂ ಲೀಗಿನ ರಜತಸಂಭ್ರಮದಲ್ಲಿ ಪಂಜಾಬ್, ಸಿಂಧ್, ಬಲೂಚ್ ಗಳನ್ನೊಳಗೊಂಡ ಪ್ರತ್ಯೇಕ ಮುಸ್ಲಿಂ ರಾಷ್ಟ್ರದ ಕನಸನ್ನು ಬಿತ್ತಿದ. ಇದು ಮುಂದಕ್ಕೆ ಅಲಿಗಢ ಚಳುವಳಿಯಾಗಿ ಬೆಳೆಯಿತು. ರಹಮತ್ ಅಲಿ ಚೌಧರಿ "ಪಾಕಿಸ್ತಾನ್" ಎನ್ನುವ ಹೆಸರನ್ನೂ ಕೊಟ್ಟ. ಇಕ್ಬಾಲನ ಎಡೆಬಿಡದ ಪತ್ರಗಳು ಹಾಗೂ ತನ್ನ ರಾಷ್ಟ್ರೀಯವಾದಿ ಮನಸ್ಥಿತಿ & ಕಾರ್ಯದೆಡೆಗಿನ ಗಾಂಧೀ-ನೆಹರೂಗಳ ಅವಗಣನೆ ಜಿನ್ನಾನನ್ನು ಪ್ರತ್ಯೇಕತಾವಾದಿಯಾಗಿ ಮಾಡಿ ಇಕ್ಬಾಲನ ಕನಸನ್ನೂ ರಹಮತನ ಹೆಸರನ್ನೂ ಒಟ್ಟಿಗೆ ಸೇರಿಸಿತು. ಹೀಗೆ ಪ್ರತ್ಯೇಕತೆಯನ್ನೇ ಒಡಲಲ್ಲಿಟ್ಟುಕೊಂಡು ಬೆಳೆದಿದ್ದ, ಪ್ರತ್ಯೇಕತೆಯನ್ನೇ ಪ್ರತಿಪಾದಿಸುತ್ತಿದ್ದ, ಶಿಕ್ಷಣ-ರಾಜಕೀಯ-ಅಂತಾರಾಷ್ಟ್ರೀಯ ಸಂಗತಿಗಳೆಲ್ಲದರಲ್ಲೂ ಮುಸ್ಲಿಂ ಹಿತಾಸಕ್ತಿಯನ್ನೇ ಮುಂದುಮಾಡುತ್ತಿದ್ದ, ಬ್ರಿಟಿಷರ ಕುಟಿಲ ಕಾರ್ಯಕ್ರಮ "ವಂಗ ಭಂಗ"ವನ್ನು ಬೆಂಬಲಿಸಿ, ಸ್ವದೇಶಿ ವಸ್ತುಗಳ ಬಳಕೆ-ವಿದೇಶೀ ವಸ್ತುಗಳ ಬಹಿಷ್ಕಾರ ಚಳುವಳಿಯನ್ನು ವಿರೋಧಿಸಿದ್ದ, ಖಿಲಾಫತ್ ಚಳುವಳಿಯನ್ನು ಇಲ್ಲೂ ಹುಟ್ಟು ಹಾಕಿ ಮಲಬಾರಿನಿಂದ ಮುಲ್ತಾನಿನವರೆಗೆ ಹಿಂದೂಗಳ ಮೇಲೆ ಭೀಕರ ಅತ್ಯಾಚಾರವೆಸಗಿದ್ದ ಮುಸ್ಲಿಂ ಲೀಗ್ ಮೇಲೆ ನಂಬಿಕೆಯಿರಿಸಿದ್ದ; ಹಿಂದೂಗಳ ಕೊಲೆ-ಅತ್ಯಾಚಾರಕ್ಕೆ ಕಾರಣವಾಗಿದ್ದ ಖಿಲಾಫತ್ ಚಳುವಳಿಗೆ ಹಿಂದೂಗಳಿಂದಲೇ ಧನ ಸಂಗ್ರಹ ಮಾಡುತ್ತಾ, ಹಿಂದೂಗಳ ಕೊಲೆಯನ್ನು ನಿರ್ಲಕ್ಷ್ಯಿಸಿದ್ದ ಗಾಂಧಿ ಮಹಾತ್ಮ ಅಥವಾ ರಾಜಕೀಯ-ಸಾಮಾಜಿಕ ನಾಯಕ ಬಿಡಿ, ಯಾವ ಕೋನದಿಂದ "ಮನುಷ್ಯ"ನಾಗಿ ಕಾಣುತ್ತಾರೆ ಎನ್ನುವುದನ್ನು ಅವರ ಭಕ್ತರೇ ಹೇಳಬೇಕು.

                ಒಮ್ಮೆ ಯಾರೋ ಗಾಂಧಿಗೆ ಕೇಳಿದರು "ಹುಚ್ಚುನಾಯಿ ಬೇಕಾಬಿಟ್ಟಿ ವರ್ತಿಸಿದರೆ ಏನು ಮಾಡಬೇಕು?" ಆಗ ಗಾಂಧಿ "ಈ ಮಾತು ಅಕ್ಷರಶಃ ಹುಚ್ಚುನಾಯಿಯ ಕುರಿತಾಗಿದ್ದರೆ ಅದನ್ನು ಶೂಟ್ ಮಾಡಬೇಕು. ಅದು ಮುಸ್ಲಿಂ ದಂಗೆಕೋರರ ಕುರಿತಾಗಿದ್ದರೆ ಅದನ್ನು ಅನ್ವಯಿಸಲಾಗದು. ಒಬ್ಬಾತನ ವೈರಿ ಉನ್ಮಾದದಿಂದ ವರ್ತಿಸಿದರೆ ಅವನನ್ನು ಶೂಟ್ ಮಾಡಬಾರದು , ಬದಲಾಗಿ ಚಿಕಿತ್ಸೆಗೆ ಮಾನಸಿಕ ಆಸ್ಪತ್ರೆಗೆ ಕಳಿಸಬೇಕು." ಎಂದರು. ಈ ಮಾತುಕತೆಯಿಂದ ಒಂದು ಸ್ಪಷ್ಟವಾಗುತ್ತದೆ. ಗಾಂಧಿಯ ಬೆಂಬಲಿಗರೂ ಕ್ರುದ್ಧರಾಗುವಷ್ಟು ಅನಾಚಾರವನ್ನು ಮುಸಲರು ಎಸಗುತ್ತಿದ್ದರು. ಹಾಗೂ ಗಾಂಧಿ ಅವರ ತಪ್ಪನ್ನು ಮನ್ನಿಸುತ್ತಿದ್ದರು. ಗಾಂಧಿ ಇಲ್ಲಿ ಮರೆಮಾಚುವ ಸಂಗತಿ ಇನ್ನೊಂದಿದೆ. ಮುಸ್ಲಿಮರು ಉನ್ಮಾದರಾಗುವುದು ಮನದ ಹುಚ್ಚಿನಿಂದಲ್ಲ; ಮತದ ಹುಚ್ಚಿನಿಂದ! ಅದು ವಾಸಿಯಾಗುವ ಕಾಯಿಲೆಯಲ್ಲ!

                 ಅಹಿಂಸೆ ಅಹಿಂಸೆ ಎಂದು ಹೇಳುತ್ತಾ ಕ್ರಾಂತಿಕಾರಿಗಳನ್ನು ದಾರಿ ತಪ್ಪಿದ ದೇಶಭಕ್ತರು ಎಂದು ಕರೆಯುತ್ತಿದ್ದ ಗಾಂಧಿ 1947ರ ಜೂನ್ 16ರಂದು ಪ್ರಾರ್ಥನಾ ಸಭೆಯಲ್ಲಿ ಮಾತನಾಡುತ್ತಾ "ನಮ್ಮ ಬಳಿ ಅಣುಬಾಂಬ್ ಇದ್ದಿದ್ದರೆ ಅದನ್ನು ಬ್ರಿಟಿಷರ ವಿರುದ್ಧ ಪ್ರಯೋಗಿಸಬಹುದಿತ್ತು. ನಾವು ನಮ್ಮ ಅಸಹಾಯಕತೆಯಿಂದ ಅಹಿಂಸೆ ಎನ್ನುವ ಅಸ್ತ್ರವನ್ನು ಅದು ದೋಷಪೂರಿತವಾಗಿದ್ದರೂ, ದುರ್ಬಲವಾಗಿದ್ದರೂ ಅದನ್ನು ಅಳವಡಿಸಿಕೊಂಡಿದ್ದೇವೆ" ಎಂದರು. ಎಂತಹಾ ಎಡಬಿಡಂಗಿತನ! ಸಾವರ್ಕರ್ ಬಿಡುಗಡೆಗೆ ಭಾರತೀಯರು ಸಹಿ ಸಂಗ್ರಹಿಸುತ್ತಿದ್ದಾಗ ಅವರು ಕ್ರಾಂತಿಕಾರಿ ನಾಯಕ ಎನ್ನುವ ಏಕೈಕ ನೆಪವೊಡ್ಡಿ ಹಿಂದೊಮ್ಮೆ ಸಾವರ್ಕರ್ ಭಾಷಣ ಕೇಳಲೆಂದೇ ದಕ್ಷಿಣಾ ಆಫ್ರಿಕಾದಿಂದ ಇಂಗ್ಲೆಂಡಿಗೆ ತೆರಳಿದ್ದ ಗಾಂಧಿ ಸಹಿ ಹಾಕಿರಲಿಲ್ಲ. ಭಗತ್ ಸಿಂಗ್ ಗಲ್ಲು ಶಿಕ್ಷೆ ತಪ್ಪಿಸುವ ಸಹಿ ಸಂಗ್ರಹದಲ್ಲೂ ಇದನ್ನೇ ಅನುಸರಿಸಿದ ಗಾಂಧಿ ಎಲ್ಲಾ ಮುಗಿದ ಮೇಲೆ ಅಣು ಬಾಂಬು ಪ್ರಯೋಗದ ಮಾತನ್ನಾಡುತ್ತಿದ್ದಾರೆ! ಅಲ್ಲದೆ ಅವರು ಅಸಹಾಯಕತೆಯಿಂದ ಅಹಿಂಸೆಯನ್ನು ಅನುಸರಿಸಿದ್ದಂತೆ! ಅಸಹಾಯಕರು ಯಾರೂ ಇರಲಿಲ್ಲ; ಈ ಗಾಂಧಿ ಬೆಂಬಲಿಗ ಮಂದಗಾಮಿಗಳು ಕನಿಷ್ಟ ತೆಪ್ಪಗಿದ್ದರೆ ಸಾಕಿತ್ತು; ಕ್ರಾಂತಿಕಾರಿಗಳು ಭವ್ಯ ಭಾರತವನ್ನೇ ಸೃಷ್ಟಿಸುತ್ತಿದ್ದರು. ಭಾರತೀಯರ ಕ್ಷಾತ್ರವನ್ನು ಮರೆಸುವಂತಹ ಅವರೇ ಮನಗಂಡ ದೋಷಪೂರಿತ, ದುರ್ಬಲ ಅಹಿಂಸೆಯನ್ನು ತಾನು ಮಾತ್ರ ಅನುಸರಿಸಿ, ಉಳಿದ ಭಾರತೀಯರಿಗೆ ಬೋಧಿಸದೆ, ತನ್ನ ಪ್ರಯೋಗಗಳನ್ನು ಸಮಾಜದ ಮೇಲೆ ಹೇರದೆ ತನ್ನ ಕ್ರೈಸ್ತ ಪ್ರಣೀತ ಆಧ್ಯಾತ್ಮಿಕತೆಯನ್ನು ಸ್ವಾತಂತ್ರ್ಯ ಹೋರಾಟದೊಂದಿಗೆ ಬೆರೆಸದೆ ತೆಪ್ಪಗೆ ತನ್ನಷ್ಟಕ್ಕೆ ತಾನಿದ್ದರೆ ಸಾಕಿತ್ತು! ಭಾರತೀಯರು ಸಾವರ್ಕರ್, ವಿವೇಕಾನಂದರು, ಅರವಿಂದರಾದಿಯಾಗಿ ರಾಷ್ಟ್ರವೀರರು ಪ್ರತಿಪಾದಿಸಿದ್ದ, ಪುರಾತನ ಭಾರತ ಹೊಂದಿದ್ದ ಸ್ವಾತಂತ್ರ್ಯವನ್ನು ಪಡೆಯುತ್ತಿದ್ದರು!

                ಮುಸಲ್ಮಾನರಿಗೆ ಎಳ್ಳಷ್ಟು ನೋವಾಗಬಾರದು ಎನ್ನುವ ಅಹಿಂಸೆಯನ್ನು ಪ್ರತಿಪಾದಿಸಿದ ಗಾಂಧಿ ಆಶ್ರಮ(?)ದ ಜಾಗಕ್ಕೆ ದಾಂಗುಡಿಯಿಡುತ್ತಿದ್ದ ಮಂಗಗಳ ಮೇಲೆ ದಾಳಿ ಮಾಡಲು ಅನುಮತಿ ಕೊಟ್ಟರು! ಗಾಂಧಿಯ ದೃಷ್ಠಿಯಲ್ಲಿ ತನ್ನ ಆಹಾರಕ್ಕಾಗಿ ಬೆಳೆ ಹಾನಿ ಮಾಡುವ ವಾನರಗಳಿಗಿಂತ ಜೀವ ಹಾನಿ ಮಾಡುವ ಮತಾಂಧರು ಶ್ರೇಷ್ಠರು! "ಹಿಂಸೆ" ಎನ್ನುವ ನೆಪವೊಡ್ಡಿ ತಮ್ಮ ಪತ್ನಿ ಕಸ್ತೂರ್ ಬಾ ಅವರಿಗೆ ಪೆನ್ಸಿಲಿನ್ ಅನ್ನು ಚುಚ್ಚುಮದ್ದು ಮೂಲಕ ನೀಡುವುದಕ್ಕೆ ಅನುಮತಿ ಕೊಡದ ಗಾಂಧಿ ಮೊಮ್ಮಗಳು ಮನುವಿನ ಶಸ್ತ್ರಚಿಕಿತ್ಸೆಗೆ ಲಗುಬಗೆಯಿಂದ ಅನುಮತಿ ನೀಡಿದರು! ಕಸ್ತೂರ್ ಬಾ ಹೀಗೆ ಚಿಕಿತ್ಸೆ ಇಲ್ಲದೆ ಕೊನೆಯುಸಿರೆಳೆದರು. ಒಂದು ರೀತಿಯಲ್ಲಿ ಅವರ ಸಾವಿಗೆ ಗಾಂಧಿಯೇ ಕಾರಣ!

                1947ರ ಹೊಸವರ್ಷದ ದಿನದಂದು ಶ್ರೀರಾಮ್ ಪುರದಲ್ಲಿ ಮುಸ್ಲಿಮ್ ಗೂಂಡಾಗಳು ಇದ್ದಕ್ಕಿದ್ದಂತೆ ಹಿಂದೂಗಳ ಮೇಲೆ ಮುಗಿಬಿದ್ದರು. ಹಲವರನ್ನು ಕತ್ತರಿಸಿದರು. ಹೆಂಗಳೆಯರ ಅತ್ಯಾಚಾರಗೈದರು. ಮನೆಗಳ ಸುಲಿಗೆ ಮಾಡಿ ಬೆಂಕಿ ಹಚ್ಚಿದರು. ಗೋಮಾಂಸ ತಿನ್ನುವಂತೆ ನೆರೆಯವರನ್ನು ಬಲಾತ್ಕರಿಸಿದರು. ಗಾಂಧಿಯ ಗುಡಿಸಲಿಗೂ ಬೆಂಕಿಬಿತ್ತು. ಗಾಂಧಿ ನಡೆಯುತ್ತಿದ್ದ ದಾರಿಗೂ! ಆದರೂ ಗಾಂಧಿ ಬದಲಾಗಲಿಲ್ಲ. ಅವರ ಮುಸ್ಲಿಂ ಪ್ರೇಮ ವಿಪರೀತಕ್ಕೇರಿತು!

              1924ರ ಸೆಪ್ಟೆಂಬರ್ 13ರ ಯಂಗ್ ಇಂಡಿಯಾ ಪತ್ರಿಕೆಯಲ್ಲಿ ಗಾಂಧಿ ಬರೆಯುತ್ತಾರೆ "ಅನೇಕ ಬಾರಿ ವ್ಯಕ್ತಿಯೊಬ್ಬನ ಕ್ರಿಯೆಗಳು ಅಹಿಂಸೆಯ ಅರ್ಥದಲ್ಲಿ ವಿಶ್ಲೇಷಣೆಯನ್ನು ನಿರಾಕರಿಸುತ್ತವೆ. ಆ ಶಬ್ಧದ ಉನ್ನತ ನೆಲೆಯಲ್ಲಿ ವ್ಯಕ್ತಿಯೊಬ್ಬ ಪೂರ್ಣ ಅಹಿಂಸಾವಾದಿಯಾಗಿದ್ದರೆ ಹಲವು ಸಾರಿ ಆತನ ಕ್ರಿಯೆಗಳು ಹಿಂಸೆಯ ಚಹರೆಯನ್ನು ಧರಿಸಬಹುದು". ಇದು ವೇದಗಳು, ದೃಷ್ಟಾರರು, ಋಷಿಮುನಿಗಳು ಹೇಳಿದ ಅಹಿಂಸೆಯೂ ಅಲ್ಲ; ಸಾಮಾನ್ಯ ಜನರಿಗೆ ತಿಳಿದಿರಬಹುದಾದ ಅಹಿಂಸೆಯೂ ಅಲ್ಲ. ಅಷ್ಟರಮಟ್ಟಿಗೆ ಗಾಂಧಿ ಹೊಸತೊಂದು "ಅಹಿಂಸೆ"ಯನ್ನು ಕಂಡುಹಿಡಿದರು. ವ್ಯಕ್ತಿಯೊಬ್ಬನ ಕ್ರಿಯೆಗಳು ಹಿಂಸಾ ರೂಪ ತಾಳಿದುದೆವೆಂದರೆ ಆತ ಅಹಿಂಸಾವಾದಿ ಹೇಗಾಗುತ್ತಾನೆ? ಬಹುಷಃ ಗಾಂಧಿ ತಮ್ಮ ಉದಾಹರಣೆಯನ್ನೇ ಕೊಡಬಹುದು. ಅವರ ಅಹಿಂಸೆಯ ಕಾರಣದಿಂದ ಹಿಂದೂಗಳು ನಿರ್ವೀರ್ಯರಾಗಿ ಮುಸ್ಲಿಮರಿಂದ ದೌರ್ಜನ್ಯಕ್ಕೊಳಗಾದರಲ್ಲ. ಅಥವಾ ಗಾಂಧಿ ಆ ಮತಾಂಧ ಮುಸ್ಲಿಮರನ್ನೇ ಅಹಿಂಸಾವಾದಿಗಳೆನ್ನಬಹುದು. ತಮ್ಮ ಮತಕ್ಕಾಗಿ ಅವರು ದೌರ್ಜನ್ಯವೆಸಗುವುದರಿಂದ, ಕ್ರಿಯೆಯಲ್ಲಿ ಹಿಂಸೆ ಕಂಡರೂ ಅವರು ಅಹಿಂಸಾವಾದಿಗಳೇ ಎಂದು. ಈ ರೀತಿ ಗಾಂಧಿ ಹೇಳಿದ ಮಾತುಗಳೂ ಇಲ್ಲದಿಲ್ಲ(ಮುಸ್ಲಿಮರು ಹಿಂದೂಗಳನ್ನು ಖಿಲಾಫತ್, ಕಪ್ಪುದಿನಗಳ ಹೆಸರಲ್ಲಿ ಕೊಲ್ಲುತ್ತಿದ್ದಾಗ ಗಾಂಧಿಯಿಂದ ಇಂತಹ ಹಲವಾರು ಅಣಿಮುತ್ತುಗಳು ಹೊರಬಿದ್ದಿದ್ದವು). ಅಂದರೆ ಕೇವಲ ಶಬ್ಧಾರ್ಥದಲ್ಲಿ ಅಹಿಂಸೆ ಇದ್ದರಾಯಿತೇ? ಕ್ರಿಯೆಯಲ್ಲಿ ಆತ ಹಿಂಸೆ ಎಸಗಿದ್ದರೂ ಆತ ಅಹಿಂಸಾವಾದಿ! ಎಂತಹ ವಿಪರ್ಯಾಸ ಇಂತಹ ಗೊಂದಲ ಪುರುಷನಿಗೆ ಅಹಿಂಸಾವಾದಿಯ, ಮಹಾತ್ಮನ ಪಟ್ಟ ಕಟ್ಟಿದವರ ಬುದ್ಧಿಮಟ್ಟವೇ!

                 ಜನರಲ್ ಕಾರ್ಯಪ್ಪ ಭಾರತಕ್ಕೆ ಬೇಕಾದುದು ಅಹಿಂಸೆಯಲ್ಲ, ಬಲಿಷ್ಠ ಸೇನೆ ಎಂದಿದ್ದರು. ಅವರ ಈ ಮಾತನ್ನು ಕೇಳಿದ ಗಾಂಧಿ ತಮ್ಮ ಹರಿಜನ ಸಂಚಿಕೆಯಲ್ಲಿ ಈ ವಿಚಾರವಾಗಿ ಟೀಕಿಸುತ್ತಾ "ಕಾರ್ಯಪ್ಪನವರಿಗಿಂತ ಶ್ರೇಷ್ಠವಾದ ಜನರಲ್ ಗಳು ಕೂಡಾ ಮಹಾನ್ ಶಕ್ತಿಯಾದ ಅಹಿಂಸೆಯ ಸಾಧ್ಯತೆಗಳ ಬಗ್ಗೆ ಮಾತಾಡಲು ತಮಗೆ ಯಾವುದೇ ಹಕ್ಕಿಲ್ಲ ಎಂದು ವಿವೇಕ-ವಿನಮ್ರತೆಯಿಂದ ಒಪ್ಪಿಕೊಳ್ಳುತ್ತಾರೆ. ಇಂದಿನ ಅಣುಬಾಂಬುಯುಗದಲ್ಲಿ ಹಿಂಸೆಯು ಮುಂದೊಡ್ಡುವ ಎಲ್ಲಾ ಸವಾಲುಗಳನ್ನು ಎದುರಿಸುವ ಏಕೈಕ ಶಕ್ತಿ ಎಂದರೆ ಅಹಿಂಸೆ ಒಂದೇ ಎನ್ನುವುದನ್ನು ನಾನು ಧೈರ್ಯದಿಂದ ಘೋಷಿಸಬಲ್ಲೆ" ಎಂದು ಬರೆದರು. ಗಾಂಧಿಯ ಅಹಿಂಸೆಯನ್ನು ಯಾರಾದರೂ ಅನುಸರಿಸಿದ್ದರೆ ಇವತ್ತು ಜಗತ್ತಿಡೀ ಐಸಿಸ್ ಉಗ್ರರಿಂದ ತುಂಬಿ ಹೋಗಿರುತ್ತಿತ್ತು. ಹಾಗೆಯೇ ಗಾಂಧಿಯೇನಾದರೂ ಬದುಕಿದ್ದರೆ ಐಸಿಸ್ ಉಗ್ರರ "ಹಲಾಲ್ ಕಟ್"ಗೆ ಕೊರಳೊಡ್ಡಿ ಅಹಿಂಸೆಯನ್ನು ಪ್ರತಿಪಾದಿಸುತ್ತಾ ನಸುನಗುತ್ತಾ ಧೈರ್ಯದಿಂದ ಪ್ರಾಣವನ್ನು ಬಿಡುವಂತಹ ಸೌಭಾಗ್ಯವೂ ಸಿಗುತ್ತಿತ್ತು! ಈ ಟೀಕೆಗೆ ಜನರಲ್ ಕಾರ್ಯಪ್ಪ ತಲೆಕೆಡಿಸಿಕೊಳ್ಳಲಿಲ್ಲ. ಅವರು ಈ ಟೀಕೆಯನ್ನು  ಸೇನಾಭಾಷೆಯಂತೆ "ರಾಕೆಟ್" ಎಂದು ಬಣ್ಣಿಸಿದರು! ಗಾಂಧಿಯನ್ನು ಭೇಟಿಯಾಗಿ ಕೆಲ ಪ್ರಶ್ನೆಗಳನ್ನು ಕೇಳಿದರು. ಮೌನ ವ್ರತದಲ್ಲಿದ್ದ, ಚರಕದಲ್ಲಿ ವ್ಯಸ್ತರಾಗಿದ್ದ ಗಾಂಧಿ ಉತ್ತರಗಳನ್ನು ಗೀಚಿದರು. ಎರಡು ದಿನಗಳ ಬಳಿಕ "ಸೈನಿಕರ ಕರ್ತವ್ಯಪ್ರಜ್ಞೆಯ ಮೇಲೆ ಹಾನಿಮಾಡದೆ, ವೃತ್ತಿಪರರಾಗಿಯೇ ಕೆಲಸಮಾಡುವ ನಿಟ್ಟಿನಲ್ಲಿ ಸೇನೆಯಲ್ಲಿ ಅಹಿಂಸೆಯ ಪ್ರೇರಣೆ ತುಂಬುವುದು ಹೇಗೆ?" ಎಂದು ಪ್ರಶ್ನಿಸಿದರು. ಆಗ ಗಾಂಧಿ ಕೊಟ್ಟ ಉತ್ತರ :- "ಉತ್ತರಕ್ಕಾಗಿ ನಾನಿನ್ನೂ ಕತ್ತಲಲ್ಲಿ ತಡವರಿಸುತ್ತಿದ್ದೇನೆ!"

                ಗಾಂಧಿ ತಮ್ಮ ಪ್ರಾರ್ಥನಾ ಸಭೆಗಳಲ್ಲಿ ಕುರಾನ್ ಸಾಲುಗಳನ್ನೂ ಪಠಿಸುತ್ತಿದ್ದರು. ಅವರು ಅದನ್ನು ಮುಂದುವರೆಸಿದರೆ ಮನುವನ್ನು ಕೊಲೆಮಾಡುವ ಬೆದರಿಕೆ ಪತ್ರವೂ ಬಂದಿತ್ತು. ಅವರಿಗೆ ಬರುವ ಬಹುತೇಕ ಪತ್ರಗಳು ನಕರಾತ್ಮಕವಾಗಿ ಅವರನ್ನು ದೂಷಿಸಿಯೇ ಇರುತ್ತಿದ್ದವು. ಅವರು ಸ್ವೀಕರಿಸುತ್ತಿದ್ದ 95% ಪತ್ರಗಳಲ್ಲಿ ಬೈಗುಳ, ನಿಂದನೆಗಳೇ ತುಂಬಿರುತ್ತಿದ್ದವು. ಹಿಂದೂಗಳು ಅವರನ್ನು ಮುಸ್ಲಿಮರ ಪಕ್ಷಪಾತಿ ಎಂದು ಜರೆದರೆ, ಮುಸ್ಲಿಮರು ಆತನನ್ನು ತಮ್ಮ ಪರಮವೈರಿ ಎನ್ನುವಂತೆ ನೋಡುತ್ತಿದ್ದರು! ಹೀಗೆ ಆತ ಎಲ್ಲಿಯೂ ಸಲ್ಲಲಿಲ್ಲ! ಅವರಿಗೆ ಬರುತ್ತಿದ್ದ ಕೆಲ ಪತ್ರಗಳಲ್ಲಂತೂ "ಮಹಮ್ಮದ್ ಗಾಂಧಿ", "ಜಿನ್ನಾ ಸೇವಕ" ಎನ್ನುವ ಸಂಭೋದನೆಗಳಿರುತ್ತಿದ್ದವು. ಅವುಗಳಲ್ಲಿ ಕೆಲವೊಂದರ ಒಕ್ಕಣೆ ನೋಡಿ:
"ನಿಮ್ಮ ಅಹಿಂಸಾ ಪದ್ದತಿ ನಿಮ್ಮ ಮೂಗಿನ ಕೆಳಗೇ ದುರ್ವಾಸನೆ ಬೀರುತ್ತಿಲ್ಲವೆ?"
"ಕಳೆದು ಮೂವತ್ತು ವರ್ಷಗಳಿಂದ ನೀವು ಆಚರಿಸುತ್ತಿರುವ ಅಹಿಂಸಾ ಮಾರ್ಗ ಹಿಂಸೆಯ ಫಲಿತಾಂಶವನ್ನೇ ನೀಡಿದೆ. ಇದಕ್ಕಾಗಿ ನಿಮಗೆ ನಾಚಿಕೆಯಾಗುವುದಿಲ್ಲವೇ?"
ಪ್ರತಿದಿನ ಪ್ರಾರ್ಥನಾ ಸಭೆಯಲ್ಲಿ ಅವರು ಕುರಾನ್ ಪಠಿಸುತ್ತಿದ್ದಂತೆ ಕಡು ವಿರೋಧ ವ್ಯಕ್ತವಾಗುತ್ತಿತ್ತು. "ಅವರು ರಾಜಕೀಯದಿಂದ ಆದಷ್ಟು ಬೇಗ ನಿವೃತ್ತಿಯಾದರೆ ದೇಶಕ್ಕೇ ಒಳ್ಳೆಯದು" ಎನ್ನುವ ಮಾತುಗಳು ಅವರದ್ದೇ ಪ್ರಾರ್ಥನಾ ಸಭೆಯಲ್ಲಿ ಸಾಮಾನ್ಯವಾಗಿತ್ತು! 1947ರ ಸೆಪ್ಟೆಂಬರಿನಲ್ಲಿ ದೆಹಲಿಯ ಕಿಂಗ್ಸ್ ವೇ ಕ್ಯಾಂಪಿನಲ್ಲಿ ನಡೆದ ಪ್ರಾರ್ಥನಾ ಸಭೆಯಲ್ಲಿ ಗಾಂಧಿ ಕುರಾನ್ ಪಠಿಸುತ್ತಿದ್ದಂತೆ ಹಲವರು "ಈ ಶ್ಲೋಕಗಳ ಪಠಣದಿಂದ ನಮ್ಮ ತಾಯಂದಿರು, ಪ್ರೀತಿಪಾತ್ರರು ಕೊಲ್ಲಲ್ಪಟ್ಟರು. ಇಲ್ಲಿ ಅದರ ಪಠಣಕ್ಕೆ ಅವಕಾಶ ನೀಡುವುದಿಲ್ಲ" ಎಂದು ಘೋಷಣೆ ಕೂಗಿದರು. "ಗಾಂಧಿ ಮುರ್ದಾಬಾದ್" ಎನ್ನುವ ಘೋಷಣೆಯೂ ಮೊಳಗಿತು.  ಸಭೆಯನ್ನು ಮುಂದೂಡಲಾಯಿತು. ಗಾಂಧಿ ತೆರಳುತ್ತಿದ್ದಂತೆ ಅವರ ಕಾರಿನ ಮೇಲೆ ಕಲ್ಲು ತೂರಲಾಯಿತು. ಕೆಲ ನಿರಾಶ್ರಿತರು ಸೋಡಾ ಬಾಟಲಿಗಳನ್ನು ಸಂಗ್ರಹಿಸಿಟ್ಟುಕೊಂಡಿದ್ದರು.(ಮಹಾತ್ಮ ಗಾಂಧಿ - ದಿ ಲಾಸ್ಟ್ ಫೇಸ್, ಸಂಪುಟ-೨, ಪ್ಯಾರೇಲಾಲ್)
ತುಂಡುಬಟ್ಟೆ ತೊಟ್ಟ ಸರಳತೆಯ ಮೂರ್ತಿ ಮಹಾತ್ಮ "ಕಾರಿನಲ್ಲಿ ಪಯಣಿಸುತ್ತಿದ್ದ"!
 

ಗುರುವಾರ, ಸೆಪ್ಟೆಂಬರ್ 8, 2016

ಯಾರು ಮಹಾತ್ಮ? ಭಾಗ- ೩

ಯಾರು ಮಹಾತ್ಮ? ಭಾಗ- ೩

                      ಅಹಿಂಸೆಯನ್ನು ಸಾಧಿಸಿದವನ ಎದುರಲ್ಲಿ ಯಾರಿಗೂ ಶತ್ರುತ್ವ ಭಾವನೆ ಉಂಟಾಗುವುದಿಲ್ಲ. "ಅಹಿಂಸಾ ಪ್ರತಿಷ್ಠಾಯಾಂ ತತಸನ್ನಿಧೌ ವ್ಯರ್ಥಗಃ" ಎನ್ನುತ್ತದೆ ಪತಂಜಲಿ ಯೋಗ ಸೂತ್ರ. “ಬೇರೆಯವರಿಗೆ ಕಿಂಚಿತ್ತೂ ಹಾನಿ ಮಾಡದ ವ್ಯಕ್ತಿಯ ಎದುರಲ್ಲಿ ಕ್ರೂರ ಪ್ರಾಣಿಗಳೂ ವಿನೀತವಾಗುತ್ತವೆ. ಯೋಗಿಯ ಎದುರಲ್ಲಿ ಹುಲಿ ಮತ್ತು ಕುರಿಯೂ ಒಟ್ಟಿಗೆ ಆಟವಾಡುತ್ತವೆ. ನೀವು ಆ ಸ್ಥಿತಿಗೆ ತಲುಪಿದಾಗ ನಿಮ್ಮಲ್ಲಿ ಅಹಿಂಸೆ ದೃಢಗೊಂಡಿದೆ ಎಂದರ್ಥ” - ವಿವೇಕಾನಂದರು. ಗಾಂಧಿಯ ಪ್ರಕಾರ ಅಹಿಂಸೆಯೆಂದರೆ - ಆಕ್ರಮಣಕಾರಿಯೊಬ್ಬ ತಮಗೆ ಹೊಡೆದರೂ ಅದನ್ನು ಪ್ರತಿರೋಧಿಸದೆ ಸುಮ್ಮನಿರುವುದು. ಅವರೇ ಒಂದು ಉದಾಹರಣೆ ಕೊಡುತ್ತಾರೆ- ಹಸುಗಳು ತಮ್ಮನ್ನು ಕೊಲ್ಲಲು ಹುಲಿಗೆ ತಾವಾಗೇ ಅವಕಾಶ ಕೊಡುತ್ತವೆ. ಅಷ್ಟೆಲ್ಲಾ ಗೋವುಗಳನ್ನು ಕೊಂದ ಹುಲಿ ಕೊನೆಗೊಮ್ಮೆ ಆಯಾಸಗೊಳ್ಳುತ್ತದೆ. ಅಹಿಂಸೆಯ ನಂಬಿಗಸ್ಥ ಅನುಯಾಯಿಯಾಗುತ್ತದೆ!" ಯಾವ ಮಗುವಿಗೆ ಬೇಕಾದರೂ ಈ ರೀತಿ ಹೇಳಿ ನೋಡಿ - ನಿಮ್ಮನ್ನು "ಒಂದು ಸುತ್ತು ಲೂಸ್" ಎನ್ನದಿದ್ದರೆ ಮತ್ತೆ ಕೇಳಿ! ಹಿಂದೂಗಳು ಹತ್ಯೆಗೀಡಾಗುತ್ತಿದ್ದರೂ ಕೊಲ್ಲುವ ಮುಸ್ಲಿಮರನ್ನು ಗೌರವ-ಔದಾರ್ಯದಿಂದ ನೋಡಬೇಕು; ಸುಹ್ರಾವರ್ದಿ ಗೂಂಡಾಗಳ ನಾಯಕನಾಗಿದ್ದರೂ ದೆಹಲಿಯಲ್ಲಿ ಮುಕ್ತವಾಗಿ-ಸುರಕ್ಷಿತವಾಗಿ ತಿರುಗಾಡಲು ಬಿಡಬೇಕು. ಇವು ಗಾಂಧಿ ತಮ್ಮ ಪ್ರಾರ್ಥನೆಯ ಸಮಯದಲ್ಲಿ ಪದೇ ಪದೇ ಮಾಡುತ್ತಿದ್ದ ವಕಾಲತ್ತುಗಳು!

                 ಗಾಂಧಿಯ ಆಯ್ದ ಕೆಲವು ಅಣಿಮುತ್ತುಗಳನ್ನು ನೋಡೋಣ! “ಮುಸ್ಲಿಮರು ಹಿಂದೂಗಳ ಅಸ್ತಿತ್ವವನ್ನೇ ನಾಶ ಮಾಡಲು ಯೋಚಿಸಿದರೂ ಕೂಡಾ ಹಿಂದೂಗಳು ಎಂದಿಗೂ ಉದ್ರೇಕಗೊಳ್ಳಬಾರದು. ಕೋಪಿಸಿಕೊಳ್ಳಬಾರದು. ಅವರು ತಲವಾರ್ ತೋರಿಸಿದರೂ ನಾವು ಸಾವನ್ನು ಧೈರ್ಯದಿಂದ ಆಹ್ವಾನಿಸಬೇಕು. ಅವರು ಜಗತ್ತನ್ನೇ ಬೇಕಾದರೂ ಆಳಲಿ, ನಾವು ಅಲ್ಲಿ ವಾಸಿಸಬೇಕು. ಸಾವಿಗೆ ಅಂಜಬಾರದು. ಹುಟ್ಟು ಸಾವು ವಿಧಿಲಿಖಿತ. ಹೀಗಾಗಿ ಸಾವಿನ ಬಗ್ಗೆ ವಿಷಣ್ಣ ಭಾವ ತಾಳಬೇಕು. ನಾವೆಲ್ಲ ಕಿರುನಗೆಯನ್ನಿಟ್ಟುಕೊಂಡೇ ಸಾವನ್ನಪ್ಪಿದರೆ ನವ ಜೀವನವನ್ನು ಪ್ರವೇಶಿಸುತ್ತೇವೆ. ನಾವು ಹೊಸ ಹಿಂದೂಸ್ಥಾನವನ್ನು ನಿರ್ಮಿಸುತ್ತೇವೆ.”(1947 ಏಪ್ರಿಲ್ 6ರಂದು ಮಾಡಿದ ಭಾಷಣ) “ಒಂದು ವೇಳೆ ನಮ್ಮವರು ಕೊಲೆಯಾದರೂ ನಾವೇಕೆ ಕೊಲೆಗಾರರ ಮೇಲೆ ಕೋಪಮಾಡಿಕೊಳ್ಳಬೇಕು? ಅವರು ಕೊಲ್ಲಲ್ಪಟ್ಟರೂ ಸಹ ಉತ್ತಮ, ಸೂಕ್ತ ಅಂತ್ಯವನ್ನೇ ಕಂಡಿದ್ದಾರೆ ಎಂದು ಮನವರಿಕೆ ಮಾಡಿಕೊಳ್ಳಬೇಕು. ನಮಗೆಲ್ಲಾ ಇಂಥದೇ ಸ್ವರ್ಗ ಕಾದಿರಬಹುದು. ದೇವರು ನಮ್ಮನ್ನೂ ಇದೇ ಹಾದಿಯಲ್ಲೇ ಕಳುಹಿಸಬಹುದು. ನಾವು ಹೃದಯಪೂರ್ವಕವಾಗಿ ಮಾಡಬೇಕಾದ ಪ್ರಾರ್ಥನೆ ಇದೇ”(1947 ಸೆಪ್ಟೆಂಬರ್ 23ರಂದು ಮಾಡಿದ ಭಾಷಣ). “ಪಂಜಾಬಿನಲ್ಲಿ ಸತ್ತವರ್ಯಾರೂ ತಿರುಗಿ ಬರಲಾರರು. ಸಾವಿಗೀಡಾದವರು ಧೈರ್ಯದಿಂದ ಮರಣವನ್ನು ಎದುರಿಸಿದ್ದರೆ ಅವರು ಏನನ್ನೂ ಕಳೆದುಕೊಳ್ಳುವುದಿಲ್ಲ. ಬದಲಾಗಿ ಕೆಲವನ್ನು ಗಳಿಸುತ್ತಾರೆ. ನಾವೆಲ್ಲಾ ಆ ರೀತಿ ವರ್ತಿಸಿದರೆ ದೇವರೇ ಅವರ ಖಡ್ಗವನ್ನು ತುಂಡರಿಸುತ್ತಾನೆ.” (ಮಹಾತ್ಮಗಾಂಧಿ-ದಿ ಲಾಸ್ಟ್ ಫೇಸ್-೨, ಪ್ಯಾರೇಲಾಲ್). ಇವೆಲ್ಲವೂ ಹಿಂದೂಗಳನ್ನು ಮುಸ್ಲಿಮರು ಅಟ್ಟಾಡಿಸಿ ಕೊಲೆಗೈಯ್ಯುತ್ತಿದ್ದಾಗ, ನಮ್ಮ ಸ್ತ್ರೀಯರನ್ನು ಅತ್ಯಾಚಾರವೆಸಗುತ್ತಿದ್ದಾಗ, ಗರ್ಭಿಣಿಯರ ಗರ್ಭ ಸೀಳುತ್ತಿದ್ದಾಗ ಗಾಂಧಿ ನೀಡಿದ ಉಪದೇಶಗಳು. ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಶು ಕದಾಚನಾ ಎಂದ ಭಗವಾನ್ ಕೃಷ್ಣ ಇದನ್ನು ಕೇಳುತ್ತಿದ್ದರೆ ಗಾಬರಿಗೊಂಡು ಇಂತಹವನ್ನು ಖಂಡಿತ ಕೌರವ ಪಕ್ಷಕ್ಕೆ ಓಡಿಸುತ್ತಿದ್ದ!

               ಜುಲೈ 27, 1947ರ "ಹರಿಜನ"ದಲ್ಲಿ ಗಾಂಧಿ "ನನ್ನ ಹಿರಿಮಗ ಪ್ರತೀ ಬಾರಿ ಬಂದಾಗಲೂ "ನಾನು ಭವಿಷ್ಯದಲ್ಲಿ ಉತ್ತಮ ವ್ಯಕ್ತಿಯಾಗುತ್ತೇನೆ. ಇನ್ನು ಮುಂದೆ ವೈನ್ ಮುಟ್ಟುವುದಿಲ್ಲ" ಎಂದು ಹೇಳುತ್ತಿದ್ದ. ನಿನ್ನ ಮಾತಿನಲ್ಲಿ ವಿಶ್ವಾಸವಿಲ್ಲದಿದ್ದರೂ ನಿನಗೆ ಒಂದು ಅವಕಾಶ ನೀಡುತ್ತೇನೆ ಎನ್ನುತ್ತಿದ್ದೆ. ಆತನಿಂದ ಅದನ್ನು ಪಾಲಿಸಲು ಆಗುತ್ತಿರಲಿಲ್ಲ. ಅದು ನನಗೂ ತಿಳಿದಿತ್ತು. ಆದರೂ ನಾನು ಅವನು ಬದಲಾಗುತ್ತಾನೆ ಎಂದು ನಂಬಿದ್ದೆ. ಪ್ರತೀ ಬಾರಿ ಬಂದಾಗಲೂ ಇದೇ ರೀತಿ ನಡೆಯುತ್ತಿತ್ತು. ಇದೇ ರೀತಿ ನಾವು ಮುಸ್ಲಿಮರ ಮೇಲೆ ವಿಶ್ವಾಸವಿಡಬೇಕು" ಎಂದು ಬರೆದಿದ್ದರು. ಅಂದರೆ ಮುಸ್ಲಿಮನೊಬ್ಬ ಬದಲಾಗದಿದ್ದರೂ ಅವನ ಮೇಲೆ ವಿಶ್ವಾಸವಿಡಬೇಕು. ಅವನು ನಮ್ಮ ಮೇಲೆ ಹಲ್ಲೆ ಮಾಡಿದರೂ ಅವನ ಮೇಲೆ ವಿಶ್ವಾಸವಿಡಬೇಕು. ನಮ್ಮವರನ್ನು ಕೊಲೆಮಾಡಿದರೂ ಅವನನ್ನು ನಾವು ನಂಬಬೇಕು. ನಮ್ಮ ಸ್ತ್ರೀಯರ ಮೇಲೆ ಅತ್ಯಾಚಾರವೆಸಗಿದರೂ ಅವನ ಬಳಿ ಜೊಲ್ಲು ಸುರಿಸುತ್ತಾ ಬೇಡಬೇಕು! ಅಂದರೆ ಮುಸ್ಲಿಮನೊಬ್ಬ ಬದಲಾಗುವುದಿಲ್ಲವೆಂದು ಗಾಂಧಿಗೂ ತಿಳಿದಿತ್ತು. ಆದರೂ ತನ್ನದೇ ಆದ ಅಹಿಂಸಾ ನೀತಿಯನ್ನು ಬಡಪಾಯಿ ಹಿಂದೂಗಳ ಮೇಲೆ ಅನ್ಯಾಯವಾಗಿ ಹೇರಲೆತ್ನಿಸಿದರು. ಒಂದು ರೀತಿಯಲ್ಲಿ ಹಿಂದೂಗಳ ಕೊಲೆಗೆ ಗಾಂಧಿಯೇ ಕಾರಣಕರ್ತರಾದರು.

                   ಕೆಟ್ಟಕೆಲಸಗಳನ್ನು ಮಾಡುವವರನ್ನು ಶಿಕ್ಷಿಸಲು ಹಿಂದೂ ಧರ್ಮ ಅನುಮತಿ ನೀಡುವುದಿಲ್ಲವೇ? ಅವಕಾಶ ನೀಡುವುದಿಲ್ಲ ಎಂದಾದರೆ ಕೌರವರನ್ನು ಕೊಲ್ಲುವಂತೆ ಕೃಷ್ಣ ಭಗವದ್ಗೀತೆಯ ಎರಡನೆಯ ಅಧ್ಯಾಯದಲ್ಲಿ ಬೋಧಿಸಿರುವುದನ್ನು ಹೇಗೆ ವಿವರಿಸುತ್ತೀರಿ? ಎನ್ನುವ ಪ್ರಶ್ನೆಯನ್ನು ಸ್ವಲ್ಪ ಬೊಂಡಿದ್ದ ಗಾಂಧಿ ಭಕ್ತನೊಬ್ಬ ಕೇಳಿದ. ಆಗ ಗಾಂಧಿ "ಮೊದಲನೇ ಪ್ರಶ್ನೆಗೆ ಹೌದು ಅಥವಾ ಇಲ್ಲ ಎನ್ನುವ ಎರಡೂ ಉತ್ತರವನ್ನು ನೀಡಬೇಕಾಗುತ್ತದೆ. ಯಾರನ್ನಾದರೂ ಕೊಲ್ಲುವ ಪ್ರಶ್ನೆ ಉದ್ಭವಿಸುವಾಗ ಯಾರು ಅನಿಷ್ಟ ಕಾರ್ಯ ಮಾಡುವವರು ಎನ್ನುವುದನ್ನು ನಿರ್ಧರಿಸಲು ಒಬ್ಬಾತ ನಿಷ್ಪಕ್ಷಪಾತ ನ್ಯಾಯಾಧೀಶನಾಗಿರಬೇಕಾಗುತ್ತದೆ. ಯಾರಾದರೊಬ್ಬರಿಗೆ ಈ ಹಕ್ಕು ಸಿಗಲು ಆತ ಸಂಪೂರ್ಣವಾಗಿ ದೋಷರಹಿತನಾಗಿರಬೇಕಾಗುತ್ತದೆ. ತಾನೇ ಸ್ವತಃ ತಪ್ಪು ಮಾಡುವ ವ್ಯಕ್ತಿ ಇನ್ನೊಬ್ಬನ ದೋಷಗಳನ್ನು ನಿರ್ಣಯಿಸುವ ಅಥವಾ ಶಿಕ್ಷಿಸುವ ಹಕ್ಕು ತನಗಿದೆ ಎಂದು ಹೇಗೆ ಪ್ರತಿಪಾದಿಸಲು ಸಾಧ್ಯ? ಇನ್ನು ಗೀತೆಯಲ್ಲಿ ಹೇಳಿರುವಂತೆ ಅನಿಷ್ಟ ಕೆಲಸ ಮಾಡುವವನನ್ನು ಶಿಕ್ಷಿಸುವ ಹಕ್ಕು ಕುರಿತಾದ ಎರಡನೇ ಪ್ರಶ್ನೆ. ಇದನ್ನು ಸರ್ಕಾರ ಮಾತ್ರ ಸೂಕ್ತ ರೀತಿಯಲ್ಲಿ ಜಾರಿ ಮಾಡಬಹುದು" ಎಂದು ಪ್ರತಿಕ್ರಿಯಿಸಿದರು. ಎಷ್ಟೊಂದು ದ್ವಂದ್ವತೆ! ಅಂದರೆ ಮುಸ್ಲಿಮನೊಬ್ಬ ವಿನಾ ಕಾರಣ ಹಿಂದೂವೊಬ್ಬನ ಹತ್ಯೆ ಮಾಡಿದರೂ ಅವನನ್ನು ಕೊಲ್ಲುವ ಹಾಗಿಲ್ಲ. ಯಾಕೆಂದರೆ ಕೊಲ್ಲುವವ ಗಾಂಧಿಯಿಂದ "ದೋಷರಹಿತ ಸರ್ಟಿಫಿಕೇಟ್" ಪಡೆಯಬೇಕಾಗುತ್ತದೆ. ಕೆಲವೊಮ್ಮೆ ಅನ್ನಿಸುವುದಿದೆ ಬಹುಷಃ ಕೇಜ್ರಿವಾಲ್ ಗಾಂಧಿಯ ಪಳಿಯುಳಿಕೆಯೇನೋ! ಹಾಗೆಯೇ ಅನಿಷ್ಟ ಕೆಲಸ ಮಾಡುವವನನ್ನು ಸರ್ಕಾರ ಮಾತ್ರ ಶಿಕ್ಷಿಸಬಹುದು; ಗಾಂಧಿಗೆ ಆಳುವ ಬ್ರಿಟಿಷರ ಮೇಲೆ ಎಷ್ಟೊಂದು ನಂಬಿಕೆ! ಅವರೇನಾದ್ರೂ ಶಿಕ್ಷಿಸದಿದ್ದರೆ ಆತ ನಿರಪರಾಧಿ! ಅಲ್ಪಸಂಖ್ಯಾತರು ಏನು ಮಾಡಿದರೂ ಸುಮ್ಮನಿದ್ದು ಬಹುಸಂಖ್ಯಾತರನ್ನು ಸಾಯಬಡಿವ ಇಂದಿನ ರಾಜಕಾರಣಕ್ಕೆ ತಳಹದಿ ಹಾಕಿದ ಅಧ್ವರ್ಯು ಯಾರೆಂದು ಬೇರೆ ಹೇಳಬೇಕಿಲ್ಲ ತಾನೆ!

               ಗಾಂಧಿಯ ಅಹಿಂಸೆ ಹಿಂದೂಗಳಿಗೆ ಮಾತ್ರ! "ಎಲ್ಲಾ ಹಿಂದೂಗಳು ನನ್ನ ಮಾತು ಕೇಳಿದರೆ ಇಡೀ ಜಗತ್ತೇ ಅನುಸರಿಸಲು ಮುಂದಾಗುವಂತಹ ಮಾದರಿಯನ್ನು ನಾವು ಹಾಕಿಕೊಡಬಹುದು. ಈ ಮಾತನ್ನು ಮುಸ್ಲಿಮರಿಗೆ ಯಾಕೆ ಹೇಳಿಕೊಡುತ್ತಿಲ್ಲ ಎಂದರೆ ಅವರಿಂದು ನನ್ನನ್ನು ಶತ್ರುವೆಂದು ಪರಿಗಣಿಸಿದ್ದಾರೆ. ಹಿಂದೂಗಳು ನನ್ನನ್ನು ಶತ್ರು ಎಂದು ನೋಡುವುದಿಲ್ಲ. ಅದಕ್ಕಾಗಿ ತಮ್ಮ ಆಯುಧಗಳನ್ನು ಸಮುದ್ರಕ್ಕೆಸೆಯುವಂತೆ ಧೈರ್ಯತನದ ಅಹಿಂಸೆಯ ಅದ್ವಿತೀಯ ಸಾಮರ್ಥ್ಯ ಮನವರಿಕೆ ಮಾಡಿಕೊಳ್ಳುವಂತೆ ಅವರಿಗೆ ಹೇಳುತ್ತೇನೆ"(ಮಹಾತ್ಮಗಾಂಧಿ-ದಿ ಲಾಸ್ಟ್ ಫೇಸ್-೨, ಪ್ಯಾರೇಲಾಲ್). ಅಬ್ಬಾ ಈತನ ಪ್ರಲಾಪವೇ! ಹಿಂದೂಗಳು ನಾನು ಬಾವಿಗೆ ಹಾರಲು ಹೇಳಿದರೂ ಸಿದ್ಧರಿದ್ದಾರೆ ಎನ್ನುತ್ತಾ ಅವರಿಗೆ ಬಿಟ್ಟಿ ಉಪದೇಶ! ಮುಸ್ಲಿಮರು ಶತ್ರುವೆಂದು ಪರಿಗಣಿಸಿದ ಕಾರಣ ಅವರಿಗೆ ಅಹಿಂಸೆಯ ಉಪದೇಶ ಮಾಡುವುದಿಲ್ಲವೇ? ಅಹಿಂಸೆಯ ಅರ್ಥವೇ ಸತ್ತು ಹೋಯಿತು! ಶತ್ರುತ್ವ ಮರೆತು ಅಹಿಂಸೆಯನ್ನು ಪಾಲಿಸುವವನ ಎದುರಲ್ಲಿ ಪಶುಗಳೂ ಮಂಡಿಯೂರುತ್ತವೆ ಎಂದ ವಿವೇಕಾನಂದರ ಮಾತೂ ಕಸದ ಬುಟ್ಟಿ ಸೇರಿತು! ಅಥವಾ ಮುಸ್ಲಿಮರು ಪಶುಗಳಿಗಿಂತಲೂ ಕಡೆ! ವಿಪರ್ಯಾಸವೆಂದರೆ ಇಂದು ಜಗತ್ತಿನಲ್ಲಿ ಎರಡೂ ಸತ್ಯವಾಗಿರುವುದು. ಅಹಿಂಸೆಯೆಂದರೆ ಗಾಂಧಿಯದ್ದೇ ಎನ್ನುವ ಮೂರ್ಖ ಪ್ರಪಂಚ. ಪಶುಗಳಿಗಿಂತಲೂ ಕ್ರೂರವಾಗಿ ವರ್ತಿಸುವ ಮತಾಂಧ ಮುಸಲರು! ಈ ತುಂಡುಬಟ್ಟೆ ತೊಟ್ಟ ಮುದುಕನ ಮಾತು ಕೇಳಿ ಹಿಂದೂಗಳು ನಿರ್ವೀರ್ಯರಾದರು. ಮುಸಲ್ಮಾನರು ಸ್ತ್ರೀಯರ ಮೇಲೆ ಅತ್ಯಾಚಾರ ಮಾಡುತ್ತಿದ್ದಾಗಲೂ, ತಮ್ಮವರನ್ನು ಕೊಲ್ಲುತ್ತಿದ್ದಾಗಲೂ ಗಾಂಧಿಯ ಅಹಿಂಸೆಗೆ ಜೋತು ಬಿದ್ದರು.

                   ಒಬ್ಬ ಉನ್ಮತ್ತನ ಕೈಯಲ್ಲಿ ನಾವು ಹೆದರಿಕೆಯಿಲ್ಲದೆ ಉದ್ವೇಗವಿಲ್ಲದೆ ಕೋಪವಿಲ್ಲದೆ ಸಾವನ್ನಪ್ಪಿದರೆ ಅದು ಅವನ ಉನ್ಮಾದವನ್ನು ನಿವಾರಿಸುತ್ತದೆ ಎಂದರು ಮಹಾವೈದ್ಯ ಗಾಂಧಿ! ಹಿಂದೂಗಳನ್ನು ರಕ್ಷಿಸುವ ಭರದಲ್ಲಿ ಮುಸಲರಿಂದ ಮಾರಕ ಇರಿತಕ್ಕೊಳಗಾಗಿ ಸಾವನ್ನಪ್ಪಿದ ಸಚಿನ್ ಮಿತ್ರಾ ಹಾಗೂ ಸ್ಮೃತೀಶ ಬ್ಯಾನರ್ಜಿಯ ಸಾವಿಗೆ ಶೋಕ ವ್ಯಕ್ತಪಡಿಸಲೂ ನಿರಾಕರಿಸಿದರು. ಬದಲಾಗಿ ಸಚಿನ್ ಮಿತ್ರಾರ ಪತ್ನಿಗೆ ನೀವು ಶೋಕಿಸುವ ಬದಲು ಸೇವೆಯಲ್ಲಿ ತೊಡಗಿಕೊಳ್ಳಿ ಎಂದು ಬಿಟ್ಟಿ ಸಲಹೆ ನೀಡಿದರು. ಪಂಜಾಬಿನಲ್ಲಿ ಅತ್ಯಾಚಾರದ ಬೆದರಿಕೆಗೆ ಒಳಗಾದ ಹುಡುಗಿಯರಿಗೆ "ನಿಮ್ಮ ನಾಲಗೆಯನ್ನು ಕಚ್ಚಿಕೊಳ್ಳಿ ಮತ್ತು ಸಾಯುವವರೆಗೆ ಉಸಿರನ್ನು ಬಿಗಿ ಹಿಡಿಯಿರಿ" ಎನ್ನುವ ಹಿತವಚನ ಕೊಟ್ಟರು. ಇದಕ್ಕೂ ಆತ್ಮಹತ್ಯೆಗೂ ಏನು ವ್ಯತ್ಯಾಸವಿದೆ. ಇದು ಮಾಡಲರಿಯದವನ ಪ್ರಲಾಪವೇ ಹೊರತು ಯಾವ ಆದರ್ಶವೂ ಅಲ್ಲ!