ಪುಟಗಳು

ಸೋಮವಾರ, ಸೆಪ್ಟೆಂಬರ್ 19, 2016

ಜಗತ್ತಿನ ಸತ್ಯ

ರಾಮ, ಕೃಷ್ಣರು ಮಣ್ಣಿನಲ್ಲಿ ಆಡುತ್ತಿದ್ದರು.
ಮಣ್ಣನ್ನೇ ಸೃಷ್ಟಿಸಿದವನದ್ದು ಮಣ್ಣನ್ನೇ ಹೊತ್ತುಕೊಂಡಿರುವವನ ಜೊತೆ ಸೇರಿ ಮಣ್ಣಿನಲ್ಲೇ ಆಟ!
ಇಂದಿನ ಪೀಳಿಗೆಗೆ ಮಣ್ಣೆಂದರೇನೆಂದೇ ಗೊತ್ತಿಲ್ಲದ ಸ್ಥಿತಿ! ಇನ್ನು ಆಟವೆಲ್ಲಿಂದ ಬಂತು!
ಮಣ್ಣು ಶ್ಯಾಮನ ಬಾಯ ಸೇರಿತು.
ರಾಮ ಬಂದು ಅಮ್ಮನಲ್ಲಿ ದೂರಿದ. "ಅಮ್ಮಾ...ಕಣ್ಣ ಮಣ್ಣ ತಿಂದ".
ತಾಯಿ ಬಂದು ಗದರಿದಳು.
"ಇಲ್ಲಮ್ಮಾ...ಅಣ್ಣ ಸುಳ್ಳು ಹೇಳುತ್ತಿದ್ದಾನೆ"
"ಹೌದೇ ಸತ್ಯ ಏನೆಂದು ನಾನೇ ಕಾಣುತ್ತೇನೆ. ಎಲ್ಲಿ ಬಾಯಿ ತೆರೆ"
ಕೃಷ್ಣ ಬಾಯಿ ತೆರೆದ. ಅಷ್ಟೇ...ಯಶೋದೆಯ ತೆರೆದ ಬಾಯಿ ತೆರೆದಂತೆಯೇ ಇತ್ತು!
ಯಶೋದೆ ಕಂಡದ್ದೂ ಸತ್ಯವೇ...ಜಗತ್ತಿನ ಸತ್ಯ!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ