ಪುಟಗಳು

ಬುಧವಾರ, ಡಿಸೆಂಬರ್ 5, 2012

ಸುಪ್ತ ರಾಗ


ಮಧು ಮಧುರ ಈ ಮೈತ್ರಿ
ಸುಮಧುರವು ಶುಭ್ರರಾತ್ರಿ|
ಹೊರಟಿಹುದು ಪಂಚ ಶರಧಿ
ಶಶಿ ಮೂಡಿಹನು ಮನದಿ||

ಮುದ ನೀಡೋ ಶ್ವೇತ ಕುಮುದ
ತಿಳಿನೀರ ಶುಭ್ರ ಜಲದಿ|
ಜತೆ ಹಂಸ ಆಡುತಿರಲು
ಆ ಚಂದ್ರ ಹಾಸ ಮೂಡಿ||

ಬಾಗಿಹುದು ಆಮ್ರ ಫಲವು
ಪಿಸು ಮಾತು ಶುಕ ರವವು|
ಅನುರಣಿಪ ಮಂದ್ರ ರಾಗ
ಕಳೆದ್ಹೋಯ್ತು ಆ ವಿರಾಗ||

ಅನುದಿನವು ನಾಟ್ಯರಾಣಿ
ಕಡೆದಿರಲು ಚತುರ ಶಿಲ್ಪಿ|
ನಟವರನು ಹರಸುತಿರಲು
ನಾಚಿಹುದು ಗಿರಿ ಮಯೂರ||

ಹಠವಾದಿ ಮಂದ ಮಾರುತ
ಛಲದೊಳಿಹ ಗೋವಿಂದ ಸುತ|
ಜೋಡಿಯೊಳು ಮಿನುಗು ತಾರೆ
ಓ ಪ್ರಿಯೆ ನಾ ನಿನಗೆ ಅಭಾರೆ||

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ