ಅಂಬರ ತುಂಬಾ ಕಂಬನಿ ತುಂಬಿದೆ
ಕುಂಭಿನಿಗಿಳಿದಿದೆ|
ಬಿಸಿಲಿನ ಬೇಗೆಗೆ ಬಳಲಿದ ಭುವಿಯ
ಚುಂಬಿಸ ಹೊರಟಿದೆ||
ವರುಣನು ಚುಂಬಿಸೆ ಧರಣಿಯು ಪುಳಕಿತ
ತನುಮನ ಅರ್ಪಿಸಿ|
ವರ್ಷಧಾರೆಯ ಸ್ಪರ್ಷ ಸುಖವನು ಪಡೆಯುತ
ತರುಲತೆ ಹರುಷದಲಿ||
ಕಣ್ಮನ ಸೆಳೆಯುವ ಮಿಂಚಿನ ಕಾಂತಿಗೆ
ವಿದ್ಯುತ್ ಶಕ್ತಿಯು|
ಮೇಘ ರವಕೆ ಅದುರಿತು ಭುವಿಯು
ಚದುರಿತು ಮೆಲ್ಲನೆ||
ಹರಿಯುವ ಜಲಧಿಗೆ ಮಿಂಚದು ಸೋಕಲು
ಚಿನ್ನದ ಹೂರಣ|
ತುಂಬಿದ ನದಿ ತೊರೆ ಹಸಿರಿನ ವನಸಿರಿ
ಭೂಮಿಗೆ ಆಭರಣ||
ತುಂಬಿದ ನಂದಿನಿ ಚಂದದಿ ಹರಿದಳು
ಅಂಬುಧಿ ಸೇರಲು|
ವರುಣನು ತೆರಳಿದ ವಾರಿಧಿಯೆಡೆಗೆ ಕರುಣಿಸಿ ವರವನು||ಜಗಕೆ||
ಕುಂಭಿನಿಗಿಳಿದಿದೆ|
ಬಿಸಿಲಿನ ಬೇಗೆಗೆ ಬಳಲಿದ ಭುವಿಯ
ಚುಂಬಿಸ ಹೊರಟಿದೆ||
ವರುಣನು ಚುಂಬಿಸೆ ಧರಣಿಯು ಪುಳಕಿತ
ತನುಮನ ಅರ್ಪಿಸಿ|
ವರ್ಷಧಾರೆಯ ಸ್ಪರ್ಷ ಸುಖವನು ಪಡೆಯುತ
ತರುಲತೆ ಹರುಷದಲಿ||
ಕಣ್ಮನ ಸೆಳೆಯುವ ಮಿಂಚಿನ ಕಾಂತಿಗೆ
ವಿದ್ಯುತ್ ಶಕ್ತಿಯು|
ಮೇಘ ರವಕೆ ಅದುರಿತು ಭುವಿಯು
ಚದುರಿತು ಮೆಲ್ಲನೆ||
ಹರಿಯುವ ಜಲಧಿಗೆ ಮಿಂಚದು ಸೋಕಲು
ಚಿನ್ನದ ಹೂರಣ|
ತುಂಬಿದ ನದಿ ತೊರೆ ಹಸಿರಿನ ವನಸಿರಿ
ಭೂಮಿಗೆ ಆಭರಣ||
ತುಂಬಿದ ನಂದಿನಿ ಚಂದದಿ ಹರಿದಳು
ಅಂಬುಧಿ ಸೇರಲು|
ವರುಣನು ತೆರಳಿದ ವಾರಿಧಿಯೆಡೆಗೆ ಕರುಣಿಸಿ ವರವನು||ಜಗಕೆ||
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ