ಪುಟಗಳು

ಬುಧವಾರ, ಜನವರಿ 1, 2014

ಚಿನ್ನದ ನೀರು!

ಊರಿಗೆ ಹೋದಾಗಲೆಲ್ಲಾ ಹಸಿರ ಸಿರಿ ಕಂಡು ಕೆಲವು ಸಾಲುಗಳು ಹೊಳೆಯುತ್ತವೆ. ಆ ಹೊಳಪಿನಲ್ಲಿ ನಿಮ್ಮೆಲ್ಲರ ಮುಖ ಪುಸ್ತಕ(Facebook) ನೋಡುವ ಆಸೆ!

ಚಿನ್ನದ ನೀರು!

ಚಿನ್ನದ ಬಣ್ಣದ ಜಿಂಕೆಯ ಕಣ್ಣಿನ ಮಿಂಚದು ನೋಡಿದೆಯಾ |ಗೆಳತಿ|
ಹಚ್ಚನೆ ಹಸಿರಿನ ಸುಂದರ ವನಸಿರಿ ಸೊಬಗನು ಈಕ್ಷಿಸೆಯಾ||
ಶುಭ್ರ ಜಲದ ಸುಂದರ ಕೊಳವು ಮನವನು ಸೆಳೆಯುತಿರೆ|
ಪ್ರಾಂಜಲ ಮನಸ್ಸಿನ ನಿನ್ನಯ ಸನಿಹವು ಕೇಳಿಗೆ ಎಳಸುತಿದೆ||ಜಲ ಕೇಳಿಗೆ||

ಝುಳು ಝುಳು ಹರಿಯುವ ನೀರಿನ ಓಘಕೆ ಸಾಟಿಯಾಗೊ ಛಲವು|
ಇನಿಯನ ಕೂಗುವ ಹಕ್ಕಿಯ ರಾಗಕೆ ದನಿಯಾಗುವ ಒಲವು||
ಅಂಬಾ ಎನ್ನುತಾ ಓಡುವ ಕರುವಿನ ಆಟವೆನಿತು ಚಂದ|
ಕಂದ ಬಾರೆನ್ನುತಾ ತವಕಿಸೋ ತಾಯಿಯ ನೋಟವದುವೆ ಅಂದ||ತಾಯ||

ಕಾಮನ ಬಿಲ್ಲಿನ ಮೇಲಿನ ಮುಗಿಲೊಳು ಪವಡಿಸುವ ಆಸೆ|
ಶ್ಯಾಮಲ ವರ್ಣದ ಮೇಘದ ಗುಂಪೊಳು ವಿಹರಿಸುವ ಆಸೆ||
ಮೇಘದ ಮೇಲಿನ ಚಿನ್ನದ ನೀರಿಗೆ ಹೊನ್ನಿನ ಬಣ್ಣವಿದೆ|
ಸುಂದರ ಪ್ರಕೃತಿ ಬಚ್ಚಿಡೋ ಸಂಗತಿ ನಿನ್ನಯ ಕಣ್ಣಲಿದೆ||ಗೆಳತಿ||

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ