ವಿಶ್ವ ಸೃಷ್ಟಿ
ಇರುಳು ಕಳೆದು ಶಶಿಯು ಜಾರಿ ಬೆಳಕ ಸಿಂಚನ
ಸಪ್ತ ಅಶ್ವ ರಥದ ಮೇಲೆ ಸೂರ್ಯನಾಗಮನ|
ಇಳೆಗೆ ಬಿದ್ದ ಇಬ್ಬನಿ ಮೇಲೆ ರವಿಯ ಪ್ರತಿಫಲನ
ನಗುತಲಿರುವ ಸುಮದ ಸನಿಹ ಭ್ರಮರ ನರ್ತನ||
ಪುಟ್ಟ ಶುಕವು ಉಲಿಯುತಿಹುದು ತುಂಟ ನೋಟದಲಿ
ಕಂಠ ಸಡಿಲಿಸಿ ಪಿಕವು ಹಾಡಿದೆ ಶುದ್ಧ ರಾಗದಲಿ|
ನಾಟ್ಯ ಮಯೂರಿ ನಲಿಯುತಿಹಳು ಬಿಂಕ ತೋರುತಲಿ
ಮುಗ್ಧ ಮಲ್ಲಿಗೆ ಬಿರಿಯುತಿಹಳು ಸ್ನಿಗ್ಧ ಚೆಲುವಿನಲಿ||
ಅರಸುತ ಓಡುವ ನದಿಯ ಪಯಣ
ಹರಸುತ ನಿಂತಿಹ ಹಸಿರ ಕಾನನ|
ಅಚಲ ಗಿರಿಯ ಏಕ ದೃಷ್ಟಿ
ಅಚ್ಚರಿಯೆನಿಪ ವಿಶ್ವ ಸೃಷ್ಟಿ||
ಇರುಳು ಕಳೆದು ಶಶಿಯು ಜಾರಿ ಬೆಳಕ ಸಿಂಚನ
ಸಪ್ತ ಅಶ್ವ ರಥದ ಮೇಲೆ ಸೂರ್ಯನಾಗಮನ|
ಇಳೆಗೆ ಬಿದ್ದ ಇಬ್ಬನಿ ಮೇಲೆ ರವಿಯ ಪ್ರತಿಫಲನ
ನಗುತಲಿರುವ ಸುಮದ ಸನಿಹ ಭ್ರಮರ ನರ್ತನ||
ಪುಟ್ಟ ಶುಕವು ಉಲಿಯುತಿಹುದು ತುಂಟ ನೋಟದಲಿ
ಕಂಠ ಸಡಿಲಿಸಿ ಪಿಕವು ಹಾಡಿದೆ ಶುದ್ಧ ರಾಗದಲಿ|
ನಾಟ್ಯ ಮಯೂರಿ ನಲಿಯುತಿಹಳು ಬಿಂಕ ತೋರುತಲಿ
ಮುಗ್ಧ ಮಲ್ಲಿಗೆ ಬಿರಿಯುತಿಹಳು ಸ್ನಿಗ್ಧ ಚೆಲುವಿನಲಿ||
ಅರಸುತ ಓಡುವ ನದಿಯ ಪಯಣ
ಹರಸುತ ನಿಂತಿಹ ಹಸಿರ ಕಾನನ|
ಅಚಲ ಗಿರಿಯ ಏಕ ದೃಷ್ಟಿ
ಅಚ್ಚರಿಯೆನಿಪ ವಿಶ್ವ ಸೃಷ್ಟಿ||
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ