ಪುಟಗಳು

ಬುಧವಾರ, ಜನವರಿ 30, 2013

ಅದು ಕೊಲೆಯಲ್ಲ, ವಧೆ! -೧

ಅವ ನಮ್ಮವ ಅಂತ ಎದೆ ತಟ್ಟಿ ಹೇಳಿಕೊಳ್ಳುತ್ತೇನೆ!
ಶ್ರೀಯುತ ನಾಥೂರಾಮ ಗೋಡ್ಸೆ!

                         ಸಾವಿರಾರು ಮುಸ್ಲಿಂ ಗೂಂಡಾಗಳು ಲಕ್ಷಾಂತರ ಮಾನಿನಿಯರ ಮಾನಹರಣ ಮಾಡುತ್ತಿದ್ದಾಗ 'ಅದು ಅವರ ಲೈಂಗಿಕ ತೃಷೆ ತೀರಿಸಿಕೊಳ್ಳಲು' ಎಂದು ಬೇಜವಾಬ್ದಾರಿ ಹೇಳಿಕೆ ನೀಡುತ್ತಾ, ಬಂಗಾಳದ ಮುಸ್ಲಿಂ ನವಾಬ ಸುರ್ಹಾವರ್ದಿಯ ತೊಡೆ ನೇವರಿಸುತ್ತ ಕೂತಿದ್ದ 'ಸ್ವಯಂಘೋಷಿತ' ನಾಯಕನನ್ನು ಸಂಹರಿಸಿದ್ದು ತಪ್ಪೇ?
ಅದು ಕೊಲೆಯಲ್ಲ ವಧೆ!

                           ತನ್ನ ಮಕ್ಕಳನ್ನು ಸಲಹಿದ ಸ್ವಾಮಿ ಶೃಧ್ಧಾನಂದರನ್ನು ಕೊಂದವ ಮುಸ್ಲಿಮ ಎನ್ನುವ ಕಾರಣಕ್ಕೆ ಸೋದರ ಎಂದು ಕರೆದು ಸಾರ್ವಜನಿಕವಾಗಿ ಅಪ್ಪಿಕೊಂಡ ರಣಹೇಡಿಯನ್ನು ಮತ್ತೇನು ಮಾಡಬೇಕಿತ್ತು?
ಅನುಯಾಯಿಗಳಿಗೆ ಸರಳತೆ ಭೋದಿಸಿ ತಾನು ಆ ಕಾಲಕ್ಕೆ ದುಬಾರಿಯಾಗಿದ್ದ ಶೇಂಗಾ, ಆಡಿನ ಹಾಲನ್ನು ಬಯಸುತ್ತಿದ್ದ ಗೋಮುಖವ್ಯಾಘ್ರನಿಗೆ ಅದೇ ಸರಿಯಾದ ಆದರೆ ತಡವಾದ ಶಿಕ್ಷೆಯಲ್ಲವೆ?
ಸಾಧ್ವಿ ಹೆಂಡತಿ ಇದ್ದಾಗ ತನ್ನ ೫೧ರ ಪ್ರಾಯದಲ್ಲಿ ಟಾಗೋರರ ಸೋದರ ಸೊಸೆ ಸ್ವರೂಪರಾಣಿಯನ್ನು ಬಯಸಿ ಹೆಂಡತಿಗೆ ವಿಚ್ಛೇದನ ನೀಡಲು ಸಿದ್ಧವಾಗಿದ್ದ ಪಾಖಂಡಿಗೇನು ಪೂಜೆ ಮಾಡಬೇಕಿತ್ತೆ?
ಸುಭಾಷರನ್ನು ಧಿಕ್ಕರಿಸಿದ್ದ, ಸಾವರ್ಕರರ ಬಿಡುಗಡೆಗೆ ಸಹಿ ಹಾಕಲು ನಿರಾಕರಿಸಿದ್ದ, ಭಗತ್ ಸಿಂಗ್ ಬಿಡುಗಡೆಗೆ ಪ್ರಯತ್ನ ಮಾಡೆನು ಅಂದಿದ್ದವನಿಗೆ ದೇಶದ್ರೋಹಿ ಅನ್ನದೆ ಮತ್ತೇನನ್ನಬೇಕು?
ಒಂದು ಕಾಲದಲ್ಲಿ ಸಾವರ್ಕರ್ ಭಾಷಣ ಕೇಳಲು ಆಫ್ರಿಕಾದಿಂದ ಇಂಗ್ಲೆಂಡಿಗೆ ಓಡೋಡಿಹೋಗಿದ್ದ ವ್ಯಕ್ತಿ ಮುಂದೊಂದು ದಿನ ಸಾವರ್ಕರ್ ಯಾರು ಎಂದುಕೇಳುತ್ತಾನೆಂದರೆ ಆತ ವಿಶ್ವಾಸಘಾತುಕನಲ್ಲವೆ?

ಗಾಂಧಿಯ ಬ್ರಹ್ಮಚರ್ಯ:
                        ದಿನ ನಿತ್ಯ ತನ್ನ ಹರೆಯದ ಮೊಮ್ಮಗಳು ಮನು ಜೊತೆ ಹಾಸಿಗೆ ಹಂಚಿಕೊಳ್ಳುತ್ತಿದ್ದ ಗಾಂಧಿ ಯುವತಿಯರಿಂದ ಅಂಗಮರ್ಧನ ಸೇವೆ ಮಾಡಿಕೊಳ್ಳುತ್ತಿದ್ದ. ಮಾತ್ರವಲ್ಲ ಮಹಿಳೆಯರ ಎದುರೇ ನಗ್ನನಾಗಿ ಸ್ನಾನ ಮಾಡುತ್ತಿದ್ದ.
" ಪ್ರಾರ್ಥನೆ ಸಮಯದಲ್ಲಿ ನಾವಿಬ್ಬರೂ ಪರಸ್ಪರರ ಹಿತೋಷ್ಣದಲ್ಲಿ ಆರಾಮವಾಗಿ ನಿದ್ರಿಸುತ್ತಿದ್ದೆವು" -ಮನು(ಫ್ರೀಡಮ್ ಎಟ್ ಮಿಡ್ ನೈಟ್, ಪುಟ ೬೫-೬೭, ಲ್ಯಾರಿ ಕಾಲಿನ್ಸ್ ಮತ್ತು ಡೊಮಿನಿಕ್ ಲ್ಯಾಪಿಯೆರೆ)
ಇದು ಕಾಂಗ್ರೆಸ್ಸಿಗರಿಗೆ ನುಂಗಲಾರದ ತುತ್ತಾಗಿತ್ತು. ಮುಂದೆ ಗಾಂಧಿ ಬಿಹಾರಕ್ಕೆ ಹೊರಟಾಗ ಮನು ಕಾಂಗ್ರೆಸ್ಸಿಗರ ಒತ್ತಾಯದಿಂದ ಹಿಂದುಳಿದಳು. ಗಾಂಧಿ ದುಃಖಿತನಾದ.
ವಿನ್ ಸ್ಟನ್ ಚರ್ಚಿಲ್ "ಅರೆನಗ್ನ ಫಕೀರ" ಎಂದು ಹೇಳಿದಾಗ ಗಾಂಧಿ ಎರಡೂ ಆಗಲು ಬಯಸುತ್ತೇನೆ ಎಂದಿದ್ದ.
ತನ್ನನ್ನುಸರಿಸುವವರು ಕೂಡಾ ತಾನು ಮಾಡಿದಂತೆ ಮಾಡುತ್ತಾರೆ ಎಂದು ಗೊತ್ತಿದ್ದೂ ಗಾಂಧಿ ಹಾಗೆ ಮಾಡಿದನೆಂದರೆ ಅವನಂತಹ ದುರಾತ್ಮ ಇನ್ನಾರು?
ಅವನಿಗೆ ಮಹಾಭಾರತದ ಈ ಶ್ಲೋಕ ಯಾಕೆ ಅರ್ಥವಾಗಲಿಲ್ಲ?
 "ನಜಾತು ಕಾಮ ಕಾಮಾನಾಮ್ ಉಪಭೋಗೇನಾ ಸಮ್ಮತಿ
ಹವಿಷಾ ಕೃಷ್ಣ ವೃತಮೇನಾ ಭೂಯಾ ಏವಾಭಿ ವರ್ಧತೇ||"

                       ಸಭೆಗಳಿಗೆ ಬರುತ್ತಿದ್ದ ಸ್ತ್ರೀಯರು ಧರಿಸುತ್ತಿದ್ದ ಆಭರಣಗಳನ್ನು ಒತ್ತಾಯ ಪೂರ್ವಕವಾಗಿ ಪಡೆದುಕೊಳ್ಳುತ್ತಿದ್ದ ಗಾಂಧಿ ಕೆಲವು ಬಾರಿ ತನ್ನ ಸಹಿಗಾಗಿ ಕೂಡಾ ಹಣ ಪಡೆಯುತ್ತಿದ್ದ. ಗಾಂಧಿ ಮಗ ದೇವದಾಸ್ " ೫ ರೂಪಾಯಿಗೂ ಗಾಂಧಿ ಸಹಿ ಮಾಡುತ್ತಿದ್ದರು." ಎಂದಿದ್ದಾರೆ.(ದಿ ಲೈಫ್ ಆಫ್ ಮಹಾತ್ಮ ಗಾಂಧಿ: ಲೂಯಿಸ್ ಫಿಷರ್). ಮಕ್ಕಳಿಂದಲೂ ಆಭರಣಗಳನ್ನೂ ಒತ್ತಾಯ ಪೂರ್ವಕವಾಗಿ ತೆಗೆದು ಕೊಳ್ಳುತ್ತಿದ್ದ ಗಾಂಧಿ ಆ ಆಭರಣಗಳನ್ನು ಮಾರಾಟ ಮಾಡುತ್ತಿದ್ದ. ಕೆಲವು ಬಾರಿ ಯಾರು ಕೊಟ್ಟರೋ ಅವರಿಗೇ ಅದೇ ವಸ್ತುವನ್ನು ಮಾರಾಟ ಮಾಡಿದ್ದ ಈ ಮಹಾತ್ಮ!

                      ಗಾಂಧಿ ವಿದೇಶಿ ವಸ್ತ್ರಗಳನ್ನು ಬಹಿಷ್ಕರಿಸಿದ್ದ ಎನ್ನುವ ಹಿಂದೂಗಳು ಒಂದು ಗಮನಿಸಬೇಕು- ೧೯೦೫ರಲ್ಲೇ ತಿಲಕರ ನೇತೃತ್ವದಲ್ಲಿ ಸಾವರ್ಕರರ ಸಾರಥ್ಯದಲ್ಲಿ ವಿದೇಶಿ ವಸ್ತುಗಳು ಬೆಂಕಿಗಾಹುತಿಯಾಗಿದ್ದವು. ಸತ್ಯಾಗ್ರಹ ಎಂಬುದು ಗಾಂಧಿ ಶುರು ಮಾಡಿದ್ದಲ್ಲ. ಅಂಡಮಾನಿನಲ್ಲಿ ಕರಿನೀರ ಶಿಕ್ಷೆ ಅನುಭವಿಸುತ್ತಿದ್ದ ಎಷ್ಟೋ ರಾಜಕೀಯ ಕೈದಿಗಳು ಗಾಂಧಿಗೂ ಮುಂಚೆಯೇ ಅದನ್ನು ಮಾಡಿದ್ದರು.

                            ಖಿಲಾಪತ್ ಆಂದೋಲನದ ಮುಖ್ಯ ಉದ್ದೇಶ ೧)ಖಿಲಾಫತ್ ಅನ್ನು ರಕ್ಷಿಸುವುದು ೨)ತುರ್ಕಿ ಸಾಮ್ರಾಜ್ಯದ ಸಮಗ್ರತೆ ಘೋಷಿಸುವುದಾಗಿತ್ತು. ಇಂತಹ ಆಂದೋಲನಕ್ಕೆ ಬೆಂಬಲ ನೀಡಿದ ಗಾಂಧಿ ಶಿವಾಜಿ, ರಾಣಾ ಪ್ರತಾಪ್, ಸಾವರ್ಕರರನ್ನು ಹಾದಿ ತಪ್ಪಿದ ವಿಕೃತ ದೇಶಭಕ್ತರು ಎಂದು ಕರೆದ. ವಂದೇ ಮಾತರಂ ವಿಭಜನೆಯಾಯಿತು. ರಾಮ ಭಜನೆ ಅಲ್ಲಾಹಮಯವಾಯಿತು.
ಭಾರತ್ ಮಾತಾ ಕೀ ಜೈ ಬದಲು ಅಲ್ಲಾಹೋ ಅಕ್ಬರ್ ಎನ್ನಿ ಎಂದು ತನ್ನ ಅನುಯಾಯಿಗಳಿಗೆ ಬೋಧಿಸಿದ. ಕೇರಳದಲ್ಲಿ ಮೋಪಳಾಗಳು ಲಕ್ಷಾಂತರ ಹಿಂದುಗಳ ಮಾರಣ ಹೋಮ ಮಾಡಿದರು, ಸ್ತ್ರೀಯರ ಅತ್ಯಾಚಾರ, ಮಕ್ಕಳ ಕಗ್ಗೊಲೆ, ಮಹಿಳೆಯರ ಗರ್ಭಛೇದನ ಮತ್ತು ಅತ್ಯಾಚಾರ, ದೇಗುಲಗಳ ನಾಶ, ಮತಾಂತರ, ಮನೆಗಳಿಗೆ ಬೆಂಕಿ ಹಚ್ಚುವಿಕೆ, ಲೂಟಿ, ಧ್ವಂಸ ಕಾರ್ಯ ನಡೆದವು. ಗಾಂಧಿ ಸತ್ತವರು ಕೇವಲ ನಾಲ್ಕೇ ಮಂದಿ ಎಂದು ಇಡೀ ದೇಶದಾದ್ಯಂತ ಸುದ್ದಿ ಹಬ್ಬಿಸಿದ. ಮಾತ್ರವಲ್ಲ " ಧರ್ಮಕ್ಕಾಗಿ ಹೋರಾಟ ನಡೆಸಿದ ಧೈವಭೀರು ಮೋಪ್ಲಾಗಳಿಗೆ ಹಾರ್ದಿಕ ಅಭಿನಂದನೆಗಳು" ಎಂದು ಸಾರ್ವಜನಿಕವಾಗಿ ಘೋಷಿಸಿದ.

                              ಧ್ವಜ ಸಮಿತಿ ನಿರ್ಣಯಿಸಿದ್ದ ಕೇಸರಿ ಧ್ವಜವನ್ನು ತಿರಸ್ಕರಿಸಿದ. ಕೇಸರಿ ಬಿಳಿ ಹಸಿರುಗಳೊಂದಿಗೆ ಮಸುಕಾಯಿತು. ಸುದರ್ಶನದ ಬದಲು ಅಶೋಕ ಚಕ್ರವನ್ನು ಶಿಫಾರಸು ಮಾಡಿದ. ನಮ್ಮ ದೇಶದ ಧ್ವಜದ ಜೊತೆ ಯೂನಿಯನ್ ಜಾಕ್ ಧ್ವಜ ಕೂಡಾ ಇರಲಿ ಎಂದು ಕೂಗಾಡಿದ. ಸಂಸ್ಕೃತವನ್ನು ನಿರಾಕರಿಸಿದ. ಹಿಂದಿ ಮತ್ತು ಉರ್ದುವಿನ ಮಿಶ್ರ ತಳಿ ಹಿಂದೂಸ್ತಾನಿ ಎಂಬ ಭಾಷೆಯನ್ನು ರಾಷ್ಟ್ರೀಯ ಭಾಷೆಯನ್ನಾಗಿಸಿ ಎಂದು ಒತ್ತಾಯಿಸಿದ. ಅದು ಮಾರುವೇಶದಲ್ಲಿ ಉರ್ದುವನ್ನು ತರುವ ಯತ್ನ!

                     ಗೋಹತ್ಯೆಗೆ ಬೆಂಬಲ ನೀಡಿದ್ದ ಗಾಂಧಿ " ಒಂದು ವೇಳೆ ಹಿಂದೂಗಳು ಗೋಹತ್ಯೆ ಮಾಡಿದ ಮುಸ್ಲಿಮನ ಜೊತೆ ಜಗಳವಾಡಿದರೆ ಪಾಪ ಮಾಡಿದಂತಾಗುತ್ತದೆ." ಎಂದ. ರಾಮ ಕೃಷ್ಣರಿಗಿಂತ ನನಗೆ ಅಬೂಬಕರ್ ಮತ್ತು ಉಮರ್ ಶ್ರೇಷ್ಠರು ಎಂದು ಘೋಷಿಸಿದ. ದೇಗುಲಗಳಲ್ಲಿ ಕುರಾನ್ ಪಠಣ ಆರಂಭಿಸಿದ. ಶಿವಾಜಿಯ ಚರಿತೆಯಾದ ಭೂಷಣನ ಕೃತಿ "ಶಿವ ಬಾವನಿ"ಯ ಮೇಲೆ ನಿಷೇಧ ಹೇರಿದ. ಮಾತ್ರವಲ್ಲ ಶಿವಾಜಿಯ ಇತಿಹಾಸ ನೆನಪಿಸಿಕೊಳ್ಳದಂತೆ ಜನತೆಗೆ ಕರೆ ನೀಡಿದ. ಮಸೀದಿ ಎದುರು ಭಾಜಾಬಜಂತ್ರಿ ಇರುವುದನ್ನು ಕೂಡಾ ನಿಷೇಧಿಸಿದ. ತನ್ನ ಬೆಂಬಲಿಗರಿಗೆ ನಮಸ್ತೆ ಬದಲು ಸಲಾಮ್ ಹೇಳಿ ಎಂದು ಗೋಗರೆದ.

                           ೧೯೪೮ರ ಜನವರಿ ೧೩ರಂದು ಆಮರಣಾಂತ ಉಪವಾಸ ಆರಂಭಿಸಿದ ಗಾಂಧಿಯ ಷರತ್ತುಗಳಲ್ಲಿ ದೆಹಲಿಯಲ್ಲಿ ಹಿಂದೂ ನಿರಾಶ್ರಿತರು ಆಶ್ರಯಕ್ಕೋಸ್ಕರ ವಶ ಪಡಿಸಿಕೊಂಡ ಮಸೀದಿಗಳನ್ನು ಕೂಡಲೇ ತೆರವು ಮಾಡಬೇಕು ಎಂಬ ವಿಷಯವೂ ಸೇರಿತ್ತು. ಮಾತ್ರವಲ್ಲ ಅಂದೇ ವಾಯುವ್ಯ ಗಡಿ ಪ್ರಾಂತ್ಯದಿಂದ ಬಂದ ರೈಲಿನಲ್ಲಿ ಸಾವಿರಾರು ಸಂಖ್ಯೆಯ ಹಿಂದೂಗಳನ್ನು ಕತ್ತರಿಸಿ ಹಾಕಿದ್ದರು. ಗಾಂಧಿ ಅವರು ಅಹಿಂಸೆಯನ್ನು ಪಾಲಿಸಿದ ವೀರ ಯೋಧರು ಎಂದು ಹೇಳಿ ಆನಂದ ಪಟ್ಟ! ಮಾತ್ರವಲ್ಲ ಪಾಕಿಸ್ತಾನಕ್ಕೆ ೫೫ಕೋಟಿ ಕೊಡಬೇಕೆಂದು ಉಪವಾಸ ಕೂತ. ಅದೇ ಸಮಯಕ್ಕೆ ನವಖಾಲಿ ಮತ್ತು ತಿಪ್ರೇಹ್ ಎಂಬಲ್ಲಿ ಸುಮಾರು ೩೦ ಸಾವಿರ ಹಿಂದೂ ಮಹಿಳೆಯರ ಅತ್ಯಾಚಾರ ಮತ್ತು ಮತಾಂತರ ನಡೆಯಿತು. ಸುಮಾರು ೩ಲಕ್ಷ ಹಿಂದೂಗಳ ಕಗ್ಗೊಲೆಯಾಯಿತು. ಈ ನಿಮ್ಮ ಮಹಾತ್ಮ ಆ ಸಮಯದಲ್ಲಿ ಇಂತಹ ಅನಾಹುತಕ್ಕೆ ಆಜ್ಞೆ ಮಾಡಿದ ಬಂಗಾಳದ ನವಾಬ ಮತಾಂಧ ಸುಹ್ರಾವರ್ದಿಯ ಗೆಳೆತನ ಬೆಳೆಸಿ ಅವನ ತೊಡೆ ನೇವರಿಸುತ್ತಾ ಕುಳಿತಿದ್ದ. ಶೇಖ್ ಅಬ್ದುಲ್ಲಾನಿಗೆ ಕಾಶ್ಮೀರ ಕೊಟ್ಟು ಕಾಶ್ಮೀರದ ಮಹಾರಾಜ ಕಾಶಿಗೆ ಹೋಗಲಿ ಎಂದ. ಮುಸ್ಲಿಮ್ ತೃಪ್ತಿಗಾಗಿ ನವಖಾಲಿಯಲ್ಲಿ ಮನೆಗಳ ಮೇಲಿದ್ದ ತ್ರಿವರ್ಣ ಧ್ವಜವನ್ನು ತೆಗೆಸಿದ. ಪಂಜಾಬಿನಲ್ಲಿ ಅತ್ಯಾಚಾರಕ್ಕೊಳಗಾದ ಮಾನಿನಿಯರಿಗೆ ಗಾಂಧಿ " ಸಾಯುವವರೆಗೆ ನಿಮ್ಮ ನಾಲಗೆಯನ್ನು ಕಚ್ಚಿಕೊಳ್ಳಿ ಮತ್ತು ನಾಲಗೆಯನ್ನು ಬಿಗಿ ಹಿಡಿಯಿರಿ. " ಎಂದು ಹಿತವಚನ ನೀಡಿದ.

                        ಇದನ್ನೆಲ್ಲಾ ನೋಡಿದಾಗ ಈ ದುರಾತ್ಮ ಹಿಂದು ಹೌದೋ ಅಲ್ಲವೋ ಎನ್ನುವ ಸಂಶಯ ಬರುವುದಿಲ್ಲವೇ?
ಮಿತ್ರರೆ ಕರಿನೀರ ಶಿಕ್ಷೆಯೆಲ್ಲಿ? ಜೈಲು ಶಿಕ್ಷೆಯೆಲ್ಲಿ? ಜೈಲಿನಲ್ಲಿ ಮಂಚದ ಮೇಲೆ ಮಲಗುವುದಕ್ಕೂ ಗಾಣಕ್ಕೆ ಕಟ್ಟಿ,ಹುಳುಹುಪ್ಪಟೆಗಳಿಂದ ಕೂಡಿದ ಆಹಾರ ತಿನ್ನುತ್ತ ನರಕಯಾತನೆ ರಾಷ್ಟ್ರ ಭಕ್ತಿ ಪಸರಿಸುತ್ತ ಅನುಭವಿಸುವುದಕ್ಕೂ ಅಜಗಜಾಂತರ ವ್ಯತ್ಯಾಸವಿಲ್ಲವೆ?

ಅದು ಕೊಲೆಯಲ್ಲ, ವಧೆ!
ರಾಮ ರಾವಣನನ್ನು ವಧಿಸಿದಂತೆ, ಕೃಷ್ಣ ದುರುಳರ ಸಂಹಾರ ಮಾಡಿದಂತೆ...
ಸ್ವಹಿತಕ್ಕಾಗಿ ಕೊಂದರೆ ಅದು ಕೊಲೆ! ಸಮಾಜ ಹಿತಕ್ಕಾಗಿ ಕೊಂದರೆ ಅದು ವಧೆ!!!
ನೀನಹುದು ನಿಜ ಹುತಾತ್ಮ ಗೋಡ್ಸೆ.
ಆದ ಅನಾಹುತಕ್ಕೆ ಕ್ರೋಧಗೊಂಡು ಆಗಬಹುದಾದ ಅನಾಹುತಕ್ಕೆ ಮಂಗಳ ಹಾಡಿದ ನಿನಗೆ ಕೋಟಿ ಪ್ರಣಾಮ...
ಅದು ಸಾತ್ವಿಕ ಕೋಪ!
ಅದು ಹಿಂದುಗಳ ಹೃದಯ ಪಲ್ಲವಿ! ನಾಡಿಮಿಡಿತ!! ರಕ್ತದ ಕುದಿತ!!!
ಅದು ತಾಯಿ ಭಾರತಿಗರ್ಪಣೆ...ವಂದೇ ಮಾತರಂ...

ಇನ್ನಷ್ಟು ಮಾಹಿತಿಗಳೊಂದಿಗೆ....

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ