ಪುಟಗಳು

ಬುಧವಾರ, ಏಪ್ರಿಲ್ 23, 2014

ಶ್ರೀಚಕ್ರ

ಶ್ರೀಚಕ್ರ:

ಶ್ರೀಚಕ್ರ ಅತ್ಯಂತ ಮಹಿಮಾನ್ವಿತ ಚಕ್ರ. ಅನಂತ, ಅದ್ಭುತ ಸೃಷ್ಟಿಯ ದೈವೀ ತಂತ್ರದ ಚೌಕಟ್ಟು ಸೃಷ್ಟಿಯ ಜನನಿ ಶ್ರೀ ಲಲಿತೆಯ ಮೂರ್ತ ರೂಪದ ರೇಖಾಯಂತ್ರ. ಆದಿ ಶಂಕರಾಚಾರ್ಯರು ಉಗ್ರಶಕ್ತಿ ಸೋಪಾನವಾಗಿದ್ದ ಶ್ರೀಚಕ್ರವನ್ನು ಪರಿಷ್ಕರಿಸಿ ಮಂಗಳಕರ ಶಕ್ತಿದೇವಿಯ ಸಾತ್ವಿಕ ರೂಪವು ಉಗಮಿಸುವಂತೆ ಮಾಡಿದರು. ಕ್ರಮಬದ್ಧವಾಗಿ ರಚಿಸಿದ ಶ್ರೀಚಕ್ರದ ಮೇಲೆ ಲೇಸರ್ ಕಿರಣಗಳನ್ನು ಹಾಯಿಸಿದಾಗ ಶ್ರೀಲಲಿತಾ ದೇವಿಯ ಚಿತ್ರ ಗೋಚರಿಸಿದ್ದು ದಾಖಲಾಗಿದೆ. ಜೊತೆಗೆ ಶಬ್ಧವನ್ನು ದೃಶ್ಯರೂಪವಾಘಿ ಪರಿವರ್ತಿಸುವ ವಿಜ್ಞಾನ ಶಬ್ಧ ಹಾಗೂ ಕಂಪನಗಳ ಪ್ರಭಾವದ ಅರಿವು ಮೂಡಿಸುತ್ತಿದೆ. ಶ್ರೀಚಕ್ರದ ಮೇಲೆ ಇಟ್ಟ ದೃಷ್ಟಿ ನರಮಂಡಲದಲ್ಲಿ ಉಂಟಾಗುವ ಕಂಪನ ಇಇಜಿಯಲ್ಲಿ(ಎಲೆಕ್ಟ್ರೋ ಎನ್ ಕೆಫಲೋಗ್ರಾಫ್) ಆಲ್ಫಾ ಅಲೆ ಹೊರಡಿಸುತ್ತದೆ. ಧ್ಯಾನ ಸ್ಥಿತಿಯಲ್ಲೂ ಈ ಅಲೆ ನಿಧಾನಗತಿಯಲ್ಲಿ ಹೊರಹೊಮ್ಮುತ್ತದೆ. ಯಾವುದೇ ಇತರ ಚಕ್ರ ವೀಕ್ಷಿಸಿದಾಗ ಇಇಜಿ ಅಲೆಗಳಲ್ಲಿ ಬದಲಾವಣೆ ಕಂಡುಬರುವುದಿಲ್ಲ. ಶಕ್ತಿಯುತ ಅಣು-ಕ್ಷಣಗಳಿಂದಾದ ಅಲೆ ವಿದ್ಯುತ್ ಅಯಸ್ಕಾಂತ ಬಲಕಾರಕ-ಶಕ್ತಿ ಸಮಾಗಮಕ್ಕೆ ನಾಂದಿ. ಶ್ರೀಚಕ್ರದ ಮೂಲಕ ದಿವ್ಯ ಮಂತ್ರೋಚ್ಚಾರಗಳಿಂದಾದ ಶಬ್ಧ ಬ್ರಹ್ಮ ಶಕ್ತಿ ಇದನ್ನು ಸಾಧಿಸುತ್ತದೆಂದು ಭಾವಿಸಬಹುದು. ಒಂದು ದೃಷ್ಟಿಯಲ್ಲಿ ಆದಿ ಶಂಕರಾಚಾರ್ಯರನ್ನು "ಕಣ ಭೌತ ಶಾಸ್ತ್ರದ ಪಿತಾಮಹ" ಎನ್ನಬಹುದು. ಬೀಜಾಕ್ಷರಗಳ ಅಳವಡಿಕೆಯಿಂದ ಶ್ರೀಚಕ್ರದ ಪರಾಶಕ್ತಿಯ ಚಟುವಟಿಕೆಯನ್ನೇ ನಿಗ್ರಹಿಸಿದರು. ಶ್ರೀ ಸೌಂದರ್ಯ ಲಹರಿಯ ಕಮಲ ಶಕ್ತಿ ತುಂಬಿಸಿ ಕಣ ಭೌತ ಶಾಸ್ತ್ರಕ್ಕೆ ಸವಾಲು ನೀಡಿದ್ದಾರೆ. ಆಧುನಿಕ ವಿಜ್ಞಾನದ ದೇವಕಣ(god particle)ದ ಮೂಲ ಶ್ರೀ ಚಕ್ರದಲ್ಲೋ ಸೌಂದರ್ಯ ಲಹರಿಯ ಕಮಲದಲ್ಲೋ ಇರಬಹುದೇನೋ ಎನ್ನುವ ಗ್ರಹಿಕೆಗೆ ಇಂಬು ಕೊಟ್ಟಿದ್ದಾರೆ.

ಶ್ರೀಚಕ್ರ ನರ ಚಟುವಟಿಕೆಯ  ವೈಜ್ಞಾನಿಕ ವಿವರಣೆಗೂ ಪ್ರೇರಕ ಸೂತ್ರ. ಈ ಚಕ್ರದ ಚೌಕಟ್ಟು, ಜ್ಞಾನೇಂದ್ರಿಯ ಮಟ್ಟದ ಆಧುನಿಕ ನರಶಾಸ್ತ್ರ ವಿವರಣೆಗೆ ಹೋಲಿಕೆ ಇದೆ. ಬಲ ಮಿದುಳು, ದೃಷ್ಟಿ, ಶ್ರವಣಶಕ್ತಿ ಚೇತಕವೆಂದು ನಂಬಿದ್ದ ಋಷಿಗಳು ಮಾನವ ದೇಹ ಕಾರ್ಯಶೀಲತೆಯ ವಿಸ್ತಾರ ಜ್ಞಾನ ಪಡೆದಿದ್ದುದರಲ್ಲಿ ಆಶ್ಚರ್ಯವಿಲ್ಲ. ಜೊತೆಗೆ ಅವರು ಅದ್ವಿತೀಯ ಮನೋಗೋಚರ ಶಕ್ತಿ ಹೊಂಡಿದ್ದರು. ಈಜಿಪ್ಟ್ ದೇಶದ ಪಿರಮಿಡ್ ರಚನಾ ಶಾಸ್ತ್ರಕ್ಕೂ ಶ್ರೀಚಕ್ರದ ರೇಖಾಗಣಿತ ರಹಸ್ಯದ ಕೊಡುಗೆ ಇದೆ ಎನ್ನುವ ಅಭಿಪ್ರಾಯವೂ ಇದೆ. ಶ್ರೀಚಕ್ರದ ರಹಸ್ಯ ಭೇದಿಸಲು ರಷ್ಯಾದ ಮನಃಶರೀರಶಾಸ್ತ್ರದ ವಿಜ್ಞಾನಿಗಳು ಮಾಸ್ಕೋ ವಿಶ್ವವಿದ್ಯಾಲಯದಲ್ಲಿ ಸಂಶೋಧನೆಯಲ್ಲಿ ನಿರತರಾಗಿದ್ದಾರೆ. ಭಾರತದಲ್ಲಿ ವೇದಶಾಸ್ತ್ರ ವಿಜ್ಞಾನ ಹಾಗೂ ವೈದ್ಯವಿಜ್ಞಾನದ ಸಂಶೋಧನೆಗಳು ಸಂಯೋಜಿತ ರೀತಿಯಲ್ಲಿ ಸಾಗಬೇಕಾಗಿದೆ. ಇತ್ತೀಚಿನ ವರದಿಯೊಂದು ಶ್ರೀಚಕ್ರದ ಆರಾಧನೆ ಜೀವಕೋಶದಲ್ಲಿರುವ ಡಿ.ಎನ್.ಎಯನ್ನು ಕಾರ್ಯಚಟುವಟಿಕೆಯ ಪರಿಧಿಗೆ ಬರುವಂತೆ ಪ್ರಚೋದಿಸುತ್ತದೆ ಎಂದು ಹೇಳಿದೆ.
(ಡಾ. ಕಿರುಗಾವಲು ರಮೇಶ್ ಅವರ ಮಲ್ಹಾರದಲ್ಲಿನ ಲೇಖನದ ಆಯ್ದ ಭಾಗ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ