ಏನೂ ಮಾಡಲು ತೋಚುತ್ತಿಲ್ಲ, ಪದಗಳೂ ಹೊರಡುತ್ತಿಲ್ಲ. ಅದಕ್ಕಾಗಿಯೇ ಈ ಕವನವೂ ಬಡವಾಗಿದೆ. ಏನು ಮಾಡಲಿ ಮೋದಿ ಮಾಡಿದ ಮೋಡಿಯ ನೋಡಿ ಮಾತೇ ಹೊರಡುತ್ತಿಲ್ಲ. ಆದರೂ ಹಾಕುತ್ತಿದ್ದೇನೆ. ಇದು "ನಮೋ ಭಾರತ" ಎಂದು ಜಗವೇ ಕೊಂಡಾಡಲು ಸಹಕರಿಸಿದ ಎಲ್ಲಾ ಕಾರ್ಯಕರ್ತರಿಗೆ(ನಮೋ ಬ್ರಿಗೇಡ್, ರಾಸ್ವಸಂ, ವಿಹಿಂಪ, ಭಜರಂಗದಳ, ನಮೋ ಗ್ರೂಪ್, ನಮೋ ಬ್ರದರ್ಸ್,....ಅಲ್ಲದೇ ಸ್ವತಂತ್ರವಾಗಿಯೂ ಕೆಲಸ ಮಾಡಿದ) ಅರ್ಪಣೆ.
-------------------------------------------------------------------------------------------------------------------------
ಮತ್ತೆ ಅರಳಿಹುದು ಎಮ್ಮ ಕಮಲ ಪುಷ್ಪ
ತಾಯಿ ಭಾರತಿಯ ಕಂಗಳಲಿ ಆನಂದ ಭಾಷ್ಪ
ಕರವ ಮುಗಿದೆವು ಭಾರತೀಯರೇ
ನಮೋ ಎನ್ನಿರಿ ತಾಯ ಉಳಿಸಿರಿ
ನಮ್ಮ ಜಯವೇ ನಿಮ್ಮ ಜಯವು
ಭವ್ಯ ಭಾರತದ ಭವಿಷ್ಯದ ವಿಜಯವು
ಪ್ರೀತಿ ಮಾತಲಿ ಮನವ ಗೆದ್ದೆವು
ಸೋತು ಬಂದರು ನಮ್ಮ ಜೊತೆಯಲಿ
ಎಸೆದ ಶಿಲೆಯಲಿ ಕಲೆಯು ಅರಳಿತು
ನಮೋ ಮಂತ್ರವು ಮೋಡಿ ಮಾಡಿತು
ನಮೋ ಎನುತಲಿ ಹೃದಯ ಬೆಸೆಯಲು
ಬಿಂದು ಬಿಂದುವು ಸಿಂಧುವಾಯಿತು
ಮನವಿ ಸ್ವೀಕಾರ ಕನಸು ಸಾಕಾರ
ನಮೋ ಎನ್ನುತ ಮತದಾರ
ನಿರೀಕ್ಷೆ ಮೀರಿದ ವಿಜಯ ದೊರಕಲು
ಮಾತು ಹೊರಡದು ಮೌನ ಉಳಿಯದು
ರೋಮಾಂಚನ ಹೃದಯ ತುಂಬಿದೆ
ಏನ ಮಾಡಲಿ ಏನೂ ತೋಚದು
-------------------------------------------------------------------------------------------------------------------------
ಮತ್ತೆ ಅರಳಿಹುದು ಎಮ್ಮ ಕಮಲ ಪುಷ್ಪ
ತಾಯಿ ಭಾರತಿಯ ಕಂಗಳಲಿ ಆನಂದ ಭಾಷ್ಪ
ಕರವ ಮುಗಿದೆವು ಭಾರತೀಯರೇ
ನಮೋ ಎನ್ನಿರಿ ತಾಯ ಉಳಿಸಿರಿ
ನಮ್ಮ ಜಯವೇ ನಿಮ್ಮ ಜಯವು
ಭವ್ಯ ಭಾರತದ ಭವಿಷ್ಯದ ವಿಜಯವು
ಪ್ರೀತಿ ಮಾತಲಿ ಮನವ ಗೆದ್ದೆವು
ಸೋತು ಬಂದರು ನಮ್ಮ ಜೊತೆಯಲಿ
ಎಸೆದ ಶಿಲೆಯಲಿ ಕಲೆಯು ಅರಳಿತು
ನಮೋ ಮಂತ್ರವು ಮೋಡಿ ಮಾಡಿತು
ನಮೋ ಎನುತಲಿ ಹೃದಯ ಬೆಸೆಯಲು
ಬಿಂದು ಬಿಂದುವು ಸಿಂಧುವಾಯಿತು
ಮನವಿ ಸ್ವೀಕಾರ ಕನಸು ಸಾಕಾರ
ನಮೋ ಎನ್ನುತ ಮತದಾರ
ನಿರೀಕ್ಷೆ ಮೀರಿದ ವಿಜಯ ದೊರಕಲು
ಮಾತು ಹೊರಡದು ಮೌನ ಉಳಿಯದು
ರೋಮಾಂಚನ ಹೃದಯ ತುಂಬಿದೆ
ಏನ ಮಾಡಲಿ ಏನೂ ತೋಚದು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ