ಪುಟಗಳು

ಸೋಮವಾರ, ಆಗಸ್ಟ್ 27, 2012

ಹಿಂದುತ್ವ ನಿಂತ ನೀರಲ್ಲ ನಿಜ. ಆದರೆ ಹರಿಯುತ್ತಿರೋ ಕೊಳಚೆ ನೀರು ಕೂಡಾ ಆಗಬಾರದಲ್ವೇ.....

ಮೊನ್ನೆ ಮಂಗಳೂರಿನಲ್ಲಿ ನಡೆದ ಘಟನೆಯ ಬಳಿಕ ನಡೆದ ವಿಶ್ಲೇಷಣೆಗಳು ಮನಸ್ಸಿನ ಭಾವತರಂಗಗಳನ್ನೇ ಅಸ್ತವ್ಯಸ್ತ ಮಾಡಿಬಿಟ್ಟವು. ಎಲ್ಲವೂ ಏಕಮುಖ ವಿಶ್ಲೇಷಣೆ! ಬರೇ ಮಾಧ್ಯಮ ಹಾಗೂ ಪ್ರಚಾರಪ್ರಿಯ ಬುದ್ಧಿಜೀವಿಗಳಷ್ಟೇ ಆಗಿದ್ದರೆ ಹುಟ್ಟುಗುಣ ಅಂತ ಬಿಟ್ಟು ಬಿಡಬಹುದಿತ್ತು. ಆದರೆ...ಆದರೆ ಚಿಂತಕರು, ವಿಚಾರವಾದಿಗಳು, ಬಲಪಂಥೀಯರು, ಸನಾತನ ಸಂಸ್ಕೃತಿಯ ಪ್ರತಿಪಾದಕರು, ಯುವಜನಾಂಗದ "ಆದರ್ಶ"ರೂ ಅದೇ ರೀತಿ ವಿಶ್ಲೇಷಿಸಿದಾಗ ಎದೆ ತಲ್ಲಣಿಸಿತು. ಯಾಕೆ ಹೀಗೆ?
ಆ ಬರ್ತ್ ಡೇ ಬಾಯ್ ನನ್ನು ನೋಡಿದವರ್ಯಾರೂ ಅವ ಸಭ್ಯ ಎನ್ನಲಾರರು!ಆತ ಐದಾರು ಹುಡುಗಿಯರನ್ನು ಪ್ರೀತಿಸಿ, ಜಗಳವಾಡಿ, ಈಗ ಅವರೆಲ್ಲರನ್ನು ಪಾರ್ಟಿಗೆ ಆಹ್ವಾನಿಸುತ್ತಾನೆಂದರೆ ಅವನ ಉದ್ದೇಶ ಏನಿರಬಹುದು? ಬರ್ತ್ ಡೇ ಪಾರ್ಟಿಗೆ ಬೆಡ್ ರೂಮ್ ಯಾಕೆ ಬೇಕು?ಅರೆ ಬರೆ ಡ್ರೆಸ್ ಹಾಕಿಕೊಂಡು ಕುಡಿದು ಕುಣಿದು ತೂರಾಡುವ ಹುಡುಗಿಯರಲ್ಲಿ ಯಾವ ಸಂಸ್ಕೃತಿ ಇದೆ?
ಅವರು ಶ್ರೀಮಂತರ ಮಕ್ಕಳೆಂದು ಅಥವಾ ಪೋಲಿಸ್ ಅಧಿಕಾರಿಯ ಮಗಳಿದ್ದಳೆಂದು ಘಟನೆಗೆ ಆ ರೀತಿ ಪ್ರಚಾರ ಸಿಕ್ಕತೇ?ಒಂದು ವೇಳೆ ಅವರು ಬಡ ಹೆಣ್ಣುಮಕ್ಕಳಾಗಿದ್ದರೆ ಘಟನೆಗೆ ಇದೇ ರೀತಿ ಪ್ರಚಾರ ವಿಶ್ಲೇಷಣೆಗಳು ನಡೆಯುತ್ತಿದ್ದವೆ?
ದಕ್ಷಿಣ ಕನ್ನಡ, ಉಡುಪಿ, ಉತ್ತರಕನ್ನಡ ಜಿಲ್ಲೆಗಳಲ್ಲಿ ಪರವಾನಿಗೆ ಇಲ್ಲದ, ತೆರಿಗೆ ಕಟ್ಟದ 150 ಹೋಮ್ ಸ್ಟೇ ರೆಸಾರ್ಟ್ ಗಳಿವೆ. ಅವುಗಳಲ್ಲಿ ಸೆಕ್ಸ್ ಟೂರಿಸಂ, ಹುಡುಗಿಯರ ಮಾರಾಟದಂತಹ ದಂಧೆಗಳು ಅವ್ಯಾಹತವಾಗಿ ನಡೆಯುತ್ತಿವೆ. ಇದರ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ ನೀಡಿದರೂ ಸ್ಥಳೀಯರು ದೂರು ನೀಡಿದಾಗಲೂ ಪೋಲಿಸ್ ಇಲಾಖೆ ಯಾಕೆ ಕ್ರಮ ಕೈಗೊಳ್ಳಲಿಲ್ಲ? ಶ್ರೀಮಂತರ ಹೂಟವೆಂದೇ? ಅಥವಾ ಮತಾಂಧರ ಬೆದರಿಕೆಗೆ ಹೆದರಿಯೇ?
ಕೇಳಬೇಕಾದವರು ಕೇಳದಿದ್ದಾಗ ಹೇಳಬೇಕಾದವರು ಹೇಳದೆ ಉಳಿದಾಗ ರಾಜದಂಡ ವಿಫಲವಾದಾಗ ಸಮಾಜದ ಸ್ವಾಸ್ಥ್ಯ ಸಮಾಜವೇ ಕಾಪಾಡಿಕೊಳ್ಳ ಬೇಕಲ್ಲವೆ?ಸಾಮದಿಂದ ಹೇಳಿದಾಗ ಬುದ್ದಿ ಬರದ ತಂಗಿಗೆ ದಂಡಪ್ರಯೋಗ ಮಾಡಿದರೆ ತಪ್ಪೇನು?
ಅಲ್ಲಾ ಮುಸ್ಸಂಜೆ ಹೊತ್ತಲ್ಲಿ ಮನೆಯಲ್ಲಿ ದೀಪ ಉರಿಸೋ ಬದಲು ತುಂಡು ಬಟ್ಟೆ ಉಟ್ಟು ಕುಡಿದು ತೂರಾಡೋ ಹುಡುಗ ಹುಡುಗಿಯರಲ್ಲಿ ಹಿಂದುತ್ವದ ಯಾವ ಸಂಸ್ಕೃತಿ ಅಡಗಿದೆ?
ಹಿಂದುತ್ವ ಬೊನ್ಸಾಯ್ ಗಿಡ ಅಗಬಾರದು, ಆಗಲಾರದು ಅದು ವಿಶಾಲ ವಟವೃಕ್ಷ.ಹಾಗೆಂದು ಅದರ ಬೇರುಗಳನ್ನು ಕೀಳ ಹೊರಟರೆ ಹೇಗೆ? ಅದರ ಟೊಂಗೆ ಕಡಿದರೆ ಅದು ನೆರಳು ಕೊಡುವುದೆಂತು,ಪಕ್ಷಿಗಳು ಬದುಕುವುದೆಂತು?
ಹಿಂದುತ್ವ ನಿಂತ ನೀರಲ್ಲ ನಿಜ. ಆದರೆ ಹರಿಯುತ್ತಿರೋ ಕೊಳಚೆ ನೀರು ಕೂಡಾ ಆಗಬಾರದಲ್ವೇ?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ