ಪುಟಗಳು

ಮಂಗಳವಾರ, ಡಿಸೆಂಬರ್ 17, 2013

ಚಾಯ್ ವಾಲಾ

ಮೊನ್ನೆಯಷ್ಟೇ ನಾವು ಚಾಯ್ ವಾಲಾನಿಂದ ಮಲ್ಲೇಶ್ವರಂ ಆಟದ ಮೈದಾನದಲ್ಲಿ "ನಮೋ ಭಾರತ್" ಉದ್ಘಾಟನೆ ಮಾಡಿದಾಗ ಸಿಕ್ಕಿದ ಅಭೂತಪೂರ್ವ ಪ್ರತಿಕ್ರಿಯೆ ಕಂಡು ಬೆರಗಾಗಿದ್ದೆ. ಈಗಷ್ಟೇ ವಿಶೇಷ ಘಟನೆ ನಡೆಯಿತು. ಪ್ರತಿದಿನ ನಾವು ಚಹಾ ಕುಡಿಯಲು ಹೋಗುತ್ತಿದ್ದ ಚಹಾದಂಗಡಿಯಲ್ಲಿ ಚಹಾ ಕುಡಿಯುತ್ತಿದ್ದಾಗ ಚಾಯ್ ವಾಲಾ ಯಾರಿಗೋ "ನರೇಂದ್ರ ಮೋದಿ ಒಳ್ಳೆಯ ಜನ. ಅವರೇ ಈ ಸಲ ಪ್ರಧಾನಿಯಾಗಬೇಕ್ರಿ" ಎಂದು ತನ್ನ ತೆಲುಗು ಮಿಶ್ರಿತ ಕನ್ನಡದಲ್ಲಿ ಅಂದಾಗ " ನರೇಂದ್ರ ಮೋದಿ" ಎನ್ನುವ ಪದ ಕೇಳುತ್ತಿದ್ದಂತೆ ನನ್ನ ಕಿವಿಗಳೆರಡು ನೆಟ್ಟಗಾದವು. ಅವನಲ್ಲಿ ಮಾತಿಗೆ ತೊಡಗುತ್ತಿದ್ದಂತೆ ಆತ ಬೆಲೆಯೇರಿಕೆ, ಎಷ್ಟೇ ಕಷ್ಟ ಪಟ್ಟರೂ ಹೆಚ್ಚಾಗದ ಸಂಪಾದನೆ, ಉದ್ಯೋಗದ ಬದಲಾವಣೆ ಇವೆಲ್ಲವನ್ನೂ ಗುಜರಾತಿನ ಜನರೊಡನೆ ಸಮೀಕರಿಸಿಕೊಂಡು ಹೇಳಿದಾಗ ನನಗೆ ಆಶ್ಚರ್ಯ...!

ಹೌದು... ಮಾಧ್ಯಮಗಳು ನರೇಂದ್ರ ಮೋದಿಯವರ ಬಗ್ಗೆ ತಿಳಿಸದಿದ್ದರೇನು, ಕಾಂಗಿಗಳು, ಪಾಪಿ ಆಪ್ ಗಳು, ಕಮ್ಮಿನಿಷ್ಟರು, ಬುದ್ದಿ(ಹೀನ) ಜೀವಿಗಳು ಅಪಪ್ರಚಾರ ಮಾಡಿದರೇನು ನರೇಂದ್ರ ಮೋದಿ ಜನಸಾಮಾನ್ಯನ ಹೃದಯದಲ್ಲಿದ್ಡಾರೆ. ಅಂತಹ ಅಭಿಮಾನವನ್ನು ಮತವಾಗಿ ಪರಿವರ್ತಿಸಿ ನಮೋರನ್ನು ಪ್ರಧಾನಿ ಮಾಡುವ ಮೂಲಕ ಈ ದೇಶದ ತಮವನ್ನು ದೂರೀಕರಿಸುವ ಜವಾಬ್ದಾರಿ ಈ ದೇಶವನ್ನು ಪ್ರೀತಿಸುವ ಪ್ರತಿಯೊಬ್ಬರ ಮೇಲಿದೆ

ನಮೋ ನಮೋ ನಮೋ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ