ಪುಟಗಳು

ಶುಕ್ರವಾರ, ಜೂನ್ 29, 2012

ನಾನು ಯಾರು?

                             ನಾನು ಯಾರು?

ಯೋಚನೆ, ಶಬ್ಧ, ಮತ್ತು ಕಾರ್ಯದಲ್ಲಿ ನಾನು ಹಿಂದೂ
ನನ್ನ ದೇಹದ ಅಣುಅಣುವೂ ಹಿಂದೂ||

ನಾನು ಶಂಕರನ ಕೋಪಾಗ್ನಿಯ ಶಿಖೆ
ಭಯವನ್ನು ಉತ್ಪಾತ ಮಾಡುವ, ವಿಶ್ವವನ್ನು ಬೂದಿಯಾಗಿಸುವ,
ಸರ್ವವನ್ನು ನಾಶ ಮಾಡುವ ಡಮರುವಿನ
ಮರಣ ಮೃದಂಗದ ಸದ್ದು ನಾನು||

ನಾನು ಸಮರ ಕಾಳಿಯ ಹಿಂಗದ ದಾಹ
ನಾನು ರೌದ್ರ ಚಂಡಿಯ ತೀಕ್ಷ್ಣ, ಆವೇಶದ ಅಗ್ನಿಯ ನಗು
ನಾನು ನರಕದ ದೇವರಾದ, ಲಯನೃತ್ಯ ಆನಂದಿಸುವ
ಯಮನ ಪ್ರಚಂಡ ಮಾರಕ ಘರ್ಜನೆ||

ಅಂತರಾಗ್ನಿ ಮೂಲಕ ನಾನು ಜಗತ್ತಿಗೆ ಕಿಚ್ಚು ಹಚ್ಚಿದಾಗ
ನೀನು ದಿಗ್ಭ್ರಾಂತಿಗೊಂಡು ನೋಡುವುದೇಕೆ ಹೇಳು
ಅದು ಭೂಮಿ, ನೀರು ಮತ್ತು ಆಗಸದ
ಎಲ್ಲ ಜೀವಂತ ಅಸ್ತಿತ್ವದ ಸುತ್ತ ದಳ್ಳುರಿ ಪಸರಿಸುತ್ತದೆ||

ಅಂತರಂಗದ ಕಲರವ

                
ಭಾವನೆಗಳ ತಾಕಲಾಟದೊಳ್ ನಲಿವ ಮನಸು
ಆಶಾವಾದದ ತಲ್ಪದೊಳ್ ಸುರಿವ ಕನಸು||
ಅವಿರತ ಸಾಧನಾ ಶಿಖರವನ್ನೇರುವ ಆಸೆ
ಪರಿಶ್ರಮದ ಬವಣೆಗೆ ತಾತ್ಸಾರದ ಮೂಸೆ||೧||

ಧುತ್ತನೆರಗಿದ್ದು ಘಾತ,ಆಘಾತ
ಶ್ರಮಕೆ ಸಶ್ರಮ ಶಿಕ್ಷೆ, ಮನೋವಿಕಲ್ಪ||
ಆಸೆಗಳ ಲೋಕದೊಳ್ ನಿರಾಶೆಯ ಕಾರ್ಮೋಡ
ಧಿಕ್ಕಾರ ಆ ನಿರ್ಭಾವುಕ ಲೋಭದ ಸ್ನೇಹಕೆ||೨||

ಘೋರತಮದೊಳ್ ಅದೊಂದು ಮಿಂಚು
ವಿಷವಾಗುತಿಹ ಮನಸಿಗೆ ಅಮೃತದ ಸಿಂಚನ||
ಮುಳುಗದಿರು ಮಾನವ ಅದು ಘೋರ ಸಂಚು
ಚಿತ್ತವನು ಏಕದಲಿಟ್ಟು ನಡೆಸು ಚಿಂತನ ಮಂಥನ||೩||

ಬುಧವಾರ, ಜೂನ್ 20, 2012

ಹೌದು ಅದ ಕಂಡರೆ ಕರುಳು ಕಿವುಚುವ ವೇದನೆ...!

ಹೌದು ಅದ ಕಂಡರೆ ಕರುಳು ಕಿವುಚುವ ವೇದನೆ...!
ಸಾಧ್ವಿ ಪ್ರಜ್ಞಾಸಿಂಗ್ ಠಾಕೂರ್॥
ಸ್ತ್ರೀಯರಿಗೆ ಗೌರವ ಕೊಡುವ, ಪೂಜ್ಯ ಭಾವದಿಂದ ನೋಡುವ ಈ ದೇಶದಲ್ಲಿ ಆ ಸಾಧ್ವಿಶಿರೋಮಣಿಯನ್ನು ಅದೆಷ್ಟು ಹೀನಾಯವಾಗಿ ನಡೆಸಿಕೊಂಡರು!
ಹೌದು, ಒಂದಲ್ಲ ಬರೋಬ್ಬರಿ ಮೂರು ಬಾರಿ ಬ್ರೈನ್ ಮ್ಯಾಪಿಂಗ್!
ತಲೆಕೆಳಕಾಗಿ ನೇತಾಡಿಸಿ ಚಿತ್ರಹಿಂಸೆ!
ಕಾರಣ ಹಿಂದೂ ಭಯೋತ್ಪಾದನೆ ಎಂಬ ಪೊಳ್ಳು, ಸುಳ್ಳು ನೆವ, ಕಟ್ಟುಕಥೆ॥ಆ ಧೂರ್ತ ಎಟಿಸ್ ಅಧಿಕಾರಿ ಹೇಮಂತ ಕರ್ಕರೆಗೆ ಮುಂದೆಹೋರಾಡದೆ ಪರಮವೀರ ಚಕ್ರ!
ನಾಲ್ಕು ವರುಷಗಳ ಹಿಂದೆ ಮಾರಿದ ಬೈಕ್ ಮಾರಿದವನದಾಗುತ್ತದೆಯೇ ಅಥವಾ ಅದರ ಸಮೀಪ ಬಾಂಬ್ ಸ್ಫೋಟವಾದರೆ ಆ ವ್ಯಕ್ತಿ ಅಥವಾ ಬೈಕ್ ಯಜಮಾನ ಕಾರಣನೇ?
RDX ಹೊಂದಿಲ್ಲದಿದ್ದರೂ ವೃಥಾ ಆರೋಪಿಸಿ ಹದಿನೇಳು ಬಾರಿ ಶೌರ್ಯ ಪ್ರಶಸ್ತಿ ವಿಜೇತ ಕರ್ನಲ್ ನನ್ನು (ಲೆ॥ ಕ॥ ಪುರೋಹಿತ್ ) ಕೈ ಬೆರಳು ತುಂಡರಿಸಿ ಯಮ ಯಾತನೆ ನೀಡಿದ್ದು ಎಷ್ಟರ ಮಟ್ಟಿಗೆ ಸಮಂಜಸ?
ಕೇವಲ ಪರಿಚಿತರಾದ ಮಾತ್ರಕ್ಕೆ ಅವರೆಲ್ಲಾ ಸಹಭಾಗಿಗಳೇ?
ಅಷ್ಟಕ್ಕೂ ಇಷ್ಟರವರೆಗೂ ಸಾಧಿತವಾಗದ ಆರೋಪವನ್ನೇ ಅಪರಾಧ ಎಂದು ಈ ಸೂಡೋ ಸೆಕ್ಯುಲರಿಷ್ಟರು ಯಾಕೆ ಬೊಬ್ಬಿರಿಯುತ್ತಿದ್ದಾರೆ?
ಒಂದು ವೇಳೆ ಅವರೇ ಆದರೂ ಅದು ನಿದ್ರಿತ ಜನರನ್ನು, ಕಿವುಡು ಸರಕಾರವನ್ನು, ಮತಾಂಧ ಉಗ್ರರನ್ನು ಎಚ್ಚರಿಸಲೇ ಹೊರತು ಯಾರನ್ನೂ ಕೊಲ್ಲಲಿಕ್ಕಾಗಿ ಅಲ್ಲ, ಅಷ್ಟಕ್ಕೂ ಅಲ್ಲಾರೂ ಸತ್ತಿಲ್ಲ!
ದೇಶಪ್ರೇಮಿಗಳಿಗೆ ಚಿತ್ರಹಿಂಸೆ ಕೊಟ್ಟು ಉಗ್ರರಿಗೆ ಬಿರಿಯಾನಿ ತಿನ್ನಿಸುವ ಈ ಸರಕಾರವನ್ನು ಉಳಿಯಗೊಡಬೇಕೆ?
ವಂದೇ ಮಾತರಂ॥

ಕಣ್-ಮಣಿ

ಮೊದಲ ರಾಜವಂಶವದು ಕದಂಬ
ಮೊದಲ ಶಾಸನ ಹಲ್ಮಿಡಿ।
ಉಲಿಯುತಿರಲಿ ಕನ್ನಡ ಉಳಿಯುವವರೆಗೀ ಡಿಂಬ
ಉಳಿಸಿ ಬೆಳೆಸಿರಿ ಕನ್ನಡದ ಕುಡಿ॥

ಮೊದಲ ರಾಷ್ಟ್ರಕವಿ ಗೋವಿಂದ
ಬೆಳೆಯಲಿ ಕವಿಪರಂಪರೆ ನಮ್ಮಿಂದ।
ಪಶ್ಚಿಮಘಟ್ಟಗಳ ನಯನಮನೋಹರ ಅಂಚು
ತಪ್ಪಿಸಿರಿ ಸರ್ವನಾಶದ ಸಂಚು ॥

ಸುಂದರ ಸುಮಧುರ ಕರಾವಳಿ
ಉಳಿಯಗೊಡದಿಹ ಜಿಹಾದಿಗಳ ಹಾವಳಿ।
ಎಲ್ಲಾದರು ಇರು ಏನಾದರೂ ಆಗು
ಸ್ಮೃತಿಯಿರಲಿ ಮೊದಲು ಕನ್ನಡಿಗನಾಗು॥

ಆನನದೊಳು ಆವಿರ್ಭವಿಸಿದ ಉಕ್ತಿ!ಭಕ್ತಿ!!ಶಕ್ತಿ!!!

ನವಸಂವತ್ಸರದ ಸಂಭ್ರಮಕ್ಕೆ ಮೇಘದಿಂದ ಅಡ್ಡಿಯಾದ ಬೇಗೆ.....!!!

ಮೇಘವೇ ಏತಕೆ ಓಡುವೆ ನೀ
ಆ ಸೂರ್ಯನ ಮರೆಮಾಚುವೆ ಏತಕೆ ನೀ॥
ಕುಜವರ್ಣನ ತಂಪು ಕಣ್ಮನ ಸೆಳೆವ ಶೋಭೆಗೆ
ತೆರೆ ಎಳೆಯುವುದೇತಕೆ ಮಂಕೆ!
ಬದಲಾಗದು ನಿನ್ನ ವರ್ಣವು, ಸ್ವರ್ಣವದು
ರಜತವಿರಲಿ ಅದು ತಾತ್ಕಾಲಿಕ ಶಂಕೆ!!
ಸಂಧ್ಯಾಸೂರ್ಯನ ಮನಮೋಹಕ ರೂಪಿಗೆ
ನಸುಗೆಂಪಿನ ಒನಪು ವಯ್ಯಾರಕೆ।
ಅಡ್ಡಿಯಾಗಿ ಕಸಕಡ್ಡಿಯಾಗದಿರು
ಓಡುವ ಹಠವ ಬಿಡು ಮರುಳೇ॥
ಗೂಡ ಸೇರುತಿಹ ಖಗ ಮೃಗಾದಿಗಳ
ಧಾವಂತಕೆ ದನಿಯಾಗುತಿಹ ಅರ್ಕನ
ತರ್ಕಕ್ಕೀಡಾಗದೆ ಅರ್ಘ್ಯ ಸ್ವೀಕರಿಸುತಿಹ
ಶಕ್ತಿಸ್ವರೂಪ ಸವಿತೃವಿನ ಹಣಿವಾಸೆ ಬಿಡು॥