ಪುಟಗಳು

ಬುಧವಾರ, ಏಪ್ರಿಲ್ 17, 2013

ಮೋಪಳಾ ಭಯೋತ್ಪಾದನೆ--ರಕ್ತಬೀಜಾಸುರನ ಸಂತತಿ: ಭಾಗ-೧



ಅದು ದೇವರ ನಾಡೆಂದು ಕರೆಯಲ್ಪಡುತ್ತಿತ್ತು...ಆದರೆ ಅಂದಿನಿಂದ ದೆವ್ವಗಳ ನಾಡಾಗಿ ಬದಲಾಗುತ್ತಿದೆ...

ಮೋಪಳಾ ಭಯೋತ್ಪಾದನೆ--ರಕ್ತಬೀಜಾಸುರನ ಸಂತತಿ: ಭಾಗ-:

                      ಬಾಗ್ದಾದಿನಲ್ಲಿ ಖಲೀಫನ ಸುಲ್ತಾನಿಕೆ ಪುನಃ ನೆಲೆಗೊಳಿಸಬೇಕೆಂಬ ಉದ್ದೇಶದಿಂದ ಶುರುವಾದದ್ದೇ ಖಿಲಾಫತ್ ಆಂದೋಲನ! ಮೊದಲ ಮಹಾಯುದ್ಧ ಮುಗಿದ ತರುವಾಯ ಬ್ರಿಟಿಷ್ ಸಾಮ್ರಾಜ್ಯ ನಿಸ್ಸತ್ವಗೊಂಡುದುದರಿಂದ ತುರ್ಕಿಯ ಪ್ರಭುತ್ವವನ್ನು ಮರುಸ್ಥಾಪಿಸಬಹುದೆಂಬ ಭ್ರಮೆಯಲ್ಲಿ ಶುರುವಾದ ಖಿಲಾಫತ್ ಆಂದೋಲನದ ಮುಖ್ಯ ಉದ್ದೇಶಗಳು ಎರಡು...
. ಖಲೀಫನ ಸಾಮ್ರಾಜ್ಯದ ಮರುಸ್ಥಾಪನೆ
. ಆಟೋಮನ್ ಸಾಮ್ರಾಜ್ಯದ ಅಖಂಡತೆಯನ್ನು ಸಾಧಿಸುವುದು.

                   ಜಗತ್ತಿನೆಲ್ಲಾ ರಾಷ್ಟ್ರಗಳು ಪ್ರಜಾಪ್ರಭುತ್ವವನ್ನರಸಿ ಹೋಗುತ್ತಿದ್ದಾಗ ಖಿಲಾಫತಿಗರು ರಾಜಾಧಿಕಾರವನ್ನು ಬಯಸಿದ್ದು ಹಾಗೂ ಅದಕ್ಕೆ ಮಹಾತ್ಮ ಎಂದು ಕರೆಸಿಕೊಂಡ ವ್ಯಕ್ತಿ ಅಸಹಕಾರ ಚಳುವಳಿಯ ಹೆಸರಿನಲ್ಲಿ ಹೆಗಲುಕೊಟ್ಟಿದ್ದು ತನ್ಮೂಲಕ ಭಾರತದ ಹೆಸರಿಗೆ ಕೆಸರೆರಚಿದ್ದು ಈಗ ಸರ್ವವಿದಿತ. ೧೯೧೨ರಲ್ಲಿ ಬಾಲ್ಕನ್ ರಾಜ್ಯಗಳಿಂದ ಟರ್ಕಿ ಸೋತು ಸುಣ್ಣವಾದ ಮೇಲೆ ಯೂರೋಪಿನ ಜನ ಇಸ್ಲಾಂನ್ನು ತಿರಸ್ಕರಿಸಲಾರಂಭಿಸಿದ್ದರು. ಆದರೆ ಭಾರತದೊಳಗಿನ ಮತಭ್ರಾಂತರನ್ನು ಹುಚ್ಚೆಬ್ಬಿಸಲು ನಾಮಾವಶೇಷವಾಗಿದ್ದ ಖಲೀಫನ ಪ್ರಭುತ್ವವನ್ನು ಪುನರುಜ್ಜೀವಿಸುವ ಪ್ರಯತ್ನ ಸಾಕಾಯಿತು. ಆದರೆ ಮಹಾತ್ಮ ಎಂದು ತನ್ನ ಸ್ತುತಿಪಾಠಕರಿಂದ ಕರೆಸಿಕೊಂಡ ಗಾಂಧಿಯ ಖಿಲಾಫತ್ ಪರ ಆವೇಶಕ್ಕೆ ಬೆಲೆ ತೆತ್ತವರು ಮಲಬಾರಿನ ಹಿಂದೂಗಳು.

                     ಖಿಲಾಫತ್ ಚಳವಳಿ ಘೋಷಿತವಾದೊಡನೆ ಗಾಂಧಿಯ ಸೂಚನೆಯಂತೆ ದೇಶಾದಾದ್ಯಂತ ಖಿಲಾಫತ್ ದಿನವನ್ನು ಕಾಂಗ್ರೆಸ್ ಘಟಕಗಳ ಮೂಲಕ ಆಚರಿಸಲಾಯಿತು. ಅಲಹಾಬಾದ್, ಕರಾಚಿಗಳಲ್ಲಿ ಖಿಲಾಫತ್ ಸಮ್ಮೇಳನಗಳೂ ನಡೆದವು. ಗಾಂಧಿ, ಮಹಮದ್ ಆಲಿ ಜೊತೆ ಸೇರಿ ಖಿಲಾಫತ್ ಪರ ಯಾತ್ರೆಯನ್ನೂ ನಡೆಸಿದ. ಮಾತ್ರವಲ್ಲ ಖಿಲಾಫತಿಗಾಗಿ ಹಣಸಂಗ್ರಹ ಅಭಿಯಾನ ಕೂಡಾ ಆರಂಭವಾಯಿತು. ಕೆಲವು ಕಡೆ ಅದ್ದೂರಿ ಪ್ರಚಾರ ನಡೆಸಿದಾಗ್ಯೂ ಜನ ಸೇರದೇ ಇದ್ದುದರಿಂದ ಮಸೀದಿಗಳಲ್ಲಿಯೇ ಸಭೆಯ ಶಾಸ್ತ್ರ ಮುಗಿಸಿದರು. ಕಾಂಗ್ರೆಸ್ಸಿನ ಅಧಿಕೃತ ಅನುಮೋದನೆ ಪಡೆಯದೇ ಗಾಂಧಿ ಖಿಲಾಫತ್ ಆಂದೋಲನ ಘೋಷಿಸಿಯೇ ಬಿಟ್ಟಿದ್ದ. ಆದರೆ ಖಿಲಾಫತ್ ಪರ ನಿರ್ಣಯಕ್ಕೆ ಮತ ಹಾಕಲು ಕಲ್ಕತ್ತಾದ ವಿಶೇಷ ಕಾಂಗ್ರೆಸ್ ಅಧಿವೇಶನದಲ್ಲಿ(--೧೯೨೦) ಕಾಂಗ್ರೆಸ್ ದಳಗಳು ಟ್ಯಾಕ್ಸಿ ಡ್ರೈವರ್ ಗಳನ್ನೂ ಹಣಕೊಟ್ಟು ಕರೆತಂದಿದ್ದರು! ಬಹುತೇಕರಿಗೆ ಖಿಲಾಫತ್ ಆಂದೋಲನ ಒಪ್ಪಿತವಿಲ್ಲದಿದ್ದರೂ ಗಾಂಧಿಯನ್ನು ವಿರೋಧಿಸುವವರೇ ಇರಲಿಲ್ಲ! ಇದಕ್ಕೆ ಪ್ರತಿಯಾಗಿ ಖಿಲಾಫತ್ ಖಂಡಿಸಲು ಒಟ್ಟಾಪಳಂನಲ್ಲಿ ನಡೆದ(೨೩-೦೪-೧೯೨೧) ಆನಿಬೆಸೆಂಟ್ ಉಪನ್ಯಾಸದಲ್ಲಿ ಜನ ಕಿಕ್ಕಿರಿದು ಸೇರಿದ್ದರು.

" ಗಾಂಧಿಯವರು ಕೈಗೊಂಡ ಖಿಲಾಫತ್ ಆಂದೋಲನ ಮತೀಯ ಆಂದೋಲನವಾಗಲಿದೆ. ಇದರಿಂದ ದೇಶಕ್ಕೆ ಭಾರೀ ಅಪಾಯವಿದೆ" ಎಂದು ಡಾ|| ಹೆಡಗೆವಾರರು ಎಚ್ಚರಿಸಿದ್ದರು.

ಪರಿಣಾಮ ಏನು?
>> ಪುಕ್ಕಟ್ಟೂರು ಭಾಗದ ಎಲ್ಲಾ ಹಿಂದೂಗಳನ್ನು ೧೯೨೧ರ ಆಗಸ್ಟ್ ನಲ್ಲಿ ಮತಾಂತರಿಸಲಾಯಿತು.
>> ಕಾರಾಗೃಹದ ಅಪರಾಧಿಗಳನ್ನು ಮುಕ್ತಗೊಳಿಸಿದ ಖಿಲಾಫತಿಗರು ಅವರನ್ನು ಕೊಲೆ ಲೂಟಿಗಳಿಗೆ ಬಳಸಿಕೊಂಡರು.
>> ಹಿಂದೆ ಹಿರಿಯರೆಂದು ತಾವೇ ಗೌರವಿಸಿದ್ದ ಕೋಮು ಮೆನನ್ ಪರಿವಾರವನ್ನೂ ಲೂಟಿಗೈದು ಮತಾಂತರಿಸಿದರು.(ಮುಂದೆ ಕೋಮು ಮೆನನ್ ಪರಿವಾರ ಮಾತೃಧರ್ಮಕ್ಕೆ ಮರಳಿತು)

     ಕೇರಳದೆಲ್ಲೆಡೆ ಕಾಂಗ್ರೆಸ್ ಕಾರ್ಯಾಲಯಗಳ ಮೇಲೆ ಖಿಲಾಫತ್ ಬಾವುಟಗಳು ಕಾಂಗ್ರೆಸ್ ಬಾವುಟಗಳ ಜೊತೆ ರಾರಾಜಿಸತೊಡಗಿದವು. ಕಾಂಗ್ರೆಸ್ ಕಾರ್ಯಕರ್ತರು ಖಿಲಾಫತ್ ವಾಲಂಟಿಯರ್ ಗಳಾದರು. ಯಾವ ಕಡೆ ನೋಡಿದರೂ ಖಿಲಾಫತ್ ಧ್ವಜಗಳ ವಿಜೃಂಭಣೆ, ಖಿಲಾಫತ್ ಪರ ಘೋಷಣೆ, ಖಿಲಾಫತ್ ರಾಜ್ಯಕ್ಕೆ ಜೈಕಾರ ಹಾಗೂ ಟರ್ಕಿಷ್ ಟೋಪಿ ಧರಿಸಿದ ಕಾಂಗ್ರೆಸ್ಸಿಗರು....ಹೀಗೆ ಕಾಂಗ್ರೆಸ್ ಪೂರ್ತಿ ಬಣ್ಣಗೆಟ್ಟಿತ್ತು! ಅದರಲ್ಲೂ ಗಾಂಧಿ ಬೆಂಬಲದಿಂದ ಉತ್ತೇಜಿತರಾದ ಮಾಪಿಳ್ಳೆಗಳು ಕತ್ತಿ, ಗುರಾಣಿ ಮುಂತಾದ ಕೈಗೆ ಸಿಕ್ಕ ಆಯುಧಗಳನ್ನು ಹಿಡಿದು ಮದೋನ್ಮತ್ತರಂತೆ ವರ್ತಿಸಲಾರಂಭಿಸಿದ್ದರು.

ಮುಂದುವರಿಯುವುದು...

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ