ಪುಟಗಳು

ಶನಿವಾರ, ಏಪ್ರಿಲ್ 27, 2013

ಮೋಪಳಾ ಭಯೋತ್ಪಾದನೆ--ರಕ್ತಬೀಜಾಸುರನ ಸಂತತಿ: ಭಾಗ- ೨



ಅದು ದೇವರ ನಾಡೆಂದು ಕರೆಯಲ್ಪಡುತ್ತಿತ್ತು...ಆದರೆ ಅಂದಿನಿಂದ ದೆವ್ವಗಳ ನಾಡಾಗಿ ಬದಲಾಗುತ್ತಿದೆ...
ಮೋಪಳಾ ಭಯೋತ್ಪಾದನೆ--ರಕ್ತಬೀಜಾಸುರನ ಸಂತತಿ: ಭಾಗ- :
               ಜನರ ಮೇಲಿನ ಅತ್ಯಾಚಾರವನ್ನು ನಿವಾರಿಸಲು ಬಂದ ಪೊಲೀಸರನ್ನು ಕೊಚ್ಚಿ ಹಾಕುತ್ತಿದ್ದರು. " ಇಸ್ಲಾಮಿಗೆ ಮತಾಂತರಗೊಳ್ಳಿ ಇಲ್ಲವೇ ಸಾಯಲು ಸಿದ್ಧರಾಗಿ" ಎನ್ನುತ್ತಾ ಬಲಾತ್ಕಾರದ ಮತಾಂತರ, ಮಹಿಳೆಯರ ಅತ್ಯಾಚಾರ, ಹಿಂದೂಗಳ ಚರ್ಮ ಸುಲಿಯುವುದು, ಆಸ್ತಿಪಾಸ್ತಿ ಲೂಟಿ, ಕೊಲೆ,ಹಗಲು ದರೋಡೆ, ಸರಕಾರೀ ಖಜಾನೆಗಳ ದರೋಡೆ ಎಗ್ಗಿಲ್ಲದೆ ನಡೆದವು. ಮರಗಳ ಛೇದನ, ಸೇತುವೆಗಳ ಧ್ವಂಸ ಎಲ್ಲಾ ತಂತ್ರಗಳನ್ನು ಖಿಲಾಫತಿಗರು ಬಳಸಿದರು. ದೇವಾಲಯಗಳ ಲೂಟಿ, ವಿಗ್ರಹ ಭಂಜನೆಗಳು ಅಗಾಧ ಪ್ರಮಾಣದಲ್ಲಿ ನಡೆದವು.

                  ದಂಗೆಕೋರರಿಗೆ ಅಹಿಂಸೆ ಭೋಧಿಸಹೊರಟ ಮಂಜೇರಿಯ ಕೆ. ಮಾಧವನ್ ನಾಯರ್, ಎರ್ನಾಡಿನ ಎಂ.ಪಿ. ನಾರಾಯಣ ಮೆನನ್ ಮೊದಲಾದವರ ಪ್ರಯತ್ನಗಳು ವಿಫಲಗೊಂಡವು. "ನಾವೇನು ಮಾಡುತ್ತಿದ್ದೇವೆಂದು ನಮಗೆ ಗೊತ್ತು. ನಿಮ್ಮ ಉಪದೇಶ ನಮಗೆ ಬೇಕಾಗಿಲ್ಲ" ಎಂದರು ಮೋಪ್ಲಾಗಳು. ಇಷ್ಟೆಲ್ಲಾ ನಡೆದರೂ ಗಾಂಧಿಯ ಹೇಳಿಕೆ ನೋಡಿ- " I would gladly ask for the postponement of the swaraj activity if we could advance the interest of khilaphat"

                     1891ರಲ್ಲಿ ಎರ್ನಾಡ್, ವಳ್ಳುವನಾಡ್, ಪೊಣ್ಣನಿ ಮೂರು ತಾಲೂಕುಗಳಲ್ಲಿ ನೂರರಲ್ಲಿ ಎಪ್ಪತ್ತರಷ್ಟಿದ್ದ ಮಾಪಿಳ್ಳೆಗಳ ಸಂಖ್ಯೆ ಮೂರೇ ದಶಕಗಳಲ್ಲಿ ೮೫ ಪ್ರತಿಶತವನ್ನೂ ದಾಟಿತು. ಹಿಂದೂಗಳ ಸಂಖ್ಯೆ ೫೨೦೧೭ ಇದ್ದರೆ ಮಾಪ್ಪಿಳ್ಳೆಗಳ ಸಂಖ್ಯೆ ,೫೦,೫೩೨ ಆಗಿತ್ತು.  "ಶಸ್ತ್ರಾಸ್ತ್ರಗಳು, ಸರಂಜಾಮುಗಳು ಹಾಗೂ ಸೈನಿಕರನ್ನು ಹೊತ್ತ ಹಡಗುಗಳು ಭಾರತದತ್ತ ಹೊರಟಿವೆ. ಅವು ತಲುಪಿದೊದನೆ ಹಿಂದೂಗಳ ಮಾರಣ ಹೋಮ ಆದಂತೆ" ಎಂದು ಹೆದರಿಸಿ ಮತಾಂತರವನ್ನು ಮತ್ತಷ್ಟು ಹೆಚ್ಚಿಸಲಾಯಿತು. " ಇನ್ನು ಮುಂದೆ ನೀವು ಮಾಪಿಳ್ಳೆಗಳ ಹೆಸರುಗಳನ್ನು ಹೊಂದಬೇಕಾಗುತ್ತೆ" ಎಂದು ನಾಯರ್ ಮಹಿಳೆಯರಿಗೆ ಹೇಳಿ ಹೊಸ ಹೆಸರುಗಳನ್ನು ಲೆಡ್ಜರುಗಳಲ್ಲಿ ಬರೆದಿಡಲಾಗುತ್ತಿತ್ತು.

                 ಹಿಂದೂಗಳ ಮೇಲೆ ಆಕ್ರಮಣ ನಡೆಸುವ ಪ್ರವೃತ್ತಿ ಕೇರಳದ ಮುಸ್ಲಿಮರಲ್ಲಿ ದೀರ್ಘಕಾಲ ಮನೆ ಮಾಡಿದ್ದುದರಿಂದ ಗಾಂಧಿ ಹೊತ್ತಿಸಿದ ಕಿಡಿ ಉರಿದೆದ್ದು ನಂದಿಸದ ಜ್ವಾಲೆಯಾಗಿ ಅಸಂಘಟಿತ ಹಿಂದೂಗಳ ಮಾರಣ ಹೋಮ ಪ್ರಾರಂಭವಾಯಿತು. ಶೌರ್ಯಕ್ಕೆ ಹೆಸರಾಗಿದ್ದ ನಾಯರ್ ಸಮುದಾಯವನ್ನು ನಿಶ್ಯಸ್ತ್ರಗೊಳಿಸಿದ್ದ ಬ್ರಿಟಿಷರ ಕ್ರಮ ಮಾಪ್ಪಿಳ್ಳೆಗಳಿಗೆ ಲಾಭದಾಯಕವಾಯಿತು.

ಅದೇ ಸಮಯದಲ್ಲಿ ಕರ್ಣಾವತಿ(ಈಗ ಅಹ್ಮದಾಬಾದ್ ಆಗಿ ಮತಾಂತರಗೊಂಡಿದೆ)ಯಲ್ಲಿ ನಡೆದ ಮುಸ್ಲಿಮ್ ಲೀಗ್ ಅಧಿವೇಶನದ ಅಧ್ಯಕ್ಷ ಭಾಷಣದಲ್ಲಿ ಹಸರತ್ ಮೊಹಾನಿ ಮೋಪ್ಳಾ ದಂಗೆಯನ್ನು ಸಮರ್ಥಿಸುತ್ತಾ "ಹಿಂದೂಗಳು ಜಿಹಾದನ್ನು ಸ್ವೀಕರಿಸಿಲ್ಲ ಎಂದ ಮೇಲೆ ಅವರು ನಮ್ಮ ಶತ್ರುಗಳೇ. ಹಾಗಾಗಿ ಅವರ ಮೇಲಿನ ಹಲ್ಲೆ ಹಾಗೂ ಅತ್ಯಾಚಾರ ದೋಷವೆನಿಸುವುದಿಲ್ಲ" ಎಂದು ಬೊಬ್ಬಿರಿದ. ವಿಪರ್ಯಾಸವೆಂದರೆ ಖಿಲಾಫತಿಗೆ ಹೆಗಲು ಕೊಟ್ಟ ಮಹಾತ್ಮ(!) ಅದೇ ಸಭೆಯಲ್ಲಿದ್ದರೂ ತುಟಿ ಬಿಚ್ಚಲಿಲ್ಲ. ವ್ಯತಿರಿಕ್ತವಾಗಿ ಆನಿಬೆಸೆಂಟ್ ಮೋಪ್ಳಾ ದಂಗೆಯನ್ನು ಖಂಡಿಸುತ್ತಾ "ಮುಸ್ಲಿಮರ ಸ್ವಭಾವಗತ ಹಿಂಸಾ ಪ್ರವೃತ್ತಿಯೇ ದೌರ್ಜನ್ಯಗಳಿಗೆ ಕಾರಣ" ಎಂದು ಹಿಂದೂಗಳನ್ನು ಎಚ್ಚರಿಸಿದರು.
http://www.oocities.org/hindoo_humanist/mopla.html
ಕೊಲೆ-ಲೂಟಿ-ಅತ್ಯಾಚಾರ:

               ಪೊಣ್ಣನಿಯ ಸರಕಾರೀ ಕಾಲೇಜಿನ ಆಸುಪಾಸಿನಲ್ಲಿಯೇ ಖಿಲಾಫತಿಗರು ಲೂಟಿ ದಾಂಧಲೆ ನಡೆಸಿದರು. ಇಲ್ಲಿ ೬೭ ಪೊಲೀಸರು ಕೊಲೆಯಾದರು, ೧೫೫ ಮಂದಿ ಮಾರಣಾಂತಿಕವಾಗಿ ಗಾಯಗೊಂಡರು. ಮಂಜೇರಿ, ತಿರುರಂಗಾಡಿಗಳಲ್ಲಿ ಅಂಗಡಿಗಳನ್ನು ಸುಟ್ಟು ಹಾಕಿದರು. ಉಗ್ರ ಮತಪ್ರವರ್ತಕರಾಗಿದ್ದ ಮುಸ್ಲಿಂ ಭಯೋತ್ಪಾದಕರಿಗಂತೂ ಖಿಲಾಫತ್ ಆಂದೋಲನ ಸುಸಂಧಿಯಾಗಿ ಒದಗಿ ಬಂತು. ಇಂತಹವರೆಲ್ಲರೂ ಏಕಾಏಕಿ ಗಾಂಧಿ ಅನುಯಾಯಿಗಳಾಗಿ ತಮ್ಮ ಮತಾಂತರ, ಲೂಟಿ, ಮಾನಭಂಗವನ್ನು ಮತ್ತಷ್ಟು ನಿರ್ಭಿಡೆಯಿಂದ ಮಾಡತೊಡಗಿದರು.
                 ಅಲೀ ಮುಸಲಿಯಾರ್ ಎಂಬ ಮೌಲ್ವಿ ಏರ್ನಾಡ್, ತಿರುರಂಗಾಡಿಗಳಲ್ಲಿ ತಾನೇ ರಾಜನೆಂದು ಘೋಷಿಸಿಕೊಂಡು ಕಪ್ಪ ವಸೂಲು ಮಾಡತೊಡಗಿದ. ಉಗ್ರ ಮತಾಂತರ ಮಾಡುತ್ತಿದ್ದ ಕ್ರೂರ ಅತ್ಯಾಚಾರಿಯನ್ನು ಹಾಗೂ ಅವನ ಸಂಗಡಿಗರನ್ನು ಹಿಡಿದ ಪೊಲೀಸರು ಅವನಿಗೆ ಮರಣದಂಡನೆಯಾಗುವಂತೆ ಮಾಡಿ ಹಿಂದೂಗಳ ತುಸು ನೆಮ್ಮದಿಗೆ ಕಾರಣವಾದರು. ನೀಲಂಬೂರಿನಲ್ಲಿ ವಿ. ಕೆ. ಹಾಜಿ ಎಂಬಾತನ ಕ್ರೌರ್ಯ ಹೇಗಿತ್ತೆಂದರೆ ಅವನ ಹೆಸರು ಹೇಳಲೂ ಜನ ಹೆದರುತ್ತಿದ್ದರು. ಅಪಾರ ಶಸ್ತ್ರ ಸಂಗ್ರಹ ಮಾಡಿದ್ದ ಅವನು ತನ್ನ ಕೊಲೆ, ಲೂಟಿ, ಮಾನಭಂಗಗಳ ಸುದ್ದಿ ಮಂಜೇರಿ, ನೀಲಂಬೂರುಗಳಿಂದಾಚೆಗೆ ಹೋಗದಂತೆ ಎಚ್ಚರ ವಹಿಸಿದ್ದ. ಅವನನ್ನು ಬಂಧಿಸಿ ಮರಣದಂಡನೆ ವಿಧಿಸಲು ವಿಶೇಷ ಪೊಲೀಸ್ ಪಡೆಯನ್ನೇ ರಚಿಸ ಬೇಕಾಯಿತು. ಪಂದಲೂರಿನ ಹೆಡ್ ಕಾನ್ ಸ್ಟೇಬಲ್ ಹೈಡ್ರಾಸನನ್ನು ಅವನ ಪತ್ನಿ, ಮಕ್ಕಳ ಎದುರೇ ಕೊಚ್ಚಿ ಹಾಕಿದರು.
- ಮುಂದುವರಿಯುವುದು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ