ಅದು ದೇವರ ನಾಡೆಂದು ಕರೆಯಲ್ಪಡುತ್ತಿತ್ತು...ಆದರೆ ಅಂದಿನಿಂದ ದೆವ್ವಗಳ ನಾಡಾಗಿ ಬದಲಾಗುತ್ತಿದೆ...
ಮೋಪಳಾ ಭಯೋತ್ಪಾದನೆ--ರಕ್ತಬೀಜಾಸುರನ ಸಂತತಿ: ಭಾಗ- ೩:
ಕಲ್ಲಿಕೋಟೆಯ ಮುದುಮಣೆಯಿಲ್ಲಂ ಎಂಬೆಡೆಯ ದೇವಾಲಯದ ಗರ್ಭಗೃಹದಲ್ಲಿ
ಬಂಡುಕೋರ ನಾಯಕನೊಬ್ಬ ಕುಳಿತು ದರ್ಬಾರ್ ನಡೆಸುತ್ತಿದ್ದ!
ಸ್ಥಳೀಯರನ್ನು ಬಂಧಿಸಿ ಅವನ ಮುಂದೆ
ಸಾಲಾಗಿ ಕರೆ ತರಲಾಗುತ್ತಿತ್ತು. ಅಲ್ಲಿ
ಇಸ್ಲಾಮಿಗೆ ಪರಿವರ್ತಿತರಾಗಲು ಒಪ್ಪದವರನ್ನು ತಲೆ ಛೇದಿಸಿ ಪಕ್ಕದ
ಬಾವಿಯೊಳಗೆ ಎಸೆಯಲಾಗುತ್ತಿತ್ತು. ಮಲಪ್ಪುರಂ ಉತ್ತರ ಭಾಗದಲ್ಲಿ ಇದ್ದ
ತೂವೂರ್ ಎಂಬ ಬಾವಿಗೆ ಮೋಪ್ಲಾಗಳು
೨೭ ಮಂದಿ ಸ್ಥಳೀಯರ ತಲೆಗಳನ್ನು
ಗರಗಸದಿಂದ ಕತ್ತರಿಸಿ ಎಸೆದರು.
ಸ್ತ್ರೀಯರನ್ನು ಹಿಡಿದು ವಿವಸ್ತ್ರಗೊಳಿಸಿ ಮೆರವಣಿಗೆ
ಮಾಡುತ್ತಿದ್ದರು. ನಂತರ ಎಲ್ಲರ ಎದುರೇ
ಅತ್ಯಾಚಾರ. ಗರ್ಭಿಣಿಯರ ಗರ್ಭ ಸೀಳಿ ಮಗುವನ್ನು
ಕತ್ತರಿಸಿ ಎಸೆಯುತ್ತಿದ್ದರು. ಗರ್ಭಿಣಿ, ಹಸುಳೆ, ವೃದ್ಧೆ ಎನ್ನದೇ
ಎಲ್ಲರನ್ನು ಮಾನಭಂಗಗೊಳಿಸುತ್ತಿದ್ದರು.
ಕಲ್ಲಿಕೋಟೆಯಲ್ಲಿ ಜಾಮೋರಿನ್ ದೊರೆಯ ನೇತೃತ್ವದಲ್ಲಿ ನಡೆದ
ಸಮಾವೇಶ ಈ ಎಲ್ಲಾ ಕೃತ್ಯಗಳನ್ನು
ವಿವರವಾಗಿ ದಾಖಲೆ ಮಾಡಿತು. ಕೇರಳ
ಪ್ರದೇಶ ಕಾಂಗ್ರೆಸ್ ಕಾರ್ಯದರ್ಶಿ ಕೆ.ಪಿ. ಕೇಶವ
ಮೆನನ್, ೧೯೨೧ರ ಸೆಪ್ಟೆಂಬರ್ ೭ರಂದು
ಟೈಮ್ಸ್ ಆಫ್ ಇಂಡಿಯಾದಲ್ಲಿ ಪ್ರತ್ಯಕ್ಷದರ್ಶಿಯೊಬ್ಬರು
ಬರೆದ ಪತ್ರ,...ಹೀಗೆ ಹತ್ತು
ಹಲವು ವರದಿಗಳು ಮೋಪ್ಲಾಗಳ ಕೃತ್ಯಗಳನ್ನು
ವರದಿ ಮಾಡಿದವು. ಆದಾಗ್ಯೂ ಗಾಂಧಿ ಪ್ರಣೀತ
ಕಾಂಗ್ರೆಸ್ ಖಿಲಾಫತಿಗೆ ತನ್ನ ಬೆಂಬಲವನ್ನು ಹಿಂದೆ
ತೆಗೆಯಲೇ ಇಲ್ಲ. ಈ ಸಂದರ್ಭದಲ್ಲಿ
ಬ್ರಿಟಿಷ್ ರಕ್ಷಣಾ ಪಡೆಗಳು ಕಣಕ್ಕಿಳಿಯದಿದ್ದರೆ
ಅದಾಗಲೇ ಕೇರಳ ಪಾಕಿಸ್ತಾನವಾಗಿ ಪರಿವರ್ತಿತವಾಗುತ್ತಿತ್ತು.
ಮೋಪ್ಲಾಗಳನ್ನು ಸಮರ್ಥಿಸಿದ ಗಾಂಧಿ:
ಇಡೀ ದೇಶ ಮೋಪ್ಲಾ ಅತ್ಯಾಚಾರಕ್ಕೆ
ಆತಂಕಗೊಂಡಿದ್ದರೆ, ಗಾಂಧಿ ಅದಾವುವೂ ತನಗೆ
ತಿಳಿಯದೆಂದ. ಆಗ್ರಹಿಸಿ ಪ್ರಶ್ಣಿಸಿದಾಗ " ಮೋಪ್ಲಾಗಳು ತಮ್ಮ ಧಾರ್ಮಿಕಾದೇಶದಂತೆ ವರ್ತಿಸಿದ್ದಾರೆ"
ಎಂದು ಅತ್ಯಾಚಾರಿಗಳನ್ನೇ ಸಮರ್ಥಿಸಿದ. ಆತನದೇ ಅಣಿಮುತ್ತುಗಳನ್ನು ಕೇಳಿ…
"The brave and
god fearing moplahs are fighting for the religion as understood by them by a
method they feel their religion enjoins them to adopt"
"May be that all the sufferings of the hindus are the
rewards of the in human sins they have committed for years."
ಗಾಂಧಿ
"ವ್ಯಾಪಕ ಮತಾಂತರ ನಡೆದಿಲ್ಲ. ಕೇವಲ
ಒಂದೇ ಒಂದು ಪ್ರಕರಣ ನಡೆದಿದೆ.
" ಎಂದು "ಯಂಗ್ ಇಂಡಿಯಾ" ದಲ್ಲಿ
ಬರೆದ.
"Dr. mahamud tells me that have been grossly
exaggerated...The one case that was reported to him was ...non proven" ಗಾಂಧಿಯ ಈ ಹೇಳಿಕೆ
ಕಾಂಗ್ರೆಸ್ ನಾಯಕರನ್ನೇ ದಿಗ್ಭ್ರಮೆಗೊಳಿಸಿತು. ದೌರ್ಜನ್ಯಗಳ ವರದಿಗಳೆಲ್ಲ ಉತ್ಪ್ರೇಕ್ಷಿತ ಎಂದು ಅದನ್ನು ತಳ್ಳಿ
ಹಾಕುವ, ಸಕಲ ಪ್ರಯತ್ನವನ್ನೂ ಗಾಂಧಿ
ಮಾಡಿದ.
"ಇಂಥಾ ಬಾಲಿಶ ಹೇಳಿಕೆಗಳನ್ನು
ಕೊಡಬೇಡಿ" ಎಂದು ಗಾಂಧಿಗೆ ಹೇಳಿದ
ತಪ್ಪಿಗೆ ಕೆ.ಪಿ. ಕೇಶವ
ಮೆನನರ(ಕಲ್ಲಿ ಕೋಟೆಯ ಜಿಲ್ಲಾ
ಕಾಂಗ್ರೆಸ್ ಕಾರ್ಯದರ್ಶಿ) ಮನೆಯ ಮೇಲೇ ಕಾಂಗ್ರೆಸ್ಸಿಗರು
ಕಲ್ಲು ತೂರಿದರು. ಕಾಂಗ್ರೆಸ್ ತನಗೂ ಮೋಪ್ಲಾ ಗಲಭೆಗೂ
ಸಂಬಂಧವಿಲ್ಲವೆಂದೂ, ಉತ್ಪ್ರೇಕ್ಷಿತ ವರದಿಗಳಿಂದ ವಿಚಲಿತರಾಗಿ ಮೋಪ್ಲಾಗಳು ಹಿಂಸಾಚಾರಕ್ಕಿಳಿದರೆಂದೂ ನಿರ್ಣಯ ಮಾಡಿತು. ಮದರಾಸ್
ಸರಕಾರದ ಅಧಿಕೃತ ದಾಖಲೆಯಲ್ಲಿ ಹಲವು
ಸಾವಿರ ಮತಾಂತರ ಪ್ರಕರಣಗಳ ಅಧಿಕೃತ
ವರದಿಗಳು ಇದ್ದಾಗ್ಯೂ ಗಾಂಧಿ ಈ ವರೆಗೆ
ಅಂತಹ ಕೇವಲ ೩ ಪ್ರಕರಣಗಳು
ನಡೆದಿವೆ ಎಂದ(೧೯೨೨ ಜನವರಿ).
ಕಾಂಗ್ರೆಸ್ ಮಗುಮ್ಮಾಗಿ ಬೆಂಬಲಿಸಿತು.
ಸರ್ವೆಂಟ್ಸ್ ಆಫ್ ಸೊಸೈಟಿಯ ವರದಿಯಂತೆ
ಮೋಪ್ಲಾಗಳಿಂದ ೧೦೦೦ ಹಿಂದೂಗಳ ಕಗ್ಗೊಲೆ,
೨೦೦೦೦ ಬಲವಂತದ ಮತಾಂತರಗಳು, ಹಲವು
ಸಾವಿರ ಮಹಿಳೆಯರ ಅತ್ಯಾಚಾರ, ಜನರಿಂದ
೩ ಕೋಟಿಗೂ ಮಿಕ್ಕಿದ
ಹಣದ ಲೂಟಿ ಆಗಿತ್ತು. ಎಡಬಿಡಂಗಿ
ಕಮ್ಯೂನಿಷ್ಟರು "ಮೋಪ್ಲಾಗಳು ೧೧೦೦ ದೇವಾಲಯಗಳ ಪೈಕಿ
೧೦೦ ದೇವಾಲಯಗಳನ್ನು ಮಾತ್ರ ಧ್ವಂಸ ಮಾಡಿದರು.
೫೦೦ ಮಂದಿ ಮಾತ್ರ ಕೊಲೆಯಾದರು.
೨೫೦೦ ಮಂದಿ ಮಾತ್ರ ಮತಾಂತರಗೊಂಡರು"
ಎಂಬ ತನ್ನ ಎಂದಿನ ಹಿಂದೂ
ವಿರೋಧಿ ಮನಸ್ಥಿತಿಯ ವರದಿಗಳನ್ನೇ ತಯ್ಯಾರು ಮಾಡಿದರು.
ಈ ದಂಗೆಗಳನ್ನು ತಹಬಂದಿಗೆ
ತರಲು ಪೊಲೀಸ್ ಪಡೆಗಳಿಗೆ ಸಾಧ್ಯವಾಗದೇ
ಸೈನಿಕ ತುಕಡಿಗಳನ್ನೇ ಕರೆಸಿಕೊಳ್ಳಲಾಯಿತು. ಈ ಹಂತದಲ್ಲಿ ಗೆರಿಲ್ಲಾ
ಯುದ್ಧ ತಂತ್ರಕ್ಕೆ ಶರಣು ಹೋದ ಮೋಪ್ಲಾಗಳನ್ನು
ನಿಯಂತ್ರಿಸಲು ಒಂದು ವಿಶೇಷ ಅನುಭವಿ
ಪಡೆಯನ್ನೇ ತರಬೇತುಗೊಳಿಸಿ ನೇಮಿಸಲಾಯಿತು. ಹೀಗೆ ಏಳೆಂಟು ತಿಂಗಳುಗಳ
ಪರ್ಯಂತ ಮೋಪ್ಲಾಗಳೊಂದಿಗೆ ಕಾದಾಡಿದ ಈ ಪಡೆ
ದಂಗೆಯನ್ನು ನಿಯಂತ್ರಿಸಿತು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ