ಪುಟಗಳು

ಗುರುವಾರ, ಮೇ 2, 2013

ಮೋಪಳಾ ಭಯೋತ್ಪಾದನೆ--ರಕ್ತಬೀಜಾಸುರನ ಸಂತತಿ: ಭಾಗ- ೪



ಅದು ದೇವರ ನಾಡೆಂದು ಕರೆಯಲ್ಪಡುತ್ತಿತ್ತು...ಆದರೆ ಅಂದಿನಿಂದ ದೆವ್ವಗಳ ನಾಡಾಗಿ ಬದಲಾಗುತ್ತಿದೆ...
ಮೋಪಳಾ ಭಯೋತ್ಪಾದನೆ--ರಕ್ತಬೀಜಾಸುರನ ಸಂತತಿ: ಭಾಗ- :

ಮೋಪ್ಲಾಗಳ ಅತ್ಯಾಚಾರವೂ ಮಹಾ(ದುರಾ)ತ್ಮನ ಅನಾಚಾರವೂ:

               ಮೋಪ್ಲಾ ಬಂಡಾಯದ ಕುರಿತು ಆನಿಬೆಸೆಂಟ್, ಅಂಬೇಡ್ಕರ್, ಶಂಕರನ್ ನಾಯರ್ ಮುಂತಾದವರ ಭಾಷಣಗಳೂ, ಆರ್ಯಸಮಾಜ, ವೈಎಂಸಿಎ, ಸರ್ವೆಂಟ್ಸ್ ಆಫ್ ಇಂಡಿಯಾದ ವರದಿಗಳನ್ನು ಓದಿದರೆ ಎಂತಹವನಿಗಾದರೂ ರಕ್ತ ಕುದಿಯಲೇಬೇಕು.
>>ಸರ್ವೆಂಟ್ಸ್ ಆಫ್ ಇಂಡಿಯಾ ಸೊಸೈಟಿಯ ಜಿ. ಕೆ ದೇವಧರ್, ಆರ್ಯ ಸಮಾಜದ ಋಷಿರಾಂ, ವೈಎಂಸಿಯ ಕೆಟಿ ಪಾಲ್ & ಎಚ್ ಪಾಪ್ಲೇ ಮೊದಲಾದವರು ಏರ್ಪಡಿಸಿದ ಸಂತ್ರಸ್ಥ ಸಹಾಯ ಶಿಬಿರಗಳಲ್ಲಿ ೨೬೦೦೦ಕ್ಕೂ ಹೆಚ್ಚು ಮಂದಿ ಆಶ್ರಯ ಪಡೆದರು. ಜಾಮೋರಿನ್ ದೊರೆಯ ಮನಕಾವು, ಕೊಟ್ಟಕ್ಕಲ್ ಅರಮನೆಗಳು, ಕೃಷ್ಣವರ್ಮ ರಾಜನ ಅರಮನೆಗಳಲ್ಲಿ ಸಾವಿರಾರು ಮಂದಿ ಆಸರೆ ಪಡೆದರು. ದಂಗೆ ನಡೆಯಲಿಲ್ಲವೆಂದಾದರೆ ಇಷ್ಟೊಂದು ಮಂದಿ ತಮ್ಮ ಮನೆಮಠ ತೊರೆದು ಹಲವು ತಿಂಗಳುಗಳ ಪರ್ಯಂತ  ಆಶ್ರಯ ಪಡೆದದ್ದು ಯಾಕೆ ಉಚಿತ ಊಟ ಸಿಗುತ್ತದೆಂದೇ?
             ನೀಲಂಬೂರು ರಾಣಿ ಅತ್ಯಾಚಾರಕ್ಕೊಳಗಾದ ಸಾವಿರ ಮಹಿಳೆಯರ ಪರವಾಗಿ ವೈಸ್ ರಾಯ್ ರೆಡಿಂಗನ ಪತ್ನಿಗೆ ಬರೆದ ಮನವಿ ಪತ್ರ ಕರುಣಾಸ್ಪದವಾಗಿದೆ.
" ಪ್ರಮಾಣದ ಬರ್ಬರತೆ ಎಲ್ಲಿಯೂ ನಡೆದದ್ದಿಲ್ಲ. ನಮ್ಮ ಬಂಧುಗಳ ಶವಗಳಿಂದ ಇಲ್ಲಿಯ ಕೆರೆಗಳು, ಬಾವಿಗಳು ತುಂಬಿ ಹೋಗಿವೆ. ದುರ್ನಾತ ಹರಡಿದೆ. ನಮ್ಮ ಒಂದೇ ಒಂದು ಅಪರಾಧವೆಂದರೆ ನಮ್ಮ ಮಾತೃ ಧರ್ಮವನ್ನು ತ್ಯಜಿಸಲು ನಾವು ಒಪ್ಪದೇ ಇದ್ದುದು. ಗರ್ಭಿಣಿಯರನ್ನೂ ನಿರ್ದಯವಾಗಿ ಕೊಲ್ಲಲಾಗಿದೆ. ನಮ್ಮ ಹಸುಳೆ ಮಕ್ಕಳನ್ನು ನಮ್ಮೆದುರಿನಲ್ಲಿಯೇ ತುಂಡು ತುಂಡು ಮಾಡಿದ್ದಾರೆ. ಮಕ್ಕಳ ಅಳು ನಮ್ಮ ಕಿವಿಗಳಲ್ಲಿ ಪ್ರತಿಧ್ವನಿಸುತ್ತಿದೆ. ಹಸುಗಳನ್ನು ಕೊಂದು ಅವುಗಳ ರಕ್ತಗಳನ್ನು ದೇವಾಲಯಗಳಲ್ಲಿ ಚೆಲ್ಲಾಡಿದ್ದಾರೆ. ತಲೆ ತಪ್ಪಿಸಿಕೊಂಡು ಅರಣ್ಯವಾಸಿಗಳಾಗಿರುವ ನಮಗೆ ಮೈ ಮುಚ್ಚುವಷ್ಟು ಬಟ್ಟೆಯೂ ಇಲ್ಲವಾಗಿದೆ. ಶ್ರೀಮಂತ ಮನೆತನದ ಮಹಿಳೆಯರನ್ನು ಬಲಾತ್ಕಾರವಾಗಿ ಮೋಪ್ಲಾ ಕೂಲಿಗಳಿಗೆ ಲಗ್ನ ಮಾಡಿಸಿದ್ದಾರೆ. ನಮ್ಮ ಅಕ್ಕ, ತಂಗಿಯರು, ಗೆಳತಿಯರನೇಕರು ದಾರುಣ ಅತ್ಯಾಚಾರಗಳಿಗೆ ಬಲಿಯಾಗಿದ್ದಾರೆ. ನಾವೀಗ ರಕ್ಷಣೆಗೆ ನಿಮ್ಮ ಸರಕಾರವನ್ನು ಮೊರೆ ಹೋಗದೇ ಬೇರೆ ದಾರಿಯೇ ಇಲ್ಲ."
                 ಪೊಲೀಸರಿಗೆ ಬಲಿಯಾದ ಮೋಪ್ಲಾನೊಬ್ಬ ಸಾಯುವ ಸಂದರ್ಭದಲ್ಲಿ ಹೇಳಿದ ಮಾತು ಕೇಳಿ-"ನಾನು ನೆಮ್ಮದಿಯಿಂದ ಸಾಯುತ್ತಿದ್ದೇನೆ. ಹದಿನಾಲ್ಕು ಮಂದಿಯನ್ನು ನಾನು ಸಾಯಿಸಿದ್ದೇನೆ. ಮಹಿಳೆಯರನ್ನು ಅತ್ಯಾಚಾರ ಮಾಡಿ, ಹತ್ತು ಜನರ ಮತಾಂತರ ಮಾಡಿರುವ ನನಗೆ ಸತ್ತ ಮೇಲೆ ಮಾನಿನಿಯರಿಂದ ಸ್ವರ್ಗ ಸುಖ ದೊರೆಯುತ್ತದೆ."
ಮಾಧವನ್ ನಾಯರ್ ಪ್ರತ್ಯಕ್ಷ ಕಂಡು ಕಳುಹಿಸಿದ ವರದಿ--"...A pregnant woman carrying 7 months was cut through the abdomen by a rebel and she was seen lying dead on the way with the dead child projecting out....Another baby of 6 months was snatched away from the breast of mother and cut into two pieces...."

                ಅಬುಲ್ ಕಲಾಮ್ ಆಜಾದ್, ಹಕೀಂ ಅಜ್ಮಲ್ ಖಾನ್ ಮೊದಲಾದವರ ಉದ್ರೇಕಕಾರಿ ಭಾಷಣಗಳೇ ದಂಗೆಗೆ ಬೀಜಾರೋಪ ಮಾಡಿದವು ಎಂದು ಪಿ.ಸಿ. ಬಮ್ ಪರ್ಡ್ ವರದಿ ಮಾಡಿದರೆ, ಕಾಂಗ್ರೆಸ್ಸಿನ ಖಿಲಾಫತ್ ಪ್ರಚಾರವೇ ಇಡೀ ದುರಂತದ ಮೂಲವೆಂದು ರಾಲಿನ್ ಸನ್ ವರದಿ ಮಾಡಿದ್ದ. 'ವಿಚಾರಣೆ'(!)ಗಾಗಿ ಕಾಂಗ್ರೆಸ್ ನೇಮಿಸಿದ್ದ 'ತೈಯಬ್ಜಿ' ಮಹಾಶಯ ಮಲಬಾರಿಗೆ ಕಾಲಿಡದೇ ಮದರಾಸಿನಲ್ಲೇ ಕುಳಿತು ತನ್ನ ವರದಿ ಬರೆದ! ಶೌಕತ್ ಆಲೀಯಂತು "ಸ್ವರಾಜ್ಯ ಆಂದೋಲನ ಹಿಂದೂ ರಾಜ್ಯಕ್ಕಾಗಿ ನಡೆದಿದೆ. ಹಾಗಾಗಿ ಮುಸಲ್ಮಾನರೆಲ್ಲಾ ಅದನ್ನು ತ್ಯಜಿಸಬೇಕು" ಎಂದು ಕರೆ ಕೊಟ್ಟ. ಇಷ್ಟೆಲ್ಲಾ ಆದರೂ ಗಾಂಧಿ ಹಿಂದೂಗಳಿಗೆ "ಅಹಿಂಸೆ ಪಾಲಿಸಿ" ಎಂದನೇ ಹೊರತು ಅನ್ಯಾಯದ ಬಗ್ಗೆ ತುಟಿಪಿಟಿಕ್ಕೆನ್ನಲಿಲ್ಲ. ಆತನದೇ ಹೇಳಿಕೆ ನೋಡಿ..
" Hindus will have to learn to die in the face of hewrest odds in order to convert musalman full into a respecting friend."

            ಗಾಂಧಿಯ ಇನ್ನೊಂದು ಮಾನಗೆಟ್ಟ ಕಾರ್ಯವೆಂದರೆ ಮೋಪ್ಲಾಗಳಿಗಾಗಿ ಹಿಂದೂಗಳಿಂದಲೇ "ಪರಿಹಾರ ನಿಧಿ" ಸಂಗ್ರಹ ಮಾಡಿದ್ದು. ಮಾತ್ರವಲ್ಲ ಇಂಥವರು ೧೦ರೂ. ಕಳಿಸಿದ್ದಾರೆ, ಒಂದು ರೂಪಾಯಿ ಕಳುಹಿಸಿದ್ದಾರೆ...ಎಂದು ದಾಖಲೆ ಮಾಡುತ್ತಾ ಹೋಗಿದ್ದು! ಅಂದರೆ ಇಂದಿನ ಕಾಂಗ್ರೆಸ್ ಮನಸ್ಥಿತಿಯ ಮೂಲಪುರುಷ ಗಾಂಧಿ ಎಂಬುದು ಎಂತಹಾ ಅಜ್ಞಾನಿಗೂ ಅರ್ಥವಾಗುವ ವಿಷಯವಲ್ಲವೇ? ಆದರೂ ಅವ ಮಹಾತ್ಮ! ಎಂತಹಾ ದುರವಸ್ಥೆ ದೇಶದ್ದು?

ಹಿಂದೂಗಳ ರಕ್ಷಣೆಗೆ ಬಂದವರ್ಯಾರು?
>>ಮತಾಂತರಿತರನ್ನು ಮರಳಿ ಮಾತೃ ಧರ್ಮಕ್ಕೆ ಕರೆತಂದ ಆರ್ಯಸಮಾಜ.
>> ನಿಷ್ಪಕ್ಷಪಾತ ವರದಿ ಪ್ರಕಟಿಸಿ, ಸಂತ್ರಸ್ಥರಿಗೆ ಸಹಾಯ ಕೇಂದ್ರಗಳನ್ನು ಸ್ಥಾಪಿಸಿದ ಸರ್ವೆಂಟ್ಸ ಆಫ್ ಇಂಡಿಯಾ, ವೈಎಂಸಿಎ ಮೊದಲಾದ ತಂಡಗಳು.
>>ಜನರನ್ನು ನೇರ ಸಂದರ್ಶಿಸಿ ಮಾಹಿತಿ ಸಂಗ್ರಹಿಸಿ, ಸಹಾಯ ಹಸ್ತ ಚಾಚಿದ ಮಹಾರಾಷ್ಟ್ರದ ಶ್ರೀ ಬಾಲಕೃಷ್ಣ ಮೂಂಜೆ.
>> ಇವತ್ತಿಗೂ ಇತಿಹಾಸದ ಘಟನೆ ಇತಿಹಾಸದ ಪುಟಗಳಿಂದ ಮರೆ ಮಾಡುವ ಬುದ್ದಿ ಜೀವಿಗಳ ಪ್ರಯತ್ನವನ್ನು ವಿಫಲವಾಗಿಸಿದ ಬ್ರಿಟಿಷರ ಸಚಿತ್ರ ವರದಿಗಳು, ಆಧಾರ ಸಹಿತ ಸತ್ಯ ಚಿತ್ರಣ ನೀಡಿದ ಅಮೃತಸರ-ಸಹರಾನ್ ಪುರದ ಪುಸ್ತಕ ಕರ್ತೃಗಳು ಹಾಗೂ ಕಾದಂಬರಿ ರೂಪದಲ್ಲಿ "ಮೋಪ್ಳಾ ದಂಗೆ" ಯನ್ನು ಪ್ರಕಟಿಸಿದ ಆರಾಧ್ಯ ದೈವ ಸ್ವಾತಂತ್ರ್ಯ ವೀರ ಸಾವರ್ಕರ್.
>>ಯಾರ ವಿರುದ್ಧ ನಾವು ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದೆವೋ ಅವರು: ಅಂದರೆ ಬ್ರಿಟಿಷ್ ಸರಕಾರ ಹಾಗೂ ಸೈನಿಕ & ಪೊಲೀಸ್ ಪಡೆಗಳು

                ದಂಗೆಗಳು ಶಾಂತವಾದ ಮೇಲೆ ಪುನರ್ವಸತಿ, ಮನೆ ದುರಸ್ತಿ, ಎತ್ತು, ದನ, ನೇಗಿಲು ಖರೀದಿ ಮೊದಲಾದ ಜೀವನಾಗತ್ಯಗಳಿಗೆ ಸಾಲ ಪಡೆದವರ ಸಂಖ್ಯೆಯೇ ೧೩,೫೦೦. ಆರ್ಯ ಸಮಾಜದ ಮುಖಾಂತರ ಮಾತೃಧರ್ಮಕ್ಕೆ ಮರಳಿದವರ ಸಂಖ್ಯೆಯೇ ೧೭೭೬.

                 ಗಾಂಧಿ ಪ್ರಣೀತ ಖಿಲಾಫತ್ ಕೂಸಾದ ಮೋಪ್ಲಾ ಬಂಡಾಯ ಕೇವಲ ಕೇರಳಕ್ಕೆ ಸೀಮಿತವಾಗುಳಿಯಲಿಲ್ಲ. ೧೯೨೪ರಲ್ಲಿ ಕೊಹಟ್, ೧೯೨೫ರಲ್ಲಿ ದೆಹಲಿ & ನಾಗಪುರ, ಭಾಗಲ್ಪುರ, ಲಖ್ನೋ, ಲಾಹೋರ್, ಗುಲ್ಬರ್ಗಾ, ೧೯೨೬ರಲ್ಲಿ ಕಲ್ಕತ್ತಾ, ಉತ್ತರ ಪ್ರದೇಶ, ಮುಂಬೈ, ೧೯೨೭ರಲ್ಲಿ ಕಲ್ಕತ್ತಾದಿಂದ ಲಾಹೋರ್ ಮಧ್ಯದ ವಿವಿಧ ಪ್ರದೇಶಗಳಲ್ಲಿ ಹಿಂದೂಗಳ ಮೇಲೆ ಮುಸ್ಲಿಮ್ ದೌರ್ಜನ್ಯ ನಡೆಯಿತು. ೧೯೩೦-೩೧ರಲ್ಲಿ ಬಂಗಾಳ, ವೆಲ್ಲೂರ್, ಜಬಲ್ಪುರ, ಷಿಕಾರ್ ಪುರ, ಮೊದಲಾದ ಕಡೆ ಜಿಹಾದ್ ನಡೆಯಿತು. ೧೯೨೨-೨೭ರ ವರ್ಷಗಳ ಅವಧಿಯಲ್ಲಿ ಬಂಗಾಳ ಪ್ರಾಂತವೊಂದರಲ್ಲೇ ೩೫ ಸಾವಿರ ಮಹಿಳೆಯರ ಅಪಹರಣ, ಮಾನಭಂಗಗಳಾದವು. ಅದರ ಮುಂದುವರಿದ ಭಾಗವೇ ಮೊನ್ನೆ ಮೊನ್ನೆ ಪಶ್ಚಿಮ ಬಂಗಾಳದಲ್ಲಿ ನಡೆದ ಹಿಂದೂಗಳ ಮನೆಗಳ ಅಗ್ನಿಗಾಹುತಿ ಹಾಗೂ ಲೂಟಿ!

                ಅಂದು ಕೇರಳದಲ್ಲಿ ಭಯಾನಕಗೊಂಡ ಜಿಹಾದ್ ಇಂದಿಗೂ ನಿಂತಿಲ್ಲ. ಅದು ಈಗ ಲವ್ ಜಿಹಾದ್, ಲ್ಯಾಂಡ್ ಜಿಹಾದ್, ವೈಣಿಕ ಜಿಹಾದ್, ಬ್ಯಾಂಕ್ ಜಿಹಾದ್, ರಾಜಕೀಯ ಜಿಹಾದ್ ಮುಂತಾದ ಹಲವು ಸ್ವರೂಪಗಳೊಂದಿಗೆ ಹಿಂದೂ ಸಮಾಜವನ್ನು ಸುಡುತ್ತಾ ಬರುತ್ತಿದೆ. ಒಂದು ಕಾಲದಲ್ಲಿ ಹಿಂದೂಗಳಾಗಿದ್ದು ಮತಾಂತರಗೊಂಡವರೇ ಈಗ ಉಳಿದ ಹಿಂದೂಗಳನ್ನು ಮತಾಂತರಿಸುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಲು ಹಿಂದೂ ಸಮಾಜ ಜಾಗೃತವಾಗಬೇಕಾಗಿದೆ.


ಇಂದಿಗೂ ಕೆಲವು ಸಮುದಾಯಗಳಿಗೆ ಮಾತೃ ಧರ್ಮವನ್ನು ಮರಳಿ ಸೇರುವ ಇಚ್ಛೆಯಿದೆ. ಆದರೆ ಅವರಿಗೆ ದಾರಿ ಕಾಣುತ್ತಿಲ್ಲ. ಆರ್ಯ ಸಮಾಜ ಬಿಟ್ಟರೆ ಶುದ್ಧೀಕರಣ ಮಾಡುವ ಸಂಸ್ಥೆಗಳಾವುವೂ ಕಾಣುತ್ತಿಲ್ಲ. ನಮ್ಮ ಸಹೋದರರನ್ನು ನಾವು ಸ್ವಾಗತಿಸಬೇಕಾಗಿದೆ. ಸ್ವಾಗತಿಸುವ ಮನಸ್ಸು ಮಾಡಬೇಕಾಗಿದೆ.


ವಂದೇ ಮಾತರಂ



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ