ಪುಟಗಳು

ಗುರುವಾರ, ಮೇ 16, 2013

ಚೈತ್ರ ಸುಮ

ಚೈತ್ರ ಕಾಲದಲ್ಲಿ ಮೂಡಿದುದಲ್ಲ. ಯಕ್ಷಗಾನ ಪದವೊಂದರ ಮೊದಲ ಸಾಲನ್ನು ಗುನುಗುನಿಸುತ್ತಾ ಇದ್ದಂತೆ ಮೂಡಿದ ಕವನ ಇದು. ಅದೇ ಪದ್ಯದ ಮೊದಲ ಸಾಲನ್ನು ಬಳಸಿಕೊಂಡದ್ದಕ್ಕಾಗಿ ಆ ಅಜ್ಞಾತ ಕವಿಯಲ್ಲಿ ಕ್ಷಮೆ ಯಾಚಿಸುತ್ತಿದ್ದೇನೆ. ಈ ಕವನಕ್ಕೆ ಕಾರಣೀಭೂತನಾದ ಆ ಅಜ್ಞಾತ ಕವಿಗೆ ಪ್ರಣಾಮಗಳನ್ನರ್ಪಿಸುತ್ತ...ಒಂದು ಕಿರು ಕವನ!

ನೋಡು ನೋಡು ಗೆಳತಿ ಚೈತ್ರ ಕಾಲ ಬಂದಿದೆ
ಮೋಡಿ ಮಾಡಿ ಎನ್ನ ಮನದಿ ಹರುಷ ತುಂಬಿದೆ
ನೋಡು ನೋಡು ಗೆಳತಿ ನೋಡು ವನದ ಸೊಬಗನು
ಶ್ವೇತ ಧಾರೆ ಹಸುರ ಸೀರೆ ಸ್ವರ್ಗ ಸಿರಿಯನು||

ನಿನ್ನ ಕಾದಿರೆ ಸುಪ್ರಭಾತ ನದಿಯ ಕಲರವ
ಮನವ ಬಳಲಿಸಿ ತನುವ ಕೆಣಕುವ ಮಂದ ಮಾರುತ
ನಿನ್ನ ನೋಡೋ ಬಯಕೆ ಮೂಡಿ ಸುಮವು ಅರಳಿದೆ
ಸುಮ ಶೃಂಗ ಏರಿ ಪರಾಗ ಸ್ಪರ್ಷಿಸಿ ಭೃಂಗ ಹಾಡಿದೆ||


ಮರದ ಮೇಲೆ ಕುಳಿತು ಒರೆವ ಜೋಡಿ ಶುಕಗಳು
ಪ್ರೇಮ ಕಾವ್ಯ ಒರೆಯೆ ಹಾಡಿವೆ ಯುಗ್ಮ ಪಿಕಗಳು
ನವಿಲ ನಾಚಿಸೋ ನಿನ್ನ ನಾಟ್ಯ ಮನವು ಬಯಸಿರೆ
ನೋಡೆ ಮಾರ ಕೆಣಕುತಿಹನು ಒರೆಯಲೇನನು||

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ