ಪುಟಗಳು

ಸೋಮವಾರ, ಸೆಪ್ಟೆಂಬರ್ 23, 2013

ಇದು ಕತೆ ಅಲ್ಲ , ಜೀವನ! ಭಾಗ-1


ಇದು ಕತೆ ಅಲ್ಲ , ಜೀವನ! ಭಾಗ-1:                                                   
           ಶೀರ್ಷಿಕೆ ನೋಡಿದೊಡನೆ ಸಾಮಾನ್ಯ ಬುದ್ಧಿಯಿರುವ ಯಾರಿಗಾದರೂ ಅರ್ಥವಾದೀತು ಇದು ನಮ್ಮ ಜೀವನದಲ್ಲಿ ನಡೆಯುವಂಥ ವಿಚಾರವೇ ಇರಬೇಕು ಎಂದು. ನಾನು ಕಥೆಗಾರನಲ್ಲ. ಆದರೆ ಸಮಾಜದಲ್ಲಿ ನಡೆಯುತ್ತಿರುವ ವೈಪರೀತ್ಯಗಳನ್ನು ನೋಡಿದಾಗ, ಅದನ್ನು ಜನ ತಿಳಿದೋ ತಿಳಿಯದೆಯೋ ಅಲಕ್ಷಿಸುತ್ತಿರುವಾಗ ನನಗೆ ಸುಮ್ಮನಿರಲಾಗಲಿಲ್ಲ. ಅದರ ಫಲವೇ ಕಥೆ. ಶೀರ್ಷಿಕೆಯೇ ಸೂಚಿಸುವಂತೆ ಇದು ನೈಜವಾದ ಘಟನೆಯೇ. ಇಲ್ಲಿ ಬರುವ ಹೆಸರುಗಳು ಮಾತ್ರ ನನ್ನ ಕಲ್ಪನೆ. ಇನ್ನು ಕಥೆಯಲ್ಲಿ ಅಲ್ಲಲ್ಲಿ ಕೆಲವು ವರ್ಣನೆಗಳು ಅತಿರೇಕ ಎನಿಸಿದರೂ ಅಥವಾ ಕೆಲವು ಕಡೆ ವಿಷಯ ವಿಸ್ತಾರವಾಗದೆ ಹಾರಿಸಿದ ಹಾಗೆ ಅನಿಸಿದರೆ ಅದು ನನ್ನನ್ನು ನಾನು ಹಿಡಿದಿಡಲಾರದ ಭಾವನೆಯೇ ಹೊರತು ಘಟನೆಯ ವೈಭವೀಕರಣವಲ್ಲ. ಅದಕ್ಕಾಗಿ ಕ್ಷಮೆ ಇರಲಿ. ಇದನ್ನೋದಿ ಕೆಲವರಾದರೂ ಎಚ್ಚೆತ್ತುಕೊಂಡರೆ ಅದೇ ಸಮಧಾನ.
         ಅದು ಮಲೆನಾಡ ತಪ್ಪಲಲ್ಲಿರುವ ಸುಳ್ಯ ತಾಲೂಕಿನಲ್ಲಿರುವ ಒಂದು ಪುಟ್ಟ ಹಳ್ಳಿ. ಪದ್ಮನಾಭ ಶರ್ಮ..... ಊರಿಗೆಲ್ಲಾ ಚಿರಪರಿಚಿತ ಹೆಸರು. ಕೃಷಿಯನ್ನೇ ನೆಚ್ಚಿಕೊಂಡಿರುವ ಅವರದು ಮಧ್ಯಮ ವರ್ಗದ ಸಂತೃಪ್ತ ಕುಟುಂಬ. ಅಂಗಳದಲ್ಲಿ ಶಿಸ್ತಾಗಿ ಪೋಣಿಸಿದಂತೆ ಭಾಸವಾಗುವ ಒಣಗಲು ಹಾಕಿದ ಅಡಕೆ, ಕರಿಮೆಣಸು, ಗೇರು ಬೀಜ. ಭಾನು ಬುವಿಗೆ ರಂಗೆರಚಿ ಮರೆಯಾಗುತ್ತಿದ್ದಾನೆ. ಹಸಿರು ಸಿರಿಯ ನಡುವೆ ಹುಲ್ಲು ಕಟಾವು ಮಾಡುತ್ತಿದ್ದಾರೆ ಪದ್ಮನಾಭಯ್ಯನವರ ಧರ್ಮಪತ್ನಿ ಲಕ್ಷ್ಮಿ. ಕೆಲಸಗಾರರು ಸಿಗದೆ ಸ್ವತಃ ಪದ್ಮನಾಭಯ್ಯನವರೇ ಬೀಳುತ್ತಿರುವ ಅಡಿಕೆಯನ್ನು ಹೆಕ್ಕುತ್ತಿದ್ದಾರೆ. ಮನೆಯೊಳಗಿಂದ ಯಾವುದೋ ಕ್ರಿಕೆಟ್ ಪಂದ್ಯದ ವೀಕ್ಷಕ ವಿವರಣೆ ಧ್ವನಿ ಕೇಳಿ ಬರುತ್ತಿದೆ. ರಾಯರ ಮಗ ಪ್ರದ್ಯುಮ್ನ  ಪಂದ್ಯ ವೀಕ್ಷಣೆಯಲ್ಲಿ ಮಗ್ನ.
 
          ಅಷ್ಟರಲ್ಲಿ ಕಾಲ್ಗೆಜ್ಜೆಯ ದನಿ..... ಮುಗ್ಧ ಮುದ್ದು ಮೊಗದ ಬಳುಕುವ ನಡುವಿನ ಚಂದ್ರಕಾಂತಿಯ ಚೆಲುವೆ ಮನೆಯೊಳಗೆ ಪ್ರವೇಶಿಸುತ್ತಿದ್ದಾಳೆ. ಸೌಂದರ್ಯದ ಖನಿ. ಅವಳ ನಡಿಗೆಯ ಲಾಸ್ಯಕ್ಕೆ ಹಂಸಗಳೇ ನಾಚುತ್ತಿವೆಯೇನೋ ಎಂದನ್ನಿಸುತ್ತಿದೆ. ಅವಳ ತನುವ ಮಿಡುಕಕ್ಕೆ ಹಿತ್ತಿಲಿನಲ್ಲಿದ್ದ ನವಿಲು ನರ್ತಿಸುತ್ತಿದೆ. ಇಂಪಾಗಿ ಹಾಡುತ್ತಿರುವ ಅವಳ ಇನಿದನಿಗೆ ಮನಸೋತು ಕೋಗಿಲೆ ಹಾಡತೊಡಗಿದೆ. ಜಂಬುನೇರಳೆ ಮರದ ಮೇಲೆ ಕುಳಿತ ಗಿಣಿಗಳು ಅವಳ ಕಲರವಕ್ಕೆ ತಮ್ಮ ದನಿ ಜೋಡಿಸುತ್ತಿವೆ. ಅವಳು ಮನೆಯೊಳಗೆ ಬಂದೊಡನೆ ಪೌರ್ಣಿಮೆಯ ಚಂದಿರನು ಭುವಿಯ ಬೆಳಗಿದ ತೆರದಿ ಮನೆಯಲ್ಲ ಪ್ರಕಾಶಮಾನವಾಯಿತು. ಮನೆಯಂಗಳದಲ್ಲಿ ಅವಳನ್ನೇ ಕಾಯುತ್ತಿದ್ದ ಶುಭ್ರ ಬಣ್ಣದ ಶ್ವಾನ ಅವಳು ತನ್ನೊಡನೆ ಆಡಲು ಬರಲೆಂದು ಕುಂಯ್ ಗುಟ್ಟುತ್ತಿದೆ. ಅವಳ ಗೆಜ್ಜೆಯ ದನಿಯ ಕೇಳಿದ ಮುದ್ದು ಕರು ನಂದಿನಿ ಅಂಬಾ ಎಂದವಳನ್ನು ಕರೆಯುತ್ತಿದೆ. ಅವಳು ಬಂದು ಕುರ್ಚಿಯಲ್ಲಿ ಕೂತೊಡನೆ ಎಲ್ಲೋ ಇದ್ದ ಬೆಕ್ಕಿನ ಮರಿ ಅವಳ ತೊಡೆಯೇರಿ ಕುಳಿತವಳ ಕಂಠಾಹಾರದೊಂದಿಗೆ ಆಡುತ್ತಿದೆ. ಅವಳು ಪದ್ಮನಾಭ ಶರ್ಮರ ಏಕೈಕ ಪುತ್ರಿ ವಿದ್ಯುಲ್ಲತಾ.

                 ತಮ್ಮನ ಕೈಯಿಂದ ರಿಮೋಟ್ ಕಂಟ್ರೋಲರ್ ಕಿತ್ತುಕೊಂಡವಳೇ ಚಾನೆಲ್ ಬದಲಾಯಿಸಿದಳು. ಜಗಳ ಶುರುವಾಯಿತು ಅಕ್ಕ ತಮ್ಮಂದಿರಲ್ಲಿ. ಆಗ ತಾನೇ ಮನೆಯೊಳಗೆ ಬಂದ ಲಕ್ಷ್ಮಿ ಅಮ್ಮನವರ ಹಿತನುಡಿ ವ್ಯರ್ಥ. ಪದ್ಮನಾಭಯ್ಯನವರು ಒಳಬಂದವರೇ ರಿಮೋಟ್ ಕಂಟ್ರೋಲರ್ ಕಿತ್ತುಕೊಂಡು ನ್ಯೂಸ್ ಚಾನೆಲ್ ಹಾಕಿ ಅತ್ತ ನ್ಯೂಸ್ ಇತ್ತ ಅಕ್ಕ ತಮ್ಮಂದಿರ ಜಗಳ ನೋಡುತ್ತಾ ಮುಸಿ ಮುಸಿ ನಗುತ್ತಾ ಕೂತರು. ಆಗಲೇ ವಿದ್ಯುಲ್ಲತೆಯ ಮೊಬೈಲ್ ಸದ್ದು ಮಾಡಿತು. ಜಗಳ ನಿಂತಿತು. ಮೊಬೈಲ್ ನೋಡಿದವಳಿಗೆ ಅಚ್ಚರಿ ಕಾದಿತ್ತು. ಅಪರಿಚಿತ ಸಂಖ್ಯೆಯಿಂದ ಸಂದೇಶ "ಹಾಯ್" ಎಂದು. ಯಾರು ಅಂತ ಕೇಳಿದರೆ ಉತ್ತರವಿಲ್ಲ. ಇನ್ನೊಂದು ಘಂಟೆ ಬಿಟ್ಟು ಪುನಹ ಅದೇ ಸಂಖ್ಯೆಯಿಂದ ಅದೇ ಸಂದೇಶ...ಹೀಗೆ ಗಂಟೆಗೊಂದರಂತೆ ಐದು ಬಾರಿ...ವಿದ್ಯುಲ್ಲತೆಯ ಮನಸ್ಸಿನಲ್ಲಿ ಮಿಶ್ರಭಾವ. ಐದನೇ ಬಾರಿ ಕರೆ ಬಂದಾಗ ಸಿಟ್ಟುಗೊಂಡು ಕರೆ ಮಾಡಿದಳು. ಕಡೆಯಿಂದ ಅವಳ ಸಹಪಾಠಿ ಅಬ್ದುಲ್ಲಾ. ಅವನಿಗೆ ಹೇಗೆ ಸಿಕ್ಕಿತು ಇವಳ ಮೊಬೈಲ್ ಸಂಖ್ಯೆ? ವಾಸ್ತವವಾಗಿ ವಿದ್ಯುಲ್ಲತಾ ಆವತ್ತು ಮೊಬೈಲ್ ರೀಚಾರ್ಜ್ ಮಾಡಿದ ಅಂಗಡಿಯ ಮಾಲಿಕ ಅಬ್ದುಲ್ಲನ ಸ್ನೇಹಿತ. ಮುಂದೆ ಪ್ರತಿದಿನ ಸಂದೇಶಗಳ ವಿನಿಮಯವಾಗುತ್ತಿತ್ತು. ಒಂದು ದಿನ " ಲವ್ ಯೂ" ಅಂತ ಕಳುಹಿಸಿದ. ಸಿಡಿಮಿಡಿಗೊಂಡಳು ವಿದ್ಯುಲ್ಲತಾ. ಕರೆ ಮಾಡಿ ಝಾಡಿಸಿದಳು. ಅಲ್ಲಿಗೆ ಕೊನೆ!?

           ಆದರೆ ಅಬ್ದುಲ್ಲಾ ಸುಮ್ಮನಿರಬೇಕಲ್ಲಾ! ಒಂದು ದಿನ ವಿದ್ಯುಲ್ಲತಾಳ ಸ್ನೇಹಿತೆಯೊಬ್ಬಳ ಜನುಮ ದಿನದ ಪಾರ್ಟಿ. ತರಗತಿಯ ಎಲ್ಲಾ ಸಹಪಾಠಿಗಳು ಭಾಗವಹಿಸಿದ್ದರು. ಯಾವಾಗಲೂ ಪಾರ್ಟಿಯಲ್ಲಿ ಏನೂ ತಿನ್ನದೇ, ಕುಡಿಯದೇ ಇರುತ್ತಿದ್ದ ವಿದ್ಯುಲ್ಲತಾ ಅಂದು ಎಲ್ಲರ ಒತ್ತಾಯಕ್ಕೆ ಒಳಗಾಗಿ ತಂಪು ಪಾನೀಯ ಕುಡಿಯಬೇಕಾಯಿತು. ಪಾರ್ಟಿ ನಡೆಯುತ್ತಿತ್ತು. ಸ್ವಲ್ಪ ಹೊತ್ತಲ್ಲೇ ಮೂರ್ಛೆ ತಪ್ಪಿ ಬಿದ್ದಳು. ಎಲ್ಲರೂ ಗಾಬರಿಯಾಗಿದ್ದಾಗ ಅಬ್ದುಲ್ಲಾ ತನ್ನ ಕಾರಿನಲ್ಲಿ ಅವಳನ್ನು ಆಸ್ಪತ್ರೆಗೆ ಕರೆದುಕೊಂಡು ಹೊರಟ. ಜೊತೆಯಲ್ಲಿ ಅಬ್ದುಲ್ಲಾನ ಇಬ್ಬರು ಗೆಳೆಯರು ಅಬ್ಬಾಸ್, ಇಸ್ಮಾಯಿಲ್!
   
       ಕಾರು ಆಸ್ಪತ್ರೆ ತಲುಪಲಿಲ್ಲ. ಪ್ರಜ್ಞೆ ಬಂದಾಗ ವಿದ್ಯುಲ್ಲತಾ ಅಬ್ದುಲ್ಲನ ಕಬಂಧ ಬಾಹುಗಳಲ್ಲಿ ನಲುಗುತ್ತಿದ್ದಳು. ಒಬ್ಬರಾದ ಮೇಲೆ ಒಬ್ಬರು. ಜೀವಚ್ಛವವಾದಳು ವಿದ್ಯುಲ್ಲತಾ... ರಾತ್ರಿ ವಿದ್ಯುಲ್ಲತಾ ಮನೆಗೇ ಬರಲೇ ಇಲ್ಲ. ಗಾಬರಿಯಾದ ಪದ್ಮನಾಭಯ್ಯನವರು ಅವಳ ಸ್ನೇಹಿತೆಯರಲ್ಲೆಲ್ಲಾ ವಿಚಾರಿಸಿ ಅಬ್ದುಲ್ಲಾನ ಮೇಲೆ ಪೊಲೀಸಿಗೆ ದೂರು ಕೊಟ್ಟರು. ಪ್ರಯೋಜನವಿಲ್ಲ. ಹದಿನೈದು ದಿವಸಗಳ ನಂತರ ಅಬ್ದುಲ್ಲಾನಿಂದ ದೂರವಾಣಿ ಕರೆ ಬಂತು. ವಿದ್ಯುಲ್ಲತಾಳನ್ನು ತಾನು ಮದುವೆಯಾಗಿದ್ದೇನೆಂದೂ, ಅವಳಿಗೆ ನಿಮ್ಮೊಡನೆ ಮಾತಾಡಲು ಇಷ್ಟವಿಲ್ಲವೆಂದೂ....ಪದ್ಮನಾಭಯ್ಯನವರ ಎದೆಯೊಡೆಯಿತು. ಲಕ್ಷ್ಮಿ ಅಮ್ಮ ಮಗಳ ನೆನಪಲ್ಲೇ ಕೊರಗಿ ಕೊರಗಿ ಜೀವಚ್ಛವವಾದರು. ಮಗ ಪ್ರದ್ಯುಮ್ನನಿಗೆ ಸಹವಾಸ ದೋಷದಿಂದ ಡ್ರಗ್ ಚಟ ಹಿಡಿದು ಅವನನ್ನು ಹಿಡಿಯಲು ಯಾರಿಂದಲೂ ಆಗುತ್ತಿರಲಿಲ್ಲ. ಪದ್ಮನಾಭಯ್ಯನವರಿಗೆ ಎರಡು ಸಲ ಹಾರ್ಟ್ ಅಟ್ಯಾಕ್ ಆಗಿದೆ. ಹಸುಗೂಸು ನಂದಿನಿಯನ್ನು ಯಾರೋ ಕಟುಕರು ಎತ್ತಿಕೊಂಡು ಹೋಗಿದ್ದಾರೆ.

           ಈಗ ನಂದನವನದಲ್ಲಿ ಅಂಬಾ ಎನ್ನುವ ದನಿಯಿಲ್ಲ. ಕುಂಯ್ ಕುಂಯ್ ಸ್ವರವಿಲ್ಲ. ವಿದ್ಯುಲ್ಲತಾಳ ಕೋಕಿಲ ಗಾನವಿಲ್ಲ. ಬೆಕ್ಕು ಕಾಣದಾಗಿದೆ. ತೋಟ ಒಣಗಿದೆ. ಅಂಗಳದಲ್ಲಿ ಪಾಚಿ ಆವರಿಸಿದೆ. ನಂದನವನದಂತಿದ್ದದ್ದು ಸ್ಮಶಾನ ಸದೃಶವಾಗಿದೆ. ಮನೆಯ ಬಾಗಿಲಿನಲ್ಲಿ ವಿದ್ಯುಲ್ಲತಾಳ ಬರುವಿಕೆಯನ್ನು ಕಾಯುತ್ತಾ ಕುಳಿತಿದ್ದಾನೆ ದಾಸು!
 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ